22.03.20    Avyakt Bapdada     Kannada Murli     14.12.85     Om Shanti     Madhuban


"ವರ್ತಮಾನದ ಈ ಜೀವನವೇ ಭವಿಷ್ಯದ ದರ್ಪಣ"


(ಮಧುಬನ ನಿವಾಸಿಗಳೊಂದಿಗೆ)
ಇಂದು ವಿಶ್ವ ರಚೈತ ತಂದೆಯು ತನ್ನ ಮಾಸ್ಟರ್ ರಚೈತ ಮಕ್ಕಳನ್ನು ನೋಡುತ್ತಿದ್ದಾರೆ. ಮಾಸ್ಟರ್ ರಚೈತನು ತನ್ನ ರಚೈತತನದ ಸ್ಮೃತಿಯಲ್ಲಿ ಎಲ್ಲಿಯವರೆಗೆ ಸ್ಥಿತರಾಗಿದ್ದಾರೆ! ತಾವೆಲ್ಲರೂ ರಚೈತರ ವಿಶೇಷ ಮೊದಲ ರಚನೆಯು - ಈ ದೇಹವಾಗಿದೆ. ಈ ದೇಹವೆಂಬ ರಚನೆಯ ರಚೈತನು ಎಲ್ಲಿಯವರೆಗೆ ಆಗಿದ್ದಾರೆ? ರಚೈತನನ್ನು ಈ ದೇಹವೆಂಬ ರಚನೆಯೆಂದಾದರೂ ತನ್ನ ಕಡೆಗೆ ಆಕರ್ಷಣೆ ಮಾಡಿ, ರಚೈತನೆಂಬುದನ್ನು ವಿಸ್ಮೃತವಂತು ಮಾಡುವುದಿಲ್ಲವೇ? ಮಾಲೀಕನಾಗಿದ್ದು ಈ ರಚನೆಯನ್ನು ಸೇವೆಯಲ್ಲಿ ಉಪಯೋಗಿಸುತ್ತೀರಾ? ಯಾವಾಗ ಬೇಕು, ಏನು ಬೇಕು ಮಾಲೀಕರಾಗಿದ್ದು ಮಾಡಬಲ್ಲಿರಾ? ಮೊದಲು-ಮೊದಲು ಈ ದೇಹದ ಮಾಲೀಕತ್ವದ ಅಭ್ಯಾಸವೇ ಪ್ರಕೃತಿಯ ಮಾಲೀಕ ಹಾಗೂ ವಿಶ್ವದ ಮಾಲೀಕರನ್ನಾಗಿ ಮಾಡಲು ಸಾಧ್ಯವಾಗುವುದು! ಒಂದುವೇಳೆ ದೇಹದ ಮಾಲೀಕತ್ವದಲ್ಲಿ ಸಂಪೂರ್ಣ ಸಫಲತೆಯಿಲ್ಲವೆಂದರೆ, ವಿಶ್ವದ ಮಾಲೀಕತ್ವದಲ್ಲಿಯೂ ಸಂಪನ್ನರಾಗಲು ಸಾಧ್ಯವಿಲ್ಲ. ವರ್ತಮಾನ ಸಮಯದ ಈ ಜೀವನವು ಭವಿಷ್ಯದ ದರ್ಪಣವಾಗಿದೆ. ಇದೇ ದರ್ಪಣದ ಮೂಲಕ ಸ್ವಯಂನ ಭವಿಷ್ಯವನ್ನು ಸ್ಪಷ್ಟವಾಗಿ ನೋಡವುದು. ಮೊದಲು ಈ ದೇಹದ ಸಂಬಂಧ ಮತ್ತು ಸಂಸ್ಕಾರದ ಅಧಿಕಾರಿಯಾಗುವ ಆಧಾರದಿಂದಲೇ ಮಾಲೀಕತ್ವದ ಸಂಸ್ಕಾರವಿದೆ. ಸಂಬಂಧದಲ್ಲಿ ಭಿನ್ನ ಹಾಗೂ ಪ್ರಿಯತನವಾಗುವುದು - ಇದು ಮಾಲೀಕತ್ವದ ಚಿಹ್ನೆಯಾಗಿದೆ. ಸಂಸ್ಕಾರದಲ್ಲಿ ನಿರಹಂಕಾರಿ ಹಾಗೂ ನಿರ್ಮಾಣವೆರಡೂ ವಿಶೇಷತೆಗಳು ಮಾಲೀಕತ್ವದ ಚಿಹ್ನೆಯಾಗಿದೆ. ಜೊತೆ ಜೊತೆಗೆ ಸರ್ವ ಆತ್ಮರ ಸಂಪರ್ಕದಲ್ಲಿ ಬರುವುದು, ಸ್ನೇಹಿಯಾಗುವುದು, ಹೃದಯದ ಸ್ನೇಹದ ಆಶೀರ್ವಾದ ಅರ್ಥಾತ್ ಶುಭ ಭಾವನೆಯು ಸರ್ವರ ಆಂತರ್ಯದಿಂದ ಬರಲಿ. ಭಲೆ ತಿಳಿದಿರಲಿ ಅಥವಾ ತಿಳಿಯದಿರಲಿ, ದೂರದ ಸಂಬಂಧ ಮತ್ತು ಸಂಪರ್ಕವಿರಲಿ ಆದರೆ ಯಾರೇ ನೋಡುತ್ತಾರೆ, ಅವರು ಹೀಗೆಯೇ ಅನುಭವ ಮಾಡಲಿ - ಇವರು ನಮ್ಮವರು, ಸ್ನೇಹದ ಗುರುತಿನಿಂದ ನಮ್ಮವರೆನ್ನುವ ಅನುಭವ ಮಾಡುತ್ತಾರೆ. ಸಂಬಂಧವು ದೂರದ್ದಾಗಿರಬಹುದು ಆದರೆ ಸ್ನೇಹ ಸಂಪನ್ನತೆಯ ಅನುಭವ ಮಾಡಿಸುತ್ತದೆ. ವಿಶ್ವದ ಮಾಲೀಕ ಹಾಗೂ ದೇಹದ ಮಾಲೀಕತ್ವದ ಅಭ್ಯಾಸಿ ಆತ್ಮರ ಈ ವಿಶೇಷತೆಯೂ ಅನುಭವದಲ್ಲಿ ಬರುತ್ತದೆ. ಅವರು ಯಾರದೇ ಸಂಪರ್ಕದಲ್ಲಿ ಬರುತ್ತಾರೆ, ಅವರಿಗೆ ಆ ವಿಶೇಷ ಆತ್ಮನಿಂದ ದಾತಾತನದ ಅನುಭೂತಿಯಾಗುತ್ತದೆ. ಇವರು ತೆಗೆದುಕೊಳ್ಳುವವರು ಎಂದು ಯಾರದೇ ಸಂಕಲ್ಪದಲ್ಲಿಯೂ ಬರಲು ಸಾಧ್ಯವಿಲ್ಲ. ಆ ಆತ್ಮನಿಂದ ಸುಖದ, ದಾತಾತನದ ಅಥವಾ ಶಾಂತಿ, ಪ್ರೇಮ, ಆನಂದ, ಖುಷಿ, ಸಹಯೋಗ, ಸಾಹಸ, ಉತ್ಸಾಹ, ಉಮ್ಮಂಗವು ಯಾವುದಾದರೊಂದು ವಿಶೇಷತೆಯ ದಾತಾತನದ ಅನುಭೂತಿಯಾಗುತ್ತದೆ. ಸದಾ ವಿಶಾಲ ಬುದ್ಧಿ ಮತ್ತು ವಿಶಾಲ ಹೃದಯ, ಯಾವುದಕ್ಕೆ ತಾವು ದೊಡ್ಡ ಹೃದಯವುಳ್ಳವರೆಂದು ಹೇಳುತ್ತೀರಿ - ಇಂತಹ ಅನುಭೂತಿಯಾಗುತ್ತದೆ. ಈಗ ಈ ಚಿಹ್ನೆಗಳಿಂದ ತಮ್ಮನ್ನು ತಾವು ಪರಿಶೀಲನೆ ಮಾಡಿಕೊಳ್ಳಿರಿ - ಏನಾಗುವವರಿದ್ದೇವೆ? ದರ್ಪಣವಂತು ಎಲ್ಲರ ಬಳಿ ಇದೆಯೇ? ಸ್ವಯಂನ್ನು ಸ್ವಯಂ ಎಷ್ಟು ತಿಳಿಯಬಲ್ಲಿರಿ, ಅಷ್ಟು ಮತ್ತ್ಯಾರೂ ತಿಳಿಯಲು ಸಾಧ್ಯವಿಲ್ಲ. ಅಂದಮೇಲೆ ಸ್ವಯಂನ್ನು ಅರಿಯಿರಿ. ಒಳ್ಳೆಯದು!

ಇಂದಿನ ದಿನವಂತು ಮಿಲನವಾಗಲು ಬಂದಿದ್ದೇವೆ. ಆದರೂ ಎಲ್ಲರೂ ಬಂದಿದ್ದಾರೆಂದಾಗ ಬಾಪ್ದಾದಾರವರಿಗೂ ಸಹ ಎಲ್ಲಾಮಕ್ಕಳ ಸ್ನೇಹದ ಜೊತೆಗೆ ರಿಗಾರ್ಡ್ ಸಹ ಇಡಬೇಕಾಗುತ್ತದೆ. ಆದ್ದರಿಂದ ಆತ್ಮಿಕ ವಾರ್ತಾಲಾಪ ಮಾಡಿದರು. ಮಧುಬನದವರು ತಮ್ಮ ಅಧಿಕಾರವನ್ನು ಬಿಡುವುದಿಲ್ಲ, ಆದರೂ ಸಮೀಪದಲ್ಲಿ ಕುಳಿತಿದ್ದೀರಿ. ಬಹಳ ಮಾತುಗಳಿಂದ ನಿಶ್ಚಿಂತರಾಗಿ ಕುಳಿತಿದ್ದೀರಿ. ಯಾರು ಹೊರಗೆ ಇರುತ್ತಾರೆ, ಅವರಿಗಂತು ಪರಿಶ್ರಮ ಪಡಬೇಕಾಗುತ್ತದೆ. ಸಂಪಾದಿಸುವುದು ಮತ್ತು ತಿನ್ನುವುದು - ಇದು ಕಡಿಮೆ ಪರಿಶ್ರಮವೇನಲ್ಲ. ಮಧುಬನದಲ್ಲಿ ಸಂಪಾದಿಸುವ ಚಿಂತೆಯಂತು ಇಲ್ಲವಲ್ಲವೆ. ಬಾಪ್ದಾದಾರವರು ತಿಳಿದಿದ್ದಾರೆ - ಪ್ರವೃತ್ತಿಯಲ್ಲಿರುವವರು ಸಹನೆಯನ್ನೂ ಮಾಡಬೇಕಾಗುತ್ತದೆ, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಹಂಸ-ಕೊಕ್ಕರೆಗಳ ಮಧ್ಯದಲ್ಲಿರುತ್ತಾ ತನ್ನ ಉನ್ನತಿಮಾಡಿಕೊಳ್ಳುತ್ತಾ ಮುಂದುವರೆಯುತ್ತಿದ್ದಾರೆ. ಆದರೆ ತಾವುಗಳು ಕೆಲವು ಮಾತುಗಳಿಂದ ಸ್ವತಹವಾಗಿಯೇ ಭಿನ್ನವಾಗಿದ್ದೀರಿ. ಆರಾಮವಾಗಿ ಇರುತ್ತೀರಿ, ಆರಾಮದಿಂದ ಮಲಗುತ್ತೀರಿ ಮತ್ತು ಆರಾಮದಿಂದ ಮಾಡುತ್ತೀರಿ. ಹೊರಗೆ ಕಛೇರಿಗಳಲ್ಲಿ ಹೋಗುವವರು ದಿನದಲ್ಲಿ ಆರಾಮ ಮಾಡುತ್ತೀರೇನು? ಇಲ್ಲಂತು ಶರೀರಕ್ಕೂ ಆರಾಮವಿದೆ ಮತ್ತು ಬುದ್ಧಿಯೂ ಆರಾಮವಾಗಿದೆ. ಹಾಗದರೆ ಮಧುಬನ ನಿವಾಸಿಗಳ ಸ್ಥಿತಿಯು ಎಲ್ಲರಿಗಿಂತ ನಂಬರ್ವನ್ ಆಗಿ ಬಿಟ್ಟಿದೆಯಲ್ಲವೆ ಏಕೆಂದರೆ ಒಂದೇ ಕಾರ್ಯವಿದೆ. ವಿದ್ಯೆಯನ್ನು ಓದಿರಿ, ಅದನ್ನೂ ತಂದೆಯವರು ಮಾಡಿಸುತ್ತಿದ್ದಾರೆ. ಸೇವೆಯನ್ನು ಮಾಡುತ್ತೀರಿ, ಅದೂ ಸಹ ಯಜ್ಞ ಸೇವೆಯಾಗಿದೆ. ಬೇಹದ್ದಿನ ತಂದೆಯ ಬೇಹದ್ದಿನ ಮನೆಯಾಗಿದೆ. ಒಂದೇ ಮಾತು ಒಂದೇ ಗುರಿಯಿದೆ, ಇನ್ನೊಂದಿಲ್ಲ. ನನ್ನ ಸೇವಾಕೇಂದ್ರವು ಇದಲ್ಲ, ಕೇವಲ ನಾನು ಇನ್ಚಾರ್ಜ್, ಇದಾಗಬಾರದು. ಮಧುಬನ ನಿವಾಸಿಗಳಿಗೆ ಹಲವು ಮಾತುಗಳಲ್ಲಿ ಸಹಜ ಪುರುಷಾರ್ಥವಿದೆ ಮತ್ತು ಸಹಜ ಪ್ರಾಪ್ತಿಯಿದೆ. ಒಳ್ಳೆಯದು - ಮಧುಬನದವರೆಲ್ಲರೂ ಗೋಲ್ಡನ್ ಜುಬಿಲಿಯ ಕಾರ್ಯಕ್ರಮವನ್ನು ಮಾಡಿದ್ದಾರಲ್ಲವೆ. ಕಾರ್ಯಕ್ರಮವಲ್ಲ. ಅದಕ್ಕಂತು ಫೋಲ್ಡರ್ಸ್ ಮುಂತಾದವುಗಳು ಮುದ್ರಣವಾಗಿದೆ. ಅದಾಯಿತು ವಿಶ್ವದ ಪ್ರತಿ. ಸ್ವಯಂ ಪ್ರತಿ ಯಾವ ಯೋಜನೆಯನ್ನು ಮಾಡಿದ್ದೀರಿ? ಸ್ವಯಂನ ಸ್ಟೇಜಿನ ಮೇಲೆ ಯಾವ ಪಾತ್ರವನ್ನಭಿನಯಿಸುತ್ತೀರಿ? ಆ ಸ್ಟೇಜ್ನಲ್ಲಂತು ಸ್ಪೀಕರ್ಸ್, ಕಾರ್ಯಕ್ರಮವನ್ನೂ ಮಾಡಿ ಬಿಡುತ್ತೀರಿ. ಸ್ವಯಂನ ಸ್ಟೇಜಿನ ಕಾರ್ಯಕ್ರಮವೇನು ಮಾಡಲಾಗಿದೆ? ಮನೆಯೆ ಮೊದಲ ಪಾಠಶಾಲೆ ಅಂದರೆ ಮಧುಬನ ನಿವಾಸಿಗಳಾಗಿದ್ದೀರಲ್ಲವೆ. ಯಾವುದೇ ಕಾರ್ಯಕ್ರಮವಾಗುತ್ತದೆಯೆಂದರೆ ಏನು ಮಾಡುತ್ತೀರಿ? (ದೀಪವನ್ನು ಬೆಳಗಿಸುತ್ತಾರೆ). ಅಂದಮೇಲೆ ಗೋಲ್ಡನ್ ಜುಬಿಲಿಯ ದೀಪವನ್ನು ಯಾರು ಬೆಳಗಿಸುತ್ತಾರೆ? ಪ್ರತೀಮಾತಿನ ಆರಂಭವನ್ನು ಯಾರು ಮಾಡುತ್ತಾರೆ? ಮಧುಬನ ನಿವಾಸಿಗಳಲ್ಲಿ ಸಾಹಸವಿದೆ, ಉಮ್ಮಂಗವೂ ಇದೆ, ವಾಯುಮಂಡಲವೂ ಇದೆ, ಎಲ್ಲದರ ಸಹಯೋಗವಿದೆ. ಎಲ್ಲಿ ಸರ್ವರ ಸಹಯೋಗವಿದೆ ಅಲ್ಲಿ ಎಲ್ಲವೂ ಸಹಜವಿದೆ. ಕೇವಲ ಒಂದು ಮಾತು ಮಾಡಬೇಕಾಗುತ್ತದೆ. ಅದು ಯಾವುದು?

ಬಾಪ್ದಾದಾರವರು ಎಲ್ಲಾ ಮಕ್ಕಳಲ್ಲಿ ಇದೇ ಶ್ರೇಷ್ಠ ಆಶೆಯನ್ನಿಡುತ್ತಾರೆ - ಪ್ರತಿಯೊಬ್ಬರೂ ತಂದೆಯ ಸಮಾನರಾಗಲಿ. ಸಂತುಷ್ಠರಾಗಿರುವುದು ಮತ್ತು ಸಂತುಷ್ಠ ಪಡಿಸುವುದು - ಇದೇ ವಿಶೇಷತೆಯಾಗಿದೆ. ಮೊದಲ ಮುಖ್ಯ ಮಾತಾಗಿದೆ - ಸ್ವಯಂನಿಂದ ಅರ್ಥಾತ್ ತನ್ನ ಪುರುಷಾರ್ಥದಿಂದ, ತನ್ನ ಸ್ವಭಾವ-ಸಂಸ್ಕಾರದಿಂದ, ತಂದೆಯನ್ನು ಮುಂದಿಟ್ಟುಕೊಳ್ಳುತ್ತಾ ಸಂತುಷ್ಠವಾಗಿದ್ದೇನೆಯೇ - ಇದನ್ನು ಪರಿಶೀಲಿಸಬೇಕು. ಹೌದು ನಾನು ಯಥಾಶಕ್ತಿ ಸಂತುಷ್ಠನಾಗಿದ್ದೇನೆ ಎನ್ನುವುದು ಬೇರೆ ಮಾತು. ಆದರೆ ವಾಸ್ತವಿಕ ಸ್ವರೂಪದ ಲೆಕ್ಕದಿಂದ ಸ್ವಯಂನಿಂದ ಸಂತುಷ್ಠವಾಗುವುದು ಮತ್ತು ಅನ್ಯರನ್ನು ಸಂತುಷ್ಠ ಪಡಿಸುವುದು - ಇದು ಸಂತುಷ್ಠತೆಯ ಮಹಾನತೆಯಾಗಿದೆ. ಅನ್ಯರೂ ಇದರ ಅನುಭವ ಮಾಡಲಿ - ಇವರು ಯಥಾರ್ಥ ರೂಪದಲ್ಲಿ ಸಂತುಷ್ಠ ಆತ್ಮನಾಗಿದ್ದಾರೆ. ಸಂತುಷ್ಠತೆಯಲ್ಲಿ ಎಲ್ಲವೂ ಬಂದು ಬಿಡುತ್ತದೆ. ತೊಂದರೆಗೊಳಗಾಗಬಾರದು ಮತ್ತು ತೊಂದರೆವುಂಟು ಮಾಡಬಾರದು, ಇದಕ್ಕೆ ಹೇಳಲಾಗುತ್ತದೆ- ಸಂತುಷ್ಠತೆ. ತೊಂದರೆ ಮಾಡುವವರು ಬಹಳಷ್ಟಿರುತ್ತಾರೆ, ಆದರೆ ಸ್ವಯಂ ತೊಂದರೆಗೊಳಗಾಗಬಾರದು. ಬೆಂಕಿಯ ಕಿಡಿಯಿಂದ ಸ್ವಯಂ ದೂರವಾಗಿ ಸುರಕ್ಷಿತವಾಗಿರಿ. ಬೇರೆಯವರನ್ನು ನೋಡಬಾರದು, ನಾನೇನು ಮಾಡಬೇಕೆಂದು ತಮ್ಮನ್ನು ನೋಡಿಕೊಳ್ಳಿರಿ. ನಾನು ನಿಮಿತ್ತನಾಗಿದ್ದು ಅನ್ಯರಿಗೆ ಶುಭ ಭಾವನೆ ಮತ್ತು ಶುಭ ಕಾಮನೆಯ ಸಹಯೋಗವನ್ನು ಕೊಡಬೇಕಾಗಿದೆ. ಇದು ವಿಶೇಷ ಧಾರಣೆಯಾಗಿದೆ, ಇದರಲ್ಲಿ ಎಲ್ಲವೂ ಬಂದು ಬಿಡುತ್ತದೆ. ಇದರದಂತು ಗೋಲ್ಡನ್ ಜುಬಿಲಿಯನ್ನಚರಿಸಬಹುದು ಅಲ್ಲವೆ! ನಿಮಿತ್ತವಾಗಿ ಮಧುಬನದವರಿಗೆ ಹೇಳಲಾಗುತ್ತದೆ ಆದರೆ ಇರುವುದು ಎಲ್ಲರ ಪ್ರತಿ. ಮೋಹಜೀತನ ಕಥೆಯನ್ನು ಕೇಳಿದ್ದೀರಲ್ಲವೆ. ಹಾಗೆಯೇ ಸಂತುಷ್ಠತೆಯ ಕಥೆಯನ್ನು ತಯಾರು ಮಾಡಿರಿ. ಯಾರ ಬಳಿಯೇ ಯಾರೇ ಹೋಗುತ್ತಾರೆ, ಎಷ್ಟೇ ಕ್ರಾಸ್ ಎಕ್ಸಾಮಿನ್ ಮಾಡಲಿ. ಆದರೆ ಎಲ್ಲರ ಮುಖದಿಂದ, ಎಲ್ಲರ ಮನಸ್ಸಿನಿಂದ ಸಂತುಷ್ಠತೆಯ ವಿಶೇಷತೆಯು ಅನುಭವವಾಗಲಿ. ಇವರಂತು ಹೀಗೆ ಎನ್ನಬಾರದು. ನಾನು ಹೇಗೆ ಆಗಿ ಮತ್ತು ಹೇಗೆ ಮಾಡಲಿ! ಅಷ್ಟೇ, ಈ ಚಿಕ್ಕದಾದ ಮಾತನ್ನು ಸ್ಟೇಜಿನಲ್ಲಿ (ಸ್ಥಿತಿಯಲ್ಲಿ) ತೋರಿಸಿರಿ. ಒಳ್ಳೆಯದು!

ದಾದಿಯರೊಂದಿಗೆ:-
ಬಾಪ್ದಾದಾರವರ ಬಳಿ ತಮ್ಮೆಲ್ಲರ ಹೃದಯದ ಸಂಕಲ್ಪಗಳು ಖಂಡಿತವಾಗಿ ತಲುಪುತ್ತದೆ. ಇಷ್ಟೆಲ್ಲಾ ಶ್ರೇಷ್ಠಾತ್ಮರ ಶ್ರೇಷ್ಠ ಸಂಕಲ್ಪವಿದೆ, ಅಂದಮೇಲೆ ಸಾಕಾರರೂಪದಲ್ಲಿ ಆಗಲೇಬೇಕು. ಯೋಜನೆಗಳನ್ನಂತು ಬಹಳ ಚೆನ್ನಾಗಿ ತಯಾರು ಮಾಡಿದ್ದೀರಿ. ಮತ್ತು ಇದೇ ಪ್ಲಾನ್ ಎಲ್ಲರನ್ನೂ ಪ್ಲೇನ್ ಮಾಡಿಬಿಡುತ್ತದೆ. ಇಡೀ ವಿಶ್ವದಲ್ಲಿ ವಿಶೇಷ ಆತ್ಮರ ಶಕ್ತಿಯಂತು ಒಂದೇ ಆಗಿದೆ. ಮತ್ತು ಎಲ್ಲಿಯೂ ಇಂತಹ ವಿಶೇಷ ಆತ್ಮರ ಸಂಘಟನೆಯಿಲ್ಲ. ಇಲ್ಲಿ ಸಂಘಟನೆಯ ಶಕ್ತಿಯು ವಿಶೇಷವಾಗಿ ಇದೆ. ಆದ್ದರಿಂದ ಈ ಸಂಘಟನೆಯ ಪ್ರತಿ ಎಲ್ಲರಿಗೂ ವಿಶೇಷವಾದ ದೃಷ್ಟಿಯಿದೆ, ಮತ್ತೆಲ್ಲರೂ ಏರುಪೇರಿನಲ್ಲಿದ್ದಾರೆ. ಸ್ಥಾನಗಳು ಅಲುಗಾಡುತ್ತಿದೆ ಮತ್ತು ಈ ರಾಜ್ಯದ ಸ್ಥಾನವು ತಯಾರಾಗುತ್ತಿದೆ. ಇಲ್ಲಿ ಗುರುವಿನ ಗದ್ದುಗೆಯಿಲ್ಲ ಆದ್ದರಿಂದ ಅಲುಗಾಡುವುದಿಲ್ಲ. ಸ್ವರಾಜ್ಯದ ಹಾಗೂ ವಿಶ್ವ ರಾಜ್ಯದ ಗದ್ದುಗೆಯಿದೆ. ಎಲ್ಲರೂ ಅಲುಗಾಡಿಸಲು ಪ್ರಯತ್ನವನ್ನೂ ಮಾಡುತ್ತಿರುತ್ತಾರೆ ಆದರೆ ಸಂಘಟನೆಯ ಶಕ್ತಿಯ ಕಾರಣದಿಂದ ಅಲುಗಾಡಿಸಲು ಸಾಧ್ಯವಿಲ್ಲ. ಅಂದಮೇಲೆ ಈ ಸಂಘಟನೆಯ ಶಕ್ತಿಯ ವಿಶೇಷತೆಯನ್ನು ಸದಾ ಹಾಗೂ ಮುಂದುವರೆಸುತ್ತಾ ಸಾಗಿರಿ. ಈ ಸಂಘಟನೆಯೇ ಕೋಟೆಯಾಗಿದೆ, ಆದ್ದರಿಂದ ಯುದ್ಧ ಮಾಡಲು ಸಾಧ್ಯವಿಲ್ಲ. ವಿಜಯವಂತು ಇದ್ದೇ ಇದೆ, ಕೇವಲ ರಿಪೀಟ್ ಮಾಡಬೇಕು ಅಷ್ಟೇ. ಯಾರು ರಿಪೀಟ್ ಮಾಡುವುದರಲ್ಲಿ ಬುದ್ಧಿವಂತರಾಗಿರುತ್ತಾರೆ, ಅವರೇ ವಿಜಯಿಯಾಗಿ ಸ್ಟೇಜಿನ ಮೇಲೆ ಪ್ರಸಿದ್ಧರಾಗಿ ಬಿಡುತ್ತಾರೆ. ಸಂಘಟನೆಯ ಶಕ್ತಿಯೇ ವಿಜಯದ ವಿಶೇಷ ಆಧಾರ ಸ್ವರೂಪವಾಗಿದೆ. ಈ ಸಂಘಟನೆಯೇ ಸೇವೆಯ ವೃದ್ಧಿಯಲ್ಲಿ ಸಫಲತೆಯನ್ನು ಪ್ರಾಪ್ತಿ ಮಾಡಿಸುತ್ತದೆ. ಪಾಲನೆಯ ರಿಟರ್ನ್ನ್ನು ದಾದಿಯರು ಬಹಳ ಚೆನ್ನಾಗಿ ಕೊಟ್ಟಿದ್ದಾರೆ. ಸಂಘಟನೆಯ ಶಕ್ತಿಯ ಆಧಾರವೇನಾಗಿದೆ? ಕೇವಲ ಈ ಪಾಠವು ಪರಿಪಕ್ವವಾಗಿ ಬಿಡಲಿ - ರಿಗಾರ್ಡ್ ಕೊಡುವುದೇ ರಿಗಾರ್ಡ್ ತೆಗೆದುಕೊಳ್ಳುವುದಾಗಿದೆ. ಕೊಡುವುದು ತೆಗೆದುಕೊಳ್ಳುವುದಯಿತು, ತೆಗೆದುಕೊಳ್ಳುವುದು -ತೆಗೆದುಕೊಳ್ಳುವುದಲ್ಲ. ತೆಗೆದುಕೊಳ್ಳುವುದು ಅರ್ಥಾತ್ ಕಳೆದುಕೊಳ್ಳುವುದು. ಕೊಡುವುದು ಅರ್ಥಾತ್ ತೆಗೆದುಕೊಳ್ಳುವುದಾಗಿದೆ. ಯಾರೇ ಕೊಡುತ್ತಾರೆಂದರೆ ಕೊಡಲಿ, ಇದಂತು ವ್ಯಾಪಾರವಲ್ಲ. ಇದಂತು ದಾತನಾಗುವ ಮಾತಾಗಿದೆ. ದಾತನು ತೆಗೆದುಕೊಂಡನಂತರ ಕೊಡುವುದಿಲ್ಲ. ಅವರಂತು ಕೊಡುತ್ತಾ ಇರುತ್ತಾರೆ, ಆದ್ದರಿಂದ ಈ ಸಂಘಟನೆಯ ಸಫಲತೆಯಿದೆ. ಆದರೆ ಈಗ ಕಂಕಣವು ತಯಾರಾಗಿದೆ, ಮಾಲೆಯು ತಯಾರಾಗಿಲ್ಲ. ವೃದ್ಧಿಯಾಗಲಿಲ್ಲವೆಂದರೆ ಯಾರಮೇಲೆ ರಾಜ್ಯಾಡಳಿತ ಮಾಡುತ್ತೀರಿ! ಈಗಂತು ವೃದ್ಧಿಯ ಪಟ್ಟಿಯಲ್ಲಿ ಕೊರತೆಯಿದೆ. 9 ಲಕ್ಷವೇ ತಯಾರಾಗಿಲ್ಲ. ಯಾವುದೇ ವಿಧಿಯಿಂದಾದರೂ ಭೇಟಿಯಾಗುತ್ತೀರೆಂದರೆ ಸರಿಯಲ್ಲವೆ. ವಿಧಿಯು ಪರಿವರ್ತನೆಯಾಗುತ್ತಿರುತ್ತದೆ. ಮೊದಲು ಸಾಕಾರದಲ್ಲಿ ಮಿಲನವಾದೆವು ಮತ್ತು ಈಗ ಅವ್ಯಕ್ತದಲ್ಲಿ ಮಿಲನವಾಗುತ್ತಿದ್ದೇವೆ. ವಿಧಿಯಂತು ಬದಲಾಯಿತಲ್ಲವೆ. ಮುಂದೆಯೂ ವಿಧಿಯು ಬದಲಾಗುತ್ತಿರುತ್ತದೆ. ವೃದ್ಧಿಯನುಸಾರವಾಗಿ ಮಿಲನವಾಗುವ ವಿಧಿಯು ಬದಲಾಗುತ್ತಿರುತ್ತದೆ. ಒಳ್ಳೆಯದು.

ಪಾರ್ಟಿಯೊಂದಿಗೆ:-
1. ಸದಾ ತಮ್ಮ ಗುಣಮೂರ್ತಿಯ ಮೂಲಕ ಗುಣಗಳ ದಾನವನ್ನು ಕೊಡುತ್ತಿರಿ. ನಿರ್ಬಲರಿಗೆ ಶಕ್ತಿಗಳ, ಗುಣಗಳ, ಜ್ಞಾನದ ದಾನವನ್ನು ಕೊಡುತ್ತಿರುತ್ತೀರೆಂದರೆ ಸದಾ ಮಹಾದಾನಿ ಆತ್ಮರಾಗಿ ಬಿಡುತ್ತೀರಿ. ದಾತನ ಮಕ್ಕಳು ಕೊಡುವವರಾಗಿದ್ದೀರಿ, ತೆಗೆದುಕೊಳ್ಳುವವರಲ್ಲ. ಒಂದುವೇಳೆ ಇವರು ಹೀಗೆ ಮಾಡಿದರೆ ನಾನು ಮಾಡುವೆನೆಂದು ಯೋಚಿಸುತ್ತೀರೆಂದರೆ ತೆಗೆದುಕೊಳ್ಳುವವರಾಗಿ ಬಿಟ್ಟಿರಿ. ನಾನು ಮಾಡುವೆನು, ಇವರು ಕೊಡುವವರಾಗಿ ಬಿಟ್ಟರು. ಅಂದಮೇಲೆ ತೆಗೆದುಕೊಳ್ಳುವವರಲ್ಲ, ದೇವತೆಗಳಾಗಿರಿ. ಏನೆಲ್ಲವೂ ಸಿಗುತ್ತದೆಯೋ ಅದನ್ನು ಕೊಡುತ್ತಾ ಸಾಗಿರಿ. ಎಷ್ಟು ಕೊಡುತ್ತಾ ಸಾಗುತ್ತೀರಿ ಅಷ್ಟು ವೃದ್ಧಿಯಾಗುತ್ತಿರುತ್ತದೆ. ಸದಾ ದೇವಿ ಅರ್ಥಾತ್ ಕೊಡುವವರು. ಒಳ್ಳೆಯದು.

2. ಕೇಳಿರುವುದಂತು ಬಹಳಷ್ಟಿದೆ. ಕೊನೆಗೆ ಲೆಕ್ಕವನ್ನು ತೆಗೆಯಿರಿ, ಕೇಳುವ ಅಂದಾಜು ಎಷ್ಟಿದೆ! ಕೇಳುವುದು ಮತ್ತು ಮಾಡುವುದು ಎರಡೂ ಒಟ್ಟೊಟ್ಟಿಗೆ ಇದೆಯೇ? ಅಥವಾ ಕೇಳುವುದು ಮತ್ತು ಮಾಡುವುದರಲ್ಲಿ ಅಂತರವಾಗಿ ಬಿಡುತ್ತದೆಯೇ, ಕೇಳುವುದು ಏತಕ್ಕಾಗಿ? ಮಾಡುವುದಕ್ಕಾಗಿ ಅಲ್ಲವೆ. ಕೇಳುವುದು ಮತ್ತು ಮಾಡುವುದು ಯಾವಾಗ ಸಮಾನವಾಗಿ ಬಿಡುತ್ತದೆಯೋ ಆಗ ಏನಾಗುವುದು? ಸಂಪನ್ನರಾಗಿ ಬಿಡುತ್ತೀರಲ್ಲವೆ. ಅಂದಮೇಲೆ ಮೊಟ್ಟ ಮೊದಲು ಸಂಪೂರ್ಣ ಸ್ಥಿತಿಯ ಉದಾಹರಣೆಯು ಯಾರಾಗುತ್ತೀರಿ? ಪ್ರತಿಯೊಬ್ಬರೂ ನಾನು ಆಗುವೆನು ಎಂದು ಏಕೆ ಹೇಳುವುದಿಲ್ಲ. ಇದರಲ್ಲಿ ಯಾರು ಮಾಡುವರೋ ಅವರೇ ಅರ್ಜುನ. ಹೇಗೆ ತಂದೆಯು ಸ್ವಯಂನ್ನು ನಿಮಿತ್ತನನ್ನಾಗಿ ಮಾಡಿಕೊಂಡರು, ಹಾಗೆಯೇ ಯಾರು ನಿಮಿತ್ತರಾಗುತ್ತಾರೆಯೋ, ಅವರು ಅರ್ಜುನರಾಗಿ ಬಿಡುತ್ತಾರೆ ಅರ್ಥಾತ್ ಮೊದಲನೇ ನಂಬರಿನಲ್ಲಿ ಬಂದು ಬಿಡುತ್ತಾರೆ. ಒಳ್ಳೆಯದು - ನೋಡೋಣ ಯಾರಾಗುತ್ತಾರೆ! ಬಾಪ್ದಾದಾರವರಂತು ಮಕ್ಕಳನ್ನು ನೋಡಲು ಬಯಸುತ್ತಾರೆ. ವರ್ಷವು ಕಳೆದು ಹೋಗುತ್ತಿದೆ. ಹೇಗೆ ವರ್ಷವು ಕಳೆಯುತ್ತದೆ ಹಾಗೆಯೇ ಹಳೆಯ ಯಾವುದೆಲ್ಲಾ ಚಲನೆಯಿದೆಯೋ ಅದೂ ಕಳೆದು ಹೋಗಲಿ. ಮತ್ತು ಹೊಸ ಉಮ್ಮಂಗ, ಹೊಸ ಸಂಕಲ್ಪವು ಸದಾ ಇರಲಿ - ಇದೇ ಸಂಪೂರ್ಣತೆಯ ಚಿಹ್ನೆಯಾಗಿದೆ. ಈಗ ಹಳೆಯದೆಲ್ಲವೂ ಸಮಾಪ್ತಿಯಾಯಿತು, ಈಗ ಎಲ್ಲವೂ ಹೊಸದಾಗಲಿ.

ಪ್ರಶ್ನೆ:-
ತಂದೆಯ ಸಮೀಪ ಬರಲು ಆಧಾರವೇನಾಗಿದೆ?

ಉತ್ತರ:-
ವಿಶೇಷತೆಗಳು. ಯಾವುದಾದರೊಂದು ವಿಶೇಷತೆಯೇ ತಂದೆಯ ಸಮೀಪಕ್ಕೆ ತರುತ್ತದೆ. ಈ ವಿಶೇಷತೆಗಳು ಸೇವೆಯ ಮೂಲಕವೇ ವೃದ್ಧಿಯ ಪ್ರಾಪ್ತಿಯಾಗುತ್ತದೆ. ಯಾವ ವಿಶೇಷತೆಗಳನ್ನು ತಂದೆಯು ತುಂಬಿದ್ದಾರೆಯೋ, ಅವೆಲ್ಲವನ್ನೂ ಸೇವೆಯಲ್ಲಿ ಉಪಯೋಗಿಸಿರಿ. ವಿಶೇಷತೆಯನ್ನು ಸಾಕಾರದಲ್ಲಿ ತರುವುದರಿಂದ ಸೇವೆಯ ವಿಷಯದಲ್ಲಿಯೂ ಅಂಕಗಳು ಸಿಕ್ಕಿ ಬಿಡುತ್ತದೆ, ತಮ್ಮ ಅನುಭವವನ್ನು ಅನ್ಯರಿಗೂ ತಿಳಿಸುತ್ತೀರೆಂದರೆ, ಅದರ ಉಮ್ಮಂಗ-ಉತ್ಸಾಹವು ಹೆಚ್ಚುತ್ತದೆ.

ಪ್ರಶ್ನೆ:-
ಆತ್ಮೀಯತೆಯಲ್ಲಿ ಕೊರತೆಯಾಗಲು ಕಾರಣವೇನು?

ಉತ್ತರ:-
ಸ್ವಯಂನ್ನು ಹಾಗೂ ಯಾರ ಸೇವೆಯನ್ನು ಮಾಡುತ್ತೀರಿ, ಅದನ್ನು ಉಡುಗೊರೆಯೆಂದು ತಿಳಿಯುವುದಿಲ್ಲ. ಉಡುಗೊರೆಯೆಂದು ತಿಳಿಯುವುದರಿಂದ ಅನಾಸಕ್ತರಾಗಿರುತ್ತೀರಿ ಮತ್ತು ಅನಾಸಕ್ತರಾಗುವುದರಿಂದಲೇ ಆತ್ಮೀಯತೆಯು ಬರುತ್ತದೆ.

ಪ್ರಶ್ನೆ:-
ವರ್ತಮಾನ ಸಮಯದಲ್ಲಿ ವಿಶ್ವದ ಮೆಜಾರಿಟಿ ಆತ್ಮರಲ್ಲಿ ಯಾವ ಎರಡು ಮಾತುಗಳ ಪ್ರವೇಶತೆಯಿದೆ?

ಉತ್ತರ:-
1. ಭಯ ಮತ್ತು 2. ಚಿಂತೆ. ಇವೆರಡೇ ವಿಶೇಷವಾಗಿ ಎಲ್ಲರಲ್ಲಿ ಪ್ರವೇಶವಾಗಿದೆ. ಅದರೆ ಅವರು ಎಷ್ಟೇ ಚಿಂತೆಯಲ್ಲಿರಬಹುದು ಅಷ್ಟೇ ತಾವು ಶುಭಚಿಂತರಾಗಿದ್ದೀರಿ. ಚಿಂತೆಗೆ ಬದಲಾಗಿ ಶುಭಚಿಂತಕ ಭಾವನಾಸ್ವರೂಪರಾಗಿ ಬಿಟ್ಟಿದ್ದೀರಿ. ಭಯಭೀತರಾಗುವ ಬದಲು ಸುಖದ ಗೀತೆಯನ್ನು ಹಾಡುತ್ತಿದ್ದೀರಿ. ಬಾಪ್ದಾದಾರವರು ಇಂತಹ ನಿಶ್ಚಿಂತ ಚಕ್ರವರ್ತಿಗಳನ್ನು ನೋಡುತ್ತಿದ್ದಾರೆ.

ಪ್ರಶ್ನೆ:-
ವರ್ತಮಾನ ಸಮಯದಲ್ಲಿ ಯಾವ ಸೀಜನ್ ನಡೆಯುತ್ತಿದೆ? ಇಂತಹ ಸಮಯದಲ್ಲಿ ತಾವು ಮಕ್ಕಳ ಕರ್ತವ್ಯವೇನಾಗಿದೆ?

ಉತ್ತರ:-
ವರ್ತಮಾನ ಸಮಯದ ಸೀಜನ್ ಅಕಾಲಮೃತ್ಯುವಿನದೇ ನಡೆಯುತ್ತಿದೆ. ಹೇಗೆ ವಾಯುವಿನ, ಸಮುದ್ರದ ಬಿರುಗಾಳಿಯು ಇದ್ದಕ್ಕಿದ್ದಂತೆ ಆಗುತ್ತಿದೆ, ಹಾಗೆಯೇ ಈ ಅಕಾಲಮೃತ್ಯುವಿನದೂ ಬಿರುಗಾಳಿಯು ಅಚಾನಕ್ ಮತ್ತು ವೇಗದಿಂದ, ಒಂದೇಸಾರಿ ಅನೇಕರನ್ನು ಕರೆದುಕೊಂಡು ಹೋಗುತ್ತದೆ. ಅಂತಹ ಸಮಯದಲ್ಲಿ ಅಕಾಲಮೃತ್ಯುವಿನ ಆತ್ಮರಿಗೆ, ಅಕಾಲಮೂರ್ತಿಯಾಗಿದ್ದು ಶಾಂತಿ ಮತ್ತು ಶಕ್ತಿಯ ಸಹಯೋಗವನ್ನು ಕೊಡುವುದು ತಾವು ಮಕ್ಕಳ ಕರ್ತವ್ಯವಾಗಿದೆ. ಅಂದಮೇಲೆ ಎಲ್ಲರಿಗೂ ಸದಾ ಶುಭಚಿಂತಕರಾಗಿ ಶುಭ ಭಾವನೆ, ಶುಭ ಕಾಮನೆಯ ಮಾನಸಿಕ ಸೇವೆಯಿಂದ ಸುಖ-ಶಾಂತಿ ಕೊಡಿ. ಒಳ್ಳೆಯದು.

ವರದಾನ:  
ಧೃಡತೆಯ ಮೂಲಕ ಬಂಜರು ಭೂಮಿಯಲ್ಲಿಯೂ ಫಲವನ್ನು ಉತ್ಪಾದಿಸುವ ಸಫಲತಾ ಸ್ವರೂಪ ಭವ.

ಯಾವುದೇ ಮಾತಿನಲ್ಲಿ ಸಫಲತಾ ಸ್ವರೂಪರಾಗುವುದಕ್ಕಾಗಿ ಧೃಡತೆ ಮತ್ತು ಸ್ನೇಹದ ಸಂಘಟನೆಯಿರಬೇಕು. ಈ ಧೃಡತೆಯು ಬಂಜರು ಭೂಮಿಯಲ್ಲಿಯೂ ಫಲವನ್ನು ಉತ್ಪನ್ನ ಮಾಡಿ ಬಿಡುತ್ತದೆ. ಹೇಗೆ ಇತ್ತೀಚೆಗೆ ವಿಜ್ಞಾನಿಗಳು ಮರಳಿನಲ್ಲಿಯೂ ಫಲವನ್ನು ಉತ್ಪಾದಿಸುವ ಪ್ರಯತ್ನದಲ್ಲಿದ್ದಾರೆ, ಹಾಗೆಯೇ ತಾವು ಶಾಂತಿಯ ಶಕ್ತಿಯ ಮೂಲಕ ಸ್ನೇಹದ ನೀರನ್ನು ಕೊಡುತ್ತಾ ಫಲೀಭೂತರಾಗಿರಿ. ಧೃಡತೆಯ ಮೂಲಕ ಭರವಸೆಯಿಲ್ಲದಿರುವವರಿಗೂ ಸಹ ಭರವಸೆಯ ದೀಪಕವನ್ನು ಬೆಳಗಿಸಬಹುದು ಏಕೆಂದರೆ ಸಾಹಸದಿಂದ ತಂದೆಯ ಸಹಯೋಗವು ಸಿಕ್ಕಿ ಬಿಡುತ್ತದೆ.

ಸ್ಲೋಗನ್:
ಸ್ಲೋಗನ್: ತಮ್ಮನ್ನು ಸದಾ ಪ್ರಭುವಿನ ಉಡುಗೊರೆಯೆಂದು ತಿಳಿದು ನಡೆಯುತ್ತೀರೆಂದರೆ ಕರ್ಮದಲ್ಲಿ ಆತ್ಮೀಯತೆಯು ಬರುತ್ತದೆ.


ಸ್ವ-ಪರಿವರ್ತನೆ, ಸ್ವ-ಉನ್ನತಿಗಾಗಿ ಸ್ವಯಂನ್ನು ಪರಿಶೀಲನೆ ಮಾಡಿಕೊಳ್ಳಲು ಅವ್ಯಕ್ತ ವಾಣಿಯಿಂದ ಪ್ರಶ್ನೆಗಳು:
1. ಯಾವ ವಿಶೇಷತೆ ಮೂಲಕ ದಾತಾತನದ ಅನುಭವವಾಗುವುದು?
2. ಮಾಲೀಕತನದ ಲಕ್ಷಣವೇನು?
3. ಯಾರನ್ನು ವಿಶಾಲ ಹೃದಯದವರು ಎಂದು ಯಾರನ್ನು ಹೇಳಬಹುದು?
4. ಬಾಪದಾದಾರವರು ಎಲ್ಲ ಮಕ್ಕಳಲ್ಲಿ ಯಾವ ಶ್ರೇಷ್ಠ ಆಸೆಯನ್ನು ಇಟ್ಟುಕೊಳ್ಳುತ್ತಾರೆ?
5. ತಮ್ಮನು ತಾವೇ ನೋಡಿಕೊಳ್ಳಬೇಕು - ನಾವು ಏನು ಮಾಡಬೇಕು?
6. ಸಂತುಷ್ಟತೆ ಎಂದು ಯಾವುದಕ್ಕೆ ಕರೆಯಲಾಗುತ್ತದೆ?
7. ಸೈಲೆನ್ಸ್ ಶಕ್ತಿಯಿಂದ ಏನು ಸಿಗುವುದು?
8. ನಮ್ಮ ಕರ್ಮದಲ್ಲಿ ಆತ್ಮೀಕತೆ ಯಾವಾಗ ಬರುವುದು?
9. ಇನ್ನೊಬ್ಬರನ್ನು ನೋಡಬಾರದು ಏಕೆ?
10. ತಮ್ಮನ್ನು ಸದಾ ಏನೆಂದು ತಿಳಿಯಬೇಕು?