17.01.23 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಈ ಗೀತಾ ಪಾಠಶಾಲೆಯಲ್ಲಿ ತಮ್ಮ ಶ್ರೇಷ್ಠ ಅದೃಷ್ಟವನ್ನು ಮಾಡಿಕೊಳ್ಳುವುದಕ್ಕೋಸ್ಕರ ಬಂದಿದ್ದೀರಿ,
ನೀವು ನಿರಾಕಾರ ತಂದೆಯಿಂದ ವಿದ್ಯೆಯನ್ನು ಓದಿ ರಾಜರಿಗಿಂತ ರಾಜರಾಗಬೇಕು”
ಪ್ರಶ್ನೆ:
ಕೆಲವು ಮಕ್ಕಳು
ಭಾಗ್ಯಶಾಲಿಗಳು ಆಗಿದ್ದರೂ ಸಹ ದುರ್ಭಾಗ್ಯಶಾಲಿಗಳು ಹೇಗೆ ಆಗುತ್ತಾರೆ?
ಉತ್ತರ:
ಯಾರಿಗೆ ಯಾವುದೇ
ಕರ್ಮಬಂಧನ ಇರುವುದಿಲ್ಲ ಅರ್ಥಾತ್ ಕರ್ಮ ಬಂಧನ ಮುಕ್ತರಾಗಿರುತ್ತಾರೋ ಅವರೇ ಭಾಗ್ಯಶಾಲಿ
ಮಕ್ಕಳಾಗಿದ್ದಾರೆ. ಆದರೆ ವಿದ್ಯೆಯ ಕಡೆ ಗಮನ ಕೊಡುವುದಿಲ್ಲ. ಬುದ್ಧಿ ಆ ಕಡೆ, ಈ ಕಡೆ
ಅಲೆದಾಡುತ್ತಿರುತ್ತದೆ. ಯಾರಿಂದ ಎಷ್ಟೊಂದು ದೊಡ್ಡ ಆಸ್ತಿ ಸಿಗುತ್ತದೋ ಆ ತಂದೆಯನ್ನು ನೆನಪು
ಮಾಡುವುದಿಲ್ಲವೋ ಆಗ ಭಾಗ್ಯಶಾಲಿಗಳು ಆಗಿದ್ದರೂ ಸಹ ದುರ್ಭಾಗ್ಯಶಾಲಿಗಳು ಎಂದು ಹೇಳಲಾಗುತ್ತದೆ.
ಪ್ರಶ್ನೆ:
ಶ್ರೀಮತದಲ್ಲಿ
ಯಾವ-ಯಾವ ರಸಗಳು ತುಂಬಿದೆ?
ಉತ್ತರ:
ಯಾವುದರಲ್ಲಿ ತಂದೆ-ತಾಯಿ, ಶಿಕ್ಷಕ ಗುರು ಎಲ್ಲರ ಮತವು ಒಟ್ಟಿಗೆ ಇರುತ್ತದೋ ಅದಕ್ಕೆ ಶ್ರೀಮತವೆಂದು
ಹೇಳಲಾಗುತ್ತದೆ. ಶ್ರೀಮತವು ಸ್ಯಾಕ್ರಿನ್ ಆಗಿದೆ. ಇದರಲ್ಲಿ ಎಲ್ಲಾ ರಸಗಳು ತುಂಬಿದೆ.
ಗೀತೆ:
ಅದೃಷ್ಟವನ್ನು
ಬೆಳಗಿಸಿಕೊಂಡು ಬಂದಿದ್ದೇನೆ...
ಓಂ ಶಾಂತಿ.
ಶಿವಭಗವಾನುವಾಚ: ಮನುಷ್ಯರು ಯಾವಾಗ ಗೀತೆಯನ್ನು ತಿಳಿಸುತ್ತಾರೆ ಆಗ ಕೃಷ್ಣನ ಹೆಸರನ್ನು ಹೇಳುತ್ತಾರೆ.
ಇಲ್ಲಿ ಶಿವಭಗವಾನುವಾಚ ಎಂದು ಹೇಳಲಾಗುತ್ತದೆ. ಕೆಲವರು ಸ್ವಯಂನ್ನು ಶಿವಭಗವಾನುವಾಚ ಎಂದು
ಹೇಳುತ್ತಾರೆ. ಏಕೆಂದರೆ ಶಿವತಂದೆ ಸ್ವಯಂ ಹೇಳುತ್ತಾರೆ - ಇಬ್ಬರೂ ಒಟ್ಟಿಗೆ ಹೇಳುತ್ತಾರೆ-
ಇಬ್ಬರಿಗೂ ಸಹ ಮಕ್ಕಳಾಗಿದ್ದಾರೆ ಇಲ್ಲಿ ಗಂಡು ಮಕ್ಕಳು ಹೆಣ್ಣು ಮಕ್ಕಳು ಇಬ್ಬರೂ ಸಹ ಕುಳಿತಿದ್ದಾರೆ.
ಅಂದಾಗ ಯಾರು ಓದಿಸುತ್ತಿದ್ದಾರೆ ಎಂದು ತಿಳಿದಿದೆಯೇ? ಬಾಪ್ದಾದಾ ಓದಿಸುತ್ತಿದ್ದಾರೆ ಎಂದು
ಹೇಳುತ್ತೀರಿ. ದೊಡ್ಡವರಿಗೆ (ಶಿವತಂದೆಗೆ) ತಂದೆ ಎಂದು, ಅಣ್ಣ ಎಂದು ಚಿಕ್ಕವರಿಗೆ (ಬ್ರಹ್ಮಾತಂದೆಗೆ)
ಅರ್ಥಾತ್ ಸಹೋದರನಿಗೆ ಹೇಳಲಾಗುತ್ತದೆ ಅಂದಾಗ ಬಾಪ್ದಾದಾ ಎಂದು ಒಟ್ಟಿಗೆ ಹೇಳಲಾಗುತ್ತದೆ. ಈಗ ನಾವು
ವಿದ್ಯಾರ್ಥಿಗಳಾಗಿದ್ದೇವೆ ಎಂದು ನೀವು ಮಕ್ಕಳಿಗೆ ತಿಳಿದಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳು
ಕುಳಿತಿರುತ್ತಾರೆ. ಅದೃಷ್ಟವನ್ನು ಮಾಡಿಕೊಳ್ಳುವುದಕ್ಕೋಸ್ಕರ ನಾವು ವಿದ್ಯೆಯನ್ನು ಓದಿ
ಪರೀಕ್ಷೆಯನ್ನು ಪಾಸ್ ಮಾಡಬೇಕು. ಅಲ್ಲಿ ಶಾರೀರಿಕ ಪರೀಕ್ಷೆಗಳು ಬಹಳಷ್ಟು ಇರುತ್ತವೆ. ಇಲ್ಲಿ ನೀವು
ಮಕ್ಕಳ ಮನಸ್ಸಿನಲ್ಲಿ ನಾವು ಬೇಹದ್ದಿನ ತಂದೆ ಪರಮಪಿತ ಪರಮಾತ್ಮನಿಂದ ಓದುತ್ತಿದ್ದೇವೆ ಎಂದು
ತಿಳಿದುಕೊಂಡಿದ್ದೇವೆ. ತಂದೆ ಎಂದು ಬ್ರಹ್ಮನಿಗೆ ಹೇಳಲಾಗುವುದಿಲ್ಲ. ನಿರಾಕಾರ ತಂದೆಯೇ
ತಿಳಿಸುತ್ತಾರೆ, ನಾವು ತಂದೆಯಿಂದ ರಾಜಯೋಗವನ್ನು ಕಲಿತು ರಾಜರಿಗಿಂತ ರಾಜರಾಗುತ್ತೇವೆ ಎಂದು ನಿಮಗೆ
ತಿಳಿದಿದೆ. ರಾಜರೂ ಆಗುತ್ತೀರಿ ಮತ್ತು ಪುನಃ ರಾಜರಿಗಿಂತ ರಾಜರೂ ಆಗುತ್ತೀರಿ. ಯಾರು ರಾಜರಿಗಿಂತ
ರಾಜರಾಗಿರುತ್ತಾರೋ ಅವರನ್ನು ರಾಜರು ಪೂಜಿಸುತ್ತಾರೆ. ಈ ಸಂಪ್ರದಾಯ ಭಾರತ ಖಂಡದಲ್ಲಿ ಇದೆ. ಪತಿತ
ರಾಜರು ಪಾವನರಾಜರುಗಳನ್ನು ಪೂಜೆ ಮಾಡುತ್ತಾರೆ. ಮಹಾರಾಜರೆಂದು ದೊಡ್ಡ ಆಸ್ತಿ ಇರುವಂತಹವರಿಗೆ
ಹೇಳಲಾಗುತ್ತದೆ ಎಂದು ತಂದೆಯೇ ತಿಳಿಸುತ್ತಾರೆ. ರಾಜರು ಚಿಕ್ಕವರಾಗಿರುತ್ತಾರೆ. ಇಂದಿನ ದಿನ
ಕೆಲವು-ಕೆಲವು ರಾಜರುಗಳಲ್ಲಿ ಮಹಾರಾಜರಿಗಿಂತಲೂ ಬಹಳ ಹೆಚ್ಚು ಆಸ್ತಿ ಇರುತ್ತದೆ. ಕೆಲವು-ಕೆಲವು
ಸಾಹುಕಾರರಲ್ಲಿ ರಾಜರುಗಳಿಗಿಂತಲೂ ಹೆಚ್ಚು ಆಸ್ತಿ ಇರುತ್ತದೆ. ಅಲ್ಲಿ ಈ ರೀತಿ ಕಾನೂನಿಗೆ
ವಿರುದ್ಧವಾಗಿ ಇರುವುದಿಲ್ಲ. ಅಲ್ಲಿ ಎಲ್ಲವೂ ನಿಯಮದ ಅನುಸಾರವಾಗಿ ಇರುತ್ತದೆ. ದೊಡ್ಡ ಮಹಾರಾಜರ ಬಳಿ
ಹೆಚ್ಚು ಆಸ್ತಿ ಇರುತ್ತದೆ ಅಂದಾಗ ನಮಗೆ ಬೇಹದ್ದಿನ ತಂದೆ ಕುಳಿತು ವಿದ್ಯೆಯನ್ನು ಓದಿಸುತ್ತಿದ್ದಾರೆ
ಎಂದು ನಿಮಗೆ ತಿಳಿದಿದೆ. ಪರಮಾತ್ಮನನ್ನು ಬಿಟ್ಟರೆ ರಾಜರಿಗಿಂತ ರಾಜರನ್ನಾಗಿ ಸ್ವರ್ಗದ
ಮಾಲೀಕರನ್ನಾಗಿ ಯಾರೂ ಸಹ ಮಾಡಲು ಸಾಧ್ಯವಿಲ್ಲ. ಸ್ವರ್ಗದ ರಚಯಿತ ನಿರಾಕಾರ ತಂದೆಯಾಗಿದ್ದಾರೆ. ಅವರ
ಹೆಸರು ಸ್ವರ್ಗದ ರಚಯಿತ ಎಂದು ಗಾಯನ ಮಾಡುತ್ತಾರೆ. ನಾನು ನೀವು ಮಕ್ಕಳಿಗೆ ಪುನಃ ಸ್ವರಾಜ್ಯವನ್ನು
ಕೊಟ್ಟು ರಾಜರಿಗಿಂತ ರಾಜರನ್ನಾಗಿ ಮಾಡುತ್ತೇನೆ ಎಂದು ತಂದೆಯು ಸ್ವಚ್ಚವಾಗಿ ತಿಳಿಸುತ್ತಾರೆ.
ನಾವೀಗ ನಮ್ಮ ಅದೃಷ್ಟವನ್ನು ಬೆಳಗಿಸಿಕೊಂಡು ಬಂದಿದ್ದೇವೆ, ಬೇಹದ್ದಿನ ತಂದೆಯಿಂದ ರಾಜರಿಗಿಂತ ರಾಜರು
ಆಗುತ್ತೇವೆ ಎನ್ನುವುದು ಎಷ್ಟೊಂದು ಖುಷಿಯ ಮಾತಾಗಿದೆ. ಇದು ದೊಡ್ಡ ಪರೀಕ್ಷೆಯಾಗಿದೆ. ಶ್ರೀಮತದಂತೆ
ನಡೆಯಿರಿ, ಇದರಲ್ಲಿ ತಂದೆ-ತಾಯಿ, ಶಿಕ್ಷಕ, ಗುರು ಮುಂತಾದವರ ಎಲ್ಲಾ ಮತಗಳು ಒಟ್ಟಿಗಿವೆ ಎಂದು
ತಂದೆಯು ಹೇಳುತ್ತಾರೆ. ಎಲ್ಲರ ಸ್ಯಾಕ್ರಿನ್ ಆಗಿದ್ದೇನೆ, ಎಲ್ಲಾ ರಸಗಳು ಒಂದರಲ್ಲಿಯೇ ತುಂಬಿದೆ.
ಎಲ್ಲರ ಪ್ರಿಯತಮನು ಒಬ್ಬನಾಗಿದ್ದಾನೆ. ಪತಿತರಿಂದ ಪಾವನರನ್ನಾಗಿ ಮಾಡುವಂತಹವರು ತಂದೆಯಾಗಿದ್ದಾರೆ.
ಗುರುನಾನಕ್ನೂ ಸಹ ಅವರ ಮಹಿಮೆಯನ್ನು ಮಾಡಿದರು ಅಂದಾಗ ಅವಶ್ಯವಾಗಿ ಅವರನ್ನೇ ನೆನಪು ಮಾಡುತ್ತಿದ್ದರು.
ಮೊದಲು ತಮ್ಮ ಬಳಿ ಕರೆದುಕೊಂಡು ಹೋಗುತ್ತಾರೆ ನಂತರ ಪಾವನ ಪ್ರಪಂಚಕ್ಕೆ ಕಳುಹಿಸುತ್ತಾರೆ. ಇದು
ಭಗವಂತನ ಕಾಲೇಜ್ ಆಗಿದೆ ಎಂದು ಯಾರೇ ಬಂದರೂ ತಿಳಿಸಿಕೊಡಿ. ಭಗವಾನುವಾಚ: ಬೇರೆ ಶಾಲೆಗಳಲ್ಲಿ ಎಂದೂ
ಸಹ ಭಗವಾನುವಾಚ ಎಂದು ಹೇಳಲಾಗುವುದಿಲ್ಲ. ಭಗವಂತ ನಿರಾಕಾರ ಜ್ಞಾನಸಾಗರ ಆಗಿದ್ದಾರೆ, ಮನುಷ್ಯ
ಸೃಷ್ಟಿಯ ಬೀಜರೂಪವಾಗಿದ್ದಾರೆ. ನೀವು ಮಕ್ಕಳಿಗೆ ಕುಳಿತು ಎಲ್ಲವನ್ನು ತಿಳಿಸುತ್ತಿದ್ದಾರೆ. ಇದು
ಗಾಡ್ಲೀ ನಾಲೆಜ್ [ಭಗವಂತನ ಜ್ಞಾನ] ಆಗಿದೆ. ಸರಸ್ವತಿಗೆ ಜ್ಞಾನ ದೇವತೆ ಎಂದು ಹೇಳುತ್ತಾರೆ ಅಂದಾಗ
ಅವಶ್ಯವಾಗಿ ಭಗವಂತ ಕೊಡುವ ಜ್ಞಾನದಿಂದ ದೇವೀ-ದೇವತೆಗಳು ಆಗುತ್ತಾರೆ. ವಕೀಲರ ವಿದ್ಯೆಯಿಂದ
ವಕೀಲರಾಗುತ್ತಾರೆ. ಇದು ಭಗವಂತ ಕೊಡುವ ವಿದ್ಯೆಯಾಗಿದೆ. ಸರಸ್ವತಿಗೆ ಭಗವಂತನೇ ಜ್ಞಾನವನ್ನು
ಕೊಟ್ಟಿದ್ದಾರೆ ಅಂದಾಗ ಹೇಗೆ ಸರಸ್ವತಿಗೆ ವಿದ್ಯಾ ದೇವತೆ ಎಂದು ಹೇಳಲಾಗುತ್ತದೆ. ಹಾಗೆಯೇ ನೀವು
ಮಕ್ಕಳೂ ಸಹ ಆಗಬೇಕು. ಸರಸ್ವತಿಗೆ ಬಹಳಷ್ಟು ಮಕ್ಕಳಿದ್ದಾರಲ್ಲವೇ. ಆದರೆ ಪ್ರತಿಯೊಬ್ಬರಿಗೂ
ವಿದ್ಯಾದೇವತೆ ಎಂದು ಹೇಳಲು ಸಾಧ್ಯವಿಲ್ಲ. ಈ ಸಮಯದಲ್ಲಿ ತಮಗೆ ದೇವತೆ ಎಂದು ಹೇಳಲಾಗುವುದಿಲ್ಲ.
ಅಲ್ಲಿ ದೇವೀ-ದೇವತೆಗಳು ಎಂದು ಹೇಳಲಾಗುತ್ತದೆ. ಭಗವಂತ ಅವಶ್ಯವಾಗಿ ಜ್ಞಾನವನ್ನು ಕೊಡುತ್ತಾರೆ.
ಪ್ರತಿಯೊಂದು ವಿಷಯವನ್ನು ಧಾರಣೆ ಮಾಡಿಸುತ್ತಾರೆ. ಆದರೆ ಪದವಿಯನ್ನೂ ಸಹ ದೊಡ್ಡದಾಗಿಯೇ ಕೊಡುತ್ತಾರೆ.
ಬಾಕಿ ದೇವತೆಗಳು ಭಗವಂತ ಆಗಲು ಸಾಧ್ಯವಿಲ್ಲ. ಈ ತಂದೆ-ತಾಯಿಗಳು ಗಾಡ್-ಗಾಡೆಸ್ (ಭಗವಂತ) ಆಗುತ್ತಾರೆ.
ಆದರೆ ಆ ರೀತಿ ಆಗಲು ಸಾಧ್ಯವಿಲ್ಲ. ನಿರಾಕಾರ ತಂದೆಗೆ ಭಗವಂತ ಎಂದು ಹೇಳಲಾಗುತ್ತದೆ. ಈ ಸಾಕಾರನಿಗೆ
ಭಗವಂತನೆಂದು ಹೇಳಲಾಗುವುದಿಲ್ಲ. ಇದು ಬಹಳ ಗುಹ್ಯವಾದ ಮಾತಾಗಿದೆ. ಆತ್ಮ ಮತ್ತು ಪರಮಾತ್ಮನ ರೂಪ
ಮತ್ತು ಸಂಬಂಧವೂ ಎಷ್ಟೊಂದು ಗುಹ್ಯವಾದ ಮಾತಾಗಿದೆ. ಆ ಶಾರೀರಿಕವಾದ ಸಂಬಂಧ ಮಾವ, ಅತ್ತೆ,
ಚಿಕ್ಕಪ್ಪ, ಇದೆಲ್ಲವೂ ಸಹ ಕಾಮನ್ ಆಗಿದೆ. ಆದರೆ ಇಲ್ಲಿ ಆತ್ಮಿಯ ಸಂಬಂಧವಾಗಿದೆ. ಇದೆಲ್ಲವನ್ನೂ
ತಿಳಿಸಲು ಬಹಳ ಯುಕ್ತಿಯು ಬೇಕು. ತಂದೆ-ತಾಯಿ ಅಕ್ಷರವನ್ನು ಗಾಯನ ಮಾಡಿದಾಗ ಅವಶ್ಯವಾಗಿ
ಅರ್ಥವಿದೆಯಲ್ಲವೇ. ಆ ಅಕ್ಷರ ಅವಿನಾಶಿ ಆಗುತ್ತದೆ. ಭಕ್ತಿ ಮಾರ್ಗದಲ್ಲಿ ನಡೆಯುತ್ತಾ ಬರುತ್ತದೆ.
ನಾವೀಗ ಶಾಲೆಯಲ್ಲಿ
ಕುಳಿತಿದ್ದೇವೆ ಎಂದು ನೀವು ಮಕ್ಕಳಿಗೆ ತಿಳಿದಿದೆ. ವಿದ್ಯೆಯನ್ನು ಓದಿಸುವಂತಹವರು ಜ್ಞಾನಸಾಗರ
ಆಗಿದ್ದಾರೆ. ಬ್ರಹ್ಮನ ಆತ್ಮವೂ ಸಹ ವಿದ್ಯೆಯನ್ನು ಓದುತ್ತದೆ. ಆ ಆತ್ಮದ ತಂದೆ ಪರಮಾತ್ಮ ಆಗಿದ್ದಾರೆ.
ಅವರು ಎಲ್ಲರಿಗೂ ತಂದೆ ಆಗಿದ್ದಾರೆ ಅವರು ಗರ್ಭದಲ್ಲಿ ಬರುವುದಿಲ್ಲ ಅಂದಾಗ ವಿದ್ಯೆಯನ್ನು ಹೇಗೆ
ಓದಿಸುತ್ತಾರೆ? ಅವರು ಬ್ರಹ್ಮನ ತನುವಿನಲ್ಲಿ ಬರುತ್ತಾರೆ. ಅವರು ಬ್ರಹ್ಮನ ಬದಲು ಕೃಷ್ಣನ ಹೆಸರನ್ನು
ಹಾಕಿದ್ದಾರೆ. ಇದು ಡ್ರಾಮಾದಲ್ಲಿ ನೋಂದಾವಣೆ ಆಗಿದೆ. ಏನಾದರೂ ತಪ್ಪಾದರೆ ತಂದೆಯೇ ಬಂದು ಅದನ್ನು
ಸರಿ ಮಾಡಿ ತಪ್ಪಿಲ್ಲದವರನ್ನಾಗಿ ಮಾಡುತ್ತಾರೆ. ನಿರಾಕಾರ ತಂದೆಯನ್ನು ತಿಳಿಯದಿರುವ ಕಾರಣ
ತಬ್ಬಿಬ್ಬಾಗಿದ್ದಾರೆ. ನಾನು ನಿಮ್ಮ ಬೇಹದ್ದಿನ ತಂದೆ ಬೇಹದ್ದಿನ ಆಸ್ತಿಯನ್ನು ಕೊಡುತ್ತೇನೆ ಎಂದು
ತಂದೆಯೇ ತಿಳಿಸುತ್ತಾರೆ. ಲಕ್ಷ್ಮೀ-ನಾರಾಯಣ ಸ್ವರ್ಗದ ಮಾಲೀಕರು ಹೇಗಾದರು ಎನ್ನುವುದು ಯಾರಿಗೂ ಸಹ
ತಿಳಿದಿಲ್ಲ. ಅವಶ್ಯವಾಗಿ ಯಾರು ಆ ರೀತಿ ಕರ್ಮವನ್ನು ಕಲಿಸಿರುವ ಕಾರಣ ಅಷ್ಟೊಂದು ಶ್ರೇಷ್ಠ
ಪದವಿಯನ್ನು ಪ್ರಾಪ್ತಿ ಮಾಡಿಸುತ್ತಾರೆ. ಇದನ್ನು ಮನುಷ್ಯರು ತಿಳಿದುಕೊಂಡಿಲ್ಲ. ತಂದೆಯು ಎಷ್ಟೊಂದು
ಪ್ರೀತಿಯಿಂದ ತಿಳಿಸುತ್ತಾರೆ, ಎಷ್ಟೊಂದು ದೊಡ್ಡ ಶಕ್ತಿ ಇದೆ. ಇಡೀ ಪ್ರಪಂಚವನ್ನು ಪತಿತರನ್ನು
ಪಾವನ ಮಾಡುವಂತಹ ಮಾಲೀಕರಾಗಿದ್ದಾರೆ. ಇದು ಮಾಡಿ-ಮಾಡಲ್ಪಟ್ಟಂತಹ ನಾಟಕವಾಗಿದೆ ಎಂದು ನಿಮಗೆ
ತಿಳಿದಿದೆ. ನೀವು ಚಕ್ರದಲ್ಲಿ ಬರಲೇ ಬೇಕು. ಈ ರೀತಿ ಮಾಡಲ್ಪಟ್ಟಿರುವ ನಾಟಕವನ್ನು ಯಾರೂ ಸಹ
ತಿಳಿದುಕೊಂಡಿಲ್ಲ. ನಾಟಕದಲ್ಲಿ ನಾವು ಹೇಗೆ ಪಾತ್ರಧಾರಿಗಳಾಗಿದ್ದೇವೆ, ಈ ಚಕ್ರ ಹೇಗೆ ತಿರುಗುತ್ತದೆ.
ದುಃಖಧಾಮದಿಂದ ಸುಖಧಾಮವನ್ನಾಗಿ ಯಾರು ಮಾಡುತ್ತಾರೆ ಎಂದು ನಿಮಗೆ ತಿಳಿದಿದೆ. ನಿಮಗೆ
ಸುಖಧಾಮಕ್ಕೋಸ್ಕರ ವಿದ್ಯೆಯನ್ನು ಓದಿಸುತ್ತಿದ್ದೇನೆ. ನೀವೇ 21 ಜನ್ಮಗಳಿಗೋಸ್ಕರ ಸದಾ
ಸುಖಿಗಳಾಗುತ್ತೀರಿ ಮತ್ತು ಬೇರೆ ಯಾರೂ ಸಹ ಹೋಗಲು ಸಾಧ್ಯವಿಲ್ಲ. ಸುಖಧಾಮದಲ್ಲಿ ಅವಶ್ಯವಾಗಿ
ಸ್ವಲ್ಪ ಮನುಷ್ಯರಿರುತ್ತಾರೆ. ತಿಳಿಸುವುದಕ್ಕೋಸ್ಕರ ವಿಷಯಗಳು ಚೆನ್ನಾಗಿರಬೇಕು. ನಾವು ನಿಮ್ಮ
ಮಕ್ಕಳಾಗಿದ್ದೇವೆ ಎಂದು ಹೇಳುತ್ತಾರೆ ಆದರೆ ಪೂರ್ಣರಾಗುವುದರಲ್ಲಿ ಸಮಯ ಹಿಡಿಸುತ್ತದೆ. ಕೆಲವರ
ಕರ್ಮ ಬಂಧನ ತಕ್ಷಣ ತುಂಡಾಗುತ್ತದೆ, ಕೆಲವರದ್ದು ಸಮಯ ಹಿಡಿಸುತ್ತದೆ. ಕೆಲವರು ಆ ರೀತಿ
ಭಾಗ್ಯಶಾಲಿಗಳು ಆಗಿರುತ್ತಾರೆ - ಅವರ ಕರ್ಮಬಂಧನ ತುಂಡಾಗುತ್ತದೆ ಆದರೆ ಓದುವುದರಲ್ಲಿ ಗಮನ
ಕೊಡುವುದಿಲ್ಲ ಆಗ ಅವರಿಗೆ ದುರ್ಭಾಗ್ಯಶಾಲಿಗಳು ಎಂದು ಹೇಳಲಾಗುತ್ತದೆ. ಮೊಮ್ಮಕ್ಕಳು, ಮರಿಮಕ್ಕಳು
ಮುಂತಾದವರಲ್ಲಿ ಬುದ್ಧಿ ಹೊರಟು ಹೋಗುತ್ತದೆ. ಇಲ್ಲಿ ಒಬ್ಬ ತಂದೆಯನ್ನೇ ನೆನಪು ಮಾಡಬೇಕು.
ಆದ್ದರಿಂದ ಬಹಳ ದೊಡ್ಡ ಆಸ್ತಿ ಸಿಗುತ್ತದೆ. ನಾವು ರಾಜರಿಗಿಂತ ರಾಜರಾಗುತ್ತೇವೆ ಎಂದು ನಿಮಗೆ
ತಿಳಿದಿದೆ. ಪತಿತರಾಜರು ಹೇಗಾಗುತ್ತಾರೆ ಮತ್ತು ಪಾವನ ರಾಜರುಗಳಿಗಿಂತ ರಾಜರು ಹೇಗಾಗುತ್ತಾರೆ
ಎನ್ನುವುದು ತಂದೆಯೇ ನಿಮಗೆ ತಿಳಿಸುತ್ತಾರೆ. ನಾನು ಸ್ವಯಂ ಬಂದು ಈ ರಾಜಯೋಗದಿಂದ ರಾಜರಿಗಳಿಗಿಂತ
ರಾಜಾ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ. ಆ ಪತಿತ ರಾಜರು ದಾನ ಮಾಡುವುದರಿಂದ ಆಗುತ್ತಾರೆ.
ಅವರನ್ನು ನಾನು ಬಂದು ಮಾಡುವುದಿಲ್ಲ. ಅವರು ಬಹಳ ದಾನಿಗಳಾಗಿರುತ್ತಾರೆ. ದಾನ ಮಾಡುವುದರಿಂದ
ರಾಜ್ಯಭಾಗ್ಯದ ಕುಲದಲ್ಲಿ ಜನ್ಮವನ್ನು ತೆಗೆದುಕೊಳ್ಳುತ್ತಾರೆ. ನಾನು 21 ಜನ್ಮಗಳಿಗೋಸ್ಕರ ಸುಖವನ್ನು
ಕೊಡುತ್ತೇನೆ. ಅದರಲ್ಲಿ ಒಂದು ಜನ್ಮಕ್ಕೋಸ್ಕರ ಆಗುತ್ತಾರೆ. ಅವರು ಪತಿತ ದುಃಖಿಗಳು ಆಗುತ್ತಾರೆ.
ನಾನು ಬಂದು ಮಕ್ಕಳನ್ನು ಪಾವನರನ್ನಾಗಿ ಮಾಡುತ್ತೇನೆ. ಮನುಷ್ಯರು ಕೇವಲ ಗಂಗಾ ಸ್ನಾನ ಮಾಡುವುದರಿಂದ
ಪಾವನರಾಗುತ್ತೇವೆ ಎಂದು ತಿಳಿದು ಎಷ್ಟೊಂದು ಪೆಟ್ಟನ್ನು ತಿನ್ನುತ್ತಾರೆ. ಗಂಗಾ-ಜಮುನಾ ಮುಂತಾದ
ನದಿಗಳ ಮಹಿಮೆಯನ್ನು ಎಷ್ಟೊಂದು ಮಾಡುತ್ತಾರೆ. ಈಗ ಇಲ್ಲಿ ಮಹಿಮೆಯ ಮಾತಿಲ್ಲ. ನೀರು ಸಾಗರದಿಂದ
ಬರುತ್ತದೆ. ಆ ರೀತಿ ಬಹಳಷ್ಟು ನದಿಗಳು ಇವೆ. ವಿದೇಶದಲ್ಲೂ ಸಹ ದೊಡ್ಡ-ದೊಡ್ಡ ನದಿಗಳನ್ನು ಅಗೆದು
ಮಾಡುತ್ತಾರೆ. ಇದರಲ್ಲಿ ದೊಡ್ಡ ಮಾತೇನಿದೆ? ಜ್ಞಾನಸಾಗರ ಮತ್ತು ಜ್ಞಾನಗಂಗೆಯರು ಯಾರಾಗಿದ್ದಾರೆ
ಎಂದು ತಿಳಿದುಕೊಂಡಿಲ್ಲ. ಶಕ್ತಿಯರು ಏನು ಮಾಡಿದರು ಅದನ್ನೂ ಸಹ ತಿಳುದುಕೊಂಡಿಲ್ಲ. ವಾಸ್ತವದಲ್ಲಿ
ಜ್ಞಾನಗಂಗೆ ಅಥವಾ ಜ್ಞಾನ ಸರಸ್ವತಿ ಜಗದಂಬಾ ಆಗಿದ್ದರೆ. ಮನುಷ್ಯರಿಗೆ ಈ ವಿಚಾರಗಳು ತಿಳಿದಿಲ್ಲ.
ಅವರು ಬಹಳ ಮಂದಬುದ್ಧಿಯವರು, ತಿಳುವಳಿಕೆಹೀನರಾಗಿದ್ದಾರೆ. ತಂದೆಯೇ ಬಂದು ಎಷ್ಟೊಂದು
ಬುದ್ಧಿವಂತರನ್ನಾಗಿ ಮಾಡುತ್ತಾರೆ. ಇವರನ್ನು ರಾಜರುಗಳಿಂತ ರಾಜರನ್ನಾಗಿ ಯಾರು ಮಾಡಿದರು
ಎನ್ನುವುದನ್ನು ನೀವು ತಿಳಿಸಿಕೊಡಬಹುದು. ಗೀತೆಯಲ್ಲೂ ಸಹ ನಾನೇ ರಾಜರಿಗಿಂತ ರಾಜರನ್ನಾಗಿ
ಮಾಡುತ್ತೇನೆ ಎಂದು ಬರೆದಿದ್ದಾರೆ. ಮನುಷ್ಯರಿಗೆ ಇದು ತಿಳಿದಿಲ್ಲ. ನಾವೂ ಸಹ ಇದನ್ನು ಸ್ವಯಂ
ತಿಳಿದುಕೊಂಡಿರಲಿಲ್ಲ. ಯಾರು ಇದನ್ನು ಸ್ವಯಂ ಮಾಡಿದ್ದಾರೋ ಅವರು ಈಗ ಇಲ್ಲ. ಅವರೇ
ತಿಳಿದುಕೊಂಡಿಲ್ಲವೆಂದಾಗ ಅನ್ಯರು ಹೇಗೆ ತಿಳಿದುಕೊಳ್ಳಲು ಸಾಧ್ಯ. ಸರ್ವವ್ಯಾಪಿಯ ಜ್ಞಾನದಲ್ಲಿ ಏನೂ
ಸಹ ಪ್ರಾಪ್ತಿ ಇಲ್ಲ, ಯೋಗ ಯಾರ ಜೊತೆ ಬೆಳೆಸುವುದು, ಕರೆಯುವುದು ಯಾರನ್ನು? ಸ್ವಯಂ
ಭಗವಂತನಾಗಿದ್ದಾಗ ಕರೆಯುವುದು ಯಾರನ್ನು? ಬಹಳ ಆಶ್ಚರ್ಯವಾಗಿದೆ. ಬಹಳ ಭಕ್ತಿ ಯಾರು ಮಾಡುತ್ತಾರೋ
ಅವರಿಗೆ ಗೌರವವನ್ನು ಕೊಡಲಾಗುತ್ತದೆ. ಭಕ್ತ ಮಾಲೆ ಇದೆಯಲ್ಲವೇ. ಜ್ಞಾನಮಾಲೆ ರುದ್ರ ಮಾಲೆಯಾಗಿದೆ.
ಇದು ಭಕ್ತಿಯ ಮಾಲೆಯಾಗಿದೆ. ಅದು ನಿರಾಕಾರಿ ಮಾಲೆಯಾಗಿದೆ. ಎಲ್ಲಾ ಆತ್ಮಗಳು ಅಲ್ಲಿಯೇ ಇರುತ್ತಾರೆ.
ಅದರಲ್ಲೂ ಮೊದಲಿನ ನಂಬರ್ ಆತ್ಮ ಯಾರದ್ದಾಗಿದೆ? ಯಾರು ನಂಬರ್ವನ್ನಲ್ಲಿ ಬರುತ್ತಾರೆ, ಸರಸ್ವತಿಯ
ಆತ್ಮ ಹಾಗೂ ಬ್ರಹ್ಮನ ಆತ್ಮ ಚೆನ್ನಾಗಿ ಓದುತ್ತಾರೆ. ಇದು ಆತ್ಮನ ಮಾತಾಗಿದೆ. ಭಕ್ತಿಮಾರ್ಗದಲ್ಲಿ
ಇದ್ದಾಗ ಎಲ್ಲಾ ಶಾರೀರಿಕ ಮಾತುಗಳಾಗಿವೆ. ಅಲ್ಲಿ ಇಂತಹ ಭಕ್ತರು ಈ ರೀತಿ ಇದ್ದರು ಎಂದು ಅವರ ಶರೀರದ
ಹೆಸರನ್ನು ತೆಗೆದುಕೊಳ್ಳುತ್ತಾರೆ. ಆದರೆ ನೀವು ಮನುಷ್ಯರ ಮಾತನ್ನು ಆಡುವುದಿಲ್ಲ. ಬ್ರಹ್ಮನ ಆತ್ಮ
ಏನಾಗುತ್ತದೆ ಎಂದು ನೀವು ಮಕ್ಕಳಿಗೆ ತಿಳಿದಿದೆ. ಅವರು ಶರೀರವನ್ನು ಧಾರಣೆ ಮಾಡಿಕೊಂಡು ರಾಜರಿಗಿಂತ
ರಾಜರಾಗುತ್ತಾರೆ. ಆತ್ಮ ಶರೀರದಲ್ಲಿ ಪ್ರವೇಶ ಮಾಡಿ ರಾಜ್ಯ ಮಾಡುತ್ತದೆ. ಈಗ ಈ ಸಮಯದಲ್ಲಿ
ರಾಜನಾಗಿಲ್ಲ. ರಾಜ್ಯವನ್ನು ಮಾಡುವುದೇ ಆತ್ಮ ಆಗಿದೆಯಲ್ಲವೇ. ನಾನು ರಾಜನಾಗಿದ್ದೇನೆ, ನಾನು
ಆತ್ಮನಾಗಿದ್ದೇನೆ, ಈ ಶರೀರದ ಮಾಲೀಕನಾಗಿದ್ದೇನೆ. ನಾನು ಆತ್ಮ ಶರೀರದ ಹೆಸರು ಶ್ರೀ ನಾರಾಯಣನದ್ದು
ಇಟ್ಟುಕೊಂಡು ನಂತರ ರಾಜ್ಯವನ್ನು ಮಾಡುತ್ತೇನೆ. ಆತ್ಮವೇ ಕೇಳುತ್ತದೆ ಮತ್ತು ಧಾರಣೆ ಮಾಡುತ್ತದೆ.
ಆತ್ಮದಲ್ಲಿ ಸಂಸ್ಕಾರ ಇರುತ್ತದೆ. ಈಗ ನಾನು ಶ್ರೀಮತದಂತೆ ನಡೆದು ತಂದೆಯಿಂದ ರಾಜ್ಯ ಪದವಿಯನ್ನು
ತೆಗೆದುಕೊಳ್ಳುತ್ತೇನೆ ಎಂದು ನಿಮಗೆ ತಿಳಿದಿದೆ. ಬಾಪ್ದಾದಾ ಇಬ್ಬರು ಒಟ್ಟಿಗೆ ಸೇರಿ ಮಕ್ಕಳೇ ಎಂದು
ಹೇಳುತ್ತಾರೆ, ಇಬ್ಬರಿಗೂ ಮಕ್ಕಳೇ ಎಂದು ಹೇಳುವ ಅಧಿಕಾರವಿದೆ. ಆತ್ಮರಿಗೆ ನಿರಾಕಾರಿ ಮಕ್ಕಳೇ
ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಹೇಳುತ್ತಾರೆ. ಹೇ! ನಿರಾಕಾರಿ ಆತ್ಮಗಳೇ, ಹೇ! ಆತ್ಮಗಳೇ
ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಬೇರೆ ಯಾರಿಗೂ ಹೇಳುವ ಅಧಿಕಾರವಿಲ್ಲ. ತಂದೆಯೇ ಆತ್ಮಗಳ ಜೊತೆ
ಮಾತನಾಡುತ್ತಾರೆ. ಹೇ! ಪರಮಾತ್ಮ ನಾನು ಪರಮಾತ್ಮನನ್ನು ನೆನಪು ಮಾಡು ಎಂದು ಹೇಳಲು ಸಾಧ್ಯವಿಲ್ಲ.
ಹೇ! ಆತ್ಮಗಳೇ ನನ್ನ ಒಬ್ಬ ತಂದೆಯನ್ನೇ ನೆನಪು ಮಾಡಿದಾಗ ಈ ಯೋಗದ ಅಗ್ನಿಯಿಂದ ನಿಮ್ಮ ವಿಕರ್ಮದ
ವಿನಾಶ ಆಗುತ್ತದೆ ಎಂದು ಹೇಳುತ್ತಾರೆ. ಬಾಕಿ ಗಂಗಾಸ್ನಾನದಿಂದ ಯಾವುದೇ ಪಾಪಾತ್ಮ ಎಂದೂ ಸಹ
ಪುಣ್ಯಾತ್ಮ ಆಗಲು ಸಾಧ್ಯವಿಲ್ಲ. ಏಕೆಂದರೆ ಗಂಗಾಸ್ನಾನ ಮಾಡಿ ಬಂದು ಪಾಪವನ್ನು ಮಾಡುತ್ತಾರೆ. ಈ
ವಿಕಾರಗಳ ಕಾರಣದಿಂದಲೇ ಪಾಪಾತ್ಮರಾಗುತ್ತಾರೆ ಎಂದು ಯಾರೂ ಸಹ ತಿಳಿದುಕೊಂಡಿಲ್ಲ. ಈಗ ನಿಮಗೆ
ರಾಹುವಿನ ಕಠಿಣವಾದ ಗ್ರಹಣ ಹಿಡಿದಿದೆ ಎಂದು ತಂದೆಯೇ ತಿಳಿಸುತ್ತಾರೆ. ಮೊದಲು ಸ್ವಲ್ಪ ಗ್ರಹಣ ಇತ್ತು.
ಈಗ ದಾನವನ್ನು ಕೊಟ್ಟರೆ ಗ್ರಹಣ ಬಿಟ್ಟು ಹೋಗುತ್ತದೆ. ಪ್ರಾಪ್ತಿಯೂ ಸಹ ಬಹಳ ದೊಡ್ಡದಾಗಿದೆ ಅಂದಾಗ
ಪುರುಷಾರ್ಥವೂ ಅದೇ ರೀತಿ ಮಾಡಬೇಕಲ್ಲವೇ. ನಾನು ನಿಮ್ಮನ್ನು ರಾಜರಿಗಿಂತ ರಾಜರನ್ನಾಗಿ ಮಾಡುತ್ತೇನೆ
ಆದ್ದರಿಂದ ನನ್ನನ್ನು ಮತ್ತು ಆಸ್ತಿಯನ್ನು ನೆನಪು ಮಾಡಿ ಎಂದು ತಂದೆ ಹೇಳುತ್ತಾರೆ. ತಮ್ಮ 84
ಜನ್ಮಗಳನ್ನು ನೆನಪು ಮಾಡಿ ಆದ್ದರಿಂದ ತಂದೆಯೇ ಸ್ವದರ್ಶನ ಚಕ್ರಧಾರಿ ಮಕ್ಕಳು ಎಂದು ಹೆಸರನ್ನು
ಇಟ್ಟಿದ್ದಾರೆ ಅಂದಾಗ ಸ್ವದರ್ಶನಚಕ್ರದ ಜ್ಞಾನ ಬೇಕಲ್ಲವೇ.
ಹಳೆಯ ಪ್ರಪಂಚ
ವಿನಾಶವಾಗುತ್ತದೆ ಎಂದು ತಂದೆಯೇ ತಿಳಿಸುತ್ತಾರೆ. ನಿಮ್ಮನ್ನು ನಾನು ಹೊಸ ಪ್ರಪಂಚಕ್ಕೆ ಕರೆದುಕೊಂಡು
ಹೋಗುತ್ತೇನೆ. ಸನ್ಯಾಸಿಗಳು ಕೇವಲ ಮನೆಯನ್ನು ಮರೆಯುತ್ತಾರೆ, ನೀವು ಇಡೀ ಪ್ರಪಂಚವನ್ನೇ ಮರೆಯಬೇಕು.
ಇಲ್ಲಿ ತಂದೆಯೇ ಅಶರೀರಿಗಳಾಗಿ ಎಂದು ಹೇಳುತ್ತಾರೆ. ನಾನು ನಿಮ್ಮನ್ನು ಹೊಸ ಪ್ರಪಂಚಕ್ಕೆ
ಕರೆದುಕೊಂಡು ಹೋಗುತ್ತೇನೆ, ಆದ್ದರಿಂದ ಹಳೆಯ ಪ್ರಪಂಚವನ್ನು, ಹಳೆಯ ಶರೀರವನ್ನು ಮರೆಯಬೇಕು ನಂತರ
ಹೊಸ ಪ್ರಪಂಚದಲ್ಲಿ ನಿಮಗೆ ಹೊಸ ಶರೀರ ಸಿಗುತ್ತದೆ. ನೋಡಿ, ಕೃಷ್ಣನಿಗೆ ಶ್ಯಾಮ ಸುಂದರ ಎಂದು
ಹೇಳುತ್ತಾರೆ. ಸತ್ಯಯುಗದಲ್ಲಿ ಅವನು ಸುಂದರನಾಗಿದ್ದನು, ಈಗ ಅಂತಿಮ ಜನ್ಮದಲ್ಲಿ ಪತಿತನಾಗಿದ್ದಾನೆ
ಅಂದಾಗ ಶ್ಯಾಮನೇ ಸುಂದರನಾಗುತ್ತಾನೆ, ನಂತರ ಸುಂದರನೇ ಶ್ಯಾಮನಾಗುತ್ತಾನೆ ಎಂದು ಹೇಳುತ್ತಾರೆ.
ಅಂದಾಗ ಶ್ಯಾಮ ಸುಂದರ ಎಂದು ಹೆಸರನ್ನು ಇಡಲಾಗಿದೆ. ಪತಿತರನ್ನಾಗಿ ಪಂಚವಿಕಾರ ರಾವಣ ಮಾಡುತ್ತಾನೆ
ಮತ್ತು ಪುನಃ ಸುಂದರರನ್ನಾಗಿ ಪರಮಾತ್ಮ ಮಾಡುತ್ತಾರೆ. ಚಿತ್ರದಲ್ಲಿಯೂ ಸಹ ನಾನೇ ಹಳೆಯ ಪ್ರಪಂಚವನ್ನು
ಒದ್ದು ಸುಂದರನಾಗುತ್ತಿದ್ದೇನೆ ಎಂದು ತೋರಿಸಲಾಗಿದೆ. ಸುಂದರ ಆತ್ಮ ಸ್ವರ್ಗದ ಮಾಲೀಕ ಆಗುತ್ತದೆ.
ಪತಿತ ಆತ್ಮ ನರಕದ ಮಾಲೀಕ ಆಗುತ್ತದೆ. ಆತ್ಮವೇ ಸುಂದರ ಮತ್ತು ಪತಿತವಾಗುತ್ತದೆ. ಈಗ ನೀವು
ಪವಿತ್ರರಾಗಬೇಕು ಎಂದು ತಂದೆ ಹೇಳುತ್ತಾರೆ. ಆ ಹಠಯೋಗಿಗಳು ಪವಿತ್ರರಾಗುವುದಕ್ಕೋಸ್ಕರ ಬಹಳ ಹಠವನ್ನು
ಮಾಡುತ್ತಾರೆ. ಆದರೆ ಯೋಗವಿಲ್ಲದಾಗ ಪವಿತ್ರರಾಗಲು ಸಾಧ್ಯವಿಲ್ಲ. ಶಿಕ್ಷೆಗಳನ್ನು ಭೋಗಿಸಿ
ಪವಿತ್ರರಾಗಬೇಕಾಗುತ್ತದೆ. ಆದ್ದರಿಂದ ತಂದೆಯನ್ನು ನೆನಪು ಮಾಡಿ ಪಂಚವಿಕಾರಗಳನ್ನು ಏಕೆ ಜಯಿಸಬಾರದು.
ಈ ಕಾಮ ವಿಕಾರವೇ ಆದಿ-ಮಧ್ಯ-ಅಂತ್ಯ ದುಃಖವನ್ನು ಕೊಡುತ್ತದೆ ಎಂದು ತಂದೆಯು ಹೇಳುತ್ತಾರೆ. ಯಾರು
ವಿಕಾರಗಳನ್ನು ಜಯಿಸುವುದಿಲ್ಲವೋ ಅವರು ವೈಕುಂಠದ ರಾಜರಾಗಲು ಸಾಧ್ಯವಿಲ್ಲ. ಆದ್ದರಿಂದ ತಂದೆ ನಮಗೆ
ತಂದೆ, ಶಿಕ್ಷಕ, ಸದ್ಗುರುವಿನ ರೂಪದಲ್ಲಿ ಎಷ್ಟೊಂದು ಒಳ್ಳೆಯ ಕರ್ಮವನ್ನು ಕಲಿಸುತ್ತಿದ್ದಾರೆ.
ಯೋಗಬಲದಿಂದಲೇ ವಿಕರ್ಮವನ್ನು ವಿನಾಶ ಮಾಡಿಸಿ ವಿಕರ್ಮಾಜೀತ ರಾಜರನ್ನಾಗಿ ಮಾಡುತ್ತಾರೆ.
ವಾಸ್ತವದಲ್ಲಿ ಸತ್ಯಯುಗದ ದೇವೀ-ದೇವತೆಗಳಿಗೆ ವಿಕರ್ಮಾಜೀತರೆಂದು ಹೇಳಲಾಗುತ್ತದೆ. ಅಲ್ಲಿ
ವಿಕರ್ಮಗಳು ಆಗುವುದಿಲ್ಲ. ವಿಕರ್ಮಾಜೀತ ಸಂವತ್ಸರ ಮತ್ತು ವಿಕರ್ಮ ಸಂವತ್ಸರ ಬೇರೆ-ಬೇರೆಯಾಗಿದೆ.
ಒಬ್ಬ ರಾಜ ವಿಕರ್ಮನಾಗಿ ಹೋಗಿದ್ದಾನೆ. ಮತ್ತು ವಿಕರ್ಮಾಜೀತರಾಜನಾಗಿದ್ದೂ ಸಹ ಹೋಗಿದ್ದಾರೆ. ನಾವೀಗ
ವಿಕರ್ಮಾಜೀತರಾಗುತ್ತಿದ್ದೇವೆ ನಂತರ ದ್ವಾಪರಯುಗದಿಂದ ಹೊಸ ವಿಕರ್ಮಗಳು ಪ್ರಾರಂಭವಾಗುತ್ತವೆ ಅಂದಾಗ
ರಾಜಾ-ವಿಕ್ರಮ ಎಂದು ಹೆಸರನ್ನು ಇಡಲಾಗಿದೆ. ದೇವತೆಗಳು ವಿಕರ್ಮಜೀತರಾಗಿದ್ದಾರೆ. ಈಗ ನಾವೇ ಆ
ರೀತಿಯಾಗಿ ನಂತರ ವಾಮ ಮಾರ್ಗದಲ್ಲಿ ಬಂದಾಗ ವಿಕರ್ಮದ ಖಾತೆ ಪ್ರಾರಂಭವಾಗುತ್ತದೆ. ಇಲ್ಲಿಯ
ವಿಕರ್ಮಗಳ ಖಾತೆ ಸಮಾಪ್ತಿ ಮಾಡಿ ನಂತರ ನಾವೇ ವಿಕರ್ಮಾಜೀತರಾಗುತ್ತೇವೆ. ಅಲ್ಲಿ ಯಾವುದೇ ವಿಕರ್ಮಗಳು
ಆಗುವುದಿಲ್ಲ ಅಂದಾಗ ನೀವು ಮಕ್ಕಳಿಗೆ ನಾವೇ ಶ್ರೇಷ್ಠ ಅದೃಷ್ಟವನ್ನು ಮಾಡಿಕೊಳ್ಳುತ್ತಿದ್ದೇವೆ
ಎನ್ನುವ ನಶೆ ಇರಬೇಕು. ಇದು ಅತೀ ದೊಡ್ಡ ಅದೃಷ್ಟವನ್ನು ಮಾಡಿಕೊಳ್ಳುವಂತಹ ಪಾಠಶಾಲೆಯಾಗಿದೆ.
ಅದೃಷ್ಟವನ್ನು ಮಾಡಿಕೊಳ್ಳುವ ಮಾತಿಲ್ಲ. ಪಾಠಶಾಲೆಯಲ್ಲಿ ಸದಾ ಅದೃಷ್ಟವನ್ನು ಮಾಡಿಕೊಳ್ಳುತ್ತಾರೆ.
ನೀವು ನರನಿಂದ ನಾರಾಯಣ ಅಥವಾ ರಾಜರಿಗಿಂತ ರಾಜರಾಗುತ್ತೀರಿ. ಅವಶ್ಯವಾಗಿ ಪತಿತರಾಜರುಗಳು
ಪಾವನರಾಜರುಗಳನ್ನು ಪೂಜಿಸುತ್ತಾರೆ. ನಾನೇ ನಿಮ್ಮನ್ನು ಪಾವನರನ್ನಾಗಿ ಮಾಡುತ್ತೇನೆ. ಪತಿತ
ಪ್ರಪಂಚದಲ್ಲಿ ಇದ್ದಾಗ ರಾಜ್ಯ ಭಾರ ಮಾಡುವುದಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ
ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಬುದ್ಧಿಯಲ್ಲಿ
ಸ್ವದರ್ಶನ ಚಕ್ರದ ಜ್ಞಾನವನ್ನು ಇಟ್ಟುಕೊಂಡು ರಾಹುವಿನ ಗ್ರಹಣದಿಂದ ಮುಕ್ತರಾಗಬೇಕು. ಶ್ರೇಷ್ಠ
ಕರ್ಮ ಮತ್ತು ಯೋಗಬಲದಿಂದ ವಿಕರ್ಮಗಳ ಖಾತೆಯನ್ನು ಸಮಾಪ್ತಿ ಮಾಡಿ ಕರ್ಮಾಜೀತರಾಗಬೇಕಾಗಿದೆ.
2. ತಮ್ಮ ಶ್ರೇಷ್ಠ
ಅದೃಷ್ಟವನ್ನು ಮಾಡಿಕೊಳ್ಳುವುದಕ್ಕೋಸ್ಕರ ವಿದ್ಯೆಯ ಕಡೆ ಸಂಪೂರ್ಣ ಗಮನವನ್ನು ಕೊಡಬೇಕಾಗಿದೆ.
ವರದಾನ:
ಬಾಹ್ಯಮುಖತೆಯ
ರಸಗಳ ಆಕರ್ಷಣೆಯ ಬಂದನಗಳಿಂದ ಮುಕ್ತರಾಗಿರುವಂತಹ ಜೀವನ್ಮುಕ್ತ ಭವ
ಬಾಹ್ಯಮುಖತೆ ಅರ್ಥಾತ್
ವ್ಯಕ್ತಿಯ ಭಾವ-ಸ್ವಭಾವ ಮತ್ತು ವ್ಯಕ್ತ ಭಾವದ ವೈಭ್ರೇಷನ್, ಸಂಕಲ್ಪ, ಮಾತು ಮತ್ತು ಸಂಬಂಧ,
ಸಂಪರ್ಕದ ಮುಖಾಂತರ ಒಬ್ಬರಿನ್ನೊಬ್ಬರನ್ನು ವ್ಯರ್ಥದ ಕಡೆ ಉತ್ತೇಜಿಸುವವರು, ಸದಾ ಯಾವುದಾದರೂ
ಪ್ರಕಾರದ ವ್ಯರ್ಥ ಚಿಂತನೆಯಲ್ಲಿರುವವರು, ಆಂತರಿಕ ಸುಖ, ಶಾಂತಿ ಮತ್ತು ಶಕ್ತಿಯಿಂದ ದೂರ..... ಇದು
ಬಾಹ್ಯಮುಖತೆಯ ರಸವೂ ಸಹ ಹೊರಗಿನಿಂದ ಬಹಳ ಆಕರ್ಷಣೆ ಮಾಡುವುದು, ಆದ್ದರಿಂದ ಮೊದಲು ಇದನ್ನು
ಕತ್ತರಿಸಿ ಹಾಕಿ. ಈ ರಸವೇ ಸೂಕ್ಷ್ಮ ಬಂಧನವಾಗಿ ಸಫಲತೆಯ ಗುರಿಯನ್ನು ದೂರ ಮಾಡಿಬಿಡುವುದು, ಯಾವಾಗ
ಈ ಬಂಧನಗಳಿಂದ ಮುಕ್ತರಾಗುವಿರಿ ಆಗ ಹೇಳಲಾಗುವುದು ಜೀವನಮುಕ್ತ.
ಸ್ಲೋಗನ್:
ಯಾರು ಒಳ್ಳೆಯ
ಹಾಗೂ ಕೆಟ್ಟ ಕರ್ಮ ಮಾಡುವವರ ಪ್ರಭಾವದ ಬಂಧನದಿಂದ ಮುಕ್ತವಾಗಿದ್ದು ಸಾಕ್ಷಿ ಅಥವಾ
ದಯಾಹೃದಯಿಯಾಗಿರುತ್ತಾರೆ ಅವರೇ ತಪಸ್ವಿಯಾಗಿದ್ದಾರೆ.