21.06.22         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ- ಈ ನಿಮ್ಮ ಬ್ರಾಹ್ಮಣ ಜೀವನವು ದೇವತೆಗಳಿಗಿಂತಲೂ ಶ್ರೇಷ್ಠವಾಗಿದೆ ಏಕೆಂದರೆ ಈ ಸಮಯದಲ್ಲಿ ನೀವು ಮೂರು ಲೋಕಗಳನ್ನು ಮತ್ತು ಮೂರು ಕಾಲಗಳನ್ನು ಅರಿತುಕೊಂಡಿದ್ದೀರಿ, ನೀವು ಈಶ್ವರೀಯ ಸಂತಾನರಾಗಿದ್ದೀರಿ

ಪ್ರಶ್ನೆ:
ನೀವು ಮಕ್ಕಳು ಈಗ ಯಾವ ಉನ್ನತ ಗುರಿಯನ್ನೇರುತ್ತೀರಿ?

ಉತ್ತರ:
ಮನುಷ್ಯರಿಂದ ದೇವತೆಗಳಾಗುವುದು ಉನ್ನತಗುರಿಯಾಗಿದೆ ಆದ್ದರಿಂದಲೇ ಹೇಳುತ್ತಾರೆ- ಏರಿದರೆ ವೈಕುಂಠರಸ...... ಇದು ತುಂಬಾ ಶ್ರೇಷ್ಠ ಏರಿಕೆಯಾಗಿದೆ ಆದರೆ ವಿಚಿತ್ರವೇನೆಂದರೆ ಇದನ್ನು ಒಂದು ಸೆಕೆಂಡಿನಲ್ಲಿ ಏರುತ್ತೀರಿ, ಇಳಿಯುವುದರಲ್ಲಿ ಸಮಯ ಹಿಡಿಸುತ್ತದೆ.

ಪ್ರಶ್ನೆ:
ಪಾಪದ ಕೊಡವು ಒಡೆಯುವುದರಿಂದಲೇ ಜಯಜಯಕಾರವಾಗುತ್ತದೆ. ಇದರ ಯಾವ ನೆನಪಾರ್ಥವು ಭಕ್ತಿಮಾರ್ಗದಲ್ಲಿದೆ?

ಉತ್ತರ:
ಭಕ್ತಿಮಾರ್ಗದಲ್ಲಿ ತೋರಿಸುತ್ತಾರೆ- ಕೊಡದಿಂದ ಸೀತೆಯು ಹೊರಬಂದಳು..... ಅರ್ಥಾತ್ ಯಾವಾಗ ಪಾಪದ ಕೊಡವು ತುಂಬಿ ಒಡೆಯಿತೋ ಆಗ ಸೀತೆ ಮತ್ತು ರಾಧೆಯ ಜನ್ಮವಾಗುತ್ತದೆ.

ಗೀತೆ:
ಈ ಪಾಪದ ಪ್ರಪಂಚದಿಂದ ದೂರ ಕರೆದುಕೊಂಡು ಹೋಗಿ.............................

ಓಂ ಶಾಂತಿ.
ಮಧುರಾತಿಮಧುರ ಮಕ್ಕಳೇ, ಭಕ್ತಿಮಾರ್ಗದ ಗೀತೆಯನ್ನು ಕೇಳಿದಿರಿ. ಈ ಪಾಪದ ಪ್ರಪಂಚದಿಂದ ಪಾವನ ಪ್ರಪಂಚದಲ್ಲಿ ಕರೆದುಕೊಂಡು ಹೋಗಿ, ಅಶಾಂತಿಯ ಪ್ರಪಂಚದಿಂದ ಶಾಂತಿಯ ಪ್ರಪಂಚದಲ್ಲಿ ಕರೆದುಕೊಂಡು ಹೋಗಿ ಎಂದು ಕರೆಯುತ್ತಾರೆ. ಯಾವುದೋ ಇನ್ನೊಂದು ಪ್ರಪಂಚವಿದೆ ಎಂಬುದು ಬುದ್ಧಿಯಲ್ಲಿ ಕುಳಿತಿದೆ, ಅಲ್ಲಿ ಶಾಂತಿಯೂ ಇತ್ತು, ಸುಖವೂ ಇತ್ತು. ಮಹಾರಾಜ-ಮಹಾರಾಣಿ, ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಇವರುಗಳ ಚಿತ್ರಗಳೂ ಇಲ್ಲಿವೆ. ಮನುಷ್ಯರು ಯಾವ ಇತಿಹಾಸ-ಭೂಗೋಳವನ್ನು ಓದುತ್ತಾರೆ ಕೇವಲ ಪ್ರಪಂಚದ ಕಾಲುಭಾಗದ್ದಾಗಿದೆ. ಅರ್ಧಕಲ್ಪದ್ದೂ ಅಲ್ಲ. ಸತ್ಯಯುಗ, ತ್ರೇತಾಯುಗದ್ದಂತೂ ಯಾರಿಗೂ ತಿಳಿದಿಲ್ಲ. ಕಣ್ಣುಗಳೇ ಮುಚ್ಚಿದೆ, ಕಿವುಡರಾಗಿದ್ದಾರೆ. ಪ್ರಪಂಚದ ಇತಿಹಾಸ-ಭೂಗೋಳವನ್ನು ಯಾರೂ ಅರಿತುಕೊಂಡಿಲ್ಲ. ಪ್ರಪಂಚವು ಎಷ್ಟು ದೊಡ್ಡದಾಗಿದೆ! ಹೊಸಪ್ರಪಂಚ ಪ್ರಾರಂಭವಾಗುತ್ತದೆ ನಂತರ ಹಳೆಯದಾಗುತ್ತದೆ ಮತ್ತೆ ಹಳೆಯದರಿಂದ ಯಾವಾಗ ಹೊಸದಾಗುತ್ತದೆ ಇದನ್ನು ನೀವು ಮಕ್ಕಳು ಅರಿತುಕೊಂಡಿದ್ದೀರಿ. ಹೀಗೆ ಅವಶ್ಯವಾಗಿ ಆಗುತ್ತದೆಯಲ್ಲವೇ. ಗೋಲ್ಡನ್, ಸಿಲ್ವರ್, ಕಾಪರ್, ಐರನ್ನಲ್ಲಿ ಬರಲೇಬೇಕಾಗಿದೆ. ಕಲಿಯುಗದ ನಂತರ ಅವಶ್ಯವಾಗಿ ಸತ್ಯಯುಗವಾಗುತ್ತದೆ. ಸಂಗಮದಲ್ಲಿ ಸತ್ಯಯುಗವನ್ನು ಸ್ಥಾಪನೆ ಮಾಡುವವರು ಬರಬೇಕಾಗುತ್ತದೆ. ಇವು ತಿಳಿಸುವುದಕ್ಕೋಸ್ಕರ ದೊಡ್ಡ ಯುಕ್ತಿಗಳಾಗಿವೆ. ಕಲಿಯುಗವನ್ನು ಸತ್ಯಯುಗವನ್ನಾಗಿ ಮಾಡುವವರು ತಂದೆಯೇ ಆಗಿದ್ದಾರೆ. ಇಷ್ಟು ಸಹಜ ಮಾತುಗಳೂ ಸಹ ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ ಏಕೆಂದರೆ ಬುದ್ಧಿಗೆ ಮಾಯೆಯ ಬೀಗವು ಹಾಕಲ್ಪಟ್ಟಿದೆ. ಪರಮಪಿತ ಪರಮಾತ್ಮನ ಮಹಿಮೆಯನ್ನೂ ಹಾಡುತ್ತಾರೆ- ಹೇ! ಪರಮಪಿತ ಪರಮಾತ್ಮ ಬುದ್ಧಿವಂತರಿಗೂ ಬುದ್ಧಿವಂತ ತಾವಾಗಿದ್ದೀರಿ ಆದ್ದರಿಂದ ಬುದ್ಧಿಹೀನರಿಗೆ ತಾವು ಬುದ್ಧಿಯನ್ನು ಕೊಡಿ. ಮತ್ತೆಲ್ಲರೂ ಆಸುರೀ ಮತವನ್ನು ಕೊಡುವವರಾಗಿದ್ದಾರೆ, ಶ್ರೇಷ್ಠಮತವನ್ನು ಕೊಡುವವರು ಒಬ್ಬರೇ ತಂದೆಯಾಗಿದ್ದಾರೆ. ಇದನ್ನು ಮನುಷ್ಯರು ಹಾಡುತ್ತಾರೆ ಆದರೆ ಏನನ್ನೂ ಅರಿತುಕೊಂಡಿಲ್ಲ.

ನೀವು ಮಕ್ಕಳಿಗೆ ಈಗ ಮೂರು ಲೋಕಗಳ ಜ್ಞಾನವಿದೆ. ಕೇವಲ ಪ್ರಪಂಚದ ಜ್ಞಾನವಿದೆ ಎಂದಲ್ಲ, ಈ ಪ್ರಪಂಚಕ್ಕಿಂತಲೂ ಮುಂದೇನಿದೆ ಎನ್ನುವುದನ್ನು ನೀವು ಅರಿತುಕೊಂಡಿದ್ದೀರಿ. ಮೂಲವತನ, ಸೂಕ್ಷ್ಮವತನ, ಸ್ಥೂಲವತನ ಈ ಮೂರೂ ಲೋಕಗಳ ಜ್ಞಾನವೂ ಬುದ್ಧಿಯಲ್ಲಿದೆ. ಯಾರು ಇದನ್ನು ಚೆನ್ನಾಗಿ ಓದುತ್ತಾರೆ ಅವರ ಬುದ್ಧಿಯಲ್ಲಿಯೇ ಇದೆ. ನೀವು ಶಾಲೆಯಲ್ಲಿ ಓದುತ್ತೀರೆಂದರೆ ವಿದ್ಯೆಯು ಪೂರ್ಣರೀತಿಯಲ್ಲಿ ಬುದ್ಧಿಯಲ್ಲಿರಬೇಕು. ಈಗ ಮೂರು ಕಾಲಗಳ ಜ್ಞಾನವು ನಿಮ್ಮ ಬುದ್ಧಿಯಲ್ಲಿದೆ ಆದ್ದರಿಂದ ನೀವು ತ್ರಿಕಾಲದರ್ಶಿಗಳಾಗುತ್ತೀರಿ ಆದರೆ ನಿಮ್ಮನ್ನು ತ್ರಿಲೋಕಿನಾಥನೆಂದು ಹೇಳುವುದಿಲ್ಲ ಏಕೆಂದರೆ ತ್ರಿಲೋಕಿನಾಥ ಯಾರೂ ಆಗುವುದಿಲ್ಲ. ತ್ರಿಕಾಲದರ್ಶಿ ಅಕ್ಷರವೂ ಸರಿಯಾಗಿದೆ. ಮೂರು ಲೋಕ, ಮೂರು ಕಾಲವನ್ನು ನೀವು ಅರಿತುಕೊಂಡಿದ್ದೀರಿ. ಆವಶ್ಯವಾಗಿ ನಾವು ಮೂಲವತನದಲ್ಲಿ ಇರುತ್ತೇವೆ, ನಾವಾತ್ಮಗಳು ಅಲ್ಲಿ ನಿವಾಸ ಮಾಡುತ್ತೇವೆ. ಈ ಜ್ಞಾನವು ಮತ್ತ್ಯಾರ ಬುದ್ಧಿಯಲ್ಲಿಲ್ಲ. ಪರಮಪಿತ ಪರಮಾತ್ಮನು ತ್ರಿಕಾಲದರ್ಶಿಯಾಗಿದ್ದಾರೆ. ಆದಿ-ಮಧ್ಯ-ಅಂತ್ಯ ಮೂರು ಕಾಲಗಳನ್ನು ಮತ್ತು ಮೂರು ಲೋಕಗಳನ್ನು ಅರಿತಿದ್ದಾರೆ. ಲಕ್ಷ್ಮೀ-ನಾರಾಯಣರನ್ನು ವೈಕುಂಠನಾಥನೆಂದು ಹೇಳುತ್ತಾರೆ ಆದರೆ ತ್ರಿಲೋಕಿನಾಥನೆಂದು ಹೇಳುವುದಿಲ್ಲ. ಅವರು ಸ್ವರ್ಗದ ಮಾಲೀಕರಾಗಿದ್ದಾರೆ ಮತ್ತು ತಂದೆಯನ್ನು ಸ್ವರ್ಗದ ಮಾಲೀಕರೆಂದು ಹೇಳಲಾಗುವುದಿಲ್ಲ. ಇವು ತಿಳಿದುಕೊಳ್ಳುವ ಮಾತುಗಳಾಗಿವೆ. ಯಾವುದೇ ಮನುಷ್ಯರು ಪರಮಾತ್ಮನಂತೆ ಆಗಲು ಸಾಧ್ಯವಿಲ್ಲ ಆದ್ದರಿಂದಲೇ ಪರಮಾತ್ಮನನ್ನು ತಿಳಿದು-ತಿಳಿಸುವಂತಹವರು, ಜ್ಞಾನಸಾಗರನೆಂದು ಹೇಳುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಅವರು ಪರಮಾತ್ಮನು ತಿಳಿದು ತಿಳಿಸುಕೊಡುವವರಾಗಿದ್ದಾರೆ ಆದ್ದರಿಂದ ಎಲ್ಲರ ಹೃದಯಗಳನ್ನು ಅರಿತುಕೊಂಡಿರುತ್ತಾರೆಂದು ತಿಳಿಯುತ್ತಾರೆ ಅಥವಾ ಸರ್ವವ್ಯಾಪಿ ಎಂದು ಹೇಳಿ ಗ್ಲಾನಿ ಮಾಡಿಬಿಡುತ್ತಾರೆ.

ಈಗ ನೀವು ಈಶ್ವರೀಯ ವಂಶಾವಳಿಗಳಾಗಿದ್ದೀರಿ ಮತ್ತೆ ದೈವೀವಂಶಾವಳಿಯಾಗುತ್ತೀರಿ. ಈಶ್ವರನು ಶ್ರೇಷ್ಠವೇ ಅಥವಾ ಸತ್ಯಯುಗದ ದೇವತೆಗಳು ಶ್ರೇಷ್ಠವೇ? ಆ ದೇವತೆಗಳಿಗಿಂತಲೂ ಸೂಕ್ಷ್ಮವತನವಾಸಿ ದೇವತೆಗಳು ಶ್ರೇಷ್ಠರಾಗಿದ್ದಾರೆ. ಸೂಕ್ಷ್ಮವತನವಾಸಿ ಬ್ರಹ್ಮನನ್ನು ಶ್ರೇಷ್ಠ ಎಂದು ಹೇಳುತ್ತಾರಲ್ಲವೇ! ಅವರು ಅವ್ಯಕ್ತನಾಗಿದ್ದಾರೆ ಆದರೆ ಇವರು ವ್ಯಕ್ತನಾಗಿದ್ದಾರಲ್ಲವೇ. ಇವರು ಯಾವಾಗ ಪಾವನ ಫರಿಶ್ತೆಯಾಗುತ್ತಾರೆ ಆಗ ಇವರಿಗೆ ಮಹಿಮೆಯಿದೆ. ಬ್ರಾಹ್ಮಣರಿಗೆ ಈಗ ಅಲಂಕಾರಗಳನ್ನು ಆ ಅಸ್ತ್ರ-ಶಸ್ತ್ರಗಳು ಶೋಭಿಸುವುದಿಲ್ಲ ಆದ್ದರಿಂದ ವಿಷ್ಣುವಿಗೆ ಸ್ವದರ್ಶನಚಕ್ರವನ್ನು ತೋರಿಸುತ್ತಾರೆ. ಶಂಖು, ಚಕ್ರ, ಗದೆ, ಕಮಲದ ಅರ್ಥವನ್ನು ನೀವು ತಿಳಿದುಕೊಂಡಿದ್ದೀರಿ. ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರಿಗಂತು ಅಸ್ತ್ರಶಸ್ತ್ರಗಳನ್ನು ಕೊಡುವುದಿಲ್ಲ. ಇದು ಈಗಿನ ಮಾತಾಗಿದೆ. ವಾಸ್ತವದಲ್ಲಿ ಇವು ಜ್ಞಾನದ ಅಸ್ತ್ರಶಸ್ತ್ರಗಳಾಗಿವೆ. ಸ್ಥೂಲ ಆಯುಧಗಳ ಮಾತೇ ಇಲ್ಲ. ಶಾಸ್ತ್ರಗಳಲ್ಲಿ ಸ್ಥೂಲ ಆಯುಧ ಮುಂತಾದವುಗಳು ಇವೆ. ಪಾಂಡವ ಹಾಗೂ ಕೌರವರ ಸೈನ್ಯವನ್ನು ತೋರಿಸಿದ್ದಾರೆ ಆದರೆ ಅದರಲ್ಲಿ ಸ್ತ್ರೀಯನ್ನು ತೋರಿಸಿಲ್ಲ. ಪಾಂಡವ ಸೇನೆಯಲ್ಲಿ ಪುರುಷರನ್ನು ತೋರಿಸುತ್ತಾರೆ ಬಾಕಿ ಶಕ್ತಿಸೇನೆಯು ಎಲ್ಲಿ ಹೋಯಿತು! ಇದು ಗುಪ್ತವಾಗಿದೆ. ಈ ಶಿವಶಕ್ತಿಯರು ಎಲ್ಲಿ ಹೋದರೆಂದು ಯಾರಿಗೂ ಗೊತ್ತಿಲ್ಲ. ಇದರ ವೃತ್ತಾಂತವನ್ನೇ ತೋರಿಸಿಲ್ಲ. ಶಕ್ತಿಯರು ಹೇಗೆ ಯುದ್ಧ ಮಾಡಿದರು! ಸೈನ್ಯವನ್ನಂತೂ ತೋರಿಸುತ್ತಾರಲ್ಲವೇ. ಯಾರಿಗೂ ಇದು ಅರ್ಥವಾಗುವುದಿಲ್ಲ, ಯಾರು ಏನನ್ನು ಹೇಳುತ್ತಾರೆ ಅದನ್ನು ಬರೆದುಬಿಡುತ್ತಾರೆ ಆದರೆ ಈಗ ನೀವು ಯಥಾರ್ಥ ರೀತಿಯಲ್ಲಿ ಅರಿತುಕೊಂಡಿದ್ದೀರಿ- ನಾವೆಲ್ಲರೂ ಪಾತ್ರಧಾರಿಗಳಾಗಿದ್ದೇವೆ, ಪ್ರತಿಯೊಂದು ಆತ್ಮನಿಗೆ ತಮ್ಮ ಪಾತ್ರವೂ ಸಿಕ್ಕಿದೆ. ಯಾರನ್ನು ನಿರ್ದೇಶಕ, ರಚಯಿತ, ಮುಖ್ಯಪಾತ್ರಧಾರಿ ಎಂದು ತಂದೆಯನ್ನು ಹೇಳಲಾಗುತ್ತದೆ ಅವರ ಮುಖಾಂತರ ನೀವು ಡ್ರಾಮಾದ ಎಲ್ಲಾ ರಹಸ್ಯವನ್ನು ಅರಿತುಕೊಳ್ಳುತ್ತೀರಿ. ಇದರಲ್ಲಿ ನಾಲ್ಕುಭಾಗಗಳಿವೆ ಅಥವಾ ನಾಲ್ಕುಯುಗಗಳಿವೆ. ವಾಸ್ತವದಲ್ಲಿ 5 ಯುಗಗಳಿವೆ, 5ನೆಯದು ಈ ಕಲ್ಯಾಣಕಾರಿ ಯುಗವಾಗಿದೆ. ಸತ್ಯಯುಗ ಮತ್ತು ತ್ರೇತಾಯುಗದ ಸಂಗಮವಿದೆ. ಸತ್ಯ-ತ್ರೇತಾಯುಗಕ್ಕೆ ಕಲ್ಯಾಣಕಾರಿ ಯುಗವೆಂದು ಹೇಳುವುದಿಲ್ಲ ಏಕೆಂದರೆ ಇಳಿಯುವಿಕೆಯಲ್ಲಿ ಬರಲು ತೊಡಗುತ್ತಾರೆ. ಸತೋಪ್ರಧಾನ, ಸತೋ, ರಜೋ, ತಮೋ ಇವು ಮೆಟ್ಟಿಲುಗಳಾಗಿವೆ ಆದ್ದರಿಂದ ಈ ಮೆಟ್ಟಿಲುಗಳನ್ನು ಇಳಿಯಲೇಬೇಕಾಗುತ್ತದೆ. ಜ್ಞಾನದಲ್ಲಿ ನೀವು ಒಂದೇಬಾರಿ ತುಂಬಿಸಿಕೊಳ್ಳುತ್ತೀರಿ ನಂತರ ಏರಿರುವಂತಹ ಏಣಿಯನ್ನು ಇಳಿಯುತ್ತಲೇ ಬರುತ್ತೀರಿ. ಏಣಿಯನ್ನು ಇಳಿಯುವುದು ತುಂಬಾ ಸಹಜವಾಗುತ್ತದೆ ಆದರೆ ಏರುವುದರಲ್ಲಿ ಬಹಳ ಕಷ್ಟವಾಗುತ್ತದೆ. ನೀವು ಎಷ್ಟೊಂದು ಪರಿಶ್ರಮ ಪಡುತ್ತೀರಿ! ಮನುಷ್ಯರಿಂದ ದೇವತೆಯಾಗುವುದು ಉನ್ನತ ಏರಿಕೆಯಾಗಿದೆಯಲ್ಲವೇ! ಆದ್ದರಿಂದ ಏರಿದರೆ ವೈಕುಂಠರಸವೆಂದು ಹೇಳುತ್ತಾರೆ. ಈಗ ನಾವು ಏರುತ್ತಿದ್ದೇವೆ ಎನ್ನುವುದು ನಿಮಗೆ ತಿಳಿದಿದೆ. ಮತ್ತೆ ಬೀಳುತ್ತೀರೆಂದರೆ ಸಂಪೂರ್ಣ ಪುಡಿಪುಡಿಯಾಗಿಬಿಡುತ್ತೀರಿ. ಇದು ತುಂಬಾ ಉದ್ದನೆಯ ಏಣಿಯಾಗಿದೆ. ಇದರಲ್ಲಿ ಎಷ್ಟೊಂದು ಸಮಯ ಹಿಡಿಸುತ್ತದೆ. ನಿಮಗೆ ತಿಳಿದಿದೆ- ಈಗ ನಾವು ಏರುತ್ತಿದ್ದೇವೆ ಮತ್ತೆ ಇಳಿಯುತ್ತೇವೆ. ಏರುವುದರಲ್ಲಿ ಸೆಕೆಂಡ್ ಹಿಡಿಸುತ್ತದೆ, ಅಂತ್ಯದಲ್ಲಿ ಬರುವವರು ಸೆಕೆಂಡಿನಲ್ಲಿ ಏರಿಬಿಡುತ್ತಾರೆ. ಅಬಲೆಯರು ಮತ್ತೆ ಮಾತೆಯರ ಮೇಲೆ ಎಷ್ಟೊಂದು ಹತ್ಯಾಚಾರಗಳಾಗುತ್ತವೆ ಆದ್ದರಿಂದ ಮಕ್ಕಳು ಕೂಗುತ್ತಾರೆ- ಅಪವಿತ್ರರಾಗುವುದರಿಂದ ರಕ್ಷಿಸಿ. ಅನೇಕ ಮಕ್ಕಳಿದ್ದಾರೆ, ಅಬಲೆಯರ ಮೇಲೆ ತುಂಬಾ ಅತ್ಯಾಚಾರಗಳಾಗುತ್ತವೆ, ಸಾಯಿಸುತ್ತಾರೆಂದರೆ ಅವರ ಪಾಪದ ಕೊಡವು ತುಂಬುತ್ತದೆ, ಮತ್ತೆ ಅದು ತುಂಬಿ ಒಡೆಯುತ್ತದೆ ಆದ್ದರಿಂದಲೇ ಗಡಿಗೆಯಿಂದ ಸೀತೆ ಹೊರಬಂದಳೆಂದು ತೋರಿಸುತ್ತಾರೆ. ಈಗ ನೀವು ಸತ್ಯ-ಸತ್ಯ ಸೀತೆಯರು ಹೊರಬರುತ್ತಿದ್ದೀರಿ. ರಾಧೆಯು ಹೊರಬಂದಳು ಹಾಗೂ ಸೀತೆಯು ಹೊರಬಂದಳು. ರಘುಪತಿ ರಾಘವ ರಾಜಾರಾಂ ಎಂದು ಬರೆಯುವುದರಿಂದ ಸೀತೆಯ ಹೆಸರನ್ನು ಹಾಕಿಬಿಟ್ಟಿದ್ದಾರೆ. ಜಗದಂಬಾ, ಜಗತ್ಪಿತಾರವರೇ ಮತ್ತೆ ರಾಜರಾಜೇಶ್ವರ, ರಾಜರಾಜೇಶ್ವರಿ ಆಗುತ್ತಾರೆ. ಇವರೇ ಲಕ್ಷ್ಮೀ-ನಾರಾಯಣರಾಗಿದ್ದರು ಮತ್ತೆ ಅಂತ್ಯದಲ್ಲಿ ನೋಡಿ ಏನಾಗಿಬಿಡುತ್ತಾರೆ! ಸತ್ಯಯುಗದಲ್ಲಿ ಇಷ್ಟೊಂದು 33 ಕೋಟಿ ಮನುಷ್ಯರಿರಲಿಲ್ಲ. ಅಲ್ಲಂತೂ ತುಂಬಾ ಕಡಿಮೆ ಇರುತ್ತಾರೆ. ನಂತರ ವೃದ್ಧಿಯಾಗುತ್ತಾ ಹೋಗುತ್ತದೆ. ದೈವೀ ಸಂಪ್ರದಾಯವೇ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ನಂತರ ಆಸುರಿ ಸಂಪ್ರದಾಯದವರಾಗಿಬಿಡುತ್ತಾರೆ. ಈಗ ಆಸುರೀ ಸಂಪ್ರದಾಯದವರನ್ನು ಮತ್ತೆ ದೈವೀ ಸಂಪ್ರದಾಯದವರನ್ನಾಗಿ ತಂದೆಯು ಮಾಡುತ್ತಿದ್ದಾರೆ. ಕಲ್ಪ-ಕಲ್ಪವೂ ಮಾಡುತ್ತಾರೆ. ನಿಮ್ಮ ಬುದ್ಧಿಯಲ್ಲಿ ಎಲ್ಲಾ ಜ್ಞಾನವೂ ಬಂದುಬಿಟ್ಟಿದೆ. ನೀವೇ ತ್ರಿಕಾಲದರ್ಶಿಗಳಾಗುತ್ತೀರಿ. ಮೂರು ಲೋಕಗಳ ಜ್ಞಾನವೂ ಸಿಕ್ಕಿದೆ. ನಾವೇ ಪೂಜ್ಯ ವೈಕುಂಠನಾಥರಾಗಿದ್ದೆವು, ಈಗ ಪೂಜಾರಿ ನರಕದ ನಾಥರಾಗಿದ್ದೇವೆ ಎಂದು ನೀವೇ ಹೇಳುತ್ತೀರಿ. ಹಮ್ ಸೋನ ಯತಾರ್ಥ ಅರ್ಥವನ್ನು ಅರಿಯದೇ ಇರುವ ಕಾರಣ ಹಮ್ ಸೋ ಎಂದು ಹೇಳಿಬಿಡುತ್ತಾರೆ. ಎಷ್ಟೊಂದು ಅಂತರವನ್ನು ಮಾಡಿಬಿಟ್ಟಿದ್ದಾರೆ, ಈಗ ನಿಮಗೆ ಈ ಪ್ರಪಂಚದ ಇತಿಹಾಸ-ಭೂಗೋಳವೇನಾಗಿದೆ ಎನ್ನುವುದನ್ನು ತಂದೆಯು ತಿಳಿಸಿದ್ದಾರೆ. ನೀವು ಈ ಬೇಹದ್ದಿನ ಚಕ್ರವನ್ನೂ ಸಹ ಅರಿತುಕೊಂಡಿದ್ದೀರಿ. ಮೂರು ಲೋಕಗಳು, ಮೂರು ಕಾಲಗಳನ್ನೂ ಅರಿತುಕೊಂಡಿದ್ದೀರಿ.

ತಂದೆಯು ಓದಿಸುತ್ತಾರೆ ಎನ್ನುವುದು ಗುಪ್ತ ಮಾತಾಗಿದೆ. ಇದು ಯಾರಿಗೂ ತಿಳಿದಿಲ್ಲ, ಗೀತೆಯಲ್ಲಿಯೂ ಸಹ ಯಾವುದೇ ಇಂತಹ ಮಾತುಗಳಿಲ್ಲ. ಈ ಜ್ಞಾನವು ಯಾರ ಬಳಿಯಿದೆಯೋ ಅವರೇ ಕಲಿಸಿಕೊಡುತ್ತಾರೆ. ಮತ್ತೆ ತಮ್ಮ ಪಾತ್ರವನ್ನು ಅದೇ ಸಮಯದಲ್ಲಿ ಪುನರಾವರ್ತಿಸುತ್ತಾರೆ. ಕ್ರೈಸ್ಟ್ ತಮ್ಮ ಪಾತ್ರವನ್ನು ತಮ್ಮ ಸಮಯದಲ್ಲಿ ರಿಪೀಟ್ ಮಾಡುತ್ತಾರೆ. ಸೂರ್ಯವಂಶಿ, ಚಂದ್ರವಂಶಿ, ವೈಶ್ಯ, ಶೂದ್ರವಂಶಿಯರು ನೀವೇ ಆಗುತ್ತೀರಿ. ಚಕ್ರವೂ ಸುತ್ತುತ್ತಾ ಇರುತ್ತದೆ. ಇಸ್ಲಾಮಿ, ಬೌದ್ಧಿ ಪುನಃ ತಮ್ಮ-ತಮ್ಮ ಪಾತ್ರವನ್ನು ರಿಪೀಟ್ ಮಾಡುತ್ತಾರೆ. ಯಾವಾಗ ಒಂದು ದೇವೀ-ದೇವತಾ ಧರ್ಮವಿರುತ್ತದೆ ಆಗ ಮತ್ತೆಲ್ಲಾ ಧರ್ಮಗಳು ಇರುವುದಿಲ್ಲ. ಪ್ರಪಂಚವಂತೂ ಒಂದೇ ಆಗಿದೆ. ತಂದೆಯು ರಚಯಿತ ಮತ್ತು ರಚನೆಯ ರಹಸ್ಯವನ್ನು ತಿಳಿಸಿದ್ದಾರೆ. ಪ್ರತಿಯೊಬ್ಬ ಮನುಷ್ಯನು ಅಲ್ಪಕಾಲದ ಬ್ರಹ್ಮನಾಗಿದ್ದಾರೆ. ಮಕ್ಕಳನ್ನು ರಚನೆ ಮಾಡುತ್ತಾರೆ ಮತ್ತೆ ಅವರ ಪಾಲನೆ ಮಾಡುತ್ತಾರೆ. ರಚನೆಗೆ ರಚಯಿತ ತಂದೆಯಿಂದ ಆಸ್ತಿಯೂ ಸಿಗುತ್ತದೆ. ಸಹೋದರನು ಸಹೋದರನಿಗೆ ಆಸ್ತಿಯನ್ನು ಕೊಡುತ್ತಾರೆ ಎನ್ನುವ ಮಾತನ್ನು ಎಂದಾದರೂ ಕೇಳಿದ್ದೀರಾ? ಒಬ್ಬರು ಹದ್ದಿನ(ಶರೀರದ) ತಂದೆಯಾಗಿದ್ದಾರೆ ಅವರನ್ನಂತೂ ಎಲ್ಲರೂ ತಿಳಿದುಕೊಂಡಿದ್ದಾರೆ. ಹದ್ದಿನ ತಂದೆಯಿಂದ ಹದ್ದಿನ ಆಸ್ತಿಯು ಸಿಗುತ್ತದೆ. ಲೌಕಿಕ ಶಿಕ್ಷಕರು ಓದಿಸುತ್ತಾರೆ, ಆ ವಿದ್ಯೆಯಿಂದ ಯಾರೂ ಸಹ ಇಡೀಸೃಷ್ಟಿಯ ಮಾಲೀಕರಾಗುವುದಿಲ್ಲ ಆದರೆ ಇದು ಬೇಹದ್ದಿನ ಮಾತಾಗಿದೆ. ಹದ್ದಿನಲ್ಲಿರುವವರೆಲ್ಲರೂ ಆ ಬೇಹದ್ದಿನ ತಂದೆಯನ್ನು ನೆನಪು ಮಾಡುತ್ತಾರೆ. ಅವರನ್ನು ಬಾಬಾ, ಶಿವಬಾಬಾ ಎಂದು ಹೇಳುತ್ತಾರೆ. ರಚಯಿತನನ್ನು ತಂದೆಯೆಂದು ಹೇಳುತ್ತಾರಲ್ಲವೇ. ಕೇವಲ ತಂದೆ ಎನ್ನುವುದು ಸರಳವಾದ ಹೆಸರಾಗಿದೆ ಆದ್ದರಿಂದ ಶಿವತಂದೆ ಎಂದು ಹೇಳುತ್ತಾರೆ. ಅವರು ನಿರಾಕಾರನಾಗಿದ್ದಾರೆ. ಶಿವತಂದೆಯೊಂದಿಗೆ ನಿಮ್ಮ ಸಂಬಂಧವೇನು? ಎಂದು ನೀವು ಕೇಳಬಹುದು. ಶಿವಬಾಬಾ ಜೋಳಿಗೆಯನ್ನು ತುಂಬಿಸು ಎಂದು ಹೇಳುತ್ತೀರಲ್ಲವೇ. ತಂದೆಗೆ ಶಿವ ಎನ್ನುವ ಹೆಸರು ಸರಿಯಾಗಿದೆ. ಶಂಕರನ ಚಿತ್ರ ಬೇರೆಯಾಗಿದೆ. ಶಿವ ಮತ್ತು ಶಂಕರ ಇಬ್ಬರನ್ನು ಸೇರಿಸಿ ಶಿವಶಂಕರನೆಂದು ಹೇಳುವುದು ಇದು ಅತಿ ದೊಡ್ಡ ತಪ್ಪಾಗಿದೆ. ಶ್ರೇಷ್ಠಾತಿಶ್ರೇಷ್ಠ ತಂದೆಯನ್ನೇ ಮರೆತುಬಿಟ್ಟಿದ್ದಾರೆ. ಚಿತ್ರಗಳು ತುಂಬಾ ಚೆನ್ನಾಗಿವೆ. ಬ್ರಹ್ಮಾರವರ ಮುಖಾಂತರ ಈಗ ಸ್ಥಾಪನೆಯಾಗುತ್ತಿದೆ. ಜ್ಞಾನವೂ ಸಹ ಈಗಲೇ ಸಿಗುತ್ತದೆ. ನೀವೀಗ ಬ್ರಾಹ್ಮಣರಾಗಿದ್ದೀರಿ. ಬ್ರಾಹ್ಮಣರು ಎಲ್ಲಿಂದ ಬಂದರು? ಅವರನ್ನು ದತ್ತು ಮಾಡಿಕೊಳ್ಳುತ್ತೇನೆಂದು ತಂದೆಯು ತಿಳಿಸುತ್ತಾರೆ. ಬ್ರಹ್ಮನನ್ನೂ ಸಹ ದತ್ತು ಮಾಡಿಕೊಂಡಿದ್ದಾರೆ. ಬ್ರಹ್ಮನಿಂದ ಬ್ರಾಹ್ಮಣರು ಜನ್ಮ ಪಡೆದುಕೊಂಡರು. ನಾವೀಗ ಪ್ರಜಾಪಿತ ಬ್ರಹ್ಮಕುಮಾರ-ಕುಮಾರಿಯರಾಗಿದ್ದೇವೆ ಎನ್ನುವುದು ನಿಮಗೆ ತಿಳಿದಿದೆ. ಪ್ರಜಾಪಿತ ಅಕ್ಷರವನ್ನು ಅವಶ್ಯವಾಗಿ ಹಾಕಬೇಕಾಗಿದೆ. ಕೇವಲ ಬ್ರಹ್ಮ ಎಂದು ಹೇಳುವುದರಿಂದ ಬ್ರಹ್ಮ ಎನ್ನುವ ಹೆಸರಂತೂ ಅನೇಕರಿಗಿದೆ. ಪ್ರಜಾಪಿತ ಬ್ರಹ್ಮಾ ಎನ್ನುವ ಹೆಸರೂ ಯಾರಿಗೂ ಇರುವುದಿಲ್ಲ. ಇವರಂತೂ ಮನುಷ್ಯರಾಗಿದ್ದಾರೆ. ರುದ್ರ ಶಿವತಂದೆಯು ಈ ಜ್ಞಾನಯಜ್ಞವನ್ನು ರಚಿಸಿದ್ದಾರೆ. ಇದರಲ್ಲಿ ಬ್ರಾಹ್ಮಣರು ಅವಶ್ಯವಾಗಿ ಬೇಕು. ಬ್ರಾಹ್ಮಣರು ಹೇಗಾಗುತ್ತಾರೆನ್ನುವುದು ನಿಮಗೆ ತಿಳಿದಿದೆ. ಈ ಯಜ್ಞವನ್ನು ಬ್ರಾಹ್ಮಣರ ಮುಖಾಂತರ ರಚಿಸಲಾಗುತ್ತದೆ. ನೀವೀಗ ಬ್ರಾಹ್ಮಣರಾಗಿದ್ದೀರಿ ನಂತರ ನೀವೇ ದೇವತೆಗಳಾಗಬೇಕಾಗಿದೆ. ಬರುವುದೂ ಸಹ ಪುನಃ ಈ ಸೃಷ್ಟಿಯಲ್ಲಿಯೇ ಮತ್ತೆ ಇವರೆಲ್ಲರೂ ಎಲ್ಲಿ ಹೋಗುತ್ತಾರೆ? ಈ ರುದ್ರ ಜ್ಞಾನಯಜ್ಞದಲ್ಲಿ ಸ್ವಾಹಾ ಆಗಿಬಿಡುತ್ತಾರೆ. ಈ ರುದ್ರ ಜ್ಞಾನಯಜ್ಞದಲ್ಲಿ ಹಳೆಯ ಪ್ರಪಂಚದ ಆಹುತಿಯಾಗುತ್ತದೆ. ಈ ಯಜ್ಞದಿಂದಲೇ ವಿನಾಶಜ್ವಾಲೆಯು ಹೊರಟಿದೆ. ಶಂಕರನ ಮುಖಾಂತರ ವಿನಾಶವೆಂದು ಗಾಯನವಿದೆ. ಅವಶ್ಯವಾಗಿ ಅದರ ಚಿಹ್ನೆಗಳನ್ನು ನೋಡುತ್ತೀರಿ. ಇದು ಅದೇ ಸಮಯವಾಗಿದೆ. ಯುರೋಪ್ವಾಸಿ ಯಾದವರು, ಕೌರವರು ಮತ್ತು ಪಾಂಡವರ ಗಾಯನವೂ ಇದೆ. ಭಾರತವಾಸಿಗಳು ತಮ್ಮ ಧರ್ಮವನ್ನೇ ಮರೆತುಬಿಟ್ಟಿದ್ದಾರೆ. ಚಿತ್ರಗಳೂ ಇದೆ ಆದರೆ ಯಾರಿಗೂ ತಿಳಿದಿಲ್ಲ. ದೇವೀ-ದೇವತೆಗಳ ರಾಜ್ಯವಿತ್ತು ಆದರೆ ಅವರಿಗೆ ಈ ರಾಜ್ಯವನ್ನು ಯಾರು ಕೊಟ್ಟರು? ದೇವೀ-ದೇವತಾ ಧರ್ಮದ ಸ್ಥಾಪನೆ ಹೇಗಾಯಿತು? ಇದನ್ನು ಸಂಪೂರ್ಣವಾಗಿ ಅರಿತುಕೊಂಡಿಲ್ಲ. ಯಾರು ಧರ್ಮಸ್ಥಾಪನೆ ಮಾಡುತ್ತಾರೆ ಅವರೇ ತಿಳಿಸುತ್ತಾರೆ, ಮತ್ತ್ಯಾರೂ ಪ್ರಪಂಚದ ಇತಿಹಾಸ-ಭೂಗೋಳವನ್ನು ತಿಳಿಸಲು ಸಾಧ್ಯವಿಲ್ಲ, ಮೂರು ಲೋಕಗಳ ಜ್ಞಾನವನ್ನೂ ಸಹ ಕೊಡಲು ಸಾಧ್ಯವಿಲ್ಲ. ಎಲ್ಲರ ಪಾತ್ರವನ್ನು ನೀವು ಅರಿತುಕೊಂಡಿದ್ದೀರಿ. ಇವರೆಲ್ಲರೂ ಸಹ ಮತ್ತೆ ತಮ್ಮ ಸಮಯದಲ್ಲಿಯೇ ಪಾತ್ರವನ್ನಭಿನಯಿಸಲು ಬರುತ್ತಾರೆ. ಮುಂದೆ ಹೋದಂತೆ ನಿಮ್ಮ ಮಹಿಮೆಯೂ ಸಹ ಹೆಚ್ಚಾಗುತ್ತಾ ಹೋಗುವುದು. ಬೇಗ ವೃದ್ಧಿಯಾಗುವುದಿದೆ ಅಂದಾಗ ಎಷ್ಟೊಂದು ದೊಡ್ಡ ಮನೆಗಳನ್ನು ನಿರ್ಮಿಸಬೇಕಾಗುತ್ತದೆ. ನಾಟಕದಲ್ಲಿ ಪಾತ್ರವಿದೆ. ಬಹಳ ಮಕ್ಕಳು ಬರುತ್ತಾರೆ. ವೃದ್ಧಿಯನ್ನು ಪಡೆಯುತ್ತಲೇ ಇರುತ್ತಾರೆ. ಬರುವುದೂ ಸಹ ಶಿಕ್ಷಣಕ್ಕೋಸ್ಕರವೇ. ಕೆಲವರಂತೂ ಕೇವಲ ಸುತ್ತಾಡಲು ಬರುತ್ತಾರೆ. ಯಾರೇ ಶಿಕ್ಷಣಮಂತ್ರಿ ಮುಂತಾದವರು ಬರುತ್ತಾರೆಂದು ತಿಳಿದುಕೊಳ್ಳಿ, ಅವರಿಗೂ ಸಹ ಜ್ಞಾನವನ್ನು ತಿಳಿಸಬೇಕಾಗಿದೆ. ನಮ್ಮದು ವಿಶ್ವದ ಇತಿಹಾಸ-ಭೂಗೋಳವಾಗಿದೆ. ಇಡೀ ಕಲ್ಪದ ಚಕ್ರವನ್ನು ಯಾರೂ ಅರಿತುಕೊಂಡಿಲ್ಲ. ನೀವೀಗ ಜ್ಞಾನಸಾಗರನ ಮುಖಾಂತರ ಮಾ||ಜ್ಞಾನಸಾಗರರಾಗಿದ್ದೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿಹೋಗಿ ಮರಳಿ ಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಬೇಹದ್ದಿನ ಇತಿಹಾಸ-ಭೂಗೋಳವನ್ನು ಓದಬೇಕು ಮತ್ತು ಓದಿಸಬೇಕಾಗಿದೆ. ಸರ್ವ ಅಲಂಕಾರಗಳನ್ನು ಧಾರಣೆ ಮಾಡಲು ಪಾವನ ಫರಿಸ್ಥೆ ಆಗಬೇಕಾಗಿದೆ.

2. ಬುದ್ಧಿವಂತರಿಗೂ ಬುದ್ಧಿವಂತ ಒಬ್ಬ ತಂದೆಯಾಗಿದ್ದಾರೆ. ಅವರ ಶ್ರೀಮತದಂತೆಯೇ ನಡೆದು ಬುದ್ಧಿವಂತರಾಗಬೇಕಾಗಿದೆ. ಈ ಬ್ರಾಹ್ಮಣ ಜೀವನವು ಅಮೂಲ್ಯವಾಗಿದೆ - ಈ ನಶೆಯಲ್ಲಿ ಇರಬೇಕಾಗಿದೆ.

ವರದಾನ:
ರಂಗು ಹಾಗೂ ರೂಪದ ಜೊತೆಜೊತೆಗೆ ಸಂಪೂರ್ಣ ಪವಿತ್ರತೆಯ ಸುಗಂಧವನ್ನು ಧಾರಣೆ ಮಾಡುವಂತಹ ಆಕರ್ಷಣಾಮೂರ್ತಿ ಭವ

ಬ್ರಾಹ್ಮಣರಾಗುವುದರಿಂದ ಎಲ್ಲರಲ್ಲಿ ರಂಗೂ ಸಹ ಬಂದುಬಿಡುತ್ತದೆ ಹಾಗೂ ರೂಪವೂ ಪರಿವರ್ತನೆ ಆಗಿಬಿಡುತ್ತದೆ ಆದರೆ ಸುಗಂಧವು ನಂಬರ್ವಾರ್ ಆಗಿರುತ್ತದೆ. ಆಕರ್ಷಣಾ ಮೂರ್ತಿಯಾಗಲು ರಂಗು ಹಾಗೂ ರೂಪದ ಜೊತೆ ಸಂಪೂರ್ಣ ಪವಿತ್ರತೆಯ ಸುಗಂಧವಿರಬೇಕು. ಪವಿತ್ರತೆ ಎಂದರೆ ಕೇವಲ ಬ್ರಹ್ಮಚಾರಿ ಆಗುವುದಲ್ಲ ಆದರೆ ದೇಹದ ಸೆಳೆತದಿಂದಲೂ ಭಿನ್ನವಾಗಿರುವುದು. ಮನಸ್ಸು ತಂದೆಯನ್ನಲ್ಲದೆ ಮತ್ತ್ಯಾವುದೇ ಪ್ರಕಾರದ ಸೆಳೆತದಲ್ಲಿ ಹೋಗಬಾರದು. ತನುವಿನಿಂದಲೂ ಬ್ರಹ್ಮಚಾರಿ, ಸಂಬಂಧದಲ್ಲಿಯೂ ಬ್ರಹ್ಮಚಾರಿ ಹಾಗೂ ಸಂಸ್ಕಾರಗಳಲ್ಲಿಯೂ ಬ್ರಹ್ಮಚಾರಿ- ಇಂತಹ ಸುಗಂಧವಿರುವ ಆತ್ಮಿಕ ಗುಲಾಬಿಯೇ ಆಕರ್ಷಣಾಮೂರ್ತಿ ಆಗುವರು.

ಸ್ಲೋಗನ್:
ಯಥಾರ್ಥ ಸತ್ಯವನ್ನು ಪರಿಶೀಲನೆ ಮಾಡುತ್ತೀರೆಂದರೆ, ಅತೀಂದ್ರಿಯ ಸುಖದ ಅನುಭವ ಮಾಡುವುದು ಸಹಜವಾಗಿಬಿಡುವುದು.