21.11.23 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಸೆಕೆಂಡಿನಲ್ಲಿ ಮುಕ್ತಿ-ಜೀವನ್ಮುಕ್ತಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಮನ್ಮನಾಭವ ಹಾಗೂ
ಮಧ್ಯಾಜೀಭವ, ತಂದೆಯನ್ನು ಯಥಾರ್ಥವಾಗಿ ಅರ್ಥಮಾಡಿಕೊಂಡು ನೆನಪು ಮಾಡಿ ಹಾಗೂ ಎಲ್ಲರಿಗೂ ತಂದೆಯ
ಪರಿಚಯವನ್ನು ಕೊಡಿ”
ಪ್ರಶ್ನೆ:
ಯಾವ ನಶೆಯ
ಆಧಾರದ ಮೇಲೆ ನೀವು ತಂದೆಯನ್ನು ಶೋ ಮಾಡಬಹುದು?
ಉತ್ತರ:
ಈ ನಶೆಯಿರಲಿ -
ನಾವೀಗ ಭಗವಂತನ ಮಕ್ಕಳಾಗಿದ್ದೇವೆ, ಅವರು ನಮಗೆ ಓದಿಸುತ್ತಿದ್ದಾರೆ, ನಾವೇ ಸರ್ವ ಮನುಷ್ಯ
ಮಾತ್ರರಿಗೆಲ್ಲಾ ಸತ್ಯ ಮಾರ್ಗವನ್ನು ತೋರಿಸಬೇಕು. ನಾವೀಗ ಸಂಗಮಯುಗದಲ್ಲಿದ್ದೇವೆ, ನಾವೀಗ ನಮ್ಮ
ರಾಯಲ್ ಚಲನೆಯಿಂದ ತಂದೆಯ ಹೆಸರನ್ನು ಪ್ರಸಿದ್ದ ಮಾಡಬೇಕು. ತಂದೆ ಹಾಗೂ ಶ್ರೀಕೃಷ್ಣನ ಮಹಿಮೆಯನ್ನು
ಎಲ್ಲರಿಗೂ ಹೇಳಬೇಕು.
ಗೀತೆ:
ನಾಳೆ ಬರುವಂತಹ
ಪ್ರಪಂಚಕ್ಕೆ ನೀವೇ ಅದೃಷ್ಟವಂತರು.............
ಓಂ ಶಾಂತಿ.
ಈ ಹಾಡನ್ನು ಸ್ವಾತಂತ್ರ ಸೈನಿಕರಿಗಾಗಿ ಹಾಡಿದ್ದಾರೆ, ಆದರೆ ಪ್ರಪಂಚದ ಅದೃಷ್ಟವೆಂದು ಯಾವುದಕ್ಕೆ
ಹೇಳುತ್ತಾರೆಂದು ಈ ಭಾರತವಾಸಿಗಳು ತಿಳಿದುಕೊಂಡಿಲ್ಲ. ಇದು ಇಡೀ ಪ್ರಪಂಚದ ಪ್ರಶ್ನೆಯಾಗಿದೆ. ಇಡೀ
ಪ್ರಪಂಚದ ಅದೃಷ್ಟವನ್ನು ಪರಿವರ್ತನೆ ಮಾಡುವುದು ಯಾವ ಮನುಷ್ಯನಿಂದ ಸಾಧ್ಯವಿಲ್ಲ. ಇದು ಯಾವ
ಮನುಷ್ಯನ ಮಹಿಮೆಯಲ್ಲ. ಒಂದುವೇಳೆ ಕೃಷ್ಣನಿಗೆ ಹೇಳುವುದಾದರೆ ಕೃಷ್ಣನನ್ನು ಎಂದೂ ನಿಂದನೆ ಮಾಡಬಾರದು.
ಕೃಷ್ಣನು ಚೌತಿಯ ಚಂದ್ರಮನನ್ನು ನೋಡಿ ಕಳಂಕಕ್ಕೊಳಗಾದನು ಎಂಬ ಮಾತನ್ನು ಮನುಷ್ಯರು
ತಿಳಿದುಕೊಂಡಿಲ್ಲ. ಆ ಕಳಂಕವು ವಾಸ್ತವವಾಗಿ ಕೃಷ್ಣನಿಗೂ ಆಗುವುದಿಲ್ಲ, ಗೀತೆಯ ಭಗವಂತನಿಗೂ
ಆಗುವುದಿಲ್ಲ. ಈ ಬ್ರಹ್ಮನು ಕಳಂಕಕ್ಕೊಳಗಾಗುತ್ತಾರೆ. ಕೃಷ್ಣನು ಗೋಪಿಕೆಯರನ್ನು ಓಡಿಸಿದನೆಂಬ
ಕಳಂಕವನ್ನು ಹೊರಿಸಿದ್ದಾರೆ. ಶಿವತಂದೆಯ ಬಗ್ಗೆ ಯಾರಿಗೂ ಗೊತ್ತಿಲ್ಲ. ಅದರೆ ಈಶ್ವರನ ಹಿಂದೆಯೇ
ಎಲ್ಲರೂ ಓಡಿದ್ದಾರೆ. ಆದರೆ ಈಶ್ವರ ನಿಂದನೆಗೊಳಗಾಗುವುದಿಲ್ಲ. ಈಶ್ವರನಿಗಾಗಲಿ, ಕೃಷ್ಣನಿಗಾಗಲಿ
ನಿಂದನೆ ಮಾಡುವಂತಿಲ್ಲ. ಇಬ್ಬರ ಮಹಿಮೆಯೂ ಬಹಳ ಶ್ರೇಷ್ಠವಾಗಿದೆ, ಕೃಷ್ಣನ ಮಹಿಮೆಯು ನಂಬರ್ವನ್
ಆಗಿದೆ. ಲಕ್ಷ್ಮಿ-ನಾರಾಯಣರ ಮಹಿಮೆ ಅಷ್ಟಿಲ್ಲ ಏಕೆಂದರೆ ಅವರು ವಿವಾಹಿತರಾಗಿದ್ದಾರೆ. ಕೃಷ್ಣನಂತೂ
ಕುಮಾರನಾಗಿದ್ದಾನೆ ಆದ್ದರಿಂದ ಮಹಿಮೆ ಮಾಡುತ್ತಾರೆ. ಭಲೇ ಲಕ್ಷ್ಮಿ-ನಾರಾಯಣರ ಮಹಿಮೆಯನ್ನು 16 ಕಲಾ
ಸಂಪೂರ್ಣ, ಸಂಪೂರ್ಣ ನಿರ್ವಿಕಾರಿ ಎಂದು ಮಾಡುತ್ತಾರೆ ಕೃಷ್ಣನು ದ್ವಾಪರದಲ್ಲಿದ್ದನೆಂದು
ಹೇಳುತ್ತಾರೆ. ಈ ಮಹಿಮೆಯು ಪರಂಪರೆಯಿಂದ ನಡೆಯುತ್ತಾ ಬಂದಿದೆ ಎಂದು ತಿಳಿದುಕೊಳ್ಳುತ್ತಾರೆ. ಈ
ಎಲ್ಲಾ ಮಾತುಗಳ ಬಗ್ಗೆ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಇದಂತೂ ಈಶ್ವರೀಯ ಜ್ಞಾನವಾಗಿದೆ,
ಈಶ್ವರನೇ ರಾಮರಾಜ್ಯವನ್ನು ಸ್ಥಾಪನೆ ಮಾಡುತ್ತಾರೆ. ರಾಮರಾಜ್ಯವನ್ನು ಮನುಷ್ಯರು ತಿಳಿದುಕೊಂಡಿಲ್ಲ.
ತಂದೆಯೇ ಬಂದು ಇದೆಲ್ಲವನ್ನೂ ತಿಳಿಸಿಕೊಡುತ್ತಾರೆ. ಎಲ್ಲವೂ ಗೀತೆಯ ಮೇಲೆ ಆಧಾರಿತವಾಗಿದೆ,
ಗೀತೆಯಲ್ಲಿಯೂ ತಪ್ಪಾಗಿ ಬರೆದುಬಿಟ್ಟಿದ್ದಾರೆ. ಕೌರವರು ಹಾಗೂ ಪಾಂಡವರ ಯುದ್ಧವಂತೂ ನಡೆದಿಲ್ಲ
ಅಂದಾಗ ಅರ್ಜುನನ ಮಾತೂ ಇರುವುದಿಲ್ಲ. ಇದನ್ನಂತೂ ತಂದೆಯು ಕುಳಿತು ಪಾಠಶಾಲೆಯಲ್ಲಿ ಓದಿಸುತ್ತಾರೆ.
ಯುದ್ಧದ ಮೈದಾನದಲ್ಲಿ ಪಾಠಶಾಲೆ ಇರುತ್ತದೆಯೇನು! ಹೌದು! ಇದು ಮಾಯಾ ರಾವಣನೊಂದಿಗೆ ಯುದ್ಧವಾಗಿದೆ
ಅಂದಾಗ ಅವನ ಮೇಲೆ ವಿಜಯವನ್ನು ಪಡೆಯಬೇಕಾಗಿದೆ. ಮಾಯಾಜೀತರಾಗಿ ಜಗತ್ಜೀತರಾಗಬೇಕಾಗಿದೆ. ಆದರೆ ಈ
ಮಾತುಗಳನ್ನು ಸ್ವಲ್ಪವೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಈ ರೀತಿಯಾಗಿಯೇ ನಾಟಕದಲ್ಲಿ
ನೊಂದಾವಣೆಯಾಗಿದೆ. ಅವರು ಕೊನೆಯಲ್ಲಿ ಬಂದು ತಿಳಿದುಕೊಳ್ಳುವರು ಮತ್ತು ನೀವು ಮಕ್ಕಳೆ
ತಿಳಿಸುತ್ತೀರಿ. ಭೀಷ್ಮ ಪಿತಾಮಹ ಮುಂತಾದವರಿಗೆ ಹಿಂಸೆಯ ಬಾಣವನ್ನು ಬಿಡುವ ಮಾತಿಲ್ಲ.
ಶಾಸ್ತ್ರಗಳಲ್ಲಿ ಬಹಳ ಮಾತುಗಳನ್ನು ಬರೆದು ಬಿಟ್ಟಿದ್ದಾರೆ. ಮಾತೆಯರು ಅವರ ಬಳಿ ಹೋಗಿ ಸಮಯವನ್ನು
ತೆಗೆದುಕೊಳ್ಳಬೇಕು. ಹೇಳಿ - ನಾವು ನಿಮ್ಮೊಂದಿಗೆ ಈ ಕುರಿತು ಮಾತನಾಡಬೇಕು. ಈ ಗೀತೆಯನ್ನಂತೂ
ಭಗವಂತನೇ ಹೇಳಿದ್ದಾರೆ. ಕೃಷ್ಣನ ಮಹಿಮೆಯೇ ಬೇರೆ, ಭಗವಂತನ ಮಹಿಮೆಯೇ ಬೇರೆಯಾಗಿದೆ. ನಮಗಂತೂ ಈ
ಮಾತಿನಲ್ಲಿ ಸಂಶಯ ಬರುತ್ತದೆ. ಇದು ರುದ್ರ ಭಗವಾನುವಾಚ ಆಗಿದೆ, ಇದು ಅವರ ರುದ್ರಜ್ಞಾನ ಯಜ್ಞವಾಗಿದೆ.
ಇದು ನಿರಾಕಾರ ಪರಮಪಿತ ಪರಮಾತ್ಮನ ಜ್ಞಾನ ಯಜ್ಞವಾಗಿದೆ. ಆದರೆ ಮನುಷ್ಯರು ಕೃಷ್ಣ ಭಗವಾನುವಾಚ ಎಂದು
ಹೇಳುತ್ತಾರೆ. ವಾಸ್ತವಿಕವಾಗಿ ಒಬ್ಬರಿಗೆ ಭಗವಂತನೆಂದು ಹೇಳಬೇಕು, ಅವರ ಮಹಿಮೆಯನ್ನು ಬರೆಯಬೇಕಾಗಿದೆ.
ಕೃಷ್ಣನ ಮಹಿಮೆ ಇದಾಗಿದೆ, ಈಗ ಇಬ್ಬರಲ್ಲಿ ಗೀತೆಯಲ್ಲಿ ಭಗವಂತ ಯಾರು? ಸಹಜ ರಾಜಯೋಗವೆಂದು
ಗೀತೆಯಲ್ಲಿ ಬರೆಯಲ್ಪಟ್ಟಿದೆ. ಬೇಹದ್ದಿನ ಸನ್ಯಾಸ ಮಾಡಿ ಎಂದು ತಂದೆ ಹೇಳುತ್ತಾರೆ. ದೇಹಸಹಿತ ದೇಹದ
ಸರ್ವ ಸಂಬಂಧಗಳನ್ನು ಬಿಟ್ಟು ನಿಮ್ಮನ್ನು ಆತ್ಮನೆಂದು ತಿಳಿದುಕೊಳ್ಳಿ. ಮನ್ಮನಾಭವ, ಮಧ್ಯಾಜೀಭವ.
ತಂದೆಯಂತೂ ಬಹಳ ಚೆನ್ನಾಗಿ ತಿಳಿಸಿಕೊಡುತ್ತಾರೆ. ಗೀತೆಯಲ್ಲಿಯೂ ಸಹ ಶ್ರೀಮತ್ಭಗವಾನುವಾಚ ಎಂದೇ ಇದೆ.
ಶ್ರೀ ಅಂದರೆ ಶ್ರೇಷ್ಠರೆಂದು ಪರಮಪಿತ ಪರಮಾತ್ಮನಿಗೆ ಮಾತ್ರ ಹೇಳಲಾಗುವುದು. ಕೃಷ್ಣನಂತೂ
ದೈವೀಗುಣವುಳ್ಳ ಮನುಷ್ಯನಾಗಿದ್ದಾನೆ. ಯಾರು ಗೀತೆಯನ್ನು ಕಲಿಸಿದರು ಅವರೇ ಗೀತೆಯ ಭಗವಂತ
ಶಿವನಾಗಿದ್ದಾರೆ. ಅಂತೂ ಕೊನೆಯಲ್ಲಿ ಎಲ್ಲಾ ಧರ್ಮಗಳು ವಿನಾಶವಾಗಿ ಒಂದು ಧರ್ಮದ
ಸ್ಥಾಪನೆಯಾಗಿರುತ್ತದೆ. ಸತ್ಯಯುಗದಲ್ಲಿ ಒಂದೇ ಆದಿಸನಾತನ ದೇವಿ-ದೇವತಾಧರ್ಮವಿತ್ತು. ಇದರ ಸ್ಥಾಪಕ
ಕೃಷ್ಣನಲ್ಲ ಪರಮಾತ್ಮನಾಗಿದ್ದಾರೆ. ಅವರ ಮಹಿಮೆ ಇದಾಗಿದೆ, ಅವರಿಗೆ ತ್ವಮೇವ ಮಾತಾಶ್ಚ ಪಿತಾ ಎಂದು
ಹೇಳಲಾಗುವುದು. ಈ ರೀತಿ ಕೃಷ್ಣನಿಗೆ ಹೇಳುವುದಿಲ್ಲ. ನೀವು ಸತ್ಯತಂದೆಯ ಪರಿಚಯವನ್ನು ಕೊಡಬೇಕು.
ಭಗವಂತನೇ ಮುಕ್ತಿದಾತ ಹಾಗೂ ಮಾರ್ಗದರ್ಶಕ, ಎಲ್ಲರನ್ನೂ ಕರೆದೊಯ್ಯುವವರು ಆಗಿದ್ದಾರೆಂದು
ತಿಳಿಸಿಕೊಡಬಹುದು. ಸೊಳ್ಳೆಗಳೋಪಾದಿಯಲ್ಲಿ ಎಲ್ಲರನ್ನೂ ಕರೆದೊಯ್ಯುವುದು ಶಿವನ ಕರ್ತವ್ಯವಾಗಿದೆ.
ಸುಪ್ರೀಂ ಎನ್ನುವ ಅಕ್ಷರ ಬಹಳ ಚೆನ್ನಾಗಿದೆ. ಶಿವ ಪರಮಪಿತ ಪರಮಾತ್ಮನ ಮಹಿಮೆಯೇ ಬೇರೆಯಾಗಿದೆ,
ಕೃಷ್ಣನ ಮಹಿಮೆಯೇ ಬೇರೆಯಾಗಿದೆ. ಎರಡೂ ಮಾತನ್ನು ಸಿದ್ಧ ಮಾಡಿ ತೋರಿಸಬೇಕು. ಶಿವನು ಜನನ-ಮರಣದಲ್ಲಿ
ಬರುವವರಲ್ಲ, ಅವರು ಪತಿತ-ಪಾವನನಾಗಿದ್ದಾರೆ. ಕೃಷ್ಣನು ಪೂರ್ಣ 84 ಜನ್ಮಗಳನ್ನು
ತೆಗೆದುಕೊಳ್ಳುತ್ತಾನೆ. ಈಗ ಪರಮಾತ್ಮನೆಂದು ಯಾರಿಗೆ ಹೇಳೋಣ? ಇದನ್ನೂ ಬರೆಯಬೇಕಾಗಿದೆ. ಬೇಹದ್ದಿನ
ತಂದೆಯನ್ನರಿಯದ ಕಾರಣ ಅನಾಥರು, ದುಃಖಿಗಳಾಗಿದ್ದಾರೆ. ಸತ್ಯಯುಗದಲ್ಲಿ ಯಾವಾಗ ಧನಿಕರಾಗಿದ್ದರೋ ಆಗ
ಅವಶ್ಯವಾಗಿ ಬಹಳ ಸುಖಿಯಾಗಿರಬೇಕು. ಹೀಗೆ ಸ್ಪಷ್ಟ ಅಕ್ಷರಗಳಲ್ಲಿರಬೇಕು. ತಂದೆಯೂ ಸಹ ಹೇಳುತ್ತಾರೆ
- ನನ್ನನ್ನು ನೆನಪು ಮಾಡಿ ಹಾಗೂ ಆಸ್ತಿಯನ್ನು ತೆಗೆದುಕೊಳ್ಳಿ. ಈಗಲೂ ಸಹ ಶಿವತಂದೆಯು ಒಂದು
ಸೆಕೆಂಡಿನಲ್ಲಿ ಜೀವನ್ಮುಕ್ತಿ ಎಂದು ಹೇಳುತ್ತಾರೆ. ಮಹಿಮೆಗಳೆಲ್ಲವನ್ನೂ ಬರೆಯಬೇಕು. ಶಿವಾಯನಮಃ
ಅವರಿಂದ ಸ್ವರ್ಗದ ಆಸ್ತಿಯು ಸಿಗುತ್ತದೆ. ಈ ಸೃಷ್ಟಿಚಕ್ರವನ್ನು ತಿಳಿದುಕೊಳ್ಳುವುದರಿಂದ ನೀವು
ಸ್ವರ್ಗವಾಸಿಗಳಾಗುತ್ತೀರಿ. ಈಗ ನೀವೇ ನಿರ್ಣಯಿಸಿ - ಯಾವುದು ಸರಿ? ನೀವು ಮಕ್ಕಳು ಸನ್ಯಾಸಿಗಳ
ಆಶ್ರಮಕ್ಕೆ ಹೋಗಿ ವೈಯಕ್ತಿಕವಾಗಿ ಮಿಲನ ಮಾಡಬೇಕು. ಸಭೆಯಲ್ಲಂತೂ ಅವರಿಗೆ ಬಹಳ ನಶೆಯಿರುತ್ತದೆ.
ಮನುಷ್ಯರಿಗೆ ನೀವು ಸತ್ಯ
ಮಾರ್ಗವನ್ನು ಹೇಗೆ ತಿಳಿಸಬೇಕು ಎಂದು ನೀವು ಮಕ್ಕಳ ಬುದ್ಧಿಯಲ್ಲಿ ಇರಬೇಕು. ಭಗವಾನುವಾಚ - ನಾನು ಈ
ಸಾಧು ಮುಂತಾದವರನ್ನು ಉದ್ಧಾರ ಮಾಡುತ್ತೇನೆ. ಮುಕ್ತಿದಾತ ಎಂಬ ಅಕ್ಷರವೂ ಇದೆ. ಬೇಹದ್ದಿನ ತಂದೆಯೇ
ಹೇಳುತ್ತಾರೆ - ನೀವು ನನ್ನವರಾಗಿ ತಂದೆ ಮಕ್ಕಳ ಶೋ ಮಾಡಬೇಕು ನಂತರ ಮಕ್ಕಳು, ತಂದೆಯ ಶೋ ಮಾಡಿ.
ಶ್ರೀಕೃಷ್ಣನಿಗೆ ತಂದೆಯೆಂದು ಹೇಳುವುದಿಲ್ಲ. ಪರಮಪಿತ ಪರಮಾತ್ಮನಿಗೆ ಎಲ್ಲರೂ ಮಕ್ಕಳಾಗಿದ್ದಾರೆ,
ಮನುಷ್ಯರಿಗೆ ಎಲ್ಲರೂ ಮಕ್ಕಳಾಗುವುದಿಲ್ಲ. ಆದುದರಿಂದ ನೀವು ಮಕ್ಕಳು ತಿಳಿಸಿಕೊಡುವಾಗ ಬಹಳ
ನಶೆಯಿರಬೇಕು ಬೇಹದ್ದಿನ ತಂದೆಗೆ ನಾವು ಮಕ್ಕಳಾಗಿದ್ದೇವೆ. ರಾಜನ ಮಗ ರಾಜಕುಮಾರನ ಚಲನೆಯನ್ನು ನೋಡಿ
ಎಷ್ಟೊಂದು ಘನತೆಯಿಂದ ಕೂಡಿರುತ್ತದೆ. ಆದರೆ ಈ ಅಸಹಾಯಕ (ಕೃಷ್ಣನ ಮೇಲೆ) ಭಾರತವಾಸಿಗಳು ಬಹಳ
ಕಳಂಕವನ್ನು ಹೊರಿಸಿದ್ದಾರೆ. ನಿಮಗೂ ಭಾರತವಾಸಿಯರೆಂದೇ ಹೇಳುತ್ತಾರಲ್ಲವೆ? ಹೌದು ಎಂದು ಹೇಳಿ, ನಾವು
ಭಾರತೀಯರೇ ಆಗಿದ್ದೇವೆ ಆದರೆ ನಾವೀಗ ಸಂಗಮ ಯುಗದಲ್ಲಿದ್ದೇವೆ. ಹಾಗೂ ಭಗವಂತನ ಮಕ್ಕಳಾಗಿದ್ದೇವೆ,
ನಾವು ಅವರಿಂದ ಓದುತ್ತಿದ್ದೇವೆ. ಭಗವಾನುವಾಚ - ನಾನು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ. ಮುಂದೆ
ಬರುತ್ತಾ ತಿಳಿದುಕೊಳ್ಳುತ್ತಾರೆ. ಜನಕರಾಜನೂ ಸಹ ಸನ್ನೆಯಿಂದ ತಿಳಿದುಕೊಂಡರಲ್ಲವೆ. ಪರಮಪಿತ
ಪರಮಾತ್ಮನನ್ನು ನೆನಪು ಮಾಡುತ್ತಾ ಧ್ಯಾನದಲ್ಲಿ ಹೊರಟುಹೋದನು. ಧ್ಯಾನದಲ್ಲಂತೂ ಬಹಳಷ್ಟು ಮಕ್ಕಳು
ಹೋಗುತ್ತಾರೆ, ಧ್ಯಾನದಲ್ಲಿ ನಿರಾಕಾರಿ ಪ್ರಪಂಚ ಹಾಗೂ ವೈಕುಂಠವನ್ನು ನೋಡುತ್ತಾರೆ. ನಾವು ನಿರಾಕಾರಿ
ಪ್ರಪಂಚದಲ್ಲಿ ಇರುವವರಾಗಿದ್ದೇವೆ ಎಂದು ತಿಳಿದುಕೊಂಡಿದ್ದೀರಿ. ಪರಮಧಾಮದಿಂದ ಬಂದು ಇಲ್ಲಿ
ಪಾತ್ರವನ್ನು ಅಭಿನಯಿಸುತ್ತೇವೆ. ವಿನಾಶವು ಮುಂದೆ ನಿಂತಿದೆ. ವಿಜ್ಞಾನದವರು ಚಂದ್ರಮನ ಮೇಲೆ ಹೋಗಲು
ಎಷ್ಟೊಂದು ಕಷ್ಟಪಡುತ್ತಾರೆ. ಅತಿಯಾದ ವಿಜ್ಞಾನದ ಬಲದಲ್ಲಿ ಹೋಗುವುದರಿಂದ ತಮ್ಮ ವಿನಾಶವನ್ನು
ಮಾಡಿಕೊಳ್ಳುತ್ತಾರೆ. ಬಾಕಿ ಚಂದ್ರಲೋಕದಲ್ಲೇನೂ ಇಲ್ಲ. ಮಾತುಗಳೇನೂ ಬಹಳ ಚೆನ್ನಾಗಿವೆ ಆದರೆ
ತಿಳಿಸಿಕೊಡಲು ಯುಕ್ತಿ ಬೇಕಾಗಿದೆ. ನಮಗೆ ಶಿಕ್ಷಣ ಕೊಡುವಂತಹವರು ಶ್ರೇಷ್ಠಾತಿ ಶ್ರೇಷ್ಠ ಆಗಿದ್ದಾರೆ,
ಅವರು ನಿಮಗೂ ತಂದೆಯಾಗಿದ್ದಾರೆ. ಅವರ ಮಹಿಮೆಯೇ ಬೇರೆ, ಕೃಷ್ಣನ ಮಹಿಮೆಯೇ ಬೇರೆಯಾಗಿದೆ. ಇದು
ಅವಿನಾಶಿ ರುದ್ರ ಜ್ಞಾನಯಜ್ಞವಾಗಿದೆ. ಇದರಲ್ಲಿ ಇಡೀ ಜಗತ್ತಿನ ಎಲ್ಲವೂ ಸ್ವಾಹಾ ಆಗುತ್ತದೆ. ಈ
ಎಲ್ಲಾ ಪಾಯಿಂಟ್ಸಂತೂ ಚೆನ್ನಾಗಿವೆ ಆದರೆ ಇದನ್ನು ಅರಿತುಕೊಳ್ಳಲು ಸ್ವಲ್ಪ ತಡವಾಗಬಹುದು.
ಈ ಪಾಯಿಂಟ್ ಸಹ
ಚೆನ್ನಾಗಿದೆ - ಒಂದು ಆತ್ಮಿಕ ಯಾತ್ರೆಯಾಗಿದೆ, ಇನ್ನೊಂದು ಶಾರೀರಿಕ ಯಾತ್ರೆಯಾಗಿದೆ. ತಂದೆಯು
ಹೇಳುತ್ತಾರೆ - ನನ್ನನ್ನು ನೆನಪು ಮಾಡಿದಾಗ ಅಂತಮತಿ ಸೋ ಗತಿಯಾಗುತ್ತದೆ. ಇದನ್ನು ಆಧ್ಯಾತ್ಮಿಕ
ತಂದೆಯ ವಿನಃ ಮತ್ತ್ಯಾರೂ ಕಲಿಸಲು ಸಾಧ್ಯವಿಲ್ಲ. ಇಂತಿಂತಹ ಪಾಯಿಂಟನ್ನು ಬರೆಯಬೇಕು - ಮನ್ಮನಾಭವ,
ಮಧ್ಯಾಜೀಭವ. ಇದೇ ಮುಕ್ತಿ-ಜೀವನ್ಮುಕ್ತಿಯ ಯಾತ್ರೆಯಾಗಿದೆ. ಈ ಯಾತ್ರೆಯನ್ನು ತಂದೆಯೇ
ಮಾಡಿಸುತ್ತಾರೆ ಹೊರತು ಕೃಷ್ಣನಂತೂ ಮಾಡಿಸಲುಸಾಧ್ಯವಿಲ್ಲ. ಹೀಗೆ ನೆನಪು ಮಾಡುವ ಅಭ್ಯಾಸವನ್ನು
ಮಾಡಿಕೊಳ್ಳಬೇಕು. ಎಷ್ಟು ನೆನಪು ಮಾಡುತ್ತೀರಿ ಅಷ್ಟು ಖುಷಿಯಿರುತ್ತದೆ. ಆದರೆ ಮಾಯೆಯು ನೆನಪು
ಮಾಡಲು ಬಿಡುವುದಿಲ್ಲ.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ
ಸುಪ್ರಭಾತ. ಸೇವೆಯಂತೂ ಎಲ್ಲರೂ ಮಾಡುತ್ತಾರೆ ಆದರೆ ಉತ್ತಮ ಹಾಗೂ ಕನಿಷ್ಠ ಸೇವೆಯಿದೆಯಲ್ಲವೆ.
ಯಾರಿಗಾದರೂ ತಂದೆಯ ಪರಿಚಯವನ್ನು ಕೊಡುವುದು ಬಹಳ ಸಹಜವಾಗಿದೆ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ
ನಮಸ್ತೆ,
ರಾತ್ರಿ ಕ್ಲಾಸ್
ಹೇಗೆ ಬೆಟ್ಟಗಳ ಮೇಲೆ
ಶುದ್ಧ ಗಾಳಿಯ ಸೇವನೆ ಮಾಡಲು, ರಿಫ್ರೆಷ್ ಆಗಲು ಹೋಗುತ್ತಾರೆ. ಏಕೆಂದರೆ ಮನೆ ಹಾಗೂ ಆಫೀಸಿನಲ್ಲಿ
ಇರುವುದರಿಂದ ಬುದ್ಧಿಯಲ್ಲಿ ಕಾರ್ಯದ ನೆನಪೇ ಇರುತ್ತದೆ. ಹೊರಗೆ ಹೋಗುವುದರಿಂದ ಆಫೀಸ್ನ ಚಿಂತೆಯಿಂದ
ಬಿಡುಗಡೆಯಾಗುತ್ತಾರೆ. ಇಲ್ಲಿಗೂ (ಮಧುಬನ) ಸಹ ಮಕ್ಕಳು ರಿಫ್ರೆಷ್ ಆಗಲು ಬರುತ್ತಾರೆ. ಅರ್ಧಕಲ್ಪ
ಭಕ್ತಿ ಮಾಡಿ ಮಾಡಿ ದಣಿದಿದ್ದಾರೆ. ಪುರುಷೋತ್ತಮ ಸಂಗಮಯುಗದಲ್ಲಿ ಜ್ಞಾನ ಸಿಗುತ್ತದೆ. ಜ್ಞಾನ ಮತ್ತು
ಯೋಗದಿಂದ ನೀವು ರಿಫ್ರೆಷ್ ಆಗುತ್ತೀರಿ. ನಿಮಗೆ ಗೊತ್ತಿದೆ - ಈಗ ಈ ಹಳೆಯ ಪ್ರಪಂಚ ವಿನಾಶವಾಗಿ ಹೊಸ
ಪ್ರಪಂಚದ ಸ್ಥಾಪನೆಯಾಗುತ್ತದೆ, ಪ್ರಳಯವಂತೂ ಆಗುವುದಿಲ್ಲ. ಜನರು ಈ ಪ್ರಪಂಚವು ಒಮ್ಮೆಲೇ
ನಾಶವಾಗುವುದೆಂದು ತಿಳಿಯುತ್ತಾರೆ ಆದರೆ ಆಗುವುದಿಲ್ಲ. ಪರಿವರ್ತನೆಯಂತೂ ಆಗುತ್ತದೆ, ಇದು ನರಕ ಹಾಗೂ
ಹಳೆಯ ಪ್ರಪಂಚವಾಗಿದೆ. ಹೊಸಪ್ರಪಂಚ ಹಾಗೂ ಹಳೆಯ ಪ್ರಪಂಚವು ಏನಾಗಿದೆ ಎಂದು ನಿಮಗೆ ತಿಳಿದಿದೆ.
ನಂಬರ್ವಾರ್ ಪುರುಷಾರ್ಥದ ಅನುಸಾರ ನಿಮ್ಮ ಬುದ್ಧಿಯಲ್ಲಿ ವಿಸ್ತಾರವಾದ ಜ್ಞಾನವನ್ನು
ತಿಳಿದುಕೊಂಡಿದ್ದೀರಿ. ತಿಳಿಸಿಕೊಡಬೇಕಾದರೆ ಬಹಳ ನವೀನತೆ ಇರಬೇಕು. ಯಾರಿಗಾದರೂ ತಿಳಿಸಿಕೊಟ್ಟಾಗ
ಅದು ತಕ್ಷಣ ಬುದ್ಧಿಯಲ್ಲಿ ಕುಳಿತುಕೊಳ್ಳುವಂತೆ ಇರಬೇಕು. ಕೆಲವು ಮಕ್ಕಳಂತೂ ಕಚ್ಚಾ ಆಗಿದ್ದಾರೆ
ಆದ್ದರಿಂದ ನಡೆಯುತ್ತಾ-ನಡೆಯುತ್ತಾ ಬೀಳುತ್ತಾರೆ. ಭಗವಾನುವಾಚವೂ ಇದೆ, ಆಶ್ಚರ್ಯವಾಗಿ ಕೇಳುತ್ತಾ,
ಹೇಳುತ್ತಾ..... ಓಡಿಹೋಗುತ್ತಾರೆ. ಇದು ಮಾಯೆಯೊಂದಿಗಿನ ಯುದ್ಧವಾಗಿದೆ. ಮಾಯೆಯಿಂದ ಸತ್ತು ಈಶ್ವರನ
ಮಕ್ಕಳಾಗುತ್ತಾರೆ. ಮತ್ತೆ ಈಶ್ವರನಿಂದ ಸತ್ತು ಮಾಯೆಗೆ ವಶವಾಗಿಬಿಡುತ್ತಾರೆ. ದತ್ತು ಆಗಿದ್ದರೂ
ತಂದೆಗೆ ವಿಚ್ಛೇದನ ಕೊಟ್ಟುಬಿಡುತ್ತಾರೆ. ಮಾಯೆಯು ಶಕ್ತಿಶಾಲಿಯಾಗಿದೆ, ಬಹಳ ಮಕ್ಕಳಿಗೆ
ಬಿರುಗಾಳಿಯನ್ನು ತರುತ್ತದೆ. ಮಕ್ಕಳೂ ಸಹ ತಿಳಿದುಕೊಳ್ಳುತ್ತಾರೆ - ಇದು ಸೋಲು-ಗೆಲುವಾಗಿದೆ. ಈ
ಆಟವೇ ಸೋಲು-ಗೆಲುವಿನ ಆಟವಾಗಿದೆ. ಪಂಚವಿಕಾರಗಳಿಗೆ ಸೋತಿದ್ದೀರಿ. ನೀವು ಗೆಲ್ಲುವ ಪುರುಷಾರ್ಥ
ಮಾಡುತ್ತೀರಿ. ಕೊನೆಗೆ ವಿಜಯ ನಿಮ್ಮದೆ! ಯಾವಾಗ ತಂದೆಗೆ ಮಕ್ಕಳಾಗಿದ್ದೀರಿ ಅಂದಾಗ ಪಕ್ಕಾ
ಆಗಬೇಕಾಗಿದೆ. ಮಾಯೆಯು ಎಷ್ಟೊಂದು ಆಸೆ ತೋರಿಸುತ್ತದೆ ಎಂದು ನೀವು ನೋಡುತ್ತೀರಿ. ಕೆಲವೊಮ್ಮೆ
ಧ್ಯಾನ, ಸಾಕ್ಷಾತ್ಕಾರದಲ್ಲಿ ಹೋಗುವುದರಿಂದ ಆಟದಲ್ಲಿ ಸೋತು ಬಿಡುತ್ತಾರೆ. ಈಗ ನಾವು 84 ಜನ್ಮಗಳ
ಚಕ್ರವನ್ನು ಪೂರ್ಣ ಮಾಡಿದ್ದೇವೆಂದು ಮಕ್ಕಳ ಬುದ್ಧಿಯಲ್ಲಿದೆ. ದೇವತಾ, ಕ್ಷತ್ರಿಯ, ವೈಶ್ಯ,
ಶೂದ್ರರಾದೆವು, ಈಗ ಶೂದ್ರರಿಂದ ಬ್ರಾಹ್ಮಣರಾಗಿ ಮತ್ತೆ ದೇವತೆಯಾಗುತ್ತೇವೆ. ಇದನ್ನು ಮರೆಯಬಾರದು,
ಒಂದುವೇಳೆ ಮರೆತರೆ ನಿಮ್ಮ ಪುರುಷಾರ್ಥದ ತೀವ್ರತೆಯು ಕಡಿಮೆಯಾಗಿ ಪ್ರಪಂಚದ ಮಾತುಗಳಲ್ಲಿ ಬುದ್ಧಿಯು
ಹೊರಟುಹೋಗುತ್ತದೆ. ಮುರುಳಿ ಮುಂತಾದುವುಗಳ ನೆನಪೇ ಇರುವುದಿಲ್ಲ. ನೆನಪಿನ ಯಾತ್ರೆಯಲ್ಲಿ
ಕಷ್ಟವೆನಿಸುತ್ತದೆ. ಇದೂ ಸಹ ಆಶ್ಚರ್ಯವಾಗಿದೆ.
ಕೆಲವು ಮಕ್ಕಳು ಬ್ಯಾಡ್ಜ್
(ಪದಕ) ಹಾಕಿಕೊಳ್ಳಲು ನಾಚಿಕೆಪಡುತ್ತಾರೆ. ಇದೂ ಸಹ ದೇಹಾಭಿಮಾನವಾಗಿದೆ. ನಿಂದನೆಯನ್ನಂತೂ
ತಿನ್ನಬೇಕು. ಕೃಷ್ಣನು ಎಷ್ಟೊಂದು ನಿಂದನೆಗೊಳಗಾದನು. ಎಲ್ಲಕ್ಕಿಂತಲೂ ಹೆಚ್ಚು ನಿಂದನೆ ಶಿವತಂದೆಗೆ
ಮಾಡಿದ್ದಾರೆ ನಂತರ ಕೃಷ್ಣನಿಗೆ. ಆಮೇಲೆ ಜಾಸ್ತಿ ರಾಮನಿಗೆ ಅಂದಾಗ ನಂಬರ್ವಾರ್ ಇದೆಯಲ್ಲವೆ. ನಿಂದನೆ
ಮಾಡಿರುವ ಕಾರಣ ಭಾರತವು ಇಷ್ಟೊಂದು ನಿಂದನೆಗೊಳಗಾಯಿತು. ಆದರೆ ಮಕ್ಕಳು ಇದಕ್ಕೆ ನೀವು ಭಯಪಡಬಾರದು.
ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ನೆನಪು, ಪ್ರೀತಿ ಹಾಗೂ ಶುಭರಾತ್ರಿ.
ಧಾರಣೆಗಾಗಿ ಮುಖ್ಯಸಾರ-
1. ಬುದ್ಧಿಯಿಂದ
ಬೇಹದ್ದಿನ ಸನ್ಯಾಸ ಮಾಡಿ, ಆತ್ಮಿಕ ಯಾತ್ರೆಯಲ್ಲಿ ತತ್ಪರರಾಗಿರಬೇಕು. ನೆನಪಿನಲ್ಲಿರಲು ಅಭ್ಯಾಸ
ಮಾಡಿಕೊಳ್ಳಬೇಕು.
2. ತಂದೆಯನ್ನು ಶೋ ಮಾಡಲು
ಎಲ್ಲರಿಗೂ ತಂದೆಯ ಪರಿಚಯವನ್ನು ಕೊಡಬೇಕು. ಒಂದು ಸೆಕೆಂಡಿನಲ್ಲಿ ಜೀವನ ಮುಕ್ತಿಯ ಮಾರ್ಗವನ್ನು
ತೋರಿಸಬೇಕು.
ವರದಾನ:
ಮನಸಾ ಮತ್ತು
ವಾಚಾನ ಸಂಯೋಜನೆಯ ಮೂಲಕ ಜಾದೂ ಮಂತ್ರವನ್ನು ಮಾಡುವಂತಹ ನವೀನತೆ ಹಾಗೂ ವಿಶೇಷತೆ ಸಂಪನ್ನ ಭವ
ಮನಸಾ ಮತ್ತು ವಾಚಾ ಎರಡರ
ಮಿಲನವು (ಸಂಯೋಜನೆ) ಜಾದೂಮಂತ್ರದ ಕೆಲಸ ಮಾಡುತ್ತದೆ, ಇದರಿಂದ ಸಂಘಟನೆಯ ಚಿಕ್ಕ ಚಿಕ್ಕ ಮಾತುಗಳು ಈ
ರೀತಿ ಸಮಾಪ್ತಿ ಯಾಗಿಬಿಡುತ್ತದೆ ನೀವು ಯೋಚಿಸುವಿರಿ ಇದಂತು ಜಾದೂವಾಗಿಬಿಟ್ಟಿತು. ಮನಸಾ ಶುಭ ಭಾವನೆ
ಅಥವಾ ಶುಭ ಆಶೀರ್ವಾದಗಳನ್ನು ತೆಗೆದುಕೊಳ್ಳಲು ಬಿಜೀಯಾಗಿರಿ ಆಗ ಮನಸ್ಸಿನ ಏರುಪೇರು ಸಮಾಪ್ತಿ
ಆಗಿಬಿಡುತ್ತದೆ, ಪುರುಷಾರ್ಥದಿಂದ ಹೃದಯವಿಧೀರ್ಣರಾಗುವುದಿಲ್ಲ. ಸಂಘಟನೆಯಲ್ಲಿ ಎಂದು
ಗಾಬರಿಯಾಗುವುದಿಲ್ಲ. ಮನಸಾ - ವಾಚಾನ ಸಮ್ಮಿಳತ ಸೇವೆಯಿಂದ ವಿಹಂಗ ಮಾರ್ಗದ ಸೇವೆಯ ಪ್ರಭಾವವನ್ನು
ನೋಡಬಹುದು. ಈಗ ಸೇವೆಯಲ್ಲಿ ನವೀನತೆ ಹಾಗೂ ವಿಶೇಷತೆಯಿಂದ ಸಂಪನ್ನರಾಗಿ ಆಗ 9 ಲಕ್ಷ ಪ್ರಜೆಗಳು
ಸಹಜವಾಗಿ ತಯಾರಿಯಾಗುವರು.
ಸ್ಲೋಗನ್:
ಯಾವಾಗ
ಪೂರ್ಣ-ಪೂರ್ಣ ನಿರ್ವಿಕಾರಿಯಾಗುವಿರಿ ಆಗ ಬುದ್ಧಿಯು ಯಥಾರ್ಥ ನಿರ್ಣಯ ಕೊಡುವುದು.
ಮಾತೇಶ್ವರಿಜೀ ಯವರ ಮಧುರ
ಮಹಾವಾಕ್ಯ
“ಕಲಿಯುಗಿ ಸಾರವಿಲ್ಲದ
ಸಂಸಾರದಿಂದ ಸತ್ಯಯುಗಿ ಸಾರಯುಕ್ತ ಪ್ರಪಂಚಕ್ಕೆ ಕರೆದುಕೊಂಡು ಹೋಗುವುದು ಯಾರ ಕೆಲಸವಾಗಿದೆ”
ಈ ಕಲಿಯುಗಿ ಸಂಸಾರವನ್ನು
ಸಾರವಿಲ್ಲದ ಸಂಸಾರ ಎಂದು ಏಕೆ ಹೇಳುತ್ತಾರೆ? ಏಕೆಂದರೆ ಈ ಪ್ರಪಂಚದಲ್ಲಿ ಯಾವುದೇ ಸಾರ ಇಲ್ಲ ಅಂದರೆ
ಯಾವುದೇ ವಸ್ತುವಿನಲ್ಲಿ ಅಷ್ಟು ಶಕ್ತಿ ಇಲ್ಲಾ ಅರ್ಥಾತ್ ಸುಖ, ಶಾಂತಿ ಪವಿತ್ರತೆ ಇಲ್ಲ, ಯಾವುದು ಈ
ಸೃಷ್ಟಿಯಲ್ಲಿ ಯಾವುದೊ ಸಮಯದಲ್ಲಿ ಸುಖ,ಶಾಂತಿ ಪವಿತ್ರತೆ ಇತ್ತು. ಈಗ ಆ ಶಕ್ತಿ ಇಲ್ಲ ಏಕೆಂದರೆ ಈ
ಸೃಷ್ಟಿಯಲ್ಲಿ 5 ಭೂತಗಳ ಪ್ರವೇಶತೆಯಾಗಿದೆ ಆದ್ದರಿಂದಲೇ ಈ ಸೃಷ್ಟಿಗೆ ಭಯದ ಸಾಗರ ಅಥವಾ ಕರ್ಮ
ಬಂಧನದ ಸಾಗರ ಎಂದು ಹೇಳುತ್ತಾರೆ ಆದ್ದರಿಂದಲೇ ಮನುಷ್ಯ ದುಃಖಿಯಾಗಿ ಪರಮಾತ್ಮನನ್ನು
ಕರೆಯುತ್ತಿದ್ದಾರೆ, ಪರಮಾತ್ಮ ನಮ್ಮನ್ನು ಭವಸಾಗರದಿಂದ ಪಾರುಮಾಡಿ ಎಂದು ಇದರಿಂದ ಸಿದ್ದವಾಗುವುದು
ಖಂಡಿತವಾಗಿಯೂ ಯಾವುದೊ ಅಭಯ ಅರ್ಥಾತ್ ನಿರ್ಭಯತೆಯದೂ ಸಹ ಸಂಸಾರವಿದೆ ಅದರಲ್ಲಿ ಹೋಗಲು ಇಚ್ಛೆ
ಪಡುತ್ತಾರೆ ಆದ್ದರಿಂದ ಈ ಸಂಸಾರವನ್ನು ಪಾಪದ ಸಾಗರ ಎಂದು ಹೇಳುತ್ತಾರೆ, ಯಾವುದನ್ನು ಪಾರು ಮಾಡಿ
ಪುಣ್ಯಾತ್ಮಗಳಿರುವ ಪ್ರಪಂಚಕ್ಕೆ ಹೋಗಲು ಇಚ್ಛೆ ಪಡುತ್ತಾರೆ. ಅಂದರೆ ಪ್ರಪಂಚಗಳು ಎರಡಿವೆ, ಒಂದು
ಸತ್ಯಯುಗಿ ಸಾರಯುಕ್ತ ಪ್ರಪಂಚ ಇನ್ನೊಂದಾಗಿದೆ ಕಲಿಯುಗಿ ಸಾರವಿಲ್ಲದ ಪ್ರಪಂಚ. ಎರಡೂ ಪ್ರಪಂಚಗಳು ಈ
ಸೃಷ್ಟಿಯಲ್ಲೇ ಇರುತ್ತವೆ. ಒಳ್ಳೆಯದು. ಓಂ ಶಾಂತಿ.