16.11.23         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಭಾರತವು ವಜ್ರ ಸಮಾನವಾಗಿತ್ತು, ಪತಿತವಾದ ಕಾರಣ ಕಂಗಾಲಾಗಿದೆ, ಇದನ್ನು ಮತ್ತೆ ಪಾವನ, ವಜ್ರ ಸಮಾನ ಮಾಡಬೇಕು, ಮಧುರ ದೈವೀ ವೃಕ್ಷದ ಕಸಿ ಮಾಡಬೇಕಾಗಿದೆ”

ಪ್ರಶ್ನೆ:
ತಂದೆಯ ಕರ್ತವ್ಯವೇನಾಗಿದೆ, ಆ ಕರ್ತವ್ಯದಲ್ಲಿ ಮಕ್ಕಳು ಸಹಯೋಗಿಗಳಾಗಬೇಕು?

ಉತ್ತರ:
ಇಡೀ ಜಗತ್ತಿನಲ್ಲಿ ಒಂದೇ ದೈವೀ ರಾಜ್ಯವನ್ನು ಸ್ಥಾಪನೆ ಮಾಡುವುದು, ಅನೇಕ ಧರ್ಮಗಳ ವಿನಾಶ - ಒಂದು ಸತ್ಯಧರ್ಮದ ಸ್ಥಾಪನೆ ಮಾಡುವುದು ತಂದೆಯ ಕರ್ತವ್ಯವಾಗಿದೆ. ನೀವು ಮಕ್ಕಳು ಈ ಕಾರ್ಯದಲ್ಲಿ ಸಹಯೋಗಿಗಳಾಗಬೇಕು. ಶ್ರೇಷ್ಠ ಪದವಿಯನ್ನು ಪಡೆಯುವ ಪುರುಷಾರ್ಥ ಮಾಡಬೇಕು. ನಾವು ಸ್ವರ್ಗದಲ್ಲಂತೂ ಹೋಗುತ್ತೇವೆಂದು ಯೋಚಿಸಬಾರದು.

ಗೀತೆ:
ತಾಯಿಯೂ ನೀವೇ, ತಂದೆಯೂ ನೀವೇ....................

ಓಂ ಶಾಂತಿ.
ಪ್ರಪಂಚದ ಮನುಷ್ಯರು ನೀವು ತಾಯಿ-ತಂದೆಯೆಂದು ಹಾಡುತ್ತಾರೆ ಆದರೆ ಯಾರಿಗಾಗಿ ಹಾಡುತ್ತಾರೆ? ಇದನ್ನು ತಿಳಿದುಕೊಂಡಿಲ್ಲ. ಇದೂ ಸಹ ವಿಚಿತ್ರ ಮಾತಾಗಿದೆ. ಕೇವಲ ಹೇಳುವುದಷ್ಟೆ ಹೇಳುತ್ತಾರೆ. ಆದರೆ ಮಕ್ಕಳ ಬುದ್ಧಿಯಲ್ಲಿ ನಮ್ಮ ತಾಯಿ-ತಂದೆ ಯಾರಾಗಿದ್ದಾರೆಂದು ತಿಳಿದಿದೆ. ಅವರು ಪರಮಧಾಮದಲ್ಲಿ ಇರುವವರಾಗಿದ್ದಾರೆ. ಪರಮಧಾಮವು ಒಂದೇ ಆಗಿದೆ. ಸತ್ಯಯುಗವನ್ನು ಪರಮಧಾಮವೆಂದು ಕರೆಯುವುದಿಲ್ಲ. ಸತ್ಯಯುಗವು ಇಲ್ಲಿಯೇ ಇರುತ್ತದೆ, ಪರಮಧಾಮದಲ್ಲಿ ನಾವೆಲ್ಲರೂ ಇರುತ್ತೇವೆ. ನಿಮಗೆ ಗೊತ್ತಿದೆ, ನಾವು ಆತ್ಮಗಳು ಪರಮಧಾಮ, ನಿರ್ವಾಣದೇಶದಿಂದ ಈ ಸಾಕಾರಸೃಷ್ಟಿಗೆ ಬರುತ್ತೇವೆ. ಸ್ವರ್ಗವು ಮೇಲೇನಿಲ್ಲ. ನೀವೂ ಸಹ ಪರಮಧಾಮದಿಂದ ಬರುತ್ತೀರಿ. ನಾವಾತ್ಮಗಳು ಈ ಶರೀರದ ಮೂಲಕ ಪಾತ್ರ ಮಾಡುತ್ತಿದ್ದೇವೆಂದು ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಎಷ್ಟು ಜನ್ಮವನ್ನು ತೆಗೆದುಕೊಳ್ಳುತ್ತೇವೆ, ಹೇಗೆ ಪಾತ್ರವನ್ನು ಅಭಿನಯಿಸುತ್ತೇವೆಂದು ಈಗ ತಿಳಿದುಕೊಂಡಿದ್ದೀರಿ. ಅವರು ದೂರದೇಶದಲ್ಲಿ ಇರುವವರು ಪರದೇಶದಲ್ಲಿ ಬಂದಿದ್ದಾರೆ. ಈಗ ಪರದೇಶವೆಂದು ಏಕೆ ಹೇಳಲಾಗುತ್ತದೆ? ನೀವು ಭಾರತದಲ್ಲಿ ಬರುತ್ತೀರಲ್ಲವೆ ಆದರೆ ಮೊಟ್ಟಮೊದಲು ನೀವು ತಂದೆಯು ಸ್ಥಾಪಿಸಿರುವ ಸ್ವರ್ಗದಲ್ಲಿ ಬರುತ್ತೀರಿ. ಅಮೇಲೆ ಅದೇ ನರಕ ರಾವಣರಾಜ್ಯವಾಗಿಬಿಡುತ್ತದೆ. ಅನೇಕ ಧರ್ಮ, ಅನೇಕ ಸರ್ಕಾರಗಳಾಗಿಬಿಡುತ್ತವೆ ನಂತರ ತಂದೆಯು ಬಂದು ಒಂದೇ ರಾಜ್ಯವನ್ನಾಗಿ ಮಾಡುತ್ತಾರೆ. ಈಗಂತೂ ಅನೇಕ ಸರ್ಕಾರಗಳಿವೆ. ನಾವೆಲ್ಲರೂ ಸೇರಿ ಒಂದಾಗಬೇಕು ಎಂದು ಹೇಳುತ್ತಾರೆ ಆದರೆ ಎಲ್ಲರೂ ಒಂದಾಗಲು ಹೇಗೆ ಸಾಧ್ಯ? 5000 ವರ್ಷದ ಹಿಂದೆ ಭಾರತದಲ್ಲಿ ಒಂದೇ ಸರ್ಕಾರವಿತ್ತು, ವಿಶ್ವದ ಶಕ್ತಿವಂತ ಮಹಾರಾಜ-ಮಹಾರಾಣಿಯಾಗಿದ್ದರು. ವಿಶ್ವದಲ್ಲಿ ರಾಜ್ಯ ಮಾಡುವಂತಹ ಬೇರೆ ಯಾವ ಶಕ್ತಿಯೂ ಇರಲಿಲ್ಲ. ಆದರೆ ಈಗ ಎಲ್ಲಾ ಧರ್ಮಗಳು ಒಂದೇ ಧರ್ಮದಲ್ಲಿ ಬರಲು ಸಾಧ್ಯವಿಲ್ಲ. ಸ್ವರ್ಗದಲ್ಲಿ ಒಂದೇ ಸರ್ಕಾರವಿತ್ತು ಆದುದರಿಂದ ನಾವೆಲ್ಲರೂ ಒಂದಾಗಬೇಕು ಎಂದು ಹೇಳುತ್ತಾರೆ. ಈಗ ತಂದೆಯು ಹೇಳುತ್ತಾರೆ. ಈಗ ನಾವು ಅನೇಕ ಸರ್ಕಾರಗಳನ್ನು ವಿನಾಶ ಮಾಡಿ ಒಂದೇ ಆದಿಸನಾತನ ದೈವೀ ಸರ್ಕಾರವನ್ನು ಸ್ಥಾಪನೆ ಮಾಡುತ್ತಿದ್ದೇವೆ. ನೀವೂ ಸಹ ಹಾಗೆಯೇ ಹೇಳುತ್ತೀರಲ್ಲವೆ - ಸರ್ವಶಕ್ತಿವಂತನ ಆದೇಶಕ್ಕನುಸಾರವಾಗಿ ನಾವು ಭಾರತದಲ್ಲಿ ಒಂದೇ ದೈವೀ ಸರ್ಕಾರವುಳ್ಳ ರಾಜ್ಯಸ್ಥಾಪನೆ ಮಾಡುತ್ತಿದ್ದೇವೆ. ದೈವೀ ಸರ್ಕಾರದ ವಿನಃ ಬೇರೆಲ್ಲೂ ಒಂದು ಸರ್ಕಾರವಿರಲು ಸಾಧ್ಯವಿಲ್ಲ. 5000 ವರ್ಷಗಳ ಹಿಂದೆ ಭಾರತದಲ್ಲಿ ಅಥವಾ ಇಡೀ ವಿಶ್ವದಲ್ಲಿ ಒಂದೇ ದೈವೀ ಸರ್ಕಾರವಿತ್ತು. ಈಗ ತಂದೆಯು ಮತ್ತೆ ವಿಶ್ವದಲ್ಲಿ ಒಂದೇ ದೈವೀ ಸರ್ಕಾರವನ್ನು ಸ್ಥಾಪನೆ ಮಾಡಲು ಬಂದಿದ್ದಾರೆ. ನಾವು ಮಕ್ಕಳು ಅವರಿಗೆ ಸಹಯೋಗಿಗಳಾಗಿದ್ದೇವೆ. ಈ ರಹಸ್ಯವು ಗೀತೆಯಲ್ಲಿದೆ. ಇದು ರುದ್ರ ಜ್ಞಾನ ಯಜ್ಞವಾಗಿದೆ. ರುದ್ರನೆಂದು ನಿರಾಕಾರನಿಗೆ ಹೇಳಲಾಗುತ್ತದೆ ಕೃಷ್ಣನಿಗಲ್ಲ. ರುದ್ರನ ಹೆಸರೇ ನಿರಾಕಾರನದಾಗಿದೆ. ಬಹಳ ಹೆಸರುಗಳನ್ನು ಕೇಳಿರುವ ಕಾರಣ ಮನುಷ್ಯರು ರುದ್ರ ಎಂದರೆ ಬೇರೆ ಹಾಗೂ ಸೋಮನಾಥನೆಂದರೆ ಬೇರೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಈಗ ಒಂದೇ ದೈವೀ ಸರ್ಕಾರ ಸ್ಥಾಪನೆಯಾಗುತ್ತದೆ. ಕೇವಲ ನಾವು ಸ್ವರ್ಗದಲ್ಲಿ ಬರುತ್ತೇವೆಂದು ಖುಷಿಪಡಬಾರದು. ನರಕದಲ್ಲಿಯೂ ನೋಡಿ - ಪದವಿಗಾಗಿ ಎಷ್ಟೊಂದು ಕಷ್ಟಪಡುತ್ತಾರೆ. ಒಂದು ಪದವಿ ಸಿಗುತ್ತದೆ, ಮತ್ತೆ ತುಂಬಾ ಸಂಪಾದನೆ ಮಾಡುತ್ತಾರೆ. ಭಕ್ತರಿಗಾಗಿ ಒಬ್ಬರೇ ಭಗವಂತನಿರಬೇಕಾಗುತ್ತದೆ, ಇಲ್ಲವಾದರೆ ಅಲೆದಾಡುತ್ತಾರೆ. ಇಲ್ಲಿ ಎಲ್ಲರಿಗೂ ಭಗವಂತನೆಂದು ಹೇಳಿಬಿಡುತ್ತಾರೆ. ಅನೇಕರಿಗೆ ಭಗವಂತನ ಅವತಾರವೆಂದು ಮಾನ್ಯತೆ ನೀಡುತ್ತಾರೆ. ಆದರೆ ತಂದೆಯು ಒಮ್ಮೆ ಮಾತ್ರವೇ ಬರುತ್ತೇನೆಂದು ಹೇಳುತ್ತಾರೆ. ಪತಿತ ಪಾವನ ಬಾ ಎಂದೂ ಸಹ ಹಾಡುತ್ತಾರೆ. ಇಡೀ ಜಗತ್ತು ಪತಿತವಾಗಿದೆ, ಅದರಲ್ಲಿಯೂ ಭಾರತ ಹೆಚ್ಚು ಪತಿತವಾಗಿದೆ, ಭಾರತವೇ ಕಂಗಾಲಾಗಿದೆ, ಭಾರತವೇ ವಜ್ರಸಮಾನವಾಗಿತ್ತು. ನಿಮಗೆ ಈಗ ಹೊಸ ಪ್ರಪಂಚದಲ್ಲಿ ಇಂತಹ ರಾಜ್ಯವು ಸಿಗುತ್ತದೆ ಆದುದರಿಂದ ತಂದೆಯು ತಿಳಿಸುತ್ತಾರೆ - ಕೃಷ್ಣನಿಗೆ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಜನನ-ಮರಣರಹಿತನಾದ ಒಬ್ಬ ಪರಮಪಿತ ಪರಮಾತ್ಮನಿಗೆ ಮಾತ್ರ ಹೇಳಲಾಗುವುದು. ಆದರೆ ಮನುಷ್ಯರು ಅವರೂ ಭಗವಂತ, ನಾವೂ ಭಗವಂತ ಆಗಿದ್ದೇವೆ, ನಾವು ಇಲ್ಲಿಗೆ ಮಜಾ ಮಾಡಲು ಬಂದಿದ್ದೇವೆ ಎಂದು ಹೇಳುತ್ತಾರೆ. ಈ ರೀತಿ ಬಹಳ ನಶೆ (ಮಸ್ತಿ) ಯಲ್ಲಿರುತ್ತಾರೆ. ಎಲ್ಲಿ ನೋಡಿದರೂ ಭಗವಂತನೇ ಭಗವಂತ ಕಾಣುತ್ತಾರೆ. ಎಲ್ಲವೂ ಭಗವಂತನ ಸ್ವರೂಪವೇ ಆಗಿದೆ. ನಾವೇ ನೀವು, ನೀವೇ ನಾವು ಎಂದು ನೃತ್ಯ ಮಾಡತೊಡಗುತ್ತಾರೆ. ಸಾವಿರಾರು ಮಂದಿ ಇಂತಹವರಿಗೆ ಅನುಯಾಯಿಗಳಿದ್ದಾರೆ. ತಂದೆಯು ಹೇಳುತ್ತಾರೆ - ಭಕ್ತರು ಭಗವಂತನ ಭಕ್ತಿ ಮಾಡುತ್ತಿರುತ್ತಾರೆ. ಭಕ್ತಿಯಲ್ಲಿ ಭಾವನೆಯಿಂದ ಪೂಜೆ ಮಾಡುತ್ತಿರುತ್ತಾರೆ. ಆಗ ನಾನು ಅವರಿಗೆ ಸಾಕ್ಷಾತ್ಕಾರ ಮಾಡಿಸುತ್ತೇನೆ ಎಂದು ಹೇಳುತ್ತಾರೆ ಆದರೆ ಅವರು ನನ್ನ ಜೊತೆ ಮಿಲನ ಮಾಡಲು ಸಾಧ್ಯವಿಲ್ಲ. ನಾನು ಸ್ವರ್ಗದ ರಚೈತನಾಗಿದ್ದೇನೆ, ಅವರಿಗೂ ನಾನು ಸ್ವರ್ಗದ ಆಸ್ತಿಯನ್ನು ಕೊಡುತ್ತೇನೆಂದು ತಿಳಿಯಬಾರದು. ಭಗವಂತ ಒಬ್ಬರೇ ಆಗಿದ್ದಾರೆ, ಎಲ್ಲರೂ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ನಿಸ್ಸಹಾಯಕರಾಗಿಬಿಟ್ಟಿದ್ದಾರೆಂದು ತಂದೆಯು ಹೇಳುತ್ತಾರೆ. ಈಗ ನಾನು ಪರಮಧಾಮದಿಂದ ಬಂದಿದ್ದೇನೆ. ನಾನು ಯಾವ ಸ್ವರ್ಗದ ಸ್ಥಾಪನೆಯನ್ನು ಮಾಡುತ್ತೇನೆಯೋ ಆ ಸ್ವರ್ಗದಲ್ಲಿ ನಾನು ಬರುವುದಿಲ್ಲ. ಬಹಳ ಮನುಷ್ಯರು ನಾವು ನಿಷ್ಕಾಮ ಸೇವೆಯನ್ನು ಮಾಡುತ್ತೇವೆಂದು ಹೇಳುತ್ತಾರೆ ಆದರೆ ಸೇವೆಯ ಫಲವನ್ನು ಬಯಸಲಿ ಅಥವಾ ಬಯಸದಿರಲಿ ಆದರೆ ಅವಶ್ಯವಾಗಿ ಅದರ ಪ್ರತಿಫಲವು ಸಿಗುತ್ತದೆ. ದಾನ ಮಾಡುವವರಿಗೆ ಅವಶ್ಯವಾಗಿ ಫಲವು ಸಿಗುತ್ತದೆಯಲ್ಲವೆ. ಈಗ ನೀವು ಶ್ರೀಮಂತರಾಗಿದ್ದೀರೆಂದರೆ ಹಿಂದಿನ ಜನ್ಮದಲ್ಲಿ ದಾನ, ಪುಣ್ಯ ಮಾಡಿದ್ದೀರಿ. ಈಗ ನೀವು ಪುರುಷಾರ್ಥ ಮಾಡುತ್ತಿದ್ದೀರಿ. ಈಗ ಎಷ್ಟು ಪುರುಷಾರ್ಥ ಮಾಡುತ್ತೀರಿ ಅಷ್ಟು ಭವಿಷ್ಯದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಈಗ ಭವಿಷ್ಯದ ಜನ್ಮ-ಜನ್ಮಾಂತರಕ್ಕಾಗಿ ಉತ್ತಮ ಕರ್ಮವನ್ನು ಕಲಿಸಲಾಗುತ್ತಿದೆ. ಈ ಜನ್ಮದಲ್ಲಿ ಮನುಷ್ಯರು ಮುಂದಿನ ಜನ್ಮಕ್ಕಾಗಿ ಮಾಡುತ್ತಾರೆ ನಂತರ ಅದನ್ನು ಇದು ಹಿಂದಿನ ಜನ್ಮಗಳ ಫಲವೆಂದು ಹೇಳುತ್ತಾರೆ ಆದರೆ ಸತ್ಯ-ತ್ರೇತಾಯುಗದಲ್ಲಿ ಈ ರೀತಿ ಹೇಳುವುದಿಲ್ಲ. 21 ಜನ್ಮಗಳ ಕರ್ಮದ ಫಲವನ್ನು ಈಗ ತಯಾರು ಮಾಡಲಾಗುತ್ತದೆ. ಸಂಗಮಯುಗದ ಪುರುಷಾರ್ಥವೇ 21 ಪೀಳಿಗೆಯವರೆಗೂ ಪ್ರಾಲಬ್ಧವಾಗಿ ನಡೆಯುತ್ತದೆ. ಸನ್ಯಾಸಿಗಳೂ ಎಂದಿಗೂ ನಿಮ್ಮ ಪ್ರಾಲಬ್ಧವನ್ನು 21 ಜನ್ಮಗಳಿಗೆ ಸುಖಿಯನ್ನಾಗಿ ಮಾಡುತ್ತೇವೆಂದು ಹೇಳುವುದಿಲ್ಲ. ಅವರು ಭಗವಂತನೇ ಉತ್ತಮ ಹಾಗೂ ಕನಿಷ್ಠ ಫಲವನ್ನು ಕೊಡುತ್ತಾರೆಂದು ಹೇಳಿಬಿಡುತ್ತಾರೆ ಮತ್ತೆ ಕಲ್ಪದ ಆಯಸ್ಸನ್ನು ಧೀರ್ಘಾಯಸ್ಸನ್ನಾಗಿ ಮಾಡಿರುವುದು ತಪ್ಪಾಯಿತು. ಬಹಳಷ್ಟು ಮಂದಿ 5000 ವರ್ಷವು ಕಲ್ಪದ ಆಯಸ್ಸಾಗಿದೆ ಎಂದು ಹೇಳುತ್ತಾರೆ. ನಿಮ್ಮ ಬಳಿ ಮುಸಲ್ಮಾನ ಭಾಂದವರು ಬಂದಾಗ ಅವರು ಕಲ್ಪದ ಆಯಸ್ಸನ್ನು 5000 ವರ್ಷಗಳೆಂದು ಹೇಳಿದ್ದರು. ಭಹುಶಃ ಇಲ್ಲಿಯ ಮಾತುಗಳನ್ನು ಕೇಳಿರಬೇಕು. ಚಿತ್ರಗಳಂತೂ ಎಲ್ಲರ ಬಳಿ ಕಳುಹಿಸಲಾಗುತ್ತದೆ ಆದರೂ ಎಲ್ಲರೂ ಒಪ್ಪಿಕೊಳ್ಳುತ್ತಾರೇನು! ಇದು ರುದ್ರ ಜ್ಞಾನಯಜ್ಞವಾಗಿದೆ, ಇದರಿಂದ ವಿನಾಶಜ್ವಾಲೆ ಪ್ರಜ್ವಲವಾಗುತ್ತದೆ ಎಂದು ನೀವು ತಿಳಿದುಕೊಂಡಿದ್ದೀರಿ. ಇದರಲ್ಲಿ ಸಹಜ ರಾಜಯೋಗವನ್ನು ಕಲಿಸಲಾಗುತ್ತದೆ. ಕೃಷ್ಣನ ಆತ್ಮ ಈ ಅಂತಿಮ ಜನ್ಮದಲ್ಲಿ ಶಿವ (ರುದ್ರ) ನಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದಾರೆ, ಅವರು ಇಲ್ಲಿಯೇ ಕುಳಿತಿದ್ದಾರೆ. ತಂದೆಯೇ ಬೇರೆಯಾಗಿದ್ದಾರೆ ಇವರು ಬೇರೆಯಾಗಿದ್ದಾರೆ. ಬ್ರಾಹ್ಮಣರು ಆತ್ಮನಿಗೆ ತಿನ್ನಿಸುವ ಸಲುವಾಗಿ ಆತ್ಮನನ್ನು ಕರೆಸುತ್ತಾರೆ. ನಂತರ ಆ ಆತ್ಮ ಬ್ರಾಹ್ಮಣನಲ್ಲಿ ಬಂದು ಮಾತನಾಡುತ್ತದೆ. ತೀರ್ಥಸ್ಥಾನಗಳಲ್ಲಿ ವಿಶೇಷವಾಗಿ ಆತ್ಮನನ್ನು ಕರೆಸುತ್ತಾರೆ. ಈಗ ಆತ್ಮ ಅಷ್ಟೊಂದು ಸಮಯವಾದ ನಂತರ ಹೇಗೆ ಬರುತ್ತದೆ? ಏನಾಗುತ್ತದೆ? ನಾನು ಇಂತಹ ಮನೆಯಲ್ಲಿ ಜನ್ಮ ಪಡೆದಿದ್ದೇನೆ, ನಾನು ಬಹಳ ಸುಖಿಯಾಗಿದ್ದೇನೆ ಎಂದು ಮಾತನಾಡುತ್ತದೆ. ಅಲ್ಲಿಂದ ಆತ್ಮವು ಬಿಟ್ಟುಬರುತ್ತದೆಯೇನು? ನಾನು ಭಾವನೆಗೆ ಫಲವನ್ನು ಕೊಡುತ್ತೇನೆ, ಅವರು ಖುಷಿಯಾಗಿಬಿಡುತ್ತಾರೆ ಎಂದು ತಂದೆಯು ತಿಳಿಸುತ್ತಾರೆ. ಈ ರಹಸ್ಯವು ನಾಟಕದಲ್ಲಿದೆ. ಮಾತನಾಡುವವರಿಗೆ ಅಂತಹ ಪಾತ್ರವಿರುತ್ತದೆ, ಕೆಲವರು ಮಾತನಾಡುವುದೇ ಇಲ್ಲ ಅಂದಾಗ ನಾಟಕದಲ್ಲಿ ಇರುವುದಿಲ್ಲ. ತಂದೆಯ ನೆನಪಿನಲ್ಲಿದ್ದಾಗ ವಿಕರ್ಮ ವಿನಾಶವಾಗುತ್ತದೆಯೇ ವಿನಃ ಬೇರೆ ಯಾವುದೇ ಉಪಾಯವಿಲ್ಲ. ಪ್ರತಿಯೊಬ್ಬರೂ ಸತೋ, ರಜೋ, ತಮೋನಲ್ಲಿ ಬರಲೇಬೇಕು. ನಾನು ನಿಮ್ಮನ್ನು ಹೊಸಪ್ರಪಂಚದ ಮಾಲಿಕನನ್ನಾಗಿ ಮಾಡುತ್ತೇನೆಂದು ತಂದೆ ಹೇಳುತ್ತಾರೆ. ನಂತರ ನಾನು ಪರಮಧಾಮದಿಂದ ಹಳೆಯ ಪ್ರಪಂಚದಲ್ಲಿ, ಹಳೆಯ ಶರೀರದಲ್ಲಿ ಬರುತ್ತೇನೆ. ಇವರು ಪೂಜ್ಯರಾಗಿದ್ದರು, ನಂತರ ಪೂಜಾರಿಯಾದರು ಈಗ ಮತ್ತೆ ಪೂಜ್ಯರಾಗುತ್ತಾರೆ. “ತತತ್ವಂ” ನಿಮ್ಮನ್ನೂ ಅದೇ ರೀತಿ ಮಾಡುತ್ತೇನೆ ಆದರೆ ಮೊದಲನೇ ನಂಬರಿನ ಪುರುಷಾರ್ಥಿ ಇವರಾಗಿದ್ದಾರೆ. ಆದುದರಿಂದ ಮಾತೇಶ್ವರಿ ಹಾಗೂ ಪಿತಾಶ್ರಿ ಎಂದು ಹೇಳುತ್ತೀರಿ. ನೀವೂ ಸಹ ಸಿಂಹಾಸನಾಧಿಕಾರಿಯಾಗುವ ಪುರುಷಾರ್ಥ ಮಾಡಿ ಎಂದು ತಂದೆಯು ಹೇಳುತ್ತಾರೆ. ಜಗದಂಬೆಯು ಸರ್ವರ ಕಾಮನೆಗಳನ್ನು ಪೂರ್ಣ ಮಾಡುತ್ತಾರೆ. ತಾಯಿಯಿರುವಾಗ ತಂದೆಯೂ ಇರಬೇಕು ಹಾಗೂ ಮಕ್ಕಳೂ ಇರುತ್ತಾರೆ. ನಿಮ್ಮೆಲ್ಲರ ಕಾಮನೆಗಳು ಸತ್ಯಯುಗದಲ್ಲಿ ಪೂರ್ಣವಾಗುತ್ತವೆ ಎಂದು ನೀವು ಎಲ್ಲರಿಗೂ ಈ ಮಾರ್ಗವನ್ನು ತೋರಿಸುತ್ತೀರಿ. ಮನೆಯಲ್ಲಿದ್ದು ಸಂಪೂರ್ಣ ನೆನಪನ್ನು ಮಾಡಿದಾಗ ಇಲ್ಲಿರುವವರಿಗಿಂತ ಶ್ರೇಷ್ಠ ಪದವಿಯನ್ನು ಪಡೆಯಬಹುದು ಎಂದು ತಂದೆಯು ಹೇಳುತ್ತಾರೆ.

ಬಹಳಷ್ಟು ಬಂಧನದಲ್ಲಿರುವವರು ಇದ್ದಾರೆ, ಈ ಅಬಲೆಯರ ಅತ್ಯಾಚಾರವಾಗದಂತೆ ಏನಾದರೂ ಉಪಾಯ ಹುಡುಕಬೇಕೆಂದು ಇಂದು ರಾತ್ರಿ ಗೃಹಮಂತ್ರಿಗಳಿಗೂ ಹೇಳುತ್ತಿದ್ದರಲ್ಲವೆ. ಆದರೆ ನಾಲ್ಕೈದು ಬಾರಿ ಹೇಳಿದಾಗ ಅವರ ಬುದ್ಧಿಗೆ ಬರುತ್ತದೆ. ಅದೃಷ್ಟದಲ್ಲಿದ್ದರೆ ಒಪ್ಪಿಕೊಳ್ಳುತ್ತಾರೆ. ಇದು ಕಠಿಣವಾದ ಜ್ಞಾನವಾಗಿದೆ. ಸಿಖ್ಖ್ ಧರ್ಮದವರೂ ಇದನ್ನು ತಿಳಿದುಕೊಳ್ಳುತ್ತಾರೆ - ಮನುಷ್ಯರನ್ನು ದೇವತೆಗಳನ್ನಾಗಿ ಯಾರು ಮಾಡಿದರು? ಏಕ್ ಓಂಕಾರ್, ಸತ್ನಾಂ ಎನ್ನುವುದು ಇವರ ಮಹಿಮೆಯೇ ಆಗಿದೆ. ಅಕಾಲಮೂರ್ತ್. ಬ್ರಹ್ಮತತ್ವವು ಅವರ ಸಿಂಹಾಸನವಾಗಿದೆ. ಸಿಂಹಾಸನವನ್ನು ಬಿಟ್ಟು ಬಾ ಎಂದು ಅವರು ಹೇಳುತ್ತಾರಲ್ಲವೆ. ನಾನು ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೇನೆಯೇ ವಿನಃ ಎಲ್ಲರ ಮನಸ್ಸಿನಲ್ಲಿರುವುದನ್ನು ತಿಳಿದುಕೊಂಡಿಲ್ಲವೆಂದು ತಂದೆಯು ಕುಳಿತು ತಿಳಿಸುತ್ತಾರೆ. ಸದ್ಗತಿಯಲ್ಲಿ ಕರೆದೊಯ್ಯಿರಿ ಎಂದು ಭಗವಂತನನ್ನು ನೆನಪು ಮಾಡುತ್ತಾರೆ. ನಾನು ಸರ್ವಶಕ್ತಿವಂತನ ದೈವೀ ಸರ್ಕಾರವನ್ನು ಸ್ಥಾಪನೆ ಮಾಡುತ್ತಿದ್ದೇನೆಂದು ತಂದೆಯು ಹೇಳುತ್ತಾರೆ. ಈಗ ಏನು ವಿಭಜನೆಗಳಾಗಿವೆ ಅವೆಲ್ಲವೂ ಒಂದಾಗಿಬಿಡುತ್ತವೆ. ನಮ್ಮ ದೇವಿ-ದೇವತಾ ಧರ್ಮದ ಸಸಿಯನ್ನು ನಾಟಿ ಮಾಡ ಬೇಕಾಗಿದೆ. ಇದು ಅತಿ ದೊಡ್ಡ ವೃಕ್ಷವಾಗಿದೆ. ಇದರಲ್ಲಿ ಮಧುರಾತಿ ಮಧುರರು ದೇವಿ-ದೇವತೆಗಳಾಗಿದ್ದಾರೆ. ಅವರ ಸಸಿ ನಾಟಿ ಮಾಡಬೇಕಾಗಿದೆ ನಂತರ ಬರುವ ಅನ್ಯಧರ್ಮದವರು ಅವರ ಧರ್ಮದ ಸಸಿ ನಾಟಿ ಮಾಡುವುದಿಲ್ಲ.

ಒಳ್ಳೆಯದು. ಇಂದು ಸದ್ಗುರುವಾರವಾಗಿದೆ. ಮಕ್ಕಳೇ, ಶ್ರೀಮತದಂತೆ ನಡೆದು ಪವಿತ್ರವಾದಾಗ ನಾನು ಜೊತೆಯಲ್ಲಿ ಕರೆದೊಯ್ಯುತ್ತೇನೆ ಎಂದು ತಂದೆಯು ಹೇಳುತ್ತಾರೆ. ಬೇಕಾದರೆ ಮಖಮಲ್ ರಾಣಿಯಾದರೂ ಆಗಿ ಅಥವಾ ರೇಷ್ಮೆಯ ರಾಣಿಯಾದರೂ ಆಗಿ, ಆಸ್ತಿಯನ್ನು ತೆಗೆದುಕೊಳ್ಳಲು ನನ್ನ ಮತದಂತೆ ನಡೆಯಿರಿ. ನೆನಪಿನಿಂದಲೇ ನೀವು ಅಪವಿತ್ರರಿಂದ ಪವಿತ್ರರಾಗಿಬಿಡುತ್ತೀರಿ. ಒಳ್ಳೆಯದು.

ಬಾಪ್ದಾದಾ ಹಾಗೂ ಮಧುರ ಮಮ್ಮಾರವರ, ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳಿಗೆ ನೆನಪು, ಪ್ರೀತಿ ಹಾಗೂ ಮಾಲೀಕರಿಗೆ ಸಲಾಮ್-ಮಾಲೆಕಮ್.

ಧಾರಣೆಗಾಗಿ ಮುಖ್ಯಸಾರ-
1. ಸಂಗಮಯುಗದ ಪುರುಷಾರ್ಥದ ಪ್ರಾಲಬ್ಧವು 21 ಜನ್ಮಗಳು ನಡೆಯುತ್ತವೆ. ಈ ಮಾತನ್ನು ಸ್ಮೃತಿಯಲ್ಲಿಟ್ಟುಕೊಂಡು ಶ್ರೇಷ್ಠ ಕರ್ಮವನ್ನು ಮಾಡಬೇಕು, ಜ್ಞಾನದಾನದಿಂದ ತಮ್ಮ ಪ್ರಾಲಬ್ಧವನ್ನು ಶ್ರೇಷ್ಠ ಮಾಡಿಕೊಳ್ಳಬೇಕು.

2. ಮಧುರವಾದ ದೈವೀ ವೃಕ್ಷದ ಸಸಿ ನಾಟಿಯಾಗುತ್ತಿದೆ ಆದ್ದರಿಂದ ಅತೀ ಮಧುರರಾಗಬೇಕಾಗಿದೆ.

ವರದಾನ:
ಬ್ರಾಹ್ಮಣ ಜನ್ಮದ ವಿಶೇಷತೆ ಮತ್ತು ವಿಚಿತ್ರತೆಯನ್ನು ಸ್ಮøತಿಯಲ್ಲಿಡುತ್ತಾ ಸೇವೆ ಮಾಡುವಂತಹ ಸಾಕ್ಷಿ ಭವ

ಈ ಬ್ರಾಹ್ಮಣ ಜನ್ಮ ದಿವ್ಯ ಜನ್ಮವಾಗಿದೆ. ಸಾಧಾರಣ ಜನ್ಮಧಾರಿ ಆತ್ಮಗಳು ತಮ್ಮ ಹುಟ್ಟಿದ ದಿನವನ್ನು ಬೇರೆಯಾಗಿ ಆಚರಿಸುತ್ತಾರೆ, ಮದುವೆಯಾದ ದಿನವನ್ನು ಫೌಂಡರ್ಸ್ ಡೇ ಅನ್ನು ಬೇರೆಯಾಗಿ ಆಚರಿಸುತ್ತಾರೆ, ಆದರೆ ನಿಮ್ಮ ಹುಟ್ಟಿದ ದಿನವೂ ಅದೇ ಆಗಿದೆ ಮದರ್ ಡೇ, ಫಾದರ್ ಡೇ, ಎನ್ಗೇಜ್ಮೆಂಟ್ ಡೇ ಎಲ್ಲವೂ ಒಂದೇ ಆಗಿದೆ ಏಕೆಂದರೆ ನಿಮ್ಮಲ್ಲರ ಭಾಷೆ ಇದೇ ಅಗಿದೆ-ಒಬ್ಬ ತಂದೆಯ ವಿನಹ ಬೆರೊಬ್ಬರಿಲ್ಲ. ಆದ್ದರಿಂದ ಈ ಜನ್ಮದ ವಿಶೇಷತೆ ಮತ್ತು ವಿಚಿತ್ರತೆಯನ್ನು ಸ್ಮೃತಿಯಲ್ಲಿಡುತ್ತಾ ಸೇವೆಯ ಪಾತ್ರವನ್ನು ಅಭಿನಯಿಸಿ. ಸೇವೆಯಲ್ಲಿ ಒಬ್ಬರಿನ್ನೊಬ್ಬರಿಗೆ ಜೊತೆಗಾರರಾಗಿ ಸ್ವಲ್ಪವೂ ಸಹ ಯಾರ ಮೇಲಾದರೂ ವಿಶೇಷವಾದ ಒಲವು ಇಲ್ಲದಿರಲಿ.

ಸ್ಲೋಗನ್:
ನಿಶ್ಚಿಂತ ಚಕ್ರವರ್ತಿ ಅವರೇ ಆಗಿದ್ದಾರೆ ಯಾರ ಜೀವನದಲ್ಲಿ ನಿರ್ಮಾಣತೆ ಮತ್ತು ಅಧಿಕಾರದ ಬ್ಯಾಲೆನ್ಸ್ ಇರುವುದು.


ಮಾತೇಶ್ವರಿಜೀ ಯವರ ಮಧುರ ಮಹಾವಾಕ್ಯ

ಆತ್ಮ ಪರಮಾತ್ಮರಲ್ಲಿ ಅಂತರ, ಬೇದ

ಆತ್ಮ ಮತ್ತು ಪರಮಾತ್ಮ ಬಹಳ ಕಾಲ ಬೇರೆ ಇದ್ದವರು ಯಾವಾಗ ಸದ್ಗುರು ದಳ್ಳಾಳಿಯ ರೂಪದಲ್ಲಿ ಸಿಕ್ಕಿದರು ಆಗ ಸುಂದರ ಮೇಳಾ ಆಯಿತು...... ಯಾವಾಗ ನೀವು ಈ ಶಭ್ಧ ಹೇಳುವಿರಿ ಅದರ ಯರ್ಥಾಥ ಅರ್ಥವಾಗಿದೆ ಆತ್ಮ ಪರಮಾತ್ಮ ಬಹಳ ಕಾಲದಿಂದ ಬೇರ್ಪಡೆಯಾಗಿದ್ದರು. ಬಹಳಕಾಲದ ಅರ್ಥವಾಗಿದೆ ಬಹಳ ಸಮಯದಿಂದ ಆತ್ಮ ಪರಮಾತ್ಮನಿಂದ ಬೇರ್ಪಟ್ಟಿದೆ, ಆದ್ದರಿಂದ ಈ ಶಬ್ಧ ಸಿದ್ಧ ಮಾಡುವುದು ಆತ್ಮ ಮತ್ತು ಪರಮಾತ್ಮ ಎರಡು ಬೇರೆ-ಬೇರೆ ವಸ್ತುವಾಗಿದೆ, ಎರಡರಲ್ಲಿಯೂ ಆಂತರಿಕ ಭೇಧವಿದೆ ಆದರೆ ಪ್ರಪಂಚದ ಮನುಷ್ಯರಿಗೆ ಅದರ ಪರಿಚಯ ಇಲ್ಲದ ಕಾರಣ ಅವರು ಈ ಶಬ್ಧದ ಅರ್ಥ ಹಾಗೇ ಹೇಳಿಬಿಡುತ್ತಾರೆ ನಾನು ಆತ್ಮನೇ ಪರಮಾತ್ಮನಾಗಿದ್ದೇನೆ ಎಂದು ಆದರೆ ಆತ್ಮದ ಮೇಲೆ ಮಾಯೆ ಪರದೆ ಹಾಕಿರುವ ಕಾರಣ ತನ್ನ ನಿಜವಾದ ಸ್ವರೂಪವನ್ನು ಮರೆತುಬಿಟ್ಟಿದೆ, ಯಾವಾಗ ಆತ್ಮನೇ ಪರಮಾತ್ಮ ಎಂಬ ಈ ಮಾಯೆಯ ಪರದೆ ಕಳಚಿ ಬೀಳುವುದು. ಆಗ ಆತ್ಮವನ್ನು ಬೇರೆಯಾಗಿ ಈ ಉದ್ದೇಶದಿಂದ ಹೇಳುತ್ತಾರೆ ಮತ್ತು ಬೇರೆ ಮನುಷ್ಯರು ಈ ಉದ್ದೇಶದಿಂದ ಹೇಳುತ್ತಾರೆ ನಾನು ಆತ್ಮನೇ ಪರಮಾತ್ಮನಾಗಿದ್ದೇನೆ ಎಂದು ಆದರೆ ಆತ್ಮ ತನ್ನನ್ನು ತಾನು ಮರೆತಿರುವ ಕಾರಣ ದುಃಖಿಯಾಗಿದೆ. ಯಾವಾಗ ಆತ್ಮ ಮತ್ತೆ ತನಗೆ ತಾನು ಪರಿಚಯ ಮಾಡಿಕೊಂಡು ಶುದ್ಧವಾಗುವುದು ಆಗ ಆತ್ಮ ಪರಮಾತ್ಮನನ್ನು ಸೇರಿ ಒಂದೇ ಆಗಿಬಿಡುವುದು. ಆದ್ದರಿಂದ ಆ ಆತ್ಮನಿಗೆ ಬೇರೆ ಈ ಅರ್ಥದಿಂದ ಹೇಳುತ್ತಾರೆ ಆದರೆ ತಾವಂತೂ ತಿಳಿದಿರುವಿರಿ ಆತ್ಮ ಪರಮಾತ್ಮ ಎರಡೂ ಬೇರೆ ಬೇರೆಯಾಗಿದೆ ಆತ್ಮ, ಪರಮಾತ್ಮ ಆಗಲು ಸಾಧ್ಯವಿಲ್ಲ ಮತ್ತು ಆತ್ಮ ಪರಮಾತ್ಮನ ಜೊತೆ ಲೀನವಾಗಿ ಒಂದಾಗಲು ಸಾಧ್ಯವಿಲ್ಲ ಮತ್ತು ಇನ್ನೊಂದು ಪರಮಾತ್ಮನ ಮೇಲೆ ಮಾಯೆಯ ಪರದೆ ಬೀಳುವುದಿಲ್ಲ.