18.05.20         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನೀವು ಪುನಃ ತಮ್ಮ ನೆಲೆಯನ್ನು ತಲುಪಿದ್ದೀರಿ, ನೀವು ತಂದೆಯ ಮೂಲಕ ರಚಯಿತ ಮತ್ತು ರಚನೆಯನ್ನು ಅರಿತಿದ್ದೀರಿ, ಆದ್ದರಿಂದ ಖುಷಿಯಲ್ಲಿ ರೋಮಾಂಚನವಾಗಿ ಬಿಡಬೇಕು

ಪ್ರಶ್ನೆ:
ಈ ಸಮಯದಲ್ಲಿ ತಂದೆಯು ನೀವು ಮಕ್ಕಳ ಶೃಂಗಾರವನ್ನೇಕೆ ಮಾಡುತ್ತಿದ್ದಾರೆ?

ಉತ್ತರ:
ಈಗ ನಾವು ಶೃಂಗಾರಿತರಾಗಿ ವಿಷ್ಣು ಪುರಿಯಲ್ಲಿ (ಮಾವನ ಮನೆ) ಹೋಗಬೇಕಾಗಿದೆ. ನಾವು ಈ ಜ್ಞಾನದಿಂದ ಶೃಂಗರಿತರಾಗಿ ವಿಶ್ವದ ಮಹಾರಾಜ-ಮಹಾರಾಣಿಯಾಗುತ್ತೇವೆ. ಈಗ ಸಂಗಮಯುಗದಲ್ಲಿದ್ದೇವೆ, ತಂದೆಯ ಮನೆಯಿಂದ ಮಾವನ ಮನೆಗೆ ಕರೆದುಕೊಂಡು ಹೋಗಲು ತಂದೆಯು ಶಿಕ್ಷಕನಾಗಿ ಓದಿಸುತ್ತಿದ್ದಾರೆ.

ಗೀತೆ:
ಕೊನೆಗೂ ಆ ದಿನ ಇಂದು ಬಂದಿತು...................

ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳು, ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳು ಗೀತೆಯನ್ನು ಕೇಳಿದಿರಿ. ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ - ಅರ್ಧಕಲ್ಪ ಯಾವ ಪ್ರಿಯತಮನ್ನು ನೆನಪು ಮಾಡಿದೆವೋ ಕೊನೆಗೂ ಅವರು ಸಿಕ್ಕಿದ್ದಾರೆ. ಪ್ರಪಂಚದವರಿಗೆ ಇದು ತಿಳಿದಿಲ್ಲ - ನಾವು ಅರ್ಧಕಲ್ಪ ಭಕ್ತಿ ಮಾಡುತ್ತೇವೆ, ಪ್ರಿಯತಮ ತಂದೆಯನ್ನು ಕರೆಯುತ್ತೇವೆ. ನಾವು ಪ್ರಿಯತಮೆಯರು ಅವರು ಪ್ರಿಯತಮನಾಗಿದ್ದಾರೆ - ಇದನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ರಾವಣನು ನಿಮ್ಮನ್ನು, ಅದರಲ್ಲಿಯೂ ವಿಶೇಷವಾಗಿ ಭಾರತವಾಸಿಗಳನ್ನು ಸಂಪೂರ್ಣ ತುಚ್ಛ ಬುದ್ಧಿಯವರನ್ನಾಗಿ ಮಾಡಿ ಬಿಟ್ಟಿದ್ದಾನೆ. ನೀವು ದೇವಿ-ದೇವತೆಗಳಾಗಿದ್ದಿರಿ, ಇದನ್ನೂ ಮರೆತು ಹೋಗಿದ್ದೀರಿ ಅಂದಮೇಲೆ ತುಚ್ಛ ಬುದ್ಧಿಯಲ್ಲವೆ. ತಮ್ಮ ಧರ್ಮವನ್ನು ಮರೆತು ಬಿಡುವುದೇ ತುಚ್ಛ ಬುದ್ಧಿಯವರ ಕೆಲಸವಾಗಿದೆ. ಇದನ್ನು ಕೇವಲ ನೀವೇ ತಿಳಿದುಕೊಂಡಿದ್ದೀರಿ, ನಾವು ಭಾರತವಾಸಿಗಳು ಸ್ವರ್ಗವಾಸಿಗಳಾಗಿದ್ದೆವು, ಈ ಭಾರತವು ಸ್ವರ್ಗವಾಗಿತ್ತು, ಸ್ವಲ್ಪವೇ ಸಮಯವಾಯಿತು. 1250 ವರ್ಷಗಳ ಕಾಲ ಸತ್ಯಯುಗವಿತ್ತು, ಮತ್ತು 1250 ವರ್ಷಗಳ ಕಾಲ ರಾಮ ರಾಜ್ಯವು ನಡೆಯಿತು ಆ ಸಮಯದಲ್ಲಿ ಅಪಾರ ಸುಖವಿತ್ತು. ಸುಖವನ್ನು ನೆನಪು ಮಾಡಿ ರೋಮಾಂಚನವಾಗಿ ನಿಲ್ಲಬೇಕು, ಸತ್ಯಯುಗ-ತ್ರೇತಾಯುಗ..... ಇವೆಲ್ಲವೂ ಕಳೆದು ಹೋದವು. ಸತ್ಯಯುಗದ ಆಯಸ್ಸು ಎಷ್ಟೆಂಬುದನ್ನು ಯಾರೂ ಸಹ ತಿಳಿದುಕೊಂಡಿಲ್ಲ. ಲಕ್ಷಾಂತರ ವರ್ಷಗಳಿರಲು ಹೇಗೆ ಸಾಧ್ಯ! ಈಗ ತಂದೆಯು ಬಂದು ತಿಳಿಸುತ್ತಾರೆ. ಮಾಯೆಯು ನಿಮ್ಮನ್ನು ಎಷ್ಟು ತುಚ್ಛ ಬುದ್ಧಿಯವರನ್ನಾಗಿ ಮಾಡಿ ಬಿಟ್ಟಿದೆ! ಪ್ರಪಂಚದಲ್ಲಿ ಯಾರೂ ಸಹ ತಮ್ಮನ್ನು ತುಚ್ಛ ಬುದ್ಧಿಯವರೆಂದು ತಿಳಿಯುವುದೇ ಇಲ್ಲ. ನೀವು ತಿಳಿದುಕೊಂಡಿದ್ದೀರಿ - ನಾವು ನೆನ್ನೆಯ ದಿನ ತುಚ್ಛ ಬುದ್ಧಿಯವರಾಗಿದ್ದೆವು ಈಗ ತಂದೆಯು ಇಷ್ಟು ಶ್ರೇಷ್ಠ ಬುದ್ಧಿಯನ್ನು ಕೊಟ್ಟಿದ್ದಾರೆ. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ನಾವು ಅರಿತಿದ್ದೇವೆ. ನೆನ್ನೆ ಅರಿತುಕೊಂಡಿರಲಿಲ್ಲ, ಇಂದು ಅರಿತುಕೊಂಡಿದ್ದೇವೆ. ಎಷ್ಟೆಷ್ಟು ಅರಿತುಕೊಳ್ಳುವೆವೋ ಅಷ್ಟು ಖುಷಿಯಲ್ಲಿ ರೋಮಾಂಚನವಾಗುತ್ತದೆ. ನಾವು ಪುನಃ ನಮ್ಮ ನೆಲೆಯನ್ನು ತಲುಪಿದ್ದೇವೆ. ಅವಶ್ಯವಾಗಿ ತಂದೆಯು ನಮಗೆ ಸ್ವರ್ಗದ ರಾಜ್ಯಭಾಗ್ಯವನ್ನು ಕೊಟ್ಟಿದ್ದರು ನಂತರ ನಾವು ಕಳೆದುಕೊಂಡೆವು ಈಗ ಪತಿತರಾಗಿ ಬಿಟ್ಟಿದ್ದೇವೆ. ಸತ್ಯಯುಗಕ್ಕೆ ಪತಿತ ಎಂದು ಹೇಳುವುದಿಲ್ಲ. ಅದು ಪಾವನ ಪ್ರಪಂಚವಾಗಿದೆ. ಹೇ ಪತಿತ-ಪಾವನ ಬನ್ನಿ ಎಂದು ಮನುಷ್ಯರು ಹೇಳುತ್ತಾರೆ. ರಾವಣ ರಾಜ್ಯದಲ್ಲಿ ಯಾರೂ ಪಾವನ, ಶ್ರೇಷ್ಠರಿರುವುದಿಲ್ಲ. ಶ್ರೇಷ್ಠಾತಿ ಶ್ರೇಷ್ಠ ತಂದೆಯ ಮಕ್ಕಳಾದಾಗಲೇ ಶ್ರೇಷ್ಠರಾಗುವಿರಿ. ನೀವು ಮಕ್ಕಳು ನಂಬರ್ವಾರ್ ಪುರುಷಾರ್ಥದನುಸಾರ ತಂದೆಯನ್ನು ಅರಿತಿದ್ದೀರಿ. ಮುಂಜಾನೆ ಎದ್ದು ತಮ್ಮ ಹೃದಯದಿಂದ ಕೇಳಿಕೊಳ್ಳಿ, ಅಮೃತವೇಳೆಯ ಸಮಯವು ಚೆನ್ನಾಗಿದೆ. ಅಮೃತವೇಳೆ ಕುಳಿತು ಈ ಸಂಕಲ್ಪ ಮಾಡಿ- ತಂದೆಯು ನಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ. ಓ ಗಾಡ್ ಫಾದರ್, ಹೇ ಪರಮಪಿತ ಪರಮಾತ್ಮ ಎಂದು ಹೇಳುತ್ತಾರೆ. ನೀವು ಮಕ್ಕಳು ಈಗ ತಿಳಿದುಕೊಂಡಿದ್ದೀರಿ. ಯಾರನ್ನು ಹೇ ಭಗವಂತ ಎಂದು ನೆನಪು ಮಾಡುವರೋ ಅವರು ಈಗ ನಮಗೆ ಸಿಕ್ಕಿದ್ದಾರೆ, ನಾವು ಪುನಃ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಅವರು ಲೌಕಿಕ ತಂದೆ, ಇವರು ಪಾರಲೌಕಿಕ ತಂದೆಯಾಗಿದ್ದಾರೆ. ನಿಮ್ಮ ಲೌಕಿಕ ತಂದೆಯೂ ಸಹ ಆ ಪಾರಲೌಕಿಕ ತಂದೆಯನ್ನೇ ನೆನಪು ಮಾಡುತ್ತಾರೆ ಅಂದಮೇಲೆ ಅವರು ತಂದೆಯರ ತಂದೆ, ಪತಿಯರಿಗೂ ಪತಿಯಾದರು. ಇದನ್ನು ಭಾರತವಾಸಿಗಳೂ ಹೇಳುತ್ತಾರೆ ಏಕೆಂದರೆ ನಾನೀಗ ತಂದೆಯರ ತಂದೆ, ಪತಿಯರ ಪತಿಯಾಗಿದ್ದೇನೆ. ನಾನೀಗ ನಿಮ್ಮ ತಂದೆಯೂ ಆಗಿದ್ದೇನೆ, ನೀವು ಮಕ್ಕಳಾಗಿದ್ದೀರಿ. ಬಾಬಾ, ಬಾಬಾ ಎಂದು ಹೇಳುತ್ತಿರುತ್ತೀರಿ. ಈಗ ಪುನಃ ನಿಮ್ಮನ್ನು ಮಾವನ ಮನೆಯಾದ ವಿಷ್ಣು ಪುರಿಗೆ ಕರೆದುಕೊಂಡು ಹೋಗುತ್ತೇನೆ. ಇದು ನಿಮ್ಮ ತಂದೆಯ ಮನೆಯಾಗಿದೆ. ನೀವು ಮತ್ತೆ ಮಾವನ ಮನೆಗೆ ಹೋಗುತ್ತೀರಿ. ಮಕ್ಕಳಿಗೆ ತಿಳಿದಿದೆ - ನಮ್ಮನ್ನು ಬಹಳ ಚೆನ್ನಾಗಿ ಶೃಂಗರಿಸಲಾಗುತ್ತದೆ. ಈಗ ನೀವು ತಂದೆಯ ಮನೆಯಲ್ಲಿದ್ದೀರಲ್ಲವೆ. ನಿಮಗೆ ವಿದ್ಯಾಭ್ಯಾಸವನ್ನು ಮಾಡಿಸಲಾಗುತ್ತದೆ. ನೀವು ಈ ಜ್ಞಾನದಿಂದ ಶೃಂಗಾರಿತರಾಗಿ ವಿಶ್ವದ ಮಹಾರಾಜ-ಮಹಾರಾಣಿಯಾಗುತ್ತೀರಿ. ನೀವಿಲ್ಲಿ ವಿಶ್ವದ ಮಾಲೀಕರಾಗುವುದಕ್ಕಾಗಿಯೇ ಬಂದಿದ್ದೀರಿ. ನೀವು ಭಾರತವಾಸಿಗಳೇ ಸತ್ಯಯುಗದಲ್ಲಿದ್ದಾಗ ವಿಶ್ವದ ಮಾಲೀಕರಾಗಿದ್ದೀರಿ. ನಾವು ವಿಶ್ವದ ಮಾಲೀಕರಾಗಿದ್ದೇವೆಂದು ನೀವೀಗ ಹೇಳುವುದಿಲ್ಲ ಏಕೆಂದರೆ ನಿಮಗೆ ತಿಳಿದಿದೆ - ಭಾರತದ ಮಾಲೀಕರು ಕಲಿಯುಗದವರಾಗಿದ್ದಾರೆ, ನಾವು ಸಂಗಮಯುಗದವರಾಗಿದ್ದೇವೆ ಮತ್ತೆ ನಾವು ಸತ್ಯಯುಗದಲ್ಲಿ ಇಡೀ ವಿಶ್ವದ ಮಾಲೀಕರಾಗುತ್ತೇವೆ. ಈ ಮಾತುಗಳು ನೀವು ಮಕ್ಕಳ ಬುದ್ಧಿಯಲ್ಲಿ ಬರಬೇಕು. ನಿಮಗೆ ತಿಳಿದಿದೆ - ವಿಶ್ವದ ರಾಜ್ಯಭಾಗ್ಯವನ್ನು ಕೊಡುವವರು ಬಂದಿದ್ದಾರೆ. ಈಗ ಸಂಗಮಯುಗದಲ್ಲಿ ಅವರು ಬಂದಿದ್ದಾರೆ, ಜ್ಞಾನದಾತನು ಒಬ್ಬರೇ ತಂದೆಯಾಗಿದ್ದಾರೆ. ತಂದೆಯ ವಿನಃ ಯಾವುದೇ ಮನುಷ್ಯರಿಗೆ ಜ್ಞಾನದಾತನೆಂದು ಹೇಳುವುದಿಲ್ಲ. ಏಕೆಂದರೆ ತಂದೆಯ ಬಳಿ ಇಂತಹ ಜ್ಞಾನವಿದೆ ಅದರಿಂದ ಇಡೀ ವಿಶ್ವದ ಸದ್ಗತಿಯಾಗುತ್ತದೆ. ತತ್ವಗಳ ಸಹಿತವಾಗಿ ಎಲ್ಲದರ ಸದ್ಗತಿಯಾಗಿ ಬಿಡುತ್ತದೆ. ಮನುಷ್ಯರ ಬಳಿ ಸದ್ಗತಿಯ ಜ್ಞಾನವಿಲ್ಲ.

ಈ ಸಮಯದಲ್ಲಿ ತತ್ವಗಳ ಸಹಿತವಾಗಿ ಇಡೀ ಪ್ರಪಂಚವೇ ತಮೋಪ್ರಧಾನವಾಗಿದೆ. ಇದರಲ್ಲಿರುವವರೂ ಸಹ ತಮೋಪ್ರಧಾನರಾಗಿದ್ದಾರೆ, ಹೊಸ ಪ್ರಪಂಚವು ಸತ್ಯಯುಗವಾಗಿದೆ, ಸತ್ಯಯುಗದಲಿದ್ದವರು ದೇವತೆಗಳಾಗಿದ್ದರು ನಂತರ ರಾವಣನು ಜಯ ಗಳಿಸಿದನು. ಈಗ ಮತ್ತೆ ತಂದೆಯು ಬಂದಿದ್ದಾರೆ, ಮಕ್ಕಳು ಹೇಳುತ್ತೀರಿ - ನಾವು ಬಾಪ್ದಾದಾರವರ ಬಳಿ ಹೋಗುತ್ತೇವೆ, ತಂದೆಯು ನಮಗೆ ದಾದಾರವರ ಮೂಲಕ ಸ್ವರ್ಗದ ರಾಜಧಾನಿಯ ಆಸ್ತಿಯನ್ನು ಕೊಡುತ್ತಾರೆ. ತಂದೆಯಂತೂ ಸ್ವರ್ಗದ ರಾಜ್ಯಭಾಗ್ಯವನ್ನೇ ಕೊಡುತ್ತಾರೆ, ಮತ್ತೇನು ಕೊಡುವರು! ನೀವು ಮಕ್ಕಳ ಬುದ್ದಿಯಲ್ಲಿ ಇಷ್ಟಾದರೂ ಬರಬೇಕಲ್ಲವೆ ಆದರೆ ಮಾಯೆಯು ಮರೆಸಿ ಬಿಡುತ್ತದೆ. ಖುಷಿಯು ಸ್ಥಿರವಾಗಿರಲು ಬಿಡುವುದಿಲ್ಲ. ಯಾರು ಬಹಳ ಚೆನ್ನಾಗಿ ಓದಿ ಅನ್ಯರಿಗೂ ಓದಿಸುವರೋ ಅವರೇ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಗಾಯನವಿದೆ. ಒಂದೇ ಬಾರಿ ಅರ್ಥ ಮಾಡಿಕೊಳ್ಳುತ್ತೀರಲ್ಲವೆ. ಎಲ್ಲಾ ಆತ್ಮಗಳ ತಂದೆಯು ಒಬ್ಬರೇ ಆಗಿದ್ದಾರೆ. ಅವರೀಗ ಬಂದಿದ್ದಾರೆ ಆದರೆ ಎಲ್ಲರೂ ಅವರನ್ನು ಮಿಲನ ಮಾಡುವುದಿಲ್ಲ ಅಸಂಭವವಾಗಿದೆ. ತಂದೆಯಂತೂ ಓದಿಸಲು ಬಂದಿದ್ದಾರೆ, ನೀವೆಲ್ಲವೂ ಶಿಕ್ಷಕರಾಗಿದ್ದೀರಿ, ಗೀತಾ ಪಾಠಶಾಲೆಯೆಂದು ಹೇಳಲಾಗುತ್ತದೆಯಲ್ಲವೆ. ಈ ಅಕ್ಷರವು ಸರ್ವೇ ಸಾಮಾನ್ಯವಾಗಿದೆ. ಕೃಷ್ಣನು ಗೀತೆಯನ್ನು ತಿಳಿಸಿದರೆಂದು ಹೇಳುತ್ತಾರೆ, ಈಗ ಇದು ಕೃಷ್ಣನ ಪಾಠಶಾಲೆಯಲ್ಲ. ಕೃಷ್ಣನ ಆತ್ಮವೂ ಓದುತ್ತಿದೆ, ಸತ್ಯಯುಗದಲ್ಲಿ ಯಾರಾದರೂ ಗೀತಾ ಪಾಠಶಾಲೆಯಲ್ಲಿ ಓದಿ-ಓದಿಸುತ್ತಾರಲ್ಲವೆ. ಕೃಷ್ಣನಿರುವುದೇ ಸತ್ಯಯುಗದಲ್ಲಿ ನಂತರ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾನೆ. ಒಂದು ಶರೀರವು ಇನ್ನೊಂದಕ್ಕೆ ಹೋಲುವುದಿಲ್ಲ. ಎಷ್ಟೊಂದು ತಿಳುವಳಿಕೆಯ ಮಾತಾಗಿದೆ. ನಾಟಕವಲ್ಲವೆ. ಪಾತ್ರವು ಪುನರಾವರ್ತನೆಯಾಗುತ್ತಾ ಇರುತ್ತದೆ. ಉಳಿದಂತೆ ಆ ಶಾಸ್ತ್ರಗಳೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಅರ್ಧಕಲ್ಪ ಭಕ್ತಿಯು ನಡೆಯುತ್ತದೆ ನಂತರ ನಾನೇ ಬಂದು ಸರ್ವರ ಸದ್ಗತಿ ಮಾಡುತ್ತೇನೆ. ನಿಮಗೆ ತಿಳಿದಿದೆ - 5000 ವರ್ಷಗಳ ಮೊದಲು ರಾಜ್ಯ ಮಾಡುತ್ತಿದ್ದಿರಿ, ಸದ್ಗತಿಯಲ್ಲಿದ್ದಿರಿ. ದುಃಖದ ಹೆಸರಿರಲಿಲ್ಲ. ಈಗಂತೂ ದುಃಖವೇ ದುಃಖವಿದೆ, ಇದಕ್ಕೆ ದುಃಖಧಾಮವೆಂದು ಹೇಳಲಾಗುತ್ತದೆ. ಶಾಂತಿಧಾಮ, ಸುಖಧಾಮ ಮತ್ತು ದುಃಖಧಾಮ. ನಾನು ಬಂದು ಭಾರತವಾಸಿಗಳಿಗೇ ಸುಖಧಾಮದ ಮಾರ್ಗವನ್ನು ತಿಳಿಸುತ್ತೇನೆ. ಕಲ್ಪ-ಕಲ್ಪವೂ ನಾನು ಬರಬೇಕಾಗುತ್ತದೆ. ಅನೇಕ ಬಾರಿ ಬಂದಿದ್ದೇನೆ, ಬರುತ್ತಾ ಇರುತ್ತೇನೆ. ಇದು ಕೊನೆಯಾಗಲು ಸಾಧ್ಯವಿಲ್ಲ. ನೀವು ಚಕ್ರವನ್ನು ಸುತ್ತಿ ದುಃಖಧಾಮದಲ್ಲಿ ಬರುತ್ತೀರಿ ಆಗ ನಾನು ಬರಬೇಕಾಗುತ್ತದೆ. ಈಗ ನಿಮಗೆ 84 ಜನ್ಮಗಳ ಚಕ್ರದ ಸ್ಮೃತಿಯು ಬಂದಿದೆ. ತಂದೆಗೆ ರಚಯಿತನೆಂದು ಹೇಳಲಾಗುತ್ತದೆ. ನಾಟಕದ ರಚಯಿತನೆಂದಲ್ಲ. ರಚಯಿತನೆಂದರೆ ಈ ಸಮಯದಲ್ಲಿ ಬಂದು ಸತ್ಯಯುಗವನ್ನು ರಚಿಸುತ್ತಾರೆ. ಸತ್ಯಯುಗದಲ್ಲಿ ಯಾರ ರಾಜ್ಯವಿತ್ತೋ ನಂತರ ಅದನ್ನು ಕಳೆದುಕೊಂಡರು ಅವರಿಗೇ ನಾನು ಓದಿಸುತ್ತೇನೆ, ಮಕ್ಕಳನ್ನು ದತ್ತು ಮಾಡಿಕೊಳ್ಳುತ್ತೇನೆ. ನೀವು ನನ್ನ ಮಕ್ಕಳಾಗಿದ್ದೀರಲ್ಲವೆ. ನಿಮಗೆ ಯಾವುದೇ ಸಾಧು-ಸಂತ ಮೊದಲಾದವರು ಓದಿಸುವುದಿಲ್ಲ, ಓದಿಸುವವರು ಒಬ್ಬ ತಂದೆಯಾಗಿದ್ದಾರೆ ಅವರನ್ನು ಎಲ್ಲರೂ ನೆನಪು ಮಾಡುತ್ತಾರೆ. ಯಾರನ್ನು ನೆನಪು ಮಾಡುವರೋ ಅವರು ಅವಶ್ಯವಾಗಿ ಎಂದಾದರೂ ಬರುತ್ತಾರಲ್ಲವೆ. ಏಕೆ ನೆನಪು ಮಾಡುತ್ತೇವೆ ಎಂಬುದೂ ಸಹ ಯಾರಿಗೂ ತಿಳುವಳಿಕೆಯಿಲ್ಲ. ಆದ್ದರಿಂದ ಅವಶ್ಯವಾಗಿ ಪತಿತ-ಪಾವನ ತಂದೆಯು ಬರುತ್ತಾರೆ. ಪುನಃ ಬನ್ನಿ ಎಂದು ಕ್ರಿಸ್ತನಿಗೆ ಹೇಳುವುದಿಲ್ಲ. ಕ್ರಿಸ್ತನು ಲೀನವಾಗಿ ಬಿಟ್ಟರೆಂದು ಅವರು ತಿಳಿಯುತ್ತಾರೆ ಅಂದಮೇಲೆ ಬರುವ ಮಾತೇ ಇಲ್ಲ. ಪತಿತ-ಪಾವನ ತಂದೆಯನ್ನೇ ಅವರು ನೆನಪು ಮಾಡುತ್ತಾರೆ - ನಾವಾತ್ಮಗಳಿಗೆ ಪುನಃ ಆಸ್ತಿಯನ್ನು ಕೊಡಿ. ಈಗ ನೀವು ಮಕ್ಕಳಿಗೆ ಸ್ಮೃತಿ ಬಂದಿದೆ - ತಂದೆಯು ಬಂದಿದ್ದಾರೆ, ಹೊಸ ಪ್ರಪಂಚದ ಸ್ಥಾಪನೆ ಮಾಡುತ್ತಾರೆ. ಅವರು ತಮ್ಮ ಸಮಯದಲ್ಲಿ ರಜೋ ತಮೋದಲ್ಲಿಯೇ ಬರುತ್ತಾರೆ. ನಾವು ಮಾ||ಜ್ಞಾನಪೂರ್ಣರಾಗುತ್ತೇವೆಂದು ನೀವು ಮಕ್ಕಳು ಈಗ ತಿಳಿದುಕೊಂಡಿದ್ದೀರಿ.

ಒಬ್ಬ ತಂದೆಯೇ ನೀವು ಮಕ್ಕಳಿಗೆ ಓದಿಸಿ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ, ತಾವೇ ಸ್ವಯಂ ಆಗುವುದಿಲ್ಲ. ಆದ್ದರಿಂದ ನಿಷ್ಕಾಮ ಸೇವಾಧಾರಿ ಎಂದು ಕರೆಯಲಾಗುತ್ತದೆ. ಮನುಷ್ಯರು ನಾವು ಫಲದ ಇಚ್ಛೆಯನ್ನು ಇಟ್ಟುಕೊಳ್ಳುವುದಿಲ್ಲ, ನಿಷ್ಕಾಮ ಸೇವೆಯನ್ನು ಮಾಡುತ್ತೇವೆಂದು ಹೇಳುತ್ತಾರೆ ಆದರೆ ಇದು ಸಾಧ್ಯವಿಲ್ಲ. ಎಂತಹ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತಾರೆ ಅದರನುಸಾರ ಜನ್ಮವು ಸಿಗುತ್ತದೆ. ಕರ್ಮದ ಫಲವು ಅವಶ್ಯವಾಗಿ ಸಿಗುತ್ತದೆ. ಸನ್ಯಾಸಿಗಳೂ ಸಹ ಪುನರ್ಜನ್ಮವನ್ನು ಗೃಹಸ್ಥಿಗಳ ಬಳಿಯೇ ತೆಗೆದುಕೊಂಡು ಮತ್ತೆ ಸಂಸ್ಕಾರದನುಸಾರ ಸನ್ಯಾಸ ಧರ್ಮದಲ್ಲಿ ಹೊರಟು ಹೋಗುತ್ತಾರೆ. ಹೇಗೆ ತಂದೆಯು ಸೈನಿಕರ ಉದಾಹರಣೆಯನ್ನು ಕೊಡುತ್ತಾರೆ, ಯಾರು ಯುದ್ಧದ ಮೈದಾನದಲ್ಲಿ ಮರಣ ಹೊಂದುತ್ತಾರೆ ಅವರು ಸ್ವರ್ಗದಲ್ಲಿ ಹೋಗುತ್ತಾರೆಂದು ಗೀತೆಯಲ್ಲಿ ಬರೆಯಲ್ಪಟ್ಟಿದೆ ಎಂದು ಹೇಳುತ್ತಾರೆ. ಸ್ವರ್ಗ ಬರುವುದಕ್ಕೆ ಸಮಯವು ಬೇಕಲ್ಲವೆ. ಸ್ವರ್ಗಕ್ಕೆ ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ, ತಂದೆಯು ಏನನ್ನು ತಿಳಿಸುತ್ತಾರೆ, ಗೀತೆಯಲ್ಲಿ ಏನು ಬರೆದಿದೆ ಎಂಬುದು ನಿಮಗೆ ತಿಳಿದಿದೆ. ಭಗವಾನುವಾಚ - ನಾನು ಸರ್ವವ್ಯಾಪಿಯಾಗಿದ್ದೇನೆಂದು ಮನುಷ್ಯರು ಹೇಳುತ್ತಾರೆ. ನಾನು ನನ್ನ ನಿಂದನೆಯನ್ನು ಹೇಗೆ ಮಾಡಿಕೊಳ್ಳಲಿ! ನಾನು ಸರ್ವವ್ಯಾಪಿಯಾಗಿದ್ದೇನೆ, ನಾಯಿ, ಬೆಕ್ಕು ಎಲ್ಲದರಲ್ಲಿಯೂ ಇದ್ದೇನೆಂದು ಹೇಗೆ ಹೇಳಿಕೊಳ್ಳಲಿ! ಎಷ್ಟೊಂದು ಅಸತ್ಯವಾಗಿದೆ. ಜ್ಞಾನವೂ ಯಾರಲ್ಲಿಯೂ ಇಲ್ಲ. ಸನ್ಯಾಸಿಗಳು ಮುಂತಾದವರ ಮಾನ್ಯತೆ ಎಷ್ಟಿದೆ! ಏಕೆಂದರೆ ಅವರು ಪವಿತ್ರವಾಗಿದ್ದಾರೆ. ಸತ್ಯಯುಗದಲ್ಲಿ ಯಾರೂ ಗುರುಗಳಿರುವುದಿಲ್ಲ, ಇಲ್ಲಂತೂ ಸ್ತ್ರೀಗೆ ನಿನ್ನ ಪತಿಯೇ ಗುರು, ಈಶ್ವರನಾಗಿದ್ದಾರೆಂದು ಹೇಳುತ್ತಾರೆ. ಭಕ್ತಿಮಾರ್ಗದಲ್ಲಿಯೂ ಸಹ ಪ್ರಾರಂಭದಲ್ಲಿ ಗುರುಗಳಿರುವುದಿಲ್ಲ, ಪತಿಯೇ ಎಲ್ಲವೂ ಆಗಿರುತ್ತಾರೆ. ಗುರುವನ್ನು ಮಾಡಿಕೊಳ್ಳುವುದಿಲ್ಲ. ಇವೆಲ್ಲಾ ಮಾತುಗಳನ್ನು ನೀವೀಗ ತಿಳಿದುಕೊಂಡಿದ್ದೀರಿ.

ಕೆಲವು ಮನುಷ್ಯರಂತೂ ಬ್ರಹ್ಮಾಕುಮಾರಿಯರ ಹೆಸರನ್ನು ಕೇಳಿಯೇ ಭಯ ಪಡುತ್ತಾರೆ ಏಕೆಂದರೆ ಇವರು ಸಹೋದರ-ಸಹೋದರಿಯರನ್ನಾಗಿ ಮಾಡಿ ಬಿಡುತ್ತಾರೆ ಎಂದು ತಿಳಿದುಕೊಂಡಿದ್ದಾರೆ. ಅರೆ! ಪ್ರಜಾಪಿತ ಬ್ರಹ್ಮಾರವರ ಮಕ್ಕಳಾಗುವುದು ಒಳ್ಳೆಯದೇ ಅಲ್ಲವೆ. ಬಿ.ಕೆ.ಗಳೇ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ. ಈಗ ನೀವು ತೆಗೆದುಕೊಳ್ಳುತ್ತಾ ಇದ್ದೀರಿ. ನೀವು ಬಿ.ಕೆ. ಆಗಿದ್ದೀರಿ, ನಾವು ಸಹೋದರ-ಸಹೋದರಿ ಆಗಿದ್ದೇವೆಂದು ಇಬ್ಬರೂ ಹೇಳುತ್ತೀರಿ. ಶರೀರದ ಪರಿವೆ, ವಿಕಾರದ ದುರ್ವಾಸನೆಯು ಹೊರಟು ಹೋಗುತ್ತದೆ. ನಾವು ಒಬ್ಬ ತಂದೆಯ ಮಕ್ಕಳು ಸಹೋದರ-ಸಹೋದರಿ ವಿಕಾರದಲ್ಲಿ ಹೋಗಲು ಹೇಗೆ ಸಾಧ್ಯವಿದೆ, ಇದು ಮಹಾನ್ ಪಾಪವಾಗಿದೆ. ಇದು ಪವಿತ್ರರಾಗುವ ಯುಕ್ತಿಯು ನಾಟಕದಲ್ಲಿದೆ. ಸನ್ಯಾಸಿಗಳದು ನಿವೃತ್ತಿ ಮಾರ್ಗವಾಗಿದೆ, ನೀವು ಪ್ರವೃತ್ತಿ ಮಾರ್ಗದವರು. ಈಗ ಈ ಕೊಳಕು ಪ್ರಪಂಚದ ರೀತಿ-ಪದ್ಧತಿಯನ್ನು ಬಿಟ್ಟು ಈ ಪ್ರಪಂಚವನ್ನು ಮರೆಯಬೇಕಾಗಿದೆ. ನೀವು ಸ್ವರ್ಗದ ಮಾಲೀಕರಾಗಿದ್ದಿರಿ ಮತ್ತೆ ರಾವಣ ಎಷ್ಟೊಂದು ಕೊಳಕು ಮಾಡಿದ್ದಾನೆ. ಇದೂ ಸಹ ತಂದೆಯು ತಿಳಿಸಿದ್ದಾರೆ, ಕೆಲವರು ನಾವು 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಗೆ ಒಪ್ಪುವುದು! ಎಂದು ಕೇಳುತ್ತಾರೆ. ನಾವು 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆಂಬುದನ್ನು ಚೆನ್ನಾಗಿ ಹೇಳುತ್ತೀರಿ. 84 ಜನ್ಮಗಳನ್ನು ತೆಗೆದುಕೊಳ್ಳದಿದ್ದರೆ ಇಲ್ಲಿ ಉಳಿಯುವುದಿಲ್ಲ. ಇಲ್ಲವೆಂದರೆ ನೀವು ದೇವಿ-ದೇವತಾ ಧರ್ಮದವರಲ್ಲ, ಅವರು ಸ್ವರ್ಗದಲ್ಲಿ ಬರಲು ಸಾಧ್ಯವಿಲ್ಲ. ಪ್ರಜೆಗಳಲ್ಲಿಯೂ ಸಹ ಕಡಿಮೆ ಪದವಿಯನ್ನು ಪಡೆಯುತ್ತಾರೆ. ಈ ಎಲ್ಲಾ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿಲ್ಲ. ಭಗವಂತನು ಬಂದು ರಾಜಧಾನಿಯನ್ನು ಸ್ಥಾಪನೆ ಮಾಡುತ್ತಾರೆ. ಶ್ರೀಕೃಷ್ಣನು ವೈಕುಂಠ ಮಾಲೀಕನಾಗಿದ್ದನು, ಅದರ ಸ್ಥಾಪನೆಯನ್ನೂ ತಂದೆಯೇ ಮಾಡುತ್ತಾರೆ. ತಂದೆಯು ಗೀತೆಯನ್ನು ನುಡಿಸಿದರು ಇದರಿಂದ ಈ ಪದವಿಯನ್ನು ಪಡೆದರು ಮತ್ತೆ ಈ ವಿದ್ಯೆಯನ್ನು ಓದುವ ಅವಶ್ಯಕತೆಯಿಲ್ಲ. ನೀವು ಓದಿ ಪದವಿಯನ್ನು ಪಡೆದುಕೊಳ್ಳುತ್ತೀರಿ ನಂತರ ಗೀತಾ ಜ್ಞಾನವನ್ನು ಓದುತ್ತೀರೇನು! ಜ್ಞಾನದಿಂದ ಸದ್ಗತಿ ದೊರೆಯಿತು, ಎಷ್ಟು ಪುರುಷಾರ್ಥವೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಎಷ್ಟು ಪುರುಷಾರ್ಥವನ್ನು ಕಲ್ಪದ ಹಿಂದೆ ಮಾಡಿದ್ದಿರಿ ಅದನ್ನೇ ಮಾಡುತ್ತಾ ಇರುತ್ತಾರೆ. ಸಾಕ್ಷಿಯಾಗಿ ನೋಡಬೇಕಾಗಿದೆಯಷ್ಟೆ. ಶಿಕ್ಷಕನನ್ನೂ ಸಹ ನೋಡಬೇಕು, ಇವರು ನಮಗೆ ಓದಿಸಿದರು, ನಾವು ಇವರಿಗಿಂತಲೂ ಬುದ್ಧಿವಂತರಾಗಬೇಕೆಂದು. ಅವಕಾಶವಂತೂ ಬಹಳಷ್ಟಿದೆ, ಶ್ರೇಷ್ಠಾತಿ ಶ್ರೇಷ್ಠರಾಗಲು ಪ್ರಯತ್ನ ಪಡಬೇಕು. ಮೂಲ ಮಾತು ತಮೋಪ್ರಧಾನರಿಂದ ಸತೋಪ್ರಧಾನರಾಗುವುದಾಗಿದೆ - ಇದು ತಿಳಿದುಕೊಳ್ಳುವ ಮಾತುಗಳಾಗಿವೆ ಅಲ್ಲವೆ. ಗೃಹಸ್ಥ ವ್ಯವಹಾರದಲ್ಲಿಯೂ ಇರಬೇಕು, ತಂದೆಯನ್ನು ನೆನಪು ಮಾಡುವುದಾದರೆ ಪಾವನರಾಗಿ ಬಿಡುತ್ತೀರಿ. ಇಲ್ಲಿ ಎಲ್ಲರೂ ಪತಿತರು, ಇಲ್ಲಿ ದುಃಖವೇ ದುಃಖವಿದೆ. ಸುಖ ಏಕೆ ಕೊಟ್ಟಿರಿ ಎಂದು ಹೇಳುತ್ತಾರೆ. ಭಗವಂತ ಯಾರಿಗೂ ದುಃಖವನ್ನು ಕೊಡುವುದಿಲ್ಲ. ರಾವಣನೇ ದುಃಖವನ್ನು ಕೊಡುತ್ತಾನೆ. ನಮ್ಮ ರಾಜ್ಯದಲಿ ಬೇರೆ ಯಾವುದೇ ಧರ್ಮವಿರುವುದಿಲ್ಲವೆಂದು ಈಗ ನಿಮಗೆ ತಿಳಿದಿದೆ ನಂತರ ಬೇರೆ ಧರ್ಮಗಳು ಬರುತ್ತವೆ. ನೀವು ಎಲ್ಲಿಗೇ ಹೋಗಿ, ವಿದ್ಯೆಯು ಜೊತೆಯಲ್ಲಿದೆ. ಮನ್ಮನಾಭವದ ಲಕ್ಷ್ಯವಂತೂ ಸಿಕ್ಕಿದೆ. ತಂದೆಯನ್ನು ನೆನಪು ಮಾಡಿ, ತಂದೆಯಿಂದ ನಾವು ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಇದನ್ನು ನೆನಪಿಟ್ಟುಕೊಳ್ಳಲು ಆಗುವುದಿಲ್ಲವೆ? ಇದು ಪಕ್ಕಾ ನೆನಪಿರಬೇಕು. ನಂತರ ಅಂತ್ಯಮತಿ ಸೋ ಗತಿಯಾಗಿ ಬಿಡುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಬೆಳಗ್ಗೆ-ಬೆಳಗ್ಗೆ ಅಮೃತವೇಳೆಯಲ್ಲಿ ಎದ್ದು ವಿಚಾರ ಮಾಡಿ - ತಂದೆಯು ನಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ. ತಂದೆಯು ಈಗ ಬಂದು ನಮ್ಮನ್ನು ಜ್ಞಾನ ರತ್ನಗಳಿಂದ ಶೃಂಗಾರ ಮಾಡುತ್ತಿದ್ದಾರೆ. ಇವರು ತಂದೆಗೂ ತಂದೆಯಾಗಿದ್ದಾರೆ, ಪತಿಯರ ಪತಿಯಾಗಿದ್ದಾರೆ - ಈ ರೀತಿ ವಿಚಾರ ಮಾಡುತ್ತಾ ಅಪಾರ ಖುಷಿಯ ಅನುಭವ ಮಾಡಬೇಕಾಗಿದೆ.

2. ಪ್ರತಿಯೊಬ್ಬರ ಪುರುಷಾರ್ಥವನ್ನು ಸಾಕ್ಷಿಯಾಗಿ ನೋಡಬೇಕು. ಶ್ರೇಷ್ಠ ಪದವಿಯ ಅವಕಾಶವಿದೆ, ಆದ್ದರಿಂದ ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕು.

ವರದಾನ:
ಸಂಗಮಯುಗದಲ್ಲಿ ಪ್ರತ್ಯಕ್ಷ ಫಲದ ಮೂಲಕ ಶಕ್ತಿಶಾಲಿಯಾಗುವಂತಹ ಸದಾ ಸಮರ್ಥ ಆತ್ಮ ಭವ.

ಸಂಗಮಯುಗದಲ್ಲಿ ಯಾವ ಆತ್ಮರು ಬೇಹದ್ಧಿನ ಸೇವೆಗೆ ನಿಮಿತ್ತರಾಗುತ್ತಾರೆ ಅವರಿಗೆ ನಿಮಿತ್ತರಾಗಿದ್ದರ ಪ್ರತ್ಯಕ್ಷ ಫಲ ಶಕ್ತಿಯ ಪ್ರಾಪ್ತಿಯಾಗುತ್ತದೆ. ಈ ಪ್ರತ್ಯಕ್ಷ ಫಲವೇ ಶ್ರೇಷ್ಠಯುಗದ ಫಲವಾಗಿದೆ. ಇಂತಹ ಫಲ ಸ್ವೀಕರಿಸುವಂತಹವರು ಶಕ್ತಿಶಾಲಿ ಆತ್ಮ ಎಂತಹದೇ ಪರಿಸ್ಥಿತಿಯ ಮೇಲೆ ಸಹಜವಾಗಿ ವಿಜಯವನ್ನು ಪಡೆದು ಬಿಡುತ್ತಾರೆ. ಅವರು ಸಮರ್ಥ ತಂದೆಯ ಜೊತೆಯಿರುವ ಕಾರಣ ವ್ಯರ್ಥದಿಂದ ಸಹಜವಾಗಿ ಮುಕ್ತರಾಗಿ ಬಿಡುತ್ತಾರೆ. ವಿಷಪೂರಿತ ಸರ್ಪದ ಸಮಾನ ಪರಿಸ್ಥಿತಿಯ ಮೇಲೂ ಸಹಾ ಅವರ ವಿಜಯ ಆಗಿ ಬಿಡುವುದು. ಆದ್ದರಿಂದ ನೆನಪಾರ್ಥದಲ್ಲಿ ತೋರಿಸುತ್ತಾರೆ ಶ್ರೀಕ್ರಷ್ಣ ಸರ್ಪದ ತಲೆಯ ಮೇಲೆ ನಾಟ್ಯವಾಡುತ್ತಿರುವುದನ್ನು.

ಸ್ಲೋಗನ್:
ಪಾಸ್ ವಿತ್ ಆನರ್ ಆಗಿ ಕಳೆದು ಹೋಗಿದ್ದನ್ನು ಪಾಸ್ ಮಾಡಿ ಮತ್ತು ಸದಾ ತಂದೆಯ ಜೊತೆಯಲ್ಲೇ ಇರಿ.