17.02.21         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನೀವು ಬ್ರಾಹ್ಮಣರೇ ದೇವತೆಗಳಾಗುತ್ತೀರಿ, ನೀವೇ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೀರಿ ಆದ್ದರಿಂದ ನಿಮಗೆ ತಮ್ಮ ಬ್ರಾಹ್ಮಣ ಜಾತಿಯ ನಶೆಯಿರಬೇಕು.

ಪ್ರಶ್ನೆ:
ಸತ್ಯ ಬ್ರಾಹ್ಮಣರ ಮುಖ್ಯ ಲಕ್ಷಣಗಳೇನಿರುವುದು?

ಉತ್ತರ:
1. ಸತ್ಯ ಬ್ರಾಹ್ಮಣರ ಬುದ್ಧಿರೂಪಿ ಹಗ್ಗವು ಈ ಹಳೆಯ ಪ್ರಪಂಚದಿಂದ ಬಿಚ್ಚಲ್ಪಟ್ಟಿರುವುದು. ಅವರು ಈ ಪ್ರಪಂಚದ ತೀರವನ್ನು ಬಿಟ್ಟು ಬಿಟ್ಟರು. 2. ಸತ್ಯ ಬ್ರಾಹ್ಮಣರೆಂದರೆ ಕೈಗಳಿಂದ ಕೆಲಸ ಮಾಡುತ್ತಾ ಬುದ್ಧಿಯಿಂದ ಸದಾ ತಂದೆಯ ನೆನಪಿನಲ್ಲಿರುವವರು ಅರ್ಥಾತ್ ಕರ್ಮಯೋಗಿಯಾಗಿರುವವರು. 3. ಬ್ರಾಹ್ಮಣರು ಅರ್ಥಾತ್ ಕಮಲ ಪುಷ್ಫ ಸಮಾನರು. 4. ಬ್ರಾಹ್ಮಣರು ಅರ್ಥಾತ್ ಸದಾ ಆತ್ಮಾಭಿಮಾನಿಯಾಗಿರುವ ಪುರುಷಾರ್ಥ ಮಾಡುವವರು. 5. ಬ್ರಾಹ್ಮಣರು ಅರ್ಥಾತ್ ಕಾಮ ಮಹಾಶತ್ರುವಿನ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಕೊಳ್ಳುವವರು.

ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ. ಮಕ್ಕಳು ಯಾರು? ಈ ಬ್ರಾಹ್ಮಣರು. ಇದನ್ನು ಎಂದೂ ಮರೆಯಬೇಡಿ - ನಾವು ಬ್ರಾಹ್ಮಣರಾಗಿದ್ದೇವೆ, ದೇವತೆಗಳಾಗುವವರಿದ್ದೇವೆ. ವರ್ಣಗಳನ್ನೂ ಸಹ ನೆನಪು ಮಾಡಿಕೊಳ್ಳಬೇಕಾಗುತ್ತದೆ. ನೀವಿಲ್ಲಿ ಪರಸ್ಪರ ಕೇವಲ ಬ್ರಾಹ್ಮಣರೇ ಬ್ರಾಹ್ಮಣರಿದ್ದೀರಿ. ಬ್ರಾಹ್ಮಣರಿಗೆ ಬೇಹದ್ದಿನ ತಂದೆಯು ಓದಿಸುತ್ತಾರೆ. ಇಲ್ಲಿ ಬ್ರಹ್ಮಾರವರು ಓದಿಸುವುದಿಲ್ಲ, ಶಿವ ತಂದೆಯು ಬ್ರಹ್ಮಾರವರ ಮೂಲಕ ಬ್ರಾಹ್ಮಣರಿಗೆ ಓದಿಸುತ್ತಾರೆ. ಶೂದ್ರರಿಂದ ಬ್ರಾಹ್ಮಣರಾಗದ ಹೊರತು ದೇವಿ-ದೇವತೆಗಳಾಗಲು ಸಾಧ್ಯವಿಲ್ಲ, ಆಸ್ತಿಯು ಶಿವ ತಂದೆಯಿಂದಲೇ ಸಿಗುತ್ತದೆ. ಆ ಶಿವ ತಂದೆಯು ಎಲ್ಲರ ತಂದೆಯಾಗಿದ್ದಾರೆ. ಈ ಬ್ರಹ್ಮಾರವರಿಗೆ ಗ್ರೇಟ್ ಗ್ರೇಟ್ ಗ್ರಾಂಡ್ಫಾದರ್ ಎಂದು ಹೇಳುತ್ತಾರೆ. ಎಲ್ಲರಿಗೂ ಲೌಕಿಕ ತಂದೆ ಇರುತ್ತಾರೆ, ಪಾರಲೌಕಿಕ ತಂದೆಯನ್ನು ಭಕ್ತಿಮಾರ್ಗದಲ್ಲಿ ನೆನಪು ಮಾಡುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ - ಇವರು ಅಲೌಕಿಕ ತಂದೆಯಾಗಿದ್ದಾರೆ, ಇವರನ್ನು ಯಾರೂ ತಿಳಿದುಕೊಂಡಿಲ್ಲ. ಭಲೆ ಬ್ರಹ್ಮನ ಮಂದಿರವಿದೆ, ಇಲ್ಲಿಯೂ ಪ್ರಜಾಪಿತ ಆದಿ ದೇವನ ಮಂದಿರವಿದೆ, ಅವರನ್ನು ಕೆಲವರು ಮಹಾವೀರನೆಂದು ಹೇಳುತ್ತಾರೆ. ಹೃದಯವನ್ನು ತೆಗೆದುಕೊಳ್ಳುವವರೆಂದು ಹೇಳುತ್ತಾರೆ ಆದರೆ ಹೃದಯವನ್ನು ಗೆಲ್ಲುವವರು ಶಿವ ತಂದೆಯಾಗಿದ್ದಾರೆಯೇ ಹೊರತು ಪ್ರಜಾಪಿತ, ಆದಿದೇವ ಬ್ರಹ್ಮನಲ್ಲ. ಎಲ್ಲಾ ಆತ್ಮರನ್ನು ಸದಾ ಸುಖಿಯನ್ನಾಗಿ ಮಾಡುವವರು, ಖುಷಿ ಪಡಿಸುವವರು ಒಬ್ಬರೇ ತಂದೆಯಾಗಿದ್ದಾರೆ, ಇದನ್ನು ಕೇವಲ ನೀವೇ ತಿಳಿದುಕೊಂಡಿದ್ದೀರಿ. ಪ್ರಪಂಚದಲ್ಲಂತೂ ಮನುಷ್ಯರು ಏನೂ ತಿಳಿದುಕೊಂಡಿಲ್ಲ. ತುಚ್ಛ ಬುದ್ಧಿಯವರಾಗಿದ್ದಾರೆ, ನಾವು ಬ್ರಾಹ್ಮಣರೇ ಶಿವ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ನೀವೂ ಸಹ ಇದನ್ನು ಪದೇ-ಪದೇ ಮರೆತು ಹೋಗುತ್ತೀರಿ. ನೆನಪು ಅತಿ ಸಹಜವಾಗಿದೆ. ಯೋಗ ಶಬ್ಧವನ್ನು ಸನ್ಯಾಸಿಗಳು ಇಟ್ಟಿದ್ದಾರೆ. ನೀವಂತೂ ತಂದೆಯನ್ನು ನೆನಪು ಮಾಡುತ್ತೀರಿ, ಯೋಗ ಎಂಬುದು ಸಾಮಾನ್ಯ ಶಬ್ಧವಾಗಿದೆ, ಇದಕ್ಕೆ ಯೋಗಾಶ್ರಮವೆಂದೂ ಹೇಳುವುದಿಲ್ಲ ಏಕೆಂದರೆ ಇಲ್ಲಿ ತಂದೆ ಮತ್ತು ಮಕ್ಕಳು ಕುಳಿತಿದ್ದೀರಿ. ಬೇಹದ್ದಿನ ತಂದೆಯನ್ನು ನೆನಪು ಮಾಡುವುದು ಮಕ್ಕಳ ಕರ್ತವ್ಯವಾಗಿದೆ. ನಾವು ಬ್ರಾಹ್ಮಣರಾಗಿದ್ದೇವೆ, ಬ್ರಹ್ಮಾರವರ ಮೂಲಕ ತಂದೆಯಿಂದ ಆಸ್ತಿಯನ್ನು ಪಡೆಯುತ್ತಿದ್ದೇವೆ ಆದ್ದರಿಂದ ಶಿವ ತಂದೆಯು ತಿಳಿಸುತ್ತಾರೆ - ಎಷ್ಟು ಸಾಧ್ಯವೋ ನೆನಪು ಮಾಡುತ್ತಾ ಇರಿ. ಭಲೆ ಚಿತ್ರವನ್ನೂ ಇಟ್ಟುಕೊಳ್ಳಿ ಆಗ ನೆನಪಿರುವುದು - ನಾವು ಬ್ರಾಹ್ಮಣರಾಗಿದ್ದೇವೆ, ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಬ್ರಾಹ್ಮಣರು ಎಂದಾದರೂ ತಮ್ಮ ಜಾತಿಯನ್ನು ಮರೆಯುತ್ತಾರೆಯೇ? ನೀವು ಶೂದ್ರರ ಸಂಗದಲ್ಲಿ ಬರುವುದರಿಂದ ಬ್ರಾಹ್ಮಣತನವನ್ನು ಮರೆತು ಹೋಗುತ್ತೀರಿ. ಬ್ರಾಹ್ಮಣರಂತೂ ದೇವತೆಗಳಿಗಿಂತಲೂ ಶ್ರೇಷ್ಠರಾಗಿದ್ದಾರೆ ಏಕೆಂದರೆ ನೀವು ಬ್ರಾಹ್ಮಣರೇ ಜ್ಞಾನ ಪೂರ್ಣರಾಗಿದ್ದೀರಿ. ಭಗವಂತನಿಗೆ ಸರ್ವಜ್ಞನೆಂದು ಹೇಳುತ್ತಾರೆ, ಅದರ ಅರ್ಥವನ್ನೂ ತಿಳಿದುಕೊಂಡಿಲ್ಲ. ಅವರು ಎಲ್ಲರ ಹೃದಯಗಳಲ್ಲಿ ಏನಿದೆ ಎಂಬುದನ್ನು ಕುಳಿತು ನೋಡುತ್ತಾರೆಂದಲ್ಲ. ಸರ್ವಜ್ಞನೆಂದರೆ ಅವರಿಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ, ಅವರು ಬೀಜರೂಪನಾಗಿದ್ದಾರೆ. ವೃಕ್ಷದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದಾರೆ ಅಂದಮೇಲೆ ಇಂತಹ ತಂದೆಯನ್ನು ಬಹಳ ನೆನಪು ಮಾಡಬೇಕಾಗಿದೆ. ಈ ಬ್ರಹ್ಮಾರವರ ಆತ್ಮವೂ ಸಹ ಆ ತಂದೆಯನ್ನು ನೆನಪು ಮಾಡುತ್ತದೆ. ತಂದೆಯು ತಿಳಿಸುತ್ತಾರೆ - ಈ ಬ್ರಹ್ಮನೂ ನನ್ನನ್ನು ನೆನಪು ಮಾಡುತ್ತಾರೆ ಆದ್ದರಿಂದಲೇ ಈ ಪದವಿಯನ್ನು ಪಡೆಯುತ್ತಾರೆ. ನೀವೂ ನೆನಪು ಮಾಡುತ್ತೀರಿ ಆಗಲೇ ಪದವಿ ಪಡೆಯುತ್ತೀರಿ. ಮೊಟ್ಟ ಮೊದಲು ನೀವು ಅಶರೀರಿಯಾಗಿ ಬಂದಿದ್ದೀರಿ ಮತ್ತೆ ಅಶರೀರಿಯಾಗಿ ಹಿಂತಿರುಗಿ ಹೋಗಬೇಕಾಗಿದೆ ಮತ್ತೆಲ್ಲರೂ ನಿಮಗೆ ದುಃಖ ಕೊಡುವವರಾಗಿದ್ದಾರೆ. ಅವರನ್ನು ಏಕೆ ನೆನಪು ಮಾಡುತ್ತೀರಿ? ಯಾವಾಗ ನಾನು ನಿಮಗೆ ಸಿಕ್ಕಿದ್ದೇನೋ, ನಾನು ನಿಮ್ಮನ್ನು ಹೊಸ ಪ್ರಪಂಚದಲ್ಲಿ ಕರೆದುಕೊಂಡು ಹೋಗಲು ಬಂದಿದ್ದೇನೆ. ಅಲ್ಲಿ ಯಾವುದೇ ದುಃಖವಿರುವುದಿಲ್ಲ, ದೈವೀ ಸಂಬಂಧವಿರುತ್ತದೆ. ಇಲ್ಲಿ ಮೊಟ್ಟ ಮೊದಲು ಸ್ತ್ರೀ-ಪುರುಷನ ಸಂಬಂಧದಲ್ಲಿ ದುಃಖವಾಗುತ್ತದೆ ಏಕೆಂದರೆ ವಿಕಾರಿಗಳಾಗುತ್ತಾರೆ. ಈಗ ನಿಮ್ಮನ್ನು ಇಂತಹ ಪ್ರಪಂಚದ ಮಾಲೀಕರನ್ನಾಗಿ ಮಾಡುತ್ತೇನೆ ಎಲ್ಲಿ ವಿಕಾರದ ಮಾತೇ ಇರುವುದಿಲ್ಲ. ಕಾಮ ಮಹಾಶತ್ರುವೆಂದು ಗಾಯನವಿದೆ, ಇದು ಆದಿ-ಮಧ್ಯ-ಅಂತ್ಯ ದುಃಖ ಕೊಡುತ್ತದೆ. ಕ್ರೋಧವು ಆದಿ-ಮಧ್ಯ-ಅಂತ್ಯ ದುಃಖ ಕೊಡುತ್ತದೆ ಎಂದು ಹೇಳುವುದಿಲ್ಲ ಅಂದಮೇಲೆ ಮೊದಲು ಕಾಮ ವಿಕಾರವನ್ನು ಗೆಲ್ಲಬೇಕು. ಅದೇ ಆದಿ-ಮಧ್ಯ-ಅಂತ್ಯ ದುಃಖ ಕೊಡುತ್ತದೆ, ಪತಿತರನ್ನಾಗಿ ಮಾಡುತ್ತದೆ. ಪತಿತ ಶಬ್ಧವು ವಿಕಾರಕ್ಕೆ ಸಲ್ಲುತ್ತದೆ. ಈ ಶತ್ರುವಿನ ಮೇಲೆ ಜಯ ಗಳಿಸಬೇಕಾಗಿದೆ. ನಿಮಗೆ ತಿಳಿದಿದೆ - ನಾವು ಸ್ವರ್ಗದ ದೇವಿ-ದೇವತೆಗಳಾಗುತ್ತಿದ್ದೇವೆ, ಎಲ್ಲಿಯವರೆಗೆ ಈ ನಿಶ್ಚಯವಿಲ್ಲವೋ ಅಲ್ಲಿಯವರೆಗೆ ಏನನ್ನೂ ಪಡೆಯಲು ಸಾಧ್ಯವಿಲ್ಲ.

ತಂದೆಯು ತಿಳಿಸುತ್ತಾರೆ - ಮಕ್ಕಳೇ, ಮನಸ್ಸಾ-ವಾಚಾ-ಕರ್ಮಣಾ ಆಕ್ಯೂರೇಟ್ ಆಗಬೇಕಾಗಿದೆ, ಪರಿಶ್ರಮವಿದೆ. ಪ್ರಪಂಚದಲ್ಲಿ ಇದು ಯಾರಿಗೂ ಗೊತ್ತಿಲ್ಲ - ನೀವು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೀರಿ. ಮುಂದೆ ಹೋದಂತೆ ತಿಳಿದುಕೊಳ್ಳುವರು. ಒಂದು ದೇಶ, ಒಂದು ಭಾಷೆ, ಒಂದು ಧರ್ಮ, ಒಂದು ರಾಜ್ಯವು ಬೇಕೆಂದು ಬಯಸುತ್ತಾರೆ ಅಂದಾಗ ನೀವಿದನ್ನು ತಿಳಿಸಬಹುದು - ಸತ್ಯಯುಗದಲ್ಲಿ ಇಂದಿಗೆ 5000 ವರ್ಷಗಳ ಮೊದಲೂ ಒಂದು ರಾಜ್ಯ, ಒಂದು ಧರ್ಮವಿತ್ತು ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ರಾಮ ರಾಜ್ಯ ಮತ್ತು ರಾವಣ ರಾಜ್ಯವನ್ನು ಯಾರೂ ತಿಳಿದುಕೊಂಡಿಲ್ಲ. 100% ತುಚ್ಛ ಬುದ್ಧಿಯವರಿಂದ ನೀವೀಗ ಸ್ವಚ್ಛ ಬುದ್ಧಿಯವರಾಗುತ್ತೀರಿ ನಂಬರ್ವಾರ್ ಪುರುಷಾರ್ಥದನುಸಾರ. ತಂದೆಯು ಕುಳಿತು ಓದಿಸುತ್ತಾರೆ ಕೇವಲ ನೀವು ತಂದೆಯ ಮತದಂತೆ ನಡೆಯಿರಿ. ತಂದೆಯು ತಿಳಿಸುತ್ತಾರೆ - ಹಳೆಯ ಪ್ರಪಂಚದಲ್ಲಿರುತ್ತಾ ಕಮಲ ಪುಷ್ಫ ಸಮಾನ ಪವಿತ್ರರಾಗಿರಿ, ನನ್ನನ್ನು ನೆನಪು ಮಾಡುತ್ತಾ ಇರಿ. ತಂದೆಯು ಆತ್ಮಗಳಿಗೇ ತಿಳಿಸುತ್ತಾರೆ - ನಾನು ಈ ಕರ್ಮೇಂದ್ರಿಯಗಳ ಮೂಲಕ ಆತ್ಮರಿಗೆ ಓದಿಸಲು ಬಂದಿದ್ದೇನೆ. ನೀವಾತ್ಮರೂ ಸಹ ಕರ್ಮೇಂದ್ರಿಯಗಳ ಮೂಲಕ ಕೇಳಿಸಿಕೊಳ್ಳುತ್ತೀರಿ. ನೀವು ಮಕ್ಕಳು ಆತ್ಮಾಭಿಮಾನಿಯಾಗಬೇಕಾಗಿದೆ, ಇದಂತೂ ಹಳೆಯ ಛೀ ಛೀ ಶರೀರವಾಗಿದೆ. ನೀವು ಬ್ರಾಹ್ಮಣರು ಪೂಜೆಗೆ ಯೋಗ್ಯರಲ್ಲ, ನೀವು ಗಾಯನಕ್ಕೆ ಯೋಗ್ಯರಾಗಿದ್ದೀರಿ. ದೇವತೆಗಳು ಪೂಜೆಗೆ ಯೋಗ್ಯರಾಗಿದ್ದಾರೆ. ನೀವು ಶ್ರೀಮತದಂತೆ ವಿಶ್ವವನ್ನು ಪವಿತ್ರ, ಸ್ವರ್ಗವನ್ನಾಗಿ ಮಾಡುತ್ತೀರಿ ಆದ್ದರಿಂದ ನಿಮ್ಮದು ಗಾಯನವಿದೆ. ನಿಮಗೆ ಪೂಜೆಯಾಗುವುದಿಲ್ಲ, ಗಾಯನವು ಕೇವಲ ನೀವು ಬ್ರಾಹ್ಮಣರದಾಗಿದೆ, ದೇವತೆಗಳದಲ್ಲ. ತಂದೆಯು ನಿಮ್ಮನ್ನು ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡುತ್ತಾರೆ. ಜಗದಂಬಾ ಮತ್ತು ಬ್ರಹ್ಮಾ ಮೊದಲಾದವರ ಮಂದಿರಗಳನ್ನು ಕಟ್ಟಿಸುತ್ತಾರೆ ಆದರೆ ಇವರು ಯಾರೆಂಬುದು ತಿಳಿದಿಲ್ಲ. ಜಗತ್ಪಿತನು ಬ್ರಹ್ಮನಾದರಲ್ಲವೆ, ಅವರಿಗೆ ದೇವತೆಯೆಂದು ಹೇಳುವುದಿಲ್ಲ. ದೇವತೆಗಳ ಆತ್ಮ ಮತ್ತು ಶರೀರ ಎರಡೂ ಪವಿತ್ರವಾಗಿದೆ. ಈಗ ನಿಮ್ಮ ಆತ್ಮವು ಪವಿತ್ರವಾಗಿ ಬಿಡುತ್ತದೆ, ಪವಿತ್ರ ಶರೀರವಿಲ್ಲ. ನೀವೀಗ ಈಶ್ವರನ ಮತದಂತೆ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಿದ್ದೀರಿ. ನೀವೂ ಸ್ವರ್ಗಕ್ಕೆ ಯೋಗ್ಯರಾಗುತ್ತಿದ್ದೀರಿ. ಖಂಡಿತವಾಗಿ ಸತೋಪ್ರಧಾನರಾಗಬೇಕಾಗಿದೆ. ಕೇವಲ ನೀವು ಬ್ರಾಹ್ಮಣರಿಗೇ ತಂದೆಯು ಓದಿಸುತ್ತಾರೆ. ಬ್ರಾಹ್ಮಣರ ವೃಕ್ಷವು ವೃದ್ಧಿಯಾಗುತ್ತಾ ಇರುವುದು. ಬ್ರಾಹ್ಮಣರು ಯಾರು ಪಕ್ಕಾ ಆಗಿ ಬಿಡುವರೋ ಅವರೇ ಹೋಗಿ ಮತ್ತೆ ದೇವತೆಗಳಾಗುವರು. ಇದು ಹೊಸ ವೃಕ್ಷವಾಗಿದೆ. ಮಾಯೆಯ ಬಿರುಗಾಳಿಗಳೂ ಬರುತ್ತವೆ, ಸತ್ಯಯುಗದಲ್ಲಿ ಯಾವುದೇ ಬಿರುಗಾಳಿ ಬರುವುದಿಲ್ಲ. ಇಲ್ಲಿ ಮಾಯೆಯು ತಂದೆಯ ನೆನಪಿನಲ್ಲಿರಲು ಬಿಡುವುದಿಲ್ಲ. ನಾವು ತಂದೆಯ ನೆನಪಿನಲ್ಲಿರಬೇಕು. ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕೆಂದು ಬಯಸುತ್ತೀರಿ, ಎಲ್ಲವೂ ನೆನಪಿನ ಮೇಲೆ ಆಧಾರಿತವಾಗಿದೆ. ಭಾರತದ ಪ್ರಾಚೀನ ಯೋಗವು ಪ್ರಸಿದ್ಧವಾಗಿದೆ. ಪ್ರಾಚೀನ ಯೋಗವನ್ನು ಯಾರಾದರೂ ಬಂದು ಕಲಿಸಲಿ ಎಂದು ವಿದೇಶದವರೂ ಬಯಸುತ್ತಾರೆ. ಈಗ ಯೋಗವು ಎರಡು ಪ್ರಕಾರದ್ದಾಗಿದೆ. ಒಬ್ಬರು ಹಠಯೋಗಿಗಳು, ಇನ್ನೊಬ್ಬರು ರಾಜಯೋಗಿಗಳು. ನೀವು ರಾಜಯೋಗಿಗಳಾಗಿದ್ದೀರಿ. ಇದು ಭಾರತದ ಪ್ರಾಚೀನ ರಾಜಯೋಗವಾಗಿದೆ ಅದನ್ನು ತಂದೆಯೇ ಕಲಿಸುತ್ತಾರೆ. ಕೇವಲ ಗೀತೆಯಲ್ಲಿ ನನ್ನ ಬದಲು ಕೃಷ್ಣನ ಹೆಸರನ್ನು ಹಾಕಿದ್ದಾರೆ. ಎಷ್ಟೊಂದು ಅಂತರವಾಗಿ ಬಿಟ್ಟಿದೆ! ಶಿವ ಜಯಂತಿಯಾದ ಮೇಲೆ ನಿಮ್ಮ ವೈಕುಂಠದ ಜಯಂತಿಯೂ ಆಗುತ್ತದೆ, ಅದರಲ್ಲಿ ಶ್ರೀಕೃಷ್ಣನ ರಾಜ್ಯವಿರುವುದು. ನಿಮಗೆ ತಿಳಿದಿದೆ - ಶಿವ ಜಯಂತಿಯಾದರೆ ಗೀತಾ ಜಯಂತಿಯೂ ಆಗುವುದು. ವೈಕುಂಠದ ಜಯಂತಿಯೂ ಆಗುವುದು. ಅದರಲ್ಲಿ ನೀವು ಪವಿತ್ರರಾಗಿ ಬಿಡುತ್ತೀರಿ. ಕಲ್ಪದ ಮೊದಲಿನ ತರಹ ಸ್ಥಾಪನೆ ಮಾಡುತ್ತೀರಿ. ಈಗ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ. ನೆನಪು ಮಾಡದಿದ್ದರೆ ಮಾಯೆಯು ಯಾವುದಾದರೊಂದು ವಿಕರ್ಮ ಮಾಡಿಸಿ ಬಿಡುತ್ತದೆ. ನೆನಪು ಮಾಡದಿದ್ದರೆ ಪೆಟ್ಟು ಬೀಳುತ್ತದೆ. ನೆನಪಿನಲ್ಲಿದ್ದರೆ ಪೆಟ್ಟು ಬೀಳುವುದಿಲ್ಲ. ಇದು ಮಲ್ಲ ಯುದ್ಧವಾಗಿದೆ. ನಿಮಗೆ ತಿಳಿದಿದೆ - ನಮ್ಮ ಶತ್ರು ಯಾವುದೇ ಮನುಷ್ಯನಲ್ಲ. ರಾವಣ ಶತ್ರುವಾಗಿದ್ದಾನೆ. ತಂದೆಯು ತಿಳಿಸುತ್ತಾರೆ - ಈ ಸಮಯದ ವಿವಾಹವು ನಷ್ಟವಾಗಿದೆ. ಒಬ್ಬರು ಇನ್ನೊಬ್ಬರನ್ನು ಪತಿತರನ್ನಾಗಿ ಮಾಡುತ್ತಾರೆ. ಈಗ ಪಾರಲೌಕಿಕ ತಂದೆಯು ಆದೇಶ ನೀಡಿದ್ದಾರೆ - ಮಕ್ಕಳೇ, ಕಾಮ ಮಹಾಶತ್ರುವಾಗಿದೆ. ಇದರ ಮೇಲೆ ಜಯ ಗಳಿಸಿ ಮತ್ತು ಪವಿತ್ರತೆಯ ಪ್ರತಿಜ್ಞೆ ಮಾಡಿ, ಯಾರೂ ಪತಿತರಾಗಬೇಡಿ. ಜನ್ಮ-ಜನ್ಮಾಂತರ ಈ ವಿಕಾರದಿಂದಲೇ ನೀವು ಪತಿತರಾಗಿದ್ದೀರಿ. ಆದ್ದರಿಂದ ಕಾಮ ಮಹಾಶತ್ರುವೆಂದು ಹೇಳಲಾಗುತ್ತದೆ. ಪತಿತ-ಪಾವನನೇ ಬನ್ನಿ ಎಂದು ಸಾಧು-ಸಂತರೆಲ್ಲರೂ ಹೇಳುತ್ತಾರೆ. ಸತ್ಯಯುಗದಲ್ಲಿ ಯಾರೂ ಪತಿತರಿರುವುದಿಲ್ಲ. ತಂದೆಯು ಬಂದು ಜ್ಞಾನದಿಂದ ಸರ್ವರ ಸದ್ಗತಿ ಮಾಡುತ್ತಾರೆ, ಈಗ ಎಲ್ಲರೂ ದುರ್ಗತಿಯಲ್ಲಿದ್ದಾರೆ. ಜ್ಞಾನ ಕೊಡುವವರು ಯಾರೂ ಇಲ್ಲ. ಜ್ಞಾನ ಕೊಡುವವರು ಒಬ್ಬರೇ ಜ್ಞಾನ ಸಾಗರನಾಗಿದ್ದಾರೆ. ಜ್ಞಾನದಿಂದ ದಿನವಾಗುತ್ತದೆ. ದಿನವು ರಾಮನದಾಗಿದೆ, ರಾತ್ರಿಯು ರಾವಣನದಾಗಿದೆ. ಈ ಶಬ್ಧಗಳ ಯಥಾರ್ಥ ಅರ್ಥವನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಕೇವಲ ಪುರುಷಾರ್ಥದಲ್ಲಿ ಬಲಹೀನತೆಯಿದೆ. ತಂದೆಯಂತು ಬಹಳ ಚೆನ್ನಾಗಿ ತಿಳಿಸುತ್ತಾರೆ. ನೀವೇ 84 ಜನ್ಮಗಳನ್ನು ಪೂರ್ಣ ಮಾಡಿದ್ದೀರಿ, ಈಗ ಪವಿತ್ರರಾಗಿ ಹಿಂತಿರುಗಿ ಹೋಗಬೇಕಾಗಿದೆ. ನಿಮಗಂತೂ ಶುದ್ಧ ಅಹಂಕಾರವಿರಬೇಕು. ನಾವಾತ್ಮರು ತಂದೆಯ ಮತದಂತೆ ಈ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಿದ್ದೇವೆ, ಯಾವ ಸ್ವರ್ಗದಲ್ಲಿ ಮತ್ತೆ ರಾಜ್ಯಭಾರ ಮಾಡುತ್ತೇವೆ. ಎಷ್ಟು ಪರಿಶ್ರಮ ಪಡುವಿರೋ ಅಷ್ಟು ಪದವಿಯನ್ನು ಪಡೆಯುತ್ತೀರಿ. ರಾಜಾ-ರಾಣಿಯಾದರೂ ಆಗಿ, ಪ್ರಜೆಯಾದರೂ ಆಗಿ. ರಾಜಾ-ರಾಣಿ ಹೇಗಾಗುತ್ತಾರೆ ಎಂಬುದನ್ನು ನೋಡುತ್ತಿದ್ದೀರಿ. ಫಾಲೋ ಫಾದರ್ ಎಂಬ ಗಾಯನವಿದೆ, ಅದು ಈಗಿನ ಮಾತಾಗಿದೆ. ಲೌಕಿಕ ಸಂಬಂಧಕ್ಕಾಗಿ ಈ ರೀತಿ ಹೇಳಲಾಗುವುದಿಲ್ಲ. ಈ ತಂದೆಯು ಮತ ಕೊಡುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುವವು. ನೀವು ತಿಳಿದುಕೊಂಡಿದ್ದೀರಿ - ನಾವೀಗ ಶ್ರೀಮತದಂತೆ ನಡೆಯುತ್ತೇವೆ, ಅನೇಕರ ಸೇವೆ ಮಾಡುತ್ತೇವೆ. ಮಕ್ಕಳು ತಂದೆಯ ಬಳಿ ಬಂದಾಗ ಶಿವ ತಂದೆಯು ಜ್ಞಾನದಿಂದ ಖುಷಿ ಪಡಿಸುತ್ತಾರೆ. ಅದನ್ನು ಇವರೂ (ಬ್ರಹ್ಮಾ) ಕಲಿಯುತ್ತಾರಲ್ಲವೆ. ಶಿವ ತಂದೆಯು ತಿಳಿಸುತ್ತಾರೆ - ನಾನು ಮುಂಜಾನೆ ಬರುತ್ತೇನೆ ನಂತರ ಯಾರೇ ಮಿಲನ ಮಾಡಲು ಬಂದರೂ ಸಹ ಇವರು ತಿಳಿಸಿ ಕೊಡುವುದಿಲ್ಲವೆ! ಬಾಬಾ, ತಾವು ಬಂದು ತಿಳಿಸಿ, ನಾನು ತಿಳಿಸುವುದಿಲ್ಲವೆಂದು ಹೇಳುತ್ತಾರೆಯೇ! ಇವು ಬಹಳ ಗುಪ್ತ, ಗುಹ್ಯ ಮಾತುಗಳಾಗಿವೆ. ನಾನಂತೂ (ಬ್ರಹ್ಮಾ) ಎಲ್ಲರಿಗಿಂತ ಚೆನ್ನಾಗಿ ತಿಳಿಸಿಕೊಡುತ್ತೇನೆ ಅಂದಮೇಲೆ ಶಿವ ತಂದೆಯೇ ತಿಳಿಸುತ್ತಾರೆ - ಇವರು ತಿಳಿಸುವುದಿಲ್ಲವೆಂದು ನೀವು ಏಕೆ ತಿಳಿದುಕೊಳ್ಳುತ್ತೀರಿ! ಇದೂ ಸಹ ನಿಮಗೆ ತಿಳಿದಿದೆ - ಕಲ್ಪದ ಮೊದಲೂ ಸಹ ಇವರು ತಿಳಿಸಿದ್ದಾರೆ. ಆದ್ದರಿಂದಲೇ ಈ ಪದವಿಯನ್ನು ಪಡೆದಿದ್ದಾರೆ ಮಮ್ಮಾರವರೂ ಸಹ ತಿಳಿಸುತ್ತಿದ್ದರಲ್ಲವೆ. ಅವರೂ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಮಮ್ಮಾ-ಬಾಬಾರವರನ್ನು ಸೂಕ್ಷ್ಮವತನದಲ್ಲಿ ತೋರಿಸುತ್ತಾರೆ ಅಂದಾಗ ಮಕ್ಕಳು ಫಾಲೋ ಫಾದರ್ ಮಾಡಬೇಕಾಗಿದೆ. ಬಡವರೇ ಸಮರ್ಪಣೆಯಾಗುತ್ತಾರೆ, ಸಾಹುಕಾರರು ಆಗಲು ಸಾಧ್ಯವಿಲ್ಲ. ಬಾಬಾ, ಇದೆಲ್ಲವೂ ತಮ್ಮದೆಂದು ಬಡವರೇ ಹೇಳುತ್ತಾರೆ. ಶಿವ ತಂದೆಯಂತೂ ದಾತನಾಗಿದ್ದಾರೆ, ಅವರೆಂದೂ ತಿಳಿದುಕೊಳ್ಳುವುದಿಲ್ಲ. ಮಕ್ಕಳಿಗೆ ಹೇಳುತ್ತಾರೆ - ಇದೆಲ್ಲವೂ ನಿಮ್ಮದಾಗಿದೆ, ನಾನು ನನಗಾಗಿ ಮಹಲುಗಳನ್ನು ಇಲ್ಲಿಯಾಗಲಿ, ಸತ್ಯಯುಗದಲ್ಲಾಗಲಿ ಮಾಡಿಕೊಳ್ಳುವುದಿಲ್ಲ. ನಿಮ್ಮನ್ನೇ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ. ಈಗ ಈ ಜ್ಞಾನ ರತ್ನಗಳಿಂದ ಜೋಳಿಗೆಯನ್ನು ತುಂಬಿಸಿಕೊಳ್ಳಬೇಕಾಗಿದೆ. ಮಂದಿರದಲ್ಲಿ ಹೋಗಿ ನನ್ನ ಜೋಳಿಗೆಯನ್ನು ತುಂಬಿಸಿ ಎಂದು ಕೇಳುತ್ತಾರೆ ಆದರೆ ಯಾವ ಪ್ರಕಾರದ ಜೋಳಿಗೆ? ಅಥವಾ ಯಾವುದರಿಂದ ಜೋಳಿಗೆಯನ್ನು ತುಂಬಿಸಬೇಕು.... ಜೋಳಿಗೆ ತುಂಬುವವರಂತೂ ಲಕ್ಷ್ಮಿಯಾಗಿದ್ದಾಳೆ, ಹಣ ಕೊಡುತ್ತಾರೆ. ಶಿವನ ಬಳಿ ಹೋಗುವುದಿಲ್ಲ, ಶಂಕರನ ಬಳಿ ಹೋಗಿ ಹೇಳುತ್ತಾರೆ. ಶಿವ-ಶಂಕರ ಒಂದೇ ಎಂದು ತಿಳಿದುಕೊಳ್ಳುತ್ತಾರೆ ಆದರೆ ಆ ರೀತಿಯಿಲ್ಲ. ತಂದೆಯು ಬಂದು ಸತ್ಯವನ್ನು ತಿಳಿಸುತ್ತಾರೆ ತಂದೆಯೇ ದುಃಖಹರ್ತ-ಸುಖಕರ್ತನಾಗಿದ್ದಾರೆ. ನೀವು ಮಕ್ಕಳು ಗೃಹಸ್ಥ ವ್ಯವಹಾರದಲ್ಲಿಯೂ ಇರಬೇಕಾಗಿದೆ, ಉದ್ಯೋಗವನ್ನೂ ಮಾಡಬೇಕಾಗಿದೆ. ಪ್ರತಿಯೊಬ್ಬರೂ ತಮಗಾಗಿ ಸಲಹೆ ಕೇಳುತ್ತಾರೆ - ಬಾಬಾ, ನಾವು ಈ ಮಾತಿನಲ್ಲಿ ಸುಳ್ಳು ಹೇಳಬೇಕಾಗುತ್ತದೆ ಎಂದು. ತಂದೆಯು ಪ್ರತಿಯೊಬ್ಬರ ನಾಡಿ ನೋಡಿ ಸಲಹೆ ಕೊಡುತ್ತಾರೆ ಏಕೆಂದರೆ ತಂದೆಯು ತಿಳಿದುಕೊಳ್ಳುತ್ತಾರೆ - ಒಂದುವೇಳೆ ನಾನು ಹೇಳಿ ಅದನ್ನು ಮಕ್ಕಳು ಮಾಡಲು ಆಗದಿದ್ದರೆ ಅಂತಹ ಸಲಹೆಯನ್ನಾದರೂ ಏಕೆ ಕೊಡಬೇಕು. ಆದ್ದರಿಂದ ಅವರು ಮಾಡಲು ಸಾಧ್ಯವಾಗುವಂತೆ ನಾಡಿಯನ್ನು ನೋಡಿ ಸಲಹೆ ಕೊಡಲಾಗುತ್ತದೆ. ನಾನು ಹೇಳಿ ಮಕ್ಕಳು ಮಾಡದಿದ್ದರೆ ಉಲ್ಲಂಘನೆ ಮಾಡುವವರ ಸಾಲಿನಲ್ಲಿ ಬಂದು ಬಿಡುವರು. ಪ್ರತಿಯೊಬ್ಬರದೂ ತಮ್ಮತಮ್ಮದೇ ಆದ ಲೆಕ್ಕಾಚಾರವಿದೆ, ಸರ್ಜನ್ ಒಬ್ಬರೇ ಆಗಿದ್ದಾರೆ. ಅವರ ಬಳಿ ಬರಬೇಕಾಗಿದೆ. ಅವರು ಪೂರ್ಣ ಸಲಹೆ ನೀಡುತ್ತಾರೆ. ಎಲ್ಲರನ್ನು ಕೇಳಬೇಕು - ಬಾಬಾ, ನಾವು ಈ ಪರಿಸ್ಥಿತಿಯಲ್ಲಿ ನಾವು ಹೇಗೆ ನಡೆಯಬೇಕು? ಈಗ ಏನು ಮಾಡುವುದು? ತಂದೆಯು ಸ್ವರ್ಗದಲ್ಲಂತೂ ಕರೆದುಕೊಂಡು ಹೋಗುತ್ತಾರೆ. ನಿಮಗೆ ತಿಳಿದಿದೆ - ನಾವು ಸ್ವರ್ಗವಾಸಿಗಳಾಗುವವರಿದ್ದೇವೆ, ಈಗ ಸಂಗಮವಾಸಿಗಳಾಗಿದ್ದೇವೆ. ನೀವೀಗ ನರಕದಲ್ಲಿಯೂ ಇಲ್ಲ, ಸ್ವರ್ಗದಲ್ಲಿಯೂ ಇಲ್ಲ. ಯಾರ್ಯಾರು ಬ್ರಾಹ್ಮಣರಾಗುವರೋ ಅವರ ಬುದ್ಧಿಯ ಹಗ್ಗವು ಈ ಛೀ ಛೀ ಪ್ರಪಂಚದಿಂದ ಬಿಚ್ಚಲ್ಪಟ್ಟಿದೆ. ನೀವು ಕಲಿಯುಗೀ ಪ್ರಪಂಚದ ತೀರವನ್ನು ಬಿಟ್ಟು ಬಿಟ್ಟಿದ್ದೀರಿ. ಕೆಲವು ಬ್ರಾಹ್ಮಣರು ನೆನಪಿನ ಯಾತ್ರೆಯಲ್ಲಿ ತೀಕ್ಷ್ಣವಾಗಿ ಹೋಗುತ್ತಿದ್ದಾರೆ, ಕೆಲವರು ಕಡಿಮೆ. ಕೆಲವರಂತು ಕೈಯನ್ನು ಬಿಟ್ಟು ಬಿಡುತ್ತಾರೆ ಮತ್ತೆ ಕಲಿಯುಗದಲ್ಲಿ ಹೊರಟು ಹೋಗುತ್ತಾರೆ. ನಿಮಗೆ ತಿಳಿದಿದೆ - ಅಂಬಿಗನು ಈಗ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದಾರೆ, ಆ ಯಾತ್ರೆಯಂತೂ ಅನೇಕ ಪ್ರಕಾರವಾಗಿದೆ, ನಿಮ್ಮದು ಒಂದೇ ಯಾತ್ರೆಯಾಗಿದೆ. ಇದು ಬಹಳ ಭಿನ್ನವಾದ ಯಾತ್ರೆಯಾಗಿದೆ. ಹಾ! ಬಿರುಗಾಳಿಗಳು ಬರುತ್ತವೆ, ನೆನಪನ್ನು ತುಂಡರಿಸುತ್ತವೆ. ಈ ನೆನಪಿನ ಯಾತ್ರೆಯನ್ನು ಚೆನ್ನಾಗಿ ಪಕ್ಕಾ ಮಾಡಿಕೊಳ್ಳಿ, ಪರಿಶ್ರಮ ಪಡಿ. ನೀವು ಕರ್ಮಯೋಗಿಯಾಗಿದ್ದೀರಿ, ಎಷ್ಟು ಸಾಧ್ಯವೋ ಕೈ ಕೆಲಸ ಮಾಡುತ್ತಿರಲಿ, ಬುದ್ಧಿಯು ತಂದೆಯನ್ನು ನೆನಪು ಮಾಡಲಿ.... ಅರ್ಧಕಲ್ಪ ನೀವು ಪ್ರಿಯತಮೆಯರು ಪ್ರಿಯತಮನನ್ನು ನೆನಪು ಮಾಡುತ್ತಾ ಬಂದಿದ್ದೀರಿ - ಬಾಬಾ, ಬಹಳ ದುಃಖವಿದೆ, ಈಗ ನಮ್ಮನ್ನು ಸುಖಧಾಮದ ಮಾಲೀಕರನ್ನಾಗಿ ಮಾಡಿ. ನೆನಪಿನ ಯಾತ್ರೆಯಲ್ಲಿದ್ದಾಗ ನಿಮ್ಮ ಪಾಪಗಳು ಸಮಾಪ್ತಿಯಾಗುತ್ತವೆ. ನೀವೇ ಸ್ವರ್ಗದ ಆಸ್ತಿಯನ್ನು ಪಡೆದಿದ್ದಿರಿ, ಈಗ ಕಳೆದುಕೊಂಡಿದ್ದೀರಿ. ಭಾರತವು ಸ್ವರ್ಗವಾಗಿತ್ತು ಆದ್ದರಿಂದಲೇ ಪ್ರಾಚೀನ ಭಾರತವೆಂದು ಹೇಳುತ್ತಾರೆ, ಭಾರತಕ್ಕೇ ಬಹಳ ಮಾನ್ಯತೆಯನ್ನು ಕೊಡುತ್ತಾರೆ. ಎಲ್ಲದಕ್ಕಿಂತ ದೊಡ್ಡದೂ ಆಗಿದೆ, ಎಲ್ಲದಕ್ಕಿಂತ ಹಳೆಯದೂ ಆಗಿದೆ. ಈಗಂತೂ ಭಾರತವು ಎಷ್ಟೊಂದು ಬಡದೇಶವಾಗಿದೆ. ಆದ್ದರಿಂದ ಎಲ್ಲರೂ ಇದಕ್ಕೆ ಸಹಯೋಗ ನೀಡುತ್ತಾರೆ. ಅವರಂತೂ ತಿಳಿದುಕೊಳ್ಳುತ್ತಾರೆ, ನಮ್ಮ ಬಳಿ ಬಹಳ ಧವಸ ಧಾನ್ಯಗಳಾಗಿ ಬಿಡುವುದು, ಎಲ್ಲಿಂದಲೂ ತರಿಸಬೇಕಾಗುವುದಿಲ್ಲ. ಆದರೆ ಇದನ್ನಂತೂ ನೀವು ತಿಳಿದುಕೊಂಡಿದ್ದೀರಿ - ವಿನಾಶವಂತೂ ಸಮ್ಮುಖದಲ್ಲಿ ನಿಂತಿದೆ, ಯಾರು ಇದನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆಯೋ ಅವರಿಗೆ ಒಳಗೆ ಬಹಳ ಖುಷಿಯಿರುತ್ತದೆ. ಪ್ರದರ್ಶನಿಯಲ್ಲಿ ಎಷ್ಟೊಂದು ಮಂದಿ ಬರುತ್ತಾರೆ. ನೀವು ಸತ್ಯವನ್ನು ಹೇಳುತ್ತೀರೆಂದು ಹೇಳುತ್ತಾರೆ ಆದರೆ ಇದನ್ನು ತಿಳಿದುಕೊಳ್ಳಬೇಕು - ನಾವು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಇದು ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ, ಇಲ್ಲಿಂದ ಹೊರಗೆ ಹೋದ ಕೂಡಲೇ ಸಮಾಪ್ತಿ. ನಿಮಗೆ ತಿಳಿದಿದೆ - ತಂದೆಯು ನಮ್ಮನ್ನು ಸ್ವರ್ಗದಲ್ಲಿ ಕರೆದುಕೊಂಡು ಹೋಗುತ್ತಾರೆ, ಅಲ್ಲಿ ಗರ್ಭ ಜೈಲಿನಲ್ಲಾಗಲಿ, ಸ್ಥೂಲವಾದ ಜೈಲಿನಲ್ಲಾಗಲಿ ಹೋಗುವುದಿಲ್ಲ. ಈಗ ಜೈಲಿನ ಯಾತ್ರೆಯೂ ಸಹ ಎಷ್ಟೊಂದು ಸಹಜವಾಗಿ ಬಿಟ್ಟಿದೆ. ಸತ್ಯಯುಗದಲ್ಲಿ ಎಂದೂ ಜೈಲಿನ ಮುಖವನ್ನು ನೋಡುವುದಕ್ಕೂ ಸಿಗುವುದಿಲ್ಲ. ಎರಡೂ ಜೈಲುಗಳಿರುವುದಿಲ್ಲ. ಇಲ್ಲಿ ಇದೆಲ್ಲವೂ ಮಾಯೆಯ ಆಡಂಬರವಾಗಿದೆ. ದೊಡ್ಡ-ದೊಡ್ಡವರನ್ನು ಹೇಗೆ ಸಮಾಪ್ತಿ ಮಾಡಿ ಬಿಡುತ್ತಾರೆ. ಇಂದು ಬಹಳ ಮರ್ಯಾದೆ ಕೊಡುತ್ತಿದ್ದಾರೆ. ನಾಳೆ ಮರ್ಯಾದೆಯೇ ಸಮಾಪ್ತಿ. ಇಂದು ಪ್ರತಿಯೊಂದು ಮಾತು ಬಹಳ ಶೀಘ್ರವಾಗಿ ಆಗುತ್ತದೆ, ಮೃತ್ಯುವು ಆಕಸ್ಮಿಕವಾಗಿ ಆಗುತ್ತಿರುತ್ತದೆ. ಸತ್ಯಯುಗದಲ್ಲಿ ಇಂತಹ ಯಾವುದೇ ಉಪದ್ರವಗಳಾಗುವುದಿಲ್ಲ, ಮುಂದೆ ಹೋದಂತೆ ನೋಡುವಿರಿ - ಏನಾಗುತ್ತದೆ ಎಂದು. ಬಹಳ ಭಯಂಕರವಾದ ದೃಶ್ಯಗಳಿರುವುದು, ನೀವು ಮಕ್ಕಳು ಸಾಕ್ಷಾತ್ಕಾರವನ್ನೂ ಮಾಡಿದ್ದೀರಿ, ಮಕ್ಕಳಿಗಾಗಿ ಮುಖ್ಯವಾದುದು ನೆನಪಿನ ಯಾತ್ರೆಯಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಮನಸ್ಸಾ-ವಾಚಾ-ಕರ್ಮಣಾ ಬಹಳ-ಬಹಳ ಆಕ್ಯೂರೇಟ್ ಆಗಬೇಕಾಗಿದೆ. ಬ್ರಾಹ್ಮಣರಾಗಿ ಯಾವುದೇ ಶೂದ್ರರ ಕರ್ಮವನ್ನು ಮಾಡಬಾರದು.

2. ತಂದೆಯಿಂದ ಯಾವ ಸಲಹೆ ಸಿಗುತ್ತದೆಯೋ ಅದರಂತೆಯೇ ಸಂಪೂರ್ಣ ನಡೆದು ಆಜ್ಞಾಕಾರಿಗಳಾಗಬೇಕಾಗಿದೆ. ಕರ್ಮ ಯೋಗಿಯಾಗಿ ಪ್ರತೀ ಕಾರ್ಯ ಮಾಡಬೇಕಾಗಿದೆ. ಜ್ಞಾನ ರತ್ನಗಳಿಂದ ಸರ್ವರ ಜೋಳಿಗೆಯನ್ನು ಜ್ಞಾನ ರತ್ನಗಳಿಂದ ತುಂಬಬೇಕಾಗಿದೆ.

ವರದಾನ:
ಅಮೃತವೇಳೆಯ ಮಹತ್ವವನ್ನು ತಿಳಿದು ಯಥಾರ್ಥ ರೀತಿ ಉಪಯೋಗಿಸುವಂತಹ ಸದಾ ಶಕ್ತಿಶಾಲಿ ಸಂಪನ್ನ ಭವ.

ಸ್ವಯಂನ್ನು ಶಕ್ತಿ ಸಂಪನ್ನರನ್ನಾಗಿ ಮಾಡಿಕೊಳ್ಳುವುದಕ್ಕಾಗಿ ಪ್ರತಿ ದಿನ ಅಮೃತವೇಳೆ ಶರೀರದ ಮತ್ತು ಮನಸ್ಸಿನ ಸಂಚಾರ ಮಾಡಿ. ಹೇಗೆ ಅಮೃತವೇಳೆ ಸಮಯದ ಸಹಯೋಗವೂ ಇದೆ, ಬುದ್ಧಿ ಸತೋಪ್ರಧಾನ ಸ್ಟೇಜ್ನ ಸಹಯೋಗವೂ ಇದೆ, ಅಂದಾಗ ಇಂತಹ ವರದಾನಿ ಸಮಯದಲ್ಲಿ ಮನಸ್ಸಿನ ಸ್ಥಿತಿಯೂ ಸಹ ಎಲ್ಲಕ್ಕಿಂತ ಶಕ್ತಿಶಾಲಿ ಸ್ಥಿತಿಯದಾಗಿರಬೇಕು. ಶಕ್ತಿಶಾಲಿ ಸ್ಥಿತಿ ಅರ್ಥಾತ್ ತಂದೆಯ ಸಮಾನ ಬೀಜರೂಪ ಸ್ಥಿತಿ. ಸಾಧಾರಣ ಸ್ಥಿತಿಯಲ್ಲಂತೂ ಕರ್ಮ ಮಾಡುತ್ತಿದ್ದರೂ ಸಹ ಇರಬಲ್ಲಿರಿ. ಆದರೆ ವರದಾನದ ಸಮಯದಲ್ಲಿ ಯಥಾರ್ಥ ರೀತಿ ಉಪಯೋಗಿಸಿದಾಗ ಬಲಹೀನತೆ ಸಮಾಪ್ತಿಯಾಗಿ ಬಿಡುವುದು.

ಸ್ಲೋಗನ್:
ತಮ್ಮ ಶಕ್ತಿಗಳ ಖಜಾನೆಯಿಂದ ಶಕ್ತಿಹೀನ, ಪರವಶ ಆತ್ಮಗಳನ್ನು ಶಕ್ತಿಶಾಲಿಯನ್ನಾಗಿ ಮಾಡಿ.