20.01.23         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ತಾವು ಶಾಂತಿಯ ಸ್ಥಾಪನಕ್ಕೆ ನಿಮಿತ್ತರಾಗಿದ್ದೀರಿ, ಆದ್ದರಿಂದ ಬಹಳ-ಬಹಳ ಶಾಂತಿಯಲ್ಲಿ ಇರಬೇಕು, ನಾವು ತಂದೆಯ ದತ್ತು ಮಕ್ಕಳು ಪರಸ್ಪರದಲ್ಲಿ ಸಹೋದರ-ಸಹೋದರಿಯರು ಎಂಬುದು ಬುದ್ಧಿಯಲ್ಲಿ ಇರಲಿ

ಪ್ರಶ್ನೆ:
ಪೂರ್ಣ ಸಮರ್ಪಿತರು ಎಂದು ಯಾರಿಗೆ ಹೇಳಬಹುದು, ಅವರ ಲಕ್ಷಣಗಳು ಏನು?

ಉತ್ತರ:
ನಾವು ಈಶ್ವರೀಯ ತಾಯಿ-ತಂದೆಯಿಂದ ಬೆಳೆಯುತ್ತಿದ್ದೇವೆ ಎಂದು ಯಾರ ಬುದ್ಧಿಯಲ್ಲಿ ಇರುತ್ತದೆಯೋ ಅವರೇ ಪೂರ್ಣ ಸಮರ್ಪಿತರು. ಬಾಬಾ ಇದೆಲ್ಲವೂ ತಮ್ಮದು, ತಾವು ನಮ್ಮ ಪಾಲನೆಯನ್ನು ಮಾಡುತ್ತಿದ್ದೀರಿ. ನೌಕರಿಯನ್ನು ಮಾಡುತ್ತಿದ್ದರೂ ಅವರು ಬುದ್ಧಿಯಿಂದ ತಿಳಿಯುತ್ತಾರೆ ಇದೆಲ್ಲವೂ ತಂದೆಯಗಾಗಿ. ತಂದೆಗೆ ಸಹಯೋಗ ಕೊಡುತ್ತಿರುತ್ತಾರೆ, ಅವರಿಂದ ಇಷ್ಟು ದೊಡ್ಡ ಕಾರೋಬಾರ್ ನಡೆಯುತ್ತದೆ, ಎಲ್ಲರ ಪಾಲನೆ ಆಗುತ್ತದೆ. ಇಂತಹವರೇ ಅರ್ಪಣಾ ಬುದ್ಧಿಯವರು. ಜೊತೆ-ಜೊತೆಗೆ ಶ್ರೇಷ್ಠ ಪದವಿಯನ್ನು ಪಡೆಯಬೇಕಾದರೆ ಓದಬೇಕು ಹಾಗೂ ಓದಿಸಲೂ ಬೇಕು. ಶರೀರ ನಿರ್ವಹಣೆಗಾಗಿ ಕರ್ಮವನ್ನು ಮಾಡುತ್ತಾ ಬೇಹದ್ದಿನ ತಂದೆ-ತಾಯಿಯನ್ನು ಶ್ವಾಸ-ಶ್ವಾಸದಲ್ಲಿ ನೆನಪು ಮಾಡಬೇಕು.

ಗೀತೆ:
ಓಂ ನಮಃ ಶಿವಾಯಃ.....

ಓಂ ಶಾಂತಿ.
ಈ ಗೀತೆ ಗಾಯನವಾಗಿದೆ. ವಾಸ್ತವಿಕವಾಗಿ ಮಹಿಮೆ ಎಲ್ಲವೂ ಸರ್ವ ಶ್ರೇಷ್ಟ ಪರಮಾತ್ಮನದ್ದಾಗಿದೆ, ಅವರನ್ನು ನೀವು ಮಕ್ಕಳು ತಿಳಿದಿದ್ದೀರಿ ಹಾಗೂ ಮಕ್ಕಳ ಮೂಲಕ ಪೂರ್ಣ ಜಗತ್ತು ತಿಳಿಯುತ್ತದೆ. ಇವರೇ ನಮ್ಮ ಮಾತಾ-ಪಿತರೆಂದು. ಈಗ ತಾವು ಮಾತಾ-ಪಿತರ ಜೊತೆ ಕುಟುಂಬದಲ್ಲಿ ಕುಳಿತಿದ್ದೀರಿ. ಶ್ರೀಕೃಷ್ಣನಿಗೆ ಮಾತಾ-ಪಿತ ಎಂದು ಹೇಳುವುದಿಲ್ಲ. ಭಲೆ ಅವರ ಜೊತೆ ರಾಧೆ ಇದ್ದರೂ ಸಹ ಅವರಿಗೆ ಮಾತಾ-ಪಿತರೆಂದು ಹೇಳುವುದಿಲ್ಲ ಏಕೆಂದರೆ ಅವರು ರಾಜಕುಮಾರ-ರಾಜಕುಮಾರಿಯಾಗಿದ್ದಾರೆ. ಶಾಸ್ತ್ರಗಳಲ್ಲಿ ಇದು ತಪ್ಪಾಗಿದೆ. ಈಗ ಬೇಹದ್ದಿನ ತಂದೆ ಎಲ್ಲಾ ಶಾಸ್ತ್ರಗಳ ಸಾರವನ್ನು ಹೇಳುತ್ತಾರೆ. ಭಲೆ ಈ ಸಮಯದಲ್ಲಿ ಕೇವಲ ತಾವು ಮಕ್ಕಳು ಸಮ್ಮುಖದಲ್ಲಿ ಕುಳಿತಿದ್ದೀರಿ. ಕೆಲವು ಮಕ್ಕಳು ದೂರದಲ್ಲಿ ಇದ್ದಾರೆ ಆದರೆ ಅವರೂ ಸಹ ಕೇಳುತ್ತಿದ್ದಾರೆ. ಅವರೂ ತಿಳಿಯುತ್ತಾರೆ ಮಾತಾ-ಪಿತರು ನಮಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಿದ್ದಾರೆ ಹಾಗೂ ಸದಾ ಸುಖಿಗಳನ್ನಾಗಿ ಮಾಡಲು ಮಾರ್ಗ ಅಥವಾ ಯುಕ್ತಿಯನ್ನು ಹೇಳುತ್ತಿದ್ದಾರೆ. ಇದು ಒಂದು ರೀತಿ ಮನೆಯಾಗಿದೆ. ಸ್ವಲ್ಪ ಮಕ್ಕಳು ಇಲ್ಲಿ ಇದ್ದಾರೆ. ಅನೇಕರು ಹೊರಗಡೆ ಇದ್ದಾರೆ. ಇವರು ಬ್ರಹ್ಮಾಮುಖವಂಶಾವಳಿ ಹೊಸ ರಚನೆ. ಅವರು ಹಳೆಯ ರಚನೆ ಆಗಿದ್ದಾರೆ. ಮಕ್ಕಳಿಗೆ ಗೊತ್ತಿದೆ - ಬಾಬಾ ನಮ್ಮನ್ನು ಸದಾ ಸುಖಿಗಳನ್ನಾಗಿ ಮಾಡಲು ಬಂದಿದ್ದಾರೆ. ಲೌಕಿಕ ತಾಯಿ-ತಂದೆಯೂ ಸಹ ಮಕ್ಕಳನ್ನು ದೊಡ್ಡವರನ್ನಾಗಿ ಮಾಡಿ ಶಾಲೆಗೆ ಕರೆದೊಯ್ಯುತ್ತಾರೆ. ಇಲ್ಲಿ ಬೇಹದ್ದಿನ ತಂದೆ ನಮಗೆ ಓದಿಸುತ್ತಲೂ ಇದ್ದಾರೆ, ನಮಗೆ ಪಾಲನೆಯನ್ನೂ ಮಾಡುತ್ತಿದ್ದಾರೆ. ತಾವು ಮಕ್ಕಳಿಗೆ ಈಗ ತಂದೆಯ ವಿನಃ ಬೇರೆ ಯಾರೂ ಇಲ್ಲವೇ ಇಲ್ಲ. ಇವರೇ ನಮ್ಮ ಮಕ್ಕಳೆಂದು ತಾಯಿ-ತಂದೆಯು ತಿಳಿಯುತ್ತಾರೆ. ಲೌಕಿಕ ಪರಿವಾರವಿದ್ದರೆ 10-15 ಮಕ್ಕಳಿರುತ್ತಾರೆ. 2-3 ಮದುವೆ ಆಗಿರುತ್ತದೆ. ಇಲ್ಲಿ ಎಲ್ಲರೂ ಬಾಬಾನ ಮಕ್ಕಳು ಕುಳಿತಿದ್ದಾರೆ. ಎಷ್ಟು ಮಕ್ಕಳನ್ನು ಬೇಕಾದರೂ ಈಗ ಬ್ರಹ್ಮಾರವರ ಮುಖಕಮಲದ ಮೂಲಕ ಜನ್ಮ ಕೊಡಬಹುದು. ನಂತರ ಮಕ್ಕಳಿಗೆ ಜನ್ಮ ಕೊಡುವ ಹಾಗಿಲ್ಲ. ಎಲ್ಲರೂ ಹಿಂತಿರುಗಿ ಹೋಗಬೇಕಾಗಿದೆ. ದತ್ತು ಮಾಡಿಕೊಳ್ಳಲು ಒಬ್ಬ ತಾಯಿ ಮಾತ್ರ ನಿಮಿತ್ತರಾಗಿದ್ದಾರೆ. ಇದು ಬಹಳ ವಿಚಿತ್ರವಾದ ಮಾತು ಆಗಿದೆ. ಬಡವರ ಮಗು ತಿಳಿಯುತ್ತದೆ ನಮ್ಮ ತಂದೆ ಬಡವ ಎಂದು, ಶ್ರೀಮಂತನ ಮಗು ತಿಳಿಯುತ್ತದೆ ನಮ್ಮ ತಂದೆ ಶ್ರೀಮಂತರೆಂದು. ಆ ತಂದೆ-ತಾಯಿಗಳು ಅನೇಕರಿದ್ದಾರೆ. ಇವರು ಇಡೀ ಜಗತ್ತಿನ ಒಬ್ಬರೇ ತಾಯಿ-ತಂದೆ ಆಗಿದ್ದಾರೆ. ತಾವೆಲ್ಲರೂ ತಿಳಿದಿದ್ದೀರಿ ನಾವು ಅವರ ಮುಖದಿಂದ ದತ್ತು ಆಗಿದ್ದೇವೆ. ಇವರು ನಮ್ಮ ಪಾರಲೌಕಿಕ ತಾಯಿ-ತಂದೆ ಆಗಿದ್ದಾರೆ. ಅವರು ಬರುವುದೇ ಹಳೆಯ ಸೃಷ್ಟಿಯಲ್ಲಿ ಮನುಷ್ಯರು ಬಹಳ-ಬಹಳ ದುಃಖಿಗಳಾದಾಗ. ನಾವು ಈ ಪಾರಲೌಕಿಕ ಮಾತಾ-ಪಿತರ ಮಡಿಲನ್ನು ಪಡೆದಿದ್ದೇವೆ ಎಂಬುದು ತಮಗೆ ಗೊತ್ತಿದೆ. ನಾವೆಲ್ಲರೂ ಪರಸ್ಪರದಲ್ಲಿ ಸಹೋದರ-ಸಹೋದರಿ ಆಗಿದ್ದೇವೆ. ಬೇರೆ ಯಾವುದೇ ಸಂಬಂಧ ನಮ್ಮಲ್ಲಿ ಇಲ್ಲ. ತಾವು ಸಹೋದರ-ಸಹೋದರಿಯರು ಪರಸ್ಪರದಲ್ಲಿ ಬಹಳ ಮಧುರ, ರಾಯಲ್, ಶಾಂತಯುಕ್ತ, ಜ್ಞಾನಪೂರ್ಣ ಹಾಗೂ ಆನಂದಪೂರ್ಣರಾಗಿ ಇರಬೇಕು. ತಾವು ಶಾಂತಿ ಸ್ಥಾಪನೆ ಮಾಡುತ್ತಿದ್ದೀರಿ ಅಂದಮೇಲೆ ತಾವೂ ಸಹ ಬಹಳ ಶಾಂತಿಯಿಂದಿರಬೇಕು. ಮಕ್ಕಳಿಗೆ ಇದು ಬುದ್ಧಿಯಲ್ಲಿ ಇರಬೇಕು - ನಾವು ಪಾರಲೌಕಿಕ ತಂದೆಗೆ ದತ್ತು ಮಕ್ಕಳಾಗಿದ್ದೇವೆ. ಪರಮಧಾಮದಿಂದ ತಂದೆ ಬಂದಿದ್ದಾರೆ. ಅವರು ತಾತಾ, ಇವರು ಅಣ್ಣ ಆಗಿದ್ದಾರೆ. ಯಾರು ಪೂರ್ಣ ಸಮರ್ಪಿತರೋ ಅವರು ತಿಳಿಯುತ್ತಾರೆ ನಾವು ಈಶ್ವರೀಯ ತಾಯಿ-ತಂದೆಯಿಂದ ಬೆಳೆಯುತ್ತಿದ್ದೇವೆ. ಬಾಬಾ ಇದೆಲ್ಲವೂ ತಮ್ಮದಾಗಿದೆ. ನೀವು ನಮ್ಮ ಪಾಲನೆಯನ್ನು ಮಾಡುತ್ತಿದ್ದೀರಿ. ಯಾವ ಮಕ್ಕಳು ಅರ್ಪಣೆ ಆಗುತ್ತಾರೋ ಅವರಿಂದ ಎಲ್ಲರ ಪಾಲನೆ ಆಗುತ್ತದೆ. ಭಲೆ ಕೆಲವರು ನೌಕರಿ ಮಾಡುತ್ತಾರೆ ಆದರೂ ಸಹ ತಿಳಿಯುತ್ತಾರೆ ಇದೆಲ್ಲವೂ ತಂದೆಯಗಾಗಿ. ಅಂದಮೇಲೆ ತಂದೆಗೂ ಸಹ ಸಹಯೋಗವನ್ನು ಕೊಡುತ್ತಿರುತ್ತಾರೆ. ಇಲ್ಲವೆಂದರೆ ಯಜ್ಞದ ಕಾರೋಬಾರು ಹೇಗೆ ನಡೆಯುತ್ತದೆ. ರಾಜಾ-ರಾಣಿಗೂ ಸಹ ತಾಯಿ-ತಂದೆ ಎಂದು ಹೇಳುತ್ತಾರೆ. ಇವರು ಪಾರಲೌಕಿಕ ತಂದೆ-ತಾಯಿ ಆಗಿದ್ದಾರೆ. ನಾವು ತಾಯಿ-ತಂದೆಯ ಜೊತೆಯಲ್ಲಿ ಕುಳಿತಿದ್ದೇವೆ ಎಂಬುದು ಮಕ್ಕಳಿಗೆ ಗೊತ್ತಿದೆ. ನಾವು ಎಷ್ಟು ಓದುತ್ತೇವೆ ಹಾಗೂ ಓದಿಸುತ್ತೇವೆ ಅಷ್ಟು ಉತ್ತಮ ಪದವಿಯನ್ನು ಪಡೆಯುತ್ತೇವೆ. ಜೊತೆ-ಜೊತೆಗೆ ಶರೀರ ನಿರ್ವಹಣೆಗಾಗಿ ಕರ್ಮವನ್ನೂ ಸಹ ಮಾಡಬೇಕು. ಈ ದಾದಾರವರೂ ಸಹ ಮುದುಕರಾಗಿದ್ದಾರೆ. ಶಿವಬಾಬಾರವರಿಗೆ ಮುದುಕ ಅಥವಾ ಯುವಕ ಎಂದು ಹೇಳುವುದಿಲ್ಲ ಅವರು ನಿರಾಕಾರನಾಗಿದ್ದಾರೆ. ನಾವು ಆತ್ಮಗಳನ್ನು ನಿರಾಕಾರ ತಂದೆಯೇ ದತ್ತು ತೆಗೆದುಕೊಂಡಿದ್ದಾರೆ ಎಂಬುದು ನಿಮಗೆ ಗೊತ್ತಿದೆ. ಸಾಕಾರದಲ್ಲಿ ಈ ಬ್ರಹ್ಮಾತಂದೆ ಇದ್ದಾರೆ. ಆತ್ಮ ಹೇಳುತ್ತದೆ - ನನ್ನನ್ನು ತಂದೆಯೇ ತನ್ನ ಸಮಾನ ಮಾಡಿಕೊಂಡಿದ್ದಾರೆ. ನಾವು ಸಹೋದರ-ಸಹೋದರಿಯರನ್ನು ಬ್ರಹ್ಮಾತಂದೆಯು ತಮ್ಮ ಮಕ್ಕಳನ್ನಾಗಿ ಮಾಡಿಕೊಂಡಿದ್ದಾರೆ ಎಂದು ಆತ್ಮಗಳೇ ಹೇಳುತ್ತಾರೆ. ತಾವು ಬ್ರಹ್ಮನ ಮೂಲಕ ಬ್ರಹ್ಮಾಮುಖವಂಶಾವಳಿಗಳು ಆಗಿದ್ದೀರಿ ಎಂದು ಶಿವಬಾಬಾರವರು ಹೇಳುತ್ತಾರೆ. ನೀವು ನನ್ನ ಮಕ್ಕಳು ಆಗಿದ್ದೀರಿ ಎಂದು ಬ್ರಹ್ಮಾತಂದೆಯೂ ಸಹ ಹೇಳುತ್ತಾರೆ. ಇವರು ನಮ್ಮ ತಂದೆ ಅವರು ನಮ್ಮ ಅಣ್ಣ ಎಂದು ತಾವು ಬ್ರಾಹ್ಮಣರ ಬುದ್ಧಿಯಲ್ಲಿ ಶ್ವಾಸ-ಶ್ವಾಸದಲ್ಲಿಯೂ ನಡೆಯುತ್ತದೆ. ತಂದೆಗಿಂತಲೂ ಹೆಚ್ಚಾಗಿ ತಾತನನ್ನು ನೆನಪು ಮಾಡುತ್ತೇವೆ. ಆ ಮನುಷ್ಯರು ತಂದೆಯ ಜೊತೆ ಜಗಳ ಮಾಡಿ ತಾತನ ಆಸ್ತಿ ಪಡೆಯುತ್ತಾರೆ. ತಾವೂ ಸಹ ಪ್ರಯತ್ನ ಮಾಡಿ ತಂದೆಗಿಂತಲೂ ಜಾಸ್ತಿ ತಾತನಿಂದ ಆಸ್ತಿಯನ್ನು ಪಡೆಯಬೇಕು. ತಂದೆ ಕೇಳಿದಾಗ ನಾವು ನಾರಾಯಣನನ್ನು ವರಿಸುತ್ತೇವೆ ಎಂದು ಎಲ್ಲರೂ ಹೇಳುತ್ತಾರೆ. ಕೆಲವರು ಹೊಸಬರು ಇರುತ್ತಾರೆ, ಪವಿತ್ರರಾಗಿರುವುದಿಲ್ಲ ಅವರು ಕೈ ಎತ್ತುವುದಿಲ್ಲ. ಮಾಯೆ ಬಹಳ ಪ್ರಭಲವಾಗಿದೆ ಎಂದು ಹೇಳುತ್ತಾರೆ. ನಾವು ಶ್ರೀನಾರಾಯಣನನ್ನು ಅಥವಾ ಲಕ್ಷ್ಮಿಯನ್ನು ವರಿಸುತ್ತೇವೆ ಎಂದು ಅವರು ಹೇಳಲು ಸಾಧ್ಯವಿಲ್ಲ. ನೋಡಿ, ಬಾಬಾ ಸಮ್ಮುಖದಲ್ಲಿ ಹೇಳುತ್ತಿದ್ದಾಗ ಎಷ್ಟೊಂದು ಖುಷಿಯ ನಶೆ ಏರುತ್ತದೆ, ಬುದ್ಧಿಯನ್ನು ರಿಫ್ರೆಷ್ ಮಾಡಿದಾಗ ನಶೆ ಏರುತ್ತದೆ. ಕೆಲವರಿಗೆ ಆ ನಶೆ ಸ್ಥಿರವಾಗಿರುತ್ತದೆ, ಕೆಲವರಲ್ಲಿ ಕಡಿಮೆ ಆಗಿಬಿಡುತ್ತದೆ. ಬೇಹದ್ದಿನ ತಂದೆಯನ್ನು, 84 ಜನ್ಮಗಳನ್ನು, ಚಕ್ರವರ್ತಿ ರಾಜ್ಯಪದವಿಯನ್ನು ನೆನಪು ಮಾಡಬೇಕು. ಯಾರು ಒಪ್ಪಿಕೊಳ್ಳುವುದಿಲ್ಲವೋ ಅವರಿಗೆ ಇದು ನೆನಪು ಇರುವುದಿಲ್ಲ. ಬಾಪ್ದಾದಾ ತಿಳಿದುಕೊಳ್ಳುತ್ತಾರೆ - ಬಾಬಾ ಎಂದು ಹೇಳುತ್ತಾರೆ ಆದರೆ ಇವರು ಸತ್ಯವಾಗಿ ನೆನಪು ಮಾಡುವುದಿಲ್ಲ ಹಾಗೂ ಲಕ್ಷ್ಮೀ-ನಾರಾಯಣರನ್ನು ವರಿಸಲು ಯೋಗ್ಯರಲ್ಲ. ನಡವಳಿಕೆಯೇ ಆ ರೀತಿ ಇರುತ್ತದೆ. ಅಂತರ್ಯಾಮಿ ತಂದೆ ಪ್ರತಿಯೊಬ್ಬರ ಬುದ್ಧಿಯನ್ನು ತಿಳಿದುಕೊಳ್ಳುತ್ತಾರೆ. ಇಲ್ಲಿ ಶಾಸ್ತ್ರಗಳ ಯಾವುದೇ ಮಾತಿಲ್ಲ. ತಂದೆಯೇ ಬಂದು ರಾಜಯೋಗವನ್ನು ಕಲಿಸಿದ್ದಾರೆ. ಇದರ ಹೆಸರನ್ನು ಗೀತೆ ಎಂದು ಇಡಲಾಗಿದೆ. ಬಾಕಿ ಚಿಕ್ಕ-ಪುಟ್ಟ ಧರ್ಮದವರು ತಮ್ಮ-ತಮ್ಮ ಶಾಸ್ತ್ರಗಳನ್ನು ಮಾಡಿಕೊಳ್ಳುತ್ತಾರೆ ಮತ್ತೆ ಅದನ್ನು ಓದುತ್ತಾ ಇರುತ್ತಾರೆ. ತಂದೆ ಶಾಸ್ತ್ರವನ್ನು ಓದಿಲ್ಲ. ಹೇಳುತ್ತಾರೆ ಮಕ್ಕಳೇ ನಾನು ತಮಗೆ ಸ್ವರ್ಗದ ದಾರಿಯನ್ನು ಹೇಳಲು ಬಂದಿದ್ದೇನೆ. ತಾವು ಹೇಗೆ ಅಶರೀರಿಗಳಾಗಿ ಬಂದಿದ್ದೀರೋ ಹಾಗೆಯೇ ಹೋಗಬೇಕು. ದೇಹ ಸಹಿತ ಎಲ್ಲಾ ಈ ದುಃಖಗಳ ಕರ್ಮ ಬಂಧನವನ್ನು ಬಿಡಬೇಕು ಏಕೆಂದರೆ ದೇಹವೂ ಸಹ ದುಃಖ ಕೊಡುತ್ತದೆ, ಕಾಯಿಲೆ ಇದ್ದಾಗ ಕ್ಲಾಸಿಗೆ ಬರಲು ಸಾಧ್ಯವಿಲ್ಲ. ಅಂದಮೇಲೆ ಇದೂ ಸಹ ದೇಹದ ಬಂಧನವಾಯಿತು, ಇದರಲ್ಲಿ ಬುದ್ಧಿ ಬಹಳ ಸೂಕ್ಷ್ಮವಾಗಿ ಇರಬೇಕು. ಬಾಬಾ ಅವಶ್ಯವಾಗಿ ಸ್ವರ್ಗದ ರಚಯಿತರಾಗಿದ್ದಾರೆ ಎಂಬುದು ಮೊದಲು ನಿಶ್ಚಯವಿರಬೇಕು. ಈಗ ಇದು ನರಕವಾಗಿದೆ. ಯಾರಾದರೂ ಸತ್ತಾಗ ಹೇಳುತ್ತಾರೆ ಸ್ವರ್ಗಕ್ಕೆ ಹೋದರು, ಅಂದಮೇಲೆ ಅವರು ಖಂಡಿತ ನರಕದಲ್ಲಿ ಇದ್ದರು ತಾನೇ. ಆದರೆ ಇದನ್ನು ತಾವು ಈಗ ತಿಳಿದಿದ್ದೀರಿ ಏಕೆಂದರೆ ನಿಮ್ಮ ಬುದ್ಧಿಯಲ್ಲಿ ಸ್ವರ್ಗವಿದೆ. ಬಾಬಾ ಪ್ರತಿನಿತ್ಯ ಹೊಸ-ಹೊಸ ವಿಧಿಯಿಂದ ತಿಳಿಸುತ್ತಾರೆ. ನಿಮ್ಮ ಬುದ್ಧಿಯಲ್ಲಿ ಚೆನ್ನಾಗಿ ಇಟ್ಟುಕೊಳ್ಳಬೇಕು. ಇವರು ನಮ್ಮ ಬೇಹದ್ದಿನ ಮಾತಾ-ಪಿತರಾಗಿದ್ದಾರೆ. ಮೊದಲು ಬುದ್ಧಿ ಮೇಲೆ ಹೋಗುತ್ತದೆ. ನಂತರ ಹೇಳುತ್ತೇವೆ - ಈ ಸಮಯದಲ್ಲಿ ಬಾಬಾ ಆಬುನಲ್ಲಿ ಇದ್ದಾರೆ. ಹೇಗೆ ಯಾತ್ರೆಗೆ ಹೋದಾಗ ಬದರೀನಾಥನ ಮಂದಿರ ಮೇಲೆ ಇರುತ್ತದೆ. ಯಾತ್ರೆಗೆ ಮಾರ್ಗದರ್ಶಕರು ಕರೆದುಕೊಂಡು ಹೋಗುತ್ತಾರೆ, ಬದರೀನಾಥ ಸ್ವಯಂ ಬಂದು ಕರೆದುಕೊಂಡು ಹೋಗುವುದಿಲ್ಲ. ಮನುಷ್ಯರು ಮಾರ್ಗದರ್ಶಕರು ಆಗುತ್ತಾರೆ. ಆದರೆ ಇಲ್ಲಿ ಸ್ವಯಂ ಶಿವತಂದೆ ಪರಮಧಾಮದಿಂದ ಬಂದಿದ್ದಾರೆ. ಹೇ! ಆತ್ಮಗಳೇ ಈಗ ನೀವು ಈ ಶರೀರವನ್ನು ಬಿಟ್ಟು ಶಿವಪುರಿಗೆ ಹೋಗಬೇಕಾಗಿದೆ ಎಂದು ಹೇಳುತ್ತಾರೆ. ಎಲ್ಲಿಗೆ ಹೋಗಬೇಕೋ ಅಲ್ಲಿಯ ಚಿನ್ಹೆ ಅವಶ್ಯವಾಗಿ ನೆನಪು ಇರುತ್ತದೆ. ಬದರೀನಾಥ ಚೈತನ್ಯದಲ್ಲಿ ಬಂದು ಮಕ್ಕಳನ್ನು ಜೊತೆಗೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಅವರು ಇಲ್ಲಿಯ ನಿವಾಸಿ ಆಗಿದ್ದಾರೆ. ನಾನು ಪರಂಧಾಮದ ನಿವಾಸಿ ಆಗಿದ್ದೇನೆ ಎಂದು ಪರಮಪಿತ ಪರಮಾತ್ಮ ಹೇಳುತ್ತಾರೆ. ನಿಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದೇನೆ ಎಂದು ಈ ರೀತಿ ಕೃಷ್ಣನು ಹೇಳಲು ಸಾಧ್ಯವಿಲ್ಲ. ಈ ರುದ್ರ ಯಜ್ಞವನ್ನು ರಚನೆ ಮಾಡಿದ್ದೇನೆ ಎಂದು ರುದ್ರ ಶಿವತಂದೆ ಹೇಳುತ್ತಾರೆ. ಗೀತೆಯಲ್ಲೂ ಸಹ ರುದ್ರನ ವಿಚಾರವನ್ನು ಬರೆದಿದ್ದಾರೆ. ನನ್ನೊಬ್ಬನನ್ನೇ ನೆನಪು ಮಾಡಿರಿ ಎಂದು ಆತ್ಮೀಯ ತಂದೆ ಹೇಳುತ್ತಾರೆ. ತಂದೆಯು ಈ ರೀತಿ ಯುಕ್ತಿಯಿಂದ ಯಾತ್ರೆಯನ್ನು ಕಲಿಸಿಕೊಡುತ್ತಾರೆ. ಯಾವಾಗ ವಿನಾಶವಾಗುತ್ತದೋ ಆಗ ನೀವು ಆತ್ಮ ಶರೀರವನ್ನು ಬಿಟ್ಟು ನೇರವಾಗಿ ತಂದೆಯ ಬಳಿಗೆ ಹೋಗುತ್ತೀರಿ. ನಂತರ ಶುದ್ಧ ಆತ್ಮಗಳಿಗೆ ಶುದ್ಧ ಶರೀರ ಸಿಗುತ್ತದೆ. ಯಾವಾಗ ಈ ಹಳೆಯ ಸೃಷ್ಟಿ ವಿನಾಶವಾಗುತ್ತದೋ ಆಗ ಈ ರೀತಿ ಆಗುತ್ತದೆ. ಸೊಳ್ಳೆಗಳ ಸಮಾನ ಎಲ್ಲರೂ ಹಿಂತಿರುಗಿ ಹೋಗಬೇಕು, ತಂದೆಯ ಜೊತೆಯಲ್ಲಿಯೇ ಹೋಗಬೇಕು ಆದ್ದರಿಂದ ಅವರಿಗೆ ಅಂಬಿಗ ಎಂದು ಹೇಳಲಾಗುತ್ತದೆ. ತಂದೆಯೇ ಈ ದುಃಖದ ಪ್ರಪಂಚದಿಂದ ಸುಖದ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತಾರೆ. ಇದೇ ಭಾರತ ವಿಷ್ಣುಪುರಿ, ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಈಗ ರಾವಣನ ಪುರಿಯಾಗಿದೆ ಅಂದಾಗ ರಾವಣನ ಚಿತ್ರವನ್ನೂ ಸಹ ತೋರಿಸಬೇಕು. ಚಿತ್ರಗಳಿಂದ ಬಹಳ ಉಪಯೋಗವನ್ನು ತೆಗೆದುಕೊಳ್ಳಬೇಕು. ಹೇಗೆ ನಮ್ಮ ಆತ್ಮ ಇದೆ ಹಾಗೆಯೇ ತಂದೆಯ ಆತ್ಮವೂ ಸಹ ಇದೆ. ಕೇವಲ ನಾವು ಮೊದಲು ಅಜ್ಞಾನಿಗಳು ಆಗಿದ್ದೇವೆ, ಅವರು ಜ್ಞಾನಸಾಗರ ಆಗಿದ್ದಾರೆ. ಯಾರು ರಚಯಿತ ಮತ್ತು ರಚನೆಯನ್ನು ತಿಳಿದುಕೊಂಡಿಲ್ಲವೋ ಅವರಿಗೆ ಅಜ್ಞಾನಿ ಎಂದು ಹೇಳಲಾಗುತ್ತದೆ. ರಚಯಿತನ ಮುಖಾಂತರ ಯಾರು ರಚಯಿತ ಮತ್ತು ರಚನೆಯನ್ನು ತಿಳಿದುಕೊಳ್ಳುತ್ತಾರೋ ಅವರಿಗೆ ಜ್ಞಾನಿ ಎಂದು ಹೇಳಲಾಗುತ್ತದೆ. ಈ ಜ್ಞಾನವು ನಿಮಗೆ ಇಲ್ಲಿಯೇ ಸಿಗುತ್ತದೆ. ಸತ್ಯಯುಗದಲ್ಲಿ ಸಿಗುವುದಿಲ್ಲ. ಪರಮಾತ್ಮ ವಿಶ್ವದ ಮಾಲೀಕನಾಗಿದ್ದಾರೆ ಎಂದು ಅವರು ಹೇಳುತ್ತಾರೆ. ಮನುಷ್ಯರು ಆ ಮಾಲೀಕನನ್ನು ನೆನಪು ಮಾಡುತ್ತಾರೆ. ಆದರೆ ವಾಸ್ತವದಲ್ಲಿ ವಿಶ್ವದ ಅಥವಾ ಸೃಷ್ಟಿಯ ಮಾಲೀಕರು ಲಕ್ಷ್ಮೀ-ನಾರಾಯಣರು ಆಗುತ್ತಾರೆ. ನಿರಾಕಾರ ಶಿವತಂದೆ ವಿಶ್ವದ ಮಾಲೀಕನಾಗಲು ಸಾಧ್ಯವಿಲ್ಲ ಅಂದಾಗ ಅವರಿಂದ ಕೇಳಬೇಕು - ಅದರ ಮಾಲೀಕ ನಿರಾಕಾರನೋ ಅಥವಾ ಸಾಕಾರನೋ? ನಿರಾಕಾರ ತಂದೆ ಸಾಕಾರ ಸೃಷ್ಟಿಯ ಮಾಲೀಕನಾಗಲು ಸಾಧ್ಯವಿಲ್ಲ. ಅವರು ಬ್ರಹ್ಮಾಂಡದ ಮಾಲೀಕ ಆಗಿದ್ದಾರೆ. ಅವರೇ ಬಂದು ಪತಿತ ಪ್ರಪಂಚವನ್ನು ಪಾವನ ಮಾಡುತ್ತಾರೆ. ಆದರೆ ಸ್ವಯಂ ಪಾವನ ಪ್ರಪಂಚದ ಮಾಲೀಕನಾಗುವುದಿಲ್ಲ. ಅದರ ಮಾಲೀಕ ಲಕ್ಷ್ಮೀ-ನಾರಾಯಣರು ಆಗುತ್ತಾರೆ ಮತ್ತು ಮಾಡಿಸುವಂತಹವರು ತಂದೆಯಾಗಿದ್ದಾರೆ. ಇದು ಬಹಳ ತಿಳಿದುಕೊಳ್ಳುವಂತಹ ಗುಹ್ಯವಾದ ಮಾತಾಗಿದೆ. ನಾವು ಆತ್ಮರು ಯಾವಾಗ ಬ್ರಹ್ಮ ಮಹಾತತ್ವದಲ್ಲಿ ಇರುತ್ತೇವೋ ಆಗ ಬ್ರಹ್ಮಾಂಡದ ಮಾಲೀಕರಾಗಿರುತ್ತೇವೆ. ಹೇಗೆ ರಾಜಾ-ರಾಣಿಯರು ನಾವು ಭಾರತದ ಮಾಲೀಕರಾಗಿದ್ದೇವೆ ಎಂದು ಹೇಳುತ್ತಾರೋ ಹಾಗೆಯೇ ಪ್ರಜೆಗಳೂ ಸಹ ನಾವು ಮಾಲೀಕರಾಗಿದ್ದೇವೆ ಎಂದು ಹೇಳುತ್ತಾರೆ ಏಕೆಂದರೆ ಅಲ್ಲಿ ಇರುತ್ತಾರಲ್ಲವೇ. ಹೇಗೆ ತಂದೆ ಬ್ರಹ್ಮಾಂಡದ ಮಾಲೀಕರಾಗಿದ್ದಾರೆ ಹಾಗೆಯೇ ನಾವೂ ಸಹ ಮಾಲೀಕರಾಗಿದ್ದೇವು. ನಂತರ ತಂದೆಯೇ ಬಂದು ಹೊಸ ಮನುಷ್ಯ ಸೃಷ್ಟಿಯನ್ನು ರಚನೆ ಮಾಡುತ್ತಾರೆ. ನಾನು ಇದರ ಮೇಲೆ ರಾಜ್ಯ ಮಾಡುವುದಿಲ್ಲ ಎಂದು ಹೇಳುತ್ತಾರೆ ಏಕೆಂದರೆ ನಾನು ಮನುಷ್ಯನಾಗುವುದಿಲ್ಲ ಏಕೆಂದರೆ ನಾನು ಈ ಶರೀರವನ್ನು ಲೋನ್ನಲ್ಲಿ ತೆಗೆದುಕೊಳ್ಳುತ್ತೇನೆ. ನಾನು ನಿಮಗೆ ಸೃಷ್ಟಿಯ ಮಾಲೀಕರಾಗಲು ರಾಜಯೋಗವನ್ನು ಕಲಿಸುತ್ತೇನೆ. ನೀವೇಷ್ಟು ಪುರುಷಾರ್ಥ ಮಾಡುತ್ತೀರೋ ಅಷ್ಟು ಶ್ರೇಷ್ಠವಾದ ಪದವಿಯನ್ನು ಪಡೆಯುತ್ತೀರಿ. ಇದರಲ್ಲಿ ಬಲಹೀನರಾಗಬೇಡಿ. ಶಿಕ್ಷಕರು ಎಲ್ಲರಿಗೂ ಓದಿಸುತ್ತಾರೆ. ಒಂದುವೇಳೆ ಪರೀಕ್ಷೆಯಲ್ಲಿ ಎಲ್ಲರೂ ಪಾಸ್ ಆದರೆ ಶಿಕ್ಷಕರ ಪ್ರತ್ಯಕ್ಷತೆ ಆಗುತ್ತದೆ. ನಂತರ ಅವರಿಗೆ ಸರ್ಕಾರದಿಂದ ಲಿಫ್ಟ್ ಸಿಗುತ್ತದೆ. ಯಾರೆಷ್ಟು ವಿದ್ಯೆಯನ್ನು ಓದುತ್ತಾರೋ ಅಷ್ಟು ಅವರಿಗೆ ಒಳ್ಳೆಯ ಪದವಿ ಸಿಗುತ್ತದೆ. ತಂದೆ-ತಾಯಿಯು ಖುಷಿ ಆಗುತ್ತಾರೆ. ಪರೀಕ್ಷೆಯಲ್ಲಿ ಪಾಸ್ ಆದಾಗ ಸಿಹಿಯನ್ನು ಹಂಚುತ್ತಾರೆ. ಇಲ್ಲಿಯೂ ನೀವು ಪ್ರತಿನಿತ್ಯ ಸಿಹಿಯನ್ನು ಹಂಚುತ್ತೀರಿ. ಯಾವಾಗ ಪರೀಕ್ಷೇಯಲ್ಲಿ ಪಾಸ್ ಆಗುತ್ತೀರಿ ಆಗ ಚಿನ್ನದ ಹೂಗಳ ಮಳೆ ಆಗುತ್ತದೆ. ನಿಮ್ಮ ಮೇಲೆ ಆಕಾಶದಿಂದ ಹೂಗಳು ಬೀಳುವುದಿಲ್ಲ, ಆದರೆ ನೀವು ಒಂದೇ ಸಲ ಚಿನ್ನದ ಮಹಲ್ಗಳ ಮಾಲೀಕರಾಗುತ್ತೀರಿ. ಇಲ್ಲಿ ಕೆಲವರ ಮಹಿಮೆಯನ್ನು ಮಾಡುವುದಕ್ಕೋಸ್ಕರ ಚಿನ್ನದ ಹೂಗಳನ್ನು ಮಾಡಿ ಅವರ ಮೇಲೆ ಹಾಕುತ್ತಾರೆ. ದರ್ಭಂಗಾದ ರಾಜಾ ಬಹಳ ಶ್ರೀಮಂತನಾಗಿದ್ದ. ಅವನ ಮಕ್ಕಳು ವಿದೇಶಕ್ಕೆ ಹೋದಾಗ ಬಹಳ ಹಣವನ್ನು ಖರ್ಚು ಮಾಡಿ ಪಾರ್ಟಿ ಕೊಟ್ಟಿದ್ದನು. ಅವನು ಚಿನ್ನದ ಹೂಗಳನ್ನು ಮಾಡಿ ಅವರ ಮೇಲೆ ಹಾಕಿದಾಗ ಬಹಳಷ್ಟು ಖರ್ಚು ಆಗಿತ್ತು ಮತ್ತು ಅವನ ಹೆಸರು ಬಹಳ ಪ್ರಸಿದ್ದಿ ಆಗಿತ್ತು. ನೋಡಿ ಭಾರತವಾಸಿಗಳು ಹೇಗೆ ಹಣವನ್ನು ಹಾಳು ಮಾಡುತ್ತಾರೆ ಎಂದು ಹೇಳುತ್ತಿದ್ದರು. ನೀವು ಸ್ವಯಂ ಚಿನ್ನದ ಮಹಲ್ಗಳಲ್ಲಿ ಹೋಗಿ ಕುಳಿತುಕೊಳ್ಳುತ್ತೀರಿ ಅಂದಾಗ ನಿಮಗೆ ಎಷ್ಟೊಂದು ನಶೆ ಇರಬೇಕು. ಕೇವಲ ನನ್ನನ್ನು ಮತ್ತೆ ಚಕ್ರವನ್ನು ನೆನಪು ಮಾಡಿದಾಗ ನಿಮ್ಮ ಜೀವನದ ದೋಣಿ ಪಾರಾಗುತ್ತದೆ ಎಂದು ತಂದೆ ಹೇಳುತ್ತಾರೆ. ಎಷ್ಟೊಂದು ಸಹಜವಾಗಿದೆ.

ನೀವು ಚೈತನ್ಯ ಪತಂಗ ಮಕ್ಕಳಾಗಿದ್ದೀರಿ, ತಂದೆ ಚೈತನ್ಯವಾದ ಪರಂಜ್ಯೋತಿ ಆಗಿದ್ದಾರೆ. ಈಗ ನಮ್ಮ ರಾಜ್ಯಸ್ಥಾಪನೆ ಆಗಬೇಕು ಎಂದು ಹೇಳುತ್ತೀರಿ. ಈಗ ಸತ್ಯವಾದ ತಂದೆ ಭಕ್ತಿಯ ಫಲವನ್ನು ಕೊಡುವುದಕ್ಕೋಸ್ಕರ ಬಂದಿದ್ದಾರೆ. ನಾನು ಹೇಗೆ ಹೊಸ ಬ್ರಾಹ್ಮಣರ ಸೃಷ್ಟಿಯನ್ನು ರಚನೆ ಮಾಡುತ್ತೇನೆ ಎಂದು ಸ್ವಯಂ ತಂದೆಯೇ ಹೇಳುತ್ತಾರೆ. ನಾನು ಅವಶ್ಯವಾಗಿ ಬರಬೇಕು. ನಾವು ಬ್ರಹ್ಮಾಕುಮಾರ ಮತ್ತು ಕುಮಾರಿಯರಾಗಿದ್ದೇವೆ ಎಂದು ನಿಮಗೆ ತಿಳಿದಿದೆ. ನಾವೆಲ್ಲರೂ ಶಿವತಂದೆಯ ಮೊಮ್ಮಕ್ಕಳಾಗಿದ್ದೇವೆ. ಇದು ಅದ್ಭುತವಾದ ಪರಿವಾರವಾಗಿದೆ. ಹೇಗೆ ದೇವೀ-ದೇವತಾ ಧರ್ಮದ ಸಸಿಯನ್ನು ನೆಡುತ್ತಿದ್ದೇನೆ ಎನ್ನುವುದು ವೃಕ್ಷದಲ್ಲಿ ಸ್ಪಷ್ಟವಾಗಿದೆ. ನೀವೆಲ್ಲರೂ ಕೆಳಗೆ ಕುಳಿತಿದ್ದೀರಿ ಅಂದಾಗ ನೀವು ಮಕ್ಕಳು ಎಷ್ಟೊಂದು ಸೌಭಾಗ್ಯಶಾಲಿಗಳಾಗಿದ್ದೀರಿ. ನೀವು ಮಕ್ಕಳನ್ನು ರಾವಣನ ಪಂಜರದಿಂದ ಬಿಡಿಸಲು ನಾನು ಬಂದಿದ್ದೇನೆ ಎಂದು ಅತೀ ವಿಧೇಯನಾದ ತಂದೆ ಕುಳಿತು ತಿಳಿಸುತ್ತಾರೆ. ರಾವಣನೇ ನಿಮ್ಮನ್ನು ರೋಗಿಯನ್ನಾಗಿ ಮಾಡಿದ್ದಾನೆ. ಈಗ ತಂದೆ ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಹೇಳುತ್ತಾರೆ ಅರ್ಥಾತ್ ಶಿವತಂದೆಯನ್ನು ನೆನಪು ಮಾಡಿ. ಇದರಲ್ಲಿ ನಿಮ್ಮ ಜ್ಯೋತಿ ಜಾಗೃತವಾಗುತ್ತದೆ. ನಂತರ ನೀವೆಲ್ಲರೂ ಹಾರಲು ಯೋಗ್ಯರಾಗುತ್ತೀರಿ. ಮಾಯೆ ಈಗ ಎಲ್ಲರ ರೆಕ್ಕೆಯನ್ನು ಕತ್ತರಿಸಿಹಾಕಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತ್-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಬುದ್ಧಿಯನ್ನು ಸ್ವಚ್ಚ ಮಾಡುವುದಕ್ಕೋಸ್ಕರ ದೇಹದಲ್ಲಿ ಇದ್ದರೂ ದೇಹದ ಬಂಧನದಿಂದ ಭಿನ್ನರಾಗಿರಬೇಕಾಗಿದೆ. ಅಶರೀರಿಗಳಾಗುವ ಅಭ್ಯಾಸ ಮಾಡಬೇಕಾಗಿದೆ. ಕಾಯಿಲೆ ಮುಂತಾದ ಸಮಯದಲ್ಲಿ ತಂದೆಯನ್ನು ನೆನಪು ಮಾಡಬೇಕಾಗಿದೆ.

2. ಪಾರಲೌಕಿಕ ತಂದೆ-ತಾಯಿಯ ಮಕ್ಕಳಾಗಿದ್ದೇವೆ. ಆದ್ದರಿಂದ ಬಹಳ-ಬಹಳ ಮಧುರ, ರಾಯಲ್, ಶಾಂತಿಸ್ವರೂಪ, ಜ್ಞಾನಸ್ವರೂಪ ಮತ್ತು ದಯಾಸ್ವರೂಪರಾಗಬೇಕಾಗಿದೆ. ಶಾಂತಿಯಲ್ಲಿ ಇದ್ದು ಶಾಂತಿಯ ಸ್ಥಾಪನೆಯನ್ನು ಮಾಡಬೇಕಾಗಿದೆ.

ವರದಾನ:
ಆತ್ಮೀಯತೆಯ ಜೊತೆ ರಮಣೀಕತೆಯಲ್ಲಿ ಬರುವಂತಹ ಮರ್ಯಾದಾ ಪುರುಷೋತ್ತಮ ಭವ

ಕೆಲವು ಮಕ್ಕಳು ಬಹಳಷ್ಟು ನಗೆ-ಚಟಾಕಿ ಹಾರಿಸುತ್ತಿರುತ್ತಾರೆ ಮತ್ತು ಅದನ್ನೇ ರಮಣೀಕತೆ ಎಂದು ತಿಳಿಯುತ್ತಾರೆ. ಹಾಗೆ ನೋಡಿದರೆ ರಮಣೀಕತೆಯ ಗುಣ ಒಳ್ಳೆಯದೆ ಎಂದು ಮಾನ್ಯತೆ ಕೊಡುತ್ತಾರೆ. ಆದರೆ ವ್ಯಕ್ತಿ, ಸಮಯ, ಸಂಘಟನೆ, ಸ್ಥಾನ, ವಾಯುಮಂಡಲದ ಪ್ರಮಾಣ ರಮಣೀಕತೆ ಚೆನ್ನಾಗಿರುವುದು. ಒಂದುವೇಳೆ ಈ ಎಲ್ಲಾ ಮಾತುಗಳಲ್ಲಿ ಒಂದು ಮಾತು ಸರಿ ಇಲ್ಲದಿದ್ದರೂ ಸಹ ರಮಣೀಕತೆಯನ್ನೂ ಸಹಾ ವ್ಯರ್ಥದ ಸಾಲಿನಲ್ಲಿ ಪರಿಗಣಿಸಲಾಗುವುದು ಮತ್ತು ಇವರು ಚೆನ್ನಾಗಿ ನಗಿಸುತ್ತಾರೆ ಆದರೆ ಜಾಸ್ತಿ ಮಾತನಾಡುತ್ತಾರೆ ಎನ್ನುವ ಸರ್ಟಿಫಿಕೆಟ್ ಸಿಗುತ್ತೆ ಆದ್ದರಿಂದ ನಗೆ-ಚಟಾಕಿ ಹಾರಿಸುವುದು ಒಳ್ಳೆಯದು ಆದರೆ ಅದರಲ್ಲಿ ಆತ್ಮೀಯತೆ ಇರಬೇಕು ಮತ್ತು ಆ ಆತ್ಮಗಳಿಗೆ ಲಾಭಧಾಯಕವಾಗಿರಬೇಕು, ಮರ್ಯಾದೆಯ ಗೆರೆಯ ಒಳಗೆ ಆ ಮಾತಿರಬೇಕು, ಆಗ ಹೇಳಲಾಗುವುದು ಮರ್ಯಾದಾ ಪುರುಷೋತ್ತಮ.

ಸ್ಲೋಗನ್:
ಸದಾ ಆರೋಗ್ಯವಾಗಿರಬೇಕಾದರೆ ಆತ್ಮೀಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.