19.07.20    Avyakt Bapdada     Kannada Murli     25.02.86     Om Shanti     Madhuban


ಡಬಲ್ ವಿದೇಶಿ ಸಹೋದರ-ಸಹೋದರಿಯರ ಸಮರ್ಪಣಾ ಸಮಾರೋಹದಲ್ಲಿ ಅವ್ಯಕ್ತ-ಬಾಪ್ದಾದಾರವರ ಮಹಾವಾಕ್ಯ


ಇಂದು ಬಾಪ್ದಾದಾರವರು ವಿಶೇಷವಾಗಿ ಶ್ರೇಷ್ಠ ದಿನದ ಪ್ರಯುಕ್ತ ಸ್ನೇಹ ತುಂಬಿದ ಶುಭಾಷಯಗಳನ್ನು ಕೊಡುತ್ತಿದ್ದಾರೆ. ಇಂದು ಯಾವ ಸಮಾರೋಹವನ್ನಾಚರಿಸಿದಿರಿ? ಹೊರಗಿನ ದೃಶ್ಯವಂತು ಸುಂದರವಾಗಿಯೇ ಇತ್ತು. ಆದರೆ ಎಲ್ಲರ ಉಮ್ಮಂಗ-ಉತ್ಸಾಹ ಮತ್ತು ದೃಢ ಸಂಕಲ್ಪದ, ಹೃದಯದ ಧ್ವನಿಯು ಹೃದಯರಾಮ ತಂದೆಯ ಬಳಿ ತಲುಪಿತು. ಅಂದಾಗ ಇಂದಿನ ದಿನದಂದು ವಿಶೇಷವಾಗಿ ಉಮ್ಮಂಗ-ಉತ್ಸಾಹತುಂಬಿದ ಧೃಢ ಸಂಕಲ್ಪ ಸಮಾರೋಹವೆಂದು ಹೇಳುತ್ತೇವೆ. ಯಾವಾಗಿನಿಂದ ಬಾಬಾರವರ ಮಕ್ಕಳಾದಿರಿ ಆಗಿನಿಂದ ಸಂಬಂಧವಿದೆ ಮತ್ತು ಇರುತ್ತದೆ. ಆದರೆ ಈ ವಿಶೇಷ ದಿನದಂದು ವಿಶೇಷ ರೂಪದಿಂದ ಆಚರಿಸಿದಿರಿ, ಇದಕ್ಕೆ ಹೇಳಲಾಗುತ್ತದೆ ದೃಢ ಸಂಕಲ್ಪ ಮಾಡುವುದು. ಏನೇ ಆಗಲಿ, ಭಲೆ ಮಾಯೆಯ ಬಿರುಗಾಳಿಗಳೇ ಬರಲಿ, ಭಲೆ ಜನರ ಭಿನ್ನ-ಭಿನ್ನ ಮಾತುಗಳೇ ಬರಲಿ, ಭಲೆ ಪ್ರಕೃತಿಯ ಯಾವುದೇ ಏರುಪೇರುಗಳ ಕಾಣಿಸಲಿ, ಭಲೆ ಲೌಕಿಕ ಅಥವಾ ಅಲೌಕಿಕ ಸಂಬಂಧದಲ್ಲಿ ಯಾವುದೇ ಪ್ರಕಾರದ ಸಂದರ್ಭಗಳೇ ಇರಲಿ, ಮನಸ್ಸಿನ ಸಂಕಲ್ಪಗಳ ಬಿರುಗಾಳಿಯು ಜೋರಾಗಿಯೇ ಇರಲಿ, ಆದರೂ ಸಹ ಒಬ್ಬ ತಂದೆಯ ಹೊರೆತು ಮತ್ತ್ಯಾರೂ ಇಲ್ಲ. ಒಂದು ಬಲ ಒಂದು ಭರವಸೆ, ಇಂತಹ ದೃಢ ಸಂಕಲ್ಪ ಮಾಡಿದಿರಾ ಅಥವಾ ಕೇವಲ ಸ್ಟೇಜಿನ ಮೇಲೆ ಕುಳಿತಿರಾ! ಡಬಲ್ ಸ್ಟೇಜಿನ ಮೇಲೆ ಕುಳಿತಿದ್ದೀರಲ್ಲವೇ? ಹಾರವೂ ಸಹ ಬಹಳ ಸುಂದರವಾದುದನ್ನು ಧರಿಸಿದ್ದೀರಿ. ಸ್ಥೂಲ ಹಾರದ ಜೊತೆಗೆ ಸಫಲತೆಯ ಹಾರವನ್ನೂ ಹಾಕಿಕೊಂಡಿದ್ದೀರಾ? ಸಫಲತೆಯು ಕೊರಳಿನ ಹಾರವಾಗಿದೆ. ಈ ದೃಢತೆಯೇ ಸಫಲತೆಗೆ ಆಧಾರವಾಗಿದೆ. ಈ ಸ್ಥೂಲ ಹಾರದ ಜೊತೆಗೆ ಸಫಲತೆಯ ಹಾರವೂ ಇದ್ದಿತಲ್ಲವೆ. ಬಾಪ್ದಾದಾರವರು ಡಬಲ್ ದೃಶ್ಯವನ್ನು ನೋಡುತ್ತಾರೆ. ಕೇವಲ ಸಾಕಾರ ಹಾರದ ದೃಶ್ಯವನ್ನು ನೋಡುವುದಿಲ್ಲ. ಆದರೆ ಸಾಕಾರ ದೃಶ್ಯದ ಜೊತೆ ಜೊತೆಗೆ ಆತ್ಮಿಕ ಸ್ಥಿತಿಯ ಮನಸ್ಸಿನ ದೃಢ ಸಂಕಲ್ಪ ಮತ್ತು ಸಫಲತೆಯ ಶ್ರೇಷ್ಠ ಮಾಲೆ - ಇವೆರಡನ್ನೂ ನೋಡುತ್ತಿದ್ದರು. ಡಬಲ್ ಮಾಲೆ, ಡಬಲ್ ಸ್ಟೇಜ್ನ್ನು ನೋಡುತ್ತಿದ್ದರು. ಎಲ್ಲರೂ ದೃಢ ಸಂಕಲ್ಪವನ್ನು ಮಾಡಿದಿರಾ. ಬಹಳ ಒಳ್ಳೆಯದು - ಏನೇ ಆಗಲಿ ಆದರೆ ಸಂಬಂಧವನ್ನು ನಿಭಾಯಿಸಬೇಕು. ಪರಮಾತ್ಮನ ಪ್ರೀತಿಯ ರೀತಿಯನ್ನು ಸದಾ ನಿಭಾಯಿಸುತ್ತಾ ಸಫಲತೆಯನ್ನು ಪಡೆಯಬೇಕು. ನಿಶ್ಚಿಂತವಿದೆ - ಸಫಲತೆಯು ತಮ್ಮ ಕೊರಳಿನ ಹಾರವಾಗಿದೆ. ಒಬ್ಬ ತಂದೆಯ ಹೊರತು ಮತ್ತ್ಯಾರೂ ಇಲ್ಲ- ಇದಾಗಿದೆ ದೃಢ ಸಂಕಲ್ಪ. ಯಾವಾಗ ಒಬ್ಬರಿದ್ದಾರೆ, ಅಂದಾಗ ಏಕರಸ ಸ್ಥಿತಿಯು ಸ್ವತಹವಾಗಿ ಮತ್ತು ಸಹಜವಾಗಿ ಇದೆ. ಸರ್ವ ಸಂಬಂಧಗಳ ಅವಿನಾಶಿ ಸಂಬಂಧವು ಜೋಡಣೆಯಾಗಿದೆಯಲ್ಲವೆ. ಒಂದು ಸಂಬಂಧವೇನಾದರೂ ಕಡಿಮೆಯಾಯಿತೆಂದರೆ ಏರುಪೇರಾಗುತ್ತದೆ. ಆದ್ದರಿಂದ ಸರ್ವ ಸಂಬಂಧಗಳ ಕಂಕಣವನ್ನು ಕಟ್ಟಿಕೊಂಡಿದ್ದೀರಾ. ಸಂಬಂಧವನ್ನು ಜೋಡಿಸಿದ್ದೀರಾ. ಸಂಕಲ್ಪ ಮಾಡಿದಿರಾ. ಸರ್ವ ಸಂಬಂಧವಿದೆಯೇ ಅಥವಾ ಕೇವಲ 3 ಸಂಬಂಧವಿದೆಯೇ? ಸರ್ವ ಸಂಬಂಧವಿದೆಯೆಂದರೆ ಸರ್ವ ಪ್ರಾಪ್ತಿಗಳಿವೆ. ಸರ್ವ ಸಂಬಂಧವಿಲ್ಲವೆಂದರೆ ಯಾವುದಾದರೊಂದು ಪ್ರಾಪ್ತಿಯ ಕೊರತೆಯಾಗಿ ಬಿಡುತ್ತದೆ. ಎಲ್ಲರ ಸಮಾರೋಹವಾಯಿತಲ್ಲವೆ. ದೃಢ ಸಂಕಲ್ಪ ಮಾಡುವುದರಿಂದ ಮುಂದೆ ಪುರುಷಾರ್ಥದಲ್ಲಿಯೂ ವಿಶೇಷ ರೂಪದಿಂದ ಲಿಫ್ಟ್ ಸಿಕ್ಕಿ ಬಿಡುತ್ತದೆ. ಈ ವಿಧಿಯೂ ಸಹ ವಿಶೇಷವಾಗಿ ಉಮ್ಮಂಗ-ಉತ್ಸಾಹವನ್ನು ಹೆಚ್ಚಿಸುತ್ತದೆ. ಬಾಪ್ದಾದಾರವರೂ ಸಹ ಎಲ್ಲಾಮಕ್ಕಳಿಗೆ ದೃಢ ಸಂಕಲ್ಪ ಮಾಡುವ ಸಮಾರೋಹದ ಪ್ರಯುಕ್ತ ಶುಭಾಷಯಗಳನ್ನು ಕೊಡುತ್ತಾರೆ. ಮತ್ತು ವರದಾನವನ್ನು ಕೊಡುತ್ತಾರೆ - ಸದಾ ಅವಿನಾಶಿ ಭವ, ಅಮರ ಭವ.

ಇಂದು ಏಷ್ಯಾದ ಗ್ರೂಪ್ನವರು ಕುಳಿತಿದ್ದಾರೆ. ಏಷ್ಯಾದ ವಿಶೇಷತೆಯೇನಾಗಿದೆ? ವಿದೇಶ ಸೇವೆಯ ಮೊದಲ ಗ್ರೂಪ್ ಜಪಾನಿಗೆ ಹೋದರು, ಇದು ವಿಶೇಷತೆಯಾಯಿತಲ್ಲವೆ. ಸಾಕಾರ ತಂದೆಯ ಪ್ರೇರಣೆಯನುಸಾರವಾಗಿ ವಿಶೇಷವಾಗಿ ವಿದೇಶ ಸೇವೆಯ ನಿಮಂತ್ರಣ ಮತ್ತು ಸೇವೆಯ ಆರಂಭವು ಜಪಾನಿನಿಂದ ಆಯಿತು. ಅಂದಾಗ ಸ್ಥಾಪನೆಯಲ್ಲಿ ಏಷ್ಯಾದ ನಂಬರ್ ಮುಂದಾಯಿತಲ್ಲವೆ. ಮೊದಲು ವಿದೇಶದ ನಿಮಂತ್ರಣವಿತ್ತು, ಅನ್ಯ ಧರ್ಮದವರು ನಿಮಂತ್ರಣ ಕೊಟ್ಟು ಕರೆಸುವುದು - ಇದರ ಆರಂಭವೂ ಏಷ್ಯಾದಿಂದಾಯಿತು. ಅಂದಾಗ ಏಷ್ಯಾವು ಎಷ್ಟೊಂದು ಲಕ್ಕಿ ಆಗಿದೆ! ಮತ್ತು ಇನ್ನೊಂದು ವಿಶೇಷತೆ - ಏಷ್ಯಾ ಭಾರತಕ್ಕೆ ಅತಿ ಸಮೀಪವಿದೆ. ಯಾವುದು ಸಮೀಪವಿರುತ್ತದೆ, ಅದಕ್ಕೆ ಅಗಲಿ ಮರಳಿ ಸಿಕ್ಕಿರುವುದೆಂದು ಹೇಳಲಾಗುತ್ತದೆ. ಅಗಲಿರುವ ಮಕ್ಕಳು ಗುಪ್ತವಾಗಿದ್ದಾರೆ, ಪ್ರತಿಯೊಂದು ಸ್ಥಾನದಲ್ಲಿ ಎಷ್ಟೊಂದು ಒಳ್ಳೊಳ್ಳೆಯ ರತ್ನಗಳು ಬಂದಿದ್ದಾರೆ. ಕ್ವಾಂಟಿಟಿ ಭಲೆ ಕಡಿಮೆಯಿದೆ ಆದರೆ ಕ್ವಾಲಿಟಿಯಿದೆ. ಪರಿಶ್ರಮದ ಫಲ ಚೆನ್ನಾಗಿದೆ. ಈಗ ಈ ರೀತಿಯಾಗಿ ನಿಧಾನ-ನಿಧಾನವಾಗಿ ಸಂಖ್ಯೆಯು ಹೆಚ್ಚುತ್ತಿದೆ. ಎಲ್ಲರೂ ಸ್ನೇಹಿಯಿದ್ದಾರೆ. ಎಲ್ಲರೂ ಲವಲ್ ಆಗಿದ್ದಾರೆ. ಪ್ರತಿಯೊಬ್ಬರೂ, ಒಬ್ಬರಿಗಿಂತ ಇನ್ನೊಬ್ಬರು ಹೆಚ್ಚು ಸ್ನೇಹಿಯಿದ್ದಾರೆ. ಬ್ರಾಹ್ಮಣ ಪರಿವಾರದ ವಿಶೇಷತೆಯು ಇದೇ ಆಗಿದೆ. ಪ್ರತಿಯೊಬ್ಬರೂ ಈ ಅನುಭವ ಮಾಡುತ್ತಾರೆ - ಎಲ್ಲರಿಗಿಂತಲೂ ಹೆಚ್ಚಿನ ಸ್ನೇಹ ನನ್ನದಾಗಿದೆ ಮತ್ತು ತಂದೆಯದೂ ಸಹ ನನ್ನೊಂದಿಗೇ ಹೆಚ್ಚಿನ ಸ್ನೇಹವಿದೆ. ಬಾಪ್ದಾದಾರವರೂ ಸಹ ನನ್ನನ್ನೇ ಮುಂದುವರೆಸುತ್ತಾರೆ. ಆದ್ದರಿಂದ ಭಕ್ತಿಮಾರ್ಗದವರೂ ಸಹ ಬಹಳ ಒಳ್ಳೆಯ ಒಂದು ಚಿತ್ರವನ್ನು ಅರ್ಥ ಸಹಿತವಾಗಿ ಮಾಡಿದ್ದಾರೆ. ಪ್ರತಿಯೊಬ್ಬ ಗೋಪಿಯ ಜೊತೆಗೆ ವಲ್ಲಭನಿದ್ದಾನೆ. ಕೇವಲ ಒಬ್ಬಳು ರಾಧೆಯ ಜೊತೆಯೇ ಅಥವಾ ಕೇವಲ 8 ಪಟ್ಟದ ರಾಣಿಯ ಜೊತೆಯಲ್ಲ. ಪ್ರತಿಯೊಬ್ಬ ಗೋಪಿಯ ಜೊತೆಗೆ ಗೋಪಿ ವಲ್ಲಭನಿದ್ದಾನೆ. ಹೇಗೆ ದಿಲ್ವಾಲಾ ಮಂದಿರದಲ್ಲಿ ಹೋಗುತ್ತೀರಿ, ಆಗ ನೋಟ್ ಮಾಡುತ್ತೀರಲ್ಲವೆ - ಇದು ನನ್ನ ಚಿತ್ರವಾಗಿದೆ ಅಥವಾ ನನ್ನ ಕೊಠಡಿಯಾಗಿದೆ. ಹಾಗಾದರೆ ಈ ರಾಸ ಮಂಡಲದಲ್ಲಿಯೂ ತಮ್ಮೆಲ್ಲರ ಚಿತ್ರವಿದೆಯೇ? ಇದಕ್ಕೆ ಹೇಳುವುದೇ ಮಹಾರಾಸ್ ಎಂದು. ಈ ಮಹಾರಾಸ್ನ ಬಹಳ ಶ್ರೇಷ್ಠ ಗಾಯನವಿದೆ. ಬಾಪ್ದಾದಾರವರು ಪ್ರತಿಯೊಬ್ಬರೊಂದಿಗೆ ಒಬ್ಬರಿಗಿಂತ ಇನ್ನೊಬ್ಬರ ಪ್ರತಿ ಹೆಚ್ಚಿನದಾಗಿ ಪ್ರೀತಿಯಿದೆ. ಬಾಪ್ದಾದಾರವರು ಪ್ರತಿಯೊಂದು ಮಕ್ಕಳ ಶ್ರೇಷ್ಠ ಭಾಗ್ಯವನ್ನು ನೋಡುತ್ತಾ ಹರ್ಷಿತವಾಗುತ್ತಾರೆ. ಯಾರೇ ಇರಬಹುದು ಆದರೆ ಕೋಟಿಯಲ್ಲಿ ಕೆಲವರಾಗಿದ್ದಾರೆ. ಪದಮಾಪದಮ ಭಾಗ್ಯಶಾಲಿಯಾಗಿದ್ದಾರೆ. ಪ್ರಪಂಚದವರ ಲೆಕ್ಕದಿಂದ ನೋಡಿದರೆ, ಇಷ್ಟುಮಂದಿ ಕೋಟಿಯಲಿ ಕೆಲವರಾಗಿದ್ದೀರಲ್ಲವೆ. ಜಪಾನಂತು ಎಷ್ಟೊಂದು ದೊಡ್ಡದಾಗಿದೆ ಆದರೆ ತಂದೆಯ ಮಕ್ಕಳು ಎಷ್ಟಿದ್ದಾರೆ! ಅಂದಾಗ ಕೋಟಿಯಲ್ಲಿ ಕೆಲವರಾದರಲ್ಲವೆ. ಬಾಪ್ದಾದಾರವರು ಪ್ರತಿಯೊಬ್ಬರ ವಿಶೇಷತೆ, ಭಾಗ್ಯವನ್ನು ನೋಡುತ್ತಾರೆ. ಕೋಟಿಯಲ್ಲಿ ಕೆಲವರು ಅಗಲಿ ಮರಳಿ ಸಿಕ್ಕಿರುವವರು. ತಂದೆಗಾಗಿ ಎಲ್ಲರೂ ವಿಶೇಷ ಆತ್ಮರಾಗಿದ್ದಾರೆ. ಬಾಬಾರವರು ಕೆಲವರನ್ನು ಸಾಧಾರಣ, ಕೆಲವರನ್ನು ವಿಶೇಷವಾದವರೆಂದು ನೋಡುವುದಿಲ್ಲ. ಎಲ್ಲರೂ ವಿಶೇಷವಾಗಿರುವವರು. ಈ ಕಡೆ ಇನ್ನೂ ಹೆಚ್ಚು ವೃದ್ಧಿಯಾಗುವುದಿದೆ ಏಕೆಂದರೆ ಈ ಕಡೆಯಲ್ಲಿ ಡಬಲ್ ಸೇವೆಯು ವಿಶೇಷವಾಗಿದೆ. ಒಂದಂತು ಅನೇಕ ಪ್ರಕಾರದ ಧರ್ಮದವರಿದ್ದಾರೆ. ಮತ್ತು ಈ ಕಡೆಯಲ್ಲಿ ಸಿಂಧ್ನಿಂದ ಬಂದಿರುವ ಆತ್ಮರೂ ಬಹಳಷ್ಟಿದ್ದಾರೆ. ಅವರ ಸೇವೆಯನ್ನೂ ಚೆನ್ನಾಗಿ ಮಾಡಬಹುದು. ಅವರನ್ನು ಸಮೀಪಕ್ಕೆ ತಂದರೆ, ಅವರ ಸಹಯೋಗದಿಂದ ಅನ್ಯ ಧರ್ಮಗಳವರೆಗೂ ಸಹಜವಾಗಿಯೇ ತಲುಪಿ ಬಿಡಬಹುದು. ಡಬಲ್ ಸೇವೆಯಿಂದ ಡಬಲ್ ವೃದ್ಧಿಯನ್ನು ಮಾಡಬಲ್ಲಿರಿ. ಅವರಲ್ಲಿ ಒಂದಲ್ಲ ಒಂದು ರೀತಿಯಿಂದ ಉಲ್ಟಾ ರೂಪದಲ್ಲಿ, ಅಥವಾ ಸುಲ್ಟಾ ರೂಪದಲ್ಲಿ ಬೀಜ ಬಿತ್ತನೆಯಾಗಿದೆ. ಪರಿಚಯವಿರುವ ಕಾರಣದಿಂದ ಸಹಜವಾಗಿ ಸಂಬಂಧದಲ್ಲಿ ಬರಬಹುದು. ಬಹಳ ಸೇವೆಯನ್ನು ಮಾಡಬಹುದು. ಏಕೆಂದರೆ ಸರ್ವ ಆತ್ಮರ ಪರಿವಾರವಾಗಿದೆ. ಬ್ರಾಹ್ಮಣರು ಎಲ್ಲಾ ಧರ್ಮಗಳಲ್ಲಿ ಚದುರಿ ಹೋಗಿದ್ದಾರೆ. ಅಂತಹ ಯಾವುದೇ ಧರ್ಮವಿಲ್ಲ, ಯಾವುದರಲ್ಲಿ ಬ್ರಾಹ್ಮಣರು ತಲುಪಿಲ್ಲ ಎನ್ನುವುದಕ್ಕೆ. ಈಗ ಎಲ್ಲಾ ಧರ್ಮಗಳಿಂದ ಹೊರ ಬರುತ್ತಿದ್ದಾರೆ. ಮತ್ತು ಯಾರು ಬ್ರಾಹ್ಮಣ ಪರಿವಾರದವರಾಗಿದ್ದಾರೆ, ಅವರೊಂದಿಗೆ ನಮ್ಮವರೆನಿಸುತ್ತರಲ್ಲವೆ. ಹೇಗೆ ಯಾವುದೋ ಲೆಕ್ಕಾಚಾರದಿಂದ ಹೋಗಿದ್ದಾರೆ ಮತ್ತು ಪುನಃ ತನ್ನ ಪರಿವಾರದಲ್ಲಿ ತಲುಪಿ ಬಿಟ್ಟರು. ಎಲ್ಲೆಲ್ಲಿಂದ ತಲುಪಿ ತನ್ನ ಸೇವಾಭಾಗ್ಯವನ್ನು ತೆಗೆದುಕೊಳ್ಳಲು ನಿಮಿತ್ತರಾಗಿ ಬಿಟ್ಟರು. ಇದೇನೂ ಕಡಿಮೆ ಭಾಗ್ಯವಲ್ಲ. ಬಹಳ ಶ್ರೇಷ್ಠ ಭಾಗ್ಯವಾಗಿದೆ. ಅತಿ ಶ್ರೇಷ್ಠ ಪುಣ್ಯಾತ್ಮರಾಗಿ ಬಿಡುತ್ತಾರೆ. ಮಹಾದಾನಿಗಳು, ಮಹಾನ್ ಸೇವಾಧಾರಿಗಳ ಲಿಸ್ಟ್ನಲ್ಲಿ ಬಂದು ಬಿಡುತ್ತಾರೆ. ಅಂದಾಗ ನಿಮಿತ್ತರಾಗುವುದೂ ಸಹ ಒಂದು ವಿಶೇಷವಾದ ಗಿಫ್ಟ್ ಆಗಿದೆ. ಮತ್ತು ಡಬಲ್ ವಿದೇಶಿಗಳಿಗೆ ಈ ಗಿಫ್ಟ್ ಸಿಗುತ್ತದೆ. ಸ್ವಲ್ಪವೇನಾದರೂ ಅನುಭವವಾಯಿತು ಮತ್ತು ನಿಮಿತ್ತರಾಗಿ ಬಿಡುತ್ತಾರೆ, ಸೇವಾಕೇಂದ್ರವನ್ನು ಸ್ಥಾಪನೆ ಮಾಡಲು. ಅಂದಾಗ ಇದೂ ಸಹ ಲಾಸ್ಟ್ ಸೋ ಫಾಸ್ಟ್ ಹೋಗುವ ವಿಶೇಷ ಗಿಫ್ಟ್ ಆಗಿದೆ. ಸೇವೆಯನ್ನು ಮಾಡುವುದರಿಂದ ಮೆಜಾರಿಟಿಯಲ್ಲಿ ಇದು ಸ್ಮೃತಿಯಲ್ಲಿ ಇರುತ್ತದೆ - ನಿಮಿತ್ತರು ನಾವೇನು ಮಾಡುತ್ತೇವೆ ಅಥವಾ ನಡೆಯುತ್ತೇವೆ, ನಮ್ಮನ್ನು ನೋಡಿ ಅನ್ಯರೂ ಮಾಡುತ್ತಾರೆ. ಅಂದಾಗ ಇದು ಡಬಲ್ ಅಟೆನ್ಶನ್(ಗಮನ) ಆಗಿ ಬಿಡುತ್ತದೆ. ಡಬಲ್ ಅಟೆನ್ಶನ್ ಇರುವ ಕಾರಣದಿಂದ ಡಬಲ್ ಲಿಫ್ಟ್ ಆಗಿ ಬಿಡುತ್ತದೆ. ತಿಳಿಯಿತೆ - ಡಬಲ್ ವಿದೇಶಿಗಳಿಗೆ ಡಬಲ್ ಲಿಫ್ಟ್ ಇದೆ. ಈಗ ಎಲ್ಲಾ ಕಡೆಯಲ್ಲಿ ಧರಣಿಯು ಬಹಳ ಚೆನ್ನಾಗಿ ಆಗಿ ಬಿಟ್ಟಿದೆ. ನೇಗಿಲು ಮಾಡಿದ ನಂತರದ ಧರಣಿಯು ಸರಿಯಾಗಿ ಬಿಡುತ್ತದೆಯಲ್ಲವೆ. ಮತ್ತೆ ನಂತರ ಫಲವೂ ಸಹ ಚೆನ್ನಾಗಿ ಮತ್ತು ಸಹಜವಾಗಿ ಬರುತ್ತದೆ. ಒಳ್ಳೆಯದು. ಏಷ್ಯಾದ ದೊಡ್ದ ಮೈಕ್ನ ಧ್ವನಿಯು ಭಾರತದಲ್ಲಿ ಬಹಳ ಬೇಗನೆ ತಲುಪುತ್ತದೆ. ಆದ್ದರಿಂದ ಇಂತಹ ಮೈಕ್ನ್ನು ತಯಾರು ಮಾಡಿರಿ. ಒಳ್ಳೆಯದು.

ಹಿರಿಯ ದಾದಿಯರೊಂದಿಗೆ:
ತಮ್ಮೆಲ್ಲರ ಮಹಿಮೆಯನ್ನೇನು ಮಾಡುವುದು! ಹೇಗೆ ತಂದೆಗಾಗಿ ಹೇಳುತ್ತಾರಲ್ಲವೆ - ಸಾಗರವನ್ನು ಶಾಹಿಯನ್ನಾಗಿ ಮಾಡಿಕೊಂಡು, ಧರಣಿಯನ್ನು ಕಾಗದವನ್ನಾಗಿ ಮಾಡಿಕೊಂಡು...... ಹಾಗೆಯೇ ತಾವೆಲ್ಲಾ ದಾದಿಯರ ಮಹಿಮೆಯಿದೆ. ಮಹಿಮೆಯೇನಾದರೂ ಆರಂಭಿಸಿದರೆ ಇಡೀ ರಾತ್ರಿ-ದಿನ ಒಂದು ಸಪ್ತಾಹದ ಕೋರ್ಸ್ ಆಗಿ ಬಿಡುತ್ತದೆ. ಚೆನ್ನಾಗಿದೆ, ಎಲ್ಲರ ರಾಸ್(ಮಿಲನ) ಚೆನ್ನಾಗಿದೆ. ಎಲ್ಲರ ರಾಶಿ ಹೊಂದುತ್ತದೆ ಮತು ಎಲ್ಲರೂ ರಾಸ್ ಮಾಡುತ್ತಿದ್ದರೂ ಚೆನ್ನಾಗಿದ್ದೀರಿ. ಕೈಯಲ್ಲಿ ಕೈ ಸೇರಿಸುವುದು ಅರ್ಥಾತ್ ವಿಚಾರಗಳ ಮಿಲನ - ಇದೇ ರಾಸ್ ಆಗಿದೆ. ಅಂದಾಗ ಬಾಪ್ದಾದಾರವರು ದಾದಿಯರ ಇದೇ ರಾಸ್ನ್ನು ನೋಡುತ್ತಿರುತ್ತಾರೆ. ಅಷ್ಟ ರತ್ನಗಳದು ಇದೇ ರಾಸ್ ಆಗಿದೆ.

ತಾವು ದಾದಿಯರು ಪರಿವಾರದ ವಿಶೇಷ ಶೃಂಗಾರವಾಗಿದ್ದೀರಿ. ಒಂದುವೇಳೆ ಶೃಂಗಾರವಿರದಿದ್ದರೆ ಶೋಭೆಯಿರುವುದಿಲ್ಲ. ಅಂದಾಗ ಎಲ್ಲರೂ ಅದೇ ಸ್ನೇಹದಿಂದ ನೋಡುತ್ತಾರೆ.

ಭೃಜ್ಇಂದ್ರ ದಾದಿಯವರೊಂದಿಗೆ:
ಬಾಲ್ಯದಿಂದಲೂ ಲೌಕಿಕದಲ್ಲಿ, ಅಲೌಕಿಕದಲ್ಲಿ ಶೃಂಗಾರ ಮಾಡುತ್ತಿದ್ದಿರಿ, ಆದ್ದರಿಂದ ಶೃಂಗಾರ ಮಾಡುತ್ತಾ-ಮಾಡುತ್ತಾ ಶೃಂಗಾರಿತರಾಗಿ ಬಿಟ್ಟಿರಿ. ಹೀಗೆ ಇದ್ದೀರಲ್ಲವೇ! ಬಾಪ್ದಾದಾರವರು ಮಹಾವೀರ ಮಹಾರಥಿ ಮಕ್ಕಳಿಗೆ ಸದಾಕಾಲವೂ ನೆನಪೇನು, ಆದರೆ ಸಮಾವೇಶವಾಗಿರುತ್ತೀರಿ. ಯಾರು ಸಮಾವೇಶವಾಗಿರುತ್ತಾರೆ ಅವರನ್ನು ನೆನಪು ಮಾಡುವ ಅವಶ್ಯಕತೆಯಿರುವುದಿಲ್ಲ. ಬಾಪ್ದಾದಾರವರು ಸದಾಕಾಲವೂ ಪ್ರತಿಯೊಂದು ವಿಶೇಷ ರತ್ನಗಳನ್ನು ವಿಶ್ವದ ಮುಂದೆ ಪ್ರತ್ಯಕ್ಷ ಮಾಡುತ್ತಾರೆ. ಅಂದಾಗ ವಿಶ್ವದ ಮುಂದೆ ಪ್ರತ್ಯಕ್ಷವಾಗುವ ವಿಶೇಷ ರತ್ನವಾಗಿದ್ದೀರಿ. ವಿಶೇಷವಾಗಿ ಎಲ್ಲರ ಖುಷಿಯ ಸಹಯೋಗವಿದೆ. ತಮ್ಮ ಖುಷಿಯನ್ನು ನೋಡಿ ಎಲ್ಲರಿಗೂ ಖುಷಿಯ ಔಷಧಿಯು ಸಿಕ್ಕಿ ಬಿಡುತ್ತದೆ. ಆದ್ದರಿಂದ ತಮ್ಮೆಲ್ಲರ ಆಯಸ್ಸು ಹೆಚ್ಚಾಗುತ್ತಿದೆ ಏಕೆಂದರೆ ಎಲ್ಲರ ಸ್ನೇಹದ ಆಶೀರ್ವಾದವು ಸಿಗುತ್ತಿರುತ್ತದೆ. ಈಗಂತು ಬಹಳ ಕಾರ್ಯವನ್ನು ಮಾಡಬೇಕಾಗಿದೆ, ಆದ್ದರಿಂದ ಪರಿವಾರದ ಶೃಂಗಾರವಾಗಿದ್ದೀರಿ. ಎಲ್ಲರೂ ಎಷ್ಟೊಂದು ಪ್ರೀತಿಯಿಂದ ನೋಡುತ್ತಾರೆ. ಹೇಗೆ ಯಾರದೇ ಛತ್ರಿ(ಆಧಾರಮೂರ್ತಿ)ಯು ಇಲ್ಲವಾದರೆ ಹೇಗೆನಿಸುತ್ತದೆ. ಅಂದಾಗ ತಾವೆಲ್ಲರೂ ಪರಿವಾರದ ಆಧಾರವಾಗಿದ್ದೀರಿ.

ನಿರ್ಮಲ ಶಾಂತ ದಾದಿಯವರೊಂದಿಗೆ:
ತಮ್ಮ ನೆನಪಾರ್ಥವನ್ನು ಸದಾಕಾಲ ಮಧುಬನದಲ್ಲಿ ನೋಡುತ್ತಿರುತ್ತೀರಾ. ನೆನಪಾರ್ಥವಿರುವುದು ನೆನಪು ಮಾಡುವುದಕ್ಕಾಗಿ. ಆದರೆ ತಮ್ಮ ನೆನಪು ನೆನಪಾರ್ಥವನ್ನಾಗಿ ಮಾಡಿ ಬಿಡುತ್ತದೆ. ನಡೆಯುತ್ತಾ-ಸುತ್ತಾಡುತ್ತಾ ಎಲ್ಲರೂ ಪರಿವಾರಕ್ಕೆ ನಿಮಿತ್ತರಾಗಿರುತ್ತಾ, ಆಧಾರ ಮೂರ್ತಿಗಳು ನೆನಪಿಗೆ ಬರುತ್ತಿರುತ್ತಾರೆ. ಅಂದಾಗ ಆಧಾರ ಮೂರ್ತಿಯಾಗಿದ್ದೀರಿ. ಸ್ಥಾಪನೆಯ ಕಾರ್ಯದ ಆಧಾರ ಮೂರ್ತಿಯು ಶಕ್ತಿಶಾಲಿಯಾಗಿರುವ ಕಾರಣದಿಂದ ಈ ವೃದ್ಧಿಯ, ಉನ್ನತಿಯ ಕಟ್ಟಡವು ಎಷ್ಟೊಂದು ಶಕ್ತಿಶಾಲಿಯಾಗಿದೆ. ಕಾರಣವೇನು? ಆಧಾರವು ಶಕ್ತಿಶಾಲಿಯಾಗಿರುವುದು. ಒಳ್ಳೆಯದು.

ಡಬಲ್ಲೈಟ್ ಆಗಿರಿ(ಅವ್ಯಕ್ತ ಮುರುಳಿಗಳಿಂದ ಆಯ್ಕೆ ಮಾಡಿರುವ ಅಮೂಲ್ಯ ರತ್ನ)
ಡಬಲ್ಲೈಟ್ ಅರ್ಥಾತ್ ಸದಾ ಹಾರುವ ಕಲೆಯ ಅನುಭವ ಮಾಡುವವರು. ಏಕೆಂದರೆ ಯಾವುದು ಹಗುರವಾಗಿರುತ್ತದೆ ಅದು ಸದಾ ಮೇಲೆ ಹಾರುತ್ತದೆ, ಹೊರೆಯಿರುವುದು ಕೆಳಗೆ ಹೋಗುತ್ತದೆ. ಅಂದಮೇಲೆ ಡಬಲ್ಲೈಟ್ ಆತ್ಮರು ಅರ್ಥಾತ್ ಯಾವುದೇ ಹೊರೆಯಿರದಿರುವವರು ಏಕೆಂದರೆ ಯಾವುದೇ ಹೊರೆಯಿರುತ್ತದೆಯೆಂದರೆ ಶ್ರೇಷ್ಠ ಸ್ಥಿತಿಯಲ್ಲಿ ಹಾರಲು ಬಿಡುವುದಿಲ್ಲ. ಡಬಲ್ ಜವಾಬ್ದಾರಿಯಿದ್ದರೂ ಸಹ ಡಬಲ್ಲೈಟ್ ಆಗಿರುವುದರಿಂದ ಲೌಕಿಕ ಜವಾಬ್ದಾರಿಯು ಕೆಲವೊಮ್ಮೆಗೂ ಸುಸ್ತು ಮಾಡಿಸುವುದಿಲ್ಲ ಏಕೆಂದರೆ ನಿಮಿತ್ತರಿದ್ದೀರಿ. ನಿಮಿತ್ತರಿಗೇನು ಸುಸ್ತಿರುತ್ತದೆ! ನನ್ನ ಗೃಹಸ್ಥ, ನನ್ನ ಪ್ರವೃತ್ತಿಯೆಂದು ತಿಳಿದರೆ ಹೊರೆಯಿದೆ. ತಮ್ಮದಲ್ಲವೇ ಅಲ್ಲ ಅಂದಾಗ ಯಾವ ಮಾತಿನ ಹೊರೆಯಿರುತ್ತದೆ! ಸಂಪೂರ್ಣವಾಗಿ ಭಿನ್ನ ಮತ್ತು ಪ್ರಿಯ. ಬಾಲಕನಿಂದ ಮಾಲೀಕ.

ಸದಾ ಸ್ವಯಂನ್ನು ತಂದೆಗೆ ಅರ್ಪಣೆ ಮಾಡಿ ಬಿಡುತ್ತೀರೆಂದರೆ ಸದಾ ಹಗುರವಾಗಿರುತ್ತೀರಿ. ತಮ್ಮ ಜವಾಬ್ದಾರಿಯನ್ನು ತಂದೆಯವರಿಗೆ ಕೊಟ್ಟು ಬಿಡಿ ಅರ್ಥಾತ್ ತಮ್ಮ ಹೊರೆಯನ್ನು ತಂದೆಗೆ ಕೊಟ್ಟು ಬಿಡುತ್ತೀರೆಂದರೆ, ಸ್ವಯಂತಾವು ಹಗುರವಾಗಿ ಬಿಡುತ್ತೀರಿ. ಬುದ್ಧಿಯಿಂದ ಅರ್ಪಣೆಯಾಗಿ ಬಿಡಿ. ಒಂದುವೇಳೆ ಬುದ್ಧಿಯಿಂದ ಅರ್ಪಣೆಯಾಗುತ್ತೀರೆಂದರೆ ಮತ್ತ್ಯಾವುದೇ ಮಾತುಗಳು ಬುದ್ಧಿಯಲ್ಲಿ ಬರುವುದಿಲ್ಲ. ಅಷ್ಟೇ, ಎಲ್ಲವೂ ತಂದೆಯದು, ಎಲ್ಲವೂ ತಂದೆಯಲ್ಲಿದೆ, ಅಂದಾಗ ಮತ್ತೇನೂ ಉಳಿದುಕೊಂಡಿಲ್ಲ. ಡಬಲ್ಲೈಟ್ ಅರ್ಥಾತ್ ಸಂಸ್ಕಾರ, ಸ್ವಭಾವದ ಹೊರೆಯೂ ಇಲ್ಲ, ವ್ಯರ್ಥ ಸಂಕಲ್ಪದ ಹೊರೆಯೂ ಇಲ್ಲ - ಇದಕ್ಕೆ ಹೇಳಲಾಗುತ್ತದೆ ಹಗುರತೆ. ಎಷ್ಟು ಹಗುರರಾಗಿರುತ್ತೀರಿ ಅಷ್ಟು ಸಹಜವಾಗಿ ಹಾರುವ ಕಲೆಯ ಅನುಭವ ಮಾಡುತ್ತೀರಿ. ಒಂದುವೇಳೆ ಯೋಗದಲ್ಲೇನಾದರೂ ಪರಿಶ್ರಮ ಪಡಬೇಕಾಗುತ್ತದೆ ಎಂದರೆ ಅವಶ್ಯವಾಗಿ ಯಾವುದೋ ಹೊರೆಯಿದೆ. ಅದಕ್ಕಾಗಿ ಬಾಬಾ-ಬಾಬಾರವರ ಆಧಾರವನ್ನು ತೆಗೆದುಕೊಂಡು ಹಾರುತ್ತಿರಿ.

ಸದಾ ಇದೇ ಲಕ್ಷ್ಯವು ನೆನಪಿರಲಿ - ನಾವು ತಂದೆಯ ಸಮಾನರಾಗಬೇಕು. ಅದಕ್ಕಾಗಿ ಹೇಗೆ ತಂದೆಯು ಲೈಟ್ ಆಗಿದ್ದಾರೆ ಹಾಗೆಯೇ ಡಬಲ್ಲೈಟ್. ಅನ್ಯರನ್ನು ನೋಡುತ್ತೀರೆಂದರೆ ಬಲಹೀನರಾಗುತ್ತೀರಿ, ಸೀ ಫಾದರ್ ಫಾಲೋಫಾದರ್ ಮಾಡಿರಿ. ಹಾರುವ ಕಲೆಯ ಶ್ರೇಷ್ಠ ಸಾಧನವು ಕೇವಲ ಒಂದು ಶಬ್ಧವಾಗಿದೆ ಎಲ್ಲವೂ ನಿನ್ನದು. ನನ್ನದು ಶಬ್ಧವು ಬದಲಾಗಿ ನಿನ್ನದು ಮಾಡಿ ಬಿಡಿ. ನಿನ್ನವನಾಗಿರುವೆನು, ಆಗ ಆತ್ಮ ಲೈಟ್ ಆಗಿದೆ. ಮತ್ತು ಯಾವಾಗ ಎಲ್ಲವೂ ನಿನ್ನದೆಂದಾಗ ಲೈಟ್ ಆಗಿ ಬಿಟ್ಟಿರಿ. ಹೇಗೆ ಮೊದ ಮೊದಲು ಅಭ್ಯಾಸ ಮಾಡುತ್ತಿದ್ದಿರಿ - ನಡೆಯುತ್ತಿದ್ದೇವೆ ಆದರೆ ಸ್ಥಿತಿಯು ಹಾಗಿತ್ತು, ಹೇಗೆ ಅನ್ಯರು ತಿಳಿಯುತ್ತಾರೆ - ಇದ್ಯಾವುದೊ ಲೈಟ್ ಹೋಗುತ್ತಿದೆ. ಅವರಿಗೆ ಶರೀರವೇ ಕಾಣಿಸುತ್ತಿರಲಿಲ್ಲ, ಇದೇ ಅಭ್ಯಾಸದಿಂದ ಪ್ರತಿಯೊಂದು ಪ್ರಕಾರದ ಪರೀಕ್ಷೆಯಲ್ಲಿ ಪಾಸ್ ಆದಿರಿ. ಅಂದಾಗ ಈಗ ಯಾವಾಗ ಸಮಯವು ಬಹಳ ಕೆಟ್ಟ ಸಮಯ ಬರುತ್ತಿದೆಯೆಂದಾಗ, ಡಬಲ್ಲೈಟ್ ಆಗಿರುವ ಅಭ್ಯಾಸವನ್ನು ಹೆಚ್ಚಿಸಿಕೊಳ್ಳಿರಿ. ಅನ್ಯರಿಗೆ ತಮ್ಮ ಲೈಟ್ರೂಪವೇ ಸದಾ ಕಾಣಿಸಲಿ - ಇದೇ ಸೇಫ್ಟಿ ಆಗಿದೆ. ಒಳಗೆ ಬರಲಿ ಮತ್ತು ಲೈಟ್ನ ಕೋಟೆಯನ್ನು ನೋಡಲಿ.

ಹೇಗೆ ಲೈಟ್ನ ಕನೆಕ್ಷನ್ನಿಂದ ದೊಡ್ಡ-ದೊಡ್ಡ ಯಂತ್ರಗಳು ನಡೆಯುತ್ತದೆ. ತಾವೆಲ್ಲರೂ ಕರ್ಮ ಮಾಡುತ್ತಾ ಕನೆಕ್ಷನ್ನ ಆಧಾರದಿಂದ ಸ್ವಯಂ ಸಹ ಡಬಲ್ಲೈಟ್ ಆಗಿದ್ದು ನಡೆಯುತ್ತಿರಿ. ಎಲ್ಲಿ ಡಬಲ್ಲೈಟ್ನ ಸ್ಥಿತಿಯಿದೆ ಅಲ್ಲಿ ಪರಿಶ್ರಮ ಮತ್ತು ಪರಿಶ್ರಮದ ಶಬ್ಧವೂ ಸಮಾಪ್ತಿಯಾಗಿ ಬಿಡುತ್ತದೆ. ನನ್ನದೆನ್ನುವುದನ್ನು ಸಮಾಪ್ತಿ ಮಾಡಿ ನಿಮಿತ್ತತನದ ಭಾವ ಮತ್ತು ಈಶ್ವರೀಯ ಸೇವೆಯ ಭಾವನೆಯಿರುತ್ತದೆಯೆಂದರೆ ಡಬಲ್ಲೈಟ್ ಆಗಿ ಬಿಡುತ್ತೀರಿ. ಯಾರೇ ತಮ್ಮ ಸಮೀಪ ಸಂಪರ್ಕದಲ್ಲಿ ಬರುತ್ತಾರೆಂದರೆ ಅನುಭವ ಮಾಡಲಿ - ಇವರು ಆತ್ಮಿಕವಾಗಿರುವವರು, ಅಲೌಕಿಕವಾಗಿರುವವರು. ಅವರಿಗೆ ತಮ್ಮ ಫರಿಶ್ತಾ ರೂಪವೇ ಕಾಣಿಸಲಿ. ಫರಿಶ್ತೆಯು ಸದಾ ಶ್ರೇಷ್ಠದಲ್ಲಿರುತ್ತದೆ. ಫರಿಶ್ತೆಗಳನ್ನು ಚಿತ್ರ ರೂಪದಲ್ಲಿಯೂ ತೋರಿಸುತ್ತೀರೆಂದರೆ ರೆಕ್ಕೆಗಳನ್ನು ತೋರಿಸುತ್ತಾರೆ. ಏಕೆಂದರೆ ಹಾರುವ ಪಕ್ಷಿಯಾಗಿದೆ.

ಸದಾ ಖುಷಿಯಲ್ಲಿರುವವರು ಸರ್ವರ ವಿಘ್ನಹರ್ತ ಅಥವಾ ಸರ್ವರ ಕಷ್ಟಗಳನ್ನು ಸಹಜ ಮಾಡುವವರು ಆಗ ಆಗುತ್ತೀರಿ, ಯವಾಗ ಸಂಕಲ್ಪಗಳಲ್ಲಿ ದೃಢತೆಯಿರುತ್ತದೆ ಮತು ಸ್ಥಿತಿಯಲ್ಲಿ ಡಬಲ್ಲೈಟ್ ಆಗಿರುತ್ತೀರಿ. ನನ್ನದೇನೂ ಇಲ್ಲ, ಎಲ್ಲವೂ ತಂದೆಯದು. ಯಾವಾಗ ಹೊರೆಯನ್ನು ತಮ್ಮ ಮೇಲೆ ಇಟ್ಟುಕೊಳ್ಳುತ್ತೀರಿ, ಆಗ ಎಲ್ಲಾ ಪ್ರಕಾರದ ವಿಘ್ನಗಳು ಬರುತ್ತವೆ. ನನ್ನದೇನೂ ಇಲ್ಲವೆಂದರೆ ನಿರ್ವಿಘ್ನ. ಸದಾ ತಮ್ಮನ್ನು ಡಬಲ್ಲೈಟ್ ಎಂದು ತಿಳಿದುಕೊಂಡು ಸೇವೆ ಮಾಡುತ್ತಾ ಸಾಗಿರಿ. ಸೇವೆಯಲ್ಲಿ ಎಷ್ಟು ಹಗುರತೆಯಿರುತ್ತದೆ ಅಷ್ಟು ಸಹಜವಾಗಿ ಹಾರುತ್ತಾ, ಹಾರಿಸುತ್ತೀರಿ. ಡಬಲ್ಲೈಟ್ ಆಗಿದ್ದು ಸೇವೆ ಮಾಡುವುದು, ನೆನಪಿನಲ್ಲಿ ಸೇವೆ ಮಾಡುವುದು - ಇದೇ ಸಫಲತೆಯ ಆಧಾರವಾಗಿದೆ.

ಜವಾಬ್ದಾರಿಯನ್ನು ನಿಭಾಯಿಸುವುದು - ಇದೂ ಸಹ ಅವಶ್ಯಕವಿದೆ ಆದರೆ ಎಷ್ಟು ದೊಡ್ಡ ಜವಾಬ್ದಾರಿಯೋ ಅಷ್ಟೇ ಡಬಲ್ಲಾಕ್. ಜವಾಬ್ದಾರಿಯನ್ನು ನಿಭಾಯಿಸುತ್ತಾ ಜವಾಬ್ದಾರಿಯ ಹೊರೆಯಿಂದ ಭಿನ್ನವಾಗಿರಿ - ಇದಕ್ಕೆ ತಂದೆಯ ಪ್ರಿಯ ಎಂದು ಹೇಳಲಾಗುತ್ತದೆ. ಏನು ಮಾಡಲಿ, ಬಹಳ ಜವಾಬ್ದಾರಿಯಿದೆ ಎಂದು ಗಾಬರಿಯಾಗಬೇಡಿ. ಇದನ್ನು ಮಾಡಲೇ ಅಥವಾ ಬೇಡವೇ...... ಇದಂತು ಬಹಳ ಕಷ್ಟವಿದೆ, ಈ ಅನುಭವ ಅರ್ಥಾತ್ ಹೊರೆಯಿದೆ! ಡಬಲ್ಲೈಟ್ ಎಂದರೆ ಇದರಿಂದಲೂ ಭಿನ್ನವಾಗಿರುವುದು. ಯಾವುದೇ ಜವಾಬ್ದಾರಿಯ ಕರ್ಮದ ಏರುಪೇರಿನ ಹೊರೆಯಾಗಬಾರದು. ಸದಾ ಡಬಲ್ಲೈಟ್ ಸ್ಥಿತಿಯಲ್ಲಿರುವವರು ನಿಶ್ಚಯ ಬುದ್ಧಿ, ನಿಶ್ಚಿಂತರಾಗಿರುತ್ತಾರೆ. ಹಾರುವ ಕಲೆಯಲ್ಲಿರುತ್ತಾರೆ. ಹಾರುವ ಕಲೆ ಅರ್ಥಾತ್ ಶ್ರೇಷ್ಠಾತಿ ಶ್ರೇಷ್ಠ ಸ್ಥಿತಿ. ಅವರ ಬುದ್ಧಿಯೆಂಬ ಕಾಲು ಧರಣಿಯಲ್ಲಿಲ್ಲ. ಧರಣಿ ಅರ್ಥಾತ್ ದೇಹದ ಪರಿವೆಯಿಂದ ಮೇಲೆ. ಯಾರು ದೇಹದ ಪರಿವೆಯ ಧರಣಿಯಿಂದ ಮೇಲಿರುತ್ತಾರೆ, ಅವರು ಸದಾ ಫರಿಶ್ತೆಯಾಗಿದ್ದಾರೆ.

ಈಗ ಡಬಲ್ಲೈಟ್ ಅಗಿದು ದಿವ್ಯ ಬುದ್ಧಿಯೆಂಬ ವಿಮಾನದ ಮೂಲಕ್ ಅತಿ ಶ್ರೇಷ್ಠ ಶಿಖರದ ಸ್ಥಿತಿಯಲ್ಲಿ ಸ್ಥಿತರಗಿ, ವಿಶ್ವದ ಸರ್ವ ಆತ್ಮರ ಪ್ರತಿ ಲೈಟ್ ಮತ್ತು ಮೈಟ್ನ ಶುಭ ಭಾವನೆ ಮತ್ತು ಶ್ರೇಷ್ಠ ಕಾಮನೆಯ ಸಹಯೋಗದ ಪ್ರಕಂಪನಗಳನ್ನು ಹರಡಿಸಿರಿ. ಈ ವಿಮಾನದಲ್ಲಿ ಬಾಪ್ದಾದಾರವರ ರಿಫೈನ್ ಶ್ರೇಷ್ಠ ಮತದ ಸಾಧನವಾಗಲಿ. ಅದರಲ್ಲಿ ಅಂಶದಷ್ಟೂ ಮನಮತ, ಪರಮತದ ಕೊಳಕಿರಬಾರದು.

ವರದಾನ:  
ಪ್ರತೀ ಸೆಕೆಂಡ್ ಪ್ರತೀ ಸಂಕಲ್ಪದ ಮಹತ್ವವನ್ನು ತಿಳಿದು ಪುಣ್ಯದ ಖಾತೆಯನ್ನು ಜಮಾ ಮಾಡಿಕೊಳ್ಳುವ ಪದಮಾಪದಮಪತಿ ಭವ.

ತಾವು ಪುಣ್ಯಾತ್ಮರ ಸಂಕಲ್ಪದಲ್ಲಿ ಇಷ್ಟೂ ವಿಶೇಷ ಶಕ್ತಿಯಿದೆ, ಆ ಶಕ್ತಿಯ ಮೂಲಕ ಅಸಂಭವವನ್ನು ಸಂಭವ ಮಾಡಬಹುದು. ಹೇಗೆ ಇತ್ತೀಚಿನ ಯಂತ್ರಗಳ ಮೂಲಕ ಬಂಜರು ಭೂಮಿಯನ್ನೂ ಹಚ್ಚ ಹಸಿರನ್ನಾಗಿ ಮಾಡಿ ಬಿಡುತ್ತಾರೆ, ಬೆಟ್ಟಗಳ ಮೇಲೂ ಹೂ ಹರಳಿಸಿ ಬಿಡುತ್ತಾರೆ, ಹಾಗೆಯೇ ತಾವೂ ತಮ್ಮ ಶ್ರೇಷ್ಠ ಸಂಕಲ್ಪಗಳ ಮೂಲಕ ಭರವಸೆಯಿಲ್ಲದಿರುವವರಿಗೆ ಭರವಸೆಯನ್ನು ಉತ್ಪನ್ನ ಮಾಡಬಹುದು. ಅದಕ್ಕಾಗಿ ಕೇವಲ ಪ್ರತೀ ಸೆಕೆಂಡ್ ಪ್ರತೀ ಸಂಕಲ್ಪ ಮೌಲ್ಯವನ್ನು ತಿಳಿದು, ಸಂಕಲ್ಪ ಮತ್ತು ಸೆಕೆಂಡನ್ನು ಉಪಯೋಗಿಸುತ್ತಾ ಪುಣ್ಯದ ಖಾತೆಯನ್ನು ಜಮಾ ಮಾಡಿರಿ. ತಮ್ಮ ಸಂಕಲ್ಪದ ಶಕ್ತಿಯು ಇಷ್ಟೂ ಶ್ರೇಷ್ಠವಾಗಿದೆ, ಆ ಒಂದು ಸಂಕಲ್ಪವೂ ಸಹ ಪದಮಾಪದಮಪತಿಯನ್ನಾಗಿ ಮಾಡಿ ಬಿಡುತ್ತದೆ.

ಸ್ಲೋಗನ್:
ಪ್ರತಿಯೊಂದು ಕರ್ಮವನ್ನು ಅಧಿಕಾರಿಯೆನ್ನುವ ನಿಶ್ಚಯ ಮತ್ತು ನಶೆಯಿಂದ ಮಾಡುತ್ತೀರೆಂದರೆ ಪರಿಶ್ರಮವು ಸಮಾಪ್ತಿಯಾಗಿ ಬಿಡುತ್ತದೆ.


ಸೂಚನೆ: ಇಂದು ತಿಂಗಳಿನ ಮೂರನೇ ರವಿವಾರವಾಗಿದೆ, ಎಲ್ಲಾ ರಾಜಯೋಗಿ ತಪಸ್ವಿ ಸಹೋದರ-ಸಹೋದರಿಯರು ಸಂಜೆ 6.30ರಿಂದ 7.30ರವರೆಗೆ, ವಿಶೇಷ ಯೋಗಾಭ್ಯಾಸದ ಸಮಯದಲ್ಲಿ ಭಕ್ತರ ಕೂಗನ್ನು ಕೇಳಿಸಿಕೊಳ್ಳಿರಿ ಮತು ತಮ್ಮ ಇಷ್ಟದೇವ ದಯಾಹೃದಯಿ, ದಾತಾ ಸ್ವರೂಪದಲ್ಲಿ ಸ್ಥಿತರಾಗಿದ್ದು ಎಲ್ಲರ ಮನೋಕಾಮನೆಗಳನ್ನು ಪೂರ್ಣಗೊಳಿಸುವ ಸೇವೆಯನ್ನು ಮಾಡಿರಿ.


ಡಬಲ್ ವಿದೇಶಿ ಸಹೋದರ-ಸಹೋದರಿಯರ ಸಮರ್ಪಣಾ ಸಮಾರೋಹದಲ್ಲಿ ಅವ್ಯಕ್ತ-ಬಾಪ್ದಾದಾರವರ ಮಹಾವಾಕ್ಯ -

1. ಇಂದಿನ ದಿನವನ್ನು ಎಂತಹ ಸಮಾರೋಹವೆಂದು ಬಾಬಾರವರು ಹೇಳುತ್ತಿದ್ದಾರೆ?
1) ಉಮ್ಮಂಗ-ಉತ್ಸಾಹದ
2) ಖುಷಿ-ನಶೆಯ
3) ಆನಂದ ಮತ್ತು ಉಲ್ಲಾಸ

2. ಸ್ಥೂಲ ಹಾರದ ಜೊತೆಗೆ ಯಾವ ಹಾರವನ್ನೂ ಹಾಕಿಕೊಳ್ಳಬೇಕೆಂದು ಬಾಬಾ ತಿಳಿಸುತ್ತಿದ್ದಾರೆ?
1) ಸಂತುಷ್ಟತೆಯ ಹಾರ
2) ಸಫಲತೆಯ ಹಾರ
3) ಉತ್ಸಾಹದ ಹಾರ

3. ಬಾಬಾರವರು ಯಾವ ವಿಶೇಷ ವರದಾನಗಳನ್ನು ಕೊಟ್ಟರು?
1) ಸಫಲತಾ ಭವ, ಸಂತುಷ್ಟತೆ ಭವ
2) ವಿಜಯಿ ಭವ, ಸುಖಿ ಭವ
3) ಅವಿನಾಶಿ ಭವ, ಅಮರ ಭವ

4. ಯಾವ ಎರಡು ಶ್ರೇಷ್ಠ ಮಾಲೆಗಳನ್ನು ಬಾಬಾರವರು ನೋಡುತ್ತಿದ್ದರು?
1) ಮನಸ್ಸಿನ ಧೃಡ ಸಂಕಲ್ಪ ಮತ್ತು ಸಫಲತೆಯ ಶ್ರೇಷ್ಠ ಮಾಲೆ
2) ಧೃಡತೆ ಮತ್ತು ಸಮರ್ಥತೆಯ ಮಾಲೆ
3) ಸಂಪನ್ನ ಹಾಗು ಸಂಪ್ರರ್ಣತೆಯ ಮಾಲೆ

5. ಯಾವುದು ಶ್ರೇಷ್ಠ ಸ್ಥಿತಿಯಲ್ಲಿ ಹಾರಲು ಬಿಡುವುದಿಲ್ಲ?
1) ಹೊರೆಯು
2) ಚಿಂತೆ
3) ವ್ಯರ್ಥ

6. ಯಾವಾಗ ಏಕರಸ ಸ್ಥಿತಿಯು ಸ್ವತಹವಾಗಿ ಮತ್ತು ಸಹಜವಾಗಿರಲು ಸಾಧ್ಯ?
7. ಯೋಗದಲ್ಲಿ ಏಕೆ ಪರಿಶ್ರಮ ಪಡಬೇಕಾಗುತ್ತದೆ?
8. ಹಾರುವ ಕಲೆಯ ಶ್ರೇಷ್ಠ ಸಾಧನವು ಏನಾಗಿದೆ?
9. ಪರಿಶ್ರಮದ ಶಬ್ಧವೂ ಯಾವಾಗ ಸಮಾಪ್ತಿಯಾಗಿ ಬಿಡುತ್ತದೆ
10. ನಿಮಿತ್ತತನದ ಭಾವನೆ ನಮ್ಮಲ್ಲಿ ಯಾವಾಗ ಬರುತ್ತದೆ?