18.02.21 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಸುಖ
ಕೊಡುವಂತಹ ಒಬ್ಬ ತಂದೆಯನ್ನು ನೆನಪು ಮಾಡಿ, ಈ ಸ್ವಲ್ಪ ಸಮಯದಲ್ಲಿ ಯೋಗಬಲವನ್ನು ಜಮಾ ಮಾಡಿಕೊಳ್ಳಿ,
ಅದು ಅಂತಿಮದಲ್ಲಿ ಬಹಳ ಕೆಲಸಕ್ಕೆ ಬರುವುದು”
ಪ್ರಶ್ನೆ:
ಬೇಹದ್ದಿನ
ವೈರಾಗಿ ಮಕ್ಕಳಾದ ನಿಮಗೆ ಯಾವ ಸ್ಮೃತಿ ಸದಾ ಇರಬೇಕು?
ಉತ್ತರ:
ನಮ್ಮದು ಇದು ಪತಿತ ವಸ್ತ್ರವಾಗಿದೆ, ಇದನ್ನು ಬಿಟ್ಟು ಮರಳಿ ಮನೆಗೆ ಹೋಗಬೇಕಾಗಿದೆ - ಈ ಸ್ಮೃತಿ ಸದಾ
ಇರಲಿ. ತಂದೆ ಮತ್ತು ಆಸ್ತಿಯ ನೆನಪಿರಲಿ ಮತ್ತೇನೂ ನೆನಪಿಗೆ ಬರಬಾರದು. ಇದು ಬೇಹದ್ದಿನ
ವೈರಾಗ್ಯವಾಗಿದೆ. ಕರ್ಮ ಮಾಡುತ್ತಾ ನೆನಪಿನಲ್ಲಿರುವ ಇಂತಹ ಪುರುಷಾರ್ಥ ಮಾಡಬೇಕು - ತಲೆಯ ಮೇಲಿರುವ
ಎಲ್ಲಾ ಪಾಪಗಳ ಹೊರೆಯು ಇಳಿಯಲಿ. ಆತ್ಮವು ತಮೋಪ್ರಧಾನ ಸತೋಪ್ರಧಾನವಾಗಲಿ.
ಓಂ ಶಾಂತಿ.
ತಂದೆಯು ಮಕ್ಕಳಿಗೆ ಪ್ರತಿನಿತ್ಯವೂ ಬಹಳ ಸಹಜ ಮಾತುಗಳನ್ನು ತಿಳಿಸುತ್ತಾರೆ - ಇದು ಈಶ್ವರೀಯ
ಪಾಠಶಾಲೆಯಾಗಿದೆ. ಅವಶ್ಯವಾಗಿ ಗೀತೆಯಲ್ಲಿಯೂ ಸಹ ಹೇಳುತ್ತಾರೆ - ಭಗವಾನುವಾಚ, ಭಗವಂತ ತಂದೆಯು
ಎಲ್ಲರಿಗೆ ಒಬ್ಬರೇ ಆಗಿದ್ದಾರೆ, ಎಲ್ಲರೂ ಭಗವಂತರಾಗಲು ಸಾಧ್ಯವಿಲ್ಲ. ಹಾ! ಎಲ್ಲರೂ ಒಬ್ಬ ತಂದೆಯ
ಮಕ್ಕಳಾಗುವರು ಅಂದಾಗ ಇದು ಖಂಡಿತ ಬುದ್ಧಿಯಲ್ಲಿ ಬರಬೇಕು - ತಂದೆಯು ಸ್ವರ್ಗ, ಹೊಸ ಪ್ರಪಂಚದ
ಸ್ಥಾಪನೆ ಮಾಡುವವರಾಗಿದ್ದಾರೆ. ಆ ತಂದೆಯಿಂದ ನಮಗೆ ಸ್ವರ್ಗದ ಆಸ್ತಿಯು ಖಂಡಿತ ಸಿಕ್ಕಿರಬೇಕು.
ಭಾರತದಲ್ಲಿಯೂ ಶಿವ ಜಯಂತಿಯ ಗಾಯನವಿದೆ ಆದರೆ ಹೇಗೆ ಶಿವ ಜಯಂತಿಯಾಗುತ್ತದೆ ಎಂಬುದನ್ನು ತಂದೆಯೇ
ಬಂದು ತಿಳಿಸುತ್ತಾರೆ. ತಂದೆಯು ಕಲ್ಪದ ಸಂಗಮಯುಗದಲ್ಲಿ ಬರುತ್ತಾರೆ ಮಕ್ಕಳನ್ನು ಪುನಃ ಪತಿತರಿಂದ
ಪಾವನರನ್ನಾಗಿ ಮಾಡಲು ಅರ್ಥಾತ್ ಆಸ್ತಿಯನ್ನು ಕೊಡಲು. ಈ ಸಮಯದಲ್ಲಿ ಎಲ್ಲರಿಗೆ ರಾವಣನ ಶಾಪವಿದೆ.
ಆದ್ದರಿಂದ ಎಲ್ಲರೂ ದುಃಖಿಯಾಗಿದ್ದಾರೆ. ಈಗ ಕಲಿಯುಗೀ ಹಳೆಯ ಪ್ರಪಂಚವಾಗಿದೆ. ಇದನ್ನು ಸದಾ
ನೆನಪಿಟ್ಟುಕೊಳ್ಳಿ, ನಾವು ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣರಾಗಿದ್ದೇವೆ. ಯಾರೆಲ್ಲಾ ತಮ್ಮನ್ನು
ಬ್ರಹ್ಮಾಕುಮಾರ-ಕುಮಾರಿಯೆಂದು ತಿಳಿದುಕೊಳ್ಳುವರೋ ಅವರಿಗೆ ಇದನ್ನು ಖಂಡಿತ ತಿಳಿಸಬೇಕು -
ಕಲ್ಪ-ಕಲ್ಪವೂ ನಾವು ತಾತನಿಂದ ಬ್ರಹ್ಮಾರವರ ಮೂಲಕ ಆಸ್ತಿಯನ್ನು ಪಡೆಯುತ್ತೇವೆ. ಇಷ್ಟೊಂದು ಮಂದಿ
ಮಕ್ಕಳು ಮತ್ತ್ಯಾರಿಗೂ ಇರಲು ಸಾಧ್ಯವಿಲ್ಲ. ಇವರು ಎಲ್ಲರ ತಂದೆಯಾಗಿದ್ದಾರೆ, ಬ್ರಹ್ಮಾರವರೂ ಸಹ
ಅವರ ಮಗನಾಗಿದ್ದಾರೆ. ಎಲ್ಲಾ ಮಕ್ಕಳಿಗೆ ಆಸ್ತಿಯು ಅವರಿಂದ ಸಿಗುತ್ತದೆ. ಸತ್ಯಯುಗದ ರಾಜಧಾನಿಯೇ
ಅವರ ಆಸ್ತಿಯಾಗಿದೆ. ಈ ಬೇಹದ್ದಿನ ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ನಮಗೆ
ಸ್ವರ್ಗದ ರಾಜ್ಯಭಾಗ್ಯವಿರಬೇಕು ಆದರೆ ಇದನ್ನು ಮರೆತು ಬಿಟ್ಟಿದ್ದಾರೆ. ನಮಗೆ ಸ್ವರ್ಗದ
ರಾಜ್ಯಭಾಗ್ಯವಿತ್ತು ಆದರೆ ನಿರಾಕಾರ ತಂದೆಯು ಹೇಗೆ ಕೊಡುತ್ತಾರೆ? ಅವಶ್ಯವಾಗಿ ಅವರು ಬ್ರಹ್ಮಾರವರ
ಮೂಲಕವೇ ಕೊಡುತ್ತಾರೆ. ಭಾರತದಲ್ಲಿ ಇವರ ರಾಜ್ಯವಿತ್ತು, ಈಗ ಕಲ್ಪದ ಸಂಗಮವಾಗಿದೆ. ಸಂಗಮದಲ್ಲಿ
ಬ್ರಹ್ಮನಿದ್ದಾರೆ ಆದ್ದರಿಂದಲೇ ಬ್ರಹ್ಮಾಕುಮಾರ-ಕುಮಾರಿಯರೆಂದು ಕರೆಸಿಕೊಳ್ಳುತ್ತೀರಿ, ಇದರಲ್ಲಿ
ಯಾವುದೇ ಅಂಧಶ್ರದ್ಧೆಯ ಮಾತಿಲ್ಲ. ಇದು ತಂದೆಯ ರಚನೆಯಾಗಿದೆ. ನಾವು
ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೇವೆ. ಬ್ರಹ್ಮಾರವರು ಶಿವ ತಂದೆಯ ಮಗನಾಗಿದ್ದಾರೆ, ನಮಗೆ ಶಿವ
ತಂದೆಯಿಂದ ಪುನಃ ಸ್ವರ್ಗದ ಆಸ್ತಿಯು ಸಿಗುತ್ತಿದೆ. ಮೊದಲೂ ಸಿಕ್ಕಿತ್ತು, ಅದಕ್ಕೆ 5000
ವರ್ಷಗಳಾಯಿತು. ನಾವು ದೇವಿ-ದೇವತಾ ಧರ್ಮದವರಾಗಿದ್ದೇವೆ. ಕೊನೆಯವರೆಗೂ ವೃದ್ಧಿಯಾಗುತ್ತಿರುತ್ತದೆ.
ಹೇಗೆ ಕ್ರಿಸ್ತನು ಬಂದನು, ಕ್ರಿಶ್ಚಿಯನ್ ಧರ್ಮವು ಇಲ್ಲಿಯವರೆಗೂ ಇದೆ, ವೃದ್ಧಿ ಹೊಂದುತ್ತಿರುತ್ತದೆ.
ಕ್ರಿಸ್ತನ ಮೂಲಕ ನಾವು ಕ್ರಿಶ್ಚಿಯನ್ನರಾದೆವು ಎಂದು ಅವರಿಗೆ ತಿಳಿದಿದೆ. ಇಂದಿಗೆ 2000 ವರ್ಷಗಳ
ಮೊದಲು ಕ್ರಿಸ್ತನು ಬಂದಿದ್ದರು, ಈಗ ವೃದ್ಧಿಯಾಗುತ್ತಿದೆ. ಮೊಟ್ಟ ಮೊದಲು ಸತೋಪ್ರಧಾನ ಮತ್ತೆ ರಜೋ,
ತಮೋದಲ್ಲಿ ಬರಬೇಕಾಗಿದೆ. ನೀವು ಸತ್ಯಯುಗದಲ್ಲಿ ಸತೋಪ್ರಧಾನರಾಗಿದ್ದಿರಿ ನಂತರ ರಜೋ ತಮೋದಲ್ಲಿ
ಬಂದಿದ್ದೀರಿ, ತಮೋಪ್ರಧಾನ ಸೃಷ್ಠಿಯಿಂದ ನಂತರ ಸತೋಪ್ರಧಾನ ಖಂಡಿತ ಆಗುತ್ತದೆ. ಹೊಸ ಪ್ರಪಂಚದಲ್ಲಿ
ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು, ಮುಖ್ಯವಾಗಿ ನಾಲ್ಕು ಧರ್ಮಗಳಿವೆ. ನಿಮ್ಮ ಧರ್ಮವು
ಅರ್ಧಕಲ್ಪ ನಡೆಯುತ್ತದೆ. ಇಲ್ಲಿಯೂ ಸಹ ನೀವು ಆ ಧರ್ಮದವರಾಗಿದ್ದೀರಿ ಆದರೆ ಭಿಕಾರಿಗಳಾಗಿರುವ ಕಾರಣ
ನೀವು ತಮ್ಮನ್ನು ದೇವಿ-ದೇವತೆಗಳೆಂದು ಕರೆಸಿಕೊಳ್ಳುವುದಿಲ್ಲ. ನೀವೇ ಆದಿ ಸನಾತನ ದೇವಿ-ದೇವತಾ
ಧರ್ಮದವರಾಗಿದ್ದಿರಿ ಆದರೆ ವಾಮ ಮಾರ್ಗದಲ್ಲಿ ಇಳಿದ ಕಾರಣ ನೀವು ಪತಿತರಾಗಿದ್ದೀರಿ. ಆದ್ದರಿಂದ
ತಮ್ಮನ್ನು ಹಿಂದೂಗಳೆಂದು ಕರೆಸಿಕೊಳ್ಳುತ್ತೀರಿ. ನೀವೀಗ ಬ್ರಾಹ್ಮಣರಾಗಿದ್ದೀರಿ, ಶ್ರೇಷ್ಠಾತಿ
ಶ್ರೇಷ್ಠನು ಶಿವ ತಂದೆಯಾಗಿದ್ದಾರೆ ನಂತರ ನೀವು ಬ್ರಾಹ್ಮಣರಿದ್ದೀರಿ. ನೀವು ಬ್ರಾಹ್ಮಣರದು
ಶ್ರೇಷ್ಠಾತಿ ಶ್ರೇಷ್ಠ ವರ್ಣವಾಗಿದೆ, ಬ್ರಹ್ಮನ ಮಕ್ಕಳಾಗಿದ್ದೀರಿ ಆದರೆ ಆಸ್ತಿಯು ಬ್ರಹ್ಮಾರವರಿಂದ
ಸಿಗುವುದಿಲ್ಲ. ಶಿವ ತಂದೆಯು ಬ್ರಹ್ಮಾರವರ ಮೂಲಕ ಸ್ವರ್ಗದ ಸ್ಥಾಪನೆ ಮಾಡುತ್ತಿದ್ದಾರೆ. ನಿಮ್ಮ
ಆತ್ಮವು ಈಗ ತಂದೆಯನ್ನು ಅರಿತುಕೊಂಡಿದೆ. ತಂದೆಯು ತಿಳಿಸುತ್ತಾರೆ - ನನ್ನ ಮೂಲಕ ನನ್ನನ್ನು
ಅರಿತುಕೊಳ್ಳುವುದರಿಂದ ನೀವು ಸೃಷ್ಟಿಚಕ್ರದ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಅರಿತುಕೊಳ್ಳುವಿರಿ.
ಆ ಜ್ಞಾನವು ನನ್ನಲ್ಲಿಯೇ ಇದೆ. ನಾನು ಜ್ಞಾನ ಸಾಗರ, ಆನಂದ ಸಾಗರ, ಪವಿತ್ರತೆಯ ಸಾಗರನಾಗಿದ್ದೇನೆ.
ನೀವು 21 ಜನ್ಮಗಳು ಪವಿತ್ರವಾಗಿರುತ್ತೀರಿ ನಂತರ ವಿಷಯ ಸಾಗರದಲ್ಲಿ ಬಂದು ಬಿಡುತ್ತೀರಿ. ಈಗ ಜ್ಞಾನ
ಸಾಗರ ತಂದೆಯು ನಿಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡುತ್ತಾರೆ. ಯಾವುದೇ ಸ್ಥೂಲ ನೀರು ಪಾವನ
ಮಾಡಲು ಸಾಧ್ಯವಿಲ್ಲ. ಸ್ನಾನ ಮಾಡಲು ಹೋಗುತ್ತಾರೆ ಆದರೆ ಆ ನೀರು ಪತಿತ-ಪಾವನಿಯಲ್ಲ. ನದಿಗಳಂತೂ
ಸತ್ಯಯುಗದಲ್ಲಿಯೇ ಇರುತ್ತದೆ, ಕಲಿಯುಗದಲ್ಲಿಯೂ ಇವೆ. ನೀರಿನದು ವ್ಯತ್ಯಾಸವಿರುವುದಿಲ್ಲ. “ಸರ್ವರ
ಸದ್ಗತಿದಾತನು ಒಬ್ಬರೇ ರಾಮನಾಗಿದ್ದಾರೆ” ಎಂದು ಹೇಳುತ್ತಾರೆ. ಅವರೇ ಜ್ಞಾನ ಸಾಗರ,
ಪತಿತ-ಪಾವನನಾಗಿದ್ದಾರೆ.
ತಂದೆಯು ಬಂದು ಜ್ಞಾನವನ್ನು ತಿಳಿಸುತ್ತಾರೆ. ಇದರಿಂದ ನೀವು ಸ್ವರ್ಗದ ಮಾಲೀಕರಾಗುತ್ತೀರಿ.
ಸತ್ಯ-ತ್ರೇತಾಯುಗದಲ್ಲಿ ಭಕ್ತಿ, ಶಾಸ್ತ್ರ ಇತ್ಯಾದಿಗಳೇನೂ ಇರುವುದಿಲ್ಲ. ನೀವು ತಂದೆಯಿಂದ ಸದಾ
ಸುಖದ ಆಸ್ತಿಯನ್ನು ಪಡೆಯುತ್ತೀರಿ. ಅಲ್ಲಿ ನೀವು ಗಂಗಾ ಸ್ನಾನ ಮಾಡಬೇಕು ಅಥವಾ ಯಾವುದೇ ಯಾತ್ರೆ
ಮಾಡಬೇಕೆಂದಲ್ಲ. ನಿಮ್ಮದು ಇದು ಆತ್ಮಿಕ ಯಾತ್ರೆಯಾಗಿದೆ. ಇದನ್ನು ಯಾವುದೇ ಮನುಷ್ಯರು ಕಲಿಸಿಕೊಡಲು
ಸಾಧ್ಯವಿಲ್ಲ. ತಂದೆಯು ಎಲ್ಲಾ ಆತ್ಮರ ತಂದೆಯಾಗಿದ್ದಾರೆ. ಲೌಕಿಕ ತಂದೆಯರಂತೂ ಅನೇಕರಿದ್ದಾರೆ,
ಆತ್ಮಿಕ ತಂದೆಯು ಒಬ್ಬರೇ ಆಗಿದ್ದಾರೆ, ಇದನ್ನು ಪಕ್ಕಾ-ಪಕ್ಕಾ ನೆನಪಿಟ್ಟುಕೊಳ್ಳಿ. ತಂದೆಯೂ
ಕೇಳುತ್ತಾರೆ - ನಿಮಗೆ ಎಷ್ಟು ಜನ ತಂದೆಯರಿದ್ದಾರೆ? ಆಗ ಇವರೇನು ಕೇಳುತ್ತಾರೆ ಎಂದು ಕೆಲವರು
ತಬ್ಬಿಬ್ಬಾಗುತ್ತಾರೆ. ತಂದೆಯಂತೂ ಎಲ್ಲರಿಗೂ ಒಬ್ಬರೇ ಇರುತ್ತಾರೆ. ಇಬ್ಬರು, ಮೂವರು ತಂದೆಯರು
ಹೇಗಿರಲು ಸಾಧ್ಯ? ತಂದೆಯು ತಿಳಿಸುತ್ತಾರೆ - ಆ ಪರಮಾತ್ಮ ತಂದೆಯನ್ನು ದುಃಖದಲ್ಲಿ ನೆನಪು
ಮಾಡುತ್ತೀರಿ. ದುಃಖದಲ್ಲಿ ಯಾವಾಗಲೂ ಹೇ ಪರಮಪಿತ ಪರಮಾತ್ಮ ನಮ್ಮನ್ನು ದುಃಖದಿಂದ ಬಿಡಿಸಿ ಎಂದು
ಹೇಳುತ್ತೀರಿ ಅಂದಮೇಲೆ ಇಬ್ಬರು ತಂದೆಯರಾದರಲ್ಲವೆ. ಒಬ್ಬರು ಲೌಕಿಕ ತಂದೆ, ಇನ್ನೊಬ್ಬರು ಆತ್ಮಿಕ
ತಂದೆ. ಅವರಿಗಾಗಿಯೇ ನೀವು ಮಾತಾಪಿತಾ ನಾನು ನಿಮ್ಮ ಬಾಲಕನಾಗಿದ್ದೇನೆ. ನಿಮ್ಮ ಕೃಪೆಯಿಂದ ಅಪಾರ
ಸುಖ ಸಿಗುತ್ತದೆಯೆಂದು ಮಹಿಮೆಯನ್ನು ಹಾಡುತ್ತಾರೆ. ಲೌಕಿಕ ತಂದೆ, ತಾಯಿಯಿಂದ ಅಪಾರ ಸುಖ
ಸಿಗುವುದಿಲ್ಲ. ಯಾವಾಗ ದುಃಖವಾಗುವುದೋ ಆಗ ಆ ತಂದೆಯ ಸ್ಮರಣೆ ಮಾಡುತ್ತಾರೆ. ಆದ್ದರಿಂದ ಆ ತಂದೆಯೇ
ಈ ಪ್ರಶ್ನೆಯನ್ನು ಕೇಳುತ್ತಾರೆ ಮತ್ತ್ಯಾರೂ ಕೇಳಲು ಸಾಧ್ಯವಿಲ್ಲ.
ಭಕ್ತಿಮಾರ್ಗದಲ್ಲಿ ನೀವು ಹಾಡುತ್ತೀರಿ - ಬಾಬಾ, ತಾವು ಬಂದರೆ ತಮ್ಮ ವಿನಃ ಮತ್ತ್ಯಾರ ಮಾತನ್ನೂ
ಕೇಳುವುದಿಲ್ಲ, ಮತ್ತೆಲ್ಲರೂ ದುಃಖವನ್ನೇ ಕೊಡುತ್ತಾರೆ ತಾವೇ ಸುಖವನ್ನು ಕೊಡುತ್ತೀರಿ ಎಂದು
ಹೇಳುತ್ತೀರಿ ಅಂದಾಗ ತಂದೆಯು ಬಂದು ನೀವು ಏನು ಹೇಳುತ್ತಿದ್ದಿರಿ ಎಂಬುದನ್ನು ನೆನಪು ತರಿಸುತ್ತಾರೆ.
ನೀವು ತಿಳಿದುಕೊಂಡಿದ್ದೀರಿ - ನೀವೇ ಬ್ರಹ್ಮಾಕುಮಾರ-ಕುಮಾರಿಯರೆಂದು ಕರೆಸಿಕೊಳ್ಳುತ್ತೀರಿ.
ಮನುಷ್ಯರು ಇಷ್ಟು ಕಲ್ಲು ಬುದ್ಧಿಯವರಾಗಿದ್ದಾರೆ, ಅವರಿಗೆ ಈ ಬಿ.ಕೆ.ಗಳು ಯಾರು? ಈ ಮಮ್ಮಾ-ಬಾಬಾ
ಯಾರು ಎಂಬುದನ್ನೂ ಸಹ ತಿಳಿದುಕೊಂಡಿಲ್ಲ. ಇವರು ಯಾವುದೇ ಸಾಧು-ಸಂತ ಅಲ್ಲ. ಸಾಧು-ಸನ್ಯಾಸಿಗಳಿಗೆ
ಗುರುಗಳೆಂದು ಹೇಳುತ್ತಾರೆಯೇ ಹೊರತು ಮಾತಾಪಿತರೆಂದು ಹೇಳುವುದಿಲ್ಲ. ಈ ತಂದೆಯಂತೂ ಬಂದು ದೈವೀ
ಧರ್ಮದ ರಾಜ್ಯವನ್ನು ಸ್ಥಾಪನೆ ಮಾಡುತ್ತಾರೆ. ಇಲ್ಲಿ ಈ ಲಕ್ಷ್ಮೀ-ನಾರಾಯಣ ರಾಜ-ರಾಣಿಯು ರಾಜ್ಯ
ಮಾಡುತ್ತಿದ್ದರು. ಮೊದಲು ಪವಿತ್ರರಾಗಿದ್ದರು ನಂತರ ಅಪವಿತ್ರರಾಗುತ್ತಾರೆ. ಯಾರು ಪೂಜ್ಯರಾಗಿದ್ದರೋ
ಅವರು ಮತ್ತೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಮೊದಲು ಬೇಹದ್ದಿನ ತಂದೆಯ 21 ಜನ್ಮಗಳ ಸುಖದ
ಆಸ್ತಿಯು ಸಿಗುತ್ತದೆ. ಯಾರು 21 ಕುಲದ ಉದ್ಧಾರ ಮಾಡುವರೋ ಅವರು ಕುಮಾರಿಯಾಗಿದ್ದಾರೆ. ಇದು ನಿಮ್ಮ
ಗಾಯನವಾಗಿದೆ. ನೀವು ಕುಮಾರಿಯರಾಗಿದ್ದೀರಿ, ಗೃಹಸ್ಥಿಗಳಲ್ಲ. ಭಲೆ ದೊಡ್ಡವರಾಗಿದ್ದೀರಿ ಆದರೆ
ಮರುಜೀವಿಗಳಾಗಿ ಎಲ್ಲರೂ ತಂದೆಯ ಮಕ್ಕಳಾಗಿದ್ದೀರಿ. ಪ್ರಜಾಪಿತ ಬ್ರಹ್ಮನಿಗೆ ಅನೇಕ ಮಕ್ಕಳಿದ್ದಾರೆ,
ಇನ್ನೂ ವೃದ್ಧಿ ಹೊಂದುತ್ತಿರುತ್ತಾರೆ ನಂತರ ಇವರೆಲ್ಲರೂ ದೇವತೆಗಳಾಗುತ್ತಾರೆ. ಇದು ಶಿವ ತಂದೆಯ
ಯಜ್ಞವಾಗಿದೆ, ಇದಕ್ಕೆ ರಾಜಸ್ವ ಯಜ್ಞ, ಸ್ವರಾಜ್ಯ ಪಡೆಯುವ ಯಜ್ಞವೆಂದು ಹೇಳಲಾಗುತ್ತದೆ. ಆತ್ಮರಿಗೆ
ತಂದೆಯಿಂದ ಸ್ವರ್ಗದ ರಾಜ್ಯದ ಆಸ್ತಿಯು ಸಿಗುತ್ತದೆ. ಈ ರಾಜಸ್ವ ಅಶ್ವಮೇಧ ಜ್ಞಾನ ಯಜ್ಞದಲ್ಲಿ ಏನು
ಮಾಡಬೇಕಾಗಿದೆ? ಶರೀರ ಸಹಿತವಾಗಿ ಏನೆಲ್ಲವೂ ಇದೆಯೋ ಅದನ್ನು ಬಲಿಹಾರಿ ಮಾಡಬೇಕಾಗಿದೆ ಅಥವಾ ಸ್ವಾಹಾ
ಮಾಡಬೇಕಾಗಿದೆ. ಈ ಯಜ್ಞದಿಂದಂತೂ ನೀವು ರಾಜ್ಯವನ್ನು ಪಡೆಯುತ್ತೀರಿ. ತಂದೆಯು ನೆನಪು ತರಿಸುತ್ತಾರೆ
- ಭಕ್ತಿಮಾರ್ಗದಲ್ಲಿ ನೀವು ಹಾಡುತ್ತಿದ್ದಿರಿ, ಹೇ ತಂದೆಯೇ ತಾವು ಬಂದರೆ ನಾವು
ಬಲಿಹಾರಿಯಾಗುತ್ತೇವೆ. ನೀವೀಗ ತಮ್ಮನ್ನು ಬ್ರಹ್ಮಾಕುಮಾರಿಯರೆಂದು ತಿಳಿದುಕೊಳ್ಳುತ್ತೀರಿ. ಭಲೆ
ತಮ್ಮ ಗೃಹಸ್ಥ ವ್ಯವಹಾರದಲ್ಲಿಯೇ ಇರಿ ಆದರೆ ಕಮಲ ಪುಷ್ಫ ಸಮಾನ ಪಾವನರಾಗಿರಬೇಕಾಗುವುದು. ತಮ್ಮನ್ನು
ಆತ್ಮನೆಂದು ತಿಳಿಯಿರಿ, ನಾವು ತಂದೆಯ ಮಕ್ಕಳಾಗಿದ್ದೇವೆ, ನೀವಾತ್ಮರು ಪ್ರಿಯತಮೆಯರಾಗಿದ್ದೀರಿ.
ತಂದೆಯು ತಿಳಿಸುತ್ತಾರೆ - ನಾನೊಬ್ಬನೇ ಪ್ರಿಯತಮನಾಗಿದ್ದೇನೆ, ಪ್ರಿಯತಮನಾದ ನನ್ನನ್ನು ನೀವು
ಕರೆಯುತ್ತಾ ಇರುತ್ತೀರಿ. ನೀವು ಅರ್ಧಕಲ್ಪದ ಪ್ರಿಯತಮೆಯರಾಗಿದ್ದೀರಿ. ತಂದೆಗೆ ಪರಮಪಿತ
ಪರಮಾತ್ಮನೆಂದು ಕರೆಯಲಾಗುತ್ತದೆ, ಅವರು ನಿರಾಕಾರನಾಗಿದ್ದಾರೆ, ಆತ್ಮವೂ ನಿರಾಕಾರಿಯಾಗಿದೆ ಅದು ಈ
ಶರೀರದ ಮೂಲಕ ಪಾತ್ರವನ್ನಭಿನಯಿಸುತ್ತದೆ. ಭಕ್ತಿಮಾರ್ಗದಲ್ಲಿಯೂ ನೀವು ಪಾತ್ರವನ್ನಭಿನಯಿಸಬೇಕಾಗಿದೆ.
ಭಕ್ತಿ ಎಂದರೆ ರಾತ್ರಿಯಾಗಿದೆ, ಅಂಧಕಾರದಲ್ಲಿ ಮನುಷ್ಯರು ಮೋಸ ಹೋಗುತ್ತಾರೆ. ದ್ವಾಪರದಿಂದ ಹಿಡಿದು
ನೀವು ಮೋಸ ಹೋಗಿದ್ದೀರಿ. ಈ ಸಮಯದಲ್ಲಿ ಮಹಾದುಃಖಿಯಾಗಿ ಬಿಟ್ಟಿದ್ದೀರಿ. ಈಗ ಹಳೆಯ ಪ್ರಪಂಚದ
ಅಂತ್ಯವಾಗಿದೆ, ಈ ಹಣ ಇತ್ಯಾದಿಗಳೆಲ್ಲವೂ ಮಣ್ಣು ಪಾಲಾಗುವುದು. ಭಲೆ ಕೆಲವರು
ಕೋಟ್ಯಾಧೀಶ್ವರರಿದ್ದಾರೆ. ರಾಜರಿದ್ದಾರೆ. ಮಕ್ಕಳು ಜನ್ಮ ಪಡೆದರೆ ಈ ಧನವು ನಮ್ಮ ಮಕ್ಕಳಿಗಾಗಿ,
ನಮ್ಮ ಮೊಮ್ಮಕ್ಕಳು-ಮರಿ ಮಕ್ಕಳು ತಿನ್ನುವರು ಎಂದು ತಿಳಿಯುತ್ತಾರೆ. ಆದರೆ ತಂದೆಯು ತಿಳಿಸುತ್ತಾರೆ
- ಯಾರೂ ತಿನ್ನುವುದಿಲ್ಲ, ಈ ಪ್ರಪಂಚವೇ ಸಮಾಪ್ತಿಯಾಗಲಿದೆ. ಇನ್ನು ಸ್ವಲ್ಪವೇ ಸಮಯವಿದೆ, ಬಹಳಷ್ಟು
ವಿಘ್ನಗಳು ಬರುತ್ತವೆ, ಪರಸ್ಪರ ಹೊಡೆದಾಡುತ್ತಾರೆ. ಅಂತಿಮದಲ್ಲಿ ಈ ರೀತಿ ಹೊಡೆದಾಡುತ್ತಾರೆ ರಕ್ತದ
ನದಿಗಳು ಹರಿಯುತ್ತವೆ. ನಿಮಗಂತೂ ಯಾರೊಂದಿಗೂ ಯುದ್ಧವಿಲ್ಲ, ನೀವು ಯೋಗಬಲದಲ್ಲಿರುತ್ತೀರಿ, ನೀವು
ನೆನಪಿನಲ್ಲಿರುತ್ತೀರೆಂದರೆ ಯಾರೇ ನಿಮ್ಮ ಸನ್ಮುಖದಲ್ಲಿ ಕೆಟ್ಟ ವಿಚಾರದಿಂದ ಬಂದರೂ ಸಹ ಅವರಿಗೆ
ಭಯಂಕರ ಸಾಕ್ಷಾತ್ಕಾರವಾಗಿ ಬಿಡುವುದು ಮತ್ತು ಕೂಡಲೇ ಓಡಿ ಹೋಗುವರು. ನೀವು ಶಿವ ತಂದೆಯನ್ನು ನೆನಪು
ಮಾಡುತ್ತೀರಿ ಮತ್ತು ಅವರು ಓಡಿ ಹೋಗುತ್ತಾರೆ. ಯಾರು ಪಕ್ಕಾ ಮಕ್ಕಳಿದ್ದಾರೆಯೋ ಅವರು ಒಬ್ಬ ಶಿವ
ತಂದೆಯ ವಿನಃ ನನ್ನವರು ಬೇರೆ ಯಾರೂ ಇಲ್ಲವೆಂಬ ಪುರುಷಾರ್ಥದಲ್ಲಿರುತ್ತಾರೆ. ತಂದೆಯು ತಿಳಿಸುತ್ತಾರೆ
– ಕೈ ಕೆಲಸ ಮಾಡಲಿ ಬುದ್ಧಿಯು ತಂದೆಯನ್ನು ನೆನಪು ಮಾಡುತ್ತಿರಲಿ......... ಮನೆ, ಮಕ್ಕಳನ್ನೂ
ಸಂಭಾಲನೆ ಮಾಡಬೇಕಾಗಿದೆ ಆದರೆ ನೀವಾತ್ಮರು ತಂದೆಯನ್ನು ನೆನಪು ಮಾಡಿರಿ ಆಗ ಪಾಪಗಳ ಹೊರೆಯು
ಇಳಿಯುವುದು. ಕೇವಲ ನನ್ನನ್ನು ನೆನಪು ಮಾಡಿದರೆ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗಿ
ಬಿಡುತ್ತೀರಿ, ಆದರೆ ನಂಬರ್ವಾರ್ ಪುರುಷಾರ್ಥದನುಸಾರ. ನಂತರ ನೀವೆಲ್ಲರೂ ಈ ಶರೀರವನ್ನು ಬಿಡುತ್ತೀರಿ.
ತಂದೆಯು ಎಲ್ಲಾ ಆತ್ಮರನ್ನು ಸೊಳ್ಳೆಗಳೋಪಾದಿಯಲ್ಲಿ ಕರೆದುಕೊಂಡು ಹೋಗುತ್ತಾರೆ. ಉಳಿದಂತೆ ಇಡೀ
ಪ್ರಪಂಚವು ಶಿಕ್ಷೆಗಳನ್ನನುಭವಿಸುವುದು. ಭಾರತದಲ್ಲಿ ಕೆಲವರು ಮಾತ್ರವೇ ಉಳಿಯುತ್ತಾರೆ ಅದಕ್ಕಾಗಿಯೇ
ಈ ಮಹಾಭಾರತ ಯುದ್ಧವಿದೆ. ಇಲ್ಲಂತೂ ಬಹಳ ವೃದ್ಧಿಯಾಗುವುದು. ಪ್ರದರ್ಶನಿ, ಪ್ರೋಜೆಕ್ಟರ್
ಇತ್ಯಾದಿಗಳ ಮೂಲಕ ಎಷ್ಟೊಂದು ಮಂದಿ ಕೇಳುತ್ತಾರೆ, ಅವರು ಪ್ರಜೆಗಳಾಗುತ್ತಾ ಹೋಗುತ್ತಾರೆ, ರಾಜನಂತೂ
ಒಬ್ಬರೇ ಇರುತ್ತಾರೆ. ಉಳಿದೆಲ್ಲರೂ ಪ್ರಜೆಗಳಿರುತ್ತಾರೆ. ಮಂತ್ರಿಯೂ ಸಹ ಪ್ರಜೆಗಳ ಸಾಲಿನಲ್ಲಿ
ಬರುತ್ತಾರೆ. ಅನೇಕರು ಪ್ರಜೆಗಳಾಗುತ್ತಾರೆ, ಒಬ್ಬ ರಾಜನಿಗೆ ಲಕ್ಷಾಂತರ ಮಂದಿ ಪ್ರಜೆಗಳಿರುತ್ತಾರೆ.
ಅಂದಮೇಲೆ ರಾಜ-ರಾಣಿಯಾಗಲು ಪರಿಶ್ರಮ ಪಡಬೇಕಲ್ಲವೆ?
ತಂದೆಯು ತಿಳಿಸುತ್ತಾರೆ - ಮಕ್ಕಳೇ, ಎಲ್ಲವನ್ನೂ ಮಾಡುತ್ತಾ ನಿರಂತರ ನನ್ನನ್ನು ನೆನಪು ಮಾಡಿ. ಹೇಗೆ
ಪ್ರಿಯತಮ-ಪ್ರಿಯತಮೆಯರಿರುತ್ತಾರೆ ಅವರಿಗೆ ಎಷ್ಟೊಂದು ದೈಹಿಕ ಪ್ರೀತಿಯಿರುತ್ತದೆ. ನೀವು ಮಕ್ಕಳು ಈ
ಸಮಯದ ಪ್ರಿಯತಮೆಯರಾಗಿದ್ದೀರಿ. ನಿಮ್ಮ ಪ್ರಿಯತಮನು ಬಂದಿದ್ದಾರೆ. ನಿಮಗೆ ಓದಿಸುತ್ತಿದ್ದಾರೆ.
ಓದುತ್ತಾ-ಓದುತ್ತಾ ನೀವು ದೇವತೆಗಳಾಗಿ ಬಿಡುತ್ತೀರಿ. ನೆನಪಿನಿಂದ ವಿಕರ್ಮಗಳು ವಿನಾಶವಾಗುತ್ತವೆ
ಮತ್ತು ನೀವು ಸದಾ ನಿರೋಗಿಗಳಾಗಿ ಬಿಡುತ್ತೀರಿ. ಮತ್ತೆ 84 ಜನ್ಮಗಳ ಚಕ್ರವನ್ನೂ ನೆನಪು
ಮಾಡಬೇಕಾಗಿದೆ - ಸತ್ಯಯುಗದಲ್ಲಿ ಇಷ್ಟು ಜನ್ಮಗಳು, ತ್ರೇತಾದಲ್ಲಿ ಇಷ್ಟು ಜನ್ಮಗಳು..... ನಾವು
ದೇವಿ-ದೇವತಾ ಧರ್ಮದವರು ಪೂರ್ಣ 84 ಜನ್ಮಗಳ ಚಕ್ರವನ್ನು ಸುತ್ತಿದ್ದೇವೆ. ಮುಂದೆ ಹೋದಂತೆ ನೀವು
ಬಹಳ ವೃದ್ಧಿ ಹೊಂದುತ್ತೀರಿ. ನಿಮ್ಮ ಸೇವಾಕೇಂದ್ರಗಳು ಸಾವಿರಾರು ಅಂದಾಜಿನಲ್ಲಿ ಸ್ಥಾಪನೆಯಾಗುತ್ತವೆ.
ಗಲ್ಲಿ-ಗಲ್ಲಿಯಲ್ಲಿ ತಿಳಿಸುತ್ತಾ ಇರುತ್ತಾರೆ - ಕೇವಲ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ.
ಈಗ ಮನೆಗೆ ಹಿಂತಿರುಗಿ ನಡೆಯಿರಿ. ಇದಂತೂ ಛೀ ಛೀ ವಸ್ತ್ರವಾಗಿದೆ, ಇದು ಬೇಹದ್ದಿನ ವೈರಾಗ್ಯವಾಗಿದೆ.
ಸನ್ಯಾಸಿಗಳಂತೂ ಕೇವಲ ಹದ್ದಿನ ಮನೆ-ಮಠವನ್ನು ಬಿಟ್ಟು ಬಿಡುತ್ತಾರೆ. ಅವರು ಹಠಯೋಗಿಗಳಾಗಿದ್ದಾರೆ,
ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ಈ ಭಕ್ತಿಯೂ ಸಹ ಅನಾದಿಯಾಗಿದೆ ಎಂದು ಹೇಳುತ್ತಾರೆ ಆದರೆ
ತಂದೆಯು ತಿಳಿಸುತ್ತಾರೆ - ಈ ಭಕ್ತಿಯು ದ್ವಾಪಾರದಿಂದ ಆರಂಭವಾಗುತ್ತದೆ. 84 ಪೀಳಿಗೆಗಳಲ್ಲಿ ಬಂದು
ನೀವೀಗ ತಮೋಪ್ರಧಾನರಾಗಿದ್ದೀರಿ. ನೀವೇ ದೇವಿ-ದೇವತೆಗಳಾಗಿದ್ದಿರಿ, ನಾವೇ
ಕ್ರಿಶ್ಚಿಯನ್ನರಾಗಿದ್ದೆವು ಎಂದು ಕ್ರಿಶ್ಚಿಯನ್ನರು ಹೇಳುತ್ತಾರೆ ಹಾಗೆಯೇ ನಾವು
ಸತ್ಯಯುಗದಲ್ಲಿದ್ದೆವು, ತಂದೆಯು ದೇವಿ-ದೇವತ ಧರ್ಮವನ್ನು ಸ್ಥಾಪನೆ ಮಾಡಿದ್ದರು, ಯಾರು
ಲಕ್ಷ್ಮೀ-ನಾರಾಯಣರಾಗಿದ್ದರೋ ಅವರೀಗ ಬ್ರಾಹ್ಮಣರಾಗಿದ್ದಾರೆಂದು ನೀವೀಗ ತಿಳಿದುಕೊಂಡಿದ್ದೀರಿ.
ಸತ್ಯಯುಗದಲ್ಲಿ ಒಬ್ಬರೇ ರಾಜ-ರಾಣಿಯಿದ್ದರು, ಒಂದು ಭಾಷೆಯಿತ್ತು. ಇದನ್ನೂ ಸಹ ಮಕ್ಕಳು
ಸಾಕ್ಷಾತ್ಕಾರದಲ್ಲಿ ನೋಡಿದ್ದೀರಿ. ನೀವೆಲ್ಲರೂ ಆದಿ ಸನಾತನ ಧರ್ಮದವರಾಗಿದ್ದೀರಿ. ನೀವೇ 84
ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ, ಆತ್ಮವು ನಿರ್ಲೇಪವಾಗಿದೆ ಹಾಗೂ ಈಶ್ವರನು
ಸರ್ವವ್ಯಾಪಿಯಾಗಿದ್ದಾರೆಂದು ಅವರು ಹೇಳುತ್ತಾರೆ ಆದರೆ ಇದು ತಪ್ಪಾಗಿದೆ. ಎಲ್ಲರಲ್ಲಿ ಆತ್ಮವಿದೆ
ಅಂದಮೇಲೆ ನಮ್ಮಲ್ಲಿ ಪರಮಾತ್ಮನಿದ್ದಾರೆಂದು ಹೇಗೆ ಹೇಳುತ್ತೀರಿ? ಆ ರೀತಿ ಇದ್ದಿದ್ದೇ ಆದರೆ ಎಲ್ಲರೂ
ತಂದೆಯರಾಗಿ ಬಿಡುವರು. ಮನುಷ್ಯರು ಎಷ್ಟೊಂದು ತಮೋಪ್ರಧಾನರಾಗಿ ಬಿಟ್ಟಿದ್ದಾರೆ! ಮೊದಲು ಏನು
ಕೇಳುತ್ತಿದ್ದಿರೋ ಅದನ್ನೇ ನಂಬಿ ಬಿಡುತ್ತಿದ್ದಿರಿ, ಈಗ ತಂದೆಯು ಬಂದು ಸತ್ಯವನ್ನು ತಿಳಿಸುತ್ತಾರೆ.
ನಿಮಗೆ ಜ್ಞಾನದ ಮೂರನೇ ನೇತ್ರವನ್ನು ಕೊಡುತ್ತಾರೆ. ಇದರಿಂದ ನೀವು ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು
ತಿಳಿದುಕೊಂಡಿದ್ದೀರಿ. ಅಮರ ಕಥೆಯೂ ಇದಾಗಿದೆ ಬಾಕಿ ಸೂಕ್ಷ್ಮವತನದಲ್ಲಿ ಕಥೆ, ಇತ್ಯಾದಿಗಳಿಲ್ಲ.
ಇದೆಲ್ಲವೂ ಭಕ್ತಿಮಾರ್ಗದ ಮಾತುಗಳಾಗಿವೆ. ನೀವು ಅಮರರಾಗುವುದಕ್ಕಾಗಿ ಅಮರ ಕಥೆಯನ್ನು
ಕೇಳುತ್ತಿದ್ದೀರಿ. ಅಲ್ಲಿ ನೀವು ಖುಷಿಯಿಂದ ಒಂದು ಶರೀರವನ್ನು ಬಿಟ್ಟು ಹೋಗಿ ಇನ್ನೊಂದನ್ನು
ತೆಗೆದುಕೊಳ್ಳುತ್ತೀರಿ. ಇಲ್ಲಂತೂ ಯಾರಾದರೂ ಸತ್ತರೆ ಅಳುತ್ತಾರೆ, ಚೀರಾಡುತ್ತಾರೆ. ಸತ್ಯಯುಗದಲ್ಲಿ
ಖಾಯಿಲೆ ಇತ್ಯಾದಿಗಳಿರುವುದಿಲ್ಲ, ಸದಾ ಆರೋಗ್ಯವಂತರಾಗಿರುತ್ತಾರೆ. ಧೀರ್ಘಾಯಸ್ಸು ಇರುತ್ತದೆ.
ಅಲ್ಲಿ ಪತಿತತನವೇ ಇರುವುದಿಲ್ಲ. ಈಗ ಇದನ್ನು ಪಕ್ಕಾ ಮಾಡಿಕೊಳ್ಳಿ - ನಾವು 84 ಜನ್ಮಗಳ ಚಕ್ರವನ್ನು
ಪೂರ್ಣ ಮಾಡಿದ್ದೇವೆ, ಈಗ ನಮ್ಮನ್ನು ಕರೆದುಕೊಂಡು ಹೋಗಲು ತಂದೆಯು ಬಂದಿದ್ದಾರೆ. ಪಾವನರಾಗುವ
ಯುಕ್ತಿಗಳನ್ನು ನಿಮಗೆ ತಿಳಿಸುತ್ತಾರೆ - ಮಕ್ಕಳೇ, ಕೇವಲ ತಂದೆಯಾದ ನನ್ನನ್ನು ಮತ್ತು ಆಸ್ತಿಯನ್ನು
ನೆನಪು ಮಾಡಿ. ಸತ್ಯಯುಗದಲ್ಲಿ 16 ಕಲಾ ಸಂಪೂರ್ಣರು ನಂತರ ಕಲೆಗಳು ಕಡಿಮೆಯಾಗತೊಡಗುತ್ತವೆ. ಈಗ
ನಿಮ್ಮಲ್ಲಿ ಯಾವುದೇ ಕಲೆಯಿಲ್ಲ. ತಂದೆಯೇ ದುಃಖದಿಂದ ಬಿಡಿಸಿ ಸುಖದಲ್ಲಿ ಕರೆದುಕೊಂಡು ಹೋಗುತ್ತಾರೆ
ಆದ್ದರಿಂದ ಮುಕ್ತಿದಾತನೆಂದು ಹೇಳಲಾಗುತ್ತದೆ. ಎಲ್ಲರನ್ನೂ ತಮ್ಮ ಜೊತೆ ಕರೆದುಕೊಂಡು ಹೋಗುತ್ತಾರೆ.
ನಿಮ್ಮ ಗುರುಗಳು ನಿಮ್ಮನ್ನು ಜೊತೆ ಕರೆದುಕೊಂಡು ಹೋಗುವರೇ? ಆ ಗುರುಗಳಂತು ಹೊರಟು ಹೋದರೆ ಅವರ
ಶಿಷ್ಯರು ಅವರ ಸ್ಥಾನದಲ್ಲಿ ಕುಳಿತುಕೊಳ್ಳುತ್ತಾರೆ ಮತ್ತೆ ಶಿಷ್ಯರಲ್ಲಿ ಬಹಳ ಗಡಿಬಿಡಿಯಾಗುತ್ತದೆ.
ಸ್ಥಾನಕ್ಕಾಗಿ ಪರಸ್ಪರ ಹೊಡೆದಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ನೀವಾತ್ಮರನ್ನು ಜೊತೆ
ಕರೆದುಕೊಂಡು ಹೋಗುತ್ತೇನೆ. ನೀವು ಸಂಪೂರ್ಣರಾಗದಿದ್ದರೆ ಶಿಕ್ಷೆಗಳನ್ನನುಭವಿಸುವಿರಿ. ಮತ್ತು ಪದವಿ
ಭ್ರಷ್ಟವಾಗುವುದು. ಇಲ್ಲಿ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ನೆನಪಿನ
ಇಂತಹ ಅಭ್ಯಾಸ ಮಾಡಬೇಕು – ಕೆಟ್ಟ ವಿಚಾರದವರು ಮುಂದೆ ಬರುತ್ತಿದ್ದಂತೆಯೇ ಅವರೂ ಪರಿವರ್ತನೆಯಾಗಿ
ಬಿಡಲಿ. ನನ್ನವರು ಒಬ್ಬ ಶಿವ ತಂದೆಯ ವಿನಃ ಯಾರೂ ಇಲ್ಲ... ಈ ಪುರುಷಾರ್ಥದಲ್ಲಿರಬೇಕಾಗಿದೆ.
2. ಸ್ವರಾಜ್ಯವನ್ನು ಪಡೆಯುವುದಕ್ಕಾಗಿ ಶರೀರ ಸಹಿತ ಏನೆಲ್ಲವೂ ಇದೆಯೋ ಅದೆಲ್ಲವನ್ನೂ ಬಲಿಹಾರಿ
ಮಾಡಬೇಕಾಗಿದೆ. ಯಾವಾಗ ಈ ರುದ್ರ ಯಜ್ಞದಲ್ಲಿ ಎಲ್ಲವನ್ನೂ ಸ್ವಾಹಾ ಮಾಡುವಿರೋ ಆಗ ರಾಜ್ಯ ಪದವಿಯು
ಸಿಗುವುದು.
ವರದಾನ:
ಜ್ಞಾನಿತ್ವ
ಆತ್ಮನಾಗಿ ಜ್ಞಾನ ಸಾಗರ ಮತ್ತು ಜ್ಞಾನದಲ್ಲಿ ಸಮಾವೇಶವಾಗುವಂತಹ ಸರ್ವ ಪ್ರಾಪ್ತಿ ಸ್ವರೂಪ ಭವ.
ಯಾರು ಜ್ಞಾನಿತ್ವ
ಆತ್ಮಗಳಿದ್ದಾರೆ ಅವರು ಸದಾ ಜ್ಞಾನ ಸಾಗರ ಮತ್ತು ಜ್ಞಾನದಲ್ಲಿ ಸಮಾವೇಶವಾಗಿರುತ್ತಾರೆ, ಸರ್ವ
ಪ್ರಾಪ್ತಿ ಸ್ವರೂಪರಾಗಿರುವ ಕಾರಣ ಇಚ್ಛಾ ಮಾತ್ರಂ ಅವಿಧ್ಯಾ ನ ಸ್ಟೇಜ್ ಸ್ವತಃವಾಗಿರುತ್ತದೆ. ಯಾರು
ಅಂಶ ಮಾತ್ರವೂ ಸಹ ಯಾವುದೇ ಸ್ವಭಾವ-ಸಂಸ್ಕಾರದ ಅಧೀನರಾಗಿರುತ್ತಾರೆ, ಹೆಸರು-ಪ್ರತಿಷ್ಟೆ-ಗೌರವವನ್ನು
ಬೇಡುವವರಾಗಿರುತ್ತಾರೆ. ಏನು? ಏಕೆ? ಎಂಬ ಪ್ರಶ್ನೆಗಳಲ್ಲಿ ಚೀರಾಡುವಂತಹವರು, ಕೂಗಾಡುವಂತಹವರು,
ಒಳಗೊಂದು ಹೊರಗೊಂದು ರೂಪ - ಇರುವುದು ಅವರನ್ನು ಜ್ಞಾನಿತ್ವ ಆತ್ಮ ಎಂದು ಹೇಳಲಾಗುವುದಿಲ್ಲ.
ಸ್ಲೋಗನ್:
ಈ ಜೀವನದಲ್ಲಿ
ಅತೀಂದ್ರಿಯ ಸುಖ ಹಾಗೂ ಆನಂದದ ಅನುಭೂತಿ ಮಾಡುವಂತಹವರೇ ಸಹಜಯೋಗಿಗಳು.