18.11.20         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನೀವೀಗ ಸತ್ಯ ತಂದೆಯ ಮೂಲಕ ಸತ್ಯ ದೇವತೆಗಳಾಗುತ್ತಿದ್ದೀರಿ, ಆದ್ದರಿಂದ ಸತ್ಯಯುಗದಲ್ಲಿ ಸತ್ಸಂಗ ಮಾಡುವ ಅವಶ್ಯಕತೆಯಿಲ್ಲ

ಪ್ರಶ್ನೆ:
ಸತ್ಯಯುಗದಲ್ಲಿ ದೇವತೆಗಳಿಂದ ಯಾವುದೇ ವಿಕರ್ಮವಾಗಲು ಸಾಧ್ಯವಿಲ್ಲ - ಏಕೆ?

ಉತ್ತರ:
ಏಕೆಂದರೆ ಅವರಿಗೆ ಸತ್ಯ ತಂದೆಯ ವರದಾನವು ಸಿಕ್ಕಿದೆ. ಯಾವಾಗ ರಾವಣನ ಶಾಪವು ಸಿಗತೊಡಗುತ್ತದೆಯೋ ಆಗ ವಿಕರ್ಮವಾಗುತ್ತದೆ. ಸತ್ಯ-ತ್ರೇತಾಯುಗದಲ್ಲಿ ಇರುವುದೇ ಸದ್ಗತಿ, ಆ ಸಮಯದಲ್ಲಿ ದುರ್ಗತಿಯ ಹೆಸರಿಲ್ಲ. ವಿಕರ್ಮವಾಗಲು ಅಲ್ಲಿ ವಿಕಾರವೇ ಇರುವುದಿಲ್ಲ. ದ್ವಾಪರ-ಕಲಿಯುಗದಲ್ಲಿ ಎಲ್ಲರ ದುರ್ಗತಿಯಾಗಿ ಬಿಡುತ್ತದೆ, ಆದ್ದರಿಂದ ವಿಕರ್ಮಗಳಾಗುತ್ತಿರುತ್ತವೆ. ಇವೂ ಸಹ ತಿಳಿದುಕೊಳ್ಳುವ ಮಾತುಗಳಾಗಿವೆ.

ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳ ಪ್ರತಿ ತಂದೆಯು ತಿಳಿಸಿಕೊಡುತ್ತಾರೆ - ಇವರು ಸುಪ್ರೀಂ ತಂದೆ, ಸುಪ್ರೀಂ ಶಿಕ್ಷಕ, ಸುಪ್ರೀಂ ಸದ್ಗುರುವಾಗಿದ್ದಾರೆ. ತಂದೆಯ ಈ ರೀತಿಯ ಮಹಿಮೆಯನ್ನು ತಿಳಿಸುವುದರಿಂದ ಕೃಷ್ಣನು ಯಾರಿಗೂ ತಂದೆಯಾಗಲು ಸಾಧ್ಯವಿಲ್ಲವೆಂಬ ಮಾತು ತಾನಾಗಿಯೇ ಸಿದ್ಧವಾಗುತ್ತದೆ. ಕೃಷ್ಣನು ಚಿಕ್ಕ ಮಗು, ಸತ್ಯಯುಗದ ರಾಜಕುಮಾರನಾಗಿದ್ದಾನೆ ಅಂದಮೇಲೆ ಶಿಕ್ಷಕನಾಗಲೂ ಸಾಧ್ಯವಿಲ್ಲ ಏಕೆಂದರೆ ಸ್ವಯಂ ತಾನೇ ಕುಳಿತು ಶಿಕ್ಷಕರಿಂದ ಓದುತ್ತಾನೆ. ಗುರುಗಳಂತೂ ಅಲ್ಲಿರುವುದಿಲ್ಲ ಏಕೆಂದರೆ ಅಲ್ಲಿ ಎಲ್ಲರೂ ಸದ್ಗತಿಯಲ್ಲಿರುತ್ತಾರೆ. ಅರ್ಧಕಲ್ಪ ಸದ್ಗತಿ, ಅರ್ಧಕಲ್ಪ ದುರ್ಗತಿ ಅಂದಾಗ ಅಲ್ಲಿ ಸದ್ಗತಿಯಿರುತ್ತದೆ, ಆದ್ದರಿಂದ ಜ್ಞಾನದ ಅವಶ್ಯಕತೆ ಅಲ್ಲಿರುವುದಿಲ್ಲ. ಹೆಸರೂ ಇರುವುದಿಲ್ಲ ಏಕೆಂದರೆ ಜ್ಞಾನದಿಂದ 21 ಜನ್ಮಗಳಿಗಾಗಿ ಸದ್ಗತಿ ಸಿಗುತ್ತದೆ ನಂತರ ದ್ವಾಪರದಿಂದ ಕಲಿಯುಗದ ಅಂತ್ಯದವರೆಗೆ ದುರ್ಗತಿಯಾಗುತ್ತದೆ ಅಂದಮೇಲೆ ಕೃಷ್ಣನು ದ್ವಾಪರದಲ್ಲಿ ಬರಲು ಹೇಗೆ ಸಾಧ್ಯ? ಇದೂ ಸಹ ಯಾರಿಗೂ ಗಮನಕ್ಕೆ ಬರುವುದಿಲ್ಲ. ಒಂದೊಂದು ಮಾತಿನಲ್ಲಿ ಬಹಳ ಗುಹ್ಯ ರಹಸ್ಯ ತುಂಬಿದೆ, ಇದನ್ನು ತಿಳಿಸುವುದು ಬಹಳ ಅಗತ್ಯವಾಗಿದೆ. ಅವರು ಸುಪ್ರೀಂ ತಂದೆ, ಸುಪ್ರೀಂ ಶಿಕ್ಷಕನಾಗಿದ್ದಾರೆ. ಇಂಗ್ಲೀಷಿನಲ್ಲಿ ಸುಪ್ರೀಂ ಎಂದೇ ಹೇಳಲಾಗುತ್ತದೆ. ಇಂಗ್ಲೀಷಿನ ಕೆಲವು ಶಬ್ಧಗಳು ಚೆನ್ನಾಗಿರುತ್ತವೆ, ಉದಾಹರಣೆಗೆ ಡ್ರಾಮಾ ಎಂಬ ಶಬ್ಧವಿದೆ. ಡ್ರಾಮಾಗೆ ನಾಟಕವೆಂದು ಹೇಳುವುದಿಲ್ಲ, ನಾಟಕದಲ್ಲಂತೂ ಅದಲು-ಬದಲಾಗುತ್ತದೆ. ಈ ಸೃಷ್ಟಿಚಕ್ರವು ಸುತ್ತುತ್ತದೆ ಎಂಬುದನ್ನೂ ಹೇಳುತ್ತಾರೆ ಆದರೆ ಹೇಗೆ ಸುತ್ತುತ್ತದೆ? ಅದೇ ರೀತಿ ಸುತ್ತುತ್ತದೆಯೇ ಅಥವಾ ಬದಲಾವಣೆಯಾಗುತ್ತದೆಯೇ ಎಂಬುದು ಯಾರಿಗೂ ತಿಳಿದಿಲ್ಲ. ಮಾಡಿ-ಮಾಡಿಲ್ಪಟ್ಟಿರುವುದೇ ನಡೆಯುತ್ತಿದೆ..... ಎಂದು ಹೇಳುತ್ತಾರೆ. ಅವಶ್ಯವಾಗಿ ಯಾವುದೋ ಆಟವಿದೆ ಅದು ಪುನಃ ಸುತ್ತುತ್ತಿರುತ್ತದೆ ಎಂದಾಯಿತಲ್ಲವೆ. ಈ ಚಕ್ರದಲ್ಲಿ ಮನುಷ್ಯರೇ ಸುತ್ತಬೇಕಾಗಿದೆ ಅಂದಮೇಲೆ ಈ ಚಕ್ರದ ಆಯಸ್ಸು ಏನು? ಹೇಗೆ ಸುತ್ತುತ್ತದೆ? ಇದು ಸುತ್ತುವುದರಲ್ಲಿ ಎಷ್ಟು ಸಮಯ ಹಿಡಿಸುತ್ತದೆ? ಎಂಬುದು ಯಾರಿಗೂ ತಿಳಿದಿಲ್ಲ. ಇಸ್ಲಾಮಿ, ಬೌದ್ಧಿ ಮುಂತಾದವರೆಲ್ಲರದೂ ವಂಶಾವಳಿಗಳಾಗಿವೆ. ಅವರದು ಡ್ರಾಮಾದಲ್ಲಿ ಪಾತ್ರವಿದೆ.

ನೀವು ಬ್ರಾಹ್ಮಣರ ರಾಜಧಾನಿಯಿಲ್ಲ, ಇದು ಬ್ರಾಹ್ಮಣ ಕುಲವಾಗಿದೆ. ಸರ್ವೋತ್ತಮ ಬ್ರಾಹ್ಮಣ ಕುಲವೆಂದು ಹೇಳಲಾಗುತ್ತದೆ. ದೇವಿ-ದೇವತೆಗಳದೂ ಕುಲವಾಗಿದೆ. ಇದನ್ನು ತಿಳಿಸುವುದು ಬಹಳ ಸಹಜವಾಗಿದೆ. ಸೂಕ್ಷ್ಮವತನದಲ್ಲಿ ಫರಿಶ್ತೆಗಳಿರುತ್ತಾರೆ. ಅಲ್ಲಿ ಮೂಳೆ-ಮಾಂಸಗಳಿಂದ ಕೂಡಿದ ಶರೀರವಿರುವುದಿಲ್ಲ. ದೇವತೆಗಳಿಗಾದರೆ ಸ್ಥೂಲ ಶರೀರವಿದೆಯಲ್ಲವೆ. ಬ್ರಹ್ಮನಿಂದ ವಿಷ್ಣು, ವಿಷ್ಣುವಿನಿಂದ ಬ್ರಹ್ಮಾ. ವಿಷ್ಣುವಿನ ನಾಭಿ ಕಮಲದಿಂದ ಬ್ರಹ್ಮನನ್ನು ಏಕೆ ತೋರಿಸಿದ್ದಾರೆ? ಸೂಕ್ಷ್ಮವತನದಲ್ಲಂತೂ ಈ ಮಾತುಗಳೇ ಇರುವುದಿಲ್ಲ ಅಥವಾ ಈ ಆಭರಣಗಳೇನೂ ಇರಲು ಸಾಧ್ಯವಿಲ್ಲ. ಆದ್ದರಿಂದ ಬ್ರಹ್ಮನನ್ನು ಶ್ವೇತ ವಸ್ತ್ರಧಾರಿ ಬ್ರಾಹ್ಮಣನ ರೂಪದಿಂದ ತೋರಿಸಿದ್ದಾರೆ. ಬ್ರಹ್ಮನು ಸಾಧಾರಣ ಮನುಷ್ಯ, ಬಹಳ ಜನ್ಮಗಳ ಅಂತಿಮದಲ್ಲಿ ಬಡವನಾದರಲ್ಲವೆ. ಈ ಸಮಯದಲ್ಲಿ ಇರುವುದೇ ಖಾದಿ ವಸ್ತ್ರಗಳು. ಪಾಪ! ಸೂಕ್ಷ್ಮ ಶರೀರವೆಂದರೇನು ಎಂಬುದೇ ಅವರಿಗೆ ತಿಳಿದಿಲ್ಲ. ತಂದೆಯು ನಿಮಗೆ ತಿಳಿಸುತ್ತಾರೆ - ಅಲ್ಲಿ ಫರಿಶ್ತೆಗಳಿರುತ್ತಾರೆ, ಅವರಿಗೆ ಮೂಳೆ-ಮಾಂಸದಿಂದ ಕೂಡಿದ ಶರೀರವಿರುವುದಿಲ್ಲ. ಸೂಕ್ಷ್ಮವತನದಲ್ಲಿ ಈ ಶೃಂಗಾರ ಇತ್ಯಾದಿಗಳೇನೂ ಇರುವಂತಿಲ್ಲ ಆದರೆ ಚಿತ್ರಗಳಲ್ಲಿ ತೋರಿಸಿದ್ದಾರೆ. ಆದ್ದರಿಂದ ತಂದೆಯು ಅದೇ ರೂಪದ ಸಾಕ್ಷಾತ್ಕಾರ ಮಾಡಿಸಿ ಅದರ ಅರ್ಥವನ್ನು ತಿಳಿಸುತ್ತಾರೆ. ಹೇಗೆ ಹನುಮಂತನ ಸಾಕ್ಷಾತ್ಕಾರ ಮಾಡಿಸುತ್ತಾರೆ ಆದರೆ ಹನುಮಂತನ ತರಹ ಯಾವುದೇ ಮನುಷ್ಯನಿರುವುದಿಲ್ಲ. ಭಕ್ತಿಮಾರ್ಗದ ಅನೇಕ ಪ್ರಕಾರದ ಚಿತ್ರಗಳನ್ನು ಮಾಡಿದ್ದಾರೆ. ಯಾರಿಗೆ ವಿಶ್ವಾಸ ಕುಳಿತು ಬಿಟ್ಟಿದೆಯೋ ಅವರಿಗೆ ಈ ಮಾತನ್ನು ಹೇಳಿದರೆ ಕೋಪಿಸಿಕೊಳ್ಳುತ್ತಾರೆ. ದೇವಿಯರಿಗೆ ಎಷ್ಟೊಂದು ಪೂಜೆ ಮಾಡುತ್ತಾರೆ ಮತ್ತೆ ನೀರಿನಲ್ಲಿ ಮುಳುಗಿಸಿ ಬಿಡುತ್ತಾರೆ. ಇದೆಲ್ಲವೂ ಭಕ್ತಿಮಾರ್ಗವಾಗಿದೆ. ಭಕ್ತಿಮಾರ್ಗದ ಕಂದಕದಲ್ಲಿ ಕೊರಳಿನವರೆಗೆ ಮುಳುಗಿ ಹೋಗಿದ್ದಾರೆ ಅಂದಮೇಲೆ ಅವರನ್ನು ಹೊರ ತೆಗೆಯಲು ಹೇಗೆ ಸಾಧ್ಯ. ಅದರಿಂದ ತೆಗೆಯುವುದೇ ಕಷ್ಟವಾಗುತ್ತದೆ. ಕೆಲವರಂತೂ ಅನ್ಯರನ್ನು ಹೊರ ತೆಗೆಯಲು ನಿಮಿತ್ತರಾಗಿ ತಾನೇ ಮುಳುಗಿ ಹೋಗುತ್ತಾರೆ. ಸ್ವಯಂ ಕಂದಕದಲ್ಲಿ ಕೊರಳಿನವರೆಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ ಅರ್ಥಾತ್ ಕಾಮ ವಿಕಾರದಲ್ಲಿ ಬೀಳುತ್ತಾರೆ. ಇದು ಎಲ್ಲದಕ್ಕಿಂತ ದೊಡ್ಡ ಕೆಸರಿನ ಕಂದಕವಾಗಿದೆ. ಸತ್ಯಯುಗದಲ್ಲಿ ಈ ಮಾತುಗಳಿರುವುದಿಲ್ಲ. ನೀವೀಗ ಸತ್ಯ ತಂದೆಯ ಮೂಲಕ ಸತ್ಯ ದೇವತೆಗಳಾಗುತ್ತಿದ್ದೀರಿ. ನಂತರ ಅಲ್ಲಿ ಸತ್ಸಂಗವಿರುವುದಿಲ್ಲ. ಸತ್ಸಂಗವನ್ನು ಇಲ್ಲಿ ಭಕ್ತಿಮಾರ್ಗದಲ್ಲಿಯೇ ಮಾಡುತ್ತಿರುತ್ತಾರೆ, ಎಲ್ಲರನ್ನೂ ಈಶ್ವರನ ರೂಪವೆಂದು ತಿಳಿಯುತ್ತಾರೆ. ಏನನ್ನೂ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ಕಲಿಯುಗದಲ್ಲಿ ಎಲ್ಲರೂ ಪಾಪಾತ್ಮರಾಗಿದ್ದಾರೆ. ಸತ್ಯಯುಗದಲ್ಲಿ ಎಲ್ಲರೂ ಪುಣ್ಯಾತ್ಮರಿರುತ್ತಾರೆ, ರಾತ್ರಿ-ಹಗಲಿನ ಅಂತರವಿದೆ. ನೀವೀಗ ಸಂಗಮದಲ್ಲಿದ್ದೀರಿ. ಕಲಿಯುಗ ಮತ್ತು ಸತ್ಯಯುಗ ಎರಡನ್ನೂ ತಿಳಿದುಕೊಂಡಿದ್ದೀರಿ. ಮೂಲ ಮಾತು ಈ ತೀರದಿಂದ ಆ ತೀರಕ್ಕೆ ಹೋಗುವುದಾಗಿದೆ. ಕ್ಷೀರ ಸಾಗರ ಮತ್ತು ವಿಷಯ ಸಾಗರದ ಗಾಯನವೂ ಇದೆ ಆದರೆ ಅರ್ಥವೇನನ್ನೂ ತಿಳಿದುಕೊಂಡಿಲ್ಲ. ಈಗ ತಂದೆಯು ಕರ್ಮ, ಅಕರ್ಮದ ರಹಸ್ಯವನ್ನು ತಿಳಿಸುತ್ತಾರೆ. ಕರ್ಮವನ್ನಂತೂ ಮನುಷ್ಯರು ಅವಶ್ಯವಾಗಿ ಮಾಡುತ್ತಾರೆ ಮತ್ತೆ ಕೆಲವು ಕರ್ಮಗಳು ಅಕರ್ಮಗಳಾಗುತ್ತವೆ, ಇನ್ನೂ ಕೆಲವು ಕರ್ಮಗಳು ವಿಕರ್ಮಗಳಾಗುತ್ತವೆ. ರಾವಣ ರಾಜ್ಯದಲ್ಲಿ ಎಲ್ಲಾ ಕರ್ಮಗಳು ವಿಕರ್ಮಗಳಾಗುತ್ತವೆ, ಸತ್ಯಯುಗದಲ್ಲಿ ವಿಕರ್ಮಗಳಾಗುವುದಿಲ್ಲ ಏಕೆಂದರೆ ಅಲ್ಲಿ ರಾಮ ರಾಜ್ಯವಿರುತ್ತದೆ. ತಂದೆಯಿಂದ ವರದಾನ ಪಡೆದಿದ್ದಾರೆ. ರಾವಣನು ಶಾಪ ಕೊಡುತ್ತಾನೆ. ಇದು ಸುಖ ಮತ್ತು ದುಃಖದ ಆಟವಲ್ಲವೆ. ದುಃಖದಲ್ಲಿ ಎಲ್ಲರೂ ತಂದೆಯನ್ನು ನೆನಪು ಮಾಡುತ್ತಾರೆ, ಸುಖದಲ್ಲಿ ಯಾರೂ ನೆನಪು ಮಾಡುವುದಿಲ್ಲ. ಅಲ್ಲಿ ವಿಕಾರಗಳೇ ಇರುವುದಿಲ್ಲ. ಮಕ್ಕಳಿಗೆ ತಿಳಿಸುತ್ತಾರೆ, ದೇವಿ-ದೇವತಾ ಧರ್ಮದ ನಾಟಿ ಮಾಡಲಾಗುತ್ತಿದೆ. ಈ ನಾಟಿ ಮಾಡುವ ಪದ್ಧತಿಯು ಈಗಲೇ ಬಂದಿದೆ. ತಂದೆಯು ನಾಟಿ ಮಾಡಲಾರಂಭಿಸಿದ್ದಾರೆ. ಮೊದಲು ಬ್ರಿಟೀಷ್ ಸರ್ಕಾರವಿದ್ದಾಗ ವೃಕ್ಷಗಳ ನಾಟಿ ಮಾಡುತ್ತೇವೆಂದು ಎಂದೂ ಪತ್ರಿಕೆಗಳಲ್ಲಿ ಬರುತ್ತಿರಲಿಲ್ಲ. ಈಗ ತಂದೆಯು ದೇವಿ-ದೇವತಾ ಧರ್ಮದ ನಾಟಿ ಮಾಡುತ್ತಾರೆ. ಮತ್ತ್ಯಾರೂ ನಾಟಿ ಮಾಡುವುದಿಲ್ಲ. ಬಹಳ ಧರ್ಮಗಳಿವೆ, ದೇವಿ-ದೇವತಾ ಧರ್ಮವು ಪ್ರಾಯಲೋಪವಾಗಿದೆ ಧರ್ಮ ಭ್ರಷ್ಟ, ಕರ್ಮ ಭ್ರಷ್ಟರಾಗಿರುವ ಕಾರಣ ಹೆಸರನ್ನೇ ಉಲ್ಟಾ-ಸುಲ್ಟಾ ಇಟ್ಟು ಬಿಟ್ಟಿದ್ದಾರೆ. ಯಾರು ದೇವತಾ ಧರ್ಮದವರಿದ್ದಾರೆಯೋ ಅವರು ಮತ್ತೆ ಇದೇ ದೇವಿ-ದೇವತಾ ಧರ್ಮದಲ್ಲಿ ಬರಬೇಕಾಗಿದೆ. ಪ್ರತಿಯೊಬ್ಬರೂ ತಮ್ಮ ಧರ್ಮದಲ್ಲಿಯೇ ಹೋಗುವರು. ಕ್ರಿಶ್ಚಿಯನ್ ಧರ್ಮದವರು ಅದನ್ನು ಬಿಟ್ಟು ದೇವಿ-ದೇವತಾ ಧರ್ಮದಲ್ಲಿ ಬರಲು ಸಾಧ್ಯವಿಲ್ಲ. ಹಾ! ಯಾರಾದರೂ ದೇವಿ-ದೇವತಾ ಧರ್ಮದಿಂದ ಕ್ರಿಶ್ಚಿಯನ್ ಧರ್ಮದಲ್ಲಿ ಹೋಗಿ ಸೇರಿದ್ದರೆ ಅವರು ಪುನಃ ಅಲ್ಲಿಂದ ತಮ್ಮ ದೇವಿ-ದೇವತಾ ಧರ್ಮಕ್ಕೆ ಬಂದು ಬಿಡುವರು. ಅವರಿಗೆ ಈ ಜ್ಞಾನ ಮತ್ತು ಯೋಗವು ಬಹಳ ಇಷ್ಟವಾಗುತ್ತದೆ, ಇದರಿಂದಲೇ ಇವರು ನಮ್ಮ ಧರ್ಮದವರೆಂಬುದು ಸಿದ್ಧವಾಗುತ್ತದೆ. ಇದರಲ್ಲಿ ತಿಳಿದುಕೊಳ್ಳಲು ಮತ್ತು ತಿಳಿಸಲು ಬಹಳ ವಿಶಾಲ ಬುದ್ಧಿಯು ಬೇಕು. ಧಾರಣೆ ಮಾಡಿಕೊಳ್ಳಬೇಕಾಗಿದೆ. ಕೇವಲ ಪುಸ್ತಕವನ್ನು ಓದಿ ತಿಳಿಸುವುದಲ್ಲ. ಹೇಗೆ ಅವರು ಗೀತೆಯನ್ನು ತಿಳಿಸುತ್ತಾರೆ, ಮನುಷ್ಯರು ಅದನ್ನು ಕುಳಿತು ಕೇಳುತ್ತಾರೆ. ಕೆಲವರಂತೂ ಗೀತೆಯ ಶ್ಲೋಕಗಳನ್ನು ಕಂಠಪಾಠ ಮಾಡಿಕೊಳ್ಳುತ್ತಾರೆ ಆದರೆ ಇದರ ಅರ್ಥವನ್ನು ಪ್ರತಿಯೊಬ್ಬರೂ ತಮ್ಮ-ತಮ್ಮ ರೀತಿಯಲ್ಲಿ ತಿಳಿಸತೊಡಗುತ್ತಾರೆ. ಶ್ಲೋಕಗಳೆಲ್ಲವೂ ಸಂಸ್ಕೃತದಲ್ಲಿವೆ. ಇಲ್ಲಿ ಗಾಯನವಿದೆ - ಸಾಗರವನ್ನು ಶಾಹಿಯನ್ನಾಗಿ ಮಾಡಿಕೊಂಡು, ಇಡೀ ಗಿಡ ಮರಗಳನ್ನು ಲೇಖನಿಯನ್ನಾಗಿ ಮಾಡಿ ಬರೆದರೂ ಸಹ ಜ್ಞಾನವು ಅಂತ್ಯವಾಗುವುದಿಲ್ಲ. ಆ ಗೀತೆಯಂತೂ ಬಹಳ ಚಿಕ್ಕದಾಗಿದೆ, ಕೇವಲ 18 ಅಧ್ಯಾಯಗಳಿವೆ. ಇಷ್ಟು ಚಿಕ್ಕ ಗೀತೆಯನ್ನು ಮಾಡಿ ಕೊರಳಿಗೆ ಹಾಕಿಕೊಳ್ಳುತ್ತಾರೆ. ಬಹಳ ಚಿಕ್ಕ ಅಕ್ಷರಗಳಿಂದ ಕೂಡಿರುತ್ತದೆ. ಕೊರಳಿನಲ್ಲಿ ಚಿಕ್ಕ ಲಾಕೆಟ್ ಮಾಡಿಸಿ ಧರಿಸುವ ಹವ್ಯಾಸವೂ ಇರುತ್ತದೆ. ವಾಸ್ತವದಲ್ಲಿ ಇದು ಸೆಕೆಂಡಿನ ಮಾತಾಗಿದೆ. ತಂದೆಯ ಮಕ್ಕಳಾದರೆಂದರೆ ವಿಶ್ವದ ಮಾಲೀಕರಾದರು. ಬಾಬಾ, ನಾನು ನಿಮ್ಮ ಒಂದು ದಿನದ ಮಗುವಾಗಿದ್ದೇನೆಂದು ಬರೆಯಲಾರಂಭಿಸುತ್ತಾರೆ. ಒಂದು ದಿನದಲ್ಲಿ ನಿಶ್ಚಯವಾಯಿತೆಂದರೆ ಕೂಡಲೇ ಪತ್ರ ಬರೆಯುತ್ತಾರೆ. ಬಾಬಾನ ಮಗುವಾದರೆಂದರೆ ವಿಶ್ವದ ಮಾಲೀಕರಾದರು. ಇದೂ ಸಹ ಕೆಲವರ ಬುದ್ಧಿಯಲ್ಲಿ ಕುಳಿತುಕೊಳ್ಳುವುದು ಬಹಳ ಕಷ್ಟವಾಗುತ್ತದೆ. ನೀವು ವಿಶ್ವದ ಮಾಲೀಕರಾಗುತ್ತೀರಲ್ಲವೆ. ಅಲ್ಲಿ ಮತ್ತ್ಯಾವುದೇ ಖಂಡವಿರುವುದಿಲ್ಲ. ಹೆಸರು-ಗುರುತೂ ಸಮಾಪ್ತಿಯಾಗುತ್ತದೆ. ಇಷ್ಟೆಲ್ಲಾ ಖಂಡಗಳಿದ್ದವು ಎಂಬುದು ಯಾರಿಗೂ ಅಲ್ಲಿ ತಿಳಿದಿರುವುದಿಲ್ಲ. ಒಂದುವೇಳೆ ಇಷ್ಟೆಲ್ಲಾ ಖಂಡಗಳು ಇದ್ದರೆ ಅವಶ್ಯವಾಗಿ ಅದರ ಚರಿತ್ರೆ-ಭೂಗೋಳವು ಅಲ್ಲಿ ಇರಬೇಕಿತ್ತು. ಅಲ್ಲಿ ಇದೇನೂ ಇರುವುದಿಲ್ಲ ಆದ್ದರಿಂದ ನೀವು ವಿಶ್ವದ ಮಾಲೀಕರಾಗುವವರಿದ್ದೀರೆಂದು ಹೇಳಲಾಗುತ್ತದೆ. ತಂದೆಯು ತಿಳಿಸಿದ್ದಾರೆ - ನಾನು ನಿಮ್ಮ ತಂದೆಯೂ ಆಗಿದ್ದೇನೆ, ಜ್ಞಾನ ಸಾಗರನಾಗಿದ್ದೇನೆ, ಇದು ಬಹಳ ಶ್ರೇಷ್ಠ ಜ್ಞಾನವಾಗಿದೆ, ಇದರಿಂದ ನಾವು ವಿಶ್ವದ ಮಾಲೀಕರಾಗುತ್ತೇವೆ. ನಮ್ಮ ತಂದೆಯು ಸುಪ್ರೀಂ ಆಗಿದ್ದಾರೆ, ಸತ್ಯ ತಂದೆ, ಸತ್ಯ ಶಿಕ್ಷಕನಾಗಿದ್ದಾರೆ, ಸತ್ಯವನ್ನೇ ತಿಳಿಸುತ್ತಾರೆ. ಬೇಹದ್ದಿನ ಶಿಕ್ಷಣ ಕೊಡುತ್ತಾರೆ. ಬೇಹದ್ದಿನ ಗುರುವಾಗಿ ಎಲ್ಲರ ಸದ್ಗತಿ ಮಾಡುತ್ತಾರೆ. ಒಬ್ಬರ ಮಹಿಮೆ ಮಾಡಿದರೆ ಅದೇ ಮಹಿಮೆಯು ಇನ್ನೊಬ್ಬರಿಗೆ ಇರಲು ಸಾಧ್ಯವಿಲ್ಲ ಮತ್ತೆ ಅವರು ತಮ್ಮ ಸಮಾನ ಮಾಡಿಕೊಂಡಾಗ ಅವರ ತರಹ ಮಹಿಮೆಯಾಗಬಹುದು. ಆದ್ದರಿಂದ ನೀವೂ ಸಹ ಪತಿತ-ಪಾವನರಾಗಿದ್ದೀರಿ. ಪತಿತ-ಪಾವನಿ ಗಂಗೆಯರು ಈ ಮಾತೆಯರಾಗಿದ್ದಾರೆ. ಶಿವ ಶಕ್ತಿ ಎಂದಾದರೂ ಹೇಳಿ, ಶಿವ ವಂಶಿಯರೆಂದಾದರೂ ಹೇಳಿ. ಶಿವ ವಂಶಿ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ. ವಾಸ್ತವದಲ್ಲಿ ಎಲ್ಲರೂ ಶಿವ ವಂಶಿಯರೇ ಆಗಿದ್ದಾರೆ ಆದರೆ ಬ್ರಹ್ಮಾರವರ ಮೂಲಕ ರಚನೆಯನ್ನು ರಚಿಸುವುದರಿಂದ ಸಂಗಮಯುಗದಲ್ಲಿಯೂ ಬ್ರಹ್ಮಾಕುಮಾರ-ಕುಮಾರಿಯರಾಗುತ್ತೀರಿ. ತಂದೆಯು ಬ್ರಹ್ಮಾರವರ ಮೂಲಕ ದತ್ತು ಮಾಡಿಕೊಳ್ಳುತ್ತಾರೆ. ಮೊಟ್ಟ ಮೊದಲಿಗೆ ಬ್ರಹ್ಮಾಕುಮಾರ-ಕುಮಾರಿಯರಾಗುತ್ತೀರಿ. ಯಾರಾದರೂ ವಿರೋಧ ಮಾಡುತ್ತಾರೆಂದರೆ ಅವರಿಗೆ ಹೇಳಿ, ಇವರು ಪ್ರಜಾಪಿತನಾಗಿದ್ದಾರೆ, ತಂದೆಯು ಇವರಲ್ಲಿ ಪ್ರವೇಶ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಇವರ ಬಹಳ ಜನ್ಮಗಳ ಅಂತಿಮದಲ್ಲಿ ನಾನು ಪ್ರವೇಶ ಮಾಡುತ್ತೇನೆ. ವಿಷ್ಣುವಿನ ನಾಭಿಯಿಂದ ಬ್ರಹ್ಮನು ಬಂದನೆಂದು ತೋರಿಸುತ್ತಾರೆ. ಒಳ್ಳೆಯದು - ವಿಷ್ಣುವು ಮತ್ತೆ ಯಾರ ನಾಭಿಯಿಂದ ಬಂದರು? ಅದರಲ್ಲಿ ನೀವು ಬಾಣದ ಗುರುತನ್ನು ತೋರಿಸಬಹುದು. ಒಬ್ಬರಿಂದೊಬ್ಬರು ಆಗುವರು ಎಂದು. ಬ್ರಹ್ಮನಿಂದ ವಿಷ್ಣು, ವಿಷ್ಣುವಿನಿಂದ ಬ್ರಹ್ಮಾ. ಇವರು ಅವರಿಂದ, ಅವರು ಇವರಿಂದ ಆಗಿದ್ದಾರೆ. ಬ್ರಹ್ಮನಿಂದ ವಿಷ್ಣುವಾಗುವುದರಲ್ಲಿ ಒಂದು ಸೆಕೆಂಡ್, ವಿಷ್ಣುವಿನಿಂದ ಬ್ರಹ್ಮನಾಗುವುದರಲ್ಲಿ 5000 ವರ್ಷಗಳು ಹಿಡಿಸುತ್ತದೆ. ಇವು ಅದ್ಭುತವಾದ ಮಾತುಗಳಲ್ಲವೆ. ತಂದೆಯು ತಿಳಿಸುತ್ತಾರೆ - ಲಕ್ಷ್ಮೀ-ನಾರಾಯಣರು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ ಮತ್ತೆ ಅವರದೇ ಜನ್ಮಗಳ ಅಂತಿಮದಲ್ಲಿ ನಾನು ಪ್ರವೇಶ ಮಾಡಿ ಪುನಃ ಈ ದೇವಿ-ದೇವತೆಗಳನ್ನಾಗಿ ಮಾಡುತ್ತೇನೆ. ತಿಳಿದುಕೊಳ್ಳುವ ಮಾತಲ್ಲವೆ. ಇವರಿಗೆ ಬ್ರಹ್ಮನೆಂದು ಏಕೆ ಹೇಳುತ್ತಾರೆಂಬುದನ್ನು ನಿಮಗೆ ತಿಳಿಸುತ್ತೇವೆ. ಇಡೀ ಪ್ರಪಂಚಕ್ಕೆ ತೋರಿಸುವುದಕ್ಕಾಗಿಯೇ ಈ ಚಿತ್ರಗಳನ್ನು ಮಾಡಿಸಲಾಗಿದೆ. ನಾವು ಇದನ್ನು ತಿಳಿಸುತ್ತೇವೆ ಎಂದು ಹೇಳಿರಿ. ತಿಳಿದುಕೊಳ್ಳುವವರೇ ತಿಳಿದುಕೊಳ್ಳುತ್ತಾರೆ. ತಿಳಿದುಕೊಳ್ಳದೇ ಇರುವವರು ಇವರು ನಮ್ಮ ಕುಲದವರಲ್ಲವೆಂದು ತಿಳಿಯಿರಿ. ಪಾಪ! ಸ್ವಲ್ಪ ಕೇಳಿದರೂ ಸಹ ಭಲೆ ಅಲ್ಲಿ ಬರುತ್ತಾರೆ ಆದರೆ ಪ್ರಜೆಗಳಲ್ಲಿ. ನಮಗಾಗಿ ಎಲ್ಲರೂ ಅಸಹಾಯಕರಲ್ಲವೆ. ಆದ್ದರಿಂದ ಅಯ್ಯೋ ಪಾಪ! ಎಂದು ಹೇಳಲಾಗುತ್ತದೆ. ಬಡವರಿಗೆ ಅಸಹಾಯಕರೆಂದು ಹೇಳಲಾಗುತ್ತದೆ. ಮಕ್ಕಳು ಎಷ್ಟೊಂದು ಮಾತುಗಳನ್ನು ಧಾರಣೆ ಮಾಡಿಕೊಳ್ಳಬೇಕು. ವಿಷಯದ ಮೇಲೆ ಭಾಷಣ ಮಾಡಬೇಕಾಗಿದೆ. ಬ್ರಹ್ಮಾ-ಸರಸ್ವತಿಯ ವಿಷಯವೂ ಕಡಿಮೆಯಲ್ಲ. ಪ್ರಜಾಪಿತ ಬ್ರಹ್ಮಾ ಮತ್ತು ಸರಸ್ವತಿ ನಾಲ್ಕು ಭುಜಗಳನ್ನು ತೋರಿಸುತ್ತಾರೆ ಅಂದಾಗ ಎರಡು ಭುಜಗಳು ಮಗಳಾದ ಸರಸ್ವತಿಯದಾಗಿದೆ. ಬ್ರಹ್ಮಾ-ಸರಸ್ವತಿಯು ದಂಪತಿಗಳಲ್ಲ, ವಾಸ್ತವದಲ್ಲಿ ವಿಷ್ಣುವು ಲಕ್ಷ್ಮೀ-ನಾರಾಯಣರ ಕಂಬೈಂಡ್ ರೂಪವಾಗಿದೆ. ಅವರಿಬ್ಬರೂ ದಂಪತಿಗಳಾಗಿದ್ದಾರೆ. ಸರಸ್ವತಿಯು ಬ್ರಹ್ಮನ ಮಗಳಾಗಿದ್ದಾರೆ. ಶಂಕರನಿಗೂ ಸ್ತ್ರೀ ಇಲ್ಲ, ಈ ಕಾರಣದಿಂದ ಶಿವ ಶಂಕರ ಎಂದು ಹೇಳಿ ಬಿಡುತ್ತಾರೆ. ಶಂಕರನು ಏನು ಮಾಡುತ್ತಾನೆ? ವಿನಾಶವಂತೂ ಅಣು ಬಾಂಬುಗಳಿಂದ ಆಗುತ್ತದೆ. ತಂದೆಯೇ ಮಕ್ಕಳ ಮೃತ್ಯುವನ್ನು ಮಾಡಿಸುತ್ತಾರೆಯೇ? ಇದಂತೂ ಪಾಪವಾಗುವುದು. ತಂದೆಯಂತೂ ಎಲ್ಲರನ್ನು ಶಾಂತಿಧಾಮಕ್ಕೆ ಪರಿಶ್ರಮವಿಲ್ಲದೆ ಮರಳಿ ಕರೆದುಕೊಂಡು ಹೋಗುತ್ತಾರೆ. ಲೆಕ್ಕಾಚಾರಗಳನ್ನು ಮುಗಿಸಿ ಎಲ್ಲರೂ ಮನೆಗೆ ಹೋಗುತ್ತಾರೆ ಏಕೆಂದರೆ ಇದು ಅಂತಿಮ ಸಮಯವಾಗಿದೆ. ತಂದೆಯು ಮಕ್ಕಳ ಸೇವೆಗಾಗಿ ಬರುತ್ತಾರೆ, ಎಲ್ಲರಿಗೆ ಸದ್ಗತಿ ನೀಡುತ್ತಾರೆ. ನೀವೂ ಸಹ ಮೊದಲು ಗತಿಯಲ್ಲಿ ನಂತರ ಸದ್ಗತಿಯಲ್ಲಿ ಬರುತ್ತೀರಿ. ಇವು ತಿಳಿದುಕೊಳ್ಳುವ ಮಾತುಗಳಾಗಿವೆ. ಈ ಮಾತುಗಳನ್ನು ಯಾರೂ ತಿಳಿದುಕೊಂಡಿಲ್ಲ. ನೀವು ನೋಡುತ್ತೀರಿ, ಕೆಲವರು ಬಹಳ ತಲೆ ಕೆಡಿಸಿಕೊಳ್ಳುತ್ತಾರೆ ಆದರೆ ಏನನ್ನೂ ತಿಳಿದುಕೊಳ್ಳುವುದಿಲ್ಲ. ಯಾರು ಅರ್ಥ ಮಾಡಿಕೊಳ್ಳುವವರಾಗಿರುವರೋ ಅವರು ಬಂದು ತಿಳಿದುಕೊಳ್ಳುತ್ತಾರೆ. ತಿಳಿಸಿ, ಒಂದೊಂದು ಮಾತಿನ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಸಮಯ ಕೊಡಿ. ಇಲ್ಲಿಯ ಆಜ್ಞೆಯಾಗಿದೆ, ಎಲ್ಲರಿಗೆ ತಂದೆಯ ಪರಿಚಯ ಕೊಡಿ. ಇದು ಮುಳ್ಳಿನ ಕಾಡಾಗಿದೆ ಏಕೆಂದರೆ ಒಬ್ಬರು ಇನ್ನೊಬ್ಬರಿಗೆ ದುಃಖ ಕೊಡುತ್ತಿರುತ್ತಾರೆ, ಇದಕ್ಕೆ ದುಃಖಧಾಮವೆಂದು ಹೇಳಲಾಗುತ್ತದೆ. ಸತ್ಯಯುಗವು ಸುಖಧಾಮವಾಗಿದೆ, ದುಃಖಧಾಮದಿಂದ ಸುಖಧಾಮವು ಹೇಗಾಗುತ್ತದೆ ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ. ಲಕ್ಷ್ಮೀ-ನಾರಾಯಣರು ಸುಖಧಾಮದಲ್ಲಿದ್ದರು ನಂತರ ಇವರು 84 ಜನ್ಮಗಳನ್ನು ತೆಗೆದುಕೊಂಡು ದುಃಖಧಾಮದಲ್ಲಿ ಬರುತ್ತಾರೆ. ಈ ಬ್ರಹ್ಮಾ ಎಂಬ ಹೆಸರನ್ನು ಹೇಗೆ ಇಟ್ಟರು ಎಂಬುದನ್ನು ತಂದೆಯು ತಿಳಿಸುತ್ತಾರೆ, ನಾನು ಇವರಲ್ಲಿ ಪ್ರವೇಶ ಮಾಡಿ ಇವರಿಂದ ಬೇಹದ್ದಿನ ಸನ್ಯಾಸ ಮಾಡಿಸುತ್ತೇನೆ. ಕೂಡಲೇ ಸನ್ಯಾಸ ಮಾಡಿಸಿ ಬಿಟ್ಟರು ಏಕೆಂದರೆ ತಂದೆಯು ಇವರಿಂದ ಸೇವೆ ಮಾಡಿಸಬೇಕಾಗಿದೆ, ಅವರೇ ಮಾಡಿಸುತ್ತಾರೆ. ಮತ್ತೆ ಇವರ ಹಿಂದೆ ಅನೇಕರು ಬಂದರು, ಇವರಿಗೂ ಹೆಸರುಗಳನ್ನಿಡಲಾಯಿತು. ಇದಕ್ಕೆ ಮನುಷ್ಯರು ಭಟ್ಟಿಯಲ್ಲಿಯೂ ಬೆಕ್ಕಿನ ಮರಿಗಳು ಸುರಕ್ಷಿತವಾಗಿದ್ದವು ಎಂದು ತೋರಿಸುತ್ತಾರೆ. ಇವೆಲ್ಲವೂ ದಂತ ಕಥೆಗಳಾಗಿವೆ. ಬೆಕ್ಕಿನ ಮರಿಗಳಿರಲು ಹೇಗೆ ಸಾಧ್ಯ! ಬೆಕ್ಕು ಜ್ಞಾನವನ್ನು ಕೇಳುತ್ತದೆಯೇ! ತಂದೆಯು ಬಹಳಷ್ಟು ಯುಕ್ತಿಗಳನ್ನು ತಿಳಿಸುತ್ತಿರುತ್ತಾರೆ. ಯಾರಿಗಾದರೂ ಯಾವುದೇ ಮಾತು ಅರ್ಥವಾಗದಿದ್ದರೆ ಅವರಿಗೆ ತಿಳಿಸಿ - ಎಲ್ಲಿಯವರೆಗೆ ಪರಮಾತ್ಮನನ್ನು ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಮತ್ತೇನೂ ಅರ್ಥವಾಗುವುದಿಲ್ಲ. ಒಂದು ಮಾತನ್ನು ನಿಶ್ಚಯ ಮಾಡಿಕೊಳ್ಳಿ ಮತ್ತು ಬರೆಯಿರಿ. ಇಲ್ಲದಿದ್ದರೆ ಮರೆತು ಹೋಗುವಿರಿ, ಮಾಯೆಯು ಮರೆಸಿ ಬಿಡುತ್ತದೆ. ತಂದೆಯ ಪರಿಚಯ ಕೊಡುವುದು ಮುಖ್ಯ ಮಾತಾಗಿದೆ. ನಮ್ಮ ತಂದೆಯು ಸುಪ್ರೀಂ ತಂದೆ, ಸುಪ್ರೀಂ ಶಿಕ್ಷಕನಾಗಿದ್ದಾರೆ, ಇಡೀ ವಿಶ್ವದ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ, ಇದು ಯಾರಿಗೂ ತಿಳಿದಿಲ್ಲ. ಇದನ್ನು ತಿಳಿಸುವುದರಲ್ಲಿ ಸಮಯ ಬೇಕು. ಎಲ್ಲಿಯವರೆಗೆ ತಂದೆಯನ್ನು ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಪ್ರಶ್ನೆಗಳು ಉದ್ಭವಿಸುತ್ತಲೇ ಇರುತ್ತವೆ. ತಂದೆಯನ್ನು ತಿಳಿಯದಿದ್ದರೆ ಆಸ್ತಿಯನ್ನೂ ತಿಳಿದುಕೊಳ್ಳುವುದಿಲ್ಲ. ಆದ್ದರಿಂದ ಈ ರೀತಿ ಏಕೆ ಶಾಸ್ತ್ರಗಳಲ್ಲಿ ಈ ರೀತಿ ಹೇಳುತ್ತಾರೆ ಎಂದು ಸಂಶಯದಲ್ಲಿ ಬರುತ್ತಲೇ ಇರುತ್ತಾರೆ. ಆದ್ದರಿಂದ ಎಲ್ಲರಿಗೆ ಮೊದಲು ತಂದೆಯ ಪರಿಚಯ ಕೊಡಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಕರ್ಮ, ಅಕರ್ಮ ಮತ್ತು ವಿಕರ್ಮದ ಗುಹ್ಯ ಗತಿಯನ್ನು ಬುದ್ಧಿಯಲ್ಲಿಟ್ಟುಕೊಂಡು ಈಗ ಯಾವುದೇ ವಿಕರ್ಮ ಮಾಡಬಾರದು. ಜ್ಞಾನ ಮತ್ತು ಯೋಗದ ಧಾರಣೆ ಮಾಡಿ ಅನ್ಯರಿಗೂ ತಿಳಿಸಬೇಕಾಗಿದೆ.

2. ಸತ್ಯ ತಂದೆಯ ಸತ್ಯ ಜ್ಞಾನವನ್ನು ಕೊಟ್ಟು ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ, ವಿಕಾರಗಳ ಕೆಸರಿನಿಂದ ಎಲ್ಲರನ್ನೂ ಹೊರ ತೆಗೆಯಬೇಕಾಗಿದೆ.

ವರದಾನ:
ತಮ್ಮ ಶಕ್ತಿಶಾಲಿ ಸ್ಥಿತಿಯ ಮುಖಾಂತರ ಮನಸಾ ಸೇವೆಯ ಸರ್ಟಿಫಿಕೆಟ್ ಪ್ರಾಪ್ತಿ ಮಾಡಿಕೊಳ್ಳುವಂತಹ ಸ್ವ ಅಭ್ಯಾಸಿ ಭವ.

ವಿಶ್ವಕ್ಕೆ ಲೈಟ್ ಮತ್ತು ಮೈಟ್ನ ವರದಾನ ಕೊಡುವುದಕ್ಕಾಗಿ ಅಮೃತವೇಳೆ ನೆನಪಿನ ಸ್ವ ಅಭ್ಯಾಸದ ಮುಖಾಂತರ ಶಕ್ತಿಶಾಲಿ ವಾಯುಮಂಡಲ ರಚಿಸಿದಾಗ ಮನಸಾ ಸೇವೆಯ ಸರ್ಟಿಫಿಕೆಟ್ ಪ್ರಾಪ್ತಿಯಾಗುವುದು. ಅಂತಿಮ ಸಮಯದಲ್ಲಿ ಮನಸಾ ಮೂಲಕವೇ ದೃಷ್ಟಿಯಿಂದ ತೃಪ್ತಿ ಮಾಡುವಂತಹ, ತಮ್ಮ ವೃತ್ತಿಯ ಮುಖಾಂತರ ಅವರ ವೃತ್ತಿಗಳನ್ನು ಬದಲಾಯಿಸುವಂತಹ ಸೇವೆ ಮಾಡಬೇಕು. ತಮ್ಮ ಶ್ರೇಷ್ಠ ಸ್ಮೃತಿಯಿಂದ ಎಲ್ಲರನ್ನೂ ಸಮರ್ಥ ಮಾಡಬೇಕು. ಯಾವಾಗ ಈ ರೀತಿಯ ಲೈಟ್ ಮತ್ತು ಮೈಟ್ ಕೊಡುವಂತಹ ಅಭ್ಯಾಸವಾಗುವುದು ಆಗ ನಿರ್ವಿಘ್ನ ವಾಯುಮಂಡಲ ರಚನೆಯಾಗುವುದು ಮತ್ತು ಈ ಕೋಟೆ ಭಧ್ರವಾಗುವುದು.

ಸ್ಲೋಗನ್:
ಯಾರು ಮನಸಾ-ವಾಚಾ-ಕರ್ಮಣ ಮೂರೂ ಸೇವೆಗಳನ್ನು ಜೊತೆ-ಜೊತೆಯಾಗಿ ಮಾಡುತ್ತಾರೆ ಅವರೇ ತಿಳುವಳಿಕೆ ಉಳ್ಳವರು ಆಗಿದ್ದಾರೆ.