16/05/20 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ


"ಮಧುರ ಮಕ್ಕಳೇ - ಈಗ ಡ್ರಾಮಾದ ಚಕ್ರವು ಪೂರ್ಣವಾಗುತ್ತಿದೆ, ನೀವು ಕ್ಷೀರ ಖಂಡವಾಗಿ ಹೊಸ ಪ್ರಪಂಚದಲ್ಲಿ ಬರಬೇಕಾಗಿದೆ, ಅಲ್ಲಿ ಎಲ್ಲರೂ ಕ್ಷೀರ ಖಂಡವಾಗಿರುತ್ತಾರೆ, ಇಲ್ಲಿ ಉಪ್ಪು ನೀರಾಗಿದ್ದಾರೆ”

ಪ್ರಶ್ನೆ:

ನೀವು ತ್ರಿನೇತ್ರಿ ಮಕ್ಕಳು ಯಾವ ಜ್ಞಾನವನ್ನರಿತು ತ್ರಿಕಾಲದರ್ಶಿಗಳಾಗಿ ಬಿಟ್ಟಿದ್ದೀರಿ?

ಉತ್ತರ:

ನಿಮಗೆ ಈಗ ಇಡೀ ವಿಶ್ವದ ಚರಿತ್ರೆ-ಭೂಗೋಳದ ಜ್ಞಾನವು ಸಿಕ್ಕಿದೆ. ಸತ್ಯಯುಗದಿಂದ ಹಿಡಿದು ಕಲಿಯುಗದ ಅಂತ್ಯದವರೆಗೆ ಚರಿತ್ರೆ-ಭೂಗೋಳವನ್ನು ತಿಳಿದುಕೊಂಡಿದ್ದೀರಿ. ನಿಮಗೆ ಜ್ಞಾನದ ಮೂರನೆಯ ನೇತ್ರವು ಸಿಕ್ಕಿತು, ಆತ್ಮವು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಸಂಸ್ಕಾರವು ಆತ್ಮದಲ್ಲಿದೆ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾಮ-ರೂಪದಿಂದ ಭಿನ್ನವಾಗಿ ತಮ್ಮನ್ನು ಅಶರೀರಿ ಆತ್ಮನೆಂದು ತಿಳಿಯಿರಿ.

ಗೀತೆ:

ಧೈರ್ಯ ತಾಳು ಮಾನವನೇ.............

ಓಂ ಶಾಂತಿ. ಕಲ್ಪ-ಕಲ್ಪವೂ ಮಕ್ಕಳಿಗೆ ಹೇಳಲಾಗುತ್ತದೆ ಮತ್ತು ಮಕ್ಕಳಿಗೂ ತಿಳಿದಿದೆ - ಬೇಗನೆ ಸತ್ಯಯುಗವು ಆಗಿ ಬಿಟ್ಟರೆ ಈ ದುಃಖದಿಂದ ಮುಕ್ತರಾಗುತ್ತೇವೆಂದು ಮನಸ್ಸಾಗುತ್ತದೆ ಆದರೆ ನಾಟಕವು ಬಹಳ ನಿಧಾನ-ನಿಧಾನವಾಗಿ ನಡೆಯುವಂತದ್ದಾಗಿದೆ. ತಂದೆಯು ಧೈರ್ಯವನ್ನು ಕೊಡುತ್ತಾರೆ - ಮಕ್ಕಳೇ, ಇನ್ನು ಸ್ವಲ್ಪದಿನಗಳೇ ಉಳಿದಿವೆ. ದೊಡ್ಡ-ದೊಡ್ಡವರೂ ಸಹ ಪ್ರಪಂಚವು ಬದಲಾಗಲಿದೆ ಎಂಬ ಶಬ್ಧವನ್ನು ಹೇಳುತ್ತಿರುತ್ತಾರೆ. ಯಾರೆಲ್ಲಾ ಪೋಪರ ತರಹ ದೊಡ್ಡ-ದೊಡ್ಡವರಿದ್ದಾರೆ ಅವರೂ ಸಹ ಹೇಳುತ್ತಾರೆ - ಪ್ರಪಂಚವು ಬದಲಾಗಲಿದೆ. ಒಳ್ಳೆಯದು. ಮತ್ತೆ ಶಾಂತಿಯು ಹೇಗೆ ಸ್ಥಾಪನೆಯಾಗುವುದು? ಈ ಸಮಯದಲ್ಲಿ ಎಲ್ಲರೂ ಉಪ್ಪು ನೀರಾಗಿದ್ದಾರೆ, ನಾವೀಗ ಕ್ಷೀರ ಖಂಡವಾಗುತ್ತಿದ್ದೇವೆ. ಒಂದು ಕಡೆ ದಿನ-ಪ್ರತಿದಿನ ಉಪ್ಪು ನೀರಾಗಿ ವರ್ತಿಸುತ್ತಾ ಹೋಗುತ್ತಾರೆ. ಪರಸ್ಪರ ಹೊಡೆದಾಡಿ-ಜಗಳವಾಡಿ ಸಮಾಪ್ತಿಯಾಗುತ್ತಾರೆ, ತಯಾರಿಗಳು ನಡೆಯುತ್ತಿದೆ. ಈ ನಾಟಕದ ಚಕ್ರವು ಪೂರ್ಣವಾಗುತ್ತದೆ. ಹಳೆಯ ಪ್ರಪಂಚವು ಮುಕ್ತಾಯವಾಗುತ್ತದೆ, ಹೊಸ ಪ್ರಪಂಚದ ಸ್ಥಾಪನೆಯಾಗುತ್ತಿದೆ. ಹೊಸ ಪ್ರಪಂಚದಿಂದ ಹಳೆಯದು, ಹಳೆಯದರಿಂದ ಹೊಸದು ಪುನಃ ಆಗುತ್ತದೆ ಇದಕ್ಕೆ ಸೃಷ್ಟಿಚಕ್ರವೆಂದು ಹೇಳಲಾಗುತ್ತದೆ. ಇದು ಸುತ್ತುತ್ತಲೇ ಇರುತ್ತದೆ. ಲಕ್ಷಾಂತರ ವರ್ಷಗಳ ನಂತರ ಹಳೆಯ ಪ್ರಪಂಚವು ಹೊಸದಾಗುತ್ತದೆ ಎಂದಲ್ಲ. ನೀವು ಮಕ್ಕಳು ಬಹಳ ಚೆನ್ನಾಗಿ ಅರಿತುಕೊಂಡಿದ್ದೀರಿ. ಭಕ್ತಿಯೇ ಬೇರೆಯಾಗಿದೆ, ಭಕ್ತಿಯ ಸಂಬಂಧವು ರಾವಣನೊಂದಿಗಿದೆ. ಜ್ಞಾನದ ಸಂಬಂಧವು ರಾಮನೊಂದಿಗಿದೆ. ಇದನ್ನು ನೀವೀಗ ತಿಳಿಯುತ್ತಿದ್ದೀರಿ. ಹೇ ಪತಿತ-ಪಾವನ ಬನ್ನಿ, ಬಂದು ಹೊಸ ಪ್ರಪಂಚದ ಸ್ಥಾಪನೆ ಮಾಡಿ ಎಂದು ತಂದೆಯನ್ನು ಕರೆಯುತ್ತಾರೆ ಏಕೆಂದರೆ ಹೊಸ ಪ್ರಪಂಚದಲ್ಲಿ ಅವಶ್ಯವಾಗಿ ಸುಖವಿರುತ್ತದೆ. ಈಗ ಚಿಕ್ಕ ಮಕ್ಕಳು ಅಥವಾ ದೊಡ್ದವರೆಲ್ಲರೂ ಅರಿತುಕೊಂಡಿದ್ದಾರೆ - ಈಗ ಮನೆಗೆ ಹೋಗಬೇಕಾಗಿದೆ. ಈ ನಾಟಕವು ಪೂರ್ಣವಾಗುತ್ತದೆ, ನಾವು ಪುನಃ ಸತ್ಯಯುಗಕ್ಕೆ ಹೋಗುತ್ತೇವೆ, ಮತ್ತೆ 84 ಜನ್ಮಗಳ ಚಕ್ರವನ್ನು ಸುತ್ತಬೇಕಾಗಿದೆ. ಸ್ವಯಂ ಆತ್ಮಕ್ಕೆ ಸೃಷ್ಟಿಚಕ್ರದ ದರ್ಶನವಾಗುತ್ತದೆ ಅರ್ಥಾತ್ ಆತ್ಮಕ್ಕೆ ಜ್ಞಾನದ ಮೂರನೆಯ ನೇತ್ರವು ಸಿಕ್ಕಿದೆ ಅದಕ್ಕೆ ತ್ರಿನೇತ್ರಿ ಎಂದು ಹೇಳಲಾಗುತ್ತದೆ. ನೀವೀಗ ತ್ರಿನೇತ್ರಿಗಳಾಗಿದ್ದೀರಿ, ಮತ್ತೆಲ್ಲಾ ಮನುಷ್ಯರಿಗೆ ಈ ಸ್ಥೂಲ ನೇತ್ರಗಳಿವೆ. ಜ್ಞಾನದ ನೇತ್ರವು ಯಾರಿಗೂ ಇಲ್ಲ. ತ್ರಿನೇತ್ರಿಗಳಾದಾಗಲೇ ತ್ರಿಕಾಲದರ್ಶಿಗಳಾಗುವರು, ಏಕೆಂದರೆ ಆತ್ಮಕ್ಕೆ ಜ್ಞಾನವು ಸಿಗುತ್ತದೆಯಲ್ಲವೆ. ಆತ್ಮವೇ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಸಂಸ್ಕಾರವು ಆತ್ಮದಲ್ಲಿರುತ್ತದೆ. ಆತ್ಮವು ಅವಿನಾಶಿಯಾಗಿದೆ, ಈಗ ತಂದೆಯು ತಿಳಿಸುತ್ತಾರೆ - ನಾಮ-ರೂಪದಿಂದ ಭಿನ್ನರಾಗಿ ತಮ್ಮನ್ನು ಅಶರೀರಿ ಎಂದು ತಿಳಿಯಿರಿ. ದೇಹವೆಂದು ತಿಳಿಯಬೇಡಿ. ಇದೂ ಸಹ ನಿಮಗೆ ತಿಳಿದಿದೆ - ನಾವು ಅರ್ಧ ಕಲ್ಪದಿಂದ ಪರಮಾತ್ಮನನ್ನು ನೆನಪು ಮಾಡುತ್ತಾ ಬಂದಿದ್ದೇವೆ. ಇದರಲ್ಲಿ ಯಾವಾಗ ದುಃಖವು ಹೆಚ್ಚಾಗುವುದೋ ಆಗ ಹೆಚ್ಚು ನೆನಪು ಮಾಡುತ್ತಾರೆ. ಈಗ ಎಷ್ಟೊಂದು ದುಃಖವಿದೆ! ಮೊದಲಂತೂ ಇಷ್ಟೊಂದು ದುಃಖವಿರಲಿಲ್ಲ. ಯಾವಾಗಿನಿಂದ ವಿದೇಶಿಯರು ಬಂದಿದ್ದಾರೆಯೋ ಆಗಿನಿಂದಲೂ ಈ ರಾಜರುಗಳೂ ಸಹ ಪರಸ್ಪರ ಹೊಡೆದಾಡುತ್ತಿದ್ದಾರೆ. ಬೇರೆ-ಬೇರೆಯಾಗಿದ್ದಾರೆ. ಸತ್ಯಯುಗದಲ್ಲಂತೂ ಒಂದೇ ರಾಜ್ಯವಿತ್ತು.

ನಾವೀಗ ಸತ್ಯಯುಗದಿಂದ ಹಿಡಿದು ಕಲಿಯುಗದ ಅಂತ್ಯದವರೆಗೆ ಚರಿತ್ರೆ-ಭೂಗೋಳವನ್ನು ತಿಳಿದುಕೊಳ್ಳುತ್ತಿದ್ದೇವೆ, ಸತ್ಯ-ತ್ರೇತಾಯುಗದಲ್ಲಿ ಒಂದೇ ರಾಜ್ಯವಿತ್ತು, ಈ ರೀತಿ ಒಂದೇ ರಾಜ್ಯವು ಮತ್ತ್ಯಾರದೂ ಇರುವುದಿಲ್ಲ. ಕ್ರಿಶ್ಚಿಯನ್ನರಲ್ಲಿಯೂ ನೋಡಿ ಬಿರುಕುಂಟಾಗಿದೆ. ಸತ್ಯಯುಗದಲ್ಲಂತೂ ಇಡೀ ವಿಶ್ವವು ಒಬ್ಬರ ಕೈಯಲ್ಲಿರುತ್ತದೆ. ಇದು ಕೇವಲ ಸತ್ಯ-ತ್ರೇತಾಯುಗದಲ್ಲಿಯೇ ಇರುತ್ತದೆ. ಈ ಬೇಹದ್ದಿನ ಚರಿತ್ರೆ-ಭೂಗೋಳವು ಈಗ ನಿಮ್ಮ ಬುದ್ಧಿಯಲ್ಲಿದೆ, ಮತ್ತ್ಯಾವುದೇ ಸತ್ಸಂಗದಲ್ಲಿ ಚರಿತ್ರೆ-ಭೂಗೋಳದ ಶಬ್ಧವನ್ನು ಕೇಳುವುದಿಲ್ಲ. ಅಲ್ಲಂತೂ ರಾಮಾಯಣ-ಮಹಾಭಾರತ ಇತ್ಯಾದಿಗಳನ್ನೇ ಕೇಳುತ್ತಾರೆ, ಇಲ್ಲಿ ಆ ಮಾತುಗಳಿಲ್ಲ. ಇಲ್ಲಿ ವಿಶ್ವದ ಚರಿತ್ರೆ-ಭೂಗೋಳವಿದೆ. ನಿಮ್ಮ ಬುದ್ಧಿಯಲ್ಲಿದೆ - ಸರ್ವ ಶ್ರೇಷ್ಠ ತಂದೆಯು ಪರಮಧಾಮದಲ್ಲಿರುತ್ತಾರೆ ಮತ್ತೆ ಸೂಕ್ಷ್ಮವತನವೂ ನಿಮಗೆ ತಿಳಿದಿದೆ. ಮನುಷ್ಯರೇ ಫರಿಶ್ತೆಗಳಾಗುತ್ತಾರೆ ಆದ್ದರಿಂದ ಸೂಕ್ಷ್ಮವತನವಾಗಿ ತೋರಿಸುತ್ತಾರೆ. ನೀವಾತ್ಮಗಳು ಹೋಗುತ್ತೀರಿ, ಶರೀರವಂತೂ ಸೂಕ್ಷ್ಮವತನದಲ್ಲಿ ಹೋಗುವುದಿಲ್ಲ. ಹೇಗೆ ಹೋಗುತ್ತಾರೆ? ಅದಕ್ಕೆ ಮೂರನೆಯ ನೇತ್ರವೆಂದು ಹೇಳಲಾಗುತ್ತದೆ. ದಿವ್ಯ ದೃಷ್ಟಿ ಅಥವಾ ಧ್ಯಾನವೆಂದು ಹೇಳುತ್ತಾರೆ, ನೀವು ಧ್ಯಾನದಲ್ಲಿ ಬ್ರಹ್ಮಾ-ವಿಷ್ಣು-ಶಂಕರನನ್ನು ನೋಡುತ್ತೀರಿ. ಶಂಕರನು ಕಣ್ಣು ತೆರೆದಾಗ ವಿನಾಶವಾಗುವುದೆಂದು ತೋರಿಸುತ್ತಾರೆ. ಇದರಿಂದ ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಈಗ ನಿಮಗೆ ತಿಳಿದಿದೆ - ವಿನಾಶವಂತೂ ನಾಟಕದನುಸಾರ ಆಗಲೇಬೇಕಾಗಿದೆ. ಪರಸ್ಪರ ಹೊಡೆದಾಡಿ ವಿನಾಶವಾಗುತ್ತಾರೆ ಅಂದಾಗ ಶಂಕರನೇನು ಮಾಡುತ್ತಾರೆ! ನಾಟಕದನುಸಾರ ಈ ಹೆಸರನ್ನಿಟ್ಟಿದ್ದಾರೆ ಆದ್ದರಿಂದ ತಿಳಿಸಬೇಕಾಗುತ್ತದೆ - ಬ್ರಹ್ಮಾ, ವಿಷ್ಣು, ಶಂಕರ ಮೂವರಿದ್ದಾರೆ. ಸ್ಥಾಪನೆಗಾಗಿ ಬ್ರಹ್ಮನನ್ನು, ಪಾಲನೆಗಾಗಿ ವಿಷ್ಣುವನ್ನು, ವಿನಾಶಕ್ಕಾಗಿ ಶಂಕರನನ್ನು ಇಟ್ಟಿದ್ದಾರೆ. ವಾಸ್ತವದಲ್ಲಿ ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಇದರಲ್ಲಿ ಶಂಕರನ ಪಾತ್ರವೇನೂ ಇಲ್ಲ. ಬ್ರಹ್ಮಾ ಮತ್ತು ವಿಷ್ಣುವಿನ ಪಾತ್ರವಂತೂ ಇಡೀ ಕಲ್ಪದಲ್ಲಿದೆ, ಬ್ರಹ್ಮನಿಂದ ವಿಷ್ಣು ವಿಷ್ಣುವಿನಿಂದ ಬ್ರಹ್ಮಾ. ಬ್ರಹ್ಮನ 84 ಜನ್ಮಗಳ ಪೂರ್ಣವಾಯಿತೆಂದರೆ ವಿಷ್ಣುವಿನದೂ ಪೂರ್ಣವಾಯಿತು, ಶಂಕರನು ಜನನ-ಮರಣದಿಂದ ಭಿನ್ನವಾಗಿದ್ದಾರೆ. ಆದ್ದರಿಂದ ಮನುಷ್ಯರು ಶಿವ-ಶಂಕರನನ್ನು ಒಂದೇ ಮಾಡಿ ಬಿಟ್ಟಿದ್ದಾರೆ. ವಾಸ್ತವದಲ್ಲಿ ಶಿವನ ಪಾತ್ರವು ಬಹಳಷ್ಟಿದೆ, ಅವರು ಮಕ್ಕಳಿಗೆ ಓದಿಸುತ್ತಾರೆ. ಭಗವಂತನನ್ನು ಜ್ಞಾನಪೂರ್ಣನೆಂದು ಹೇಳಲಾಗುತ್ತದೆ. ಒಂದುವೇಳೆ ಅವರು ಪ್ರೇರಣೆಯಿಂದ ಕಾರ್ಯ ಮಾಡುವಂತಿದ್ದರೆ ಸೃಷ್ಟಿಚಕ್ರದ ಜ್ಞಾನವನ್ನು ಹೇಗೆ ಕೊಡುವರು! ಆದ್ದರಿಂದ ತಂದೆಯು ತಿಳಿಸುತ್ತಾರೆ, ಇಲ್ಲಿ ಪ್ರೇರಣೆಯ ಮಾತಿಲ್ಲ. ನಾನೇ ಬರಬೇಕಾಗುತ್ತದೆ. ಮಕ್ಕಳೇ, ನನ್ನಲ್ಲಿ ಸೃಷ್ಟಿಚಕ್ರದ ಜ್ಞಾನವಿದೆ, ನನಗೆ ಈ ಪಾತ್ರವು ಸಿಕ್ಕಿದೆ ಆದ್ದರಿಂದ ನನ್ನನ್ನೇ ಜ್ಞಾನಸಾಗರ, ಜ್ಞಾನಪೂರ್ಣನೆಂದು ಹೇಳುತ್ತಾರೆ. ಯಾವುದಕ್ಕೆ ಜ್ಞಾನವೆಂದು ಹೇಳಲಾಗುತ್ತದೆ ಎಂಬುದು ನಿಮಗೆ ಸಿಕ್ಕಿದಾಗಲೇ ತಿಳಿಯುತ್ತದೆ. ಸಿಗಲೇ ಇಲ್ಲವೆಂದರೆ ಅರ್ಥವು ಹೇಗೆ ತಿಳಿಯುವುದು. ಮೊದಲು ನೀವೂ ಸಹ ಹೇಳುತ್ತಿದ್ದಿರಿ - ಈಶ್ವರನು ಪ್ರೇರಣೆ ಕೊಡುತ್ತಾರೆ, ಅವರು ಎಲ್ಲವನ್ನೂ ತಿಳಿದುಕೊಂಡಿದ್ದಾರೆ. ನಾವು ಯಾವ ಪಾಪ ಮಾಡುತ್ತೇವೆಯೋ ಅದನ್ನು ಈಶ್ವರನು ನೋಡುತ್ತಾರೆ, ಆದರೆ ತಂದೆಯು ತಿಳಿಸುತ್ತಾರೆ - ನಾನು ಈ ಕಾರ್ಯವನ್ನು ಮಾಡುವುದಿಲ್ಲ. ಇಲ್ಲಿ ಯಾರು ಎಂತಹ ಕರ್ಮವನ್ನು ಮಾಡುವರೋ ಅದರ ಶಿಕ್ಷೆಯನ್ನು ತಾವೇ ಅನುಭವಿಸುತ್ತಾರೆ. ನಾನು ಯಾರಿಗೂ ಕೊಡುವುದಿಲ್ಲ ಅಥವಾ ಪ್ರೇರಣೆಯಿಂದ ಶಿಕ್ಷೆಯನ್ನೂ ಕೊಡುವುದಿಲ್ಲ. ಒಂದುವೇಳೆ ನಾನು ಪ್ರೇರಣೆಯಿಂದ ಮಾಡಿದ್ದೇ ಆದರೆ ನಾನು ಶಿಕ್ಷೆಯನ್ನು ಕೊಟ್ಟಂತಾಗುತ್ತದೆ. ಇವರನ್ನು ಹೊಡೆಯಿರಿ ಎಂದು ಯಾರಿಗಾದರೂ ಹೇಳುವುದಾದರೆ ಇದೂ ಸಹ ದೋಷವಾಗಿದೆ. ಹೇಳುವವರೂ ಸಿಕ್ಕಿ ಹಾಕಿಕೊಳ್ಳುವರು. ಶಂಕರನು ಪ್ರೇರಣೆ ಕೊಟ್ಟರೆ ಶಂಕರನು ಸಿಕ್ಕಿ ಹಾಕಿಕೊಳ್ಳುವಂತಾಗುವುದು. ತಂದೆಯು ತಿಳಿಸುತ್ತಾರೆ - ನಾನಂತೂ ನೀವು ಮಕ್ಕಳಿಗೆ ಸುಖ ಕೊಡುವವನಾಗಿದ್ದೇನೆ. ಬಾಬಾ, ಬಂದು ದುಃಖವನ್ನು ದೂರ ಮಾಡಿ ಎಂದು ನೀವು ನನ್ನ ಮಹಿಮೆಯನ್ನು ಮಾಡುತ್ತೀರಿ. ನಾನು ದುಃಖ ಕೊಡುತ್ತೇನೆಯೇ!

ಈಗ ನೀವು ಮಕ್ಕಳು ತಂದೆಯ ಸನ್ಮುಖದಲ್ಲಿ ಕುಳಿತಿದ್ದೀರಿ ಅಂದಮೇಲೆ ಎಷ್ಟೊಂದು ಖುಷಿಯಿರಬೇಕು. ಇಲ್ಲಿ ಸನ್ಮುಖದಲ್ಲಿ ಅನುಭವವಾಗುತ್ತದೆ. ತಂದೆಯು ನಮಗೆ ಓದಿಸುತ್ತಾರೆ ಇದಕ್ಕೆ ಮೇಳವೆಂದು ಹೇಳಲಾಗುತ್ತದೆ. ಸೇವಾಕೇಂದ್ರಗಳಲ್ಲಿ ನೀವು ಹೋಗುತ್ತೀರೆಂದರೆ ಅಲ್ಲಿ ಆತ್ಮಗಳು ಪರಮಾತ್ಮನ ಮೇಳವೆಂದು ಹೇಳುವುದಿಲ್ಲ. ಆತ್ಮಗಳು ಮತ್ತು ಪರಮಾತ್ಮನ ಮೇಳವು ಇಲ್ಲಿಯೇ (ಮಧುಬನ) ಆಗುತ್ತದೆ. ಇದನ್ನೂ ನೀವು ತಿಳಿದುಕೊಂಡಿದ್ದೀರಿ - ಈಗ ಮೇಳವು ಸೇರಿದೆ, ತಂದೆಯು ಮಧ್ಯದಲ್ಲಿ ಬಂದಿದ್ದಾರೆ, ಆತ್ಮಗಳೆಲ್ಲರೂ ಇಲ್ಲಿದ್ದೀರಿ. ತಂದೆಯು ಬರಲಿ ಎಂದು ಆತ್ಮವೇ ನೆನಪು ಮಾಡುತ್ತದೆ, ಇದು ಎಲ್ಲದಕ್ಕಿಂತ ಒಳ್ಳೆಯ ಮೇಳವಾಗಿದೆ. ತಂದೆಯು ಬಂದು ಎಲ್ಲಾ ಆತ್ಮಗಳನ್ನು ರಾವಣ ರಾಜ್ಯದಿಂದ ಬಿಡಿಸುತ್ತಾರೆ ಅಂದಮೇಲೆ ಇದು ಒಳ್ಳೆಯ ಮೇಳವಾಯಿತಲ್ಲವೆ ಯಾವುದರಿಂದ ಮನುಷ್ಯರು ಪಾರಸ ಬುದ್ಧಿಯವರಾಗುತ್ತಾರೆ. ಆ ಮೇಳಗಳಲ್ಲಂತೂ ಮನುಷ್ಯರು ಮೈಲಿಗೆಯಾಗಿ ಬಿಡುತ್ತಾರೆ, ಬಹಳಷ್ಟು ಹಣವನ್ನು ಖರ್ಚು ಮಾಡುತ್ತಾರೆ, ಸಿಗುವುದೇನೂ ಇಲ್ಲ. ಅದಕ್ಕೆ ಮಾಯಾವೀ ಆಸುರೀ ಮೇಳವೆಂದು ಹೇಳಲಾಗುತ್ತದೆ, ಇದು ಈಶ್ವರೀಯ ಮೇಳವಾಗಿದೆ. ರಾತ್ರಿ-ಹಗಲಿನ ಅಂತರವಿದೆ. ನೀವೂ ಸಹ ಆಸುರೀ ಮೇಳದಲ್ಲಿದ್ದೀರಿ, ಈಗ ಈಶ್ವರೀಯ ಮೇಳದಲ್ಲಿದ್ದೀರಿ. ನಿಮಗೇ ತಿಳಿದಿದೆ - ತಂದೆಯು ಬಂದಿದ್ದಾರೆ. ಒಂದುವೇಳೆ ಈ ಮಾತನ್ನು ಎಲ್ಲರೂ ಅರಿತುಕೊಂಡರೆ ಎಲ್ಲಿ ಎಷ್ಟೊಂದು ಜನಸಂದಣಿಯಾಗಿ ಬಿಡುವುದೋ ಗೊತ್ತಿಲ್ಲ. ಎಲ್ಲರೂ ಇರುವುದಕ್ಕಾಗಿ ಅಷ್ಟು ಮನೆಗಳನ್ನು ಎಲ್ಲಿಂದ ತರುವುದು. ಅಹೋ ಪ್ರಭು! ನಿನ್ನ ಲೀಲೆ ಅಪರಮಪಾರ ಎಂದು ಅಂತಿಮದಲ್ಲಿ ಹಾಡುತ್ತಾರಲ್ಲವೆ ಅಂದಾಗ ಯಾವ ಲೀಲೆ? ಸೃಷ್ಟಿಯನ್ನು ಬದಲಾವಣೆ ಮಾಡುವ ಲೀಲೆ, ಇದು ಎಲ್ಲದಕ್ಕಿಂತ ದೊಡ್ಡ ಲೀಲೆಯಾಗಿದೆ. ಹಳೆಯ ಪ್ರಪಂಚವು ಸಮಾಪ್ತಿಯಾಗುವುದಕ್ಕೆ ಮೊದಲೇ ಹೊಸ ಪ್ರಪಂಚದ ಸ್ಥಾಪನೆಯಾಗುವುದು. ಆದ್ದರಿಂದ ಅನ್ಯರಿಗೆ ತಿಳಿಸುವಾಗ ಮೊದಲು ಸ್ಥಾಪನೆ, ವಿನಾಶ ನಂತರ ಪಾಲನೆ ಎಂದು ಹೇಳಬೇಕಾಗಿದೆ. ಯಾವಾಗ ಸಂಪೂರ್ಣ ಸ್ಥಾಪನೆಯಾಗಿ ಬಿಡುವುದೋ ಅನಂತರ ವಿನಾಶವೂ ಆಗುವುದು ನಂತರ ಹೊಸ ಪ್ರಪಂಚದ ಪಾಲನೆಯಾಗುವುದು ಅಂದಾಗ ನೀವು ಮಕ್ಕಳಿಗೆ ಇದೇ ಖುಷಿಯಿರುತ್ತದೆ- ನಾವು ಸ್ವದರ್ಶನ ಚಕ್ರಧಾರಿ ಬ್ರಾಹ್ಮಣರಾಗಿದ್ದೇವೆ ಮತ್ತೆ ನಾವು ಚಕ್ರವರ್ತಿ ರಾಜರಾಗುತ್ತೇವೆ. ಈ ದೇವತೆಗಳ ರಾಜ್ಯವು ಎಲ್ಲಿ ಹೋಯಿತೆಂದು ಯಾರಿಗೂ ತಿಳಿದಿಲ್ಲ, ಅದರ ಹೆಸರು, ಗುರುತೇ ಮರೆಯಾಗಿ ಬಿಟ್ಟಿದೆ. ದೇವತೆಗಳಿಗೆ ಬದಲು ತಮ್ಮನ್ನು ಹಿಂದೂಗಳೆಂದು ಹೇಳಿಕೊಳ್ಳುತ್ತಾರೆ. ಹಿಂದೂಸ್ಥಾನದಲ್ಲಿರುವವರು ಹಿಂದೂಗಳಾಗಿದ್ದಾರೆ. ಲಕ್ಷ್ಮೀ-ನಾರಯಣರಿಗೆ ಈ ರೀತಿ ಎಂದಿಗೂ ಹೇಳುವುದಿಲ್ಲ, ಅವರಿಗೆ ದೇವತೆಗಳೆಂದು ಹೇಳಲಾಗುತ್ತದೆ ಅಂದಾಗ ನಾಟಕದನುಸಾರ ನೀವು ಈ ಮೇಳದಲ್ಲಿ ಬಂದಿದ್ದೀರಿ. ಈ ನಾಟಕದಲ್ಲಿ ನಿಗಧಿಯಾಗಿದೆ. ನಿಧಾನ-ನಿಧಾನವಾಗಿ ವೃದ್ಧಿಯಾಗುತ್ತಾ ಇರುವುದು. ನಿಮ್ಮದು ಯಾವುದೆಲ್ಲಾ ಪಾತ್ರವು ನಡೆಯುತ್ತಿದೆಯೋ ಇದು ಕಲ್ಪದ ನಂತರವೂ ನಡೆಯುವುದು. ಈ ಚಕ್ರವು ಸುತ್ತುತ್ತಿರುತ್ತದೆ. ಮತ್ತೆ ರಾವಣ ರಾಜ್ಯದಲ್ಲಿ ಆಸುರೀ ಪಾಲನೆಯಾಗುವುದು. ನೀವೀಗ ಈಶ್ವರನ ಮಕ್ಕಳಾಗಿದ್ದೀರಿ ಮತ್ತೆ ದೈವೀ ಮಕ್ಕಳು ನಂತರ ಕ್ಷತ್ರಿಯರಾಗುತ್ತೀರಿ. ನೀವು ಅಪವಿತ್ರ ಪ್ರವೃತ್ತಿ ಮಾರ್ಗದವರಾಗಿದ್ದವರೇ ಮತ್ತೆ ಪವಿತ್ರ ಪ್ರವೃತ್ತಿ ಮಾರ್ಗದವರಾಗುತ್ತೀರಿ. ಇವರೂ ಸಹ ದೈವೀ ಗುಣವಂತ ಮನುಷ್ಯರಾಗಿದ್ದಾರಲ್ಲವೆ ಆದರೆ ಇಷ್ಟೊಂದು ಭುಜಗಳನ್ನು ತೋರಿಸಿದ್ದಾರೆ. ವಿಷ್ಣು ಯಾರೆಂಬುದನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ಮಹಾಲಕ್ಷ್ಮಿಯ ಪೂಜೆಯನ್ನು ಮಾಡುತ್ತಾರೆ, ಜಗದಂಬೆಯಿಂದ ಹಣವನ್ನು ಎಂದೂ ಬೇಡುವುದಿಲ್ಲ. ಹೆಚ್ಚಿನ ಹಣವು ಬಂತೆಂದರೆ ಲಕ್ಷ್ಮಿಯ ಪೂಜೆ ಮಾಡಿದೆವು ಆದ್ದರಿಂದ ಲಕ್ಷ್ಮೀಯು ಭಂಡಾರವನ್ನು ತುಂಬಿಸಿದಳೆಂದು ಹೇಳುತ್ತಾರೆ. ಇಲ್ಲಂತೂ ನೀವು ಪರಮಪಿತ ಪರಮಾತ್ಮ ಶಿವನ ಮೂಲಕ ಜಗದಂಬೆಯಿಂದ ಪಡೆಯುತ್ತಿದ್ದೀರಿ. ಕೊಡುವವರು ತಂದೆಯಾಗಿದ್ದಾರೆ. ನೀವು ಮಕ್ಕಳು ಬಾಪ್ದಾದಾರವರಿಗಿಂತಲೂ ಭಾಗ್ಯಶಾಲಿಯಾಗಿದ್ದೀರಿ. ನೋಡಿ, ಜಗದಂಬೆಯ ಎಷ್ಟೊಂದು ಮೇಳವಾಗುತ್ತದೆ. ಬ್ರಹ್ಮನಿಗೆ ಇಷ್ಟೊಂದು ಮೇಳಗಳಾಗುವುದಿಲ್ಲ. ಬ್ರಹ್ಮನನ್ನಂತೂ ಒಂದೇ ಸ್ಥಾನದಲ್ಲಿ ಕುಳ್ಳರಿಸಿದ್ದಾರೆ ಅಂದರೆ ಅಜ್ಮೀರ್ನಲ್ಲಿ ಮಾತ್ರ ದೊಡ್ಡ ಮಂದಿರವಿದೆ, ದೇವಿಯರ ಮಂದಿರಗಳು ಬಹಳಷ್ಟಿವೆ ಏಕೆಂದರೆ ಈ ಸಮಯದಲ್ಲಿ ನಿಮ್ಮ ಮಹಿಮೆಯು ಬಹಳಷ್ಟಿದೆ. ನೀವು ಭಾರತದ ಸೇವೆ ಮಾಡುತ್ತೀರಿ. ಹೆಚ್ಚಿನ ಪೂಜೆಯೂ ನಿಮ್ಮದೇ ಆಗುತ್ತದೆ. ನೀವು ಅದೃಷ್ಟವಂತರಾಗಿದ್ದೀರಿ. ಜಗದಂಬೆಯು ಸರ್ವವ್ಯಾಪಿಯೆಂದು ಎಂದೂ ಹೇಳುವುದಿಲ್ಲ. ನಿಮ್ಮದು ಮಹಿಮೆಯಾಗುತ್ತಾ ಇರುತ್ತದೆ. ಬ್ರಹ್ಮಾ-ವಿಷ್ಣು-ಶಂಕರನಿಗೂ ಸಹ ಸರ್ವವ್ಯಾಪಿ ಎಂದು ಹೇಳುವುದಿಲ್ಲ ಆದರೆ ನನ್ನನ್ನು ಕಣ ಕಣದಲ್ಲಿದ್ದಾರೆಂದು ಹೇಳಿ ಎಷ್ಟೊಂದು ನಿಂದನೆ ಮಾಡುತ್ತಾರೆ.

ನಾನು ನಿಮ್ಮ ಮಹಿಮೆಯನ್ನು ಎಷ್ಟೊಂದು ಹೆಚ್ಚಿಸುತ್ತೇನೆ. ಭಾರತ ಮಾತೆಗೆ ಜಯವಾಗಲಿ ಎಂದು ಹೇಳುತ್ತಾರಲ್ಲವೆ. ಭಾರತ ಮಾತೆಯರು ನೀವಾಗಿದ್ದೀರಿ, ಧರಣಿಯಲ್ಲ. ಈಗ ಧರಣಿ ಇತ್ಯಾದಿಯೆಲ್ಲವೂ ತಮೋಪ್ರಧಾನವಾಗಿದೆ, ಅದು ಸತ್ಯಯುಗದಲ್ಲಿ ಸತೋಪ್ರಧಾನವಾಗಿ ಬಿಡುತ್ತದೆ. ಆದ್ದರಿಂದಲೇ ದೇವತೆಗಳು ಈ ಪತಿತ ಪ್ರಪಂಚದಲ್ಲಿ ತನ್ನ ಪಾದಗಳನ್ನಿಡುವುದಿಲ್ಲ ಎಂದು ಹೇಳುತ್ತಾರೆ. ಯಾವಾಗ ಸತೋಪ್ರಧಾನ ಧರಣಿಯಾಗುವುದೋ ಆಗ ಬರುತ್ತಾರೆ. ನೀವೀಗ ಸತೋಪ್ರಧಾನರಾಗಬೇಕಾಗಿದೆ. ಶ್ರೀಮತದಂತೆ ನಡೆಯುತ್ತಾ ತಂದೆಯನ್ನು ಮಾಡುತ್ತಾ ಇರಿ ಆಗ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ - ಇದೇ ಸಂಕಲ್ಪವನ್ನಿಡಬೇಕಾಗಿದೆ. ನೆನಪು ಮಾಡುವುದರಿಂದ ವಿಕರ್ಮಗಳು ವಿನಾಶವಾಗುತ್ತವೆ. ಶ್ರೀಮತವು ಸಿಗುತ್ತದೆ, ಸತ್ಯಯುಗದಲ್ಲಂತೂ ನಿಮ್ಮ ಆತ್ಮವು ಪವಿತ್ರ, ಕಂಚನವಾಗುತ್ತದೆ ಆಗ ಕಂಚನ ಕಾಯವೇ ಸಿಗುತ್ತದೆ. ಚಿನ್ನದಲ್ಲಿ ಲೋಹವು ಬೆರೆಕೆಯಾಗುವುದರಿಂದ ಆಭರಣವೂ ಸಹ ಅದೇ ರೀತಿಯಿರುತ್ತದೆ. ಆತ್ಮವು ಅಸತ್ಯ (ಕನಿಷ್ಠ)ವಾದಾಗ ಶರೀರವೂ ಅಸತ್ಯವಾಗುವುದು. ತುಕ್ಕು ಬೀಳುವುದರಿಂದ ಚಿನ್ನದ ಮೌಲ್ಯವೂ ಸಹ ಕಡಿಮೆಯಾಗಿ ಬಿಡುತ್ತದೆ. ಈಗ ನಿಮ್ಮ ಮೌಲ್ಯವು ಏನೂ ಇಲ್ಲ. ಮೊದಲು ನೀವು ವಿಶ್ವದ ಮಾಲೀಕರು, 24 ಕ್ಯಾರೇಟ್ನ ಚಿನ್ನದ ಸಮಾನ ಇದ್ದಿರಿ. ಈಗ 9 ಕ್ಯಾರೇಟ್ ಎಂದೇ ಹೇಳಲಾಗುತ್ತದೆ. ಈ ತಂದೆಯು ಮಕ್ಕಳೊಂದಿಗೆ ವಾರ್ತಾಲಾಪ ಮಾಡುತ್ತಾರೆ, ಮಕ್ಕಳನ್ನು ಖುಷಿ ಪಡಿಸುತ್ತಾರೆ. ನೀವು ಕೇಳುತ್ತಾ-ಕೇಳುತ್ತಾ ಪರಿವರ್ತನೆಯಾಗಿ ಬಿಡುತ್ತೀರಿ, ಮನುಷ್ಯರಿಂದ ದೇವತೆಗಳಾಗುತ್ತೀರಿ. ಅಲ್ಲಿ ವಜ್ರ-ವೈಡೂರ್ಯಗಳ ಮಹಲುಗಳಿರುತ್ತವೆ. ಅಲ್ಲಿನ ಶೂಭೀ ರಸ ಇತ್ಯಾದಿಯನ್ನು ನೀವು ಕುಡಿದು ಬರುತ್ತೀರಿ. ಅಲ್ಲಿ ಬಹಳ ದೊಡ್ಡ-ದೊಡ್ಡ ಫಲಗಳಿರುತ್ತವೆ. ಅವು ಇಲ್ಲಿ ಸಿಗಲು ಸಾಧ್ಯವಿಲ್ಲ. ಸೂಕ್ಷ್ಮವತನದಲ್ಲಂತೂ ಏನೂ ಇಲ್ಲ, ಇದು ಕೇವಲ ಸಾಕ್ಷಾತ್ಕಾರವಾಗಿದೆ. ನೀವು ಪ್ರತ್ಯಕ್ಷದಲ್ಲಿ ಸ್ವರ್ಗದಲ್ಲಿ ಹೋಗುತ್ತೀರಿ. ಇದು ಆತ್ಮ, ಪರಮಾತ್ಮನ ಮೇಳವಾಗಿದೆ ಇದರಿಂದ ನೀವು ಉಜ್ವಲರಾಗುತ್ತೀರಿ.

ನೀವು ಮಕ್ಕಳು ಇಲ್ಲಿಗೆ (ಮಧುಬನ) ಬಂದಾಗ ನೀವು ಸ್ವತಂತ್ರರಾಗಿರುತ್ತೀರಿ. ಮನೆ, ಉದ್ಯೋಗ-ವ್ಯವಹಾರ ಯಾವುದರ ಚಿಂತೆಯೂ ಇರುವುದಿಲ್ಲ. ಆದ್ದರಿಂದ ಇಲ್ಲಿ ನಿಮಗೆ ನೆನಪಿನ ಯಾತ್ರೆಯಲ್ಲಿರಲು ಒಳ್ಳೆಯ ಅವಕಾಶವಿದೆ. ಅಲ್ಲಂತೂ ಮನೆ-ಮಠ ಇತ್ಯಾದಿಯ ನೆನಪೇ ಬರುತ್ತಿರುವುದು ಆದರೆ ಇಲ್ಲಿ ಏನೂ ಇಲ್ಲ. ಮುಂಜಾನೆ ಎರಡು ಗಂಟೆಗೆ ಎದ್ದು ಕುಳಿತುಕೊಳ್ಳಿ. ಅಲ್ಲಿ ಸೇವಾಕೇಂದ್ರಗಳಿಗಂತೂ ಮುಂಜಾನೆಯೇ ನೀವು ಹೋಗಲು ಸಾಧ್ಯವಿಲ್ಲ. ಇಲ್ಲಿ ನಿಮಗೆ ಸಹಜವಾಗಿದೆ. ಶಿವ ತಂದೆಯ ನೆನಪಿನಲ್ಲಿ ಬಂದು ಕುಳಿತುಕೊಳ್ಳಿ. ಮತ್ತ್ಯಾವುದೇ ನೆನಪು ಬರಬಾರದು. ಇಲ್ಲಿ ನಿಮಗೆ ಸಹಯೋಗವು ಸಿಗುವುದು. ಬೇಗನೆ ಮಲಗಿ ಮತ್ತು ಬೇಗನೆ ಏಳಿರಿ. ಮೂರರಿಂದ ಐದು ಗಂಟೆಯವರೆಗೆ ಬಂದು ಯೋಗದಲ್ಲಿ ಕುಳಿತುಕೊಳ್ಳಿ. ತಂದೆಯು ಬಂದು ಬಿಡುತ್ತಾರೆ ಮಕ್ಕಳಿಗೆ ಖುಷಿಯಾಗಿ ಬಿಡುತ್ತದೆ. ತಂದೆಯು ಯೋಗವನ್ನು ಕಲಿಸುವವರಾಗಿದ್ದಾರೆ. ಇವರೂ (ಬ್ರಹ್ಮಾ) ಕಲಿಯುವವರಾಗಿದ್ದಾರೆ ಅಂದಾಗ ತಂದೆಮತ್ತು ದಾದಾ ಇಬ್ಬರೂ ಬಂದು ಬಿಡುತ್ತಾರೆ. ಅಂದಾಗ ಇಲ್ಲಿ ಮತ್ತು ನಿಮ್ಮ ಸೇವಾಸ್ಥಾನಗಳಲ್ಲಿ ನೆನಪಿನಲ್ಲಿ ಕುಳಿತುಕೊಳ್ಳುವುದರಿಂದ ಎಷ್ಟೊಂದು ಅಂತರವಿರುತ್ತದೆ. ಇಲ್ಲಿ ಏನೂ ನೆನಪಿಗೆ ಬರುವುದಿಲ್ಲ. ಇದರಲ್ಲಿ ಬಹಳಷ್ಟು ಲಾಭವಿದೆ. ತಂದೆಯು ಸಲಹೆ ಕೊಡುತ್ತಾರೆ - ಇದು ಬಹಳ ಚೆನ್ನಾಗಿರುತ್ತದೆ. ಈಗ ಮಕ್ಕಳು ಮುಂಜಾನೆ ಏಳುತ್ತಾರೆಯೇ ಎಂಬುದನ್ನು ನೋಡೋಣ. ಕೆಲವರಿಗೆ ಮುಂಜಾನೆ ಏಳುವ ಹವ್ಯಾಸವಿದೆ. ನಿಮ್ಮದು ಪಂಚ ವಿಕಾರಗಳ ಸನ್ಯಾಸವಾಗಿದೆ ಮತ್ತು ಇಡೀ ಹಳೆಯ ಪ್ರಪಂಚದಿಂದ ವೈರಾಗ್ಯವಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಈಗ ಸೃಷ್ಟಿಯು ಪರಿವರ್ತನೆಯಾಗುವ ಲೀಲೆಯು ನಡೆಯುತ್ತಿದೆ, ಆದ್ದರಿಂದ ಸ್ವಯಂನ್ನು ಪರಿವರ್ತಿಸಿಕೊಳ್ಳಬೇಕಾಗಿದೆ. ಕ್ಷೀರ ಖಂಡವಾಗಿರಬೇಕಾಗಿದೆ.

2. ಮುಂಜಾನೆ ಎದ್ದು ಒಬ್ಬ ತಂದೆಯ ನೆನಪಿನಲ್ಲಿ ಕುಳಿತುಕೊಳ್ಳಬೇಕಾಗಿದೆ. ಆ ಸಮಯದಲ್ಲಿ ಮತ್ತ್ಯಾರ ನೆನಪೂ ಬರಬಾರದು. ಹಳೆಯ ಪ್ರಪಂಚದಿಂದ ಬೇಹದ್ದಿನ ವೈರಾಗಿಗಳಾಗಿ ಪಂಚ ವಿಕಾರಗಳ ಸನ್ಯಾಸ ಮಾಡಬೇಕಾಗಿದೆ.

ವರದಾನ:

ದೂರ ಸರಿಯುವುದರ ಬದಲು ಪ್ರತಿ ಘಳಿಗೆ ತಂದೆಯ ಆಶ್ರಯದ ಅನುಭವ ಮಾಡುವಂತಹ ನಿಶ್ಚಯ ಬುದ್ಧಿ ವಿಜಯಿ ಭವ.

ವಿಜಯಿ ಭವದ ವರದಾನಿ ಆತ್ಮ ಪ್ರತಿ ಗಳಿಗೆ ಸ್ವಯಂ ಅನ್ನು ಆಶ್ರಯದ ಕೆಳಗಿರುವಂತೆ ಅನುಭವ ಮಾಡುವುದು. ಅವರ ಮನಸ್ಸಿನಲ್ಲಿ ಸಂಕಲ್ಪ ಮಾತ್ರವೂ ಸಹ ನಿರಾಶ್ರಿತ ಅಥವಾ ಒಬ್ಬಂಟಿತನದ ಅನುಭವವಾಗುವುದಿಲ್ಲ. ಎಂದೂ ಉದಾಸಿ ಅಥವಾ ಅಲ್ಪಕಾಲದ ಹದ್ದಿನ ವೈರಾಗ್ಯ ಬರುವುದಿಲ್ಲ. ಅವರು ಎಂದೂ ಯಾವ ಕಾರ್ಯದಿಂದಲೂ, ಸಮಸ್ಯೆಯಿಂದಲೂ, ವ್ಯಕ್ತಿಯಿಂದಲೂ ದೂರ ಸರಿಯುವುದಿಲ್ಲ. ಆದರೆ ಪ್ರತಿ ಕರ್ಮ ಮಾಡುತ್ತಿದ್ದರೂ, ಎದುರಿಸುತ್ತಾ, ಸಹಯೋಗಿಗಳಾಗುತ್ತಾ ಬೇಹದ್ದಿನ ವೈರಾಗಿಗಳಾಗಿರುತ್ತಾರೆ.

ಸ್ಲೋಗನ್:

ಒಬ್ಬ ತಂದೆಯ (ಕಂಪನಿ) ಸಂಗದಲ್ಲಿರಿ ಮತ್ತು ತಂದೆಯನ್ನೇ ನಿಮ್ಮ ಜೊತೆಗಾರನನ್ನಾಗಿ ಮಾಡಿಕೊಳ್ಳಿ.