19.02.21         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನೀವು ಈ ಸ್ಮಶಾನವನ್ನು ಪರಿಸ್ತಾನವನ್ನಾಗಿ ಮಾಡುತ್ತಿದ್ದೀರಿ, ಆದ್ದರಿಂದ ನಿಮಗೆ ಈ ಹಳೆಯ ಪ್ರಪಂಚ ಸ್ಮಶಾನದಿಂದ ಸಂಪೂರ್ಣ ವೈರಾಗ್ಯವಿರಬೇಕು.

ಪ್ರಶ್ನೆ:
ಬೇಹದ್ದಿನ ತಂದೆಯು ತಮ್ಮ ಆತ್ಮಿಕ ಮಕ್ಕಳ ವಿಚಿತ್ರವಾದ ಸೇವಕನಾಗಿದ್ದಾರೆ - ಹೇಗೆ?

ಉತ್ತರ:
ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನು ನಿಮ್ಮ ದೋಬಿ (ಅಗಸ) ಯಾಗಿದ್ದೇನೆ. ನೀವು ಮಕ್ಕಳನ್ನಷ್ಟೇ ಅಲ್ಲ, ಇಡೀ ಪ್ರಪಂಚದ ಛೀ ಛೀ ಕೊಳಕು ವಸ್ತುಗಳನ್ನು ಸೆಕೆಂಡಿನಲ್ಲಿ ಸ್ವಚ್ಛ ಮಾಡಿ ಬಿಡುತ್ತೇನೆ. ಆತ್ಮರೂಪಿ ವಸ್ತ್ರವು ಸ್ವಚ್ಛವಾದರೆ ಶರೀರವೂ ಶುದ್ಧವಾದದ್ದೇ ಸಿಗುತ್ತದೆ. ತಂದೆಯು ಇಂತಹ ವಿಚಿತ್ರ ಸೇವಕನಾಗಿದ್ದಾರೆ - ಮನ್ಮಾನಭವದ ಛೂ ಮಂತ್ರದಿಂದ ಸೆಕೆಂಡಿನಲ್ಲಿ ಸ್ವಚ್ಛ ಮಾಡಿ ಬಿಡುತ್ತಾರೆ.

ಓಂ ಶಾಂತಿ.
ಓಂ ಶಾಂತಿಯ ಅರ್ಥವನ್ನು ಮಕ್ಕಳಿಗೆ ತಂದೆಯು ತಿಳಿಸಿದ್ದಾರೆ. ನಾನಾತ್ಮನ ಸ್ವಧರ್ಮವು ಶಾಂತಿಯಾಗಿದೆ. ಶಾಂತಿಧಾಮಕ್ಕೆ ಹೋಗುವುದಕ್ಕಾಗಿ ಯಾವುದೇ ಪುರುಷಾರ್ಥ ಮಾಡಬೇಕಾಗುವುದಿಲ್ಲ, ಆತ್ಮವು ಸ್ವಯಂ ಶಾಂತ ಸ್ವರೂಪ, ಶಾಂತಿಧಾಮದ ನಿವಾಸಿಯಾಗಿದೆ. ಹಾ! ಸ್ವಲ್ಪ ಸಮಯ ಶಾಂತಿಯಲ್ಲಿರಬಹುದಾಗಿದೆ. ಆತ್ಮವೇ ಹೇಳುತ್ತದೆ- ನಾನು ಕರ್ಮೇಂದ್ರಿಯಗಳ ಹೊರೆಯಿಂದ ಸುಸ್ತಾಗಿ ಬಿಟ್ಟಿದ್ದೇನೆ. ನಾನು ನನ್ನ ಸ್ವಧರ್ಮದಲ್ಲಿ ಸ್ಥಿತನಾಗುತ್ತೇನೆ, ಶರೀರದಿಂದ ಭಿನ್ನವಾಗಿ ಬಿಡುತ್ತೇನೆ, ಆದರೆ ಕರ್ಮವನ್ನಂತೂ ಮಾಡಲೇಬೇಕಾಗಿದೆ. ಎಲ್ಲಿಯವರೆಗೆ ಶಾಂತಿಯಲ್ಲಿ ಕುಳಿತುಕೊಂಡಿರುತ್ತೀರಿ! ಆತ್ಮವು ಹೇಳುತ್ತದೆ - ನಾನು ಶಾಂತಿ ದೇಶದ ನಿವಾಸಿಯಾಗಿದ್ದೇನೆ, ಕೇವಲ ಇಲ್ಲಿ ಶರೀರದಲ್ಲಿ ಬರುವುದರಿಂದ ನಾನು ಟಾಕಿ (ಶಬ್ಧ) ಯಾಗಿದ್ದೇನೆ. ನಾನು ಆತ್ಮ ಅವಿನಾಶಿ, ನನ್ನ ಶರೀರವು ವಿನಾಶಿಯಾಗಿದೆ. ಆತ್ಮವು ಪಾವನ ಮತ್ತು ಪತಿತವಾಗುತ್ತದೆ. ಸತ್ಯಯುಗದಲ್ಲಿ ಪಂಚ ತತ್ವಗಳೂ ಸಹ ಸತೋಪ್ರಧಾನವಾಗಿರುತ್ತವೆ. ಇಲ್ಲಿ ಪಂಚ ತತ್ವಗಳೂ ತಮೋಪ್ರಧಾನವಾಗಿವೆ. ಚಿನ್ನದಲ್ಲಿ ತುಕ್ಕು ಬೀಳುವುದರಿಂದ ಚಿನ್ನವು ಪತಿತವಾಗಿ ಬಿಡುತ್ತದೆ ಮತ್ತೆ ಅದನ್ನು ಸ್ವಚ್ಛ ಮಾಡಲು ಭಟ್ಟಿಯಲ್ಲಿ ಹಾಕಲಾಗುತ್ತದೆ. ಇದರ ಹೆಸರೇ ಆಗಿದೆ- ಯೋಗಾಗ್ನಿ. ಪ್ರಪಂಚದಲ್ಲಂತೂ ಅನೇಕ ಪ್ರಕಾರದ ಹಠಯೋಗಗಳನ್ನು ಕಲಿಸುತ್ತಾರೆ, ಅದಕ್ಕೆ ಯೋಗಾಗ್ನಿಯೆಂದು ಹೇಳುವುದಿಲ್ಲ ಯೋಗಾಗ್ನಿಯು ಇದಾಗಿದೆ ಯಾವುದರಿಂದ ಪಾಪಗಳು ಸುಟ್ಟು ಹೋಗುತ್ತವೆ. ಆತ್ಮವನ್ನು ಪತಿತನಿಂದ ಪಾವನ ಮಾಡುವವರು ಪರಮಾತ್ಮನಾಗಿದ್ದಾರೆ, ಹೇ ಪತಿತ-ಪಾವನ ಬನ್ನಿ ಎಂದು ಅವರನ್ನೇ ಕರೆಯುತ್ತಾರೆ. ಡ್ರಾಮಾ ಪ್ಲಾನನುಸಾರ ಎಲ್ಲರೂ ಪತಿತ, ತಮೋಪ್ರಧಾನರಾಗಲೇಬೇಕಾಗಿದೆ. ಇದು ವೃಕ್ಷವಾಗಿದೆ, ಇದರ ಬೀಜ ರೂಪನು ಮೇಲಿದ್ದಾರೆ, ತಂದೆಯನ್ನು ಕರೆಯುವಾಗ ಬುದ್ಧಿಯು ಮೇಲೆ ಹೋಗುತ್ತದೆ ಯಾರಿಂದ ನೀವು ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರೋ ಅವರು ಈಗ ಕೆಳಗಡೆ ಬಂದಿದ್ದಾರೆ. ತಿಳಿಸುತ್ತಾರೆ - ಮಕ್ಕಳೇ, ನಾನು ಬರಲೇಬೇಕಾಗುತ್ತದೆ. ಅನೇಕ ಧರ್ಮಗಳ ಮನುಷ್ಯ ಸೃಷ್ಟಿಯ ವೃಕ್ಷವು ಈಗ ತಮೋಪ್ರಧಾನ, ಪತಿತವಾಗಿದೆ, ಜಡಜಡೀಭೂತ ಸ್ಥಿತಿಯನ್ನು ಹೊಂದಿದೆ. ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ - ಸತ್ಯಯುಗದಲ್ಲಿ ದೇವತೆಗಳು, ಕಲಿಯುಗದಲ್ಲಿ ಅಸುರರಿದ್ದಾರೆ. ಬಾಕಿ ಅಸುರರು ಮತ್ತು ದೇವತೆಗಳ ಯುದ್ಧವಾಗಲಿಲ್ಲ. ನೀವು ಯೋಗಬಲದಿಂದ ಆಸುರೀ ಪಂಚ ವಿಕಾರಗಳ ಮೇಲೆ ಜಯ ಗಳಿಸುತ್ತೀರಿ ಬಾಕಿ ಯಾವುದೇ ಹಿಂಸಕ ಯುದ್ಧದ ಮಾತಿಲ್ಲ. ನೀವು ಯಾವುದೇ ಪ್ರಕಾರದಿಂದ ಹಿಂಸೆ ಮಾಡುವುದಿಲ್ಲ, ಎಂದೂ ಯಾರನ್ನೂ ಹೊಡೆಯುವುದೂ ಇಲ್ಲ. ನೀವು ಡಬ್ಬಲ್ ಅಹಿಂಸಕರಾಗಿದ್ದೀರಿ. ಕಾಮ ಕಟಾರಿಯನ್ನು ನಡೆಸುವುದು ಬಹಳ ದೊಡ್ಡ ಪಾಪವಾಗಿದೆ. ತಂದೆಯು ತಿಳಿಸುತ್ತಾರೆ - ಈ ಕಾಮ ಕಟಾರಿಯೇ ಆದಿ-ಮಧ್ಯ-ಅಂತ್ಯ ದುಃಖ ಕೊಡುತ್ತದೆ, ಆದ್ದರಿಂದ ವಿಕಾರದಲ್ಲಿ ಹೋಗಬಾರದು. ತಾವು ಸರ್ವಗುಣ ಸಂಪನ್ನರು..... ಎಂದು ದೇವತೆಗಳ ಮುಂದೆ ಮಹಿಮೆ ಮಾಡುತ್ತಾರಲ್ಲವೆ. ಆತ್ಮವು ಹೇಳುತ್ತದೆ - ನಾವು ಪತಿತರಾಗಿದ್ದೇವೆ, ಆದ್ದರಿಂದಲೇ ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ಪಾವನರಿದ್ದಾಗ ಯಾರನ್ನೂ ಕರೆಯುವುದಿಲ್ಲ, ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಇಲ್ಲಂತೂ ಸಾಧು-ಸಂತ ಮೊದಲಾದವರು ಹೇ ಪತಿತ-ಪಾವನ ಸೀತಾರಾಂ ಎಂದು ಎಷ್ಟೊಂದು ಹಾಡುತ್ತಾರೆ. ತಂದೆಯು ತಿಳಿಸುತ್ತಾರೆ- ಈ ಸಮಯದಲ್ಲಿ ಇಡೀ ಪ್ರಪಂಚವು ಪತಿತವಾಗಿದೆ, ಇದರಲ್ಲಿಯೂ ಯಾರದೂ ದೋಷವಿಲ್ಲ. ಈ ನಾಟಕವು ಮಾಡಲ್ಪಟ್ಟಿದೆ. ನಾನು ಬರುವವರೆಗೆ ಇವರು ತಮ್ಮ ಪಾತ್ರವನ್ನಭಿನಯಿಸಬೇಕಾಗಿದೆ. ಜ್ಞಾನ ಮತ್ತು ಭಕ್ತಿ ನಂತರ ವೈರಾಗ್ಯ ಬರುವುದು. ಹಳೆಯ ಪ್ರಪಂಚದಿಂದ ವೈರಾಗ್ಯ. ಇದು ಬೇಹದ್ದಿನ ವೈರಾಗ್ಯವಾಗಿದೆ, ಅವರದು ಹದ್ದಿನ ವೈರಾಗ್ಯವಾಗಿದೆ.

ನೀವು ತಿಳಿದುಕೊಂಡಿದ್ದೀರಿ - ಈ ಹಳೆಯ ಪ್ರಪಂಚವು ಈಗ ಸಮಾಪ್ತಿಯಾಗಲಿದೆ, ಹೊಸ ಮನೆಯನ್ನು ಕಟ್ಟಿಸುತ್ತಾರೆಂದರೆ ಹಳೆಯ ಮನೆಯೊಂದಿಗೆ ವೈರಾಗ್ಯವುಂಟಾಗಿ ಬಿಡುತ್ತದೆಯಲ್ಲವೆ. ಬೇಹದ್ದಿನ ತಂದೆಯು ತಿಳಿಸುತ್ತಾರೆ - ಈಗ ನಿಮಗೆ ಸ್ವರ್ಗವೆಂಬ ಮನೆಯನ್ನು ಕಟ್ಟಿಸಿ ಕೊಡುತ್ತೇನೆ. ಈಗ ಇದು ನರಕವಾಗಿದೆ, ಸ್ವರ್ಗ-ಹೊಸ ಪ್ರಪಂಚವಾಗಿದೆ. ನರಕವು ಹಳೆಯ ಪ್ರಪಂಚವಾಗಿದೆ. ನಾವೀಗ ಹಳೆಯ ಪ್ರಪಂಚದಲ್ಲಿದ್ದು ಹೊಸ ಪ್ರಪಂಚವನ್ನು ಕಟ್ಟಿಸುತ್ತಿದ್ದೇವೆ. ಹಳೆಯ ಸ್ಮಶಾನದಲ್ಲಿ ನಾವು ಸ್ವರ್ಗವನ್ನು ಸ್ಥಾಪಿಸುತ್ತೇವೆ. ಇದೇ ಜಮುನಾ ನದಿಯ ತೀರದಲ್ಲಿ ಮಹಲುಗಳು ತಯಾರಾಗುತ್ತವೆ. ಇದೇ ದೆಹಲಿ, ಜಮುನಾ ನದಿ ಇತ್ಯಾದಿಗಳಿರುವವು ಬಾಕಿ ಪಾಂಡವರ ಕೋಟೆಗಳಿತ್ತು ಎಂದು ಏನನ್ನು ತೋರಿಸುತ್ತಾರೆಯೋ ಇವೆಲ್ಲವೂ ದಂತ ಕಥೆಗಳಾಗಿವೆ. ಡ್ರಾಮಾ ಪ್ಲಾನನುಸಾರ ಅವಶ್ಯವಾಗಿ ಪುನಃ ಇವು ಆಗುತ್ತವೆ. ಹೇಗೆ ನೀವು ಯಜ್ಞ, ತಪ, ದಾನ-ಪುಣ್ಯ ಇತ್ಯಾದಿಗಳನ್ನು ಮಾಡುತ್ತಾ ಬಂದಿದ್ದೀರಿ, ಇವು ಪುನಃ ಮಾಡಬೇಕಾಗುವುದು. ಮೊದಲು ನೀವು ಶಿವನ ಭಕ್ತಿ ಮಾಡುತ್ತೀರಿ, ಸುಂದರವಾದ ಮಂದಿರಗಳನ್ನು ಕಟ್ಟಿಸುತ್ತೀರಿ, ಅದಕ್ಕೆ ಅವ್ಯಭಿಚಾರಿ ಭಕ್ತಿಯೆಂದು ಹೇಳಲಾಗುತ್ತದೆ. ನೀವೀಗ ಜ್ಞಾನ ಮಾರ್ಗದಲ್ಲಿದ್ದೀರಿ, ಇದು ಅವ್ಯಭಿಚಾರಿ ಜ್ಞಾನವಾಗಿದೆ. ಒಬ್ಬ ಶಿವ ತಂದೆಯಿಂದಲೇ ಕೇಳುತ್ತೀರಿ, ಇವರಿಗೇ ಮೊಟ್ಟ ಮೊದಲು ನೀವು ಭಕ್ತಿಯನ್ನು ಆರಂಭಿಸಿದಿರಿ. ಆ ಸಮಯದಲ್ಲಿ ಮತ್ತ್ಯಾರೂ ಇರುವುದಿಲ್ಲ, ನೀವೇ ಇರುತ್ತೀರಿ. ನೀವು ಬಹಳ ಸುಖಿಯಾಗಿರುತ್ತೀರಿ. ದೇವತಾ ಧರ್ಮವು ಬಹಳ ಸುಖ ಕೊಡುವಂತದ್ದಾಗಿದೆ. ಹೆಸರನ್ನು ತೆಗೆದುಕೊಳ್ಳುತ್ತಿದ್ದಂತೆಯೇ ಬಾಯಿ ಸಿಹಿಯಾಗಿ ಬಿಡುತ್ತದೆ. ಅಂದಾಗ ನೀವು ಒಬ್ಬ ತಂದೆಯಿಂದಲೇ ಜ್ಞಾನವನ್ನು ಕೇಳುತ್ತೀರಿ. ತಂದೆಯು ತಿಳಿಸುತ್ತಾರೆ - ಮತ್ತ್ಯಾರಿಂದಲೂ ಕೇಳಬೇಡಿ, ನಿಮ್ಮದು ಇದು ಅವ್ಯಭಿಚಾರಿ ಜ್ಞಾನವಾಗಿದೆ. ನೀವು ಬೇಹದ್ದಿನ ತಂದೆಯ ಮಕ್ಕಳಾಗಿದ್ದೀರಿ, ತಂದೆಯಿಂದಲೇ ನಂಬರ್ವಾರ್ ಪುರುಷಾರ್ಥದನುಸಾರ ಆಸ್ತಿ ಸಿಗುವುದು. ತಂದೆಯೂ ಸ್ವಲ್ಪ ಸಮಯಕ್ಕಾಗಿ ಸಾಕಾರದಲ್ಲಿ ಬಂದಿದ್ದಾರೆ, ತಿಳಿಸುತ್ತಾರೆ - ನಾನೇ ನೀವು ಮಕ್ಕಳಿಗೆ ಜ್ಞಾನವನ್ನು ಕೊಡಬೇಕಾಗಿದೆ. ನನಗೆ ಸ್ಥಿರವಾದ ಶರೀರವಿಲ್ಲ, ನಾನು ಇವರಲ್ಲಿ ಪ್ರವೇಶ ಮಾಡುತ್ತೇನೆ. ಶಿವ ಜಯಂತಿಯಾದ ಕೂಡಲೇ ಗೀತಾ ಜಯಂತಿಯಾಗಿ ಬಿಡುತ್ತದೆ. ಆಗಿನಿಂದಲೇ ಜ್ಞಾನ ಕೊಡುವುದನ್ನು ಆರಂಭಿಸಿ ಬಿಡುತ್ತಾರೆ. ಈ ಆತ್ಮಿಕ ವಿದ್ಯೆಯನ್ನು ನಿಮಗೆ ಪರಮ ಆತ್ಮನೇ ಕೊಡುತ್ತಿದ್ದಾರೆ. ನೀರಿನ ಮಾತಿಲ್ಲ, ನೀರಿಗೆ ಜ್ಞಾನವೆಂದು ಹೇಳುವುದಿಲ್ಲ. ಜ್ಞಾನದಿಂದಲೇ ನೀವು ಪತಿತರಿಂದ ಪಾವನರಾಗುತ್ತೀರಿ. ಸ್ಥೂಲ ನೀರಿನಿಂದ ಪಾವನರಾಗುವುದಿಲ್ಲ. ನದಿಗಳಂತೂ ಇಡೀ ಪ್ರಪಂಚದಲ್ಲಿ ಇದ್ದೇ ಇದೆ. ಜ್ಞಾನ ಸಾಗರ ತಂದೆಯೇ ಬಂದು ಇವರಲ್ಲಿ ಪ್ರವೇಶ ಮಾಡಿ ಜ್ಞಾನವನ್ನು ತಿಳಿಸುತ್ತಾರೆ. ಇಲ್ಲಿ ಯಾರಾದರೂ ಮರಣ ಹೊಂದಿದಾಗ ಬಾಯಲ್ಲಿ ಜಲವನ್ನು ಹಾಕುತ್ತಾರೆ. ಈ ಜಲವು ಪತಿತರಿಂದ ಪಾವನ ಮಾಡುವಂತದ್ದಾಗಿದೆ ಆದ್ದರಿಂದ ಸ್ವರ್ಗದಲ್ಲಿ ಹೊರಟು ಹೋಗುವರೆಂದು ತಿಳಿಯುತ್ತಾರೆ. ಇಲ್ಲಿಯೂ ಗೋಮುಖಕ್ಕೆ ಹೋಗುತ್ತಾರೆ. ವಾಸ್ತವದಲ್ಲಿ ನೀವು ಚೈತನ್ಯ ಗೋಮುಖವಾಗಿದ್ದೀರಿ, ನಿಮ್ಮ ಬಾಯಿಂದ ಜ್ಞಾನಾಮೃತವು ಹೊರ ಬರುತ್ತದೆ. ಗೋವಿನಿಂದ ಹಾಲು ಸಿಗುತ್ತದೆಯೇ ಹೊರತು ನೀರಿನ ಮಾತಿಲ್ಲ. ಈಗ ನಿಮಗೆ ಅರ್ಥವಾಗಿದೆ. ನೀವು ತಿಳಿದುಕೊಂಡಿದ್ದೀರಿ, ಡ್ರಾಮಾದಲ್ಲಿ ಯಾವುದು ಒಂದು ಬಾರಿ ಆಗಿ ಹೋಯಿತೋ ಅದು ಮತ್ತೆ 5000 ವರ್ಷಗಳ ನಂತರ ಚಾಚೂ ತಪ್ಪದೆ ಪುನರಾವರ್ತನೆಯಾಗುವುದು. ಇದನ್ನು ತಂದೆಯೇ ತಿಳಿಸುತ್ತಾರೆ, ಅವರು ಎಲ್ಲರ ಸದ್ಗತಿದಾತನಾಗಿದ್ದಾರೆ. ಈಗಂತೂ ಎಲ್ಲರೂ ದುರ್ಗತಿಯಲ್ಲಿದ್ದಾರೆ, ರಾವಣನನ್ನು ಏಕೆ ಸುಡುತ್ತಾರೆಂದು ನೀವು ಮೊದಲು ತಿಳಿದುಕೊಂಡಿರಲಿಲ್ಲ. ಈಗ ನಿಮಗೆ ತಿಳಿದಿದೆ, ಬೇಹದ್ದಿನ ದಶಹರ ಆಗಲಿದೆ, ಇಡೀ ಸೃಷ್ಟಿಯಲ್ಲಿ ರಾವಣ ರಾಜ್ಯವಿದೆಯಲ್ಲವೆ. ಇಡೀ ಪೃಥ್ವಿಯೇ ಲಂಕೆಯಾಗಿದೆ. ರಾವಣನು ಯಾವುದೇ ಹದ್ದಿನಲ್ಲಿರುವುದಿಲ್ಲ. ಇಡೀ ಸೃಷ್ಟಿಯಲ್ಲಿಯೇ ರಾವಣನ ರಾಜ್ಯವಿದೆ. ಭಕ್ತಿಯು ಅರ್ಧಕಲ್ಪ ನಡೆಯುತ್ತದೆ. ಮೊದಲು ಅವ್ಯಭಿಚಾರಿ ಭಕ್ತಿಯಿರುತ್ತದೆ ನಂತರ ವ್ಯಭಿಚಾರಿ ಭಕ್ತಿಯು ಆರಂಭವಾಗುತ್ತದೆ. ದಶಹರ, ರಕ್ಷಾಬಂಧನ ಮೊದಲಾದುವುಗಳೆಲ್ಲವೂ ಈಗಿನ ಹಬ್ಬಗಳಾಗಿವೆ. ಶಿವ ಜಯಂತಿಯ ನಂತರ ಕೃಷ್ಣ ಜಯಂತಿಯಾಗುತ್ತದೆ, ಈಗ ಕೃಷ್ಣ ಪುರಿಯ ಸ್ಥಾಪನೆಯಾಗುತ್ತಿದೆ. ಇಂದು ಕಂಸ ಪುರಿಯಲ್ಲಿದ್ದೀರಿ, ನಾಳೆ ಕೃಷ್ಣ ಪುರಿಯಲ್ಲಿರುತ್ತೀರಿ. ಕೃಷ್ಣನು ಇಲ್ಲಿರಲು ಸಾಧ್ಯವೇ! ಕೃಷ್ಣನು ಸತ್ಯಯುಗದಲ್ಲಿಯೇ ಜನ್ಮ ಪಡೆಯುತ್ತಾನೆ, ಕೃಷ್ಣನು ಮೊಟ್ಟ ಮೊದಲ ರಾಜಕುಮಾರನಾಗಿದ್ದಾನೆ. ಓದಲು ಶಾಲೆಗೆ ಹೋಗುತ್ತಾನೆ ಮತ್ತೆ ದೊಡ್ಡವನಾದ ಮೇಲೆ ಸಿಂಹಾಸನದ ಮಾಲೀಕನಾಗುತ್ತಾನೆ. ಉಳಿದಂತೆ ಈ ರಾಸ ಲೀಲೆ ಎಂದರೆ ಸತ್ಯಯುಗದಲ್ಲಿ ಅವರು ಪರಸ್ಪರ ಖುಷಿಯನ್ನಾಚರಿಸುವುದಾಗಿದೆ. ಬಾಕಿ ಕೃಷ್ಣನು ಯಾರಿಗೂ ಕುಳಿತು ಜ್ಞಾನವನ್ನು ತಿಳಿಸಲು ಸಾಧ್ಯವಿಲ್ಲ. ಮಹಿಮೆಯಲ್ಲವೂ ಒಬ್ಬ ಶಿವ ತಂದೆಯದಾಗಿದೆ ಯಾರನ್ನು ಪತಿತರಿಂದ ಪಾವನರನ್ನಾಗಿ ಮಾಡುತ್ತಾರೆ. ನೀವು ಯಾರಾದರೂ ದೊಡ್ಡ ಅಧಿಕಾರಿಗಳಿಗೆ ತಿಳಿಸಿದರೆ ತಾವು ಸತ್ಯವನ್ನು ಹೇಳುತ್ತೀರೆಂದು ಹೇಳುತ್ತಾರೆ ಆದರೆ ಅವರು ಯಾರಿಗೂ ತಿಳಿಸಲು ಸಾಧ್ಯವಿಲ್ಲ, ಅವರ ಮಾತನ್ನು ಯಾರೂ ಕೇಳುವುದಿಲ್ಲ. ಬಿ.ಕೆ ಆದರೆಂದರೆ ಇವರಿಗಂತೂ ಬಿ.ಕೆ.ಗಳ ಜಾದು ಹಿಡಿದು ಬಿಟ್ಟಿದೆಯೆಂದು ಎಲ್ಲರೂ ಹೇಳ ತೊಡಗುತ್ತಾರೆ. ಬಿ.ಕೆ.ಗಳ ಹೆಸರನ್ನು ಕೇಳಿದರೆಂದರೆ ಸಾಕು ಇವರು ಜಾದು ಮಾಡುವರೆಂದು ತಿಳಿಯುತ್ತಾರೆ. ಯಾರಿಗಾದರೂ ಸ್ವಲ್ಪ ಜ್ಞಾನ ಹೇಳಿದರೆ ಸಾಕು ಈ ಬಿ.ಕೆ.ಗಳು ಜಾದು ಮಾಡುತ್ತಾರೆ, ಇವರು ತಮ್ಮ ದಾದಾರವರ ವಿನಃ ಮತ್ತ್ಯಾರನ್ನೂ ಒಪ್ಪುವುದಿಲ್ಲ. ಭಕ್ತಿ ಇತ್ಯಾದಿಗಳನ್ನೂ ಮಾಡುವುದಿಲ್ಲವೆಂದು ಹೇಳಿ ಬಿಡುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಭಕ್ತಿ ಮಾಡಬೇಡಿ ಎಂದು ಯಾರನ್ನೂ ನಿರಾಕರಿಸಬಾರದು. ಭಕ್ತಿಯು ತಾನಾಗಿಯೇ ಬಿಟ್ಟು ಹೋಗುವುದು. ನೀವು ಭಕ್ತಿ ಬಿಡುತ್ತೀರಿ, ವಿಕಾರವನ್ನು ಬಿಡುತ್ತೀರಿ, ಇದರಿಂದಲೇ ಏರುಪೇರುಗಳಾಗುತ್ತವೆ. ತಂದೆಯು ತಿಳಿಸಿದ್ದಾರೆ - ನಾನು ರುದ್ರ ಜ್ಞಾನ ಯಜ್ಞವನ್ನು ರಚಿಸುತ್ತೇನೆ, ಇದರಲ್ಲಿ ಆಸುರೀ ಸಂಪ್ರದಾಯದವರ ವಿಘ್ನಗಳು ಬೀಳುತ್ತವೆ, ಇದು ಶಿವ ತಂದೆಯ ಬೇಹದ್ದಿನ ಯಜ್ಞವಾಗಿದೆ. ಇದರಲ್ಲಿ ಮನುಷ್ಯರಿಂದ ದೇವತೆಗಳಾಗುತ್ತೀರಿ. ಜ್ಞಾನ ಯಜ್ಞದಿಂದ ವಿನಾಶ ಜ್ವಾಲೆಯು ಪ್ರಜ್ವಲಿತವಾಯಿತೆಂದು ಗಾಯನವಿದೆ, ಯಾವಾಗ ಹಳೆಯ ಪ್ರಪಂಚದ ವಿನಾಶವಾಗುವುದೋ ಆಗ ನೀವು ಹೊಸ ಪ್ರಪಂಚದಲ್ಲಿ ರಾಜ್ಯ ಮಾಡುತ್ತೀರಿ. ಮನುಷ್ಯರು ಹೇಳುತ್ತಾರೆ - ನಾವು ಶಾಂತಿ ಸ್ಥಾಪನೆಯಾಗಲಿ ಎಂದು ಹೇಳುತ್ತೇವೆ ಮತ್ತು ಈ ಬಿ.ಕೆ.ಗಳು ವಿನಾಶವಾಗಲಿ ಎಂದು ಹೇಳುತ್ತಾರೆ. ಇದಕ್ಕೆ ತಂದೆಯು ತಿಳಿಸುತ್ತಾರೆ - ಈ ಇಡೀ ಹಳೆಯ ಪ್ರಪಂಚವು ಜ್ಞಾನ ಯಜ್ಞದಲ್ಲಿ ಸ್ವಾಹಾ ಆಗಿ ಬಿಡುತ್ತದೆ. ಈ ಹಳೆಯ ಪ್ರಪಂಚಕ್ಕೆ ಬೆಂಕಿ ಬೀಳುವುದು. ಪ್ರಾಕೃತಿಕ ವಿಕೋಪಗಳೂ ಆಗುವವು. ವಿನಾಶವಂತೂ ಆಗಲೇಬೇಕಾಗಿದೆ. ಎಲ್ಲಾ ಮನುಷ್ಯರು ಸಾಸಿವೆ ಒಡೆದಂತೆ ಪುಡಿಪುಡಿಯಾಗಿ ಸಮಾಪ್ತಿಯಾಗುತ್ತಾರೆ. ಆತ್ಮಗಳು ಉಳಿದುಕೊಳ್ಳುತ್ತಾರೆ. ಇದನ್ನು ಯಾರು ಬೇಕಾದರೂ ತಿಳಿದುಕೊಳ್ಳಬಹುದು - ಆತ್ಮವು ಅವಿನಾಶಿಯಾಗಿದೆ, ಈಗ ಈ ಬೇಹದ್ದಿನ ಹೋಲಿಕಾ ಆಗುವುದು, ಇದರಲ್ಲಿ ಶರೀರಗಳೆಲ್ಲವೂ ಸಮಾಪ್ತಿಯಾಗುತ್ತದೆ ಬಾಕಿ ಆತ್ಮರು ಪವಿತ್ರರಾಗಿ ಮನೆಗೆ ಹೊರಟು ಹೋಗುವರು. ಅಗ್ನಿಯಲ್ಲಿ ವಸ್ತು ಶುದ್ಧವಾಗುತ್ತದೆಯಲ್ಲವೆ. ಶುದ್ಧತೆಗಾಗಿ ಹೋಮ ಮಾಡುತ್ತಾರೆ, ಅವೆಲ್ಲವೂ ಸ್ಥೂಲ ಮಾತುಗಳಾಗಿವೆ. ಈಗಂತೂ ಇಡೀ ಪ್ರಪಂಚವೇ ಸ್ವಾಹಾ ಆಗುವುದು ಆದ್ದರಿಂದ ವಿನಾಶಕ್ಕೆ ಮೊದಲು ಅವಶ್ಯವಾಗಿ ಸ್ಥಾಪನೆಯಾಗಿ ಬಿಡಬೇಕು. ಯಾರಿಗಾದರೂ ತಿಳಿಸುವಾಗ ಮೊದಲು ಸ್ಥಾಪನೆ ನಂತರ ವಿನಾಶವೆಂದು ಹೇಳಿರಿ. ಬ್ರಹ್ಮಾರವರ ಮೂಲಕ ಸ್ಥಾಪನೆ, ಪ್ರಜಾಪಿತ ಬ್ರಹ್ಮನು ಪ್ರಸಿದ್ಧನಾಗಿದ್ದಾರಲ್ಲವೆ. ಆದಿ ದೇವ ಮತ್ತು ಆದಿ ದೇವಿ, ಜಗದಂಬೆಯ ಲಕ್ಷಾಂತರ ಮಂದಿರಗಳಿವೆ. ಎಷ್ಟೊಂದು ಮೇಳಗಳಾಗುತ್ತವೆ! ನೀವು ಜಗದಂಬೆಯ ಮಕ್ಕಳು ಜ್ಞಾನ ಜ್ಞಾನೇಶ್ವರಿಯಾಗಿದ್ದೀರಿ ನಂತರ ರಾಜ ರಾಜೇಶ್ವರಿಯಾಗುತ್ತೀರಿ. ನೀವು ಬಹಳ ಧನವಂತರಾಗುತ್ತೀರಿ, ಮತ್ತೆ ಭಕ್ತಿಮಾರ್ಗದಲ್ಲಿ ದೀಪಾವಳಿಯಂದು ಲಕ್ಷ್ಮಿಯಿಂದ ವಿನಾಶೀ ಧನವನ್ನು ಬೇಡುತ್ತಾರೆ. ಇಲ್ಲಂತೂ ಎಲ್ಲವೂ ಸಿಕ್ಕಿ ಬಿಡುತ್ತದೆ. ಆಯುಷ್ಯವಾನ್ಭವ, ಪುತ್ರವಾನ್ಭವ. ನಿಮ್ಮ ಆಯಸ್ಸು 150 ವರ್ಷಗಳಿರುತ್ತವೆ. ತಂದೆಯು ತಿಳಿಸುತ್ತಾರೆ - ಎಷ್ಟು ಯೋಗ ಮಾಡುವಿರೋ ಅಷ್ಟು ಆಯಸ್ಸು ಹೆಚ್ಚುತ್ತಿರುವುದು. ನೀವು ಈಶ್ವರನೊಂದಿಗೆ ಯೋಗವನ್ನಿಟ್ಟು ಯೋಗೇಶ್ವರರಾಗುತ್ತೀರಿ. ಮನುಷ್ಯರಂತೂ ಭೋಗೇಶ್ವರರಾಗಿದ್ದಾರೆ, ಭಿಕಾರಿಗಳೆಂದು ಹೇಳಲಾಗುತ್ತದೆ. ಕೊಳಕಾದ ಬಟ್ಟೆಯನ್ನು ಒಗೆದರು..... ತಂದೆಯು ತಿಳಿಸುತ್ತಾರೆ - ನನ್ನನ್ನು ದೋಬಿಯೆಂತಲೂ ಹೇಳುತ್ತಾರೆ, ನಾನು ಬಂದು ಎಲ್ಲಾ ಆತ್ಮರನ್ನು ಸ್ವಚ್ಛ ಮಾಡುತ್ತೇನೆ ಮತ್ತೆ ಶರೀರವೂ ಸಹ ಹೊಸ ಶುದ್ಧವಾದದ್ದು ಸಿಗುವುದು. ನಾನು ಸೆಕೆಂಡಿನಲ್ಲಿ ಇಡೀ ಪ್ರಪಂಚದ ವಸ್ತ್ರಗಳನ್ನು (ಆತ್ಮಗಳು) ಸ್ವಚ್ಛ ಮಾಡಿ ಬಿಡುತ್ತೇನೆ. ಕೇವಲ ಮನ್ಮನಾಭವ ಆಗಿ ಬಿಟ್ಟರೆ ಆತ್ಮ ಮತ್ತು ಶರೀರ ಪವಿತ್ರವಾಗಿ ಬಿಡುತ್ತದೆ. ಛೂ ಮಂತ್ರವಲ್ಲವೆ. ಸೆಕೆಂಡಿನಲ್ಲಿ ಜೀವನ್ಮುಕ್ತಿ, ಎಷ್ಟು ಸಹಜ ಉಪಾಯವಾಗಿದೆ. ತಂದೆಯನ್ನು ನೆನಪು ಮಾಡಿದರೆ ಪಾವನರಾಗಿ ಬಿಡುತ್ತೀರಿ. ನಡೆಯುತ್ತಾ-ತಿರುಗಾಡುತ್ತಾ ಕೇವಲ ತಂದೆಯನ್ನು ನೆನಪು ಮಾಡಿ. ನಾನು ಮತ್ತೇನೂ ಕಷ್ಟವನ್ನು ನಿಮಗೆ ಕೊಡುವುದಿಲ್ಲ, ಕೇವಲ ನೆನಪು ಮಾಡಬೇಕಾಗಿದೆ. ಈಗ ಒಂದೊಂದು ಸೆಕೆಂಡಿನಲ್ಲಿ ನಿಮ್ಮದು ಏರುವ ಕಲೆಯಾಗುತ್ತದೆ.

ತಂದೆಯು ತಿಳಿಸುತ್ತಾರೆ - ನಾನು ನೀವು ಮಕ್ಕಳ ಸೇವಕನಾಗಿ ಬಂದಿದ್ದೇನೆ. ಹೇ ಪತಿತ ಪಾವನ ಬನ್ನಿ, ಬಂದು ನಮ್ಮನ್ನು ಪಾವನ ಮಾಡಿ ಎಂದು ನೀವು ಕರೆದಿರಿ. ಮಕ್ಕಳೇ, ನಾನೀಗ ಬಂದಿದ್ದೇನೆ ಅಂದಮೇಲೆ ಸೇವಕನಾದರಲ್ಲವೆ. ಯಾವಾಗ ನೀವು ಬಹಳ ಪತಿತರಾಗುತ್ತೀರೋ ಆಗ ನೀವು ಬಹಳ ಜೋರಾಗಿ ಚೀರಾಡುತ್ತೀರಿ. ಈಗ ನಾನು ಬಂದಿದ್ದೇನೆ, ನಾನು ಕಲ್ಪ-ಕಲ್ಪವೂ ಬಂದು ನೀವು ಮಕ್ಕಳಿಗೆ ಮಂತ್ರವನ್ನು ಕೊಡುತ್ತೇನೆ. ನನ್ನನ್ನು ನೆನಪು ಮಾಡಿದರೆ ನೀವು ಪಾವನರಾಗಿ ಬಿಡುತ್ತೀರಿ. ಮನ್ಮನಾಭವದ ಅರ್ಥವೇ ಆಗಿದೆ - ಮನ್ಮನಾಭವ, ಮಧ್ಯಾಜೀಭವ ಅರ್ಥಾತ್ ತಂದೆಯನ್ನು ನೆನಪು ಮಾಡಿದರೆ ವಿಷ್ಣು ಪುರಿಯ ಮಾಲೀಕರಾಗುತ್ತೀರಿ. ನೀವು ವಿಷ್ಣು ಪುರಿಯ ರಾಜ್ಯವನ್ನು ತೆಗೆದುಕೊಳ್ಳಲು ಬಂದಿದ್ದೀರಿ. ರಾವಣ ಪುರಿಯ ನಂತರ ವಿಷ್ಣು ಪುರಿಯಾಗುವುದು. ಕಂಸ ಪುರಿಯ ನಂತರ ಕೃಷ್ಣ ಪುರಿಯಾಗುವುದು. ಎಷ್ಟು ಸಹಜವಾಗಿ ತಿಳಿಸಲಾಗುತ್ತದೆ! ಈ ಹಳೆಯ ಪ್ರಪಂಚದಿಂದ ಮಮತ್ವವನ್ನು ಕಳೆಯಿರಿ. ಈಗ 84 ಜನ್ಮಗಳನ್ನು ಪೂರ್ಣ ಮಾಡಿದ್ದೀರಿ, ಈ ಹಳೆಯ ಶರೀರವನ್ನು ಬಿಟ್ಟು ಹೊಸ ಪ್ರಪಂಚದಲ್ಲಿ ಹೋಗುತ್ತೀರಿ. ನೆನಪಿನಿಂದಲೇ ನಿಮ್ಮ ಪಾಪಗಳು ಕಳೆಯುತ್ತವೆ. ಇಷ್ಟು ಧೈರ್ಯವನ್ನಿಡಬೇಕು. ಅವರಂತೂ ಬ್ರಹ್ಮ್ತತ್ವವನ್ನು ನೆನಪು ಮಾಡುತ್ತಾರೆ, ನಾವು ಬ್ರಹ್ಮ್ತತ್ವದಲ್ಲಿ ಲೀನವಾಗಿ ಬಿಡುತ್ತೇವೆಂದು ತಿಳಿಯುತ್ತಾರೆ. ಆದರೆ ಬ್ರಹ್ಮತತ್ವವು ಇರುವ ಸ್ಥಾನವಾಗಿದೆ. ಆ ಸಾಧು-ಸನ್ಯಾಸಿಗಳು ತಪಸ್ಸಿನಲ್ಲಿ ಕುಳಿತು ಬಿಡುತ್ತಾರೆ, ನಾವೀಗ ಹೋಗಿ ಲೀನವಾಗಿ ಬಿಡುತ್ತೇವೆಂದು ತಿಳಿಯುತ್ತಾರೆ. ಆದರೆ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಬ್ರಹ್ಮ್ ತತ್ವದೊಂದಿಗೆ ಯೋಗವನಡುವುದರಿಂದ ಪಾವನರಂತೂ ಆಗುವುದಿಲ್ಲ, ಯಾರೊಬ್ಬರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಪುನರ್ಜನ್ಮವನ್ನಂತೂ ತೆಗೆದುಕೊಳ್ಳಲೇಬೇಕಾಗಿದೆ. ತಂದೆಯು ಬಂದು ಸತ್ಯವನ್ನು ತಿಳಿಸುತ್ತಾರೆ. ಸತ್ಯ ತಂದೆಯು ಸತ್ಯ ಖಂಡವನ್ನು ಸ್ಥಾಪನೆ ಮಾಡುತ್ತಾರೆ. ರಾವಣನು ಬಂದು ಅಸತ್ಯ ಖಂಡವನ್ನಾಗಿ ಮಾಡುತ್ತಾನೆ. ಈಗ ಇದು ಸಂಗಮಯುಗವಾಗಿದೆ, ಇದರಲ್ಲಿ ನೀವು ಉತ್ತಮರಿಗಿಂತಲೂ ಉತ್ತಮರಾಗುತ್ತೀರಿ ಆದ್ದರಿಂದ ಇವರಿಗೆ ಪುರುಷೋತ್ತಮರೆಂದು ಹೇಳಲಾಗುತ್ತದೆ. ನೀವು ಕವಡೆಯಿಂದ ವಜ್ರ ಸಮಾನರಾಗುತ್ತೀರಿ. ಇದು ಬೇಹದ್ದಿನ ಮಾತಾಗಿದೆ. ಉತ್ತಮರಿಗಿಂತಲೂ ಉತ್ತಮ ಮನುಷ್ಯರು ದೇವತೆಗಳಾಗಿದ್ದಾರೆ, ನೀವೀಗ ಪುರುಷೋತ್ತಮ ಸಂಗಮಯುಗದಲ್ಲಿ ಕುಳಿತಿದ್ದೀರಿ. ನಿಮ್ಮನ್ನು ಪುರುಷೋತ್ತಮರನ್ನಾಗಿ ಮಾಡುವವರು ಶ್ರೇಷ್ಠಾತಿ ಶ್ರೇಷ್ಠ ತಂದೆಯಾಗಿದ್ದಾರೆ. ಶ್ರೇಷ್ಠಾತಿ ಶ್ರೇಷ್ಠ ಸ್ವರ್ಗದ ಆಸ್ತಿಯನ್ನು ನಿಮಗೆ ಕೊಡುತ್ತಾರೆ, ಮತ್ತೆ ನೀವೇಕೆ ಮರೆತು ಹೋಗುತ್ತೀರಿ? ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ ಎಂದು. ಮತ್ತೆ ಮಕ್ಕಳೂ ಹೇಳುತ್ತಾರೆ - ಬಾಬಾ, ನಾವು ಮರೆಯದಿರುವಂತೆ ಕೃಪೆ ಮಾಡಿ. ಆದರೆ ಇದು ಹೇಗೆ ಸಾಧ್ಯ? ತಂದೆಯ ಆದೇಶದಂತೆ ನಡೆಯಬೇಕಲ್ಲವೆ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನೀವು ಪತಿತರಿಂದ ಪಾವನರಾಗಿ ಬಿಡುತ್ತೀರಿ, ಆದೇಶದಂತೆ ನಡೆಯಬೇಕಲ್ಲವೆ. ಬಾಕಿ ನಾನೇನು ಆಶೀರ್ವಾದ ಮಾಡಲಿ! ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆಯ ಪ್ರತೀ ಆದೇಶದಂತೆ ನಡೆದು ಸ್ವಯಂನ್ನು ಕವಡೆಯಿಂದ ವಜ್ರ ಸಮಾನರನ್ನಾಗಿ ಮಾಡಿಕೊಳ್ಳಬೇಕಾಗಿದೆ. ಒಬ್ಬ ತಂದೆಯ ನೆನಪಿನಲ್ಲಿದ್ದು ಸ್ವಯಂನ ವಸ್ತ್ರಗಳನ್ನು ಸ್ವಚ್ಛ ಮಾಡಿಕೊಳ್ಳಬೇಕಾಗಿದೆ.

2. ಈಗ ಹೊಸ ಮನೆಗೆ ಹೋಗಬೇಕಾಗಿದೆ ಆದ್ದರಿಂದ ಈ ಹಳೆಯ ಮನೆಯಿಂದ ಬೇಹದ್ದಿನ ವೈರಾಗ್ಯವಿರಬೇಕಾಗಿದೆ. ನಶೆಯಿರಲಿ - ಈ ಹಳೆಯ ಸ್ಮಶಾನದಲ್ಲಿ ನಾವು ಪರಿಸ್ಥಾನವನ್ನು ಸ್ಥಾಪನೆ ಮಾಡುತ್ತೇವೆ.

ವರದಾನ:
ಸಂಗಮಯುಗದ ಶ್ರೇಷ್ಠ ಚಿತ್ರವನ್ನು ಎದುರಿಗೆ ಇಟ್ಟುಕೊಂಡು ಭವಿಷ್ಯದ ದರ್ಶನ ಮಾಡುವಂತಹ ತ್ರಿಕಾಲದರ್ಶಿ ಭವ.

ಭವಿಷ್ಯಕ್ಕೆ ಮೊದಲು ಸರ್ವ ಪ್ರಾಪ್ತಿಗಳ ಅನುಭವ ನೀವು ಸಂಗಮಯುಗಿ ಬ್ರಾಹ್ಮಣರು ಮಾಡುವಿರಿ. ಈಗ ಡಬ್ಬಲ್ ಕಿರೀಟ, ಸಿಂಹಾಸನ, ತಿಲಕಧಾರಿ, ಸರ್ವ ಅಧಿಕಾರಿ ಮೂರ್ತಿಯಾಗುವಿರಿ. ಭವಿಷ್ಯದಲ್ಲಿಯಂತೂ ಚಿನ್ನದ ಚಮಚ ಇರುತ್ತದೆ ಆದರೆ ಈಗ ವಜ್ರ ಸಮಾನರಾಗಿ ಬಿಡುವಿರಿ. ಜೀವನವೇ ವಜ್ರ ಸಮಾನವಾಗಿ ಬಿಡುವುದು. ಅಲ್ಲಿ ಚಿನ್ನ, ವಜ್ರದ ಉಯ್ಯಾಲೆ ತೂಗಾಡುವಿರಿ. ಇಲ್ಲಿ ಬಾಪ್ದಾದಾರವರ ಮಡಿಲಿನಲ್ಲಿ ಅತೀಂದ್ರಿಯ ಸುಖದ ಉಯ್ಯಾಲೆಯಲ್ಲಿ ತೂಗಾಡುವಿರಿ. ಅಂದಾಗ ತ್ರಿಕಾಲದರ್ಶಿಗಳಾಗಿ ವರ್ತಮಾನ ಮತ್ತು ಭವಿಷ್ಯದ ಶ್ರೇಷ್ಠ ಚಿತ್ರವನ್ನು ನೋಡುತ್ತಾ ಸರ್ವ ಪ್ರಾಪ್ತಿಗಳ ಅನುಭವ ಮಾಡಿ.

ಸ್ಲೋಗನ್:
ಕರ್ಮ ಮತ್ತು ಯೋಗದ ಬ್ಯಾಲೆನ್ಸ್ (ಸಮತೋಲನ) ಪರಮಾತ್ಮನ ಬ್ಲೆಸ್ಸಿಂಗ್ನ (ಆಶೀರ್ವಾದ) ಅಧಿಕಾರಿ ಮಾಡಿ ಬಿಡುತ್ತದೆ.