20.06.22         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ- ದೇಹಸಹಿತ ಈ ಕಣ್ಣುಗಳಿಂದ ಏನೆಲ್ಲಾ ನೋಡುತ್ತಿದ್ದೀರೋ ಅದನ್ನು ಮರೆತು ಒಬ್ಬ ತಂದೆಯನ್ನು ನೆನಪು ಮಾಡಿ ಏಕೆಂದರೆ ಈಗ ಇದೆಲ್ಲವೂ ಸಮಾಪ್ತಿಯಾಗುವುದಿದೆ

ಪ್ರಶ್ನೆ:
ಸತ್ಯಯುಗದಲ್ಲಿ ರಾಜ್ಯಪದವಿಯ ಲಾಟರಿಯನ್ನು ಗೆಲ್ಲುವ ಪುರುಷಾರ್ಥವೇನಾಗಿದೆ?

ಉತ್ತರ:
ಸತ್ಯಯುಗದಲ್ಲಿ ರಾಜ್ಯಪದವಿಯನ್ನು ಪಡೆಯಬೇಕೆಂದರೆ ತಮ್ಮಮೇಲೆ ಪೂರ್ಣ ಗಮನವನ್ನಿಟ್ಟುಕೊಳ್ಳಿ, ಒಳಗೆ ಯಾವುದೇ ಭೂತವೂ ಇರಬಾರದು. ಒಂದುವೇಳೆ ಯಾವುದಾದರೂ ಭೂತವಿದ್ದರೆ ಲಕ್ಷ್ಮಿಯನ್ನು ದರ್ಶನ ಮಾಡಲು ಸಾಧ್ಯವಿಲ್ಲ. ರಾಜರಾಗಲು ಪ್ರಜೆಗಳನ್ನು ತಯಾರು ಮಾಡಬೇಕಾಗಿದೆ. 2. ಇಲ್ಲಿಯೇ ಅಳುವುದರಿಂದ ಮುಕ್ತರಾಗಬೇಕಾಗಿದೆ. ಯಾವುದೇ ದೇಹಧಾರಿಯ ನೆನಪಿನಲ್ಲಿ ಶಾಕ್(ಭಯಬೀತರಾಗಿ) ಆಗಿ ಶರೀರವನ್ನು ಬಿಡುತ್ತೀರೆಂದರೆ ಪದವಿಯು ಭ್ರಷ್ಟವಾಗಿಬಿಡುತ್ತದೆ ಆದ್ದರಿಂದ ತಂದೆಯ ನೆನಪಿನಲ್ಲಿರುವ ಪುರುಷಾರ್ಥ ಮಾಡಬೇಕಾಗಿದೆ.

ಓಂ ಶಾಂತಿ.
ಶಿವತಂದೆಯು ಓಂಶಾಂತಿ ಹೇಳುತ್ತಾರೆ ಮತ್ತೆ ಇವರ(ಬ್ರಹ್ಮಾ) ಆತ್ಮವೂ ಸಹ ಹೇಳುತ್ತದೆ- ಓಂಶಾಂತಿ. ಶಿವತಂದೆಯು ಪರಮಾತ್ಮನಾಗಿದ್ದಾರೆ, ಇವರು ಪ್ರಜಾಪಿತನಾಗಿದ್ದಾರೆ. ಮಕ್ಕಳೂ ಸಹ ಓಂಶಾಂತಿ ಹೇಳುತ್ತಾರೆ. ತಮ್ಮ ಸ್ವಧರ್ಮವನ್ನು ತಿಳಿಯಬೇಕಾಗುತ್ತದೆಯಲ್ಲವೇ. ಮನುಷ್ಯರಂತು ತಮ್ಮ ಸ್ವಧರ್ಮವನ್ನೂ ಅರಿತುಕೊಂಡಿಲ್ಲ. ಓಂಶಾಂತಿ ಅರ್ಥಾತ್ ನಾವು ಆತ್ಮ ಶಾಂತಸ್ವರೂಪರಾಗಿದ್ದೇವೆ. ಆತ್ಮವು ಮನಸ್ಸು-ಬುದ್ಧಿಯಿಂದ ಕೂಡಿದೆ ಆದರೆ ಇದನ್ನು ಮರೆತು ಮನಸ್ಸಿನ ಹೆಸರನ್ನು ತೆಗೆದುಕೊಳ್ಳುತ್ತಾರೆ. ಒಂದುವೇಳೆ ಅವರು ಆತ್ಮನಿಗೆ ಶಾಂತಿ ಹೇಗೆ ಸಿಗುತ್ತದೆ ಎಂದು ಕೇಳಿದರೆ ಹೇಳಿ- ವಾಹ್! ಇದೂ ಪ್ರಶ್ನೆಯಾಗಿದೆಯೇ? ಆತ್ಮವಂತೂ ಸ್ವಯಂ ಶಾಂತಸ್ವರೂಪವಾಗಿದೆ, ಶಾಂತಿಧಾಮದಲ್ಲಿ ಇರುವಂತದ್ದಾಗಿದೆ. ಶಾಂತಿಯಂತೂ ಅಲ್ಲಿಯೇ ಸಿಗುತ್ತದೆಯಲ್ಲವೇ! ಆತ್ಮವು ಶರೀರವನ್ನು ಬಿಟ್ಟು ಹೋಗುತ್ತದೆ, ಆಗ ಶಾಂತಿಯಲ್ಲಿರುತ್ತದೆ. ಇದಂತೂ ಪ್ರಪಂಚವಾಗಿದೆ, ಇದರಲ್ಲಿ ಆತ್ಮಗಳು ಪಾತ್ರವನ್ನಭಿನಯಿಸಬೇಕಾಗಿದೆ. ಕಾರ್ಯವನ್ನು ಮಾಡಲೇಬೇಕಾಗಿದೆ ಅಂದಮೇಲೆ ಶಾಂತವಾಗಿ ಹೇಗಿರುತ್ತಾರೆ!. ಮನುಷ್ಯರು ಶಾಂತಿಗಾಗಿ ಎಷ್ಟೊಂದು ಅಲೆದಾಡುತ್ತಾರೆ ಆದರೆ ಅವರಿಗೆ ನಾವು ಆತ್ಮಗಳ ಸ್ವಧರ್ಮವೇ ಶಾಂತಿಯಾಗಿದೆ ಎನ್ನುವುದು ಗೊತ್ತಿಲ್ಲ. ಈಗ ನಿಮಗೆ ಆತ್ಮನ ಧರ್ಮವು ತಿಳಿದಿದೆ. ಆತ್ಮವೂ ಬಿಂದುವಿನ ರೂಪದಲ್ಲಿದೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ನಿರಾಕಾರ ಪರಮಾತ್ಮಾಯ ನಮಃ ಎಂದು ಎಲ್ಲರೂ ಹೇಳುತ್ತಾರೆ. ಪರಮಪಿತನೆಂದು ಅವರಿಗೇ ಹೇಳಲಾಗುತ್ತದೆ. ಅವರಂತೂ ನಿರಾಕಾರನಾಗಿದ್ದಾರೆ, ಅವರನ್ನು ಶಿವ ಪರಮಾತ್ಮಾಯ ನಮಃ ಎಂದು ಹೇಳಲಾಗುತ್ತದೆ. ಈಗ ನಿಮ್ಮ ಬುದ್ಧಿಯೋಗವು ಆಕಡೆಯಿದೆ. ಮನುಷ್ಯರಂತು ದೇಹಾಭಿಮಾನಿಗಳಾಗಿದ್ದಾರೆ. ಅವರು ಬುದ್ಧಿಯೋಗವು ತಂದೆಯ ಕಡೆಯಿಲ್ಲ. ನೀವು ಮಕ್ಕಳಿಗೆ ಪ್ರತಿಯೊಂದು ಮಾತನ್ನು ತಿಳಿಸಲಾಗುತ್ತದೆ. ಬ್ರಹ್ಮಾ ದೇವತಾಯ ನಮಃ ಎಂದು ಹೇಳುತ್ತಾರೆ, ಬ್ರಹ್ಮನ ಹೆಸರನ್ನು ತೆಗೆದುಕೊಂಡು ಬ್ರಹ್ಮ ಪರಮಾತ್ಮಾಯ ನಮಃ ಎಂದು ಹೇಳುವುದಿಲ್ಲ. ಒಬ್ಬರನ್ನೇ ಪರಮಾತ್ಮನೆಂದು ಹೇಳಲಾಗುತ್ತದೆ, ಅವರೇ ರಚಯಿತನಾಗಿದ್ದಾರೆ. ನಾವು ಶಿವತಂದೆಯ ಮಕ್ಕಳಾಗಿದ್ದೇವೆ ಎನ್ನುವುದು ನಿಮಗೆ ತಿಳಿದಿದೆ. ಅವರು ಬ್ರಹ್ಮಾರವರ ಮುಖಾಂತರ ರಚನೆ ಮಾಡಿದ್ದಾರೆ, ನಮ್ಮನ್ನು ತಮ್ಮವರನ್ನಾಗಿ ಮಾಡಿಕೊಂಡಿದ್ದಾರೆ. ಬ್ರಹ್ಮನ ಆತ್ಮನನ್ನೂ ಸಹ ಆಸ್ತಿಯನ್ನು ಕೊಡುವುದಕ್ಕಾಗಿ ತಮ್ಮವರನ್ನಾಗಿ ಮಾಡಿಕೊಂಡಿದ್ದಾರೆ. ಬ್ರಹ್ಮಾರವರ ಆತ್ಮನಿಗೂ ಸಹ ನನ್ನನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಬ್ರಹ್ಮಾಕುಮಾರ-ಕುಮಾರಿಯರಿಗೂ ಸಹ ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಹೇಳುತ್ತಾರೆ. ಜೊತೆಜೊತೆಗೆ ದೇಹಾಭಿಮಾನವನ್ನು ಬಿಡಬೇಕೆಂದು ಹೇಳುತ್ತಾರೆ. ಇವು ತಿಳುವಳಿಕೆಯ ಮಾತುಗಳಾಗಿವೆ. 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಈಗ ಈ ಶರೀರವು ಜಡಜಡೀಭೂತ ಸ್ಥಿತಿಯಾಗಿಬಿಟ್ಟಿದೆ, ರೋಗಿಯಾಗಿಬಿಟ್ಟಿದೆ. ನೀವು ಮಕ್ಕಳು ಎಷ್ಟು ನಿರೋಗಿಯಾಗಿದ್ದಿರಿ, ಸತ್ಯಯುಗದಲ್ಲಿ ಯಾವುದೇ ರೋಗವಿರಲಿಲ್ಲ, ಸದಾ ಆರೋಗ್ಯವಂತರಾಗಿದ್ದಿರಿ, ಎಂದೂ ದಿವಾಳಿಯಾಗಿರಲಿಲ್ಲ. ಈಗಿನಿಂದಲೇ ತಮ್ಮ 21 ಜನ್ಮಗಳ ಆಸ್ತಿಯನ್ನು ಪಡೆದುಕೊಳ್ಳುತ್ತೀರಿ ಆದ್ದರಿಂದ ದಿವಾಳಿಯಾಗಲು ಸಾಧ್ಯವಿಲ್ಲ. ಇಲ್ಲಂತೂ ದಿವಾಳಿಯಾಗುತ್ತಲೇ ಇರುತ್ತಾರೆ. ಮಕ್ಕಳಿಗೆ ತಿಳಿಸಲಾಗಿದೆ- ಮಕ್ಕಳೇ, ಪರಮಪಿತ ಶಿವ ಪರಮಾತ್ಮಾಯ ನಮಃ ಎಂದು ಹಾಡುತ್ತಾರೆ, ಬ್ರಹ್ಮನನ್ನು ಪರಮಾತ್ಮ ಎಂದು ಹೇಳುವುದಿಲ್ಲ. ಅವರನ್ನು ಪ್ರಜಾಪಿತ ಎಂದು ಹೇಳಲಾಗುತ್ತದೆ. ದೇವತೆಗಳು ಸೂಕ್ಷ್ಮವತನದಲ್ಲಿದ್ದಾರೆ. ಈ ಪ್ರಜಾಪಿತನೇ ಮತ್ತೆ ಹೋಗಿ ಸೂಕ್ಷ್ಮದೇವತೆಯಾಗುತ್ತಾರೆ ಎನ್ನುವುದು ಯಾರಿಗೂ ತಿಳಿದಿಲ್ಲ. ಪ್ರಜಾಪಿತ ಬ್ರಹ್ಮಾ ಸೂಕ್ಷ್ಮವತನವಾಸಿ ಅರ್ಥಾತ್ ಸೂಕ್ಷ್ಮದೇವತೆ ಆಗುತ್ತಾರೆ. ಈಗ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ- ನನ್ನೊಬ್ಬನನ್ನೇ ನೆನಪು ಮಾಡಿ. ನೀವು ಹೇಗೆ ನಿರಾಕಾರನಾಗಿದ್ದೀರಿ ಹಾಗೆಯೇ ನಾನೂ ಸಹ ನಿರಾಕಾರನಾಗಿದ್ದೇನೆ ಆದ್ದರಿಂದ ನನ್ನೊಬ್ಬನನ್ನೇ ನೆನಪು ಮಾಡಬೇಕು ಮತ್ತು ಯಾರೆಲ್ಲಾ ದೇಹಧಾರಿಗಳಿದ್ದಾರೆ ಅವರಿಂದ ಬುದ್ಧಿಯೋಗವನ್ನು ತೆಗೆಯಬೇಕಾಗಿದೆ. ದೇಹಸಹಿತ ಈ ಕಣ್ಣುಗಳಿಂದ ಏನೆಲ್ಲಾ ನೋಡುತ್ತೀರಿ, ಇದೆಲ್ಲವೂ ಸಮಾಪ್ತಿಯಾಗುವುದಿದೆ, ಮತ್ತೆ ನೀವು ಶಾಂತಿಧಾಮದ ಮುಖಾಂತರ ಸುಖಧಾಮಕ್ಕೆ ಹೋಗಬೇಕಾಗುತ್ತದೆ. ಆ ಸುಖಧಾಮ ಅಥವಾ ಕೃಷ್ಣಪುರಿಯ ಇಚ್ಛೆಯೇ ನಿಮಗಿರುತ್ತದೆ ಅಂದಾಗ ಆ ಶಾಂತಿಧಾಮ. ಸುಖಧಾಮವನ್ನು ನೆನಪು ಮಾಡಿ. ಭಲೆ ಸತ್ಯಯುಗದಲ್ಲಿಯೂ ಸಹ ಪವಿತ್ರತೆ, ಸುಖ-ಶಾಂತಿ ಇರುತ್ತದೆ ಆದರೆ ಅದನ್ನು ಶಾಂತಿಧಾಮವೆಂದು ಹೇಳುವುದಿಲ್ಲ. ಕರ್ಮವನ್ನಂತೂ ಎಲ್ಲರೂ ಮಾಡಬೇಕಾಗಿದೆ, ರಾಜ್ಯಭಾರ ಮಾಡಬೇಕಾಗಿದೆ. ಸತ್ಯಯುಗದಲ್ಲಿಯೂ ಸಹ ಕರ್ಮ ಅರ್ಥಾತ್ ಕೆಲಸ ಮಾಡುತ್ತಾರೆ ಆದರೆ ಆ ಕರ್ಮವು ವಿಕರ್ಮವಾಗುವುದಿಲ್ಲ ಏಕೆಂದರೆ ಅಲ್ಲಿ ಮಾಯೆಯೇ ಇರುವುದಿಲ್ಲ. ಇದಂತೂ ತಿಳಿದುಕೊಳ್ಳುವ ಮಾತಾಗಿದೆ, ಬ್ರಹ್ಮನ ದಿನವಾಗಿದೆ. ದಿನದಲ್ಲಿ ಮೋಸ ಹೋಗುವುದಿಲ್ಲ. ರಾತ್ರಿಯ ಅಂಧಕಾರದಲ್ಲಿ ಮೋಸ ಹೋಗುತ್ತಾರೆ ಆದ್ದರಿಂದ ಅರ್ಧಕಲ್ಪ ಭಕ್ತಿ, ಬ್ರಹ್ಮನ ರಾತ್ರಿಯಾಗಿದೆ. ಅರ್ಧಕಲ್ಪ ಬ್ರಹ್ಮನ ದಿನವಾಗಿದೆ. ತಂದೆಯು ತಿಳಿಸಿದರು- ಒಂದು ಸ್ಥಾನದಲ್ಲಿ 6 ತಿಂಗಳು ದಿನ, 6 ತಿಂಗಳು ರಾತ್ರಿ ಇರುತ್ತದೆ ಆದರೆ ಈ ಮಾತು ಯಾವುದೇ ಶಾಸ್ತ್ರಗಳಲ್ಲಿ ಗಾಯನ ಮಾಡಿಲ್ಲ. ಈ ಬ್ರಹ್ಮನ ದಿನ, ಬ್ರಹ್ಮನ ರಾತ್ರಿಯು ಶಾಸ್ತ್ರಗಳಲ್ಲಿ ಗಾಯನ ಮಾಡಲ್ಪಟ್ಟಿದೆ. ಈಗ ವಿಷ್ಣುವಿನ ರಾತ್ರಿ ಎಂದು ಏಕೆ ಕರೆಯುವುದಿಲ್ಲ! ಅಲ್ಲಿ ಅವರಿಗೆ ಈ ಜ್ಞಾನವೇ ಇರುವುದಿಲ್ಲ. ಬ್ರಾಹ್ಮಣರಿಗೆ ತಿಳಿದಿದೆ- ಬ್ರಹ್ಮಾ ಮತ್ತು ಬ್ರಹ್ಮಾಕುಮಾರಿಯರಿಗಾಗಿ ಈ ಬೇಹದ್ದಿನ ಹಗಲು ಮತ್ತು ರಾತ್ರಿ ಇದೆ. ಇದನ್ನು ಶಿವತಂದೆಯ ದಿನ ಮತ್ತು ರಾತ್ರಿ ಎಂದು ಹೇಳುವುದಿಲ್ಲ. ನಮ್ಮದು ಅರ್ಧಕಲ್ಪ ದಿನ ಮತ್ತೆ ಅರ್ಧಕಲ್ಪ ರಾತ್ರಿಯಾಗಿದೆ ಎನ್ನುವುದು ನೀವು ಮಕ್ಕಳಿಗೆ ತಿಳಿದಿದೆ. ಆಟವೇ ಹೀಗಿದೆ, ಪ್ರವೃತ್ತಿ ಮಾರ್ಗದವರನ್ನು ಸನ್ಯಾಸಿಗಳು ಅರಿತುಕೊಂಡಿಲ್ಲ. ಅವರಂತೂ ನಿವೃತ್ತಿ ಮಾರ್ಗದವರಾಗಿದ್ದಾರೆ. ಅವರು ಸ್ವರ್ಗ ಮತ್ತು ನರಕದ ಮಾತನ್ನು ಅರಿತುಕೊಂಡಿಲ್ಲ. ಅವರಂತೂ ಸ್ವರ್ಗವೆಲ್ಲಿಂದ ಬಂದಿತೆಂದು ಎಂದು ಹೇಳುತ್ತಾರೆ ಏಕೆಂದರೆ ಶಾಸ್ತ್ರಗಳಲ್ಲಿ ಸತ್ಯಯುಗವನ್ನೂ ಸಹ ನರಕವನ್ನಾಗಿ ಮಾಡಿಬಿಟ್ಟಿದ್ದಾರೆ. ಈಗ ತಂದೆಯು ಬಹಳ ಮಧುರವಾದ ಮಾತುಗಳನ್ನು ತಿಳಿಸುತ್ತಾರೆ. ಹೇಳುತ್ತಾರೆ- ಮಕ್ಕಳೇ, ನಾನು ನಿರಾಕಾರ ಜ್ಞಾನಸಾಗರನಾಗಿದ್ದೇನೆ. ಜ್ಞಾನವನ್ನು ಕೊಡಲು ಈ ಸಮಯದಲ್ಲಿ ನನ್ನ ಪಾತ್ರವು ಇಮರ್ಜ್ ಆಗುತ್ತದೆ. ತಂದೆಯು ತಮ್ಮ ಪರಿಚಯವನ್ನು ಕೊಡುತ್ತಾರೆ. ಭಕ್ತಿಮಾರ್ಗದಲ್ಲಿ ನನ್ನ ಜ್ಞಾನವೂ ಇಮರ್ಜ್ ಆಗುವುದಿಲ್ಲ. ಆ ಸಮಯದಲ್ಲಿ ಎಲ್ಲವೂ ಭಕ್ತಿಮಾರ್ಗದ ರೀತಿ-ಪದ್ಧತಿಗಳೇ ನಡೆಯುತ್ತವೆ. ನಾಟಕದನುಸಾರ ಯಾವ ಭಕ್ತರು ಯಾವ ಭಾವನೆಯಿಂದ ಪೂಜೆ ಮಾಡುತ್ತಾರೆ ಅವರಿಗೆ ಸಾಕ್ಷಾತ್ಕಾರವನ್ನು ಮಾಡಿಸಲು ನಾನು ನಿಮಿತ್ತನಾಗಿರುತ್ತೇನೆ. ಆ ಸಮಯದಲ್ಲಿ ನಾನಾತ್ಮನಲ್ಲಿ ಜ್ಞಾನದ ಪಾತ್ರವು ಇಮರ್ಜ್ ಆಗಿರುವುದಿಲ್ಲ. ಅದು ಈಗ ಇಮರ್ಜ್ ಆಗಿದೆ. ಹೇಗೆ ನಿಮ್ಮ 84 ಜನ್ಮಗಳ ಪಾತ್ರವು ತುಂಬಲ್ಪಟ್ಟಿದೆ. ಹಾಗೆಯೇ ನನ್ನದೂ ಸಹ ಯಾವ-ಯಾವ ಪಾತ್ರವು ನಾಟಕದಲ್ಲಿ ನೋಂದಾಯಿಸಲ್ಪಟ್ಟಿದೆ, ಅದನ್ನು ಅದೇ ಸಮಯದಲ್ಲಿ ಅಭಿನಯಿಸುತ್ತೇನೆ. ಇದರಲ್ಲಿ ಸಂಶಯದ ಮಾತಿಲ್ಲ. ಒಂದುವೇಳೆ ನನ್ನಲ್ಲಿ ಜ್ಞಾನವು ಇಮರ್ಜ್ಯಾಯಿತೆಂದರೆ ಭಕ್ತಿಮಾರ್ಗದಲ್ಲಿಯೂ ಯಾರಿಗಾದರೂ ತಿಳಿಸುತ್ತಾರೆ. ಅಲ್ಲಿ ಲಕ್ಷ್ಮೀ-ನಾರಾಯಣರ ಆತ್ಮಗಳಲ್ಲಿಯೂ ಈ ಜ್ಞಾನವು ಇರುವುದಿಲ್ಲ. ನಾಟಕದಲ್ಲಿ ಪಾತ್ರವೇ ಇಲ್ಲ. ಮನುಷ್ಯ ಮಾತ್ರರಿಗೆ ಕೆಲವರು ಹೇಳುತ್ತಾರೆ- ನಮಗೆ ಇಂತಹ ಗುರು ಸದ್ಗತಿ ಕೊಡುತ್ತಾರೆ. ಆದರೆ ಗುರುಗಳು ಸದ್ಗತಿಯನ್ನು ಹೇಗೆ ಕೊಡುತ್ತಾರೆ? ಅವರದೂ ಪಾತ್ರವಿದೆ. ಮತ್ತೆ ಇನ್ನೂ ಕೆಲವರು ಅವಶ್ಯವಾಗಿ ಈ ಪ್ರಪಂಚವೂ ಪುನರಾವರ್ತನೆ ಆಗುತ್ತಾ ಇರುತ್ತದೆ, ಈ ಚಕ್ರವೂ ಸುತ್ತುತ್ತಾ ಇರುತ್ತದೆ ಎಂದು ಹೇಳುತ್ತಾರೆ ಆದರೆ ಅವರು ಚರಕವನ್ನು ಇಟ್ಟಿದ್ದಾರೆ, ಇದು ಸೃಷ್ಟಿಚಕ್ರವಾಗಿದೆ. ಈ ವಿಚಿತ್ರವನ್ನು ನೋಡಿ! ಚರಕವನ್ನು ತಿರುಗಿಸುವುದರಿಂದ ಹೊಟ್ಟೆಯು ತುಂಬುತ್ತದೆ. ಇಲ್ಲಿ ಈ ಸೃಷ್ಟಿಚಕ್ರವನ್ನು ಅರಿತುಕೊಳ್ಳುವುದರಿಂದ 21 ಜನ್ಮಗಳಿಗೋಸ್ಕರ ಪ್ರಾಲಬ್ಧವೂ ಸಿಗುತ್ತದೆ. ತಂದೆಯು ಯಥಾರ್ಥರೀತಿಯಲ್ಲಿ ಅರ್ಥವನ್ನು ತಿಳಿಸುತ್ತಾರೆ. ಉಳಿದೆಲ್ಲರೂ ಅಯತಾರ್ಥವನ್ನೇ ತಿಳಿಸುತ್ತಾರೆ. ನಿಮ್ಮ ಬುದ್ಧಿಯ ಬೀಗವು ತೆರೆಯಲ್ಪಟ್ಟಿದೆ. ಶ್ರೇಷ್ಠಾತಿಶ್ರೇಷ್ಠ ಭಗವಂತನಾಗಿದ್ದಾರೆ. ಮತ್ತೆ ಬ್ರಹ್ಮಾ-ವಿಷ್ಣು-ಶಂಕರನು ಸೂಕ್ಷ್ಮವತನವಾಸಿಯಾಗಿದ್ದಾರೆ ಮತ್ತೆ ಸ್ಥೂಲವತನದಲ್ಲಿ ಮೊದಲು ಲಕ್ಷ್ಮೀ-ನಾರಾಯಣ ಮತ್ತೆ ಜಗದಂಬಾ-ಜಗತ್ಪಿತನಿದ್ದಾರೆ. ಇವರು ಸಂಗಮಯುಗಿಗಳಾಗಿದ್ದಾರೆ ಆದರೆ ಇವರೂ ಮನುಷ್ಯರೇ ಆಗಿದ್ದಾರೆ. ಅನೇಕ ಭುಜ ಮುಂತಾದವುಗಳೇನೂ ಇಲ್ಲ. ಬ್ರಹ್ಮನಿಗೂ ಸಹ 2 ಭುಜಗಳೇ ಇರುತ್ತದೆ. ಭಕ್ತಿಮಾರ್ಗದ ಚಿತ್ರಗಳಲ್ಲಿ ಎಷ್ಟೊಂದು ಭುಜಗಳನ್ನು ತೋರಿಸಿದ್ದಾರೆ. ಒಂದುವೇಳೆ ಯಾರಿಗಾದರೂ 8 ಭುಜಗಳಿದೆಯೆಂದರೆ 8 ಕಾಲುಗಳೂ ಇರಬೇಕಲ್ಲವೇ ಆದರೆ ಈ ರೀತಿಯಿರುವುದಿಲ್ಲ. ರಾವಣನಿಗೆ 10 ತಲೆಗಳನ್ನು ತೋರಿಸುವುದರಿಂದ 20 ಕಾಲುಗಳನ್ನು ತೋರಿಸಬೇಕಲ್ಲವೆ. ಇದೆಲ್ಲವೂ ಗೊಂಬೆಗಳ ಆಟವಾಗಿದೆ. ಸ್ವಲ್ಪವೂ ಅರಿತುಕೊಂಡಿಲ್ಲ. ರಾಮಾಯಣವನ್ನು ಕೇಳುತ್ತಾರೆಂದರೆ ಬಹಳ ಅಳುತ್ತಾರೆ. ತಂದೆಯು ತಿಳಿಸುತ್ತಾರೆ- ಇದೆಲ್ಲವೂ ಭಕ್ತಿಮಾರ್ಗವಾಗಿದೆ, ಯಾವಾಗಿನಿಂದ ನೀವು ವಾಮಮಾರ್ಗದಲ್ಲಿ ಹೋದಿರಿ, ಆಗಿನಿಂದ ಕಾಮಚಿತೆಯ ಮೇಲೆ ಕುಳಿತು ನೀವು ಕಪ್ಪಾಗಿಬಿಟ್ಟಿದ್ದೀರಿ. ಈಗ ಈ ಒಂದು ಜನ್ಮದಲ್ಲಿ ಜ್ಞಾನಚಿತೆಯ ಕಂಕಣವನ್ನು ಕಟ್ಟಿಕೊಳ್ಳುವುದರಿಂದ 21 ಜನ್ಮಗಳ ಆಸ್ತಿಯೂ ಸಿಗುತ್ತದೆ, ಅಲ್ಲಿ ಆತ್ಮಾಭಿಮಾನಿಗಳಾಗಿರುತ್ತಾರೆ. ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ. ಅಳುವ ಮುಂತಾದ ಮಾತುಗಳು ಇರುವುದಿಲ್ಲ. ಇಲ್ಲಿ ಮಕ್ಕಳು ಜನ್ಮ ಪಡೆಯುತ್ತಾರೆಂದರೆ ಶುಭಾಷಯಗಳನ್ನು ಕೊಡುತ್ತಾರೆ, ವಿಜೃಂಭಣೆಯಿಂದ ಆಚರಿಸುತ್ತಾರೆ. ಒಂದುವೇಳೆ ನಾಳೆ ಆ ಮಗು ಸತ್ತು ಹೋಯಿತೆಂದರೆ ಒಂದೇ ಸಮನೆ ಅಳುತ್ತಾರೆ, ದುಃಖಧಾಮವಾಗಿದೆಯಲ್ಲವೇ. ಭಾರತದಲ್ಲಿಯೇ ಆಟವೆಲ್ಲವೂ ಮಾಡಲ್ಪಟ್ಟಿದೆ. ಭಾರತವೇ ಅವಿನಾಶಿ ಖಂಡವಾಗಿದೆ. ಇಲ್ಲಿಯೇ ಸುಖ-ದುಃಖ, ನರಕ-ಸ್ವರ್ಗದ ಆಸ್ತಿ ಇರುತ್ತದೆ. ಸ್ವರ್ಗದ ರಚಯಿತ ಪರಮಾತ್ಮನಿಂದಲೇ ಅವಶ್ಯವಾಗಿ ಸ್ವರ್ಗಸ್ಥಾಪನೆ ಆಗಿರುವುದು. ಒಂದುವೇಳೆ ಇದು ಲಕ್ಷಾಂತರ ವರ್ಷಗಳ ಮಾತಾಗಿದ್ದರೆ ಹೇಗೆ ನೆನಪಿರುತ್ತಿತ್ತು! ಸ್ವರ್ಗವೂ ಮತ್ತೆ ಯಾವಾಗ ಆಗುತ್ತದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಅವರಂತೂ ಕಲಿಯುಗದ ಆಯಸ್ಸನ್ನು ಇನ್ನೂ 40,000 ವರ್ಷಗಳಿದೆ ಎಂದು ಹೇಳಿಬಿಡುತ್ತಾರೆ ಅಂದಾಗ 40,000 ವರ್ಷಗಳಲ್ಲಿ ಎಷ್ಟೊಂದು ಜನ್ಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ! 5000 ವರ್ಷಗಳಲ್ಲಿಯೇ 84 ಜನ್ಮಗಳಿದೆ. ಇದೆಲ್ಲವೂ ಈಗ ನೀವು ಮಕ್ಕಳಿಗೆ ಅರ್ಥವಾಗುತ್ತದೆ. ನೀವು ಪ್ರಕಾಶತೆಯಲ್ಲಿದ್ದೀರಿ, ಬಾಕಿ ಯಾರಿಗೆ ಜ್ಞಾನವಿಲ್ಲವೋ ಅವರು ಅಜ್ಞಾನದ ನಿದ್ರೆಯಲ್ಲಿ ನಿದ್ರಿಸುತ್ತಿದ್ದಾರೆ. ಅಜ್ಞಾನ ಅಂಧಕಾರದ ರಾತ್ರಿಯಾಗಿದೆ ಅರ್ಥಾತ್ ಸೃಷ್ಟಿಚಕ್ರದ ಜ್ಞಾನವೇ ಇಲ್ಲ. ನಾವು ಪಾತ್ರಧಾರಿಗಳಾಗಿದ್ದೇವೆ, ಈ ಸೃಷ್ಟಿಚಕ್ರದಲ್ಲಿ ನಾಲ್ಕುಭಾಗಗಳಿವೆ. ಈ ಮಾತುಗಳನ್ನು ಮನುಷ್ಯರೇ ತಿಳಿದುಕೊಳ್ಳುತ್ತಾರೆ. ಈಗ ತಂದೆಯೇ ಜ್ಞಾನಪೂರ್ಣನಾಗಿದ್ದಾರೆ ಎಂದು ನೀವು ಮಕ್ಕಳೇ ತಿಳಿದುಕೊಳ್ಳುತ್ತೀರಿ. ಅವರಲ್ಲಿ ಏನೆಲ್ಲಾ ವಿಶೇಷತೆಗಳಿವೆ ಅದೆಲ್ಲವನ್ನು ಮಕ್ಕಳಿಗೆ ದಾನ ಮಾಡುತ್ತಾರೆ. ಜ್ಞಾನಸಾಗರನಿಂದ ನೀವು ಆಸ್ತಿಯನ್ನು ಪಡೆಯುತ್ತೀರಿ. ತಂದೆಯು ಯಾವಾಗಲೂ ಹೇಳುತ್ತಾರೆ- ದೇಹಧಾರಿಗಳನ್ನು ನೆನಪು ಮಾಡಬಾರದು. ಭಲೆ ನಾನೂ ಸಹ ದೇಹದ ಮುಖಾಂತರ ತಿಳಿಸುತ್ತೇನೆ ಆದರೆ ನೀವು ನಿರಾಕಾರನಾದ ನನ್ನನ್ನೇ ನೆನಪು ಮಾಡಬೇಕು. ನೆನಪು ಮಾಡುತ್ತೀರೆಂದರೆ ಧಾರಣೆಯೂ ಆಗುತ್ತದೆ, ಬುದ್ಧಿಯ ಬೀಗವೂ ತೆರೆಯುತ್ತದೆ. 15 ನಿಮಿಷ ಅಥವಾ ಅರ್ಧಗಂಟೆಯಿಂದ ಪ್ರಾರಂಭ ಮಾಡಿ ಮತ್ತೆ ಅದನ್ನು ಹೆಚ್ಚಿಸುಕೊಳ್ಳುತ್ತಾ ಇರಿ. ಅಂತ್ಯದ ಸಮಯದಲ್ಲಿ ಒಬ್ಬ ತಂದೆಯ ವಿನಃ ಮತ್ತ್ಯಾರ ನೆನಪು ಇರಬಾರದು. ಇದಕ್ಕಾಗಿ ಸನ್ಯಾಸಿಗಳು ಎಲ್ಲವನ್ನೂ ಬಿಟ್ಟುಬಿಡುತ್ತಾರೆ, ತಪಸ್ಸಿನಲ್ಲಿ ಕುಳಿತುಕೊಳ್ಳುತ್ತಾರೆ. ಯಾವಾಗ ಅವರು ಶರೀರವನ್ನು ಬಿಡುತ್ತಾರೆ, ಆ ಸಮಯದಲ್ಲಿ ಅವರಿರುವ ವಾಯುಮಂಡಲವೂ ಸಹ ಶಾಂತವಾಗಿಬಿಡುತ್ತದೆ. ಹೇಗೆ ಯಾವುದೇ ನಗರದಲ್ಲಿ ಮಹಾಪುರುಷರು ಶರೀರಬಿಟ್ಟರೂ ಸಹ ಅಲ್ಲಿನ ವಾತಾವರಣವೂ ಶಾಂತಿಯಾಗಿಬಿಡುತ್ತದೆ. ನಿಮಗಂತೂ ಈಗ ಜ್ಞಾನವಿದೆ. ಆತ್ಮ ಅವಿನಾಶಿಯಾಗಿರುವ ಕಾರಣ ಅದು ಲೀನವಾಗಲು ಸಾಧ್ಯವಿಲ್ಲ. ಅವರಲ್ಲಂತೂ ಜ್ಞಾನವಿಲ್ಲ.

ತಂದೆ ತಿಳಿಸುತ್ತಾರೆ- ಆತ್ಮವು ಎಂದೂ ವಿನಾಶವಾಗುವುದಿಲ್ಲ, ಅದರಲ್ಲಿ ಯಾವ ಜ್ಞಾನವಿದೆ ಅದೂ ಸಹ ಎಂದಿಗೂ ವಿನಾಶವಾಗುವುದಿಲ್ಲ, ಅವಿನಾಶಿ ನಾಟಕವಾಗಿದೆ. ಸತ್ಯಯುಗ, ತ್ರೇತಾ, ದ್ವಾಪರ, ಕಲಿಯುಗ ಈ ಚಕ್ರವು ತಿರುಗುತ್ತಾ ಇರುತ್ತದೆ. ನೀವು ಮತ್ತೆ ಲಕ್ಷ್ಮೀ-ನಾರಾಯಣರಾಗುತ್ತೀರಿ ಹಾಗೂ ಅನ್ಯ ಧರ್ಮದವರೂ ಸಹ ನಂಬರ್ವಾರ್ ಆಗಿ ಬರುತ್ತಾರೆ. ಭಗವಂತ ತಂದೆ ಒಬ್ಬರೇ ಆಗಿದ್ದಾರೆ. ಸತ್ಯಯುಗದಿಂದ ಹಿಡಿದು ಕಲಿಯುಗದ ತನಕ ವೃದ್ಧಿಯಾಗುತ್ತಾ ಇರುತ್ತದೆ, ಇನ್ನೊಂದು ವೃಕ್ಷವನ್ನು ಸ್ಥಾಪನೆ ಮಾಡಲು ಸಾಧ್ಯವಿಲ್ಲ. ಚಕ್ರವೂ ಸಹ ಒಂದೇ ಆಗಿದೆ. ನೆನಪೂ ಸಹ ಒಬ್ಬರನ್ನೇ ಮಾಡುತ್ತಾರೆ. ಗುರುನಾನಕನನ್ನೂ ಸಹ ನೆನಪು ಮಾಡುತ್ತಾರೆ ಆದರೆ ಅವರು ಮತ್ತೆ ತಮ್ಮ ಸಮಯದಲ್ಲಿಯೇ ಬರಬೇಕಾಗಿದೆ. ಜನನ-ಮರಣದಲ್ಲಿ ಎಲ್ಲರೂ ಬರಲೇಬೇಕಾಗಿದೆ. ಎಲ್ಲಿ ನೋಡಿದರೂ ಕೃಷ್ಣನೇ ಕೃಷ್ಣನೆಂದು ಎಲ್ಲರೂ ತಿಳಿಯುತ್ತಾರೆ. ಕೆಲ-ಕೆಲವರು ಕೆಲ-ಕೆಲವರನ್ನು ಒಪ್ಪುತ್ತಾರೆ. ತಂದೆ ತಿಳಿಸುತ್ತಾರೆ- ಮಕ್ಕಳೇ, ಯುಕ್ತಿಯಿಂದ ತಿಳಿಸಬೇಕಾಗಿದೆ, ಈಶ್ವರನು ಎಲ್ಲರ ತಂದೆ, ನಿರಾಕಾರನಾಗಿದ್ದಾರೆ. ಗೀತೆಯಲ್ಲಿ ಭಗವಾನುವಾಚ ಇದೆ ಆದ್ದರಿಂದ ಗೀತೆಯು ಎಲ್ಲರ ಮಾತಾ-ಪಿತಾ ಆಗಿದೆ ಏಕೆಂದರೆ ಗೀತೆಯಿಂದಲೇ ಎಲ್ಲರಿಗೂ ಸದ್ಗತಿ ಸಿಗುತ್ತದೆ. ತಂದೆಯು ಎಲ್ಲರ ದುಃಖಹರ್ತ-ಸುಖಕರ್ತನಾಗಿದ್ದಾರೆ. ಭಾರತವೇ ಎಲ್ಲರ ತೀರ್ಥಸ್ಥಾನವಾಗಿದೆ. ಸದ್ಗತಿಯೂ ತಂದೆಯ ಮುಖಾಂತರವೇ ಸಿಗುತ್ತದೆ. ಭಾರತವು ತಂದೆಯ ಜನ್ಮಸ್ಥಾನವಾಗಿದೆ, ಅವರನ್ನು ಎಲ್ಲರೂ ನೆನಪು ಮಾಡುತ್ತಾರೆ. ಆ ತಂದೆಯೇ ಬಂದು ಎಲ್ಲರನ್ನು ರಾವಣರಾಜ್ಯದಿಂದ ಮುಕ್ತಗೊಳಿಸುತ್ತಾರೆ. ಈಗ ಇದು ರೌರವ ನರಕವಾಗಿದೆ.

ಈಗ ತಂದೆಯು ತಿಳಿಸುತ್ತಾರೆ- ಹೇ! ದೇಹಧಾರಿ ಆತ್ಮಗಳೇ, ಈಗ ಹಿಂತಿರುಗಿ ಹೋಗಬೇಕಾಗಿದೆ, ಕೇವಲ ನನ್ನನ್ನು ನೆನಪು ಮಾಡಿ. ಯಾವುದೇ ದೇಹಧಾರಿಗಳಲ್ಲಿ ಸಿಕ್ಕಿಕೊಳ್ಳುತ್ತೀರೆಂದರೆ ಅಳಬೇಕಾಗುತ್ತದೆ. ಒಬ್ಬರನ್ನೇ ನೆನಪು ಮಾಡಬೇಕು, ಅಲ್ಲಿಯೇ ಹೋಗಬೇಕಾಗಿದೆ. ನಿಮ್ಮ ಅಳು (ದುಃಖ) 21 ಜನ್ಮಗಳಿಗೆ ಸಮಾಪ್ತಿ ಆಗುತ್ತದೆ. ಯಾರಾದರೂ ಶರೀರಬಿಟ್ಟಾಗ ನೀವು ಅಳಲು ಪ್ರಾರಂಭಿಸುತ್ತೀರೆಂದರೆ ಮತ್ತೆ ಅಳುವುದರಿಂದ ಮುಕ್ತರಾಗುವುದಿಲ್ಲ. ಯಾವುದೇ ದೇಹಧಾರಿಗಳ ನೆನಪಿನಲ್ಲಿ ಶಾಕ್ ಆಗಿ ಶರೀರ ಬಿಡುತ್ತೀರೆಂದರೆ ದುರ್ಗತಿಯಾಗಿಬಿಡುತ್ತದೆ. ನೀವು ಶಿವತಂದೆಯನ್ನು ನೆನಪು ಮಾಡಬೇಕಾಗಿದೆ. ಕೆಲವರು ಹೃದಯವಿಧೀರ್ಣರಾಗಿಬಿಡುತ್ತಾರೆ ಆದ್ದರಿಂದ ನೀವು ಏಳುತ್ತಾ-ಕುಳಿತುಕೊಳ್ಳುತ್ತಾ ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ಇದನ್ನೂ ಸಹ ಬುದ್ಧಿಯಲ್ಲಿ ಕೂರಿಸಬೇಕಾಗುತ್ತದೆ ಏಕೆಂದರೆ ಇಡೀ ದಿನದಲ್ಲಿ ನೆನಪು ಮಾಡುವುದಿಲ್ಲ ಆದ್ದರಿಂದ ಸಂಘಟನೆಯಲ್ಲಿ ಕೂರಿಸುತ್ತೀರೆಂದರೆ ಎಲ್ಲರ ಏಕತೆಯ ಶಕ್ತಿ ಇರುತ್ತದೆ. ಒಂದುವೇಳೆ ಮತ್ತ್ಯಾರದೇ ನೆನಪು ಬುದ್ಧಿಯಲ್ಲಿ ಇರುತ್ತದೆಯೆಂದರೆ ಪುನಃ ಜನ್ಮವನ್ನು ತೆಗೆದುಕೊಳ್ಳಬೇಕಾಗುತ್ತದೆ. ಏನಾದರೂ ಆಗಲಿ ಆದರೆ ಸ್ಥಿರವಾಗಿರಬೇಕಾಗಿದೆ, ದೇಹಭಾನವೂ ಇರಬಾರದು. ಎಷ್ಟು ತಂದೆಯನ್ನು ನೆನಪು ಮಾಡುತ್ತೀರೋ ಅದು ನೆನಪಿನ ರೆಕಾರ್ಡಿನಲ್ಲಿ ನೊಂದಾಯಿಸಲ್ಪಡುತ್ತದೆ ಮತ್ತು ನಿಮಗೆ ತುಂಬಾ ಖುಷಿಯಿರುವುದು. ನಾವು ಬೇಗ ಹೋಗುತ್ತೇವೆ, ಹೋಗಿ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತೇವೆ ಎನ್ನುವ ಖುಷಿಯಿರುತ್ತದೆ. ತಂದೆಯು ಯಾವಾಗಲೂ ಹೇಳುತ್ತಾರೆ- ಮಕ್ಕಳೇ, ನೀವು ಎಂದೂ ಅಳಬಾರದಾಗಿದೆ ಏಕೆಂದರೆ ವಿಧವೆಯರೇ ಅಳುತ್ತಾರೆ. ನೀವು ಇಲ್ಲಿಯೇ ಸರ್ವಗುಣ ಸಂಪನ್ನರಾಗಬೇಕಾಗಿದೆ. ಅದು ಮತ್ತೆ ಅವಿನಾಶಿಯಾಗಿಬಿಡುತ್ತದೆ, ಇದರಲ್ಲಿ ಪರಿಶ್ರಮಪಡಬೇಕಾಗಿದೆ. ತಮ್ಮಮೇಲೆ ಗಮನವಿಟ್ಟುಕೊಳ್ಳಬೇಕು ಏಕೆಂದರೆ ಯಾವುದೇ ಭೂತವಿದ್ದರೂ ಸಹ ಉತ್ತಮ ಪದವಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ನಾರದನು ಭಕ್ತನಾಗಿದ್ದ, ಲಕ್ಷ್ಮಿಯನ್ನು ದರ್ಶನ ಮಾಡಲು ಬಯಸುತ್ತಿದ್ದನು ಆದರೆ ಮುಖ ನೋಡಿದರೆ ಕಪಿಯ ರೀತಿಯಲ್ಲಿತ್ತು....... ನೀವು ಲಕ್ಷ್ಮಿಯನ್ನು ದರ್ಶನ ಮಾಡಲು ಪುರುಷಾರ್ಥ ಮಾಡುತ್ತಿದ್ದೀರಿ, ಯಾರಲ್ಲಿ ಪಂಚಭೂತಗಳು ಇರುತ್ತವೆ ಅವರು ದರ್ಶನ ಮಾಡಲು ಹೇಗೆ ಸಾಧ್ಯ! ಬಹಳ ಪರಿಶ್ರಮಪಡಬೇಕಾಗಿದೆ. ಜಬರ್ದಸ್ತ್ ಲಾಟರಿಯನ್ನು ಗೆಲ್ಲುತ್ತೀರಿ. ಆವಶ್ಯವಾಗಿ ರಾಜರಾಗುತ್ತೀರೆಂದರೆ ಅಲ್ಲಿ ಪ್ರಜೆಗಳೂ ಇರುತ್ತಾರೆ. ಲಕ್ಷಾಂತರ ಆತ್ಮಗಳು ವೃದ್ಧಿಯಾಗುತ್ತಾ ಇರುತ್ತಾರೆ. ಮೊಟ್ಟಮೊದಲು ಯಾರೇ ಬರಲಿ ಅವರಿಗೆ ತಂದೆಯ ಪರಿಚಯ ಕೊಡಿ. ಪತಿತ-ಪಾವನ, ಪರಮಪಿತ ಪರಮಾತ್ಮನೊಂದಿಗೆ ನಿಮ್ಮ ಸಂಬಂಧವೇನು! ಎಂದು ಕೇಳಬೇಕು. ಆಗ ಅವರು ಅವಶ್ಯವಾಗಿ ಪರಮಾತ್ಮನು ತಂದೆಯಾಗಿದ್ದಾರೆಂದು ಹೇಳಲೇಬೇಕಾಗುತ್ತದೆ. ನಂತರ ಅವರಿಂದ ಬರೆಸಿಕೊಳ್ಳಿ- ಒಬ್ಬರೇ ಪತಿತ-ಪಾವನ, ಪರಮಪಿತ ಪರಮಾತ್ಮ ಸರ್ವರನ್ನು ಪಾವನ ಮಾಡುವವರಾಗಿದ್ದಾರೆ, ಅವರಿಂದ ಬರೆಸಿಕೊಂಡಾಗ ಮತ್ತೆ ಅವರು ಯಾವುದೇ ವಾದ ಮಾಡುವುದಿಲ್ಲ. ಆಗ ಹೇಳಿ- ನೀವಿಲ್ಲಿ ಕೇಳಲು ಬಂದಿದ್ದೀರೋ ಅಥವಾ ಹೇಳಲು ಬಂದಿದ್ದೀರೋ? ಸರ್ವರ ಸದ್ಗತಿದಾತ ಒಬ್ಬ ನಿರಾಕಾರ ತಂದೆಯಾಗಿದ್ದಾರೆ. ಅವರು ಎಂದೂ ಆಕಾರ, ಸಾಕಾರದಲ್ಲಿ ಬರುವುದಿಲ್ಲ. ಒಳ್ಳೆಯದು- ಮತ್ತೆ ಪ್ರಜಾಪಿತನೊಂದಿಗೆ ಏನು ಸಂಬಂಧವಿದೆ? ಅವರು ಸಾಕಾರನಾಗಿದ್ದಾರೆ, ಶಿವಬಾಬಾ ನಿರಾಕಾರ ತಂದೆಯಾಗಿದ್ದಾರೆ. ನಾವು ಒಬ್ಬ ತಂದೆಯನ್ನೇ ನೆನಪು ಮಾಡುತ್ತೇವೆ. ನಮ್ಮ ಗುರಿ-ಉದ್ದೇಶ ಇದಾಗಿದೆ, ಇವರಿಂದ ನಾವು ರಾಜ್ಯಭಾಗ್ಯ ಪಡೆಯುತ್ತೇವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿಹೋಗಿ ಮರಳಿ ಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಯಾವುದೇ ದೇಹಧಾರಿಯಲ್ಲಿ ತಮ್ಮ ಬುದ್ಧಿಯು ಸಿಕ್ಕಿಹಾಕಿಕೊಳ್ಳಬಾರದು, ನೆನಪಿನ ರೆಕಾರ್ಡನ್ನು ಸರಿಯಾಗಿಟ್ಟುಕೊಳ್ಳಬೇಕಾಗಿದೆ, ಎಂದೂ ಅಳಬಾರದಾಗಿದೆ.

2. ತಮ್ಮ ಸ್ವಧರ್ಮ ಶಾಂತಿಯಲ್ಲಿ ಸ್ಥಿತರಾಗಿರಬೇಕಾಗಿದೆ. ಶಾಂತಿಗಾಗಿ ಅಲೆದಾಡಬಾರದು. ಎಲ್ಲರನ್ನು ಈ ಅಲೆದಾಡುವಿಕೆಯಿಂದ ಬಿಡಿಸಬೇಕಾಗಿದೆ. ಶಾಂತಿಧಾಮ ಮತ್ತು ಸುಖಧಾಮವನ್ನು ನೆನಪು ಮಾಡಬೇಕಾಗಿದೆ.

ವರದಾನ:
ನಿರಂಹಕಾರತೆಯ ಮೂಲಕ ನವನಿರ್ಮಾಣ ಮಾಡುವಂತಹ ನಿರಾಶ ಹಾಗೂ ಅಭಿಮಾನದಿಂದ ಮುಕ್ತ ಭವ

ಎಂದಿಗೂ ಸಹ ಪುರುಷಾರ್ಥದಲ್ಲಿ ನಿರಾಶರಾಗಬಾರದು. ಮಾಡಲೇಬೇಕು, ಆಗಲೇಬೇಕು, ವಿಜಯ ಮಾಲೆಯು ನನ್ನದೇ ನೆನಪಾರ್ಥವಾಗಿದೆ- ಈ ಸ್ಮೃತಿಯಿಂದ ವಿಜಯಿಯಾಗಿರಿ. ಒಂದು ಸೆಕೆಂಡ್ ಅಥವಾ ನಿಮಿಷಕ್ಕಾದರೂ ತಮ್ಮಲ್ಲಿ ನಿರಾಶೆಗೆ ಸ್ಥಾನವನ್ನು ಕೊಡಬಾರದು. ಅಭಿಮಾನ ಹಾಗೂ ನಿರಾಶೆ- ಇವೆರಡೂ ಮಹಾ ಬಲಶಾಲಿಯಾಗಲು ಬಿಟ್ಟುಕೊಡುವುದಿಲ್ಲ. ಅಭಿಮಾನವಿರುವವರಲ್ಲಿ ಬಹಳ ಬೇಗನೆ ಅಪಮಾನದ ಫೀಲಿಂಗ್ ಬರುತ್ತದೆ ಆದ್ದರಿಂದ ಇವೆರಡು ಮಾತುಗಳಿಂದ ಮುಕ್ತರಾಗಿದ್ದು ನಿರಹಂಕಾರಿ ಆಗುತ್ತೀರೆಂದ್ರೆ, ನವ ನಿರ್ಮಾಣದ ಕಾರ್ಯವನ್ನು ಮಾಡುತ್ತಾ ಇರುತ್ತೀರಿ.

ಸ್ಲೋಗನ್:
ವಿಶ್ವ ಸೇವೆಯ ಸಿಂಹಾಸನಾಧಿಕಾರಿ ಆಗುತ್ತೀರೆಂದರೆ, ರಾಜ್ಯ ಸಿಂಹಾಸನಾಧಿಕಾರಿ ಆಗಿಬಿಡುತ್ತೀರಿ.