22.06.22         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ- ತಂದೆಯು ಸ್ವರ್ಗದ ತಳಪಾಯವನ್ನು ಹಾಕುತ್ತಿದ್ದಾರೆ, ನೀವು ಮಕ್ಕಳು ಸಹಯೋಗಿಗಳಾಗಿ ತಮ್ಮ ಭಾಗವನ್ನು ಜಮಾ ಮಾಡಿಕೊಳ್ಳಿ, ಈಶ್ವರೀಯ ಮತದಂತೆ ನಡೆದು ಶ್ರೇಷ್ಠಪ್ರಾಲಬ್ಧವನ್ನು ರೂಪಿಸಿಕೊಳ್ಳಿ

ಪ್ರಶ್ನೆ:
ಬಾಪ್ದಾದಾರವರಿಗೆ ಸದಾ ಎಂತಹ ಮಕ್ಕಳ ಆವಶ್ಯಕತೆಯಿದೆ?

ಉತ್ತರ:
ಯಾರು ಬಹಳಷ್ಟು ಮಧುರ, ಶೀತಲ ಸ್ವಭಾವವುಳ್ಳ ಸೇವಾಧಾರಿ ಮಕ್ಕಳಿದ್ದಾರೆ ಅಂತಹ ಮಕ್ಕಳ ಅವಶ್ಯಕತೆಯು ತಂದೆಗೆ ಇರುತ್ತದೆ. ಸೇವಾಧಾರಿ ಮಕ್ಕಳೇ ತಂದೆಯ ಹೆಸರನ್ನು ಪ್ರಸಿದ್ಧ ಮಾಡುತ್ತಾರೆ. ಎಷ್ಟು ತಂದೆಯ ಸಹಯೋಗಿಗಳಾಗುತ್ತಾರೆ, ಆಜ್ಞಾಕಾರಿ ಮತ್ತು ಪ್ರಾಮಾಣಿಕರಾಗಿರುತ್ತಾರೆ ಅಷ್ಟು ಆಸ್ತಿಗೆ ಹಕ್ಕುಧಾರರಾಗುತ್ತಾರೆ.

ಗೀತೆ:
ಓಂನಮಃ ಶಿವಾಯ.................

ಓಂ ಶಾಂತಿ.
ಓಂನ ಅರ್ಥವನ್ನು ಯಾರು ತಿಳಿಸಿದರು? ತಂದೆ. ಯಾವಾಗ ತಂದೆಯೆಂದು ಹೇಳಲಾಗುತ್ತದೆ ಅವರ ಹೆಸರೂ ಸಹ ಅವಶ್ಯವಾಗಿ ಇರಬೇಕು. ಭಲೆ ಸಾಕಾರನಿರಲಿ ಅಥವಾ ನಿರಾಕಾರನಾಗಿರಲಿ ಹೆಸರಂತೂ ಆವಶ್ಯವಾಗಿ ಇರಬೇಕು ಮತ್ತು ಯಾರೆಲ್ಲಾ ಆತ್ಮಗಳಿದ್ದಾರೆ ಅವರಿಗೆ ಎಂದೂ ಹೆಸರಿರುವುದಿಲ್ಲ. ಆತ್ಮವು ಯಾವಾಗ ಜೀವಾತ್ಮನಾಗುತ್ತದೆ ಆಗ ಶರೀರದ ಮೇಲೆ ಹೆಸರು ಬರುತ್ತದೆ. ಬ್ರಹ್ಮದೇವತಾಯ ನಮಃ ಎಂದು ಹೇಳುತ್ತಾರೆ, ವಿಷ್ಣುವನ್ನೂ ಸಹ ದೇವತೆಯೆಂದು ಹೇಳುತ್ತಾರೆ ಏಕೆಂದರೆ ಆಕಾರಿಯಾಗಿರುವುದರಿಂದ ಶರೀರಕ್ಕೆ ಹೆಸರು ಬಂದಿತು. ಯಾವಾಗಲೂ ಹೆಸರು ಶರೀರದ ಮೇಲೆಯೇ ಬರುತ್ತದೆ, ಕೇವಲ ಒಬ್ಬ ನಿರಾಕಾರ ಪರಮಪಿತ ಪರಮಾತ್ಮನಿದ್ದಾರೆ, ಅವರ ಹೆಸರು ಶಿವ ಎಂದಾಗಿದೆ. ಅವರೊಬ್ಬರಿಗೇ ಆತ್ಮನ ಹೆಸರಿದೆ ಬಾಕಿ ಎಲ್ಲರಿಗೆ ಶರೀರದ ಮೇಲೆ ಹೆಸರಿಡಲಾಗುತ್ತದೆ. ಶರೀರವನ್ನು ಬಿಟ್ಟಾಗ ನಂತರ ಹೆಸರು ಬದಲಾಗುತ್ತದೆ. ಪರಮಾತ್ಮನಿಗೆ ಒಂದೇ ಹೆಸರು ನಡೆಯುತ್ತದೆ, ಎಂದೂ ಸಹ ಬದಲಾಗುವುದಿಲ್ಲ. ಇದರಿಂದ ಅವರು ಎಂದೂ ಜನನ-ಮರಣದಲ್ಲಿ ಬರುವುದಿಲ್ಲವೆಂದು ಸಿದ್ಧವಾಗುತ್ತದೆ. ಒಂದುವೇಳೆ ಅವರೇ ಜನನ-ಮರಣದಲ್ಲಿ ಬಂದರೆ ಅನ್ಯರನ್ನು ಜನನ-ಮರಣದಿಂದ ಬಿಡಿಸಲು ಸಾಧ್ಯವಿಲ್ಲ. ಅಮರಲೋಕದಲ್ಲಿ ಎಂದೂ ಸಹ ಜನನ-ಮರಣವೆಂದು ಹೇಳಲಾಗುವುದಿಲ್ಲ. ಅಲ್ಲಂತೂ ಬಹಳ ಸಹಜರೀತಿಯಲ್ಲಿ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ. ಸಾಯುವುದು ಇಲ್ಲಿಯೇ ಇದೆ. ಸತ್ಯಯುಗದಲ್ಲಿ ಇಂತಹವರು ಸತ್ತುಹೋದರೆಂದು ಹೇಳುವುದಿಲ್ಲ. ಸಾವಿನ ಶಬ್ದವು ದುಃಖದ್ದಾಗಿದೆ. ಅಲ್ಲಂತೂ ಹಳೆಯ ಶರೀರವನ್ನು ಬಿಟ್ಟು ಇನ್ನೊಂದು ಬಾಲ್ಯಾವಸ್ಥೆಯ ಶರೀರವನ್ನು ತೆಗೆದುಕೊಳ್ಳುತ್ತಾರೆ. ಖುಷಿಯನ್ನು ಆಚರಿಸುತ್ತಾರೆ. ಹಳೆಯ ಪ್ರಪಂಚದಲ್ಲಿ ಎಷ್ಟು ಮನುಷ್ಯರಿದ್ದಾರೆ, ಇವರೆಲ್ಲರೂ ಸಮಾಪ್ತಿ ಆಗುವವರಿದ್ದಾರೆ. ಯಾದವರು ಮತ್ತು ಕೌರವರಿದ್ದರು ಎಂದು ತೋರಿಸುತ್ತಾರೆ. ಯುದ್ಧದಲ್ಲಿ ಅವರು ಸಮಾಪ್ತಿಯಾದರೆಂದರೆ ಪಾಂಡವರಿಗೆ ದುಃಖವಾಗಿತ್ತೇನು! ಇಲ್ಲ. ಪಾಂಡವರ ರಾಜ್ಯವಂತು ಸ್ಥಾಪನೆಯಾಯಿತು. ಈ ಸಮಯದಲ್ಲಿ ನೀವು ಬ್ರಹ್ಮಾವಂಶಿ ಬ್ರಾಹ್ಮಣರು ಬ್ರಹ್ಮಾಕುಮಾರ ಹಾಗೂ ಕುಮಾರಿಯರಾಗಿದ್ದೀರಿ. ಬ್ರಹ್ಮನಿಗೆ ಇಷ್ಟೊಂದು ಮಕ್ಕಳಿರುವುದರಿಂದ ಅವಶ್ಯವಾಗಿ ಪ್ರಜಾಪಿತನಾದರು. ಶಿವನೇ ಬ್ರಹ್ಮಾ-ವಿಷ್ಣು-ಶಂಕರರ ತಂದೆಯಾಗಿದ್ದಾರೆ. ಅವರನ್ನೇ ಭಗವಂತನೆಂದು ಹೇಳಲಾಗುತ್ತದೆ. ಈ ಸಮಯದಲ್ಲಿ ನಾವು ಈಶ್ವರೀಯ ಕುಲದವರಾಗಿದ್ದೇವೆಂದು ನಿಮಗೆ ತಿಳಿದಿದೆ. ನಾವು ತಂದೆಯ ಜೊತೆ, ತಂದೆಯ ಮನೆ ನಿರ್ವಾಣಧಾಮದಲ್ಲಿ ಹೋಗುವವರಾಗಿದ್ದೇವೆ. ತಂದೆಯು ಬಂದಿದ್ದಾರೆ, ಅವರನ್ನು ಪ್ರಿಯತಮನೆಂದು ಹೇಳಲಾಗುತ್ತದೆ ಆದರೆ ಆಕ್ಯುರೇಟ್ ಸಂಬಂಧದಲ್ಲಿ ಅವರು ತಂದೆಯಾಗಿದ್ದಾರೆ ಏಕೆಂದರೆ ಆಸ್ತಿಯು ಪ್ರಿಯತಮೆಯರಿಗೆ ಸಿಗುವುದಿಲ್ಲ. ಆಸ್ತಿಯನ್ನು ಮಕ್ಕಳು ತೆಗೆದುಕೊಳ್ಳುವುದರಿಂದ ತಂದೆಯೆಂದು ಹೇಳುವುದು ಸರಿಯಾಗಿದೆ. ತಂದೆಯನ್ನು ಮರೆಯುವುದರಿಂದಲೇ ಮನುಷ್ಯರು ನಾಸ್ತಿಕರಾಗುತ್ತಾರೆ. ಕೃಷ್ಣನ ಚರಿತ್ರೆಯನ್ನು ಗಾಯನ ಮಾಡಲಾಗುತ್ತದೆ ಆದರೆ ಕೃಷ್ಣನ ಚರಿತ್ರೆಯಂತೂ ಯಾವುದೂ ಇಲ್ಲ. ಭಾಗವತದಲ್ಲಿ ಕೃಷ್ಣನ ಚರಿತ್ರೆಯಿದೆ ಆದರೆ ಶಿವಬಾಬಾನ ಚರಿತ್ರೆ ಇರಬೇಕಾಗಿದೆ. ಅವರೇ ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ. ಇದರಲ್ಲಿ ಚರಿತ್ರೆಯ ಮಾತೇನಿದೆ! ಕೃಷ್ಣನ ಚರಿತ್ರೆಯೂ ಇಲ್ಲ, ಅವರು ಮಗುವಾಗಿದ್ದಾರೆ. ಹೇಗೆ ಚಿಕ್ಕಮಕ್ಕಳು ಇರುತ್ತಾರೆ. ಆ ಮಕ್ಕಳೇ ಯಾವಾಗಲೂ ಚಂಚಲವಾಗುತ್ತಾರೆ ಆದ್ದರಿಂದ ಎಲ್ಲರಿಗೆ ಪ್ರಿಯರೆನಿಸುತ್ತಾರೆ. ಕೃಷ್ಣನಿಗಾಗಿ ತೋರಿಸುತ್ತಾರೆ- ಕೃಷ್ಣನು ಮಡಿಕೆಯನ್ನು ಒಡೆಯುತ್ತಿದ್ದನು ಎನ್ನುವ ರೀತಿಯಂತೂ ಏನೂ ಇಲ್ಲ. ಶಿವಬಾಬಾನಿಗೆ ಯಾವ ಚರಿತ್ರೆಯಿದೆ? ನೀವು ನೋಡುತ್ತೀರಿ, ತಂದೆಯಂತೂ ಓದಿಸಿ ಪತಿತರನ್ನು ಪಾವನರನ್ನಾಗಿ ಮಾಡುತ್ತಾರೆ. ಹೇಳುತ್ತಾರೆ- ಭಕ್ತಿಮಾರ್ಗದಲ್ಲಿ ನಾನು ನಿಮ್ಮ ಭಾವನೆಯನ್ನು ಪೂರ್ಣ ಮಾಡುತ್ತೇನೆ ಬಾಕಿ ಇಲ್ಲಂತೂ ನಾನು ಓದಿಸುತ್ತೇನೆ. ಈ ಸಮಯದಲ್ಲಿ ಯಾರು ನನ್ನ ಮಕ್ಕಳಿದ್ದಾರೆ ಅವರೇ ನನ್ನನ್ನು ನೆನಪು ಮಾಡುತ್ತಾರೆ. ಮತ್ತೆಲ್ಲರ ನೆನಪನ್ನು ಮರೆತು ಒಬ್ಬ ತಂದೆಯ ನೆನಪಿನಲ್ಲಿ ಇರುವ ಪ್ರಯತ್ನಪಡುತ್ತಾರೆ. ನಾನು ಸರ್ವವ್ಯಾಪಿ ಎಂದಲ್ಲ. ನನ್ನನ್ನು ಯಾರು ನೆನಪು ಮಾಡುತ್ತಾರೆ, ಅವರನ್ನು ನಾನೂ ಸಹ ನೆನಪು ಮಾಡುತ್ತೇನೆ. ಆದರೂ ಸಹ ಮಕ್ಕಳನ್ನೇ ನೆನಪು ಮಾಡುತ್ತಾರೆ. ಮುಖ್ಯ ಮಾತಂತೂ ಒಂದಾಗಿದೆ. ಯಾವಾಗ ಯಾವುದೇ ದೊಡ್ಡ ಮನುಷ್ಯರಿಗೆ ಜ್ಞಾನವನ್ನು ತಿಳಿಸಿದಾಗ ಅವರನ್ನು ಸಾಹಸವಂತರೆಂದು ಹೇಳಬಹುದು. ಎಲ್ಲದರ ಆಧಾರ ಗೀತೆಯ ಮೇಲಿದೆ. ಗೀತೆಯು ನಿರಾಕಾರ ಪರಮಪಿತ ಪರಮಾತ್ಮನದೆಂದು ಗಾಯನವಿದೆ, ಮನುಷ್ಯರದಲ್ಲ. ಭಗವಂತನನ್ನು ರುದ್ರನೆಂದು ಹೇಳಲಾಗುತ್ತದೆ. ಕೃಷ್ಣನಿಗೆ ರುದ್ರನೆಂದು ಹೇಳುವುದಿಲ್ಲ. ರುದ್ರಜ್ಞಾನ ಯಜ್ಞದಿಂದಲೇ ವಿನಾಶಜ್ವಾಲೆಯೂ ಪ್ರಜ್ವಲಿತಗೊಳ್ಳುತ್ತದೆ.

ಕೆಲವರು ಪರಮಾತ್ಮನನ್ನು ಮಾಲೀಕನೆಂದು ಹೇಳಿ ನೆನಪು ಮಾಡುತ್ತಾರೆ, ಆ ಮಾಲೀಕನಿಗೆ ಹೆಸರಿಲ್ಲವೆಂದು ಹೇಳುತ್ತಾರೆ. ಒಳ್ಳೆಯದು- ಆ ಮಾಲೀಕ ಎಲ್ಲಿದ್ದಾರೆ? ಅವರು ವಿಶ್ವಕ್ಕೆ, ಇಡೀ ಸೃಷ್ಟಿಯ ಮಾಲೀಕನಾಗಿದ್ದಾರೆಯೇ? ಪರಮಪಿತ ಪರಮಾತ್ಮನಂತು ಸೃಷ್ಟಿಯ ಮಾಲೀಕನಾಗುವುದಿಲ್ಲ. ದೇವೀ-ದೇವತೆಗಳು ಸೃಷ್ಟಿಯ ಮಾಲೀಕನಾಗುತ್ತಾರೆ. ಪರಮಪಿತ ಪರಮಾತ್ಮನಂತೂ ಬ್ರಹ್ಮಾಂಡದ ಮಾಲೀಕನಾಗಿದ್ದಾರೆ. ಬ್ರಹ್ಮತತ್ವವು ತಂದೆಯ ಮನೆಯಾಗಿದೆ ಎಂದರೆ ನಾವು ಮಕ್ಕಳು ಮನೆಯೂ ಆಗಿದೆ. ಬ್ರಹ್ಮಾಂಡವು ತಂದೆಯ ಮನೆಯಾಗಿದೆ. ಅಲ್ಲಿ ಆತ್ಮಗಳನ್ನು ಅಂಡಾಕಾರವಾಗಿ ತೋರಿಸುತ್ತಾರೆ ಆದರೆ ಆ ರೀತಿಯಲ್ಲಿ ಯಾರೂ ಇಲ್ಲ. ನಾವಾತ್ಮಗಳು ಜ್ಯೋತಿರ್ಬಿಂದು ರೂಪದಲ್ಲಿ ನಿವಾಸ ಮಾಡುತ್ತೇವೆ. ಬ್ರಹ್ಮಾಂಡದಿಂದ ಪಾತ್ರವನ್ನಭಿನಯಿಸಲು ಕೆಳಗೆ ಇಳಿಯುತ್ತೇವೆ, ನಾವು ಒಬ್ಬರು ಇನ್ನೊಬ್ಬರ ಹಿಂದೆ ಬರುತ್ತಾ ಇರುತ್ತೇವೆ. ವೃಕ್ಷವೂ ವೃದ್ಧಿಯನ್ನು ಪಡೆಯುತ್ತಿರುತ್ತದೆ. ಇದರಲ್ಲಿ ತಂದೆಯು ಬೀಜರೂಪನಾಗಿದ್ದಾರೆ, ತಳಪಾಯವು ದೇವೀ-ದೇವತೆಗಳೆಂದು ಹೇಳುವುದೇ ಅಥವಾ ಬ್ರಾಹ್ಮಣರೆಂದು ಹೇಳುವುದೇ? ಬ್ರಾಹ್ಮಣರು ಬೀಜವನ್ನು ಹಾಕುತ್ತಾರೆ. ಬ್ರಾಹ್ಮಣರೇ ಮತ್ತೆ ದೇವತೆಗಳಾಗಿ ರಾಜ್ಯವನ್ನು ಮಾಡುತ್ತಾರೆ. ಈಗ ನಮ್ಮ ಮುಖಾಂತರ ಶಿವತಂದೆಯು ತಳಪಾಯವನ್ನು ಹಾಕುತ್ತಿದ್ದಾರೆ. ದೈವೀವಂಶ ಅರ್ಥಾತ್ ಸ್ವರ್ಗದ ತಳಪಾಯವು ಹಾಕಲ್ಪಡುತ್ತಿದೆ. ಯಾರು ಎಷ್ಟು ಸಹಯೋಗಿಗಳಾಗುತ್ತಾರೆ ಅಷ್ಟು ಅವರು ತಮ್ಮ ಭಾಗವನ್ನು ತೆಗೆದುಕೊಳ್ಳುತ್ತಾರೆ. ಇಲ್ಲವೆಂದರೆ ಸೂರ್ಯವಂಶಿಗಳು ಹೇಗಾಗುತ್ತಾರೆ! ಈಗ ನೀವು ಆ ಶ್ರೇಷ್ಠಪ್ರಾಲಬ್ಧವನ್ನು ರೂಪಿಸಿಕೊಳ್ಳುತ್ತಿದ್ದೀರಿ. ಪ್ರತಿಯೊಬ್ಬ ಮನುಷ್ಯನು ಪುರುಷಾರ್ಥದಿಂದ ಪ್ರಾಲಬ್ಧವನ್ನು ಮಾಡಿಕೊಳ್ಳುತ್ತಾ ಇರುತ್ತಾರೆ. ಪ್ರಾಲಬ್ಧವನ್ನು ಮಾಡಿಕೊಳ್ಳಲು ಒಳ್ಳೆಯ ಕಾರ್ಯವನ್ನು ಮಾಡಲಾಗುತ್ತದೆ. ದಾನ-ಪುಣ್ಯ ಮಾಡುವುದು, ಧರ್ಮಶಾಲೆ ಮುಂತಾದವುಗಳನ್ನು ನಿರ್ಮಿಸುವುದು. ಎಲ್ಲರೂ ಈಶ್ವರಾರ್ಥವಾಗಿಯೇ ಮಾಡುತ್ತಾರೆ ಏಕೆಂದರೆ ಅದರ ಫಲವನ್ನು ಕೊಡುವವರು ಈಶ್ವರನೇ ಆಗಿದ್ದಾರೆ. ನೀವೀಗ ಶ್ರೀಮತದನುಸಾರ ಪುರುಷಾರ್ಥ ಮಾಡುತ್ತಿದ್ದೀರಿ. ಬಾಕಿ ಇಡೀಪ್ರಪಂಚವು ಮನುಷ್ಯರ ಮತದ ಮೇಲೆ ಪುರುಷಾರ್ಥವನ್ನು ಮಾಡುತ್ತಿದೆ. ಅದೂ ಸಹ ಆಸುರೀ ಮತವಾಗಿದೆ. ಈಶ್ವರೀಯ ಮತದ ನಂತರ ದೈವೀಮತವಾಗಿದೆ, ನಂತರ ಆಸುರೀ ಮತವಾಗಿದೆ. ಈಗ ನೀವು ಮಕ್ಕಳಿಗೆ ಈಶ್ವರೀಯ ಮತವು ಸಿಗುತ್ತದೆ. ಮಮ್ಮಾ, ಬಾಬಾರವರೂ ಸಹ ತಂದೆಯ ಮತದಿಂದಲೇ ಶ್ರೇಷ್ಠರಾಗುತ್ತಾರೆ. ಯಾವುದೇ ಮನುಷ್ಯರು ದೇವತೆಗಳ ತರಹ ಶ್ರೇಷ್ಠರಾಗಲು ಸಾಧ್ಯವೇ ಇಲ್ಲ. ದೇವತೆಗಳನ್ನು ಶ್ರೇಷ್ಠರನ್ನಾಗಿ ಮಾಡುವವರು ಯಾರು? ಇಲ್ಲಂತೂ ಯಾರೂ ಶ್ರೇಷ್ಠರಿಲ್ಲ. ಶ್ರೇಷ್ಠಾತಿಶ್ರೇಷ್ಠ ಒಬ್ಬರೇ ಆಗಿದ್ದಾರೆ, ಅವರೇ ಎಲ್ಲರಿಗಿಂತ ಶ್ರೇಷ್ಠ ತಂದೆ, ಶಿಕ್ಷಕ, ಸದ್ಗುರು ಆಗಿದ್ದಾರೆ. ಅವರೇ ಶ್ರೀಲಕ್ಷ್ಮೀ-ನಾರಾಯಣರನ್ನಾಗಿ ಮಾಡುತ್ತಾರೆ. ಭಲೆ ರಾಮನಿಗೂ ಸಹ ಹೇಳುತ್ತಾರೆ ಶ್ರೀಸೀತಾ-ಶ್ರೀರಾಮ. ಆಗಲೇ ಅವರಹಿಂದೆ ಕ್ಷತ್ರಿಯ, ಚಂದ್ರವಂಶಿ ಎಂದು ಸೇರ್ಪಡೆಯಾಗುತ್ತದೆ. ಆ ಲಕ್ಷ್ಮೀ-ನಾರಾಯಣರಂತೂ 16 ಕಲಾ ಸಂಪೂರ್ಣ ಸೂರ್ಯವಂಶಿ ದೇವತಾಕುಲದವರಾಗಿದ್ದಾರೆ ಹಾಗೂ ರಾಮ-ಸೀತೆಯು 14 ಕಲೆಗಳ ಚಂದ್ರವಂಶಿಯರಾಗಿದ್ದಾರೆ. 2 ಕಲೆಗಳು ಕಡಿಮೆ ಆಯಿತಲ್ಲವೇ. ಇದೂ ಸಹ ಅವಶ್ಯವಾಗಿ ಆಗಲೇಬೇಕಾಗಿದೆ. ಸೃಷ್ಟಿಯ ಇಳಿಯುವ ಕಲೆಯಾಗುತ್ತದೆ ಎನ್ನುವುದನ್ನು ಮನುಷ್ಯರು ಅರಿತುಕೊಂಡಿಲ್ಲ. 16 ಕಲೆಯಿಂದ 14 ಕಲೆಗಳಾಯಿತೆಂದರೆ ಕೆಳಗಿಳಿಯಿತಲ್ಲವೇ. ಈ ಸಮಯದಲ್ಲಿ ಸಂಪೂರ್ಣ ಕೆಳಗಿದೆ ಏಕೆಂದರೆ ಇದು ರಾವಣನ ಸಂಪ್ರದಾಯವಾಗಿದೆ, ರಾವಣನ ರಾಜ್ಯವಾಗಿದೆ. ರಾವಣನ ಮತವನ್ನು ಆಸುರೀಮತವೆಂದು ಹೇಳಲಾಗುತ್ತದೆ. ಎಲ್ಲರೂ ಪತಿತರಾಗಿದ್ದಾರೆ. ಪತಿತಪ್ರಪಂಚದಲ್ಲಿ ಯಾರೂ ಸಹ ಪಾವನರಿರಲು ಸಾಧ್ಯವಿಲ್ಲ. ಭಾರತವಾಸಿಗಳು ಯಾರು ಪಾವನರಾಗಿದ್ದರು ಅವರೇ ಮತ್ತೆ ಪತಿತರಾಗಿದ್ದಾರೆ, ಮತ್ತೆ ನಾನು ಬಂದು ಅವರನ್ನೇ ಪಾವನರನ್ನಾಗಿ ಮಾಡುತ್ತೇನೆ. ಪತಿತಪಾವನ ಕೃಷ್ಣನೆಂದು ಹೇಳಲಾಗುವುದಿಲ್ಲ. ಚರಿತ್ರೆಯ ಮಾತೂ ಇಲ್ಲ. ಪತಿತಪಾವನ ಎಂದು ಒಬ್ಬ ಪರಮಾತ್ಮನಿಗೆ ಹೇಳುತ್ತಾರೆ. ಅಂತ್ಯದಲ್ಲಿ ಎಲ್ಲರೂ ಹೇಳುತ್ತಾರೆ- ಅಹೋ ಪ್ರಭು ನಿಮ್ಮ ಗತಿ-ಮತವು ಭಿನ್ನವಾಗಿದೆ. ತಮ್ಮ ರಚನೆಯನ್ನು ಯಾರೂ ಅರಿತುಕೊಂಡಿಲ್ಲ. ಅಂದಮೇಲೆ ನೀವೀಗ ಅರಿತುಕೊಂಡೀದ್ದೀರಿ. ಈ ಜ್ಞಾನವೂ ಸಂಪೂರ್ಣ ಹೊಸದಾಗಿದೆ. ಯಾವುದೇ ಹೊಸವಸ್ತು ತಯಾರಾಗಿ ಬರುತ್ತದೆಯೆಂದರೆ ಮೊದಲು ಕಡಿಮೆ ಇರುತ್ತದೆ ನಂತರ ವೃದ್ಧಿಯಾಗುತ್ತಾ ಹೋಗುತ್ತದೆ. ನೀವೂ ಸಹ ಮೊದಲು ಒಂದು ಮೂಲೆಯಲ್ಲಿದ್ದಿರಿ, ಈಗ ದೇಶ-ದೇಶಾಂತರ ವೃದ್ಧಿಯನ್ನು ಪಡೆಯುತ್ತಾ ಇರುತ್ತೀರಿ. ಅವಶ್ಯವಾಗಿ ರಾಜಧಾನಿಯೂ ಸ್ಥಾಪನೆ ಆಗುವುದಿದೆ. ಮೂಲಮಾತು ಇದನ್ನು ಸಿದ್ಧ ಮಾಡಬೇಕಾಗಿದೆ, ಗೀತೆಯ ಭಗವಂತ ಶ್ರೀಕೃಷ್ಣನಲ್ಲ. ತಂದೆಯು ಆಸ್ತಿಯನ್ನು ಕೊಡುತ್ತಾರೆ, ಕೃಷ್ಣನಲ್ಲ. ಲಕ್ಷ್ಮೀ-ನಾರಾಯಣರೂ ಸಹ ತಮ್ಮ ಮಕ್ಕಳಿಗೆ ಆಸ್ತಿಯನ್ನು ಕೊಡುತ್ತಾರೆ. ಅದೂ ಸಹ ಇಲ್ಲಿಯ ಪುರುಷಾರ್ಥದ ಪ್ರಾಲಬ್ಧವೇ ಸಿಗುತ್ತದೆ. ಸತ್ಯಯುಗ-ತ್ರೇತಾಯುಗದಲ್ಲಿ ಬೇಹದ್ದಿನ ಆಸ್ತಿ ಇರುತ್ತದೆ. ಗೋಲ್ಡನ್, ಸಿಲ್ವರ್ ಜುಬಿಲಿಯನ್ನು ಆಚರಿಸುತ್ತಾರೆ. ಇಲ್ಲಂತೂ ಒಂದು ದಿನ ಆಚರಿಸುತ್ತಾರೆ. ನಾವಂತು 1250 ವರ್ಷ ಗೋಲ್ಡನ್ ಜುಬಿಲಿಯನ್ನಾಚರಿಸುತ್ತೇವೆ. ಖುಷಿಯನ್ನು ಆಚರಿಸುತ್ತೇವೆ. ಸಂಪನ್ನರಾಗಿಬಿಡುತ್ತೇವೆ. ಅಂದಮೇಲೆ ತಮ್ಮೊಳಗೆ ಬಹಳ ಖುಷಿಯಿರಬೇಕು. ಕೇವಲ ಹೊರಗಿನಿಂದ ಬತ್ತಿ ಮುಂತಾದವುಗಳನ್ನು ಬೆಳಗಿಸುವುದಲ್ಲ. ಸ್ವರ್ಗದಲ್ಲಿ ನಾವು ಸಂಪೂರ್ಣ ಸಂಪತ್ತಿವಂತರು, ಬಹಳ ಸುಖಿಗಳಾಗಿಬಿಡುತ್ತೇವೆ. ದೇವತಾ ಧರ್ಮದಂತಹ ಸುಖಿಗಳು ಮತ್ತ್ಯಾರೂ ಇರುವುದಿಲ್ಲ. ಮತ್ತೆ ಸಿಲ್ವರ್ ಜುಬಿಲಿ ಮುಂತಾದವುಗಳನ್ನೂ ಸಹ ಪೂರ್ಣವಾಗಿ ಅರಿತುಕೊಂಡಿಲ್ಲ. ಈಗ ನೀವು ಅರ್ಧಕಲ್ಪದ ಮಹೋತ್ಸವವನ್ನು ಆಚರಿಸಲು ತಂದೆಯಿಂದ ಆಸ್ತಿಯನ್ನು ಪಡೆಯುತ್ತಿದ್ದೀರಿ ಆದ್ದರಿಂದ ಮುಖ್ಯಮಾತು ಗೀತೆಯ ಭಗವಂತ ಶಿವನಾಗಿದ್ದಾರೆ, ಅವರೇ ರಾಜಯೋಗವನ್ನು ಕಲಿಸಿದ್ದರು ಈಗ ಮತ್ತೆ ಕಲಿಸುತ್ತಿದ್ದಾರೆ ಎನ್ನುವುದು ತಿಳಿದುಕೊಳ್ಳುವ ಮಾತಾಗಿದೆ. ಯಾವಾಗ ರಾಜ್ಯಭಾಗ್ಯ ಇರುವುದಿಲ್ಲವೋ ಆಗಲೇ ಕಲಿಸುತ್ತಾರೆ. ಈಗ ಪ್ರಜೆಗಳ ಮೇಲೆ ಪ್ರಜೆಗಳ ರಾಜ್ಯವಾಗಿದೆ. ಒಬ್ಬರು ಇನ್ನೊಬ್ಬರನ್ನು ಕೆಳಗಡೆ ತರುವುದರಲ್ಲಿ ನಿಧಾನಿಸುವುದಿಲ್ಲ. ನೀವು ಮಕ್ಕಳು ಈಗ ತಂದೆಯ ಮತದಂತೆ ನಡೆಯುವುದರಿಂದ ಸುಖಧಾಮದ ಮಾಲೀಕರಾಗುತ್ತೀರಿ. ಇಂತಹವರು ಅನೇಕರಿದ್ದಾರೆ ಅವರು ಜ್ಞಾನವನ್ನು ಪೂರ್ಣ ಧಾರಣೆ ಮಾಡುವುದಿಲ್ಲ ಆದರೆ ಸೇವಾಕೇಂದ್ರಕ್ಕೆ ಬರುತ್ತಿರುತ್ತಾರೆ. ಮನಸ್ಸಿನಲ್ಲಿ ಇಚ್ಛೆ ಇರುತ್ತದೆ- ಒಂದು ಮಗುವಿಗೆ ಜನ್ಮ ಕೊಡೋಣ. ಮಾಯೆಯ ಪ್ರೇರಣೆಯಾಗುತ್ತದೆ, ಮದುವೆಯಾಗಿ ಒಂದು ಮಗುವಿನ ಸುಖವನ್ನು ಪಡೆದುಕೊಳ್ಳಬೇಕು. ಅರೇ! ಮಗು ಸುಖವನ್ನೇ ಕೊಡುತ್ತದೆಯೆಂದು ಗ್ಯಾರಂಟಿ ಇದೆಯೇ! 2-4 ವರ್ಷಗಳಲ್ಲಿ ಮಗು ಶರೀರ ಬಿಡುತ್ತದೆಯೆಂದರೆ ಇನ್ನೂ ದುಃಖಿಯಾಗಿಬಿಡುತ್ತೀರಿ. ಇಂದು ಮಜಾ ಮಾಡುತ್ತಾರೆ ನಾಳೆ ಚಿತೆಯ ಮೇಲೆ ಏರುತ್ತಾರೆಂದರೆ ತುಂಬಾ ದುಃಖಿಸಬೇಕಾಗುತ್ತದೆ. ಇದು ದುಃಖಧಾಮವಾಗಿದೆ. ನೋಡಿ, ಆಹಾರವನ್ನೂ ಸಹ ಹೇಗೆ ಸೇವಿಸುತ್ತಾರೆ! ಆದ್ದರಿಂದ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಇಂತಹ ಆಸೆಗಳನ್ನು ಇಟ್ಟುಕೊಳ್ಳಬಾರದು. ಮಾಯೆಯೂ ಸಹ ದೊಡ್ಡ ಬಿರುಗಾಳಿಯನ್ನು ತೆಗೆದುಕೊಂಡು ಬರುತ್ತದೆ. ತಕ್ಷಣ ವಿಕಾರಗಳಲ್ಲಿ ಬೀಳಿಸುತ್ತದೆ ನಂತರ ಬರುವುದಕ್ಕೂ ನಾಚಿಕೆಯಾಗುತ್ತದೆ. ಕುಲಕ್ಕೆ ಕಳಂಕ ಮಾಡಿದರೆಂದರೆ ಆಸ್ತಿಯನ್ನೇನು ತೆಗೆದುಕೊಳ್ಳುತ್ತಾರೆಂದು ಎಲ್ಲರೂ ಹೇಳುತ್ತಾರೆ. ಬಾಬಾ-ಮಮ್ಮಾ ಎಂದು ಹೇಳುತ್ತೀರೆಂದರೆ ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿಯರು ಪರಸ್ಪರದಲ್ಲಿ ಸಹೋದರ-ಸಹೋದರಿಯರಾದರಲ್ಲವೆ! ನಂತರ ಒಂದುವೇಳೆ ವಿಕಾರಗಳಲ್ಲಿ ಬೀಳುತ್ತೀರೆಂದರೆ ಇಂತಹ ಕುಲಕಳಂಕಿತರು ನೂರುಪಟ್ಟು ಕಠಿಣ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಮತ್ತು ಪದವಿಯೂ ಭ್ರಷ್ಟವಾಗಿಬಿಡುತ್ತದೆ. ಕೆಲವರಂತು ವಿಕಾರದಲ್ಲಿ ಹೋಗುತ್ತಾರೆ ನಂತರ ಹೇಳುವುದಿಲ್ಲವೆಂದರೆ ದೊಡ್ಡಶಿಕ್ಷೆಗೆ ಭಾಗಿಧಾರರಾಗಬೇಕಾಗುತ್ತದೆ. ಧರ್ಮರಾಜ ಬಾಬಾರವರಂತು ಯಾರನ್ನೂ ಬಿಡುವುದಿಲ್ಲ. ಅವರಂತು ಶಿಕ್ಷೆಯನ್ನು ಜೈಲಿನಲ್ಲಿ ಭೋಗಿಸುತ್ತಾರೆ ಆದರೆ ಇಲ್ಲಿರುವವರಿಗಾಗಿ ಬಹಳ ಕಠಿಣ ಶಿಕ್ಷೆಯಿದೆ. ಇಂತಹವರು ಸೇವಾಕೇಂದ್ರದಲ್ಲಿ ಬಹಳಷ್ಟು ಮಂದಿ ಬರುತ್ತಾರೆ. ತಂದೆಯು ತಿಳಿಸುತ್ತಾರೆ- ಇಂತಹ ಯಾವುದೇ ಕೆಲಸ ಮಾಡಬಾರದು. ನಾವು ಈಶ್ವರನ ಸಂತಾನರಾಗಿದ್ದೇವೆಂದು ಹೇಳುತ್ತಾ ಮತ್ತೆ ವಿಕಾರದಲ್ಲಿ ಹೋಗುತ್ತಾರೆಂದರೆ ತನ್ನದೇ ಸತ್ಯನಾಶ ಮಾಡಿಕೊಂಡರು. ಯಾವುದೇ ತಪ್ಪುಗಳಾಯಿತೆಂದರೆ ಅದನ್ನು ಕೂಡಲೇ ತಂದೆಗೆ ತಿಳಿಸಬೇಕು. ವಿಕಾರವಿಲ್ಲದೆ ಇರುವುದಕ್ಕೆ ಸಾಧ್ಯವಿಲ್ಲವೆಂದರೆ ಇಲ್ಲಿ ಬರದೇ ಇರುವುದೇ ಬಹಳ ಒಳ್ಳೆಯದು. ಇಲ್ಲವೆಂದರೆ ವಾಯುಮಂಡಲವು ಹಾಳಾಗಿಬಿಡುತ್ತದೆ. ನಿಮ್ಮ ಮಧ್ಯದಲ್ಲಿ ಯಾವುದೇ ಕೊಕ್ಕರೆ ಅಥವಾ ಅಶುದ್ಧ ಪದಾರ್ಥವನ್ನು ತಿನ್ನುವವರು ಕುಳಿತುಕೊಂಡರೆ ಎಷ್ಟು ಕೆಟ್ಟದೆನಿಸುತ್ತದೆ! ತಂದೆಯು ತಿಳಿಸುತ್ತಾರೆ- ಇಂತಹವರನ್ನು ಕರೆದುಕೊಂಡು ಬರುವವರ ಮೇಲೆ ದೋಷವಾಗುತ್ತದೆ. ಪ್ರಪಂಚದಲ್ಲಿ ಇಂತಹ ಸತ್ಸಂಗಗಳಂತೂ ಬಹಳಷ್ಟಿವೆ, ಅಲ್ಲಿ ಹೋಗಿ ಭಕ್ತಿ ಮಾಡಲಿ. ಭಕ್ತಿಯನ್ನು ಮಾಡಲು ನಾವು ನಿಷೇಧ ಮಾಡುವುದಿಲ್ಲ. ಭಗವಂತನು ಬರುವುದೇ ಪವಿತ್ರರನ್ನಾಗಿ ಮಾಡಲು, ಪವಿತ್ರ ವೈಕುಂಠದ ಆಸ್ತಿಯನ್ನು ಕೊಡುವುದಕ್ಕಾಗಿ ಬರುತ್ತಾರೆ. ತಂದೆಯು ಹೇಳುತ್ತಾರೆ- ಮಕ್ಕಳೇ, ಕೇವಲ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ ಅಷ್ಟೇ. ಮತ್ತು ಆಹಾರಪದಾರ್ಥಗಳ ವ್ರತವನ್ನಿಡಲು ಯುಕ್ತಿಗಳನ್ನು ತಿಳಿಸುತ್ತಾರೆ. ವ್ರತಕ್ಕೋಸ್ಕರ ಆರೋಗ್ಯವು ಸರಿಯಿಲ್ಲ, ವೈದ್ಯರೂ ನಿಷೇಧಿಸಿದ್ದಾರೆ ಎಂದು ಹೇಳಿ ಅನೇಕ ಪ್ರಕಾರದ ಯುಕ್ತಿಗಳನ್ನೂ ಸಹ ಇಟ್ಟುಕೊಳ್ಳಬಹುದು. ಆಗ ಅವರು ಪರವಾಗಿಲ್ಲ ಒಳ್ಳೆಯದು, ತಾವು ಹೇಳುವುದಾದರೆ ನಾವು ಹಣ್ಣುಗಳನ್ನು ತೆಗೆದುಕೊಂಡು ಬರುತ್ತೇವೆಂದು ಹೇಳುತ್ತಾರೆ. ತಮ್ಮ ರಕ್ಷಣೆ ಮಾಡಿಕೊಳ್ಳಲು ಈ ರೀತಿ ಹೇಳುವುದು ಅಸತ್ಯವಲ್ಲ. ಇದಕ್ಕೆ ತಂದೆಯು ನಿಷೇಧಿಸುವುದಿಲ್ಲ. ಇಂತಹ ಮಕ್ಕಳ ಅವಶ್ಯಕತೆಯಲ್ಲಿ ತಂದೆಯಿರುತ್ತಾರೆ ಆದರೆ ಅವರು ಸಂಪೂರ್ಣ ಮಧುರವಾಗಿರಬೇಕು. ಯಾವುದೇ ಹಳೆಯ ಸ್ವಭಾವವೂ ಇರಬಾರದು. ಸೇವಾಧಾರಿಗಳು, ಪ್ರಾಮಾಣಿಕರು, ಆಜ್ಞಾಕಾರಿಗಳಾಗಿರಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿಹೋಗಿ ಮರಳಿ ಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈ ಮಾಯಾವೀ ಪ್ರಪಂಚದಲ್ಲಿ ಪ್ರತಿಯೊಂದು ಮಾತಿನಲ್ಲಿ ದುಃಖವಿದೆ ಆದ್ದರಿಂದ ಈ ಹಳೆಯ ಪ್ರಪಂಚದಲ್ಲಿ ಯಾವುದೇ ಆಸೆಯನ್ನು ಇಟ್ಟುಕೊಳ್ಳಬಾರದಾಗಿದೆ. ಭಲೆ ಮಾಯೆಯ ಬಿರುಗಾಳಿಗಳೇ ಬರಲಿ ಆದರೆ ಎಂದೂ ಸಹ ಕುಲಕಳಂಕಿತರಾಗಬಾರದಾಗಿದೆ.

2. ಆಹಾರಪದಾರ್ಥದ ತುಂಬಾ ವ್ರತವನ್ನಿಟ್ಟುಕೊಳ್ಳಬೇಕಾಗಿದೆ. ಪಾರ್ಟಿ ಮುಂತಾದವುಗಳಲ್ಲಿ ಹೋದಾಗ ತುಂಬಾ ಯುಕ್ತಿಯಿಂದ ನಡೆಯಬೇಕಾಗಿದೆ.

ವರದಾನ:
ಕೆಡುಕಿನಲ್ಲಿಯೂ ಕೆಡುಕನ್ನು ನೋಡದೆ ಒಳ್ಳೆಯದರ ಪಾಠವನ್ನು ಕಲಿಯುವಂತಹ ಅನುಭವಿ ಮೂರ್ತಿ ಭವ

ಭಲೆ ಎಲ್ಲಾ ಮಾತುಗಳು ಕೆಟ್ಟದ್ದಾಗಿರಬಹುದು ಆದರೆ ಅದರಲ್ಲಿಯೂ ಒಂದೆರಡು ಒಳ್ಳೆಯದಂತು ಇದ್ದೇ ಇರುತ್ತದೆ. ಪಾಠವನ್ನು ಕಲಿಯುವಂತಹ ಒಳ್ಳೆಯದಂತು ಪ್ರತಿಯೊಂದು ಮಾತಿನಲ್ಲಿಯೂ ಸಮಾವೇಶವಾಗಿ ಇದ್ದೇ ಇರುತ್ತದೆ ಏಕೆಂದರೆ ಪ್ರತಿಯೊಂದು ಮಾತು ಅನುಭವಿಯನ್ನಾಗಿ ಮಾಡುವುದರಲ್ಲಿ ನಿಮಿತ್ತವಾಗುತ್ತದೆ. ತಾಳ್ಮೆಯ ಪಾಠವನ್ನು ಕಲಿಸುತ್ತದೆ. ಮತ್ತೊಬ್ಬರು ಆವೇಶಕ್ಕೊಳಗಾಗಿದ್ದಾರೆ ಮತ್ತು ತಾವು ಆ ಸಮಯದಲ್ಲಿ ತಾಳ್ಮೆ ಅಥವಾ ಸಹನಶೀಲತೆಯ ಪಾಠವನ್ನು ಓದುತ್ತೀರಿ ಆದ್ದರಿಂದ ಹೇಳುತ್ತಾರೆ- ಏನಾಗುತ್ತಿದೆಯೋ ಅದು ಒಳ್ಳೆಯದು ಮತ್ತು ಏನಾಗುವುದಿದೆಯೋ ಅದಿನ್ನೂ ಒಳ್ಳೆಯದಾಗಿದೆ. ಅದರಲ್ಲಿ ಕೇವಲ ಒಳ್ಳೆಯದನ್ನೇ ಆರಿಸುವಂತಹ ಬುದ್ಧಿಯಿರಬೇಕು. ಕೆಡುಕನ್ನು ನೋಡದೆ ಒಳಿತನ್ನು ಆರಿಸುತ್ತೀರೆಂದರೆ ನಂಬರ್ವನ್ ಆಗಿಬಿಡುವಿರಿ.

ಸ್ಲೋಗನ್:
ಸದಾ ಪ್ರಸನ್ನಚಿತ್ತರಾಗಿ ಇರಬೇಕೆಂದರೆ ಶಾಂತಿಯ ಶಕ್ತಿಯಿಂದ ಕೆಡುಕನ್ನು ಒಳಿತಿನಲ್ಲಿ ಪರಿವರ್ತನೆ ಮಾಡಿರಿ.