18.10.20    Avyakt Bapdada     Kannada Murli     07.04.86     Om Shanti     Madhuban


"ತಪಸ್ವಿ-ಮೂರ್ತಿ, ತ್ಯಾಗ ಮೂರ್ತಿ, ವಿಧಾತಾ ಆಗುವವರೇ ವಿಶ್ವ-ರಾಜ್ಯ ಅಧಿಕಾರಿ"


ಇಂದು ಆತ್ಮಿಕ ಜ್ಯೋತಿಯು ತನ್ನ ಆತ್ಮಿಕ ಪತಂಗಗಳನ್ನು ನೋಡುತ್ತಿದ್ದಾರೆ. ನಾಲ್ಕೂ ಕಡೆಯಲ್ಲಿನ ಆತ್ಮಿಕ ಪತಂಗಗಳೆಲ್ಲವೂ ಆತ್ಮಿಕ ಜ್ಯೋತಿಯೊಂದಿಗೆ ಮಿಲನವನ್ನಾಚರಿಸಲು ತಲುಪಿದ್ದಾರೆ. ಆತ್ಮಿಕ ಪತಂಗಗಳ ಈ ಪ್ರೀತಿಯು ಆತ್ಮಿಕ ಜ್ಯೋತಿಗೆ ಹಾಗೂ ಆತ್ಮಿಕ ಪತಂಗಗಳಿಗೇ ಗೊತ್ತಿದೆ. ಎಲ್ಲಾ ಮಕ್ಕಳ ಹೃದಯದ ಸ್ನೇಹವು ಆಕರ್ಷಣೆಯನ್ನು ಮಾಡುತ್ತಾ, ಎಲ್ಲರನ್ನೂ ಈ ಅಲೌಕಿಕ ಮೇಳದಲ್ಲಿ ಕರೆತಂದಿದೆ ಎನ್ನುವುದು ಬಾಪ್ದಾದಾರವರಿಗೆ ಗೊತ್ತಿದೆ. ಈ ಅಲೌಕಿಕ ಮೇಳವು ಅಲೌಕಿಕ ಮಕ್ಕಳಿಗೇ ಗೊತ್ತಿದೆ ಮತ್ತು ತಂದೆಯವರಿಗಷ್ಟೇ ಗೊತ್ತಿದೆ! ಪ್ರಪಂಚದವರಿಗಂತು ಈ ಮೇಳವು ಗುಪ್ತವಾಗಿಯೇ ಇದೆ! ಈ ಆತ್ಮಿಕ ಮೇಳದಲ್ಲಿ ನಾವು ಹೋಗುತ್ತಿದ್ದೇವೆ ಎಂದು ಯಾರಿಗಾದರೂ ಹೇಳುತ್ತೀರೆಂದರೆ, ಅದನ್ನು ಅವರೇನು ತಿಳಿಯುತ್ತಾರೆ!? ಈ ಮೇಳವಂತು ಸದಾ ಕಾಲಕ್ಕಾಗಿ ಸಂಪನ್ನರನ್ನಾಗಿ ಮಾಡುವಂತಹ ಮೇಳ, ಪರಮಾತ್ಮನೊಂದಿಗಿನ ಈ ಮಿಲನದ ಮೇಳವು ಸರ್ವ ಪ್ರಾಪ್ತಿ ಸ್ವರೂಪರನ್ನಾಗಿ ಮಾಡಿ ಬಿಡುತ್ತದೆ. ಬಾಪ್ದಾದಾರವರು ಇಂದು ಎಲ್ಲಾ ಮಕ್ಕಳ ಹೃದಯದ ಉಮ್ಮಂಗ-ಉತ್ಸಾಹವನ್ನು ನೋಡುತ್ತಿದ್ದಾರೆ. ಪ್ರತಿಯೊಬ್ಬರ ಮನಸ್ಸಿನಲ್ಲಿ ಸ್ನೇಹದ ಸಾಗರನ ಪ್ರಕಂಪನಗಳು ಪ್ರಕಂಪಿಸುತ್ತಿರುವುದನ್ನೂ ಸಹ ಬಾಪ್ದಾದಾರವರು ನೋಡುತ್ತಿದ್ದಾರೆ ಮತ್ತು ಇದೇ ಲಗನ್ ವಿಘ್ನ ವಿನಾಶಕರನ್ನಾಗಿ ಮಾಡುತ್ತಾ, ಮಧುಬನ ನಿವಾಸಿಯನ್ನಾಗಿ ಮಾಡಿ ಬಿಟ್ಟಿದೆ ಎನ್ನುವುದೂ ಸಹ ಗೊತ್ತಿದೆ. ಸ್ನೇಹದಲ್ಲಿ ಎಲ್ಲರ ಎಲ್ಲಾ ಮಾತುಗಳು ಸಮಾಪ್ತಿಯಾಗಿ ಬಿಟ್ಟಿದೆ. ಎವರೆಡಿಯ ರಿಹರ್ಸಲ್ ಮಾಡಿ ತೋರಿಸಲಾಯಿತು, ಎವರೆಡಿ ಆಗಿ ಬಿಟ್ಟಿದ್ದೀರಲ್ಲವೆ! ಈ ಮಧುರ ಡ್ರಾಮಾದ ಮಧುರ ಪಾತ್ರವನ್ನೂ ಸಹ ನೋಡುತ್ತಾ ಬಾಪ್ದಾದಾ ಹಾಗೂ ಬ್ರಾಹ್ಮಣ ಮಕ್ಕಳು ಹರ್ಷಿತರಾಗುತ್ತಿದ್ದಾರೆ. ಸ್ನೇಹದಲ್ಲಿ ಎಲ್ಲಾ ಮಾತುಗಳು ಅವಶ್ಯವಾಗಿ ಸಹಜವೆನಿಸುತ್ತದೆ ಮತ್ತು ಪ್ರಿಯವೆನಿಸುತ್ತದೆ. ಡ್ರಾಮಾದಲ್ಲಿ ಏನಾಯಿತೋ ವಾಹ್! ಡ್ರಾಮಾ ವಾಹ್! ಇದೇ ರೀತಿಯಲ್ಲಿ ಎಷ್ಟು ಬಾರಿ ಓಡೋಡಿಕೊಂಡು ಬಂದಿದ್ದೀರಿ!! ಟ್ರೈನ್ನಲ್ಲಿ ಬಂದಿದ್ದೀರಾ ಅಥವಾ ರೆಕ್ಕೆಗಳಿಂದ ಹಾರುತ್ತಾ ಬಂದಿದ್ದೀರಾ? ಎಲ್ಲಿ ಮನಸ್ಸಿರುತ್ತದೆಯೋ ಅಲ್ಲಿ ಅಸಂಭವವೂ ಸಂಭವವೇ ಆಗಿ ಬಿಡುತ್ತದೆ ಎಂದು ಇದಕ್ಕೇ ಹೇಳಲಾಗುತ್ತದೆ. ಸ್ನೇಹದ ಸ್ವರೂಪವನ್ನಂತು ತೋರಿಸಿದೀರಿ, ಇನ್ನುಮುಂದೆಯೂ ಏನು ಮಾಡಬೇಕು? ಈಗಿನವರೆಗೂ ಏನಾಗಿದೆಯೋ ಅದು ಶ್ರೇಷ್ಠವಾದುದೇ ಆಗಿದೆ ಮತ್ತು ಶ್ರೇಷ್ಠವಾಗಿಯೇ ಇರುತ್ತದೆ.

ಬಾಪ್ದಾದಾರವರು ಸಮಯದನುಸಾರ ವರ್ತಮಾನದಲ್ಲಿ ಸರ್ವ ಸ್ನೇಹಿ, ಸರ್ವ ಶ್ರೇಷ್ಠ ಮಕ್ಕಳಿಂದ ವಿಶೇಷವಾಗಿ ಇನ್ನೇನು ಬಯಸುತ್ತಾರೆ? ಹಾಗೆ ನೋಡಿದರೆ ಇಡೀ ಸೀಜನ್ನಿನ ಸಮಯ-ಸಮಯದಲ್ಲಿ ಸೂಚನೆಯನ್ನು ಕೊಟ್ಟಿದ್ದೇವೆ. ಆ ಸೂಚನೆಗಳನ್ನೀಗ ಪ್ರತ್ಯಕ್ಷ ಸ್ವರೂಪದಲ್ಲಿ ಕಾಣಿಸುವ ಸಮಯವು ಬರುತ್ತಿದೆ. ಸ್ನೇಹಿ ಆತ್ಮರಾಗಿದ್ದೀರಿ, ಸಹಯೋಗಿ ಆತ್ಮರಾಗಿದ್ದೀರಿ, ಸೇವಾಧಾರಿ ಆತ್ಮರೂ ಆಗಿದ್ದೀರಿ, ಈಗ ಮಹಾತಪಸ್ವಿ ಆತ್ಮರಾಗಿರಿ. ತಮ್ಮ ಸಂಘಟಿತ ಸ್ವರೂಪದ ತಪಸ್ಸಿನ ಆತ್ಮಿಕ ಜ್ವಾಲೆಯಿಂದ ಸರ್ವ ಆತ್ಮರನ್ನು ದುಃಖ-ಅಶಾಂತಿಯಿಂದ ಮುಕ್ತಗೊಳಿಸುವ ಮಹಾನ್ ಕಾರ್ಯವನ್ನೀಗ ಮಾಡುವ ಸಮಯವಾಗಿದೆ. ಹೇಗೆ ಒಂದು ಕಡೆಯಿಂದ ರಕ್ತದ ಕೋಡಿ ಹರಿಯುವ ಆಟವು ಹೆಚ್ಚಾಗುತ್ತಿದೆ, ಸರ್ವ ಆತ್ಮರು ತಾವಾತ್ಮರನ್ನೇ ಆಶ್ರಯವೆಂದು ಅನುಭವ ಮಾಡುತ್ತಿದ್ದಾರೆ, ಅಂತಹ ಸಮಯದಲ್ಲಿ ಆಶ್ರಯದಾತ ಆಗಿರುವವರೆಲ್ಲರೂ ಅನುಭೂತಿ ಮಾಡಿಸುವುದಕ್ಕಾಗಿ ನಿಮಿತ್ತರು, ಮಹಾತಪಸ್ವಿ ಆತ್ಮರಾಗಿದ್ದೀರಿ. ನಾಲ್ಕೂ ಕಡೆಗಳಲ್ಲಿಯ ಆತ್ಮರಿಗೆ ಈ ತಮ್ಮ ತಪಸ್ವಿ ಸ್ವರೂಪದ ಮೂಲಕ ಆತ್ಮಿಕ ಶಾಂತಿಯ ಅನುಭೂತಿಯನ್ನು ಮಾಡಿಸಬೇಕಾಗಿದೆ. ಇಡೀ ವಿಶ್ವದ ಆತ್ಮರು ಪ್ರಕೃತಿಯಿಂದ, ವಾಯುಮಂಡಲದಿಂದ, ಮನುಷ್ಯಾತ್ಮರಿಂದ, ತನ್ನ ಮನಸ್ಸಿನ ಬಲಹೀನತೆಗಳಿಂದಲೂ, ತನುವಿನಿಂದಲೂ ದುಃಖಿಯಾಗಿದ್ದಾರೆ. ಅಂತಹ ಆತ್ಮರಿಗೆ ಒಂದು ಸೆಕೆಂಡಿನಲ್ಲಿ ಸುಖ-ಶಾಂತಿ ಸ್ಥಿತಿಯ ಅನುಭವವನ್ನು ಮಾಡಿಸುತ್ತೀರೆಂದರೆ, ಅವರು ತಮ್ಮ ಮನಃಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಾರೆ. ವರ್ತಮಾನ ಸಮಯದಲ್ಲಿ ಸಂಘಟಿತ ರೂಪದಿಂದ ಜ್ವಾಲಾ ಸ್ವರೂಪರಾಗುವ ಅವಶ್ಯಕತೆಯಿದೆ. ಪ್ರತೀ ಸಮಯದಲ್ಲಿಯೂ ವಿಧಾತನ ಮಕ್ಕಳು ತಾವು ತಮ್ಮ ವಿಧಾತ ಸ್ವರೂಪದಲ್ಲಿ ಸ್ಥಿತರಾಗಿರುತ್ತಾ ಕೊಡುತ್ತಾ ಸಾಗಿರಿ. ಅಖಂಡ ಮಹಾನ್ ಪ್ರತಿಜ್ಞೆಯನ್ನು ತೆಗೆದುಕೊಳ್ಳಿ ಏಕೆಂದರೆ ರಾಯಲ್ ಭಿಕಾರಿಗಳಂತು ಬಹಳಷ್ಟಿದ್ದಾರೆ. ಕೇವಲ ಧನದ ಭಿಕಾರಿಗಳೇ ಭಿಕಾರಿಗಳಾಗಿರುವುದಲ್ಲ ಆದರೆ ಮನಸ್ಸಿನ ಭಿಕಾರಿಗಳಂತು ಅನೇಕ ಪ್ರಕಾರದಲ್ಲಿದ್ದಾರೆ. ಅಪ್ರಾಪ್ತ ಆತ್ಮರು ಪ್ರಾಪ್ತಿಯ ಒಂದು ಹನಿಯ ಬಾಯಾರಿಕೆಯಲ್ಲಿರುವವರು ಬಹಳಷ್ಟಿದ್ದಾರೆ. ಆದ್ದರಿಂದ ಈಗ ಸಂಘಟನೆಯಲ್ಲಿ ವಿಧಾತ ಸ್ವರೂಪದ ಪ್ರಕಂಪನಗಳನ್ನು ಹರಡಿಸಿರಿ. ಯಾರು ಖಜಾನೆಗಳನ್ನು ಜಮಾ ಮಾಡಿಕೊಂಡಿರುತ್ತಾರೆಯೋ ಅವರೆಷ್ಟು ಮಾಸ್ಟರ್ ವಿಧಾತಾ ಆಗಿರುತ್ತಾರೆಯೋ ಅಷ್ಟೇ ತುಂಬುತ್ತಾ ಇರುತ್ತದೆ. ಬಹಳಷ್ಟು ಸೂಚನೆಗಳನ್ನು ಕೇಳಿಸಿಕೊಂಡಿದ್ದೀರಿ, ಅದನ್ನೀಗ ಮಾಡುವ ಸಮಯವಾಗಿದೆ. ತಪಸ್ವಿ ಮೂರ್ತಿಯ ಅರ್ಥವೇ ಆಗಿದೆ ನಾಲ್ಕೂ ಕಡೆಗಳಲ್ಲಿ ತಪಸ್ಸಿನ ಮೂಲಕ ಶಾಂತಿಯ ಶಕ್ತಿಯ ಕಿರಣಗಳು ಹರಡುತ್ತಿರುವ ಅನುಭೂತಿಯಾಗುವುದು. ಕೇವಲ ಸ್ವಯಂಗಾಗಿ ನೆನಪಿನ ಸ್ವರೂಪರಾಗಿದ್ದು ಶಕ್ತಿ ತೆಗೆದುಕೊಳ್ಳುವ ಹಾಗೂ ಮಿಲನವನ್ನಾಚರಿಸುವುದು ಬೇರೆ ಮಾತು. ಆದರೆ ತಪಸ್ವಿ ಸ್ವರೂಪವೇನಿದೆ ಅದು ಅನ್ಯರಿಗೂ ಕೊಡುವ ಸ್ವರೂಪವಾಗಿದೆ. ಹೇಗೆ ಸೂರ್ಯನು ವಿಶ್ವಕ್ಕೆ ಬೆಳಕಿನ ಹಾಗೂ ಅನೇಕ ವಿನಾಶಿ ಪ್ರಾಪ್ತಿಗಳ ಅನುಭೂತಿಯನ್ನು ಮಾಡಿಸುತ್ತದೆ. ಹಾಗೆಯೇ ಮಹಾನ್ ತಪಸ್ವಿ ಸ್ವರೂಪದ ಮೂಲಕ ಪ್ರಾಪ್ತಿಯ ಕಿರಣಗಳ ಅನುಭೂತಿ ಮಾಡಿಸಿರಿ. ಇದಕ್ಕಾಗಿ ಮೊದಲು ಜಮಾದ ಖಾತೆಯನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ನೆನಪಿನಿಂದ ಅಥವಾ ಜ್ಞಾನದ ಮನನದಿಂದ ನನ್ನನ್ನು ಶ್ರೇಷ್ಠ ಮಾಡಿಕೊಂಡೆನು, ಮಾಯಾಜೀತ ವಿಜಯಿಯನ್ನಾಗಿ ಮಾಡಿಕೊಂಡೆನು ಎನ್ನುವುದಷ್ಟೇ ಅಲ್ಲ, ಮತ್ತು ಇದರಲ್ಲಿಯೇ ಖುಷಿಯಾಗಿ ಬಿಡಬಾರದು. ಆದರೆ ಇಡೀದಿನ ಸರ್ವಖಜಾನೆಗಳಲ್ಲಿ ಎಷ್ಟು ಆತ್ಮರಿಗೆ ವಿದಾತನಾದಿರಿ! ಎಲ್ಲಾ ಖಜಾನೆಗಳನ್ನು ಪ್ರತಿನಿತ್ಯವೂ ಸೇವೆಗಾಗಿ ಉಪಯೋಗಿಸುತ್ತಿದೀರಾ ಅಥವಾ ಜಮಾ ಆಗುತ್ತಿರುವುದನ್ನೇ ನೋಡುತ್ತಾ ಖುಷಿಯಾಗುತ್ತಿದ್ದೀರಾ! ಈಗ ಖುಷಿಯ ಖಜಾನೆ, ಶಾಂತಿಯ ಖಜಾನೆ, ಶಕ್ತಿಗಳ ಖಜಾನೆ, ಜ್ಞಾನದ ಖಜಾನೆ, ಗುಣಗಳ ಖಜಾನೆ, ಸಹಯೋಗ ಕೊಡುವ ಖಜಾನೆಯನ್ನೆಲ್ಲವನ್ನು ಎಷ್ಟು ಹಂಚಿದೆನು ಅರ್ಥಾತ್ ಎಷ್ಟು ವೃದ್ಧಿ ಮಾಡಿದೆನು ಎನ್ನುವ ಈ ಚಾರ್ಟನ್ನು ನೋಡಿಕೊಳ್ಳಿರಿ ಮತ್ತು ಈ ಚಾರ್ಟನ್ನು ಯಾರು ಇಡುತ್ತಾರೆಯೋ ಅವರು ಸ್ವತಹವಾಗಿಯೇ ಶ್ರೇಷ್ಠವಾಗಿ ಬಿಡುತ್ತಾರೆ. ಪರ-ಉಪಕಾರಿ ಆಗುವುದರಿಂದ ಸ್ವತಹವಾಗಿಯೇ ಸ್ವ-ಉಪಕಾರಿಯೂ ಆಗಿ ಬಿಡುತ್ತೀರಿ. ತಿಳಿಯಿತೆ - ಈಗ ಯಾವ ಚಾರ್ಟನ್ನಿಡಬೇಕು? ಈ ತಪಸ್ವಿ ಸ್ವರೂಪದ ಚಾರ್ಟ್ ವಿಶ್ವ ಕಲ್ಯಾಣಕಾರಿ ಆಗುವುದಾಗಿದೆ. ಹಾಗಾದರೆ ಎಷ್ಟು ಆತ್ಮರ ಕಲ್ಯಾಣವನ್ನು ಮಾಡಿದಿರಿ? ಅಥವಾ ಸಮಯವು ಸ್ವಕಲ್ಯಾಣದಲ್ಲಿಯೇ ಕಳೆದು ಹೋಗುತ್ತಿದೆಯೇ? ಸ್ವ ಕಲ್ಯಾಣವನ್ನು ಮಾಡಿಕೊಳ್ಳುವ ಸಮಯವಂತು ಬಹಳಷ್ಟು ಹೊರಟು ಹೋಯಿತು. ಈಗ ವಿದಾತನಾಗುವ ಸಮಯವು ಬಂದು ಬಿಟ್ಟಿದೆ ಆದ್ದರಿಂದ ಬಾಪ್ದಾದಾರವರು ಪುನಃ ಸಮಯದ ಸೂಚನೆಯನ್ನು ಕೊಡುತ್ತಿದ್ದಾರೆ. ಒಂದುವೇಳೆ ಈಗಿನವರೆಗೂ ವಿದಾತನಾಗುವ ಸ್ಥಿತಿಯ ಅನುಭೂತಿಯನ್ನು ಮಾಡುತ್ತಿಲ್ಲವೆಂದರೆ, ಅನೇಕ ಜನ್ಮಗಳ ರಾಜ್ಯಾಧಿಕಾರಿಯಾಗುವ ಪದಮಾಪದಮ ಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ವಿಶ್ವ ಮಹಾರಾಜನು ವಿಶ್ವದ ಮಾತಾಪಿತನಾಗಿರುತ್ತಾರೆ ಅಂದರೆ ವಿದಾತನಾಗಿದ್ದಾರೆ. ಈಗ ಆ ವಿದಾತಾ ಸ್ವರೂಪದ ಆ ಸಂಸ್ಕಾರವೇ ಅನೇಕ ಜನ್ಮಗಳ ಪ್ರಾಪ್ತಿಯನ್ನು ಮಾಡಿಸುತ್ತಿರುತ್ತದೆ. ಒಂದುವೇಳೆ ಈಗಲೂ ಯಾವುದೇ ರೂಪದಲ್ಲಿಯಾದರೂ ತೆಗೆದುಕೊಳ್ಳುವ ಸಂಸ್ಕಾರವು ಇರಬಹುದು - ಹೆಸರುವಾಸಿಯಾಗುವ ಇಚ್ಛೆ, ಸ್ಥಾನದ ಇಚ್ಛೆ ಅಥವಾ ಯಾವುದೇ ಪ್ರಕಾರದಲ್ಲಿ ತೆಗೆದುಕೊಳ್ಳುವಂತಹ ಸಂಸ್ಕಾರವು ತಮ್ಮನ್ನು ವಿಧಾತರನ್ನಾಗಿ ಮಾಡುವುದಿಲ್ಲ.

ತಪಸ್ಯಾ ಸ್ವರೂಪ ಎಂದರೆ ತೆಗೆದುಕೊಳ್ಳುವ ತ್ಯಾಗ ಮೂರ್ತಿ ಆಗುವುದಾಗಿದೆ. ಈ ಅಲ್ಪಕಾಲದ್ದನ್ನು ತೆಗೆದುಕೊಳ್ಳುವ ತ್ಯಾಗಮೂರ್ತಿಯು ತಪಸ್ವಿ ಮೂರ್ತಿಯಾಗುವುದಿಲ್ಲ. ಆದ್ದರಿಂದ ತಪಸ್ವಿಮೂರ್ತಿ ಅಂದರೆ ಹದ್ದಿನ (ಅಲ್ಪಕಾಲದ) ಇಚ್ಛಾ ಮಾತ್ರಂ ಅವಿದ್ಯಾ ರೂಪವಾಗಿದೆ. ಯಾರು ತೆಗೆದುಕೊಳ್ಳುವ ಸಂಕಲ್ಪವನ್ನು ಮಾಡುತ್ತಾರೆಯೋ, ಅವರು ಅಲ್ಪಕಾಲಕ್ಕಾಗಿ ತೆಗೆದುಕೊಳ್ಳುತ್ತಾರೆ ಆದರೆ ಸದಾಕಾಲಕ್ಕಾಗಿ ಕಳೆದುಕೊಳ್ಳುತ್ತಾರೆ. ಆದ್ದರಿಂದ ಬಾಪ್ದಾದಾರವರು ಮಾತಿನ ಪ್ರತಿನಲ್ಲಿಯೂ ಮತ್ತೆ-ಮತ್ತೆ ಇದೇ ಸೂಚನೆ ಕೊಡುತ್ತಿದ್ದಾರೆ ತಪಸ್ವಿ ರೂಪದಲ್ಲಿ ವಿಶೇಷವಾಗಿ ಇದೇ ಅಲ್ಪಕಾಲದ ಇಚ್ಛೆಗಳು ವಿಘ್ನ ರೂಪವಾಗಿದೆ. ಆದ್ದರಿಂದ ಈಗ ವಿಶೇಷ ತಪಸ್ಸಿನ ಅಭ್ಯಾಸ ಮಾಡಬೇಕಾಗಿದೆ. ಸಮಾನರಾಗುವ (ಬ್ರಹ್ಮಾ ತಂದೆಯ ಸಮಾನ ತಪಸ್ಯಾ ಸ್ವರೂಪ) ಈ ಪ್ರಮಾಣವನ್ನು ಕೊಡಬೇಕಾಗಿದೆ. ಸ್ನೇಹದ ಪ್ರಮಾಣವನ್ನು ಕೊಟ್ಟಿದ್ದೀರಿ, ಇದಂತು ಖುಷಿಯ ಮಾತಾಗಿದೆ. ಈಗ ತಪಸ್ವಿ ಮೂರ್ತಿಯಾಗುವ ಪ್ರಮಾಣವನ್ನು ಕೊಡಿ. ತಿಳಿಯಿತೆ! ವಿವಿಧ ಸಂಸ್ಕಾರಗಳಿದ್ದರೂ ವಿಧಾತ ಸ್ವರೂಪದ ಸಂಸ್ಕಾರವು ಅನ್ಯ ಸಂಸ್ಕಾರಗಳನ್ನು ಅದುಮಿಡುತ್ತದೆ. ಅದಕ್ಕಾಗಿಯೇ ಈಗ ಈ ಸಂಸ್ಕಾರವನ್ನು ಇಮರ್ಜ್ ಮಾಡಿಕೊಳ್ಳಿರಿ. ತಿಳಿಯಿತೆ! ಹೇಗೆ ಓಡೋಡಿಕೊಂಡು ಬಂದು ಮಧುಬನದಲ್ಲಿ ತಲುಪುತ್ತೀರಿ, ಹಾಗೆಯೇ ತಪಸ್ವಿಸ್ಥಿತಿಯ ಗುರಿಯೆಡೆಗೆ ಓಡಬೇಕು. ಭಲೆ ಬಂದಿದ್ದೀರಿ, ಒಳ್ಳೆಯದು. ಎಲ್ಲರೂ ಹೀಗೆ ಓಡಿದ್ದಾರೆ ಹೇಗೆಂದರೆ ಈಗಲೇ ವಿನಾಶವಾಗುತ್ತದೆ. ಏನೆಲ್ಲಾ ಮಾಡಿದಿರಿ, ಏನೆಲ್ಲಾ ಆಯಿತೋ ಅದು ಬಾಪ್ದಾದಾರವರಿಗೆ ಪ್ರಿಯವಾಗಿದೆ ಏಕೆಂದರೆ ಮಕ್ಕಳು ಪ್ರಿಯರಾಗಿದ್ದಾರೆ. ಪ್ರತಿಯೊಬ್ಬರೂ ಇದನ್ನೇ ಯೋಚಿಸಿದ್ದಾರೆ - ನಾವೀಗ ಹೋಗುತ್ತಿದ್ದೇವೆ (ತಂದೆಯ ಬಳಿ) ಆದರೆ ಅನ್ಯರೂ ಬರುತ್ತಿದ್ದಾರೆ ಎನ್ನುವುದನ್ನೇ ಯೋಚಿಸಲಿಲ್ಲ. ಇಲ್ಲಂತು ಸತ್ಯ ಕುಂಭಮೇಳವಾಯಿತು. ಎಲ್ಲರೂ ಅಂತಿಮ ಮಿಲನ, ಅಂತಿಮ ಆಹುತಿಯನ್ನು ಕೊಡಲು ಬಂದಿದ್ದಾರೆ. ಇದನ್ನು ಯೋಚಿಸಿದಿರಾ - ಇಷ್ಟೆಲ್ಲಾ ಹೋಗುತ್ತಿದ್ದಾರೆಂದರೆ ಮಿಲನದ ವಿಧಿಯು ಹೇಗಾಗಬಹುದು! ಈ ವಿಚಾರದಿಂದಂತು ಎಲ್ಲಾ ಮಕ್ಕಳು ದೂರವಾಗಿ ಬಿಟ್ಟರು! ಸ್ಥಾನವನ್ನೂ ನೋಡಲಿಲ್ಲ, ರಿಸರ್ವೇಷನ್ನ್ನು ನೋಡಲಿಲ್ಲ. ನಮಗೆ ರಿಸರ್ವೇಷನ್ ಸಿಗಲಿಲ್ಲ ಎಂದು ಇನ್ನೆಂದಿಗೂ ಈ ಕಾರಣವನ್ನೇ ಕೊಡಲು ಸಾಧ್ಯವಿಲ್ಲ. ಡ್ರಾಮಾದಲ್ಲಿ ಈ ರಿಹರ್ಸಲ್ ಆಯಿತು. ಸಂಗಮಯುಗದಲ್ಲಿ ತಮ್ಮ ರಾಜ್ಯವಿಲ್ಲ, ಸ್ವರಾಜ್ಯವಿದೆ ಆದರೆ ಧರಣಿಯ ಮೇಲೆ ರಾಜ್ಯವಂತು ಇಲ್ಲ, ಬಾಪ್ದಾದಾರವರಿಗೂ ತನ್ನ ರಥವಿಲ್ಲ. ಇದು ಪರರ ರಾಜ್ಯ, ಪರರ ತನುವಾಗಿದೆ ಆದ್ದರಿಂದ ಸಮಯದನುಸಾರ ಹೊಸ ವಿಧಿಯನ್ನಾರಂಭಿಲು ಈ ಸೀಜನ್ ಆಯಿತು. ಇಲ್ಲಂತು ಮಕ್ಕಳು ನೀರಿಗಾಗಿಯೂ ಯೋಚಿಸುತ್ತಾ ಇರುತ್ತೀರಿ, ಅಲ್ಲಂತು (ಸ್ವರ್ಗದಲ್ಲಿ) ಜಲಪಾತದಲ್ಲಿ ಜಳಕ ಮಾಡುತ್ತೀರಿ. ಯಾರೆಲ್ಲಾ ಎಷ್ಟೇ ಸಂಖ್ಯೆಯಲ್ಲಿ ಬಂದಿರಬಹುದು, ಬಾಪ್ದಾದಾರವರು ಸ್ನೇಹದ ಪ್ರತ್ಯುತ್ತರದಲ್ಲಿ ಸ್ನೇಹದಿಂದ ಸ್ವಾಗತ ಬಯಸುತ್ತಾರೆ.

ಈಗ ಈ ಸಮಯವನ್ನು ಕೊಡಲಾಗಿದೆ - ವಿಶೇಷವಾಗಿ ಅಂತಿಮ ಪರೀಕ್ಷೆಯ ಪೂರ್ವ ಸಿದ್ಧತೆ ಮಾಡಿಕೊಳ್ಳುವುದಕ್ಕಾಗಿ. ಅಂತಿಮ ಪರೀಕ್ಷೆಗೆ ಮುಂಚೆ ಸಮಯ ಕೊಡಲಾಗುತ್ತದೆ, ರಜೆ ಕೊಡುತ್ತಾರಲ್ಲವೆ. ಅದೇರೀತಿ ಬಾಪ್ದಾದಾರವರೂ ಸಹ ಈ ಸಮಯವನ್ನು ಅನೇಕ ರಹಸ್ಯಗಳ ಕಾರಣದಿಂದ ಕೊಡುತ್ತಿದ್ದಾರೆ. ಅದರಲ್ಲಿ ಕೆಲವು ರಹಸ್ಯಗಳು ಗುಪ್ತವಾಗಿವೆ, ಕೆಲವು ಪ್ರತ್ಯಕ್ಷ ರಹಸ್ಯಗಳಿವೆ. ಆದರೆ ಪ್ರತಿಯೊಬ್ಬರೂ ವಿಶೇಷವಾಗಿ ಇಷ್ಟು ಗಮನವನ್ನಂತು ಇಡಬೇಕು - ಸದಾ ಬಿಂದುವನ್ನಿಡುವ ಗಮನ. ಅಂದರೆ ಕಳೆದುದನ್ನು ಮರೆತು ಬಿಂದುವನ್ನಿಡುವುದು ಮತ್ತು ಬಿಂದುಸ್ಥಿತಿಯಲ್ಲಿ ಸ್ಥಿತರಾಗಿದ್ದು ಬಿಂದು ಮತ್ತು ಸಿಂಧು - ಇವೆರಡರ ಬಗ್ಗೆ ವಿಶೇಷವಾಗಿ ಸ್ಮೃತಿಯನ್ನಿಡುತ್ತಾ ಶ್ರೇಷ್ಠ ಸರ್ಟಿಫಿಕೇಟ್ ತೆಗೆದುಕೊಳ್ಳಬೇಕಾಗಿದೆ. ಸದಾಕಾಲ ಶ್ರೇಷ್ಠ ಸಂಕಲ್ಪದ ಸಫಲತೆಯಿಂದ ಮುಂದುವರೆಯುತ್ತಿರಿ. ಅಂದಾಗ ಸರ್ವ ಮಕ್ಕಳ ಪ್ರತಿ ವರದಾತನ ವರದಾನ - ಬಿಂದುವಾಗಿರಿ, ಸಿಂಧುವಾಗಿರಿ ಎನ್ನುವುದೇ ಆಗಿದೆ. ವರದಾನವನ್ನು ತೆಗೆದುಕೊಳ್ಳುವುದಕ್ಕಾಗಿಯೇ ಓಡಿಕೊಂಡು ಬಂದಿದ್ದೀರಲ್ಲವೆ. ಸದಾ ವರದಾತನ ಇದೇ ವರದಾನವನ್ನು ಸ್ಮೃತಿಯಲ್ಲಿ ಇಟ್ಟುಕೊಳ್ಳಬೇಕು. ಒಳ್ಳೆಯದು!

ನಾಲ್ಕೂ ಕಡೆಯಲ್ಲಿರುವ ಸರ್ವ ಸ್ನೇಹಿ, ಸಹಯೋಗಿ ಮಕ್ಕಳಿಗೆ, ಸದಾ ತಂದೆಯ ಆಜ್ಞೆಯನ್ನು ಪಾಲನೆ ಮಾಡುವಂತಹ ಆಜ್ಞಾಕಾರಿ ಮಕ್ಕಳಿಗೆ, ಸದಾ ವಿಶಾಲ ಹೃದಯದಿಂದ ಸರ್ವರಿಗೂ ಸರ್ವ ಖಜಾನೆಗಳನ್ನು ಹಂಚುವಂತಹ ಮಹಾನ್ ಪುಣ್ಯಾತ್ಮರಿಗೆ, ಸದಾ ತಂದೆಯ ಸಮಾನರು ಆಗುವಂತಹ ಉಮಂಗ-ಉತ್ಸಾಹದಿಂದ ಹಾರುವ ಕಲೆಯಲ್ಲಿ ಹಾರುವಂತಹ ಮಕ್ಕಳಿಗೆ, ವಿದಾತ-ವರದಾತ ಸರ್ವ ಖಜಾನೆಗಳ ಸಿಂಧು ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಅವ್ಯಕ್ತ-ಬಾಪ್ದಾದಾರವರೊಂದಿಗೆ ಪಾರ್ಟಿಗಳ ವಾರ್ತಾಲಾಪ

1. ತಮ್ಮನ್ನು ಪದಮಾಪದಮ ಭಾಗ್ಯಶಾಲಿ ಎಂದು ಅನುಭವ ಮಾಡುತ್ತೀರಾ! ಏಕೆಂದರೆ ಕೊಡುವಂತಹ ತಂದೆಯು ಇಷ್ಟೂ ಕೊಡುತ್ತಾರೆ, ಒಂದು ಜನ್ಮದಲ್ಲಂತು ಖಂಡಿತ ಭಾಗ್ಯಶಾಲಿ ಆಗುತ್ತೀರಿ. ಆದರೆ ಅದು ಅನೇಕ ಜನ್ಮಗಳವರೆಗೆ ಅವಿನಾಶಿಯಾಗಿ ನಡೆಯುತ್ತಿರುತ್ತದೆ. ಅಂತಹ ಅವಿನಾಶಿ ಭಾಗ್ಯವನ್ನೆಂದಿಗೂ ಸ್ವಪ್ನದಲ್ಲಿಯೂ ಯೋಚಿಸಿರಲಿಲ್ಲ! ಇದು ಅಸಂಭವ ಎಂದು ಅನುಭವ ಮಾಡುತ್ತಿದ್ದಿರಲ್ಲವೆ? ಆದರೆ ಇಂದು ಸಂಭವವಾಯಿತು. ಅಂದಮೇಲೆ ನಾವು ಇಂತಹ ಶ್ರೇಷ್ಠ ಆತ್ಮರಾಗಿದ್ದೇವೆ ಎಂಬ ಖುಷಿಯಿರುತ್ತದೆಯೇ? ಯಾವ ಸಮಯದಲ್ಲಿ ಯಾವುದೇ ಪರಿಸ್ಥಿತಿಯಲ್ಲಿಯೂ ಖುಷಿಯು ಮಾಯವಾಗುವುದಿಲ್ಲವೇ! ಏಕೆಂದರೆ ತಂದೆಯ ಮೂಲಕ ಖುಷಿಯ ಖಜಾನೆಯಂತು ಪ್ರತಿನಿತ್ಯವೂ ಸಿಗುತ್ತಿರುತ್ತದೆ, ಯಾವ ವಸ್ತುವು ನಿತ್ಯವೂ ಸಿಗುತ್ತಿರುತ್ತದೆಯೋ ಅದು ಹೆಚ್ಚಾಗುತ್ತದೆಯಲ್ಲವೆ. ಯಾವುದೇ ಸಮಯದಲ್ಲಿ ಖುಷಿಯು ಕಡಿಮೆಯಾಗಲು ಸಾಧ್ಯವೇ ಇಲ್ಲ ಏಕೆಂದರೆ ಆನಂದ ಸಾಗರನ ಮೂಲಕ ಸಿಗುತ್ತಲೇ ಇರುತ್ತದೆ, ಅದು ಅಕೂಟವಾಗಿದೆ. ಯಾವುದೇ ಸಮಯದಲ್ಲಿ ಯಾವುದೇ ಮಾತಿನಲ್ಲಿ ಚಿಂತೆಯಲ್ಲಿ ಇರಬಾರದು, ಉದಾ: ಆಸ್ತಿಯು ಏನಾಗುತ್ತದೆಯೋ, ಪರಿವಾರಕ್ಕೆ ಏನಾಗುತ್ತದೆಯೋ? ಈ ಚಿಂತೆಯೂ ಬೇಡ, ನಿಶ್ಚಿಂತರಾಗಿರಿ! ಹಳೆಯ ಪ್ರಪಂಚವೇನಾಗುತ್ತದೆಯೋ! ಅದಂತು ಪರಿವರ್ತನೆಯೇ ಆಗುತ್ತದೆಯಲ್ಲವೆ. ಹಳೆಯ ಪ್ರಪಂಚದಲ್ಲಿ ತಾವೆಷ್ಟಾದರೂ ಶ್ರೇಷ್ಠರಾಗಿರಬಹುದು ಆದರೆ ಅದೆಲ್ಲವೂ ಹಳೆಯದೇ ಆಗಿದೆ ಆದ್ದರಿಂದ ನಿಶ್ಚಿಂತವಾಗಿ ಬಿಟ್ಟಿರಿ. ಇಂದು ಇದ್ದೇವೆ ನಾಳೆ ಇರುತ್ತೇವೆಯೋ, ಇಲ್ಲವೋ ಎನ್ನುವ ಚಿಂತೆಯೂ ಬೇಡ, ಏನಾಗುತ್ತದೆಯೋ ಅದು ಒಳ್ಳೆಯದೇ ಆಗುತ್ತದೆ. ಬ್ರಾಹ್ಮಣರಿಗಂತು ಎಲ್ಲವೂ ಒಳ್ಳೆಯದೇ ಆಗುತ್ತದೆ, ಸ್ವಲ್ಪವೂ ಕೆಟ್ಟದಿರುವುದಿಲ್ಲ. ತಾವುಗಳಂತು ಮೊದಲೂ ರಾಜರಾಗಿದ್ದಿರಿ, ಈಗಲೂ ರಾಜರು, ಭವಿಷ್ಯದಲ್ಲಿಯೂ ರಾಜರು. ಯಾವಾಗ ಸದಾಕಾಲದಲ್ಲಿ ರಾಜರಾಗಿ ಬಿಟ್ಟಿರಿ ಅಂದರೆ ನಿಶ್ಚಿಂತ ಚಕ್ರವರ್ತಿ. ಅಂತಹ ರಾಜರನ್ನೆಂದಿಗೂ ಕಸಿದುಕೊಳ್ಳಲೂ ಸಾಧ್ಯವಿಲ್ಲ, ರಾಜ್ಯವನ್ನು ಯಾವುದೇ ಬಂದೂಕಿನಿಂದಲೂ ಉಡಾಯಿಸಲು ಸಾಧ್ಯವಿಲ್ಲ. ತಮ್ಮಲ್ಲಿ ಸದಾ ಇದೇ ಖುಷಿಯಿರಲಿ ಮತ್ತು ಅದನ್ನು ಅನ್ಯರಿಗೂ ಕೊಡುತ್ತಿರಿ. ಅನ್ಯರನ್ನೂ ನಿಶ್ಚಿಂತ ಚಕ್ರವರ್ತಿಯನ್ನಾಗಿ ಮಾಡಿರಿ. ಒಳ್ಳೆಯದು!

2. ತಮ್ಮನ್ನು ಸದಾ ತಂದೆಯ ನೆನಪಿನ ಛತ್ರಛಾಯೆಯಲ್ಲಿರುವ ಶ್ರೇಷ್ಠ ಆತ್ಮರೆಂದು ಅನುಭವ ಮಾಡುತ್ತೀರಾ? ಈ ನೆನಪಿನ ಛತ್ರಛಾಯೆಯು ಸರ್ವ ವಿಘ್ನಗಳಿಂದ ಸುರಕ್ಷಿತವಾಗಿಡುತ್ತದೆ. ಛತ್ರಛಾಯೆಯಲ್ಲಿ ಇರುವವರ ಬಳಿ ಯಾವುದೇ ಪ್ರಕಾರದ ವಿಘ್ನವೂ ಸಹ ಬರಲು ಸಾಧ್ಯವಿಲ್ಲ. ಛತ್ರಛಾಯೆಯಲ್ಲಿ ಇರುವವರು ಅವಶ್ಯವಾಗಿ ನಿಶ್ಚಿಂತ ವಿಜಯಿಯಾಗಿರುತ್ತಾರೆ. ಅಂದಮೇಲೆ ಹೀಗಾಗಿದ್ದೀರಾ? ಒಂದುವೇಳೆ ಈ ಛತ್ರಛಾಯೆಯಿಂದ ಸಂಕಲ್ಪವೆಂಬ ಕಾಲವನ್ನೂ ಸಹ ತೆಗೆಯುತ್ತೀರೆಂದರೆ ಮಾಯೆಯು ಯುದ್ಧ ಮಾಡಿ ಬಿಡುತ್ತದೆ. ಯಾವುದೇ ಪ್ರಕಾರದ ಪರಿಸ್ಥಿತಿಯೇ ಬರಲಿ, ಛತ್ರಛಾಯೆಯಯಲ್ಲಿ ಇರುವವರಿಗೆ ಅತಿ ಕಷ್ಟದ ಮಾತೂ ಸಹ ಸಹಜವಾಗಿಬಿಡುತ್ತದೆ. ಬೆಟ್ಟದಂತಹ ಮಾತುಗಳೂ ಸಹ ಸಾಸಿವೆಯ ಸಮಾನವಾಗಿ ಅನುಭವವಾಗುತ್ತದೆ - ಛತ್ರಛಾಯೆಯ ಚಮತ್ಕಾರವು ಇಂತಹದ್ದಾಗಿದೆ. ಯಾವಾಗ ಇಂತಹ ಛತ್ರಛಾಯೆಯು ಸಿಗುತ್ತದೆಯೋ ಆಗೇನು ಮಾಡಬೇಕು! ಭಲೆ ಅಲ್ಪಕಾಲದ ಯಾವುದೇ ಆಕರ್ಷಣೆಯೇ ಆಕರ್ಷಿಸಬಹುದು ಆದರೆ ಹೊರಗೆ ಹೋಗುತ್ತೀರೆಂದರೆ ಸಮಾಪ್ತಿ. ಅಲ್ಪಕಾಲದ ಆಕರ್ಷಣೆಯನ್ನೂ ತಿಳಿದುಕೊಂಡಿದ್ದೀರಿ ಅಂದಮೇಲೆ ಇಂತಹ ಆಕರ್ಷಣೆಯಿಂದ ಸದಾ ದೂರವಿರಿ. ಅಲ್ಪಕಾಲದ ಪ್ರಾಪ್ತಿಯಂತು ಈ ಒಂದು ಜನ್ಮದಲ್ಲಿಯೇ ಸಮಾಪ್ತಿಯಾಗಿ ಬಿಡುತ್ತದೆ. ಬೇಹದ್ದಿನ ಪ್ರಾಪ್ತಿಯು ಸದಾಕಾಲವೂ ಜೊತೆಯಿರುತ್ತದೆ ಅಂದಮೇಲೆ ಬೇಹದ್ದಿನ ಪ್ರಾಪ್ತಿಯನ್ನು ಮಾಡಿಕೊಳ್ಳುವವರು ಅಂದರೆ ಛತ್ರಛಾಯೆಯಲ್ಲಿರುವ ವಿಶೇಷ ಆತ್ಮರಾಗಿದ್ದೀರಿ, ಸಾಧಾರಣರಲ್ಲ - ಈ ಸ್ಮೃತಿಯು ತಮ್ಮನ್ನು ಸದಾಕಾಲದ ಶಕ್ತಿಶಾಲಿಗಳನ್ನಾಗಿ ಮಾಡಿ ಬಿಡುತ್ತದೆ.

ಯಾರು ಅಗಲಿ ಮರಳಿ ಸಿಕ್ಕಿರುವ ಮುದ್ದಾದ ಮಕ್ಕಳಾಗಿರುತ್ತಾರೆಯೋ ಅವರು ಸದಾ ಛತ್ರಛಾಯೆಯಲ್ಲಿ ಇರುತ್ತಾರೆ. ನೆನಪಿನಲ್ಲಿರುವುದೇ ಛತ್ರಛಾಯೆಯಲ್ಲಿ ಇರುವುದಾಗಿದೆ. ಈ ಛತ್ರಛಾಯೆಯಿಂದ ಸಂಕಲ್ಪವೆಂಬ ಕಾಲು ಹೊರಗೆ ಹೋಯಿತೆಂದರೆ ಮಾಯೆಯು ಬಂದು ಬಿಡುತ್ತದೆ. ಈ ಛತ್ರಛಾಯೆಯು ತಮ್ಮಮುಂದೆ ಮಾಯೆಯನ್ನು ಬರಲು ಬಿಡುವುದಿಲ್ಲ. ಛತ್ರಛಾಯೆಯಲ್ಲಿ ಬರಲು ಮಾಯೆಗೆ ಶಕ್ತಿಯೇ ಇಲ್ಲ. ಈ ರೀತಿಯಿರುವವರು ಸದಾ ಮಾಯೆಯ ಮೇಲೆ ವಿಜಯಿಗಳಾಗುತ್ತಾರೆ. ತಂದೆಯ ಮಗುವಾಗುವುದು ಅಂದರೆ ಛತ್ರಛಾಯೆಯಲ್ಲಿ ಇರುವುದಾಗಿದೆ. ಇದೂ ಸಹ ತಂದೆಯ ಪ್ರೀತಿಯೇ ಆಗಿದೆ, ಅದು ಮಕ್ಕಳನ್ನು ಸದಾ ಛತ್ರಛಾಯೆಯೊಳಗೆ ಇರುವಂತೆ ಮಾಡುತ್ತದೆ. ಅಂದಮೇಲೆ ವಿಶೇಷ ಇದೇ ವರದಾನವನ್ನು ನೆನಪಿಟ್ಟುಕೊಳ್ಳಿ - ಮುದ್ದಾದ ಮಗುವಾಗಿ ಬಿಟ್ಟೆನು, ಛತ್ರಛಾಯೆ ಸಿಕ್ಕಿ ಬಿಟ್ಟಿತು - ಈ ವರದಾನವು ಸದಾಕಾಲಕ್ಕಾಗಿ ಮುಂದುವರೆಸುತ್ತಿರುತ್ತದೆ.

ವಿದಾಯಿಯ (ಬೀಳ್ಕೊಡುಗೆಯ) ಸಮಯದಲ್ಲಿ

ಎಲ್ಲರೂ ಜಾಗರಣೆ ಮಾಡಿದಿರಾ! ತಮ್ಮ ಭಕ್ತರು ಜಾಗರಣೆ ಮಾಡುತ್ತಾರೆಂದರೆ, ಭಕ್ತರಿಗೆ ಕಲಿಸುವವರಂತು ಇಷ್ಟ ದೇವನೇ ಆಗಿರುತ್ತಾರೆ. ಯಾವಾಗ ಇಲ್ಲಿ ಇಷ್ಟ ದೇವನು ಜಾಗರಣೆ ಮಾಡುತ್ತಾರೆಯೋ, ಅದನ್ನೇ ಭಕ್ತರೂ ಮಾಡಲಿ. ಹಾಗಾದರೆ ಎಲ್ಲರೂ ಜಾಗರಣೆ ಮಾಡಿದಿರಾ ಅರ್ಥಾತ್ ತಮ್ಮ ಖಾತೆಯಲ್ಲಿ ಸಂಪಾದನೆಯನ್ನು ಜಮಾ ಮಾಡಿಕೊಂಡಿದಿರಾ. ಹಾಗಾದರೆ ಇವತ್ತಿನ ರಾತ್ರಿಯು ಸಂಪಾದನೆಯ ಸೀಜನ್ನಿನ ರಾತ್ರಿಯಾಗಿ ಬಿಟ್ಟಿತು. ಹೇಗೆ ಸಂಪಾದನೆ ಮಾಡಿಕೊಳ್ಳುವ ಸೀಜನ್ ಇರುತ್ತದೆಯೋ ಆಗ ಜಾಗೃತರಾಗಿಯೇ ಇರಬೇಕಾಗುತ್ತದೆ. ಹಾಗೆಯೇ ಇದು ಸಂಪಾದನೆಯ ಸೀಜನ್ ಆಗಿದೆ, ಆದ್ದರಿಂದ ಜಾಗೃತ ಅರ್ಥಾತ್ ಸಂಪಾದನೆ ಮಾಡಿಕೊಳ್ಳುವುದಾಯಿತು. ಪ್ರತಿಯೊಬ್ಬರೂ ತಮ್ಮ-ತಮ್ಮ ಯಥಾ ಶಕ್ತಿ ಜಮಾ ಮಾಡಿಕೊಂಡಿದ್ದೀರಿ ಮತ್ತು ಜಮಾ ಮಾಡಿಕೊಂಡಿರುವವರೇ ಮಹಾದಾನಿಯಾಗಿ ಅನ್ಯರಿಗೂ ಕೊಡುತ್ತಾ ಇರುತ್ತಾರೆ ಮತ್ತು ಅದನ್ನು ಅನೇಕ ಜನ್ಮಗಳವರೆಗೆ ಅನುಭವಿಸುತ್ತಾ ಇರುತ್ತಾರೆ. ಈಗ ಎಲ್ಲಾ ಮಕ್ಕಳಿಗೂ ಪರಮಾತ್ಮನ ಗೋಲ್ಡನ್ ಚಾನ್ಸ್ನ ಗೋಲ್ಡನ್ ಮಾರ್ನಿಂಗ್ ತಿಳಿಸುತ್ತಿದ್ದೇವೆ. ಹಾಗೆ ನೋಡಿದರೆ ಇದು ಗೋಲ್ಡನ್ಗಿಂತ ಡೈಮಂಡ್ ಮಾರ್ನಿಂಗ್ ಆಗಿದೆ. ಸ್ವಯಂ ತಾವೂ ಡೈಮಂಡ್ ಆಗಿದ್ದೀರಿ ಮತ್ತು ಮಾರ್ನಿಂಗ್ ಸಹ ಡೈಮಂಡ್(ಸಂಗಮಯುಗ) ಆಗಿದೆ ಮತ್ತು (ಡೈಮಂಡ್) ವಜ್ರಗಳನ್ನೇ ಜಮಾ ಮಾಡುತ್ತೀರಿ, ಅಂದಾಗ ಎಲ್ಲವೂ ಡೈಮಂಡ್ ಆಗಿದೆ ಆದ್ದರಿಂದ ಡೈಮಂಡ್ ಮಾರ್ನಿಂಗ್ ತಿಳಿಸುತ್ತಿದ್ದೇವೆ. ಒಳ್ಳೆಯದು.

ವರದಾನ:  
ಸಂಕಲ್ಪವನ್ನೂ ಪರಿಶೀಲನೆ ಮಾಡುತ್ತಾ ವ್ಯರ್ಥದ ಖಾತೆಯನ್ನು ಸಮಾಪ್ತಿಗೊಳಿಸುವ ಶ್ರೇಷ್ಠ ಸೇವಾಧಾರಿ ಭವ.

ಶ್ರೇಷ್ಠ ಸೇವಾಧಾರಿಯು ಅವರೇ ಆಗಿದ್ದಾರೆ, ಯಾರ ಪ್ರತೀ ಸಂಕಲ್ಪವು ಶಕ್ತಿಶಾಲಿ ಆಗಿರುತ್ತದೆ. ಒಂದು ಸಂಕಲ್ಪವೂ ಸಹ ಎಲ್ಲಿಯೂ ವ್ಯರ್ಥವಾಗಿ ಹೋಗಬಾರದು ಏಕೆಂದರೆ ಸೇವಾಧಾರಿ ಅಂದರೆ ವಿಶ್ವದ ರಂಗಮಂಚದ ಮೇಲೆ ಪಾತ್ರವನ್ನಭಿನಯಿಸುವವರು. ತಮ್ಮನ್ನು ಇಡೀ ವಿಶ್ವವು ಕಾಪಿ ಮಾಡುತ್ತದೆ, ತಾವೇನಾದರೂ ಒಂದು ಸಂಕಲ್ಪವನ್ನೇ ವ್ಯರ್ಥ ಮಾಡಿದಿರೆಂದರೆ, ಅದು ತಮ್ಮ ಕಡೆಯಿಂದಷ್ಟೇ ವ್ಯರ್ಥವಾಗಲಿಲ್ಲ ಆದರೆ ಅನೇಕರ ನಿಮಿತ್ತರೂ ಆಗಿ ಬಿಟ್ಟಿರಿ. ಆದ್ದರಿಂದ ಈಗ ವ್ಯರ್ಥದ ಖಾತೆಯನ್ನು ಸಮಾಪ್ತಿಗೊಳಿಸುತ್ತಾ ಶ್ರೇಷ್ಠ ಸೇವಾಧಾರಿ ಆಗಿರಿ.

ಸ್ಲೋಗನ್:
ಸೇವೆಯ ವಾಯುಮಂಡಲದ ಜೊತೆಗೆ ಬೇಹದ್ದಿನ ವೈರಾಗ್ಯ ವೃತ್ತಿಯ ವಾಯುಮಂಡಲವನ್ನಾಗಿ ತಯಾರು ಮಾಡಿರಿ.

ಸೂಚನೆ: ಇಂದು ತಿಂಗಳಿನ ಮೂರನೇ ರವಿವಾರವಾಗಿದೆ, ಎಲ್ಲಾ ರಾಜಯೋಗಿ ತಪಸ್ವಿ ಸಹೋದರ-ಸಹೋದರಿಯರು ಸಂಜೆ ಘಂಟೆ 6.30ರಿಂದ 7.30 ಯವರೆಗೆ, ಯೋಗಾಭ್ಯಾಸದಲ್ಲಿ ವಿಶೇಷವಾಗಿ ಮಾಸ್ಟರ್ ಸರ್ವಶಕ್ತಿವಂತನ ಶಕ್ತಿಶಾಲಿ ಸ್ವರೂಪದಲ್ಲಿ ಸ್ಥಿತರಾಗಿದ್ದು, ಪ್ರಕೃತಿಯ ಸಹಿತ ಸರ್ವಾತ್ಮರುಗಳಿಗೆ ಪವಿತ್ರತೆಯ ಕಿರಣಗಳನ್ನು ಕೊಡಿ, ಸತೋಪ್ರಧಾನ ಮಾಡುವಂತಹ ಸೇವೆಯನ್ನು ಮಾಡಿರಿ.


ಮುರಳಿ ಪ್ರಶ್ನೆಗಳು -

1. ಈ ಪರಮಾತ್ಮ ಮಿಲನ ಯಾವ ಸ್ವರೂಪವನ್ನು ಮಾಡುವಂತಹದಾಗಿದೆ?

2. ತಮ್ಮ ಸಂಘಟಿತ ಸ್ವರೂಪದ ತಪಸ್ಸಿನ ಆತ್ಮಿಕ ಜ್ವಾಲೆಯಿಂದ ಏನು ಮಾಡಬೇಕು?

3. ಇಡೀ ವಿಶ್ವದ ಆತ್ಮಗಳು ಯಾವುದರಿಂದ ಸುಸ್ತಾಗಿ ಬಿಟ್ಟಿದ್ದಾರೆ?

4. ತಪಸ್ವಿ ಮೂರ್ತ್ ಇದರ ಅರ್ಥವೇನು?

5. ಬಾಬಾರವರು ಇಂತಹ ಚಾರ್ಟ್ ಅನ್ನು ಇಡುವುದಕ್ಕೆ ಹೇಳಿದರು?

6. ವಿಧಾತಾತನದ ಸಂಸ್ಕಾರ ಏನು ಮಾಡುವುದು?

7. ತಪಸ್ಸಾ ಮೂರ್ತ್ ಎಂದರೆ ಯಾವುದರ ತ್ಯಾಗ ಮೂರ್ತರಾಗಬೇಕು?

8. ಬಾಬಾ ಯಾವುದರ ಸೂಚನೆ ಕೊಡುತ್ತಿದ್ದಾರೆ?

9. ಸರ್ವ ಮಕ್ಕಳ ಪ್ರತಿ ವರದಾತ ತಂದೆ ಯಾವ ವರದಾನವನ್ನು ಕೊಡುತ್ತಿದ್ದಾರೆ?

10. ಯಾವ ಖಾತೆಯನ್ನು ಸಮಾಪ್ತಿ ಮಾಡಿದಾಗ ಶ್ರೇಷ್ಠ ಸೇವಾಧಾರಿಗಳಾಗುತ್ತೇವೆ?