21/07/20 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ


ಮಧುರ ಮಕ್ಕಳೇ - ಸುಂದರ ದೇವಿ-ದೇವತೆಗಳನ್ನಾಗಿ ಮಾಡಲು ತಂದೆಯು ನಿಮಗೆ ಓದಿಸುತ್ತಿದ್ದಾರೆ, ಸೌಂದರ್ಯದ ಆಧಾರವು ಪವಿತ್ರತೆಯಾಗಿದೆ.

ಪ್ರಶ್ನೆ:

ಪರಂಜ್ಯೋತಿಗೆ ಬಲಿಹಾರಿಯಾಗುವಂತಹ ಪತಂಗಗಳ ಲಕ್ಷಣಗಳೇನು?

ಉತ್ತರ:

ಬಲಿಹಾರಿಯಾಗುವ ಪತಂಗಗಳು - 1. ಜ್ಯೋತಿಯು ಯಾರಾಗಿದ್ದಾರೆ, ಹೇಗಿದ್ದಾರೆಯೋ ಅವರನ್ನು ಯಥಾರ್ಥ ರೂಪದಿಂದ ತಿಳಿದುಕೊಳ್ಳುತ್ತಾರೆ ಮತ್ತು ನೆನಪು ಮಾಡುತ್ತಾರೆ. 2. ಬಲಿಹಾರಿಯಾಗುವುದು ಎಂದರೆ ತಂದೆಯ ಸಮಾನರಾಗುವುದು. 3. ಬಲಿಹಾರಿಯಾಗುವುದು ಎಂದರೆ ತಂದೆಗಿಂತಲೂ ಶ್ರೇಷ್ಠ ರಾಜ್ಯ ಪದವಿಗೆ ಅಧಿಕಾರಿಗಳಾಗುವುದು.

ಗೀತೆ:

ಸಭೆಯಲ್ಲಿ ಜ್ಯೋತಿ ಬೆಳಗಿತು............

ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಈ ಗೀತೆಯ ಸಾಲನ್ನು ಕೇಳಿದಿರಿ. ಇದನ್ನು ಯಾರು ತಿಳಿಸುತ್ತಾರೆ? ಆತ್ಮಿಕ ತಂದೆ. ಅವರು ಜ್ಯೋತಿಯೂ ಆಗಿದ್ದಾರೆ. ಇವರಿಗೆ ಅನೇಕಾನೇಕ ಹೆಸರುಗಳನ್ನಿಟ್ಟಿದ್ದಾರೆ. ತಂದೆಗೆ ಬಹಳಷ್ಟು ಮಹಿಮೆ ಮಾಡುತ್ತಾರೆ. ಇದೂ ಸಹ ಪರಮಪಿತ ಪರಮಾತ್ಮನ ಮಹಿಮೆಯಲ್ಲವೆ. ತಂದೆಯು ಪತಂಗಗಳಿಗಾಗಿ ಜ್ಯೋತಿಯಾಗಿ ಬಂದಿದ್ದಾರೆ. ಯಾವ ಪತಂಗಗಳು ಜ್ಯೋತಿಯನ್ನು ನೋಡುವರೋ ಅವರ ಮೇಲೆ ಬಲಿಹಾರಿಯಾಗಿ ಶರೀರವನ್ನು ಬಿಟ್ಟು ಬಿಡುತ್ತಾರೆ. ಜ್ಯೋತಿಗೆ ಬಲಿಹಾರಿಯಾಗುವ ಪತಂಗಗಳೂ ಬಹಳಷ್ಟಿರುತ್ತವೆ. ಅದರಲ್ಲಿಯೂ ವಿಶೇಷವಾಗಿ ದೀಪಾವಳಿಯಂದು ಬಹಳಷ್ಟು ದೀಪಗಳನ್ನು ಬೆಳಗಿಸಿದಾಗ ಚಿಕ್ಕ-ಚಿಕ್ಕ ಅನೇಕ ಕೀಟಗಳು ರಾತಿಯಲ್ಲಿ ಸತ್ತು ಹೋಗುತ್ತವೆ. ನೀವೀಗ ತಿಳಿದುಕೊಂಡಿದ್ದೀರಿ - ನಮ್ಮ ತಂದೆಯು ಪರಮ ಆತ್ಮನಾಗಿದ್ದಾರೆ, ಅವರಿಗೆ ಹುಸೇನನೆಂದು ಹೇಳಲಾಗುತ್ತದೆ. ಬಹಳ ಸುಂದರನಾಗಿದ್ದಾರೆ ಏಕೆಂದರೆ ಅವರು ಸದಾ ಪಾವನನಾಗಿದ್ದಾರೆ. ಆತ್ಮವು ಪವಿತ್ರವಾದಾಗ ಅದಕ್ಕೆ ಬಹಳ ಪವಿತ್ರ, ಸ್ವಾಭಾವಿಕ ಸೌಂದರ್ಯದ ಶರೀರವು ಸಿಗುತ್ತದೆ. ಆತ್ಮಗಳು ಶಾಂತಿಧಾಮದಲ್ಲಿ ಪವಿತ್ರರಾಗಿರುತ್ತಾರೆ ನಂತರ ಯಾವಾಗ ಇಲ್ಲಿ ಪಾತ್ರವನ್ನಭಿನಯಿಸಲು ಬರುವರೋ ಆಗ ಸತೋಪ್ರಧಾನತೆಯಿಂದ ಸತೋ, ರಜೋ, ತಮೋದಲ್ಲಿ ಬರುತ್ತಾರೆ ನಂತರ ಸುಂದರರಿಂದ ಶ್ಯಾಮ ಅರ್ಥಾತ್ ಅಪವಿತ್ರ, ಕಪ್ಪಾಗಿ ಬಿಡುತ್ತಾರೆ. ಆತ್ಮವು ಪವಿತ್ರವಾಗಿದ್ದಾಗ ಅದಕ್ಕೆ ಸತೋಪ್ರಧಾನವೆಂದು ಹೇಳಲಾಗುತ್ತದೆ ಮತ್ತು ಶರೀರವೂ ಸಹ ಸತೋಪ್ರಧಾನವಾದದ್ದೇ ಸಿಗುತ್ತದೆ. ಪ್ರಪಂಚವು ಹೊಸದು ಮತ್ತು ಹಳೆಯದಾಗುತ್ತದೆ ಆಗ ಸುಂದರ ಪರಮಪಿತ ಪರಮಾತ್ಮನ ಯಾರನ್ನು ಭಕ್ತಿಮಾರ್ಗದಲ್ಲಿ ಹೇ ಶಿವ ತಂದೆಯೇ ಎಂದು ಕರೆಯುತ್ತಾರೆಯೋ ಆ ನಿರಾಕಾರ ಪರಮಪಿತ ಪರಮಾತ್ಮನು ಆತ್ಮಗಳನ್ನು ಅಪವಿತ್ರರಿಂದ ಪವಿತ್ರ, ಸುಂದರರನ್ನಾಗಿ ಮಾಡಲು ಬರುತ್ತಾರೆ. ಈಗ ಯಾರು ಬಹಳ ಸುಂದರರಾಗಿದ್ದಾರೆಯೋ ಅವರ ಆತ್ಮಗಳು ಪವಿತ್ರವಾಗಿದೆಯೆಂದಲ್ಲ. ಭಲೆ ಶರೀರವು ಸುಂದರವಾಗಿದೆ ಆದರೆ ಆತ್ಮವಂತೂ ಪತಿತವಲ್ಲವೆ. ವಿದೇಶದಲ್ಲಿ ಎಷ್ಟೊಂದು ಸುಂದರರಾಗಿರುತ್ತಾರೆ, ನಿಮಗೆ ತಿಳಿದಿದೆ - ಈ ಲಕ್ಷ್ಮೀ-ನಾರಾಯಣರದು ಸತ್ಯಯುಗೀ ಸೌಂದರ್ಯವಾಗಿದೆ ಮತ್ತು ಇಲ್ಲಿ ನರಕದ ಸೌಂದರ್ಯವಾಗಿದೆ. ಮನುಷ್ಯರು ಈ ಮಾತುಗಳನ್ನು ತಿಳಿದುಕೊಂಡಿಲ್ಲ. ಮಕ್ಕಳಿಗೇ ತಿಳಿಸಲಾಗುತ್ತದೆ - ಇದು ನರಕದ ಸೌಂದರ್ಯವಾಗಿದೆ, ನಾವೇ ಸ್ವರ್ಗಕ್ಕಾಗಿ ಸ್ವಾಭಾವಿಕ ಸುಂದರರಾಗುತ್ತಿದ್ದೇವೆ. 21 ಜನ್ಮಗಳಿಗಾಗಿ ಇಂತಹ ಸುಂದರರಾಗುತ್ತೇವೆ. ಇಲ್ಲಿನ ಸೌಂದರ್ಯವು ಒಂದು ಜನ್ಮಕ್ಕಾಗಿ, ಅಂತಹ ಯಾವುದೋ ಕರ್ಮ ಮಾಡಿರುವುದರಿಂದ ಕಪ್ಪಾಗಿ ಬಿಟ್ಟಿದ್ದಾರೆ. ಇಲ್ಲಿ ತಂದೆಯು ಬಂದಿದ್ದಾರೆ, ಇಡೀ ಪ್ರಪಂಚದ ಮನುಷ್ಯ ಮಾತ್ರರನ್ನಷ್ಟೇ ಅಲ್ಲ, ಪ್ರಪಂಚವನ್ನೇ ಸುಂದರವನ್ನಾಗಿ ಮಾಡುತ್ತಾರೆ. ಸತ್ಯಯುಗ ಹೊಸ ಪ್ರಪಂಚದಲ್ಲಿ ಸುಂದರ ದೇವಿ-ದೇವತೆಗಳಿದ್ದರು, ಆ ರೀತಿಯಾಗುವುದಕ್ಕಾಗಿ ನೀವೀಗ ಓದುತ್ತೀರಿ. ತಂದೆಗೆ ಜ್ಯೋತಿಯೆಂತಲೂ ಹೇಳುತ್ತಾರೆ ಆದರೆ ಪರಮ ಆತ್ಮನಾಗಿದ್ದಾರೆ. ಹೇಗೆ ನಿಮ್ಮನ್ನು ಆತ್ಮ ಎಂದು ಹೇಳುತ್ತಾರೆಯೋ ಹಾಗೆಯೇ ಅವರನ್ನು ಪರಮ ಆತ್ಮನೆಂದು ಹೇಳುತ್ತಾರೆ. ನೀವು ಮಕ್ಕಳು ತಂದೆಯ ಮಹಿಮೆಯನ್ನು ಹಾಡುತ್ತೀರಿ ಮತ್ತು ತಂದೆಯು ಮಕ್ಕಳ ಮಹಿಮೆಯನ್ನು ಹಾಡುತ್ತಾರೆ. ಮಕ್ಕಳೇ, ನಾನು ನಿಮ್ಮನ್ನು ಈ ರೀತಿ ಮಾಡುತ್ತೇನೆ, ನಿಮ್ಮದು ನನಗಿಂತಲೂ ಶ್ರೇಷ್ಠ ಪದವಿಯಾಗಿದೆ. ನಾನು ಯಾರಿಗಿದ್ದೇನೆ, ಹೇಗಿದ್ದೇನೆ, ಹೇಗೆ ಪಾತ್ರವನ್ನಭಿನಯಿಸುತ್ತೇನೆ ಎಂಬುದು ಮತ್ತ್ಯಾರಿಗೂ ಗೊತ್ತಿಲ್ಲ. ನಾವಾತ್ಮಗಳು ಪಾತ್ರವನ್ನಭಿನಯಿಸುವುದಕ್ಕಾಗಿ ಹೇಗೆ ಪರಮಧಾಮದಿಂದ ಬರುತ್ತೇವೆ. ನಾವು ಶೂದ್ರ ಕುಲದಲ್ಲಿದ್ದೆವು, ಈಗ ಬ್ರಾಹ್ಮಣ ಕುಲದಲ್ಲಿ ಬಂದಿದ್ದೇವೆಂಬುದನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಈ ಬ್ರಾಹ್ಮಣ ವರ್ಣವೂ ಸಹ ನಿಮ್ಮದೇ ಆಗಿದೆ ಮತ್ತ್ಯಾವುದೇ ಧರ್ಮದವರಿಗಾಗಿ ಈ ವರ್ಣವಿಲ್ಲ. ಅವರ ವರ್ಣಗಳಿರುವುದಿಲ್ಲ. ಅವರದು ಒಂದೇ ವರ್ಣವಾಗಿದೆ, ಕ್ರಿಶ್ಚಿಯನ್ನರೆಂದೇ ನಡೆದು ಬರುತ್ತದೆ. ಹಾ! ಅವರಲ್ಲಿಯೂ ಸತೋ, ರಜೋ, ತಮೋದಲ್ಲಿ ಬರುತ್ತಾರೆ. ಬಾಕಿ ಈ ವರ್ಣವು ನಿಮಗಷ್ಟೇ ಇದೆ. ಸೃಷ್ಟಿಯೂ ಸಹ ಸತೋ, ರಜೋ, ತಮೋದಲ್ಲಿ ಬರುತ್ತದೆ. ಈ ಸೃಷ್ಟಿಚಕ್ರವನ್ನು ಬೇಹದ್ದಿನ ತಂದೆಯೇ ತಿಳಿಸುತ್ತಾರೆ. ಸ್ವಯಂ ಜ್ಞಾನಸಾಗರ, ಪವಿತ್ರತೆಯ ಸಾಗರನಾದ ತಂದೆಯೇ ಹೇಳುತ್ತಾರೆ - ನಾನು ಪುನರ್ಜನ್ಮವನ್ನು ತೆಗೆದುಕೊಳ್ಳುವುದಿಲ್ಲ. ಭಲೆ ಶಿವ ಜಯಂತಿಯನ್ನು ಆಚರಿಸುತ್ತಾರೆ ಆದರೆ ಅವರು ಯಾವಾಗ ಬರುತ್ತಾರೆಂದು ಮನುಷ್ಯರಿಗೆ ತಿಳಿದಿಲ್ಲ. ಅವರ ಜೀವನ ಕಥೆಯನ್ನು ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಯಾರಾಗಿದ್ದೇನೆ, ಹೇಗಿದ್ದೇನೆ, ನನ್ನಲ್ಲಿ ಯಾವ ಪಾತ್ರವಿದೆ, ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು ನೀವು ಮಕ್ಕಳಿಗೆ ಕಲ್ಪ-ಕಲ್ಪವೂ ತಿಳಿಸುತ್ತೇನೆ. ನಿಮಗೆ ತಿಳಿದಿದೆ - ನೀವು ಏಣಿಯನ್ನಿಳಿಯುತ್ತಾ-ಇಳಿಯುತ್ತಾ ತಮೋಪ್ರಧಾನರಾಗಿದ್ದೀರಿ, 84 ಜನ್ಮಗಳನ್ನು ನೀವೇ ತೆಗೆದುಕೊಂಡಿದ್ದೀರಿ. ಯಾರು ಕೊನೆಯಲ್ಲಿ ಬರುವರೋ ಅವರೂ ಸಹ ಸತೋ, ರಜೋ, ತಮೋದಲ್ಲಿ ಬರಲೇಬೇಕಾಗಿದೆ. ನೀವು ತಮೋಪ್ರಧಾನರಾಗುತ್ತೀರೆಂದರೆ ಇಡೀ ಪ್ರಪಂಚವು ತಮೋಪ್ರಧಾನವಾಗುತ್ತದೆ ಮತ್ತೆ ನೀವು ತಮೋಪ್ರಧಾನರಿಂದ ಅವಶ್ಯವಾಗಿ ಸತೋಪ್ರಧಾನರಾಗಬೇಕಾಗಿದೆ. ಈ ಸೃಷ್ಟಿಚಕ್ರವು ಸುತ್ತುತ್ತಾ ಇರುತ್ತದೆ. ಈಗ ಕಲಿಯುಗವಿದೆ, ಇದರ ನಂತರ ಸತ್ಯಯುಗವು ಬರುವುದು. ಕಲಿಯುಗದ ಆಯಸ್ಸು ಪೂರ್ಣವಾಯಿತು, ತಂದೆಯು ತಿಳಿಸುತ್ತಾರೆ - ನಾನು ಸಾಧಾರಣ ತನುವಿನಲ್ಲಿ ಕಲ್ಪದ ಹಿಂದಿನ ತರಹ ಪುನಃ ನೀವು ಮಕ್ಕಳಿಗೆ ರಾಜಯೋಗವನ್ನು ಕಲಿಸಲು ಪ್ರವೇಶ ಮಾಡಿದ್ದೇನೆ, ಇತ್ತೀಚೆಗಂತೂ ಬಹಳಷ್ಟು ಯೋಗಗಳಿವೆ, ಬ್ಯಾರಿಸ್ಟರಿ ಯೋಗ, ಇಂಜಿನಿಯರಿ ಯೋಗ.... ಬ್ಯಾರಿಸ್ಟರಿ ಓದಲು ಬ್ಯಾರಿಸ್ಟರ್ನ ಜೊತೆ ಬುದ್ಧಿಯೋಗವನ್ನಿಡುತ್ತಾರೆ. ನಾವು ಬ್ಯಾರಿಸ್ಟರ್ ಆಗುತ್ತಿದ್ದೇವೆಂದು ಹೇಳಿ ಓದಿಸುವವರನ್ನು ನೆನಪು ಮಾಡುತ್ತಾರೆ. ಅವರಿಗಂತೂ ತಮ್ಮ ತಂದೆಯು ಬೇರೆ ಇರುತ್ತಾರೆ, ಗುರುವೂ ಇರುತ್ತಾರೆ. ಅಂದಾಗ ಅವರನ್ನೂ ನೆನಪು ಮಾಡುತ್ತಾರೆ. ಆದರೂ ಸಹ ಬ್ಯಾರಿಸ್ಟರ್ನ ಜೊತೆ ಬುದ್ಧಿಯೋಗವಿರುತ್ತದೆ. ಆತ್ಮವೇ ಓದುತ್ತದೆ, ಆತ್ಮವೇ ಶರೀರದ ಮೂಲಕ ಬ್ಯಾರಿಸ್ಟರ್ ಇತ್ಯಾದಿ ಆಗುತ್ತದೆ.

ಈಗ ನೀವು ಮಕ್ಕಳು ತಮ್ಮಲ್ಲಿ ಆತ್ಮಾಭಿಮಾನಿಯಾಗುವ ಸಂಸ್ಕಾರವನ್ನು ತುಂಬಿಕೊಳ್ಳುತ್ತೀರಿ. ಅರ್ಧಕಲ್ಪ ದೇಹಾಭಿಮಾನಿಯಾಗಿದ್ದಿರಿ, ಈಗ ದೇಹೀ-ಅಭಿಮಾನಿಯಾಗಿ ಎಂದು ತಂದೆಯು ತಿಳಿಸುತ್ತಾರೆ. ಆತ್ಮದಲ್ಲಿಯೇ ವಿದ್ಯೆಯ ಸಂಸ್ಕಾರವಿದೆ. ಮನುಷ್ಯಾತ್ಮವು ವಕೀಲನಾಗುತ್ತದೆ, ನಾವೀಗ ವಿಶ್ವದ ಮಾಲೀಕರು, ದೇವತೆಗಳಾಗುತ್ತಿದ್ದೇವೆ. ಓದಿಸುವವರು ಶಿವ ತಂದೆ, ಪರಮ ಆತ್ಮನಾಗಿದ್ದಾರೆ. ಅವರೇ ಜ್ಞಾನ ಸಾಗರ, ಶಾಂತಿ-ಸಂಪತ್ತಿನ ಸಾಗರನಾಗಿದ್ದಾರೆ. ಸಾಗರದಿಂದ ರತ್ನಗಳ ತಟ್ಟೆಗಳು ಹೊರ ಬಂದವು ಎಂದು ತೋರಿಸುತ್ತಾರೆ. ಇವು ಭಕ್ತಿಮಾರ್ಗದ ಮಾತುಗಳಾಗಿವೆ. ತಂದೆಯು ತಿಳಿಸುತ್ತಾರೆ - ಇವು ಅವಿನಾಶಿ ಜ್ಞಾನರತ್ನಗಳಾಗಿವೆ, ಈ ಜ್ಞಾನರತ್ನಗಳಿಂದ ನೀವು ಬಹಳ ಸಾಹುಕಾರರಾಗುತ್ತೀರಿ ಮತ್ತು ನಿಮಗೆ ಬಹಳಷ್ಟು ವಜ್ರ ರತ್ನಗಳು ಸಿಗುತ್ತವೆ. ಇವು ಒಂದೊಂದು ರತ್ನವು ಲಕ್ಷಾಂತರ ರೂಪಾಯಿಗಳ ಬೆಲೆ ಬಾಳುವಂತದ್ದಾಗಿದೆ ಅದು ನಿಮ್ಮನ್ನು ಇಷ್ಟು ಸಾಹುಕಾರರನ್ನಾಗಿ ಮಾಡುತ್ತದೆ. ನಿಮಗೆ ತಿಳಿದಿದೆ - ಭಾರತವೇ ನಿರ್ವಿಕಾರಿ ಪ್ರಪಂಚವಾಗಿತ್ತು, ಅದರಲ್ಲಿ ಪವಿತ್ರ ದೇವತೆಗಳಿದ್ದರು. ಈಗ ಕಪ್ಪು, ಅಪವಿತ್ರರಾಗಿ ಬಿಟ್ಟಿದ್ದಾರೆ. ಆತ್ಮಗಳು ಮತ್ತು ಪರಮಾತ್ಮನ ಮೇಳವಾಗುತ್ತಿದೆ. ಆತ್ಮವು ಶರೀರದಲ್ಲಿದ್ದಾಗಲೇ ಕೇಳಿಸಿಕೊಳ್ಳುತ್ತದೆ. ಪರಮಾತ್ಮನೂ ಸಹ ಶರೀರದಲ್ಲಿಯೇ ಬರುತ್ತಾರೆ. ಆತ್ಮಗಳು ಮತ್ತು ಪರಮಾತ್ಮನ ಧಾಮವು ಶಾಂತಿಧಾಮವಾಗಿದೆ. ಅಲ್ಲೇನೂ ಸದ್ದು ಇರುವುದಿಲ್ಲ, ಇಲ್ಲಿ ಪರಮಾತ್ಮ ತಂದೆಯು ಬಂದು ಶರೀರ ಸಹಿತವಾಗಿ ಮಕ್ಕಳೊಂದಿಗೆ ಮಿಲನ ಮಾಡುತ್ತಾರೆ. ಅಲ್ಲಂತೂ ಮನೆಯಿದೆ, ವಿಶ್ರಾಂತಿ ಪಡೆಯುತ್ತಾರೆ. ಈಗ ನೀವು ಮಕ್ಕಳು ಪುರುಷೋತ್ತಮ ಸಂಗಮಯುಗದಲ್ಲಿದ್ದೀರಿ ಬಾಕಿ ಪ್ರಪಂಚವು ಕಲಿಯುಗದಲ್ಲಿದೆ. ತಂದೆಯು ತಿಳಿಸುತ್ತಾರೆ - ಭಕ್ತಿಮಾರ್ಗದಲ್ಲಿ ಬಹಳಷ್ಟು ಖರ್ಚು ಮಾಡುತ್ತಾರೆ, ಬಹಳಷ್ಟು ಚಿತ್ರಗಳನ್ನೂ ಮಾಡುತ್ತಾರೆ. ದೊಡ್ಡ-ದೊಡ್ಡ ಮಂದಿರಗಳನ್ನೂ ಕಟ್ಟಿಸುತ್ತಾರೆ. ಇಲ್ಲವಾದರೆ ಕೃಷ್ಣನ ಚಿತ್ರವನ್ನು ಮನೆಯಲ್ಲಿಯೂ ಇಟ್ಟುಕೊಳ್ಳಬಹುದು, ಬಹಳ ಕಡಿಮೆ ಬೆಲೆಯಲ್ಲಿ ಚಿತ್ರಗಳು ಸಿಗುತ್ತವೆ ಆದರೂ ಸಹ ಎಷ್ಟೊಂದು ದೂರ-ದೂರದ ಮಂದಿರಗಳಿಗೆ ಏಕೆ ಹೋಗುವುದು! ಇದು ಭಕ್ತಿಮಾರ್ಗವಾಗಿದೆ. ಸತ್ಯಯುಗದಲ್ಲಿ ಈ ಮಂದಿರಗಳಿರುವುದಿಲ್ಲ. ಅಲ್ಲಿ ಪೂಜ್ಯರೇ ಇರುತ್ತಾರೆ, ಕಲಿಯುಗದಲ್ಲಿ ಪೂಜಾರಿಗಳಿದ್ದಾರೆ. ನೀವೀಗ ಸಂಗಮಯುಗದಲ್ಲಿ ಪೂಜ್ಯ ದೇವತೆಗಳಾಗುತ್ತಿದ್ದೀರಿ. ನೀವೀಗ ಬ್ರಾಹ್ಮಣರಾಗಿದ್ದೀರಿ. ಈ ಸಮಯದಲ್ಲಿ ನಿಮ್ಮ ಈ ಅಂತಿಮ ಪುರುಷಾರ್ಥಿ ಶರೀರವು ಬಹಳ ಅತ್ಯಮೂಲ್ಯವಾಗಿದೆ. ಇದರಲ್ಲಿ ನೀವು ಬಹಳಷ್ಟು ಸಂಪಾದನೆ ಮಾಡಿಕೊಳ್ಳುತ್ತೀರಿ. ಬೇಹದ್ದಿನ ತಂದೆಯ ಜೊತೆ ನೀವು ತಿನ್ನುತ್ತೀರಿ, ಕುಡಿಯುತ್ತೀರಿ. ನೀವು ಕರೆಯುವುದೂ ಸಹ ಅವರನ್ನೇ. ಕೃಷ್ಣನೊಂದಿಗೆ ತಿನ್ನುವೆನೆಂದು ಹೇಳುವುದಿಲ್ಲ. ತಂದೆಯನ್ನೇ ನೆನಪು ಮಾಡುತ್ತೀರಿ, ನೀವು ಮಾತಾಪಿತಾ ನಾನು ನಿಮ್ಮ ಬಾಲಕನೆಂದು ಹೇಳಿ ತಂದೆಯ ಜೊತೆ ಆಟವಾಡುತ್ತಿರುತ್ತೀರಿ. ಕೃಷ್ಣನಿಗೆ ನಾವೆಲ್ಲರೂ ಬಾಲಕರೆಂದು ಹೇಳುವುದಿಲ್ಲ. ಎಲ್ಲಾ ಆತ್ಮಗಳು ಪರಮಪಿತ ಪರಮಾತ್ಮನ ಮಕ್ಕಳಾಗಿದ್ದೇವೆ, ಆತ್ಮವು ಶರೀರದ ಮೂಲಕವೇ ಹೇಳುತ್ತದೆ - ಬಾಬಾ, ತಾವು ಬಂದರೆ ನಾವು ತಮ್ಮ ಜೊತೆಯಲ್ಲಿಯೇ ಆಟವಾಡುತ್ತೇವೆ. ಜೊತೆಯಲ್ಲಿಯೇ ತಿನ್ನುತ್ತೇವೆ, ಎಲ್ಲವನ್ನೂ ಮಾಡುತ್ತೇವೆ. ನೀವು ಬಾಪ್ದಾದಾ ಎಂದು ಹೇಳುತ್ತೀರಿ. ಹೀಗೆ ಹೇಳುವುದರಿಂದ ಇದೊಂದು ಪರಿವಾರವಾಯಿತು. ಬಾಪ್ದಾದಾ ಮತ್ತು ಮಕ್ಕಳು. ಈ ಬ್ರಹ್ಮಾರವರು ಬೇಹದ್ದಿನ ರಚಯಿತನಾಗಿದ್ದಾರೆ. ತಂದೆಯು ಇವರಲ್ಲಿ (ಬ್ರಹ್ಮಾ) ಪ್ರವೇಶ ಮಾಡಿ ಇವರನ್ನು ದತ್ತು ತೆಗೆದುಕೊಳ್ಳುತ್ತಾರೆ. ನೀವು ನನ್ನವರಾಗಿದ್ದೀರಿ ಎಂದು ಇವರಿಗೆ ಹೇಳುತ್ತಾರೆ. ಇದು ಮುಖ ವಂಶಾವಳಿಯಾಗಿದೆ. ಹೇಗೆ ಸ್ತ್ರೀಯನ್ನು ದತ್ತು ಮಾಡಿಕೊಳ್ಳುತ್ತಾರಲ್ಲವೆ. ನೀನು ನನ್ನವಳೆಂದು ಹೇಳುತ್ತಾರೆ, ಅದೂ ಸಹ ಮುಖವಂಶಾವಳಿಯಾಯಿತು. ನಂತರ ಅವರಿಂದ ಕುಖ ವಂಶಾವಳಿ ಮಕ್ಕಳು ಜನ್ಮ ಪಡೆಯುತ್ತಾರೆ. ಈ ಪದ್ಧತಿಯು ಎಲ್ಲಿಂದ ನಡೆದು ಬಂದಿತು? ತಂದೆಯು ತಿಳಿಸುತ್ತಾರೆ- ನಾನೇ ಇವರನ್ನು ದತ್ತು ಮಾಡಿಕೊಂಡಿದ್ದೇನೆ ಅಲ್ಲವೆ. ಇವರ ಮೂಲಕ ನಿಮ್ಮನ್ನು ದತ್ತು ಮಾಡಿಕೊಳ್ಳುತ್ತೇನೆ. ನೀವು ನನ್ನ ಮಕ್ಕಳಾಗಿದ್ದೀರಿ ಆದರೆ ಇವರು (ಬ್ರಹ್ಮಾ) ಪುರುಷನಾಗಿದ್ದಾರೆ. ಆದುದರಿಂದ ನಿಮ್ಮೆಲ್ಲರನ್ನು ಸಂಭಾಲನೆ ಮಾಡಲು ಮತ್ತೆ ಸರಸ್ವತಿಯನ್ನೂ ದತ್ತು ಮಾಡಿಕೊಳ್ಳಲಾಯಿತು. ಆಗ ಅವರಿಗೆ ತಾಯಿ ಎಂಬ ಬಿರುದು ಸಿಕ್ಕಿತು. ಸರಸ್ವತಿ ನದಿ. ಈ ನದಿಯು ತಾಯಿಯಾಯಿತಲ್ಲವೆ. ತಂದೆಯು ಸಾಗರನಾದರು, ಈ ನದಿಯೂ ಸಹ ಸಾಗರದಿಂದ ಹೊರಟಿದೆ. ಬ್ರಹ್ಮಪುತ್ರ ನದಿ ಮತ್ತು ಸಾಗರದ ಬಹಳ ದೊಡ್ಡ ಮೇಳವಾಗುತ್ತದೆ. ಇಂತಹ ಮೇಳವು ಮತ್ತೆಲ್ಲಿಯೂ ಸಿಗುವುದಿಲ್ಲ. ಅದು ಸ್ಥೂಲ ನದಿಗಳ ಮೇಳವಾಗಿದೆ, ಇದು ಆತ್ಮಗಳು ಮತ್ತು ಪರಮಾತ್ಮನ ಮೇಳವಾಗಿದೆ. ತಂದೆಯು ಶರೀರದಲ್ಲಿ ಬಂದಾಗಲೇ ಮೇಳವಾಗುತ್ತದೆ. ತಂದೆಯು ತಿಳಿಸುತ್ತಾರೆ- ನಾನು ಹುಸೇನನಾಗಿದ್ದೇನೆ, ಇವರಲ್ಲಿ ಕಲ್ಪ-ಕಲ್ಪವೂ ಪ್ರವೇಶ ಮಾಡುತ್ತೇನೆ, ಇದು ನಾಟಕದಲ್ಲಿ ನಿಗಧಿಯಾಗಿದೆ. ನಿಮ್ಮ ಬುದ್ಧಿಯಲ್ಲಿ ಇಡೀ ಸೃಷ್ಟಿಚಕ್ರವಿದೆ, ಇದರ ಆಯಸ್ಸು 5000 ವರ್ಷವಾಗಿದೆ. ಈ ಬೇಹದ್ದಿನ ಸಿನೆಮಾದಿಂದ ಮತ್ತೆ ಆ ಹದ್ದಿನ ಸಿನಿಮಾಗಳನ್ನು ನೋಡುತ್ತಾರೆ. ಯಾವುದು ಕಳೆದುಹೋಗಿದೆಯೋ ಅದು ಮತ್ತೆ ವರ್ತಮಾನವಾಗುತ್ತದೆ. ವರ್ತಮಾನವು ನಂತರ ಭವಿಷ್ಯವಾಗುತ್ತದೆ. ಅದಕ್ಕೆ ಮತ್ತೆ ಭೂತಕಾಲವೆಂದು ಹೇಳಲಾಗುವುದು. ಅದು ಭೂತಕಾಲವಾಗುವುದರಲ್ಲಿ ಎಷ್ಟು ಸಮಯ ಹಿಡಿಸಿತು? ಹೊಸ ಪ್ರಪಂಚದಲ್ಲಿ ಬಂದು ಎಷ್ಟು ಸಮಯ ಕಳೆಯಿತು? 5000 ವರ್ಷಗಳು. ನೀವೀಗ ಪ್ರತಿಯೊಬ್ಬರೂ ಸ್ವದರ್ಶನ ಚಕ್ರಧಾರಿಗಳಾಗಿದ್ದೀರಿ. ನಾವು ಮೊದಲು ಬ್ರಾಹ್ಮಣರಾಗಿದ್ದೆವು, ನಂತರ ದೇವತೆಗಳಾದೆವೆಂದು ತಿಳಿಸಿಕೊಡುತ್ತೀರಿ. ನೀವು ಮಕ್ಕಳಿಗೇ ಈಗ ತಂದೆಯ ಮೂಲಕ ಸುಖಧಾಮದ ಆಸ್ತಿಯು ಸಿಗುತ್ತದೆ. ತಂದೆಯು ಬಂದು ಮೂರು ಧರ್ಮಗಳನ್ನು ಒಟ್ಟಿಗೆ ಸ್ಥಾಪನೆ ಮಾಡುತ್ತಾರೆ. ಉಳಿದೆಲ್ಲದರ ವಿನಾಶ ಮಾಡಿಸುತ್ತಾರೆ. ಈಗ ಹಿಂತಿರುಗಿ ಮನೆಗೆ ಕರೆದುಕೊಂಡು ಸದ್ಗುರುವು ನಿಮಗೆ ಸಿಕ್ಕಿದ್ದಾರೆ. ನಮ್ಮನ್ನು ಸದ್ಗತಿಯಲ್ಲಿ ಕರೆದುಕೊಂಡು ಹೋಗಿ, ಶರೀರವನ್ನು ಸಮಾಪ್ತಿ ಮಾಡಿ. ಶರೀರವನ್ನು ಬಿಟ್ಟು ಶಾಂತಿಧಾಮಕ್ಕೆ ಹೋಗುವ ಯುಕ್ತಿಗಳನ್ನು ತಿಳಿಸಿ ಎಂದು ತಂದೆಯನ್ನು ಕರೆಯುತ್ತಾರೆ. ಇದಕ್ಕಾಗಿಯೇ ಮನುಷ್ಯರು ಗುರುಗಳ ಬಳಿ ಹೋಗುತ್ತಾರೆ ಆದರೆ ಆ ಗುರುಗಳು ಶರೀರದಿಂದ ಬಿಡಿಸಿ ಜೊತೆಯಲ್ಲಿ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಪತಿತ-ಪಾವನನು ಒಬ್ಬರೇ ತಂದೆಯಾಗಿದ್ದಾರೆ. ಅವರು ಯಾವಾಗ ಬರುವರೋ ಆಗ ಅವಶ್ಯವಾಗಿ ಪಾವನರಾಗುತ್ತೀರಿ. ತಂದೆಗೆ ಕಾಲರಕಾಲ ಮಹಾಕಾಲನೆಂದು ಹೇಳಲಾಗುತ್ತದೆ ಏಕೆಂದರೆ ಎಲ್ಲರನ್ನೂ ಶರೀರದಿಂದ ಬಿಡಿಸಿ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಇವರು ಸುಪ್ರೀಂ ಮಾರ್ಗದರ್ಶಕನಾಗಿದ್ದಾರೆ. ಎಲ್ಲಾ ಆತ್ಮಗಳನ್ನು ಹಿಂತಿರುಗಿ ಕರೆದುಕೊಂಡು ಹೋಗುತ್ತಾರೆ. ಇದು ಛೀ ಛೀ ಶರೀರವಾಗಿದೆ, ಇದರಿಂದ ಮುಕ್ತರಾಗಲು ಬಯಸುತ್ತಾರೆ. ಆದರೆ ಶರೀರವನ್ನು ಬಿಟ್ಟಾಗಲೇ ಬಂಧನವು ಬಿಡುಗಡೆಯಾಗುವುದು. ಈಗ ನಿಮ್ಮನ್ನು ಇವೆಲ್ಲಾ ಆಸುರೀ ಬಂಧನಗಳಿಂದ ಬಿಡಿಸಿ ಸುಖದ ದೈವೀ ಸಂಬಂಧದಲ್ಲಿ ತಂದೆಯು ಕರೆದುಕೊಂಡು ಹೋಗುತ್ತಾರೆ. ನಾವು ಶಾಂತಿಧಾಮದ ಮೂಲಕ ಸುಖಧಾಮದಲ್ಲಿ ಬರುತ್ತೇವೆ ಎಂಬುದು ನಿಮಗೆ ತಿಳಿದಿದೆ. ನಂತರ ಹೇಗೆ ದುಃಖಧಾಮದಲ್ಲಿ ಬರುತ್ತೀರಿ ಎಂಬುದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ತಂದೆಯು ಶ್ಯಾಮರಿಂದ ಸುಂದರರನ್ನಾಗಿ ಮಾಡುವುದಕ್ಕಾಗಿಯೇ ಬರುತ್ತಾರೆ. ಆದ್ದರಿಂದ ತಿಳಿಸುತ್ತಾರೆ - ನಾನು ನಿಮ್ಮ ವಿಧೇಯ ಸತ್ಯವಾದ ತಂದೆಯೂ ಆಗಿದ್ದೇನೆ. ತಂದೆಯು ಯಾವಾಗಲೂ ವಿಧೇಯರಾಗಿರುತ್ತಾರೆ, ಬಹಳಷ್ಟು ಸೇವೆ ಮಾಡುತ್ತಾರೆ, ಖರ್ಚು ಮಾಡಿ ಮಕ್ಕಳನ್ನು ಓದಿಸಿ ನಂತರ ಎಲ್ಲಾ ಹಣ, ಅಧಿಕಾರವನ್ನು ಮಕ್ಕಳಿಗೆ ಕೊಟ್ಟು ತಾನು ಹೋಗಿ ಸಾಧುಗಳ ಸಂಗ ಮಾಡುತ್ತಾರೆ. ಮಕ್ಕಳನ್ನು ತನಗಿಂತಲೂ ಉತ್ತಮರನ್ನಾಗಿ ಮಾಡುತ್ತಾರೆ ಹಾಗೆಯೇ ಈ ತಂದೆಯೂ ತಿಳಿಸುತ್ತಾರೆ- ನಾನು ನಿಮ್ಮನ್ನು ಡಬಲ್ ಕಿರೀಟಧಾರಿಗಳನ್ನಾಗಿ ಮಾಡುತ್ತೇನೆ, ನೀವು ವಿಶ್ವಕ್ಕೂ ಮಾಲೀಕನಾಗಿದ್ದೀರಿ, ಬ್ರಹ್ಮಾಂಡಕ್ಕೂ ಮಾಲೀಕನಾಗುತ್ತೀರಿ. ನಿಮ್ಮದು ಡಬಲ್ ಪೂಜೆಯಾಗುತ್ತದೆ, ಆತ್ಮಗಳಿಗೂ ಪೂಜೆಯು ನಡೆಯುತ್ತದೆ. ದೇವತಾ ವರ್ಣದಲ್ಲಿಯೂ ಪೂಜೆಯಾಗುತ್ತದೆ. ನನಗಂತೂ ಕೇವಲ ಶಿವಲಿಂಗದ ರೂಪದಲ್ಲಷ್ಟೇ ಪೂಜೆಯಾಗುತ್ತದೆ, ನಾನಂತೂ ರಾಜನಾಗುವುದಿಲ್ಲ. ನಿಮಗೆ ಎಷ್ಟೊಂದು ಸೇವೆ ಮಾಡುತ್ತೇನೆ, ಇಂತಹ ತಂದೆಯನ್ನು ನೀವೇಕೆ ಮರೆಯುತ್ತೀರಿ! ಹೇ ಆತ್ಮವೇ ತನ್ನನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ. ನೀವು ಯಾರ ಬಳಿ ಬಂದಿದ್ದೀರಿ? ಮೊದಲು ತಂದೆ ನಂತರ ದಾದಾ. ಮೊದಲು ತಂದೆ ನಂತರ ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್, ಆದಿ ದೇವ, ಆಡಂ ಏಕೆಂದರೆ ಬಹಳಷ್ಟು ವಂಶಾವಳಿಗಳಾಗುತ್ತದೆಯಲ್ಲವೆ. ಶಿವ ತಂದೆಯು ಯಾರಾದರು? ಗ್ರೇಟ್ ಗೇಟ್ ಗ್ರಾಂಡ್ ಫಾದರ್ ಎಂದು ಹೇಳುವರೇ? ಪ್ರತೀ ಮಾತಿನಲ್ಲಿ ನಿಮ್ಮನ್ನು ಬಹಳಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆ, ಇಂತಹ ತಂದೆಯು ಸಿಗುತ್ತಾರೆ ಅಂದಮೇಲೆ ಇವರನ್ನೇಕೆ ಮರೆತುಹೋಗುತ್ತೀರಿ? ಮರೆಯುತ್ತೀರೆಂದರೆ ಹೇಗೆ ಪಾವನರಾಗುವಿರಿ? ತಂದೆಯು ಪಾವನರಾಗುವ ಯುಕ್ತಿಯನ್ನು ತಿಳಿಸುತ್ತಾರೆ, ಈ ನೆನಪಿನಿಂದಲೇ ತುಕ್ಕು ಬಿಟ್ಟು ಹೋಗುವುದು. ಮಧುರಾತಿ ಮಧುರ ಮಕ್ಕಳೇ, ದೇಹಾಭಿಮಾನವನ್ನು ಬಿಟ್ಟು ಆತ್ಮಾಭಿಮಾನಿಯಾಗಬೇಕಾಗಿದೆ. ಪವಿತ್ರರೂ ಆಗಬೇಕಾಗಿದೆ. ಕಾಮ ಮಹಾಶತ್ರು, ಇದೊಂದು ಜನ್ಮದಲ್ಲಿ ನನ್ನ ಸಲುವಾಗಿಯಾದರೂ ಪವಿತ್ರವಾಗಿರಿ. ಲೌಕಿಕ ತಂದೆಯೂ ಸಹ ಮಕ್ಕಳಿಗೆ ಯಾವುದೇ ಕೆಟ್ಟ ಕೆಲಸ ಮಾಡಬೇಡಿ, ನನ್ನ ದಾಡಿಗಾದರೂ ಬೆಲೆ ಕೊಡಿ ಎಂದು ಹೇಳುತ್ತಾರಲ್ಲವೆ. ಅದೇರೀತಿ ಪಾರಲೌಕಿಕ ತಂದೆಯೂ ಹೇಳುತ್ತಾರೆ - ಮಕ್ಕಳೇ, ನಾನು ಪಾವನರನ್ನಾಗಿ ಮಾಡಲು ಬಂದಿದ್ದೇನೆ, ಈಗ ಯಾವುದೇ ತಪ್ಪುಗಳನ್ನು ಮಾಡಬೇಡಿ. ಇಲ್ಲವಾದರೆ ಗೌರವವನ್ನು ಕಳೆಯುತ್ತೀರಿ. ಎಲ್ಲಾ ಬ್ರಾಹ್ಮಣರ ಮತ್ತು ತಂದೆಯ ಮರ್ಯಾದೆಯನ್ನು ಕಳೆಯುವಿರಿ. ಬಾಬಾ, ನಾವು ಕೆಳಗೆ ಬಿದ್ದು ಮುಖ ಕಪ್ಪು ಮಾಡಿಕೊಂಡೆವು ಎಂದು ಬರೆಯುತ್ತಾರೆ. ಇದಕ್ಕೆ ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ಸುಂದರರನ್ನಾಗಿ ಮಾಡಲು ಬಂದಿದ್ದೇನೆ ಮತ್ತೆ ನೀವು ಮುಖ ಕಪ್ಪು ಮಾಡಿಕೊಳ್ಳುತ್ತೀರಾ! ನೀವಂತೂ ಸದಾ ಸುಂದರರಾಗುವ ಪುರುಷಾರ್ಥ ಮಾಡಬೇಕಾಗಿದೆ. ಒಳ್ಳೆಯದು.

ಮಧುರಾತಿಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಈ ಅಂತಿಮ ಪುರುಷಾರ್ಥಿ ಶರೀರವು ಬಹಳ ಅಮೂಲ್ಯವಾಗಿದೆ, ಇದರಲ್ಲಿ ಬಹಳ ಸಂಪಾದನೆ ಮಾಡಿಕೊಳ್ಳಬೇಕಾಗಿದೆ. ಬೇಹದ್ದಿನ ತಂದೆಯ ಜೊತೆ ತಿನ್ನುತ್ತಾ, ಕುಡಿಯುತ್ತಾ..... ಸರ್ವ ಸಂಬಂಧಗಳ ಅನುಭೂತಿ ಮಾಡಬೇಕಾಗಿದೆ.

2. ಬ್ರಾಹ್ಮಣ ಪರಿವಾರದ ಹಾಗೂ ತಂದೆಯ ಮರ್ಯಾದೆಯನ್ನು ಕಳೆಯುವಂತಹ ಯಾವುದೇ ಕರ್ಮವನ್ನು ಮಾಡಬಾರದು. ಆತ್ಮಾಭಿಮಾನಿಗಳಾಗಿ ಸಂಪೂರ್ಣ ಪವಿತ್ರರಾಗಬೇಕಾಗಿದೆ. ನೆನಪಿನಿಂದ ಹಳೆಯ ತುಕ್ಕನ್ನು ತೆಗೆಯಬೇಕಾಗಿದೆ.

ವರದಾನ:

ಕಲಿಯುಗಿ ಪ್ರಪಂಚದ ದುಃಖ ಅಶಾಂತಿಯ ನೋಟ ನೋಡಿತ್ತಿದ್ದರೂ ಸದಾ ಸಾಕ್ಷಿ ಹಾಗೂ ಬೆಹದ್ದಿನ ವೈರಾಗಿ ಭವ.

ಈ ಕಲಿಯುಗಿ ಪ್ರಪಂಚದಲ್ಲಿ ಏನೇ ಆದರೂ ಸಹ ತಮ್ಮದು ಸದಾ ಏರುವ ಕಲೆಯಾಗಿದೆ. ಜಗತ್ತಿನವರಿಗೆ ಹಾ! ಹಾ!ಕಾರ ಮತ್ತು ನಿಮಗೆ ಜೈ ಜೈಕಾರ. ತಾವು ಯಾವುದೇ ಪರಿಸ್ಥಿತಿಯಲ್ಲಿ ಗಾಬರಿಯಾಗುವುದಿಲ್ಲ, ಏಕೆಂದರೆ ತಾವು ಮೊದಲಿನಿಂದಲೇ ತಯಾರಾಗಿರುವಿರಿ. ಸಾಕ್ಷಿಯಾಗಿರುತ್ತಾ ಎಲ್ಲಾ ಪ್ರಕಾರದ ಆಟವನ್ನು ನೋಡುತ್ತಿರುವಿರಿ. ಕೆಲವರು ಅಳುತ್ತಿರುತ್ತಾರೆ, ಕೆಲವರು ಕಿರುಚಾಡುತ್ತಿರುತ್ತಾರೆ, ಸಾಕ್ಷಿಯಾಗಿದ್ದು ನೋಡಿದಾಗ ಸಂತೋಷವಾಗುತ್ತದೆ. ಯಾರು ಕಲಿಯುಗಿ ಪ್ರಪಂಚದ ದುಃಖ, ಅಶಾಂತಿಯ ದೃಶ್ಯಗಳನ್ನು ಸಾಕ್ಷಿಯಾಗಿದ್ದು ನೊಡುತ್ತಾರೆ ಅವರು ಸಹಜವಾಗಿಯೇ ಬೇಹದ್ದಿನ ವೈರಾಗಿಗಳಾಗಿ ಬಿಡುತ್ತಾರೆ.

ಸ್ಲೋಗನ್:

ಎಂತಹದೇ ಧರಣಿಯನ್ನು ತಯಾರು ಮಾಡಬೇಕಾದರೆ ವಾಣಿಯ ಜೊತೆ ವೃತ್ತಿಯಿಂದ ಸೇವೆ ಮಾಡಿ.