16.07.20         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಈ ಸಂಗಮಯುಗವು ವಿಕರ್ಮಗಳನ್ನು ವಿನಾಶ ಮಾಡಿಕೊಳ್ಳುವ ಯುಗವಾಗಿದೆ, ಈ ಯುಗದಲ್ಲಿ ನೀವು ಯಾವುದೇ ವಿಕರ್ಮಗಳನ್ನು ಮಾಡಬಾರದು, ಅವಶ್ಯವಾಗಿ ಪಾವನರಾಗಬೇಕಾಗಿದೆ.

ಪ್ರಶ್ನೆ:
ಅತೀಂದ್ರಿಯ ಸುಖದ ಅನುಭವವು ಯಾವ ಮಕ್ಕಳಿಗೆ ಆಗುತ್ತದೆ?

ಉತ್ತರ:
ಯಾರು ಅವಿನಾಶಿ ಜ್ಞಾನ ರತ್ನಗಳಿಂದ ಸಂಪನ್ನವಾಗಿರುತ್ತಾರೆಯೋ ಅವರಿಗೆ ಅತೀಂದ್ರಿಯ ಸುಖದ ಅನುಭವವಾಗುತ್ತದೆ. ಯಾರು ಎಷ್ಟು ಜ್ಞಾನವನ್ನು ಜೀವನದಲ್ಲಿ ಧಾರಣೆ ಮಾಡಿಕೊಳ್ಳುವರೋ ಅಷ್ಟು ಸಾಹುಕಾರರಾಗುತ್ತಾರೆ. ಒಂದುವೇಳೆ ಜ್ಞಾನರತ್ನಗಳ ಧಾರಣೆಯಾಗದಿದ್ದರೆ ಅವರು ಬಡವರಾಗಿದ್ದಾರೆ. ತಂದೆಯು ನಿಮಗೆ ಭೂತ, ಭವಿಷ್ಯತ್, ವರ್ತಮಾನದ ಜ್ಞಾನವನ್ನು ಕೊಟ್ಟು ತ್ರಿಕಾಲದರ್ಶಿಯನ್ನಾಗಿ ಮಾಡುತ್ತಿದ್ದಾರೆ.

ಗೀತೆ:
ಓಂ ನಮಃ ಶಿವಾಯ..............

ಓಂ ಶಾಂತಿ.
ಯಾವುದು ಕಳೆದಿದೆಯೋ (ಭೂತಕಾಲ) ಅದು ವರ್ತಮಾನದಲ್ಲಿ ನಡೆಯುತ್ತದೆ. ಅದು ನಂತರ ಭೂತಕಾಲವಾಗಿ ಬಿಡುವುದು. ಇವರು ಭೂತ ಕಾಲದ ಗಾಯನ ಮಾಡುತ್ತಾರೆ. ನೀವೀಗ ಪುರುಷೋತ್ತಮ ಸಂಗಮಯುಗದಲ್ಲಿದ್ದೀರಿ. ಪುರುಷೋತ್ತಮ ಶಬ್ಧವನ್ನು ಅವಶ್ಯವಾಗಿ ಹಾಕಬೇಕು. ನೀವು ವರ್ತಮಾನವನ್ನು ನೋಡುತ್ತಿದ್ದೀರಿ. ಭೂತಕಾಲದ ಯಾವ ಗಾಯನವಿದೆಯೋ ಅದು ಈಗ ಪ್ರತ್ಯಕ್ಷದಲ್ಲಿ ನಡೆಯುತ್ತಿದೆ, ಇದರಲ್ಲಿ ಯಾವುದೇ ಸಂಶಯವೂ ಬರಬಾರದು. ಮಕ್ಕಳಿಗೆ ತಿಳಿದಿದೆ - ಇದು ಸಂಗಮಯುಗವೂ ಆಗಿದೆ, ಕಲಿಯುಗದ ಅಂತ್ಯವೂ ಆಗಿದೆ. ಅವಶ್ಯವಾಗಿ ಸಂಗಮಯುಗವು 5000 ವರ್ಷಗಳ ಹಿಂದೆ ಕಳೆದು ಹೋಗಿದೆ, ಅದು ಈಗ ವರ್ತಮಾನದಲ್ಲಿದೆ. ಈಗ ತಂದೆಯು ಬಂದಿದ್ದಾರೆ, ಯಾವುದು ಭೂತ ಕಾಲದಲ್ಲಿ ನಡೆದಿದೆಯೋ ಅದೇ ಈಗ ಭವಿಷ್ಯದಲ್ಲಿಯೂ ಆಗುವುದು. ತಂದೆಯು ರಾಜಯೋಗವನ್ನು ಕಲಿಸುತ್ತಿದ್ದಾರೆ. ನಂತರ ಸತ್ಯಯುಗದಲ್ಲಿ ರಾಜ್ಯವನ್ನು ಪಡೆಯುತ್ತೀರಿ. ಈಗ ಸಂಗಮಯುಗವಾಗಿದೆ. ಈ ಮಾತನ್ನು ನೀವು ಮಕ್ಕಳ ವಿನಃ ಮತ್ತ್ಯಾರೂ ತಿಳಿದಿಲ್ಲ. ನೀವು ಪ್ರತ್ಯಕ್ಷದಲ್ಲಿ ರಾಜಯೋಗವನ್ನು ಕಲಿಯುತ್ತಿದ್ದೀರಿ, ಇದು ಅತಿ ಸಹಜವಾಗಿದೆ. ಚಿಕ್ಕವರಿರಲಿ, ದೊಡ್ಡವರಿರಲಿ ಎಲ್ಲರಿಗೂ ಒಂದು ಮುಖ್ಯ ಮಾತನ್ನು ತಿಳಿಸಬೇಕಾಗಿದೆ - ತಂದೆಯನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ. ಈಗ ವಿಕರ್ಮಗಳು ವಿನಾಶವಾಗುವ ಸಮಯವಾಗಿದೆ ಅಂದಮೇಲೆ ಪುನಃ ವಿಕರ್ಮಗಳನ್ನು ಯಾರು ಮಾಡುವರು! ಆದರೆ ಮಾಯೆಯೂ ವಿಕರ್ಮಗಳನ್ನು ಮಾಡಿಸಿ ಬಿಡುತ್ತದೆ. ಪೆಟ್ಟು ಬಿತ್ತು, ನನ್ನಿಂದ ಈ ಕಠಿಣ ತಪ್ಪಾಯಿತೆಂದು ತಿಳಿಯುತ್ತಾರೆ. ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತೀರಿ. ಈಗ ಪಾವನರನ್ನಾಗಿ ಮಾಡಲು ಆ ತಂದೆಯು ಬಂದಿದ್ದಾರೆ ಅಂದಮೇಲೆ ಪಾವನರಾಗಬೇಕಲ್ಲವೆ. ಈಶ್ವರನ ಮಕ್ಕಳಾಗಿ ಮತ್ತೆ ಪತಿತರಾಗಬಾರದು. ಸತ್ಯಯುಗದಲ್ಲಿ ಎಲ್ಲರೂ ಪವಿತ್ರರಿದ್ದರು, ಭಾರತವೇ ಪಾವನವಾಗಿತ್ತು. ನಿರ್ವಿಕಾರಿ ಪ್ರಪಂಚ, ವಿಕಾರಿ ಪ್ರಪಂಚವೆಂದು ಹಾಡುತ್ತಾರೆ. ಅವರು ಸಂಪೂರ್ಣ ನಿರ್ವಿಕಾರಿಗಳು, ನಾವು ವಿಕಾರಿಗಳಾಗಿದ್ದೇವೆ ಏಕೆಂದರೆ ನಾವು ವಿಕಾರದಲ್ಲಿ ಹೋಗುತ್ತೇವೆ. ವಿಕಾರದ ಹೆಸರೇ ಕೆಟ್ಟದ್ದಾಗಿದೆ. ಬಂದು ಪಾವನ ಮಾಡಿ ಎಂದು ಪತಿತರೇ ಕರೆಯುತ್ತಾರೆ, ಕ್ರೋಧಿಗಳು ಕರೆಯುವುದಿಲ್ಲ. ತಂದೆಯೂ ಸಹ ಪುನಃ ಡ್ರಾಮಾನುಸಾರ ಬರುತ್ತಾರೆ. ಇದರಲ್ಲಿ ಸ್ವಲ್ಪವೂ ಅಂತರವಾಗುವುದಿಲ್ಲ. ಯಾವುದು ಕಳೆದು ಹೋಗಿದೆಯೋ ಅದು ವರ್ತಮಾನದಲ್ಲಿ ನಡೆಯುತ್ತಿದೆ. ಭೂತ, ಭವಿಷ್ಯತ್, ವರ್ತಮಾನವನ್ನು ತಿಳಿದುಕೊಳ್ಳುವುದಕ್ಕೆ ತ್ರಿಕಾಲದರ್ಶಿ ಎಂದು ಹೇಳಲಾಗುತ್ತದೆ. ಇದನ್ನು ನೆನಪಿಟ್ಟುಕೊಳ್ಳಬೇಕಾಗಿದೆ. ಇವು ಬಹಳ ಪರಿಶ್ರಮದ ಮಾತುಗಳಾಗಿವೆ. ಪದೇ-ಪದೇ ಮರೆತು ಹೋಗುತ್ತೀರಿ, ಇಲ್ಲವಾದರೆ ನೀವು ಮಕ್ಕಳಿಗೆ ಎಷ್ಟೊಂದು ಅತೀಂದ್ರಿಯ ಸುಖವಿರಬೇಕು! ಇಲ್ಲಿ ನೀವು ಅವಿನಾಶಿ ಜ್ಞಾನ ಧನದಿಂದ ಬಹಳ-ಬಹಳ ಸಾಹುಕಾರರಾಗುತ್ತಿದ್ದೀರಿ. ಯಾರದು ಎಷ್ಟು ಧಾರಣೆಯಾಗಿದೆಯೋ ಅವರು ಬಹಳ ಸಾಹುಕಾರರಾಗುತ್ತಿದ್ದಾರೆ ಆದರೆ ಹೊಸ ಪ್ರಪಂಚಕ್ಕಾಗಿ. ನಿಮಗೆ ತಿಳಿದಿದೆ - ನಾವು ಏನೆಲ್ಲವನ್ನೂ ಮಾಡುತ್ತೇವೆಯೋ ಅದು ಭವಿಷ್ಯ ಹೊಸ ಪ್ರಪಂಚಕ್ಕಾಗಿ ಇದೆ. ತಂದೆಯು ಹೊಸ ಪ್ರಪಂಚದ ಸ್ಥಾಪನೆ, ಹಳೆಯ ಪ್ರಪಂಚದ ವಿನಾಶ ಮಾಡುವುದಕ್ಕಾಗಿಯೇ ಬರುತ್ತಾರೆ. ಕಲ್ಪದ ಹಿಂದಿನಂತೆ ಚಾಚೂ ತಪ್ಪದೆ ನಡೆಯುವುದು. ನೀವು ಮಕ್ಕಳೂ ಸಹ ನೋಡುತ್ತೀರಿ. ಪ್ರಾಕೃತಿಕ ವಿಕೋಪಗಳೂ ಆಗಲಿದೆ. ಭೂಕಂಪಗಳಾಯಿತೆಂದರೆ ಸಮಾಪ್ತಿ. ಭಾರತದಲ್ಲಿ ಎಷ್ಟೊಂದು ಭೂಕಂಪಗಳಾಗುವುದು, ಇವೆಲ್ಲವೂ ಆಗಲೇಬೇಕಾಗಿದೆ. ಕಲ್ಪದ ಹಿಂದೆಯೂ ಆಗಿತ್ತು, ಆದ್ದರಿಂದಲೇ ಚಿನ್ನದ ದ್ವಾರಿಕಾ ಕೆಳಗೆ ಹೊರಟು ಹೋಯಿತೆಂದು ಹೇಳುತ್ತಾರೆ ಎಂದು ನಾವು ಹೇಳುತ್ತೇವೆ. ಮಕ್ಕಳೇ ಈ ಜ್ಞಾನವನ್ನು ಬುದ್ಧಿಯಲ್ಲಿ ಚೆನ್ನಾಗಿ ಕುಳ್ಳರಿಸಬೇಕು. ನಾವು 5000 ವರ್ಷಗಳ ಹಿಂದೆಯೂ ಈ ಜ್ಞಾನವನ್ನು ತೆಗೆದುಕೊಂಡಿದ್ದೆವು. ಇದರಲ್ಲಿ ಸ್ವಲ್ಪವೂ ವ್ಯತ್ಯಾಸವಿಲ್ಲ. ಬಾಬಾ 5000 ವರ್ಷಗಳ ಮೊದಲೂ ಸಹ ನಾವು ಈ ಜ್ಞಾನವನ್ನು ಪಡೆದುಕೊಂಡಿದ್ದೆವು, ನಾವು ಅನೇಕ ಬಾರಿ ತಮ್ಮಿಂದ ಆಸ್ತಿಯನ್ನು ತೆಗೆದುಕೊಂಡಿದ್ದೇವೆ. ಅದನ್ನು ಲೆಕ್ಕವಿಡಲು ಸಾಧ್ಯವಿಲ್ಲ. ನೀವು ಎಷ್ಟು ಬಾರಿ ವಿಶ್ವದ ಮಾಲೀಕರಾಗುತ್ತೀರಿ ಮತ್ತು ಭಿಕಾರಿಗಳಾಗುತ್ತೀರಿ. ಈ ಸಮಯದಲ್ಲಿಯೇ ಭಾರತವು ಸಂಪೂರ್ಣ ಭಿಕಾರಿಯಾಗಿದೆ. ಡ್ರಾಮಾ ಪ್ಲಾನನುಸಾರ ಎಂದು ನೀವು ಬರೆಯುತ್ತೀರಿ. ಅವರು ಡ್ರಾಮಾ ಶಬ್ಧವನ್ನು ಹೇಳುವುದಿಲ್ಲ. ಅವರ ಯೋಜನೆಯೇ ಬೇರೆಯಾಗಿದೆ.

ನೀವು ಹೇಳುತ್ತೀರಿ - ಡ್ರಾಮಾದ ಪ್ಲಾನನುಸಾರ ನಾವು ಪುನಃ 5000 ವರ್ಷಗಳ ಹಿಂದಿನಂತೆ ಸ್ಥಾಪನೆ ಮಾಡುತ್ತಿದ್ದೇವೆ. ಕಲ್ಪದ ಹಿಂದೆ ಯಾವ ಕರ್ತವ್ಯವನ್ನು ಮಾಡಿದ್ದೆವೆಯೋ ಅದನ್ನು ಈಗಲೂ ಶ್ರೀಮತದನುಸಾರ ಮಾಡುತ್ತೇವೆ. ಶ್ರೀಮತದ ಮೂಲಕವೇ ಶಕ್ತಿಯನ್ನು ಪಡೆಯುತ್ತೇವೆ. ಶಿವ ಶಕ್ತಿಯ ಹೆಸರು ಇದೆಯಲ್ಲವೆ ಅಂದಾಗ ನೀವು ಶಿವ ಶಕ್ತಿಯರು ದೇವಿಯರಾಗಿದ್ದೀರಿ, ಅವರದು ಮಂದಿರದಲ್ಲಿಯೂ ಪೂಜೆಯು ನಡೆಯುತ್ತದೆ. ನೀವು ದೇವಿಯರಾಗಿದ್ದೀರಿ ನಂತರ ನೀವು ವಿಶ್ವದ ರಾಜ್ಯವನ್ನು ಪಡೆಯುತ್ತೀರಿ. ಜಗದಂಬೆಯನ್ನು ನೋಡಿ, ಎಷ್ಟೊಂದು ಪೂಜೆ ನಡೆಯುತ್ತದೆ. ಅನೇಕ ಹೆಸರುಗಳನ್ನಿಟ್ಟಿದ್ದಾರೆ! ವಾಸ್ತವದಲ್ಲಿ ಅವರು ಒಬ್ಬರೇ ಆಗಿದ್ದಾರೆ. ಹೇಗೆ ತಂದೆಯೂ ಸಹ ಒಬ್ಬರೇ ಆಗಿದ್ದಾರೆ ಹಾಗೆಯೇ ನೀವೂ ಸಹ ವಿಶ್ವವನ್ನು ಸ್ವರ್ಗವನ್ನಾಗಿ ಮಾಡುತ್ತೀರಿ. ಆದ್ದರಿಂದ ನಿಮ್ಮ ಪೂಜೆಯೂ ನಡೆಯುತ್ತದೆ. ಅನೇಕ ದೇವಿಯರಿದ್ದಾರೆ, ಲಕ್ಷ್ಮಿಗೆ ಎಷ್ಟೊಂದು ಪೂಜೆ ಮಾಡುತ್ತಾರೆ! ದೀಪಾವಳಿಯೆಂದು ಲಕ್ಷ್ಮಿಗೆ ಪೂಜೆ ಮಾಡುತ್ತಾರೆ, ಅವರು ಮುಖ್ಯವಾದರು. ಮಹಾರಾಜ-ಮಹಾರಾಣಿ ಇಬ್ಬರನ್ನೂ ಸೇರಿಸಿ ಮಹಾಲಕ್ಷ್ಮಿ ಎಂದು ಹೇಳುತ್ತಾರೆ, ಅದರಲ್ಲಿ ಇಬ್ಬರೂ ಬಂದು ಬಿಡುತ್ತಾರೆ. ನಾನೂ ಸಹ ಮಹಾಲಕ್ಷ್ಮಿಯ ಪೂಜೆಯನ್ನು ಮಾಡುತ್ತಿದ್ದೆನು, ಹಣವು ಬಹಳ ವೃದ್ಧಿಯಾಯಿತೆಂದರೆ ಮಹಾಲಕ್ಷ್ಮಿಯ ಕೃಪೆಯೆಂದು ತಿಳಿದು ಪ್ರತೀ ವರ್ಷ ಪೂಜೆ ಮಾಡುತ್ತಾರೆ. ಅವರಿಂದ ಹಣವನ್ನು ಕೇಳುತ್ತಾರೆ ಆದರೆ ದೇವಿಯಿಂದ ಏನು ಕೇಳುವುದು? ನೀವು ಸಂಗಮಯುಗೀ ದೇವಿಯರು, ಸ್ವರ್ಗದ ವರದಾನವನ್ನು ನೀಡುವವರಾಗಿದ್ದೀರಿ. ದೇವಿಯರಿಂದ ಎಲ್ಲಾ ಸ್ವರ್ಗದ ಕಾಮನೆಗಳು ಈಡೇರುತ್ತವೆಯೆಂದು ಮನುಷ್ಯರಿಗೆ ತಿಳಿದಿಲ್ಲ. ನೀವು ದೇವಿಯರಲ್ಲವೆ. ಮನುಷ್ಯರಿಗೆ ಜ್ಞಾನ ದಾನವನ್ನು ಮಾಡುತ್ತೀರಿ ಅದರಿಂದ ಎಲ್ಲಾ ಕಾಮನೆಗಳು ಪೂರೈಸುತ್ತವೆ. ಖಾಯಿಲೆ ಇತ್ಯಾದಿ ಆದಾಗ ತಾಯಿ ಇದನ್ನು ಸರಿ ಪಡಿಸು, ರಕ್ಷಣೆ ಮಾಡು ಎಂದು ದೇವಿಯರಿಗೆ ಹೇಳುತ್ತಾರೆ. ಅನೇಕ ಪ್ರಕಾರದ ದೇವಿಯರಿದ್ದಾರೆ. ನೀವು ಸಂಗಮಯುಗದ ಶಿವ ಶಕ್ತಿ ದೇವಿಯರಾಗಿದ್ದೀರಿ. ನೀವೇ ಸ್ವರ್ಗದ ವರದಾನವನ್ನು ನೀಡುತ್ತೀರಿ, ತಂದೆಯು ಕೊಡುತ್ತಾರೆ. ಮಕ್ಕಳು ಕೊಡುತ್ತೀರಿ. ಮಹಾಲಕ್ಷ್ಮಿಯನ್ನು ತೋರಿಸುತ್ತಾರೆ. ನಾರಾಯಣನನ್ನು ಗುಪ್ತ ಮಾಡಿ ಬಿಡುತ್ತಾರೆ. ತಂದೆಯು ನೀವು ಮಕ್ಕಳ ಪ್ರಭಾವವನ್ನು ಎಷ್ಟೊಂದು ಹೆಚ್ಚಿಸುತ್ತಾರೆ, ದೇವಿಯರು 21 ಜನ್ಮಗಳಿಗಾಗಿ ಸುಖದ ಎಲ್ಲಾ ಕಾಮನೆಗಳನ್ನು ಪೂರೈಸುತ್ತೀರಿ. ಲಕ್ಷ್ಮಿಯಿಂದ ಹಣ ಕೇಳುತ್ತಾರೆ, ಹಣಕ್ಕಾಗಿಯೇ ಮನುಷ್ಯರು ಒಳ್ಳೆಯ ಉದ್ಯೋಗ-ವ್ಯವಹಾರವನ್ನು ಮಾಡುತ್ತಾರೆ. ನಿಮ್ಮನ್ನು ತಂದೆಯು ಬಂದು ಇಡೀ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಅಪಾರ ಧನವನ್ನು ಕೊಡುತ್ತಾರೆ. ಶ್ರೀ ಲಕ್ಷ್ಮೀ-ನಾರಾಯಣರು ವಿಶ್ವದ ಮಾಲೀಕರಾಗಿದ್ದರು, ಈಗ ಕಂಗಾಲರಾಗಿದ್ದಾರೆ. ರಾಜ್ಯಭಾರ ಮಾಡಿದನಂತರ ನಿಧಾನ-ನಿಧಾನವಾಗಿ ಇಳಿಯುವ ಕಲೆಯಾಗುತ್ತದೆ. ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಕಲೆಗಳು ಕಡಿಮೆಯಾಗುತ್ತಾ-ಆಗುತ್ತಾ ಈಗ ನೋಡಿ ಯಾವ ಸ್ಥಿತಿಯಾಗಿ ಬಿಟ್ಟಿದೆ! ಇದು ಹೊಸ ಮಾತಲ್ಲ. ಪ್ರತೀ 5000 ವರ್ಷಗಳ ನಂತರ ಚಕ್ರವು ಸುತ್ತುತ್ತಿರುತ್ತದೆ, ಈಗ ಭಾರತವು ಎಷ್ಟು ಕಂಗಾಲಾಗಿದೆ. ರಾವಣ ರಾಜ್ಯವಾಗಿದೆ. ಭಾರತವು ಎಷ್ಟು ಶ್ರೇಷ್ಠವಾಗಿತ್ತು, ಈಗ ಕನಿಷ್ಠ ಸ್ಥಿತಿಯಲ್ಲಿದೆ. ಕನಿಷ್ಠವಾಗದಂತೆ ನಂಬರ್ವನ್ನಲ್ಲಿ ಹೇಗೆ ಬರುವುದು! ಲೆಕ್ಕವಿದೆಯಲ್ಲವೆ. ನಿಧಾನವಾಗಿ ಒಂದುವೇಳೆ ವಿಚಾರ ಸಾಗರ ಮಂಥನ ಮಾಡಿದ್ದೇ ಆದರೆ ತಾನಾಗಿಯೇ ಬುದ್ಧಿಯಲ್ಲಿ ಬಂದು ಬಿಡುತ್ತವೆ. ಎಷ್ಟು ಮಧುರಾತಿ ಮಧುರ ಮಾತುಗಳಾಗಿವೆ. ಈಗಂತೂ ನೀವು ನೋಡಿ, ನೀವು ಇಡೀ ಸೃಷ್ಟಿಚಕ್ರವನ್ನು ಅರಿತುಕೊಂಡಿದ್ದೀರಿ. ವಿದ್ಯೆಯನ್ನು ಕೇವಲ ಶಾಲೆಯಲ್ಲಿಯೇ ಓದುವುದಿಲ್ಲ, ಶಿಕ್ಷಕರು ಮನೆಯಲ್ಲಿ ಓದುವುದಕ್ಕಾಗಿ ಪಾಠವನ್ನು ಕೊಡುತ್ತಾರೆ, ಅದಕ್ಕೆ ಹೋಮ್ವರ್ಕ್ ಎಂದು ಹೇಳುತ್ತಾರೆ. ತಂದೆಯೂ ಸಹ ನಿಮಗೆ ಮನೆಗಾಗಿ ವಿದ್ಯೆಯನ್ನು (ಹೋಮ್ವರ್ಕ್) ಕೊಡುತ್ತಾರೆ. ದಿನದಲ್ಲಿ ಭಲೆ ಉದ್ಯೋಗ-ವ್ಯವಹಾರಗಳನ್ನು ಮಾಡಿ, ಶರೀರ ನಿರ್ವಹಣೆಯನ್ನಂತೂ ಮಾಡಲೇಬೇಕಾಗಿದೆ. ಅಮೃತವೇಳೆಯಲ್ಲಿ ಎಲ್ಲರಿಗೂ ಸಮಯವಿರುತ್ತದೆ, ಬೆಳಗ್ಗೆ-ಬೆಳಗ್ಗೆ 2-3 ಗಂಟೆಗೂ ಸಮಯ ಚೆನ್ನಾಗಿರುತ್ತದೆ. ಆ ಸಮಯದಲ್ಲಿ ಎದ್ದು ತಂದೆಯನ್ನು ಪ್ರೀತಿಯಿಂದ ನೆನಪು ಮಾಡಿ. ಉಳಿದಂತೆ ಈ ವಿಕಾರಗಳೇ ನಿಮ್ಮನ್ನು ಆದಿ-ಮಧ್ಯ-ಅಂತ್ಯ ದುಃಖಿಯನ್ನಾಗಿ ಮಾಡಿದೆ. ರಾವಣನನ್ನು ಸುಡುತ್ತಾರೆ, ಆದರೆ ಇದರ ಅರ್ಥವನ್ನು ತಿಳಿದುಕೊಂಡಿಲ್ಲ, ಹಾಗೆಯೇ ರಾವಣನನ್ನು ಸುಡುವ ಪದ್ಧತಿಯು ಪರಂಪರೆಯಿಂದ ನಡೆದು ಬಂದಿದೆ. ಡ್ರಾಮಾನುಸಾರ ಇದೂ ನಿಗಧಿಯಾಗಿದೆ, ರಾವಣನನ್ನು ಸಾಯಿಸುತ್ತಾ ಬಂದಿದ್ದಾರೆ ಆದರೆ ರಾವಣನು ಸಾಯುವುದೇ ಇಲ್ಲ. ಈ ರಾವಣನು ಸುಡುವುದು ಯಾವಾಗ ಕೊನೆಗೊಳ್ಳುವುದೆಂದು ನಿಮಗೆ ತಿಳಿದಿದೆ. ನೀವೀಗ ಸತ್ಯ-ಸತ್ಯವಾದ ಸತ್ಯ ನಾರಾಯಣನ ಕಥೆಯನ್ನು ಕೇಳುತ್ತೀರಿ. ನಿಮಗೆ ತಿಳಿದಿದೆ - ಈಗ ತಂದೆಯಿಂದ ನಮಗೆ ಆಸ್ತಿಯೂ ಸಿಗುತ್ತದೆ, ತಂದೆಯನ್ನು ಅರಿತುಕೊಳ್ಳದ ಕಾರಣವೇ ಎಲ್ಲರೂ ನಿರ್ಧನಿಕರಾಗಿದ್ದಾರೆ. ಯಾವ ತಂದೆಯು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಾರೆಯೋ ಅವರನ್ನೇ ತಿಳಿದುಕೊಂಡಿಲ್ಲ. ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಏಣಿಯನ್ನಿಳಿಯುತ್ತಾ ತಮೋಪ್ರಧಾನರಾದಾಗಲೇ ತಂದೆಯು ಬರುವರು ಆದರೆ ತಮ್ಮನ್ನು ತಮೋಪ್ರಧಾನರೆಂದು ತಿಳಿಯುತ್ತಾರೆಯೇ? ತಂದೆಯು ತಿಳಿಸುತ್ತಾರೆ - ಈ ಸಮಯದಲ್ಲಿ ಇಡೀ ವೃಕ್ಷವು ಜಡಜಡೀಭೂತ ಸ್ಥಿತಿಯನ್ನು ಹೊಂದಿದೆ. ಒಬ್ಬರೂ ಸತೋಪ್ರಧಾನರಿಲ್ಲ. ಸತೋಪ್ರಧಾನರಿರುವುದೇ ಶಾಂತಿಧಾಮ ಮತ್ತು ಸುಖಧಾಮದಲ್ಲಿ. ಈಗ ತಮೋಪ್ರಧಾನರಿದ್ದಾರೆ. ತಂದೆಯೇ ಬಂದು ನೀವು ಮಕ್ಕಳನ್ನು ಅಜ್ಞಾನ ನಿದ್ರೆಯಿಂದ ಏಳಿಸುತ್ತಾರೆ ನಂತರ ನೀವು ಅನ್ಯರನ್ನು ಜಾಗೃತಗೊಳಿಸುತ್ತೀರಿ, ಜಾಗೃತರಾಗುತ್ತಿರುತ್ತಾರೆ. ಹೇಗೆ ಮನುಷ್ಯರು ಮರಣ ಹೊಂದಿದಾಗ ಬೆಳಕಿನಲ್ಲಿ ಬರಲೆಂದು ಅವರ ಪಕ್ಕದಲ್ಲಿ ದೀಪವನ್ನು ಬೆಳಗಿಸುತ್ತಾರೆ. ಈಗಂತೂ ಘೋರ ಅಂಧಕಾರವಿದೆ, ಆತ್ಮಗಳು ಹಿಂತಿರುಗಿ ತಮ್ಮ ಮನೆಗೆ ಹೋಗಲು ಸಾಧ್ಯವಿಲ್ಲ. ಭಲೆ ದುಃಖದಿಂದ ಬಿಡುಗಡೆಯಾಗಬೇಕೆಂದು ಮನಸ್ಸಾಗುತ್ತದೆ ಆದರೆ ಒಬ್ಬರೂ ಬಿಡುಗಡೆಯಾಗಲು ಸಾಧ್ಯವಿಲ್ಲ.

ಯಾವ ಮಕ್ಕಳಿಗೆ ಪುರುಷೋತ್ತಮ ಸಂಗಮಯುಗದ ಸ್ಮೃತಿಯಿರುವುದೋ ಅವರು ಜ್ಞಾನ ರತ್ನಗಳ ದಾನ ಮಾಡದೇ ಇರಲು ಸಾಧ್ಯವಿಲ್ಲ. ಹೇಗೆ ಮನುಷ್ಯರು ಪುರುಷೋತ್ತಮ ಮಾಸದಲ್ಲಿ ಬಹಳ ದಾನ-ಪುಣ್ಯ ಮಾಡುತ್ತಾರೆ ಹಾಗೆಯೇ ಈ ಪುರುಷೋತ್ತಮ ಸಂಗಮಯುಗದಲ್ಲಿ ನೀವು ಜ್ಞಾನ ರತ್ನಗಳ ದಾನ ಮಾಡಬೇಕಾಗಿದೆ. ಇದೂ ಸಹ ನಿಮಗೆ ತಿಳಿದಿದೆ - ಸ್ವಯಂ ಪರಮಪಿತ ಪರಮಾತ್ಮನೇ ಓದಿಸುತ್ತಿದ್ದಾರೆ, ಕೃಷ್ಣನ ಮಾತಿಲ್ಲ. ಕೃಷ್ಣನು ಸತ್ಯಯುಗದ ಮೊದಲ ರಾಜಕುಮಾರನಾಗಿದ್ದಾನೆ ನಂತರ ಪುನರ್ಜನವನ್ನು ತೆಗೆದುಕೊಳ್ಳುತ್ತಾ ಬರುತ್ತಾನೆ. ತಂದೆಯು ಭೂತ, ಭವಿಷ್ಯತ್, ವರ್ತಮಾನದ ರಹಸ್ಯವನ್ನು ತಿಳಿಸಿದ್ದಾರೆ. ನೀವು ತ್ರಿಕಾಲದರ್ಶಿಗಳಾಗುತ್ತೀರಿ. ತಂದೆಯ ವಿನಃ ನಿಮ್ಮನ್ನು ತ್ರಿಕಾಲದರ್ಶಿಗಳನ್ನಾಗಿ ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವು ತಂದೆಯ ಬಳಿಯಷ್ಟೇ ಇದೆ. ತಂದೆಯನ್ನು ಜ್ಞಾನ ಸಾಗರನೆಂದು ಕರೆಯಲಾಗುತ್ತದೆ. ಶ್ರೇಷ್ಠಾತಿ ಶ್ರೇಷ್ಠ ಭಗವಂತನೆಂದೇ ಗಾಯನವಿದೆ, ಅವರೇ ರಚಯಿತನಾಗಿದ್ದಾರೆ. ಹೆವೆನ್ಲೀ ಗಾಡ್ಫಾದರ್ ಶಬ್ಧವು ಬಹಳ ಸ್ಪಷ್ಟವಾಗಿದೆ ಸ್ವರ್ಗ ಸ್ಥಾಪನೆ ಮಾಡುವವರು. ಶಿವ ಜಯಂತಿಯನ್ನೂ ಆಚರಿಸುತ್ತಾರೆ. ಆದರೆ ಅವರು ಯಾವಾಗ ಬಂದರು, ಏನನ್ನು ಮಾಡಿದರು ಏನೂ ಗೊತ್ತಿಲ್ಲ. ಜಯಂತಿಯ ಅರ್ಥವನ್ನೇ ತಿಳಿದುಕೊಂಡಿಲ್ಲವೆಂದರೆ ಅದನ್ನಾಚರಿಸಿ ಏನು ಮಾಡುವರು? ಇದೆಲ್ಲವೂ ಸಹ ನಾಟಕದಲ್ಲಿದೆ, ಈ ಸಮಯದಲ್ಲಿಯೇ ನೀವು ಮಕ್ಕಳು ನಾಟಕದ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಂಡಿದ್ದೀರಿ, ಮತ್ತೆಂದೂ ಇಲ್ಲ. ಯಾವಾಗ ತಂದೆಯು ಬರುವರೋ ಆಗಲೇ ಅರಿತುಕೊಳ್ಳುತ್ತೀರಿ. ಈ 84 ಜನ್ಮಗಳ ಚಕ್ರವು ಹೇಗೆ ಸುತ್ತುತ್ತದೆ ಎಂಬುದು ಈಗ ನಿಮಗೆ ಸ್ಮೃತಿ ಬಂದಿದೆ. ಭಕ್ತಿಮಾರ್ಗದಲ್ಲಿ ಏನಿದೆಯೋ ಅದರಿಂದ ನಿಮಗೆ ಸಿಗುವುದೇನೂ ಇಲ್ಲ. ಎಷ್ಟೊಂದು ಮಂದಿ ಭಕ್ತರು ಜನ ಸಂದಣಿಯಲ್ಲಿ ಬಹಳ ಕಷ್ಟ ಪಡಲು ಹೋಗುತ್ತಾರೆ. ತಂದೆಯು ನಿಮ್ಮನ್ನು ಅದೆಲ್ಲದರಿಂದ ಬಿಡಿಸಿದರು, ನೀವೀಗ ತಿಳಿದುಕೊಂಡಿದ್ದೀರಿ - ನಾವು ಶ್ರೀಮತದನುಸಾರ ಪುನಃ ಭಾರತವನ್ನು ಶ್ರೇಷ್ಠವನ್ನಾಗಿ ಮಾಡುತ್ತಿದ್ದೇವೆ. ಶ್ರೀಮತದಿಂದಲೇ ಶ್ರೇಷ್ಠರಾಗುತ್ತೀರಿ. ಶ್ರೀಮತವು ಸಂಗಮಯುಗದಲ್ಲಿಯೇ ಸಿಗುತ್ತದೆ, ನಾವು ಯಾರಾಗಿದ್ದೇವೆ - ಈಗ ಈ ರೀತಿ ಹೇಗಾದೆವು ಎಂಬುದನ್ನು ನೀವು ಯಥಾರ್ಥ ರೀತಿಯಿಂದ ತಿಳಿದುಕೊಂಡಿದ್ದೀರಿ. ಈಗ ಪುನಃ ಪುರುಷಾರ್ಥ ಮಾಡುತ್ತಿದ್ದೀರಿ, ಪುರುಷಾರ್ಥ ಮಾಡುತ್ತಾ-ಮಾಡುತ್ತಾ ಒಂದುವೇಳೆ ಅನುತ್ತೀರ್ಣರಾಗುತ್ತೀರೆಂದರೆ ತಂದೆಗೆ ಸಮಾಚಾರ ತಿಳಿಸಿ. ಆಗ ತಂದೆಯು ಪುನಃ ಎದ್ದು ನಿಲ್ಲಲು ಎಚ್ಚರಿಕೆಯನ್ನು ಕೊಡುತ್ತಾರೆ. ಎಂದೂ ಸಹ ಅನುತ್ತೀರ್ಣರಾಗಿ ಕುಳಿತುಬಿಡಬಾರದು. ಪುನಃ ಎದ್ದು ನಿಂತುಕೊಳ್ಳಿ, ಚಿಕಿತ್ಸೆ ಕೊಡಿ. ಸರ್ಜನ್ ಕುಳಿತಿದ್ದಾರಲ್ಲವೆ. ತಂದೆಯು ತಿಳಿಸುತ್ತಾರೆ - 5 ಅಂತಸ್ತಿನಿಂದ ಬೀಳುವುದು ಮತ್ತು ಎರಡನೇ ಅಂತಸ್ತಿನಿಂದ ಬೀಳುವುದರಲ್ಲಿ ಎಷ್ಟೊಂದು ಅಂತರವಿದೆ! ಕಾಮ ವಿಕಾರವು ಐದನೇ ಅಂತಸ್ತಾಗಿದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಕಾಮ ಮಹಾಶತ್ರುವಾಗಿದೆ. ಅದೇ ನಿಮ್ಮನ್ನು ಪತಿತರನ್ನಾಗಿ ಮಾಡಿದೆ, ಈಗ ಪಾವನರಾಗಿ. ಪತಿತ-ಪಾವನ ತಂದೆಯು ಬಂದು ಪಾವನರನ್ನಾಗಿ ಮಾಡುತ್ತಾರೆ. ಅವಶ್ಯವಾಗಿ ಸಂಗಮಯುಗದಲ್ಲಿಯೇ ಮಾಡುತ್ತಾರೆ. ಕಲಿಯುಗದ ಅಂತ್ಯ ಮತ್ತು ಸತ್ಯಯುಗದ ಆದಿಯ ಇದು ಸಂಗಮಯುಗವಾಗಿದೆ.

ಮಕ್ಕಳಿಗೆ ಗೊತ್ತಿದೆ - ತಂದೆಯು ಈಗ ಸಸಿಯನ್ನು ನಾಟಿ ಮಾಡುತ್ತಿದ್ದಾರೆ. ಅದರ ನಂತರ ಪೂರ್ಣ ವೃಕ್ಷವು ಬೆಳವಣಿಗೆಯಾಗುವುದು. ಬ್ರಾಹ್ಮಣರ ವೃಕ್ಷವು ವೃದ್ಧಿಯಾಗುವುದು. ನಂತರ ಸೂರ್ಯವಂಶಿ ಮತ್ತು ಚಂದ್ರವಂಶದಲ್ಲಿ ಹೋಗಿ ಸುಖವನ್ನನುಭವಿಸುವಿರಿ. ಎಷ್ಟು ಸಹಜವಾಗಿ ತಿಳಿಸಿಕೊಡುತ್ತಾರೆ. ಒಂದುವೇಳೆ ಮುರುಳಿ ಸಿಗಲಿಲ್ಲವೆಂದರೆ ತಂದೆಯನ್ನು ನೆನಪು ಮಾಡಿ. ಇದನ್ನು ಬುದ್ಧಿಯಲ್ಲಿ ಪಕ್ಕಾ ಮಾಡಿಕೊಳ್ಳಿ ಶಿವ ತಂದೆಯು ನಮಗೆ ಬ್ರಹ್ಮಾ ತಂದೆಯ ತನುವಿನ ಮೂಲಕ ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನೀವು ವಿಷ್ಣುವಿನ ಮನೆತನದಲ್ಲಿ ಬರುತ್ತೀರಿ. ಎಲ್ಲವೂ ಪುರುಷಾರ್ಥದ ಮೇಲೆ ಆಧಾರಿತವಾಗಿದೆ. ಕಲ್ಪ-ಕಲ್ಪವೂ ಯಾವ ಪುರುಷಾರ್ಥವನ್ನು ಮಾಡಿದ್ದೀರೋ ಚಾಚೂ ತಪ್ಪದೆ ಅದೇ ನಡೆಯುವುದು. ಅರ್ಧಕಲ್ಪ ದೇಹಾಭಿಮಾನಿಯಾಗಿದ್ದೀರಿ, ಈಗ ದೇಹೀ-ಅಭಿಮಾನಿಯಾಗುವ ಸಂಪೂರ್ಣ ಪುರುಷಾರ್ಥ ಮಾಡಿ. ಇದರಲ್ಲಿ ಪರಿಶ್ರಮವಿದೆ. ವಿದ್ಯೆಯು ಸಹಜವಾಗಿದೆ ಆದರೆ ಮುಖ್ಯವಾದುದು ಪಾವನರಾಗುವ ಮಾತಾಗಿದೆ. ತಂದೆಯನ್ನು ಮರೆಯುವುದು ಅತಿ ದೊಡ್ಡ ತಪ್ಪಾಗಿದೆ. ದೇಹಾಭಿಮಾನದಲ್ಲಿ ಬರುವುದರಿಂದಲೇ ಮರೆತು ಹೋಗುತ್ತೀರಿ. ಶರೀರ ನಿರ್ವಹಣಾರ್ಥವಾಗಿ ಉದ್ಯೋಗ-ವ್ಯವಹಾರಗಳನ್ನು ಭಲೆ 8 ಗಂಟೆಗಳ ಸಮಯ ಮಾಡಿ, ಉಳಿದ 8 ಗಂಟೆ ನೆನಪಿನಲ್ಲಿರುವ ಪುರುಷಾರ್ಥ ಮಾಡಬೇಕಾಗಿದೆ. ಆ ಸ್ಥಿತಿಯು ಅಷ್ಟು ಬೇಗನೆ ಬರುವುದಿಲ್ಲ. ಅಂತಿಮದಲ್ಲಿ ಯಾವಾಗ ಈ ಸ್ಥಿತಿಯನ್ನು ಹೊಂದುವಿರೋ ಆಗ ವಿನಾಶವಾಗುವುದು. ಕರ್ಮಾತೀತ ಸ್ಥಿತಿಯಾಯಿತೆಂದರೆ ಮತ್ತೆ ಈ ಸ್ಥಿತಿಯು ನಿಲ್ಲುವುದಿಲ್ಲ. ಇದನ್ನು ಬಿಟ್ಟು ಬಿಡುತ್ತೀರಿ, ಏಕೆಂದರೆ ಆತ್ಮವು ಪವಿತ್ರವಾಗಿ ಬಿಟ್ಟಿತಲ್ಲವೆ. ಯಾವಾಗ ನಂಬರ್ವಾರ್ ಕರ್ಮಾತೀತ ಸ್ಥಿತಿಯಾಗುವುದೋ ಆಗ ಯುದ್ಧವು ಪ್ರಾರಂಭವಾಗುವುದು. ಅಲ್ಲಿಯವರೆಗೆ ರಿಹರ್ಸಲ್ ಆಗುತ್ತಾ ಇರುವುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈ ಪುರುಷೋತ್ತಮ ಮಾಸದಲ್ಲಿ ಅವಿನಾಶಿ ಜ್ಞಾನ ರತ್ನಗಳ ದಾನ ಮಾಡಬೇಕಾಗಿದೆ. ಅಮೃತವೇಳೆ ಎದ್ದು ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. ಶ್ರೀ ಮತದನುಸಾರ ಶರೀರ ನಿರ್ವಹಣೆ ಮಾಡುತ್ತಲೂ ತಂದೆಯು ಯಾವ ಹೋಮ್ವರ್ಕ್ ಕೊಟ್ಟಿದ್ದಾರೆಯೋ ಅದನ್ನು ಅವಶ್ಯವಾಗಿ ಮಾಡಬೇಕಾಗಿದೆ.

2. ಪುರುಷಾರ್ಥದಲ್ಲಿ ಎಂದಾದರೂ ಅಡಚಣೆ ಬಂದರೆ ತಂದೆಗೆ ಸಮಾಚಾರವನ್ನು ತಿಳಿಸಿ, ಶ್ರೀಮತವನ್ನು ತೆಗೆದುಕೊಳ್ಳಬೇಕಾಗಿದೆ. ತಜ್ಞರಿಗೆ ಎಲ್ಲವನ್ನೂ ತಿಳಿಸಬೇಕಾಗಿದೆ. ವಿಕರ್ಮ ವಿನಾಶ ಮಾಡಿಕೊಳ್ಳುವ ಸಮಯದಲ್ಲಿ ಯಾವುದೇ ವಿಕರ್ಮ ಮಾಡಬಾರದು.

ವರದಾನ:
ದೇಹ, ಸಂಬಂಧ ಮತ್ತು ವೈಭವಗಳ ಬಂಧನದಿಂದ ಸ್ವತಂತ್ರ ತಂದೆಯ ಸಮಾನ ಕರ್ಮಾತೀತ ಭವ.

ಯಾರು ನಿಮಿತ್ತ ಮಾತ್ರ ನಿದರ್ಶನದ ಪ್ರಮಾಣ ಪ್ರವೃತ್ತಿಯನ್ನು ಸಂಭಾಲನೆ ಮಾಡುತ್ತಾ ಆತ್ಮಿಕ ಸ್ವರೂಪದಲ್ಲಿರುತ್ತಾರೆ, ಮೋಹದ ಕಾರಣ ಅಲ್ಲ, ಅವರಿಗೆ ಒಂದುವೇಳೆ ಈಗೀಗ ಆದೇಶ ಬಂದಲ್ಲಿ ಹೊರಟು ಬನ್ನಿ ಎಂದು ಆಗ ಹೊರಟು ಬಿಡುವರು. ಕಹಳೆ ಮೊಳಗಿದಾಗ ಬೇರೆ ಯೋಚನೆಯಲ್ಲಿಯೇ ಸಮಯ ಕಳೆದು ಹೋಗಬಾರದು - ಆಗ ಹೇಳಲಾಗುವುದು ನಷ್ಟಮೋಹ. ಆದ್ದರಿಂದ ಸದಾ ತಮ್ಮನ್ನು ಚೆಕ್ (ಪರಿಶೀಲನೆ) ಮಾಡಿಕೊಳ್ಳಬೇಕು. ದೇಹದ, ಸಂಬಂಧದ, ವೈಭವಗಳ ಬಂಧನಗಳು ತಮ್ಮ ಕಡೆ ಸೆಳೆಯುತ್ತಿಲ್ಲಾ ತಾನೆ? ಎಲ್ಲಿ ಬಂಧನವಿರುತ್ತದೆ ಅಲ್ಲಿ ಆಕರ್ಷಣೆಯಾಗುತ್ತದೆ. ಆದರೆ ಯಾರು ಸ್ವತಂತ್ರರಾಗಿದ್ದಾರೆ ಅವರು ತಂದೆಯ ಸಮಾನ ಕರ್ಮಾತೀತ ಸ್ಥಿತಿಯ ಸಮೀಪವಿರುತ್ತಾರೆ.

ಸ್ಲೋಗನ್:
ಸ್ನೇಹ ಮತ್ತು ಸಹಯೋಗದ ಜೊತೆ ಶಕ್ತಿರೂಪವಾಗಿ ಆಗ ರಾಜಧಾನಿಯಲ್ಲಿ ಮೊದಲ ನಂಬರ್ ಸಿಕ್ಕಿ ಬಿಡುವುದು.