16.11.20         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನೀವು ಈ ಆತ್ಮಿಕ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದೀರಿ, ಇಡೀ ವಿಶ್ವಕ್ಕೆ ತಂದೆಯ ಸಂದೇಶ ಕೊಡುವುದು ನಿಮ್ಮ ಕರ್ತವ್ಯವಾಗಿದೆ

ಪ್ರಶ್ನೆ:
ಈಗ ನೀವು ಮಕ್ಕಳು ಡಂಗುರವನ್ನು ಸಾರುತ್ತಾ ಯಾವ ಮಾತನ್ನು ತಿಳಿಸುತ್ತೀರಿ?

ಉತ್ತರ:
ನೀವು ಡಂಗುರ ಸಾರುತ್ತೀರಿ - ಈ ಹೊಸ ದೈವೀ ರಾಜಧಾನಿಯು ಪುನಃ ಸ್ಥಾಪನೆಯಾಗುತ್ತಿದೆ, ಈಗ ಅನೇಕ ಧರ್ಮಗಳ ವಿನಾಶವಾಗಬೇಕಾಗಿದೆ. ನೀವು ಎಲ್ಲರಿಗೆ ತಿಳಿಸುತ್ತೀರಿ - ಎಲ್ಲರೂ ನಿಶ್ಚಿಂತವಾಗಿರಿ, ಇದು ಅಂತರರಾಷ್ಟ್ರೀಯ ಏರುಪೇರು (ಗೊಂದಲ) ಆಗಿದೆ. ಯುದ್ಧವು ಅವಶ್ಯವಾಗಿ ಆಗುವುದು. ಇದರ ನಂತರ ದೈವೀ ರಾಜಧಾನಿಯು ಬರುತ್ತದೆ.

ಓಂ ಶಾಂತಿ.
ಇದು ಆತ್ಮಿಕ ವಿಶ್ವ ವಿದ್ಯಾಲಯವಾಗಿದೆ, ಇಡೀ ವಿಶ್ವದಲ್ಲಿ ಯಾರೆಲ್ಲಾ ಆತ್ಮಗಳಿದ್ದಾರೆ, ವಿಶ್ವ ವಿದ್ಯಾಲಯದಲ್ಲಿ ಆತ್ಮಗಳೇ ಓದುತ್ತೀರಿ. ಯುನಿವರ್ಸ್ ಎಂದರೆ ವಿಶ್ವವೆಂದಾಗಿದೆ. ಈಗ ಕಾಯಿದೆಯನುಸಾರ ಯುನಿವರ್ಸಿಟಿ ಶಬ್ಧವು ನೀವು ಮಕ್ಕಳದಾಗಿದೆ. ಇದು ಆತ್ಮಿಕ ಯುನಿವರ್ಸಿಟಿಯಾಗಿದೆ. ವಾಸ್ತವದಲ್ಲಿ ದೈಹಿಕ ಯುನಿವರ್ಸಿಟಿ ಇರುವುದೇ ಇಲ್ಲ, ಇದೊಂದೇ ಈಶ್ವರೀಯ ಯುನಿವರ್ಸಿಟಿಯಾಗಿದೆ. ಎಲ್ಲಾ ಆತ್ಮಗಳಿಗೆ ಇಲ್ಲಿ ವಿದ್ಯೆಯು ಸಿಗುತ್ತದೆ. ನಿಮ್ಮ ಈ ಸಂದೇಶವು ಯಾವುದಾದರೊಂದು ಪ್ರಕಾರದಲ್ಲಿ ಎಲ್ಲರಿಗೆ ಅವಶ್ಯವಾಗಿ ತಲುಪಬೇಕು. ಸಂದೇಶ ಕೊಡಬೇಕಲ್ಲವೆ ಮತ್ತು ಈ ಸಂದೇಶವು ಬಹಳ ಸರಳವಾಗಿದೆ. ಮಕ್ಕಳಿಗೆ ತಿಳಿದಿದೆ - ಅವರು ನಮ್ಮ ಬೇಹದ್ದಿನ ತಂದೆಯಾಗಿದ್ದಾರೆ. ಅವರನ್ನು ಎಲ್ಲರೂ ನೆನಪು ಮಾಡುತ್ತಾರೆ. ಈ ರೀತಿಯೂ ಹೇಳಬಹುದು - ಅವರು ನಮ್ಮ ಬೇಹದ್ದಿನ ಪ್ರಿಯತಮನಾಗಿದ್ದಾರೆ. ವಿಶ್ವದಲ್ಲಿರುವ ಎಲ್ಲಾ ಜೀವಾತ್ಮರು ಆ ಪ್ರಿಯತಮನನ್ನು ಖಂಡಿತ ನೆನಪು ಮಾಡುತ್ತಾರೆ. ಇಂತಹ ಮಾತುಗಳನ್ನು ಚೆನ್ನಾಗಿ ಧಾರಣೆ ಮಾಡಿಕೊಳ್ಳಬೇಕು. ಯಾರು ಸ್ವಚ್ಛ ಬುದ್ಧಿಯವರಿರುವರೋ ಅವರು ಚೆನ್ನಾಗಿ ಧಾರಣೆ ಮಾಡಿಕೊಳ್ಳುತ್ತಾರೆ. ಇಡೀ ವಿಶ್ವದಲ್ಲಿ ಯಾರೆಲ್ಲಾ ಆತ್ಮರಿದ್ದಾರೆಯೋ ಅವರೆಲ್ಲರಿಗೂ ತಂದೆ ಒಬ್ಬರೇ ಆಗಿದ್ದಾರೆ. ವಿಶ್ವ ವಿದ್ಯಾಲಯದಲ್ಲಿ ಮನುಷ್ಯರೇ ಓದುತ್ತಾರಲ್ಲವೆ. ನೀವು ಮಕ್ಕಳು ಇದನ್ನೂ ತಿಳಿದುಕೊಂಡಿದ್ದೀರಿ - ನಾವೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ, 84 ಲಕ್ಷ ಜನ್ಮಗಳ ಮಾತಿಲ್ಲ. ವಿಶ್ವದಲ್ಲಿ ಯಾರೆಲ್ಲಾ ಆತ್ಮರಿದ್ದಾರೆ ಎಲ್ಲರೂ ಈ ಸಮಯದಲ್ಲಿ ಪತಿತರಾಗಿದ್ದಾರೆ. ಇದು ಛೀ ಛೀ ಪ್ರಪಂಚ, ದುಃಖಧಾಮವಾಗಿದೆ, ಅವರನ್ನು ಸುಖಧಾಮದಲ್ಲಿ ಕರೆದುಕೊಂಡು ಹೋಗುವವರು ಒಬ್ಬರೇ ತಂದೆಯಾಗಿದ್ದಾರೆ. ಅವರಿಗೆ ಮುಕ್ತಿದಾತನೆಂತಲೂ ಹೇಳುತ್ತಾರೆ. ನೀವು ಇಡೀ ವಿಶ್ವದ ಮಾಲೀಕರಾಗುತ್ತೀರಲ್ಲವೆ. ತಂದೆಯು ಎಲ್ಲರಿಗಾಗಿ ಈ ಮಾತನ್ನು ಹೇಳುತ್ತಾರೆ - ಈ ಸಂದೇಶ ಕೊಟ್ಟು ಬನ್ನಿ. ತಂದೆಯನ್ನು ಎಲ್ಲರೂ ನೆನಪು ಮಾಡುತ್ತಾರೆ. ಅವರಿಗೆ ಮುಕ್ತಿದಾತ, ಮಾರ್ಗದರ್ಶಕ, ದಯಾ ಸಾಗರನೆಂತಲೂ ಹೇಳುತ್ತಾರೆ. ಅನೇಕ ಭಾಷೆಗಳಿವೆಯಲ್ಲವೆ. ಎಲ್ಲಾ ಆತ್ಮರು ಒಬ್ಬರನ್ನೇ ಕರೆಯುತ್ತಾರೆ ಅಂದಮೇಲೆ ಅವರೊಬ್ಬರೇ ಇಡೀ ವಿಶ್ವದ ಶಿಕ್ಷಕನಾದರಲ್ಲವೆ! ತಂದೆಯಂತೂ ಆಗಿಯೇ ಇದ್ದಾರೆ ಆದರೆ ಅವರು ನಾವೆಲ್ಲಾ ಆತ್ಮರ ಶಿಕ್ಷಕ, ಸದ್ಗುರು ಎಲ್ಲವೂ ಆಗಿದ್ದಾರೆಂಬುದು ಯಾರಿಗೂ ತಿಳಿದಿಲ್ಲ. ಎಲ್ಲರನ್ನೂ ಇಲ್ಲಿಂದ ಮುಕ್ತಗೊಳಿಸುತ್ತಾರೆ. ಈ ಬೇಹದ್ದಿನ ಮಾರ್ಗದರ್ಶಕನನ್ನು ಕೇವಲ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ನೀವು ಬ್ರಾಹ್ಮಣರ ವಿನಃ ಮತ್ತ್ಯಾರೂ ತಿಳಿದುಕೊಂಡಿಲ್ಲ, ಆತ್ಮವೆಂದರೇನು ಎಂಬುದನ್ನೂ ಸಹ ನೀವು ಅರಿತಿದ್ದೀರಿ. ಆದರೆ ಇಡೀ ಪ್ರಪಂಚ ಅದರಲ್ಲಿಯೂ ವಿಶೇಷವಾಗಿ ಭಾರತದಲ್ಲಿ ಆತ್ಮ ಎಂದರೇನು? ಎಂದು ತಿಳಿದಿರುವ ಮನುಷ್ಯರು ಯಾರೊಬ್ಬರೂ ಇಲ್ಲ. ಭಲೆ ಭೃಕುಟಿಯ ಮಧ್ಯದಲ್ಲಿ ಹೊಳೆಯುತ್ತಿರುವ ಅದ್ಭುತ ನಕ್ಷತ್ರವೆಂದು ಹೇಳುತ್ತಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ಈಗ ನೀವು ತಿಳಿದಿದ್ದೀರಿ - ಆತ್ಮವು ಅವಿನಾಶಿಯಾಗಿದೆ, ಅದೆಂದೂ ಚಿಕ್ಕದು-ದೊಡ್ಡದಾಗುವುದಿಲ್ಲ. ಹೇಗೆ ನೀವಾತ್ಮಗಳಿದ್ದೀರೋ ಹಾಗೆಯೇ ತಂದೆಯೂ ಇದ್ದಾರೆ. ಅವರು ದೊಡ್ಡ ಗಾತ್ರದಲ್ಲಾಗಲಿ ಅಥವಾ ಚಿಕ್ಕ ಗಾತ್ರದಲ್ಲಾಗಲಿ ಇಲ್ಲ. ಅವರೂ ಸಹ ಆತ್ಮನೇ ಆಗಿದ್ದಾರೆ ಆದರೆ ಪರಮ ಆತ್ಮ, ಸುಪ್ರೀಂ ಆಗಿದ್ದಾರೆ. ಅವಶ್ಯವಾಗಿ ಎಲ್ಲಾ ಆತ್ಮರು ಪರಮಧಾಮದ ನಿವಾಸಿಗಳಾಗಿದ್ದೀರಿ, ಇಲ್ಲಿ ಪಾತ್ರವನ್ನಭಿನಯಿಸಲು ಬರುತ್ತೀರಿ ಮತ್ತು ತಮ್ಮ ಪರಮಧಾಮಕ್ಕೆ ಹೋಗಲು ಪ್ರಯತ್ನ ಪಡುತ್ತೀರಿ. ಪರಮಪಿತ ಪರಮಾತ್ಮನನ್ನು ಎಲ್ಲರೂ ನೆನಪು ಮಾಡುತ್ತಾರೆ ಏಕೆಂದರೆ ಆತ್ಮನನ್ನು ಪರಮಪಿತನೇ ಮುಕ್ತಿಯಲ್ಲಿ ಕಳುಹಿಸಿದ್ದರು. ಆದ್ದರಿಂದ ಅವರನ್ನೇ ನೆನಪು ಮಾಡುತ್ತಾರೆ. ಆತ್ಮನೇ ತಮೋಪ್ರಧಾನವಾಗಿದೆ - ಏಕೆ ನೆನಪು ಮಾಡುತ್ತಾರೆ? ಇದೂ ಗೊತ್ತಿಲ್ಲ. ಹೇಗೆ ಚಿಕ್ಕ ಮಕ್ಕಳು ಬಾಬಾ ಎಂದು ಹೇಳುತ್ತಾರಷ್ಟೆ, ಅವರಿಗೆ ಏನೂ ತಿಳಿದಿರುವುದಿಲ್ಲ ಹಾಗೆಯೇ ನೀವೂ ಸಹ ಮಮ್ಮಾ-ಬಾಬಾ ಎಂದು ಹೇಳುತ್ತೀರಿ, ಏನನ್ನೂ ತಿಳಿದುಕೊಂಡಿಲ್ಲ. ಭಾರತದಲ್ಲಿ ಒಂದು ರಾಜ್ಯವಿತ್ತು, ಅದಕ್ಕೆ ದೈವೀ ರಾಜಧಾನಿಯೆಂದು ಹೇಳಲಾಗುತ್ತಿತ್ತು ನಂತರ ಮತ್ತೆಲ್ಲಾ ರಾಜ್ಯಗಳು ಬಂದಿವೆ. ಎಷ್ಟೊಂದು ಮಂದಿಯಾಗಿ ಬಿಟ್ಟಿದ್ದಾರೆ. ಆದ್ದರಿಂದ ಇಷ್ಟೊಂದು ಜಗಳ-ಕಲಹಗಳಾಗುತ್ತವೆ. ಎಲ್ಲೆಲ್ಲಿ ಹೆಚ್ಚು ಮಂದಿ ಬಂದು ಪ್ರವೇಶಿಸಿದ್ದಾರೆಯೋ ಅಲ್ಲಿಂದ ಹೊರ ತೆಗೆಯುವ ಪ್ರಯತ್ನ ಪಡುತ್ತಿರುತ್ತಾರೆ. ಬಹಳಷ್ಟು ಕಲಹಗಳಿವೆ, ಬಹಳ ಅಂಧಕಾರವೂ ಇದೆ. ಸ್ವಲ್ಪ ಮಿತಿಯೂ ಇರಬೇಕಲ್ಲವೆ. ಹೇಗೆ ಪಾತ್ರಧಾರಿಗಳ ಸಂಖ್ಯೆಯು ಪರಿಮಿತವಾಗಿರುತ್ತದೆ. ಇದು ಮಾಡಿ-ಮಾಡಲ್ಪಟ್ಟ ಆಟವಾಗಿದೆ, ಇದರಲ್ಲಿ ಯಾರೆಲ್ಲಾ ಪಾತ್ರಧಾರಿಗಳಿದ್ದಾರೆಯೋ ಅವರಲ್ಲಿ ಹೆಚ್ಚು-ಕಡಿಮೆಯಾಗಲು ಸಾಧ್ಯವಿಲ್ಲ. ಯಾವಾಗ ಎಲ್ಲಾ ಪಾತ್ರಧಾರಿಗಳು ಸ್ಟೇಜಿನ ಮೇಲೆ ಬಂದು ಬಿಡುವರೋ ಆಗ ಅವರು ಹಿಂತಿರುಗಿ ಹೋಗಬೇಕಾಗಿದೆ. ಅಲ್ಲಿಯವರೆಗೆ ಯಾರೆಲ್ಲಾ ಪಾತ್ರಧಾರಿಗಳು ಉಳಿದುಕೊಂಡಿರುವರೋ ಎಲ್ಲರೂ ಬರುತ್ತಾ ಇರುತ್ತಾರೆ. ಭಲೆ ಎಷ್ಟಾದರೂ ನಿಯಂತ್ರಣ ಮಾಡಲು ತಲೆ ಕೆಡಿಸಿಕೊಳ್ಳಲಿ ಆದರೆ ನಿಯಂತ್ರಿಸಲು ಸಾಧ್ಯವಿಲ್ಲ. ಆದ್ದರಿಂದ ತಿಳಿಸಿ, ನಾವು ಬ್ರಹ್ಮಾಕುಮಾರ -ಕುಮಾರಿಯರು ಇಂತಹ ಜನಸಂಖ್ಯಾ ನಿಯಂತ್ರಣ ಮಾಡುತ್ತೇವೆ, ಕೇವಲ 9 ಲಕ್ಷ ಜನ ಮಾತ್ರವೇ ಉಳಿಯುತ್ತದೆ. ನಂತರ ಇಡೀ ಜನಸಂಖ್ಯೆಯೇ ಕಡಿಮೆಯಾಗಿ ಬಿಡುತ್ತದೆ. ನಾವು ತಮಗೆ ಸತ್ಯವನ್ನು ತಿಳಿಸುತ್ತೇವೆ, ಈಗ ಸ್ಥಾಪನೆ ಮಾಡುತ್ತಿದ್ದೇವೆ. ಹೊಸ ಪ್ರಪಂಚ, ಹೊಸ ವೃಕ್ಷವು ಅವಶ್ಯವಾಗಿ ಚಿಕ್ಕದಾಗಿಯೇ ಇರುವುದು. ಇಲ್ಲಂತೂ ಇದನ್ನು ನಿಯಂತ್ರಣಗೊಳಿಸಲು ಸಾಧ್ಯವಿಲ್ಲ ಏಕೆಂದರೆ ತಮೋಪ್ರಧಾನತೆಯು ಹೆಚ್ಚುತ್ತಾ ಹೋಗುತ್ತಿದೆ, ವೃದ್ಧಿಯಾಗುತ್ತಾ ಹೋಗುತ್ತಿದೆ. ಯಾರೆಲ್ಲಾ ಪಾತ್ರಧಾರಿಗಳಿದ್ದಾರೆಯೋ ಎಲ್ಲರೂ ಇಲ್ಲಿಯೇ ಬಂದು ಶರೀರ ಧಾರಣೆ ಮಾಡಿಕೊಳ್ಳುತ್ತಾರೆ. ಈ ಮಾತುಗಳನ್ನು ಯಾರೂ ತಿಳಿದುಕೊಂಡಿಲ್ಲ. ಸೂಕ್ಷ್ಮ ಬುದ್ಧಿಯವರು ತಿಳಿದುಕೊಳ್ಳುತ್ತಾರೆ - ರಾಜಧಾನಿಯಲ್ಲಿ ಎಲ್ಲಾ ಪ್ರಕಾರದ ಪಾತ್ರಧಾರಿಗಳಿರುತ್ತಾರೆ, ಸತ್ಯಯುಗದಲ್ಲಿ ಯಾವ ರಾಜಧಾನಿಯಿತ್ತೋ ಅದು ಈಗ ಸ್ಥಾಪನೆಯಾಗುತ್ತಿದೆ. ಎಲ್ಲರೂ ವರ್ಗಾಯಿತರಾಗುವಿರಿ. ನೀವೀಗ ತಮೋಪ್ರಧಾನರಿಂದ ಸತೋಪ್ರಧಾನ ತರಗತಿಗೆ ವರ್ಗಾಯಿತರಾಗುತ್ತೀರಿ. ಹಳೆಯ ಪ್ರಪಂಚದಿಂದ ಹೊಸ ಪ್ರಪಂಚಕ್ಕೆ ಹೋಗುತ್ತೀರಿ. ನಿಮ್ಮ ವಿದ್ಯೆಯು ಈ ಪ್ರಪಂಚಕ್ಕಾಗಿ ಅಲ್ಲ ಅಂದಾಗ ಈ ರೀತಿಯ ವಿಶ್ವ ವಿದ್ಯಾಲಯವು ಮತ್ತ್ಯಾವುದೂ ಇರಲು ಸಾಧ್ಯವಿಲ್ಲ. ಪರಮಾತ್ಮನೇ ತಿಳಿಸುತ್ತಾರೆ - ನಾನು ನಿಮಗೆ ಅಮರಲೋಕಕ್ಕಾಗಿ ಓದಿಸುತ್ತೇನೆ. ಈ ಮೃತ್ಯುಲೋಕವು ಸಮಾಪ್ತಿಯಾಗಬೇಕಾಗಿದೆ. ಸತ್ಯಯುಗದಲ್ಲಿ ಈ ಲಕ್ಷ್ಮೀ-ನಾರಾಯಣರ ರಾಜಧಾನಿಯಿತ್ತು, ಇದು ಹೇಗೆ ಸ್ಥಾಪನೆಯಾಯಿತು? ಎಂದು ಯಾರಿಗೂ ತಿಳಿದಿಲ್ಲ.

ತಂದೆಯು ಯಾವಾಗಲೂ ಹೇಳುತ್ತಾರೆ ಎಲ್ಲಿಯೇ ನೀವು ಭಾಷಣ ಮಾಡುತ್ತೀರೆಂದರೆ ಈ ಲಕ್ಷ್ಮೀ-ನಾರಾಯಣರ ಚಿತ್ರವನ್ನು ಅವಶ್ಯವಾಗಿ ಇಟ್ಟುಕೊಳ್ಳಿ. ಇದರಲ್ಲಿ ದಿನಾಂಕವು ಅವಶ್ಯವಾಗಿ ಬರೆಯಲ್ಪಟ್ಟಿರಲಿ. ನೀವು ಇದನ್ನು ತಿಳಿಸಿ ಹೊಸ ವಿಶ್ವದ ಆರಂಭದಿಂದ 1250 ವರ್ಷಗಳವರೆಗೆ ಈ ವಂಶಾವಳಿಯ ರಾಜ್ಯವಿತ್ತು. ಹೇಗೆ ಕ್ರಿಶ್ಚಿಯನ್ನರ ರಾಜ್ಯವಿತ್ತೆಂದು ಹೇಳುತ್ತಾರಲ್ಲವೆ. ಒಬ್ಬರು ಇನ್ನೊಬ್ಬರ ಹಿಂದೆ ಬರತೊಡಗುತ್ತಾರೆ ಅಂದಾಗ ಈ ದೇವತಾ ಧರ್ಮವಿದ್ದಾಗ ಮತ್ತ್ಯಾರೂ ಇರಲಿಲ್ಲ. ಈಗ ಮತ್ತೆ ಆ ಧರ್ಮವು ಸ್ಥಾಪನೆಯಾಗುತ್ತಿದೆ, ಉಳಿದೆಲ್ಲದರ ವಿನಾಶವಾಗಬೇಕಾಗಿದೆ. ಯುದ್ಧವು ಸನ್ಮುಖದಲ್ಲಿ ನಿಂತಿದೆ. ಭಾಗವತ ಇತ್ಯಾದಿಗಳಲ್ಲಿ ಇದರ ಮೇಲೆ ಒಂದು ಕಥೆಯನ್ನೂ ಬರೆದಿದ್ದಾರೆ. ಬಾಲ್ಯದಲ್ಲಿ ಈ ಕಥೆಗಳನ್ನು ಕೇಳುತ್ತಿದ್ದೆವು. ನೀವೀಗ ತಿಳಿದುಕೊಂಡಿದ್ದೀರಿ - ಈ ರಾಜಧಾನಿಯು ಹೇಗೆ ಸ್ಥಾಪನೆಯಾಗುತ್ತದೆ, ಅವಶ್ಯವಾಗಿ ತಂದೆಯೇ ರಾಜಯೋಗವನ್ನು ಕಲಿಸಿದ್ದಾರೆ. ಯಾರು ಉತ್ತೀರ್ಣರಾಗುವರೋ ಅವರು ವಿಜಯ ಮಾಲೆಯ ಮಣಿಯಾಗುತ್ತಾರೆ. ಮತ್ತ್ಯಾರೂ ಈ ಮಾಲೆಯನ್ನು ತಿಳಿದುಕೊಂಡಿಲ್ಲ. ನೀವೇ ತಿಳಿದುಕೊಂಡಿದ್ದೀರಿ. ನಿಮ್ಮದು ಪ್ರವೃತ್ತಿ ಮಾರ್ಗವಾಗಿದೆ. ಮೇಲೆ ತಂದೆಯು ನಿಂತಿದ್ದಾರೆ - ಅವರಿಗೆ ತಮ್ಮ ಶರೀರವಿಲ್ಲ ನಂತರ ಬ್ರಹ್ಮ-ಸರಸ್ವತಿಯೇ ಲಕ್ಷ್ಮೀ-ನಾರಾಯಣರಾಗುವರು. ಮೊದಲು ತಂದೆ, ನಂತರ ಜೋಡಿ ಮಣಿಗಳು. ರುದ್ರಾಕ್ಷಿಯ ಮಣಿಗಳಿರುತ್ತವೆಯಲ್ಲವೆ. ನೇಪಾಳದಲ್ಲಿ ಒಂದು ವೃಕ್ಷವಿದೆ, ಅಲ್ಲಿಂದ ಈ ರುದ್ರಾಕ್ಷಿಯ ಮಣಿಗಳು ಬರುತ್ತವೆ. ಅದರಲ್ಲಿ ಅಪ್ಪಟ ರುದ್ರಾಕ್ಷಿ ಮಣಿಗಳೂ ಇರುತ್ತವೆ, ಗಾತ್ರವು ಎಷ್ಟು ಚಿಕ್ಕದೋ ಅಷ್ಟು ಬೆಲೆ ಹೆಚ್ಚು. ನೀವೀಗ ಅರ್ಥವನ್ನು ತಿಳಿದುಕೊಂಡಿದ್ದೀರಿ - ಈ ವಿಷ್ಣುವಿನ ರುದ್ರಮಾಲೆ ಅಥವಾ ರುಂಡಮಾಲೆಯಾಗುತ್ತದೆ. ಅವರಂತೂ ಕೇವಲ ಮಾಲೆಯನ್ನು ಜಪಿಸುತ್ತಾ-ಜಪಿಸುತ್ತಾ ರಾಮ-ರಾಮ ಎನ್ನುತ್ತಿರುತ್ತಾರೆ ಆದರೆ ಅದರ ಅರ್ಥವನ್ನೂ ತಿಳಿದುಕೊಂಡಿಲ್ಲ. ಮಾಲೆಯನ್ನು ಜಪಿಸುತ್ತಾರೆ. ಇಲ್ಲಂತೂ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ, ಇದು ಅಜಪಾಜಪವಾಗಿದೆ. ಬಾಯಿಂದ ಏನನ್ನೂ ಹೇಳುವಂತಿಲ್ಲ. ಗೀತೆಯು ಸ್ಥೂಲವಾಗಿದೆ. ಮಕ್ಕಳು ಕೇವಲ ತಂದೆಯನ್ನೇ ನೆನಪು ಮಾಡಬೇಕಾಗಿದೆ. ಇಲ್ಲದಿದ್ದರೆ ಈ ಹಾಡು ಇತ್ಯಾದಿಗಳು ನೆನಪಿಗೆ ಬರುತ್ತಿರುತ್ತವೆ. ಮೂಲ ಮಾತು ನೆನಪಿನದಾಗಿದೆ. ನೀವು ಶಬ್ಧದಿಂದ ದೂರ ಹೋಗಬೇಕಾಗಿದೆ. ತಂದೆಯ ಆದೇಶವೇ ಆಗಿದೆ - ಮನ್ಮನಾಭವ. ಹಾಡನ್ನು ಹಾಡಿರಿ, ಜೋರಾಗಿ ಮಹಿಮೆ ಮಾಡಿರಿ ಎಂದು ತಂದೆಯು ಹೇಳುವುದಿಲ್ಲ. ನನ್ನ ಮಹಿಮೆ, ಗಾಯನ ಮಾಡುವ ಅವಶ್ಯಕತೆಯೂ ಇಲ್ಲ. ಇದನ್ನಂತೂ ನೀವು ತಿಳಿದುಕೊಂಡಿದ್ದೀರಿ - ತಂದೆಯು ಜ್ಞಾನ ಸಾಗರ, ಸುಖ-ಶಾಂತಿಯ ಸಾಗರನಾಗಿದ್ದಾರೆ, ಮನುಷ್ಯರಿಗೆ ಇದು ಗೊತ್ತಿಲ್ಲ ಕೇವಲ ಹೆಸರನ್ನಿಟ್ಟಿದ್ದಾರೆ. ನಿಮ್ಮ ವಿನಃ ಮತ್ತ್ಯಾರೂ ತಿಳಿದುಕೊಂಡಿಲ್ಲ, ತಂದೆಯೇ ಬಂದು ತಮ್ಮ ನಾಮ, ರೂಪ ಇತ್ಯಾದಿಯನ್ನು ತಿಳಿಸುತ್ತಾರೆ. ನಾನು ಹೇಗಿದ್ದೇನೆ, ನೀವಾತ್ಮಗಳು ಹೇಗಿದ್ದೀರಿ! ಪಾತ್ರ ಮಾಡಲು ನೀವು ಬಹಳ ಪರಿಶ್ರಮ ಪಡುತ್ತೀರಿ. ಅರ್ಧಕಲ್ಪ ಭಕ್ತಿ ಮಾಡುತ್ತೀರಿ. ನಾನಂತೂ ಆ ರೀತಿ ಪಾತ್ರದಲ್ಲಿ ಬರುವುದಿಲ್ಲ, ನಾನು ಸುಖ-ದುಃಖದಿಂದ ಭಿನ್ನನಾಗಿದ್ದೇನೆ. ನೀವು ದುಃಖವನ್ನನುಭವಿಸುತ್ತೀರಿ ಮತ್ತು ಸುಖವನ್ನು ಸತ್ಯಯುಗದಲ್ಲಿ ನೀವೇ ಭೋಗಿಸುತ್ತೀರಿ. ನಿಮ್ಮ ಪಾತ್ರವು ನನಗಿಂತಲೂ ಶ್ರೇಷ್ಠವಾಗಿದೆ. ನಾನಾದರೆ ಅರ್ಧಕಲ್ಪದವರೆಗೆ ಆರಾಮವಾಗಿ ವಾನಪ್ರಸ್ಥದಲ್ಲಿ ಕುಳಿತಿರುತ್ತೇನೆ. ನೀವು ನನ್ನನ್ನು ಕರೆಯುತ್ತಾ ಬರುತ್ತೀರಿ. ನಾನು ಅಲ್ಲಿ ಕುಳಿತು ನಿಮ್ಮ ಕೂಗನ್ನು ಕೇಳಿಸಿಕೊಳ್ಳುತ್ತೇನೆಂದಲ್ಲ. ಈ ಸಮಯದಲ್ಲಿಯೇ ನನ್ನ ಪಾತ್ರವಿದೆ. ಡ್ರಾಮಾದ ಪಾತ್ರವನ್ನು ನಾನು ತಿಳಿದುಕೊಂಡಿದ್ದೇನೆ. ಈಗ ಡ್ರಾಮಾ ಮುಕ್ತಾಯವಾಯಿತು. ನಾನು ಈಗ ಪತಿತರನ್ನು ಪಾವನ ಮಾಡುವ ಪಾತ್ರವನ್ನು ಅಭಿನಯಿಸಬೇಕಾಗಿದೆ, ಮತ್ತ್ಯಾವುದೇ ಮಾತಿಲ್ಲ. ಪರಮಾತ್ಮನು ಸರ್ವಶಕ್ತಿವಂತ ಅಂತರ್ಯಾಮಿಯಾಗಿದ್ದಾರೆಂದು ಮನುಷ್ಯರು ತಿಳಿಯುತ್ತಾರೆ. ಅಂತರ್ಯಾಮಿಯೆಂದರೆ ಎಲ್ಲರ ಹೃದಯವನ್ನು ಹೊಕ್ಕು ಅವರಲ್ಲಿ ಏನೇನು ನಡೆಯುತ್ತದೆ ಎಂಬುದನ್ನು ನೋಡುವವರೆಂದರ್ಥ. ಆದರೆ ತಂದೆಯು ತಿಳಿಸುತ್ತಾರೆ - ಆ ರೀತಿ ಇಲ್ಲ, ಯಾವಾಗ ನೀವು ಸಂಪೂರ್ಣ ತಮೋಪ್ರಧಾನರಾಗಿ ಬಿಡುತ್ತೀರೋ ಆಗ ನಾನು ಸರಿಯಾದ ಸಮಯದಲ್ಲಿ ಬರಬೇಕಾಗುತ್ತದೆ, ಸಾಧಾರಣ ತನುವಿನಲ್ಲಿಯೇ ಬರುತ್ತೇನೆ, ಬಂದು ನಾನು ನೀವು ಮಕ್ಕಳನ್ನು ದುಃಖದಿಂದ ಬಿಡಿಸುತ್ತೇನೆ. ಬ್ರಹ್ಮಾರವರ ಮೂಲಕ ಒಂದು ಧರ್ಮದ ಸ್ಥಾಪನೆ, ಶಂಕರನ ಮೂಲಕ ಅನೇಕ ಧರ್ಮಗಳ ವಿನಾಶ... ಆಹಾಕಾರದ ನಂತರ ಜಯ ಜಯಕಾರಾಗುವುದು. ಎಷ್ಟೊಂದು ಆಹಾಕಾರವಾಗಲಿದೆ. ಆಪತ್ತುಗಳಲ್ಲಿ ಅನೇಕರು ಸಾಯುತ್ತಿರುತ್ತಾರೆ, ಪ್ರಾಕೃತಿಕ ವಿಕೋಪಗಳೂ ಸಹ ಬಹಳ ಸಹಯೋಗಿಯಾಗುತ್ತವೆ, ಇಲ್ಲವೆಂದರೆ ಮನುಷ್ಯರು ಬಹಳ ರೋಗಿ, ದುಃಖಿಯಾಗಿ ಬಿಡುವರು. ತಂದೆಯು ತಿಳಿಸುತ್ತಾರೆ - ಮನುಷ್ಯರು ದುಃಖಿಯಾಗಿ ಉಳಿಯಬಾರದೆಂದು ಪ್ರಾಕೃತಿಕ ವಿಕೋಪಗಳೂ ಸಹ ಇಷ್ಟು ಜೋರಾಗಿ ಬರುತ್ತವೆ, ಅವು ಎಲ್ಲರನ್ನೂ ಸಮಾಪ್ತಿ ಮಾಡಿ ಬಿಡುತ್ತವೆ. ಬಾಂಬುಗಳು ಏನೇನೂ ಇಲ್ಲ, ಪ್ರಾಕೃತಿಕ ವಿಕೋಪಗಳು ಬಹಳ ಸಹಯೋಗ ನೀಡುತ್ತವೆ. ಭೂಕಂಪದಲ್ಲಿ ಅನೇಕರು ಸಮಾಪ್ತಿಯಾಗುತ್ತಾರೆ. ನೀರಿನ ಒಂದೆರಡು ಗುಟುಕು ಬಂದಿತೆಂದರೆ ಸಮಾಪ್ತಿ. ಸಮುದ್ರವು ಉಕ್ಕುತ್ತದೆ. ಧರಣಿಯನ್ನು ನುಂಗಿ ಬಿಡುತ್ತದೆ. 100 ಅಡಿಗಳಷ್ಟು ನೀರು ಉಕ್ಕಿ ಬಂದರೆ ಏನಾಗಿ ಬಿಡುವುದು! ಇದು ಆಹಾಕಾರದ ದೃಶ್ಯವಾಗಿದೆ. ಇಂತಹ ದೃಶ್ಯವನ್ನು ನೋಡಲು ಸಾಹಸಬೇಕು. ಪರಿಶ್ರಮವನ್ನೂ ಪಡಬೇಕು, ನಿರ್ಭಯರಾಗಬೇಕಾಗಿದೆ. ನೀವು ಮಕ್ಕಳಿಗೆ ಅಹಂಕಾರವು ಇರಲೇಬಾರದು. ಆತ್ಮಾಭಿಮಾನಿಯಾಗಿರುವವರು ಬಹಳ ಮಧುರರಾಗಿರುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ನಿರಾಕಾರ ಮತ್ತು ವಿಚಿತ್ರನಾಗಿದ್ದೇನೆ. ಇಲ್ಲಿಗೆ ಸೇವೆ ಮಾಡಲು ಬರುತ್ತೇನೆ. ನನ್ನ ಮಹಿಮೆ ನೋಡಿ ಎಷ್ಟೊಂದು ಮಾಡುತ್ತಾರೆ! ಜ್ಞಾನ ಸಾಗರ...... ಹೇ ತಂದೆಯೇ ಎಂದು ಹೇಳುತ್ತಾರೆ ಮತ್ತು ಪತಿತ ಪ್ರಪಂಚದಲ್ಲಿ ಬನ್ನಿ ಎನ್ನುತ್ತಾರೆ. ನೀವು ನಿಮಂತ್ರಣವನ್ನು ನೋಡಿ ಎಷ್ಟು ಚೆನ್ನಾಗಿ ಕೊಡುತ್ತೀರಿ! ಸ್ವರ್ಗದಲ್ಲಿ ಬಂದು ಸುಖವನ್ನು ನೋಡಿ ಎಂದೂ ಸಹ ಹೇಳುವುದಿಲ್ಲ. ಹೇ ಪತಿತ-ಪಾವನ ನಾವು ಪತಿತರಾಗಿದ್ದೇವೆ, ನಮ್ಮನ್ನು ಪಾವನ ಮಾಡಲು ಬನ್ನಿ ಎಂದು ಹೇಳುತ್ತೀರಿ. ನೋಡಿ, ನಿಮ್ಮ ನಿಮಂತ್ರಣ ಹೇಗಿದೆ! ಒಮ್ಮೆಲೆ ತಮೋಪ್ರಧಾನ, ಪತಿತ ಪ್ರಪಂಚ ಮತ್ತು ಪತಿತ ಶರೀರದಲ್ಲಿ ಕರೆಯುತ್ತಾರೆ. ಭಾರತವಾಸಿಗಳೇ ಬಹಳ ಒಳ್ಳೆಯ ನಿಮಂತ್ರಣ ಕೊಡುತ್ತೀರಿ! ಡ್ರಾಮಾದಲ್ಲಿ ರಹಸ್ಯವೇ ಹೀಗಿದೆ - ಇದು ನನ್ನ (ಬ್ರಹ್ಮಾ) ಬಹಳ ಜನ್ಮಗಳ ಅಂತಿಮ ಜನ್ಮವೆಂದು ಇವರಿಗೂ ತಿಳಿದಿರಲಿಲ್ಲ. ತಂದೆಯು ಪ್ರವೇಶ ಮಾಡಿದ್ದಾರೆ, ಆದ್ದರಿಂದ ತಿಳಿಸುತ್ತಾರೆ - ತಂದೆಯು ಪ್ರತಿಯೊಂದು ಮಾತಿನ ರಹಸ್ಯವನ್ನು ತಿಳಿಸಿದ್ದಾರೆ. ಬ್ರಹ್ಮನೇ ತಂದೆಯ ಪತ್ನಿಯಾಗಬೇಕಾಗಿದೆ. ಸ್ವಯಂ ತಂದೆಯೇ ಹೇಳುತ್ತಾರೆ - ಇವರು ನನ್ನ ಪತ್ನಿಯಾಗಿದ್ದಾರೆ, ನಾನು ಇವರಲ್ಲಿ ಪ್ರವೇಶ ಮಾಡಿ, ಇವರ ಮೂಲಕ ನಿಮ್ಮನ್ನು ನನ್ನವರನ್ನಾಗಿ ಮಾಡಿಕೊಳ್ಳುತ್ತೇನೆ ಅಂದಾಗ ಇವರು ಸತ್ಯ-ಸತ್ಯ ಹಿರಿಯ ತಾಯಿಯಾದರು ಮತ್ತು ಸರಸ್ವತಿಯು ದತ್ತು ತಾಯಿಯಾದರು. ನೀವು ಇವರಿಗೆ ತಂದೆ-ತಾಯಿಯೆಂದು ಹೇಳಬಲ್ಲಿರಿ. ಶಿವ ತಂದೆಗೆ ಕೇವಲ ತಂದೆಯೆಂದೇ ಹೇಳಬಲ್ಲಿರಿ ಮತ್ತು ಇವರು ಬ್ರಹ್ಮಾ ತಂದೆಯಾಗಿದ್ದಾರೆ. ಮಮ್ಮಾರವರು ಗುಪ್ತವಾಗಿದ್ದಾರೆ. ವಾಸ್ತವದಲ್ಲಿ ಬ್ರಹ್ಮಾರವರು ತಾಯಿಯಾಗಿದ್ದಾರೆ ಆದರೆ ಶರೀರವು ಪುರುಷನದಾಗಿದೆ ಅಂದಾಗ ಸಂಭಾಲನೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸರಸ್ವತಿಯವರನ್ನು ದತ್ತು ಮಾಡಿಕೊಳ್ಳಲಾಯಿತು. ಮಾತೇಶ್ವರಿ ಎಂದು ಹೆಸರನ್ನಿಟ್ಟಿದ್ದಾರೆ. ಇವರೇ ಮುಖ್ಯಸ್ಥರಾದರು. ಡ್ರಾಮಾನುಸಾರ ಒಬ್ಬರೇ ಸರಸ್ವತಿಯಾಗಿದ್ದಾರೆ. ಉಳಿದಂತೆ ದುರ್ಗಾ, ಕಾಳಿ ಇತ್ಯಾದಿ., ಅನೇಕ ಹೆಸರುಗಳಿವೆ. ತಂದೆ-ತಾಯಿಯು ಒಬ್ಬರೇ ಇರುತ್ತಾರಲ್ಲವೆ, ನೀವೆಲ್ಲರೂ ಮಕ್ಕಳಾಗಿದ್ದೀರಿ. ಬ್ರಹ್ಮನ ಮಗಳು ಸರಸ್ವತಿಯೆಂದು ಗಾಯನವೂ ಇದೆ, ನೀವು ಬ್ರಹ್ಮಾಕುಮಾರ-ಕುಮಾರಿಯರಲ್ಲವೆ. ನಿಮಗೆ ಬಹಳ ಹೆಸರುಗಳಿವೆ, ಇವೆಲ್ಲಾ ಮಾತುಗಳನ್ನು ನಿಮ್ಮಲ್ಲಿಯೂ ನಂಬರ್ವಾರ್ ತಿಳಿದುಕೊಳ್ಳುತ್ತಾರೆ. ವಿದ್ಯಾಭ್ಯಾಸದಲ್ಲಿಯೂ ನಂಬರ್ವಾರ್ ಇರುತ್ತಾರೆ. ಒಬ್ಬರು ಇನ್ನೊಬ್ಬರಿಗೆ ಹೋಲುವುದಿಲ್ಲ. ಈ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಇದನ್ನು ವಿಸ್ತಾರವಾಗಿ ತಿಳಿದುಕೊಳ್ಳಬೇಕು, ಬಹಳಷ್ಟು ವಿಚಾರಗಳಿವೆ. ಬ್ಯಾರಿಸ್ಟರಿ ಓದುತ್ತಾರೆ ಮತ್ತೆ ಅದರಲ್ಲಿಯೂ ನಂಬರ್ವಾರ್ ಇರುತ್ತಾರೆ. ಕೆಲವರು 2-3 ಲಕ್ಷಗಳನ್ನು ಸಂಪಾದಿಸುತ್ತಾರೆ, ಇನ್ನೂ ಕೆಲವರು ಹರಿದು ಹೋಗಿರುವ ವಸ್ತ್ರಗಳನ್ನೂ ಧರಿಸಿರುತ್ತಾರೆ. ಇಲ್ಲಿಯೂ ಹಾಗೆಯೇ.

ಮಕ್ಕಳಿಗೆ ತಿಳಿಸಲಾಗಿದೆ - ಇದು ವಿಶ್ವಕ್ಕೆ ಸಂಬಂಧಪಟ್ಟ ಗೊಂದಲ (ಸಮಸ್ಯೆ) ವಾಗಿದೆ. ನೀವೀಗ ತಿಳಿಸುತ್ತೀರಿ - ಯುದ್ಧವಂತೂ ಅವಶ್ಯವಾಗಿ ಆಗಿಯೇ ಆಗುವುದು. ಎಲ್ಲರೂ ನಿಶ್ಚಿಂತವಾಗಿರಿ. ಹೊಸ ದೈವೀ ಪ್ರಪಂಚವು ಪುನಃ ಸ್ಥಾಪನೆಯಾಗುತ್ತಿದೆ, ಅನೇಕ ಧರ್ಮಗಳ ವಿನಾಶವಾಗುವುದೆಂದು ನೀವು ಡಂಗುರ ಸಾರುತ್ತೀರಿ. ಎಷ್ಟು ಸ್ಪಷ್ಟವಾಗಿದೆ! ಪ್ರಜಾಪಿತ ಬ್ರಹ್ಮನಿಂದ ಪ್ರಜೆಗಳನ್ನು ರಚಿಸಲಾಗುತ್ತದೆ. ತಂದೆಯು ತಿಳಿಸುತ್ತಾರೆ - ಇವರು ನನ್ನ ಮುಖವಂಶಾವಳಿಯಾಗಿದ್ದಾರೆ. ನೀವು ಮುಖವಂಶಾವಳಿ ಬ್ರಾಹ್ಮಣರಾಗಿದ್ದೀರಿ, ಅವರು ಕುಖವಂಶಾವಳಿ ಬ್ರಾಹ್ಮಣರಾಗಿದ್ದಾರೆ. ಅವರು ಪೂಜಾರಿಗಳು ಮತ್ತು ನೀವೀಗ ಪೂಜ್ಯರಾಗುತ್ತಿದ್ದೀರಿ. ನಾವು ದೇವತಾ, ಪೂಜ್ಯರಾಗುತ್ತಿದ್ದೇವೆಂದು ನಿಮಗೆ ತಿಳಿದಿದೆ. ಈಗ ನಿಮಗೆ ಪ್ರಕಾಶತೆಯ ಕಿರೀಟವಿಲ್ಲ. ಯಾವಾಗ ಆತ್ಮವು ಪವಿತ್ರವಾಗುವುದೋ ಆಗ ಈ ಶರೀರವನ್ನು ಬಿಟ್ಟು ಬಿಡುತ್ತದೆ. ಈ ಶರೀರದಲ್ಲಿಯೇ ನೀವು ಪ್ರಕಾಶತೆಯ ಕಿರೀಟವನ್ನು ತೋರಿಸಲು ಸಾಧ್ಯವಿಲ್ಲ, ಶೋಭಿಸುವುದೂ ಇಲ್ಲ. ಈ ಸಮಯದಲ್ಲಿ ನೀವು ಗಾಯನಯೋಗ್ಯರಾಗಿದ್ದೀರಿ. ಯಾವುದೇ ಆತ್ಮನು ಈಗ ಪವಿತ್ರವಾಗಿಲ್ಲ ಆದ್ದರಿಂದ ಯಾರ ಮೇಲೂ ಈ ಸಮಯದಲ್ಲಿ ಪ್ರಕಾಶತೆಯ ಕಿರೀಟ ಇರುವಂತಿಲ್ಲ, ಅದು ಸತ್ಯಯುಗದಲ್ಲಿಯೇ ಇರುತ್ತದೆ. ಎರಡು ಕಲೆಗಳು ಕಡಿಮೆಯಿರುವವರಿಗೂ ಸಹ ಈ ಕಿರೀಟವನ್ನು ತೋರಿಸುವಂತಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಮ್ಮ ಸ್ಥಿತಿಯನ್ನು ಈ ರೀತಿ ಅಚಲ ಮತ್ತು ನಿರ್ಭಯವನ್ನಾಗಿ ಮಾಡಿಕೊಳ್ಳಬೇಕು ಅದರಿಂದ ಅಂತಿಮ ವಿನಾಶದ ದೃಶ್ಯವನ್ನು ನೋಡುವಂತಿರಬೇಕು. ಆತ್ಮಾಭಿಮಾನಿಯಾಗುವ ಪರಿಶ್ರಮ ಪಡಬೇಕಾಗಿದೆ.

2. ಹೊಸ ರಾಜಧಾನಿಯಲ್ಲಿ ಶ್ರೇಷ್ಠ ಪದವಿಯನ್ನು ಪಡೆಯಲು ವಿದ್ಯೆಯ ಮೇಲೆ ಸಂಪೂರ್ಣ ಗಮನ ಕೊಡಬೇಕಾಗಿದೆ. ತೇರ್ಗಡೆಯಾಗಿ ವಿಜಯ ಮಾಲೆಯ ಮಣಿಗಳಾಗಬೇಕಾಗಿದೆ.

ವರದಾನ:
ನಿರ್ಬಲ, ಹೃದಯ ವಿಧೀರ್ಣ, ಅಸಮರ್ಥ ಆತ್ಮಗಳಿಗೆ ಎಕ್ಸ್ಟ್ರಾ (ಹೆಚ್ಚಿನ) ಬಲ ತುಂಬುವಂತಹ ಆತ್ಮೀಯ ದಯಾಹೃದಯಿ ಭವ.

ಯಾರು ಆತ್ಮೀಯ ದಯಾಹೃದಯಿ ಮಕ್ಕಳಿದ್ದಾರೆ - ಅವರು ಮಹಾದಾನಿಯಾಗಿ ಪೂರ್ತಿ ಹತಾಶರಾಗಿರುವವರ ಕೇಸ್ನಲ್ಲಿಯೂ ಭರವಸೆಯನ್ನು ತುಂಬುತ್ತಾರೆ. ನಿರ್ಬಲರನ್ನು ಬಲಶಾಲಿಯನ್ನಾಗಿ ಮಾಡಿ ಬಿಡುತ್ತಾರೆ. ದಾನವನ್ನು ಸದಾ ಬಡವರಿಗೆ, ನಿರ್ಗತಿಕರಿಗೆ ಕೊಡಲಾಗುವುದು. ಆದ್ದರಿಂದ ಯಾರು ನಿರ್ಬಲ, ಹೃದಯ ವಿಧೀರ್ಣ, ಅಸಮರ್ಥ ಪ್ರಜಾ ಕ್ವಾಲಿಟಿಯ ಆತ್ಮರಿರುತ್ತಾರೆ ಅವರ ಪ್ರತಿ ಆತ್ಮೀಯ ದಯಾಹೃದಯಿಗಳಾಗಿ, ಮಹಾದಾನಿಗಳಾಗಿ. ಪರಸ್ಪರರಲ್ಲಿ ಒಬ್ಬರು ಇನ್ನೊಬ್ಬರ ಪ್ರತಿ ಮಹಾದಾನಿಗಳಲ್ಲ. ಅವರಂತೂ ಸಹಯೋಗಿ ಜೊತೆಗಾರರು, ಸಹೋದರ-ಸಹೋದರರು, ನಮ್ಮ ತರಹ ಪುರುಷಾರ್ಥಿಗಳಾಗಿದ್ದಾರೆ, ಸಹಯೋಗ ಕೊಡಿ ಆದರೆ ದಾನವಲ್ಲ.

ಸ್ಲೋಗನ್:
ಸದಾ ಒಬ್ಬ ತಂದೆಯ ಶ್ರೇಷ್ಠ ಸಂಗದಲ್ಲಿದ್ದರೆ ಬೇರೆ ಯಾರದೇ ಸಂಗದ ರಂಗು ಫ್ರಭಾವ ಬೀರಲು ಸಾಧ್ಯವಿಲ್ಲ.