19.11.23 Avyakt Bapdada
Kannada
Murli 03.04.96 Om Shanti Madhuban
“ಸೇವೆಗಳ ಜೊತೆ
ಜೊತೆಯಲ್ಲಿ ಬೇಹದ್ದಿನ ವೈರಾಗ್ಯ ವೃತ್ತಿಯ ಮೂಲಕ ಹಳೆಯ ಅಥವಾ ವ್ಯರ್ಥ ಸಂಸ್ಕಾರಗಳಿಂದ ಮುಕ್ತರಾಗಿರಿ”
ಇಂದು ಪಾರಲೌಕಿಕ ತಂದೆಯು
ನನ್ನ ದೇಹದ್ದಿನ ಸದಾ ಸಹಯೋಗಿ ಸಾಥಿಗಳನ್ನು ನೋಡುತ್ತಾ ಇದ್ದೇನೆ. ನಾಲ್ಕೂ ಕಡೆಯ ಸದಾ ಸಹಯೋಗಿ
ಮಕ್ಕಳು ಸದಾ ತಂದೆಯ ಹೃದಯದಲ್ಲಿ ಹೃದಯ ಸಿಂಹಾಸನಕ್ಕೆ ಅಧಿಕಾರಿಯಾಗಿದ್ದಾರೆ. ನಿರಾಕಾರ ತಂದೆಗೆ
ನನ್ನ ಅಕಾಲ ಸಿಂಹಾಸನವೂ ಇಲ್ಲ. ಆದರೆ ನಿಮಗೆ ಮಕ್ಕಳಿಗೆ ಎಷ್ಟು ಸಿಂಹಾಸನಗಳಿವೆ? ಬಾಪ್ದಾದಾರವರು
ಸಿ0ಹಾಸನದಲ್ಲಿ ಆಸೀನರಾಗಿರುವ ಮಕ್ಕಳನ್ನು ನೋಡಿ ಸದಾ ಹರ್ಷಿತರಾಗಿರುತ್ತಾರೆ. ಭೇಷ್ ನನ್ನ
ಸಿಂಹಾಸನಾರೂಢ ಮಕ್ಕಳೇ (ವಾಹ್ ಮೇರೆ, ತಮ್ಮ ನಶೀನ್ ಬಚ್ಚೇ). ಮಕ್ಕಳು ತಂದೆಯನ್ನು ನೋಡಿ
ಖುಷಿಯಾಗುತ್ತಾರೆ. ಏಕೆಂದರೆ ಪ್ರತಿಯೊಬ್ಬ ಮಗುವೂ ವಿಶೇಷ ಆತ್ಮ ಆಗಿದ್ದಾರೆ. ಕೊನೆಯ
ಸ್ಥಾನದವರಾಗಿದ್ದರೂ ಸಹ ಕೊನೆಯವರಾಗಿದ್ದರೂ ಸಹ ಕೋಟಿಗಳಲ್ಲಿ ಯಾರೋ ಒಬ್ಬೊಬ್ಬರಾದ ವಿಶೇಷ ಆತ್ಮರ
ಪಟ್ಟಿಯಲ್ಲಿ ಇದ್ದಾರೆ. ಆದ್ದರಿಂದ ಮಕ್ಕಳು ಒಬ್ಬೊಬ್ಬರನ್ನೂ ನೋಡಿ ತಂದೆಗೆ ಜಾಸ್ತಿ ಖುಷಿಯಾಗಿದೆಯೋ
ಅಥವಾ ನಿಮಗೆ ಇದೆಯೋ? (ಇಬ್ಬರಿಗೂ) ತಂದೆಗೆ ಎಷ್ಟೊಂದು ಮಕ್ಕಳಿದ್ದಾರೆ. ಎಷ್ಟು ಮಕ್ಕಳಿದ್ದಾರೋ
ಅಷ್ಟು ಖುಷಿಯಿದೆ. ಆದರೆ ನಿಮಗೆ ಕೇವಲ ಡಬ್ಬಲ್ (ಎರಡು) ಖುಷಿಯಿದೆಯಷ್ಟೇ. ನಿಮಗೆ ಪರಿವಾರದ ಖುಷಿಯೂ
ಇದೆ. ಆದರೆ ತಂದೆಯ ಖುಷಿಯು ಸದಾಕಾಲದ್ದಾಗಿದೆ. ಆದರೆ ನಿಮ್ಮ ಮಿಷಿಯು ಸದಾಕಾಲದ್ದಾಗಿದೆಯೋ ಅಥವಾ
ಯಾವಾಗಲಾದರೂ ಏರುಪೇರಾಗಿ ಬಿಡುತ್ತದೆಯೋ?
ಬಾಪ್ದಾದಾರವರು
ಬ್ರಾಹ್ಮಣ ಜೀವನದ ಶ್ವಾಸವೇ ಖುಷಿಯಾಗಿದೆ ಎಂಬುದನ್ನು ತಿಳಿದುಕೊಂಡಿದ್ದಾರೆ. ಖುಷಿಯು ಇಲ್ಲದಿದ್ದರೆ
ಅದು ಬ್ರಾಹ್ಮಣ ಜೀವನವಲ್ಲ. ಹಾಗೂ ಅದು ಅವಿನಾಶೀ ಋಷಿಯಾಗಿದೆ. ಆಗಾಗ ಇರುವುದಲ್ಲ. ಖುಷಿಯಂತೂ
ಖುಷಿಯಾಗಿದೆ. ಈದಿನ 50% ಖುಷಿಯಿದೆ. ನಾಳೆ 100% ಖುಷಿಯಿರುತ್ತದೆಯೆಂದರೆ ಜೀವನದ ಶ್ವಾಸವು
ಏರುಪೇರಾಗುತ್ತದೆಯೆಂದು ಹೇಳಬಹುದಲ್ಲವೇ. ಬಾಪ್ದಾದಾರವರು ಮುಂಚೆಯೂ ಸಹ ಏನು ತಿಳಿವಳಿಕೆ
ನೀಡಿದ್ದಾರೆಂದರೆ, ಶರೀರವೇ ಹೋಗಿ ಪಟ್ಟರೂ ಸಹ ಖುಷಿಯು ಮಾತ್ರ ಹೋಗಬಾರದು ಎಂದು. ಈ ಪಾಠವು ಪಕ್ಕಾ
ಆಗಿದೆಯೋ ಅಥವಾ ಸ್ವಲ್ಪ ಸ್ವಲ್ಪ ಕಚ್ಚಾ ಆಗಿದೆಯೋ? ಸದಾ ಅದರೆ ಬಗ್ಗೆ ಗಮನವಿದೆಯೇ? ಒಮ್ಮೊಮ್ಮೆ
ಖುಷಿಯಾಗಿ ಇರುವವರು ವಿವಾಗುವರು? ಸದ ಖುಷಿಯಲ್ಲಿ ಇರುವವರು ಪಾಸ್ ವಿತ್ ಆನರ್ (ಗೌರವಯುತವಾಗಿ
ತೇರ್ಗಡೆ) ಆಗುತ್ತಾರೆ. ಹಾಗೂ ಆಗಾಗ ಮಿಷಿಯಲ್ಲಿ ಇರುವವರು ಧರ್ಮರಾಜ ಪುರಿಯ ಮೂಲಕ ಹೋಗಬೇಕಾಗುತ್ತದೆ.
ಪಾಸ್ ವಿತ್ ಆನರ್ ಆಗುವವರು ಒಂದು ಸೆಕೆಂಡಿನಲ್ಲಿ ತಂದೆಯ ಜೊತೆಯಲ್ಲಿ ಹೋಗುವರು. ಧರ್ಮರಾಜ
ಪುರಿಯಲ್ಲಿ ನಿಲ್ಲುವುದಿಲ್ಲ. ಆದ್ದರಿಂದ ನೀವೆಲ್ಲರೂ ಯಾರಾಗಿದ್ದೀರಿ? ಜೊತೆಯಲ್ಲಿ
ಹೋಗುವವರಾಗಿದ್ದೀರೋ ಅಥವಾ ಧರ್ಮರಾಜಪುರಿಯಲ್ಲಿ ನಿಲ್ಲುವವರಾಗಿದ್ದೀರೋ? (ಜೊತೆಯಲ್ಲಿ ಹೋಗುವವರು)
ಅಂತಹ ಚಾರ್ಟ್ ಇದೆಯೇ? ಏಕೆಂದರೆ ವಿಶೇಷವಾಗಿ ಡೈಮಂಡ್ ಜೂಬಿಲಿಯ ವರ್ಷದಲ್ಲಿ ಬಾಪ್ದಾದಾರವರಿಗೆ
ಮಕ್ಕಳು ಪ್ರತಿಯೊಬ್ಬರ ಬಗ್ಗೆ ಏನು ಶುಭ ಆಶೆಯಿದೆ ಎನ್ನುವುದನ್ನಂತೂ ತಿಳಿದುಕೊಂಡಿದ್ದೀರಲ್ಲವೇ?
ಬಾಪ್ದಾದಾರವರು ಎಲ್ಲಾ
ಮಕ್ಕಳ ಚಾರ್ಟನ್ನು ನೋಡಿದೆವು. ಅವರಲ್ಲಿ ಏನು ನೋಡಿದರೆಂದರೆ ವರ್ತಮಾನ ಸಮಯದ ಅನುಗುಣವಾಗಿ ಒಂದು
ವಿಷಯದ ಬಗ್ಗೆ ಇನ್ನೂ ಅಧಿಕ ಗಮನವಿರಬೇಕು. ಹೇಗೆ ಸಮಯದಲ್ಲಿû ತುಂಬಾ ಅಕ್ಕರೆ-ಉತ್ಸಾಹದಿಂದ
ಮುನ್ನಡೆಯುತ್ತಾ ಇದ್ದೀರಿ. ಹಾಗೂ ಡೈಮಂಡ್ ಜೂಬಿಲಿಯಲ್ಲಿ ವಿಶೇಷವಾಗಿ ಸೇವೆಯ ಅಕ್ಕರೆ ಉತ್ಸಾಹ ಇದೆ.
ಇದರಲ್ಲಿ ಪಾಸಾಗಿದ್ದೀರಿ. ಪ್ರತಿಯೊಬ್ಬರೂ ಯಥಾ ಶಕ್ತಿ ಸೇವೆ ಮಾಡುತ್ತಾ ಇದ್ದಾರೆ ಹಾಗೂ ಮಾಡುತ್ತಾ
ಇರುವರು. ಆದರೆ ಈಗ ವಿಶೇಷವಾಗಿ ಏನು ಅಗತ್ಯವಿದೆ? ಸಮಯವು ಸಮೀಪವಾಗಿರುವುದರಿಂದ ಸಮೀಪತೆಯ
ಅನುಸಾರವಾಗಿ ಈಗ ಯಾವ ಸಮಯದ ಅಲೆಯು ಇರಬೇಕು? (ವೈರಾಗ್ಯದ ಅಲೆ) ಯಾವ ವೈರಾಗ್ಯ - ಮಿತಿಯಿರುವ
ವೈರಾಗ್ಯವೋ ಅಥವಾ ಬೇಹದ್ದಿನ (ಮಿತಿಯಿಲ್ಲದ) ವೈರಾಗ್ಯದ ಅಲೆಯೋ? ಎಷ್ಟು ಸೇವೆಯ ಅಕ್ಕರೆ
ಉತ್ಸಾಹವಿದೆಯೋ ಅಷ್ಟು ಸಮಯದ ಅವಶ್ಯಕತೆಯ ಅನುಸಾರವಾಗಿ ಸ್ವಸ್ಥಿತಿಯಲ್ಲಿ ಮಿತಿಯಿಲ್ಲದ ವೈರಾಗ್ಯವು
ಎಷ್ಟು ಇದೆ? ಏಕೆಂದರೆ ನಿಮ್ಮ ಸೇವೆಯ ಸಫಲತೆಯು ಆದಷ್ಟು ಬೇಗ ಪ್ರಜೆಗಳು ತಯಾರಾಗಿ ಬಿಡುವುದರಲ್ಲಿ
ಇದೆ. ಅದಕ್ಕಾಗಿ ಸೇವೆ ಮಾಡುತ್ತೀರಲ್ಲವೇ? ಆದ್ದರಿಂದ ಎಲ್ಲಿಯವರೆಗೆ ನಿಮಿತ್ತ ಆತ್ಮರಾದ ನಿಮ್ಮಲ್ಲಿ
ಮಿತಿಯಿಲ್ಲದ ವೈರಾಗ್ಯವೃತ್ತಿಯು ಇಲ್ಲವೋ ಅಲ್ಲಿಯವರೆಗೆ ಅನ್ಯ ಆತ್ಮರಲ್ಲಿಯೂ ವೈರಾಗ್ಯ ವೃತ್ತಿಯು
ಬರುವುದು ಸಾಧ್ಯವಾಗುವುದಿಲ್ಲ. ಹಾಗೂ ಎಲ್ಲಿಯವರೆಗೆ ವೈರಾಗ್ಯ ವೃತ್ತಿಯು ಇರುವುದಿಲ್ಲವೋ
ಅಲ್ಲಿಯವರೆಗೆ ತಂದೆಯ ಪರಿಚಯವು ಎಲ್ಲರಿಗೂ ದೊರೆಯಲೆಂದು ಏನು ಬಯಸುತ್ತೀರೋ ಅದು ದೊರೆಯಲು
ಸಾಧ್ಯವಾಗುವುದಿಲ್ಲ. ಬೇಹದ್ದಿನ ವೈರಾಗ್ಯವು ಸದ ಕಾಲದ ವೈರಾಗ್ಯವಾಗಿದೆ. ಒಂದುವೇಳೆ ಸಮಯದ
ಅನುಸಾರವಾಗಿ ಅಥವಾ ಪರಿಸ್ಥಿತಿಯ ಅನುಸಾರವಾಗಿ ವೈರಾಗ್ಯವು ಬಂದರೆ ಸಮಯವು ನಂಬರ್ಒನ್ ಆಗಿಬಿಟ್ಟಿತು
ಹಾಗೂ ನೀವು ನಂಬರ್ಟೂ (ಎರಡನೆಯವರು) ಆಗಿಬಿಟ್ಟರೆ. ಪರಿಸ್ಥಿತಿ ಅಥವಾ ಸಮಯವು ವೈರಾಗ್ಯವನ್ನು
ತಂದುಕೊಟ್ಟಿತು. ಪರಿಸ್ಥಿತಿಯು ಸಮಾಪ್ತಿಯಾದರೆ, ಸಮಯವು ಕಳೆದುಹೋದರೆ ವೈರಾಗ್ಯವೂ ಮಾಯವಾಗಿ
ಬಿಡುತ್ತದೆ. ಅದನ್ನು ಬೇಹದ್ದಿನ ವೈರಾಗ್ಯವೆಂದು ಕರೆಯುವಿರೋ ಅಥವಾ ಅಲ್ಪಕಾಲದ ಹದ್ದಿನ
ವೈರಾಗ್ಯವೆಂದು ಕರೆಯುವಿರೋ? ಈಗ ಬೇಹದ್ದಿನ ಸದಾಕಾಲದ ವೈರಾಗ್ಯದ ಅಗತ್ಯವಿದೆ. ಒಂದುವೇಳೆ
ವೈರಾಗ್ಯವು ಭಂಗವಾಗಿ ಬಿಟ್ಟರೆ ಅದರ ಮುಖ್ಯ ಕಾರಣವು ದೇಹಾಭಿಮಾನವಾಗಿದೆ. ಎಲ್ಲಿಯವರೆಗೆ
ದೇಹಾಭಿಮಾನದ ವೈರಾಗ್ಯವಿಲ್ಲವೋ ಅಲ್ಲಿಯವರೆಗೆ ಯಾವುದೇ ಆಸಕ್ತಿಯ ವೈರಾಗ್ಯವು ಸದಾಕಾಲದ್ದು
ಇರುವುದಿಲ್ಲ. ಅಲ್ಪ ಕಾಲದವರೆಗೆ ಇರುತ್ತದೆ, ಸಂಬಂಧದೊಂದಿಗೆ ವೈರಾಗ್ಯವಿರುವುದು ದೊಡ್ಡ
ಸಂಗತಿಯೇನಲ್ಲ. ಅದಂತೂ ಪ್ರಪಂಚದಲ್ಲಿಯೂ ಅನೇಕರಿಗೆ ಮನಃಪೂರ್ವಕವಾಗಿ ವೈರಾಗ್ಯವು ಬಂದು ಬಿಡುತ್ತದೆ.
ಆದರೆ ಇಲ್ಲಿ ದೇಹಾಭಿಮಾನದ ಭಿನ್ನ ಭಿನ್ನ ರೂಪಗಳೇನಿವೆಯೋ ಆ ಭಿನ್ನ ಭಿನ್ನ ರೂಪಗಳನ್ನಂತೂ
ತಿಳಿದುಕೊಂಡಿದ್ದೀರಲ್ಲವೇ? ದೇಹಾಭಿಮಾನದ ರೂಪಗಳು ಎಷ್ಟಿವೆ ಎನ್ನುವುದರ ವಿಸ್ತಾರವನ್ನಂತೂ
ತಿಳಿದುಕೊಂಡಿದ್ದೀರಿ. ಆದರೆ ಈ ಅನೇಕ ದೇಹಾಭಿಮಾನದ ರೂಪಗಳನ್ನು ತಿಳಿದುಕೊಂಡು ಬೇಹದ್ದಿನ ಸದಾಕಾಲದ
ವೈರಾಗ್ಯದಲ್ಲಿ ಇರಿ, ದೇಹ ಅಭಿಮಾನವು ದೇಹೀ ಅಭಿಮಾನದಲ್ಲಿ ಬದಲಾಗಿ ಬಿಡಲಿ, ಹೇಗೆ ದೇಹಾಭಿಮಾನವು
ಸ್ವಾಭಾವಿಕ ಆಗಿಬಿಟ್ಟಿತೋ ಹಾಗೆಯೇ ದೇಹೀ ಅಭಿಮಾನವು ಸ್ವಾಭಾವಿಕ - (ನ್ಯಾಚುರಲ್) ಆಗಿಬಿಡಬೇಕು.
ಏಕೆಂದರೆ ಪ್ರತಿಯೊಂದು ಆಸಕ್ತಿಯಲ್ಲಿಯೂ ಮೊದಲನೆಯ ಶಬ್ದವು ದೇಹವೇ ಬರುತ್ತದೆ. ಸಂಬಂಧವಾದರೂ
ದೇಹದ್ದೇ ಸಂಬಂಧಗಳಿವೆ, ಪದಾರ್ಥವಾದರೋ ದೇಹದ ಪದಾರ್ಥಗಳಾಗಿವೆ. ಹೀಗೆ ಮೂಲ ಆಧಾರವು
ದೇಹಾಭಿಮಾನವಾಗಿದೆ. ಎಲ್ಲಿಯವರೆಗೆ ಯಾವುದಾದರೂ ರೂಪದಲ್ಲಿ ದೇಹಾಭಿಮಾನವಿದೆಯೋ ಅಲ್ಲಿಯವರೆಗೆ
ವೈರಾಗ್ಯ ವೃತ್ತಿಯು ಇರುವುದು ಸಾಧ್ಯವಿಲ್ಲ. ಹಾಗೂ ಬಾಪ್ದಾದಾರವರು ಏನು ನೋಡಿದರೆಂದರೆ, ವರ್ತಮಾನ
ಸಮಯದಲ್ಲಿ ಏನು ದೇಹಾಭಿಮಾನದ ವಿಘ್ನವಿದೆಯೋ ಅದರ ಕಾರಣವು ಏನಾಗಿದೆಯೆಂದರೆ, ದೇಹದ ಹಳೆಯ
ಸಂಸ್ಕಾರಗಳೇನಿವೆಯೋ ಅವುಗಳೊಂದಿಗೆ ವೈರಾಗ್ಯವಿಲ್ಲ. ಮೊದಲು ದೇಹದ ಹಳೆಯ. ಸಂಸ್ಕಾರಗಳೊಂದಿಗೆ
ವೈರಾಗ್ಯವಿರಬೇಕು, ಸಂಸ್ಕಾರಗಳು ಸ್ಥಿತಿಯಿಂದ ಕೆಳಮಟ್ಟಕ್ಕೆ ತಂದುಬಿಡುತ್ತವೆ. ಸಂಸ್ಕಾರದ ಕಾರಣ
ಸೇವೆಯಲ್ಲಿ ಅಥವಾ ಸಂಬಂಧ ಸಂಪರ್ಕದಲ್ಲಿ ವಿಘ್ನಗಳು ಬರುತ್ತವೆ. ಹೀಗೆ ಫಲಿತಾಂಶ ರೂಪದಲ್ಲಿ ಏನು
ನೋಡಿದೆವೆಂದರೆ, ದೇಹದ ಹಳೆಯ ಸಂಸ್ಕಾರಗಳಿಂದ ಎಲ್ಲಿಯವರೆಗೆ ವೈರಾಗ್ಯವು ಬಂದಿಲ್ಲವೋ ಅಲ್ಲಿಯವರೆಗೆ
ಬೇಹದ್ದಿನ ವೈರಾಗ್ಯವು ಸದಾ ಇರುವುದಿಲ್ಲ. ಸಂಸ್ಕಾರಗಳು ಭಿನ್ನ ಭಿನ್ನ ರೂಪದಿಂದ ತಮ್ಮ ಕಡೆಗೆ
ಆಕರ್ಷಿತರನ್ನಾಗಿ ಮಾಡಿಕೊಂಡು ಬಿಡುತ್ತವೆ. ಹೀಗೆ ಎಲ್ಲಿ ಯಾವುದರ ಕಡೆಗಾದರೂ ಆಕರ್ಷಣೆ ಇದೆಯೋ
ಅಲ್ಲಿ ವೈರಾಗ್ಯವಿರುವುದು ಸಾಧ್ಯವಿಲ್ಲ. ಆದ್ದರಿಂದ ಏನು ಚೆಕ್ (ಪರಿಶೀಲನೆ) ಮಾಡಿಕೊಳ್ಳಬೇಕೆಂದರೆ
ನಾನು ನನ್ನ ಹಳೆಯ ಅಥವಾ ವ್ಯರ್ಥ ಸಂಸ್ಕಾರಗಳಿಂದ ಮುಕ್ತನಾಗಿದ್ದೇನೆಯೇ ಎಂಬುದನ್ನು, ವೈರಾಗ್ಯ
ವೃತ್ತಿಯಲ್ಲಿ ಇರಬೇಕೆಂದು ಎಷ್ಟೇ ಪ್ರಯತ್ನ ಮಾಡಿದರೂ ಸಹ ಸಂಸ್ಕಾರಗಳು ಒಬ್ಬೊಬ್ಬರ ಬಳಿ ಅಥವಾ
ಮೆಜಾರಿಟಿ (ಅಧಿಕ ಸಂಖ್ಯೆಯ) ಮಕ್ಕಳ ಬಳಿ ಯಾವುದಾದರೊಂದು ರೂಪದಲ್ಲಿ ಹೇಗೆ : ಪ್ರಬಲವಾಗಿವೆಯೆಂದರೆ,
ತಮ್ಮ ಕಡೆಗೆ ಮಾಡುತ್ತವೆ. ಆದ್ದರಿಂದ ಮೊದಲು ಹಳೆಯ ಆಕರ್ಷಣೆ ಸಂಸ್ಕಾರಗಳಿಂದ ವೈರಾಗ್ಯವಿರಬೇಕು.
ಸಂಸ್ಕಾರಗಳು ನಿಮಗೆ ಇಷ್ಟವಿಲ್ಲದಿದ್ದರೂ ಪ್ರಕಟವಾಗಿ ಬಿಡುತ್ತವೆ. ಏಕೆ? ನೀವು ಬಯಸುವುದಿಲ್ಲ.
ಆದರೆ ಸೂಕ್ಷ್ಮದಲ್ಲಿ ಸಂಸ್ಕಾರಗಳನ್ನು ನೀವು ಭಸ್ಮ ಮಾಡಿಲ್ಲ. ಎಲ್ಲಿಯಾದರೂ ಅಂಶ ಮಾತ್ರ
ಉಳಿದುಬಿಟ್ಟಿದೆ. ಅಡಗಿಕೊಂಡಿವೆ. ಆವು ಸಮಯದಲ್ಲಿ ನೀವು ಬಯಸದಿದ್ದರೂ ಪ್ರಕಟವಾಗಿ ಬಿಡುತ್ತವೆ.
ಆಮೇಲೆ ಏನು ಹೇಳುತ್ತೀರೆಂದರೆ - ನಾನು ಇದನ್ನು ಬಯಸಲಿಲ್ಲ. ಆದರೆ ಏನು ಮಾಡುವುದು ಆಗಿಹೋಯಿತು, ಆಗಿ
ಹೋಗುತ್ತದೆ .... ಇದನ್ನು ದೇಹಾಭಿಮಾನವು ಹೇಳುತ್ತದೆಯೋ ಅಥವಾ ದೇಹೀ ಅಭಿಮಾನವೋ?
ಹೀಗೆ ಬಾಪ್ದಾದಾರವರು ಏನು
ನೋಡಿದರೆಂದರೆ ಹಳೆಯ ಸಂಸ್ಕಾರಗಳೊಂದಿಗೆ ವೈರಾಗ್ಯ ವೃತ್ತಿಯಲ್ಲಿ ದೌರ್ಬಲ್ಯವಿದೆ, ಕಡಿಮೆಯಿದೆ.
ಹಳೆಯ ಸಂಸ್ಕಾರಗಳನ್ನು ಸಮಾಪ್ತಿ ಮಾಡಿದ್ದೀರಿ, ಆದರೆ ಅಂಶ ಮಾತವೂ ಇರಬಾರದು. ಹೀಗೆ ಬೇರು ಸಹಿತ
ನಿರ್ಮೂಲ ಮಾಡಿಲ್ಲ. ಹಾಗೂ ಎಲ್ಲಿ ಅಂಶವಿರುತ್ತದೆಯೋ ಅಲ್ಲಿ ವಂಶವಂತೂ ಬೆಳೆಯುವುದಲ್ಲವೇ, ಈ ದಿನ
ಅಂಶವಿದೆ. ಸಮಯದ ಅನುಸಾರವಾಗಿ ಅಂಶವು ವಂಶದ ರೂಪವನ್ನು ತಳೆದು ಬಿಡುತ್ತದೆ. ಪರವಶರನ್ನಾಗಿ
ಮಾಡಿಬಿಡುತ್ತದೆ. ಹೇಳುವುದೇನೋ ಎಲ್ಲರೂ ಏನು ಹೇಳುತ್ತಾರೆ0ದರೆ, ಹೇಗೆ ತ0ದರು
ಜ್ಞಾನಪೂರ್ಣರಾಗಿದ್ದಾರೋ ಹಾಗೆಯೇ ನಾವೂ ಸಹ ಜ್ಞಾನಪೂರ್ಣರಾಗಿದ್ದೇವೆ ಎಂದು. ಆದರೆ ಯಾವಾಗ
ಸಂಸ್ಕಾರದ ದಾಳಿಯಾಗುತ್ತದೆಯೋ ಆಗ ಜ್ಞಾನಪೂರ್ಣರಾಗಿದ್ದಾರೆ ಅಥವಾ ಜ್ಞಾನದಲ್ಲಿ ಪೊಳ್ಳಾಗುತ್ತೀರೋ?
ಏನಾಗುತ್ತೀರಿ? ಜ್ಞಾನಪೂರ್ಣರಾಗುವುದಕ್ಕೆ ಬದಲಾಗಿ, ಜ್ಞಾನದಲ್ಲಿ ಪೊಳ್ಳಾಗಿ ಬಿಡುತ್ತೀರಿ.
ಹೇಳುತ್ತಾರೆಂದರೆ ಆ ಸಮಯದಲ್ಲಿ ಯಾರೊಂದಿಗಾದರೂ ಕೇಳಿದರೆ ಏನು ಹೌದು ನಾನೂ ತಿಳಿದುಕೊಂಡಿದ್ದೇನೆ.
ಮಾಡಬಾರದು. ಆದರೆ ಆಗಿಬಿಡುತ್ತದೆ... ಎಂದು ಹೇಳುತ್ತಾರೆ. ಆದ್ದರಿಂದ ಅವರು ಜ್ಞಾನಪೂರ್ಣ ಆದರೋ
ಅಥವಾ ಜ್ಞಾನವನ್ನು ಅರ್ಜನ ಮಾಡುವವರಾದರೆ? ಜ್ಞಾನಪೂರ್ಣರಾಗಿರುತ್ತಾರೋ ಅವರ ಮೇಲೆ ಯಾವುದೇ
ಸಂಸ್ಕಾರವಾಗಲೀ ಸಂಬಂಧವಾಗಲೀ, ಪದಾರ್ಥವಾಗಲೀ ಆಕರ್ಷಣೆ ಸಾಧ್ಯವಾಗುವುದಿಲ್ಲ. ಮಾಡಲು ಯಾರು.
ನೀವು ಡೈಮಂಡ್ ಜೂಬಿಲಿ
ಆಚರಣೆ ಮಾಡುತ್ತಿದ್ದೀರಿ, ಡೈಮಂಡ್ ಜೂಲಿಯ ಅರ್ಥವೇನಾಗಿದೆಯೆಂದರೆ, ಡೈಮಂಡ್ (ವಜ್ರ) ಆಗುವುದು
ಅರ್ಥಾತ್ ಬೇಹದಿನ ವೈರಾಗಿಯಾಗುವುದು. ಎಷ್ಟು ಸೇವೆಯ ಸಲುವಾಗಿ ಆಕ್ಕರೆಯಿದೆಯೋ ಅಷ್ಟು ವೈರಾಗ್ಯ
ವೃತ್ತಿಯ ಬಗ್ಗೆ ಗಮನವಿಲ್ಲ. ಹುಡುಗಾಟಿಕೆಯಿದೆ, ಅಜಾಗರೂಕತೆಯಿದೆ. ಇದರಲ್ಲಿ ನಡೆಯುತ್ತದೆ....
ಆಗುತ್ತದೆ.... ಆಗಿ ಬಿಡುವುದು.... ಸಮಯವು ಬಂದಾಗ ಸರಿಹೋಗಿ ಬಿಡುವುದು.... ಎನ್ನುವ ಸಂಕಲ್ಪವಿದೆ.
ತಂದೆಯು ಶಿಕ್ಷಕ ಆಗಿದ್ದಾರೋ? ಯಾರು ನಿಮ್ಮ ಶಿಕ್ಷಕರಾಗಿದ್ದಾರೆ? ಒಂದುವೇಳೆ ಸಮಯ ಬಂದಾಗ ನೀವು
ಪರಿವರ್ತನೆ ಮಾಡಿಕೊಂಡರೆ, ನಿಮ್ಮ ಶಿಕ್ಷಕನು ಸಮಯವಾಗಿ ಬಿಟ್ಟಿತು. ಹೀಗೆ ನಿಮ್ಮ ರಚನೆಯಾಗಿರುವ
ಸಮಯವು ನಿಮಗೆ ಶಿಕ್ಷಕನಾಗುವುದು ಸರಿಯೇನು? ಯಾವಾಗ ಇಂತಹ ಪರಿಸ್ಥಿತಿಯು ಬರುತ್ತದೆಯೋ ಆಗ ಏನು
ಹೇಳುತ್ತೀರಿ? ಸಮಯ ಬಂದಾಗ ಸರಿ ಮಾಡಿಕೊಂಡು ಬಿಡುವೆನು, ಆಗಿಬಿಡುವುದು ಎಂದು ಹೇಳುತ್ತೀರಿ. ತಂದೆಗೂ
ಸಹ ಮಕ್ಕಳು ಏನು ಆಶ್ವಾಸನೆ ನೀಡುತ್ತಾರೆಂದರೆ - ನೀವು ಚಿಂತೆ ಮಾಡಬೇಡಿರಿ, ಆಗಿಬಿಡುವುದು ಎಂದು,
ಸಮಯಕ್ಕೆ ಸರಿಯಾಗಿ ಸಂಪೂರ್ಣ ಮುನ್ನಡೆದು ಬಿಡುವೆನು. ಹೀಗೆ ಸಮಯವನ್ನು ನಿಮ್ಮ ಶಿಕ್ಷಕನನ್ನಾಗಿ
ಮಾಡಿಕೊಳ್ಳುವುದು ಮಾಸ್ಟರ್ ರಚನೆಕಾರರಾದ ನಿಮಗೆ ಶೋಭಿಸುತ್ತದೆಯೋ? ಇದು ಒಳಿತೆನಿಸುತ್ತದೆಯೇ?
ಸಮಯವು ರಚನೆಯಾಗಿದೆ. ನೀವು ಮಾಸ್ಟರ್ ರಚನೆಕಾರರಾಗಿದ್ದೀರಿ. ಆದ್ದರಿಂದ ರಚನೆಯು ಮಾಸ್ಟರ್
ರಚನಕಾರನ ಶಿಕ್ಷಕನಾಗುವುದು ಮಾಸ್ಟರ್ ರಚನೆಕಾರನಿಗೆ ಶೋಭಿಸುವುದಿಲ್ಲ. ಆದ್ದರಿಂದ ಈಗ
ಬಾಪ್ದಾದಾರವರು ಏನು ಸಮಯವನ್ನು ಕೊಟ್ಟಿದ್ದೇವೆಯೋ ಅದರಲ್ಲಿ ವೈರಾಗ್ಯ ವೃತ್ತಿಯನ್ನು ಪ್ರಕಟ ಮಾಡಿರಿ.
ಏಕೆಂದರೆ ಸೇವೆಯ ಎಳೆದಾಟದಲ್ಲಿ ವೈರಾಗ್ಯ ವೃತ್ತಿಯು ಸಮಾಪ್ತಿಯಾಗಿ ಬಿಡುತ್ತದೆ. ವಾಸ್ತವವಾಗಿ
ಸೇವೆಯಲ್ಲಿ ಖುಷಿಯೂ ದೊರೆಯುತ್ತದೆ. ಶಕ್ತಿಯೂ ದೊರೆಯುತ್ತದೆ ಹಾಗೂ ಪ್ರತ್ಯಕ್ಷ ಫಲವೂ ದೊರೆಯುತ್ತದೆ.
ಆದರೆ ಬೇಹದ್ದಿನ ವೈರಾಗ್ಯ ಸಮಾಪ್ತಿಯೂ ಸೇವೆಯಲ್ಲಿಯೇ ಆಗುತ್ತದೆ. ಆದ್ದರಿಂದ ಈಗ ನಿಮ್ಮ
ಆಂತರ್ಯದಲ್ಲಿ ಈ ವೈರಾಗ್ಯ ವೃತ್ತಿಯನ್ನು ಎಚ್ಚರಗೊಳಿಸಿರಿ. ಕಲ್ಲದ ಹಿಂದೆಯೂ ಸಹ ನೀವೇ ಆಗಿದ್ದೀರೋ
ಅಥವಾ ಅನ್ಯರು ಯಾರೋ ಆಗಿದ್ದರೋ? ನೀವೇ ಆಗಿದ್ದೀರೋ? ನೀವೇ ಆಗಿದ್ದಿರಲ್ಲವೇ. ಮಿತಿಯಿಲ್ಲದ
ವೈರಾಗ್ಯ ವೃತ್ತಿಯು ಕೇವಲ ಅಡಗಿಕೊಂಡಿದೆ. ಅದನ್ನು ಪ್ರಕಟಗೊಳಿಸಿರಿ. ಹೇಗೆ ಸೇವೆಯ ಪ್ಲಾನನ್ನು (ಯೋಜನೆಯನ್ನು)
ಕಾರ್ಯರೂಪದಲ್ಲಿ (ಪ್ರಾಕ್ಟಿಕಲ್ನಲ್ಲಿ) ಪ್ರಕಟ ಮಾಡುತ್ತೀರಿ. ಆಗ ಸಫಲತೆಯು ದೊರೆಯುತ್ತದೆಯಲ್ಲವೇ.
ಹಾಗೆಯೇ ಈಗ ಬೇಹದ್ದಿನ ವೈರಾಗ್ಯ ವೃತ್ತಿಯನ್ನು ಪ್ರಕಟ ಮಾಡಿರಿ. ಎಷ್ಟೇ ಸಾಧನಗಳು
ಪ್ರಾಪ್ತಿಯಿರಬಹುದು. ಹಾಗೂ ನಿಮಗೆ ದಿನ ಪ್ರತಿದಿನವೂ ಸಾಧನೆಗಳು ಅಧಿಕವಾಗಿಯೇ ದೊರೆಯಲಿದೆ. ಆದರೆ
ಬೇಹದ್ದಿನ ವೈರಾಗ್ಯ ವೃತ್ತಿಯ ಸಾಧನೆಯು ಅಡಗಿ ಹೋಗಬಾರದು, ಪ್ರಕಟವಾಗಲಿ, ಸಾಧನೆಗಳು ಹಾಗೂ ಸಾಧನೆಯ
ಬ್ಯಾಲೆನ್ಸ್ (ಸಮತೋಲನ) ಇರಲಿ. ಏಕೆಂದರೆ, ಮುಂದ ಹೋದಂತೆ ಪ್ರಕೃತಿಯು ನಿಮ್ಮ ದಾಸಿಯಾಗುವುದು.
ಸತ್ಕಾರವು ದೊರೆಯುವುದು, ಸ್ವಮಾನವು ದೊರೆಯುವುದು, ಆದರೆ ಎಲ್ಲವೂ ಇದ್ದರ ವೈರಾಗ್ಯ ವೃತ್ತಿಯು
ಕಡಿಮೆಯಾಗಬಾರದು, ಹೀಗೆ ದೇಹನ ವೈರಾಗ್ಯವೃತ್ತಿಯ ವಾಯುಮಂಡಲವನ್ನು ಸ್ವಯಂ ನಿಮ್ಮಲ್ಲಿ ಅನುಭವ
ಮಾಡುತ್ತೀರೋ ಅಥವಾ ಸೇವೆಯಲ್ಲಿ ಬಿಜಿಯಾಗಿ (ವ್ಯಸ್ತರಾಗಿ) ಬಿಟ್ಟಿದ್ದೀರೋ? ಹೇಗೆ ಪ್ರಪಂಚದ ಜನರಿಗೆ
ಸೇವೆಯ ಪ್ರಭಾವವು ಗೋಚರವಾಗುತ್ತದೆಯಲ್ಲವೇ. ಹಾಗೆ ಬೇಹದ್ದಿನ ವೈರಾಗ್ಯ ವೃತ್ತಿಯ ಪ್ರಭಾವವು
ಕಂಡುಬರಲಿ, ಆದಿಯಲ್ಲಿ ನಿಮ್ಮೆಲ್ಲರ ಸ್ಥಿತಿಯು ಏನಾಗಿತ್ತು? ನೀವು ಪಾಕೀಸ್ತಾನದಲ್ಲಿ ಇದ್ದಾಗ
ಸೇವೆಯು ಇರಲಿಲ್ಲ. ಸಾಧನಗಳು ಇದ್ದವು. ಆದರೆ ದೇಹದ್ದಿನ ವೈರಾಗ್ಯ ವೃತ್ತಿಯ ವಾಯುಮಂಡಲವು
ಸೇವೆಯನ್ನು ವೃದ್ಧಿ ಮಾಡಿತು. ಆದ್ದರಿಂದ ಯಾರು ಯಾರು ಡೈಮಂಡ್ ಜೂಬಿಲಿಯವರು ಇದ್ದಾರೋ ಅವರಲ್ಲಿ ಆದಿ
ಸಂಸ್ಕಾರಗಳು ಇವೆ. ಈಗ ಸುಪ್ತವಾಗಿ (ಮರ್ಜ್) ಬಿಟ್ಟಿವೆ. ಈಗ ಪುನಃ ವೃತ್ತಿಯನ್ನು (ಎಮರ್ಜ್)
ಪ್ರಕಟ ಮಾಡಿರಿ, ಆದಿರತ್ನಗಳ ಬೇಹದ್ದಿನ ವೈರಾಗ್ಯ ವೃತ್ತಿಯು ಸ್ಥಾಪನೆ ಮಾಡಿತು. ಈಗ ಹೊಸ ಪ್ರಪಂಚದ
ಸ್ಥಾಪನೆಯ ಸಲುವಾಗಿ ಪುನಃ ಅದೇ ವೃತ್ತಿ, ಅದೇ ವಾಯುಮಂಡಲವನ್ನು (ಎಮರ್ಶೆ) ಪ್ರಕಟ ಮಾಡಿರಿ. ಏನು
ಅಗತ್ಯವಿದೆ ಎಂಬುದನ್ನು ಕೇಳಿದಿರಾ?
ಸಾಧನಗಳೇ ಇಲ್ಲದಿದ್ದರೆ,
ನನಗೆ ವೈರಾಗ್ಯವೃತ್ತಿಯಿದೆ ಎಂದು ನೀವು ಹೇಳಿದರೆ ಯಾರು ನಂಬುವರು? ಸಾಧನಗಳು ಇರಬೇಕು ಹಾಗೂ
ವೈರಾಗ್ಯವು ಇರಬೇಕು. ಮೊದಲಿನ ಸಾಧನಗಳು ಹಾಗೂ ಈಗಿನ ಸಾಧನಗಳಲ್ಲಿ ಎಷ್ಟು ಅಂತರವಿದೆ? ಸಾಧನೆಯು
ಅಡಗಿಹೋಗಿ ಬಿಟ್ಟಿದೆ. ಹಾಗೂ ಸಾಧನಗಳು ಪ್ರತ್ಯಕ್ಷವಾಗಿ ಬಿಟ್ಟಿವೆ. ಒಳ್ಳೆಯದಾಯಿತು. ಸಾಧನಗಳನ್ನು
ವಿಶಾಲ ಹೃದಯದಿಂದ ಉಪಯೋಗ ಮಾಡಿಕೊಳ್ಳಿರಿ. ಏಕೆಂದರೆ ಸಾಧನಗಳು ನಿಮ್ಮ ಸಲುವಾಗಿಯೇ ಇವೆ. ಆದರೆ
ಸಾಧನೆಯನ್ನು (ಮರ್ಜ್) ಅಡಗಿಸಬೇಡಿರಿ. ಎರಡರ ಬ್ಯಾಲೆನ್ಸ್ ಪೂರ್ತಿ ಇರಬೇಕು. ಹೇಗೆ ಕಮಲಪುಷ್ಪ
ಸಮಾನ ಆಗಿರಿ ಎಂದು ಪ್ರಪಂಚದ ಜನರಿಗೆ ನೀವು ಹೇಳುತ್ತೀರಿ. ಹಾಗೆಯೇ ಸಾಧನಗಳು ಇದ್ದರೂ ನೀವು
ಕಮಲಪುಷ್ಪ ಸಮಾನ ಆಗಿರಿ. ಸಾಧನಗಳು ಕೆಟ್ಟವಲ್ಲ. ಸಾಧನಗಳಂತೂ ನಿಮ್ಮ ಕರ್ಮದ ಯೋಗದ ಫಲವಾಗಿವೆ. ಆದರೆ
ವೃತ್ತಿಯು ಹೇಗಿರಬೇಕು. ಸಾಧನಗಳ ಪ್ರವೃತ್ತಿಯಲ್ಲಿ ಸಾಧನೆಗಳ ವಶರಾಗಿ ಆಸಕ್ತರಾಗಿ ಬಿಡುವುದಿಲ್ಲ
ತಾನೇ? ಕಮಲಪುಷ್ಪ ಸಮಾನ ಅನಾಸಕ್ತ ಹಾಗೂ ತಂದೆಗೆ ಪ್ರಿಯರಾಗಬೇಕು. ಸಾಧನಗಳನ್ನು ಬಳಸಿಕೊಳ್ಳುತ್ತಾ
ಅವುಗಳ ಪ್ರಭಾವದಲ್ಲಿ ಬರಬಾರದು. ಅನಾಸಕ್ತರಾಗಬೇಕು. ಸಾಧನಗಳು ಬೇಹದ್ದಿನ ವೈರಾಗ್ಯ ವೃತ್ತಿಯನ್ನು
ಮರ್ಜ್ ಮಾಡಬಾರದು (ಅಡಗಿಸಬಾರದು). ಈಗ ವಿಶ್ವವು ಅತಿಯಲ್ಲಿ ಹೋಗುತ್ತಾ ಇರುವುದರಿಂದ ಈಗ ಏನು
ಅವಶ್ಯಕತೆಯಿದೆಯೆಂದರೆ ಸತ್ಯವಾದ ವೈರಾಗ್ಯ ವೃತ್ತಿಯದು. ಹಾಗೂ ಆ ವಾಯುಮಂಡಲವನ್ನು ನಿರ್ಮಾಣ
ಮಾಡುವವರು ನೀವಾಗಿದ್ದೀರಿ. ಮೊದಲು ನಿಮ್ಮಲ್ಲಿ ಹಾಗೂ ಆಮೇಲೆ ವಿಶ್ವದಲ್ಲಿ ಆ ವಾಯುಮಂಡಲವನ್ನು
ನಿರ್ಮಾಣ ಮಾಡಿರಿ.
ಹಾಗಾದರೆ ಡೈಮಂಡ್
ಜೂಬಿಲಿಯವರು ಏನು ಮಾಡುವಿರಿ? ಬೇಹದ್ದಿನ ವಾಯುಮಂಡಲದ ಅಲೆಯನ್ನು ಪ್ರಸಾರ ಮಾಡುವಿರಲ್ಲವೇ? ನೀವಂತೂ
ಅನುಭವಿಯಾಗಿದ್ದೀರಿ. ಪ್ರಾರಂಭದ ಅನುಭವ ಇದೆಯಲ್ಲವೇ. ಸರ್ವಸ್ವವೂ ಇತ್ತು. ದೇಶೀ ತುಪ್ಪವನ್ನು
ತಿನ್ನಿರೆಂದರೆ ಎಷ್ಟು ತಿನ್ನಲು ಸಾಧ್ಯವಿದೆಯೋ ಅಷ್ಟೂ ತಿನ್ನಬಹುದಾಗಿತ್ತು. ಆದರೂ ಸಹ ಬೇಹದಿನ
ವೈರಾಗ್ಯ ವೃತ್ತಿಯು ಇತ್ತು. ಪ್ರಪಂಚದ ಜನರೇನೋ ಶುದ್ಧ ತುಪ್ಪ ತಿನ್ನುತ್ತಾರೆ. ಆದರೆ ನೀವು
ಕುಡಿಯುತ್ತಿದ್ದೀರಿ. ತುಪ್ಪದ ನದಿಗಳನ್ನು ನೋಡಿದಿರಿ. ಆದ್ದರಿಂದ ಡೈಮಂಡ್ ಜೂಬಿಲಿಯವರು ವಿಶೇಷ
ಕಾರ್ಯವನ್ನು ಮಾಡಿರಿ - ಪರಸ್ಪರರಲ್ಲಿ ಒಟ್ಟಿಗೆ ಸೇರಿದ್ದೀರಿ. ಆದ್ದರಿಂದ ವಿಚಾರ ವಿನಿಮಯ (ರೂಪ್
ರಿಹಾನ್) ಮಾಡಿಕೊಳ್ಳಿರಿ. ಹೇಗೆ ಸೇವೆಯ ಬಗ್ಗೆ ಮೀಟಿಂಗ್ ಮಾಡುತ್ತೀರೋ ಹಾಗೆಯೇ ಇದರ ಮೀಟಿಂಗ್
ಮಾಡಿರಿ. ಬಾಪ್ದಾದಾರವರು ಏನು ಹೇಳುತಾರೋ, ಬಯಸುತ್ತಾರೋ - ಒಂದು ಸೆಕೆಂಡಿನಲ್ಲಿ ಅಶರೀರಿಯಾಗಿ ಬಿಡಿ
ಎಂದು. ಅದರ ಅಸ್ತಿಭಾರವು ಈ ಬೇಹದ್ದಿನ ವೈರಾಗ್ಯ ವೃತ್ತಿ ಆಗಿದೆ. ಇಲ್ಲದಿದ್ದರೆ ನೀವು ಎಷ್ಟೇ
ಪ್ರಯತ್ನ ಮಾಡಿದರೂ ಒಂದು ಸೆಕೆಂಡಿನಲ್ಲಿ ಅಶರೀರಿಯಾಗಲು ಸಾಧ್ಯವಾಗುವುದಿಲ್ಲ. ಯುದ್ಧದಲ್ಲಿಯೇ
ತೊಡಗಿರುತ್ತೀರಿ. ಆದರೆ ಎಲ್ಲಿ ವೈರಾಗ್ಯವಿದೆಯೋ, ಈ ವೈರಾಗ್ಯವೇ ಯೋಗ್ಯ ಭೂಮಿಯಾಗಿದೆ. ಇದರಲ್ಲಿ
ಏನು ಬೀಜವನ್ನು ಬಿತ್ತುತ್ತೀರೋ ಅದರ ಫಲವು ತಕ್ಷಣವೇ ದೊರೆಯುವುದು, ಹಾಗಾದರೆ ಏನು ಮಾಡಬೇಕು?
ಎಲ್ಲರಿಗೂ ಏನು ಇಚ್ಛೆ ಮೂಡಬೇಕೆಂದರೆ, ನಾವೂ ಸಹ ಈಗ ವೈರಾಗ್ಯ ವೃತ್ತಿಯಲ್ಲಿ ಹೋಗಬೇಕು ಎಂದು.
ಒಳ್ಳೆಯದು, ಏನು ಮಾಡಬೇಕೆಂದು ತಿಳಿದುಕೊಂಡಿದ್ದೀರಾ? ಸಹಜವಾಗಿದೆಯೋ ಅಥವಾ ಕಷ್ಟವಾಗಿದೆಯೋ? ಅಲ್ಪ
ಸ್ವಲ್ಪ ಆಕರ್ಷಣೆಯಂತೂ ಆಗುವುದೋ ಅಥವಾ ಇಲ್ಲವೋ? ಸಾಧನಗಳು ತನ್ನ ಕಡೆಗೆ ಆಕರ್ಷಣೆ ಮಾಡುವುದಿಲ್ಲವೇ?
ಈಗ ಏನು
ಅಭ್ಯಾಸವಾಗಬೇಕೆಂದರೆ - ಯಾವಾಗ ಬೇಕಾದರೆ ಆಗ ಎಲ್ಲಿ ಬೇಕಾದರೆ ಅಲ್ಲಿ, ಎಂತಹ ಸ್ಥಿತಿಯು ಬೇಕಾದರೆ
ಅಂತಹ ಸ್ಥಿತಿಯಲ್ಲಿ ಒಂದು ಸೆಕೆಂಡ್ನಲ್ಲಿ ಸ್ಥಿತವಾಗಿ ಬಿಡುವುದು ಸಾಧ್ಯವಾಗಬೇಕು. ಸೇವೆಯಲ್ಲಿ
ಬರಬೇಕೆಂದರೆ ಸೇವೆಯಲ್ಲಿ ಬರಬೇಕು. ಸೇವೆಯಿಂದ ದೂರವಾಗಬೇಕೆಂದರೆ, ಒಂದು ಸೆಕೆಂಡಿನಲ್ಲಿ
ಅನಾಸಕ್ತರಾಗಿಬಿಡಬೇಕು, ಸೇವೆಯು ನಮ್ಮನ್ನು ಆಕರ್ಷಿಸಬಾರದು. ಸೇವೆಯನ್ನು ಮಾಡದೆ ಇರಲು
ಸಾಧ್ಯವಿಲ್ಲ ಎನ್ನುವಂತಾಗಬಾರದು. ಯಾವಾಗ ಬೇಕಾದರೆ ಆಗ, ಹೇಗೆ ಬೇಕಾದರೆ ಹಾಗೆ ಆ ಸ್ಥಿತಿಯಲ್ಲಿ
ಸ್ಥಿತ ಆಗುವ ವಿಲ್ಪವರ್ (ಸಂಕಲ್ಪಶಕ್ತಿ, ಮನೋಬಲ) ಇರಬೇಕು. ವಿಲ್ಪವರ್ ಇದೆಯೇ? ನಿಲ್ಲಿಸಿ ಎಂದರೆ
ನಿಂತು ಹೋಗಬೇಕು. ನೀವು ಫುಲ್ ಸ್ಟಾಪ್ ಹಾಕಿದರೆ, ಕ್ವೆಶ್ಚನ್ಮಾರ್ಕ್ (ಪ್ರಶ್ನಾರ್ಥಕ ಚಿಹ್ನೆ)
ಬಿದ್ದು ಬಿಡಬಾರದು. ಫುಲ್ ಸ್ಟಾಪ್ ಆಗಿಬಿಡಬೇಕು. ಕೇವಲ ಸ್ಟಾಪ್ ಕೂಡ ಅಲ್ಲ ಫುಲ್ ಸ್ಟಾಪ್ ಆಗಬೇಕು.
ಏನು ಬೇಕೋ ಅದನ್ನು ಕಾರ್ಯರೂಪದಲ್ಲಿ ಮಾಡಲು ಸಾಧ್ಯವಾಗಬೇಕು. ಬಯಸುತ್ತೇವೆ ಆದರೆ ಆಗುವುದು
ಕಷ್ಟವೆಂದು ಹೇಳಿದರೆ ಅದನ್ನು ಏನೆಂದು ಕರೆಯುವಿರಿ. ವಿಲ್ಪವರ್ ಇದೆಯೆಂದು ಹೇಳುವಿರೋ ಅಥವಾ
ಶಕ್ತಿಯಿದೆಯೆಂದು ಹೇಳುವಿರೋ? ವ್ಯರ್ಥದ ಸಮಾಪ್ತಿಯಾಗಬೇಕೆಂದು ಸಂಕಲ್ಪ ಮಾಡಿದ ಕೂಡಲೇ ಒಂದು
ಸೆಕೆಂಡಿನಲ್ಲಿ ಸಮಾಪ್ತಿಯಾಗಿ ಬಿಡಬೇಕು.
ಬಾಪ್ದಾದಾರವರು
ಹೇಳಿದರವಲ್ಲವೇ, ಅನೇಕ ಮಕ್ಕಳು ಹೇಳುತ್ತಾರೆ - ನಾನು ಯೋಗದಲ್ಲಿ ಕುಳಿತುಕೊಳ್ಳುತ್ತೇನೆ. ಆದರೆ
ಯೋಗಕ್ಕೆ ಬದಲಾಗಿ ಯುದ್ಧದಲ್ಲಿ ನಿರತರಾಗಿರುತ್ತೇವೆ ಎಂದು. ಯೋಗಿಯಾಗುವುದಿಲ್ಲ. ಯೋಧರಾಗುತ್ತಾರೆ.
ಹೀಗೆ ಯುದ್ಧ ಮಾಡುವ ಸಂಸ್ಕಾರವು ಒಂದುವೇಳೆ ಬಹಳಕಾಲ ಇದ್ದರೆ ಏನಾಗುವರು? ಸೂರ್ಯವಂಶೀಯರು ಆಗುವರೋ
ಅಥವಾ ಚಂದ್ರವಂಶೀಯರು ಆಗುವರೋ? ಸಂಕಲ್ಪ ಮಾಡುತ್ತಲೇ ಆಗಿಬಿಡಬೇಕು. ಸಂಕಲ್ಪ ಮಾಡುವುದು ಹಾಗೂ
ಆಗುವುದು ಒಂದು ಸೆಕೆಂಡಿನ ಕಾರ್ಯವಾಗಿದೆ. ಇದನ್ನು ವಿಲ್ಪವರ್ (ಮನೋಬಲ) ಕರೆಯಲಾಗುತ್ತದೆ.
ವಿಲ್ಪವರ್ ಇದೆಯೋ ಅಥವಾ ಕೇವಲ ತುಂಬಾ ಒಳ್ಳೊಳ್ಳೆಯ ಪ್ಲಾನ್ ಮಾಡುತ್ತೀರೋ, ಹತ್ತು ಪ್ಲಾನ್ ತಯಾರು
ಮಾಡಿದರೆ ಕಾರ್ಯಗತವಾಗುವುದು ಐದು ಮಾತ್ರವೇ ಆಗುವುದು. ಹೀಗಂತೂ ಆಗುವುದಿಲ್ಲ ತಾನೇ? ಇದನ್ನು
ಮಾಡುತ್ತೇನೆ, ಇದು ಆಗುತ್ತದೆ, ಅದು ಆಗುತ್ತದೆ ಎಂದು ವಿಚಾರವನ್ನಂತೂ ತುಂಬಾ ಚೆನ್ನಾಗಿ
ಮಾಡುತ್ತೀರಿ, ಆದರೆ ಕಾರ್ಯರೂಪದಲ್ಲಿ ತರುವುದರಲ್ಲಿ ಅಂತರವುಂಟಾಗಿ ಬಿಡುತ್ತದೆ. ಆದ್ದರಿಂದ ಈಗ
ಎಂತಹ ವಿಲ್ಪವರ ಇರಬೇಕೆಂದರೆ, ಸಂಕಲ್ಪ ಮಾಡಿದ ಕೂಡಲೇ ಕಾರ್ಯಗತವಾಗಿಬಿಟ್ಟಿದೆ ಎನ್ನುವ ಅನುಭವ
ಆಗಬೇಕು. ಅಮೃತವೇಳೆಯಲ್ಲಿ ಏನು ಕಂಡು ಬರುತ್ತದೆಯೆಂದರೆ ತಂದೆಯೊಂದಿಗೆ ಮಕ್ಕಳು. ರೂಪ್ ಕರ್ಮದಲ್ಲಿ
ಇಲ್ಲದಿದ್ದರೆ ಯಾವಾಗ ರಿಹಾನ್ (ಆತ್ಮಿಕ ವಾರ್ತಾಲಾಪ) ಮಾಡುತ್ತಾರೋ ಆಗ ತುಂಬಾ ಒಳೆಯ ವಾಗ್ದಾನವನ್ನು
ಕೊಡುತ್ತಾರೆ. ಇದನ್ನು ಮಾಡುತ್ತೇವೆ, ಆದನ್ನು ಮಾಡುತ್ತೇವೆ. ಎಂದು ಹೇಳುತ್ತಿರುತ್ತಾರೆ. ಆದರೆ
ಯಾವಾಗ ರಾತ್ರಿಯಾಗುತ್ತದೆಯೋ ಆಗ ಏನು ಫಲಿತಾಂಶವು ಕಂಡು ಬರುತ್ತದೆ? ಮಾತು ಕೊಡುವಾಗ ತಂದೆಯನ್ನು
ತುಂಬಾ ಖುಷಿ ಮಾಡುತ್ತಾರೆ. ತಂದೆಯೂ ಸಹ ಖುಷಿಯಾಗಿ ಬಿಡುತ್ತೇನೆ. ಏಕೆಂದರೆ ಅಷ್ಟು ಸವಿ ಸವಿಯಾಗಿ
ಮಾತನಾಡುತ್ತಾರೆ. ಎಷ್ಟು ಒಳ್ಳೆಯ ಆಶ್ವಾಸನೆ ನೀಡುತ್ತಾರೆಂದರೆ ತಂದೆಯೂ ಖುಷಿಯಾಗಿ ಬಿಡುತ್ತೇನೆ.
ಭೇï ನನ್ನ ಮಕ್ಕಳೇ ಎಂದು ಮೆಚ್ಚಿಕೊಳ್ಳುತ್ತೇನೆ. ಬಾಬಾ ನೀವು ಏನು ಹೇಳಿದಿರೋ ಅದು ಆಗಿಯೇ
ಆಗುತ್ತದೆ. ಆಗಿಬಿಟ್ಟಿದೆ ಎಂದು ಹೇಳುತ್ತಾರೆ. ಹೀಗೆ ತುಂಬಾ ಒಳೊಳ್ಳೆಯ ಮಾತುಗಳನ್ನು ಹೇಳುತ್ತಾರೆ.
ಹಲವರಂತೂ ತಂದೆಗೆ ಎÀ್ಟು ಆಶ್ವಾಸನೆ ನೀಡುತ್ತಾರೆಂದರೆ, ಬಾಬಾ ನಾವು ಆಗದಿದ್ದರೆ ಅನ್ಯರು ಯಾರು
ಆಗುವರು. ಬಾಬಾ ಕಲ್ಪ ಕಲ್ಪವೂ ನಾವೇ ಇದ್ದೆವಲ್ಲವೇ ಎಂದು ಹೇಳುತ್ತಾರೆ. ತಂದೆಯು ಖುಷಿಯಾಗಿ
ಬಿಡುತ್ತೇನೆ. (ಸಭಾಂಗಣದಲ್ಲಿ ಹಿಂದೆ ಕುಳಿತಿರುವವರೊಂದಿಗೆ) ಹಿಂದೆ ಕುಳಿತಿರುವವರು ಚೆನ್ನಾಗಿ
ಕೇಳುತ್ತಾ ಇದ್ದೀರಲ್ಲವೇ?
ಮುಂದೆ
ಕುಳಿತಿರುವವರಿಗಿಂತಲೂ ಮುಂಚೆ ಹಿಂದೆ ಕುಳಿತಿರುವವರು ಮಾಡುವಿರಾ? ಕುಳಿತಿರುವುದೇನೋ ಹಿಂದೆ
ಕುಳಿತುಕೊಂಡಿದ್ದೀರಿ. ಆದರೆ ನೀವು ಎಲ್ಲರಿಗಿಂತಲೂ ಸಮೀಪವಾಗಿ ಹೃದಯದಲ್ಲಿ ಇದ್ದೀರಿ. ಏಕೆ?
ಅನ್ಯರಿಗೆ ಅವಕಾಶ ನೀಡುವ ಸೇವೆ ಮಾಡಿದಿರಲ್ಲವೇ. ಆದ್ದರಿಂದ ಸೇವಾಧಾರಿಗಳು ಸದಾ ತಂದೆಯ ಹೃದಯದಲ್ಲಿ
ಇರುತ್ತಾರೆ. ನಾವೂ ಸಹ ಒಂದುವೇಳೆ ದಾದಿಯರಾಗಿದ್ದರೆ ಸ್ವಲ್ಪ... ಎಂದು ಎಂದೂ ಯೋಚಿಸಬೇಡಿರಿ. ನೀವು
ಎದುರಿನಲ್ಲಿ ಕುಳಿತುಕೊಳ್ಳುವುದೇನು ಹೃದಯದಲ್ಲಿ ಇದ್ದೀರಿ ಹಾಗೂ ಹೃದಯವೂ ಸಹ ಸಾಧಾರಣ ಹೃದಯವಲ್ಲ.
ಸಿಂಹಾಸನವಾಗಿದೆ. ಆದ್ದರಿಂದ ಹೃದಯ ಸಿಂಹಾಸನಾರೂಢರಾಗಿದ್ದೀರಲ್ಲವೇ. ಎಲ್ಲಿಯಾದರೂ ಕುಳಿತಿರಬಹುದು.
ಈ ಮೂಲೆಯಲ್ಲಿ ಕುಳಿತಿದ್ದರೂ ಅಥವಾ ಕೆಳಗೆ ಕುಳಿತುಕೊಂಡಿದ್ದರೂ ಸಹ ತಂದೆಯ ಹೃದಯದಲ್ಲಿ ಇದ್ದೀರಿ.
ಒಳ್ಳೆಯದು.
ನಾಲ್ಕೂ ಕಡೆಯ
ಸಿಂಹಾಸನಾರೂಢರಾದ ಶ್ರೇಷ್ಠ ಭಾಗ್ಯವಂತ ಆತ್ಮರು, ಸದಾ ಬೇಹದ್ದಿನ ವೈರಾಗ್ಯ ವೃತ್ತಿಯಿಂದ
ವಾಯುಮಂಡಲವನ್ನು ನಿರ್ಮಾಣ ಮಾಡುವ ವಿಶೇಷ ಆತ್ಮರ. ಸದಾ ತಮ್ಮ ಶ್ರೇಷ್ಠ ವಿಶೇಷತೆಗಳನ್ನು
ಕಾರ್ಯದಲ್ಲಿ ಉಪಯೋಗಿಸುವ ವಿಶೇಷ ಆತ್ಮರು, ಸದಾ ಒಬ್ಬ ತಂದೆಯ ಜೊತೆಯನ್ನು ಹಾಗೂ ಶ್ರೀಮತದ ಕೈಯನ್ನು
ಅನುಭವ ಮಾಡುವ ಸಮೀಪ ಆತ್ಮರಿಗೆ ಬಾಪ್ದಾದಾರ ನೆನಪು ಪ್ರೀತಿ ಹಾಗೂ ನಮಸ್ತೆ.
ವರದಾನ:
ಏಕಾಗ್ರತೆಯ
ರಹಸ್ಯವನ್ನು ತಿಳಿದು ವರದಾತನನ್ನು ರಾಜಿ ಮಾಡುವಂತಹ ಸರ್ವ ಸಿದ್ಧಿ ಸ್ವರೂಪ ಭವ
ವರದಾತಾ ತಂದೆಯ ಬಳಿ
ಅಕೂಠ ವರದಾನವಿದೆ ಯಾವುದನ್ನು ಎಷ್ಟು ತೆಗೆದುಕೊಳ್ಳಲು ಬಯಸುವಿರೊ ಅಷ್ಟು ತೆರೆದ ಭಂಢಾರವಾಗಿದೆ.
ಇಂತಹ ತೆರೆದ ಭಂಢಾರದಿಂದ ಕೆಲವು ಮಕ್ಕಳು ಸಂಪನ್ನರಾಗುತ್ತಾರೆ ಮತ್ತು ಕೆಲವರು ಯಥಾಶಕ್ತಿ
ಸಂಪನ್ನರಾಗುತ್ತಾರೆ. ಎಲ್ಲರಿಗಿಂತ ಹೆಚ್ಚು ಜೋಳಿಗೆ ತುಂಬಿ ಕೊಡುವುದರಲ್ಲಿ ಭೋಲಾನಾಥ ವರದಾತನ
ರೂಪದಲ್ಲಿದ್ದಾರೆ, ಕೇವಲ ಅವರನ್ನು ರಾಜಿóಮಾಡುವ ವಿಧಿಯನ್ನು ತಿಳಿದಿರೆಂದರೆ ಸರ್ವ ಸಿದ್ಧಿಗಳು
ಪ್ರಾಪ್ತಿಯಾಗಿ ಬಿಡುವುದು. ವರದಾತನಿಗೆ ಒಂದು ಶಬ್ಧ ಎಲ್ಲಕ್ಕಿಂತಲೂ ಪ್ರಿಯವೆನಿಸುವುದು- ಏಕವ್ರತ.
ಸಂಕಲ್ಪ, ಸ್ವಪ್ನದಲ್ಲಿಯೂ ಸಹ ದೂಜಾ ವ್ರತ ಆಗಬಾರದು. ವೃತ್ತಿಯಲ್ಲಿರಲಿ ನನಗೆ ಒಬ್ಬರಲ್ಲದೆ ಬೇರೆ
ಇನ್ನೊಬ್ಬರಿಲ್ಲ, ಯಾರು ಈ ರಹಸ್ಯವನ್ನು ತಿಳಿದಿದ್ದಾರೆ, ಅವರ ಜೋಳಿಗೆ ವರದಾನಗಳಿಂದ ತುಂಬಿರುತ್ತದೆ.
ಸ್ಲೋಗನ್:
ಮನಸಾ ಮತ್ತು
ವಾಚಾ ಎರಡೂ ಸೇವೆ ಜೊತೆ-ಜೊತೆಯಲ್ಲಿ ಮಾಡಿ ಅದರಿಂದ ಡಬಲ್ ಫಲ ಪ್ರಾಪ್ತಿಯಾಗುತ್ತಾ ಹೋಗುವುದು.