18.11.23         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಮಾನವರಿಂದ ದೇವತೆಗಳನ್ನಾಗಿ ಮಾಡುವ ಸೇವೆಯಲ್ಲಿ ನಿಮಗೆ ಬಹಳ ಬಹಳ ಆಸಕ್ತಿಯಿರಬೇಕು, ಆದರೆ ಈ ಸರ್ವೀಸಿಗಾಗಿ ಸ್ವಯಂಲ್ಲಿ ಚೆನ್ನಾಗಿ ಧಾರಣೆ ಬೇಕು”

ಪ್ರಶ್ನೆ:
ಆತ್ಮವು ಹೇಗೆ ಮೈಲಿಗೆಯಾಗುತ್ತದೆ? ಆತ್ಮದಲ್ಲಿ ಯಾವ ಮೈಲಿಗೆ ಇಡಿಯುತ್ತದೆ?

ಉತ್ತರ:
ಮಿತ್ರ- ಸಂಬಂಧಿಗಳ ನೆನಪಿನಿಂದ ಆತ್ಮವು ಮೈಲಿಗೆಯಾಗುತ್ತದೆ. ದೇಹಾಭಿಮಾನವು ಮೊದಲನೆಯ ಕೊಳಕಾಗಿದೆ ನಂತರ ಲೋಭ-ಮೋಹದ ಕೊಳಕು ಪ್ರಾರಂಭವಾಗುತ್ತದೆ. ಈ ವಿಕಾರಗಳ ಮೈಲಿಗೆಯು ಆತ್ಮದ ಮೇಲೆ ಇಡಿಯುತ್ತದೆ ನಂತರ ತಂದೆಯ ನೆನಪು ಮರೆತು ಹೋಗುತ್ತದೆ ಸರ್ವೀಸ್ ಮಾಡಲು ಆಗುವುದಿಲ್ಲ.

ಗೀತೆ:
ತಮ್ಮನ್ನು ಕರೆಯಲು ನನ್ನ ಮನಸ್ಸು ಹಾತೊರೆಯುತ್ತಿದೆ................

ಓಂ ಶಾಂತಿ.
ಈ ಗೀತೆಯು ಬಹಳ ಚೆನ್ನಾಗಿದೆ. ತಮ್ಮ ಜ್ಞಾನವನ್ನು ಕೇಳಿ ಅನ್ಯರಿಗೂ ಹೇಳಲು ಮನಸ್ಸಾಗುತ್ತದೆ ಎಂದು ಮಕ್ಕಳು ಹೇಳುತ್ತಾರೆ. ಮಕ್ಕಳು ಖಂಡಿತವಾಗಿಯೂ ನೆನಪು ಮಾಡುತ್ತಾರೆ. ಕೆಲವರು ನೆನಪು ಮಾಡುತ್ತಿದ್ದಾರೆ, ಮತ್ತು ಮಿಲನವನ್ನು ಮಾಡುತ್ತಾರೆ. ಕೋಟಿಯಲ್ಲಿ ಕೆಲವರು ಬಂದು ಈ ಆಸ್ತಿಯನ್ನು ಪಡೆಯುತ್ತಾರೆಂದು ಹೇಳಲಾಗುತ್ತದೆ. ಈಗ ಬುದ್ಧಿಯು ಬಹಳ ವಿಶಾಲವಾಗಿದೆ. ಖಂಡಿತ 5000 ವರ್ಷದ ಮೊದಲೂ ಸಹ ತಂದೆಯು ರಾಜಯೋಗವನ್ನು ಕಲಿಸಲು ಬಂದಿದ್ದರು. ಈ ಜ್ಞಾನವನ್ನು ಯಾರು ಹೇಳಿದರು ಎಂದು ಮೊಟ್ಟಮೊದಲು ತಿಳಿಸಬೇಕು ಏಕೆಂದರೆ ಈ ವಿಚಾರದಲ್ಲಿಯೇ ಬಹಳ ದೊಡ್ಡ ತಪ್ಪಾಗಿದೆ. ತಂದೆಯು ತಿಳಿಸುತ್ತಾರೆ - ಸರ್ವಶಾಸ್ತ್ರಮಯಿ ಶಿರೋಮಣಿ ಗೀತೆಯು ಭಾರತವಾಸಿಗಳ ಶಾಸ್ತ್ರವಾಗಿದೆ. ಸರ್ವಶಾಸ್ತ್ರಮಯಿ ಗೀತೆಯನ್ನು ಯಾರು ಹೇಳಿದರು ಮತ್ತು ಅದರಿಂದ ಯಾವ ಧರ್ಮಸ್ಥಾಪನೆ ಆಯಿತು ಎಂಬುದನ್ನು ಮನುಷ್ಯರು ಮರೆತುಹೋಗಿದ್ದಾರೆ. ಹೇ ಭಗವಂತ, ತಾವು ಬನ್ನಿ ಎಂದು ಖಂಡಿತ ಗಾಯನ ಮಾಡುತ್ತಾರೆ. ಭಗವಂತ ಖಂಡಿತ ಬರುವುದೇ ಹೊಸ ಪಾವನಪ್ರಪಂಚದ ರಚನೆಯನ್ನು ರಚಿಸಲು. ಪೂರ್ಣ ಜಗತ್ತಿಗೆ ತಂದೆಯಲ್ಲವೆ! ತಾವು ಬಂದರೆ ಸುಖ ಸಿಗುತ್ತದೆ, ಶಾಂತಿ ಸಿಗುತ್ತದೆ ಎಂದು ಭಕ್ತರು ಹಾಡುತ್ತಾರೆ. ಸುಖ ಹಾಗೂ ಶಾಂತಿ ಎರಡು ಪ್ರಕಾರವಿದೆ. ಸತ್ಯಯುಗದಲ್ಲಿ ಸುಖವಿದೆ ಉಳಿದೆಲ್ಲಾ ಆತ್ಮಗಳು ಶಾಂತಿದೇಶದಲ್ಲಿ ಇರುತ್ತಾರೆ. ಈ ಪರಿಚಯವನ್ನೂ ಸಹ ಕೊಡಬೇಕಾಗುತ್ತದೆ. ಹೊಸಜಗತ್ತಿನಲ್ಲಿ ಹೊಸಭಾರತ ರಾಮರಾಜ್ಯವಿತ್ತು. ಅದರಲ್ಲಿ ಸುಖವಿದೆ. ಅದಕ್ಕಾಗಿಯೇ ರಾಮರಾಜ್ಯದ ಮಹಿಮೆಯಿದೆ. ಅದಕ್ಕೆ ರಾಮರಾಜ್ಯ ಎಂದು ಹೇಳುತ್ತಾರೆಂದಮೇಲೆ ಇದಕ್ಕೆ ರಾವಣರಾಜ್ಯ ಎನ್ನಬೇಕಾಗುತ್ತದೆ ಏಕೆಂದರೆ ಇಲ್ಲಿ ದುಃಖವಿದೆ, ಅಲ್ಲಿ ಸುಖವಿದೆ. ತಂದೆಯು ಬಂದು ಸುಖ ಕೊಡುತ್ತಾರೆ. ಉಳಿದವರೆಲ್ಲರಿಗೂ ಶಾಂತಿಧಾಮದಲ್ಲಿ ಶಾಂತಿ ಸಿಗುತ್ತದೆ. ಶಾಂತಿ ಹಾಗೂ ಸುಖದಾತ ತಂದೆಯಾಗಿದ್ದಾರಲ್ಲವೆ. ಇಲ್ಲಿ ಅಶಾಂತಿ, ದುಃಖವಿದೆ ಅಂದಮೇಲೆ ಬುದ್ಧಿಯಲ್ಲಿ ಈ ಜ್ಞಾನದ ಅಂಶಗಳನ್ನು ಮೆಲುಕು ಹಾಕುತ್ತಿರಬೇಕು. ಇದರಲ್ಲಿ ಸ್ಥಿತಿಯು ಚೆನ್ನಾಗಿರಬೇಕು. ಇದನ್ನು ಚಿಕ್ಕ ಮಕ್ಕಳಿಗೂ ಸಹ ಕಲಿಸಲಾಗುತ್ತದೆ ಆದರೆ ಅವರು ಅರ್ಥ ಮಾಡಿಕೊಳ್ಳಲಾಗುವುದಿಲ್ಲ. ಇದರಲ್ಲಿ ಬಹಳ ಆಳವಾದ ಧಾರಣೆ ಬೇಕು. ಯಾರಾದರೂ ಪ್ರಶ್ನೆ ಕೇಳಿದರೆ ತಿಳಿಸಬೇಕಾಗುತ್ತದೆ. ಸ್ಥಿತಿಯು ಚೆನ್ನಾಗಿರಬೇಕು ಇಲ್ಲವಾದರೆ ಕೆಲವೊಮ್ಮೆ ದೇಹಾಭಿಮಾನದಲ್ಲಿ, ಕೆಲವೊಮ್ಮೆ ಕ್ರೋಧ, ಮೋಹದಲ್ಲಿ ಬೀಳುತ್ತಿರುತ್ತಾರೆ. ಬರೆಯುತ್ತಾರೆ - ಬಾಬಾ, ಇಂದು ನಾವು ಕ್ರೋಧದಲ್ಲಿ ಬಿದ್ದೆವು, ಇಂದು ನಾವು ಲೋಭದಲ್ಲಿ ಬಿದ್ದೆವೆಂದು. ಅವಸ್ಥೆಯು ಶಕ್ತಿಶಾಲಿ ಆಗಿದ್ದಾಗ ಬೀಳುವ ಮಾತೇ ಇಲ್ಲ. ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವ ಸರ್ವೀಸ್ ಮಾಡಬೇಕೆಂದು ಬಹಳ ಆಸಕ್ತಿಯಿರುತ್ತದೆ. ಗೀತೆಯೂ ಸಹ ಬಹಳ ಚೆನ್ನಾಗಿದೆ - ಬಾಬಾ, ನೀವು ಬಂದರೆ ನಾವು ಬಹಳ ಸುಖಿಗಳಾಗುತ್ತೇವೆ. ತಂದೆಯಂತೂ ಅವಶ್ಯವಾಗಿ ಬರಲೇಬೇಕು ಇಲ್ಲವಾದರೆ ಪತಿತ ಸೃಷ್ಟಿಯನ್ನು ಯಾರು ಪಾವನ ಮಾಡುತ್ತಾರೆ? ಕೃಷ್ಣನಂತೂ ದೇಹಧಾರಿ. ಕೃಷ್ಣ ಅಥವಾ ಬ್ರಹ್ಮಾ-ವಿಷ್ಣು-ಶಂಕರರ ಹೆಸರನ್ನು ಹೇಳಲು ಸಾಧ್ಯವಿಲ್ಲ. ಪತಿತ-ಪಾವನ ಬನ್ನಿ ಎಂದು ಗಾಯನ ಮಾಡುತ್ತಾರೆ, ಇದು ನೀವು ಯಾರಿಗೆ ಹಾಡಿದ್ದು ಎಂದು ಅವರನ್ನು ಕೇಳಬೇಕು. ಪತಿತ-ಪಾವನ ಯಾರು, ಅವರು ಯಾವಾಗ ಬರುತ್ತಾರೆ? ಪತಿತ-ಪಾವನ ಅವರಾಗಿದ್ದಾರೆ, ಅವರನ್ನು ಖಂಡಿತ ಪತಿತ ಜಗತ್ತಿನಲ್ಲಿಯೇ ಕರೆಯುತ್ತಾರೆ. ಪಾವನ ಜಗತ್ತು ಎಂದು ಸತ್ಯಯುಗಕ್ಕೆ ಹೇಳಲಾಗುತ್ತದೆ. ಪತಿತ ಜಗತ್ತನ್ನು ಯಾರು ಪಾವನ ಮಾಡುತ್ತಾರೆ? ಭಗವಂತನೇ ರಾಜಯೋಗವನ್ನು ಕಲಿಸಿದ್ದರು ಹಾಗೂ ಈ ವಿಕಾರಗಳ ಮೇಲೆ ವಿಜಯಿಗಳನ್ನಾಗಿ ಮಾಡಿದರು ಎಂದು ಗೀತೆಯಲ್ಲಿಯೂ ಸಹ ಇದೆ. ಕಾಮ ಮಹಾಶತ್ರುವಾಗಿದೆ. ನಾನು ರಾಜಯೋಗವನ್ನು ಕಲಿಸುತ್ತೇನೆ, ಕಾಮ ಮಹಾಶತ್ರುವಾಗಿದೆ ಎಂಬುದನ್ನು ಯಾರು ಹೇಳಿದರು ಎಂದು ಕೇಳಬೇಕಾಗುತ್ತದೆ. ನಾನು ಸರ್ವವ್ಯಾಪಿಯಾಗಿದ್ದೇನೆ ಎಂದು ಯಾರು ಹೇಳಿದರು? ಯಾವ ಶಾಸ್ತ್ರದಲ್ಲಿ ಬರೆಯಲಾಯಿತು? ಪತಿತ-ಪಾವನ ಎಂದು ಯಾರಿಗೆ ಹೇಳಲಾಗುತ್ತದೆ? ಪತಿತ-ಪಾವನಿ ಗಂಗೆಯೇ ಅಥವಾ ಬೇರೆ ಯಾರಾದರೂ ಇದ್ದಾರೆಯೇ? ಪತಿತ-ಪಾವನ ಬನ್ನಿ ಎಂದು ಗಾಂಧೀಜಿಯೂ ಕರೆಯುತ್ತಿದ್ದರು. ಗಂಗೆಯಂತೂ ಸದಾಕಾಲ ಇದ್ದೇ ಇದೆ. ಅದೇನೂ ಹೊಸದಲ್ಲ. ಗಂಗೆಗೆ ಅವಿನಾಶಿ ಎಂದು ಹೇಳಬಹುದು ಬಾಕಿ ತತ್ವ ತಮೋಗುಣಿಯಾಗುತ್ತದೆ. ಅದರಲ್ಲಿ ಚಂಚಲತೆ ಬರುತ್ತದೆ, ಪ್ರವಾಹ ಬರುತ್ತದೆ, ತನ್ನ ದಾರಿಯನ್ನೂ ಬದಲಾಯಿಸಿಬಿಡುತ್ತದೆ. ಸತ್ಯಯುಗದಲ್ಲಿ ಎಲ್ಲವೂ ಬಹಳ ಸರಿಯಾಗಿರುತ್ತದೆ. ಹೆಚ್ಚುಕಡಿಮೆ ಮಳೆ ಬೀಳಲು ಸಾಧ್ಯವಿಲ್ಲ, ಅಲ್ಲಿ ದುಃಖದ ಮಾತಿಲ್ಲ. ಪತಿತ-ಪಾವನ ನಮ್ಮ ಬಾಬಾನೇ ಆಗಿದ್ದಾರೆಂದು ಬುದ್ಧಿಯಲ್ಲಿರಬೇಕು. ಪತಿತ-ಪಾವನನನ್ನು ನೆನಪು ಮಾಡುವಾಗ ಹೇ ಭಗವಂತ, ಹೇ ಬಾಬಾ ಎಂದು ಹೇಳುತ್ತಾರೆ. ಇದು ಯಾರು ಹೇಳಿದರು? ಆತ್ಮ. ತಮಗೆ ಗೊತ್ತಿದೆ - ಪತಿತ-ಪಾವನ ಶಿವತಂದೆಯು ಬಂದಿದ್ದಾರೆ, ನಿರಾಕಾರ ಅಕ್ಷರವನ್ನು ಅವಶ್ಯವಾಗಿ ಹಾಕಬೇಕು ಇಲ್ಲವಾದರೆ ಸಾಕಾರ ಬಾಬಾ ಎಂದು ತಿಳಿದುಕೊಳ್ಳುತ್ತಾರೆ. ಆತ್ಮ ಪತಿತವಾಗಿದೆ, ಎಲ್ಲರೂ ಈಶ್ವರನೆಂದು ಹೇಳಲು ಸಾಧ್ಯವಿಲ್ಲ. ಅಹಂ ಬ್ರಹ್ಮಾಸ್ಮಿ, ಶಿವೋಹಂ ಎನ್ನುವುದು ಒಂದೇ ಆಗಿದೆ. ಆದರೆ ರಚನೆಯ ಮಾಲೀಕ ಒಬ್ಬರೇ ರಚೈತನಾಗಿದ್ದಾರೆ. ಭಲೆ ಮನುಷ್ಯರು ಬೇರೆ ವಿಸ್ತಾರದ ಅರ್ಥವನ್ನು ತಿಳಿಸಬಹುದು ಆದರೆ ನಮ್ಮ ಮಾತು ಒಂದು ಸೆಕೆಂಡಿನದಾಗಿದೆ. ಸೆಕೆಂಡಿನಲ್ಲಿ ತಂದೆಯ ಆಸ್ತಿ ಸಿಗುತ್ತದೆ. ತಂದೆಯ ಆಸ್ತಿ ಸ್ವರ್ಗದ ರಾಜ್ಯಭಾಗ್ಯವಾಗಿದೆ. ಅದಕ್ಕೆ ಜೀವನ್ಮುಕ್ತಿಯೆಂದು ಹೇಳಲಾಗುತ್ತದೆ. ಇದು ಜೀವನ ಬಂಧನವಾಗಿದೆ. ನೀವು ಬಂದಿದ್ದೇ ಆದರೆ ಅವಶ್ಯವಾಗಿ ನಾವು ಸ್ವರ್ಗದ ಮುಕ್ತಿ-ಜೀವನ್ಮುಕ್ತಿಯ ಆಸ್ತಿಯನ್ನು ಕೊಡಿಸುತ್ತೇವೆ ಎಂದು ಹೇಳಬೇಕು. ಆದ್ದರಿಂದಲೇ ಮುಕ್ತಿ-ಜೀವನ್ಮುಕ್ತಿದಾತ ಒಬ್ಬರೇ ಆಗಿದ್ದಾರೆ ಎಂದು ಬರೆಯಲಾಗುತ್ತದೆ. ಇದನ್ನೂ ಸಹ ತಿಳಿಸಿಕೊಡಬೇಕು. ಸತ್ಯಯುಗದಲ್ಲಿ ಆದಿಸನಾತನ ದೇವಿ-ದೇವತಾ ಧರ್ಮ ಒಂದೇ ಇರುತ್ತದೆ ಅಲ್ಲಿ ದುಃಖದ ಹೆಸರೂ ಇರುವುದಿಲ್ಲ. ಅದು ಸುಖಧಾಮವಾಗಿದೆ, ಅಲ್ಲಿ ಸೂರ್ಯವಂಶಿ ರಾಜ್ಯ ನಡೆಯುತ್ತದೆ ನಂತರ ತ್ರೇತಾದಲ್ಲಿ ಚಂದ್ರವಂಶಿ ರಾಜ್ಯ. ಮತ್ತೆ ದ್ವಾಪರದಲ್ಲಿಯೇ ಇಸ್ಲಾಮಿ, ಬೌದ್ಧಿಗಳು ಬರುತ್ತಾರೆ. ಎಲ್ಲಾ ಪಾತ್ರವು ದಾಖಲೆಯಾಗಿದೆ. ಒಂದು ಬಿಂದುರೂಪ ಆತ್ಮನಲ್ಲಿ ಮತ್ತು ಪರಮಾತ್ಮನಲ್ಲಿ ಎಷ್ಟೊಂದು ಪಾತ್ರ ತುಂಬಿದೆ. ನಾನು ಜ್ಯೋತಿರ್ಲಿಂಗದಷ್ಟು ದೊಡ್ಡದಾಗಿಲ್ಲವೆಂದು ಶಿವನ ಚಿತ್ರದಲ್ಲಿಯೂ ಸಹ ಬರೆಯಬೇಕಾಗುತ್ತದೆ. ನಾನಂತೂ ನಕ್ಷತ್ರ ಮಾದರಿಯಾಗಿದ್ದೇನೆ. ಆತ್ಮನೂ ಸಹ ನಕ್ಷತ್ರವಾಗಿದೆ, ಭೃಕುಟಿಯ ಮಧ್ಯದಲ್ಲಿ ಹೊಳೆಯುತ್ತಿರುವಂತಹ ನಕ್ಷತ್ರವಿದೆ ಎಂದೂ ಸಹ ಹಾಡುತ್ತಾರೆ ಹಾಗಾದರೆ ಅದು ಆತ್ಮವೇ ಆಗಿದೆ, ನಾನೂ ಸಹ ಪರಮಪಿತ ಪರಮ ಆತ್ಮನಾಗಿದ್ದೇನೆ ಆದರೆ ನಾನು ಪರಮ, ಪತಿತ-ಪಾವನನಾಗಿದ್ದೇನೆ. ನನ್ನ ಗುಣ ಬೇರೆಯಿದೆ. ಎಲ್ಲಾ ಗುಣವನ್ನೂ ಸಹ ಬರೆಯಬೇಕು. ಒಂದುಕಡೆ ಶಿವನ ಮಹಿಮೆ ಮತ್ತೊಂದು ಕಡೆ ಶ್ರೀಕೃಷ್ಣನ ಮಹಿಮೆಯ ವ್ಯತ್ಯಾಸದ ಮಾತುಗಳ ವಿಷಯವನ್ನು ಚೆನ್ನಾಗಿ ಬರೆಯಬೇಕು. ಇದನ್ನು ಮನುಷ್ಯರು ಚೆನ್ನಾಗಿ ಓದಿ ತಿಳಿದುಕೊಳ್ಳಲು ಸಾಧ್ಯವಾಗಲಿ. ಸ್ವರ್ಗ ಮತ್ತು ನರಕ, ಸುಖ ಮತ್ತು ದುಃಖ, ಅಥವಾ ಕೃಷ್ಣನ ದಿನ ಅಥವಾ ರಾತ್ರಿಯೆಂದಾದರೂ ಹೇಳಿ, ಬ್ರಹ್ಮನ ಹಗಲು ಮತ್ತು ರಾತ್ರಿ ಎಂದಾದರೂ ಹೇಳಿ. ಸುಖ ಮತ್ತು ದುಃಖ ಹೇಗೆ ನಡೆಯುತ್ತದೆ - ಎಂಬುದನ್ನು ತಿಳಿದಿದ್ದೀರಿ. ಸೂರ್ಯವಂಶಿಯರು 16 ಕಲೆಯುಳ್ಳವರು, ಚಂದ್ರವಂಶಿಯರು 14 ಕಲೆಯವರಾಗಿದ್ದಾರೆ. ಅವರು ಸಂಪೂರ್ಣ ಸತೋಪ್ರಧಾನ, ಅವರು (ತ್ರೇತಾ) ಸತೋ ಆಗಿದ್ದಾರೆ. ಸೂರ್ಯವಂಶಿಯವರೆ ನಂತರ ಚಂದ್ರವಂಶಿಯರಾಗುತ್ತಾರೆ. ಸೂರ್ಯವಂಶಿಯವರು ತ್ರೇತಾದಲ್ಲಿ ಬರುತ್ತಾರೆಂದರೆ ಅವಶ್ಯವಾಗಿ ಚಂದ್ರವಂಶಿ ಕುಲದಲ್ಲಿ ಜನ್ಮವನ್ನು ತೆಗೆದುಕೊಳ್ಳುತ್ತಾರೆ. ಭಲೆ ರಾಜ್ಯಪದವಿಯನ್ನು ಪಡೆಯುತ್ತಾರೆ - ಈ ಮಾತುಗಳು ಬುದ್ಧಿಯಲ್ಲಿ ಚೆನ್ನಾಗಿ ಕೂರಿಸಬೇಕು. ಯಾರು ಎಷ್ಟು ನೆನಪಿನಲ್ಲಿರುತ್ತಾರೆ, ದೇಹೀ ಅಭಿಮಾನಿಯಾಗುತ್ತಾರೆಯೋ ಆಗ ಧಾರಣೆಯಾಗುತ್ತದೆ. ಅವರು ಸರ್ವೀಸನ್ನೂ ಸಹ ಚೆನ್ನಾಗಿ ಮಾಡುತ್ತಾರೆ. ಅನ್ಯರಿಗೆ ತಿಳಿಸಿಕೊಡುವ ಸಲುವಾಗಿ ಸ್ಪಷ್ಟ ಮಾಡಿ ಯಾರಿಗಾದರೂ ತಿಳಿಸಿದರೆ ನಾವು ಹೀಗೆ ಕುಳಿತುಕೊಳ್ಳುತ್ತೇವೆ, ಹೀಗೆ ಧಾರಣೆ ಮಾಡುತ್ತೇವೆ, ಹೀಗೆ ತಿಳಿಸುತ್ತೇವೆ, ಈ ರೀತಿ ವಿಚಾರಸಾಗರ ಮಂಥನ ಮಾಡುತ್ತೇವೆ. ಇಡೀ ಸಮಯ ವಿಚಾರಸಾಗರ ಮಂಥನ ನಡೆಯುತ್ತಾ ಇರುತ್ತದೆ. ಯಾರಲ್ಲಿ ಜ್ಞಾನವಿಲ್ಲ ಅವರ ಮಾತು ಬೇರೆ, ಅವರಿಗೆ ಧಾರಣೆಯೂ ಆಗುವುದಿಲ್ಲ. ಧಾರಣೆಯಾಗುತ್ತದೆ ಎಂದರೆ ಸರ್ವೀಸನ್ನು ಮಾಡಬೇಕು. ಈಗಂತೂ ಸರ್ವೀಸ್ ಬಹಳಷ್ಟು ವೃದ್ಧಿಯಾಗುತ್ತದೆ. ದಿನ-ಪ್ರತಿದಿನ ಮಹಿಮೆ ಹೆಚ್ಚುತ್ತಾ ಹೋಗುತ್ತದೆ ನಂತರ ನಿಮ್ಮ ಪ್ರದರ್ಶನದಲ್ಲಿಯೂ ಸಹ ಎಷ್ಟೊಂದು ಜನರು ಬರುತ್ತಾರೆ. ಎಷ್ಟೊಂದು ಚಿತ್ರಗಳನ್ನು ಮಾಡಬೇಕಾಗುತ್ತದೆ. ಎಷ್ಟೊಂದು ದೊಡ್ಡ ಮಳಿಗೆಗಳನ್ನು ಹಾಕಬೇಕಾಗುತ್ತದೆ. ಇದೆಲ್ಲವನ್ನೂ ತಿಳಿಸಿಕೊಡಲು ಏಕಾಂತವಾಗಿರಬೇಕು. ನಮ್ಮ ಚಿತ್ರಗಳಲ್ಲಿ ಮುಖ್ಯವಾದವು ವೃಕ್ಷ, ಚಕ್ರ ಮತ್ತು ಈ ಲಕ್ಷ್ಮಿ-ನಾರಾಯಣರ ಚಿತ್ರಗಳಾಗಿವೆ. ರಾಧಾ-ಕೃಷ್ಣರ ಚಿತ್ರದಿಂದ ಇವರು ಯಾರೆಂದು ಇಷ್ಟೊಂದು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಸಮಯ ತಂದೆಯು ನಮ್ಮನ್ನು ಇಂತಹ ಪಾವನರನ್ನಾಗಿ ಮಾಡುತ್ತಿದ್ದಾರೆ ಎಂಬುದನ್ನು ನೀವು ತಿಳಿದಿದ್ದೀರಿ. ಎಲ್ಲರೂ ಒಂದೇ ರೀತಿ ಸಂಪೂರ್ಣರಾಗುವುದಿಲ್ಲ. ಆತ್ಮ ಪವಿತ್ರವಾಗುತ್ತದೆ ಆದರೆ ಎಲ್ಲರೂ ಸಂಪೂರ್ಣ ಜ್ಞಾನವನ್ನು ಧಾರಣೆ ಮಾಡುವುದಿಲ್ಲ. ಧಾರಣೆಯಾಗಲಿಲ್ಲವೆಂದರೆ ಇವರು ಕಡಿಮೆ ಪದವಿ ಪಡೆಯುತ್ತಾರೆಂದು ತಿಳಿಯಲಾಗುತ್ತದೆ.

ಈಗ ನಿಮ್ಮ ಬುದ್ಧಿ ಎಷ್ಟೊಂದು ತೀಕ್ಷ್ಣವಾಗಿದೆ. ಪ್ರತಿಯೊಂದು ತರಗತಿಯಲ್ಲಿ ನಂಬರ್ವಾರಂತೂ ಇರುತ್ತಾರೆ. ಕೆಲವರು ತೀಕ್ಷ್ಣವಾಗಿರುತ್ತಾರೆ, ಇನ್ನೂ ಕೆಲವರು ಮಂದಬುದ್ಧಿಯವರು ಆಗಿರುತ್ತಾರೆ. ಇಲ್ಲಿಯೂ ಸಹ ನಂಬರ್ವಾರ್ ಇರುತ್ತಾರೆ. ಒಂದುವೇಳೆ ಯಾರಾದರೂ ಒಳ್ಳೆಯ ವ್ಯಕ್ತಿಗೆ ಮೂರನೇ ದರ್ಜೆಯವರು ತಿಳಿಸಿಕೊಟ್ಟರೆ ಇಲ್ಲಿ ಏನೂ ಇಲ್ಲವೆಂದು ತಿಳಿದುಕೊಳ್ಳುತ್ತಾರೆ ಆದ್ದರಿಂದ ಒಳ್ಳೆಯ ವ್ಯಕ್ತಿಗಳಿಗೆ ತಿಳಿಸಿಕೊಡುವಂತಹವರೂ ಸಹ ಚೆನ್ನಾಗಿ ತಿಳಿಸಿಕೊಡಬೇಕು. ಎಲ್ಲರೂ ಒಂದೇ ರೀತಿಯಾಗಿ ಉತ್ತೀರ್ಣರಾಗುವುದಿಲ್ಲ. ತಂದೆಯ ಬಳಿಯಂತೂ ಒಂದು ಮಿತಿಯಿರುತ್ತದೆ. ಕಲ್ಪ-ಕಲ್ಪವೂ ಈ ಓದಿನ ಫಲಿತಾಂಶ ಹೊರಬರುತ್ತದೆ. ಮುಖ್ಯವಾಗಿ 8 ಜನರು ಉತ್ತೀರ್ಣರಾಗುತ್ತಾರೆ ನಂತರ 100 ಜನರು, 16000, ನಂತರ ಪ್ರಜೆಗಳು. ಅದರಲ್ಲಿಯೂ ಸಹ ಸಾಹುಕಾರರು ಬಡವರು ಎಲ್ಲರೂ ಇರುತ್ತಾರೆ. ಈ ಸಮಯದಲ್ಲಿ ಇವರು ಎಂತಹ ಪುರುಷಾರ್ಥ ಮಾಡುತ್ತಾರೆ? ಎಂದು ತಿಳಿದುಬರುತ್ತದೆ. ಯಾವ ಪದವಿ ಪಡೆಯಲು ಯೋಗ್ಯರಾಗುತ್ತಾರೆ? ಶಿಕ್ಷಕರಿಗಂತೂ ಗೊತ್ತಾಗುತ್ತದೆ. ಶಿಕ್ಷಕರಲ್ಲಿಯೂ ಸಹ ನಂಬರ್ವಾರ್ ಇರುತ್ತಾರೆ. ಕೆಲವು ಶಿಕ್ಷಕರು ಚೆನ್ನಾಗಿರುತ್ತಾರೆಂದರೆ ಎಲ್ಲರೂ ಸಂತೋಷಪಡುತ್ತಾರೆ. ಇವರು ಚೆನ್ನಾಗಿ ಓದಿಸುತ್ತಾರೆ, ಬಹಳ ಪ್ರೀತಿಯನ್ನು ಮಾಡುತ್ತಾರೆ ಎಂದು ಹೇಳುತ್ತಾರೆ. ಚಿಕ್ಕ ಸೇವಾಕೇಂದ್ರವನ್ನು ದೊಡ್ಡದನ್ನಾಗಿ ಹಿರಿಯ ಶಿಕ್ಷಕಿಯರೆ ಮಾಡುತ್ತಾರಲ್ಲವೆ. ಬುದ್ಧಿಯಿಂದ ಕೆಲಸವನ್ನು ತೆಗೆದುಕೊಳ್ಳಬೇಕಾಗುತ್ತದೆ. ಜ್ಞಾನಮಾರ್ಗದಲ್ಲಿ ಅತೀ ಮಧುರರಾಗಬೇಕು. ಯಾವಾಗ ಮಧುರ ತಂದೆಯ ಜೊತೆ ಪೂರ್ಣ ಯೋಗ ಇದ್ದಿದ್ದೇ ಆದರೆ ಧಾರಣೆಯೂ ಸಹ ಚೆನ್ನಾಗಿ ಆಗುತ್ತದೆ ಆಗ ಮಧುರರಾಗುತ್ತಾರೆ. ಇಂತಹ ಮಧುರ ತಂದೆಯ ಜೊತೆ ಅನೇಕರ ಯೋಗ ಇರುವುದಿಲ್ಲ. ತಿಳಿದುಕೊಳ್ಳುವುದೇ ಇಲ್ಲ - ಗೃಹಸ್ಥ ವ್ಯವಹಾರದಲ್ಲಿರುತ್ತಾ ತಂದೆಯ ಜೊತೆ ಪೂರ್ಣ ಯೋಗವನ್ನು ಜೋಡಿಸಬೇಕು. ಮಾಯೆಯ ಬಿರುಗಾಳಿಯಂತೂ ಬಂದೇ ಬರುತ್ತದೆ. ಕೆಲವರಿಗೆ ಹಳೆಯ ಮಿತ್ರ-ಸಂಬಂಧಿಗಳ ನೆನಪು ಬರುತ್ತದೆ, ಕೆಲವರಿಗೆ ಏನೇನೋ ನೆನಪು ಬರುತ್ತದೆ. ಮಿತ್ರ ಸಂಬಂಧಿಗಳು ಮುಂತಾದವರ ನೆನಪು ಆತ್ಮನನ್ನು ಮೈಲಿಗೆ ಮಾಡಿಬಿಡುತ್ತದೆ. ಕೊಳಕು ಹತ್ತುವುದರಿಂದ ಮತ್ತೆ ಗಾಬರಿಯಾಗುತ್ತಾರೆ. ಇದರಲ್ಲಿ ಗಾಬರಿಯಾಗಬಾರದು. ಇದನ್ನು ಮಾಯೆ ಮಾಡಿಸುತ್ತದೆ. ಆದರೆ ಕೊಳಕಂತೂ ನಮ್ಮ ಮೇಲೆ ಬೀಳುತ್ತದೆ. ಹೋಳಿಯಲ್ಲಿ ಕೊಳಕು ಬೀಳುತ್ತದೆಯಲ್ಲವೆ. ನಾವು ತಂದೆಯ ನೆನಪಿನಲ್ಲಿದ್ದರೆ ಕೊಳಕು ಬೀಳುವುದಿಲ್ಲ. ತಂದೆಯನ್ನು ಮರೆತಿದ್ದೇ ಆದರೆ ಮೊದಲನೆ ನಂಬರ್ ದೇಹಾಭಿಮಾನ, ದೇಹಾಭಿಮಾನದ ಕೊಳಕು ಬೀಳುತ್ತದೆ. ನಂತರ ಲೋಭ-ಮೋಹ ಎಲ್ಲವೂ ಬಂದುಬಿಡುತ್ತದೆ. ತನಗೋಸ್ಕರ ಪರಿಶ್ರಮ ಪಡಬೇಕಾಗಿದೆ. ಸಂಪಾದನೆ ಮಾಡಿಕೊಳ್ಳಬೇಕು ಮತ್ತು ನಂತರ ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುವ ಪರಿಶ್ರಮ ಪಡಬೇಕಾಗಿದೆ. ಸೇವಾಕೇಂದ್ರದಲ್ಲಿ ಒಳ್ಳೆಯ ಸರ್ವೀಸ್ ಆಗುತ್ತದೆ. ಇಲ್ಲಿ ಬರುತ್ತಾರೆಂದರೆ ಹೇಳುತ್ತಾರೆ - ನಾವು ಹೋದ ನಂತರ ಸೇವಾಕೇಂದ್ರವನ್ನು ತೆರೆಯುವಂತಹ ಪ್ರಬಂಧ ಮಾಡುತ್ತೇವೆಂದು ಹೇಳುತ್ತಾರೆ. ಇಲ್ಲಿಂದ ಹೋದ ನಂತರ ಸಮಾಪ್ತಿಯಾಗಿಬಿಡುತ್ತದೆ. ನೀವು ಇಲ್ಲಿಂದ ಹೋದ ನಂತರ ಎಲ್ಲವನ್ನೂ ಮರೆತುಬಿಡುತ್ತೀರಿ ಎಂದು ತಂದೆಯು ಸ್ವಯಂ ಹೇಳುತ್ತಾರೆ. ಅನ್ಯರಿಗೆ ತಿಳಿಸಿಕೊಡಲು ತಯಾರಾಗುವವರೆಗೂ ಭಟ್ಟಿಯಲ್ಲಿ ಇರಬೇಕಾಗುತ್ತದೆ. ಶಿವಬಾಬಾನಿಗಂತೂ ಎಲ್ಲರ ಜೊತೆ ಮಧುರ ಸಂಬಂಧವಿದೆಯಲ್ಲವೇ? ತಿಳೀಯಬಹುದಾಗಿದೆ, ಯಾವ ರೀತಿಯ ಸೇವೆ ಮಾಡುತ್ತಾರೆಂದು, ಸ್ಥೂಲ ಸೇವೆಯ ಬಹುಮಾನವಂತೂ ಅವಶ್ಯವಾಗಿ ಸಿಗುತ್ತದೆ. ಬಹಳ ಪರಿಶ್ರಮದಿಂದ ಸೇವೆಯನ್ನು ಮಾಡುತ್ತಾರೆ. ಆದರೆ ವಿಷಯವಂತೂ(ಸಬ್ಜೆಕ್ಟ್) ಇದೆಯಲ್ಲವೆ. ಆ ಓದಿನಲ್ಲಿಯೂ ಸಹ ವಿಷಯಗಳಿರುತ್ತವೆ (ಸಬ್ಜೆಕ್ಟ್) ಹಾಗೆಯೇ ಈ ಆತ್ಮೀಯ ಓದಿನಲ್ಲಿಯೂ ಸಹ ವಿಷಯಗಳಿರುತ್ತವೆ. ಮೊದಲನೆಯ ನಂಬರಿನ ವಿಷಯ ನೆನಪು ನಂತರ ವಿದ್ಯೆ. ಉಳಿದೆಲ್ಲವೂ ಗುಪ್ತವಾಗಿದೆ. ನಾಟಕವನ್ನು ಸಹ ತಿಳಿದುಕೊಳ್ಳಬೇಕಾಗುತ್ತದೆ. ಪ್ರತಿಯೊಂದು ಯುಗಕ್ಕೆ 1250 ವರ್ಷಗಳು ಎಂದು ಕೆಲವರಿಗೆ ಗೊತ್ತೇ ಆಗುವುದಿಲ್ಲ. ಸತ್ಯಯುಗವು ಎಷ್ಟು ಸಮಯವಿತ್ತು. ಒಳ್ಳೆಯದು ಅಲ್ಲಿ ಯಾವ ಧರ್ಮವಿತ್ತು? ಎಲ್ಲರಿಗಿಂತ ಹೆಚ್ಚು ಜನ್ಮ ಇಲ್ಲಿ ಯಾರದು ಆಗಿರಬೇಕಾಗಿದೆ? ಬೌದ್ಧಿ, ಇಸ್ಲಾಮಿ, ಮುಂತಾದವರು ಇಷ್ಟೊಂದು ಜನ್ಮವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಕೆಲವರ ಬುದ್ಧಿಯಲ್ಲಿ ಈ ವಿಷಯವೇ ಇರುವುದಿಲ್ಲ. ಶಾಸ್ತ್ರವಾದಿಗಳನ್ನು ಕೇಳಬೇಕಾಗಿದೆ. ನೀವು ಭಗವಾನುವಾಚ ಎಂದು ಯಾರಿಗೆ ಹೇಳುತ್ತೀರಿ? ಸರ್ವಶಾಸ್ತ್ರಮಯಿ ಶಿರೋಮಣಿ ಗೀತೆಯಾಗಿದೆ. ಭಾರತದಲ್ಲಿ ಮೊಟ್ಟಮೊದಲು ದೇವಿ-ದೇವತಾ ಧರ್ಮವಿತ್ತು, ಅವರ ಶಾಸ್ತ್ರ ಯಾವುದು? ಗೀತೆಯನ್ನು ಯಾರು ನುಡಿಸಿದರು? ಕೃಷ್ಣ ಭಗವಾನುವಾಚವಂತೂ ಆಗಲು ಸಾಧ್ಯವಿಲ್ಲ. ಸ್ಥಾಪನೆ ಮತ್ತು ವಿನಾಶವನ್ನು ಮಾಡಿಸುವುದು ಭಗವಂತನ ಕಾರ್ಯವಾಗಿದೆ. ಕೃಷ್ಣನನ್ನು ಭಗವಂತನೆಂದು ಹೇಳುವುದಿಲ್ಲ. ಅವನಾದರೂ ಯಾವಾಗ ಬರುತ್ತಾನೆ? ಈಗ ಯಾವ ರೂಪದಲ್ಲಿದ್ದಾನೆ? ಶಿವತಂದೆ ಹಾಗೂ ಕೃಷ್ಣನ ವ್ಯತ್ಯಾಸದ ಮಹಿಮೆಯನ್ನು ಅವಶ್ಯವಾಗಿ ಬರೆಯಬೇಕು. ಶಿವ ಗೀತೆಯ ಭಗವಂತ, ಇವರಿಂದ ಶ್ರೀಕೃಷ್ಣನಿಗೆ ಪದವಿ ಸಿಕ್ಕಿದೆ. ಕೃಷ್ಣನ 84 ಜನ್ಮವನ್ನೂ ಸಹ ತೋರಿಸುತ್ತಾರೆ. ಕೊನೆಯಲ್ಲಿ ಬ್ರಹ್ಮಾರವರ ದತ್ತು ಚಿತ್ರವನ್ನೂ ಸಹ ತೋರಿಸಬೇಕು. ನಮ್ಮ ಬುದ್ಧಿಯಲ್ಲಿ ಹೇಗೆ 84 ಜನ್ಮದ ಮಾಲೆ ಹಾಗೆ ಹಾಕಲ್ಪಟ್ಟಿದೆ. ಲಕ್ಷ್ಮಿ-ನಾರಾಯಣರೂ ಸಹ 84 ಜನ್ಮಗಳನ್ನು ಅವಶ್ಯವಾಗಿ ತೋರಿಸಬೇಕಾಗುತ್ತದೆ. ರಾತ್ರಿ (ಅಮೃತವೇಳೆ) ವಿಚಾರಸಾಗರ ಮಂಥನ ಮಾಡಿ ಮತ್ತು ವಿಚಾರವನ್ನು ನಡೆಸಬೇಕಾಗುತ್ತದೆ. ಸೆಕೆಂಡಿನಲ್ಲಿ ಜೀವನ್ಮುಕ್ತಿ ಸಿಗುತ್ತದೆ ಇದಕ್ಕಾಗಿ ನಾವು ಏನು ಬರೆಯಬೇಕು? ಜೀವನ್ಮುಕ್ತಿ ಅಂದರೆ ಸ್ವರ್ಗದಲ್ಲಿ ಹೋಗುವುದಾಗಿದೆ. ಯಾವಾಗ ತಂದೆ ಸ್ವರ್ಗದ ರಚೈತ ಬರುತ್ತಾರೆ, ಅವರ ಮಕ್ಕಳಾಗ ಆಗ ಸ್ವರ್ಗದ ಮಾಲೀಕರಾಗುತ್ತಾರೆ. ಸತ್ಯಯುಗವು ಪುಣ್ಯಾತ್ಮಗಳ ಪ್ರಪಂಚವಾಗಿದೆ, ಈ ಕಲಿಯುಗ ಪಾಪಾತ್ಮರ ಪ್ರಪಂಚವಾಗಿದೆ. ಅದಾಗಿದೆ ನಿರ್ವಿಕಾರಿ ಪ್ರಪಂಚ. ಅಲ್ಲಿ ಮಾಯಾರಾವಣನ ರಾಜ್ಯವೇ ಇರುವುದಿಲ್ಲ. ಭಲೆ ಅಲ್ಲಿ ಈ ಎಲ್ಲಾ ಜ್ಞಾನವೂ ಇರುವುದಿಲ್ಲ ಆದರೆ ನಾನು ಆತ್ಮನಾಗಿದ್ದೇನೆ. ಈ ಶರೀರ ವೃದ್ಧ ಆಗಿದೆ, ಇದನ್ನು ಈಗ ಬಿಡಬೇಕಾಗಿದೆ - ಈ ವಿಚಾರವಂತೂ ಇರುತ್ತದೆಯಲ್ಲವೆ. ಇಲ್ಲಿಯಂತೂ ಆತ್ಮನ ಜ್ಞಾನವೂ ಸಹ ಯಾರಲ್ಲಿಯೂ ಇರುವುದಿಲ್ಲ. ತಂದೆಯಿಂದ ಜೀವನ್ಮುಕ್ತಿಯ ಆಸ್ತಿ ಸಿಗುತ್ತದೆ. ನೆನಪನ್ನೂ ಸಹ ಅವರನ್ನೇ ಮಾಡಬೇಕಾಗಿದೆಯಲ್ಲವೆ. ತಂದೆಯ ಆದೇಶವಾಗಿದೆ - ಮನ್ಮನಾಭವ. ಗೀತೆಯಲ್ಲಿ ಮನ್ಮನಾಭವ ಎಂಬುದನ್ನು ಯಾರು ಹೇಳಿದರು? ನನ್ನನ್ನು ನೆನಪು ಮಾಡಿ ಮತ್ತು ವಿಷ್ಣುಪುರಿಯನ್ನು ನೆನಪು ಮಾಡಿ - ಇದನ್ನು ಯಾರು ಹೇಳಲು ಸಾಧ್ಯವಿದೆ? ಕೃಷ್ಣನನ್ನಂತೂ ಪತಿತ-ಪಾವನನೆಂದು ಹೇಳಲು ಸಾಧ್ಯವಿಲ್ಲ. 84 ಜನ್ಮಗಳ ರಹಸ್ಯವನ್ನೂ ಸಹ ಯಾರಾದರೂ ತಿಳಿದಿದ್ದಾರೇನು ಆದುದರಿಂದ ನೀವು ಎಲ್ಲರಿಗೂ ತಿಳಿಸಿಕೊಡಬೇಕು. ನೀವು ಈ ಎಲ್ಲಾ ಮಾತುಗಳನ್ನು ತಿಳಿದುಕೊಂಡು ತನ್ನ ಮತ್ತು ಎಲ್ಲರ ಕಲ್ಯಾಣ ಮಾಡಿದ್ದೇ ಆದರೆ ನಿಮಗೆ ಬಹಳ ಗೌರವ ಸಿಗುತ್ತದೆ. ನಿರ್ಭಯರಾಗಿ, ತಿರುಗಾಡುತ್ತಿರಿ. ನೀವಂತೂ ಬಹಳ ಗುಪ್ತರಾಗಿದ್ದೀರಿ. ಭಲೆ ಡ್ರೆಸ್ಸನ್ನು ಬದಲಾಯಿಸಿ ಸರ್ವೀಸ್ ಮಾಡಿ. ಚಿತ್ರಗಳು ಸದಾಕಾಲ ಜೊತೆಯಲ್ಲಿರಲಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಮಧುರ ತಂದೆಯ ಜೊತೆ ಪೂರ್ಣ ಯೋಗವನ್ನಿಟ್ಟು ಅತೀ ಮಧುರ ಮತ್ತು ಆತ್ಮಾಭಿಮಾನಿಗಳಾಗಬೇಕು. ವಿಚಾರಸಾಗರ ಮಂಥನ ಮಾಡಿ ಮೊದಲು ಸ್ವಯಂ ಧಾರಣೆ ಮಾಡಬೇಕು. ನಂತರ ಅನ್ಯರಿಗೆ ತಿಳಿಸಬೇಕು.

2. ತನ್ನ ಸ್ಥಿತಿಯನ್ನು ಶಕ್ತಿಶಾಲಿ ಮಾಡಿಕೊಳ್ಳಬೇಕು. ನಿರ್ಭಯರಾಗಬೇಕು. ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವ ಆಸಕ್ತಿಯಿರಬೇಕು.

ವರದಾನ:
ಸದಾ ಖುಷಿಯ ಟಾನಿಕ್ ಅನ್ನು ತಿನ್ನಿಸುವಂತಹ ಖುಶಿಯಾಗಿರುವಂತಹ, ಅಧೃಷ್ಠಶಾಲಿ ಭವ

ನೀವು ಮಕ್ಕಳ ಬಳಿ ಸತ್ಯವಾದ ಅವಿನಾಶಿ ಧನವಿದೆ ಆದ್ದರಿಂದ ಎಲ್ಲರಿಗಿಂತಲೂ ಸಾಹುಕಾರರು ನೀವಾಗಿರುವಿರಿ. ಒಣ ರೊಟ್ಟಿ ಇದ್ದರೂ ಸಹಾ ತಿನ್ನುವಿರಿ ಆದರೆ ಖುಶಿಯ ಟಾನಿಕ್ ಆ ಒಣರೊಟ್ಟಿಯಲ್ಲಿ ತುಂಬಿದೆ, ಅದರ ಮುಂದೆ ಬೇರೆ ಯಾವುದೂ ಟಾನಿಕ್ಇಲ್ಲ. ಎಲ್ಲಕ್ಕಿಂತಲೂ ಒಳ್ಳೆಯ ಟಾನಿಕ್ ತಿನ್ನುವಂತಹ, ಸುಖದ ರೋಟಿ ತಿನ್ನುವಂತಹವರು ನೀವಾಗಿರುವಿರಿ ಆದ್ದರಿಂದ ಸದಾ ಖುಷಿಯಿಂದಿರುವಿರಿ. ಆದ್ದರಿಂದ ಈ ರೀತಿ ಖುಷಿಯಿಂದಿರಿ ಅದನ್ನು ಬೇರೆಯವರು ನೋಡಿ ಖುಷಿಯಾಗಿಬಿಡಬೇಕು ಆಗ ಹೇಳಲಾಗುವುದು ಅಧೃಷ್ಟಶಾಲಿ ಆತ್ಮಗಳು.

ಸ್ಲೋಗನ್:
ಜ್ಞಾನ ಪೂರ್ಣರು ಅವರೆ ಆಗಿದ್ದಾರೆ ಯಾರ ಒಂದು ಸಂಕಲ್ಪ ಅಥವಾ ಮಾತು ವ್ಯರ್ಥವಾಗಿ ಹೋಗುವುದಿಲ್ಲ.