18.01.23         Morning Kannada Murli       Om Shanti           BapDada Madhuban


ಪಿತಾಶ್ರಿಜೀಯವರ ಪುಣ್ಯ ಸ್ಮೃತಿಯ ದಿವಸದಂದು ತಿಳಿಸಲು ಬಾಪ್ದಾದಾರವರ ಮಧುರ ಮಹಾವಾಕ್ಯ

ಪ್ರಶ್ನೆ:
ಭವಿಷ್ಯಕ್ಕಾಗಿ ಮಕ್ಕಳು ತಂದೆಯ ಜೊತೆ ಯಾವ ವ್ಯಾಪಾರವನ್ನು ಮಾಡಿದ್ದಾರೆ? ಆ ವ್ಯಾಪಾರದಿಂದ ಸಂಗಮದಲ್ಲಿ ಯಾವ ಲಾಭವಿದೆ?

ಉತ್ತರ:
ದೇಹ ಸಹಿತ ಯಾವುದೆಲ್ಲಾ ಕಹಿತನ ಇದೆಯೋ ಅದೆಲ್ಲವನ್ನು ತಂದೆಗೆ ಅರ್ಪಣೆ ಮಾಡಿ ಬಾಬಾರವರಿಗೆ ಹೇಳುತ್ತೀರಿ - ಬಾಬಾ ನಾವು ತಮ್ಮಿಂದ ಎಲ್ಲವನ್ನು ಪಡೆದುಕೊಳ್ಳುತ್ತೇವೆ(ಭವಿಷ್ಯದಲ್ಲಿ) ಇದಾಗಿದೆ ಎಲ್ಲದಕ್ಕಿಂತ ಒಳ್ಳೆಯ ವ್ಯಾಪಾರ. ಇದರಿಂದ ನಿಮದು ಬಾಬಾರವರ ತಿಜೋರಿಯಲ್ಲಿ ಎಲ್ಲವೂ ಸುರಕ್ಷಿತವಾಗಿ ಬಿಡುತ್ತದೆ ಹಾಗೂ ಅಪಾರ ಖುಷಿ ಸಿಗುತ್ತದೆ - ಈಗ ಇಲ್ಲಿ ನಾವು ಸ್ವಲ್ಪ ಸಮಯ ಇದ್ದೇವೆ, ಮತ್ತೆ ನಮ್ಮ ರಾಜಧಾನಿಯಲ್ಲಿರುತ್ತೇವೆ. ನಿಮಗೆ ಯಾರೇ ಕೇಳಿದರೆ ಹೇಳಿ ವಾಹ್! ನಾವಂತೂ ಬೇಹದ್ ತಂದೆಯ ಬೇಹದ್ ಸುಖದ ಆಸ್ತಿಯನ್ನು ಪಡೆದುಕೊಳ್ಳುತ್ತಿದ್ದೇವೆ. ಈಗ ನಾವು ಎವರ್ ಹೆಲ್ತಿ, ಎವರ್ ವೆಲ್ತಿ ಆಗುತ್ತೇವೆ.

ಓಂ ಶಾಂತಿ.
ಆತ್ಮಿಕ ತಂದೆ ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ ಮಧುರ ಮಕ್ಕಳೇ, ಯಾವಾಗ ಇಲ್ಲಿ ಬಂದು ಕುಳಿತುಕೊಳ್ಳುತ್ತೀರೆಂದರೆ ಆತ್ಮಾಭಿಮಾನಿಯಾಗಿ ತಂದೆಯ ನೆನಪಿನಲ್ಲಿ ಕುಳಿತುಕೊಳ್ಳಿ. ಈ ಅಟೆನ್ಷನ್ ನಿಮಗೆ ಸದಾ ಕಾಲಕ್ಕಾಗಿರಬೇಕು. ಎಲ್ಲಿಯವರೆಗೆ ಜೀವಿಸುತ್ತೀರಿ, ತಂದೆಯನ್ನು ನೆನಪು ಮಾಡುತ್ತಿರಬೇಕು. ನೆನಪು ಮಾಡುವುದಿಲ್ಲವೆಂದರೆ ಜನ್ಮ ಜನ್ಮಾಂತರದ ಪಾಪವು ಕಟ್ ಆಗುವುದಿಲ್ಲ. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಎಲ್ಲಾ ರಹಸ್ಯದ ಸ್ವದರ್ಶನ ಚಕ್ರ ನಿಮ್ಮ ಬುದ್ಧಿಯಲ್ಲಿ ತಿರುಗುತ್ತಿರಬೇಕು. ನೀವು ಲೈಟ್ ಹೌಸ್ ಆಗಿದ್ದೀರಲ್ಲವೇ. ಒಂದು ಕಣ್ಣಿನಲ್ಲಿ ಶಾಂತಿಧಾಮ, ಮತ್ತೊಂದು ಕಣ್ಣಿನಲ್ಲಿ ಸುಖಧಾಮ. ಕುಳಿತುಕೊಳ್ಳುತ್ತಾ-ಏಳುತ್ತಾ, ನಡೆಯುತ್ತಾ-ಓಡಾಡುತ್ತಾ ತಮ್ಮನ್ನು ತಾವು ಲೈಟ್ ಹೌಸ್ ಎಂದುಕೊಳ್ಳಿ. ತಮ್ಮನ್ನು ತಾವು ಲೈಟ್ ಹೌಸ್ ಎಂದುಕೊಳ್ಳುವುದರಿಂದ ನಿಮ್ಮ ಕಲ್ಯಾಣವನ್ನು ಮಾಡುತ್ತೀರಿ ಹಾಗೂ ಅನ್ಯರ ಕಲ್ಯಾಣವನ್ನು ಮಾಡುತ್ತೀರಿ. ಬಾಬಾರವರು ಭಿನ್ನ-ಭಿನ್ನ ಯುಕ್ತಿಗಳನ್ನು ಹೇಳುತ್ತಿರುತ್ತಾರೆ. ಯಾರಾದರೂ ರಸ್ತೆಯಲ್ಲಿ ಸಿಕ್ಕರೆ ಅವರಿಗೆ ತಿಳಿಸಬೇಕು ಇದು ದುಃಖಧಾಮವಾಗಿದೆ - ಶಾಂತಿಧಾಮ, ಸುಖಧಾಮಕ್ಕೆ ಹೋಗಲು ಬಯಸುತ್ತೀರಾ! ಸೂಚನೆಯನ್ನು ಕೊಡಬೇಕು. ಲೈಟ್ ಹೌಸ್ ಸಹ ಸೂಚನೆಯನ್ನು ಕೊಡುತ್ತದೆಯಲ್ಲವೇ, ಮಾರ್ಗವನ್ನು ತೋರಿಸುತ್ತದೆ. ನಿಮಗೂ ಕೂಡ ಸುಖಧಾಮ, ಶಾಂತಿಧಾಮದ ಮಾರ್ಗವನ್ನು ಹೇಳಬೇಕು. ದಿನ ರಾತ್ರಿ ಈ ಇದೇ ಗುಂಗಲ್ಲಿರಬೇಕು. ಯೋಗದ ಶಕ್ತಿಯಿಂದ ನಾವು ಯಾರಿಗೆ ಬೇಕಾದರೂ ಸ್ವಲ್ಪವಾದರೂ ತಿಳಿಸಿಕೊಟ್ಟರೆ ಅವರಿಗೆ ತಕ್ಷಣ ಬಾಣ ನಾಟಿ ಬಿಡುತ್ತದೆ. ಯಾರಿಗೆ ಬಾಣ ನಾಟುತ್ತದೆ ಅವರು ಒಮ್ಮೆಲೇ ಗಾಯಾಳುಗಳಾಗುತ್ತಾರೆ. ಮೊದಲು ಗಾಯಾಳು ಆಗುತ್ತಾರೆ ನಂತರ ಬಾಬಾರವರಾಗುತ್ತಾರೆ. ಬಾಬಾರವರಿಗೆ ಪ್ರೀತಿಯಿಂದ ನಾವು ಮಕ್ಕಳು ನೆನಪು ಮಾಡುತ್ತೇವೆ. ತಂದೆಗೂ ಸಹ ಆಕರ್ಷಣೆ ಆಗುತ್ತದೆ ಕೆಲವು ಮಕ್ಕಳಂತೂ ಸ್ವಲ್ಪವೂ ನೆನಪು ಮಾಡುವುದಿಲ್ಲ ಆಗ ತಂದೆಗೆ ದಯೆ ಬರುತ್ತದೆ ಆದರೂ ಸಹ ಹೇಳುತ್ತಾರೆ ಮಧುರ ಮಕ್ಕಳೇ, ಉನ್ನತಿಯನ್ನು ಪಡೆಯುತ್ತಾ ಇರಿ ಪುರುಷಾರ್ಥದಲ್ಲಿ ನಂಬರ್ವನ್ನಲ್ಲಿ ಹೋಗಬೇಕು ಪತಿತ ಪಾವನ ಸದ್ಗತಿದಾತ ಒಬ್ಬ ತಂದೆಯಾಗಿದ್ದಾರೆ ಆ ಒಬ್ಬ ತಂದೆಯನ್ನೆ ನೆನಪು ಮಾಡಬೇಕು. ಕೇವಲ ತಂದೆಯನ್ನಲ್ಲ ಜೊತೆ-ಜೊತೆ ಮಧುರವಾದಂತಹ ಮನೆಯನ್ನು ನೆನಪು ಮಾಡಬೇಕು. ಕೇವಲ ಮಧುರವಾದ ಮನೆಯನ್ನಲ್ಲ ಆಸ್ತಿಯೂ ಸಹ ಇರಬೇಕು ಆ ಕಾರಣ ಸ್ವರ್ಗಧಾಮವನ್ನು ನೆನಪು ಮಾಡಬೇಕು.

ತಂದೆ ಬಂದಿದ್ದಾರೆ ಮಧುರ ಮಧುರ ಮಕ್ಕಳನ್ನು ಪರ್ಫೆಕ್ಟ್ ಮಾಡುವುದಕ್ಕೆ. ಪ್ರಾಮಾಣಿಕರಾಗಿ ಸತ್ಯತೆಯಿಂದ ತಮ್ಮನ್ನು ಚೆಕ್ ಮಾಡಿಕೊಳ್ಳಬೇಕು ನಾವು ಎಲ್ಲಿಯ ತನಕ ಪರ್ಫೆಕ್ಟ್ ಆಗಿದ್ದೇವೆ? ಪರ್ಫೆಕ್ಟ್ ಆಗುವಂತಹ ಯುಕ್ತಿಯನ್ನು ತಂದೆ ತಿಳಿಸುತ್ತಾ ಇರುತ್ತಾರೆ. ಮುಖ್ಯವಾದ ಕೊರತೆಯಾಗಿದೆ ದೇಹಾಭಿಮಾನ. ದೇಹಾಭಿಮಾನವೇ ಅವಸ್ಥೆಯನ್ನು ಮುಂದುವರೆಯುವುದಕ್ಕೆ ಬಿಡುವುದಿಲ್ಲ. ಆ ಕಾರಣ ದೇಹವನ್ನು ಸಹ ಮರೆಯಬೇಕು ತಂದೆಗೆ ಮಕ್ಕಳ ಪ್ರತಿ ಎಷ್ಟೊಂದು ಪ್ರೀತಿಯಿರುತ್ತದೆ ತಂದೆ ಮಕ್ಕಳನ್ನು ನೋಡಿ ಹರ್ಷಿತರಾಗುತ್ತಾರೆ. ಮಕ್ಕಳು ಸಹ ಅಷ್ಟೊಂದು ಖುಷಿಯಲ್ಲಿರಬೇಕು. ತಂದೆಯನ್ನು ನೆನಪು ಮಾಡಿ ಒಳಗಡೆ ಗದ್ಗದಿತರಾಗಬೇಕು(ರೋಮಾಂಚನ) ದಿನ ಪ್ರತಿದಿನ ಖುಷಿಯ ನಶೆ ಏರುತ್ತಿರಬೇಕು. ಖುಷಿಯ ನಶೆ ನೆನಪಿನ ಯಾತ್ರೆಯಲ್ಲಿದ್ದಾಗ. ಅದು ನಿಧಾನ ನಿಧಾನವಾಗಿ ಏರುತ್ತದೆ ಸೋಲು ಗೆಲುವು ಆಗುತ್ತಾ ಆಗುತ್ತಾ ನಂತರ ನಂಬರ್ವಾರ ಪುರುಷಾರ್ಥದ ಅನುಸಾರ ಕಲ್ಪದ ಹಿಂದಿನ ತರಹ ತಮ್ಮ ತಮ್ಮ ಪದವಿಯನ್ನು ಪಡೆದುಕೊಳ್ಳುತ್ತಾರೆ ಬಾಪ್ ದಾದಾರವರು ಮಕ್ಕಳ ಸ್ಥಿತಿಯನ್ನು ಸಾಕ್ಷಿಯಾಗಿ ನೋಡುತ್ತಾ ಇರುತ್ತಾರೆ ಹಾಗೂ ತಿಳುವಳಿಕೆಯನ್ನು ಕೊಡುತ್ತಿರುತ್ತಾರೆ. ಬಾಪ್ದಾದಾರವರಿಬ್ಬರಿಗೂ ಮಕ್ಕಳ ಪ್ರತಿ ಬಹಳ ಪ್ರೀತಿ ಇದೆ. ಏಕೆಂದರೆ ಕಲ್ಪ ಕಲ್ಪದ ಲವ್ ಲೀ ಸರ್ವೀಸ್ಅನ್ನು ಮಾಡುತ್ತಾರೆ ಹಾಗೂ ಬಹಳ ಪ್ರೀತಿಯಿಂದ ಮಾಡುತ್ತಾರೆ ಆದರೆ ಮಕ್ಕಳು ಒಂದು ವೇಳೆ ಶ್ರೀಮತದಂತೆ ನಡೆಯುವುದಿಲ್ಲವೆಂದರೆ ತಂದೆ ಏನು ಮಾಡುವುದಕ್ಕೆ ಸಾಧ್ಯ ತಂದೆಗೆ ಬಹಳ ದಯೆ ಬರುತ್ತದೆ. ಮಾಯೆ ಸೋಲಿಸಿ ಬಿಡುತ್ತದೆ, ತಂದೆ ನಂತರ ಎದ್ದು ನಿಲ್ಲಿಸಿ ಬಿಡುತ್ತಾರೆ ಎಲ್ಲರಿಗಿಂತ ಮಧುರಾತಿ ಮಧುರ ಒಬ್ಬ ತಂದೆಯಾಗಿದ್ದಾರೆ ಎಷ್ಟು ಮಧುರ ಎಷ್ಟು ಪ್ರಿಯ ಶಿವಭೋಲಾ ಭಗವಂತ ಆಗಿದ್ದಾರೆ. ಶಿವಭೋಲಾ ಒಬ್ಬರದೇ ಹೆಸರಾಗಿದೆ.

ಮಧುರ ಮಕ್ಕಳೇ, ಈಗಂತೂ ಬಹಳ ಬಹಳ ವ್ಯಾಲ್ಯುಎಬಲ್ ವಜ್ರವಾಗುತ್ತೀರಾ. ವ್ಯಾಲ್ಯುಎಬಲ್ ವಜ್ರ ವೈಢೂರ್ಯಗಳು ಯಾವುದು ಇರುತ್ತದೆ ಅದನ್ನು ಸೇಫಟಿಗೋಸ್ಕರ ಸದೈವ ಬ್ಯಾಂಕಿನಲ್ಲಿಡುತ್ತಾರೆ. ನಾವು ಬ್ರಾಹ್ಮಣ ಮಕ್ಕಳೂ ಸಹ ವ್ಯಾಲ್ಯುಎಬಲ್ ಆಗಿದ್ದೇವೆ, ಯಾವ ಶಿವಬಾಬಾರವರ ಬ್ಯಾಂಕಿನಲ್ಲಿ ಸೇಫಟಿಯಾಗಿ ಕುಳಿತಿದ್ದೀರಾ. ಈಗ ತಾವು ಬಾಬಾರವರ ರಕ್ಷಣೆಯಲ್ಲಿ ಅಮರರಾಗುತ್ತೀರಿ. ತಾವು ಕಾಲದ ಮೇಲೆ ವಿಜಯವನ್ನು ಪಡೆಯುತ್ತಿದ್ದೀರಿ. ಶಿವಬಾಬಾರವರಾಗಿದ್ದೀರಿ ಎಂದರೆ ಸೇಫ ಆಗಿಬಿಟ್ಟಿರಿ. ಬಾಕಿ ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕೆ ಪುರುಷಾರ್ಥವನ್ನು ಮಾಡಬೇಕು. ಪ್ರಪಂಚದಲ್ಲಿ ಮನುಷ್ಯರ ಹತ್ತಿರ ಎಷ್ಟೇ ಧನ ಸಂಪತ್ತಿರಬಹುದು ಆದರೆ ಅದೆಲ್ಲವೂ ಸಮಾಪ್ತಿಯಾಗಿ ಬಿಡುತ್ತದೆ. ಯಾವುದೂ ಸಹ ಇರುವುದಿಲ್ಲ ನಾವು ಮಕ್ಕಳ ಹತ್ತಿರ ಈಗ ಏನೂ ಸಹ ಇಲ್ಲ. ಈ ದೇಹವೂ ಸಹ ಇಲ್ಲ. ಇದನ್ನೂ ಸಹ ತಂದೆಗೆ ಕೊಟ್ಟು ಬಿಡಬೇಕು. ಯಾರ ಬಳಿ ಏನೂ ಸಹ ಇಲ್ಲ ಆದರೂ ಅವರ ಹತ್ತಿರ ಎಲ್ಲವೂ ಸಹ ಇದೆ. ತಾವೂ ಬೇಹದ್ದಿನ ತಂದೆಯ ಜೊತೆಯಲ್ಲಿ ವ್ಯಾಪಾರವನ್ನು ಮಾಡಿದ್ದೀರಾ ಭವಿಷ್ಯ ಹೊಸ ಪ್ರಪಂಚಕ್ಕೋಸ್ಕರ. ಹೇಳುತ್ತೀರಾ - ಬಾಬಾ ದೇಹ ಸಹಿತ ಏನೆಲ್ಲಾ ಕೊರತೆಗಳಿವೆ, ಎಲ್ಲವನ್ನೂ ತಮಗೆ ಕೊಟ್ಟುಬಿಡುತ್ತೇವೆ ಹಾಗೂ ತಮ್ಮಿಂದ ಮತ್ತೆ ಎಲ್ಲವನ್ನು ತೆಗೆದುಕೊಳ್ಳುತ್ತೇವೆ. ಹಾಗಾದರೆ ತಾವು ಸೇಫ ಆಗಿ ಬಿಡುತ್ತೀರಾ. ಎಲ್ಲವೂ ಬಾಬಾರವರ ತಿಜೋರಿ(ಲಾಕರ್)ಯಲ್ಲಿ ಸೇಫ ಆಗಿರುತ್ತದೆ. ನಾವು ಮಕ್ಕಳ ಒಳಗಡೆ ಎಷ್ಟೊಂದು ಖುಷಿಯಿರಬೇಕು, ಬಾಕಿ ಸ್ವಲ್ಪ ಸಮಯವಿದೆ ಪುನಃ ನಾವು ನಮ್ಮ ರಾಜಧಾನಿಯಲ್ಲಿರುತ್ತೇವೆ. ನಿಮ್ಮನ್ನು ಯಾರಾದರೂ ಕೇಳಿದರೆ ಹೇಳಿ ವಾಹ್ ನಾವು ಬೇಹದ್ದಿನ ತಂದೆಯಿಂದ ಬೇಹದ್ದಿನ ಸುಖದ ಆಸ್ತಿಯನ್ನು ಪಡೆಯುತ್ತಿದ್ದೇವೆ. ಎವರ್ ಹೆಲ್ತಿ, ಎವರಿ ವೆಲ್ತಿ ಆಗುತ್ತೇವೆ. ನಮ್ಮ ಎಲ್ಲಾ ಮನೋಕಾಮನೆಗಳು ಪೂರ್ಣವಾಗುತ್ತಿವೆ. ಇಂತಹ ತಂದೆ ಎಷ್ಟು ಲವಲೀ ಪ್ಯೂರ್ ಆಗಿದ್ದಾರೆ. ಅವರು ಆತ್ಮಗಳಿಗೂ ತನ್ನ ಸಮಾನ ಪವಿತ್ರರನ್ನಾಗಿ ಮಾಡುತ್ತಾರೆ. ನಾವು ಎಷ್ಟು ತಂದೆಯನ್ನು ನೆನಪು ಮಾಡುತ್ತೇವೆ ಅಷ್ಟೆ ಅಪಾರ ಲವ್ ಲೀ ಆಗುತ್ತೇವೆ. ದೇವತೆಗಳು ಎಷ್ಟು ಲವ್ ಲೀಯಾಗಿದ್ದಾರೆ ಇದುವರೆಗೂ ಅವರ ಜಡಚಿತ್ರಗಳ ಮುಂದೆ ಪೂಜೆಯಾಗುತ್ತಿರುತ್ತದೆ ಹಾಗಾದರೆ ಈಗ ನೀವು ಮಕ್ಕಳು ಇಷ್ಟು ಲವ್ಲೀಯಾಗಬೇಕಾಗಿದೆ. ಯಾವುದೇ ದೇಹಧಾರಿ ಯಾವುದೇ ವಸ್ತುಗಳು ಅಂತಿಮದಲ್ಲಿ ನೆನಪಿಗೆ ಬರಬಾರದು ಬಾಬಾ ತಮ್ಮಿಂದಂತೂ ನಮಗೆ ಎಲ್ಲವೂ ಸಿಕ್ಕಿಬಿಟ್ಟಿದೆ.

ಮಧುರ ಮಕ್ಕಳೇ ತಮ್ಮ ಜೊತೆಯಲ್ಲಿ ಪ್ರತಿಜ್ಞೆಯನ್ನು ಮಾಡಬೇಕು. ನಮ್ಮಿಂದ ಯಾವುದೇ ವಿಕರ್ಮಗಳು ಆಗಬಾರದು ಯಾವುದರಿಂದ ಮನಸ್ಸು ಒಳಗಡೆ ತಿನ್ನುತ್ತಿರುತ್ತದೆ. ಆ ಕಾರಣ ಎಷ್ಟು ಸಾಧ್ಯವೋ ಅಷ್ಟು ತಮ್ಮನ್ನು ಸುಧಾರಣೆ ಮಾಡಿಕೊಳ್ಳಬೇಕು, ಶ್ರೇಷ್ಠ ಪದವಿಯನ್ನು ಪಡೆಯುವ ಪುರುಷಾರ್ಥವನ್ನು ಮಾಡಬೇಕು. ನಂಬರ್ವಾರ್ ಅಂತೂ ಇದ್ದೇ ಇದೆ. ವಜ್ರಗಳಲ್ಲೂ ಸಹ ನಂಬರ್ವಾರ್ ಇರುತ್ತದೆಯಲ್ಲವೇ. ಕೆಲವರಲ್ಲಿ ಬಹಳ ಡಿಫೆಕ್ಟ್ ಆಗಿರುತ್ತಾರೆ. ಕೆಲವರು ಸಂಪೂರ್ಣ ಪ್ಯೂರ್ ಆಗಿರುತ್ತಾರೆ. ತಂದೆಯೂ ಸಹ ವಜ್ರದ ವ್ಯಾಪಾರಿಯಲ್ಲವೇ. ಹಾಗಾದರೆ ತಂದೆ ಒಂದೊಂದು ರತ್ನವನ್ನು ನೋಡಬೇಕಾಗುತ್ತದೆ. ಇಲ್ಲಿ ಯಾವ ರತ್ನವಿದೆ, ಇದರಲ್ಲಿ ಯಾವುದು ಡಿಫೆಕ್ಟ್ ಇದೆ ಒಳ್ಳೊಳ್ಳೆಯ ಪವಿತ್ರ ರತ್ನಗಳು ತಂದೆಯನ್ನು ಬಹಳ ಪ್ರೀತಿಯಿಂದ ನೋಡುತ್ತಾರೆ. ಒಳ್ಳೊಳ್ಳೆಯ ಪವಿತ್ರ ರತ್ನಗಳನ್ನು ಚಿನ್ನದ ಡಬ್ಬದಲ್ಲಿ ಹಾಕಿ ಇಡಬೇಕಾಗುತ್ತದೆ. ಮಕ್ಕಳು ಸಹ ಸ್ವಯಂ ತಿಳಿದುಕೊಳ್ಳುತ್ತಾರೆ ನಾನು ಯಾವ ಪ್ರಕಾರದ ರತ್ನವಾಗಿದ್ದೇನೆ. ನನ್ನಲ್ಲಿ ಯಾವ ಡಿಫೆಕ್ಟ್ ಇದೆ. ಈಗ ತಾವು ಹೇಳುತ್ತೀರಿ ವಾಹ್ ಸದ್ಗುರು ವಾಹ್! ಯಾರು ನಮಗೆ ಈ ದಾರಿಯನ್ನು ತೋರಿಸಿದರು. ವಾಹ್ ಅದೃಷ್ಠ ವಾಹ್! ವಾಹ್ ಡ್ರಾಮಾ ವಾಹ್. ನಮ್ಮ ಹೃದಯದಿಂದ ಬರುತ್ತದೆ - ಧನ್ಯವಾದಗಳು ಬಾಬಾ ತಮಗೆ ನಮ್ಮ ಎರಡು ಹಿಡಿ ಅವಲಕ್ಕಿಯನ್ನು ತೆಗೆದುಕೊಂಡು ನಮ್ಮನ್ನು ಸೇಫಟಿ ಇಂದ ಭವಿಷ್ಯದಲ್ಲಿ 100 ಪಟ್ಟು ರಿಟರ್ನ್ ನೀಡುತ್ತಾರೆ. ಆದರೆ ಇದರಲ್ಲೂ ಮಕ್ಕಳು ದೊಡ್ಡ ವಿಶಾಲ ಬುದ್ಧಿಯಿರಬೇಕು. ಮಕ್ಕಳಲ್ಲಿ ಅಪಾರವಾದ ಜ್ಞಾನ ಧನದ ಖಜಾನೆ ಸಿಗುತ್ತಿರುತ್ತದೆ ಎಂದರೆ ಅಪಾರ ಖುಷಿಯಲ್ಲಿರಬೇಕಲ್ಲವೇ. ಎಷ್ಟು ಹೃದಯ ಶುದ್ಧವಾಗುತ್ತದೆ ಆಗ ಅನ್ಯರಿಗೂ ಶುದ್ಧರನಾಗಿ ಮಾಡಬಹುದು. ಯೋಗದ ಸ್ಥಿತಿಯಿಂದಲೇ ಹೃದಯ ಶುದ್ಧವಾಗುತ್ತದೆ ನಾವು ಮಕ್ಕಳು ಯೋಗಿಗಳಾಗಿ ಮಾಡಿಸುವಂತಹ ನಶೆ ಇರಬೇಕು. ಒಂದುವೇಳೇ ದೇಹದ ಮೇಲೆ ಮೋಹವಿದ್ದರೆ, ದೇಹಾಭಿಮಾನವಿದ್ದರೆ ತಿಳಿದುಕೊಳ್ಳಿ ನಮ್ಮ ಅವಸ್ಥೆ ಬಹಳ ಕಚ್ಛಾ ಆಗಿದೆ ಎಂದು. ದೇಹೀ ಅಭಿಮಾನಿ ಮಕ್ಕಳೇ ಸತ್ಯ ಡೈಮಂಡ್ ಆಗುತ್ತಾರೆ ಒಂದು ವೇಳೆ ಎಷ್ಟು ಸಾಧ್ಯವೋ ದೇಹೀ ಅಭಿಮಾನಿಗಳಾಗುವ ಅಭ್ಯಾಸವನ್ನು ಮಾಡಿ. ತಂದೆಯನ್ನು ನೆನಪು ಮಾಡಿ. ಬಾಬಾ ಎನ್ನುವ ಅಕ್ಷರ ಎಲ್ಲದಕ್ಕಿಂತ ಬಹಳ ಮಧುರವಾಗಿದೆ ತಂದೆ ಬಹಳ ಪ್ರೀತಿಯಿಂದ ತನ್ನ ರೆಪ್ಪೆಯ ಮೇಲೆ ಕೂರಿಸಿಕೊಂಡು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಇಂತಹ ತಂದೆಯ ನೆನಪಿನ ನಶೆಯಲ್ಲಿ ಪುಡಿ ಪುಡಿಯಾಗಿ ಬಿಡಬೇಕು. ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಖುಷಿಯಲ್ಲಿ ಶೀತಲರಾಗಿ ಬಿಡಬೇಕು. ಹೇಗೆ ತಂದೆ ಅಪಕಾರಿಗಳ ಮೇಲೆ ಉಪಕಾರವನ್ನು ಮಾಡುತ್ತಾರೆ - ನಾವೂ ಸಹ ಫಾಲೋ ಫಾದರ್ ಮಾಡಬೇಕು. ಸುಖದಾಯಿಯಾಗಬೇಕು.

ನಾವು ಮಕ್ಕಳು ಈಗ ಡ್ರಾಮಾದ ರಹಸ್ಯವನ್ನೂ ಸಹ ತಿಳಿದುಕೊಂಡಿದ್ದೇವೆ - ತಂದೆ ನಮ್ಮನ್ನು ನಿರಾಕಾರಿ, ಆಕಾರಿ ಹಾಗೂ ಸಾಕಾರಿ ಪ್ರಪಂಚದ ಎಲ್ಲಾ ಸಮಾಚಾರವನ್ನು ತಿಳಿಸುತ್ತಾರೆ. ಆತ್ಮ ಹೇಳುತ್ತದೆ ಈಗ ನಾವು ಪುರುಷಾರ್ಥವನ್ನು ಮಾಡುತ್ತಿದ್ದೇವೆ, ಹೊಸ ಪ್ರಪಂಚಕ್ಕೆ ಹೋಗುವುದಕ್ಕೋಸ್ಕರ ನಾವು ಸ್ವರ್ಗಕ್ಕೆ ಹೋಗುವುದಕ್ಕೆ ಯ್ಯೋಗರು ಅವಶ್ಯವಾಗಿ ಆಗುತ್ತೇವೆ. ತನ್ನ ಹಾಗೂ ಅನ್ಯರ ಕಲ್ಯಾಣವನ್ನು ಮಾಡಬೇಕು. ಒಳ್ಳೆಯದು - ತಂದೆ ಮಧುರವಾದ ಮಕ್ಕಳಿಗೆ ತಿಳಿಸುತ್ತಾರೆ, ತಂದೆ ದುಃಖಹರ್ತ ಸುಖಕರ್ತರಾಗಿದ್ದಾರೆ ನಾವು ಮಕ್ಕಳೂ ಸಹ ಎಲ್ಲರಿಗೆ ಸುಖವನ್ನು ಕೊಡಬೇಕು. ತಂದೆಯ ರೈಟ್ ಹ್ಯಾಂಡ್ ಆಗಬೇಕು. ಇಂತಹ ಮಕ್ಕಳೆ ತಂದೆಗೆ ಪ್ರಿಯರಾಗುತ್ತಾರೆ. ಶುಭಕಾರ್ಯವನ್ನು ಬಲಗೈ ಇಂದ ಮಾಡಲಾಗುತ್ತದೆ. ಎಂದಮೇಲೆ ತಂದೆಯು ತಿಳಿಸುತ್ತಾರೆ ಪ್ರತಿಯೊಂದು ಮಾತಿನಲ್ಲಿ ರೈಟಿಯಸ್ ಆಗಬೇಕು. ಒಬ್ಬ ತಂದೆಯನ್ನು ನೆನಪು ಮಾಡಬೇಕು ನಂತರ ಅಂತ್ಯಮತಿ ಸೋ ಗತಿಯಾಗಿ ಬಿಡುತ್ತದೆ. ಈ ಹಳೆಯ ಪ್ರಪಂಚದ ಮೇಲೆ ಮಮತೆಯನ್ನು ತೆಗೆಯಬೇಕು. ಇದಂತೂ ಸ್ಮಶಾನವಾಗಿದೆ ಕಾರ್ಯವ್ಯವಹಾರವನ್ನು ಮಾಡುತ್ತಾ ಮಕ್ಕಳ ಮುಂತಾದವರ ಚಿಂತನೆಯಲ್ಲಿ ಸತ್ತರೆ, ತಮ್ಮನ್ನು ತಾವು ಹಾಳಾಗಿ ಬಿಡುತ್ತೀರಿ. ಶಿವಬಾಬಾರವರನ್ನು ನೆನಪು ಮಾಡುವುದರಿಂದ ತಾವು ಬಹಳ ಉನ್ನತಿಯನ್ನು ಪಡೆದುಕೊಳ್ಳುತ್ತೀರಾ. ದೇಹಾಭಿಮಾನದಲ್ಲಿ ಬರುವುದರಿಂದ ಹಾಳಾಗಿ ಬಿಡುತ್ತೀರಿ. ದೇಹಿ ಅಭಿಮಾನಿ ಆಗುವುದರಿಂದ ಉನ್ನತಿಯಾಗುತ್ತದೆ. ಧನದ್ದೂ ಸಹ ಬಹಳ ಲೋಭವಿಟ್ಟುಕೊಳ್ಳಬಾರದು. ಅದರ ಚಿಂತೆಯಲ್ಲಿಯೇ ಶಿವಬಾಬಾರವರನ್ನು ಮರೆತು ಹೋಗುತ್ತೀರಾ. ಬಾಬಾ ನೋಡುತ್ತಾರೆ ಎಲ್ಲವನ್ನು ತಂದೆಗೆ ಅರ್ಪಣೆ ಮಾಡಿದ ನಂತರ ನಮ್ಮ ಶ್ರೀಮತದಂತೆ ಎಲ್ಲಿಯವರೆಗೆ ನಡೆಯುತ್ತಾರೆ. ಪ್ರಾರಂಭದಲ್ಲಿ ತಂದೆ ಟ್ರಸ್ಟಿಯಾಗಿ ತೋರಿಸಿದರಲ್ಲವೇ. ಎಲ್ಲವನ್ನು ಈಶ್ವರ ಅರ್ಪಣೆ ಮಾಡಿ ಸ್ವಯಂ ಟ್ರಸ್ಟಿಯಾಗಿ ಬಿಟ್ಟರು. ಅಷ್ಟೇ ಈಶ್ವರನ ಕಾರ್ಯದಲ್ಲೇ ತೊಡಗಿಸಬೇಕಲ್ಲವೇ. ವಿಘ್ನಗಳಿಗೆ ಎಂದೂ ಹೆದರಿಕೊಳ್ಳಬಾರದು. ಎಲ್ಲಿಯವರೆಗೂ ಸಾಧ್ಯವೋ ಸರ್ವೀಸಿನಲ್ಲಿ ತಮ್ಮದೆಲ್ಲವನ್ನು ಸಫಲ ಮಾಡಿಕೊಳ್ಳಬೇಕು. ಈಶ್ವರನಿಗೆ ಅರ್ಪಣೆ ಮಾಡಿ ಟ್ರಸ್ಟಿಯಾಗಿರಬೇಕು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಅವ್ಯಕ್ತ ಮಹಾವಾಕ್ಯ 1977

ಎಲ್ಲರೂ ಶಬ್ದದಿಂದ ದೂರ ತಮ್ಮ ಶಾಂತಸ್ವರೂಪ ಸ್ಥಿತಿಯಲ್ಲಿ ಸ್ಥಿತರಾಗುವಂತಹ ಅನುಭವ ಬಹಳ ಸಮಯ ಮಾಡಬಹುದಾ? ಶಬ್ದದಲ್ಲಿ ಬರುವಂತಹ ಅನುಭವ ಜಾಸ್ತಿ ಮಾಡಬಹುದಾ ಅಥವಾ ಶಬ್ದದಿಂದ ದೂರ ಹೋಗುವಂತಹ ಅನುಭವ ಜಾಸ್ತಿ ಸಮಯ ಮಾಡಬಹುದಾ? ಎಷ್ಟು ಕೊನೆಯ ಸ್ಟೇಜ್ ಅಥವಾ ಕರ್ಮಾತೀತ ಸ್ಥಿತಿ ಸಮೀಪ ಬರುತ್ತಾ ಹೋಗುತ್ತದೆ ಅಷ್ಟೇ ಶಬ್ದದಿಂದ ದೂರ ಶಾಂತ ಸ್ವರೂಪ ಸ್ಥಿತಿ ಅಧಿಕ ಪ್ರಿಯವೆನಿಸುತ್ತದೆ, ಈ ಸ್ಥಿತಿಯಲ್ಲಿ ಸದಾ ಅತೀಂದ್ರಿಯ ಸುಖದ ಅನುಭೂತಿ ಇರಬೇಕು. ಈ ಅತೀಂದ್ರಿಯ ಸುಖಮಯ ಸ್ಥಿತಿಯ ಮುಖಾಂತರ ಅನೇಕ ಆತ್ಮಗಳನ್ನು ಸಹಜವಾಗಿ ಆಹ್ವಾನ ಮಾಡಬಹುದು. ಈ ಶಕ್ತಿಶಾಲಿ ಸ್ಥಿತಿ ವಿಶ್ವಕಲ್ಯಾಣಕಾರಿ ಸ್ಥಿತಿಯೆಂದು ಹೇಳಲಾಗುತ್ತದೆ. ಹೇಗೆ ಇತ್ತೀಚಿನ ವಿಜ್ಞಾನದ ಸಾಧನೆಗಳ ಮುಖಾಂತರ ಎಲ್ಲಾ ವಸ್ತುಗಳು ಸಮೀಪದ ಅನುಭವವಾಗುತ್ತಿರುತ್ತದೆ, ದೂರದ ಶಬ್ದ ಟೆಲಿಫೋನಿನ ಸಾಧನೆಯ ಮುಖಾಂತರ ಸಮೀಪ ಕೇಳುವುದರಲ್ಲಿ ಬರುತ್ತದೆ, ಟಿ.ವಿ. (ದೂರದರ್ಶನದ ಮುಖಾಂತರ) ದೂರದಲ್ಲಿರುವ ದೃಶ್ಯ ಸಮೀಪದಲ್ಲಿ ಕಂಡು ಬರುತ್ತದೆ. ಇದರಂತೆ ಸೈಲೆನ್ಸ್ನ ಸ್ಟೇಜಿನ ಮುಖಾಂತರ ಎಷ್ಟೇ ದೂರವಿರುವಂತಹ ಆತ್ಮಗಳಿಗೆ ಸಂದೇಶವನ್ನು ತಲುಪಿಸಬಹುದು. ಅವರು ಇಂತಹ ಅನುಭವವನ್ನು ಮಾಡುತ್ತಾರೆ ಹೇಗೆ ಸಾಕಾರದಲ್ಲಿ ಸನ್ಮುಖ ಯಾರಿಗಾದರೂ ಸಂದೇಶವನ್ನು ಕೊಟ್ಟಿದ್ದೇವೆ. ದೂರದಲ್ಲಿ ಕುಳಿತಿದ್ದರೂ ತಾವು ಶ್ರೇಷ್ಠ ಆತ್ಮಗಳ ದರ್ಶನ ಹಾಗೂ ಪ್ರಭುವಿನ ಚರಿತ್ರೆಯ ದೃಶ್ಯ ಇಂತಹ ಅನುಭವ ಮಾಡುತ್ತಾರೆ ಹೇಗೆ ಸನ್ಮುಖದಲ್ಲಿ ನೋಡುತ್ತಿದ್ದೇವೆ ಎಂದು. ಸಂಕಲ್ಪದ ಮುಖಾಂತರ ಕಂಡು ಬರುತ್ತದೆ ಅರ್ಥಾತ್ ಶಬ್ದದಿಂದ ದೂರ ಸಂಕಲ್ಪದ ಸಿದ್ದಿಯ ಪಾರ್ಟ್ ಅನ್ನು ಅಭಿನಯಿಸುತ್ತೀರಾ. ಆದರೆ ಈ ಸಿದ್ಧಿಯ ವಿಧಿ- ಹೆಚ್ಚೆಂದರೆ ಹೆಚ್ಚು ತಮ್ಮ ಶಾಂತ ಸ್ವರೂಪದಲ್ಲಿ ಸ್ಥಿತರಾಗಿರಬೇಕು. ಆ ಕಾರಣ ಹೇಳಲಾಗುತ್ತದೆ ಸೈಲೆನ್ಸ್ ಈಜ್ ಗೋಲ್ಡ್ (ಶಾಂತಿಯೇ ಬಂಗಾರವಾಗಿದೆ), ಇದನ್ನೇ ಗೋಲ್ಡನ್ ಸ್ಥಿತಿಯೆಂದು ಹೇಳಲಾಗುತ್ತದೆ. ಈ ಸ್ಥಿತಿಯಲ್ಲಿ ಸ್ಥಿತರಾಗುವುದರಿಂದ ಕಡಿಮೆ ಖರ್ಚು ಹೆಚ್ಚಿನ ಪ್ರಾಪ್ತಿ ಆಗುತ್ತೀರಾ. ಸಮಯರೂಪಿ ಖಜಾನೆ, ಶಕ್ತಿಯ ಖಜಾನೆ ಹಾಗೂ ಸ್ಥೂಲ ಖಜಾನೆ ಎಲ್ಲದರಲ್ಲಿ ಕಡಿಮೆ ಖರ್ಚು ಹೆಚ್ಚಿನ ಪ್ರಾಪ್ತಿ ಆಗಿ ಬಿಡುತ್ತದೆ. ಇದಕ್ಕೋಸ್ಕರ ಒಂದು ಶಬ್ದವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಅದು ಯಾವುದಾಗಿದೆ? ಬ್ಯಾಲೆನ್ಸ್ (ಸಮತೋಲನ) ಪ್ರತೀ ಕರ್ಮದಲ್ಲಿ, ಪ್ರತೀ ಸಂಕಲ್ಪ ಹಾಗೂ ಮಾತಿನಲ್ಲಿ, ಸಂಬಂಧ ಹಾಗೂ ಸಂಪರ್ಕದಲ್ಲಿ ಬ್ಯಾಲೆನ್ಸ್ ಇರಬೇಕು. ಹಾಗಾದರೆ ಮಾತು, ಕರ್ಮ, ಸಂಕಲ್ಪ, ಸಂಬಂಧ ಅಥವಾ ಸಂಪರ್ಕ ಸಾಧಾರಣವಿರುವ ಬದಲಾಗಿ ಅಲೌಕಿಕವಾಗಿ ಕಂಡು ಬರುತ್ತದೆ ಅರ್ಥಾತ್ ಚಮತ್ಕಾರಿಯಾಗಿ ಕಂಡು ಬರುತ್ತದೆ. ಪ್ರತಿಯೊಬ್ಬರ ಮುಖದಿಂದ, ಮನಸ್ಸಿನಿಂದ ಇದೇ ಶಬ್ಧಗಳು ಬರಬೇಕು ಇದಂತೂ ಚಮತ್ಕಾರವಾಗಿದೆ. ಸಮಯದ ಪ್ರಮಾಣ, ಸ್ವಯಂನ ಪುರುಷಾರ್ಥದ ಸ್ಪೀಡ್ ಹಾಗೂ ವಿಶ್ವ ಸೇವೆಯ ಸ್ಪೀಡ್ ತೀವ್ರಗತಿಯಾಗಿರಬೇಕು ಆಗ ವಿಶ್ವ ಕಲ್ಯಾಣಕಾರಿಗಳು ಆಗಬಹುದು.

ವಿಶ್ವದ ಅಧಿಕ ಆತ್ಮಗಳು ತಂದೆ ಹಾಗೂ ತಾವು ಇಷ್ಟ ದೇವತೆಗಳನ್ನು ಪ್ರತ್ಯಕ್ಷತೆಯ ಆಹ್ವಾನವನ್ನು ಜಾಸ್ತಿ ಮಾಡುತ್ತಿದ್ದಾರೆ ಹಾಗೂ ಇಷ್ಟದೇವ ಅವರ ಆಹ್ವಾನವನ್ನು ಕಡಿಮೆ ಮಾಡುತ್ತಿದ್ದಾರೆ. ಇದರ ಕಾರಣವೇನಾಗಿದೆ? ತಮ್ಮ ಹದ್ದಿನ ಸ್ವಭಾವ, ಸಂಸ್ಕಾರಗಳ ಪ್ರವೃತ್ತಿಯಲ್ಲಿ ಬಹಳ ಸಮಯ ತೊಡಗಿಸುತ್ತಿದ್ದಾರೆ. ಹೇಗೆ ಅಜ್ಞಾನಿ ಆತ್ಮಗಳು ಜ್ಞಾನವನ್ನು ಕೇಳುವುದಕ್ಕೆ ಸಮಯವಿಲ್ಲ, ಅದರಂತೆ ಬಹಳಷ್ಟು ಬ್ರಾಹ್ಮಣರಿಗೂ ಸಹ ಈ ಶಕ್ತಿಶಾಲಿಯಾದ ಸ್ಟೇಜ್ನ ಸ್ಥಿತಿಯಲ್ಲಿರುವುದಕ್ಕೆ ಸಮಯ ಸಿಗುತ್ತಿಲ್ಲ ಆ ಕಾರಣ ಈಗ ಜ್ವಾಲಾರೂಪರಾಗುವುದು ಅವಶ್ಯಕವಾಗಿದೆ.

ಬಾಪ್ದಾದಾರವರು ಪ್ರತಿಯೊಬ್ಬರ ಪ್ರವೃತ್ತಿಯನ್ನು ನೋಡು ಮುಗುಳ್ನಗುತ್ತಿರುತ್ತಾರೆ ಹೇಗೆ ಟೂ ಮಚ್ ಬಿಜಿಯಾಗಿ ಬಿಟ್ಟಿದ್ದಾರೆ. ಬಹಳ ಬಿಜಿಯಾಗಿರುತ್ತೀರಲ್ಲವೇ. ವಾಸ್ತವಿಕತೆ ಸ್ಟೇಜ್ನಲ್ಲಿ ಸದಾ ಫ್ರೀಯಾಗಿರುತ್ತೀರಿ. ಸಿದ್ಧಿಯೂ ಸಹ ಇರುತ್ತದೆ ಹಾಗೂ ಫ್ರೀಯಾಗಿರುತ್ತೀರಾ.

ಹೇಗೆ ವಿಜ್ಞಾನದ ಸಾಧನೆ ಧರಣಿಯಲ್ಲಿ ಕುಳಿತಿರುವ ಬಾಹ್ಯಾಕಾಶ(ಸ್ಪೇಸ್) ದಲ್ಲಿ ಹೋಗಿರುವಂತಹ ಯಂತ್ರವನ್ನು ಕಂಟ್ರೋಲ್ ಮಾಡಬಹುದು, ಹೇಗೆ ಬೇಕೋ, ಎಲ್ಲಿಗೆ ಬೇಕೋ ಅಲ್ಲಿ ಮೋಲ್ಡ್ ಮಾಡಬಹುದು, ಸೈಲೆನ್ಸಿನ ಶಕ್ತಿ ಸ್ವರೂಪ, ಈ ಸಾಕಾರ ಸೃಷ್ಠಿಯಲ್ಲಿ ಶ್ರೇಷ್ಠ ಸಂಕಲ್ಪದ ಆಧಾರದಿಂದ ಯಾವ ಸೇವೆಯನ್ನು ಬೇಕಾದರೂ, ಯಾವ ಆತ್ಮನ ಸೇವೆಯನ್ನು ಮಾಡವುದಕ್ಕೆ ಸಾಧ್ಯವಿಲ್ಲವೇ. ಆದರೆ ಮೊದಲು ತಮ್ಮ ತಮ್ಮ ಪ್ರವೃತ್ತಿಯಿಂದ ಭಿನ್ನ ಅರ್ಥಾತ್ ಉಪರಾಂ ಆಗಿರಬೇಕು.

ಯಾವುದು ಎಲ್ಲಾ ಖಜಾನೆಗಳನ್ನು ತಿಳಿಸಿದ್ದೇವೆ ಅದನ್ನು ಸ್ವಯಂ ಪ್ರತಿ ಅಲ್ಲ, ವಿಶ್ವ ಕಲ್ಯಾಣದ ಪ್ರತಿ ಉಪಯೋಗಿಸಬೇಕು. ತಿಳಿಯಿತೇ, ಈಗ ಏನು ಮಾಡಬೇಕೆಂದು? ಶಬ್ಧದ ಮುಖಾಂತರ ಸರ್ವೀಸ್, ಸ್ಥೂಲ ಸಾಧನಗಳ ಮುಖಾಂತರ ಸರ್ವೀಸ್ ಹಾಗೂ ಶಬ್ಧದಿಂದ ದೂರ ಸೂಕ್ಷ್ಮ ಸಾಧನೆಯ ಸಂಕಲ್ಪಗಳ ಶ್ರೇಷ್ಠತೆ, ಸಂಕಲ್ಪ ಶಕ್ತಿಗಳ ಮುಖಾಂತರ ಸರ್ವೀಸಿನ ಬ್ಯಾಲೆನ್ಸ್ ಪ್ರತ್ಯಕ್ಷ ರೂಪದಲ್ಲಿ ಮಾಡಿ ತೋರಿಸಿ ಆಗ ವಿನಾಶದ ಡಂಗುರ ಬಾರಿಸುತ್ತದೆ. ತಿಳಿಯಿತೇ. ಪ್ಲಾನ್ಸ್ ಅಂತೂ ಬಹಳಷ್ಟು ಮಾಡುತ್ತಿದ್ದೀರಾ. ಬಾಪ್ ದಾದಾರವರೂ ಸಹ ಪ್ಲಾನ್ಸ್ ಅನ್ನು ತಿಳಿಸುತ್ತಿದ್ದಾರೆ. ಬ್ಯಾಲೆನ್ಸ್ ಸರಿಯಾಗಿ ಇಲ್ಲದೇ ಇರುವ ಕಾರಣ ಪರಿಶ್ರಮ ಜಾಸ್ತಿ ಮಾಡಬೇಕಾಗುತ್ತದೆ. ವಿಶೇಷ ಕಾರ್ಯದ ನಂತರ ವಿಶೇಷ ರೆಸ್ಟ್ ಅನ್ನು ತೆಗೆದುಕೊಳ್ಳುತ್ತೀರಲ್ಲವೇ. ಫೈನಲ್ ಪ್ಲಾನ್ ಅಲ್ಲಿ ಅಥಕ್ ತನದ ಅನುಭವ ಮಾಡುತ್ತಾರೆ. ಒಳ್ಳೆಯದು. ಇಂತಹ ಸರ್ವಶಕ್ತಿಗಳನ್ನು ವಿಶ್ವ ಕಲ್ಯಾಣದ ಪ್ರತೀ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತಹ, ಸಂಕಲ್ಪದ ಸಿದ್ಧಿ ಸ್ವರೂಪ, ಸ್ವಯಂನ ಪ್ರವೃತ್ತಿಯಿಂದ ಸ್ವತಂತ್ರ ಸದಾ ಶಾಂತ ಹಾಗೂ ಶಕ್ತಿಸ್ವರೂಪ ಸ್ಥಿತಿಯಲ್ಲಿ ಸ್ಥಿತರಾಗುವಂತಹ ಸರ್ವ ಶ್ರೇಷ್ಠ ಆತ್ಮಗಳಿಗೆ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ.

ವರದಾನ:
ಶಾಂತಿಯ ಶಕ್ತಿಯ ಮುಖಾಂತರ ಹೊಸ ಸೃಷ್ಟಿಯ ಸ್ಥಾಪನೆಗೆ ನಿಮಿತ್ತರಾಗುವಂತಹವರೇ ಮಾಸ್ಟರ್ ಶಾಂತಿ ದೇವ ಭವ.

ಶಾಂತಿಯ ಶಕ್ತಿಯನ್ನು ಜಮಾ ಮಾಡಿಕೊಳ್ಳುವುದಕ್ಕೆ ಈ ಶರೀರದಿಂದ ಭಿನ್ನ ಅಶರೀರಿ ಆಗಬೇಕು. ಈ ಶಾಂತಿಯ ಶಕ್ತಿ ಬಹಳ ಮಹಾನ್ ಶಕ್ತಿಯಾಗಿದೆ, ಇದರಿಂದ ಹೊಸ ಸೃಷ್ಟಿಯ ಸ್ಥಾಪನೆಯಾಗುತ್ತದೆ. ಹಾಗಾದರೆ ಶಬ್ದದಿಂದ ಭಿನ್ನ ಶಾಂತಿ ರೂಪದ ಸ್ಥಿತಿಯಲ್ಲಿ ಸ್ಥಿತರಾಗಿರುತ್ತಾರೆ ಅವರೇ ಸ್ಥಾಪನೆಯ ಕಾರ್ಯವನ್ನು ಮಾಡುವುದಕ್ಕೆ ಸಾಧ್ಯ. ಆ ಕಾರಣ ಶಾಂತಿದೇವ ಅರ್ಥಾತ್ ಶಾಂತಸ್ವರೂಪರಾಗಿ ಅಶಾಂತ ಆತ್ಮಗಳಿಗೆ ಶಾಂತಿಯ ಕಿರಣಗಳನ್ನು ಕೊಡಿ. ವಿಶೇಷ ಶಾಂತಿಯ ಶಕ್ತಿಯನ್ನು ಜಾಸ್ತಿ ಮಾಡಿಕೊಳ್ಳಿ. ಇದು ಎಲ್ಲದಕ್ಕಿಂತ ದೊಡ್ಡದಕ್ಕಿಂತ ದೊಡ್ಡ ಮಹಾದಾನವಾಗಿದೆ, ಇದೇ ಎಲ್ಲದಕ್ಕಿಂತ ಪ್ರಿಯ ಹಾಗೂ ಶಕ್ತಿಶಾಲಿ ವಸ್ತುವಾಗಿದೆ.

ಸ್ಲೋಗನ್:
ಪ್ರತಿ ಆತ್ಮ ಅಥವಾ ಪ್ರಕೃತಿಯ ಪ್ರತಿ ಶುಭಭಾವನೆಯನ್ನು ಇಡುವುದೇ ವಿಶ್ವ ಕಲ್ಯಾಣಕಾರಿ ಆಗುವುದಾಗಿದೆ.