20/11/20 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ


"ಮಧುರ ಮಕ್ಕಳೇ - ನೀವೀಗ ಅಂಚಿನಲ್ಲಿ ನಿಂತಿದ್ದೀರಿ, ಈಗ ಈ ತೀರದಿಂದ ಆ ತೀರಕ್ಕೆ ಹೋಗಬೇಕಾಗಿದೆ, ಮನೆಗೆ ಹೋಗುವ ತಯಾರು ಮಾಡಿಕೊಳ್ಳಬೇಕಾಗಿದೆ”

ಪ್ರಶ್ನೆ:

ಯಾವ ಒಂದು ಮಾತನ್ನು ನೆನಪಿಟ್ಟುಕೊಂಡಾಗ ಸ್ಥಿತಿಯು ಅಚಲ-ಅಡೋಲವಾಗಿ ಬಿಡುವುದು?

ಉತ್ತರ:

ಪಾಸ್ಟ್ ಈಸ್ ಪಾಸ್ಟ್ (ಕಳೆದದ್ದು ಕಳೆದು ಹೋಯಿತು). ಕಳೆದುದರ ಚಿಂತನೆ ಮಾಡಬಾರದು. ಮುಂದುವರೆಯುತ್ತಾ ಹೋಗಬೇಕಾಗಿದೆ. ಸದಾ ಒಬ್ಬ ತಂದೆಯ ಕಡೆ ನೋಡುತ್ತಾ ಇರಿ ಆಗ ಸ್ಥಿತಿಯು ಅಚಲ-ಅಡೋಲವಾಗಿ ಬಿಡುವುದು. ನೀವೀಗ ಕಲಿಯುಗದ ಎಲ್ಲೆಯನ್ನು ದಾಟಿದ್ದೀರಿ ಮತ್ತೆ ಹಿಂದಕ್ಕೆ ಏಕೆ ನೋಡುತ್ತೀರಿ? ಅದರಲ್ಲಿ ಸ್ವಲ್ಪವೂ ಬುದ್ಧಿಯು ಹೋಗಬಾರದು. ಇದೇ ಸೂಕ್ಷ್ಮ ಬುದ್ಧಿಯಾಗಿದೆ.

ಓಂ ಶಾಂತಿ. ದಿನಗಳು ಬದಲಾಗುತ್ತಾ ಹೋಗುತ್ತಿದೆ, ಸಮಯವು ಕಳೆಯುತ್ತಾ ಹೋಗುತ್ತದೆ. ವಿಚಾರ ಮಾಡಿ - ಸತ್ಯಯುಗದಿಂದ ಹಿಡಿದು ಸಮಯವು ಕಳೆಯುತ್ತಾ-ಕಳೆಯುತ್ತಾ ಈಗ ಕಲಿಯುಗದ ಕೊನೆಯಲ್ಲಿ ಬಂದು ನಿಂತಿದ್ದೀರಿ. ಈ ಸತ್ಯಯುಗ, ತ್ರೇತಾ, ದ್ವಾಪರ, ಕಲಿಯುಗದ ಚಕ್ರವೂ ಸಹ ಒಂದು ಮಾದರಿಯಾಗಿದೆ. ಸೃಷ್ಟಿಯಂತೂ ಬಹಳ ಉದ್ದಗಲವಾಗಿದೆ. ಅದರ ಮಾದರಿ ರೂಪವನ್ನು ಮಕ್ಕಳು ಅರಿತುಕೊಂಡಿದ್ದೀರಿ. ಈಗ ಕಲಿಯುಗವು ಮುಕ್ತಾಯವಾಗುತ್ತದೆ ಎಂಬುದು ಮೊದಲು ಗೊತ್ತಿರಲಿಲ್ಲ. ಈಗ ಅರ್ಥವಾಗಿದೆ ಅಂದಾಗ ಮಕ್ಕಳೂ ಸಹ ಬುದ್ಧಿಯ ಮೂಲಕ ಸತ್ಯಯುಗದಿಂದ ಹಿಡಿದು ಚಕ್ರವನ್ನು ಸುತ್ತಿ ಕಲಿಯುಗದ ಅಂತ್ಯದಲ್ಲಿ ಬಂದು ತಿಳಿದುಕೊಳ್ಳಿ, ಟಿಕ್-ಟಿಕ್ ಆಗುತ್ತಾ ಇರುತ್ತದೆ, ನಾಟಕವು ಸುತ್ತುತ್ತಾ ಇರುತ್ತದೆ. ಇನ್ನೆಷ್ಟು ಸಮಯ ಉಳಿದಿರಬಹುದು? ಇನ್ನು ಸ್ವಲ್ಪವೇ ಇದೆ, ಮೊದಲು ಇದು ತಿಳಿದಿರಲಿಲ್ಲ. ಈಗ ತಂದೆಯು ತಿಳಿಸಿದ್ದಾರೆ - ಮಕ್ಕಳೇ, ಇನ್ನು ಒಂದು ಮೂಲೆ ಮಾತ್ರವೇ ಉಳಿದಿದೆ. ಈ ಪ್ರಪಂಚದಿಂದ ಆ ಪ್ರಪಂಚದಲ್ಲಿ ಹೋಗಲು ಇನ್ನು ಸ್ವಲ್ಪ ಸಮಯವೇ ಇದೆ. ಈ ಜ್ಞಾನವೂ ಸಹ ಈಗ ಸಿಕ್ಕಿದೆ. ನಾವು ಸತ್ಯಯುಗದಿಂದ ಹಿಡಿದು ಚಕ್ರವನ್ನು ಸುತ್ತುತ್ತಾ-ಸುತ್ತುತ್ತಾ ಈಗ ಕಲಿಯುಗದ ಅಂತ್ಯದಲ್ಲಿ ಬಂದು ತಲುಪಿದ್ದೇವೆ. ಪುನಃ ಈಗ ಹಿಂತಿರುಗಿ ಹೋಗಬೇಕಾಗಿದೆ. ಬರುವ ಮತ್ತು ಹೋಗುವ ದ್ವಾರವಿರುತ್ತದೆಯಲ್ಲವೆ. ಇದು ಹಾಗೆಯೇ. ಮಕ್ಕಳು ತಿಳಿಸಬೇಕು - ಇನ್ನು ಸ್ವಲ್ಪವೇ ಸಮಯವಿದೆ, ಇದು ಪುರುಷೋತ್ತಮ ಸಂಗಮಯುಗವಲ್ಲವೆ. ಈಗ ನಾವು ತೀರದಲ್ಲಿದ್ದೇವೆ, ಇನ್ನು ಬಹಳ ಕಡಿಮೆ ಸಮಯವಿದೆ. ಈಗ ಈ ಹಳೆಯ ಪ್ರಪಂಚದಿಂದ ಮಮತ್ವವನ್ನು ತೆಗೆಯಬೇಕಾಗಿದೆ. ಈಗಂತೂ ಹೊಸ ಪ್ರಪಂಚದಲ್ಲಿ ಹೋಗಬೇಕಾಗಿದೆ. ತಂದೆಯು ಬಹಳ ಸಹಜವಾದ ತಿಳುವಳಿಕೆಯನ್ನು ಕೊಡುತ್ತಾರೆ ಅಂದಾಗ ಇದನ್ನು ಬುದ್ಧಿಯಲ್ಲಿಟ್ಟುಕೊಳ್ಳಬೇಕು. ಬುದ್ಧಿಯಲ್ಲಿ ಚಕ್ರವು ಸುತ್ತುತ್ತಿರಬೇಕು. ನೀವೀಗ ಕಲಿಯುಗದಲ್ಲಿಲ್ಲ, ಕಲಿಯುಗದ ಪರಿಧಿಯನ್ನು ದಾಟಿ ಹೋಗಿದ್ದೀರಿ ಅಂದಮೇಲೆ ಮತ್ತೆ ಆ ಕಡೆಯವರನ್ನು ಏಕೆ ನೆನಪು ಮಾಡಬೇಕು? ಯಾವಾಗ ಹಳೆಯ ಪ್ರಪಂಚವನ್ನು ಬಿಟ್ಟು ಬಿಟ್ಟಿದ್ದೀರಿ. ನಾವು ಪುರುಷೋತ್ತಮ ಸಂಗಮಯುಗದಲ್ಲಿದ್ದೇವೆ. ನಾವು ಹಿಂದಕ್ಕೆ ನೋಡುವುದಾದರೂ ಏಕೆ? ಬುದ್ಧಿಯೋಗವನ್ನು ವಿಕಾರಿ ಪ್ರಪಂಚದೊಂದಿಗೆ ಇಡುವುದಾದರೂ ಏಕೆ? ಇವು ಬಹಳ ಸೂಕ್ಷ್ಮ ಮಾತುಗಳಾಗಿವೆ. ತಂದೆಗೆ ತಿಳಿದಿದೆ - ಕೆಲವರಂತೂ ಒಂದು ರೂಪಾಯಿಯಲ್ಲಿ ಒಂದಾಣೆಯಷ್ಟನ್ನೂ ತಿಳಿದುಕೊಂಡಿಲ್ಲ. ಕೇಳುತ್ತಾರೆ, ಮರೆತು ಬಿಡುತ್ತಾರೆ. ನೀವಂತೂ ಈಗ ಮತ್ತೆ ಹಿಂದಕ್ಕೆ ನೋಡಬಾರದು. ಬುದ್ಧಿಗೆ ಕೆಲಸ ಕೊಡಬೇಕಲ್ಲವೆ. ನಾವು ಆ ತೀರವನ್ನು ಬಿಟ್ಟು ಬಂದಿದ್ದೇವೆ ಅಂದಮೇಲೆ ಹಿಂದಕ್ಕೆ ಏಕೆ ನೋಡಬೇಕು? ಪಾಸ್ಟ್ ಈಸ್ ಪಾಸ್ಟ್. ತಂದೆಯು ಎಷ್ಟೊಂದು ಆಳವಾದ ಮಾತುಗಳನ್ನು ತಿಳಿಸುತ್ತಾರೆ! ಆದರೂ ಸಹ ಮಕ್ಕಳ ತಲೆ ಹಿಂದಕ್ಕೆ ಏಕೆ ತಿರುಗುತ್ತದೆ? ಕಲಿಯುಗದ ಕಡೆಯೇ ಸಿಕ್ಕಿ ಹಾಕಿಕೊಂಡಿದೆ! ತಂದೆಯು ತಿಳಿಸುತ್ತಾರೆ - ಮಕ್ಕಳೇ, ತಲೆಯನ್ನು ಈ ಕಡೆ ತಿರುಗಿಸಿಕೊಳ್ಳಿ. ಆ ಹಳೆಯ ಪ್ರಪಂಚವು ನಿಮಗೆ ಕೆಲಸಕ್ಕೆ ಬರುವ ವಸ್ತುವಲ್ಲ. ತಂದೆಯು ಹಳೆಯ ಪ್ರಪಂಚದೊಂದಿಗೆ ವೈರಾಗ್ಯವನ್ನು ತರಿಸುತ್ತಾರೆ. ಹೊಸ ಪ್ರಪಂಚವು ಸನ್ಮುಖದಲ್ಲಿ ನಿಂತಿದೆ ಅಂದಾಗ ಹಳೆಯ ಪ್ರಪಂಚದೊಂದಿಗೆ ವೈರಾಗ್ಯ ಬರಲು ವಿಚಾರ ಮಾಡಿ - ನನ್ನದು ಇಂತಹ ಸ್ಥಿತಿ ಇದೆಯೇ? ಪಾಸ್ಟ್ ಈಸ್ ಪಾಸ್ಟ್. ಕಳೆದು ಹೋದುದಕ್ಕೆ ಚಿಂತಿಸಬೇಡಿ. ಹಳೆಯ ಪ್ರಪಂಚದಲ್ಲಿ ಯಾವುದೇ ಆಸೆಯನ್ನಿಟ್ಟುಕೊಳ್ಳಬೇಡಿ. ಈಗಂತೂ ಒಂದೇ ಶ್ರೇಷ್ಠ ಆಸೆಯನ್ನಿಡಿ - ನಾವು ಸುಖಧಾಮಕ್ಕೆ ಹೋಗಬೇಕಾಗಿದೆ. ಬುದ್ಧಿಯಲ್ಲಿ ಸುಖಧಾಮವೇ ನೆನಪಿರಲಿ. ಹಿಂದಕ್ಕೆ ಏಕೆ ತಿರುಗುವಿರಿ? ಆದರೆ ಅನೇಕ ಮಕ್ಕಳ ಬೆನ್ನು ಹಿಂದಕ್ಕೆ ತಿರುಗಿರುತ್ತದೆ. ನೀವೀಗ ಪುರುಷೋತ್ತಮ ಸಂಗಮಯುಗದಲ್ಲಿದ್ದೀರಿ. ಹಳೆಯ ಪ್ರಪಂಚದ ತೀರವನ್ನು ದಾಟಿದ್ದೀರಿ. ಇದು ತಿಳುವಳಿಕೆಯ ಮಾತಲ್ಲವೆ. ಎಲ್ಲಿಯೂ ನಿಲ್ಲಬೇಡಿ, ಎಲ್ಲಿಯೂ ನೋಡಬೇಡಿ. ಕಳೆದುದನ್ನು ನೆನಪು ಮಾಡಿಕೊಳ್ಳಬೇಡಿ. ಮುನ್ನಡೆಯುತ್ತಾ ಹೋಗಿ, ಹಿಂದಕ್ಕೆ ನೋಡಬೇಡಿ. ಒಂದು ಕಡೆಯೇ ನೋಡುತ್ತಾ ಇರಿ. ಆಗಲೇ ನಿಮ್ಮ ಸ್ಥಿತಿಯು ಅಚಲ-ಅಡೋಲ ಸ್ಥಿರವಾಗಿರಲು ಸಾಧ್ಯ. ಒಂದುವೇಳೆ ಪುನಃ ಆ ಕಡೆ ನೋಡುತ್ತಾ ಇರುತ್ತೀರೆಂದರೆ ಹಳೆಯ ಪ್ರಪಂಚದ ಮಿತ್ರ ಸಂಬಂಧಿ ಮೊದಲಾದವರು ನೆನಪಿಗೆ ಬರುತ್ತಿರುತ್ತಾರೆ. ನಂಬರ್ವಾರಂತೂ ಇದ್ದಾರಲ್ಲವೆ. ಇಂದು ನೋಡಿದರೆ ಬಹಳ ಚೆನ್ನಾಗಿ ನಡೆಯುತ್ತಿರುತ್ತಾರೆ, ನಾಳೆ ಕೆಳಗೆ ಬೀಳುತ್ತಾರೆ ಆಗ ಇದರಿಂದ ಮನಸ್ಸೆ ಹೊರಟು ಹೋಗುತ್ತದೆ. ಇಂತಹ ಗ್ರಹಚಾರ ಕುಳಿತು ಬಿಡುತ್ತದೆ ಅವರಿಗೆ ಮುರುಳಿಯನ್ನು ಕೇಳುವುದಕ್ಕೂ ಮನಸ್ಸಾಗುವುದಿಲ್ಲ. ವಿಚಾರ ಮಾಡಿ - ಈ ರೀತಿಯಾಗುತ್ತದೆಯಲ್ಲವೆ?

ತಂದೆಯು ತಿಳಿಸುತ್ತಾರೆ - ನೀವೀಗ ಸಂಗಮದಲ್ಲಿ ನಿಂತಿದ್ದೀರಿ ಅಂದಮೇಲೆ ನಿಮ್ಮ ದೃಷ್ಟಿಯು ಮುಂದಿರಬೇಕು. ಮುಂದೆ ಹೊಸ ಪ್ರಪಂಚವಿದೆ. ಇದು ಸ್ಮೃತಿಯಿದ್ದಾಗಲೇ ಖುಷಿಯಿರುವುದು. ನಾವಿನ್ನು ಗುರಿ ಮುಟ್ಟಲು ಕೊನೆಯ ಹಂತದಲ್ಲಿದ್ದೇವೆ. ಈಗ ನಮ್ಮ ದೇಶದ ಗಿಡ ಮರಗಳು ಕಾಣುತ್ತಿವೆ ಎಂದು ತನ್ನ ದೇಶಕ್ಕೆ ಹತ್ತಿರ ಬಂದಾಗ ಹೇಳುತ್ತಾರಲ್ಲವೆ. ಕೊನೆಯ ತೀರ ಅರ್ಥಾತ್ ಇನ್ನು ಸಂಪೂರ್ಣ ಹತ್ತಿರದಲ್ಲಿದ್ದೇವೆ ಎಂದರ್ಥ. ನೀವು ನೆನಪು ಮಾಡುತ್ತೀರಿ ಮತ್ತು ದೇವತೆಗಳು ಬಂದು ಬಿಡುತ್ತಾರೆ. ಮೊದಲು ಬರುತ್ತಿರಲಿಲ್ಲ. ಸೂಕ್ಷ್ಮವತನಕ್ಕೆ ಮಾವನ ಮನೆಯವರು ಬರುತ್ತಿದ್ದರೇ? ಈಗಂತೂ ತಂದೆಯ ಮನೆ ಮತ್ತು ಮಾವನ ಮನೆಯವರು ಹೋಗಿ ಮಿಲನ ಮಾಡುತ್ತೀರಿ. ಆದರೂ ಸಹ ಮಕ್ಕಳು ನಡೆಯುತ್ತಾ-ನಡೆಯುತ್ತಾ ಮರೆತು ಹೋಗುತ್ತೀರಿ. ಬುದ್ಧಿಯೋಗವು ಪುನಃ ಹಿಂದಕ್ಕೆ ಸರಿಯುತ್ತದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಇದೆಲ್ಲವೂ ನಿಮ್ಮ ಅಂತಿಮ ಜನ್ಮವಾಗಿದೆ ಅಂದಾಗ ನೀವು ಹಿಂದೆ ಸರಿಯಬಾರದು. ಮುಂದೆ ದಾಟಬೇಕಾಗಿದೆ. ಈ ದಡದಿಂದ ಆ ದಡವನ್ನು ಸೇರಬೇಕಾಗಿದೆ. ಮೃತ್ಯುವೂ ಸಹ ಸಮೀಪಿಸುತ್ತಾ ಹೋಗುತ್ತದೆ. ನಮ್ಮ ದೋಣಿಯು ತೀರವನ್ನು ತಲುಪುತ್ತಿದೆ ಅಂದಮೇಲೆ ಕೇವಲ ದಾಟಬೇಕಷ್ಟೆ. ಅತ್ತ ಕಡೆ ಹೆಜ್ಜೆಯನ್ನು ಹಾಕಬೇಕಲ್ಲವೆ. ನೀವು ಮಕ್ಕಳು ದಡಕ್ಕೆ ಬಂದು ನಿಲ್ಲಬೇಕು. ನಿಮ್ಮ ಬುದ್ಧಿಯಲ್ಲಿದೆ, ಆತ್ಮಗಳು ತಮ್ಮ ಮಧುರ ಮನೆಗೆ ಹೋಗುತ್ತೀರಿ - ಈ ನೆನಪಿರುವುದರಿಂದಲೂ ಸಹ ಖುಷಿಯು ನಿಮ್ಮನ್ನು ಅಚಲ-ಅಡೋಲರನ್ನಾಗಿ ಮಾಡುವುದು. ಇದೇ ವಿಚಾರ ಸಾಗರ ಮಂಥನ ಮಾಡುತ್ತಿರಬೇಕಾಗಿದೆ. ಇದು ಬುದ್ಧಿಯ ಮಾತಾಗಿದೆ. ನಾವಾತ್ಮಗಳು ಹೋಗುತ್ತಿದ್ದೇವೆ, ಇನ್ನು ಗುರಿಗೆ ಬಹಳ ಸಮೀಪದಲ್ಲಿದ್ದೇವೆ. ಇನ್ನು ಸ್ವಲ್ಪವೇ ಸಮಯವಿದೆ. ಇದಕ್ಕೇ ನೆನಪಿನ ಯಾತ್ರೆಯೆಂದು ಹೇಳಲಾಗುತ್ತದೆ ಆದರೆ ಮಕ್ಕಳು ಇದನ್ನೂ ಮರೆತು ಹೋಗುತ್ತಾರೆ. ಚಾರ್ಟ್ ಬರೆಯುವುದನ್ನೂ ಮರೆತು ಬಿಡುತ್ತಾರೆ. ತಮ್ಮ ಹೃದಯದ ಮೇಲೆ ಕೈಯನ್ನಿಟ್ಟು ನೋಡಿಕೊಳ್ಳಿ - ತಮ್ಮನ್ನು ತಾವು ನಾವು ಕೊನೆಯ ತೀರದಲ್ಲಿದ್ದೇವೆ ಎಂದು ತಿಳಿಯಿರಿ ಎಂದು ತಂದೆಯು ಯಾವುದನ್ನು ತಿಳಿಸುತ್ತಿದ್ದಾರೆಯೋ ನಮ್ಮದು ಆ ಸ್ಥಿತಿಯಿದೆಯೇ? ಬುದ್ಧಿಯಲ್ಲಿ ಒಬ್ಬ ತಂದೆಯ ನೆನಪೇ ಇರಲಿ. ತಂದೆಯು ನೆನಪಿನ ಯಾತ್ರೆಯನ್ನು ಭಿನ್ನ-ಭಿನ್ನ ಪ್ರಕಾರದಿಂದ ಕಲಿಸುತ್ತಾ ಇರುತ್ತಾರೆ. ಈ ನೆನಪಿನ ಯಾತ್ರೆಯಲ್ಲಿಯೇ ಮಸ್ತರಾಗಿರಬೇಕಾಗಿದೆ. ನಾವಿನ್ನು ಹೋಗಬೇಕಾಗಿದೆ, ಇಲ್ಲಿರುವುದೆಲ್ಲವೂ ಸುಳ್ಳು ಸಂಬಂಧಗಳಾಗಿವೆ. ಸತ್ಯಯುಗದ ಸಂಬಂಧವು ಸತ್ಯ ಸಂಬಂಧವಾಗಿದೆ. ತಮ್ಮನ್ನು ನೋಡಿಕೊಳ್ಳಿ - ನಾವು ಎಲ್ಲಿ ನಿಂತಿದ್ದೇವೆ? ಸತ್ಯಯುಗದಿಂದ ಹಿಡಿದು ಬುದ್ಧಿಯಲ್ಲಿ ಈ ಚಕ್ರವನ್ನು ನೆನಪು ಮಾಡಿಕೊಳ್ಳಿ - ನೀವು ಸ್ವದರ್ಶನ ಚಕ್ರಧಾರಿಗಳಲ್ಲವೆ? ಸತ್ಯಯುಗದಿಂದ ಹಿಡಿದು ಚಕ್ರವನ್ನು ಸುತ್ತಿ ಬಂದು ಕೊನೆಯಲ್ಲಿ ನಿಂತಿದ್ದೀರಿ. ಅಂದಮೇಲೆ ಇದು ತೀರವಾಯಿತಲ್ಲವೆ. ಕೆಲವರಂತೂ ತಮ್ಮ ಸಮಯವನ್ನು ಬಹಳ ವ್ಯರ್ಥವಾಗಿ ಕಳೆಯುತ್ತಿರುತ್ತಾರೆ. 5-10 ನಿಮಿಷಗಳೂ ಸಹ ನೆನಪಿನಲ್ಲಿರುವುದು ಬಹಳ ಕಷ್ಟ. ಇಡೀ ದಿನ ಸ್ವದರ್ಶನ ಚಕ್ರಧಾರಿಗಳಾಗಿರಬೇಕೆಂದಲ್ಲ. ತಂದೆಯು ಭಿನ್ನ-ಭಿನ್ನ ಪ್ರಕಾರದಿಂದ ತಿಳಿಸುತ್ತಾರೆ. ಇದು ಆತ್ಮದ ಮಾತಾಗಿದೆ, ನಿಮ್ಮ ಬುದ್ಧಿಯಲ್ಲಿ ಚಕ್ರವು ಸುತ್ತುತ್ತಿರುತ್ತದೆ. ಅಂದಮೇಲೆ ಬುದ್ಧಿಯಲ್ಲಿ ಈ ನೆನಪು ಏಕೆ ಇರಬಾರದು! ನಾವೀಗ ತೀರದಲ್ಲಿ ನಿಂತಿದ್ದೇವೆ ಅಂದಾಗ ಬುದ್ಧಿಯಲ್ಲಿ ಈ ತೀರವು ನೆನಪಿರುವುದಿಲ್ಲ! ಯಾವಾಗ ನಾವು ಪುರುಷೋತ್ತಮರಾಗುತ್ತಿದ್ದೇವೆಂದು ನಿಮಗೆ ತಿಳಿದಿದೆ ಅಂದಮೇಲೆ ಹೋಗಿ ಬುದ್ಧಿಯಿಂದ ತೀರದಲ್ಲಿ ನಿಂತಿರಿ. ನಿಧಾನವಾಗಿ ನಡೆಯುತ್ತಲೇ ಇರಿ ಆದರೆ ಈ ಅಭ್ಯಾಸವನ್ನು ಏಕೆ ಮಾಡುವುದಿಲ್ಲ, ಚಕ್ರವು ಬುದ್ಧಿಯಲ್ಲಿ ಏಕೆ ಬರುವುದಿಲ್ಲ. ಇದು ಸ್ವದರ್ಶನ ಚಕ್ರವಲ್ಲವೆ. ತಂದೆಯು ಆರಂಭದಿಂದ ಹಿಡಿದು ಇಡೀ ಚಕ್ರದ ಬಗ್ಗೆ ತಿಳಿಸುತ್ತಿರುತ್ತಾರೆ. ನಿಮ್ಮ ಬುದ್ಧಿಯು ಇಡೀ ಚಕ್ರವನ್ನು ಸುತ್ತಿ ಬಂದು ಕೊನೆಯಲ್ಲಿ ನಿಲ್ಲಬೇಕು, ಮತ್ತ್ಯಾವುದೇ ಹೊರಗಿನ ಜಂಜಾಟದ ವಾತಾವರಣವು ಇರಬಾರದು. ದಿನ-ಪ್ರತಿದಿನ ನೀವು ಮಕ್ಕಳು ಶಾಂತಿಯಲ್ಲಿಯೇ ಇರಬೇಕಾಗಿದೆ. ಸಮಯವನ್ನು ವ್ಯರ್ಥವಾಗಿ ಕಳೆಯಬಾರದು. ಹಳೆಯ ಪ್ರಪಂಚವನ್ನು ಬಿಟ್ಟು ಹೊಸ ಸಂಬಂಧದೊಂದಿಗೆ ತಮ್ಮ ಬುದ್ಧಿಯೋಗವನ್ನಿಡಿ. ಯೋಗ ಮಾಡದಿದ್ದರೆ ಪಾಪವು ಹೇಗೆ ಕಳೆಯುತ್ತದೆ? ನಿಮಗೆ ತಿಳಿದಿದೆ - ಈ ಪ್ರಪಂಚವೇ ಸಮಾಪ್ತಿಯಾಗಲಿದೆ, ಇದರ ಮಾದರಿಯು ಎಷ್ಟು ಚಿಕ್ಕದಾಗಿದೆ! ಇದು 5000 ವರ್ಷಗಳ ಪ್ರಪಂಚವಾಗಿದೆ, ಅಜ್ಮೀರ್ನಲ್ಲಿ ಸ್ವರ್ಗದ ಮಾದರಿಯಿದೆ. ಆದರೆ ಸ್ವರ್ಗವು ಯಾರಿಗಾದರೂ ನೆನಪಿಗೆ ಬರುತ್ತದೆಯೇ? ಸ್ವರ್ಗವು ಅವರಿಗೇನು ಗೊತ್ತು? ಸ್ವರ್ಗವಂತೂ 40 ಸಾವಿರ ವರ್ಷಗಳ ನಂತರ ಬರುತ್ತದೆಯೆಂದು ತಿಳಿಯುತ್ತಾರೆ. ತಂದೆಯು ನೀವು ಮಕ್ಕಳಿಗೆ ತಿಳಿಸುತ್ತಾರೆ - ಈ ಪ್ರಪಂಚದಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತಾ ಬುದ್ಧಿಯಲ್ಲಿ ಇದನ್ನು ನೆನಪಿಟ್ಟುಕೊಳ್ಳಿ - ಈ ಪ್ರಪಂಚವು ಸಮಾಪ್ತಿಯಾಗುವುದಿದೆ. ಈಗ ಹಿಂತಿರುಗಿ ಹೋಗಬೇಕಾಗಿದೆ. ನಾವು ಕೊನೆಯಲ್ಲಿ ನಿಂತಿದ್ದೇವೆ. ಹೆಜ್ಜೆ-ಹೆಜ್ಜೆಯೂ ನಿಧಾನವಾಗಿ ನಡೆಯುತ್ತದೆ, ಗುರಿಯು ಎಷ್ಟು ದೊಡ್ಡದಾಗಿದೆ! ತಂದೆಯಂತೂ ಗುರಿಯನ್ನು ತಿಳಿದುಕೊಂಡಿದ್ದಾರಲ್ಲವೆ. ತಂದೆಯ ಜೊತೆ ದಾದಾರವರೂ ಒಟ್ಟಿಗೆ ಇದ್ದಾರೆ. ಅವರು ತಿಳಿಸುತ್ತಾರೆ ಅಂದಮೇಲೆ ಇವರು (ಬ್ರಹ್ಮಾ) ತಿಳಿಸಲು ಸಾಧ್ಯವಿಲ್ಲ ಅಲ್ಲವೆ. ಇವರೂ ಸಹ ಕೇಳಿಸಿಕೊಳ್ಳುತ್ತಾರಲ್ಲವೆ ಅಂದಮೇಲೆ ಇದನ್ನು ವಿಚಾರ ಸಾಗರ ಮಂಥನವನ್ನು ಇವರು ಮಾಡುವುದಿಲ್ಲವೆ? ತಂದೆಯು ನಿಮಗೆ ವಿಚಾರ ಸಾಗರ ಮಂಥನ ಮಾಡುವ ಯುಕ್ತಿಗಳನ್ನು ತಿಳಿಸುತ್ತಿರುತ್ತಾರೆ. ಇವೆಲ್ಲಾ ಗುಹ್ಯ-ಗುಹ್ಯ ಮಾತುಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಹುಡುಗಾಟಿಕೆಯನ್ನು ಬಿಟ್ಟು ಬಿಡಿ. ತಂದೆಯ ಬಳಿ ಎರಡೆರಡು ವರ್ಷಗಳ ನಂತರ ಬರುತ್ತಾರೆ. ಅಂದಮೇಲೆ ನಾವೀಗ ಕೊನೆಯ ತೀರದಲ್ಲಿ ನಿಂತಿದ್ದೇವೆ, ಈಗ ಹಿಂತಿರುಗಿ ಹೋಗಬೇಕಾಗಿದೆ ಎಂಬುದು ಅವರಿಗೆ ಹೇಗೆ ನೆನಪಿರುತ್ತದೆ! ಒಂದುವೇಳೆ ಈ ಸ್ಥಿತಿಯಾಗಿ ಬಿಟ್ಟರೆ ಇನ್ನೇನು ಬೇಕು? ತಂದೆಯು ಇದನ್ನೂ ತಿಳಿಸಿದ್ದಾರೆ - ಡಬಲ್ ಕಿರೀಟಧಾರಿಗಳು..... ಇದು ಕೇವಲ ಹೆಸರಿದೆ ಆದರೆ ಪ್ರಕಾಶತೆಯ ಕಿರೀಟವು ಅಲ್ಲಿ ಸ್ಥೂಲವಾಗಿ ಏನೂ ಇರುವುದಿಲ್ಲ. ಇದು ಪವಿತ್ರತೆಯ ಸಂಕೇತವಾಗಿದೆ. ಯಾರೆಲ್ಲಾ ಧರ್ಮ ಸ್ಥಾಪಕರಿದ್ದಾರೆಯೋ ಅವರ ಚಿತ್ರಗಳಲ್ಲಿ ತಲೆಯ ಹಿಂದೆ ಪ್ರಭಾಮಂಡಲವನ್ನು ಅವಶ್ಯವಾಗಿ ತೋರಿಸುತ್ತಾರೆ ಏಕೆಂದರೆ ಅವರು ಬಂದಾಗ ನಿರ್ವಿಕಾರಿ, ಸತೋಪ್ರಧಾನರಾಗಿರುತ್ತಾರೆ. ನಂತರ ರಜೋ, ತಮೋದಲ್ಲಿ ಬರುತ್ತಾರೆ. ನೀವು ಮಕ್ಕಳಿಗೆ ಜ್ಞಾನ ಸಿಗುತ್ತದೆ, ಇದರಲ್ಲಿಯೇ ಮಸ್ತರಾಗಿರಬೇಕು. ಭಲೆ ನೀವು ಈ ಪ್ರಪಂಚದಲ್ಲಿದ್ದೀರಿ ಆದರೆ ನಿಮ್ಮ ಬುದ್ಧಿಯೋಗವು ಅಲ್ಲಿ ತೊಡಗಿರಲಿ. ಎಲ್ಲರೊಂದಿಗೂ ಇಲ್ಲಿ ಸಂಬಂಧವನ್ನು ನಿಭಾಯಿಸಬೇಕಾಗಿದೆ. ಯಾರು ಈ ಕುಲದವರಾಗಿರುವರೋ ಅವರು ಬಂದೇ ಬರುತ್ತಾರೆ. ದೈವೀ ಧರ್ಮದ ಸಸಿಯು ನಾಟಿಯಾಗುವುದು. ಆದಿ ಸನಾತನ ದೇವಿ-ದೇವತಾ ಧರ್ಮದವರು ಖಂಡಿತವಾಗಿಯೂ ಸ್ವಲ್ಪ ಹಿಂದೆ-ಮುಂದೆ ಬಂದೇ ಬರುತ್ತಾರೆ. ಕೊನೆಯಲ್ಲಿ ಬರುವವರೂ ಸಹ ಮೊದಲಿನವರಿಗಿಂತಲೂ ತೀಕ್ಷ್ಣವಾಗಿ ಮುಂದೆ ಹೋಗುತ್ತಾರೆ. ಇದು ಕೊನೆಯವರೆಗೂ ಆಗುತ್ತಿರುವುದು. ಅವರು ಹಳಬರಿಗಿಂತಲೂ ತೀಕ್ಷ್ಣವಾಗಿ ಹೆಜ್ಜೆಯನ್ನು ಮುಂದಿಡುತ್ತಾರೆ. ಪರೀಕ್ಷೆಯೆಲ್ಲವೂ ನೆನಪಿನ ಯಾತ್ರೆಯ ಮೇಲೆ ಅಧಾರಿತವಾಗಿದೆ. ಭಲೆ ತಡವಾಗಿ ಬರಬಹುದು ಆದರೆ ನೆನಪಿನ ಯಾತ್ರೆಯಲ್ಲಿ ತೊಡಗಬೇಕು ಮತ್ತು ಎಲ್ಲಾ ಉದ್ಯೋಗ-ವ್ಯವಹಾರಗಳನ್ನು ಬಿಟ್ಟು ಈ ಯಾತ್ರೆಯಲ್ಲಿ ಕುಳಿತುಕೊಳ್ಳಿ, ಭೋಜನವಂತೂ ಮಾಡಲೇಬೇಕಾಗಿದೆ ಆದರೆ ಚೆನ್ನಾಗಿ ನೆನಪಿನಲ್ಲಿರಿ. ಆಗ ಈ ಖುಷಿಯಂತಹ ಔಷಧಿಯು ಬೇರೆ ಇಲ್ಲ. ನಾವೀಗ ಹೋಗುತ್ತೇವೆ, 21 ಜನ್ಮಗಳ ರಾಜ್ಯಭಾಗ್ಯವು ಸಿಗುತ್ತದೆ ಎಂಬುದೇ ಗುಂಗಿರಲಿ. ಲಾಟರಿ ಸಿಗುವವರೆಗೆ ಖುಷಿಯ ನಶೆಯೇರುತ್ತದೆಯಲ್ಲವೆ. ನೀವು ಬಹಳ ಪರಿಶ್ರಮ ಪಡಬೇಕಾಗಿದೆ. ಇದಕ್ಕೇ ಅಂತಿಮ ಅಮೂಲ್ಯ ಜೀವನವೆಂದು ಹೇಳಲಾಗುತ್ತದೆ. ನೆನಪಿನ ಯಾತ್ರೆಯಲ್ಲಿ ಬಹಳ ಆನಂದವಿದೆ, ಹನುಮಂತನೂ ಸಹ ಪುರುಷಾರ್ಥ ಮಾಡುತ್ತಾ-ಮಾಡುತ್ತಾ ಸ್ಥಿರ ಬುದ್ಧಿಯವರಾದರಲ್ಲವೆ. ಬಿದುರಿನ ಕಾಡಿಗೆ ಬೆಂಕಿ ಬಿದ್ದಿತ್ತು. ರಾವಣ ರಾಜ್ಯವು ಸುಟ್ಟು ಹೋಯಿತು. ಇದನ್ನು ಒಂದು ಕಥೆಯನ್ನಾಗಿ ಮಾಡಿ ಬಿಟ್ಟಿದ್ದಾರೆ. ತಂದೆಯು ಯಥಾರ್ಥ ಮಾತನ್ನು ತಿಳಿಸುತ್ತಾರೆ - ಮಕ್ಕಳೇ, ರಾವಣ ರಾಜ್ಯವು ಸಮಾಪ್ತಿಯಾಗುವುದು. ಸ್ಥಿರ ಬುದ್ಧಿಯೆಂದು ಇದಕ್ಕೇ ಹೇಳಲಾಗುತ್ತದೆ. ನಾವೀಗ ಕೊನೆಯ ಹಂತದಲ್ಲಿದ್ದೇವೆ. ನಾವೀಗ ಹೋಗುತ್ತಿದ್ದೇವೆ. ಈ ನೆನಪಿನಲ್ಲಿರುವ ಪುರುಷಾರ್ಥ ಮಾಡಿ ಆಗ ಖುಷಿಯೂ ಇರುವುದು, ಯೋಗಬಲದಿಂದ ಆಯಸ್ಸೂ ವೃದ್ಧಿಯಾಗುವುದು. ನೀವೀಗ ದೈವೀ ಗುಣಗಳನ್ನು ಧಾರಣೆ ಮಾಡುತ್ತೀರಿ, ಅದು ಮತ್ತೆ ಅರ್ಧಕಲ್ಪದವರೆಗೆ ನಡೆಯುತ್ತದೆ. ಈ ಒಂದು ಜನ್ಮದಲ್ಲಿ ನೀವು ಇಷ್ಟು ಪುರುಷಾರ್ಥ ಮಾಡುತ್ತೀರಿ, ಇದರ ಪ್ರಾಲಬ್ಧವಾಗಿ ನೀವು ಲಕ್ಷ್ಮೀ-ನಾರಾಯಣರಾಗಿ ಬಿಡುತ್ತೀರಿ ಅಂದಮೇಲೆ ಎಷ್ಟೊಂದು ಪುರುಷಾರ್ಥ ಮಾಡಬೇಕು! ಇದರಲ್ಲಿ ಹುಡುಗಾಟಿಕೆ ಅಥವಾ ಸಮಯ ವ್ಯರ್ಥ ಮಾಡಬಾರದು. ಯಾರು ಮಾಡುವರೋ ಅವರು ಪಡೆಯುವರು. ತಂದೆಯು ಶಿಕ್ಷಣ ಕೊಡುತ್ತಿರುತ್ತಾರೆ. ನೀವು ತಿಳಿಯುತ್ತೀರಿ - ಕಲ್ಪ-ಕಲ್ಪವೂ ನಾವು ವಿಶ್ವದ ಮಾಲೀಕರಾಗುತ್ತೇವೆ, ಇಷ್ಟು ಸ್ವಲ್ಪ ಸಮಯದಲ್ಲಿ ಕಮಾಲ್ ಮಾಡಿ ಬಿಡುತ್ತೇವೆ. ಇಡೀ ಪ್ರಪಂಚವನ್ನು ಪರಿವರ್ತನೆ ಮಾಡಿ ಬಿಡುತ್ತೀರಿ. ತಂದೆಗೆ ಯಾವುದೇ ದೊಡ್ಡ ಮಾತಲ್ಲ. ಕಲ್ಪ-ಕಲ್ಪವೂ ಮಾಡುತ್ತಾರೆ, ತಂದೆಯು ತಿಳಿಸುತ್ತಾರೆ - ನಡೆಯುತ್ತಾ-ತಿರುಗಾಡುತ್ತಾ, ತಿನ್ನುತ್ತಾ-ಕುಡಿಯುತ್ತಾ ಬುದ್ಧಿಯೋಗವನ್ನು ತಂದೆಯೊಂದಿಗೆ ಜೋಡಿಸಿ. ಈ ಗುಪ್ತ ಮಾತನ್ನು ತಂದೆಯೇ ಮಕ್ಕಳಿಗೆ ತಿಳಿಸುತ್ತಾರೆ. ತಮ್ಮ ಸ್ಥಿತಿಯನ್ನು ಶಕ್ತಿಶಾಲಿ ಮಾಡಿಕೊಳ್ಳುತ್ತಾ ಇರಿ ಇಲ್ಲವೆಂದರೆ ಶ್ರೇಷ್ಠ ಪದವಿಯನ್ನು ಪಡೆಯುವುದಿಲ್ಲ. ನೀವು ಮಕ್ಕಳು ನಂಬರ್ವಾರ್ ಪುರುಷಾರ್ಥದನುಸಾರ ಪರಿಶ್ರಮ ಪಡುತ್ತೀರಿ. ತಿಳಿದುಕೊಳ್ಳುತ್ತೀರಿ - ನಾವಂತೂ ಈಗ ಕೊನೆಯ ತೀರದಲ್ಲಿ ನಿಂತಿದ್ದೇವೆ ಅಂದಮೇಲೆ ಮತ್ತೆ ಹಿಂದಕ್ಕೆ ಏಕೆ ನೋಡಬೇಕು? ಹೆಜ್ಜೆಯನ್ನು ಮುಂದಿಡುತ್ತಾ ಹೋಗುತ್ತೇವೆ. ಇದರಲ್ಲಿ ಬಹಳ ಅಂತರ್ಮುಖತೆ ಇರಬೇಕು ಆದ್ದರಿಂದ ಆಮೆಯ ಉದಾಹರಣೆಯಿದೆ. ಈ ಉದಾಹರಣೆ ಮುಂತಾದುವೆಲ್ಲವೂ ನಿಮಗಾಗಿಯೇ ಇದೆ. ಸನ್ಯಾಸಿಗಳಂತೂ ಹಠಯೋಗಿಗಳಾಗಿದ್ದಾರೆ ಅಂದಮೇಲೆ ಅವರು ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ಅವರು ಇದನ್ನು ಕೇಳಿದರೆ ಇವರು ನಮಗೆ ನಿಂದನೆ ಮಾಡುತ್ತಾರೆಂದು ತಿಳಿಯುತ್ತಾರೆ ಆದ್ದರಿಂದ ಇದನ್ನೂ ಯುಕ್ತಿಯಿಂದ ಬರೆಯಬೇಕಾಗಿದೆ. ತಂದೆಯ ವಿನಃ ಮತ್ತ್ಯಾರೂ ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ಅವರಿಗೆ ಸಂಕಲ್ಪ ಬರಬಾರದೆಂದು ಇದನ್ನು ಇನ್ಡೈರೆಕ್ಟ್ ಆಗಿ ಹೇಳಬೇಕಾಗಿದೆ. ಯುಕ್ತಿಯಿಂದ ನಡೆಯಬೇಕಲ್ಲವೆ. ಹೇಗೆ ಹಾವೂ ಸಾಯಬೇಕು, ಕೋಲೂ ಮುರಿಯಬಾರದು ಎಂಬಂತೆ. ಕುಟುಂಬ ಪರಿವಾರ ಎಲ್ಲರೊಂದಿಗೂ ಪ್ರೀತಿಯನ್ನಿಡಿ ಆದರೆ ಬುದ್ಧಿಯೋಗವನ್ನು ತಂದೆಯೊಂದಿಗೆ ಜೋಡಿಸಬೇಕಾಗಿದೆ. ನಿಮಗೆ ತಿಳಿದಿದೆ - ಒಬ್ಬ ತಂದೆಯ ಮತದ ಮೇಲಿದ್ದೇವೆ. ಇದು ದೇವತೆಗಳಾಗುವ ಮತವಾಗಿದೆ. ಇದಕ್ಕೇ ಅದ್ವೈತ ಮತವೆಂದು ಹೇಳಲಾಗುತ್ತದೆ. ನೀವು ಮಕ್ಕಳೀಗ ದೇವತೆಗಳಾಗಬೇಕಾಗಿದೆ. ಎಷ್ಟು ಬಾರಿ ನೀವು ಆಗಿದ್ದೀರಿ? ಅನೇಕ ಬಾರಿ. ನೀವೀಗ ಸಂಗಮಯುಗದಲ್ಲಿ ನಿಂತಿದ್ದೀರಿ. ಇದು ಅಂತಿಮ ಜನ್ಮವಾಗಿದೆ. ಈಗಂತೂ ಹಿಂತಿರುಗಿ ಹೋಗಬೇಕಾಗಿದೆ. ಕೊನೆಯಲ್ಲಿ ಏನಾಗುವುದೆಂದು ನೋಡುವಿರಿ. ನೋಡುತ್ತಿದ್ದರೂ ಸಹ ನೀವು ತಮ್ಮ ಅಡೋಲ ಸ್ಥಿತಿಯಲ್ಲಿ ನಿಲ್ಲಿರಿ. ತಮ್ಮ ಲಕ್ಷ್ಯವನ್ನು ಮರೆಯಬೇಡಿ. ನೀವೇ ಮಹಾವೀರರು ಮಾಯೆಯ ಮೇಲೆ ಜಯ ಗಳಿಸುತ್ತೀರಿ. ಈಗ ನಿಮಗೆ ತಿಳಿದಿದೆ - ಸೋಲು ಮತ್ತು ಗೆಲುವಿನ ಈ ಚಕ್ರವು ಸುತ್ತುತ್ತಿರುತ್ತದೆ. ಇದು ಎಷ್ಟೊಂದು ಅದ್ಭುತ ಜ್ಞಾನವಾಗಿದೆ! ಇದು ಮೊದಲು ತಿಳಿದಿತ್ತೆ? ತಮ್ಮನ್ನು ಬಿಂದುವೆಂದು ತಿಳಿಯಬೇಕಾಗಿದೆ. ಇಷ್ಟು ಚಿಕ್ಕ ಬಿಂದುವಿನಲ್ಲಿ ಇಡೀ ಪಾತ್ರವು ಅಡಕವಾಗಿದೆ, ಚಕ್ರವು ಸುತ್ತುತ್ತಾ ಇರುತ್ತದೆ. ಬಹಳ ಅದ್ಭುತವಾಗಿದೆ. ಅದ್ಭುತವೆಂದು ಹೇಳಿ ಬಿಡಲೇಬೇಕಾಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಎಂದೂ ಹಿಂದಕ್ಕೆ ನೋಡಬಾರದು. ಯಾವುದೇ ಮಾತಿನಲ್ಲಿ ನಿಂತು ಬಿಡಬಾರದು. ಒಬ್ಬ ತಂದೆಯ ಕಡೆ ನೋಡುತ್ತಾ ತಮ್ಮ ಸ್ಥಿತಿಯನ್ನು ಏಕರಸವಾಗಿಟ್ಟುಕೊಳ್ಳಬೇಕು.

2. ಬುದ್ಧಿಯಲ್ಲಿ ಇದು ನೆನಪಿರಲಿ - ನಾವೀಗ ಕೊನೆಯಲ್ಲಿ ನಿಂತಿದ್ದೇವೆ. ಮನೆಗೆ ಹೋಗಬೇಕಾಗಿದೆ, ಹುಡುಗಾಟಿಕೆಯನ್ನು ಬಿಡಬೇಕಾಗಿದೆ. ತಮ್ಮ ಸ್ಥಿತಿಯನ್ನು ಮಾಡಿಕೊಳ್ಳುವ ಗುಪ್ತ ಪರಿಶ್ರಮ ಪಡಬೇಕಾಗಿದೆ.

ವರದಾನ:

ವಿಹಂಗ ಮಾರ್ಗದ ಸೇವೆಯ ಮುಖಾಂತರ ವಿಸ್ವ ಪರಿವರ್ತನೆಯ ಕಾರ್ಯವನ್ನು ಸಂಪನ್ನ ಮಾಡುವಂತಹ ಸತ್ಯ ಸೇವಾಧಾರಿ ಭವ.

ವಿಹಂಗ ಮಾರ್ಗದ ಸೇವೆ ಮಾಡುವುದಕ್ಕಾಗಿ ಸಂಘಟನೆಯ ರೂಪದಲ್ಲಿ "ರೂಪ್ ಮತ್ತು ಬಸಂತ್” ಈ ಎರಡೂ ಮಾತುಗಳ ಬ್ಯಾಲೆನ್ಸ್ನ ಅವಶ್ಯಕವಿದೆ. ಹೇಗೆ ಬಸಂತ ರೂಪದಿಂದ ಒಂದೇ ಸಮಯದಲ್ಲಿ ಅನೇಕ ಆತ್ಮಗಳಿಗೆ ಸಂದೇಶ ನೀಡುವಂತಹ ಕಾರ್ಯ ಮಾಡುವಿರಿ ಅದೇ ರೀತಿ ರೂಪ್ ಅರ್ಥಾತ್ ನೆನಪಿನ ಬಲದ ಮುಖಾಂತರ, ಶ್ರೇಷ್ಠ ಸಂಕಲ್ಪದ ಬಲದ ಮುಖಾಂತರ ವಿಹಂಗ ಮಾರ್ಗದ ಸೇವೆ ಮಾಡಿ. ಇದಕ್ಕೂ ಸಹ ಆವಿಶ್ಕಾರ ಮಾಡಿ. ಜೊತೆ-ಜೊತೆ ಸಂಘಟಿತ ರೂಪದಲ್ಲಿ ದೃಢ ಸಂಕಲ್ಪದಿಂದ ಹಳೆಯ ಸಂಸ್ಕಾರ, ಸ್ವಭಾವ ಹಾಗೂ ಹಳೆಯ ಚಲನೆಗೆ ಎಳ್ಳು ಹಾಗೂ ಹರಳನ್ನು ಯಜ್ಞದಲ್ಲಿ ಸ್ವಾಹ ಮಾಡಿ ಆಗ ವಿಶ್ವ ಪರಿವರ್ತನೆಯ ಕಾರ್ಯ ಸಂಪನ್ನವಾಗುವುದು ಅಥವಾ ಯಜ್ಞದ ಸಮಾಪ್ತಿಯಾಗುವುದು.

ಸ್ಲೋಗನ್:

ಬಾಲಕ ಮತ್ತು ಮಾಲೀಕತನದ ಬ್ಯಾಲೆನ್ಸ್ನಿಂದ ಯೋಜನೆಗಳನ್ನು ಪ್ರಯೋಗದಲ್ಲಿ ತನ್ನಿ.