16.02.21         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನೀವು ತಮ್ಮ ಜೀವನ ಸೂತ್ರದ ದಾರವನ್ನು ಒಬ್ಬ ತಂದೆಯೊಂದಿಗೆ ಬಂಧಿಸಿದ್ದೀರಿ, ನಿಮ್ಮ ಸಂಬಂಧವು ಒಬ್ಬ ತಂದೆಯೊಂದಿಗೆ ಇದೆ, ಒಬ್ಬರೊಂದಿಗೆ ಸಂಬಂಧವನ್ನು ನಿಭಾಯಿಸಬೇಕಾಗಿದೆ.

ಪ್ರಶ್ನೆ:
ಸಂಗಮಯುಗದಲ್ಲಿ ಆತ್ಮವು ತನ್ನ ಬುದ್ಧಿಯ ದಾರವನ್ನು ಪರಮಾತ್ಮನ ಜೊತೆ ಜೋಡಿಸುತ್ತದೆ, ಅದರ ಪದ್ಧತಿಯು ಅಜ್ಞಾನದಲ್ಲಿ ಯಾವ ರೀತಿಯಿಂದ ನಡೆದು ಬರುತ್ತಿದೆ?

ಉತ್ತರ:
ವಿವಾಹದ ಸಮಯದಲ್ಲಿ ಸ್ತ್ರೀಯ ಸೆರಗನ್ನು ಪತಿಯ ಶಲ್ಯದ ಜೊತೆ ಗಂಟು ಹಾಕುತ್ತಾರೆ. ಜೀವನಪೂರ್ತಿ ಅವರ ಜೊತೆಗಾರ್ತಿಯಾಗಿಯೇ ಇರಬೇಕೆಂದು ಸ್ತ್ರೀ ತಿಳಿದುಕೊಳ್ಳುತ್ತಾಳೆ. ನೀವಂತೂ ಈಗ ತನ್ನ ಸೆರಗು ಅರ್ಥಾತ್ ದಾರವನ್ನು ತಂದೆಯ ಜೊತೆ ಜೋಡಿಸಿದ್ದೀರಿ. ನಿಮಗೆ ತಿಳಿದಿದೆ, ಅರ್ಧಕಲ್ಪಕ್ಕಾಗಿ ನಮ್ಮ ಪಾಲನೆಯು ತಂದೆಯ ಮೂಲಕವೇ ಆಗುವುದು.

ಗೀತೆ:
ಜೀವನದ ಬಂಧನವನ್ನು ನಿಮ್ಮೊಂದಿಗೇ ಬಂಧಿಸಿರುವೆನು...........

ಓಂ ಶಾಂತಿ.
ನೋಡಿ ಗೀತೆಯಲ್ಲಿ ಹೇಳುತ್ತಾರೆ ಜೀವನ ಬಂಧನವನ್ನು ನಿಮ್ಮೊಂದಿಗೇ ಬಂಧಿಸಿರುವೆನು ಎಂದು. ಹೇಗೆ ಯಾವುದೇ ಕನ್ಯೆಯು ತನ್ನ ಜೀವನದ ದಾರವನ್ನು ಪತಿಯ ಜೊತೆ ಬಂಧಿಸುತ್ತಾಳೆ. ಜೀವನ ಪರ್ಯಂತ ಅವರ ಜೊತೆಗಾರನಾಗಿಯೇ ಇರಬೇಕು, ಅವರೇ ಪಾಲನೆ ಮಾಡಬೇಕೆಂದು ತಿಳಿಯುತ್ತಾಳೆ. ಕನ್ಯೆಯು ಅವರ ಪಾಲನೆ ಮಾಡಬೇಕೆಂದಲ್ಲ. ಜೀವನ ಪರ್ಯಂತ ಅವರೇ ಪಾಲನೆ ಮಾಡಬೇಕಾಗಿದೆ. ನೀವು ಮಕ್ಕಳೂ ಸಹ ಜೀವನ ಬಂಧನವನ್ನು ಬಂಧಿಸಿದ್ದೀರಿ. ಬೇಹದ್ದಿನ ತಂದೆಯೆಂದಾದರೂ ಹೇಳಿ, ಶಿಕ್ಷಕ ಅಥವಾ ಗುರುವೆಂದಾದರೂ ಹೇಳಿ... ಈ ಆತ್ಮಗಳ ಜೀವನದ ಹಗ್ಗವು ಪರಮಾತ್ಮನ ಜೊತೆ ಬಂಧಿಸಬೇಕಾಗಿದೆ. ಅದು ಹದ್ದಿನ ಸ್ಥೂಲ ಮಾತು, ಇದು ಸೂಕ್ಷ್ಮ ಮಾತಾಗಿದೆ. ಕನ್ಯೆಯ ಜೀವನದ ಬಂಧನವನ್ನು ಪತಿಯ ಜೊತೆ ಬಂಧಿಸಲಾಗುತ್ತದೆ. ಕನ್ಯೆಯು ಅವರ ಮನೆಗೆ ಹೋಗುತ್ತಾಳೆ. ನೋಡಿ, ಪ್ರತಿಯೊಂದು ಮಾತನ್ನೂ ತಿಳಿದುಕೊಳ್ಳುವ ಬುದ್ಧಿ ಇರಬೇಕು. ಕಲಿಯುಗದಲ್ಲಿ ಎಲ್ಲರೂ ಆಸುರೀ ಮತದವರಿದ್ದಾರೆ. ನಿಮಗೆ ತಿಳಿದಿದೆ - ನಾವು ಜೀವನದ ಬಂಧನವನ್ನು ಒಬ್ಬರೊಂದಿಗೆ ಬಂಧಿಸಿದ್ದೇವೆ, ಎಲ್ಲಾ ಸಂಬಂಧವು ಒಬ್ಬರೊಂದಿಗೆ ಇದೆ. ಒಬ್ಬರೊಂದಿಗೇ ಸಂಬಂಧವನ್ನು ನಿಭಾಯಿಸಬೇಕಾಗಿದೆ ಏಕೆಂದರೆ ಅವರಿಂದ ನಮಗೆ ಬಹಳ ಒಳ್ಳೆಯ ಸುಖ ಸಿಗುತ್ತದೆ. ಅವರು ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ ಅಂದಮೇಲೆ ಅಂತಹ ತಂದೆಯ ಮತದಂತೆ ನಡೆಯಬೇಕು, ಇದು ಆತ್ಮಿಕ ಬಂಧನವಾಗಿದೆ. ಆತ್ಮವೇ ಶ್ರೀಮತವನ್ನು ತೆಗೆದುಕೊಳ್ಳುತ್ತದೆ, ಆಸುರೀ ಮತವನ್ನು ತೆಗೆದುಕೊಂಡಿದ್ದರಿಂದ ಕೆಳಗಿಳಿದಿದ್ದೀರಿ. ಈಗ ಆತ್ಮಿಕ ತಂದೆಯ ಶ್ರೀಮತದಂತೆ ನಡೆಯಬೇಕು.

ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ನಮ್ಮ ಆತ್ಮದ ಬಂಧನವನ್ನು ಪರಮಾತ್ಮನೊಂದಿಗೆ ಬಂಧಿಸುತ್ತೇವೆ. ಆದ್ದರಿಂದ ನಮಗೆ ಅವರಿಂದ 21 ಜನ್ಮಗಳು ಸುಖದ ಆಸ್ತಿಯು ಸಿಗುತ್ತದೆ. ಆ ಅಲ್ಪಕಾಲದ ಜೀವನ ಬಂಧನದಿಂದ ಕೆಳಗಿಳಿಯುತ್ತಾ ಬಂದಿದ್ದೀರಿ. ಇದು 21 ಜನ್ಮಗಳಿಗಾಗಿ ಗ್ಯಾರಂಟಿಯಿದೆ. ನಿಮ್ಮ ಸಂಪಾದನೆ ಎಷ್ಟು ಬಲಶಾಲಿಯಾಗಿದೆ, ಇದರಲ್ಲಿ ಹುಡುಗಾಟಿಕೆ ಮಾಡಬಾರದು. ಮಾಯೆಯು ಬಹಳ ತಪ್ಪುಗಳನ್ನು ಮಾಡಿಸುತ್ತದೆ. ಈ ಲಕ್ಷ್ಮೀ-ನಾರಾಯಣರು ಖಂಡಿತವಾಗಿಯೂ ಯಾರೊಂದಿಗೋ ಜೀವನ ಬಂಧನವನ್ನು ಜೋಡಿಸಿದರು, ಅದರಿಂದ 21 ಜನ್ಮಗಳ ಆಸ್ತಿಯು ಸಿಕ್ಕಿತು. ಪರಮಾತ್ಮನೊಂದಿಗೆ ನೀವಾತ್ಮರ ಜೀವನದ ಬಂಧನವನ್ನು ಕಲ್ಪ-ಕಲ್ಪವೂ ಬಂಧಿಸಲಾಗುತ್ತದೆ. ಇದಕ್ಕೆ ಲೆಕ್ಕವೇ ಇಲ್ಲ. ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆ - ನಾವು ಶಿವ ತಂದೆಯ ಮಕ್ಕಳಾಗಿದ್ದೇವೆ, ಅವರೊಂದಿಗೆ ಜೀವನ ಬಂಧನವು ಬಂಧಿಸಲ್ಪಟ್ಟಿದೆ. ಪ್ರತಿಯೊಂದು ಮಾತನ್ನೂ ತಂದೆಯು ತಿಳಿಸುತ್ತಾರೆ. ನೀವೂ ತಿಳಿದುಕೊಂಡಿದ್ದೀರಿ - ಕಲ್ಪ-ಕಲ್ಪವೂ ನಮ್ಮ ಸಂಬಂಧವು ತಂದೆಯೊಂದಿಗಿತ್ತು, ಈಗ ಶಿವ ಜಯಂತಿಯನ್ನು ಆಚರಿಸುತ್ತಾರೆ ಆದರೆ ಯಾರದನ್ನು ಆಚರಿಸುತ್ತೇವೆ ಎಂಬುದು ಗೊತ್ತಿಲ್ಲ. ಶಿವ ತಂದೆ ಯಾರು ಪತಿತ-ಪಾವನನಾಗಿದ್ದಾರೆ, ಅವರು ಖಂಡಿತ ಸಂಗಮಯುಗದಲ್ಲಿಯೇ ಬರುವರು. ಇದನ್ನು ನೀವು ತಿಳಿದುಕೊಂಡಿದ್ದೀರಿ, ಪ್ರಪಂಚದವರಿಗೆ ಗೊತ್ತಿಲ್ಲ ಆದ್ದರಿಂದ ಕೋಟಿಯಲ್ಲಿ ಕೆಲವರು ಎಂದು ಗಾಯನವಿದೆ. ಆದಿ ಸನಾತನ ದೇವಿ-ದೇವತಾ ಧರ್ಮವು ಪ್ರಾಯಃಲೋಪವಾಗಿ ಬಿಟ್ಟಿದೆ. ಮತ್ತೆಲ್ಲಾ ಶಾಸ್ತ್ರ, ಕಥೆ ಮೊದಲಾದುವುಗಳಿವೆ. ಈ ಮೂಲ ಧರ್ಮವೇ ಇಲ್ಲ ಅಂದಮೇಲೆ ಹೇಗೆ ತಿಳಿದುಕೊಳ್ಳುವುದು! ಈಗ ನೀವು ಜೀವನ ಬಂಧನವನ್ನು ಬಂಧಿಸುತ್ತಿದ್ದೀರಿ. ಪರಮಾತ್ಮನ ಜೊತೆ ಆತ್ಮಗಳ ಅನುಬಂಧವೇರ್ಪಟ್ಟಿದೆ, ಇದರಲ್ಲಿ ಶರೀರದ ಯಾವುದೇ ಮಾತಿಲ್ಲ. ಭಲೆ ಮನೆಯಲ್ಲಿಯೇ ಕುಳಿತಿರಿ, ಕೇವಲ ಬುದ್ಧಿಯಿಂದ ನೆನಪು ಮಾಡಬೇಕಾಗಿದೆ. ನೀವಾತ್ಮರ ಜೀವನ ಬಂಧನವು ಬಂಧಿಸಲ್ಪಟ್ಟಿದೆ. ಹೇಗೆ ಸೆರಗನ್ನು ಬಂಧಿಸುತ್ತಾರಲ್ಲವೆ. ಅದು ಸ್ಥೂಲ ಮಾತಾಗಿದೆ, ಇದು ಪರಮಾತ್ಮನ ಜೊತೆ ಆತ್ಮಗಳ ಬುದ್ಧಿಯೋಗವಾಗಿದೆ. ಭಾರತದಲ್ಲಿ ಶಿವ ಜಯಂತಿಯನ್ನಾಚರಿಸುತ್ತಾರೆ ಆದರೆ ಅವರು ಯಾವಾಗ ಬಂದಿದ್ದರು ಎಂಬುದು ಯಾರಿಗೂ ಗೊತ್ತಿಲ್ಲ. ಕೃಷ್ಣ ಜಯಂತಿ ಯಾವಾಗ, ರಾಮನ ಜಯಂತಿಯು ಯಾವಾಗ ಆಗುತ್ತದೆ ಎಂಬುದನ್ನು ತಿಳಿದುಕೊಂಡಿಲ್ಲ. ನೀವು ಮಕ್ಕಳು ತ್ರಿಮೂರ್ತಿ ಶಿವ ಜಯಂತಿ ಶಬ್ಧವನ್ನು ಬರೆಯುತ್ತೀರಿ ಆದರೆ ಈ ಸಮಯದಲ್ಲಿ ಮೂವರು ಮೂರ್ತಿಗಳಂತೂ ಇಲ್ಲ. ಶಿವ ತಂದೆಯು ಬ್ರಹ್ಮಾರವರ ಮೂಲಕ ಸೃಷ್ಟಿಯನ್ನು ರಚಿಸುತ್ತಾರೆಂದು ನೀವು ಹೇಳುತ್ತೀರಿ ಅಂದಮೇಲೆ ಬ್ರಹ್ಮನು ಖಂಡಿತವಾಗಿಯೂ ಸಾಕಾರದಲ್ಲಿ ಬೇಕಲ್ಲವೆ. ಬಾಕಿ ವಿಷ್ಣು ಮತ್ತು ಶಂಕರನು ಈ ಸಮಯದಲ್ಲಿ ಎಲ್ಲಿದ್ದಾರೆ, ಯಾರನ್ನು ನೀವು ತ್ರಿಮೂರ್ತಿ ಎಂದು ಹೇಳುತ್ತೀರಿ. ಇವು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ತ್ರಿಮೂರ್ತಿಯ ಅರ್ಥವೇ ಆಗಿದೆ - ಬ್ರಹ್ಮಾ-ವಿಷ್ಣು-ಶಂಕರ. ಬ್ರಹ್ಮನ ಮೂಲಕ ಸ್ಥಾಪನೆಯಂತೂ ಈ ಸಮಯದಲ್ಲಿ ಆಗುತ್ತದೆ. ವಿಷ್ಣುವಿನ ಮೂಲಕ ಸತ್ಯಯುಗದಲ್ಲಿ ಪಾಲನೆಯಾಗುವುದು. ವಿನಾಶದ ಕಾರ್ಯವಂತೂ ಅಂತಿಮದಲ್ಲಿ ಆಗುವುದು. ಭಾರತದ ಈ ಆದಿ ಸನಾತನ ದೇವಿ-ದೇವತಾ ಧರ್ಮವು ಒಂದೇ ಆಗಿದೆ. ಆ ಧರ್ಮಪಿತರೆಲ್ಲರೂ ಅವರವರ ಧರ್ಮ ಸ್ಥಾಪನೆ ಮಾಡಲು ಬರುತ್ತಾರೆ. ಇವರು ಧರ್ಮ ಸ್ಥಾಪನೆ ಮಾಡಿದರು ಮತ್ತು ಅವರ ಸಂವತ್ಸರವು ಇದಾಗಿದೆ. ಇಂತಹ ಸಮಯದಲ್ಲಿ ಇಂತಹ ಧರ್ಮವನ್ನು ಸ್ಥಾಪನೆ ಮಾಡಿದರೆಂದು ಪ್ರತಿಯೊಬ್ಬರೂ ತಿಳಿದುಕೊಂಡಿದ್ದಾರೆ ಆದರೆ ಭಾರತದ ಬಗ್ಗೆ ಯಾರೂ ತಿಳಿದುಕೊಂಡಿಲ್ಲ. ಗೀತಾ ಜಯಂತಿ, ಶಿವ ಜಯಂತಿಯು ಯಾವಾಗ ಆಯಿತೆಂದು ಯಾರಿಗೂ ಗೊತ್ತಿಲ್ಲ. ಕೃಷ್ಣ ಮತ್ತು ರಾಧೆಯ ಆಯಸ್ಸಿನಲ್ಲಿ 2-3 ವರ್ಷಗಳ ಅಂತರವಿರಬಹುದು. ಮೊದಲು ಕೃಷ್ಣನು ಜನ್ಮ ಪಡೆದುಕೊಂಡಿರುವನು, ಸತ್ಯಯುಗದಲ್ಲಿ ಯಾವುದೋ ಜನ್ಮದಲ್ಲಿ ಕೃಷ್ಣನ ಜನ್ಮವಾಗಿರಬೇಕು ಆದರೆ ಸತ್ಯಯುಗವು ಯಾವಾಗ ಇತ್ತು ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ನಿಮಗೂ ಸಹ ತಿಳಿದುಕೊಳ್ಳುವುದರಲ್ಲಿ ಬಹಳ ವರ್ಷಗಳು ಹಿಡಿಸಿವೆ. ಎರಡು ದಿನಗಳಲ್ಲಿ ಎಷ್ಟೆಂದು ತಿಳಿದುಕೊಳ್ಳುತ್ತಾರೆ. ತಂದೆಯಂತೂ ಬಹಳ ಸಹಜವಾಗಿ ತಿಳಿಸುತ್ತಾರೆ. ಅವರು ಬೇಹದ್ದಿನ ತಂದೆಯಾಗಿದ್ದಾರೆ, ಅವಶ್ಯವಾಗಿ ಅವರಿಂದ ಎಲ್ಲರಿಗೆ ಆಸ್ತಿ ಸಿಗಬೇಕಲ್ಲವೆ. ಓ ಗಾಡ್ಫಾದರ್ ಎಂದು ಹೇಳಿ ನೆನಪು ಮಾಡುತ್ತಾರೆ. ಲಕ್ಷ್ಮೀ-ನಾರಾಯಣರ ಮಂದಿರವಿದೆ. ಇವರು ಸ್ವರ್ಗದಲ್ಲಿ ರಾಜ್ಯ ಮಾಡುತ್ತಿದ್ದರು ಆದರೆ ಅವರಿಗೆ ಈ ಆಸ್ತಿಯನ್ನು ಯಾರು ಕೊಟ್ಟರು? ಅವಶ್ಯವಾಗಿ ಸ್ವರ್ಗದ ರಚಯಿತನೇ ಕೊಟ್ಟಿರುವರು ಆದರೆ ಯಾವಾಗ ಹೇಗೆ ಕೊಟ್ಟರು ಎಂಬುದನ್ನು ಯಾರೂ ಅರಿತುಕೊಂಡಿಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಸತ್ಯಯುಗವಿದ್ದಾಗ ಮತ್ತ್ಯಾವುದೇ ಧರ್ಮವಿರಲಿಲ್ಲ. ಸತ್ಯಯುಗದಲ್ಲಿ ನಾವು ಪವಿತ್ರರಾಗಿದ್ದೆವು, ಕಲಿಯುಗದಲ್ಲಿ ಪತಿತರಾಗಿದ್ದೇವೆ ಅಂದಮೇಲೆ ಸಂಗಮದಲ್ಲಿ ಜ್ಞಾನವನ್ನು ಕೊಟ್ಟಿರಬೇಕು, ಸತ್ಯಯುಗದಲ್ಲಲ್ಲ. ಅಲ್ಲಂತೂ ಪ್ರಾಲಬ್ಧವಿರುತ್ತದೆ, ಅವಶ್ಯವಾಗಿ ಮೊದಲ ಜನ್ಮದಲ್ಲಿ ಜ್ಞಾನ ತೆಗೆದುಕೊಂಡಿರಬೇಕು, ನೀವೂ ಸಹ ಈಗ ತೆಗೆದುಕೊಳ್ಳುತ್ತಿದ್ದೀರಿ. ನಿಮಗೆ ತಿಳಿದಿದೆ, ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯನ್ನು ತಂದೆಯೇ ಮಾಡುವರು, ಕೃಷ್ಣನಂತೂ ಸತ್ಯಯುಗದಲ್ಲಿದ್ದನು, ಅವನಿಗೆ ಈ ಪ್ರಾಲಬ್ಧವು ಎಲ್ಲಿಂದ ಸಿಕ್ಕಿತು? ಲಕ್ಷ್ಮೀ-ನಾರಾಯಣರೇ ರಾಧೆ-ಕೃಷ್ಣರಾಗಿದ್ದರು, ಇದನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ಯಾರು ಕಲ್ಪದ ಹಿಂದೆ ತಿಳಿದುಕೊಂಡಿದ್ದರೋ ಅವರೇ ತಿಳಿದುಕೊಳ್ಳುತ್ತಾರೆ. ಈಗ ಸಸಿಯ ನಾಟಿಯಾಗುತ್ತದೆ. ಬಹಳ ಮಧುರ ವೃಕ್ಷದ ನಾಟಿಯಾಗುತ್ತದೆ. ನೀವು ತಿಳಿದುಕೊಂಡಿದ್ದೀರಿ - ಇಂದಿಗೆ 5000 ವರ್ಷಗಳ ಮೊದಲೂ ಸಹ ತಂದೆಯು ಬಂದು ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದ್ದರು, ನೀವೀಗ ವರ್ಗಾವಣೆಯಾಗುತ್ತಿದ್ದೀರಿ. ಮೊದಲು ಬ್ರಾಹ್ಮಣರಾಗಬೇಕಾಗಿದೆ. ಬಾಜೋಲಿಯನ್ನು ಆಡುವಾಗ ಶಿಖೆಯು ಅವಶ್ಯವಾಗಿ ಮೇಲೆ ಬರುತ್ತದೆ. ಅವಶ್ಯವಾಗಿ ನಾವೀಗ ಬ್ರಾಹ್ಮಣರಾಗಿದ್ದೇವೆ, ಯಜ್ಞದಲ್ಲಂತೂ ಬ್ರಾಹ್ಮಣರು ಖಂಡಿತ ಬೇಕು. ಇದು ಶಿವ ಅಥವಾ ರುದ್ರನ ಯಜ್ಞವಾಗಿದೆ. ರುದ್ರ ಜ್ಞಾನ ಯಜ್ಞವೆಂದೇ ಹೇಳಲಾಗುತ್ತದೆ. ಕೃಷ್ಣನು ಯಜ್ಞವನ್ನು ರಚಿಸಲಿಲ್ಲ, ಈ ರುದ್ರ ಜ್ಞಾನ ಯಜ್ಞದಿಂದ ವಿನಾಶ ಜ್ವಾಲೆ ಪ್ರಜ್ವಲಿತವಾಗುತ್ತದೆ. ಶಿವ ತಂದೆಯ ಯಜ್ಞವು ಪತಿತರನ್ನು ಪಾವನ ಮಾಡುವುದಕ್ಕಾಗಿಯೇ ಇದೆ. ರುದ್ರ ಶಿವ ತಂದೆಯು ನಿರಾಕಾರನಾಗಿದ್ದಾರೆ, ಅವರು ಯಜ್ಞವನ್ನು ಹೇಗೆ ರಚಿಸುವರು? ಎಲ್ಲಿಯವರೆಗೆ ಮನುಷ್ಯ ತನುವಿನಲ್ಲಿ ಬರುವುದಿಲ್ಲವೋ ಅಲ್ಲಿಯವರೆಗೆ ಹೇಗೆ ರಚಿಸುವರು? ಮನುಷ್ಯರೇ ಯಜ್ಞವನ್ನು ರಚಿಸುತ್ತಾರೆ. ಸೂಕ್ಷ್ಮ ಅಥವಾ ಮೂಲವತನದಲ್ಲಿ ಈ ಮಾತುಗಳಿರುವುದಿಲ್ಲ. ತಂದೆಯು ತಿಳಿಸುತ್ತಾರೆ - ಇದು ಸಂಗಮಯುಗವಾಗಿದೆ. ಲಕ್ಷ್ಮೀ-ನಾರಾಯಣರ ರಾಜ್ಯವಿದ್ದಾಗ ಸತ್ಯಯುಗವಿತ್ತು, ಈಗ ಪುನಃ ನೀವು ಈ ರೀತಿಯಾಗುತ್ತಿದ್ದೀರಿ. ಆತ್ಮಗಳ ಈ ಜೀವನದ ಬಂಧನವು ಪರಮಾತ್ಮನ ಜೊತೆ ಇದೆ. ಈ ಬಂಧನವನ್ನು ಏಕೆ ಬಂಧಿಸಿದ್ದೀರಿ? ಸದಾ ಸುಖದ ಆಸ್ತಿಯನ್ನು ಪಡೆಯುವುದಕ್ಕಾಗಿ. ನಿಮಗೆ ತಿಳಿದಿದೆ - ಬೇಹದ್ದಿನ ತಂದೆಯ ಮೂಲಕ ನಾವು ಈ ಲಕ್ಷ್ಮೀ-ನಾರಾಯಣರಾಗುತ್ತೇವೆ. ತಂದೆಯು ತಿಳಿಸಿದ್ದಾರೆ - ನೀವೇ ದೇವಿ-ದೇವತಾ ಧರ್ಮದವರಾಗಿದ್ದಿರಿ, ನಿಮ್ಮ ರಾಜ್ಯವಿತ್ತು ನಂತರ ನೀವು ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಕ್ಷತ್ರಿಯ ಧರ್ಮದಲ್ಲಿ ಬಂದಿರಿ, ಸೂರ್ಯವಂಶಿ ರಾಜ್ಯವು ಹೊರಟು ಹೋಯಿತು, ಚಂದ್ರವಂಶಿಯರು ಬಂದರು. ನಿಮಗೆ ತಿಳಿದಿದೆ - ನಾವು ಹೇಗೆ ಈ ಚಕ್ರವನ್ನು ಸುತ್ತುತ್ತೇವೆ, ಇಷ್ಟಿಷ್ಟು ಜನ್ಮಗಳನ್ನು ತೆಗೆದುಕೊಂಡೆವು. ಭಗವಾನುವಾಚ - ಹೇ ಮಕ್ಕಳೇ, ನಿಮ್ಮ ಈ ಜನ್ಮಗಳನ್ನು ಅರಿತಿಲ್ಲ, ನಾನು ಅರಿತಿದ್ದೇನೆ. ಈಗ ಈ ಸಮಯದಲ್ಲಿ ಈ ತನುವಿನಲ್ಲಿ (ಬ್ರಹ್ಮಾ) ಎರಡು ಮೂರ್ತಿಗಳಿವೆ. ಬ್ರಹ್ಮನ ಆತ್ಮ ಮತ್ತು ಶಿವ ಪರಮಾತ್ಮ. ಈ ಸಮಯದಲ್ಲಿ ಇಬ್ಬರು ಮೂರ್ತಿಗಳು ಒಟ್ಟಿಗೆ ಇದ್ದಾರೆ, ಬ್ರಹ್ಮಾ ಮತ್ತು ಶಿವ. ಶಂಕರನಂತೂ ಎಂದೂ ಪಾತ್ರದಲ್ಲಿ ಬರುವುದಿಲ್ಲ ಬಾಕಿ ವಿಷ್ಣು ಸತ್ಯಯುಗದಲ್ಲಿರುತ್ತಾರೆ. ಈಗ ನೀವು ಬ್ರಾಹ್ಮಣರೇ ದೇವತೆಗಳಾಗುತ್ತೀರಿ. ವಾಸ್ತವದಲ್ಲಿ ಹಮ್ ಸೋ, ಸೋ ಹಮ್ನ ಅರ್ಥವು ಇದಾಗಿದೆ ಆದರೆ ಇದನ್ನು ಅವರು ಆತ್ಮ ಸೋ ಪರಮಾತ್ಮ, ಪರಮಾತ್ಮ ಸೋ ಆತ್ಮನೆಂದು ಹೇಳಿ ಬಿಟ್ಟಿದ್ದಾರೆ. ಎಷ್ಟೊಂದು ಅಂತರವಿದೆ! ರಾವಣನು ಬರುತ್ತಿದ್ದಂತೆಯೇ ರಾವಣ ಮತವು ಆರಂಭವಾಯಿತು. ಸತ್ಯಯುಗದಲ್ಲಿ ಈ ಜ್ಞಾನವೇ ಪ್ರಾಯಲೋಪವಾಗಿ ಬಿಡುವುದು. ಇದೆಲ್ಲವೂ ಡ್ರಾಮಾದಲ್ಲಿ ನಿಗಧಿಯಾಗಿದೆಯಲ್ಲವೆ ಆಗಲೇ ತಂದೆಯು ಬಂದು ಸ್ಥಾಪನೆ ಮಾಡುವರು. ಈಗ ಸಂಗಮವಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಕಲ್ಪ-ಕಲ್ಪವೂ, ಕಲ್ಪದ ಸಂಗಮಯುಗದಲ್ಲಿ ಬಂದು ನಿಮ್ಮನ್ನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತೇನೆ, ಜ್ಞಾನ ಯಜ್ಞವನ್ನು ರಚಿಸುತ್ತೇನೆ. ಉಳಿದಂತೆ ಏನೆಲ್ಲವೂ ಇದೆಯೋ ಈ ಯಜ್ಞದಲ್ಲಿ ಸ್ವಾಹಾ ಆಗಿ ಬಿಡುವುದು. ಈ ವಿನಾಶ ಜ್ವಾಲೆಯು ಈ ಯಜ್ಞದಿಂದಲೇ ಪ್ರಜ್ವಲಿತವಾಗುವುದು. ಪತಿತ ಪ್ರಪಂಚದ ವಿನಾಶವಾಗುವುದು. ಇಲ್ಲದಿದ್ದರೆ ಪಾವನ ಪ್ರಪಂಚವು ಹೇಗಾಗುತ್ತದೆ? ಪತಿತ-ಪಾವನ ಬನ್ನಿ ಎಂದು ನೀವು ಹೇಳುತ್ತೀರಿ ಅಂದಮೇಲೆ ಪತಿತ ಪ್ರಪಂಚ, ಪಾವನ ಪ್ರಪಂಚ ಒಟ್ಟಿಗೆ ಇರುವುದೇ? ಪತಿತ ಪ್ರಪಂಚದ ವಿನಾಶವಾಗುವುದು, ಇದರಲ್ಲಿ ಖುಷಿಯಾಗಬೇಕು. ಕಲ್ಪದ ಹಿಂದೆಯೂ ಮಹಾಭಾರತ ಯುದ್ಧವಾಗಿತ್ತು, ಇದರಿಂದ ಸ್ವರ್ಗದ ಬಾಗಿಲು ತೆರೆಯಿತು. ಹೇಳುತ್ತಾರೆ - ಇದು ಅದೇ ಮಹಾಭಾರತ ಯುದ್ಧವಾಗಿದೆ ಎಂದು. ಇದು ಒಳ್ಳೆಯದೇ ಆಗಿದೆ. ಪತಿತ ಪ್ರಪಂಚವು ಸಮಾಪ್ತಿಯಾಗುವುದು. ಶಾಂತಿಗಾಗಿ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯೇನಿದೆ? ಈಗ ನಿಮಗೆ ಯಾವ ಮೂರನೇ ನೇತ್ರವು ಸಿಕ್ಕಿದೆ, ಅದು ಯಾರಿಗೂ ಇಲ್ಲ. ನಾವು ಬೇಹದ್ದಿನ ತಂದೆಯಿಂದ ಪುನಃ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ನೀವು ಮಕ್ಕಳಿಗೆ ಖುಷಿಯಾಗಬೇಕು - ಬಾಬಾ, ನಾವು ಅನೇಕ ಬಾರಿ ತಮ್ಮಿಂದ ಆಸ್ತಿಯನ್ನು ತೆಗೆದುಕೊಂಡಿದ್ದೇವೆ, ರಾವಣನು ಶಾಪ ಕೊಟ್ಟನು, ಈ ಮಾತುಗಳನ್ನು ನೆನಪು ಮಾಡಿಕೊಳ್ಳುವುದು ಸಹಜವಾಗಿದೆ. ಉಳಿದೆಲ್ಲವೂ ದಂತ ಕಥೆಗಳಾಗಿವೆ. ನಿಮ್ಮನ್ನು ಇಷ್ಟು ಸಾಹುಕಾರರನ್ನಾಗಿ ಮಾಡಿದೆನು ಮತ್ತೆ ಏಕೆ ಬಡವರಾದಿರಿ? ಇದೆಲ್ಲವೂ ಡ್ರಾಮಾದಲ್ಲಿ ನಿಗಧಿಯಾಗಿದೆ. ಜ್ಞಾನ, ಭಕ್ತಿ, ವೈರಾಗ್ಯವೆಂದು ಗಾಯನವಿದೆ. ಯಾವಾಗ ಜ್ಞಾನವು ಸಿಗುವುದೋ ಆಗ ಭಕ್ತಿಯೊಂದಿಗೆ ವೈರಾಗ್ಯ ಬರುತ್ತದೆ. ನಿಮಗೆ ಜ್ಞಾನ ಸಿಕ್ಕಿತು, ಆಗ ಭಕ್ತಿಯೊಂದಿಗೆ ವೈರಾಗ್ಯ ಉಂಟಾಯಿತು. ಇಡೀ ಹಳೆಯ ಪ್ರಪಂಚದೊಂದಿಗೆ ವೈರಾಗ್ಯ. ಇದಂತೂ ಸ್ಮಶಾನವಾಗಿದೆ. 84 ಜನ್ಮಗಳ ಚಕ್ರವನ್ನು ಸುತ್ತಿದ್ದೀರಿ. ಈಗ ಮನೆಗೆ ಹೋಗಬೇಕಾಗಿದೆ. ನನ್ನನ್ನು ನೆನಪು ಮಾಡಿದರೆ ನನ್ನ ಬಳಿ ಬಂದು ಬಿಡುತ್ತೀರಿ. ವಿಕರ್ಮಗಳು ವಿನಾಶವಾಗುತ್ತವೆ, ಮತ್ತ್ಯಾವುದೇ ಉಪಾಯವಿಲ್ಲ. ಯೋಗಾಗ್ನಿಯಿಂದಲೇ ಪಾಪವು ಭಸ್ಮವಾಗುತ್ತದೆ. ಗಂಗಾ ಸ್ನಾನದಿಂದ ಆಗುವುದಿಲ್ಲ.

ತಂದೆಯು ತಿಳಿಸುತ್ತಾರೆ ಮಾಯೆಯು ನಿಮ್ಮನ್ನು ಫೂಲ್ (ಮೂರ್ಖ) ಮಾಡಿ ಬಿಟ್ಟಿದೆ. ಏಪ್ರಿಲ್ ಫೂಲ್ ಎಂದು ಹೇಳುತ್ತಾರಲ್ಲವೆ. ಈಗ ನಾನು ನಿಮ್ಮನ್ನು ಲಕ್ಷ್ಮೀ-ನಾರಾಯಣರ ತರಹ ಮಾಡಲು ಬಂದಿದ್ದೇನೆ. ಚಿತ್ರಗಳಂತೂ ಬಹಳ ಚೆನ್ನಾಗಿದೆ - ಇಂದು ನಾವು ಹೇಗಿದ್ದೇವೆ, ನಾಳೆ ಏನಾಗುತ್ತೇವೆ? ಆದರೆ ಮಾಯೆಯೂ ಕಡಿಮೆಯಿಲ್ಲ. ಮಾಯೆಯು ತಂದೆಯೊಂದಿಗೆ ಅನುಬಂಧವಿರುವುದಕ್ಕೆ ಬಿಡುವುದಿಲ್ಲ, ಎಳೆದಾಟವಾಗುತ್ತದೆ. ನಾವು ತಂದೆಯನ್ನು ನೆನಪು ಮಾಡುತ್ತೇವೆ ಮತ್ತೇನಾಗುತ್ತದೆಯೋ ಗೊತ್ತಿಲ್ಲ, ಮರೆತು ಹೋಗುತ್ತೇವೆ. ಇದರಲ್ಲಿ ಪರಿಶ್ರಮವಿದೆ ಆದ್ದರಿಂದ ಭಾರತದ ಪ್ರಾಚೀನ ಯೋಗವು ಪ್ರಸಿದ್ಧವಾಗಿದೆ, ಅವರಿಗೆ ಆಸ್ತಿಯನ್ನು ಯಾರು ಕೊಟ್ಟರೆಂಬುದು ಯಾರಿಗೂ ಗೊತ್ತಿಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನು ನಿಮಗೆ ಪುನಃ ಆಸ್ತಿಯನ್ನು ಕೊಡಲು ಬಂದಿದ್ದೇನೆ, ಇದಂತೂ ತಂದೆಯ ಕರ್ತವ್ಯವಾಗಿದೆ. ಈ ಸಮಯದಲ್ಲಿ ಎಲ್ಲರೂ ನರಕವಾಸಿಗಳಾಗಿದ್ದಾರೆ. ನೀವು ಖುಷಿಯಾಗುತ್ತಿದ್ದೀರಿ, ಇಲ್ಲಿ ಯಾರಾದರೂ ಬಂದು ತಿಳಿದುಕೊಳ್ಳುತ್ತಾರೆಂದರೆ ಖುಷಿಯಾಗುತ್ತದೆ, ಇದು ಖಂಡಿತ ಸತ್ಯವಾಗಿದೆ, 84 ಜನ್ಮಗಳ ಲೆಕ್ಕವಿದೆ, ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕೆಂದು ತಿಳಿಯುತ್ತಾರೆ. ತಂದೆಗೆ ಗೊತ್ತಿದೆ, ನೀವು ಅರ್ಧಕಲ್ಪ ಭಕ್ತಿ ಮಾಡಿ ದಣಿದಿದ್ದೀರಿ. ಮಧುರ ಮಕ್ಕಳೇ, ತಂದೆಯು ನಿಮ್ಮ ದಣಿವೆಲ್ಲವನ್ನೂ ದೂರ ಮಾಡುತ್ತಾರೆ. ಈಗ ಭಕ್ತಿಯ ಅಂಧಕಾರ ಮಾರ್ಗವು ಮುಕ್ತಾಯವಾಗುತ್ತದೆ. ಈ ದುಃಖಧಾಮವೆಲ್ಲಿ, ಆ ಸುಖಧಾಮವೆಲ್ಲಿ! ನಾನು ದುಃಖಧಾಮವನ್ನು ಸುಖಧಾಮವನ್ನಾಗಿ ಮಾಡಲು ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ. ತಂದೆಯ ಪರಿಚಯವನ್ನು ಕೊಡಬೇಕಾಗಿದೆ. ತಂದೆಯು ಬೇಹದ್ದಿನ ಆಸ್ತಿಯನ್ನು ಕೊಡುವವರಾಗಿದ್ದಾರೆ. ಒಬ್ಬ ತಂದೆಯದೇ ಮಹಿಮೆಯಿದೆ. ಶಿವ ತಂದೆಯಿಲ್ಲದಿದ್ದರೆ ನಿಮ್ಮನ್ನು ಯಾರು ಪಾವನ ಮಾಡುವರು? ಡ್ರಾಮಾದಲ್ಲಿ ಎಲ್ಲವೂ ನಿಗಧಿಯಾಗಿದೆ. ಹೇ ಪತಿತ-ಪಾವನ ಬನ್ನಿ ಎಂದು ಕಲ್ಪ-ಕಲ್ಪವೂ ನೀವು ನನ್ನನ್ನು ಕರೆಯುತ್ತೀರಿ. ಶಿವ ಜಯಂತಿಯಿದೆ, ಬ್ರಹ್ಮನು ಸ್ವರ್ಗದ ಸ್ಥಾಪನೆ ಮಾಡಿದರೆಂದು ಹೇಳುತ್ತಾರೆ ಅಂದಮೇಲೆ ಶಿವನು ಏನು ಮಾಡಿದರು? ಯಾವ ಕಾರಣ ಶಿವ ಜಯಂತಿಯನ್ನಾಚರಿಸುತ್ತಾರೆ? ಏನನ್ನೂ ತಿಳಿದುಕೊಂಡಿಲ್ಲ. ನಿಮ್ಮ ಬುದ್ಧಿಯಲ್ಲಿ ಒಮ್ಮೆಲೆ ಜ್ಞಾನವು ಕುಳಿತುಕೊಂಡು ಬಿಡಬೇಕು. ಜೀವನ ಬಂಧನವನ್ನು ಒಬ್ಬ ತಂದೆಯೊಂದಿಗೇ ಬಂಧಿಸಿದ್ದೀರಿ ಅಂದಮೇಲೆ ಮತ್ತ್ಯಾರ ಜೊತೆಯಲ್ಲಿಯೂ ಬಂಧಿಸಬೇಡಿ, ಇಲ್ಲವಾದರೆ ಕೆಳಗೆ ಬೀಳುತ್ತೀರಿ. ಪಾರಲೌಕಿಕ ತಂದೆಯು ಬಹಳ ಸಾಧಾರಣವಾಗಿದ್ದಾರೆ, ಯಾವುದೇ ಆಡಂಬರವಿಲ್ಲ. ಆ ತಂದೆಯರಂತೂ ಮೋಟಾರುಗಳಲ್ಲಿ, ವಿಮಾನಗಳಲ್ಲಿ ಸುತ್ತಾಡುತ್ತಾರೆ. ಈ ಬೇಹದ್ದಿನ ತಂದೆಯು ತಿಳಿಸುತ್ತಾರೆ - ನಾನು ಪತಿತ ಪ್ರಪಂಚ, ಪತಿತ ಶರೀರದಲ್ಲಿ ಮಕ್ಕಳ ಸೇವೆ ಮಾಡಲು ಬಂದಿದ್ದೇನೆ. ಹೇ ಅವಿನಾಶಿ ಸರ್ಜನ್ ಬನ್ನಿ, ಬಂದು ನಮಗೆ ಇಂಜೆಕ್ಷನ್ ಕೊಡಿ ಎಂದು ಕರೆದಿದ್ದೀರಿ, ಈಗ ಇಂಜೆಕ್ಷನ್ ಕೊಡುತ್ತಿದ್ದಾರೆ. ಈಗ ತಂದೆಯು ತಿಳಿಸುತ್ತಾರೆ - ನನ್ನೊಂದಿಗೆ ಬುದ್ಧಿಯೋಗವನ್ನಿಡಿ ಆಗ ನಿಮ್ಮ ಪಾಪಗಳು ಭಸ್ಮವಾಗುತ್ತವೆ. ತಂದೆಯು 63 ಜನ್ಮಗಳ ದುಃಖಹರ್ತ, 21 ಜನ್ಮಗಳ ಸುಖಕರ್ತನಾಗಿದ್ದಾರೆ. ಒಳ್ಳೆಯದು.

ಧಾರಣೆಗಾಗಿ ಮುಖ್ಯಸಾರ-
1. ತಮ್ಮ ಬುದ್ಧಿಯ ಆತ್ಮಿಕ ಸೂತ್ರದ ದಾರವನ್ನು ಒಬ್ಬ ತಂದೆಯೊಂದಿಗೆ ಬಂಧಿಸಬೇಕಾಗಿದೆ. ಒಬ್ಬರ ಶ್ರೀಮತದನುಸಾರವೇ ನಡೆಯಬೇಕಾಗಿದೆ.

2. ನಾವು ಬಹಳ ಮಧುರ ವೃಕ್ಷದ ನಾಟಿ ಮಾಡುತ್ತಿದ್ದೇವೆ, ಆದ್ದರಿಂದ ಸ್ವಯಂನ್ನು ಬಹಳ-ಬಹಳ ಮಧುರ ಮಾಡಿಕೊಳ್ಳಬೇಕಾಗಿದೆ. ನೆನಪಿನ ಯಾತ್ರೆಯಲ್ಲಿ ತತ್ಪರರಾಗಿದ್ದು ವಿಕರ್ಮ ವಿನಾಶ ಮಾಡಿಕೊಳ್ಳಬೇಕಾಗಿದೆ.

ವರದಾನ:
ಸರ್ವ ಖಜಾನೆಗಳನ್ನು ವಿಶ್ವ ಕಲ್ಯಾಣದ ಪ್ರತಿ ಉಪಯೋಗಿಸುವಂತಹ ಸಿದ್ಧಿ ಸ್ವರೂಪ ಭವ.

ಹೇಗೆ ನಿಮ್ಮ ಮಿತವಾದ ಪ್ರವೃತ್ತಿಯಲ್ಲಿ. ತಮ್ಮ ಮಿತವಾದ ಸ್ವಭಾವ-ಸಂಸ್ಕಾರಗಳ ಪ್ರವೃತ್ತಿಯಲ್ಲಿ ಬಹಳ ಸಮಯ ತೊಡಗಿಸಿ ಬಿಡುವಿರಿ, ಆದರೆ ತಮ್ಮ-ತಮ್ಮ ಪ್ರವೃತ್ತಿಯಿಂದ ದೂರ ಅರ್ಥಾತ್ ಉಪರಾಮರಾಗಿದ್ದಾಗ ಮತ್ತು ಪ್ರತಿ ಸಂಕಲ್ಪ, ಮಾತು, ಕರ್ಮ ಮತ್ತು ಸಂಬಂಧ-ಸಂಪರ್ಕದಲ್ಲಿ ಬ್ಯಾಲೆನ್ಸ್ ಇಟ್ಟಾಗ ಸರ್ವ ಖಜಾನೆಗಳ ಉಳಿತಾಯದ ಮುಖಾಂತರ ಕಡಿಮೆ ಖರ್ಚು ಹೆಚ್ಚು ಲಾಭ ಪಡೆಯುವವರಾಗಿ, ಅವುಗಳನ್ನು ಸ್ವಯಂಗೆ ಬದಲಾಗಿ ವಿಶ್ವ ಕಲ್ಯಾಣದ ಪ್ರತಿ ಉಪಯೋಗಿಸಿ ಆಗ ಸಿದ್ಧಿ ಸ್ವರೂಪರಾಗಿ ಬಿಡುವಿರಿ.

ಸ್ಲೋಗನ್:
ಒಬ್ಬರ ಲಗನ್ನಲ್ಲಿ ಸದಾ ಮಗ್ನರಾಗಿದ್ದಾಗ ನಿರ್ವಿಘ್ನರಾಗಿ ಬಿಡುವಿರಿ.