22.01.23    Avyakt Bapdada     Kannada Murli    25.11.93     Om Shanti     Madhuban


ಸಹಜ ಸಿದ್ಧಿ ಪ್ರಾಪ್ತಿ ಮಾಡಿಕೊಳ್ಳುವುದಕ್ಕೆ ಜ್ಞಾನಸ್ವರೂಪ ಪ್ರಯೋಗಿ ಆತ್ಮಗಳಾಗಿ


ಇಂದು ಜ್ಞಾನದಾತಾ ವರದಾತಾ ತಮ್ಮ ಜ್ಞಾನಿ ಆತ್ಮಗಳನ್ನು, ಯೋಗಿ ಆತ್ಮ ಮಕ್ಕಳನ್ನು ನೋಡುತ್ತಿದ್ದಾರೆ. ಪ್ರತಿಯೊಂದು ಮಗು ಜ್ಞಾನಸ್ವರೂಪ ಹಾಗೂ ಯೋಗಯುಕ್ತರು ಎಲ್ಲಿಯವೆರೆಗೆ ಆಗಿದ್ದೀರಿ? ಜ್ಞಾನವನ್ನು ಕೇಳುವುದಕ್ಕೆ ಹಾಗೂ ತಿಳಿಸುವುದಕ್ಕೆ ನಿಮಿತ್ತರಾಗಿದ್ದೀರಾ ಅಥವಾ ಜ್ಞಾನ ಸ್ವರೂಪರಾಗಿದ್ದೀರಾ? ಸಮಯ ಪ್ರಮಾಣ ಯೋಗವನ್ನು ಜೊಡಿಸುವಂತಹವರಾಗಿದ್ದೀರಾ ಅಥವಾ ಸದಾ ಯೋಗಿ ಜೀವನ ಅರ್ಥಾತ್ ಪ್ರತಿ ಕರ್ಮದಲ್ಲಿ ಯೋಗಯುಕ್ತ, ಯುಕ್ತಿಯುಕ್ತ ಸ್ವತಃ ಅಥವಾ ಸದಾ ಕಾಲದ ಯೋಗಿಗಳಾಗಿದ್ದೀರಾ? ಯಾವುದೇ ಬ್ರಾಹ್ಮಣ ಆತ್ಮನನ್ನು ಯಾರಾದರೂ ಕೇಳುತ್ತಾರೆ ಜ್ಞಾನಿ ಹಾಗೂ ಯೋಗಿಗಳಾಗಿದ್ದೀರೆಂದರೆ ಏನು ಹೇಳುತ್ತೀರಿ? ಎಲ್ಲರೂ ಜ್ಞಾನಿ ಹಾಗೂ ಯೋಗಿಗಳಾಗಿದ್ದೀರಲ್ಲವೇ. ಜ್ಞಾನಸ್ವರೂಪರಾಗುವುದು ಅರ್ಥಾತ್ ಪ್ರತಿ ಸಂಕಲ್ಪ ಮಾತು ಹಾಗೂ ಕರ್ಮ ಸಮರ್ಥವಾಗಿರುತ್ತದೆ. ವ್ಯರ್ಥ ಸಮಾಪ್ತಿಯಾಗಿರುತ್ತದೆ ಏಕೆಂದರೆ ಎಲ್ಲಿ ಸಮರ್ಥವಿದೆ ಅಲ್ಲಿ ವ್ಯರ್ಥವಿರುವುದಕ್ಕೆ ಸಾಧ್ಯವಿಲ್ಲ. ಹೇಗೆ ಪ್ರಕಾಶ ಹಾಗೂ ಅಂಧಕಾರ ಜೊತೆ ಜೊತೆಯಲ್ಲಿ ಇರುವುದಿಲ್ಲ. ಜ್ಞಾನ ಪ್ರಕಾಶವಾಗಿದೆ, ವ್ಯರ್ಥ ಅಂಧಕಾರವಾಗಿದೆ. ವರ್ತಮಾನ ಸಮಯ ವ್ಯರ್ಥವನ್ನು ಸಮಾಪ್ತಿ ಮಾಡುವುದರ ಕಡೆ ಗಮನವಿಡಬೇಕಾಗಿದೆ. ಎಲ್ಲದಕ್ಕಿಂತ ಮುಖ್ಯ ಮಾತು ಸಂಕಲ್ಪ ರೂಪಿ ಬೀಜವನ್ನು ಸಮರ್ಥವನ್ನಾಗಿ ಮಾಡಬೇಕಾಗಿದೆ. ಒಂದುವೇಳೆ ಸಂಕಲ್ಪ ರೂಪಿ ಬೀಜ ಸಮರ್ಥವಾಗಿದ್ದರೆ ವಾಣಿ, ಕರ್ಮ, ಸಂಬಂಧ ಸಹಜವಾಗಿ ಸಮರ್ಥವಾಗಿಯೇ ಬಿಡುತ್ತದೆ ಅಂದಾಗ ಜ್ಞಾನ ಸ್ವರೂಪ ಅರ್ಥಾತ್ ಪ್ರತಿ ಸಮಯ, ಪ್ರತಿ ಸಂಕಲ್ಪ, ಪ್ರತಿ ಸೆಕೆಂಡ್ ಸಮರ್ಥವಾಗಿದೆ.

ಯೋಗಿ ಆತ್ಮಗಳಂತು ಎಲ್ಲರೂ ಆಗಿದ್ದೀರಿ ಆದರೆ ಪ್ರತಿ ಸಂಕಲ್ಪ ಸ್ವತಃ ಯೋಗ ಯುಕ್ತ ಯುಕ್ತಿಯುಕ್ತವಾಗಿರಬೇಕು, ಇದರಲ್ಲಿ ನಂಬರ್ವಾರ ಇದೆ. ಏಕೆ ನಂಬರ್ ಆದಿರಿ? ಯಾವಾಗ ವಿಧಾತಾ ಒಬ್ಬರಾಗಿದ್ದಾರೆ, ವಿಧಿ ಒಂದಾಗಿದೆ, ಆದರೂ ಸಹ ನಂಬರ್ ಏಕೆ? ಬಾಪ್ದಾದಾರವರು ನೋಡಿದರು ಯೋಗಿಗಳಂತು ಆಗಿದ್ದೀರಿ ಆದರೆ ಪ್ರಯೋಗಿ ಕಡಿಮೆಯಾಗುತ್ತೀರಿ. ಯೋಗವನ್ನು ಮಾಡುವುದು ಹಾಗೂ ಮಾಡಿಸುವುದು ಎರಡರಲ್ಲಿ ಎಲ್ಲರು ಬುದ್ಧಿವಂತರಾಗಿದ್ದೀರಿ. ಇಂತಹವರು ಯಾರಾದರು ಇದ್ದೀರಾ ಯಾರು ಯೋಗ ಮಾಡಿಸುವುದಕ್ಕೆ ಬರುವುದಿಲ್ಲ. ಹೇಗೆ ಯೋಗ ಮಾಡಿ ಮಾಡಿಸುವುದರಲ್ಲಿ ಯೋಗ್ಯರಾಗಿದ್ದೀರೆ ಇದೆ ರೀತಿ ಪ್ರಯೋಗ ಮಾಡುವುದರಲ್ಲಿ ಯೋಗ್ಯರಾಗಬೇಕು ಹಾಗೂ ಮಾಡಿಸಬೇಕು ಇದಕ್ಕೆ ಹೇಳಲಾಗುತ್ತದೆ ಯೋಗಿ ಜೀವನ ಅರ್ಥಾತ್ ಯೋಗಯುಕ್ತ ಜೀವನ ಈಗ ಪ್ರಯೋಗಿ ಜೀವನದ ಅವಶ್ಯಕತೆಯಿದೆ. ಯಾರು ಯೋಗದ ಪರಿಭಾಷೆಯನ್ನು ತಿಳಿದಿದ್ದೀರಿ, ವರ್ಣನೆಯನ್ನು ಮಾಡುತ್ತೀರಿ ಅಥವಾ ಎಲ್ಲಾ ವಿಶೇಷತೆಗಳು ಪ್ರಯೋಗದಲ್ಲಿ ಬರುತ್ತದೆಯೇ? ಮೊಟ್ಟಮೊದಲು ತಮ್ಮನ್ನು ತಾವು ಚೆಕ್ ಮಾಡಿಕೊಳ್ಳಬೇಕು ತಮ್ಮ ಸಂಸ್ಕಾರದ ಪರಿವರ್ತನೆಯಲ್ಲಿ ಎಲ್ಲಿಯವರೆಗೆ ಯೋಗ್ಯರಾಗಿದೀರೆ. ಏಕೆಂದರೆ ತಮ್ಮೆಲ್ಲರ ಶ್ರೇಷ್ಠ ಸಂಸ್ಕಾರವೇ ಶ್ರೇಷ್ಠ ಸಂಸಾರದ ರಚನೆಯ ಬುನಾದಿಯಾಗಿದೆ. ಒಂದುವೇಳೆ ತಳಪಾಯ ಶಕ್ತಿಶಾಲಿಯಾಗಿದ್ದರೆ ಅನ್ಯ ಎಲ್ಲಾ ಮಾತುಗಳು ಸ್ವತಃವಾಗಿ ಶಕ್ತಿಶಾಲಿಯಾಗಿಬಿಟ್ಟಿರುತ್ತದೆ. ಇಲ್ಲಿ ನೋಡಿ ಸಂಸ್ಕಾರವು ಸಮಯದಲ್ಲಿ ಎಲ್ಲಿಯು ಮೋಸ ಮಾಡುವುದಿಲ್ಲವೇ? ಶ್ರೇಷ್ಠ ಸಂಸ್ಕಾರವನ್ನು ಪರಿವರ್ತನೆ ಮಾಡುವಂತಹರು ಎಂತಹದ್ದೇ ವ್ಯಕ್ತಿಯಿರಬಹುದು, ವಸ್ತುವಿರಬಹುದು, ಪರಿಸ್ಥಿತಿಯಿರಬಹುದು, ಯೋಗದ ಪ್ರಯೋಗ ಮಾಡುವಂತಹ ಆತ್ಮಗಳು ಶ್ರೇಷ್ಠತೆಯಿಂದ ಸಾಧಾರಣತೆಯಲ್ಲಿ ಅಲುಗಾಡಿಸಲು ಸಾಧ್ಯವಿಲ್ಲ. ಈ ರೀತಿಯಲ್ಲ ಮಾತೇ ಈ ರೀತಿಯಿತ್ತು, ವ್ಯಕ್ತಿ ಈ ರೀತಿಯಿದ್ದರು, ವಾಯುಮಂಡಲವೇ ಈ ರೀತಿಯಿತ್ತು ಆ ಕಾರಣ ಶ್ರೇಷ್ಠ ಸಂಸ್ಕಾರವನ್ನು ಪರಿವರ್ತನೆ ಮಾಡಿ ಸಾಧಾರಣತೆ ಅಥವಾ ವ್ಯರ್ಥವನ್ನು ಮಾಡಿಬಿಟ್ಟಿದ್ದೀರಿ, ಹಾಗಾದರೆ ಇವರನ್ನು ಪ್ರಯೋಗಿ ಆತ್ಮವೆಂದು ಹೇಳಲಾಗುತ್ತದೆಯೇ? ಒಂದುವೇಳೆ ಸಮಯದಲ್ಲಿ ಯೋಗದ ಶಕ್ತಿಗಳ ಪ್ರಯೋಗವಾಗುವುದಿಲ್ಲವೆಂದರೆ ಇದಕ್ಕೆ ಏನೆಂದು ಹೇಳಲಾಗುತ್ತದೆ? ಮೊದಲು ಈ ತಳಪಾಯವನ್ನು ನೋಡಿ ಎಲ್ಲಿಯವರೆಗೆ ಸಮಯದಲ್ಲಿ ಪ್ರಯೋಗಿಗಳಾಗಿದ್ದೇವೆಂದು? ಒಂದುವೇಳೆ ಸ್ವಯಂನ ಸಂಸ್ಕಾರವು ಪರಿವರ್ತನೆಯಾಗಿಲ್ಲವೆಂದರೆ ಹೊಸ ಸಂಸಾರದ ಪರಿವರ್ತಕರು ಹೇಗೆ ಆಗುತ್ತೀರಿ?

ಪ್ರಯೋಗಿ ಆತ್ಮಗಳ ಮೊದಲ ಚಿಹ್ನೆಯಾಗಿದೆ - ಸಂಸ್ಕಾರಗಳ ಮೇಲೆ ಸದಾ ಪ್ರಯೋಗದಲ್ಲಿ ವಿಜಯಿ. ಎರಡನೇ ಚಿಹ್ನೆಯಾಗಿದೆ ಪ್ರಕೃತಿಯ ಮುಖಾಂತರ ಬರುವಂತಹ ಪರಿಸ್ಥಿತಿಗಳ ಮೇಲೆ ಯೋಗದ ಪ್ರಯೋಗದ ಮುಖಾಂತರ ವಿಜಯಿ. ಸಮಯ ಪ್ರತಿ ಸಮಯ ಪ್ರಕೃತಿಯ ಏರುಪೇರು ಸಹ ಯೋಗಿ ಆತ್ಮರನ್ನು ತಮ್ಮ ಕಡೆ ಆಕರ್ಷಣೆ ಮಾಡುತ್ತವೆ. ಇಂತಹ ಸಮಯದಲ್ಲಿ ಯೋಗದ ವಿಧಿಪ್ರಯೋಗದಲ್ಲಿ ಬರುತ್ತದೆಯೇ? ಕೆಲವೊಮ್ಮೆ ಯೋಗಿ ಪುರುಷರಿಗೆ ಅಥವಾ ಪುರುಷೋತ್ತಮ ಆತ್ಮರಿಗೆ ಪ್ರಕೃತಿ ಪ್ರಭಾವಿತರನ್ನಾಗಿ ಮಾಡುವುದಿಲ್ಲವೇ? ಏಕೆಂದರೆ ಬ್ರಾಹ್ಮಣ ಆತ್ಮರು ಪುರುಷೋತ್ತಮ ಆತ್ಮಗಳಾಗಿದ್ದೀರಿ. ಪ್ರಕೃತಿ ಪುರುಷೋತ್ತಮ ಆತ್ಮಗಳ ದಾಸಿಯಾಗಿದೆ. ಮಾಲೀಕ, ದಾಸಿಯ ಪ್ರಭಾವದಲ್ಲಿ ಬಂದುಬಿಟ್ಟರೆ ಇದಕ್ಕೆ ಏನೆಂದು ಹೇಳಲಾಗುತ್ತದೆ? ಇತ್ತೀಚೆಗೆ ಪುರುಷೋತ್ತಮ ಆತ್ಮರಿಗೆ ಪ್ರಕೃತಿಯ ಸಾಧನೆಗಳು ಹಾಗೂ ಸಂರಕ್ಷಣೆಯ(ಸಾಲವೇಷನ) ರೂಪದಲ್ಲಿ ಪ್ರಭಾವಿತರನ್ನಾಗಿ ಮಾಡುತ್ತದೆ. ಸಾಧನೆ ಅಥವಾ ಸಾಲವೇಷನಿನ ಆಧಾರದ ಮೇಲೆ ಯೋಗಿ ಜೀವನವಾಗಿದೆ. ಸಾಧನೆ ಅಥವಾ ಸಾಲವೇಷನ ಕಡಿಮೆಯಾದರೆ ಯೋಗಯುಕ್ತ ಕಡಿಮೆ ಇದಕ್ಕೆ ಹೇಳಲಾಗುತ್ತದೆ ಪ್ರಭಾವಿತರಾಗುವುದೆಂದು. ಯೋಗಿ ಅಥವಾ ಪ್ರಯೋಗಿ ಆತ್ಮನ ಸಾಧನೆಯ ಮುಂದೆ ಸಾಧನೆಗಳು ಸ್ವತಃವಾಗಿ ಸ್ವಯಂ ಬರುತ್ತವೆ. ಸಾಧನೆ ಸಾಧನಗಳ ಆಧಾರವಿರಬಾರದು ಆದರೆ ಸಾಧನೆ ಸಾಧನಗಳನ್ನು ಸ್ವತಃವಾಗಿ ಆಧಾರ ಮಾಡಿಕೊಳ್ಳುತ್ತದೆ, ಇದಕ್ಕೆ ಹೇಳಲಾಗುತ್ತದೆ ಪ್ರಯೋಗಿ ಆತ್ಮ. ಹಾಗಾದರೆ ಚೆಕ್ ಮಾಡಿಕೊಳ್ಳಿ ಸಂಸ್ಕ್ಕಾರ ಪರಿವರ್ತನೆ ವಿಜಯಿ ಹಾಗೂ ಪ್ರಕೃತಿಯ ಪ್ರಭಾವದ ಮೇಲೆ ವಿಜಯಿ ಎಲ್ಲಿಯವರೆಗೆ ಆಗಿದ್ದೀರಿ? ಮೂರನೇಯ ಚಿಹ್ನೆಯಾಗಿದೆ ವಿಕಾರಗಳ ಮೇಲೆ ವಿಜಯಿ. ಯೋಗಿ ಅಥವಾ ಪ್ರಯೋಗಿ ಆತ್ಮಗಳ ಮುಂದೆ ಈ ಐದು ವಿಕಾರ, ಯಾವುದು ಅನ್ಯರಿಗೆ ವಿಷಭರಿತ ಸರ್ಪಗಳಾಗಿವೆ ಆದರೆ ತಾವು ಯೋಗಿ - ಪ್ರಯೋಗಿ ಆತ್ಮಗಳಿಗಾಗಿ ಈ ಸರ್ಪ ಕೊರಳಿನ ಮಾಲೆಯಾಗಿ ಬಿಡುತ್ತದೆ. ತಾವು ಬ್ರಾಹ್ಮಣರ ಹಾಗೂ ಬ್ರಹ್ಮಾ ತಂದೆಯ ಅಶರೀರಿ ತಪಸ್ವಿ ಶಂಕರನ ಸ್ವರೂಪದ ನೆನಪಾರ್ಥ ಈಗಲು ಸಹ ಭಕ್ತರು ಪೂಜೆ ಹಾಗೂ ಗಾಯನ ಮಾಡುತ್ತಾರೆ. ಎರಡನೇ ನೆನಪಾರ್ಥ ಈ ಸರ್ಪ ತಮ್ಮ ಅಧೀನ ಈ ರೀತಿಯಾಗಿ ಬಿಡುತ್ತದೆ ತಮ್ಮ ಖುಷಿಯಿಂದ ನರ್ತಿಸುವಂತಹ ಸ್ಥಿತಿ(ಸ್ಟೇಜ್) ಆಗಿ ಬಿಡುತ್ತದೆ. ಯಾವಾಗ ವಿಜಯಿಗಳಾಗುತ್ತೀರಾ ಆಗ ಯಾವ ಅನುಭವಗಳನ್ನು ಮಾಡುತ್ತೀರಾ? ಯಾವ ಸ್ಥಿತಿ ಇರುತ್ತದೆ? ಖುಷಿಯಲ್ಲಿ ನರ್ತನ ಮಾಡುತ್ತೀರಲ್ಲವೇ. ಈ ಸ್ಥಿತಿಯ ಸ್ಟೇಜ್ನ್ನು ಯಾವ ರೂಪದಲ್ಲಿ ತೋರಿಸಲಾಗಿದೆ. ಸ್ಥಿತಿಯನ್ನು ಸಹ ಸ್ಟೇಜ್ ಎಂದು ಹೇಳಲಾಗುತ್ತದೆ. ಇದರಂತೆ ವಿಕಾರಗಳ ಮೇಲೆ ವಿಜಯಿಗಳಾಗಿದ್ದೀರಿ ಇದಕ್ಕೆ ಹೇಳಲಾಗುತ್ತದೆ ಪ್ರಯೋಗಿ. ಇದನ್ನು ಚೆಕ್ ಮಾಡಿಕೊಳ್ಳಿ ಎಲ್ಲಿಯವರೆಗೆ ಪ್ರಯೋಗಿ ಆಗಿದ್ದೇನೆ. ಒಂದುವೇಳೆ ಯೋಗದ ಸಮಯದಲ್ಲಿ ಪ್ರಯೋಗವಿಲ್ಲ, ಯೋಗದ ವಿಧಿಯಿಂದ ಪ್ರಯೋಗವಿಲ್ಲ, ಯೋಗದ ವಿಧಿಯಿಂದ ಸಮಯದಲ್ಲಿ ಸಿದ್ಧಿಯಿಲ್ಲವೆಂದರೆ ಯರ್ಥಾತ್ ವಿಧಿ ಎಂದು ಹೇಳಲಾಗುತ್ತದೆಯೇ? ಸಮಯ ತನ್ನ ತೀವ್ರ ಗತಿಯನ್ನು ಸಮಯದ ಪ್ರತಿ ಸಮಯ ತೋರಿಸುತ್ತಿದೆ. ಅನೇಕತೆ, ಅಧರ್ಮ, ತಮೋಪ್ರಧಾನತೆ ಪ್ರತಿಯೊಂದು ಕ್ಷೇತ್ರದಲ್ಲಿ ತೀವ್ರಗತಿಯಿಂದ ವೃದ್ಧಿಯಾಗುತ್ತ ಹೋಗುತ್ತಿದೆ. ಇಂತಹ ಸಮಯದಲ್ಲಿ ತಮ್ಮ ಯೋಗದ ವಿಧಿಯ ವೃದ್ಧಿ ಅಥವಾ ವಿಧಿಯ ಸಿದ್ಧಿಯಲ್ಲಿ ವೃದ್ಧಿ ತೀವ್ರಗತಿಯಿಂದ ಆಗುವ ಅವಶ್ಯಕತೆಯಿದೆ. ನಂಬರ್ ಮುಂದೆವರೆಯುವಂತಹ ಆಧಾರವಾಗಿದೆ ಪ್ರಯೋಗಿಯಾಗುವಂತಹ ಸಹಜ ವಿಧಿ. ಬಾಪ್ದಾದಾರವರು ಏನು ನೋಡಿದರೆಂದರೆ ಸಮಯದಲ್ಲಿ ಪ್ರಯೋಗ ಮಾಡುವುದರಲ್ಲಿ ತೀವ್ರ ಗತಿಯ ಬದಲಾಗಿ ಸಾಧಾರಣ ಗತಿಯಾಗಿದೆ. ಈಗ ಇದನ್ನು ಜಾಸ್ತಿ ಮಾಡಿಕೊಳ್ಳಿ. ಹಾಗಾದರೆ ಏನಾಗುವುದು? ಸಿದ್ಧಿ ಸ್ವರೂಪ ಅನುಭವ ಮಾಡುತ್ತಾ ಹೋಗುತ್ತೀರಾ. ತಮ್ಮ ಜಡ ಚಿತ್ರಗಳ ಮುಖಾಂತರ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಅನುಭವವನ್ನು ಮಾಡುತ್ತಿರುತ್ತಾರೆ. ಚೈತನ್ಯದಲ್ಲಿ ಸಿದ್ಧಿ ಸ್ವರೂಪರಾಗಿದ್ದೀರಿ ಆಗ ನೆನಪಾರ್ಥವೆಂಬುದು ನಡೆಯುತ್ತಾ ಬಂದಿದೆ. ರಿದ್ಧಿ-ಸಿದ್ಧಿಯವರಂತು ಅಲ್ಲ, ವಿಧಿಯಿಂದ ಸಿದ್ಧಿ. ತಿಳಿಯಿತೇ ಏನು ಮಾಡಬೇಕೆಂದು? ಎಲ್ಲವೂ ಇದೆ ಆದರೆ ಸಮಯದಲ್ಲಿ ಪ್ರಯೋಗ ಮಾಡುವುದು ಹಾಗೂ ಪ್ರಯೋಗ ಸಫಲ ಮಾಡುವುದು ಇದಕ್ಕೆ ಹೇಳಲಾಗುತ್ತದೆ ಜ್ಞಾನಸ್ವರೂಪ ಆತ್ಮ. ಇಂತಹ ಜ್ಞಾನ ಸ್ವರೂಪ ಆತ್ಮಗಳೇ ಅತೀ ಸಮೀಪ ಹಾಗೂ ಅತೀ ಪ್ರಿಯರಾಗಿದ್ದಾರೆ. ಒಳ್ಳೆಯದು.

ಸದಾ ಯೋಗದ ವಿಧಿಯ ಮುಖಾಂತರ ಶ್ರೇಷ್ಠ ಸಿದ್ಧಿಯನ್ನು ಅನುಭವ ಮಾಡುವಂತಹ, ಸದಾ ಸಾಧಾರಣ ಸಂಸ್ಕಾರವನ್ನು ಶ್ರೇಷ್ಠ ಸಂಸ್ಕಾರದಲ್ಲಿ ಪರಿವರ್ತನೆ ಮಾಡುವಂತಹ, ಸದಾ ಪ್ರಕೃತಿಜೀತ್, ವಿಕಾರಗಳ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ವಿಜಯಿ ಆತ್ಮಗಳಿಗೆ, ಸದಾ ಪ್ರಯೋಗದ ಗತಿಯನ್ನು ತೀವ್ರ ಅನುಭವ ಮಾಡುವಂತಹ ಜ್ಞಾನ ಸ್ವರೂಪ, ಯೋಗಯುಕ್ತ ಯೋಗಿ ಆತ್ಮಗಳಿಗೆ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ.

(24 ನವಂಬರ್ನಲ್ಲಿ ಇಬ್ಬರು ಕುಮಾರಿಯರ ಸಮರ್ಪಣೆ ಸಮಾರೋಹದ ನಂತರ ರಾತ್ರಿ ಹತ್ತು ಗಂಟೆಗೆ ಆಲ್ ರೌಂಡರ್ ದಾದಿಜೀಯವರು ತಮ್ಮ ಹಳೆಯ ಶರೀರವನ್ನು ಬಿಟ್ಟೂ ಬಾಪ್ದಾದಾರವರ ಮಡಿಲನ್ನು ಸೇರಿದರು, 25ನೇ ತಾರೀಖು ಮಧ್ಯಾಹ್ನದಲ್ಲಿ ಅವರ ಅಂತಿಮ ಸಂಸ್ಕಾರವನ್ನು ಮಾಡಲಾಯಿತು, ಸಾಯಂಕಾಲ ಮುರುಳಿಯ ನಂತರ ದಾದಿಜೀಯವರೊಂದಿಗೆ ಮಿಲನ ಮಾಡುವ ಸಮಯ ಬಾಪ್ದಾದಾರವರು ಯಾವ ಮಹಾವಾಕ್ಯಗಳನ್ನು ಉಚ್ಚರಣೆ ಮಾಡಿದರು ಅದು ಈ ಪ್ರಕಾರವಾಗಿದೆ)

ಆಟದಲ್ಲಿ ಭಿನ್ನ-ಭಿನ್ನ ಆಟವನ್ನು ನೋಡುತ್ತಿರುತ್ತಿರಲ್ಲವೇ. ಸಾಕ್ಷಿಯಾಗಿ ಆಟವನ್ನು ನೋಡುವುದರಲ್ಲಿ ಮಜಾ ಬರುತ್ತದೆಯಲ್ಲವೇ. ಭಲೇ ಯಾವುದೇ ಉತ್ಸವವಿರಬಹುದು, ಭಲೇ ಯಾರೇ ಶರೀರ ಬಿಟ್ಟುಬಿಡಲಿ, ಎರಡು ಸಹ ಏನೆನಿಸುತ್ತದೆ? ಆಟದಲ್ಲಿ ಆಟವೆನಿಸುತ್ತದೆ. ಹಾಗೂ ಇದೇ ರೀತಿ ಅನಿಸುತ್ತದೆಯಲ್ಲವೇ. ಹೇಗೆ ಆಟವಿರುತ್ತದೆ ಹಾಗೂ ಸಮಯದ ಪ್ರಮಾಣ ಸಮಾಪ್ತಿಯಾಗಿ ಬಿಡುತ್ತದೆ. ಇದರಂತೆ ಏನಾಯಿತು ಸಹಜ ಸಮಾಪ್ತಿಯಾಯಿತೆಂದರೆ ಆಟವೇ ಅನಿಸುತ್ತದೆ. ಪ್ರತಿ ಆತ್ಮದ ತಮ್ಮ-ತಮ್ಮದೇ ಪಾತ್ರವಿರುತ್ತದೆ. ಸರ್ವ ಆತ್ಮಗಳ ಪ್ರತಿ ಶುಭ ಭಾವನೆ ಅನೇಕ ಆತ್ಮಗಳ ಶುಭಭಾವನೆ ಪ್ರಾಪ್ತಿಯಾಗುವುದು ಸಹ ಪ್ರತಿ ಆತ್ಮನ ಭಾಗ್ಯದ ಸಿದ್ಧಿಯಾಗಿದೆ ಹಾಗಾದರೆ ಏನಾಯಿತು, ಏನು ನೋಡಿದ್ದೀರಾ? ಆಟವನ್ನು ನೋಡಿದ್ದೀರಾ ಅಥವಾ ಮೃತ್ಯುವನ್ನು ನೋಡಿದ್ದೀರಾ? ಒಂದು ಕಡೆ ಅದೇ ಅಲೌಕಿಕ ಸ್ವಯಂ ವರವನ್ನು ನೋಡಿದ್ದೀರಿ ಮತ್ತು ಇನ್ನೊಂದು ಕಡೆ ಶರೀರ ಬದಲಾವಣೆಯ ಆಟವನ್ನು ನೋಡಿದ್ದೀರಿ. ಆದರೆ ಎರಡು ಏನೆನಿಸುತು? ಆಟದಲ್ಲಿ ಆಟ. ವ್ಯತ್ಯಾಸವಾಗುತ್ತದೆಯಲ್ಲವೇ? ಸ್ಥಿತಿಯಲ್ಲಿ ವ್ಯತ್ಯಾಸವಾಗುತ್ತದೆಯೇ ಅಲೌಕಿಕ ಸ್ವಯಂವರವನ್ನು ನೋಡುವುದರಲ್ಲಿ ಶರೀರ ಬದಲಾವಣೆಯಾಗುವುದನ್ನು ನೋಡುವುದರಲ್ಲಿ ವ್ಯತ್ಯಾಸ ಕಂಡುಬಂದಿತೇ? ಸ್ವಲ್ಪ ಅಲೆ ಬದಲಾವಣೆ ಕಂಡುಬಂದಿತೇ ಅಥವಾ ಇಲ್ಲವೇ? ಸಾಕ್ಷಿಯಾಗಿ ಆಟವನ್ನು ನೋಡಿದಾಗ ಅಥವಾ ತಮ್ಮ ವಿಧಿಯಿಂದ ಹಾಗೂ ಅವರು ತಮ್ಮ ವಿಧಿಯಿಂದ ಸಹಜ ನಷ್ಟಮೋಹಿಗಳಾಗುವುದು ಇದು ಬಹಳ ಕಾಲದ ಯೋಗದ ವಿಧಿಯ ಸಿದ್ಧಿಯಾಗಿದೆ. ನಷ್ಟಮೋಹ, ಸಹಜ ಮೃತ್ಯುವಿನ ಆಟವನ್ನು ನೋಡಿದ್ದೀರಿ. ಈ ಆಟದ ಯಾವ ರಹಸ್ಯವನ್ನು ನೋಡಿದ್ದೀರಿ? ದೇಹದ ಸ್ಮೃತಿಯಿಂದ ಉಪರಾಮ. ಭಲೇ ವ್ಯಾಧಿಯ ಮುಖಾಂತರ, ಭಲೇ ವಿಧಿಯ ಮುಖಾಂತರ ಹಾಗೂ ಯಾವುದೇ ಆಕರ್ಷಣೆ ಅಂತಿಮ ಸಮಯದಲ್ಲಿ ಆಕರ್ಷಿಸಬಾರದು. ಇದಕ್ಕೆ ಹೇಳಲಾಗುತ್ತದೆ ಸಹಜವಾಗಿ ಶರೀರವನ್ನು ಬದಲಾವಣೆ ಮಾಡುವುದೆಂದು. ಹಾಗಾದರೆ ಏನು ಮಾಡಬೇಕು? ನಷ್ಟಮೋಹ, ಸೆಂಟರ್ ಸಹ ನೆನಪಿಗೆ ಬರಬಾರದು. (ಟೀಚರ್ಸ್ನ್ನು ನೋಡುತ್ತ) ಈ ರೀತಿಯಲ್ಲ ಯಾವುದೇ ವಿದ್ಯಾರ್ಥಿಗಳು ನೆನಪಿಗೆ ಬಂದರೆ, ಯಾವುದೇ ಸೆಂಟರ್ನ ವಸ್ತು ನೆನಪಿಗೆ ಬಂದರೆ, ಯಾವುದೇ ದೂರ ಮಾಡಿರುವಂತಹದ್ದು ನೆನಪಿಗೆ ಬಂದರೆ.... ಎಲ್ಲರಿಗಿಂತ ಭಿನ್ನ ಹಾಗೂ ತಂದೆಗೆ ಪ್ರಿಯ. ಮೊದಲಿನಿಂದಲೇ ದೂರವಾಗಿಬಿಟ್ಟಿದ್ದೀರಲ್ಲವೇ. ಯಾವುದೇ ಆಶ್ರಯವನ್ನು ಮಾಡಿಕೊಳ್ಳಬಾರದು. ಕೇವಲ ಗುರಿ ಮಾತ್ರ ಹಾಗೂ ಯಾವುದೇ ಸೆಳೆತವಿರಬಾರದು. ಒಳ್ಳೆಯದು.

ನಿರ್ಮಲಶಾಂತಿ ದಾದಾಜೀಯವರೊಂದಿಗೆ ಮಿಲನ: - ಸಂಘಟನೆ ಇಷ್ಟವಾಗುತ್ತದೆಯಲ್ಲವೇ? ಸಂಘಟನೆಯ ವಿಶೇಷ ಶೋಭೆಯಾಗಿದ್ದೀರಿ. ಎಲ್ಲರ ದೃಷ್ಟಿ ಎಷ್ಟು ಪ್ರೀತಿಯಿಂದ ತಮ್ಮೆಲ್ಲರ ಕಡೆಗೆ ಹೋಗುತ್ತದೆ. ಎಲ್ಲಿಯವರೆಗೆ ಎಷ್ಟು ಸೇವೆ ಇದೆ ಅಷ್ಟೇ ಸೇವೆ ಶರೀರದ ಮುಖಾಂತರ ಆಗಲೇ ಬೇಕಾಗಿದೆ. ಹೇಗಾದರೂ ಮಾಡಿ ಶರೀರ ನಡೆಯುತ್ತಲೇ ಇದೆ ಶರೀರವನ್ನು ನಡೆಸುವಂತಹ ವಿಧಿ ಬಂದಿತಲ್ಲವೇ. ಒಳ್ಳೆಯ ರೀತಿಯಲ್ಲಿ ನಡೆಯುತ್ತಿದೆ ಏಕೆಂದರೆ ತಂದೆ ಹಾಗೂ ಎಲ್ಲರ ಆರ್ಶೀವಾದ ಇದೆ. ಖುಷಿಯಾಗಿರಬೇಕು ಹಾಗೂ ಖುಷಿಯನ್ನು ಹಂಚಬೇಕು ಮತ್ತಿನೇನು ಕೆಲಸವಿದೆ. ಎಲ್ಲರು ನೋಡಿ ನೋಡಿ ಎಷ್ಟೊಂದು ಖುಶಿಯಾಗುತ್ತರೆಂದರೆ ಖುಷಿಯನ್ನು ಹಂಚುತ್ತಿದ್ದೀರಲ್ಲವೇ. ತಿನ್ನುತ್ತಿದ್ದೀರಿ, ಹಂಚುತ್ತಿದ್ದೀರಿ. ತಾವೆಲ್ಲರೂ ಒಂದೊಂದು ದರ್ಶನಿಯ ಮೂರ್ತಿಗಳಾಗಿದ್ದೀರಿ. ಎಲ್ಲರ ದೃಷ್ಟಿ ನಿಮಿತ್ತ ಆತ್ಮರ ಕಡೆಗೆ ಹೋಗುತ್ತದೆ ಎಂದರೆ ದರ್ಶನಿಯ ಮೂರ್ತಿಗಳಾಗಿದ್ದೀರಲ್ಲವೇ. ಒಳ್ಳೆಯದು.

ಅವ್ಯಕ್ತ ಬಾಪ್ದಾದಾರವರ ಪರ್ಸನಲ್ ಮಿಲನ

1. ಬ್ರಾಹ್ಮಣ ಜೀವನದ ಆಧಾರ - ನೆನಪು ಹಾಗೂ ಸೇವೆ:- ಡ್ರಾಮಾ ಅನುಸಾರ ಬ್ರಾಹ್ಮಣ ಜೀವನದಲ್ಲಿ ಎಲ್ಲರಿಗೆ ಸೇವೆಯ ಚಾನ್ಸ್ ಸಿಕ್ಕಿದೆಯಲ್ಲವೇ ಏಕೆಂದರೆ ಬ್ರಾಹ್ಮಣ ಜೀವನದ ಆಧಾರವಾಗಿದೆ. ನೆನಪು ಮತ್ತು ಸೇವೆ. ಒಂದುವೇಳೆ ನೆನಪು ಹಾಗೂ ಸೇವೆ ನಿರ್ಬಲವಾಗಿದ್ದರೆ ಹೇಗೆ ಶರೀರದ ಆಧಾರ ನಿರ್ಬಲವಾಗಿಬಿಟ್ಟರೆ ಶರೀರ ಔಷಧಿಗಳಿಂದ ನಡೆಯುತ್ತದೆಯಲ್ಲವೇ ಬ್ರಾಹ್ಮಣ ಜೀವನದಲ್ಲೂ ಒಂದುವೇಳೆ ನೆನಪು ಮತ್ತು ಸೇವೆಯ ಆಧಾರ ಶಕ್ತಿಶಾಲಿಯಾಗಿಲ್ಲದ್ದಿದ್ದರೆ, ನಿರ್ಬಲವಾಗಿದ್ದರೆ ಆ ಬ್ರಾಹ್ಮಣ ಜೀವನದಲ್ಲೂ ಕೆಲವೊಮ್ಮೆ ತೀವ್ರವಾಗಿ ನಡೆಯುತ್ತದೆ, ಕೆಲವೊಮ್ಮೆ ಸಡಿಲವಾಗಿ ನಡೆಯುತ್ತದೆ, ಕೆಲವೊಮ್ಮೆ ಬಲವಂತದಿಂದ ನಡೆಯುತ್ತದೆ. ಯಾರದಾದರೂ ಸಹಯೋಗ ಸಿಗಲಿ, ಯಾರದಾದರೂ ಜೊತೆ ಸಿಗಲಿ, ಕೆಲವೊಂದು ಅವಕಾಶ ಸಿಕ್ಕಿದರೆ ನಡೆಯುತ್ತೇವೆ, ಇಲ್ಲದ್ದಿದ್ದರೆ ಸಡಿಲವರಾಗಿ ಬಿಡುತ್ತೇವೆ. ಆ ಕಾರಣ ನೆನಪು ಮತ್ತು ಸೇವೆಯ ವಿಶೇಷ ಆಧಾರ ಸದಾ ಶಕ್ತಿಶಾಲಿಯಾಗಿರಬೇಕು. ಎರಡು ಶಕ್ತಿಶಾಲಿಯಾಗಿರಲಿ. ಸೇವೆ ಬಹಳಷ್ಟು ಇದೆ, ನೆನಪು ನಿರ್ಬಲವಾಗಿದೆ. ಅಥವಾ ನೆನಪು ಬಹಳ ಚೆನ್ನಾಗಿದೆ, ಸೇವೆ ನಿರ್ಬಲವಾಗಿದ್ದರೂ ಸಹ ತೀವ್ರಗತಿಯಾಗುವುದಕ್ಕೆ ಸಾಧ್ಯವಿಲ್ಲ. ನೆನಪು ಹಾಗೂ ಸೇವೆಯಲ್ಲಿ ತೀವ್ರಗತಿಯಿರಬೇಕು. ಶಕ್ತಿಶಾಲಿಯಾಗಿರಬೇಕು. ಎರಡು ಶಕ್ತಿಶಾಲಿಯಾಗಿದೆಯೇ ಅಥವಾ ವ್ಯತ್ಯಾಸವಾಗಿ ಬಿಡುತ್ತದೆಯೇ? ಕೆಲವೊಮ್ಮೆ ಸೇವೆ ಜಾಸ್ತಿಯಾಗಿಬಿಡುತ್ತದೆ, ಕೆಲವೊಮ್ಮೆ ನೆನಪು ಜಾಸ್ತಿಯಾಗಿಬಿಡುತ್ತದೆಯೇ? ಎರಡು ಜೊತೆ ಜೊತೆಯಲ್ಲಿರಬೇಕು. ನೆನಪು ಮತ್ತು ನಿಸ್ವಾರ್ಥ ಸೇವೆ. ಸ್ವಾರ್ಥದ ಸೇವೆಯಲ್ಲ, ನಿಸ್ವಾರ್ಥದ ಸೇವೆಯಾಗಿದ್ದರೆ ಮಾಯಾಜೀತ್ರಾಗುವುದು ಬಹಳ ಸಹಜವಾಗಿದೆ. ಪ್ರತಿಯೊಂದು ಕರ್ಮದಲ್ಲಿ, ಕರ್ಮದ ಸಮಾಪ್ತಿಯ ಮೊದಲು ಸದಾ ವಿಜಯಿಯಾಗುವುದು ಕಂಡು ಬರುತ್ತದೆ. ವಿಜಯ ಆಗಿಬಿಟ್ಟಿದೆ ಎಂದು ಅಚಲ ನಿಶ್ಚಯದ ಅನುಭವವಾಗುತ್ತದೆ. ಒಂದುವೇಳೆ ಬ್ರಾಹ್ಮಣ ಆತ್ಮರ ವಿಜಯವಾಗುವುದಿಲ್ಲದಿದ್ದರೆ ಇನ್ಯಾರದು ಆಗುತ್ತದೆ? ಕ್ಷತ್ರಿಯರದ್ದು ಆಗುತ್ತದೆ ಏನೋ? ಬ್ರಾಹ್ಮಣರ ವಿಜಯವಲ್ಲವೇ. ಪ್ರಶ್ನೆಗಳು ಇರುವುದಿಲ್ಲ. ಮಾಡುತ್ತಿದ್ದೀರಲ್ಲವೇ, ನಡೆಯುತ್ತಿದ್ದರಲ್ಲವೇ, ನೋಡಿ ಬಿಡುವೆವು, ಆಗಿಬಿಡುತ್ತದೆ, ಆಗಲೇಬೇಕಲ್ಲವೇ.... ಈ ಶಬ್ದ ಬರುವುದಿಲ್ಲ. ಏನಾಗುತ್ತದೆಯೇ ಗೊತ್ತಿಲ್ಲ, ಆಗುತ್ತದೆ ಅಥವಾ ಆಗುವುದಿಲ್ಲ... ಈ ನಿಶ್ಚಯದ ಮಾತಿದೆಯೇ? ನಿಶ್ಚಯಬುದ್ಧಿ ವಿಜಯಂತಿ ಈ ಗಾಯನವಿದೆಯಲ್ಲವೇ? ಯಾವಾಗ ಪ್ರಾಕ್ಟಿಕಲ್ ಆಗಿದೆ ಆಗಲೇ ಗಾಯನವಿದೆಯಲ್ಲವೇ. ನಿಶ್ಚಯಬುದ್ಧಿಯ ಚಿಹ್ನೆಯಾಗಿದೆ ವಿಜಯ ನಿಶ್ಚಿತ.

ಹೇಗೆ ಯಾವುದೇ ಪ್ರಕಾರದಲ್ಲಿ ಯಾರಿಗಾದರೂ ಶಕ್ತಿಯಿದೆಯೆಂದರೆ ಭಲೇ ಧನದಿರಬಹುದು, ಬುದ್ಧಿಯದಿರಬಹುದು, ಸಂಬಂಧ ಸಂಪರ್ಕದಿರಬಹುದು. ಅವರಿಗೆ ನಿಶ್ಚಯವಿರುತ್ತದೆ ಇದೇನು ದೊಡ್ಡ ಮಾತೆಂದು, ಇದು ಯಾವುದೇ ಮಾತಲ್ಲ. ತಮ್ಮ ಹತ್ತಿರ ಎಲ್ಲಾ ಶಕ್ತಿಗಳಿದೆ. ಧನದ ಶಕ್ತಿಯಿದೆಯೇ ಅಥವಾ ಧನದ ಶಕ್ತಿ ಕೋಟ್ಯಾಧಿಪತಿಗಳ ಹತ್ತಿರ ಇದೆಯೇ? ಎಲ್ಲದಕ್ಕಿಂತ ದೊಡ್ಡ ಧನವಾಗಿದೆ ಅವಿನಾಶಿ ಧನ ಯಾವುದು ಸದಾ ಜೊತೆಯಲ್ಲಿರುತ್ತದೆ. ಧನದ ಶಕ್ತಿಯು ಸಹ ಆಗಿದೆ, ಬುದ್ಧಿಯ ಶಕ್ತಿಯು ಸಹ ಇದೆ, ಪದವಿ ಶಕ್ತಿಯು ಸಹ ಆಗಿದೆ. ಯಾವುದೆಲ್ಲ ಶಕ್ತಿಗಳ ಗಾಯನವಿದೆ ಎಲ್ಲಾ ಶಕ್ತಿಗಳು ತಮ್ಮಲ್ಲಿದೆ. ಇದೆಯೇ ಅಥವಾ ಪ್ರಾಯಲೋಪವಾಗಿ ಬಿಡುತ್ತದೆಯೇ? ಇದನ್ನು ಇಮರ್ಜ ರೂಪದಲ್ಲಿ ಅನುಭವ ಮಾಡಿ. ಈ ರೀತಿಯಲ್ಲ ಹಾಂ, ಹೂಂ ಸರ್ವಶಕ್ತಿವಂತನ ಮಗು ಆದರೆ ಅನುಭವವಾಗುವುದಿಲ್ಲ. ಎಲ್ಲರೂ ಸಂಪನ್ನರಾಗಿದ್ದೀರಾ ಸ್ವಲ್ಪ ಸ್ವಲ್ಪ ಖಾಲಿಯಿದ್ದೀರಾ? ಸಮಯದಲ್ಲಿ ವಿಧಿಯ ಮುಖಾಂತರ ಸಿದ್ಧಿ ಪ್ರಾಪ್ತಿಯಾಗಬೇಕು. ಈ ರೀತಿಯಲ್ಲ ಸಮಯದಲ್ಲಿ ಆಗುವುದಿಲ್ಲ ಮತ್ತು ಅದರಂತೆ ನಶೆಯಿರಬೇಕು. ಬಹಳ ಶಕ್ತಿಗಳಿದೆಯೆಂದು. ಎಂದು ಸಹ ತಮ್ಮ ಶಕ್ತಿಗಳನ್ನು ಮರೆಯಬಾರದು, ಉಪಯೋಗಿಸುತ್ತ ಹೋಗಬೇಕು. ಒಂದುವೇಳೆ ಸ್ವಯಂನ ಪ್ರತಿ ಕಾರ್ಯದಲ್ಲಿ ತೊಡಗಿಸುವುದಕ್ಕೆ ಬರುತ್ತದೆಯೆಂದರೆ ಅನ್ಯರ ಕಾರ್ಯದಲ್ಲೂ ತೊಡಗಿಸಬಹುದು. ಪಾಂಡವರಲ್ಲಿ ಶಕ್ತಿ ಬಂದಿದೆಯಲ್ಲವೇ ಅಥವಾ ಕೆಲವೊಮ್ಮೆ ಕ್ರೋಧ ಬರುತ್ತದೆಯೇ? ಸ್ವಲ್ಪ ಸ್ವಲ್ಪ ಕ್ರೋಧ ಬರುತ್ತದೆಯೇ? ಯಾರಾದರೂ ಕೋಪ ಮಾಡಿಕೊಂಡರೆ ಕೋಪ ಬರುತ್ತದೆಯೇ, ಯಾರಾದರೂ ಅವಮಾನ ಮಾಡಿದರೆ ಕ್ರೋಧ ಬರುತ್ತದೆಯೇ? ಇದಂತು ಹೀಗಾಯಿತು ಹೇಗೆ ಶತ್ರು ಬರುತ್ತ್ತಾರೆಂದರೆ ಸೋಲಾಗುತ್ತದೆ. ಮಾತೆಯರಿಗೆ ಸ್ವಲ್ಪ ಸ್ವಲ್ಪ ಮೋಹ ಬರುತ್ತದೆಯೇ? ಪಾಂಡವರಿಗೆ ತಮ್ಮ ಪ್ರತಿ ಕಲ್ಪದ ವಿಜಯತನದ ಸದಾ ಖುಷಿ ಇಮರ್ಜ್ ಆಗಿರಬೇಕು. ಎಂದಿಗೂ ಯಾವುದೇ ಪಾಂಡವರನ್ನು ನೆನಪಿಸಿಕೊಂಡರೆ ಪಾಂಡವ ಶಬ್ದದಿಂದಲೇ ವಿಜಯ ಎದುರಿಗೆ ಬರುತ್ತದೆಯಲ್ಲವೇ ಪಾಂಡವ ಅರ್ಥಾತ್ ವಿಜಯಿ. ಪಾಂಡವರ ಕಥೆಯ ರಹಸ್ಯ ಏನಾಗಿದೆ? ವಿಜಯವಾಗಿದೆಯಲ್ಲವೇ. ಅಂದಮೇಲೆ ಪ್ರತಿ ಕಲ್ಪದ ವಿಜಯಿ. ಇಮರ್ಜ ರೂಪದಲ್ಲಿ ನಶೆಯಿರಲಿ. ಮರ್ಜ್ ಅಲ್ಲ. ಒಳ್ಳೆಯದು.

2. ಸರ್ವರ ಮೂಲಕ ಮಾನ್ಯತೆ ಪ್ರಾಪ್ತಿ ಮಾಡಲು ನಿರ್ಮಾನರಾಗಿರಿ:- ಎಲ್ಲರು ತಮ್ಮನ್ನು ತಾವು ಕೋಟಿಯಲ್ಲಿ ಕೆಲವರು ಹಾಗೂ ಕೆಲವರಲ್ಲಿ ಕೆಲವರು ಶ್ರೇಷ್ಠ ಆತ್ಮ ಅನುಭವ ಮಾಡುತ್ತಿರಾ? ಅಥವಾ ಕೊಟಿಯಲ್ಲಿ ಕೆಲವರೆಂದು ಗಾಯನ ಮಾಡುವುದು ಅದು ಬೇರೆ ಯಾರಿಗೋ? ಅಥವಾ ನಿಮಗೋ? ಅಂದಮೇಲೆ ಒಂದೊಂದು ಆತ್ಮದ ಮಹತ್ವವಿದೆ ಅರ್ಥಾತ್ ಪ್ರತಿ ಆತ್ಮ ಮಹಾನ್ ಆಗಿದೆ. ಹೇಗೆ ವೃಕ್ಷಕ್ಕಾಗಿ ಹೇಳುತ್ತಾರೆ ಎಷ್ಟು ಸಂಪನ್ನವಾಗಿರುವುದೋ ಅಷ್ಟು ಬಾಗಿರುವುದು. ಹಾಗೂ ನಿರ್ಮಾನತೆಯೇ ಸೇವೆ ಮಾಡುತ್ತದೆ. ಹೇಗೆ ವೃಕ್ಷದ ಬಾಗುವಿಕೆ ಸೇವೆ ಮಾಡುತ್ತದೆ, ಒಂದುವೇಳೆ ಬಾಗಿರುವುದಿಲ್ಲ ಎಂದರೆ ಸೇವೆ ಮಾಡುವುದಿಲ್ಲ. ಒಂದುಕಡೆ ಮಹಾನತೆ ಇದೆ ಹಾಗೂ ಇನ್ನೊಂದು ಕಡೆ ನಿರ್ಮಾನತೆ ಇದೆ. ಹಾಗೂ ಯಾರು ನಿರ್ಮಾನರಾಗಿರುತ್ತಾರೆ ಅವರು ಸರ್ವರ ಮೂಲಕ ಮಾನ್ಯತೆಯನ್ನು ಪಡೆಯುತ್ತಾರೆ. ಸ್ವಯಂ ನಿರ್ಮಾನರಾದರೆ ಅನ್ಯರು ಮಾನ್ಯತೆ ಕೊಡುತ್ತಾರೆ. ಯಾರು ಅಭಿಮಾನದಲ್ಲಿ ಇರುತ್ತಾರೆ ಅವರಿಗೆ ಯಾರು ಸಹ ಮಾನ್ಯತೆ ಕೊಡುವುದಿಲ್ಲ ಅವರಿಂದ ದೂರ ಓಡುತ್ತಾರೆ. ಹಾಗಾದರೆ ಮಾಹಾನ್ ಹಾಗೂ ನಿರ್ಮಾನರಾಗಿದ್ದೀರೋ ಅಥವಾ ಇಲ್ಲವೋ ಇದರ ಚಿಹ್ನೆಯಾಗಿದೆ - ನಿರ್ಮಾನರು ಎಲ್ಲರಿಗೂ ಸುಖವನ್ನು ಕೊಡುತ್ತಾರೆ ಎಲ್ಲೇ ಹೋದರು, ಏನೇ ಮಾಡಿದರು ಅದು ಸುಖದಾಯಿಯಾಗಿರುವುದು. ಇದರಿಂದ ಚೆಕ್ ಮಾಡಿ - ಎಷ್ಟು ಮಹಾನ್ ಆಗಿದ್ದೇವೆ? ಯಾರೇ ಸಂಬಂಧ ಸಂಪರ್ಕದಲ್ಲಿ ಬಂದರು ಸುಖದ ಅನುಭವ ಮಾಡಲಿ. ಈ ರೀತಿಯಿದೆಯೋ ಅಥವಾ ಕೆಲವೊಮ್ಮೆ ದುಃಖವು ಸಿಕ್ಕಿಬಿಡುತ್ತದೆಯೋ? ನಿರ್ಮಾನತೆ ಕಡಿಮೆ ಇದ್ದರೆ ಸುಖವು ಸಹ ಸದಾ ಕೊಡಲು ಸಾಧ್ಯವಿಲ್ಲ. ಅಂದಮೇಲೆ ಸದಾ ಸುಖ ಕೊಡುತ್ತ, ಸುಖ ಪಡೆಯುತ್ತ ಅಥವಾ ಕೆಲವೊಮ್ಮೆ ದುಃಖ ಕೊಡುತ್ತ, ದುಃಖ ಪಡೆಯುತ್ತ ಇರುತ್ತೀರೋ? ಒಂದುವೇಳೆ ಕೊಡುವುದಿಲ್ಲ ಆದರೆ ತೆಗೆದುಕೊಂಡು ಬಿಡುತ್ತಿರೋ? ಸ್ವಲ್ಪ ಫೀಲ್ ಆಗುತ್ತದೆ ಎಂದರೆ ತೆಗೆದುಕೊಂಡು ಬಿಟ್ಟಂತಾಯಿತು ಅಲ್ಲವೇ. ಒಂದುವೇಳೆ ಯಾರದೇ ಯಾವುದೇ ಮಾತಿನಿಂದ ಫೀಲ್ ಆಗುತ್ತದೆ ಎಂದರೆ ಇದಕ್ಕೆ ಹೇಳಲಾಗುವುದು ದುಃಖ ತೆಗೆದುಕೊಳ್ಳುವುದು ಎಂದು. ಆದರೆ ಯಾರೋ ಕೊಟ್ಟರು ಆದರೆ ನೀವು ತೆಗೆದುಕೊಳ್ಳುವುದಿಲ್ಲ ಇದಂತು ನಿಮ್ಮ ಮೇಲಿದೆ ಅಲ್ಲವೇ. ಯಾರ ಹತ್ತಿರ ದುಃಖವೇ ಇದೆ ಅವರು ಬೇರೆ ಏನು ಕೊಡಲು ಸಾಧ್ಯ? ದುಃಖವನ್ನೇ ಕೊಡುತ್ತಾರಲ್ಲವೇ? ಆದರೆ ನಿಮ್ಮ ಕೆಲಸವಾಗಿದೆ ಸುಖ ತೆಗೆದುಕೊಳ್ಳುವುದು ಹಾಗೂ ಸುಖ ಕೊಡುವುದು. ಹೀಗಲ್ಲ ಯಾರೋ ದುಃಖ ಕೊಡುತ್ತಿದ್ದಾರೆಂದರೆ ಹೇಳುತ್ತೀರಿ ನಾನೇನು ಮಾಡಲಿ? ನಾನು ಕೊಡಲಿಲ್ಲ ಆದರೆ ಅವರು ಕೊಟ್ಟರು. ನೀವು ಚೆಕ್ ಮಾಡಬೇಕು ಯಾವುದನ್ನು ತೆಗೆದುಕೊಳ್ಳಬೇಕು ಯಾವುದನ್ನು ಬಿಡಬೇಕು. ತೆಗೆದುಕೊಳ್ಳುವುದರಲ್ಲಿಯೂ ಬುದ್ಧಿವಂತಿಕೆ ಬೇಕಲ್ಲವೇ. ಆದ್ದರಿಂದಲೇ ಬ್ರಾಹ್ಮಣ ಆತ್ಮರ ಗಾಯನವಿದೆ ಸುಖದ ಸಾಗರನ ಮಕ್ಕಳು, ಸುಖ ಸ್ವರೂಪ ಸುಖದೇವಾ ಆಗಿದ್ದಾರೆಂದು. ಸುಖ ಸ್ವರೂಪ ಸುಖ ದೇವಾ ಆತ್ಮಗಳಾಗಿದ್ದೀರಿ. ದುಃಖದ ಪ್ರಪಂಚ ಬಿಟ್ಟುಬಿಟ್ಟಿದ್ದೀರಿ, ಪಾರು ಮಾಡಿ ಬಿಟ್ಟಿದ್ದೀರೋ ಅಥವಾ ಒಂದು ಕಾಲು ದುಃಖಧಾಮದಲ್ಲಿದೆ, ಇನ್ನೊಂದು ಕಾಲು ಸಂಗಮದಲ್ಲಿದೆಯೋ? ಹೀಗಂತು ಇಲ್ಲವಲ್ಲ - ಸ್ವಲ್ಪ ಸ್ವಲ್ಪ ಅಲ್ಲಿ ಬುದ್ಧಿ ಉಳಿದುಕೊಂಡು ಬಿಟ್ಟಿದೆ? ಕಾಲು ಇಲ್ಲ ಆದರೆ ಸ್ವಲ್ಪ ಬೆರಳು ಉಳಿದುಬಿಟ್ಟಿದೆ? ಯಾವಾಗ ದುಃಖಧಾಮವನ್ನು ಬಿಟ್ಟು ಹೋಗಿದ್ದೀರಿ ಅಂದಮೇಲೆ ದುಃಖವನ್ನು ಕೊಡಲು ಬಾರದು ತೆಗೆದುಕೊಳ್ಳಲುಬಾರದು. ಒಳ್ಳೆಯದು.

ವರದಾನ:
ಹಾರುವ ಕಲೆಯ ಮುಖಾಂತರ ತಂದೆಯ ಸಮಾನ ಆಲ್ರೌಂಡರ್ ಪಾತ್ರ ಅಭಿನಯಿಸುವಂತಹ ಚಕ್ರರ್ತಿ ಭವ.

ಹೇಗೆ ತಂದೆ ಆಲ್ರೌಂಡ್ ಪಾತ್ರಧಾರಿಯಾಗಿದ್ದಾರೆ, ಸಖ ಕೂಡಾ ಆಗುತ್ತಾರೆ, ತಂದೆ ಸಹಾ ಆಗುತ್ತಾರೆ. ಈ ರೀತಿ ಹಾರುವ ಕಲೆಯವರು ಯಾವ ಸಮಯದಲ್ಲಿ ಯಾವ ಸೇವೆಯ ಅವಶ್ಯಕತೆ ಇರುವುದೊ ಅದರಲ್ಲಿ ಸಂಪನ್ನ ಪಾತ್ರ ಅಭಿನಯಿಸಲು ಸಾಧ್ಯ. ಇದಕ್ಕೆ ಹೇಳಲಾಗುವುದು ಆಲ್ರೌಂಡ್ ಹಾರುವ ಪಕ್ಷಿ. ಅವರು ಇಂತಹ ನಬರ್ಂಧನರಾಗಿರುತ್ತಾರೆ ಅವರಿಗೆ ಎಲ್ಲೇ ಸೇವೆ ಇರುತ್ತೆ ಅಲ್ಲಿ ತಲುಪಿ ಬಿಡುತ್ತಾರೆ. ಎಲ್ಲಾ ಪ್ರಕಾರದ ಸೇವೆಯಲ್ಲಿ ಸಫಲತಾ ಮರ್ತಿಗಳಾಗುತ್ತಾರೆ. ಅವರಿಗೇ ಹೇಳಲಾಗುವುದು ಚಕ್ರವರ್ತಿ, ಆಲ್ರೌಂಡ್ ಪಾತ್ರಧಾರಿ.

ಸ್ಲೋಗನ್:
ಪರಸ್ಪರ ಒಬ್ಬರಿನ್ನೊಬ್ಬರ ವಿಶೇಷತೆಗಳನ್ನು ಸ್ಮತಿಯಲ್ಲಿಟ್ಟುಕೊಂಡು ಪ್ರಾಮಾಣಿಕರಾಗಿದ್ದಾಗ ಸಂಘಟನೆ ಏಕಮತವಾಗಿ ಬಿಡುವುದು.