20.02.21         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನೀವು ಈಶ್ವರೀಯ ಸಂಪ್ರದಾಯದವರಾಗಿದ್ದೀರಿ, ನಿಮಗೆ ಜ್ಞಾನ ಸೂರ್ಯ ತಂದೆಯು ಸಿಕ್ಕಿದ್ದಾರೆ, ನೀವೀಗ ಜಾಗೃತರಾಗಿದ್ದೀರಿ ಅಂದಮೇಲೆ ಅನ್ಯರನ್ನೂ ಜಾಗೃತಗೊಳಿಸಿ.

ಪ್ರಶ್ನೆ:
ಅನೇಕ ಪ್ರಕಾರದ ಘರ್ಷಣೆಗಳಿಗೆ ಕಾರಣ ಹಾಗೂ ಅದಕ್ಕೆ ನಿವಾರಣೆಯೇನಾಗಿದೆ?

ಉತ್ತರ:
ಯಾವಾಗ ದೇಹಾಭಿಮಾನದಲ್ಲಿ ಬರುತ್ತೀರೋ ಆಗ ಅನೇಕ ಪ್ರಕಾರದ ಘರ್ಷಣೆಗಳಾಗುತ್ತವೆ. ಮಾಯೆಯ ಗ್ರಹಚಾರ ಕುಳಿತುಕೊಳ್ಳುತ್ತದೆ. ತಂದೆಯು ತಿಳಿಸುತ್ತಾರೆ - ದೇಹಿ-ಅಭಿಮಾನಿಯಾಗಿ ಸೇವೆಯಲ್ಲಿ ತೊಡಗಿರಿ. ನೆನಪಿನ ಯಾತ್ರೆಯಲ್ಲಿದ್ದಾಗ ಗ್ರಹಚಾರವು ಕಳೆಯುವುದು.

ಓಂ ಶಾಂತಿ.
ಆತ್ಮಿಕ ಮಕ್ಕಳ ಬಳಿ ತಂದೆಯು ಶ್ರೀಮತವನ್ನು ಕೊಡಲು ಅಥವಾ ತಿಳಿಸಲು ಬಂದಿದ್ದಾರೆ. ಇದಂತೂ ಮಕ್ಕಳಿಗೆ ಅರ್ಥವಾಗಿದೆ - ಡ್ರಾಮಾಪ್ಲಾನನುಸಾರ ಎಲ್ಲಾ ಕಾರ್ಯವು ಆಗುವುದು, ಇನ್ನು ಸ್ವಲ್ಪವೇ ಸಮಯವಿದೆ, ಈ ಭಾರತವನ್ನು ರಾವಣ ಪುರಿಯಿಂದ ವಿಷ್ಣು ಪುರಿಯನ್ನಾಗಿ ಮಾಡಬೇಕಾಗಿದೆ. ತಂದೆಯೂ ಗುಪ್ತವಾಗಿದ್ದಾರೆ, ವಿದ್ಯೆಯೂ ಗುಪ್ತವಾಗಿದೆ. ಸೇವಾಕೇಂದ್ರಗಳಂತೂ ಬಹಳಷ್ಟಿವೆ, ಚಿಕ್ಕ-ದೊಡ್ಡ ಹಳ್ಳಿಗಳಲ್ಲಿ ಸೇವಾಕೇಂದ್ರಗಳಿವೆ ಮತ್ತು ಅನೇಕ ಮಕ್ಕಳೂ ಇದ್ದಾರೆ, ಈಗ ಮಕ್ಕಳು ಚಾಲೆಂಜ್ ಮಾಡಿದ್ದೀರಿ ಮತ್ತು ಬರೆಯಲೂಬೇಕಾಗಿದೆ, ಯಾವುದೇ ಪುಸ್ತಕಗಳನ್ನು ಮಾಡಿಸುವಾಗ ಅದರಲ್ಲಿ ಬರೆಯಬೇಕು - ನಾವು ಈ ನಮ್ಮ ಭಾರತ ಭೂಮಿಯನ್ನು ಸ್ವರ್ಗವನ್ನಾಗಿ ಮಾಡಿಯೇ ಮಾಡುತ್ತೇವೆ. ನಿಮಗೂ ಸಹ ತಮ್ಮ ಭಾರತ ಭೂಮಿಯು ಬಹಳ ಪ್ರಿಯವಾಗಿದೆ ಏಕೆಂದರೆ ನಿಮಗೆ ತಿಳಿದಿದೆ - ಈ ಭಾರತವೇ ಸ್ವರ್ಗವಾಗಿತ್ತು, ಇದಕ್ಕೆ 5000 ವರ್ಷಗಳಾಗಿದೆ. ಭಾರತವು ಬಹಳ ಶೋಭನೀಕವಾಗಿತ್ತು, ಇದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ನೀವು ಬ್ರಹ್ಮಾಮುಖ ವಂಶಾವಳಿ ಬ್ರಾಹ್ಮಣರಿಗೇ ಜ್ಞಾನವಿದೆ. ಈ ಭಾರತವನ್ನು ಶ್ರೀಮತದಂತೆ ನಾವು ಖಂಡಿತ ಸ್ವರ್ಗವನ್ನಾಗಿ ಮಾಡಬೇಕಾಗಿದೆ. ಎಲ್ಲರಿಗೆ ಮಾರ್ಗ ತಿಳಿಸಬೇಕಾಗಿದೆ. ಮತ್ತ್ಯಾವುದೇ ಕಿರಿಕಿರಿಯ ಮಾತಿಲ್ಲ. ಪರಸ್ಪರ ಕುಳಿತು ಸಲಹೆ ತೆಗೆದುಕೊಳ್ಳಬೇಕು - ಈ ಪ್ರದರ್ಶನಿ ಚಿತ್ರಗಳ ಮೂಲಕ ನಾವು ಇಂತಹ ಯಾವ ಜಾಹೀರಾತನ್ನು ಮಾಡಬೇಕೋ ಅದನ್ನು ಪತ್ರಿಕೆಗಳಲ್ಲಿಯೂ ಕೊಡಬೇಕು ಎಂದು ಪರಸ್ಪರ ಈ ಚರ್ಚೆ ಮಾಡಬೇಕು. ಹೇಗೆ ಕಾಂಗ್ರೆಸ್ಸಿನವರು ಪರಸ್ಪರ ಸೇರಿ ಭಾರತವನ್ನು ನಾವು ಹೇಗೆ ಸುಧಾರಣೆ ಮಾಡುವುದೆಂದು ಸಲಹೆ ತೆಗೆದುಕೊಳ್ಳುತ್ತಾರೆ. ಈಗ ಇಷ್ಟೊಂದು ಕ್ರಿಶ್ಚಿಯನ್ನರು ಮೊದಲಾದವರು ಎಷ್ಟೊಂದು ಮಂದಿಯಾಗಿ ಬಿಟ್ಟಿದ್ದಾರೆ! ಅವರನ್ನು ನಾವು ಪರಸ್ಪರ ಸೇರಿ ಸರಿ ಪಡಿಸಬೇಕು ಮತ್ತು ಭಾರತದಲ್ಲಿ ಶಾಂತಿ-ಸುಖವನ್ನು ಹೇಗೆ ಸ್ಥಾಪಿಸುವುದು? ಆ ಸರ್ಕಾರದ ಪುರುಷಾರ್ಥವೂ ನಡೆಯುತ್ತದೆ, ಹಾಗೇ ನೀವೂ ಸಹ ಪಾಂಡವ ಸರ್ಕಾರವೆಂದು ಗಾಯನವಿದೆ. ಇದು ದೊಡ್ಡ ಈಶ್ವರೀಯ ಸರ್ಕಾರವಾಗಿದೆ. ಇದಕ್ಕೆ ವಾಸ್ತವದಲ್ಲಿ ಪಾವನ ಈಶ್ವರೀಯ ಸರ್ಕಾರವೆಂದು ಹೇಳಲಾಗುತ್ತದೆ. ಪತಿತ-ಪಾವನ ತಂದೆಯೇ ಪತಿತ ಮಕ್ಕಳನ್ನು ಕುಳಿತು ಪಾವನ ಪ್ರಪಂಚದ ಮಾಲೀಕರನ್ನಾಗಿ ಮಾಡುತ್ತಾರೆ, ಇದನ್ನು ಮಕ್ಕಳೇ ತಿಳಿದುಕೊಂಡಿದ್ದೀರಿ. ಮುಖ್ಯವಾದುದು ಭಾರತದ ಆದಿ ಸನಾತನ ದೇವಿ-ದೇವತಾ ಧರ್ಮವಾಗಿದೆ. ಇದು ರುದ್ರ ಜ್ಞಾನ ಯಜ್ಞವಾಗಿದೆ. ರುದ್ರನೆಂದು ಈಶ್ವರ ತಂದೆ, ಶಿವನಿಗೆ ಹೇಳಲಾಗುತ್ತದೆ. ಅವಶ್ಯವಾಗಿ ತಂದೆಯು ಬಂದು ರುದ್ರ ಜ್ಞಾನ ಯಜ್ಞವನ್ನೇ ರಚಿಸಿದರೆಂದು ಗಾಯನವಿದೆ. ಅವರಂತೂ ಅದಕ್ಕೆ ಬಹಳ ಸುಧೀರ್ಘವಾದ ಸಮಯವನ್ನು ಕೊಟ್ಟು ಬಿಟ್ಟಿದ್ದಾರೆ. ಅಜ್ಞಾನ ನಿದ್ರೆಯಲ್ಲಿ ಮಲಗಿದ್ದಾರೆ. ಈಗ ನಿಮ್ಮನ್ನು ತಂದೆಯು ಜಾಗೃತಗೊಳಿಸಿದ್ದಾರೆ ಮತ್ತೆ ನೀವು ಅನ್ಯರನ್ನೂ ಜಾಗೃತಗೊಳಿಸಬೇಕಾಗಿದೆ. ಡ್ರಾಮಾಪ್ಲಾನನುಸಾರ ನೀವು ಜಾಗೃತಗೊಳಿಸುತ್ತಾ ಇರುತ್ತೀರಿ. ಈ ಸಮಯದವರೆಗೆ ಯಾರು ಹೇಗೇಗೆ ಎಷ್ಟೆಷ್ಟು ಪುರುಷಾರ್ಥ ಮಾಡಿದ್ದಾರೆಯೋ ಅಷ್ಟೇ ಕಲ್ಪದ ಮೊದಲೂ ಮಾಡಿದ್ದರು, ಆ ಯುದ್ಧದ ಮೈದಾನದಲ್ಲಿ ಏರಿಳಿತಗಳಂತೂ ಆಗಿಯೇ ಆಗುತ್ತವೆ. ಕೆಲವೊಮ್ಮೆ ಮಾಯೆಯ ಪ್ರಭಾವ ಹೆಚ್ಚಾಗುತ್ತದೆ. ಕೆಲವೊಮ್ಮೆ ಈಶ್ವರೀಯ ಸಂತಾನರ ಪ್ರಭಾವ ಹೆಚ್ಚಾಗುತ್ತದೆ. ಇನ್ನೂ ಕೆಲವೊಮ್ಮೆ ಬರುತ್ತವೆ. ಮಾಯೆಯು ಒಮ್ಮೆಲೆ ಮೂರ್ಛಿತರನ್ನಾಗಿ ಮಾಡಿ ಬಿಡುತ್ತದೆ. ಯುದ್ಧದ ಮೈದಾನವಲ್ಲವೆ. ರಾವಣ ಮಾಯೆಯು ರಾಮನ ಸಂತಾನರನ್ನು ಮೂರ್ಛಿತರನ್ನಾಗಿ ಮಾಡಿ ಬಿಡುತ್ತದೆ. ಲಕ್ಷ್ಮಣನ ಕಥೆಯೂ ಇದೆಯಲ್ಲವೆ.

ನೀವು ಹೇಳುತ್ತೀರಿ - ಎಲ್ಲಾ ಮನುಷ್ಯರು ಕುಂಭ ಕರ್ಣನ ನಿದ್ರೆಯಲ್ಲಿ ಮಲಗಿದ್ದಾರೆ, ನೀವು ಈಶ್ವರೀಯ ಸಂಪ್ರದಾಯದವರೇ ಈ ರೀತಿ ಹೇಳುತ್ತೀರಿ- ಯಾರಿಗೆ ಜ್ಞಾನ ಸೂರ್ಯನು ಸಿಕ್ಕಿದ್ದಾರೆಯೋ ಮತ್ತು ಜಾಗೃತರಾಗಿದ್ದಾರೆಯೋ ಅವರೇ ತಿಳಿದುಕೊಳ್ಳುವರು. ಇದರಲ್ಲಿ ಒಬ್ಬರು ಇನ್ನೊಬ್ಬರಿಗೆ ಹೇಳುವ ಯಾವುದೇ ಮಾತಿಲ್ಲ. ನಿಮಗೆ ತಿಳಿದಿದೆ - ಅವಶ್ಯವಾಗಿ ನಾವು ಈಶ್ವರೀಯ ಸಂಪ್ರದಾಯದವರು ಜಾಗೃತರಾಗಿದ್ದೇವೆ, ಉಳಿದೆಲ್ಲರೂ ಮಲಗಿದ್ದಾರೆ. ಪರಮಪಿತ ಪರಮಾತ್ಮನು ಮಕ್ಕಳಿಗೆ ಆಸ್ತಿಯನ್ನು ಕೊಡಲು ಬಂದಿದ್ದಾರೆಂದು ಅವರು ತಿಳಿದುಕೊಂಡಿಲ್ಲ. ಇದನ್ನು ಸಂಪೂರ್ಣ ಮರೆತು ಬಿಟ್ಟಿದ್ದಾರೆ. ತಂದೆಯು ಭಾರತದಲ್ಲಿಯೇ ಬಂದಿದ್ದಾರೆ, ಬಂದು ಭಾರತವನ್ನು ಸ್ವರ್ಗದ ಮಾಲೀಕನನ್ನಾಗಿ ಮಾಡುತ್ತಾರೆ. ಭಾರತವು ಸ್ವರ್ಗದ ಮಾಲೀಕನಾಗಿತ್ತು, ಇದರಲ್ಲಿ ಯಾವುದೇ ಸಂಶಯವಿಲ್ಲ. ಪರಮಪಿತ ಪರಮಾತ್ಮನ ಜನ್ಮವೂ ಇಲ್ಲಿಯೇ ಆಗುತ್ತದೆ. ಶಿವ ಜಯಂತಿಯನ್ನು ಆಚರಿಸುತ್ತಾರಲ್ಲವೆ. ಅವಶ್ಯವಾಗಿ ಅವರು ಬಂದು ಏನನ್ನೋ ಮಾಡಿರಬೇಕಲ್ಲವೆ! ಬುದ್ಧಿಯು ಹೇಳುತ್ತದೆ - ತಂದೆಯು ಬಂದು ಅವಶ್ಯವಾಗಿ ಸ್ವರ್ಗದ ಸ್ಥಾಪನೆ ಮಾಡಿರುವರು. ಕೇವಲ ಪ್ರೇರಣೆಯಿಂದ ಸ್ಥಾಪನೆಯಾಗುವುದಿಲ್ಲ. ಇಲ್ಲಿ ನೀವು ಮಕ್ಕಳಿಗೆ ರಾಜಯೋಗವನ್ನು ಕಲಿಸಲಾಗುತ್ತದೆ. ನೆನಪಿನ ಯಾತ್ರೆಯನ್ನು ತಿಳಿಸಲಾಗುತ್ತದೆ. ಪ್ರೇರಣೆಯಿಂದ ಯಾವುದೇ ಶಬ್ಧವು ಕೇಳಿಬರುವುದಿಲ್ಲ. ಶಂಕರನ ಪ್ರೇರಣೆಯಾಗುತ್ತದೆ, ಆಗ ಈ ಯಾದವರು ಅಣ್ವಸ್ತ್ರಗಳನ್ನು ತಯಾರಿಸುತ್ತಾರೆಂದು ಹೇಳುತ್ತಾರೆ ಆದರೆ ಇದರಲ್ಲಿ ಯಾವುದೇ ಪ್ರೇರಣೆಯ ಮಾತಿಲ್ಲ. ಈಗ ನಿಮಗೆ ಅರ್ಥವಾಗಿದೆ - ಡ್ರಾಮಾದಲ್ಲಿ ಈ ಅಣ್ವಸ್ತ್ರ ಮೊದಲಾದುವುಗಳನ್ನು ತಯಾರಿಸುವುದು ಅವರ ಪಾತ್ರವಿದೆ, ಇದರಲ್ಲಿ ಪ್ರೇರಣೆಯ ಮಾತಿಲ್ಲ. ಡ್ರಾಮಾನುಸಾರ ವಿನಾಶವಂತೂ ಆಗಲೇಬೇಕಾಗಿದೆ. ಮಹಾಭಾರತ ಯುದ್ಧದಲ್ಲಿ ಅಣ್ವಸ್ತ್ರಗಳು ಕೆಲಸಕ್ಕೆ ಬಂದಿತೆಂದು ಗಾಯನವಿದೆ. ಯಾವುದು ಕಳೆದು ಹೋಯಿತೋ ಅದು ಮತ್ತೆ ಪುನರಾವರ್ತನೆಯಾಗುವುದು. ನೀವು ಗ್ಯಾರಂಟಿ ಕೊಡುತ್ತೀರಿ, ನಾವು ಭಾರತದಲ್ಲಿ ಸ್ವರ್ಗ ಸ್ಥಾಪನೆ ಮಾಡುತ್ತೇವೆ, ಅಲ್ಲಿ ಒಂದೇ ಧರ್ಮವಿರುವುದು. ಅನೇಕ ಧರ್ಮಗಳ ವಿನಾಶವಾಗುತ್ತದೆ ಎಂದು ನೀವು ಬರೆಯುವುದಿಲ್ಲ. ಅದನ್ನಂತೂ ಚಿತ್ರದಲ್ಲಿ ಬರೆಯಲಾಗಿದೆ, ಸ್ವರ್ಗದ ಸ್ಥಾಪನೆಯಾದಾಗ ಬೇರೆ ಯಾವುದೇ ಧರ್ಮವಿರುವುದಿಲ್ಲ. ಈಗ ನಿಮಗೆ ಅರ್ಥವಾಗುತ್ತದೆ. ಎಲ್ಲರಿಗಿಂತ ಹೆಚ್ಚಿನ ಪಾತ್ರವು ಶಿವನದು ಹಾಗೂ ಬ್ರಹ್ಮಾ ಮತ್ತು ವಿಷ್ಣುವಿನದಾಗಿದೆ. ಬ್ರಹ್ಮನಿಂದ ವಿಷ್ಣು, ವಿಷ್ಣುವಿನಿಂದ ಬ್ರಹ್ಮಾ - ಇವು ಬಹಳ ಗುಹ್ಯವಾದ ಮಾತುಗಳಾಗಿವೆ. ವಿಷ್ಣುವಿನಿಂದ ಹೇಗೆ ಬ್ರಹ್ಮನಾಗುತ್ತಾರೆ, ಬ್ರಹ್ಮನಿಂದ ಮತ್ತೆ ಹೇಗೆ ವಿಷ್ಣುವಾಗುತ್ತಾರೆ! ಈ ಮಾತುಗಳು ಸೂಕ್ಷ್ಮ ಬುದ್ಧಿಯುಳ್ಳ ಮಕ್ಕಳಿಗೇ ಅರ್ಥವಾಗುತ್ತದೆ. ದೈವೀ ಸಂಪ್ರದಾಯವಂತೂ ಆಗಿಯೇ ಆಗುತ್ತದೆ. ಒಬ್ಬರ ಮಾತಿಲ್ಲ. ರಾಜಧಾನಿಯ ಸ್ಥಾಪನೆಯಾಗುತ್ತದೆ, ಈ ಮಾತುಗಳನ್ನು ನೀವು ತಿಳಿದುಕೊಂಡಿದ್ದೀರಿ, ಪ್ರಪಂಚದಲ್ಲಿ ಯಾವ ಮನುಷ್ಯನೂ ತಿಳಿದುಕೊಂಡಿಲ್ಲ. ಭಲೆ ಲಕ್ಷ್ಮೀ-ನಾರಾಯಣ ಅಥವಾ ವಿಷ್ಣುವಿನ ಪೂಜೆ ಮಾಡುತ್ತಾರೆ ಆದರೆ ವಿಷ್ಣುವಿನ ಎರಡು ರೂಪಗಳೇ ಲಕ್ಷ್ಮೀ-ನಾರಾಯಣನಾಗಿದ್ದಾರೆ, ಅವರು ಹೊಸ ಪ್ರಪಂಚದಲ್ಲಿ ರಾಜ್ಯ ಮಾಡುತ್ತಾರೆಂಬುದು ಅವರಿಗೆ ತಿಳಿದಿಲ್ಲ. ಬಾಕಿ 4 ಭುಜಗಳುಳ್ಳ ಯಾವುದೇ ಮನುಷ್ಯನಿರುವುದಿಲ್ಲ. ಸೂಕ್ಷ್ಮವತನದಲ್ಲಿ ಕೇವಲ ಪ್ರವೃತ್ತಿ ಮಾರ್ಗದ ಗುರಿ-ಧ್ಯೇಯವನ್ನು ತೋರಿಸುತ್ತಾರೆ. ಇಡೀ ವಿಶ್ವದ ಇತಿಹಾಸ-ಭೂಗೋಳವು ಹೇಗೆ ಸುತ್ತುತ್ತದೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯನ್ನೇ ಅರಿತಿಲ್ಲವೆಂದರೆ ತಂದೆಯ ರಚನೆಯನ್ನು ಹೇಗೆ ಅರಿತುಕೊಳ್ಳುವರು! ತಂದೆಯೇ ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ. ಋಷಿ-ಮುನಿಗಳೂ ಸಹ ನಮಗೂ ಗೊತ್ತಿಲ್ಲವೆಂದು ಹೇಳುತ್ತಿದ್ದರು. ತಂದೆಯನ್ನು ಅರಿತುಕೊಂಡರೆ ರಚನೆಯ ಆದಿ-ಮಧ್ಯ-ಅಂತ್ಯವನ್ನೂ ಅರಿತುಕೊಳ್ಳುವರು. ತಂದೆಯು ತಿಳಿಸುತ್ತಾರೆ - ನಾನು ಒಂದೇ ಬಾರಿ ಬಂದು ನೀವು ಮಕ್ಕಳಿಗೂ ಇಡೀ ಜ್ಞಾನವನ್ನು ತಿಳಿಸುತ್ತೇನೆ. ಮತ್ತೆ ನಾನು ಬರುವುದೇ ಇಲ್ಲ ಅಂದಾಗ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಳ್ಳುವುದಾದರೂ ಹೇಗೆ? ತಂದೆಯೇ ಸ್ವಯಂ ಹೇಳುತ್ತಾರೆ - ನಾನು ಸಂಗಮಯುಗವನ್ನು ಬಿಟ್ಟು ಮತ್ತೆಂದೂ ಬರುವುದಿಲ್ಲ, ನನ್ನನ್ನು ಸಂಗಮಯುಗದಲ್ಲಿಯೇ ಕರೆಯುತ್ತೀರಿ. ಪಾವನವೆಂದು ಸತ್ಯಯುಗಕ್ಕೆ ಹೇಳಲಾಗುತ್ತದೆ. ಕಲಿಯುಗಕ್ಕೆ ಪತಿತ ಪ್ರಪಂಚವೆಂದು ಹೇಳಲಾಗುತ್ತದೆ. ಅವಶ್ಯವಾಗಿ ನಾನು ಪತಿತ ಪ್ರಪಂಚದ ಅಂತ್ಯದಲ್ಲಿಯೇ ಬರುತ್ತೇನೆ. ಕಲಿಯುಗದ ಅಂತಿಮದಲ್ಲಿ ಬಂದು ಪತಿತರಿಂದ ಪಾವನರನ್ನಾಗಿ ಮಾಡುತ್ತೇನೆ. ಸತ್ಯಯುಗದ ಆದಿಯಲ್ಲಿ ಪಾವನರಿರುತ್ತಾರೆ, ಇದು ಸಹಜ ಮಾತಲ್ಲವೆ. ಪತಿತ-ಪಾವನ ತಂದೆಯು ಯಾವಾಗ ಬರುತ್ತಾರೆ? ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಈಗಂತೂ ಕಲಿಯುಗದ ಅಂತ್ಯವೆಂದು ಹೇಳಲಾಗುತ್ತದೆ. ಒಂದುವೇಳೆ ಕಲಿಯುಗದಲ್ಲಿ ಇನ್ನೂ 40 ಸಾವಿರ ವರ್ಷಗಳಿವೆ ಎಂದು ಹೇಳುವುದಾದರೆ ಇನ್ನೆಷ್ಟು ಪತಿತರಾಗಬಹುದು! ಇನ್ನೆಷ್ಟು ದುಃಖವಾಗುವುದು! ಸುಖವಂತೂ ಇರುವುದೇ ಇಲ್ಲ, ಏನೂ ತಿಳಿಯದಿರುವ ಕಾರಣ ಸಂಪೂರ್ಣ ಘೋರ ಅಂಧಕಾರದಲ್ಲಿದ್ದಾರೆ, ನೀವು ಅರ್ಥ ಮಾಡಿಕೊಳ್ಳುತ್ತೀರಿ ಅಂದಾಗ ಮಕ್ಕಳು ಪರಸ್ಪರ ಸೇರಬೇಕು, ಚಿತ್ರಗಳ ಬಗ್ಗೆ ಬಹಳ ಚೆನ್ನಾಗಿ ತಿಳಿಸಬೇಕಾಗಿದೆ. ಡ್ರಾಮಾನುಸಾರ ಈ ಚಿತ್ರಗಳೆಲ್ಲವೂ ತಯಾರು ಮಾಡಿದ್ದಾರೆ. ಯಾವ ಸಮಯವು ಕಳೆಯುವುದು, ಅದು ಚಾಚೂ ತಪ್ಪದೆ ಡ್ರಾಮಾ ನಡೆಯುತ್ತಿರುತ್ತದೆ. ಮಕ್ಕಳ ಸ್ಥಿತಿಗಳೂ ಸಹ ಕೆಲವೊಮ್ಮೆ ಮೇಲೆ, ಕೆಲವೊಮ್ಮೆ ಕೆಳಗೆ ಆಗುತ್ತಿರುತ್ತದೆ. ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ಕೆಲವೊಮ್ಮೆ ಗ್ರಹಚಾರವು ಬಂದು ಕುಳಿತಾಗ ಎಷ್ಟೊಂದು ಪ್ರಯತ್ನ ಪಡುತ್ತಾರೆ. ತಂದೆಯು ಪದೇ-ಪದೇ ತಿಳಿಸುತ್ತಾರೆ - ಮಕ್ಕಳೇ, ನೀವು ದೇಹಾಭಿಮಾನದಲ್ಲಿ ಬರುತ್ತೀರಿ ಆದ್ದರಿಂದಲೇ ಘರ್ಷಣೆಯಾಗುತ್ತದೆ. ಇಲ್ಲಂತೂ ಆತ್ಮಾಭಿಮಾನಿಯಾಗಬೇಕಾಗಿದೆ. ಮಕ್ಕಳಲ್ಲಿ ಬಹಳ ದೇಹಾಭಿಮಾನವಿದೆ. ನೀವು ದೇಹೀ-ಅಭಿಮಾನಿಯಾದರೆ ತಂದೆಯ ನೆನಪಿರುವುದು ಮತ್ತು ಸೇವೆಯಲ್ಲಿ ಉನ್ನತಿ ಪಡೆಯುತ್ತಾ ಇರುತ್ತೀರಿ. ಯಾರು ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆಯೋ ಅವರು ಸದಾ ಸರ್ವೀಸಿನಲ್ಲಿ ತೊಡಗಿರುತ್ತಾರೆ. ಅದೃಷ್ಟದಲ್ಲಿಲ್ಲವೆಂದರೆ ಮತ್ತೆ ಪುರುಷಾರ್ಥವನ್ನೂ ಮಾಡುವುದಿಲ್ಲ. ಬಾಬಾ, ನಮಗೆ ಧಾರಣೆಯಾಗುತ್ತಿಲ್ಲ, ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲವೆಂದು ತಾವೇ ಹೇಳುತ್ತಾರೆ. ಯಾರಿಗೆ ಧಾರಣೆಯಾಗುವುದೋ ಅವರಿಗೆ ಬಹಳ ಖುಷಿಯಿರುತ್ತದೆ. ತಿಳಿದುಕೊಳ್ಳುತ್ತಾರೆ ಶಿವ ತಂದೆಯು ಬಂದಿದ್ದಾರೆ ಈಗ ತಂದೆಯು ತಿಳಿಸುತ್ತಾರೆ, ಮಕ್ಕಳೇ ನೀವು ಚೆನ್ನಾಗಿ ತಿಳಿದುಕೊಂಡು ಮತ್ತೆ ಅನ್ಯರಿಗೂ ತಿಳಿಸಿಕೊಡಿ. ಕೆಲವರಂತೂ ಸೇವೆಯಲ್ಲಿಯೇ ತೊಡಗಿರುತ್ತಾರೆ, ಪುರುಷಾರ್ಥ ಮಾಡುತ್ತಿರುತ್ತಾರೆ. ಇದನ್ನೂ ಮಕ್ಕಳು ತಿಳಿದುಕೊಂಡಿದ್ದೀರಿ - ಯಾವ ಸೆಕೆಂಡ್ ಕಳೆಯಿತೋ ಅದು ಡ್ರಾಮಾದಲ್ಲಿ ನಿಗಧಿಯಾಗಿದೆ, ಮತ್ತೆ ಅದೇರೀತಿ ಪುನರಾವರ್ತನೆಯಾಗುವುದು. ಮಕ್ಕಳಿಗೆ ತಿಳಿಸಲಾಗಿದೆ - ಹೊರಗಡೆ ಭಾಷಣ ಇತ್ಯಾದಿ ಮಾಡುವಾಗ ಕೇಳುವುದಕ್ಕಾಗಿ ಅನೇಕ ಪ್ರಕಾರದ ಹೊಸಬರು ಬರುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ಗೀತೆ, ವೇದ-ಶಾಸ್ತ್ರ ಇತ್ಯಾದಿಗಳನ್ನು ಕುರಿತು ಎಷ್ಟೊಂದು ಮಂದಿ ಭಾಷಣ ಮಾಡುತ್ತಾರೆ. ಆದರೆ ಇಲ್ಲಿ ಈಶ್ವರನು ತನ್ನ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆಂಬುದು ಅವರಿಗೇ ಗೊತ್ತಿಲ್ಲ. ರಚಯಿತನೇ ಬಂದು ಇಡೀ ಜ್ಞಾನವನ್ನು ತಿಳಿಸುತ್ತಾರೆ. ತ್ರಿಕಾಲದರ್ಶಿಗಳನ್ನಾಗಿ ಮಾಡುವುದು ತಂದೆಯ ಕರ್ತವ್ಯವಾಗಿದೆ. ಶಾಸ್ತ್ರಗಳಲ್ಲಿ ಈ ಮಾತುಗಳಿಲ್ಲ, ಇವು ಹೊಸ ಮಾತುಗಳಾಗಿವೆ. ತಂದೆಯು ಪದೇ-ಪದೇ ತಿಳಿಸುತ್ತಾರೆ - ಯಾರಿಗಾದರೂ ಮೊಟ್ಟ ಮೊದಲು ಇದನ್ನೂ ತಿಳಿಸಿ - ಗೀತೆಯ ಭಗವಂತ ಯಾರು? ಶ್ರೀಕೃಷ್ಣನೋ ಅಥವಾ ನಿರಾಕಾರ ಶಿವನೋ? ಈ ಮಾತುಗಳನ್ನು ಪ್ರೋಜೆಕ್ಟರ್ನಲ್ಲಿ ನೀವು ತಿಳಿಸಲು ಸಾಧ್ಯವಿಲ್ಲ. ಪ್ರದರ್ಶನಿಯಲ್ಲಿ ಚಿತ್ರಗಳು ಸಮ್ಮುಖದಲ್ಲಿಟ್ಟಿರುತ್ತಾರೆ. ಅದನ್ನು ತೋರಿಸುತ್ತಾ ನೀವು ಅವರನ್ನು ಕೇಳಬಹುದು, ಈಗ ತಿಳಿಸಿ - ಗೀತೆಯ ಭಗವಂತ ಯಾರು, ಜ್ಞಾನ ಸಾಗರನು ಯಾರು? ಕೃಷ್ಣನಿಗಂತೂ ಹೇಳಲು ಸಾಧ್ಯವಿಲ್ಲ. ಪವಿತ್ರತೆ, ಸುಖ-ಶಾಂತಿಯ ಸಾಗರ, ಮುಕ್ತಿದಾತ, ಮಾರ್ಗದರ್ಶಕ ಯಾರು? ಮೊಟ್ಟ ಮೊದಲು ಅವರಿಂದ ಇದನ್ನು ಬರೆಸಬೇಕು - ಫಾರ್ಮ್ ತುಂಬಿಸಬೇಕು ನಂತರ ಎಲ್ಲರಿಂದ ಸಹಿಯನ್ನು ತೆಗೆದುಕೊಳ್ಳಬೇಕು.

(ಪಕ್ಷಿಗಳ ಶಬ್ಧವಾಯಿತು) ನೋಡಿ ಎಷ್ಟೊಂದು ಜಗಳವಾಡುತ್ತವೆ. ಈ ಸಮಯದಲ್ಲಿ ಇಡೀ ಪ್ರಪಂಚದಲ್ಲಿ ಜಗಳ-ಕಲಹವೇ ಇದೆ. ಮನುಷ್ಯರೂ ಸಹ ಪರಸ್ಪರ ಹೊಡೆದಾಡುತ್ತಾರೆ. ಮನುಷ್ಯನಲ್ಲಿಯೇ ತಿಳಿದುಕೊಳ್ಳುವ ಬುದ್ಧಿಯಿದೆ. ಮನುಷ್ಯನಲ್ಲಿರುವ ಪಂಚ ವಿಕಾರಗಳ ಗಾಯನವೇ ಇದೆ, ಪ್ರಾಣಿಗಳ ಮಾತಿಲ್ಲ. ಇದು ವಿಕಾರಿ ಪ್ರಪಂಚವಾಗಿದೆ. ಪ್ರಪಂಚವೆಂದು ಮನುಷ್ಯರಿರುವ ಸ್ಥಾನಕ್ಕೇ ಹೇಳಲಾಗುತ್ತದೆ. ಕಲಿಯುಗದಲ್ಲಿ ಆಸುರೀ ಸಂಪ್ರದಾಯ, ಸತ್ಯಯುಗದಲ್ಲಿ ದೈವೀ ಸಂಪ್ರದಾಯವಿರುತ್ತದೆ. ಈಗ ನಿಮಗೆ ಇದೆಲ್ಲದರ ವ್ಯತ್ಯಾಸ ಗೊತ್ತಿದೆ. ನೀವು ಸಿದ್ಧ ಮಾಡಿ ತಿಳಿಸಬಹುದು. ಏಣಿ ಚಿತ್ರದಲ್ಲಿಯೂ ಬಹಳ ಸ್ಪಷ್ಟ ಮಾಡಿ ತೋರಿಸಿದ್ದಾರೆ. ಕೆಳಗೆ ಪತಿತರಿದ್ದಾರೆ, ಮೇಲೆ ಪಾವನರಿದ್ದಾರೆ. ಇದರಲ್ಲಿ ಬಹಳ ಸ್ಪಷ್ಟವಾಗಿದೆ. ಇಳಿಯುವ ಕಲೆ ಮತ್ತು ಏರುವ ಕಲೆ ಏಣಿ ಚಿತ್ರವೇ ಮುಖ್ಯವಾಗಿದೆ. ಇದರಲ್ಲಿ ಅವಶ್ಯವಾಗಿ ಇದು ಪತಿತ ಪ್ರಪಂಚವಾಗಿದೆ, ಪಾವನ ಪ್ರಪಂಚವು ಸ್ವರ್ಗವಾಗಿತ್ತು ಎಂದು ಮನುಷ್ಯರಿಗೆ ಅರ್ಥವಾಗಬೇಕೆಂದರೆ ಇನ್ನು ಯಾವ ರೀತಿ ಬರೆಯುವುದು. ವಿಚಾರ ಮಾಡಬೇಕಾಗಿದೆ. ಇಲ್ಲಿ ಎಲ್ಲರೂ ಪತಿತರಿದ್ದಾರೆ, ಯಾರೊಬ್ಬರೂ ಪಾವನರಿರಲು ಸಾಧ್ಯವಿಲ್ಲ. ರಾತ್ರಿ-ಹಗಲು ಈ ಚಿಂತನೆ ನಡೆಯಬೇಕು. ಆತ್ಮ ಪ್ರಕಾಶ ಮಗು ಬರೆಯುತ್ತಾರೆ - ಬಾಬಾ, ಈ ಚಿತ್ರವನ್ನು ಮಾಡಿಸುವುದೇ? ತಂದೆಯು ತಿಳಿಸುತ್ತಾರೆ ವಿಚಾರ ಸಾಗರ ಮಂಥನ ಮಾಡಿ ಯಾವುದೇ ಚಿತ್ರವನ್ನು ಮಾಡಿಸಿ ಆದರೆ ಏಣಿ ಚಿತ್ರವು ಬಹಳ ಚೆನ್ನಾಗಿರಬೇಕು. ಇದನ್ನು ತೋರಿಸಿ ನೀವು ಬಹಳಷ್ಟು ತಿಳಿಸಬಹುದು. 84 ಜನ್ಮಗಳನ್ನು ಪೂರ್ಣ ಮಾಡಿ ಮತ್ತೆ ಮೊದಲ ನಂಬರಿನ ಜನ್ಮ ತೆಗೆದುಕೊಂಡಿದ್ದಾರೆ ಮತ್ತೆ ಇಳಿಯುವ ಕಲೆಯಿಂದ ಏರುವ ಕಲೆಯಲ್ಲಿ ಹೋಗಬೇಕಾಗಿದೆ. ಇದರಲ್ಲಿ ಪ್ರತಿಯೊಬ್ಬರಿಗೇ ವಿಚಾರ ನಡೆಯಬೇಕು ಇಲ್ಲವೆಂದರೆ ಹೇಗೆ ಸರ್ವೀಸ್ ಮಾಡುವಿರಿ! ಚಿತ್ರಗಳನ್ನು ಕುರಿತು ತಿಳಿಸುವುದು ಬಹಳ ಸಹಜವಾಗುತ್ತದೆ. ಸತ್ಯಯುಗದ ನಂತರ ಏಣಿಯನ್ನು ಇಳಿಯಲಾಗುತ್ತದೆ. ಇದೂ ಸಹ ಮಕ್ಕಳಿಗೆ ಗೊತ್ತಿದೆ - ನಾವು ಪಾತ್ರಧಾರಿಗಳಾಗಿದ್ದೇವೆ, ಇಲ್ಲಿಂದ ವರ್ಗಾವಣೆಯಾಗಿ ನೇರವಾಗಿ ಸತ್ಯಯುಗಕ್ಕೆ ಹೋಗುವುದಿಲ್ಲ, ಮೊದಲು ಶಾಂತಿಧಾಮಕ್ಕೆ ಹೋಗಬೇಕಾಗಿದೆ. ಹಾ! ನಿಮ್ಮಲ್ಲಿಯೂ ನಂಬರ್ವಾರ್ ಇದ್ದಾರೆ, ಯಾರು ತಮ್ಮನ್ನು ಈ ಡ್ರಾಮಾದಲ್ಲಿ ಪಾತ್ರಧಾರಿಯೆಂದು ತಿಳಿದುಕೊಳ್ಳುತ್ತಾರೆ. ಈ ಪ್ರಪಂಚದಲ್ಲಿ ಮತ್ತ್ಯಾರೂ ಸಹ ನಾವು ಪಾತ್ರಧಾರಿಗಳೆಂದು ಹೇಳಲು ಸಾಧ್ಯವಿಲ್ಲ. ನಾವು ಬರೆಯುತ್ತೇವೆ - ಪಾತ್ರಧಾರಿಗಳಾಗಿಯೂ ಡ್ರಾಮಾದ ರಚಯಿತ, ನಿರ್ದೇಶಕ, ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲವೆಂದರೆ ಅವರು ಅತೀ ಬುದ್ಧಿಹೀನರಾಗಿದ್ದಾರೆ. ಇದಂತೂ ಭಗವಾನುವಾಚವಾಗಿದೆ. ಶಿವ ಭಗವಾನುವಾಚ ಬ್ರಹ್ಮಾರವರ ತನುವಿನ ಮೂಲಕ. ಜ್ಞಾನ ಸಾಗರನು ನಿರಾಕಾರನಾಗಿದ್ದಾರೆ, ಅವರಿಗೆ ತನ್ನ ಶರೀರವಿಲ್ಲ, ಬಹಳ ತಿಳಿದುಕೊಳ್ಳುವ ಯುಕ್ತಿಗಳಾಗಿವೆ. ನೀವು ಮಕ್ಕಳಿಗೆ ಬಹಳ ನಶೆಯಿರಬೇಕು, ನಾವು ಯಾರದೇ ನಿಂದನೆ ಮಾಡುವುದಿಲ್ಲ. ಇದಂತೂ ಸರಿಯಾದ ಮಾತಲ್ಲವೆ. ಯಾರೆಲ್ಲಾ ದೊಡ್ಡ-ದೊಡ್ಡವರಿದ್ದಾರೆ ಅವರೆಲ್ಲರ ಚಿತ್ರವನ್ನು ನೀವು ಹಾಕಬಹುದು, ಏಣಿ ಚಿತ್ರವನ್ನು ಯಾರಿಗೆ ಬೇಕಾದರೂ ತೋರಿಸಬಹುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.


ಧಾರಣೆಗಾಗಿ ಮುಖ್ಯಸಾರ-
1. ಭಾರತದಲ್ಲಿ ಸುಖ-ಶಾಂತಿಯ ಸ್ಥಾಪನೆ ಮಾಡಲು ಅಥವಾ ಭಾರತವನ್ನು ಸ್ವರ್ಗವನ್ನಾಗಿ ಮಾಡಲು ಪರಸ್ಪರ ಚರ್ಚೆ ಮಾಡಬೇಕಾಗಿದೆ. ಶ್ರೀಮತದನುಸಾರ ಭಾರತದ ಇಂತಹ ಸೇವೆ ಮಾಡಬೇಕಾಗಿದೆ.

2. ಸರ್ವೀಸಿನಲ್ಲಿ ಉನ್ನತಿ ಮಾಡಿಕೊಳ್ಳಲು ಹಾಗೂ ಸರ್ವೀಸಿನಿಂದ ಶ್ರೇಷ್ಠ ಪದವಿಯನ್ನು ಪಡೆಯಲು ದೇಹೀ-ಅಭಿಮಾನಿಯಾಗಿರುವ ಪರಿಶ್ರಮ ಪಡಬೇಕಾಗಿದೆ. ಜ್ಞಾನದ ವಿಚಾರ ಸಾಗರ ಮಂಥನ ಮಾಡಬೇಕಾಗಿದೆ.

ವರದಾನ:
ತಮ್ಮ ಶ್ರೇಷ್ಠ ಧಾರಣೆಗಳ ಪ್ರತಿ ತ್ಯಾಗದಲ್ಲಿ ಭಾಗ್ಯದ ಅನುಭವ ಮಾಡುವಂತಹ ಸತ್ಯ ತ್ಯಾಗಿ ಭವ.

ಬ್ರಾಹ್ಮಣರ ಶ್ರೇಷ್ಠ ಧಾರಣೆ ಸಂಪೂರ್ಣ ಪವಿತ್ರತೆಯಾಗಿದೆ. ಈ ಧಾರಣೆಗಾಗಿ ಗಾಯನವಿದೆ ಪ್ರಾಣ ಹೋಗಲಿ ಆದರೆ ಧರ್ಮವನ್ನು ಬಿಡಲ್ಲ. ಯಾವುದೇ ಪ್ರಕಾರದ ಪರಿಸ್ಥಿತಿಯಲ್ಲಿ ನಮ್ಮ ಈ ಧಾರಣೆಯ ಪ್ರತಿ ಏನೇ ತ್ಯಾಗ ಮಾಡಬೇಕಾಗಿ ಬಂದರೂ, ಸಹನೆ ಮಾಡಬೇಕಾಗಿ ಬಂದರೂ, ಎದುರಿಸಬೇಕಾಗಿ ಬಂದರೂ, ಸಾಹಸವಿಡಬೇಕಾಗಿ ಬಂದರೂ ಸಹ ಖುಷಿ-ಖುಷಿಯಿಂದ ತ್ಯಾಗವನ್ನು ತ್ಯಾಗವೆಂದು ತಿಳಿಯದೆ ಭಾಗ್ಯದ ಅನುಭವ ಮಾಡಿ ಆಗ ಹೇಳಲಾಗುವುದು ಸತ್ಯ ತ್ಯಾಗಿ. ಈ ರೀತಿಯ ಧಾರಣೆಯುಳ್ಳವರನ್ನೇ ಸತ್ಯ ಬ್ರಾಹ್ಮಣರೆಂದು ಕರೆಯಲಾಗುವುದು.

ಸ್ಲೋಗನ್:
ಸರ್ವ ಶಕ್ತಿಗಳನ್ನು ತಮ್ಮ ಆದೇಶನುಸಾರ ನಡೆಸುುವವರು ಮಾಸ್ಟರ್ ಸರ್ವಶಕ್ತಿವಾನ್ ಆಗಿರುವರು.