19.10.20         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ನೀವೀಗ ಬಹಳ ಸಾಧಾರಣವಾಗಿರಬೇಕಾಗಿದೆ, ಬಹಳ ಫ್ಯಾಷನೇಬಲ್ ವಸ್ತ್ರಗಳನ್ನು ಧರಿಸುವುದರಿಂದಲೂ ದೇಹಾಭಿಮಾನವು ಬರುತ್ತದೆ"

ಪ್ರಶ್ನೆ:
ಅದೃಷ್ಟದಲ್ಲಿ ಶ್ರೇಷ್ಠ ಪದವಿಯಿಲ್ಲವೆಂದರೆ ಮಕ್ಕಳು ಯಾವ ಮಾತಿನಲ್ಲಿ ಆಲಸ್ಯ ಮಾಡುತ್ತಾರೆ?

ಉತ್ತರ:
ತಂದೆಯು ತಿಳಿಸುತ್ತಾರೆ - ಮಕ್ಕಳೇ, ತನ್ನ ಸುಧಾರಣೆಗಾಗಿ ಚಾರ್ಟ್ ಇಟ್ಟುಕೊಳ್ಳಿ. ನೆನಪಿನ ಚಾರ್ಟ್ ಇಡುವುದರಲ್ಲಿ ಬಹಳ ಲಾಭವಿದೆ. ನೋಟ್ ಬುಕ್ ಸದಾ ಕೈಯಲ್ಲಿರಲಿ, ಪರಿಶೀಲನೆ ಮಾಡಿಕೊಳ್ಳಿ - ತಂದೆಯನ್ನು ಎಷ್ಟು ಸಮಯ ನೆನಪು ಮಾಡಿದೆನು? ನನ್ನ ರಿಜಿಸ್ಟರ್ ಹೇಗಿದೆ? ದೈವೀ ನಡವಳಿಕೆಯಿದೆಯೇ? ಕರ್ಮ ಮಾಡುತ್ತಾ ತಂದೆಯ ನೆನಪಿರುತ್ತದೆಯೇ? ನೆನಪಿನಿಂದಲೇ ತುಕ್ಕು ಇಳಿಯುವುದು, ಶ್ರೇಷ್ಠ ಅದೃಷ್ಟವಾಗುವುದು.

ಗೀತೆ:
ಭೋಲಾನಾಥನಿಗಿಂತ ಭಿನ್ನ..............

ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳ ಬಳಿ ಈ ಲಕ್ಷ್ಮೀ-ನಾರಾಯಣರ ಚಿತ್ರವು ಮನೆಯಲ್ಲಿ ಖಂಡಿತ ಇರಬೇಕು. ಇದನ್ನು ನೋಡಿ ಖುಷಿಯಾಗಬೇಕು ಏಕೆಂದರೆ ಇದು ನಿಮ್ಮ ವಿದ್ಯೆಯ ಗುರಿ-ಧ್ಯೇಯವಾಗಿದೆ. ನೀವು ತಿಳಿದುಕೊಂಡಿದ್ದೀರಿ - ನಾವು ವಿದ್ಯಾರ್ಥಿಗಳಾಗಿದ್ದೇವೆ ಮತ್ತು ಈಶ್ವರನೇ ಓದಿಸುತ್ತಾರೆ. ನಾವು ಇದನ್ನು ಓದುತ್ತೇವೆ. ಎಲ್ಲರಿಗಾಗಿ ಇದೊಂದೇ ಧ್ಯೇಯವಾಗಿದೆ. ಇದನ್ನು ನೋಡುತ್ತಾ ಬಹಳ ಖಷಿಯಾಗಬೇಕು. ಮಕ್ಕಳು ಗೀತೆಯನ್ನೂ ಕೇಳಿದಿರಿ, ತಂದೆಯು ಬಹಳ ಭೋಲಾನಾಥನಾಗಿದ್ದಾರೆ. ಕೆಲಕೆಲವರು ಶಂಕರನನ್ನೇ ಭೋಲಾನಾಥನೆಂದು ತಿಳಿದುಕೊಳ್ಳುತ್ತಾರೆ ಮತ್ತು ಶಿವ-ಶಂಕರನನ್ನು ಒಂದೇ ಮಾಡಿ ಬಿಡುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ, ಶಿವನು ಸರ್ವಶ್ರೇಷ್ಠ ಭಗವಂತನಾಗಿದ್ದಾರೆ ಮತ್ತು ಶಂಕರ ದೇವತೆಯಾಗಿದ್ದಾನೆ ಅಂದಮೇಲೆ ಇಬ್ಬರೂ ಒಂದೇ ಆಗಲು ಹೇಗೆ ಸಾಧ್ಯ? ಭಕ್ತರ ರಕ್ಷಣೆ ಮಾಡುವವರು ಎಂಬುದನ್ನೂ ಸಹ ಗೀತೆಯಲ್ಲಿ ಕೇಳಿದಿರಿ. ಅವಶ್ಯವಾಗಿ ಭಕ್ತರಿಗೆ ಯಾವುದೋ ಆಪತ್ತುಗಳಿವೆ ಎಂದಾಯಿತಲ್ಲವೆ. ಪಂಚ ವಿಕಾರಗಳ ಆಪತ್ತುಗಳು ಎಲ್ಲರ ಮೇಲಿವೆ, ಎಲ್ಲರೂ ಭಕ್ತರಾಗಿದ್ದಾರೆ. ಯಾರಿಗೂ ಜ್ಞಾನಿಗಳೆಂದು ಕರೆಯಲು ಸಾಧ್ಯವಿಲ್ಲ. ಜ್ಞಾನ ಮತ್ತು ಭಕ್ತಿ ಬೇರೆ-ಬೇರೆಯಾಗಿವೆ. ಹೇಗೆ ಶಿವನೇ ಬೇರೆ ಮತ್ತು ಶಂಕರನೇ ಬೇರೆಯಾಗಿದ್ದಾರೆ. ಜ್ಞಾನ ಸಿಕ್ಕಿದ ನಂತರ ಭಕ್ತಿಯಿರುವುದಿಲ್ಲ, ನೀವು ಸುಖಧಾಮದ ಮಾಲೀಕರಾಗುತ್ತೀರಿ. ಅರ್ಧಕಲ್ಪಕ್ಕಾಗಿ ಸದ್ಗತಿ ಸಿಗುತ್ತದೆ. ಒಂದೇ ಸಲ ನೀವು ಅರ್ಧಕಲ್ಪದ ಆಸ್ತಿಯನ್ನು ಪಡೆಯುತ್ತಿದ್ದೀರಿ. ನೋಡುತ್ತೀರಿ, ಭಕ್ತರಿಗೆ ಎಷ್ಟೊಂದು ಕಷ್ಟವಿದೆ. ಜ್ಞಾನದಿಂದ ನೀವು ದೇವತೆಗಳಾಗಿ ಬಿಡುತ್ತೀರಿ ನಂತರ ಎಲ್ಲಾ ಭಕ್ತರ ಕ್ಯೂ ನಿಲ್ಲುತ್ತದೆ ಅರ್ಥಾತ್ ದುಃಖವು ಹೆಚ್ಚಾಗುತ್ತದೆ ಆಗ ತಂದೆಯು ಬರುತ್ತಾರೆ. ತಂದೆಯು ತಿಳಿಸುತ್ತಾರೆ - ಡ್ರಾಮಾನುಸಾರ ಏನು ಕಳೆದುಹೋಯಿತೋ ಅದು ಮತ್ತೆ ಪುನರಾವರ್ತನೆಯಾಗುವುದು. ಮತ್ತೆ ಭಕ್ತಿಯು ಆರಂಭವಾದಾಗ ವಾಮಮಾರ್ಗವು ಆರಂಭವಾಗುತ್ತದೆ ಅರ್ಥಾತ್ ಪತಿತರಾಗುವ ಮಾರ್ಗ. ಅದರಲ್ಲಿಯೂ ನಂಬರ್ವನ್ ಕಾಮ ವಿಕಾರವಾಗಿದೆ. ಕಾಮದ ಮೇಲೆ ಜಯ ಗಳಿಸಿದರೆ ನೀವು ಜಗಜ್ಜೀತರಾಗುತ್ತೀರಿ ಎಂದು ಇದಕ್ಕಾಗಿಯೇ ಹೇಳಲಾಗುತ್ತದೆ. ಅವರೇನು ಜಯ ಗಳಿಸುವುದಿಲ್ಲ, ರಾವಣ ರಾಜ್ಯದಲ್ಲಿ ವಿಕಾರಗಳಿಲ್ಲದೆ ಯಾರದೇ ಶರೀರವು ಜನ್ಮ ಪಡೆಯುವುದಿಲ್ಲ. ಸತ್ಯಯುಗದಲ್ಲಿ ರಾವಣ ರಾಜ್ಯವೇ ಇಲ್ಲ. ಅಲ್ಲಿಯೂ ಒಂದುವೇಳೆ ರಾವಣನು ಇದ್ದಿದ್ದರೆ ಭಗವಂತನು ರಾಮ ರಾಜ್ಯವನ್ನು ಸ್ಥಾಪನೆ ಮಾಡಿ ಏನು ಮಾಡಿದಂತಾಯಿತು? ತಂದೆಗೆ ಎಷ್ಟು ಚಿಂತೆಯಿರುತ್ತದೆ! ನನ್ನ ಮಕ್ಕಳು ಸುಖಿಯಾಗಿರಲಿ ಎಂದು ಎಷ್ಟೊಂದು ಹಣ ಸಂಪಾದಿಸಿ ಮಕ್ಕಳಿಗೆ ಕೊಡುತ್ತಾರೆ ಆದರೆ ಇಲ್ಲಂತೂ ಅದು ಸಾಧ್ಯವಿಲ್ಲ. ಇದು ದುಃಖದ ಪ್ರಪಂಚವಾಗಿದೆ. ಬೇಹದ್ದಿನ ತಂದೆಯು ತಿಳಿಸುತ್ತಾರೆ - ಅಲ್ಲಿ ನೀವು ಜನ್ಮ-ಜನ್ಮಾಂತರದಿಂದ ಸುಖವನ್ನೇ ಭೋಗಿಸುತ್ತಾ ಬರುತ್ತೀರಿ, ಅಪಾರ ಧನವು ಸಿಗುತ್ತದೆ, 21 ಜನ್ಮಗಳಿಗಾಗಿ ಅಲ್ಲಿ ಯಾವುದೇ ದುಃಖವಿರುವುದಿಲ್ಲ, ಯಾರೂ ದಿವಾಳಿಯಾಗುವುದಿಲ್ಲ. ಮಾತುಗಳನ್ನು ಬುದ್ಧಿಯಲ್ಲಿ ಧಾರಣೆ ಮಾಡಿಕೊಂಡು ಆಂತರಿಕ ಖುಷಿಯಲ್ಲಿರಬೇಕು. ನಿಮ್ಮ ಜ್ಞಾನ ಮತ್ತು ಯೋಗವೆಲ್ಲವೂ ಗುಪ್ತವಾಗಿದೆ, ಸ್ಥೂಲ ಆಯುಧಗಳು ಇತ್ಯಾದಿಗಳೇನೂ ಇಲ್ಲ. ತಂದೆಯು ತಿಳಿಸುತ್ತಾರೆ - ಇದು ಜ್ಞಾನ ಖಡ್ಗವಾಗಿದೆ. ಇದಕ್ಕೆ ಅವರು ಸ್ಥೂಲ ಆಯುಧಗಳನ್ನು ಸಂಕೇತವಾಗಿ ದೇವಿಯರಿಗೆ ತೋರಿಸಿದ್ದಾರೆ. ಶಾಸ್ತ್ರಗಳನ್ನು ಓದುವವರೂ ಸಹ ಇದು ಜ್ಞಾನ ಖಡ್ಗವಾಗಿದೆ ಎಂಬ ಮಾತನ್ನು ಎಂದೂ ಹೇಳುವುದಿಲ್ಲ. ಇದನ್ನು ಬೇಹದ್ದಿನ ತಂದೆಯೇ ತಿಳಿಸಿಕೊಡುತ್ತಾರೆ. ಶಕ್ತಿ ಸೇನೆಯು ಜಯ ಪಡೆಯಿತೆಂದರೆ ಅವಶ್ಯವಾಗಿ ಯಾವುದೋ ಆಯುಧಗಳಿರಬೇಕೆಂದು ಅವರು ತಿಳಿಯುತ್ತಾರೆ. ತಂದೆಯು ಬಂದು ಇವೆಲ್ಲಾ ತಪ್ಪುಗಳನ್ನು ತಿಳಿಸುತ್ತಾರೆ. ಈ ನಿಮ್ಮ ಮಾತನ್ನು ಅನೇಕ ಮನುಷ್ಯರು ಕೇಳುತ್ತಾರೆ. ಕೊನೆಗೊಂದು ದಿನ ವಿದ್ವಾಂಸ, ಪಂಡಿತರೂ ಸಹ ಬರುತ್ತಾರೆ. ಬೇಹದ್ದಿನ ತಂದೆಯಲ್ಲವೆ. ನೀವು ಮಕ್ಕಳು ಶ್ರೀಮತದಂತೆ ನಡೆಯುವುದರಲ್ಲಿಯೇ ಕಲ್ಯಾಣವಿದೆ, ಆಗಲೇ ದೇಹಾಭಿಮಾನವು ಕಳೆಯುವುದು ಆದ್ದರಿಂದ ಇಲ್ಲಿಗೆ ಸಾಹುಕಾರರು ಬರುವುದಿಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ದೇಹದ ಅಹಂಕಾರವನ್ನು ಬಿಡಿ. ಒಳ್ಳೆಯ ವಸ್ತ್ರಗಳದೂ ನಶೆಯಿರುತ್ತದೆ, ನೀವೀಗ ವನವಾಸದಲ್ಲಿದ್ದೀರಲ್ಲವೆ. ಈಗ ಮಾವನ ಮನೆಗೆ ಹೋಗುತ್ತೀರಿ, ಅಲ್ಲಿ ನಿಮಗೆ ಬಹಳ ಆಭರಣಗಳನ್ನು ಧರಿಸುತ್ತಾರೆ. ನೀವಿಲ್ಲಿ ಬಹಳ ಫ್ಯಾಷನೇಬಲ್ ವಸ್ತ್ರಗಳನ್ನು ಧರಿಸಬಾರದು. ಸಂಪೂರ್ಣ ಸಾಧಾರಣರಾಗಬೇಕಾಗಿದೆ. ನಾನು ಎಂತಹ ಕರ್ಮವನ್ನು ಮಾಡುತ್ತೇನೆಯೋ ಮಕ್ಕಳೂ ಸಹ ಸಾಧಾರಣವಾಗಿರಬೇಕಾಗಿದೆ. ಇಲ್ಲವಾದರೆ ದೇಹಾಭಿಮಾನವು ಬಂದು ಬಿಡುತ್ತದೆ. ಅದು ಬಹಳ ನಷ್ಟವನ್ನುಂಟು ಮಾಡುತ್ತದೆ. ನಾವೀಗ ಮಾವನ ಮನೆಗೆ ಹೋಗಬೇಕಾಗಿದೆ. ಅಲ್ಲಿ ನಮಗೆ ಬಹಳಷ್ಟು ಆಭರಣಗಳು ಸಿಗುತ್ತವೆಯಂದು ನೀವು ಮಕ್ಕಳಿಗೆ ತಿಳಿದಿದೆ ಅಂದಾಗ ನೀವಿಲ್ಲಿ ಹೆಚ್ಚು ಆಭರಣಗಳನ್ನು ಧರಿಸುವಂತಿಲ್ಲ. ಇತ್ತೀಚೆಗೆ ಕಳ್ಳತನವೂ ಸಹ ಎಷ್ಟೊಂದಾಗುತ್ತದೆ. ಕಳ್ಳರು ಮಾರ್ಗ ಮಧ್ಯದಲ್ಲಿಯೇ ಎಷ್ಟೊಂದು ಲೂಟಿ ಮಾಡಿಕೊಂಡು ಹೋಗುತ್ತಾರೆ. ದಿನ-ಪ್ರತಿದಿನ ಈ ಏರುಪೇರುಗಳು ಹೆಚ್ಚುತ್ತಾ ಹೋಗುವವು ಆದ್ದರಿಂದ ತಂದೆಯು ತಿಳಿಸುತ್ತಾರೆ - ತನ್ನನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿ, ದೇಹಾಭಿಮಾನದಲ್ಲಿ ಬಂದಾಗಲೂ ತಂದೆಯನ್ನು ಮರೆತು ಹೋಗುತ್ತೀರಿ. ಈ ಪರಿಶ್ರಮವು ಈಗಲೇ ಆಗುತ್ತದೆ, ಮತ್ತೆಂದೂ ಭಕ್ತಿಮಾರ್ಗದಲ್ಲಿ ಈ ಪರಿಶ್ರಮವಿರುವುದಿಲ್ಲ.

ನೀವೀಗ ಸಂಗಮದಲ್ಲಿದ್ದೀರಿ. ತಂದೆಯು ಪುರುಷೋತ್ತಮ ಸಂಗಮಯುಗದಲ್ಲಿಯೇ ಬರುತ್ತಾರೆಂದು ನಿಮಗೆ ತಿಳಿದಿದೆ. ಯುದ್ಧವೂ ಅವಶ್ಯವಾಗಿ ಆಗುವುದು. ಅಣುಬಾಂಬುಗಳನ್ನು ಹೆಚ್ಚಿನದಾಗಿ ತಯಾರಿಸುತ್ತಿರುತ್ತಾರೆ. ಇವು ನಿಂತು ಹೋಗಲಿ ಎಂದು ನೀವು ಎಷ್ಟಾದರೂ ತಲೆ ಕೆಡಿಸಿಕೊಳ್ಳಿ ಆದರೆ ನಿಲ್ಲುವುದಿಲ್ಲ. ನಾಟಕದಲ್ಲಿ ನಿಗಧಿಯಾಗಿದೆ. ತಿಳಿಸಿದರೂ ತಿಳಿದುಕೊಳ್ಳುವುದಿಲ್ಲ. ಮೃತ್ಯುವಾಗಲೇಬೇಕಾಗಿದೆ ಅಂದಮೇಲೆ ಹೇಗೆ ನಿಲ್ಲುವುದು? ಅವರಿಗೂ ಅರ್ಥವಾಗುತ್ತದೆ ಆದರೂ ತಯಾರಿಸುವುದನ್ನು ನಿಲ್ಲಿಸುವುದಿಲ್ಲ, ಡ್ರಾಮಾದಲ್ಲಿ ನಿಗಧಿಯಾಗಿದೆ. ಯಾದವರು ಮತ್ತು ಕೌರವರು ಸಮಾಪ್ತಿಯಾಗಲೇಬೇಕಾಗಿದೆ. ಯಾದವರು ಯೂರೋಪಿಯನ್ನರಾಗಿದ್ದಾರೆ. ಅವರದು ವಿಜ್ಞಾನದ ಅಭಿಮಾನವಾಗಿದೆ. ಇದರಿಂದ ವಿನಾಶವಾಗುತ್ತದೆ. ಕೊನೆಗೆ ಶಾಂತಿಯ ಅಭಿಮಾನದ ಜಯವಾಗುತ್ತದೆ. ನಿಮಗೆ ಶಾಂತಿಯ ಅಭಿಮಾನದಲ್ಲಿರುವುದನ್ನು (ಶಾಂತ ಸ್ವರೂಪರಾಗಿರುವುದನ್ನು) ಕಲಿಸಲಾಗುತ್ತದೆ. ತಂದೆಯನ್ನು ನೆನಪು ಮಾಡಿ - ಡೆಡ್ ಸೈಲೆನ್ಸ್. ನಾನಾತ್ಮ ಶರೀರದಿಂದ ಭಿನ್ನವಾಗಿದ್ದೇನೆ. ಶರೀರವನ್ನು ಬಿಡುವುದಕ್ಕಾಗಿ ನಾವು ಪುರುಷಾರ್ಥ ಮಾಡುತ್ತೇವೆ. ಈ ರೀತಿ ಶರೀರ ಬಿಡುವುದಕ್ಕಾಗಿ ಯಾರು ಎಂದಾದರೂ ಪುರುಷಾರ್ಥ ಮಾಡುತ್ತಾರೆಯೇ? ಇಡೀ ಪ್ರಪಂಚದಲ್ಲಿ ಹುಡುಕಿಕೊಂಡು ಬಂದು ಹೇ ಆತ್ಮ, ನೀನೀಗ ಶರೀರವನ್ನು ಬಿಟ್ಟು ಹೋಗಬೇಕಾಗಿದೆ ಎಂದು ಯಾರಾದರೂ ಹೇಳುವರೇ? ಪವಿತ್ರರಾಗಿ, ಇಲ್ಲವಾದರೆ ಶಿಕ್ಷೆಯನ್ನನುಭವಿಸಬೇಕಾಗುವುದು. ಶಿಕ್ಷೆಯನ್ನು ಯಾರು ಅನುಭವಿಸುತ್ತಾರೆ? ಆತ್ಮ. ಆ ಸಮಯದಲ್ಲಿ ಸಾಕ್ಷಾತ್ಕಾರವಾಗುತ್ತದೆ - ನೀವು ಇಂತಿಂತಹ ಪಾಪವನ್ನು ಮಾಡಿದ್ದೀರಿ ಆದ್ದರಿಂದ ಈ ಶಿಕ್ಷೆಯನ್ನನುಭವಿಸಿ. ಆ ಸಮಯದಲ್ಲಿ ಬಹಳ ನೋವಾಗುತ್ತದೆ. ಹೇಗೆ ಜನ್ಮ-ಜನ್ಮಾಂತರ ಶಿಕ್ಷೆಯು ಸೆಕೆಂಡಿನಲ್ಲಿ ಸಿಗುತ್ತಿದೆ ಎಂಬ ಅನುಭವವಾಗುತ್ತದೆ. ಇಷ್ಟು ದುಃಖವನ್ನು ಭೋಗಿಸಿದರೆ ಬಾಕಿ ಸುಖದ ಬ್ಯಾಲೆನ್ಸ್ ಇದ್ದಂತಾಯಿತೇ? ತಂದೆಯು ತಿಳಿಸುತ್ತಾರೆ - ಈಗ ಯಾವುದೇ ಪಾಪಕರ್ಮ ಮಾಡಬೇಡಿ, ತಮ್ಮ ರಿಜಿಸ್ಟರ್ ಇಟ್ಟುಕೊಳ್ಳಿ. ಪ್ರತಿಯೊಂದು ಶಾಲೆಯಲ್ಲಿ ವಿದ್ಯಾರ್ಥಿಯ ಚಲನೆಯ ರಿಜಿಸ್ಟರ್ ಇಡುತ್ತಾರಲ್ಲವೆ. ಶಿಕ್ಷಣ ಮಂತ್ರಿಯೂ ಸಹ ಹೇಳುತ್ತಾರೆ - ಭಾರತದ ನಡವಳಿಕೆಯು ಸರಿಯಿಲ್ಲವೆಂದು, ಆಗ ತಿಳಿಸಿ, ನಾವು ಈ ಲಕ್ಷ್ಮೀ-ನಾರಾಯಣರ ತರಹ ಗುಣಗಳನ್ನು ಕಲಿಸುತ್ತೇವೆ. ಈ ಲಕ್ಷ್ಮೀ-ನಾರಾಯಣರ ಚಿತ್ರವು ಸದಾ ನೆನಪಿರಲಿ. ಇದು ಗುರಿ-ಧ್ಯೇಯವಾಗಿದೆ. ನಾವು ಈ ರೀತಿಯಾಗುತ್ತೇವೆ. ಈ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯನ್ನು ಶ್ರೀಮತದನುಸಾರ ನಾವು ಮಾಡುತ್ತಿದ್ದೇವೆ. ಇಲ್ಲಿ ಚಲನ-ವಲನೆಯನ್ನು ಸುಧಾರಣೆ ಮಾಡಲಾಗುತ್ತದೆ. ನಿಮ್ಮದು ಇಲ್ಲಿ ಕಛೇರಿಯು ನಡೆಯುತ್ತದೆ. ಎಲ್ಲಾ ಸೇವಾಕೇಂದ್ರಗಳಲ್ಲಿ ಮಕ್ಕಳು ಕಛೇರಿ ನಡೆಸಬೇಕು. ಚಾರ್ಟ್ ಇಡಿ ಎಂದು ಪ್ರತಿನಿತ್ಯವೂ ಹೇಳಿರಿ ಆಗ ಸುಧಾರಣೆಯಾಗುವುದು. ಅದೃಷ್ಟದಲ್ಲಿಲ್ಲವೆಂದರೆ ಅವರು ಇದರಲ್ಲಿ ಆಲಸ್ಯ ಮಾಡುತ್ತಾರೆ. ಆದರೆ ಚಾರ್ಟ್ ಇಡುವುದು ಬಹಳ ಒಳ್ಳೆಯದಾಗಿದೆ.

ನೀವು ತಿಳಿದುಕೊಂಡಿದ್ದೀರಿ - ನಾವು 84 ಜನ್ಮಗಳ ಚಕ್ರವನ್ನು ಅರಿತುಕೊಳ್ಳುವುದರಿಂದಲೇ ಚಕ್ರವರ್ತಿ ರಾಜರಾಗಿ ಬಿಡುತ್ತೇವೆ. ಎಷ್ಟು ಸಹಜವಾಗಿದೆ ಮತ್ತು ಪವಿತ್ರರೂ ಆಗಬೇಕಾಗಿದೆ. ನೆನಪಿನ ಯಾತ್ರೆಯ ಚಾರ್ಟನ್ನಿಡಿ. ಇದರಲ್ಲಿ ನಿಮಗೆ ಬಹಳ ಲಾಭವಿದೆ. ನೋಟ್ಬುಕ್ನ್ನು ಇಡಲಿಲ್ಲವೆಂದರೆ ತಂದೆಯನ್ನು ನೆನಪು ಮಾಡಲಿಲ್ಲವೆಂದು ತಿಳಿದುಕೊಳ್ಳಿ. ಸದಾ ನೋಟ್ಬುಕ್ ಕೈಯಲ್ಲಿರಲಿ. ತನ್ನ ಚಾರ್ಟ್ ನೋಡಿಕೊಳ್ಳಿ - ಎಷ್ಟು ಸಮಯ ತಂದೆಯನ್ನು ನೆನಪು ಮಾಡಿದೆನು? ನೆನಪು ಮಾಡದೇ ತುಕ್ಕು ಕಳೆಯಲು ಸಾಧ್ಯವಿಲ್ಲ. ತುಕ್ಕನ್ನು ತೆಗೆಯಲು ವಸ್ತುವನ್ನು ಸೀಮೆಎಣ್ಣೆಯಲ್ಲಿ ಹಾಕುತ್ತಾರಲ್ಲವೆ. ಕರ್ಮ ಮಾಡುತ್ತಲೂ ತಂದೆಯನ್ನು ನೆನಪು ಮಾಡಬೇಕಾಗಿದೆ ಆಗ ಪುರುಷಾರ್ಥದ ಫಲ ಸಿಗುವುದು. ಪರಿಶ್ರಮವಿದೆಯಲ್ಲವೆ. ಕೇವಲ ಹಾಗೆಯೇ ತಲೆಯ ಮೇಲೆ ಕಿರೀಟವನ್ನಿಟ್ಟು ಬಿಡುವರೇ? ತಂದೆಯು ಇಷ್ಟು ಶ್ರೇಷ್ಠ ಪದವಿಯನ್ನು ಕೊಡುತ್ತಾರೆಂದಮೇಲೆ ಸ್ವಲ್ಪವಾದರೂ ಪರಿಶ್ರಮ ಪಡಬೇಕಾಗಿದೆ. ಇದರಲ್ಲಿ ಕೈ ಕಾಲುಗಳಿಂದ ಏನನ್ನೂ ಮಾಡಬೇಕಾಗಿಲ್ಲ. ವಿದ್ಯೆಯು ಸಂಪೂರ್ಣ ಸಹಜವಾಗಿದೆ. ನಿಮ್ಮ ಬುದ್ಧಿಯಲ್ಲಿದೆ - ನಾವು ಶಿವ ತಂದೆಯಿಂದ ಬ್ರಹ್ಮಾರವರ ಮೂಲಕ ಎಷ್ಟು ಶ್ರೇಷ್ಠರಾಗುತ್ತಿದ್ದೇವೆ ಅಂದಮೇಲೆ ಎಲ್ಲಿಗೇ ಹೋದರೂ ಸಹ ಬ್ಯಾಡ್ಜ್ನ್ನು ಹಾಕಿಕೊಂಡಿರಿ. ತಿಳಿಸಿಕೊಡಿ, ವಾಸ್ತವದಲ್ಲಿ ಇದು ರಾಷ್ಟ್ರ ಲಾಂಛನವಾಗಿದೆ. ತಿಳಿಸುವುದರಲ್ಲಿಯೂ ಬಹಳ ಘನತೆಯಿರಬೇಕು. ಬಹಳ ಮಧುರತೆಯಿಂದ ತಿಳಿಸಬೇಕಾಗಿದೆ. ರಾಷ್ಟ್ರ ಲಾಂಛನದ ಬಗ್ಗೆಯೂ ತಿಳಿಸಬೇಕು. ಪ್ರೀತಿ ಬುದ್ಧಿ ಮತ್ತು ವಿಪರೀತ ಬುದ್ಧಿಯವರೆಂದು ಯಾರಿಗೆ ಹೇಳಲಾಗುವುದು, ನೀವು ತಿಳಿದುಕೊಂಡಿದ್ದೀರಾ? ಲೌಕಿಕ ತಂದೆಗೆ ಭಗವಂತನೆಂದು ಹೇಳುವುದಿಲ್ಲ ಹಾಗಾದರೆ ಬೇಹದ್ದಿನ ತಂದೆಯು ಪತಿತ ಪಾವನ, ಸುಖದ ಸಾಗರನಾಗಿದ್ದಾರೆ. ಅವರಿಂದಲೇ ಅಪಾರ ಸುಖವು ಸಿಗುತ್ತದೆ. ಅಜ್ಞಾನ ಕಾಲದಲ್ಲಿ ತಂದೆ-ತಾಯಿಯು ಸುಖ ಕೊಡುತ್ತಾರೆ. ಮಾವನ ಮನೆಗೆ ಕಳುಹಿಸುತ್ತಾರೆಂದು ತಿಳಿದುಕೊಳ್ಳುತ್ತಾರೆ. ನಿಮ್ಮದು ಇದು ಬೇಹದ್ದಿನ ಮಾವನ ಮನೆಯಾಗಿದೆ, ಅದು ಹದ್ದಿನದಾಗಿದೆ. ಆ ತಂದೆ-ತಾಯಿಯು ಹೆಚ್ಚೆಂದರೆ 5-7 ಲಕ್ಷ ಕೋಟಿಗಳನ್ನು ಕೊಡಬಹುದು. ಆದರೆ ಇಲ್ಲಿ ತಂದೆಯು ನಿಮಗೆ ಪದುಮಾ ಪದಮ ಪತಿಗಳಾಗುವಂತಹ ಮಕ್ಕಳೆಂದು ಹೆಸರಿಟ್ಟಿದ್ದಾರೆ. ಸತ್ಯಯುಗದಲ್ಲಂತೂ ಹಣದ ಮಾತೇ ಇರುವುದಿಲ್ಲ. ಎಲ್ಲವೂ ಸಿಗುತ್ತದೆ. ಬಹಳ ಒಳ್ಳೊಳ್ಳೆಯ ಮಹಲುಗಳಿರುತ್ತವೆ, ಜನ್ಮ-ಜನ್ಮಾಂತರಕ್ಕಾಗಿ ನಿಮಗೆ ಮಹಲುಗಳು ಸಿಗುತ್ತವೆ, ಸುಧಾಮನ ಉದಾಹರಣೆಯಿದೆಯಲ್ಲವೆ. ಹಿಡಿ ಅವಲಕ್ಕಿಯ ಮಾತನ್ನು ಕೇಳಿರುವುದರಿಂದ ಇಲ್ಲಿಯೂ ಸಹ ತೆಗೆದುಕೊಂಡು ಬರುತ್ತಾರೆ ಆದರೆ ಕೇವಲ ಅವಲಕ್ಕಿಯನ್ನು ತಿನ್ನಲು ಸಾಧ್ಯವಿಲ್ಲ. ಆದ್ದರಿಂದ ಅದರ ಜೊತೆ ಕೆಲವೊಂದು ಮಸಾಲೆ ಪದಾರ್ಥಗಳನ್ನೂ ತೆಗೆದುಕೊಂಡು ಬರುತ್ತಾರೆ, ಎಷ್ಟು ಪ್ರೀತಿಯಿಂದ ತರುತ್ತಾರೆ! ತಂದೆಯು ನಮಗೆ ಜನ್ಮ-ಜನ್ಮಾಂತರಕ್ಕಾಗಿ ಕೊಡುತ್ತಾರೆ ಆದ್ದರಿಂದ ದಾತನೆಂದು ಹೇಳಲಾಗುತ್ತದೆ. ಭಕ್ತಿಮಾರ್ಗದಲ್ಲಿ ನೀವು ಈಶ್ವರಾರ್ಥವಾಗಿ ಕೊಟ್ಟರೆ ಇನ್ನೊಂದು ಜನ್ಮದಲ್ಲಿ ಅಲ್ಪಕಾಲಕ್ಕಾಗಿ ಸಿಗುತ್ತದೆ. ಕೆಲವರು ಬಡವರಿಗೆ ಕೊಡುತ್ತಾರೆ, ಕಾಲೇಜನ್ನು ಕಟ್ಟಿಸುತ್ತಾರೆಂದರೆ ಇನ್ನೊಂದು ಜನ್ಮದಲ್ಲಿ ವಿದ್ಯಾ ದಾನವು ಸಿಗುತ್ತದೆ. ಧರ್ಮ ಶಾಲೆ ಕಟ್ಟಿಸಿದರೆ ಮನೆ ಸಿಗುತ್ತದೆ ಏಕೆಂದರೆ ಧರ್ಮ ಶಾಲೆಯಲ್ಲಿ ಅನೇಕರು ಬಂದು ಸುಖ ಪಡೆಯುತ್ತಾರೆ. ಇಲ್ಲಾದರೆ ಜನ್ಮ-ಜನ್ಮಾಂತರದ ಮಾತಾಗಿದೆ. ನಿಮಗೆ ತಿಳಿದಿದೆ ಶಿವ ತಂದೆಗೆ ನಾವು ಏನನ್ನೇ ಕೊಟ್ಟರೂ ಸಹ ಅದನ್ನು ನಮಗಾಗಿಯೇ ಉಪಯೋಗಿಸುತ್ತಾರೆ, ತಮ್ಮ ಬಳಿ ಇಟ್ಟುಕೊಳ್ಳುವುದಿಲ್ಲ. ಇವರಿಗೂ (ಬ್ರಹ್ಮಾ) ಸಹ ಹೇಳಿದರು - ಎಲ್ಲವನ್ನು ಕೊಟ್ಟು ಬಿಟ್ಟರೆ ವಿಶ್ವದ ಮಾಲೀಕನಾಗುತ್ತೀಯಾ. ವಿನಾಶದ ಸಾಕ್ಷಾತ್ಕಾರವನ್ನೂ ಮಾಡಿಸಿದರು. ರಾಜಧಾನಿಯ ಸಾಕ್ಷಾತ್ಕಾರವನ್ನೂ ಮಾಡಿಸಿದರು ಅಷ್ಟೆ, ಓಹೋ! ತಂದೆಯು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆಂದು ಇವರಿಗೆ ನಶಯೇರಿ ಬಿಟ್ಟಿತು. ಅರ್ಜುನನಿಗೆ ಸಾಕ್ಷಾತ್ಕಾರ ಮಾಡಿಸಿದರೆಂದು ಗೀತೆಯಲ್ಲಿಯೂ ಇದೆ. ನನ್ನನ್ನು ನೆನಪು ಮಾಡಿದರೆ ನೀನು ಈ ರೀತಿಯಾಗುವೆ ಎಂದು ತಂದೆಯು ಇವರಿಗೆ (ಬ್ರಹ್ಮಾ) ಹೇಳಿದರು. ವಿನಾಶ ಮತ್ತು ಸ್ಥಾಪನೆಯ ಸಾಕ್ಷಾತ್ಕಾರ ಮಾಡಿಸಿದರು. ಆಗ ಇವರಿಗೂ ಸಹ ಖುಷಿಯ ನಶೆಯೇರಿತು. ಡ್ರಾಮಾದಲ್ಲಿ ಈ ಪಾತ್ರವಿತ್ತು, ಭಗೀರಥನನ್ನು ಯಾರೂ ತಿಳಿದುಕೊಂಡಿಲ್ಲ ಅಂದಾಗ ನೀವು ಮಕ್ಕಳಿಗೆ ಈ ಗುರಿ-ಧ್ಯೇಯವು ಬುದ್ಧಿಯಲ್ಲಿರಬೇಕು - ನಾವೇ ಈ ರೀತಿಯಾಗುತ್ತೇವೆ. ಎಷ್ಟು ಪುರುಷಾರ್ಥ ಮಾಡುವಿರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುವಿರಿ. ಫಾಲೋ ಫಾದರ್ ಎಂದು ಗಾಯನವಿದೆ. ಇದು ಈ ಸಮಯದ ಮಾತಾಗಿದೆ. ನಾನು ಯಾವ ಸಲಹೆ ಕೊಡುತ್ತೇನೆಯೋ ಅದರಂತೆಯೇ ಫಾಲೋ ಮಾಡಿ ಎಂದು ಬೇಹದ್ದಿನ ತಂದೆಯು ತಿಳಿಸುತ್ತಾರೆ. ಇವರು ಏನು ಮಾಡಿದರೋ ಅದನ್ನೂ ತಿಳಿಸುತ್ತಾರೆ. ಅವರಿಗೆ ಸೌಧಾಗಾರ, ರತ್ನಾಗಾರ, ಜಾದೂಗಾರನೆಂದು ಹೇಳುತ್ತಾರಲ್ಲವೆ. ಈ ಬಾಬಾರವರಂತೂ ಆಕಸ್ಮಿಕವಾಗಿ ಎಲ್ಲವನ್ನೂ ಬಿಟ್ಟು ಬಿಟ್ಟರು. ಮೊದಲು ಆ ಸ್ಥೂಲ ರತ್ನಗಳ ವ್ಯಾಪಾರಿಯಾಗಿದ್ದರು, ಈಗ ಈ ಅವಿನಾಶಿ ಜ್ಞಾನ ರತ್ನಗಳ ವ್ಯಾಪಾರಿಯಾದರು. ನರಕವನ್ನು ಸ್ವರ್ಗವನ್ನಾಗಿ ಮಾಡುವುದು ಎಷ್ಟು ದೊಡ್ಡ ಜಾದುವಾಗಿದೆ. ಮತ್ತೆ ವ್ಯಾಪಾರಿಯೂ ಆಗಿದ್ದಾರೆ. ಮಕ್ಕಳಿಗೆ ಎಷ್ಟು ಒಳ್ಳೆಯ ವ್ಯಾಪಾರ ಮಾಡಿಸುತ್ತಾರೆ. ಹಳೆಯದೆಲ್ಲವನ್ನೂ ತೆಗೆದುಕೊಂಡು ಮಹಲನ್ನು ಕೊಡುತ್ತಾರೆ. ಎಷ್ಟು ಒಳ್ಳೆಯ ಸಂಪಾದನೆ ಮಾಡಿಸುವವರಾಗಿದ್ದಾರೆ! ವೈಡೂರ್ಯದ ವ್ಯಾಪಾರದಲ್ಲಿಯೂ ಈ ರೀತಿಯಾಗುತ್ತದೆ. ಕೆಲವರು ಅಮೇರಿಕನ್ ಗ್ರಾಹಕರು ಬರುತ್ತಾರೆಂದರೆ ಅವರಿಂದ ನೂರು ರೂಪಾಯಿಗಳ ವಸ್ತುವಿಗೆ 500 ಅಥವಾ ಸಾವಿರ ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರೆ. ಅವರಿಂದ ಬಹಳ ಹಣವನ್ನು ತೆಗೆದುಕೊಳ್ಳುತ್ತಾರೆ. ನಿಮ್ಮ ಬಳಿಯಂತೂ ಎಲ್ಲದಕ್ಕಿಂತ ಹಳೆಯ ವಸ್ತು ಪ್ರಾಚೀನ ಯೋಗವಿದೆ.

ನಿಮಗೆ ಈಗ ಭೋಲಾನಾಥ ತಂದೆಯು ಸಿಕ್ಕಿದ್ದಾರೆ. ಎಷ್ಟು ಭೋಲಾ ಆಗಿದ್ದಾರೆ! ನಿಮ್ಮನ್ನು ಯಾವ ತರಹ ಮಾಡಿಬಿಡುತ್ತಾರೆ! ನಿಮ್ಮ ಬಳಿಯಿರುವ ಕೆಲಸಕ್ಕೆ ಬಾರದೇ ಇರುವುದನ್ನು ತೆಗೆದುಕೊಂಡು ನಿಮ್ಮನ್ನು 21 ಜನ್ಮಗಳಿಗಾಗಿ ಯಾವ ರೀತಿ ಮಾಡಿ ಬಿಡುತ್ತಾರೆ ಎಂಬುದು ಮನುಷ್ಯರಿಗೇನೂ ತಿಳಿದಿಲ್ಲ. ಭೋಲಾನಾಥನು ಇದನ್ನು ಕೊಟ್ಟರೆಂದು ಕೆಲವೊಮ್ಮೆ ಹೇಳುತ್ತಾರೆ, ಇನ್ನೂ ಕೆಲವೊಮ್ಮೆ ಜಗದಂಬೆಯು ಕೊಟ್ಟರು, ಗುರುಗಳು ಕೊಟ್ಟರೆಂದು ಹೇಳುತ್ತಾರೆ. ಇಲ್ಲಂತೂ ವಿದ್ಯೆಯಾಗಿದೆ, ನೀವು ಈಶ್ವರೀಯ ಪಾಠಶಾಲೆಯಲ್ಲಿ ಕುಳಿತಿದ್ದೀರಿ. ಗೀತೆಗೆ ಈಶ್ವರೀಯ ಪಾಠಶಾಲೆಯೆಂದು ಹೇಳುತ್ತಾರೆ. ಗೀತೆಯಲ್ಲಿ ಭಗವಾನುವಾಚವಿದೆ ಆದರೆ ಭಗವಂತನೆಂದು ಯಾರಿಗೆ ಹೇಳಲಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಪರಮಪಿತ ಪರಮಾತ್ಮನನ್ನು ತಿಳಿದುಕೊಂಡಿದ್ದೀರಾ ಎಂದು ಯಾರನ್ನಾದರೂ ಪ್ರಶ್ನೆ ಮಾಡಿ, ಯಾರಿಗೂ ಗೊತ್ತಿಲ್ಲ. ತಂದೆಯು ಹೂದೋಟದ ಮಾಲೀಕನಾಗಿದ್ದಾರೆ, ನಿಮ್ಮನ್ನು ಮುಳ್ಳುಗಳಿಂದ ಹೂಗಳನ್ನಾಗಿ ಮಾಡುತ್ತಿದ್ದಾರೆ. ಸತ್ಯಯುಗಕ್ಕೆ ಅಲ್ಲಾನ ಹೂದೋಟವೆಂದು ಹೇಳುತ್ತಾರೆ. ಯುರೋಪಿಯನ್ನರೂ ಸಹ ಪ್ಯಾರಡೈಸ್ ಎಂದು ಹೇಳುತ್ತಾರೆ. ಅವಶ್ಯವಾಗಿ ಭಾರತವು ಫರಿಸ್ತಾನವಾಗಿತ್ತು, ಈಗ ಸ್ಮಶಾನವಾಗಿದೆ ಪುನಃ ನೀವು ಆ ಸ್ವರ್ಗದ ಮಾಲೀಕರಾಗುತ್ತೀರಿ. ತಂದೆಯು ಮಲಗಿರುವವರನ್ನು ಜಾಗೃತಗೊಳಿಸುತ್ತಾರೆ. ಇದನ್ನೂ ಸಹ ನಂಬರ್ವಾರ್ ಪುರುಷಾರ್ಥದನುಸಾರ ನೀವೇ ತಿಳಿದುಕೊಂಡಿದ್ದೀರಿ.. ಯಾರು ಜಾಗೃತರಾಗಿರುವರೋ ಅವರು ಅನ್ಯರನ್ನೂ ಜಾಗೃತಗೊಳಿಸುತ್ತಾರೆ, ಒಂದುವೇಳೆ ಜಾಗೃತ ಮಾಡುವುದಿಲ್ಲವೆಂದರೆ ತಾನೇ ಜಾಗೃತವಾಗಿಲ್ಲವೆಂದರ್ಥ. ಅಂದಾಗ ತಂದೆಯು ತಿಳಿಸುತ್ತಾರೆ - ಈ ಹಾಡುಗಳೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ಕೆಲವು ಹಾಡುಗಳು ಬಹಳ ಚೆನ್ನಾಗಿವೆ. ನಿಮಗೆ ಬೇಸರವಾದಾಗ ಈ ಹಾಡುಗಳನ್ನು ಕೇಳಿರಿ, ಆಗ ಖುಷಿಯಲ್ಲಿ ಬಂದು ಬಿಡುತ್ತೀರಿ. ರಾತ್ರಿಯ ಪ್ರಯಾಣಿಕನೇ ಸುಸ್ತಾಗಬೇಡ, ಈ ಹಾಡೂ ಸಹ ಚೆನ್ನಾಗಿದೆ. ಈ ರಾತ್ರಿಯು ಮುಕ್ತಾಯವಾಗುತ್ತದೆ, ಎಷ್ಟು ಭಕ್ತಿ ಮಾಡುತ್ತೇವೆಯೋ ಅಷ್ಟು ಬೇಗನೆ ಭಗವಂತನು ಸಿಗುವರೆಂದು ಮನುಷ್ಯರು ತಿಳಿಯುತ್ತಾರೆ. ಹನುಮಂತ ಮೊದಲಾದವರ ಸಾಕ್ಷಾತ್ಕಾರವಾಯಿತೆಂದರೆ ಭಗವಂತ ಸಿಕ್ಕಿ ಬಿಟ್ಟರೆಂದು ತಿಳಿಯುತ್ತಾರೆ. ಆದರೆ ತಂದೆಯು ತಿಳಿಸುತ್ತಾರೆ - ಈ ಸಾಕ್ಷಾತ್ಕಾರ ಮೊದಲಾದವುಗಳೆಲ್ಲವೂ ಡ್ರಾಮಾದಲ್ಲಿ ನಿಗಧಿಯಾಗಿದೆ. ಯಾವ ಭಾವನೆಯನ್ನಿಟ್ಟುಕೊಳ್ಳುವರೋ ಅವರ ಸಾಕ್ಷಾತ್ಕಾರವಾಗಿ ಬಿಡುತ್ತದೆ. ಆದರೆ ಈ ರೀತಿ ಯಾರೂ ಆಗುವುದಿಲ್ಲ. ತಂದೆಯು ತಿಳಿಸಿದ್ದಾರೆ - ಈ ಬ್ಯಾಡ್ಜನ್ನು ಎಲ್ಲರೂ ಹಾಕಿಕೊಂಡಿರಿ. ಭಿನ್ನ-ಭಿನ್ನ ಪ್ರಕಾರದ ಬ್ಯಾಡ್ಜುಗಳು ತಯಾರಾಗುತ್ತಿರುತ್ತವೆ. ತಿಳಿಸಿಕೊಡುವುದಕ್ಕಾಗಿಯೂ ಇವು ಬಹಳ ಚೆನ್ನಾಗಿವೆ.

ನೀವು ಆತ್ಮಿಕ ಸೈನಿಕರಾಗಿದ್ದೀರಲ್ಲವೆ. ಸೈನಿಕರಿಗೆ ಯಾವಾಗಲೂ ತಮ್ಮ ಮುದ್ರೆಯಿರುತ್ತದೆ. ನೀವು ಮಕ್ಕಳಿಗೂ ಸಹ ಈ ಬ್ಯಾಡ್ಜ್ ಇದ್ದಾಗ ನಾವು ಈ ರೀತಿಯಾಗುತ್ತಿದ್ದೇವೆ, ನಾವು ವಿದ್ಯಾರ್ಥಿಗಳಾಗಿದ್ದೇವೆ, ತಂದೆಯು ನಮ್ಮನ್ನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಿದ್ದಾರೆ ಎಂದು ನಶೆಯಿರುವುದು. ಮನುಷ್ಯರು ದೇವತೆಗಳ ಪೂಜೆ ಮಾಡುತ್ತಾರೆ, ದೇವತೆಗಳು ದೇವತೆಗಳ ಪೂಜೆ ಮಾಡುವುದಿಲ್ಲ. ಇಲ್ಲಿ ಮನುಷ್ಯರೇ ದೇವತೆಗಳ ಪೂಜೆ ಮಾಡುತ್ತಾರೆ ಏಕೆಂದರೆ ಅವರು ಶ್ರೇಷ್ಠರಾಗಿದ್ದಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಬುದ್ಧಿಯಲ್ಲಿ ಸದಾ ತಮ್ಮ ಗುರಿ-ಧ್ಯೇಯವನ್ನು ನೆನಪಿಟ್ಟುಕೊಳ್ಳಬೇಕಾಗಿದೆ. ಲಕ್ಷ್ಮೀ-ನಾರಾಯಣರ ಚಿತ್ರವು ಸದಾ ನೆನಪಿರಲಿ, ನಾವು ಈ ರೀತಿಯಾಗಲು ಓದುತ್ತಿದ್ದೇವೆ. ನಾವೀಗ ಈಶ್ವರನ ವಿದ್ಯಾರ್ಥಿಗಳಾಗುತ್ತಿದ್ದೇವೆಂಬ ಖುಷಿಯಲ್ಲಿರಿ.

2. ತಮ್ಮ ಹಳೆಯ ಕೆಲಸಕ್ಕೆ ಬಾರದ ಹಿಡಿ ಅವಲಕ್ಕಿಯನ್ನು ಕೊಟ್ಟು ಮಹಲನ್ನು ಪಡೆಯಬೇಕಾಗಿದೆ. ಬ್ರಹ್ಮಾ ತಂದೆಯನ್ನು ಫಾಲೋ ಮಾಡಿ ಅವಿನಾಶಿ ಜ್ಞಾನ ರತ್ನಗಳ ವ್ಯಾಪಾರಿಯಾಗಬೇಕಾಗಿದೆ.

ವರದಾನ:
ಅಶರೀರಿತನದ ಇನ್ಜೆಕ್ಷನ್ ಮುಖಾಂತರ ಮನಸ್ಸನ್ನು ನಿಯಂತ್ರಣ ಮಾಡುವಂತಹ ಏಕಾಗ್ರಚಿತ್ತ ಭವ.

ಹೇಗೆ ಇತ್ತೀಚೆಗೆ ಒಂದುವೇಳೆ ಯಾರಾದರೂ ನಿಮ್ಮ ನಿಯಂತ್ರಣಕ್ಕೆ ಬರಲಿಲ್ಲವೆಂದರೆ, ಬಹಳ ತೊಂದರೆ ಕೊಡುತ್ತಿದ್ದಾರೆ, ಕುಣಿದಾಡುತ್ತಿದ್ದಾರೆ, ಹುಚ್ಚು ಹಿಡಿದಂತೆ ಆಡುತ್ತಿದ್ದಾರೆ ಎಂದಾಗ ಅವರಿಗೆ ಇಂತಹ ಇನ್ಜೆಕ್ಷನ್ ಕೊಡುತ್ತಾರೆ ಅವರು ಶಾಂತರಾಗಿ ಬಿಡುತ್ತಾರೆ. ಹಾಗೆಯೇ ಒಂದುವೇಳೆ ಸಂಕಲ್ಪ ಶಕ್ತಿ ನಿಮ್ಮ ನಿಯಂತ್ರಣದಲ್ಲಿ ಬರುತ್ತಿಲ್ಲ ವೆಂದಾಗ ಅಶರೀರಿತನದ ಇನ್ಜೆಕ್ಷನ್ ಕೊಟ್ಟು ಬಿಡಿ. ಆಮೇಲೆ ಸಂಕಲ್ಪ ಶಕ್ತಿ ವ್ಯರ್ಥ ಉಕ್ಕಿ ಬರುವುದಿಲ್ಲ. ಸಹಜವಾಗಿ ಏಕಾಗ್ರಚಿತ್ತರಾಗುವಿರಿ. ಆದರೆ ಒಂದುವೇಳೆ ಬುದ್ಧಿಯ ಲಗಾಮು ತಂದೆಗೆ ಕೊಟ್ಟು ನಂತರ ವಾಪಸ್ಸು ಪಡೆದಿರಾದರೆ ಮನಸ್ಸು ವ್ಯರ್ಥದ ಪರಿಶ್ರಮದಲ್ಲಿ ಹಾಕಿ ಬಿಡುತ್ತದೆ. ಈಗ ವ್ಯರ್ಥದ ಪರಿಶ್ರಮದಿಂದ ಬಿಡಿಸಿಕೊಳ್ಳಿ.

ಸ್ಲೋಗನ್:
ತಮ್ಮ ಪೂರ್ವಜ ಸ್ವರೂಪವನ್ನು ಸ್ಮೃತಿಯಲ್ಲಿಟ್ಟುಕೊಂಡು ಸರ್ವ ಆತ್ಮಗಳ ಮೇಲೆ ದಯೆ ತೋರಿಸಿರಿ.