17.09.20         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ನೀವು ಈ ಪುರುಷೋತ್ತಮ ಸಂಗಮಯುಗದಲ್ಲಿಯೇ ಉತ್ತಮರಿಗಿಂತ ಉತ್ತಮ ಪುರುಷರಾಗಬೇಕಾಗಿದೆ, ಎಲ್ಲರಿಗಿಂತ ಈ ಲಕ್ಷ್ಮೀ-ನಾರಾಯಣರು ಉತ್ತಮ ಪುರುಷರಾಗಿದ್ದಾರೆ"

ಪ್ರಶ್ನೆ:
ನೀವು ಮಕ್ಕಳು ತಂದೆಯ ಜೊತೆ ಜೊತೆಗೆ ಯಾವ ಒಂದು ಗುಪ್ತ ಕಾರ್ಯವನ್ನು ಮಾಡುತ್ತಿದ್ದೀರಿ?

ಉತ್ತರ:
ಆದಿ ಸನಾತನ ದೇವಿ-ದೇವತಾ ಧರ್ಮ ಮತ್ತು ದೈವೀ ರಾಜಧಾನಿಯನ್ನು ಸ್ಥಾಪನೆ ಮಾಡುವ ಕಾರ್ಯವನ್ನು ನೀವು ಮಕ್ಕಳು ತಂದೆಯ ಜೊತೆ ಜೊತೆಗೆ ಮಾಡುತ್ತಿದ್ದೀರಿ. ತಂದೆಯು ಮಾಲೀಕನಾಗಿದ್ದಾರೆ ಯಾರು ಬಂದು ಮುಳ್ಳುಗಳ ಕಾಡನ್ನು ಹೂವಿನ ಉದ್ಯಾನವನ್ನಾಗಿ ಮಾಡುತ್ತಿದ್ದಾರೆ. ಆ ಉದ್ಯಾನವನದಲ್ಲಿ ಯಾವುದೇ ಭಯಾನಕ ದುಃಖ ಕೊಡುವಂತಹ ವಸ್ತುಗಳಿರುವುದಿಲ್ಲ.

ಗೀತೆ:
ಕೊನೆಗೂ ಆ ದಿನ ಇಂದು ಬಂದಿತು...............

ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮೀಯ ಮಕ್ಕಳಿಗೆ ತಿಳಿಸುತ್ತಿದ್ದಾರೆ. ತಿಳಿಸುವುದಂತೂ ಅವಶ್ಯವಾಗಿ ಶರೀರದ ಮೂಲಕವೇ ಆಗಿರುತ್ತದೆ. ಆತ್ಮವು ಶರೀರದ ವಿನಃ ಯಾವುದೇ ಕಾರ್ಯವನ್ನು ಮಾಡಲು ಸಾಧ್ಯವಿಲ್ಲ. ತಂದೆಯೂ ಸಹ ಒಮ್ಮೆ ಮಾತ್ರವೇ ಪುರುಷೋತ್ತಮ ಸಂಗಮಯುಗದಲ್ಲಿ ಶರೀರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದು ಸಂಗಮಯುಗವೂ ಆಗಿದೆ, ಇದಕ್ಕೆ ಪುರುಷೋತ್ತಮ ಯುಗವೆಂದೂ ಸಹ ಹೇಳಲಾಗುತ್ತದೆ ಏಕೆಂದರೆ ಈ ಸಂಗಮಯುಗದ ನಂತರ ಮತ್ತೆ ಸತ್ಯಯುಗವು ಬರುತ್ತದೆ. ಸತ್ಯಯುಗಕ್ಕೂ ಪುರುಷೋತ್ತಮ ಯುಗವೆಂದು ಹೇಳಲಾಗುತ್ತದೆ. ತಂದೆಯು ಬಂದು ಪುರುಷೋತ್ತಮ ಯುಗದ ಸ್ಥಾಪನೆ ಮಾಡುತ್ತಾರೆ. ಸಂಗಮಯುಗದಲ್ಲಿ ಬರುತ್ತಾರೆ ಅಂದಮೇಲೆ ಅವಶ್ಯವಾಗಿ ಅದೂ ಪುರುಷೋತ್ತಮ ಯುಗವಾಯಿತು. ಇಲ್ಲಿಯೇ ಮಕ್ಕಳನ್ನು ಪುರುಷೋತ್ತಮರನ್ನಾಗಿ ಮಾಡುತ್ತಾರೆ ನಂತರ ನೀವು ಪುರುಷೋತ್ತಮ ಹೊಸ ಪ್ರಪಂಚದಲ್ಲಿರುತ್ತೀರಿ. ಪುರುಷೋತ್ತಮ ಅರ್ಥಾತ್ ಅತ್ಯುತ್ತಮ ಪುರುಷರು, ಈ ರಾಧೆ-ಕೃಷ್ಣ, ಲಕ್ಷ್ಮೀ-ನಾರಾಯಣರಾಗಿದ್ದಾರೆ. ಈ ಜ್ಞಾನವು ನಿಮಗೇ ಇದೆ. ಅನ್ಯ ಧರ್ಮದವರೂ ಸಹ ಇವರು ಸ್ವರ್ಗದ ಮಾಲೀಕರೆಂಬುದು ಅವಶ್ಯವಾಗಿ ಒಪ್ಪುತ್ತಾರೆ. ಭಾರತಕ್ಕೆ ಬಹಳ ಮಹಿಮೆಯಿದೆ, ಆದರೆ ಭಾರತವಾಸಿಗಳೇ ತಿಳಿದುಕೊಂಡಿಲ್ಲ. ಇಂತಹವರು ಸ್ವರ್ಗವಾಸಿಯಾದರೆಂದು ಹೇಳುತ್ತಾರೆ ಆದರೆ ಸ್ವರ್ಗವೆಂದರೇನು ಎಂಬುದನು ತಿಳಿದುಕೊಂಡಿಲ್ಲ. ಸ್ವರ್ಗಕ್ಕೆ ಹೋದರೆಂದು ತಾವೇ ಸಿದ್ಧ ಮಾಡುತ್ತಾರೆ ಅಂದರೆ ಇದರ ಅರ್ಥ ಇಲ್ಲಿಯವರೆಗೂ ನರಕದಲ್ಲಿದ್ದರಲ್ಲವೆ. ಸ್ವರ್ಗವನ್ನು ತಂದೆಯೇ ಸ್ಥಾಪನೆ ಮಾಡುವರು. ಸ್ವರ್ಗವೆಂದು ಹೊಸ ಪ್ರಪಂಚಕ್ಕೇ ಹೇಳಲಾಗುತ್ತದೆ. ಸ್ವರ್ಗ ಮತ್ತು ನರಕ, ಎರಡು ಇವೆಯಲ್ಲವೆ. ಮನುಷ್ಯರು ಸ್ವರ್ಗಕ್ಕೆ ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ ಆದರೆ ಮಕ್ಕಳು ತಿಳಿದುಕೊಂಡಿದ್ದೀರಿ - ನಿನ್ನೆಯ ದಿನ ಸ್ವರ್ಗವಿತ್ತು, ಈ ದೇವತೆಗಳ ರಾಜಧಾನಿಯಿತ್ತು, ಈಗ ಪುನಃ ತಂದೆಯಿಂದ ಆ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ.

ತಂದೆಯು ತಿಳಿಸುತ್ತಾರೆ - ಮಧುರ ಮುದ್ದಾದ ಮಕ್ಕಳೇ, ನೀವಾತ್ಮಗಳು ಪತಿತರಾಗಿದ್ದೀರಿ, ಆದ್ದರಿಂದ ನರಕದಲ್ಲಿದ್ದೀರಿ. ಕಲಿಯುಗವು ಇನ್ನೂ 40 ವರ್ಷಗಳಿದೆಯಂದು ಹೇಳುತ್ತಾರೆ ಆದರೆ ಅವಶ್ಯವಾಗಿ ಕಲಿಯುಗವಾಸಿಗಳೆಂದು ಹೇಳಬಹುದಲ್ಲವೆ. ಹಳೆಯ ಪ್ರಪಂಚವಂತೂ ಇದೆಯಲ್ಲವೆ. ಮನುಷ್ಯರು ಪಾಪ ಘೋರ ಅಂಧಕಾರದಲ್ಲಿದ್ದಾರೆ. ಅಂತಿಮದಲ್ಲಿ ಯಾವಾಗ ಬೆಂಕಿ ಬೀಳುವುದೋ ಆಗ ಎಲ್ಲರೂ ಸಮಾಪ್ತಿಯಾಗುವರು. ನಂಬರ್ವಾರ್ ಪುರುಷಾರ್ಥದನುಸಾರ ನಿಮ್ಮದು ತಂದೆಯೊಂದಿಗೆ ಪ್ರೀತಿ ಬುದ್ಧಿಯಿದೆ. ಎಷ್ಟು ಪ್ರೀತಿ ಬುದ್ಧಿಯಿರುವುದೋ ಅಷ್ಟು ಉತ್ತಮ ಪದವಿಯನ್ನು ಪಡೆಯುತ್ತೀರಿ ಅಂದಾಗ ಮುಂಜಾನೆಯದ್ದು ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕಾಗಿದೆ. ಭಲೆ ತಂದೆಯ ನೆನಪಿನಲ್ಲಿ ಆನಂದ ಭಾಷ್ಪಗಳು ಬಂದರೂ ಪರವಾಗಿಲ್ಲ ಏಕೆಂದರೆ ಬಹಳ ಸಮಯದ ನಂತರ ತಂದೆಯು ಬಂದು ಮಿಲನ ಮಾಡಿದ್ದಾರೆ. ಬಾಬಾ, ತಾವು ಬಂದು ನಮ್ಮನ್ನು ದುಃಖದಿಂದ ಬಿಡಿಸುತ್ತೀರಿ, ನಾವು ವಿಷಯ ಸಾಗರದಲ್ಲಿ ಮುಳುಗುತ್ತಾ ಎಷ್ಟೊಂದು ದುಃಖಿಯಾಗುತ್ತಾ ಬಂದಿದ್ದೇವೆ, ಈಗ ಇದು ರೌರವ ನರಕವಾಗಿದೆ. ಈಗ ತಂದೆಯು ನಿಮಗೆ ಇಡೀ ಚಕ್ರದ ರಹಸ್ಯವನ್ನು ತಿಳಿಸುತ್ತಾರೆ - ಮೂಲವತನವೆಂದರೇನು ಎಂಬುದನ್ನೂ ಬಂದು ತಿಳಿಸಿದ್ದಾರೆ. ಮೊದಲು ನಿಮಗೂ ತಿಳಿದಿರಲಿಲ್ಲ, ಇದಕ್ಕೆ ಮುಳ್ಳುಗಳ ಕಾಡೆಂದು ಹೇಳಲಾಗುವುದು. ಸ್ವರ್ಗಕ್ಕೆ ಹೂದೋಟ, ಅಲ್ಲಾನ ಉದ್ಯಾನವನವೆಂದು ಹೇಳಲಾಗುತ್ತದೆ. ತಂದೆಗೆ ಹೂದೋಟದ ಮಾಲೀಕನೆಂದೂ ಹೇಳುತ್ತಾರೆ. ನಿಮ್ಮನ್ನು ಮತ್ತೆ ಹೂವಿನಿಂದ ಮುಳ್ಳುಗಳನ್ನಾಗಿ ಯಾರು ಮಾಡುತ್ತಾರೆ? ರಾವಣ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಭಾರತವು ಹೂದೋಟವಾಗಿತ್ತು, ಈಗ ಅರಣ್ಯವಾಗಿದೆ. ಅರಣ್ಯದಲ್ಲಿ ಪ್ರಾಣಿ, ಪಕ್ಷಿ, ಚೇಳು ಇತ್ಯಾದಿಗಳಿರುತ್ತವೆ. ಸತ್ಯಯುಗದಲ್ಲಿ ಯಾವುದೇ ಇಂತಹ ಕ್ರೂರ ಪ್ರಾಣಿಗಳಿರುವುದಿಲ್ಲ. ಶಾಸ್ತ್ರಗಳಲ್ಲಂತೂ ಅನೇಕ ಮಾತುಗಳನ್ನು ಬರೆದಿದ್ದಾರೆ. ಕೃಷ್ಣನಿಗೆ ಸರ್ಪವು ಕಚ್ಚಿತು ಎಂದು ಹೇಳಿ, ಕೃಷ್ಣನನ್ನು ದ್ವಾಪರದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಭಕ್ತಿಯೇ ಬೇರೆಯಾಗಿದೆ, ಜ್ಞಾನ ಸಾಗರನು ಒಬ್ಬರೇ ತಂದೆಯಾಗಿದ್ದಾರೆ. ಬ್ರಹ್ಮಾ, ವಿಷ್ಣು, ಶಂಕರರು ಜ್ಞಾನ ಸಾಗರರು ಎಂದಲ್ಲ. ಪತಿತ-ಪಾವನನೆಂದು ಒಬ್ಬ ಜ್ಞಾನ ಸಾಗರನಿಗೇ ಹೇಳಲಾಗುತ್ತದೆ. ಜ್ಞಾನದಿಂದಲೇ ಮನುಷ್ಯರ ಸದ್ಗತಿಯಾಗುತ್ತದೆ. ಸದ್ಗತಿಯ ಎರಡು ಸ್ಥಾನಗಳಿವೆ - ಮುಕ್ತಿಧಾಮ ಮತ್ತು ಜೀವನ್ಮುಕ್ತಿಧಾಮ. ನೀವೀಗ ತಿಳಿದುಕೊಂಡಿದ್ದೀರಿ - ಈ ರಾಜಧಾನಿಯು ಸ್ಥಾಪನೆಯಾಗುತ್ತಿದೆ ಆದರೆ ಗುಪ್ತ. ತಂದೆಯೇ ಬಂದು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆ ಆಗ ಎಲ್ಲರೂ ತಮ್ಮ-ತಮ್ಮ ಮನುಷ್ಯ ಶರೀರದಲ್ಲಿ ಬರುತ್ತಾರೆ. ತಂದೆಗಂತೂ ತಮ್ಮದೇ ಆದ ಶರೀರವಿಲ್ಲ ಆದ್ದರಿಂದ ಇವರಿಗೆ ನಿರಾಕಾರ ಪರಮಪಿತ ಪರಮಾತ್ಮನೆಂದು ಹೇಳುತ್ತಾರೆ. ಉಳಿದೆಲ್ಲರೂ ಸಾಕಾರಿ ಮನುಷ್ಯರಾಗಿದ್ದಾರೆ ಆದರೆ ತಂದೆಗೆ ನಿರಾಕಾರಿ ಆತ್ಮಗಳ ನಿರಾಕಾರ ಪರಮಾತ್ಮನೆಂದು ಹೇಳಲಾಗುತ್ತದೆ. ನೀವಾತ್ಮಗಳೂ ಸಹ ಅಲ್ಲಿಯೇ ಇರುತ್ತೀರಿ, ತಂದೆಯೂ ಅಲ್ಲಿಯೇ ಇರುತ್ತಾರೆ ಆದರೆ ಗುಪ್ತವಾಗಿದ್ದಾರೆ. ತಂದೆಯೇ ಬಂದು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆ, ಮೂಲವತನದಲ್ಲಿ ಯಾವುದೇ ದುಃಖವಿಲ್ಲ. ತಂದೆಯು ತಿಳಿಸುತ್ತಾರೆ - ನಿಮ್ಮ ಕಲ್ಯಾಣವೇ ಒಂದು ಮಾತಿನಲ್ಲಿದೆ - ತಂದೆಯನ್ನು ನೆನಪು ಮಾಡಿ, ಮನ್ಮನಾಭವ. ತಂದೆಯ ಮಗುವಾದರೆ ಆಸ್ತಿಯು ಇದ್ದೇ ಇದೆ. ತಂದೆಯನ್ನು ನೆನಪು ಮಾಡುವುದರಿಂದ ಸತ್ಯಯುಗೀ ಹೊಸ ಪ್ರಪಂಚದ ಆಸ್ತಿಯು ಅವಶ್ಯವಾಗಿ ಸಿಗುತ್ತದೆ. ಈ ಪತಿತ ಪ್ರಪಂಚದ ವಿನಾಶವು ಆಗಲೇಬೇಕಾಗಿದೆ, ಅಮರ ಪುರಿಯಲ್ಲಿ ಹೋಗಬೇಕಾಗಿದೆ. ಅಮರನಾಥನು ನೀವು ಪಾರ್ವತಿಯರಿಗೆ ಅಮರ ಕಥೆಯನ್ನು ತಿಳಿಸುತ್ತಿದ್ದಾರೆ. ತೀರ್ಥ ಸ್ಥಾನಗಳಿಗೆ ಎಷ್ಟೊಂದು ಮಂದಿ ಹೋಗುತ್ತಾರೆ! ಅಮರನಾಥಕ್ಕೆ ಎಷ್ಟೊಂದು ಹೋಗುತ್ತಾರೆ! ಅಲ್ಲಿ ಏನೂ ಇಲ್ಲ, ಎಲ್ಲವೂ ಸುಳ್ಳು. ಸತ್ಯದ ಅಂಶವೇ ಇಲ್ಲ. ಸುಳ್ಳು ಮಾಯೆ ಸುಳ್ಳು ಕಾಯವೆಂದು ಗಾಯನವಿದೆ. ಇದಕ್ಕೆ ಅರ್ಥವೂ ಇರಬೇಕಲ್ಲವೆ. ಇಲ್ಲಿರುವುದೆಲ್ಲವೂ ಸುಳ್ಳು. ಇದು ಜ್ಞಾನದ ಮಾತಾಗಿದೆ ಅಂದರೆ ಗ್ಲಾಸಿಗೆ ಗ್ಲಾಸ್ ಎಂದು ಹೇಳುವುದು ಸುಳ್ಳೆಂದಲ್ಲ. ಭಕ್ತಿಮಾರ್ಗದಲ್ಲಿ ತಂದೆಯ ಬಗ್ಗೆ ಸುಳ್ಳನ್ನೇ ಹೇಳುತ್ತಾರೆ, ಸತ್ಯವನ್ನು ಹೇಳುವವರು ಒಬ್ಬರೇ ತಂದೆಯಾಗಿದ್ದಾರೆ. ನೀವೀಗ ತಿಳಿದುಕೊಂಡಿದ್ದೀರಿ - ತಂದೆಯು ಬಂದು ಸತ್ಯ-ಸತ್ಯವಾದ ಸತ್ಯ ನಾರಾಯಣನ ಕಥೆಯನ್ನು ತಿಳಿಸುತ್ತಾರೆ. ಮುತ್ತು ರತ್ನಗಳಲ್ಲಿಯೂ ನಕಲಿಯಿರುತ್ತದೆಯಲ್ಲವೆ. ಇತ್ತೀಚೆಗಂತೂ ಸುಳ್ಳಿನ ಬಹಳಷ್ಟು ಶೋ ಇದೆ. ನಕಲಿ ವಸ್ತುಗಳ ಹೊಳಪು ಇಷ್ಟೊಂದು ಇರುತ್ತದೆ! ಅಪ್ಪಟವಾದುದಕ್ಕಿಂತಲೂ ಹೆಚ್ಚು. ಈ ನಕಲಿ ಹರಳುಗಳು ಮೊದಲು ಇಷ್ಟೊಂದು ಇರಲಿಲ್ಲ, ಈಗ ಕೊನೆಯಲ್ಲಿ ವಿದೇಶದಿಂದ ಬಂದಿದೆ. ನಕಲಿಯಾದುದನ್ನು ಸತ್ಯವಾದುದರ ಜೊತೆ ಸೇರಿಸಿ ಬಿಡುತ್ತಾರೆ, ಇದು ಗೊತ್ತಾಗುವುದೇ ಇಲ್ಲ. ಮತ್ತೆ ಇಂತಹ ವಸ್ತುಗಳು ಹೊರ ಬಂದಿವೆ, ಅವುಗಳ ಮೂಲಕ ಪರಿಶೀಲನೆ ಮಾಡುತ್ತಾರೆ. ಮುತ್ತುಗಳೂ ಸಹ ಇಷ್ಟು ನಕಲಿಯಾದುದು ಬಂದಿವೆ, ಸ್ವಲ್ಪವೂ ವ್ಯತ್ಯಾಸವು ಕಾಣುವುದಿಲ್ಲ. ಈಗ ನೀವು ಮಕ್ಕಳಿಗೆ ಯಾವುದೇ ಸಂಶಯವಿರುವುದಿಲ್ಲ. ಸಂಶಯ ಬುದ್ಧಿಯವರು ಬರುವುದೂ ಇಲ್ಲ, ಪ್ರದರ್ಶನಿಯಲ್ಲಿ ಎಷ್ಟೊಂದು ಮಂದಿ ಬರುತ್ತಾರೆ. ತಂದೆಯು ತಿಳಿಸುತ್ತಾರೆ - ಈಗ ದೊಡ್ಡ-ದೊಡ್ಡ ಅಂಗಡಿಗಳನ್ನು ತೆರೆಯಿರಿ, ಇದೊಂದೇ ನಿಮ್ಮ ಸತ್ಯವಾದ ಅಂಗಡಿಯಾಗಿದೆ. ನೀವು ಸತ್ಯವಾದ ಅಂಗಡಿಯನ್ನು ತೆರೆಯುತ್ತೀರಿ, ದೊಡ್ಡ-ದೊಡ್ಡ ಸನ್ಯಾಸಿಗಳದು ದೊಡ್ಡ-ದೊಡ್ಡ ಅಂಗಡಿಗಳಿರುತ್ತವೆ ಅಲ್ಲಿಗೆ ದೊಡ್ಡ-ದೊಡ್ಡ ವ್ಯಕ್ತಿಗಳು ಹೋಗುತ್ತಾರೆ ಅಂದಾಗ ನೀವೂ ಸಹ ದೊಡ್ಡ-ದೊಡ್ಡ ಸೇವಾಕೇಂದ್ರಗಳನ್ನು ತೆರೆಯಿರಿ. ಭಕ್ತಿಮಾರ್ಗದ ಸಾಮಗ್ರಿಯು ಸಂಪೂರ್ಣ ಭಿನ್ನವಾಗಿದೆ. ಭಕ್ತಿಯು ಆರಂಭದಿಂದಲೂ ನಡೆದು ಬಂದಿದೆ ಎಂದು ಹೇಳುವುದಿಲ್ಲ. ಜ್ಞಾನದಿಂದ ಸದ್ಗತಿ ಅರ್ಥಾತ್ ದಿನವಾಗುತ್ತದೆ. ಅಲ್ಲಿ ಸಂಪೂರ್ಣ ನಿರ್ವಿಕಾರಿ, ವಿಶ್ವದ ಮಾಲೀಕರಿದ್ದರು. ಈ ಲಕ್ಷ್ಮೀ-ನಾರಾಯಣರು ವಿಶ್ವದ ಮಾಲೀಕರಾಗಿದ್ದರು. ಸೂರ್ಯವಂಶಿ ಮತ್ತು ಚಂದ್ರವಂಶಿಯರನ್ನು ಬಿಟ್ಟರೆ ಮತ್ತ್ಯಾವುದೇ ಧರ್ಮವಿರುವುದಿಲ್ಲ ಎಂಬ ಮಾತು ಮನುಷ್ಯರಿಗೆ ತಿಳಿದಿಲ್ಲ. ಮಕ್ಕಳು ಗೀತೆಯನ್ನೂ ಕೇಳಿದಿರಿ, ಕೊನೆಗೂ ಆ ಸಂಗಮದ ದಿನವು ಇಂದು ಬಂದಿತು. ನಾವು ಬಂದು ನಮ್ಮ ಬೇಹದ್ದಿನ ತಂದೆಯೊಂದಿಗೆ ಮಿಲನ ಮಾಡಿದೆವು, ಬೇಹದ್ದಿನ ಆಸ್ತಿಯನ್ನು ಪಡೆಯುವುದಕ್ಕಾಗಿ ಪುರುಷಾರ್ಥ ಮಾಡುತ್ತೇವೆ. ಕೊನೆಗೂ ಆ ದಿನ ಇಂದು ಬಂದಿತು ಎಂದು ಸತ್ಯಯುಗದಲ್ಲಿ ಹೇಳುವುದಿಲ್ಲ. ಕೊನೆಗೆ ಬಹಳಷ್ಟು ಆಹಾರ-ಧಾನ್ಯಗಳಿರುವುದಿಲ್ಲ. ಇದಾಗುವುದು-ಅದಾಗುವುದು....... ಎಂದು ಮನುಷ್ಯರು ತಿಳಿಯುತ್ತಾರೆ. ಸ್ವರ್ಗದ ಸ್ಥಾಪನೆಯನ್ನು ನಾವು ಮಾಡುತ್ತೇವೆಂದು ತಿಳಿಯುತ್ತಾರೆ, ವಿದ್ಯಾರ್ಥಿಗಳದು ಬಿಸಿ ರಕ್ತವಾಗಿದೆ. ಆದ್ದರಿಂದ ಇವರು ಬಹಳ ಸಹಯೋಗ ನೀಡುವರೆಂದು ತಿಳಿಯುತ್ತಾರೆ. ಆದ್ದರಿಂದಲೇ ಸರ್ಕಾರವು ಯುವಕರಿಗಾಗಿ ಬಹಳ ಪರಿಶ್ರಮ ಪಡುತ್ತದೆ ಆದರೆ ಮತ್ತೆ ಅವರೇ ಕಲ್ಲುಗಳನ್ನು ಎಸೆಯುತ್ತಾರೆ. ಜಗಳವಾಡುವುದರಲ್ಲಿಯೂ ಮೊಟ್ಟ ಮೊದಲಿಗೆ ವಿದ್ಯಾರ್ಥಿಗಳೇ ಮುಂದಿರುತ್ತಾರೆ, ಅವರು ಬಹಳ ಬುದ್ಧಿವಂತರಿರುತ್ತಾರೆ. ಅವರದು ಬಿಸಿ ರಕ್ತವೆಂದು ಹೇಳುತ್ತಾರೆ ಆದರೆ ಈಗಂತೂ ಬಿಸಿ ರಕ್ತದ ಮಾತೇ ಇಲ್ಲ, ಅವರದು ರಕ್ತ ಸಂಬಂಧವಾಗಿದೆ, ನಿಮ್ಮದು ಆತ್ಮಿಕ ಸಂಬಂಧವಾಗಿದೆ. ಬಾಬಾ, ನಾನು ತಮ್ಮ ಎರಡು ತಿಂಗಳಿನ ಮಗುವಾಗಿದ್ದೇನೆಂದು ಹೇಳುತ್ತಾರಲ್ಲವೆ. ಕೆಲವು ಮಕ್ಕಳು ಅಲೌಕಿಕ ಜನ್ಮದಿನವನ್ನಾಚರಿಸುತ್ತಾರೆ, ಈಗ ದೈಹಿಕ ಜನ್ಮದಿನವನ್ನಾಚರಿಸುವುದನ್ನು ರದ್ದುಗೊಳಿಸಬೇಕು. ಈಶ್ವರೀಯ ಜನ್ಮದಿನವನ್ನೇ ಆಚರಿಸಬೇಕು. ನಾವು ಬ್ರಾಹ್ಮಣರಿಗೇ ತಿನ್ನಿಸುತ್ತೇವೆ ಅಂದಮೇಲೆ ಈಶ್ವರೀಯ ಜನ್ಮ ದಿನವನ್ನೇ ಆಚರಿಸಬೇಕಲ್ಲವೆ. ಅದು ಆಸುರೀ ಜನ್ಮ, ಇದು ಈಶ್ವರೀಯ ಜನ್ಮವಾಗಿದೆ. ರಾತ್ರಿ-ಹಗಲಿನ ಅಂತರವಿದೆ ಆದರೆ ಇದು ನಿಶ್ಚಯದಲ್ಲಿ ಕುಳಿತುಕೊಳ್ಳಬೇಕಾಗಿದೆ. ಈ ರೀತಿ ಆಗಬಾರದು, ಈಶ್ವರೀಯ ಜನ್ಮ ದಿನವನ್ನಾಚರಿಸಿ ಮತ್ತೆ ಹೋಗಿ ಆಸುರೀ ಜನ್ಮದಲ್ಲಿ ಹೋಗಿ ಬೀಳುವುದಲ್ಲ. ಹೀಗೂ ಆಗುತ್ತದೆ, ಈಶ್ವರೀಯ ಜನ್ಮ ದಿನವನ್ನಾಚರಿಸುತ್ತಾ-ಆಚರಿಸುತ್ತಾ ಮತ್ತೆ ಹೋಗಿ ಮಾಯೆಯ ಸುಳಿಯಲ್ಲಿ ಬೀಳುತ್ತಾರೆ. ಇತ್ತೀಚೆಗಂತೂ ವಿವಾಹದ ದಿನವನ್ನೂ ಆಚರಿಸಿಕೊಳ್ಳುತ್ತಾರೆ. ವಿವಾಹವನ್ನು ಹೇಗೆ ಒಳ್ಳೆಯ ಶುಭ ಕಾರ್ಯವೆಂದೂ ತಿಳಿಯುತ್ತಾರೆ. ನರಕದಲ್ಲಿ ಹೋಗುವ ದಿನವನ್ನೂ ಆಚರಿಸುತ್ತಾರೆ, ಆಶ್ಚರ್ಯವಲ್ಲವೆ! ತಂದೆಯು ಎಲ್ಲಾ ಮಾತುಗಳನ್ನು ತಿಳಿಸುತ್ತಾರೆ. ಈಗ ನೀವಂತೂ ಈಶ್ವರೀಯ ಜನ್ಮ ದಿನವನ್ನು ಬ್ರಾಹ್ಮಣರ ಜೊತೆಯಲ್ಲಿಯೇ ಆಚರಿಸಬೇಕಾಗಿದೆ. ನಾವು ಶಿವ ತಂದೆಯ ಮಕ್ಕಳಾಗಿದ್ದೇವೆ, ನಾವು ಜನ್ಮ ದಿನವನ್ನಾಚರಿಸುತ್ತೇವೆಂದರೆ ಶಿವ ತಂದೆಯದೇ ನೆನಪಿರುವುದು. ಯಾವ ಮಕ್ಕಳು ನಿಶ್ಚಯಬುದ್ಧಿಯವರಾಗಿದ್ದಾರೆಯೋ ಅವರೇ ಜನ್ಮ ದಿನವನ್ನಾಚರಿಸಿಕೊಳ್ಳಬೇಕು. ಆ ಆಸುರೀ ಜನ್ಮವೇ ಮರೆತು ಹೋಗಲಿ. ತಂದೆಯು ಈ ಸಲಹೆ ಕೊಡುತ್ತಾರೆ ಅದೂ ಪಕ್ಕಾ ನಿಶ್ಚಯ ಬುದ್ಧಿಯಿದ್ದಾಗ ಮಾತ್ರ. ಬಾಬಾ, ನಾವಂತೂ ನಿಮ್ಮವರಾಗಿ ಬಿಟ್ಟೆವು, ನಮಗಾಗಿ ಮತ್ತ್ಯಾರೂ ಇಲ್ಲ. ಈ ರೀತಿಯಿದ್ದಾಗ ಅಂತಿಮ ಸ್ಮೃತಿಯಂತೆಯೇ ಗತಿಯಾಗುವುದು. ತಂದೆಯ ನೆನಪಿನಲ್ಲಿಯೇ ಶರೀರವನ್ನು ಬಿಟ್ಟರೆ ಇನ್ನೊಂದು ಜನ್ಮವೂ ಒಳ್ಳೆಯದೇ ಸಿಗುವುದು. ಇಲ್ಲದಿದ್ದರೆ ಅಂತ್ಯದಲ್ಲಿ ಯಾರು ಸ್ತ್ರೀಯನ್ನು ಸ್ಮರಣೆ ಮಾಡಿದರು, ಅವರಿಗೆ ಅಂತಹದ್ದೇ ಜನ್ಮ ಸಿಕ್ಕಿತು...... ಇದೂ ಗ್ರಂಥದಲ್ಲಿದೆ. ಮತ್ತು ಇನ್ನೂ ಕೆಲವರು ಅಂತಿಮ ಸಮಯವು ಗಂಗಾತೀರದಲ್ಲಿ ಪ್ರಾಣ ಬಿಡಬೇಕೆಂದು ಹೇಳುತ್ತಾರೆ, ಇವೆಲ್ಲವೂ ಭಕ್ತಿಮಾರ್ಗದ ಮಾತುಗಳಾಗಿವೆ. ತಂದೆಯು ತಿಳಿಸುತ್ತಾರೆ - ಶರೀರವನ್ನು ಬಿಡುವಾಗಲೂ ಸಹ ಸ್ವದರ್ಶನ ಚಕ್ರಧಾರಿಗಳಾಗಿರಿ. ಬುದ್ಧಿಯಲ್ಲಿ ತಂದೆ ಮತ್ತು ಚಕ್ರವು ನೆನಪಿರಲಿ ಅಂದಮೇಲೆ ಈಗಿನಿಂದ ಪುರುಷಾರ್ಥವನ್ನು ಮಾಡಿದಾಗಲೇ ಅಂತ್ಯಕಾಲದಲ್ಲಿ ನೆನಪು ಬರುವುದು. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ ಏಕೆಂದರೆ ನೀವು ಮಕ್ಕಳು ಅಶರೀರಿಯಾಗಿ ಹಿಂತಿರುಗಿ ಹೋಗಬೇಕಾಗಿದೆ. ಇಲ್ಲಿ ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ ಸತೋಪ್ರಧಾನದಿಂದ ತಮೋಪ್ರಧಾನರಾಗಿದ್ದೀರಿ, ಈಗ ಮತ್ತೆ ಸತೋಪ್ರಧಾನರಾಗಬೇಕಾಗಿದೆ. ಈ ಸಮಯದಲ್ಲಿ ಆತ್ಮವೇ ಅಪವಿತ್ರವಾಗಿದೆ, ಅಂದಮೇಲೆ ಅದಕ್ಕೆ ಪವಿತ್ರವಾದ ಶರೀರವು ಹೇಗೆ ಸಿಗುತ್ತದೆ? ತಂದೆಯು ಬಹಳಷ್ಟು ಉದಾಹರಣೆಗಳನ್ನು ತಿಳಿಸಿದ್ದಾರೆ ಏಕೆಂದರೆ ವಜ್ರ ವ್ಯಾಪಾರಿಯಲ್ಲವೆ! ತುಕ್ಕು ಚಿನ್ನದಲ್ಲಿಯೇ ಬೀಳುತ್ತದೆ, ಆಭರಣದಲ್ಲಲ್ಲ. 24 ಕ್ಯಾರೇಟ್ ಚಿನ್ನದಿಂದ 22 ಕ್ಯಾರೇಟ್ನದನ್ನು ಮಾಡಬೇಕೆಂದರೆ ಅದಕ್ಕೆ ಬೆಳ್ಳಿಯನ್ನು ಬೆರೆಸುತ್ತಾರೆ. ಈಗಂತೂ ಚಿನ್ನವೇ ಇಲ್ಲ, ಎಲ್ಲರಿಂದ ತರಿಸಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ನೋಟುಗಳನ್ನೂ ಸಹ ನೋಡಿ ಹೇಗೆ ತಯಾರಿಸುತ್ತಾರೆ! ಅದು ಕಾಗದವೂ ಅಲ್ಲ. ಮಕ್ಕಳಿಗೆ ತಿಳಿದಿದೆ - ಕಲ್ಪ-ಕಲ್ಪವೂ ಇದೇ ರೀತಿ ಆಗುತ್ತಾ ಬಂದಿದೆ. ಲಾಕರ್ಸ್ ಇತ್ಯಾದಿಗಳನ್ನು ತೆರೆಸುತ್ತಾರೆ, ಹೇಗೆ ಕೆಲವರ ಮನೆಗಳನ್ನು ಶೋಧಿಸುತ್ತಾರಲ್ಲವೆ. ಗಾಯನವೂ ಇದೆ - ಕೆಲವರದು ಮಣ್ಣು ಪಾಲಾಯಿತು, ಇನ್ನೂ ಕೆಲವರದು...... ಬೆಂಕಿಯೂ ಸಹ ಬಹಳ ಜೋರಾಗಿ ಹತ್ತಿಕೊಳ್ಳುತ್ತದೆ. ಮಕ್ಕಳು ತಿಳಿದುಕೊಂಡಿದ್ದೀರಿ - ಇದೆಲ್ಲವೂ ಆಗಲಿದೆ ಆದ್ದರಿಂದ ನೀವು ಭವಿಷ್ಯಕ್ಕಾಗಿ ತಮ್ಮ ಬ್ಯಾಗ್-ಬ್ಯಾಗೇಜನ್ನು ತಯಾರು ಮಾಡಿಕೊಳ್ಳುತ್ತಿದ್ದೀರಿ, ಮತ್ತ್ಯಾರಿಗೂ ತಿಳಿದಿಲ್ಲ. ನಿಮಗೇ 21 ಜನ್ಮಗಳಿಗಾಗಿ ಆಸ್ತಿಯು ಸಿಗುತ್ತದೆ. ನಿಮ್ಮ ಹಣದಿಂದಲೇ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಿದ್ದೀರಿ. ಮತ್ತೆ ಅದರಲ್ಲಿ ನೀವೇ ನಿವಾಸ ಮಾಡುತ್ತೀರಿ.

ನೀವು ಮಕ್ಕಳು ತಮ್ಮದೇ ಪುರುಷಾರ್ಥದಿಂದ ತಮಗೆ ತಾವೇ ರಾಜ ತಿಲಕವನ್ನು ಕೊಟ್ಟುಕೊಳ್ಳುತ್ತೀರಿ. ಬಡವರ ಬಂಧುವಾದ ತಂದೆಯು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ ಆದರೆ ತಮ್ಮ ವಿದ್ಯಾಭ್ಯಾಸದಿಂದಲೇ ಆಗುತ್ತೀರಿ. ಕೃಪೆ ಅಥವಾ ಆಶೀರ್ವಾದದಿಂದಲ್ಲ. ಶಿಕ್ಷಕರಿಗಂತೂ ಓದಿಸುವುದು ಅವರ ಧರ್ಮವಾಗಿದೆ, ಕೃಪೆಯ ಮಾತಿಲ್ಲ. ಶಿಕ್ಷಕರಿಗೆ ಸರ್ಕಾರದಿಂದ ಸಂಬಳವು ಸಿಗುತ್ತದೆ. ಆದ್ದರಿಂದ ಅವಶ್ಯವಾಗಿ ಓದಿಸುತ್ತಾರೆ. ಇಷ್ಟು ದೊಡ್ಡ ಬಹುಮಾನವು ಸಿಗುತ್ತದೆ, ಅದರಿಂದ ಪದಮಾಪತಿಗಳಾಗುತ್ತೀರಿ. ಕೃಷ್ಣನ ಪಾದಗಳಲ್ಲಿ ಕಮಲದ ಗುರುತನ್ನು ತೋರಿಸುತ್ತಾರೆ. ನೀವಿಲ್ಲಿಗೆ ಭವಿಷ್ಯದಲ್ಲಿ ಪದಮಾ ಪತಿಗಳಾಗಲು ಬಂದಿದ್ದೀರಿ. ನೀವು ಬಹಳ ಸುಖಿ, ಸಾಹುಕಾರ, ಅಮರರಾಗುತ್ತೀರಿ. ಕಾಲದ ಮೇಲೆ ವಿಜಯ ಗಳಿಸುತ್ತೀರಿ ಈ ಮಾತುಗಳನ್ನು ಮನುಷ್ಯರು ತಿಳಿಯಲು ಸಾಧ್ಯವಿಲ್ಲ. ನಿಮ್ಮ ಆಯಸ್ಸು ಪೂರ್ಣವಾಗುವುದು, ಅಮರರಾಗುತ್ತೀರಿ ಇದಕ್ಕಾಗಿ ಅವರು ಪಾಂಡವರ ಚಿತ್ರಗಳನ್ನು ಬಹಳ ಬೃಹದಾಕಾರವಾಗಿ ಮಾಡಿ ಬಿಟ್ಟಿದ್ದಾರೆ. ಪಾಂಡವರು ಇಷ್ಟು ಬೃಹದಾಕಾರವಾಗಿದ್ದರೆಂದು ತಿಳಿಯುತ್ತಾರೆ. ಸತ್ಯವಾಗಿ ಪಾಂಡವರಂತೂ ನೀವಾಗಿದ್ದೀರಿ, ಎಷ್ಟು ರಾತ್ರಿ-ಹಗಲಿನ ಅಂತರವಿದೆ. ಯಾವುದೇ ಮನುಷ್ಯರು ಹೆಚ್ಚು ಉದ್ದವಂತೂ ಇರುವುದಿಲ್ಲ. ಹೆಚ್ಚೆಂದರೆ ಆರಡಿ ಇರುತ್ತಾರೆ. ಭಕ್ತಿಮಾರ್ಗದಲ್ಲಿ ಮೊಟ್ಟ ಮೊದಲಿಗೆ ಶಿವ ತಂದೆಯ ಭಕ್ತಿಯು ನಡೆಯುತ್ತದೆ, ಅಲ್ಲಂತೂ ದೊಡ್ಡದಾಗಿ ಮಾಡುವುದಿಲ್ಲ. ಮೊದಲು ಶಿವ ತಂದೆಯ ಅವ್ಯಭಿಚಾರಿ ಭಕ್ತಿಯು ನಡೆಯುತ್ತದೆ ನಂತರ ದೇವತೆಗಳ ಮೂರ್ತಿಗಳನ್ನು ಮಾಡುತ್ತಾರೆ ನಂತರ ಅವರ ದೊಡ್ಡ-ದೊಡ್ಡ ಚಿತ್ರಗಳನ್ನು ಮಾಡುತ್ತಾರೆ. ಮತ್ತೆ ಪಾಂಡವರ ದೊಡ್ಡ-ದೊಡ್ಡ ಚಿತ್ರಗಳನ್ನು ಮಾಡಿಸುತ್ತಾರೆ. ಪೂಜೆಗಾಗಿ ಇವೆಲ್ಲಾ ಚಿತ್ರಗಳು ತಯಾರಾಗುತ್ತವೆ. ಲಕ್ಷ್ಮಿಯ ಪೂಜೆಯನ್ನು ವರ್ಷಕ್ಕೊಂದು ಬಾರಿ ಮಾಡುತ್ತಾರೆ. ಜಗದಂಬೆಯ ಪೂಜೆಯನ್ನು ನಿತ್ಯವೂ ಮಾಡುತ್ತಿರುತ್ತಾರೆ. ಇದನ್ನು ತಂದೆಯು ತಿಳಿಸಿದ್ದಾರೆ - ನಿಮ್ಮದು ಡಬಲ್ ಪೂಜೆಯಾಗುತ್ತದೆ. ನನಗಂತೂ ಕೇವಲ ಆತ್ಮನ ರೂಪದಲ್ಲಿ ಅಂದರೆ ಲಿಂಗದ ರೂಪದಲ್ಲಿ ಪೂಜೆಯು ನಡೆಯುತ್ತದೆ ಆದರೆ ನಿಮಗೆ ಸಾಲಿಗ್ರಾಮಗಳ ರೂಪದಲ್ಲಿಯೂ ಮತ್ತು ದೇವತೆಗಳ ರೂಪದಲ್ಲಿಯೂ ಪೂಜೆ ನಡೆಯುತ್ತದೆ. ರುದ್ರ ಯಜ್ಞವನ್ನು ರಚಿಸಿದಾಗ ಎಷ್ಟೊಂದು ಸಾಲಿಗ್ರಾಮಗಳನ್ನು ಮಾಡುತ್ತಾರೆ ಅಂದಾಗ ಯಾರು ದೊಡ್ಡವರಾದರು? ಆದ್ದರಿಂದ ತಂದೆಯು ಮಕ್ಕಳಿಗೆ ನಮಸ್ಕಾರ ಮಾಡುತ್ತಾರೆ, ಎಷ್ಟು ಶ್ರೇಷ್ಠ ಪದವಿಯನ್ನು ಪ್ರಾಪ್ತಿ ಮಾಡಿಸುತ್ತಾರೆ!

ತಂದೆಯು ಎಷ್ಟು ಗುಹ್ಯ-ಗುಹ್ಯ ಮಾತುಗಳನ್ನು ತಿಳಿಸುತ್ತಾರೆ. ಅಂದಮೇಲೆ ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕು! ನಮ್ಮನ್ನು ಭಗವಾನ್ ಭಗವತಿಯರನ್ನಾಗಿ ಮಾಡಲು ಭಗವಂತನೇ ನಮಗೆ ಓದಿಸುತ್ತಾರೆ ಆದ್ದರಿಂದ ಎಷ್ಟೊಂದು ಅಭಿನಂದನೆಗಳನ್ನು ತಿಳಿಸಬೇಕು! ತಂದೆಯ ನೆನಪಿನಲ್ಲಿದ್ದಾಗ ಸ್ವಪ್ನಗಳು ಬಹಳ ಒಳ್ಳೆಯವೇ ಬರುತ್ತವೆ. ಸಾಕ್ಷಾತ್ಕಾರವೂ ಆಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಮ್ಮ ಈಶ್ವರೀಯ ಅಲೌಕಿಕ ಜನ್ಮದಿನವನ್ನು ಆಚರಿಸಬೇಕಾಗಿದೆ, ಆತ್ಮಿಕ ಸಂಬಂಧವನ್ನಿಡಬೇಕಾಗಿದೆ, ರಕ್ತ ಸಂಬಂಧವಲ್ಲ. ಆಸುರೀ-ದೈಹಿಕ ಜನ್ಮ ದಿನವನ್ನು ರದ್ದುಗೊಳಿಸಬೇಕು, ಅದು ಮತ್ತೆ ನೆನಪಿಗೂ ಬರಬಾರದು.

2. ತಮ್ಮ ಬ್ಯಾಗ್-ಬ್ಯಾಗೇಜನ್ನು ಭವಿಷ್ಯಕ್ಕಾಗಿ ತಯಾರು ಮಾಡಿಕೊಳ್ಳಬೇಕಾಗಿದೆ. ತಮ್ಮ ಹಣವನ್ನು ಭಾರತವನ್ನು ಸ್ವರ್ಗವನ್ನಾಗಿ ಮಾಡುವ ಸೇವೆಯಲ್ಲಿ ಸಫಲ ಮಾಡಬೇಕಾಗಿದೆ. ತನ್ನ ಪುರುಷಾರ್ಥದಿಂದ ತನಗೆ ರಾಜ ತಿಲಕವನ್ನಿಟ್ಟುಕೊಳ್ಳಬೇಕಾಗಿದೆ.

ವರದಾನ:
ಸ್ಮೃತಿಯ ಸ್ವಿಚ್ ಆನ್ ಮಾಡಿ ಸೆಕೆಂಡ್ನಲ್ಲಿ ಅಶರೀರಿ ಸ್ಥಿತಿಯ ಅನುಭವ ಮಾಡುವಂತಹ ಪ್ರೀತಿ ಬುದ್ಧಿ ಭವ.

ಎಲ್ಲಿ ಪ್ರಭು ಪ್ರೀತಿಯಿದೆ, ಅಲ್ಲಿ ಅಶರೀರಿಗಳಾಗುವುದು ಒಂದು ಸೆಕೆಂಡ್ನ ಆಟದ ಸಮಾನವಾಗಿದೆ. ಹೇಗೆ ಸ್ವಿಚ್ ಆನ್ ಮಾಡುತ್ತಲೇ ಅಂಧಕಾರ ಸಮಾಪ್ತಿಯಾಗಿ ಬಿಡುತ್ತದೆ, ಅದೇ ರೀತಿ ಪ್ರೀತಿ ಬುದ್ಧಿಯುಳ್ಳವರಾಗಿ ಸ್ಮತಿಯ ಸ್ವಿಚ್ ಆನ್ ಮಾಡಿದಾಗ ದೇಹ ಮತ್ತು ದೇಹದ ಪ್ರಪಂಚದ ಸ್ಮೃತಿಯ ಸ್ವಿಚ್ ಆಫ್ ಆಗಿ ಬಿಡುವುದು. ಇದು ಒಂದು ಸೆಕೆಂಡ್ನ ಆಟವಾಗಿದೆ. ಮುಖದಿಂದ ಬಾಬಾ ಎಂದು ಹೇಳುವುದೂ ಸಹ ಸಮಯ ತೆಗೆದುಕೊಳ್ಳುತ್ತದೆ ಆದರೆ ಸ್ಮೃತಿಯಲ್ಲಿ ತರಲು ಸಮಯ ತೆಗೆದುಕೊಳ್ಳುವುದಿಲ್ಲ. ಈ ಬಾಬಾ ಶಬ್ದವೇ ಹಳೆಯ ಪ್ರಪಂಚವನ್ನು ಮರೆಯಲು ಆತ್ಮಿಕ ಬಾಂಬ್ ಆಗಿದೆ.

ಸ್ಲೋಗನ್:
ದೇಹಭಾನದ ಮಣ್ಣಿನ ಹೊರೆಯಿಂದ ದೂರವಿದ್ದಲ್ಲಿ ಡಬಲ್ ಲೈಟ್ ಫರಿಶ್ತಾ ಆಗಿ ಬಿಡುವಿರಿ.