20.11.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಒಂದುವೇಳೆ ಶಿವ ತಂದೆಗೆ ಆದರ (ಗೌರವ) ಕೊಡುತ್ತೀರೆಂದರೆ ಅವರ ಶ್ರೀಮತದಂತೆ ನಡೆಯುತ್ತಿರಿ, ಶ್ರೀಮತದಂತೆ ನಡೆಯುವುದೆಂದರೆ ತಂದೆಗೆ ಗೌರವ ಕೊಡುವುದಾಗಿದೆ

ಪ್ರಶ್ನೆ:
ಮಕ್ಕಳು ತಂದೆಗಿಂತಲೂ ಜಾದೂಗಾರರಾಗಿದ್ದಾರೆ - ಹೇಗೆ?

ಉತ್ತರ:
ಶ್ರೇಷ್ಠಾತಿ ಶ್ರೇಷ್ಠ ತಂದೆಯನ್ನು ತಮ್ಮ ಮಗುವನ್ನಾಗಿ ಮಾಡಿಕೊಳ್ಳುವುದು - ತನು-ಮನ-ಧನದಿಂದ ತಂದೆಯನ್ನು ಹಕ್ಕುದಾರನನ್ನಾಗಿ ಮಾಡಿಕೊಂಡು ಅರ್ಪಣೆಯಾಗುವುದೇ ಮಕ್ಕಳ ಜಾದೂಗಾರಿತನವಾಗಿದೆ. ಯಾರು ಈಗ ಭಗವಂತನನ್ನು ತಮ್ಮ ಹಕ್ಕುದಾರನನ್ನಾಗಿ ಮಾಡಿಕೊಳ್ಳುತ್ತಾರೆಯೋ ಅವರೇ 21 ಜನ್ಮಗಳವರಗೆ ಆಸ್ತಿಗೆ ಅಧಿಕಾರಿಯಾಗಿ ಬಿಡುತ್ತಾರೆ.

ಪ್ರಶ್ನೆ:
ಧರ್ಮರಾಜನ ತೀರ್ಪು ಯಾವ ಮಕ್ಕಳ ಮೇಲೆ ಕುಳಿತುಕೊಳ್ಳುತ್ತದೆ?

ಉತ್ತರ:
ಯಾರು ದಾನ ಕೊಟ್ಟಂತಹ ವಸ್ತುವನ್ನು ಮರಳಿ ಪಡೆಯುವ ಸಂಕಲ್ಪ ಮಾಡುತ್ತಾರೆ, ಮಾಯೆಗೆ ವಶರಾಗಿ ಸೇವಾಭಂಗ ಮಾಡುತ್ತಾರೆಯೋ ಅವರಿಗಾಗಿ ಧರ್ಮರಾಜನ ತೀರ್ಪು ಕುಳಿತುಕೊಳ್ಳುತ್ತದೆ.

ಓಂ ಶಾಂತಿ.
ಆತ್ಮಿಕ ವಿಚಿತ್ರ ತಂದೆಯು ವಿಚಿತ್ರ ಮಕ್ಕಳಿಗೆ ತಿಳಿಸುತ್ತಾರೆ ಅರ್ಥಾತ್ ದೂರ ದೇಶದಲ್ಲಿರುವವರು, ಅವರಿಗೆ ಪರಮಪಿತ ಪರಮಾತ್ಮನೆಂದು ಕರೆಯಲಾಗುವುದು. ಅವರು ಬಹಳ ದೂರ ದೇಶದಿಂದ ಬಂದು ಈ (ಬ್ರಹ್ಮಾ) ಶರೀರದ ಮೂಲಕ ಓದಿಸುತ್ತಾರೆ. ಈಗ ಯಾರು ಓದುತ್ತಾರೆಯೋ ಅವರು ಓದಿಸುವಂತಹವರ ಜೊತೆ ಸಂಬಂಧವನ್ನು ತಾನೇ ತಾನಾಗಿಯೇ ಜೋಡಿಸುತ್ತಾರೆ. ಅವರಿಗೆ ಹೇ ಮಕ್ಕಳೇ, ಶಿಕ್ಷಕನೊಂದಿಗೆ ಸಂಬಂಧವನ್ನಿಡಿ ಅಥವಾ ನೆನಪು ಮಾಡಿ ಎಂದು ಹೇಳಬೇಕಾಗುವುದಿಲ್ಲ. ತಂದೆಯು ತಿಳಿಸುತ್ತಾರೆ - ಹೇ ಆತ್ಮಿಕ ಮಕ್ಕಳೇ, ನಾನು ನಿಮ್ಮ ತಂದೆಯೂ ಆಗಿದ್ದೇನೆ, ಶಿಕ್ಷಕನೂ ಆಗಿದ್ದೇನೆ, ಗುರುವೂ ಆಗಿದ್ದೇನೆ. ಇವರ ಜೊತೆ ಯೋಗವನ್ನಿಡಿ ಅರ್ಥಾತ್ ತಂದೆಯನ್ನು ನೆನಪು ಮಾಡಿ. ಇವರು ವಿಚಿತ್ರ ತಂದೆಯಾಗಿದ್ದಾರೆ. ನೀವು ಮತ್ತೆ-ಮತ್ತೆ ಇವರನ್ನು ಮರೆತು ಹೋಗುವ ಕಾರಣ ಹೇಳಬೇಕಾಗುತ್ತದೆ. ಓದಿಸುವಂತಹ ತಂದೆಯನ್ನು ನೆನಪು ಮಾಡುವುದರಿಂದ ನಿಮ್ಮ ಪಾಪವು ನಾಶವಾಗುತ್ತದೆ. ಶಿಕ್ಷಕನು ನನ್ನನ್ನು ನೋಡಿ ಎಂದು ಹೇಳಲು ಖಾಯಿದೆಯಿಲ್ಲ. ಆದರೆ ಇದರಲ್ಲಿ ಬಹಳ ಲಾಭವಿದೆ. ತಂದೆಯು ಹೇಳುತ್ತಾರೆ - ಕೇವಲ ನನ್ನನ್ನು ನೆನಪು ಮಾಡಿ. ಈ ನೆನಪಿನ ಬಲದಿಂದಲೇ ನಿಮ್ಮ ಪಾಪವು ನಾಶವಾಗುತ್ತದೆ. ಇದನ್ನು ನೆನಪಿನ ಯಾತ್ರೆಯೆಂದು ಕರೆಯಲಾಗುವುದು. ಈಗ ಆತ್ಮಿಕ ವಿಚಿತ್ರ ತಂದೆಯು ಮಕ್ಕಳನ್ನು ನೋಡುತ್ತಾರೆ. ಮಕ್ಕಳು ತನ್ನನ್ನು ಆತ್ಮನೆಂದು ತಿಳಿದು ತನ್ನ ವಿಚಿತ್ರ (ಅಶರೀರಿ) ತಂದೆಯನ್ನೇ ನೆನಪು ಮಾಡುತ್ತಾರೆ. ನೀವು ಘಳಿಗೆ-ಘಳಿಗೆಗೆ ಶರೀರದಲ್ಲಿ ಬರುತ್ತೀರಿ, ನಾನಂತೂ ಇಡೀ ಕಲ್ಪದಲ್ಲಿ ಶರೀರದಲ್ಲಿ ಬರುವುದಿಲ್ಲ, ಕೇವಲ ಸಂಗಮಯುಗದಲ್ಲಿ ಮಾತ್ರ ಬಹಳ ದೂರ ದೇಶದಿಂದ ನೀವು ಮಕ್ಕಳಿಗೆ ಓದಿಸಲು ಬರುತ್ತೇನೆ. ಇದನ್ನು ಚೆನ್ನಾಗಿ ನೆನಪು ಮಾಡಬೇಕು. ತಂದೆಯು ನಮ್ಮ ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ, ವಿಚಿತ್ರರಾಗಿದ್ದಾರೆ. ಅವರಿಗೆ ತಮ್ಮದೇ ಆದಂತಹ ಶರೀರವಿಲ್ಲ ಅಂದಾಗ ನಂತರ ಹೇಗೆ ಬರುತ್ತಾರೆ! ನಾನು ಪ್ರಕೃತಿಯ, ಮುಖದ ಆಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ತಂದೆಯು ತಿಳಿಸುತ್ತಾರೆ. ನಾನಂತೂ ವಿಚಿತ್ರನಾಗಿದ್ದೇನೆ, ನೀವೆಲ್ಲರೂ ಚಿತ್ರ ಇರುವಂತಹವರಾಗಿದ್ದೀರಿ ಆದ್ದರಿಂದ ನನಗಂತೂ ಅಗತ್ಯವಾಗಿ ರಥ (ಬ್ರಹ್ಮಾ) ಬೇಕಾಗುತ್ತದೆಯಲ್ಲವೆ. ಕುದುರೆ ಗಾಡಿಯಲ್ಲಂತೂ ಬರುವುದಿಲ್ಲ ತಾನೆ! ತಂದೆಯು ಹೇಳುತ್ತಾರೆ - ನಾನು ಈ ತನುವಿನಲ್ಲಿ ಪ್ರವೇಶಿಸುತ್ತೇನೆ, ಯಾರು ನಂಬರ್ವನ್ ಆಗಿದ್ದಾರೆಯೋ ಅವರೇ ಮತ್ತೆ ಲಾಸ್ಟ್ ನಂಬರ್ನಲ್ಲಿ ಬರುತ್ತಾರೆ. ಯಾರು ಸತೋಪ್ರಧಾನರಾಗಿದ್ದರೋ ಅವರೇ ತಮೋಪ್ರಧಾನರಾಗುತ್ತಾರೆ ಆದುದರಿಂದ ಸತೋಪ್ರಧಾನ ಮಾಡಲು ಅವರೇ ಬಂದು ಓದಿಸುತ್ತಾರೆ. ತಂದೆಯು ತಿಳಿಸುತ್ತಾರೆ - ಈ ರಾವಣ ರಾಜ್ಯದಲ್ಲಿ ಪಂಚ ವಿಕಾರಗಳನ್ನು ಗೆದ್ದು ನೀವು ಮಕ್ಕಳು ಜಗತ್ಜೀತರಾಗಬೇಕು. ನಮಗೆ ವಿಚಿತ್ರ ತಂದೆಯು ಓದಿಸುತ್ತಿದ್ದಾರೆ, ಅವರನ್ನು ನೆನಪು ಮಾಡಿದಾಗ ಪಾಪವು ಹೇಗೆ ಭಸ್ಮವಾಗುತ್ತದೆಯೆಂದು ನೀವು ನೆನಪಿಟ್ಟುಕೊಳ್ಳಬೇಕು. ಈ ಮಾತುಗಳನ್ನು ನೀವು ಈ ಸಂಗಮಯುಗದಲ್ಲಿ ಮಾತ್ರ ಕೇಳುತ್ತೀರಿ. ಒಮ್ಮೆ ಏನು ನಡೆಯುತ್ತದೆಯೋ ನಂತರವೂ ಅದೇ ಪುನರಾವರ್ತನೆಯಾಗುತ್ತದೆ. ಇದು ಎಷ್ಟೊಂದು ಉತ್ತಮ ತಿಳುವಳಿಕೆಯಾಗಿದೆ. ಇದಕ್ಕಾಗಿ ಬಹಳ ವಿಶಾಲ ಬುದ್ಧಿಯು ಬೇಕು. ಇದು ಯಾವ ಸಾಧು-ಸಂತರ ಸತ್ಸಂಗವಂತೂ ಅಲ್ಲ. ಇವರನ್ನು (ಶಿವ ತಂದೆ) ತಂದೆಯೆಂದೂ ಕರೆಯುತ್ತೇವೆ ಅಂದಾಗ ಮಗನೆಂದೂ ಕರೆಯುತ್ತೇವೆ. ನೀವು ತಿಳಿದಿದ್ದೀರಿ - ಇವರು ನಮ್ಮ ತಂದೆಯೂ ಆಗಿದ್ದಾರೆ, ಮಗನೂ ಆಗಿದ್ದಾರೆ. ನಾವು ಎಲ್ಲವನ್ನೂ ಈ ಮಗನಿಗೆ ಆಸ್ತಿಯನ್ನು ಕೊಟ್ಟು ತಂದೆಯಿಂದ 21 ಜನ್ಮಗಳಿಗಾಗಿ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಕೆಲಸಕ್ಕೆ ಬಾರದೇ ಇದ್ದುದನ್ನು ಕೊಟ್ಟು ವಿಶ್ವದ ರಾಜ್ಯಭಾಗ್ಯವನ್ನು ನಾವು ಪಡೆಯುತ್ತೇವೆ. ಮಕ್ಕಳು ಹೇಳುತ್ತಾರೆ - ಬಾಬಾ, ನಾವು ಭಕ್ತಿಮಾರ್ಗದಲ್ಲಿ ನೀವು ಬಂದಾಗ ನಮ್ಮದೆಲ್ಲವನ್ನೂ ತನು-ಮನ-ಧನ ಸಹಿತ ಅರ್ಪಣೆಯಾಗುತ್ತೇವೆಂದು ಹೇಳಿದ್ದೆವು, ಲೌಕಿಕ ತಂದೆಯೂ ಸಹ ಮಕ್ಕಳ ಮೇಲೆ ಅರ್ಪಣೆಯಾಗುತ್ತಾರಲ್ಲವೆ. ಇಲ್ಲಂತೂ ನಿಮಗೆ ಎಂತಹ ವಿಚಿತ್ರತಂದೆಯು ಸಿಕ್ಕಿದ್ದಾರೆ, ಅವರನ್ನು ನೆನಪು ಮಾಡಿದರೆ ನಿಮ್ಮ ಪಾಪವು ಭಸ್ಮವಾಗಿ ನೀವು ನಿಮ್ಮ ಮನೆಗೆ ಹೊರಟು ಹೋಗುತ್ತೀರಿ. ಇದು ಎಷ್ಟೊಂದು ದೀರ್ಘ ಪ್ರಯಾಣವಾಗಿದೆ. ತಂದೆಯನ್ನು ನೋಡಿ ಎಲ್ಲಿ ಬರುತ್ತಾರೆ! ಹಳೆಯ ರಾವಣ ರಾಜ್ಯದಲ್ಲಿ ಬರುತ್ತಾರೆ. ತಂದೆಯು ಹೇಳುತ್ತಾರೆ - ನನ್ನ ಅದೃಷ್ಟದಲ್ಲಿ ಪಾವನ ಶರೀರವಂತೂ ಸಿಗುವುದಿಲ್ಲ, ಪತಿತರನ್ನು ಪಾವನ ಮಾಡಲು ಹೇಗೆ ಬರಲಿ! ನಾನು ಪತಿತ ಪ್ರಪಂಚದಲ್ಲಿಯೇ ಬಂದು ಪಾವನ ಮಾಡಬೇಕಾಗುತ್ತದೆ, ಅಂದಾಗ ಇಂತಹ ಶಿಕ್ಷಕನ ಬಗ್ಗೆ ಗೌರವವನ್ನಿಡಬೇಕಲ್ಲವೆ. ಅನೇಕರು ತಂದೆಯ ಬೆಲೆಯನ್ನೇ ತಿಳಿದುಕೊಂಡಿಲ್ಲ. ಇದೂ ಸಹ ನಾಟಕದಲ್ಲಿ ಆಗಲೇಬೇಕಾಗಿದೆ. ರಾಜಧಾನಿಯಲ್ಲಂತೂ ನಂಬರ್ವಾರ್ ಎಲ್ಲರೂ ಬೇಕಲ್ಲವೆ! ಎಲ್ಲಾ ರೀತಿಯವರೂ ಸಹ ಇಲ್ಲಿಯೇ ತಯಾರಾಗುತ್ತಾರೆ. ಓದದೇ, ತಂದೆಯನ್ನು ನೆನಪು ಮಾಡದೇ ಇರುವಂತಹವರದು ಕಡಿಮೆ ದರ್ಜೆಯನ್ನು ಪಡೆಯುವಂತಹವರ ಸ್ಥಿತಿಯು ಈ ರೀತಿಯಿರುತ್ತದೆ. ಇವರು ಬಹಳ ವಿಚಿತ್ರ ತಂದೆಯಾಗಿದ್ದಾರಲ್ಲವೆ. ಇವರ ನಡತೆಯೇ ಅಲೌಕಿಕವಾಗಿದೆ, ಇವರ ಪಾತ್ರವು ಬೇರೆ ಯಾರಿಗೂ ಸಿಗಲು ಸಾಧ್ಯವಿಲ್ಲ. ಈ ತಂದೆಯು ಬಂದು ನಿಮಗೆ ಎಷ್ಟೊಂದು ಶ್ರೇಷ್ಠ ವಿದ್ಯೆಯನ್ನು ಓದಿಸುತ್ತಾರೆ ಆದರೆ ಅವರ ಬಗ್ಗೆ ನೀವು ಗೌರವವನ್ನಿಡಬೇಕಾಗಿದೆ, ಅವರ ಶ್ರೀಮತದಂತೆ ನಡೆಯಬೇಕಾಗಿದೆ. ಮಾಯೆಯು ಮತ್ತೆ ಮತ್ತೆ ಮರೆಯುವಂತೆ ಮಾಡುತ್ತದೆ. ಮಾಯೆಯು ಎಷ್ಟೊಂದು ಭಯಂಕರವಾಗಿದೆಯೆಂದರೆ ಒಳ್ಳೊಳ್ಳೆಯ ಮಕ್ಕಳನ್ನೂ ಸಹ ಬೀಳಿಸಿ ಬಿಡುತ್ತದೆ. ತಂದೆಯು ಎಷ್ಟೊಂದು ಶ್ರೀಮಂತರನ್ನಾಗಿ ಮಾಡುತ್ತಾರೆ ಆದರೆ ಮಾಯೆಯು ಒಮ್ಮೆಯೇ ಮುಖವನ್ನು ತಿರುಗಿಸಿ ಬಿಡುತ್ತದೆ. ಮಾಯೆಯಿಂದ ತಪ್ಪಿಸಿಕೊಳ್ಳಬೇಕೆಂದರೆ ಅಗತ್ಯವಾಗಿ ತಂದೆಯನ್ನು ನೆನಪು ಮಾಡಬೇಕು. ಬಹಳ ಒಳ್ಳೆಯ ಮಕ್ಕಳೂ ತಂದೆಯವರಾದನಂತರ ಮಾಯೆಯವರಾಗಿ ಬಿಡುತ್ತಾರೆ, ಅದನ್ನು ಕೇಳಲೇಬೇಡಿ, ಪಕ್ಕಾ ದ್ರೋಹಿಗಳಾಗಿ ಬಿಡುತ್ತಾರೆ. ಮಾಯೆಯು ಒಂದೇ ಸಾರಿ ಮೂಗನ್ನು ಹಿಡಿದು ಬಿಡುತ್ತದೆ. ಆದ್ದರಿಂದ ಆನೆಯನ್ನು ಮೊಸಳೆ ತಿಂದಿತೆಂಬ ಮಾತಿದೆಯಲ್ಲವೆ. ಆದರೆ ಅದರ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯು ಪ್ರತಿಯೊಂದು ಮಾತನ್ನು ಚೆನ್ನಾಗಿ ತಿಳಿಸುತ್ತಾರೆ. ಕೆಲವು ಮಕ್ಕಳು ತಿಳಿದುಕೊಳ್ಳುತ್ತಾರೆ ಆದರೆ ನಂಬರ್ವಾರ್ ಪುರುಷಾರ್ಥದನುಸಾರ. ಕೆಲವರಿಗಂತೂ ಸ್ವಲ್ಪವೂ ಧಾರಣೆಯಾಗುವುದಿಲ್ಲ, ಇದು ಬಹಳ ಶ್ರೇಷ್ಠ ವಿದ್ಯೆಯಾಗಿದೆಯಲ್ಲವೆ ಆದ್ದರಿಂದ ಇದರ ಧಾರಣೆ ಮಾಡಲಾಗುವುದಿಲ್ಲ. ಅಂತಹವರಿಗೆ ತಂದೆಯು ತಿಳಿಸುತ್ತಾರೆ - ಅವರ ಅದೃಷ್ಟದಲ್ಲಿ ರಾಜ್ಯಭಾಗ್ಯವಿಲ್ಲ. ಕೆಲವರು ಎಕ್ಕದ ಹೂವಾಗಿದ್ದಾರೆ, ಕೆಲವರು ಸುವಾಸನೆಯಿರುವಂತಹ ಹೂವಾಗಿದ್ದಾರೆ. ಇದು ಭಿನ್ನವಾದಂತಹ ತೋಟವಾಗಿದೆಯಲ್ಲವೆ! ಹೀಗೂ ಇರಬೇಕಾಗುತ್ತದೆ. ನಿಮಗೆ ರಾಜಧಾನಿಯಲ್ಲಿ ನೌಕರ-ಚಾಕರರೂ ಸಿಗುತ್ತಾರೆ. ಇಲ್ಲವೆಂದರೆ ನೌಕರ-ಚಾಕರರು ಹೇಗೆ ಸಿಗುತ್ತಾರೆ? ರಾಜ್ಯವು ಇಲ್ಲಿಂದಲೇ ತಯಾರಾಗುತ್ತದೆ. ನೌಕರ-ಚಾಕರ, ಚಂಡಾಲ ಎಲ್ಲರೂ ಸಿಗುತ್ತಾರೆ. ಈ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಆಶ್ಚರ್ಯವಲ್ಲವೆ! ತಂದೆಯು ನಿಮ್ಮನ್ನು ಇಷ್ಟೊಂದು ಶ್ರೇಷ್ಠರನ್ನಾಗಿ ಮಾಡುತ್ತಾರೆಂದಾಗ ತಂದೆಯನ್ನು ನೆನಪು ಮಾಡುತ್ತಾ ಆನಂದಭಾಷ್ಪವು ಹರಿಯಬೇಕಾಗಿದೆ.

ನೀವು ಮಾಲೆಯ ಮಣಿಯಾಗುತ್ತೀರಲ್ಲವೆ! ಮಕ್ಕಳು ಹೇಳುತ್ತಾರೆ - ಬಾಬಾ, ನೀವು ಎಷ್ಟು ವಿಚಿತ್ರವಾಗಿದ್ದೀರಿ! ನೀವು ಹೇಗೆ ಬಂದು ನಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡಲು ಓದಿಸುತ್ತೀರಿ. ಭಕ್ತಿಮಾರ್ಗದಲ್ಲಿ ಭಲೆ ಶಿವನ ಪೂಜೆ ಮಾಡುತ್ತೇವೆ ಆದರೆ ಅವರೇ ಪತಿತ-ಪಾವನನಾಗಿದ್ದಾರೆಂದು ತಿಳಿದಿತ್ತೇನು! ಆದರೂ ಹೇ ಪತಿತ-ಪಾವನ ಬಾ, ಬಂದು ನಮ್ಮನ್ನು ದೇವಿ-ದೇವತೆಗಳನ್ನಾಗಿ ಮಾಡು ಎಂದು ಕರೆಯುತ್ತಿರುತ್ತೇವೆ. ಮಕ್ಕಳ ಆಜ್ಞೆಯನ್ನು ತಂದೆಯು ಒಪ್ಪುತ್ತಾರೆ ಹಾಗೂ ಬಂದು ಮಕ್ಕಳೇ ಪವಿತ್ರರಾಗಿ ಎಂದು ಹೇಳುತ್ತಾರೆ. ಇದರ ಬಗ್ಗೆಯೇ ಬಹಳ ಜಗಳವಾಗುತ್ತದೆ. ತಂದೆಯು ಅದ್ಭುತನಾಗಿದ್ದಾರಲ್ಲವೆ! ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ, ಪಾಪವು ನಾಶವಾಗುತ್ತದೆ. ನಾನು ಆತ್ಮಗಳೊಂದಿಗೆ ಮಾತನಾಡುತ್ತೇನೆಂದು ತಂದೆಯು ತಿಳಿದುಕೊಂಡಿದ್ದಾರೆ. ಎಲ್ಲವನ್ನೂ ಆತ್ಮವೇ ಮಾಡುತ್ತದೆ, ವಿಕರ್ಮವನ್ನೂ ಆತ್ಮವೇ ಮಾಡುತ್ತದೆ ನಂತರ ಶರೀರದ ಮೂಲಕ ಆತ್ಮವೇ ಭೋಗಿಸುತ್ತದೆ. ನಿಮಗಾಗಿ ಧರ್ಮರಾಜನ ಸಭೆಯು ತೀರ್ಪಿಗಾಗಿ ಕುಳಿತುಕೊಳ್ಳುತ್ತದೆ. ವಿಶೇಷವಾಗಿ ಯಾವ ಮಕ್ಕಳು ಸೇವೆಗಾಗಿ ಯೋಗ್ಯರಾಗುತ್ತಾರೆ ನಂತರ ದ್ರೋಹಿಗಳಾಗಿ ಬಿಡುತ್ತಾರೆ, ಆ ಮಕ್ಕಳಿಗಾಗಿ ಕುಳಿತುಕೊಳ್ಳಬೇಕಾಗುತ್ತದೆ. ಇದಂತೂ ತಂದೆಗೆ ಗೊತ್ತಿದೆ, ಮಾಯೆಯು ಹೇಗೆ ಮಕ್ಕಳನ್ನು ನುಂಗಿ ಬಿಡುತ್ತದೆ. ಬಾಬಾ, ನಾವು ಸೋತು ಬಿಟ್ಟೆವು, ಮುಖವನ್ನು ಕಪ್ಪು ಮಾಡಿಕೊಂಡೆವು, ಈಗ ಕ್ಷಮೆ ಮಾಡಿ. ಈಗ ಬಿದ್ದು, ಮಾಯೆಗೆ ವಶರಾಗಿ ಮತ್ತೆ ಕ್ಷಮೆ ಕೇಳುವುದೇನು! ಅಂತಹವರಂತೂ ಬಹಳ ಕಷ್ಟ ಪಡಬೇಕಾಗುವುದು. ಹೀಗೆ ಬಹಳಷ್ಟು ಮಾಯೆಗೆ ಸೋತು ಬಿಡುತ್ತಾರೆ. ತಂದೆಯು ತಿಳಿಸುತ್ತಾರೆ - ಇಲ್ಲಿ ತಂದೆಗೆ ದಾನ ಕೊಟ್ಟು ನಂತರ ಮರಳಿ ಪಡೆಯಬಾರದು. ಇಲ್ಲವೆಂದರೆ ಎಲ್ಲವೂ ನಾಶವಾಗುತ್ತದೆ. ಹರಿಶ್ಚಂದ್ರನ ಉದಾಹರಣೆಯಿದೆಯಲ್ಲವೆ - ದಾನ ಕೊಟ್ಟ ನಂತರ ಮತ್ತೆ ಜಾಗರೂಕರಾಗಿರಬೇಕು, ಮರಳಿ ತೆಗೆದುಕೊಂಡರೆ ಮತ್ತೆ ನೂರು ಪಟ್ಟು ಶಿಕ್ಷೆಯನ್ನನುಭವಿಸಬೇಕಾಗುತ್ತದೆ ಆಗ ಬಹಳ ಕೆಳದರ್ಜೆಯ ಪದವಿಯನ್ನು ಪಡೆಯಬೇಕಾಗುತ್ತದೆ. ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ - ಈಗ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಅನ್ಯ ಧರ್ಮ ಸ್ಥಾಪನೆ ಮಾಡುವವರು ಮೊದಲು ರಾಜ್ಯವನ್ನು ನಡೆಸುವುದಿಲ್ಲ. ರಾಜ್ಯ ನಡೆಯಬೇಕೆಂದರೆ 50-60 ಕೋಟಿಯಾಗಬೇಕು. ಆಗ ಸೈನ್ಯವು ತಯಾರಾಗುತ್ತದೆ. ಧರ್ಮ ಸ್ಥಾಪನೆಯ ಆರಂಭದಲ್ಲಿ ಒಬ್ಬರು-ಇಬ್ಬರು ಮಾತ್ರವೇ ಬರುತ್ತಾರೆ. ನಂತರ ವೃದ್ಧಿಯಾಗುತ್ತದೆ. ಕ್ರಿಸ್ತನೂ ಸಹ ಯಾವುದಾದರೂ ವೇಷದಲ್ಲಿ ಬರುತ್ತಾನೆಂದು ನೀವು ತಿಳಿದುಕೊಂಡಿದ್ದೀರಿ. ಮೊದಲನೇ ಜನ್ಮದಲ್ಲಿ ಬಡವನಾಗಿರುವವನು ನಂತರ ಅಂತಿಮ ಸ್ಥಾನದಲ್ಲಿ ಇರುತ್ತಾನೆ. ಕ್ರಿಶ್ಚಿಯನ್ನರೂ ಸಹ ತಕ್ಷಣ ಹೇಳುತ್ತಾರೆ - ಹಾ! ಕ್ರೈಸ್ತನು ಈ ಸಮಯದಲ್ಲಿ ಬಡವನ ರೂಪದಲ್ಲಿದ್ದಾನೆ, ಪುನರ್ಜನ್ಮವನ್ನಂತೂ ತೆಗೆದುಕೊಳ್ಳಲೇಬೇಕೆಂದು ತಿಳಿದಿದ್ದಾರೆ. ಪ್ರತಿಯೊಬ್ಬರೂ ಅಗತ್ಯವಾಗಿ ತಮೋಪ್ರಧಾನರಂತೂ ಆಗಲೇಬೇಕು. ಈ ಸಮಯದಲ್ಲಿ ಇಡೀ ಪ್ರಪಂಚ ತಮೋಪ್ರಧಾನ, ಸಾರ ಹೀನವಾಗಿದೆ. ಈ ಹಳೆಯ ಪ್ರಪಂಚವು ಅವಶ್ಯವಾಗಿ ವಿನಾಶವಾಗಲಿದೆ. ಕ್ರಿಶ್ಚಿಯನ್ನರೂ ಸಹ 3000 ವರ್ಷಗಳ ಹಿಂದೆ ಸ್ವರ್ಗವಿತ್ತು, ಈಗ ಪುನಃ ಅಗತ್ಯವಾಗಿ ಸ್ವರ್ಗವಾಗುತ್ತದೆಯೆಂದು ಹೇಳುತ್ತಾರೆ. ಆದರೆ ಈ ಮಾತುಗಳನ್ನೆಲ್ಲವನ್ನೂ ಅವರಿಗೆ ಹೇಳುವವರು ಯಾರು? ತಂದೆಯು ತಿಳಿಸುತ್ತಾರೆ - ಮಕ್ಕಳಲ್ಲಿ ಈಗ ಇನ್ನೂ ಆ ಸ್ಥಿತಿಯು ಎಲ್ಲಿದೆ? ಮಕ್ಕಳು ಮತ್ತೆ-ಮತ್ತೆ ಬರೆಯುತ್ತಾರೆ - ನಾವು ಯೋಗದಲ್ಲಿ ಇರಲು ಸಾಧ್ಯವಾಗುವುದಿಲ್ಲ. ಮಕ್ಕಳ ನಡವಳಿಕೆಯಿಂದ ತಿಳಿದುಕೊಳ್ಳುತ್ತಾರೆ. ತಂದೆಗೆ ಸಮಾಚಾರವನ್ನು ಕೊಡಲೂ ಸಹ ಭಯ ಪಡುತ್ತಾರೆ, ತಂದೆಯಂತೂ ಮಕ್ಕಳನ್ನು ಎಷ್ಟೊಂದು ಪ್ರೀತಿ ಮಾಡುತ್ತಾರೆ. ಪ್ರೀತಿಯಿಂದ ನಮಸ್ತೆ ಮಾಡುತ್ತಾರೆ. ಮಕ್ಕಳಲ್ಲಂತೂ ಬಹಳ ಅಹಂಕಾರವಿರುತ್ತದೆ. ಒಳ್ಳೊಳ್ಳೆಯ ಮಕ್ಕಳನ್ನೂ ಸಹ ಮಾಯೆಯು ಮರೆಸಿ ಬಿಡುತ್ತದೆ ಎಂದು ತಂದೆಯಂತೂ ತಿಳಿದುಕೊಳ್ಳುತ್ತಾರೆ. ತಂದೆಯು ಹೇಳುತ್ತಾರೆ - ನಾನು ಜ್ಞಾನಪೂರ್ಣನಾಗಿದ್ದೇನೆ, ತಿಳಿದು-ತಿಳಿಯದೇ ಇರುವವರೆಂಬ ಅರ್ಥವಾಗಿದೆ - ನಾನು ಎಲ್ಲರ ಆಂತರ್ಯವನ್ನು ತಿಳಿದುಕೊಂಡಿದ್ದೆನೆ ಎಂದರ್ಥವಲ್ಲ. ನಾನು ಓದಿಸುವುದಕ್ಕೋಸ್ಕರ ಬಂದಿದ್ದೇನೆ, ಮನಸ್ಸಿನ ಸಂಕಲ್ಪವನ್ನರಿಯಲು ಬಂದಿದ್ದೇನೆಯೇ? ನಾನು ಯಾರ ಮನಸ್ಸಿನ ಸಂಕಲ್ಪವನ್ನೂ ಅರಿಯುವುದಿಲ್ಲ, ಈ ಸಾಕಾರ ತಂದೆಯೂ ಸಹ ಈ ಕೆಲಸವನ್ನು ಮಾಡುವುದಿಲ್ಲ. ಇವರೂ ಎಲ್ಲವನ್ನೂ ಮರೆಯಬೇಕಾಗಿದೆ. ಅಂದಾಗ ಮತ್ತ್ಯಾರ ಮನಸ್ಸಿನ ಸಂಕಲ್ಪಗಳನ್ನು ತಿಳಿದುಕೊಳ್ಳುತ್ತಾರೆ? ನೀವಿಲ್ಲಿಗೆ ಓದಲು ಬರುತ್ತೀರಿ, ಭಕ್ತಿಮಾರ್ಗವೇ ಬೇರೆಯಾಗಿದೆ. ಅದೂ ಸಹ ಬೀಳಲು ಉಪಾಯ ಬೇಕಲ್ಲವೆ. ಈ ಮಾತುಗಳ ಕಾರಣ ನೀವು ಕೆಳಗೆ ಬಂದಿದ್ದೀರಿ. ಈ ರೀತಿ ನಾಟಕದ ಆಟವನ್ನು ಮಾಡಲ್ಪಟ್ಟಿದೆ. ಹೀಗೆ ಭಕ್ತಿಮಾರ್ಗದ ಶಾಸ್ತ್ರಗಳನ್ನು ಓದುತ್ತ-ಓದುತ್ತಾ ನೀವು ತಮೋಪ್ರಧಾನ, ಕೆಳಗಿಳಿಯುತ್ತಾ ಬಂದಿದ್ದೀರಿ. ಈಗ ನೀವು ಈ ಅಪವಿತ್ರ ಪ್ರಪಂಚದಲ್ಲಿ ಅವಶ್ಯವಾಗಿ ಇರಬಾರದಾಗಿದೆ. ಕಲಿಯುಗದಿಂದ ಮತ್ತೆ ಸತ್ಯಯುಗ ಬರಬೇಕು, ಈಗ ಸಂಗಮಯುಗವಾಗಿದೆ. ಈ ಎಲ್ಲಾ ಮಾತುಗಳನ್ನು ಧಾರಣೆ ಮಾಡಬೇಕು. ಈ ಮಾತುಗಳನ್ನು ತಂದೆಯೇ ತಿಳಿಸುತ್ತಾರೆ. ಉಳಿದ ಪ್ರಪಂಚದವರ ಬುದ್ಧಿಗೆ ಗಾಡ್ರೇಜ್ ಬೀಗ ಹಾಕಲ್ಪಟ್ಟಿದೆ. ನೀವು ತಿಳಿದುಕೊಂಡಿದ್ದೀರಿ, ಇವರು ದೈವೀ ಗುಣವುಳ್ಳಂತಹವರಾಗಿದ್ದರು, ಈಗ ಅವರೇ ಅಸುರೀ ಗುಣದವರಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ಈಗ ಭಕ್ತಿಮಾರ್ಗದ ಮಾತುಗಳೆಲ್ಲವನ್ನೂ ಮರೆತು ಬಿಡಿ. ಈಗ ನಾನು ಏನನ್ನು ತಿಳಿಸುತ್ತೇನೆಯೋ ಅದನ್ನು ಕೇಳಿ, ಹಿಯರ್ ನೋ ಈವಿಲ್ (ಕೆಟ್ಟದ್ದನ್ನು ಕೇಳಬೇಡಿ)... ಈಗ ನನ್ನೊಬ್ಬನಿಂದ ಕೇಳಿ. ಈಗ ನಾನು ನಿಮ್ಮನ್ನು ಪಾರು ಮಾಡಲು ಬಂದಿದ್ದೇನೆ.

ನೀವು ಈಶ್ವರೀಯ ಸಂಪ್ರದಾಯದವರಾಗಿದ್ದೀರಿ. ನೀವು ಪ್ರಜಾಪಿತ ಬ್ರಹ್ಮನ ಮುಖ ಕಮಲದಿಂದ ಜನ್ಮ ಪಡೆದಿದ್ದೀರಲ್ಲವೆ. ಇಷ್ಟೆಲ್ಲಾ ಮಕ್ಕಳು ದತ್ತು ಮಕ್ಕಳಾಗಿದ್ದಾರೆ. ಅವರಿಗೆ ಆದಿ ದೇವನೆಂದು ಕರೆಯಲಾಗುವುದು, ಮಹಾವೀರನೆಂದೂ ಸಹ ಹೇಳುತ್ತಾರೆ. ನೀವು ಮಕ್ಕಳು ಯೋಗಬಲದಿಂದ ಮಾಯೆಯ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಕೊಳ್ಳುವಂತಹವರನ್ನು ಮಹಾವೀರರೆಂದು ಹೇಳುತ್ತಾರಲ್ಲವೆ. ತಂದೆಗೆ ಜ್ಞಾನ ಸಾಗರನೆಂದು ಕರೆಯಲಾಗುವುದು. ಜ್ಞಾನ ಸಾಗರ ತಂದೆಯು ನಿಮಗೆ ಅವಿನಾಶಿ ಜ್ಞಾನರತ್ನಗಳ ತಟ್ಟೆಯನ್ನು ತುಂಬಿಕೊಡುತ್ತಾರೆ, ನಿಮ್ಮನ್ನು ಸಂಪನ್ನ ಮಾಡುತ್ತಾರೆ, ಯಾರು ಜ್ಞಾನವನ್ನು ಧಾರಣೆ ಮಾಡುತ್ತಾರೆಯೋ ಅವರು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಯಾರು ಧಾರಣೆ ಮಾಡುವುದಿಲ್ಲವೊ ಅವರು ಅವಶ್ಯವಾಗಿ ಕಡಿಮೆ ಪದವಿಯನ್ನು ಪಡೆಯುತ್ತಾರೆ. ನೀವು ತಂದೆಯಿಂದ ಎಂದಿಗೂ ಮುಗಿಯದಂತಹ ಖಜಾನೆಯನ್ನು ಪಡೆಯುತ್ತೀರಿ. ಅಲ್ಲಾವುದ್ದೀನ್ನ ಕಥೆಯಿದೆಯಲ್ಲವೆ. ನಿಮಗೆ ತಿಳಿದಿದೆ, ಸ್ವರ್ಗದಲ್ಲಿ ನಮಗೆ ಯಾವ ವಸ್ತುವಿನ ಅಪ್ರಾಪ್ತಿಯಿರುವುದಿಲ್ಲ. ತಂದೆಯು 21 ಜನ್ಮಗಳಿಗಾಗಿ ಆಸ್ತಿಯನ್ನು ಕೊಟ್ಟು ಬಿಡುತ್ತಾರೆ. ಬೇಹದ್ದಿನ ತಂದೆಯು ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ. ಹದ್ದಿನ ಆಸ್ತಿಯು ದೊರೆತರೂ ಸಹ ಬೇಹದ್ದಿನ ತಂದೆಯನ್ನು ಹೇ ಪರಮಾತ್ಮ, ದಯೆ ತೋರು, ಕೃಪೆ ಮಾಡು ಎಂದು ಅಗತ್ಯವಾಗಿ ನೆನಪು ಮಾಡುತ್ತಾರೆ ಆದರೆ ಅವರು ಏನು ಕೊಡುತ್ತಾರೆಂದು ಯಾರಿಗೂ ತಿಳಿದಿಲ್ಲ. ತಂದೆಯು ನಮ್ಮನ್ನು ಈಗ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆಂದು ನೀವೀಗ ತಿಳಿದಿದ್ದೀರಿ. ಚಿತ್ರದಲ್ಲಿಯೂ ಸಹ ಬ್ರಹ್ಮನಿಂದ ಸ್ಥಾಪನೆಯೆಂದು ಇದೆ. ಬ್ರಹ್ಮಾ ಎದುರುಗಡೆ ಸಾಧಾರಣವಾಗಿ ಕುಳಿತಿದ್ದಾರೆ. ಅವರಿಂದಲೇ ಸ್ಥಾಪನೆ ಮಾಡುತ್ತಾರೆಂದಾಗ ಅವರಿಂದಲೇ ಮಾಡುತ್ತಾರಲ್ಲವೆ. ತಂದೆಯು ಎಷ್ಟೊಂದು ಚೆನ್ನಾಗಿ ತಿಳಿಸುತ್ತಾರೆ! ನೀವು ಪೂರ್ಣವಾಗಿ ತಿಳಿಸಿಕೊಡಲಾಗುವುದಿಲ್ಲ. ಭಕ್ತಿಮಾರ್ಗದಲ್ಲಿ ಶಂಕರನ ಮುಂದೆ ಹೋಗಿ ಜೋಳಿಗೆಯನ್ನು ತುಂಬಿ ಎಂದು ಹೇಳುತ್ತಾರೆ. ನಾವು ಬಡವರು, ನಮ್ಮ ಜೋಳಿಗೆಯನ್ನು ತುಂಬಿ, ನಮ್ಮನ್ನು ಹೀಗೆ ಮಾಡಿ ಎಂದು ಆತ್ಮವೇ ಹೇಳುತ್ತದೆ. ಈಗ ನೀವು ಜೋಳಿಗೆಯನ್ನು ತುಂಬಿಕೊಳ್ಳಲು ಬಂದಿದ್ದೀರಿ. ನಾವು ನರನಿಂದ ನಾರಾಯಣರಾಗಲು ಬಯಸುತ್ತೇವೆಂದು ಹೇಳುತ್ತೀರಿ. ಇದು ನರನಿಂದ ನಾರಾಯಣನಾಗುವ ವಿದ್ಯೆಯಾಗಿದೆ. ಆದುದರಿಂದ ಹಳೆಯ ಪ್ರಪಂಚಕ್ಕೆ ಬರುವ ಮನಸ್ಸು ಯಾರಿಗೆ ತಾನೇ ಆಗುತ್ತದೆ! ಹೊಸ ಪ್ರಪಂಚದಲ್ಲಂತೂ ಎಲ್ಲರೂ ಬರುವುದಿಲ್ಲ. ಕೆಲವರು ಶೇ. 25ರಷ್ಟು ಹಳೆಯ ಪ್ರಪಂಚದಲ್ಲಿ ಬರುತ್ತಾರೆ, ಅಲ್ಪಸ್ವಲ್ಪ ಕಡಿಮೆಯಂತೂ ಆಗುತ್ತದೆಯಲ್ಲವೆ! ಯಾರಿಗಾದರೂ ಸ್ವಲ್ಪ ಮಾತ್ರವೂ ಸಂದೇಶವನ್ನು ಕೊಡುತ್ತೀರೆಂದಾಗ ನೀವು ಅವಶ್ಯವಾಗಿ ಸ್ವರ್ಗದ ಮಾಲೀಕರಾಗುತ್ತೀರಿ, ಈಗ ಎಲ್ಲರೂ ನರಕದ ಮಾಲೀಕರಾಗಿದ್ದಾರಲ್ಲವೆ. ರಾಜ, ರಾಣಿ, ಪ್ರಜೆಗಳೆಲ್ಲರೂ ನರಕದ ಮಾಲೀಕರಾಗಿದ್ದಾರೆ. ಅಲ್ಲಿ ಡಬಲ್ ಕಿರೀಟಧಾರಿಗಳಾಗಿದ್ದರು, ಈಗ ಅವರಿಲ್ಲ. ವರ್ತಮಾನದಲ್ಲಿ ಧರ್ಮ ಮೊದಲಾದುವುಗಳನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ, ದೇವಿ-ದೇವತಾ ಧರ್ಮವೇ ನಾಶವಾಗಿದೆ. ಧರ್ಮದಲ್ಲಿ ಶಕ್ತಿಯಿದೆ ಎಂದು ಹೇಳಲಾಗುತ್ತದೆ. ಆದರೆ ಧರ್ಮವನ್ನು ಒಪ್ಪಿಕೊಳ್ಳದೇ ಇರುವ ಕಾರಣ ಶಕ್ತಿಯಿಲ್ಲದಂತಾಗಿದೆ. ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ನೀವೇ ಪೂಜ್ಯರಿಂದ ಪೂಜಾರಿಗಳಾಗುತ್ತೀರಿ. 84 ಜನ್ಮಗಳನ್ನು ಪಡೆಯುತ್ತೀರಿ. ನಾವೇ ಬ್ರಾಹ್ಮಣರು, ನಂತರ ದೇವತೆಗಳು ಆಮೇಲೆ ನಾವೇ ಕ್ಷತ್ರಿಯರು...... ಈ ಚಕ್ರವು ಬುದ್ಧಿಯಲ್ಲಿ ಬರುತ್ತದೆಯಲ್ಲವೆ. ಈ 84 ಜನ್ಮಗಳ ಚಕ್ರವನ್ನು ಸುತ್ತಿ ಬಂದಿದ್ದೇವೆ, ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಪತಿತರು ಯಾರೂ ಸಹ ಹಿಂತಿರುಗಲು ಸಾಧ್ಯವಿಲ್ಲ, ಆತ್ಮವೇ ಪತಿತ ಅಥವಾ ಪಾವನವಾಗುತ್ತದೆ. ಚಿನ್ನದಲ್ಲಿ ಕಲಬೆರಕೆಯಾಗುತ್ತದೆಯಲ್ಲವೆ. ಆಭರಣದಲ್ಲಿ ಕಲಬೆರಕೆಯಾಗುವುದಿಲ್ಲ. ಈ ಜ್ಞಾನಾಗ್ನಿಯಿಂದ ಇಡೀ ಕಲಬೆರಕೆಯನ್ನೆಲ್ಲಾ ತೆಗೆದು ಪಕ್ಕಾ ಚಿನ್ನವಾಗಿ ಬಿಟ್ಟಾಗ ನಿಮಗೆ ಪರಿಶುದ್ಧವಾದ ಆಭರಣವು ಸಿಗುತ್ತದೆ. ಈಗ ಆತ್ಮವು ಪತಿತವಾಗುತ್ತದೆ ಆದ್ದರಿಂದ ಪಾವನರ ಮುಂದೆ ತಲೆ ಬಾಗುತ್ತದೆ. ಎಲ್ಲವನ್ನೂ ಆತ್ಮವೇ ಮಾಡುತ್ತದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಕೇವಲ ನನ್ನೊಬ್ಬನನ್ನೇ ನೆನಪು ಮಾಡಿದಾಗ ನಿಮ್ಮ ಹಡಗು ಪಾರಾಗುತ್ತದೆ. ಪವಿತ್ರರಾಗಿ ಪವಿತ್ರ ಪ್ರಪಂಚಕ್ಕೆ ಹೊರಟು ಹೋಗುತ್ತೀರಿ. ಈಗ ಎಷ್ಟೊಂದು ಪುರುಷಾರ್ಥ ಮಾಡುತ್ತೀರಿ, ಎಲ್ಲರಿಗೂ ಇದೇ ಪರಿಚಯವನ್ನು ಕೊಡುತ್ತಿರಿ. ಅವರು ಹದ್ದಿನ ತಂದೆಯಾಗಿದ್ದಾರೆ, ಇವರು ಬೇಹದ್ದಿನ ತಂದೆಯಾಗಿದ್ದಾರೆ. ಸಂಗಮಯುಗದಲ್ಲಿಯೇ ತಂದೆಯು ಸ್ವರ್ಗದ ಆಸ್ತಿಯನ್ನು ಕೊಡಲು ಬರುತ್ತಾರೆ. ಆದ್ದರಿಂದ ಇಂತಹ ತಂದೆಯನ್ನು ನೆನಪು ಮಾಡಬೇಕಲ್ಲವೆ. ಶಿಕ್ಷಕನನ್ನು ವಿದ್ಯಾರ್ಥಿಗಳೆಂದಾದರೂ ಮರೆಯುತ್ತಾರೇನು! ಆದರೆ ಮಾಯೆಯು ಇಲ್ಲಿ ಮರೆಯುವಂತೆ ಮಾಡುತ್ತದೆ ಆದ್ದರಿಂದ ಇಲ್ಲಿ ಬಹಳ ಜಾಗರೂಕರಾಗಿರಬೇಕು. ಯುದ್ಧದ ಮೈದಾನವಲ್ಲವೆ ಅಂದಾಗ ತಂದೆಯು ಹೇಳುತ್ತಾರೆ - ಈಗ ವಿಕಾರದಲ್ಲಿ ಹೋಗಬೇಡಿ, ಅಪವಿತ್ರರಾಗಬೇಡಿ, ಈಗಂತೂ ಸ್ವರ್ಗದಲ್ಲಿ ಹೋಗಬೇಕಾಗಿದೆ. ಪವಿತ್ರರಾಗಿಯೇ ಪವಿತ್ರ ಪ್ರಪಂಚದ ಮಾಲೀಕರಾಗುತ್ತೀರಿ. ನಾನು ನಿಮಗೆ ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತೇನೆ. ಇದು ಕಡಿಮೆ ಮಾತೇನು! ಕೇವಲ ಈ ಒಂದು ಜನ್ಮದಲ್ಲಿ ಪವಿತ್ರರಾಗಿರಿ. ಈಗ ಪವಿತ್ರರಾಗದಿದ್ದರೆ ಕೆಳಗಿಳಿಯುತ್ತಾ ಹೋಗುತ್ತೀರಿ. ಬಹಳಷ್ಟು ಆಕರ್ಷಣೆಗಳಿವೆ. ಕಾಮಜೀತರಾದಾಗ ನೀವು ಜಗತ್ತಿಗೆ ಮಾಲೀಕರಾಗುತ್ತೀರಿ. ನೀವು ಅತೀ ಸ್ಪಷ್ಟವಾಗಿ ಹೇಳಬಹುದು, ಪರಮಪಿತ ಪರಮಾತ್ಮನೇ ಜಗತ್ತಿಗೆ ಪಿತನಾಗಿದ್ದಾರೆ, ಅವರೇ ಇಡೀ ಜಗತ್ತಿಗೆ ಸದ್ಗತಿ ಕೊಡುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಅವಿನಾಶಿ ಜ್ಞಾನರತ್ನಗಳಿಂದ ಬುದ್ಧಿರೂಪಿ ಜೋಳಿಗೆಯನ್ನು ತುಂಬಿಕೊಂಡು ಸಂಪನ್ನರಾಗಬೇಕು. ಯಾವುದೇ ರೀತಿಯ ಅಹಂಕಾರವನ್ನು ತೋರಿಸಬಾರದು.

2. ಸೇವೆಗೆ ಯೋಗ್ಯರಾಗಿ ನಂತರ ದ್ರೋಹಿಯಾಗಿ ಎಂದಿಗೂ ಡಿಸ್-ಸರ್ವೀಸ್ ಮಾಡಬಾರದಾಗಿದೆ. ದಾನ ಕೊಟ್ಟ ನಂತರ ಬಹಳ ಎಚ್ಚರಿಕೆಯಿಂದಿರಬೇಕು. ಎಂದಿಗೂ ಮರಳಿ ಪಡೆಯುವ ಯೋಚನೆ ಬಾರದಿರಲಿ.

ವರದಾನ:
ಬ್ರಾಹ್ಮಣ ಜೀವನದಲ್ಲಿ ಏಕವ್ರತನ ಪಾಠದ ಮೂಲಕ ಆತ್ಮೀಯ ಘನತೆಯಲ್ಲಿರುವಂತಹ ಸಂಪೂರ್ಣ ಪವಿತ್ರ ಭವ.

ಈ ಬ್ರಾಹ್ಮಣ ಜೀವನದಲ್ಲಿ ಏಕವ್ರತನ ಪಾಠ ಪಕ್ಕಾ ಮಾಡಿಕೊಂಡು ಪವಿತ್ರತೆಯ ಘನತೆಯನ್ನು ಧಾರಣೆ ಮಾಡಿ ಆಗ ಇಡೀ ಕಲ್ಪದಲ್ಲಿ ಈ ಆತ್ಮೀಯ ಘನತೆಯಿಂದ ನಡೆಯುತ್ತಾ ಹೋಗುವಿರಿ. ತಮ್ಮ ಆತ್ಮೀಯ ಘನತೆ ಮತ್ತು ಪವಿತ್ರತೆಯ ಹೊಳಪು ಪರಂಧಾಮದಲ್ಲಿ ಸರ್ವ ಆತ್ಮರಿಗಿಂತಲೂ ಶ್ರೇಷ್ಠವಾಗಿದೆ. ಆದಿಕಾಲದಲ್ಲಿ ದೇವತಾ ಸ್ವರೂಪದಲ್ಲಿಯೂ ಸಹ ಈ ವ್ಯಕ್ತಿತ್ವ ವಿಶೇಷವಾಗಿರುತ್ತದೆ, ನಂತರ ಮಧ್ಯಕಾಲದಲ್ಲಿಯೂ ಸಹ ನಿಮ್ಮ ಚಿತ್ರಕ್ಕೆ ವಿಧಿಪೂರ್ವಕವಾಗಿ ಪೂಜೆಯಾಗುವುದು. ಈ ಸಂಗಮಯುಗದಲ್ಲಿ ಬ್ರಾಹ್ಮಣ ಜೀವನದ ಆಧಾರ ಪವಿತ್ರತೆಯ ಘನತೆ. ಆದ್ದರಿಂದ ಎಲ್ಲಿಯವರೆಗೆ ಬ್ರಾಹ್ಮಣ ಜೀವನದಲ್ಲಿ ಜೀವಿಸಿರುವಿರೊ ಅಲ್ಲಿಯವರೆಗೆ ಸಂಪೂರ್ಣ ಪವಿತ್ರವಾಗಿರಲೇಬೇಕು.

ಸ್ಲೋಗನ್:
ತಾವು ಸಹನಶೀಲತೆಯ ದೇವ ಮತ್ತು ದೇವಿಯಾದಾಗ ಬೈಗುಳ ಹಾಕುವವರೂ ಸಹ ಪ್ರೀತಿಯಿಂದ ಅಪ್ಪಿಕೊಳ್ಳುತ್ತಾರೆ.