16.09.20         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ತಂದೆಯು ಎಲ್ಲರ ದುಃಖವನ್ನು ದೂರ ಮಾಡಿ ಸುಖವನ್ನು ಕೊಡಲು ಬಂದಿದ್ದಾರೆ, ಆದ್ದರಿಂದ ನೀವು ದುಃಖಹರ್ತನ ಮಕ್ಕಳು ಯಾರಿಗೂ ದುಃಖವನ್ನು ಕೊಡಬೇಡಿ"

ಪ್ರಶ್ನೆ:
ಶ್ರೇಷ್ಠ ಪದವಿಯನ್ನು ಪಡೆಯುವಂತಹ ಮಕ್ಕಳ ಮುಖ್ಯ ಚಿಹ್ನೆಗಳೇನಿರುವುದು?

ಉತ್ತರ:
1. ಅವರು ಸದಾ ಶ್ರೀಮತದಂತೆ ನಡೆಯುತ್ತಾ ಇರುತ್ತಾರೆ 2. ಎಂದೂ ಹಠ ಮಾಡುವುದಿಲ್ಲ. 3. ತಮಗೆ ತಾವೇ ರಾಜ ತಿಲಕವನ್ನು ಕೊಟ್ಟುಕೊಳ್ಳಲು ವಿದ್ಯೆಯನ್ನು ಓದಿ ತೀಕ್ಷ್ಣವಾಗಿ ಮುಂದೆ ಹೋಗುತ್ತಾರೆ. 4. ತಮಗೆ ಎಂದೂ ಮೋಸ ಮಾಡಿಕೊಳ್ಳುವುದಿಲ್ಲ. 5. ಸರ್ವರ ಪ್ರತಿ ದಯಾಹೃದಯಿ ಮತ್ತು ಕಲ್ಯಾಣಕಾರಿಗಳಾಗಿರುತ್ತಾರೆ. ಅವರಿಗೆ ಸರ್ವೀಸಿನ ಹೆಚ್ಚು ಉಮ್ಮಂಗವಿರುತ್ತದೆ. 6. ಯಾವುದೇ ತುಚ್ಛ ಕೆಲಸವನ್ನು ಮಾಡುವುದಿಲ್ಲ, ಜಗಳ-ಕಲಹ ಮಾಡುವುದಿಲ್ಲ.

ಗೀತೆ:
ನೀನು ರಾತ್ರಿಯನ್ನು ನಿದ್ರಿಸುತ್ತಾ ಕಳೆದೆ, ಹಗಲನ್ನು ........................

ಓಂ ಶಾಂತಿ.
ಆತ್ಮಿಕ ಮಕ್ಕಳು ಆತ್ಮಿಕ ತಂದೆಯ ಸನ್ಮುಖದಲ್ಲಿ ಕುಳಿತಿದ್ದೀರಿ. ಈ ಭಾಷೆಯನಂತೂ ನೀವು ಮಕ್ಕಳೇ ತಿಳಿದುಕೊಳ್ಳುತ್ತೀರಿ, ಮತ್ತ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. "ಹೇ ಆತ್ಮಿಕ ಮಕ್ಕಳೇ" ಈ ರೀತಿ ಎಂದೂ ಯಾರು ಹೇಳಲು ಸಾಧ್ಯವಿಲ್ಲ. ಹೇಳಲು ಬರುವುದೂ ಇಲ್ಲ. ನೀವು ತಿಳಿದುಕೊಂಡಿದ್ದೀರಿ - ನಾವು ಆತ್ಮಿಕ ತಂದೆಯ ಸನ್ಮುಖದಲ್ಲಿ ಕುಳಿತಿದ್ದೇವೆ. ಯಾವ ತಂದೆಯನ್ನು ಯತಾರ್ಥ ರೀತಿಯಿಂದ ಯಾರೂ ಅರಿತುಕೊಂಡಿಲ್ಲ. ಭಲೆ ತಮ್ಮನ್ನು ಸಹೋದರ-ಸಹೋದರರೆಂದು ತಿಳಿದುಕೊಳ್ಳುತ್ತಾರೆ, ನಾವೆಲ್ಲಾ ಆತ್ಮರಾಗಿದ್ದೇವೆ. ತಂದೆಯೊಬ್ಬರೇ ಆಗಿದ್ದಾರೆ ಎಂದೂ ಹೇಳುತ್ತಾರೆ ಆದರೆ ಯಥಾರ್ಥವಾಗಿ ತಿಳಿದುಕೊಂಡಿಲ್ಲ. ಎಲ್ಲಿಯವರೆಗೆ ಸನ್ಮುಖದಲ್ಲಿ ಬಂದು ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅರ್ಥವಾಗುವುದಾದರೂ ಹೇಗೆ? ನೀವೂ ಸಹ ಸನ್ಮುಖದಲ್ಲಿ ಬಂದಾಗಲೇ ತಿಳಿದುಕೊಳ್ಳುತ್ತೀರಿ. ನೀವು ಬ್ರಾಹ್ಮಣ-ಬ್ರಾಹ್ಮಣಿಯಾಗಿದ್ದೀರಿ. ನಿಮ್ಮ ಉಪನಾಮವೇ ಆಗಿದೆ - ಬ್ರಹ್ಮಮುಖವಂಶಿ ಬ್ರಹ್ಮಕುಮಾರ-ಕುಮಾರಿಯರು. ಶಿವನ ಮಕ್ಕಳಂತೂ ಎಲ್ಲಾ ಆತ್ಮರೂ ಆಗಿದ್ದಾರೆ. ನಿಮಗೆ ಶಿವ ಕುಮಾರ-ಶಿವ ಕುಮಾರಿಯಂದು ಹೇಳುವುದಿಲ್ಲ. ಈ ಶಬ್ಧವೇ ತಪ್ಪಾಗಿ ಬಿಡುತ್ತದೆ. ಕುಮಾರರೂ ಇದ್ದೀರಿ, ಕುಮಾರಿಯರೂ ಇದ್ದೀರಿ. ಶಿವನಿಗೆ ಎಲ್ಲರೂ ಆತ್ಮರಾಗಿದ್ದಾರೆ. ಯಾವಾಗ ಸಾಕಾರದಲ್ಲಿ ಮನುಷ್ಯರ ಮಕ್ಕಳಾಗುವರೋ ಆಗಲೇ ಕುಮಾರ-ಕುಮಾರಿಯಂದು ಹೇಳಲಾಗುತ್ತದೆ. ಶಿವನ ಮಕ್ಕಳಂತೂ ನಿರಾಕಾರಿ ಆತ್ಮಗಳು ಆಗಿಯೇ ಇದ್ದಾರೆ. ಮೂಲವತನದಲ್ಲಿ ಎಲ್ಲಾ ಆತ್ಮರೇ ಇರುತ್ತಾರೆ, ಅವರಿಗೆ ಸಾಲಿಗ್ರಾಮಗಳೆಂದು ಹೇಳಲಾಗುತ್ತದೆ. ಇಲ್ಲಿ ಬಂದಾಗ ಶಾರೀರಿಕ ಕುಮಾರ-ಕುಮಾರಿಯರಾಗುತ್ತಾರೆ. ವಾಸ್ತವದಲ್ಲಿ ನೀವು ಕುಮಾರಿಯರು ಶಿವ ತಂದೆಯ ಮಕ್ಕಳಾಗಿದ್ದೀರಿ. ಯಾವಾಗ ಶರೀರದಲ್ಲಿ ಬರುತ್ತೀರೋ ಆಗಲೇ ಕುಮಾರ-ಕುಮಾರಿಯರಾಗುತ್ತೀರಿ. ನೀವು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ, ಆದ್ದರಿಂದ ಸಹೋದರ-ಸಹೋದರಿಯರೆಂದು ಕರೆಸಿಕೊಳ್ಳುತ್ತೀರಿ. ಈ ಸಮಯದಲ್ಲಿ ನಿಮಗೆ ಈ ಜ್ಞಾನವು ಸಿಕ್ಕಿದೆ. ತಂದೆಯು ನಮ್ಮನ್ನು ಪಾವನರನ್ನಾಗಿ ಮಾಡಿ ಕರೆದುಕೊಂಡು ಹೋಗುತ್ತಾರೆಂದು ತಿಳಿದುಕೊಂಡಿದ್ದೀರಿ. ಆತ್ಮವು ತಂದೆಯನ್ನು ಎಷ್ಟು ನೆನಪು ಮಾಡುವುದೋ ಅಷ್ಟು ಪವಿತ್ರವಾಗಿ ಬಿಡುವುದು. ಆತ್ಮಗಳು ಬ್ರಹ್ಮ ಮುಖದಿಂದ ಈ ಜ್ಞಾನವನ್ನು ಓದುತ್ತೀರಿ, ಚಿತ್ರಗಳಲ್ಲಿಯೂ ತಂದೆಯ ಜ್ಞಾನವು ಸ್ಪಷ್ಟವಾಗಿದೆ. ಶಿವ ತಂದೆಯು ನಮಗೆ ಓದಿಸುತ್ತಾರೆ. ಕೃಷ್ಣನಾಗಲಿ ಅಥವಾ ಕೃಷ್ಣನ ಮೂಲಕ ತಂದೆಯಾಗಲಿ ಓದಿಸಲು ಸಾಧ್ಯವಿಲ್ಲ. ಕೃಷ್ಣನು ವೈಕುಂಠದ ರಾಜಕುಮಾರನಾಗಿದ್ದಾನೆ. ಇದನ್ನೂ ಸಹ ನೀವು ಮಕ್ಕಳು ತಿಳಿಸಿಕೊಡಬೇಕಾಗಿದೆ. ಕೃಷ್ಣನಂತೂ ಸ್ವರ್ಗದಲ್ಲಿ ತಮ್ಮ ತಂದೆ-ತಾಯಿಯ ಮಗುವಾಗಿರುವನು. ಸ್ವರ್ಗವಾಸಿ ತಂದೆಯ ಮಗನಾಗಿರುತ್ತಾನೆ, ವೈಕುಂಠದ ರಾಜಕುಮಾರನಾಗಿದ್ದಾನೆ. ಅವನನ್ನು ಯಾರೂ ತಿಳಿದುಕೊಂಡಿಲ್ಲ. ಕೃಷ್ಣ ಜಯಂತಿಯಂದು ತಮ್ಮ-ತಮ್ಮ ಮನೆಗಳಲ್ಲಿ ಕೃಷ್ಣನಿಗಾಗಿ ಉಯ್ಯಾಲೆಯನ್ನು ಮಾಡುತ್ತಾರೆ ಹಾಗೂ ಉಯ್ಯಾಲೆಯನ್ನಿಡುತ್ತಾರೆ. ಮಾತೆಯರು ಹೋಗಿ ಡಬ್ಬಿಯಲ್ಲಿ ಹಣವನ್ನು ಹಾಕುತ್ತಾರೆ, ಪೂಜೆ ಮಾಡುತ್ತಾರೆ. ಇತ್ತೀಚೆಗೆ ಕ್ರೈಸ್ತನಿಗೂ ಕೃಷ್ಣನ ತರಹವೇ ಮಾಡುತ್ತಾರೆ. ಕ್ರಿಸ್ತನಿಗೆ ಕಿರೀಟ ಇತ್ಯಾದಿಗಳನ್ನು ತೊಡಿಸಿ ತಾಯಿಯ ಮಡಿಲಿಗೆ ಕೊಡುತ್ತಾರೆ ಹೇಗೆ ಕೃಷ್ಣನನ್ನು ತೋರಿಸುವಂತೆ. ಕೃಷ್ಣ ಮತ್ತು ಕ್ರೈಸ್ಟ್ ರಾಶಿಯು ಒಂದೇ ಆಗಿದೆ ಆದ್ದರಿಂದ ಅವರು ಕಾಪಿ ಮಾಡುತ್ತಾರೆ. ವಾಸ್ತವದಲ್ಲಿ ಕೃಷ್ಣನ ಜನ್ಮ ಮತ್ತು ಕ್ರಿಸ್ತನ ಜನ್ಮದಲ್ಲಿ ಬಹಳ ಅಂತರವಿದೆ. ಕ್ರಿಸ್ತನ ಜನ್ಮವು ಚಿಕ್ಕ ಮಗುವಿನ ರೂಪದಲ್ಲಿ ಆಗುವುದಿಲ್ಲ. ಕ್ರಿಸ್ತನ ಆತ್ಮವು ಅನ್ಯರಲ್ಲಿ (ಜೀಸಸ್) ಹೋಗಿ ಪ್ರವೇಶ ಮಾಡಿದೆ. ವಿಕಾರದಿಂದ ಜನ್ಮ ಪಡೆಯಲು ಸಾಧ್ಯವಿಲ್ಲ. ಮೊದಲು ಕ್ರಿಸ್ತನನ್ನು ಎಂದೂ ಚಿಕ್ಕ ಮಗುವಿನ ರೂಪದಲ್ಲಿ ತೋರಿಸುತ್ತಿರಲಿಲ್ಲ, ಶಿಲುಬೆಯಲ್ಲಿ ತೋರಿಸುತ್ತಿದ್ದರು, ಇದನ್ನು ಈಗ ತೋರಿಸುತ್ತಾರೆ. ಮಕ್ಕಳಿಗೆ ತಿಳಿದಿದೆ ಧರ್ಮ ಸ್ಥಾಪಕರು ಯಾರೂ ಈ ರೀತಿ ಕೊಲ್ಲಲು ಸಾಧ್ಯವಿಲ್ಲ. ಅಂದಮೇಲೆ ಕೊಂದದ್ದು ಯಾರನ್ನು? ಯಾರಲ್ಲಿ ಪ್ರವೇಶ ಮಾಡಿದರೋ ಅವರಿಗೆ (ಜೀಸಸ್) ದುಃಖ ಸಿಕ್ಕಿತು. ಸತೋಪ್ರಧಾನ ಆತ್ಮನಿಗೆ ದುಃಖವು ಸಿಗಲು ಸಾಧ್ಯವಿಲ್ಲ. ಕ್ರಿಸ್ತನು ದುಃಖವನ್ನನುಭವಿಸಲು ಅವರೇನು ಕರ್ಮ ಮಾಡಿದರು? ಆತ್ಮವೇ ಸತೋಪ್ರಧಾನ ಸ್ಥಿತಿಯಲ್ಲಿ ಬರುತ್ತದೆ. ಈಗ ಎಲ್ಲರ ಲೆಕ್ಕಾಚಾರಗಳು ಸಮಾಪ್ತಿಯಾಗುತ್ತದೆ. ಈ ಸಮಯದಲ್ಲಿ ತಂದೆಯೇ ಎಲ್ಲರನ್ನೂ ಪಾವನ ಮಾಡುತ್ತಾರೆ. ಮೇಲಿನಿಂದ ಸತೋಪ್ರಧಾನ ಆತ್ಮವು ಬಂದು ದುಃಖವನ್ನನುಭವಿಸಲು ಸಾಧ್ಯವಿಲ್ಲ. ಸತೋಪ್ರಧಾನ ಆತ್ಮಕ್ಕೆ ದುಃಖವು ಸಿಗುವುದಿಲ್ಲ. ಆತ್ಮವೇ ಅನುಭವಿಸುತ್ತದೆಯಲ್ಲವೆ. ಆತ್ಮವು ಶರೀರದಲ್ಲಿದ್ದಾಗ ದುಃಖವಾಗುತ್ತದೆ. ನನಗೆ ನೋವಾಗುತ್ತಿದೆ - ಇದನ್ನು ಯಾರು ಹೇಳಿದರು? ಈ ಶರೀರದಲ್ಲಿ ಯಾವುದೋ ಶಕ್ತಿಯಿದೆ, ಇದಕ್ಕೆ ಅವರು ಒಳಗೆ ಪರಮಾತ್ಮನಿದ್ದಾರೆಂದು ಹೇಳುತ್ತಾರೆ. ಪರಮಾತ್ಮನು ನನಗೆ ಒಳಗೆ ದುಃಖವಿದೆ ಎಂದು ಹೇಳುತ್ತಾರೆಯೆ? ಸರ್ವರಲ್ಲಿ ಪರಮಾತ್ಮನು ವಿರಾಜಮಾನನಾಗಿದ್ದರೆ ಪರಮಾತ್ಮನು ದುಃಖವನ್ನನುಭವಿಸಲು ಹೇಗೆ ಸಾಧ್ಯ. ದುಃಖದ ಸಮಯದಲ್ಲಿ ಆತ್ಮವೇ ಕರೆಯುತ್ತದೆ - ಹೇ ಪರಮಪಿತ ಪರಮಾತ್ಮ ನಮ್ಮ ದುಃಖವನ್ನು ದೂರ ಮಾಡು ಎಂದು ಆತ್ಮವು ಪಾರಲೌಕಿಕ ತಂದೆಯನ್ನೇ ಕರೆಯುತ್ತದೆ.

ನೀವೀಗ ತಿಳಿದುಕೊಂಡಿದ್ದೀರಿ ತಂದೆಯು ಬಂದಿದ್ದಾರೆ, ದುಃಖವನ್ನು ಕಳೆಯುವ ಯುಕ್ತಿಯನ್ನು ತಿಳಿಸುತ್ತಿದ್ದಾರೆ. ಆತ್ಮವು ಶರೀರದ ಜೊತೆ ಸದಾ ಐಶ್ವರ್ಯವಂತ, ಆರೋಗ್ಯವಂತನಾಗುತ್ತದೆ. ಮೂಲವತನದಲ್ಲಂತೂ ಆರೋಗ್ಯವಂತರು, ಐಶ್ವರ್ಯವಂತರೆಂದು ಹೇಳುವುದಿಲ್ಲ. ಅಲ್ಲಿ ಯಾವುದೇ ಸೃಷ್ಟಿಯಿಲ್ಲ. ಅಲ್ಲಿ ಶಾಂತಿಯೇ ಶಾಂತಿಯಿರುವುದು. ಎಲ್ಲರೂ ಶಾಂತಿ ಸ್ವಧರ್ಮದಲ್ಲಿ ಸ್ಥಿತರಾಗಿರುತ್ತಾರೆ. ಈಗ ಎಲ್ಲರ ದುಃಖವನ್ನು ದೂರ ಮಾಡಿ ಸುಖವನ್ನು ಕೊಡಲು ತಂದೆಯು ಬಂದಿದ್ದಾರೆ, ಆದ್ದರಿಂದ ಮಕ್ಕಳಿಗೂ ಹೇಳುತ್ತಾರೆ - ಮಕ್ಕಳೇ, ನೀವು ನನ್ನವರಾಗಿದ್ದೀರಿ ಅಂದಮೇಲೆ ಯಾರಿಗೂ ದುಃಖವನ್ನು ಕೊಡಬೇಡಿ. ಇದು ದುಃಖದ ಮೈದಾನವಾಗಿದೆ ಆದರೆ ಅದು ಪ್ರತ್ಯಕ್ಷವಾಗಿರುತ್ತದೆ, ಇದು ಗುಪ್ತವಾಗಿದೆ. ಯುದ್ಧದ ಮೈದಾನದಲ್ಲಿ ಯಾರು ಶರೀರ ಬಿಡುವರೋ ಅವರು ಸ್ವರ್ಗದಲ್ಲಿ ಹೋಗುತ್ತಾರೆಂಬ ಯಾವ ಗಾಯನವಿದೆ ಅದರ ಅರ್ಥವನ್ನೂ ತಿಳಿಸಬೇಕಾಗಿದೆ. ಈ ದುಃಖದ ಮಹತ್ವಿಕೆ ನೋಡಿ, ಎಷ್ಟೊಂದಿದೆ! ಮಕ್ಕಳಿಗೂ ತಿಳಿದಿದೆ - ಆ ಯುದ್ಧದಲ್ಲಿ ಸತ್ತರೆ ಯಾರೂ ಸ್ವರ್ಗದಲ್ಲಿ ಹೋಗಲು ಸಾಧ್ಯವಿಲ್ಲ. ಆದರೆ ಗೀತೆಯಲ್ಲಿ ಭಗವಾನುವಾಚವಿದೆ. ಅದನ್ನು ಒಪ್ಪಬೇಕಲ್ಲವೆ. ಭಗವಂತನು ಯಾರಿಗೆ ಹೇಳಿದರು? ಅ ಯುದ್ಧ ಮಾಡುವ ಯೋಧರಿಗೆ ಹೇಳಿದರೋ? ಅಥವಾ ನಿಮಗೆ ಹೇಳಿದರೋ? ಇಬ್ಬರಿಗೂ ಹೇಳಿದರು. ಅವರಿಗೂ ಸಹ ತಿಳಿಸಿಕೊಡಿ, ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ, ಈ ಸರ್ವೀಸನ್ನೂ ಮಾಡಬೇಕಾಗಿದೆ. ನೀವೀಗ ಒಂದುವೇಳೆ ಸ್ವರ್ಗದಲ್ಲಿ ಹೋಗಲು ಬಯಸುತ್ತೀರೆಂದರೆ ಪುರುಷಾರ್ಥ ಮಾಡಿ, ಯುದ್ಧದಲ್ಲಿ ಎಲ್ಲಾ ಧರ್ಮದವರಿದ್ದಾರೆ. ಸಿಖ್ಖರೂ ಇದ್ದಾರೆ, ಅವರಂತೂ ಮತ್ತೆ ಸಿಖ್ಖ್ ಧರ್ಮದಲ್ಲಿಯೇ ಹೋಗುತ್ತಾರೆ. ಯಾವಾಗ ನೀವು ಬ್ರಾಹ್ಮಣರಿಂದ ಜ್ಞಾನವನ್ನು ಪಡೆದುಕೊಳ್ಳುವಿರೋ ಆಗಲೇ ಸ್ವರ್ಗದಲ್ಲಿ ಬರಲು ಸಾಧ್ಯ. ಹೇಗೆ ತಂದೆಯ ಬಳಿ ಬರುತ್ತಿದ್ದರು ಆಗ ತಂದೆಯು ತಿಳಿಸುತ್ತಿದ್ದರು - ನೀವು ಯುದ್ಧ ಮಾಡುತ್ತಾ ಶಿವ ತಂದೆಯ ನೆನಪಿನಲ್ಲಿದ್ದರೆ ಸ್ವರ್ಗದಲ್ಲಿ ಬರುತ್ತೀರಿ. ಸ್ವರ್ಗದಲ್ಲಿ ರಾಜರಾಗುತ್ತಾರೆಂದಲ್ಲ. ಅವರಿಗೇ ಹೆಚ್ಚು ತಿಳಿಸುವುದಕ್ಕೂ ಆಗುವುದಿಲ್ಲ. ಅವರಿಗೆ ಸ್ವಲ್ಪವೇ ಜ್ಞಾನವನ್ನು ತಿಳಿಸಲಾಗುತ್ತದೆ. ಯುದ್ಧದಲ್ಲಿ ತಮ್ಮ ಇಷ್ಟ ದೇವತೆಯನ್ನು ಅವಶ್ಯವಾಗಿ ನೆನಪು ಮಾಡುತ್ತಾರೆ. ಸಿಖ್ಖರಾಗಿದ್ದರೆ ಗುರು ಗೋವಿಂದನಿಗೆ ಜೈ ಎಂದು ಹೇಳುತ್ತಾರೆ ಆದರೆ ತನ್ನನ್ನು ಆತ್ಮನೆಂದು ತಿಳಿದು ಪರಮಾತ್ಮನನ್ನು ನೆನಪು ಮಾಡುವವರು ಯಾರೂ ಇಲ್ಲ. ಹಾ! ಯಾರು ತಂದೆಯ ಪರಿಚಯವನ್ನು ತೆಗೆದುಕೊಳ್ಳುವರೋ ಅವರು ಸ್ವರ್ಗದಲ್ಲಿ ಬಂದು ಬಿಡುತ್ತಾರೆ. ಎಲ್ಲರಿಗೆ ತಂದೆಯು ಒಬ್ಬರೇ ಪತಿತ-ಪಾವನನಾಗಿದ್ದಾರೆ. ಅವರು ಪತಿತರಿಗೆ ತಿಳಿಸುತ್ತಾರೆ - ನನ್ನನ್ನು ನೆನಪು ಮಾಡುವುದರಿಂದ ನಿಮ್ಮ ಪಾಪಗಳು ಕಳೆಯುತ್ತವೆ ಮತ್ತು ನಾನು ಯಾವ ಸುಖಧಾಮವನ್ನು ಸ್ಥಾಪನೆ ಮಾಡುತ್ತೇನೆಯೋ ಅದರಲ್ಲಿ ನೀವು ಬಂದು ಬಿಡುತ್ತೀರಿ. ಯುದ್ಧದಲ್ಲಿಯೂ ನೀವು ಶಿವ ತಂದೆಯನ್ನು ನೆನಪು ಮಾಡಿದರೆ ಸ್ವರ್ಗದಲ್ಲಿ ಬಂದು ಬಿಡುತ್ತಾರೆ. ಆ ಯುದ್ಧದ ಮೈದಾನದ ಮಾತೇ ಬೇರೆಯಾಗಿದೆ. ಇಲ್ಲಿಯದೇ ಬೇರೆಯಾಗಿದೆ. ತಂದೆಯು ತಿಳಿಸುತ್ತಾರೆ - ಜ್ಞಾನವು ಎಂದೂ ವಿನಾಶವಾಗುವುದಿಲ್ಲ. ಶಿವ ತಂದೆಗೆ ಎಲ್ಲರೂ ಮಕ್ಕಳಾಗಿದ್ದಾರೆ. ಈಗ ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿದರೆ ನೀವು ನನ್ನ ಬಳಿ ಮುಕ್ತಿಧಾಮಕ್ಕೆ ಬಂದು ಬಿಡುತ್ತೀರಿ ಮತ್ತೆ ಯಾವ ಜ್ಞಾನವನ್ನು ಕಲಿಸಲಾಗುತ್ತಿದೆಯೋ ಅದನ್ನು ಓದಿದರೆ ಸ್ವರ್ಗದ ರಾಜ್ಯಭಾಗ್ಯವು ಸಿಗುವುದು. ಎಷ್ಟು ಸಹಜವಾಗಿದೆ! ಸ್ವರ್ಗದಲ್ಲಿ ಹೋಗುವ ಮಾರ್ಗವು ಸೆಕೆಂಡಿನಲ್ಲಿ ಸಿಕ್ಕಿ ಬಿಡುತ್ತದೆ. ನಾವಾತ್ಮಗಳು ತಂದೆಯನ್ನೂ ನೆನಪು ಮಾಡುತ್ತೇವೆ. ಯುದ್ಧದ ಮೈದಾನದಲ್ಲಂತೂ ಖುಷಿಯಿಂದ ಹೋಗಬೇಕಾಗಿದೆ. ಕರ್ಮವನ್ನಂತು ಮಾಡಲೇಬೇಕು. ದೇಶ ರಕ್ಷಣೆಗಾಗಿ ಎಲ್ಲವನ್ನೂ ಮಾಡಬೇಕಾಗುತ್ತದೆ. ಸತ್ಯಯುಗದಲ್ಲಂತೂ ಇರುವುದೇ ಒಂದು ಧರ್ಮವಾದ್ದರಿಂದ ಯಾವುದೇ ಮತಭೇದದ ಮಾತಿರುವುದಿಲ್ಲ. ಇಲ್ಲಿ ಎಷ್ಟೊಂದು ಮತಭೇದವಿದೆ! ನೀರಿಗಾಗಿ, ಭೂಮಿಗಾಗಿ ಜಗಳವಾಗುತ್ತದೆ. ನೀರನ್ನು ನಿಲ್ಲಿಸಿ ಬಿಟ್ಟರೆ ಕಲ್ಲನ್ನು ಎಸೆಯ ತೊಡಗುತ್ತಾರೆ. ಒಬ್ಬರು ಇನ್ನೊಬ್ಬರಿಗೆ ದವಸ ಧಾನ್ಯಗಳನ್ನು ಕೊಡಲಿಲ್ಲವೆಂದರೆ ಜಗಳವಾಗಿ ಬಿಡುತ್ತದೆ.

ನಾವು ನಮ್ಮ ಸ್ವರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆ. ವಿದ್ಯೆಯಿಂದ ರಾಜ್ಯವನ್ನು ಪಡೆಯುತ್ತೇವೆಂಬುದನ್ನು ಮಕ್ಕಳು ತಿಳಿದುಕೊಂಡಿದ್ದೀರಿ. ಹೊಸ ಪ್ರಪಂಚವು ಅವಶ್ಯವಾಗಿ ಸ್ಥಾಪನೆಯಾಗಬೇಕು. ನಿಗಧಿಯಾಗಿದೆ ಅಂದಮೇಲೆ ಎಷ್ಟೊಂದು ಖುಷಿಯಿರಬೇಕು! ಯಾವುದೇ ವಸ್ತುವಿಗಾಗಿ ಜಗಳ-ಕಲಹ ಮಾಡುವ ಮಾತೇ ಇಲ್ಲ, ಬಹಳ ಸಾಧಾರಣವಾಗಿರಬೇಕು. ತಂದೆಯು ತಿಳಿಸಿದ್ದಾರೆ - ನೀವು ಮಾವನ ಮನೆಗೆ ಹೋಗುತ್ತೀರಿ ಆದ್ದರಿಂದ ಈಗ ವನವಾಸದಲ್ಲಿದ್ದೀರಿ. ಎಲ್ಲಾ ಆತ್ಮಗಳು ಹೋಗುತ್ತೀರಿ, ಶರೀರಗಳು ಹೋಗುವುದಿಲ್ಲ. ಶರೀರದ ಅಭಿಮಾನವನ್ನು ಬಿಡಬೇಕಾಗಿದೆ. ನಾವಾತ್ಮರಾಗಿದ್ದೇವೆ, 84 ಜನ್ಮಗಳು ಈಗ ಪೂರ್ಣವಾಯಿತು, ಯಾರೆಲ್ಲಾ ಭಾರತವಾಸಿಗಳಿದ್ದಾರೆಯೋ ಎಲ್ಲರಿಗೆ ತಿಳಿಸಿ, ಭಾರತವು ಸ್ವರ್ಗವಾಗಿತ್ತು, ಈಗ ಕಲಿಯುಗವಾಗಿದೆ. ಕಲಿಯುಗದಲ್ಲಿ ಅನೇಕ ಧರ್ಮಗಳಿವೆ, ಸತ್ಯಯುಗದಲ್ಲಿ ಒಂದೇ ಧರ್ಮವಿತ್ತು. ಭಾರತವು ಪುನಃ ಸ್ವರ್ಗವಾಗಬೇಕಾಗಿದೆ. ಭಗವಂತನು ಬಂದಿದ್ದಾರೆಂಬುದನ್ನೂ ತಿಳಿದುಕೊಳ್ಳುತ್ತಾರೆ, ಮುಂದೆ ಹೋದಂತೆ ಭವಿಷ್ಯ ವಾಣಿಯನ್ನು ಮಾಡುತ್ತಿರುತ್ತಾರೆ, ವಾಯುಮಂಡಲವನ್ನು ನೋಡುತ್ತಾರಲ್ಲವೆ. ಆದ್ದರಿಂದ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ತಂದೆಯಂತೂ ಎಲ್ಲರವರಾಗಿದ್ದಾರಲ್ಲವೆ. ಎಲ್ಲರಿಗೆ ಹಕ್ಕಿದೆ, ತಂದೆಯು ತಿಳಿಸುತ್ತಾರೆ - ನಾನು ಬಂದಿದ್ದೇನೆ ಮತ್ತು ಎಲ್ಲರಿಗೆ ಹೇಳುತ್ತೇನೆ, ನನ್ನೊಬ್ಬನನ್ನೇ ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ಯಾವಾಗ ಬೇಕಾದರೂ ಯುದ್ಧವಾಗಬಹುದು ಎಂಬ ಮಾತನ್ನು ಈಗಂತೂ ಮನುಷ್ಯರು ತಿಳಿದುಕೊಳ್ಳುತ್ತಾರೆ. ನಾಳೆಯಾದರೂ ಯುದ್ಧವಾಗಬಹುದು, ಯುದ್ಧವಾಗುವುದರಲ್ಲಿ ತಡವಾಗುವುದಿಲ್ಲ. ಆದರೆ ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ, ನಮ್ಮ ರಾಜಧಾನಿಯು ಇನ್ನೂ ಸ್ಥಾಪನೆಯಾಗಲಿಲ್ಲ ಅಂದಮೇಲೆ ವಿನಾಶವಾಗಲು ಹೇಗೆ ಸಾಧ್ಯ! ನಾವಿನ್ನೂ ತಂದೆಯ ಸಂದೇಶವನ್ನು ನಾಲ್ಕಾರೂ ಕಡೆ ಕೊಟ್ಟಿದ್ದೇವೆ. ಪತಿತ-ಪಾವನ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ. ಈ ಸಂದೇಶವು ಎಲ್ಲರ ಕಿವಿಗಳತನ ತಲುಪಬೇಕು. ಭಲೆ ಯುದ್ಧವಾಗಲಿ, ಬಾಂಬುಗಳೂ ಬೀಳಲಿ ಆದರೆ ನಿಮಗೆ ನಿಶ್ಚಯವಿದೆ - ನಮ್ಮ ರಾಜಧಾನಿಯು ಅವಶ್ಯವಾಗಿ ಆಗಬೇಕಾಗಿದೆ. ಅಲ್ಲಿಯವರೆಗೆ ವಿನಾಶವಾಗಲು ಸಾಧ್ಯವಿಲ್ಲ. ವಿಶ್ವದಲ್ಲಿ ಶಾಂತಿಯು ಬೇಕೆಂದು ಹೇಳುತ್ತಾರಲ್ಲವೆ. ವಿಶ್ವದಲ್ಲಿ ಯುದ್ಧವಾದಾಗ ವಿಶ್ವವನ್ನೇ ಸಮಾಪ್ತಿ ಮಾಡಿ ಬಿಡುತ್ತಾರೆ.

ಇದು ವಿಶ್ವ ವಿದ್ಯಾಲಯವಾಗಿದೆ, ಇಡೀ ವಿಶ್ವಕ್ಕೆ ನೀವು ಜ್ಞಾನವನ್ನು ಕೊಡುತ್ತೀರಿ. ಒಬ್ಬ ತಂದೆಯೇ ಬಂದು ಇಡೀ ವಿಶ್ವವನ್ನು ಪರಿವರ್ತನೆ ಮಾಡುತ್ತಾರೆ, ಮನುಷ್ಯರಾದರೆ ಕಲ್ಪದ ಆಯಸ್ಸನ್ನೇ ಲಕ್ಷಾಂತರ ವರ್ಷಗಳೆಂದು ಹೇಳಿ ಬಿಡುತ್ತಾರೆ. ಆದರೆ ನೀವು ತಿಳಿದುಕೊಂಡಿದ್ದೀರಿ - ಇದರ ಆಯಸ್ಸು ಪೂರ್ಣ 5000 ವರ್ಷಗಳಾಗಿವೆ. ಕ್ರಿಸ್ತನಿಗೆ 3000 ವರ್ಷಗಳ ಹಿಂದೆ ಸ್ವರ್ಗವಿತ್ತೆಂದು ಹೇಳುತ್ತಾರೆ. ಇಸ್ಲಾಮಿ, ಬೌದ್ಧಿ ಮೊದಲಾದವರೆಲ್ಲರ ಲೆಕ್ಕವನ್ನು ತೆಗೆಯುತ್ತಾರೆ, ಅವರಿಗಿಂತ ಮೊದಲು ಮತ್ತ್ಯಾರ ಹೆಸರೂ ಇಲ್ಲ. ನೀವು ಎಲ್ಲರಿಗೆ ತಿಳಿಸಬಲ್ಲಿರಿ ಅಂದಮೇಲೆ ನಿಮಗೆ ಎಷ್ಟು ನಶೆಯಿರಬೇಕು! ಜಗಳ ಇತ್ಯಾದಿಗಳ ಮಾತೇ ಇಲ್ಲ. ಯಾರು ಅನಾಥರಾಗಿರುವರೋ ಅವರೇ ಜಗಳವಾಡುತ್ತಾರೆ. ಮನೆ-ಮನೆಯಲ್ಲಿ ಜಗಳವಾಗುವುದಿಲ್ಲ. ನೀವೀಗ ಮಾಡುವ ಪುರುಷಾರ್ಥದಿಂದ 21 ಜನ್ಮಗಳಿಗಾಗಿ ಪ್ರಾಲಬ್ಧವಾಗುವುದು. ಜಗಳ-ಕಲಹವಾಡಿದರೆ ಶ್ರೇಷ್ಠ ಪದವಿಯೂ ಸಿಗುವುದಿಲ್ಲ, ಶಿಕ್ಷೆಗಳನ್ನನುಭವಿಸಬೇಕಾಗುತ್ತದೆ. ಯಾವುದೇ ಮಾತಿದ್ದರೆ, ಏನು ಬೇಕಾದರೂ ತಂದೆಯ ಬಳಿ ಬನ್ನಿ. ಸರ್ಕಾರವೂ ಸಹ ಹೇಳುವುದು ನಿಮ್ಮ ಕೈಯಲ್ಲಿ ಕಾನೂನು ತೆಗೆದುಕೊಳ್ಳ ಬೇಡಿ ಎಂದು, ಬೇಕಾದರೆ ಪರಿಹಾರವನ್ನು ಕೇಳಿ ಎಂದು ಹೇಳುತ್ತದೆಯಲ್ಲವೆ. ನಮಗೆ ವಿದೇಶದ ಚಪ್ಪಲಿ ಬೇಕೆಂದು ಕೆಲವರು ಕೇಳುತ್ತಾರೆ ಅದಕ್ಕೆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈಗಂತೂ ವನವಾಸದಲ್ಲಿದ್ದೀರಿ, ಸತ್ಯಯುಗದಲ್ಲಿ ನಿಮಗೆ ಬೇಕಾದಷ್ಟು ಸಿಗುವುದು. ಇದು ಸರಿಯಲ್ಲವೆಂದು ತಂದೆಯು ಸರಿಯಾದ ಮಾತನ್ನೇ ತಿಳಿಸುತ್ತಾರಲ್ಲವೆ. ನೀವಿಲ್ಲಿ ಈ ಆಸೆಯನ್ನು ಏಕೆ ಇಟ್ಟುಕೊಳ್ಳುತ್ತೀರಿ. ಇಲ್ಲಂತೂ ಬಹಳ ಸಾಧಾರಣವಾಗಿರಬೇಕು ಇಲ್ಲವೆಂದರೆ ದೇಹಾಭಿಮಾನವು ಬಂದು ಬಿಡುತ್ತದೆ. ಇದರಲ್ಲಿ ತಮ್ಮ ಮತವನ್ನು ನಡೆಸುವುದಲ್ಲ. ತಂದೆಯು ಏನನ್ನು ಹೇಳುವರೋ ಅದರಂತೆಯೇ ನಡೆಯಿರಿ. ಖಾಯಿಲೆ ಇತ್ಯಾದಿಗಳಿದ್ದರೆ ವೈದ್ಯರನ್ನೂ ಕರೆಸುತ್ತಾರೆ. ಔಷದೋಪಚಾರ ಮಾಡಿಸಲಾಗುತ್ತದೆ ಆದರೂ ಪ್ರತಿಯೊಂದು ಮಾತಿನಲ್ಲಿ ತಂದೆಯು ಜವಾಬ್ದಾರನಾಗಿ ಕುಳಿತಿದ್ದಾರೆ. ಶ್ರೀಮತವಂತೂ ಶ್ರೀಮತವಲ್ಲವೆ. ನಿಶ್ಚಯದಲ್ಲಿಯೇ ವಿಜಯವಿದೆ, ತಂದೆಗೆ ಎಲ್ಲವೂ ಗೊತ್ತಿದೆಯಲ್ಲವೆ. ತಂದೆಯ ಮತದಂತೆ ನಡೆಯುವುದರಲ್ಲಿಯೇ ಕಲ್ಯಾಣವಿದೆ. ತಮ್ಮ ಕಲ್ಯಾಣವನ್ನೂ ಮಾಡಿಕೊಳ್ಳಬೇಕಾಗಿದೆ. ಅನ್ಯರನ್ನು ಶ್ರೇಷ್ಠರನ್ನಾಗಿ ಮಾಡಲಿಲ್ಲವೆಂದರೆ ತಾವೇ ಕನಿಷ್ಠರೆಂದರ್ಥ. ಶ್ರೇಷ್ಠರಾಗಲು ಯೋಗ್ಯರಿಲ್ಲ. ಒಂದುವೇಳೆ ಇಲ್ಲಿ ಬೆಲೆಯಿಲ್ಲವೆಂದರೆ ಅಲ್ಲಿಯೂ ಬೆಲೆಯಿಲ್ಲ. ಸೇವಾಧಾರಿ ಮಕ್ಕಳಿಗೆ ಸೇವೆಯ ಬಹಳ ಉಮ್ಮಂಗವಿರುತ್ತದೆ, ತಿರುಗಾಡುತ್ತಿರುತ್ತಾರೆ. ಸೇವೆ ಮಾಡಲಿಲ್ಲವೆಂದರೆ ಅವರಿಗೆ ದಯಾಹೃದಯಿ, ಕಲ್ಯಾಣಕಾರಿಗಳೆಂದು ಹೇಳುವುದಿಲ್ಲ. ತಂದೆಯನ್ನು ನೆನಪು ಮಾಡದಿದ್ದರೆ ತುಚ್ಛ ಕೆಲಸವನ್ನೇ ಮಾಡುತ್ತಿರುತ್ತಾರೆ. ತುಚ್ಛ ಪದವಿಯನ್ನೇ ಪಡೆಯುತ್ತಾರೆ. ನಮಗಂತೂ ಶಿವ ತಂದೆಯ ಜೊತೆ ಸಂಬಂಧವಿದೆಯಂದಲ್ಲ. ಇವರೂ (ಬ್ರಹ್ಮಾ) ಸಹ ಬಿ.ಕೆ. ಆಗಿದ್ದಾರೆ, ಶಿವ ತಂದೆಯು ಬ್ರಹ್ಮಾರವರ ಮೂಲಕವೇ ಜ್ಞಾನವನ್ನು ಕೊಡಲು ಸಾಧ್ಯ. ಕೇವಲ ಶಿವ ತಂದೆಯನ್ನು ನೆನಪು ಮಾಡಿದರೆ ಮುರುಳಿಯನ್ನು ಹೇಗೆ ಕೇಳುವಿರಿ ಮತ್ತೆ ಅದೃಷ್ಟವೇನಾಗುವುದು? ಓದದಿದ್ದರೆ ಏನು ಪದವಿ ಪಡೆಯುವಿರಿ! ಇದೂ ಸಹ ತಿಳಿದಿದೆ ಎಲ್ಲರ ಅದೃಷ್ಟವೂ ಶ್ರೇಷ್ಠವಾಗುವುದಿಲ್ಲ. ಅಲ್ಲಿ ನಂಬರ್ವಾರ್ ಪದವಿಗಳಿರುತ್ತವೆ. ಎಲ್ಲರೂ ಪವಿತ್ರರಾಗಬೇಕಾಗಿದೆ. ಆತ್ಮವು ಪವಿತ್ರವಾಗದ ವಿನಃ ಶಾಂತಿಧಾಮಕ್ಕೆ ಹೋಗಲು ಸಾಧ್ಯವಿಲ್ಲ.

ತಂದೆಯು ತಿಳಿಸುತ್ತಾರೆ - ನೀವು ಎಲ್ಲರಿಗೆ ಈ ಜ್ಞಾನವನ್ನು ತಿಳಿಸುತ್ತಾ ಹೋಗಿ. ಭಲೆ ಯಾರಾದರೂ ಈಗ ಕೇಳದಿರಲೂ ಬಹುದು ಆದರೆ ಮುಂದೆ ಹೋದಂತೆ ಅವಶ್ಯವಾಗಿ ತಿಳಿದುಕೊಳ್ಳುವರು. ಈಗ ಎಷ್ಟಾದರೂ ವಿಘ್ನಗಳು, ಬಿರುಗಾಳಿಗಳು ಬರಲಿ, ಆದರೆ ನೀವು ಹೆದರಬಾರದು. ಏಕೆಂದರೆ ಹೊಸ ಧರ್ಮದ ಸ್ಥಾಪನೆಯಾಗುತ್ತಿದೆಯಲ್ಲವೆ. ನೀವು ಗುಪ್ತ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೀರಿ. ತಂದೆಯು ಸೇವಾಧಾರಿ ಮಕ್ಕಳನ್ನು ನೋಡಿ ಬಹಳ ಖುಷಿ ಪಡುತ್ತಾರೆ. ನೀವು ತಮಗೆ ತಾವೇ ರಾಜತಿಲಕವನ್ನು ಇಟ್ಟುಕೊಳ್ಳಬೇಕಾಗಿದೆ, ಶ್ರೀಮತದಂತೆ ನಡೆಯಬೇಕಾಗಿದೆ. ಇದರಲ್ಲಿ ತನ್ನ ಹಠವು ನಡೆಯುವುದಿಲ್ಲ. ಕೇವಲ ಹಾಗೆಯೇ ತಮಗೆ ಮೋಸಗೊಳಿಸಿಕೊಳ್ಳಬಾರದು. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಸೇವಾಧಾರಿಗಳು ಮತ್ತು ಕಲ್ಯಾಣಕಾರಿಗಳಾಗಿ. ವಿದ್ಯಾರ್ಥಿಗೆ ಚೆನ್ನಾಗಿ ಓದಿ ಮುಂದುವರೆಯಿರಿ ಎಂದು ಶಿಕ್ಷಕರು ಹೇಳುತ್ತಾರಲ್ಲವೆ. ನಿಮಗೆ 21 ಜನ್ಮಗಳಿಗಾಗಿ ಸ್ವರ್ಗದ ಸ್ಕಾಲರ್ಶಿಪ್ ಸಿಗುತ್ತದೆ. ರಾಜಧಾನಿಯಲ್ಲಿ ಬರುವುದೇ ದೊಡ್ಡ ಸ್ಕಾಲರ್ಶಿಪ್ ಆಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈ ಸಂಗಮಯುಗದಲ್ಲಿ ಬಹಳ ಸರಳ, ಸಾಧಾರಣವಾಗಿರಬೇಕಾಗಿದೆ, ಏಕೆಂದರೆ ಇದು ವನವಾಸದಲ್ಲಿರುವ ಸಮಯವಾಗಿದೆ. ಇಲ್ಲಿ ಯಾವುದೇ ಆಸೆಯನ್ನಿಟ್ಟುಕೊಳ್ಳಬಾರದು. ಎಂದೂ ತಮ್ಮ ಕೈಯಲ್ಲಿ ಕಾನೂನನ್ನು ತೆಗೆದುಕೊಳ್ಳಬಾರದು. ಜಗಳ-ಕಲಹ ಮಾಡಬಾರದು.

2. ವಿನಾಶಕ್ಕೆ ಮೊದಲೇ ಹೊಸರಾಜಧಾನಿಯನ್ನು ಸ್ಥಾಪನೆ ಮಾಡಲು ಎಲ್ಲರಿಗೆ ತಂದೆಯ ಸಂದೇಶವನ್ನು ಕೊಡಬೇಕಾಗಿದೆ ತಂದೆಯು ತಿಳಿಸುತ್ತಾರೆ, ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುವವು ಮತ್ತು ನೀವು ಪಾವನರಾಗುವಿರಿ.

ವರದಾನ:
ತಂದೆಯ ಮುಖಾಂತೆರ ಸಫಲತೆಯ ತಿಲಕ ಪ್ರಾಪ್ತಿ ಮಾಡಿಕೊಳ್ಳುವಂತಹ ಸದಾ ಆಜ್ಞಾಕಾರಿ, ಹೃದಯ ಸಿಂಹಾಸನಾಧಿಕಾರಿ ಭವ.

ಭಾಗ್ಯವಿಧಾತ ತಂದೆ ಪ್ರತಿ ದಿನ ಅಮೃತವೇಳೆ ತನ್ನ ಆಜ್ಞಾಕಾರಿ ಮಕ್ಕಳಿಗೆ ಸಫಲತೆಯ ತಿಲಕ ಇಡುತ್ತಾರೆ. ಆಜ್ಞಾಕಾರಿ ಬ್ರಾಹ್ಮಣ ಮಕ್ಕಳು ಎಂದೂ ಪರಿಶ್ರಮ ಹಾಗೂ ಕಷ್ಟದ ಶಬ್ದ ಬಾಯಿಂದ ಅಲ್ಲ ಸಂಕಲ್ಪದಲ್ಲಿಯೂ ಸಹ ತರಲು ಸಾಧ್ಯವಿಲ್ಲ. ಅವರು ಸಹಯೋಗಿಗಳಾಗಿ ಬಿಡುತ್ತಾರೆ. ಆದ್ದರಿಂದ ಎಂದೂ ಸಹ ಹೃದಯ ವಿಧೀರ್ಣರಾಗಬೇಡಿ ಆದರೆ ಸದಾ ಹೃದಯ ಸಿಂಹಾಸನಾಧಿಕಾರಿಗಳಾಗಿ, ದಯಾಹೃದಯಿಗಳಾಗಿ, ಅಹಂಭಾವ ಮತ್ತು ಸಂಶಯ ಭಾವವನ್ನು ಸಮಾಪ್ತಿ ಮಾಡಿ.

ಸ್ಲೋಗನ್:
ವಿಶ್ವ ಪರಿವರ್ತನೆಯ ತಾರೀಖನ್ನು ಯೋಚಿಸಬೇಡಿ. ಸ್ವಯಂನ ಪರಿವರ್ತನೆಯ ಘಳಿಗೆಯನ್ನು ನಿಶ್ಚಿತ ಮಾಡಿ.