19.05.20         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನೀವೀಗ ಶಾಂತಿಧಾಮ ಸುಖಧಾಮದಲ್ಲಿ ಹೋಗಲು ಈಶ್ವರೀಯ ಧಾಮದಲ್ಲಿ ಕುಳಿತಿದ್ದೀರಿ, ಇದು ಸತ್ಯ ತಂದೆಯ ಸಂಗವಾಗಿದೆ, ಎಲ್ಲಿ ನೀವು ಪುರುಷೋತ್ತಮರಾಗುತ್ತಿದ್ದೀರಿ

ಪ್ರಶ್ನೆ:
ನೀವು ಮಕ್ಕಳು ತಂದೆಗಿಂತಲೂ ಶ್ರೇಷ್ಠರಾಗಿದ್ದೀರಿ - ಹೇಗೆ?

ಉತ್ತರ:
ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನು ವಿಶ್ವದ ಮಾಲೀಕನಾಗುವುದಿಲ್ಲ, ನಿಮ್ಮನ್ನು ಮಾಲೀಕರನ್ನಾಗಿ ಮಾಡುತ್ತೇನೆ ಮತ್ತು ಬ್ರಹ್ಮಾಂಡದ ಮಾಲೀಕರನ್ನಾಗಿಯೇ ಮಾಡುತ್ತೇನೆ. ನಾನು ಸರ್ವ ಶ್ರೇಷ್ಠ ತಂದೆಯು ನೀವು ಮಕ್ಕಳಿಗೆ ನಮಸ್ತೆ ಮಾಡುತ್ತೇನೆ. ಆದ್ದರಿಂದ ನೀವು ನನಗಿಂತಲೂ ಶ್ರೇಷ್ಠರಾಗಿದ್ದೀರಿ. ನಾನು ನೀವು ಮಾಲೀಕರಿಗೆ ನಮಸ್ತೆ ಮಾಡುತ್ತೇನೆ ಮತ್ತೆ ನೀವು ಆ ರೀತಿ ಮಾಡುವಂತಹ ತಂದೆಗೆ ನಮಸ್ತೆ ಮಾಡುತ್ತೀರಿ.

ಓಂ ಶಾಂತಿ.
ಮಧುರಾತಿ ಮಧುರ ಆತ್ಮೀಯ ಮಕ್ಕಳಿಗೆ ನಮಸ್ತೆ. ಬಾಬಾ ನಮಸ್ತೆ ಎಂದು ಪ್ರತ್ಯುತ್ತರವನ್ನೂ ಕೊಡುವುದಿಲ್ಲವೆಂದರೆ ಮಕ್ಕಳಿಗೆ ಗೊತ್ತಿದೆ - ತಂದೆಯು ನಮ್ಮನ್ನು ಬ್ರಹ್ಮಾಂಡದ ಮಾಲೀಕರನ್ನಾಗಿ ಮಾಡುತ್ತಾರೆ ಮತು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ತಂದೆಯಂತೂ ಕೇವಲ ಬ್ರಹ್ಮಾಂಡದ ಮಾಲೀಕರನ್ನಾಗಿ ಮಾಡುತ್ತಾರೆ, ವಿಶ್ವದ ಮಾಲೀಕನಲ್ಲ. ಮಕ್ಕಳನ್ನು ಬ್ರಹ್ಮಾಂಡ ಮತ್ತು ವಿಶ್ವ - ಎರಡರ ಮಾಲೀಕರನ್ನಾಗಿ ಮಾಡುತ್ತಾರೆ. ಅಂದಮೇಲೆ ಹೇಳಿ- ಯಾರು ದೊಡ್ಡವರಾದರು? ಮಕ್ಕಳೇ ದೊಡ್ಡವರಾದರಲ್ಲವೆ. ಆದ್ದರಿಂದ ಮಕ್ಕಳು ಮತ್ತೆ ನಮಸ್ತೆ ಮಾಡುತ್ತಾರೆ. ಬಾಬಾ ತಾವೇ ನಮ್ಮನ್ನು ಬ್ರಹ್ಮಾಂಡ ಮತ್ತು ವಿಶ್ವದ ಮಾಲೀಕರನ್ನಾಗಿ ಮಾಡುತ್ತೀರಿ, ಆದ್ದರಿಂದ ತಮಗೆ ನಮಸ್ತೆ. ಮುಸಲ್ಮಾನರೂ ಸಹ ಮಾಲೇಕಂ ಸಲಾಂ, ಸಲಾಂ ಮಾಲೇಕಂ (ಮಾಲೀಕರಿಗೆ ನಮಸ್ತೆ) ಎಂದು ಹೇಳುತ್ತಾರಲ್ಲವೆ. ನೀವು ಮಕ್ಕಳಿಗೆ ಈ ಖುಷಿಯಿದೆ. ಯಾರಿಗೆ ನಿಶ್ಚಯವಿದೆ, ನಿಶ್ಚಯವಿಲ್ಲದೆ ಇಲ್ಲಿ ಯಾರೂ ಬರಲು ಸಾಧ್ಯವಿಲ್ಲ. ಇಲ್ಲಿಗೆ ಯಾರು ಬರುತ್ತಾರೆಯೋ ಅವರಿಗೆ ತಿಳಿದಿದೆ - ನಾವು ಯಾವುದೇ ಮನುಷ್ಯ ಗುರುವಿನ ಬಳಿ ಹೋಗುವುದಿಲ್ಲ. ಮನುಷ್ಯ ತಂದೆಯ ಬಳಿ, ಶಿಕ್ಷಕರ ಬಳಿ, ಗುರುವಿನ ಬಳಿ ಹೋಗುತ್ತಿಲ್ಲ. ನೀವು ಆತ್ಮಿಕ ತಂದೆ, ಆತ್ಮಿಕ ಶಿಕ್ಷಕ, ಆತ್ಮಿಕ ಸದ್ಗುರುವಿನ ಬಳಿ ಬರುತ್ತೀರಿ. ಆ ಮನುಷ್ಯರಂತೂ ಅನೇಕರಿದ್ದಾರೆ ಈ ತಂದೆಯು ಒಬ್ಬರೇ ಆಗಿದ್ದಾರೆ. ಈ ಪರಿಚಯವು ಯಾರಿಗೂ ಇರಲಿಲ್ಲ, ಭಕ್ತಿಮಾರ್ಗದ ಶಾಸ್ತ್ರಗಳಲ್ಲಿಯೂ ಇದೆ - ರಚಯಿತ ಮತ್ತು ರಚನೆಯನ್ನು ಯಾರೂ ಅರಿತುಕೊಂಡಿಲ್ಲ. ಅರಿತುಕೊಂಡಿರುವ ಕಾರಣ ಅವರಿಗೆ ಅನಾಥರೆಂದು ಹೇಳಲಾಗುತ್ತದೆ. ಯಾರು ಒಳ್ಳೆಯ ವಿದ್ಯಾವಂತರಿದ್ದಾರೆಯೋ ಅವರು ನಾವೆಲ್ಲಾ ಆತ್ಮಗಳ ತಂದೆಯು ಒಬ್ಬರೇ ನಿರಾಕಾರನಾಗಿದ್ದಾರೆ. ಅವರು ಬಂದು ತಂದೆ, ಶಿಕ್ಷಕ, ಸದ್ಗುರುವೂ ಆಗುತ್ತಾರೆಂದು ಚೆನ್ನಾಗಿ ಅರಿತುಕೊಳ್ಳುತ್ತಾರೆ. ಗೀತೆಯಲ್ಲಿ ಕೃಷ್ಣನ ಹೆಸರು ಪ್ರಸಿದ್ಧವಾಗಿದೆ. ಗೀತೆಯು ಸರ್ವಶಾಸ್ತ್ರಮಯಿ ಶಿರೋಮಣಿ, ಎಲ್ಲದಕ್ಕಿಂತ ಅತ್ಯುತ್ತಮವಾಗಿದೆ. ಗೀತೆಯನ್ನು ತಾಯಿಯೆಂದು ಹೇಳಲಾಗುತ್ತದೆ. ಉಳಿದ ಯಾವುದೆಲ್ಲಾ ಶಾಸ್ತ್ರಗಳಿವೆಯೋ ಅದಕ್ಕೆ ಮಾತಾಪಿತ ಎಂದು ಹೇಳುವುದಿಲ್ಲ. ಶ್ರೀ ಮದ್ಭಗವದ್ಗೀತೆಗೆ ತಾಯಿಯೆಂದು ಗಾಯನವಿದೆ. ಇದು ಭಗವಂತನ ಮುಖ ಕಮಲದಿಂದ ಬಂದಂತಹ ಗೀತಾ ಜ್ಞಾನವಾಗಿದೆ. ಶ್ರೇಷ್ಠಾತಿ ಶ್ರೇಷ್ಠ ತಂದೆಯಾಗಿದ್ದಾರೆಂದರೆ ಅವಶ್ಯವಾಗಿ ಶ್ರೇಷ್ಠಾತಿ ಶ್ರೇಷ್ಠ ತಂದೆಯಿಂದ ಹೇಳಲ್ಪಟ್ಟ ಗೀತೆಯು ಉಳಿದೆಲ್ಲಾ ವೇದಶಾಸ್ತ್ರಗಳಿಗೆ ರಚಯಿತನಾಯಿತು. ಉಳಿದೆಲ್ಲಾ ಶಾಸ್ತ್ರಗಳು ಅದರ ಎಲೆಗಳು ಅರ್ಥಾತ್ ರಚನೆಯಾಗಿದೆ. ರಚನೆಯಿಂದ ಎಂದೂ ಆಸ್ತಿಯು ಸಿಗಲು ಸಾಧ್ಯವಿಲ್ಲ. ಒಂದುವೇಳೆ ಸಿಕ್ಕಿದರೂ ಸಹ ಅಲ್ಪಕಾಲಕ್ಕಾಗಿ. ಅನ್ಯ ಇಷ್ಟೆಲ್ಲಾ ಶಾಸ್ತ್ರಗಳನ್ನು ಓದುವುದರಿಂದ ಒಂದು ಜನ್ಮಕ್ಕಾಗಿ ಅಲ್ಪಕಾಲದ ಸುಖವು ಸಿಗುತ್ತದೆ. ಇವನ್ನು ಮನುಷ್ಯರು ಮನುಷ್ಯರಿಗೇ ಓದಿಸುತ್ತಾರೆ. ಅಲ್ಪಕಾಲದ ಸುಖವು ಸಿಕ್ಕಿತೆಂದರೆ ಮತ್ತೆ ಇನ್ನೊಂದು ಜನ್ಮದಲ್ಲಿ ಇನ್ನೊಂದು ವಿದ್ಯೆಯನ್ನು ಓದಬೇಕಾಗುತ್ತದೆ. ಇಲ್ಲಂತೂ ಒಬ್ಬ ನಿರಾಕಾರ ತಂದೆಯೇ 21 ಜನ್ಮಗಳಿಗಾಗಿ ಆಸ್ತಿಯನ್ನು ಕೊಡುತ್ತಾರೆ. ತಂದೆಯು ಶ್ರೇಷ್ಠರನ್ನಾಗಿ ಮಾಡುತ್ತಾರೆ. ಈಗ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ನೀವೆಲ್ಲರೂ ಈಶ್ವರನ ಮಕ್ಕಳಾಗಿದ್ದೀರಲ್ಲವೆ. ಸರ್ವವ್ಯಾಪಿ ಎಂದು ಹೇಳುವುದರಿಂದ ಅರ್ಥವೇನನ್ನೂ ತಿಳಿದುಕೊಳ್ಳುವುದಿಲ್ಲ. ಎಲ್ಲರಲ್ಲಿ ಪರಮಾತ್ಮನಿದ್ದಾರೆಂದು ಹೇಳಿದ್ದೇ ಆದರೆ ವಿಶ್ವ ಪಿತೃತ್ವವಾಗಿ ಬಿಡುತ್ತದೆ. ಎಲ್ಲರೂ ತಂದೆಯರಾಗಿ ಬಿಟ್ಟರೆ ಮತ್ತೆ ಆಸ್ತಿಯು ಎಲ್ಲಿಂದ ಸಿಗುತ್ತದೆ! ಯಾರ ದುಃಖವನ್ನು ಯಾರು ಹರಿಸುವರು, ತಂದೆಯೇ ದುಃಖಹರ್ತ-ಸುಖಕರ್ತನೆಂದು ಹೇಳಲಾಗುತ್ತದೆ. ಎಲ್ಲರೂ ತಂದೆಯರೆಂಬುದಕ್ಕೆ ಅರ್ಥವೇ ಇಲ್ಲ. ತಂದೆಯು ತಿಳಿಸುತ್ತಾರೆ - ಇದು ರಾವಣ ರಾಜ್ಯವಾಗಿದೆ. ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಆದ್ದರಿಂದ ಚಿತ್ರಗಳಲ್ಲಿಯೂ ಸ್ಪಷ್ಟ ಮಾಡಿ ತೋರಿಸಿದ್ದಾರೆ.

ನೀವು ಮಕ್ಕಳ ಬುದ್ಧಿಯಲ್ಲಿದೆ - ನಾವು ಪುರುಷೋತ್ತಮ ಸಂಗಮಯುಗದಲ್ಲಿದ್ದೇವೆ, ತಂದೆಯು ಪುರುಷೋತ್ತಮರನ್ನಾಗಿ ಮಾಡಲು ಬಂದಿದ್ದಾರೆ. ಹೇಗೆ ಡಾಕ್ಟರ್, ವಕೀಲ ವಿದ್ಯೆಯನ್ನು ಓದುತ್ತಾರೆ ಅದರಿಂದ ಪದವಿಯನ್ನು ಪಡೆಯುತ್ತಾರೆ. ಈ ವಿದ್ಯೆಯಿಂದ ನಾನು ಈ ರೀತಿಯಾಗುತ್ತೇನೆಂದು ತಿಳಿಯುತ್ತಾರೆ. ನೀವಿಲ್ಲಿ ಸತ್ಯ ತಂದೆಯ ಸಂಗದಲ್ಲಿ ಕುಳಿತಿದ್ದೀರಿ, ಇದರಿಂದ ನೀವು ಸುಖಧಾಮದಲ್ಲಿ ಹೋಗುತ್ತೀರಿ. ಸತ್ಯಧಾಮಗಳು ಎರಡಿವೆ, ಒಂದು ಸುಖಧಾಮ ಇನ್ನೊಂದು ಶಾಂತಿಧಾಮವಾಗಿದೆ. ಇದು ಈಶ್ವರನ ಧಾಮವಾಗಿದೆ. ತಂದೆಯು ರಚಯಿತನಲ್ಲವೆ. ಯಾರು ತಂದೆಯ ಮೂಲಕ ಅರಿತುಕೊಂಡು ಬುದ್ಧಿವಂತರಾಗುತ್ತಾ ಹೋಗುವರೋ ಅವರ ಕರ್ತವ್ಯವಾಗಿದೆ - ಸರ್ವೀಸ್ ಮಾಡುವುದು. ತಂದೆಯು ಹೇಳುತ್ತಾರೆ - ನೀವೀಗ ತಿಳಿದುಕೊಂಡು ಬುದ್ಧಿವಂತರಾಗುತ್ತೀರಿ. ಅಂದಾಗ ಶಿವನ ಮಂದಿರಕ್ಕೆ ಹೋಗಿ ತಿಳಿಸಿಕೊಡಿ, ಅವರಿಗೆ ಹೇಳಿ - ನೀವು ಶಿವಲಿಂಗದ ಮೇಲೆ ಹಣ್ಣು, ಹೂ, ಬೆಣ್ಣೆ, ತುಪ್ಪ, ಎಕ್ಕದ ಹೂ, ಗುಲಾಬಿ, ಅನೇಕ ಪ್ರಕಾರದ್ದನ್ನೇಕೆ ಇಡುತ್ತೀರಿ? ಕೃಷ್ಣನ ಮಂದಿರದಲ್ಲಿ ಎಕ್ಕದ ಹೂವನ್ನು ಇಡುವುದಿಲ್ಲ, ಅಲ್ಲಿಗೆ ಸುಗಂಧಭರಿತವಾದ ಹೂಗಳನ್ನು ತೆಗೆದುಕೊಂಡು ಹೋಗುತ್ತಾರೆ ಆದರೆ ಶಿವನ ಮುಂದ ಎಕ್ಕದ ಹೂವನ್ನು ಇಡುತ್ತಾರೆ, ಗುಲಾಬಿ ಹೂವನ್ನೂ ಇಡುತ್ತಾರೆ. ಇದರ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ಈ ಸಮಯದಲ್ಲಿ ನಿಮಗೆ ತಂದೆಯು ಓದಿಸುತ್ತಾರೆ ಯಾವುದೇ ಮನುಷ್ಯರು ಓದಿಸುವುದಿಲ್ಲ. ಇಡೀ ಪ್ರಪಂಚದಲ್ಲಿ ಮನುಷ್ಯರು ಮನುಷ್ಯರಿಗೆ ಓದಿಸುತ್ತಾರೆ, ನಿಮಗೆ ಭಗವಂತನೇ ಓದಿಸುತ್ತಾರೆ. ಯಾವುದೇ ಮನುಷ್ಯನಿಗೆ ಖಂಡಿತ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಲಕ್ಷ್ಮೀ-ನಾರಾಯಣರೂ ಸಹ ಭಗವಂತನಲ್ಲ ಅವರಿಗೆ ದೇವಿ-ದೇವತೆಗಳೆಂದು ಹೇಳಲಾಗುತ್ತದೆ. ಬ್ರಹ್ಮಾ, ವಿಷ್ಣು, ಶಂಕರನಿಗೂ ದೇವತೆಗಳೆಂದು ಹೇಳುತ್ತಾರೆ. ಭಗವಂತ ಒಬ್ಬರೇ ಆಗಿದ್ದಾರೆ. ಅವರು ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ. ಹೇ ಪರಮಪಿತ ಪರಮಾತ್ಮ ಎಂದು ಎಲ್ಲರೂ ಹೇಳುತ್ತಾರೆ. ಅವರ ಸತ್ಯ-ಸತ್ಯವಾದ ಹೆಸರು ಶಿವ ಎಂದಾಗಿದೆ ಮತ್ತು ನೀವು ಮಕ್ಕಳು ಸಾಲಿಗ್ರಾಮಗಳಾಗಿದ್ದೀರಿ. ಪಂಡಿತರು ರುದ್ರ ಯಜ್ಞವನ್ನು ರಚಿಸಿದಾಗ ಶಿವನ ಬಹಳ ದೊಡ್ಡ ಲಿಂಗವನ್ನು ಮಾಡುತ್ತಾರೆ ಮತ್ತು ಚಿಕ್ಕ-ಚಿಕ್ಕ ಸಾಲಿಗ್ರಾಮಗಳನ್ನು ಮಾಡುತ್ತಾರೆ. ಆತ್ಮಕ್ಕೆ ಸಾಲಿಗ್ರಾಮವೆಂದು ಹೇಳಲಾಗುತ್ತದೆ. ಪರಮಾತ್ಮನಿಗೆ ಶಿವನೆಂದು ಹೇಳಲಾಗುತ್ತದೆ. ಅವರು ಎಲ್ಲರ ತಂದೆಯಾಗಿದ್ದಾರೆ. ನಾವೆಲ್ಲರೂ ಸಹೋದರ-ಸಹೋದರರಾಗಿದ್ದೇವೆ. ವಿಶ್ವಭ್ರಾತೃತ್ವವೆಂದು ಹೇಳುತ್ತಾರೆ, ತಂದೆಯು ಮಕ್ಕಳಾದ ನಾವೆಲ್ಲರೂ ಸಹೋದರ-ಸಹೋದರರಾಗಿದ್ದೇವೆ ಮತ್ತೆ ಸಹೋದರ-ಸಹೋದರಿ ಹೇಗಾದೆವು? ಪ್ರಜಾಪಿತ ಬ್ರಹ್ಮನ ಮುಖದಿಂದ ಪ್ರಜೆಗಳನ್ನು ರಚಿಸಲಾಗುತ್ತದೆ. ಅವರೇ ಬ್ರಾಹ್ಮಣ ಮತ್ತು ಬ್ರಾಹ್ಮಿಣಿಯರಾಗುತ್ತಾರೆ. ನಾವು ಪ್ರಜಾಪಿತ ಬ್ರಹ್ಮನ ಸಂತಾನರಾಗಿದ್ದೇವೆ. ಆದ್ದರಿಂದ ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿಯರೆಂದು ಕರೆಸಿಕೊಳ್ಳುತ್ತೇವೆ ಅಂದಾಗ ಬ್ರಹ್ಮನನ್ನು ಯಾರು ಸೃಷ್ಟಿ ಮಾಡಿದರು? ಭಗವಂತ. ಬ್ರಹ್ಮಾ, ವಿಷ್ಣು, ಶಂಕರ - ಇವರೆಲ್ಲರೂ ರಚನೆಯಾಗಿದ್ದಾರೆ. ಬ್ರಹ್ಮನ ಮುಖ ಕಮಲದಿಂದ ನೀವು ಮಕ್ಕಳು ಬಂದಿದ್ದೀರಿ. ಬ್ರಾಹ್ಮಣ-ಬ್ರಾಹ್ಮಿಣಿಯೆಂದು ಕರೆಸಿಕೊಳ್ಳುತ್ತೀರಿ. ನೀವು ಬ್ರಹ್ಮಾ ಮುಖವಂಶಾವಳಿಗಳು ದತ್ತು ಮಕ್ಕಳಾಗಿದ್ದೀರಿ, ಪ್ರಜಾಪಿತ ಬ್ರಹ್ಮನನ್ನು ಇಷ್ಟು ಮಂದಿ ಮಕ್ಕಳಿಗೆ ಹೇಗೆ ಜನ್ಮ ನೀಡುತ್ತಾರೆ! ಅವಶ್ಯವಾಗಿ ದತ್ತು ಮಾಡಿಕೊಳ್ಳುತ್ತಾರೆ. ಹೇಗೆ ಗುರುವಿಗೆ ಅನುಯಾಯಿಗಳು ದತ್ತಾಗುತ್ತಾರೆ ಅವರಿಗೆ ಶಿಷ್ಯರೆಂದು ಹೇಳುತ್ತಾರೆ ಅಂದಾಗ ಪ್ರಜಾಪಿತ ಬ್ರಹ್ಮನು ಇಲ್ಲಿ ಪಿತನಾದರು. ಅವರಿಗೆ ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಎಂದು ಹೇಳಲಾಗುತ್ತದೆ. ಪ್ರಜಾಪಿತ ಬ್ರಹ್ಮನು ಇಲ್ಲಿರಬೇಕಲವೆ. ಸೂಕ್ಷ್ಮವತನದಲ್ಲಂತೂ ಪ್ರಜೆಗಳಿರುವುದಿಲ್ಲ. ಪ್ರಜಾಪಿತ ಬ್ರಹ್ಮನು ಯಾರು ಎಂಬುದೆಲ್ಲವನ್ನೂ ತಂದೆಯೇ ತಿಳಿಸುತ್ತಾರೆ. ನಾವು ಬ್ರಾಹ್ಮಣರೂ ಸಹ ತಮ್ಮನ್ನು ಬ್ರಹ್ಮನ ಸಂತಾನರೆಂದು ಹೇಳಿಕೊಳ್ಳುತ್ತಾರೆ. ಈಗ ಬ್ರಹ್ಮನೆಲ್ಲಿದ್ದಾರೆ? ಇಲ್ಲಿ ಕುಳಿತಿದ್ದಾರೆಂದು ನೀವು ಹೇಳುತ್ತೀರಿ, ಅವರು ಬಂದು ಹೋಗಿದ್ದಾರೆಂದು ಅವರು ಹೇಳುತ್ತಾರೆ. ಅವರು ತಮ್ಮನ್ನು ಪೂಜಾರಿ ಬ್ರಾಹ್ಮಣರೆಂದು ಕರೆಸಿಕೊಳ್ಳುತ್ತಾರೆ, ನೀವಂತೂ ಈಗ ಪ್ರತ್ಯಕ್ಷದಲ್ಲಿದ್ದೀರಿ. ಪ್ರಜಾಪಿತ ಬ್ರಹ್ಮನ ಮಕ್ಕಳು ಪರಸ್ಪರ ಸಹೋದರ-ಸಹೋದರರಾದಿರಿ. ಶಿವ ತಂದೆಯು ಬ್ರಹ್ಮನನ್ನು ದತ್ತು ಮಾಡಿಕೊಂಡಿದ್ದಾರೆ. ತಿಳಿಸುತ್ತಾರೆ - ನಾನು ಈ ವೃದ್ಧನ (ಬ್ರಹ್ಮಾ) ತನುವಿನಲ್ಲಿ ಪ್ರವೇಶ ಮಾಡಿ ನಿಮಗೆ ರಾಜಯೋಗವನ್ನು ಕಲಿಸುತ್ತೇನೆ. ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವುದು ಮನುಷ್ಯನ ಕೆಲಸವಲ್ಲ. ತಂದೆಗೆ ರಚಯಿತನೆಂದು ಹೇಳಲಾಗುತ್ತದೆ. ಭಾರತವಾಸಿಗಳಿಗೆ ತಿಳಿದಿದೆ ಶಿವ ಜಯಂತಿಯನ್ನು ಆಚರಿಸಲಾಗುತ್ತದೆ, ಶಿವ ತಂದೆಯಾಗಿದ್ದಾರೆ, ದೇವಿ-ದೇವತೆಗಳಿಗೆ ಈ ರಾಜ್ಯವನ್ನು ಯಾರು ಕೊಟ್ಟರೆಂದು ಮನುಷ್ಯರಿಗೆ ತಿಳಿದಿಲ್ಲ. ಸ್ವರ್ಗದ ರಚಯಿತನು ಪರಮ ಆತ್ಮನಾಗಿದ್ದಾರೆ. ಅವರಿಗೆ ಪತಿತ-ಪಾವನನೆಂದು ಕರೆಯಲಾಗುತ್ತದೆ. ಆತ್ಮವು ಮೂಲತಃ ಪವಿತ್ರವಾಗಿರುತ್ತಾರೆ ನಂತರ ಸತೋ, ರಜೋ, ತಮೋದಲ್ಲಿ ಬರುತ್ತದೆ. ಈ ಸಮಯದ ಕಲಿಯುಗದಲ್ಲಿ ಎಲ್ಲರೂ ತಮೋಪ್ರಧಾನರಾಗಿದ್ದಾರೆ. ಸತ್ಯಯುಗದಲ್ಲಿ ಸತೋಪ್ರಧಾನರಾಗಿದ್ದರು, ಇಂದಿಗೆ 5000 ವರ್ಷಗಳ ಮೊದಲು ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, 2500 ವರ್ಷಗಳು ದೇವತೆಗಳ ರಾಜ್ಯವು ನಡೆಯಿತು, ಅವರ ಮಕ್ಕಳೂ ಸಹ ರಾಜ್ಯ ಮಾಡಿದರಲ್ಲವೆ. ಲಕ್ಷ್ಮೀ-ನಾರಾಯಣ ದಿ ಫಸ್ಟ್, ದಿ ಸೆಕೆಂಡ್.... ಹೀಗೆ ವಂಶಾವಳಿಯು ನಡೆಯುತ್ತಾ ಬಂದಿದೆ. ಮನುಷ್ಯರಿಗೆ ಈ ಮಾತುಗಳು ತಿಳಿದಿಲ್ಲ. ಈ ಸಮಯದಲ್ಲಿ ಎಲ್ಲರೂ ತಮೋಪ್ರಧಾನ, ಪತಿತರಾಗಿದ್ದಾರೆ. ಇಲ್ಲಿ ಒಬ್ಬರೂ ಪಾವನರಿರಲು ಸಾಧ್ಯವಿಲ್ಲ. ಹೇ ಪತಿತ-ಪಾವನ ಬನ್ನಿ ಎಂದು ಎಲ್ಲರೂ ಕರೆಯುತ್ತಾರೆ ಅಂದಾಗ ಪತಿತ ಪ್ರಪಂಚ ಆಯಿತಲ್ಲವೆ. ಇದ್ಕಕೆ ಕಲಿಯುಗ, ನರಕವೆಂದು ಹೇಳಲಾಗುತ್ತದೆ. ಹೊಸ ಪ್ರಪಂಚಕ್ಕೆ ಸ್ವರ್ಗ, ಪಾವನ ಪ್ರಪಂಚವೆಂದು ಹೇಳಲಾಗುವುದು. ನಂತರ ಹೇಗೆ ಪತಿತರಾದರು ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಭಾರತದಲ್ಲಿ ತಮ್ಮ 84 ಜನ್ಮಗಳನ್ನು ತಿಳಿದುಕೊಂಡಿರುವವರು ಒಬ್ಬರೂ ಇಲ್ಲ. ಮನುಷ್ಯರು ಗರಿಷ್ಠ 84 ಜನ್ಮಗಳನ್ನು ಕನಿಷ್ಠ ಒಂದು ಜನ್ಮವನ್ನು ತೆಗೆದುಕೊಳ್ಳುತ್ತಾರೆ.

ಭಾರತವನ್ನು ಅವಿನಾಶಿ ಖಂಡವೆಂದು ಹೇಳಲಾಗುತ್ತದೆ ಏಕೆಂದರೆ ಇಲ್ಲಿಯೇ ಶಿವ ತಂದೆಯ ಅವತರಣೆಯಾಗುತ್ತದೆ. ಭಾರತ ಖಂಡವು ಎಂದೂ ವಿನಾಶವಾಗುವುದಿಲ್ಲ. ಉಳಿದ ಯಾವ ಅನೇಕ ಖಂಡಗಳಿವೆಯೋ ಅದೂ ವಿನಾಶವಾಗುತ್ತದೆ. ಈ ಸಮಯದಲ್ಲಿ ಆದಿ ಸನಾತನ ದೇವಿ-ದೇವತಾ ಧರ್ಮವು ಸತೋಪ್ರಧಾನ, ಪಾವನರಾಗಿದ್ದಾರೆ. ಈಗಂತೂ ಎಲ್ಲರೂ ಪತಿತ, ಪೂಜಾರಿಗಳಗಿದ್ದಾರೆ. ಇದನ್ನೂ ಸಹ ತಂದೆಯು ತಿಳಿಸುತ್ತಾರೆ - ಭಗವಾನುವಾಚವಲ್ಲವೆ. ಭಗವಂತನು ಎಲ್ಲರ ತಂದೆಯಾಗಿದ್ದಾರೆ, ಅವರು ಕಲ್ಪದಲ್ಲಿ ಒಂದೇ ಬಾರಿ ಭಾರತದಲ್ಲಿ ಬರುತ್ತಾರೆ. ಯಾವಾಗ ಬರುತ್ತಾರೆ? ಪುರುಷೋತ್ತಮ ಸಂಗಮಯುಗದಲ್ಲಿ. ಈ ಸಂಗಮಯುಗಕ್ಕೆ ಪುರುಷೋತ್ತಮವೆಂದು ಹೇಳಲಾಗುತ್ತದೆ. ಇದು ಕಲಿಯುಗದಿಂದ ಸತ್ಯಯುಗ, ಪತಿತರಿಂದ ಪಾವನರಾಗುವ ಸಂಗಮಯುಗವಾಗಿದೆ. ಕಲಿಯುಗದಲ್ಲಿ ಪತಿತ ಮನುಷ್ಯರು, ಸತ್ಯಯುಗದಲ್ಲಿ ಪಾವನ ದೇವತೆಗಳಿರುತ್ತಾರೆ. ಆದ್ದರಿಂದ ಇದಕ್ಕೆ ಪುರುಷೋತ್ತಮ ಸಂಗಮಯುಗವೆಂದು ಹೇಳಲಾಗುತ್ತದೆ. ಯಾವಾಗ ತಂದೆಯು ಬಂದು ಪತಿತರಿಂದ ಪಾವನರನ್ನಾಗಿ ಮಾಡುತ್ತಾರೆ. ನೀವು ಮನುಷ್ಯರಿಂದ ಪುರುಷೋತ್ತಮ ದೇವತೆಗಳಾಗಲು ಬಂದಿದ್ದೀರಿ, ಮನುಷ್ಯರಂತೂ ಇದನ್ನೂ ತಿಳಿದುಕೊಂಡಿಲ್ಲ - ನಾವಾತ್ಮಗಳು ನಿರ್ವಾಣಧಾಮದಲ್ಲಿರುತ್ತೇವೆ ಅಲ್ಲಿಂದ ಪಾತ್ರವನ್ನಭಿನಯಿಸಲು ಬರುತ್ತೇವೆ. ಈ ನಾಟಕದ ಆಯಸ್ಸು 5000 ವರ್ಷಗಳಾಗಿವೆ. ನಾವು ಈ ಬೇಹದ್ದಿನ ನಾಟಕದಲ್ಲಿ ಪಾತ್ರವನ್ನಭಿನಯಿಸುತ್ತೇವೆ. ಎಲ್ಲಾ ಮನುಷ್ಯಾತ್ಮರು ಪಾತ್ರಧಾರಿಗಳಾಗಿದ್ದಾರೆ. ಈ ನಾತಕದ ಚಕ್ರವು ಸುತ್ತುತ್ತಾ ಇರುತ್ತದೆ. ಇದು ಎಂದಿಗೂ ನಿಲ್ಲುವುದಿಲ್ಲ. ಮೊಟ್ಟ ಮೊದಲಿಗೆ ಈ ನಾಟಕದಲ್ಲಿ ಸತ್ಯಯುಗದಲ್ಲಿ ದೇವಿ-ದೇವತೆಗಳು ಪಾತ್ರವನ್ನಭಿನಯಿಸಲು ಬರುತ್ತಾರೆ ಮತ್ತೆ ತ್ರೇತಾದಲ್ಲಿ ಕ್ಶತ್ರಿಯರು ಬರುತ್ತಾರೆ. ಈ ನಾಟಕವನ್ನು ಅರಿತುಕೊಳ್ಳಬೇಕಲ್ಲವೆ. ಇದು ಮುಳ್ಳುಗಳ ಕಾಡಾಗಿದೆ. ಎಲ್ಲಾ ಮನುಷ್ಯರು ದುಃಖಿಗಳಾಗಿದ್ದಾರೆ, ಕಲಿಯುಗದ ನಂತರ ಸತ್ಯಯುಗವು ಬರುತ್ತದೆ. ಕಲಿಯುಗದಲ್ಲಿ ಅನೇಕ ಮನುಷ್ಯರಿದ್ದಾರೆ, ಸತ್ಯಯುಗದಲ್ಲಿ ಬಹಳ ಕೆಲವರೇ ಮನುಷ್ಯರಿರುತ್ತಾರೆ. ಆದಿ ಸನಾತನ ಸೂರ್ಯವಂಶಿ ದೇವಿ-ದೇವತೆಗಳಿರುತ್ತಾರೆ. ಈಗ ಈ ಹಳೆಯ ಪ್ರಪಂಚವು ಬದಲಾಗಲಿದೆ, ಮನುಷ್ಯ ಸೃಷ್ಟಿಯಿಂದ ದೇವತೆಗಳ ಸೃಷ್ಟಿಯಾಗುವುದು. ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು, ಆದರೆ ಈಗ ತಮ್ಮನ್ನು ದೇವತೆಗಳೆಂದು ಕರೆಸಿಕೊಳ್ಳುವುದಿಲ್ಲ. ತಮ್ಮ ಧರ್ಮವನ್ನೇ ಮರೆತಿದ್ದಾರೆ. ಕೇವಲ ಭಾರತವಾಸಿಗಳೇ ತಮ್ಮನ್ನು ದೇವತೆಗಳೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ದೇವಿ-ದೇವತೆಗಳ ಪೂಜೆಯನ್ನು ಈಗ ಮಾಡುತ್ತಿರುತ್ತಾರೆ, ತಮ್ಮನ್ನು ನೀಚ, ಪಾಪಿಗಳೆಂದು ಹೇಳಿಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ - ನೀವೇ ಪೂಜ್ಯರಾಗಿದ್ದಿರಿ ಮತ್ತೆ ನೀವೆ ಪತಿತ, ಪೂಜಾರಿಗಳಾಗಿದ್ದೀರಿ. ಹಮ್ ಸೋ, ಸೋ ಹಮ್ನ ಅರ್ಥವನ್ನು ತಂದೆಯು ತಿಳಿಸಿದ್ದಾರೆ. ಆತ್ಮವೇ ಪರಮಾತ್ಮನೆಂದು ಅವರು ಹೇಳುತ್ತಾರೆ. ಇದು ಸುಳ್ಳು ಅರ್ಥವಾಗಿದೆ. ಸುಳ್ಳು ಮಾಯೆ, ಸುಳ್ಳು ಕಾಯ..... ಸತ್ಯಯುಗದಲ್ಲಿ ಈ ರೀತಿ ಹೇಳುವುದಿಲ್ಲ. ಸತ್ಯ ಖಂಡದ ಸ್ಥಾಪನೆಯನ್ನು ತಂದೆಯು ಮಾಡುತ್ತಾರೆ. ಮತ್ತೆ ರಾವಣನು ಅಸತ್ಯ ಖಂಡವನ್ನಾಗಿ ಮಾಡುತ್ತಾರೆ. ಆತ್ಮವೆಂದರೇನು, ಪರಮಾತ್ಮ ಯಾರು ಎಂಬುದನ್ನು ತಂದೆಯೇ ಬಂದು ತಿಳಿಸುತ್ತಾರೆ. ಇದು ಯಾರಿಗೂ ತಿಳಿದಿಲ್ಲ. ತಂದೆಯು ತಿಳಿಸುತ್ತಾರೆ - ನೀವಾತ್ಮಗಳು ಬಿಂದುಗಳಾಗಿದ್ದೀರಿ, ನಿಮ್ಮಲ್ಲಿ 84 ಜನ್ಮಗಳ ಪಾತ್ರವು ನಿಗಧಿತವಾಗಿದೆ. ನಾವಾತ್ಮಗಳು ಹೇಗಿದ್ದೇವೆಂಬುದನ್ನು ಯಾರೂ ತಿಳಿದುಕೊಂಡಿಲ್ಲ. ನಾವು ವಕೀಲರಾಗಿದ್ದೇವೆ, ವೈದ್ಯರಾಗಿದ್ದೇವೆ ಎಂಬುದನ್ನು ತಿಳಿದುಕೊಂಡಿರುತ್ತಾರೆ. ಆದರೆ ಆತ್ಮವನ್ನು ಯಾರೊಬ್ಬರೂ ತಿಳಿದುಕೊಂಡಿಲ್ಲ. ತಂದೆಯೇ ಬಂದು ಪರಿಚಯವನ್ನು ಕೊಡುತ್ತಾರೆ. ನೀವಾತ್ಮಗಳಲ್ಲಿ 84 ಜನ್ಮಗಳ ಪಾತ್ರವು ನಿಗಧಿಯಾಗಿದೆ, ಇದೆಂದೂ ವಿನಾಶವಾಗಲು ಸಾಧ್ಯವಿಲ್ಲ. ಇದೇ ಭಾರತವು ಭಗವಂತನ ಹೂದೋಟವಾಗಿತ್ತು. ಎಷ್ಟೊಂದು ಸುಖವಿತ್ತು. ಈಗ ದುಃಖವೇ ದುಃಖವಿದೆ. ತಂದೆಯು ಈ ಜ್ಞಾನವನ್ನು ಕೊಡುತ್ತಾರೆ.

ನೀವು ಮಕ್ಕಳು ತಂದೆಯ ಮೂಲಕ ಈ ಹೊಸ-ಹೊಸ ಮಾತುಗಳನ್ನು ಕೇಳುತ್ತೀರಿ. ಎಲ್ಲದಕ್ಕಿಂತ ಹೊಸ ಮಾತಾಗಿದೆ - ನೀವು ಮನುಷ್ಯರಿಂದ ದೇವತೆಗಳಾಗಬೇಕಾಗಿದೆ. ನೀವು ತಿಳಿದುಕೊಂಡಿದ್ದೀರಿ - ಮನುಷ್ಯರಿಂದ ದೇವತೆಗಳಾಗುವ ವಿದ್ಯೆಯನ್ನು ಯಾವುದೇ ಮನುಷ್ಯರು ಓದಿಸುವುದಿಲ್ಲ, ಭಗವಂತನೇ ಓದಿಸುತ್ತಾರೆ. ಆ ಭಗವಂತನನ್ನು ಸರ್ವವ್ಯಾಪಿ ಎಂದು ಹೇಳುವುದು ನಿಂದನೆ ಮಾಡುವುದಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಪ್ರತೀ 5000 ವರ್ಷಗಳ ನಂತರ ಬಂದು ಬಂದು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೇನೆ, ನರಕವನ್ನಾಗಿ ರಾವಣನು ಮಾಡುತ್ತಾನೆ. ಈ ಮಾತುಗಳನ್ನು ಪ್ರಪಂಚದಲ್ಲಿ ಮತ್ತ್ಯಾರೂ ತಿಳಿದುಕೊಂಡಿಲ್ಲ. ತಂದೆಯೇ ಬಂದು ನಿಮ್ಮನ್ನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಾರೆ. ಕೊಳಕಾದ ವಸ್ತ್ರಗಳನ್ನು ಒಗೆದರು.... ಎಂದು ಗಾಯನವೂ ಇದೆ. ಅಲ್ಲಿ ವಿಕಾರವಿರುವುದಿಲ್ಲ. ಅದು ಸಂಪೂರ್ಣ ನಿರ್ವಿಕಾರಿ ಪ್ರಪಂಚವಾಗಿದೆ. ಇದು ವಿಕಾರಿ ಪ್ರಪಂಚವಾಗಿದೆ. ಪತಿತ-ಪಾವನ ಬನ್ನಿ, ನಮ್ಮನ್ನು ರಾವಣನು ಪತಿತರನ್ನಾಗಿ ಮಾಡಿದ್ದಾನೆಂದು ಕೂಗುತ್ತಾರೆ ಆದರೆ ರಾವಣನು ಯಾವಾಗ ಬಂದನು, ಏನಾಯಿತೆಂದುಬುದು ತಿಳಿದುಕೊಂಡಿಲ್ಲ. ರಾವಣನು ಎಷ್ಟೊಂದು ಕಂಗಾಲರನ್ನಾಗಿ ಮಾಡಿದ್ದಾನೆ. ಭಾರತವು 5000 ವರ್ಷಗಳ ಮೊದಲು ಎಷ್ಟೊಂದು ಸಾಹುಕಾರನಾಗಿತ್ತು. ಚಿನ್ನ-ವಜ್ರ, ವೈಡೂರ್ಯಗಳ ಮಹಲುಗಳಿತ್ತು, ಎಷ್ಟೊಂದು ಧನ ಸಂಪತ್ತಿತ್ತು. ಈಗ ಯಾವ ಗತಿಯಾಗಿದೆ! ಆದ್ದರಿಂದ ತಂದೆಯ ನೆನಪು ಕಿರೀಟಧಾರಿಯನ್ನಾಗಿ ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ಶಿವ ತಂದೆಯು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಾರೆಂದು ನೀವು ಹೇಳುತ್ತೀರಿ. ತಂದೆಯು ತಿಳಿಸುತ್ತಾರೆ - ಮೃತ್ಯುವು ಸನ್ಮುಖದಲ್ಲಿದೆ, ನೀವು ವಾನಪ್ರಸ್ಥಿಗಳಾಗಿದ್ದೀರಿ. ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಆದ್ದರಿಂದ ತಮ್ಮನ್ನು ಆತ್ಮನೆಂದು ತಿಳಿಯಿರಿ, ನನ್ನೊಬ್ಬನನ್ನೇ ನೆನಪು ಮಾಡಿದಾಗ ಪಾಪಗಳು ಭಸ್ಮವಾಗುತ್ತವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ನಾವು ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣರಾಗಿದ್ದೇವೆ. ಸ್ವಯಂ ಭಗವಂತನೇ ನಮ್ಮನ್ನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುವ ವಿದ್ಯೆಯನ್ನು ಓದಿಸುತ್ತಿದ್ದಾರೆ. ಈ ನಶೆ ಮತ್ತು ಖುಷಿಯಲ್ಲಿರಬೇಕಾಗಿದೆ. ಪುರುಷೋತ್ತಮ ಸಂಗಮಯುಗದಲ್ಲಿ ಪುರುಷೋತ್ತಮರಾಗುವ ಪುರುಷಾರ್ಥ ಮಾಡಬೇಕಾಗಿದೆ.

2. ಈಗ ನಮ್ಮದು ವಾನಪ್ರಸ್ಥ ಸ್ಥಿತಿಯಾಗಿದೆ, ಮೃತ್ಯುವು ಸನ್ಮುಖದಲ್ಲಿ ನಿಂತಿದೆ. ಹಿಂತಿರುಗಿ ಮನೆಗೆ ಹೋಗಬೇಕಾಗಿದೆ... ಆದ್ದರಿಂದ ತಂದೆಯ ನೆನಪಿನಿಂದ ಎಲ್ಲಾ ಪಾಪಗಳನ್ನು ಭಸ್ಮ ಮಾಡಿಕೊಳ್ಳಬೇಕಾಗಿದೆ.

ವರದಾನ:
ಆತ್ಮೀಯ ಯಾತ್ರಿಕನಾಗಿದ್ದೇನೆ - ಈ ಸ್ಮೃತಿಯಿಂದ ಸದಾ ಉಪರಾಮ್, ನ್ಯಾರೆ ಮತ್ತು ನಿರ್ಮೋಹಿ ಭವ.

ಆತ್ಮೀಯ ಯಾತ್ರಿಕ ಸದಾ ನೆನಪಿನ ಯಾತ್ರೆಯಲ್ಲಿ ಮುಂದುವರೆಯುತ್ತಿರುತ್ತಾರೆ, ಈ ಯಾತ್ರೆ ಸದಾಕಾಲಕ್ಕೆ ಸುಖದಾಯಿಯಾಗಿರುತ್ತದೆ. ಯಾರು ಆತ್ಮೀಯ ಯಾತ್ರೆಯಲ್ಲಿ ತತ್ಪರರಾಗಿರುತ್ತಾರೆ, ಅವರು ಬೇರೆ ಯಾವುದೇ ಯಾತ್ರೆಯನ್ನು ಮಾಡುವ ಅವಶ್ಯಕತಯಿಲ್ಲ. ಈ ಯಾತ್ರೆಯಲ್ಲಿ ಎಲ್ಲಾ ಯಾತ್ರೆಗಳೂ ಸಮಾವೇಶವಾಗಿದೆ. ಮನಸ್ಸಿನಿಂದಾಗಲಿ ತನುವಿನಿಂದಾಗಲಿ ಅಲೆದಾಡುವುದು ಸಮಾಪ್ತಿಯಾಗಿ ಬಿಡುವುದು. ಅಮದಾಗ ಸದಾ ಇದೇ ಸ್ಮೃತಿಯಿರಲಿ ನಾನು ಆತ್ಮೀಯ ಯಾತ್ರಿಕನಾಗಿರುವೆ, ಯಾತ್ರಿಕನಿಗೆ ಯಾವುದರಲ್ಲಿಯೂ ಮೋಹವಿರಲು ಸಾಧ್ಯವಿಲ್ಲ. ಅವರು ಸಹಜವಾಗಿ ಉಪರಾಮ, ನ್ಯಾರೆ ಅಥವಾ ನಿರ್ಮೋಹಿಯಾಗುವ ವರದಾನ ದೊರಕಿ ಬಿಡುವುದು.

ಸ್ಲೋಗನ್:
ಸದಾ ವ್ಹಾ! ಬಾಬಾ, ವ್ಹಾ! ನನ್ನ ಅದೃಷ್ಠ ಮತ್ತು ವ್ಹಾ! ನನ್ನ ಮಧುರ ಪರಿವಾರ - ಇದೇ ಗೀತೆ ಮೊಳಗುತ್ತಿರಲಿ.