22.11.20    Avyakt Bapdada     Kannada Murli    21.01.87     Om Shanti     Madhuban


ಸ್ವ-ರಾಜ್ಯ ಅಧಿಕಾರಿಯೇ ವಿಶ್ವ-ರಾಜ್ಯ ಅಧಿಕಾರಿ


ಇಂದು ಭಾಗ್ಯವಿದಾತಾ ತಂದೆಯು ತನ್ನ ಸರ್ವಶ್ರೇಷ್ಠ ಭಾಗ್ಯಶಾಲಿ ಮಕ್ಕಳನ್ನು ನೋಡುತ್ತಿದ್ದಾರೆ. ಈಗಲೂ ಬಾಪ್ದಾದಾರವರ ಮುಂದೆ ಇದು ಸಂಘಟನೆಯಷ್ಟೇ ಅಲ್ಲ ಆದರೆ ಸನ್ಮುಖದಲ್ಲಿ ನಾಲ್ಕೂ ಕಡೆಯಲ್ಲಿರುವ ಭಾಗ್ಯಶಾಲಿ ಮಕ್ಕಳಿದ್ದಾರೆ. ಭಲೆ ದೇಶ-ವಿದೇಶದಲ್ಲಿಯೂ ಯಾವುದೇ ಮೂಲೆಯಲ್ಲಿಯೇ ಇರಬಹುದು ಆದರೆ ಬೇಹದ್ದಿನ ತಂದೆಯು ಬೇಹದ್ದಿನ ಮಕ್ಕಳನ್ನು ನೋಡುತ್ತಿದ್ದಾರೆ. ಈ ಸಾಕಾರ ವತನದಲ್ಲಿ ಸ್ಥಾನದ ಮಿತಿಯು ಬಂದು ಬಿಡುತ್ತದೆ ಆದರೆ ಬೇಹದ್ದಿನ ತಂದೆಯ ದೃಷ್ಟಿಯು ಸೃಷ್ಟಿಯು ಬೇಹದ್ದಿನದಾಗಿದೆ. ತಂದೆಯ ದೃಷ್ಟಿಯಲ್ಲಿ ಸರ್ವ ಬ್ರಾಹ್ಮಣ ಆತ್ಮರ ಸೃಷ್ಟಿಯು ಸಮಾವೇಶವಾಗಿದೆ. ಅಂದಮೇಲೆ ದೃಷ್ಟಿಯ ಸೃಷ್ಟಿಯಲ್ಲಿ ಸರ್ವರೂ ಸನ್ಮುಖವಿದ್ದಾರೆ. ಭಾಗ್ಯವಿದಾತಾ ಭಗವಂತನು ಸರ್ವ ಭಾಗ್ಯಶಾಲಿ ಮಕ್ಕಳನ್ನು ನೋಡಿ-ನೋಡಿ ಹರ್ಷಿತವಾಗುತ್ತಾರೆ. ಹೇಗೆ ಮಕ್ಕಳು ತಂದೆಯನ್ನು ನೋಡಿ ಹರ್ಷಿತವಾಗುತ್ತಾರೆಯೋ, ತಂದೆಯೂ ಸಹ ಸರ್ವ ಮಕ್ಕಳನ್ನು ನೋಡುತ್ತಾ ಹರ್ಷಿತವಾಗುತ್ತಾರೆ. ಬೇಹದ್ದಿನ ತಂದೆಗೆ ಮಕ್ಕಳನ್ನು ನೋಡುತ್ತಾ ಆತ್ಮಿಕ ನಶೆಯಿದೆ - ಒಂದೊಂದು ಮಗುವು ಈ ವಿಶ್ವದ ಮುಂದೆ ವಿಶೇಷ ಆತ್ಮರ ಪಟ್ಟಿಯಲ್ಲಿದ್ದಾರೆ! ಭಲೆ 16,000ದ ಮಾಲೆಯ ಅಂತಿಮ ಮಣಿಯೇ ಆಗಿರಲಿ, ಆದರೂ ತಂದೆಯ ಮುಂದೆ ಬರುವುದರಿಂದ, ತಂದೆಯ ಮಗುವಾಗುವುದರಿಂದ ವಿಶ್ವದ ಮುಂದೆ ವಿಶೇಷ ಆತ್ಮನಾಗಿದ್ದಾರೆ. ಆದ್ದರಿಂದ ಮತ್ಯಾವುದೇ ಜ್ಞಾನದ ವಿಸ್ತಾರವನ್ನು ತಿಳಿಯದೇ ಇರಬಹುದು ಆದರೆ ಒಂದು ಶಬ್ಧವಾದ ಬಾಬಾ' ಎಂದು ಹೃದಯದಿಂದ ಒಪ್ಪಿಕೊಂಡಿದ್ದಾರೆ ಮತ್ತು ಅನ್ಯರಿಗೂ ಹೃದಯದಿಂದ ತಿಳಿಸುತ್ತಾರೆಂದರೆ, ವಿಶೇಷ ಆತ್ಮನಾದರು. ಪ್ರಪಂಚದ ಮುಂದೆ ಮಹಾನ್ ಆತ್ಮನಾಗಿ ಬಿಟ್ಟರು, ಮಹಾನ್ ಆತ್ಮನ ಸ್ವರೂಪದಲ್ಲಿ ಗಾಯನ ಯೋಗ್ಯರಾದರು. ಇಷ್ಟು ಶ್ರೇಷ್ಠ ಹಾಗೂ ಸಹಜ ಭಾಗ್ಯವಿದೆ ಎಂದು ತಿಳಿಯುತ್ತೀರಾ? ಏಕೆಂದರೆ ಬಾಬಾ ಶಬ್ಧವು ಚಾಬಿ' (ಬೀಗದ ಕೈ) ಆಗಿದೆ. ಯಾವುದರ ಚಾಬಿ? ಸರ್ವ ಖಜಾನೆಗಳ, ಶ್ರೇಷ್ಠ ಭಾಗ್ಯದ ಚಾಬಿ. ಚಾಬಿ ಸಿಕ್ಕಿತೆಂದಾಗ ಭಾಗ್ಯ ಅಥವಾ ಖಜಾನೆಯು ಅವಶ್ಯವಾಗಿ ಪ್ರಾಪ್ತಿಯಾಗುತ್ತದೆ. ಅಂದಮೇಲೆ ಎಲ್ಲಾ ಮಾತೆಯರು ಅಥವಾ ಪಾಂಡವರು ಚಾಬಿಯನ್ನು ಪ್ರಾಪ್ತಿ ಮಾಡಿಕೊಳ್ಳುವುದರ ಅಧಿಕಾರಿಯಾಗಿದ್ದೀರಾ? ಚಾಬಿಯನ್ನು ಹಾಕಲು ಬರುತ್ತದೆಯೇ ಅಥವಾ ಕೆಲವೊಮ್ಮೆ ಅದು ಹಿಡಿಸುವುದಿಲ್ಲವೇ? ಚಾಬಿ ಹಾಕುವುದರ ವಿಧಿಯಾಗಿದೆ - ಹೃದಯದಿಂದ ತಿಳಿದುಕೊಳ್ಳುವುದು ಮತ್ತು ಒಪ್ಪುವುದು. ಕೇವಲ ಬಾಯಿಂದ ಹೇಳಿದಿರಿ ಎಂದರೆ ಬೀಗವನ್ನು ತೆಗೆಯಲು ಆಗುವುದಿಲ್ಲ. ಹೃದಯದಿಂದ ಹೇಳುತ್ತೀರಿ ಎಂದರೆ ಖಜಾನೆಗಳು ಸದಾ ಹಾಜಿರ್ ಆಗಿರುತ್ತದೆ. ಅಕೂಟ ಖಜಾನೆ ಆಗಿದೆಯಲ್ಲವೆ. ಅಕೂಟ ಖಜಾನೆ ಆಗಿರುವ ಕಾರಣ, ಮಕ್ಕಳು ಎಷ್ಟಾದರೂ ಇರಲಿ ಎಲ್ಲರೂ ಅಧಿಕಾರಿಯಾಗಿದ್ದಾರೆ. ತೆರೆದ ಖಜಾನೆಯಿದೆ, ಸಂಪನ್ನವಾದ ಖಜಾನೆಯಿದೆ. ಅಂತ್ಯದಲ್ಲಿ ಯಾರು ಬರುತ್ತಾರೆಯೋ ಅವರಿಗೆ ಖಜಾನೆಗಳು ಸಮಾಪ್ತಿಯಾಗಿ ಬಿಡುತ್ತದೆ ಎಂದಲ್ಲ. ಯಾರೆಲ್ಲರೂ ಈಗಿನವರೆಗೂ ಬಂದಿದ್ದೀರಿ ಅರ್ಥಾತ್ ತಂದೆಯ ಮಕ್ಕಳಾಗಿದ್ದೀರಿ ಮತ್ತು ಭವಿಷ್ಯದಲ್ಲಿಯೂ ಎಷ್ಟೆ ಮಕ್ಕಳಾಗುವವರು ಇದ್ದಾರೆ, ಅವರೆಲ್ಲರಿಗಿಂತಲೂ ಅನೇಕಾನೇಕ ಪಟ್ಟು ಹೆಚ್ಚಿನ ಖಜಾನೆಗಳಿದೆ. ಆದ್ದರಿಂದ ಬಾಪ್ದಾದಾರವರು ಪ್ರತಿಯೊಂದು ಮಗುವಿಗೆ ಸುವರ್ಣ ಅವಕಾಶವನ್ನು ಕೊಡುತ್ತಾರೆ - ಯಾರೆಷ್ಟು ಖಜಾನೆಗಳನ್ನು ತೆಗೆದುಕೊಳ್ಳಬೇಕು, ಅದನ್ನು ತೆರೆದ ಹೃದಯದಿಂದ ತೆಗೆದುಕೊಳ್ಳಿರಿ. ದಾತಾನ ಬಳಿ ಕಡಿಮೆಯಿಲ್ಲ, ತೆಗೆದುಕೊಳ್ಳುವವರ ಸಾಹಸ ಅಥವಾ ಪುರುಷಾರ್ಥದ ಮೇಲೆ ಆಧಾರಿತವಾಗಿದೆ. ಇಂತಹ ತಂದೆಯು ಇಡೀ ಕಲ್ಪದಲ್ಲಿ ಯಾರೂ ಇಲ್ಲ, ಇಷ್ಟೆಲ್ಲಾ ಮಕ್ಕಳಿದ್ದೀರಿ ಮತ್ತು ಪ್ರತಿಯೊಬ್ಬರೂ ಭಾಗ್ಯಶಾಲಿ ಆಗಿದ್ದೀರಿ! ಆದ್ದರಿಂದ ತಿಳಿಸಿದೆವು - ಆತ್ಮಿಕ ಬಾಪ್ದಾದಾರವರು ಆತ್ಮಿಕ ನಶೆಯಿದೆ.

ಎಲ್ಲರಲ್ಲಿ ಮಧುಬನದಲ್ಲಿ ಬರುವ, ಮಿಲನವಾಗುವ ಆಶೆಯು ಪೂರ್ಣಗೊಂಡಿತು. ಭಕ್ತಿಮಾರ್ಗದ ಯಾತ್ರೆಗಿಂತ ಮಧುಬನದಲ್ಲಿ ಆರಾಮವಾಗಿ ಕುಳಿತುಕೊಳ್ಳುವ, ನೆಲೆಸುವ ಸ್ಥಾನವಂತು ಸಿಕ್ಕಿದೆಯಲ್ಲವೆ. ಮಂದಿರಗಳಲ್ಲಂತು ಕೇವಲ ನಿಂತು-ನಿಂತುಕೊಂಡೇ ದರ್ಶನ ಮಾಡುತ್ತಾರೆ. ಇಲ್ಲಿ ಆರಾಮವಾಗಿಯಂತು ಕುಳಿತಿದ್ದೀರಲ್ಲವೆ. ಅಲ್ಲಂತು ಓಡಿ-ಓಡಿ', ನಡೆಯಿರಿ-ನಡೆಯಿರಿ' ಎಂದು ಹೇಳುತ್ತಾರೆ ಮತ್ತು ಇಲ್ಲಿ ಆರಾಮವಾಗಿ ಕುಳಿತುಕೊಳ್ಳಿರಿ, ಆರಾಮವಾಗಿ ನೆನಪಿನ ಖುಷಿಯಿಂದ ಮೋಜನ್ನು ಆಚರಿಸಿ. ಸಂಗಮಯುಗದಲ್ಲಿ ಖುಷಿಯನ್ನು ಆಚರಿಸಲು ಬಂದಿದ್ದೀರಿ. ಅಂದಮೇಲೆ ಪ್ರತೀ ಸಮಯದಲ್ಲಿ ನಡೆಯುತ್ತಾ-ಸುತ್ತಾಡುತ್ತಾ, ತಿನ್ನುತ್ತಾ-ಕುಡಿಯುತ್ತಾ ಖುಷಿಯ ಖಜಾನೆಯನ್ನು ಜಮಾ ಮಾಡಿಕೊಂಡಿರಾ? ಎಷ್ಟು ಜಮಾ ಮಾಡಿದಿರಿ? ಇಷ್ಟೂ ಮಾಡಿಕೊಂಡಿದ್ದೀರಾ, ಅದರಿಂದ 21 ಜನ್ಮಗಳವರೆಗೆ ಆರಾಮವಾಗಿ ಅದನ್ನು ಅನುಭವಿಸುತ್ತಿರುತ್ತೀರಾ? ಮಧುಬನವು ವಿಶೇಷವಾಗಿ ಸರ್ವ ಖಜಾನೆಗಳನ್ನು ಜಮಾ ಮಾಡಿಕೊಳ್ಳುವ ಸ್ಥಾನವಾಗಿದೆ, ಏಕೆಂದರೆ `ಇಲ್ಲಿ ಒಬ್ಬ ತಂದೆಯ ವಿನಃ ಮತ್ತ್ಯಾರೂ ಇಲ್ಲ' - ಇದು ಸಾಕಾರ ರೂಪದಲ್ಲಿಯೂ ಅನುಭವ ಮಾಡುತ್ತೀರಿ. ಅಲ್ಲಿ ಬುದ್ಧಿಯ ಮೂಲಕ ಅನುಭವ ಮಾಡುತ್ತೀರಿ ಆದರೆ ಇಲ್ಲಿ ಪ್ರತ್ಯಕ್ಷ ಸಾಕಾರ ಜೀವನದಲ್ಲಿಯೂ ತಂದೆ ಮತ್ತು ಬ್ರಾಹ್ಮಣ ಪರಿವಾರವಲ್ಲದೆ ಮತ್ತೇನಾದರೂ ಕಾಣಿಸುತ್ತದೆಯೇ? ಒಂದೇ ಲಗನ್, ಒಂದೇ ಮಾತು, ಒಂದೇ ಪರಿವಾರದವರು ಮತ್ತು ಏಕರಸ ಸ್ಥಿತಿ, ಮತ್ಯ್ತಾವುದೇ ರುಚಿಯೂ ಇಲ್ಲ. ಮಧುಬನದಲ್ಲಿ ಒಂದೇ ಕೆಲಸವಿರುತ್ತದೆ - ಓದುವುದು ಮತ್ತು ವಿದ್ಯೆಯ ಮೂಲಕ ಶಕ್ತಿಶಾಲಿ ಆಗುವುದಷ್ಟೇ ಅಲ್ಲವೆ. ಎಷ್ಟು ಕ್ಲಾಸ್ ಮಾಡುತ್ತೀರಿ? ಇಲ್ಲಿ ವಿಶೇಷವಾಗಿ ಜಮಾ ಮಾಡಿಕೊಳ್ಳುವ ಸಾಧನವು ಸಿಗುತ್ತದೆ. ಆದ್ದರಿಂದ ಎಲ್ಲರೂ ಓಡೋಡಿಕೊಂಡು ಬಂದು ತಲುಪುತ್ತಾರೆ. ಬಾಪ್ದಾದಾರವರು ಎಲ್ಲಾ ಮಕ್ಕಳಿಗೆ ವಿಶೇಷವಾಗಿ ಇದೇ ಸ್ಮೃತಿಯನ್ನು ಕೊಡುತ್ತಾರೆ - ಸದಾ ಸ್ವರಾಜ್ಯ ಅಧಿಕಾರಿ ಸ್ಥಿತಿಯಲ್ಲಿ ಮುಂದುವರೆಯುತ್ತಿರಿ. ವಿಶ್ವ ರಾಜ್ಯ ಅಧಿಕಾರಿಯಾಗುವ ಚಿಹ್ನೆಯು ಸ್ವರಾಜ್ಯ ಅಧಿಕಾರಿಯಾಗುವುದೇ ಆಗಿದೆ.

ಕೆಲವು ಮಕ್ಕಳು ಆತ್ಮಿಕ ವಾರ್ತಾಲಾಪ ಮಾಡುತ್ತಾ ತಂದೆಯೊಂದಿಗೆ ಕೇಳುತ್ತಾರೆ ನಾವು ಭವಿಷ್ಯದಲ್ಲಿ ಏನಾಗುತ್ತೇವೆ, ರಾಜರಾಗುತ್ತೇವೆಯೇ ಅಥವಾ ಪ್ರಜೆಯಾಗುತ್ತೇವೆಯೇ?' ಬಾಪ್ದಾದಾರವರು ಪ್ರತ್ಯುತ್ತರವನ್ನು ಕೊಡುತ್ತಾರೆ - ತಾವು ತಮ್ಮ ಒಂದು ದಿನವಾದರೂ ಪರಿಶೀಲನೆ ಮಾಡುತ್ತೀರೆಂದರೆ ಗೊತ್ತಾಗಿ ಬಿಡುತ್ತದೆ - ನಾನು ರಾಜನಾಗುವನೇ ಅಥವಾ ಸಾಹುಕಾರನಾಗುವನೇ ಅಥವಾ ಪ್ರಜೆಯಾಗುವನೇ ಎನ್ನುವುದು. ಮೊದಲು ಅಮೃತ ವೇಳೆಯಿಂದ ಕಾರೋಬಾರಿನ ತಮ್ಮ ಮುಖ್ಯವಾದ ಮೂರು ಅಧಿಕಾರಿ, ತಮ್ಮ ಸಹಯೋಗಿ, ಜೊತೆಗಾರರನ್ನು ಪರಿಶೀಲಿಸಿರಿ. ಅವರು ಯಾರು? 1. ಮನಸ್ಸು ಅರ್ಥಾತ್ ಸಂಕಲ್ಪ ಶಕ್ತಿ. 2. ಬುದ್ಧಿ ಅರ್ಥಾತ್ ನಿರ್ಣಯ ಶಕ್ತಿ. 3. ಹಿಂದಿನ ಅಥವಾ ವರ್ತಮಾನದ ಶ್ರೇಷ್ಠ ಸಂಸ್ಕಾರ - ಈ ಮೂರು ವಿಶೇಷ ಕಾರೋಬಾರ ಆಗಿದೆ. ಹೇಗೆ ಇತ್ತೀಚೆಗೆ ರಾಜನ ಜೊತೆ ಮಹಾಮಂತ್ರಿ ಅಥವಾ ವಿಶೇಷ ಮಂತ್ರಿಯಾಗಿರುತ್ತಾರೆ, ಅವರ ಸಹಯೋಗದಿಂದ ರಾಜ್ಯ ವ್ಯವಹಾರವು ನಡೆಯುತ್ತದೆ. ಸತ್ಯಯುಗದಲ್ಲಿ ಮಂತ್ರಿಯಿರುವುದಿಲ್ಲ ಆದರೆ ಸಮೀಪದ ಸಂಬಂಧಿ, ಜೊತೆಗಾರನಾಗಿರುತ್ತಾರೆ. ಯಾವುದಾದರೂ ರೂಪದಲ್ಲಿ ಜೊತೆಗಾರನೆಂದು ತಿಳಿಯಿರಿ ಅಥವ ಮಂತ್ರಿಯೆಂದೇ ತಿಳಿಯಿರಿ, ಆದರೆ ಇದನ್ನು ಪರಿಶೀಲಿಸಿ - ಈ ಮೂರು ತಮ್ಮ ಅಧಿಕಾರದಿಂದ ನಡೆಯುತ್ತದೆಯೇ? ಈ ಮೂರರ ಮೇಲೆ ಸ್ವ-ರಾಜ್ಯವಿದೆಯೇ ಅಥವಾ ಇವರ ಅಧಿಕಾರದಿಂದ ತಾವು ನಡೆಯುತ್ತೀರಾ? ಮನಸ್ಸು ತಮ್ಮನ್ನು ನಡೆಸುತ್ತದೆಯೇ ಅಥವಾ ತಾವು ಮನಸ್ಸನ್ನು ನಡೆಸುತ್ತೀರಾ? ಏನು ಬಯಸುತ್ತೀರಿ, ಯಾವಾಗ ಬಯಸುತ್ತೀರಿ, ಅಂತಹ ಸಂಕಲ್ಪವನ್ನು ಮಾಡಬಲ್ಲಿರಾ? ಬುದ್ಧಿಯನ್ನೆಲ್ಲಿಗೆ ಜೋಡಿಸಲು ಬಯಸುತ್ತೀರಿ ಅಲ್ಲಿ ಜೋಡಿಸಲು ಸಾಧ್ಯವಾಗುವುದೇ ಅಥವಾ ಬುದ್ಧಿಯು ತಾವು ರಾಜನನ್ನು ಅಲೆದಾಡಿಸುತ್ತದೆಯೇ? ಸಂಸ್ಕಾರವು ತಮ್ಮ ವಶದಲ್ಲಿದೆಯೇ ಅಥವಾ ತಾವು ಸಂಸ್ಕಾರಕ್ಕೆ ವಶನಾಗಿದ್ದೀರಾ? ರಾಜ್ಯ ಅಂದರೆ ಅಧಿಕಾರ. ರಾಜ್ಯ-ಅಧಿಕಾರಿಗೆ ಯಾವ ಶಕ್ತಿಗೆ, ಯಾವ ಸಮಯದಲ್ಲಿ ಆದೇಶ ಕೊಡುತ್ತೀರಿ, ಅದು ಅದೇ ವಿಧಿ ಪೂರ್ವಕವಾಗಿ ಕಾರ್ಯವನ್ನು ಮಾಡುತ್ತದೆಯೇ ಅಥವಾ ತಾವು ಒಂದು ಮಾತನ್ನು ಹೇಳಿದರೆ, ಅದು ಮತ್ತೊಂದು ಮಾತನ್ನು ಮಾಡುತ್ತದೆಯೇ? ಏಕೆಂದರೆ ನಿರಂತರ ಯೋಗಿ ಅರ್ಥಾತ್ ಸ್ವರಾಜ್ಯ-ಅಧಿಕಾರಿಯಾಗುವ ವಿಶೇಷ ಸಾಧನವೇ ಮನಸ್ಸು ಮತ್ತು ಬುದ್ಧಿಯಾಗಿದೆ. ಮಂತ್ರವೇ ಮನ್ಮನಾಭವದ್ದಾಗಿದೆ. ಯೋಗವನ್ನು ಬುದ್ಧಿಯೋಗವೆಂದು ಹೇಳುತ್ತಾರೆ ಅಂದಾಗ ಈ ವಿಶೇಷವಾದ ಆಧಾರ ಸ್ತಂಭವೇನಾದರೂ ತಮ್ಮ ಅಧಿಕಾರದಲ್ಲಿಲ್ಲ ಅಥವಾ ಕೆಲವೊಮ್ಮೆ ತಮ್ಮ ವಶದಲ್ಲಿರುತ್ತದೆ ಕೆಲವೊಮ್ಮೆ ಇರುವುದಿಲ್ಲ, ಈಗೀಗ ಇದೆ ಈಗೀಗ ಇಲ್ಲ, ಅಥವಾ ಮೂರರಲ್ಲಿ ಯಾವುದಾದರೊಂದು ಕಡಿಮೆ ಅಧಿಕಾರದಲ್ಲಿದೆ ಎಂದರೆ, ಇದರಿಂದಲೇ ಪರಿಶೀಲನೆ ಮಾಡಿರಿ - ನಾವು ರಾಜರಾಗುತ್ತೇವೆಯೇ ಅಥವಾ ಪ್ರಜೆಯಾಗುತ್ತೇವೆಯೇ? ಬಹಳ ಕಾಲದ ರಾಜ್ಯಾಧಿಕಾರಿ ಆಗುವ ಸಂಸ್ಕಾರವು, ಬಹಳ ಕಾಲದ ಭವಿಷ್ಯ ರಾಜ್ಯಾಧಿಕಾರಿಯನ್ನಾಗಿ ಮಾಡುತ್ತದೆ. ಒಂದು ವೇಳೆ ಕೆಲವೊಮ್ಮೆ ಅಧಿಕಾರಿ, ಕೆಲವೊಮ್ಮೆ ವಶರಾಗಿ ಬಿಡುತ್ತೀರೆಂದರೆ ಅರ್ಧಕಲ್ಪದಲ್ಲಿ ಅರ್ಥಾತ್ ಸಂಪೂರ್ಣ ರಾಜ್ಯಭಾಗ್ಯದ ಅಧಿಕಾರವು ಪ್ರಾಪ್ತಿಯಾಗಲು ಸಾಧ್ಯವಿಲ್ಲ. ಅರ್ಧ ಸಮಯದ ನಂತರ ತ್ರೇತಾಯುಗಿ ರಾಜರಾಗಲು ಸಾಧ್ಯವಾಗುವುದು, ಪೂರ್ಣ ಸಮಯದ ರಾಜ್ಯಾಧಿಕಾರಿ ಅರ್ಥಾತ್ ರಾಜ್ಯಾಡಳಿತ ಮಾಡುವಂತಹ ರಾಯಲ್ ಫ್ಯಾಮಿಲಿಗೆ ಸಮೀಪ ಸಂಬಂಧದಲ್ಲಿಯೂ ಇರುವುದಕ್ಕೆ ಸಾಧ್ಯವಾಗುವುದಿಲ್ಲ. ಒಂದುವೇಳೆ ಪದೇ-ಪದೇ ವಶರಾಗುತ್ತೀರಿ ಎಂದರೆ, ಸಂಸ್ಕಾರದ ಅಧಿಕಾರಿಯಾಗುವುದಲ್ಲ ಆದರೆ ರಾಜ್ಯಾಧಿಕಾರಿಗಳ ರಾಜ್ಯದಲ್ಲಿರುವವರು ಆಗುತ್ತೀರಿ. ಹಾಗಾದರೆ ಅವರೇನಾದರು? ಅವರು ಪ್ರಜೆ. ಅಂದಮೇಲೆ ಯಾರು ರಾಜರಾಗುವರು, ಯಾರು ಪ್ರಜೆಯಾಗುವರು? ಎನ್ನುವುದು ತಿಳಿಯಿತೆ. ತಮ್ಮದೇ ದರ್ಪಣದಲ್ಲಿ ತಮ್ಮ ಅದೃಷ್ಟದ ಚಹರೆಯನ್ನು ನೋಡಿಕೊಳ್ಳಿ. ಈ ಜ್ಞಾನ ಅರ್ಥಾತ್ ತಿಳುವಳಿಕೆಯು ದರ್ಪಣವಾಗಿದೆ. ಎಲ್ಲರ ಬಳಿ ದರ್ಪಣವಿದೆ ಅಲ್ಲವೆ ಅಂದಮೇಲೆ ತಮ್ಮ ಚಹರೆಯನ್ನು ನೋಡಿಕೊಳ್ಳಬಹುದು ಅಲ್ಲವೆ. ಈಗ ಬಹಳ ಸಮಯದ ಅಧಿಕಾರಿ ಆಗುವ ಅಭ್ಯಾಸವನ್ನು ಮಾಡಿರಿ. ಅಂತ್ಯದಲ್ಲಂತು ಆಗಿ ಬಿಡುತ್ತೇವೆ ಎನ್ನುವಂತಿಲ್ಲ. ಒಂದುವೇಳೆ ಅಂತ್ಯದಲ್ಲಿ ಆಗುತ್ತೀರಿ ಎಂದರೆ ಒಂದು ಜನ್ಮದ ಸ್ವಲ್ಪವೇ ರಾಜ್ಯವನ್ನು ತೆಗೆದುಕೊಳ್ಳುತ್ತೀರಿ. ಆದರೆ ಈಗಿನವರೆಗೂ ಈ ವಿಶೇಷ ಕಾರ್ಯಕರ್ತರು ತಮ್ಮನ್ನು ತನ್ನ ಅಧಿಕಾರದಲ್ಲಿ ನಡೆಸುತ್ತದೆ ಅಥವಾ ಏರುಪೇರಿನ ಸ್ಥಿತಿ ಮಾಡುತ್ತಿರುತ್ತದೆ ಅರ್ಥಾತ್ ಮೋಸ ಮಾಡುತ್ತಿರುತ್ತದೆ, ದುಃಖದ ಪ್ರಕಂಪನಗಳ ಅನುಭವ ಮಾಡಿಸುತ್ತಿರುತ್ತದೆ, ಅಂದಾಗ ಅಂತ್ಯದಲ್ಲಿಯೂ ಮೋಸವೇ ಆಗಿ ಬಿಡುತ್ತದೆ. ಮೋಸ ಅಂದರೆ ಅವಶ್ಯವಾಗಿ ದುಃಖದ ಪ್ರಕಂಪನವೇ ಬರುತ್ತದೆ. ಅಂತ್ಯದಲ್ಲಿಯೂ ಪಶ್ಚಾತ್ತಾಪದ ದುಃಖದ ಪ್ರಕಂಪನಗಳೇ ಬರುತ್ತವೆ ಆದ್ದರಿಂದ ಬಾಪ್ದಾದಾರವರು ಮತ್ತೊಮ್ಮೆ ಎಲ್ಲಾ ಮಕ್ಕಳಿಗೆ ಸ್ಮೃತಿ ತರಿಸುತ್ತಾರೆ - ರಾಜರಾಗಿರಿ ಮತ್ತು ತಮ್ಮ ವಿಶೇಷ ಸಹಯೋಗಿ ಕರ್ಮಚಾರಿ ಅಥವ ರಾಜ್ಯ ಕಾರೋಬಾರಿನ ಜೊತೆಗಾರರನ್ನು ತಮ್ಮ ಅಧಿಕಾರದಿಂದ ನಡೆಸಿರಿ. ತಿಳಿಯಿತೇ?

ಬಾಪ್ದಾದಾರವರು ಇದನ್ನೇ ನೋಡುತ್ತಾರೆ - ಯಾರ್ಯಾರು ಸ್ವರಾಜ್ಯಧಿಕಾರಿ ಎಷ್ಟಾಗಿದ್ದಾರೆ? ಒಳ್ಳೆಯದು - ಹಾಗಾದರೆ ಎಲ್ಲರೂ ಏನಾಗಲು ಬಯಸುತ್ತೀರಿ? ರಾಜನಾಗಲು ಬಯಸುತ್ತೀರಾ? ಈಗ ಸ್ವರಾಜ್ಯ ಅಧಿಕಾರಿ ಆಗಿದ್ದೀರಾ ಅಥವಾ ಇದನ್ನೇ ಹೇಳುತ್ತೀರಾ - ಆಗುತ್ತಿದ್ದೇವೆ, ಆಗಿ ಬಿಡುತ್ತೇವೆ? ವೆ, ವೆ, ಎಂದು ಹೇಳಬಾರದು. ಆಗಿ ಬಿಡುತ್ತೇವೆ ಎನ್ನುತ್ತೀರೆಂದರೆ ತಂದೆಯೂ ಹೇಳುವರು - ಒಳ್ಳೆಯದು, ರಾಜ್ಯಭಾಗ್ಯವನ್ನು ಕೊಡುವುದಕ್ಕೂ ನೋಡುತ್ತೇವೆ. ತಿಳಿಸಿದೆವಲ್ಲವೆ - ಬಹಳ ಸಮಯದ ಸಂಸ್ಕಾರವು ಈಗಿನಿಂದ ಇರಬೇಕು. ಹಾಗೆ ನೋಡಿದರೆ ಬಹಳ ಕಾಲವಿಲ್ಲ, ಸ್ವಲ್ಪ ಕಾಲವಿದೆ. ಆದರೆ ಇಷ್ಟಾದರೂ ಇಷ್ಟು ಸಮಯದ ಅಭ್ಯಾಸವೇ ಇಲ್ಲದಿದ್ದರೆ, ಅಂತಿಮ ಸಮಯದಲ್ಲಿ ಈ ದೂರು ಕೊಡಬಾರದು - ನಾವಂತು ಅಂತ್ಯದಲ್ಲಿ ಆಗಿ ಬಿಡುತ್ತೇವೆಂದು ಅಂದುಕೊಳ್ಳುತ್ತಿದ್ದೆವು. ಆದ್ದರಿಂದ ಹೇಳಿದ್ದೇವೆ - ಯಾವಾಗಲೋ ಅಲ್ಲ, ಈಗ ಮಾಡಿರಿ. ಆಗ ಆಗಿ ಬಿಡುತ್ತೇವೆಂದು ಅಲ್ಲ, ಈಗ ಆಗಲೇಬೇಕು, ಆಗಲೇಬೇಕು. ತಮ್ಮ ಮೇಲೆ ರಾಜ್ಯಾಡಳಿತ ಮಾಡಿರಿ. ತಮ್ಮ ಜೊತೆಗಾರರ(ಸ್ಥೂಲ) ಮೇಲೆ ರಾಜ್ಯಡಳಿತ ಮಾಡುವುದನ್ನು ಪ್ರಾರಂಭಿಸಬಾರದು. ಯಾರಲ್ಲಿ ಸ್ವಯಂನ ಮೇಲೆ ರಾಜ್ಯಾಡಳಿತವಿದೆ, ಅವರ ಮುಂದೆ ಈಗಲೂ ಸ್ನೇಹದ ಕಾರಣದಿಂದ ಸರ್ವರ ಜೊತೆಗಾರರೂ ಸಹ ಲೌಕಿಕದವರಾಗಿರಲಿ ಅಥವಾ ಅಲೌಕಿಕದವರು ಎಲ್ಲರೂ ಜೀ ಹುಜೂರ್, ಹಾಂಜಿ ಎಂದು ಹೇಳುತ್ತಾ, ಜೊತೆಗಾರನಾಗಿ ಇರುತ್ತಾರೆ, ಸ್ನೇಹಿ ಮತ್ತು ಜೊತೆಗಾರನಾಗಿ ಹಾಂಜಿಯ ಪಾಠವನ್ನು ಪ್ರತ್ಯಕ್ಷದಲ್ಲಿ ತೋರಿಸುತ್ತಾರೆ. ಪ್ರಜೆಯು ಹೇಗೆ ರಾಜನ ಜೊತೆಗಾರ ಆಗಿರುತ್ತಾರೆ, ಸ್ನೇಹಿ ಆಗಿರುತ್ತಾನೆ, ಅದೇ ರೀತಿ ತಮ್ಮ ಈ ಸರ್ವ ಕರ್ಮೇಂದ್ರಿಯಗಳು, ವಿಶೇಷ ಶಕ್ತಿಗಳು ಸದಾ ತಮ್ಮ ಸ್ನೇಹಿ, ಸಹಯೋಗಿ ಆಗಿರುತ್ತದೆ ಮತ್ತು ಇದರ ಪ್ರಭಾವವು ಸಾಕಾರದಲ್ಲಿ ತಮ್ಮ ಸೇವೆಯ ಜೊತೆಗಾರರು ಅಥವಾ ಲೌಕಿಕ ಸಂಬಂಧಗಳ ಮೇಲೆ, ಜೊತೆಗಾರರ ಮೇಲೆ ಪ್ರಭಾವ ಬೀರುತ್ತದೆ. ದೈವೀ ಪರಿವಾರದಲ್ಲಿ ಅಧಿಕಾರಿಯಾಗಿ ಆದೇಶವನ್ನು ನಡೆಸುವುದು, ಇದು ನಡೆಯಲು ಸಾಧ್ಯವಿಲ್ಲ. ಸ್ವಯಂ ತಮ್ಮ ಕರ್ಮೇಂದ್ರಿಯಗಳನ್ನು ಆದೇಶದಂತೆ ಇಟ್ಟುಕೊಳ್ಳುತ್ತೀರೆಂದರೆ, ತಾವು ಆದೇಶಿಸುವುದಕ್ಕೇ ಮೊದಲೇ ಸರ್ವ ಜೊತೆಗಾರರು ಸ್ವತಹವಾಗಿಯೇ ತಮ್ಮ ಕಾರ್ಯದಲ್ಲಿ ಸಹಯೋಗಿಯಾಗುತ್ತವೆ. ಸ್ವಯಂ ಸಹಯೋಗಿಯಾಗುತ್ತದೆ, ಆದೇಶ ಕೊಡುವ ಅವಶ್ಯಕತೆಯೂ ಇರುವುದಿಲ್ಲ. ಸ್ವಯಂ ತಾನೇ ಸಹಯೋಗದ ಆಫರ್ ಕೊಡುತ್ತದೆ ಏಕೆಂದರೆ ತಾವು ಸ್ವರಾಜ್ಯ ಅಧಿಕಾರಿಯಾಗಿದ್ದೀರಿ. ಹೇಗೆ ರಾಜಾ ಅರ್ಥಾತ್ ದಾತಾ, ಹಾಗಾದರೆ ದಾತಾ ಹೇಳಬೇಕಾಗಿರುವುದಿಲ್ಲ ಅರ್ಥಾತ್ ಬೇಡ ಬೇಕಾಗುವುದಿಲ್ಲ, ಅಂದಮೇಲೆ ಇಂತಹ ಸ್ವರಾಜ್ಯ ಅಧಿಕಾರಿಯಾಗಿರಿ. ಒಳ್ಳೆಯದು - ಈ ಮೇಳವೂ ಸಹ ಡ್ರಾಮಾದಲ್ಲಿ ನೊಂದಣಿಯಾಗಿತ್ತು, `ವಾಹ್ ಡ್ರಾಮಾ' ಎಂದು ಹೇಳುತ್ತೀರಲ್ಲವೆ. ಅನ್ಯ ಜನರು ಕೆಲವೊಮ್ಮೆ `ಅಯ್ಯೊ ಡ್ರಾಮಾ' ಎನ್ನುತ್ತಾರೆ, ಕೆಲವೊಮ್ಮೆ `ವಾಹ್ ಡ್ರಾಮಾ' ಮತ್ತು ತಾವು ಸದಾ ಏನು ಹೇಳುತ್ತೀರಿ? ವಾಹ್ ಡ್ರಾಮಾ! ವಾಹ್! ಯಾವಾಗ ಪ್ರಾಪ್ತಿ ಆಗುತ್ತದೆಯೋ ಆಗ ಅದರ ಮುಂದೆ ಕಷ್ಟವೆನಿಸುವುದಿಲ್ಲ. ಅದೇ ರೀತಿ ಯಾವಾಗ ಇಷ್ಟು ಶ್ರೇಷ್ಠವಾದ ಪರಿವಾರದೊಂದಿಗೆ ಮಿಲನದ ಪ್ರಾಪ್ತಿಯಾಗುತ್ತಿದೆ, ಅಂದಾಗ ಕೆಲವೊಮ್ಮೆಯ ಕಷ್ಟವೂ ಕಷ್ಟವೆನಿಸುವುದಿಲ್ಲ. ಕಷ್ಟವೆನಿಸುತ್ತದೆಯೇ? ಡೈನಿಂಗ್ ಹಾಲ್ನಲ್ಲಿ ನಿಲ್ಲಬೇಕಾಗುತ್ತದೆ. ಪ್ರಸಾದ ಸ್ವೀಕರಿಸುವಾಗಲೂ ಪ್ರಭುವಿನ ಗುಣ ಗಾನ ಮಾಡಿರಿ ಮತ್ತು ಕ್ಯೂನಲ್ಲಿ ನಿಲ್ಲುತ್ತೀರೆಂದರೂ ಪ್ರಭುವಿನ ಗುಣ ಗಾನ ಹಾಡಿರಿ, ಇದೇ ಕಾರ್ಯವನ್ನು ಮಾಡಬೇಕಲ್ಲವೆ. ಇದರ ರಿಹರ್ಸಲ್ ಸಹ ಆಗುತ್ತಿದೆ, ಈಗಿರುವುದೇನೂ ಇಲ್ಲ. ಈಗಂತು ಇನ್ನೂ ವೃದ್ಧಿಯಾಗುತ್ತದೆ ಅಲ್ಲವೆ. ತಮ್ಮನ್ನು ಈ ರೀತಿಯಲ್ಲಿ ಮೋಲ್ಡ್ ಮಾಡಿಕೊಳ್ಳುವ ಹವ್ಯಾಸವನ್ನು ಹಾಕಿಕೊಳ್ಳಿರಿ, ಸಮಯದ ಅನುಸಾರ ತಮ್ಮನ್ನು ತಾವು ನಡೆಸಲು ಸಾಧ್ಯವಾಗಲಿ. ಹಾಗಾದರೆ ನೆಲದ ಮೇಲೆ ಮಲಗುವ ಅಭ್ಯಾಸವೂ ಆಯಿತಲ್ಲವೆ. ಹೀಗೆನ್ನುವುದಿಲ್ಲವೆ - ಮಂಚವಿಲ್ಲದಿದ್ದರೆ ನಿದ್ರೆ ಬರುವುದಿಲ್ಲ? ಟೆಂಟ್ನಲ್ಲಿಯೂ ಇರುವ ಅಭ್ಯಾಸ ಆಯಿತಲ್ಲವೆ. ಚೆನ್ನಾಗಿದೆಯೇ? ಚಳಿಯಾಗುವುದಿಲ್ಲವೇ? ಈಗ ಇಡೀ ಅಬುವಿನಲ್ಲಿಯೇ ಟೆಂಟ್ ಹಾಕೋಣವೇ? ಟೆಂಟ್ನಲ್ಲಿ ಮಲಗುವುದು ಚೆನ್ನಾಗಿದೆಯೇ ಅಥವಾ ರೂಮ್ ಬೇಕೆನ್ನುತ್ತೀರಾ? ಮೊದ ಮೊದಲು ಯಾವಾಗ ಪಾಕಿಸ್ತಾನದಲ್ಲಿದ್ದೆವು, ಆಗ ಮಹಾರಥಿಗಳೇ ನೆಲದಲ್ಲಿ ಮಲಗುತ್ತಿದ್ದಿರಿ, ನೆನಪಿದೆಯೇ? ಯಾರು ಪ್ರಸಿದ್ಧವಾದ ಮಹಾರಥಿಗಳಿದ್ದರು, ಅವರಿಗೆ ಹಾಲ್ನಲ್ಲಿ ನೆಲದ ಮೇಲೆ ಮೂರು ಅಡಿ ಜಾಗ ಕೊಟ್ಟು ಮಲಗಿಸುತ್ತಿದ್ದೆವು. ಮತ್ತು ಯಾವಾಗ ಬ್ರಾಹ್ಮಣ ಪರಿವಾರದ ವೃದ್ಧಿಯಾಯಿತು, ಆಗಲೂ ಎಲ್ಲಿಂದ ಆರಂಭವಾಯಿತು? ಟೆಂಟ್ನಿಂದಲೇ ಆರಂಭವಾಯಿತಲ್ಲವೆ. ಮೊದ ಮೊದಲು ಯಾರು ಬಂದರು, ಅವರೂ ಸಹ ಟೆಂಟ್ನಲ್ಲಿಯೇ ಇದ್ದರು, ಟೆಂಟ್ನಲ್ಲಿರುವವರು ಸೆಂಟ್ (ಮಹಾತ್ಮ) ಆಗಿ ಬಿಟ್ಟರು. ಸಾಕಾರನ ಪಾತ್ರವಿದ್ದರೂ ಸಹ ಟೆಂಟ್ನಲ್ಲಿಯೇ ಇದ್ದರು. ಅಂದಮೇಲೆ ತಾವುಗಳೂ ಸಹ ಅನುಭವ ಮಾಡುವಿರಲ್ಲವೆ. ಎಲ್ಲರೂ ಪ್ರತಿಯೊಂದು ಪ್ರಕಾರದಿಂದ ಖುಷಿಯಾಗಿದ್ದೀರಾ? ಒಳ್ಳೆಯದು, ಇಷ್ಟಾದರೂ 10000 ಮಂದಿಯನ್ನು ಕರೆಸಿಕೊಂಡು ಟೆಂಟ್ ಕೊಡುತ್ತೇವೆ, ಪ್ರಬಂಧ ಮಾಡುತ್ತೇವೆ. ಎಲ್ಲರೂ ಸ್ನಾನ ಗೃಹದ ಪ್ರಬಂಧವನ್ನು ಯೋಚಿಸುತ್ತೀರಾ, ಅದೂ ಸಹ ಆಗಿ ಬಿಡುತ್ತದೆ. ನೆನಪಿದೆಯೇ - ಯಾವಾಗ ಈ ಹಾಲ್ ಮಾಡಲಾಗಿತ್ತು, ಆಗ ಎಲ್ಲರೂ ಏನು ಹೇಳಿದ್ದರು? ಇಷ್ಟೆಲ್ಲರ ಸ್ನಾನ ಗೃಹಕ್ಕಾಗಿ ಏನು ಮಾಡುವರು? ಇದೇ ಲಕ್ಷ್ಯದಿಂದ ಇದನ್ನು ಮಾಡಲಾಗಿದೆ, ಈಗ ಕಡಿಮೆಯಾಯಿತಲ್ಲವೆ. ಎಷ್ಟು ಮಾಡುತ್ತೀರೋ ಅಷ್ಟು ಅವಶ್ಯವಾಗಿ ಕಡಿಮೆಯಾಗುತ್ತದೆ ಏಕೆಂದರೆ ಕೊನೆಗೆ ಬೇಹದ್ದಿನಲ್ಲಿಯೇ ಹೋಗಬೇಕಾಗಿದೆ. ಒಳ್ಳೆಯದು.

ಎಲ್ಲಾ ಕಡೆಯಲ್ಲಿನ ಮಕ್ಕಳು ತಲುಪಿದ್ದಾರೆ. ಈ ಬೇಹದ್ದಿನ ಹಾಲ್ ಸಹ ಶೃಂಗಾರಿತವಾಯಿತು, ಕೆಳಗೂ ಕುಳಿತಿದ್ದಾರೆ. (ಭಿನ್ನ-ಭಿನ್ನ ಸ್ಥಾನಗಳಲ್ಲಿ ಮುರುಳಿಯನ್ನು ಕೇಳಿಸಿಕೊಳ್ಳುತ್ತಿದ್ದಾರೆ) ಈ ವೃದ್ಧಿಯಾಗುವುದೂ ಸಹ ಭಾಗ್ಯದ ಚಿಹ್ನೆಯಾಗಿದೆ. ವೃದ್ಧಿಯಂತು ಆಯಿತು ಆದರೆ ವಿಧಿಪೂರ್ವಕವಾಗಿ ನಡೆಯಲಿ, ಹೀಗೆ ತಿಳಿಯಬಾರದು - ಮಧುಬನದಲ್ಲಂತು ಬಂದು ಬಿಟ್ಟೆವು, ಬಾಬಾರವರನ್ನೂ ಮಿಲನವಾದೆವು, ಮಧುಬನವನ್ನೂ ನೋಡಿದೆವು, ಈಗ ಹೇಗೆ ಬೇಕೋ ಹಾಗೆ ನಡೆಯೋಣ. ಹೀಗೆ ಮಾಡಬಾರದು ಏಕೆಂದರೆ ಕೆಲವು ಮಕ್ಕಳು ಹೀಗೆ ಮಾಡುವರು - ಎಲ್ಲಿಯವರೆಗೆ ಮಧುಬನಕ್ಕೆ ಬರಲು ಅನುಮತಿ ಸಿಗುವುದಿಲ್ಲವೋ ಅಲ್ಲಿಯವರೆಗೆ ಪರಿಪಕ್ವವಾಗಿ ಇರುತ್ತಾರೆ, ಮಧುಬನವನ್ನು ನೋಡಿದ ನಂತರ ಸ್ವಲ್ಪ ಹುಡುಗಾಟಿಕೆಯಲ್ಲಿ ಬಂದು ಬಿಡುತ್ತಾರೆ. ಈ ರೀತಿ ಆಗಬಾರದು, ಬ್ರಾಹ್ಮಣ ಅರ್ಥಾತ್ ಬ್ರಾಹ್ಮಣ ಜೀವನವಿದೆ ಅಂದಾಗ ಎಲ್ಲಿಯವರೆಗೆ ಇರುತ್ತೀರಿ ಅಲ್ಲಿಯವರೆಗೂ ಸದಾ ಬ್ರಾಹ್ಮಣ ಜೀವನ ಇರುತ್ತದೆ. ಜೀವನವನ್ನು ರೂಪಿಸಿಕೊಂಡಿದ್ದೀರಿ ಅಲ್ಲವೇ ಅಥವಾ ಸ್ವಲ್ಪ ಸಮಯಕ್ಕಷ್ಟೇ ಬ್ರಾಹ್ಮಣರು ಆಗಿದ್ದೀರಾ? ಸದಾ ತಮ್ಮನ್ನು ಬ್ರಾಹ್ಮಣ ಜೀವನದ ವಿಶೇಷತೆಗಳ ಜೊತೆಯಲ್ಲಿಟ್ಟುಕೊಳ್ಳಿರಿ ಏಕೆಂದರೆ ಈ ವಿಶೇಷತೆಗಳಿಂದ ವರ್ತಮಾನವೂ ಶ್ರೇಷ್ಠವಿದೆ ಮತ್ತು ಭವಿಷ್ಯವೂ ಶ್ರೇಷ್ಠವಿದೆ. ಒಳ್ಳೆಯದು- ಇನ್ನೇನು ಉಳಿದುಕೊಂಡಿತು? ಟೋಲಿ. (ವರದಾನ) ವರದಾತಾನ ಮಕ್ಕಳೇ ವರದಾನವಾಗಿ ಬಿಟ್ಟಿರಿ. ತಾವಿರುವುದೇ ವರದಾತನ ಮಕ್ಕಳು, ಅಂತಹ ಮಕ್ಕಳ ಪ್ರತೀ ಹೆಜ್ಜೆಯಲ್ಲಿ ವರದಾತನಿಂದ ಸ್ವತಹವಾಗಿಯೇ ವರದಾನವು ಸಿಗುತ್ತಿರುತ್ತದೆ. ವರದಾನವೇ ತಮ್ಮ ಪಾಲನೆಯೂ ಆಗಿದೆ. ವರದಾನಗಳ ಪಾಲನೆಯಿಂದಲೇ ಬೆಳೆಯುತ್ತಿದ್ದೀರಿ. ಇಲ್ಲದಿದ್ದರೆ ಯೋಚಿಸಿರಿ - ಇಷ್ಟು ಶ್ರೇಷ್ಠವಾದ ಪ್ರಾಪ್ತಿ ಮತ್ತು ಪರಿಶ್ರಮವೇನಾದರೂ ಆಯಿತೇ. ಪರಿಶ್ರಮ ಪಡದೇ ಪ್ರಾಪ್ತಿಯಾಗುತ್ತದೆ ಎಂದರೆ ಅದನ್ನೇ ವರದಾನವೆಂದು ಹೇಳಲಾಗುತ್ತದೆ. ಜನ್ಮ-ಜನ್ಮದ ಪ್ರಾಪ್ತಿಯ ಅಧಿಕಾರಿಯಾಗಿಬಿಟ್ಟಿರಿ, ಅಂದಮೇಲೆ ಪ್ರತೀ ಹೆಜ್ಜೆಯಲ್ಲಿ ವರದಾತನ ವರದಾನವು ಸಿಗುತ್ತಿದೆ ಮತ್ತು ಸದಾ ಸಿಗುತ್ತಿರುತ್ತದೆ. ದೃಷ್ಟಿಯಿಂದ, ಮಹಾವಾಕ್ಯದಿಂದ, ಸಂಬಂಧದಿಂದ ವರದಾನವೇ ಇರುತ್ತದೆ. ಒಳ್ಳೆಯದು.

ಈಗಂತು ಸುವರ್ಣ ಮಹೋತ್ಸವದ ತಯಾರಿ ಮಾಡುತ್ತಿದ್ದೀರಿ. ಸುವರ್ಣ ಮಹೋತ್ಸವ ಅರ್ಥಾತ್ ಸದಾ ಸ್ವರ್ಣೀಮ ಸ್ಥಿತಿಯಲ್ಲಿ ಸ್ಥಿತರಾಗುವ ಮಹೋತ್ಸವವನ್ನು ಆಚರಿಸುತ್ತಿದ್ದೀರಿ. ಸದಾ ಅಪ್ಪಟ ಚಿನ್ನವಾಗಿರಿ, ಅಂಶದಷ್ಟೂ ಅಲಾಯಿ ಸೇರ್ಪಡೆಯಾಗಿರಬಾರದು, ಇದಕ್ಕೆ ಸುವರ್ಣ ಮಹೋತ್ಸವ ಎಂದು ಹೇಳಲಾಗುತ್ತದೆ. ಪ್ರಪಂಚದವರ ಮುಂದೆ ಸ್ವರ್ಣೀಮ ಸ್ಥಿತಿಯಲ್ಲಿ ಸ್ಥಿತರಾಗುವ ಅಪ್ಪಟ ಚಿನ್ನವು ಪ್ರತ್ಯಕ್ಷವಾಗಲಿ (ಸತೋಪ್ರಧಾನ ಸ್ಥಿತಿ). ಇದಕ್ಕಾಗಿ ಇವೆಲ್ಲಾ ಸೇವೆಯ ಸಾಧನಗಳನ್ನು ಮಾಡುತ್ತಿದ್ದೀರಿ ಏಕೆಂದರೆ ತಮ್ಮ ಸ್ವರ್ಣೀಮ ಸ್ಥಿತಿಯು ಸ್ವರ್ಣೀಮ ಯುಗವನ್ನು ತರುತ್ತದೆ, ಸ್ವರ್ಣೀಮ ಪ್ರಪಂಚವನ್ನು ತರುತ್ತದೆ, ಎಲ್ಲರಲ್ಲಿ ಯಾವ ಇಚ್ಛೆಯಿದೆ - ಈಗ ಪ್ರಪಂಚವು ಸ್ವಲ್ಪ ಬದಲಾಗಬೇಕು. ಅಂದಮೇಲೆ ಸ್ವ-ಪರಿವರ್ತನೆಯಿಂದ ವಿಶ್ವ ಪರಿವರ್ತನೆ ಮಾಡುವಂತಹ ವಿಶೇಷ ಆತ್ಮರಾಗಿದ್ದೀರಿ. ತಮ್ಮೆಲ್ಲರನ್ನೂ ನೋಡಿ ಆತ್ಮರಿಗೆ ಈ ನಿಶ್ಚಯವಾಗಲಿ, ಶುಭ ಭರವಸೆಯಿರಲಿ - ಸತ್ಯವಾಗಿಯೂ ಸ್ವರ್ಣೀಮ ಪ್ರಪಂಚವು ಬಂದಿತೆಂದರೆ ಬಂದಿತು! ಹೌದು, ಒಳ್ಳೆಯ ವಸ್ತುವೆಂದು ಸ್ಯಾಂಪಲ್ನ್ನು ನೋಡಿ ನಿಶ್ಚಯ ಆಗುತ್ತದೆ ಅಲ್ಲವೆ. ಅಂದಾಗ ಸ್ವರ್ಣೀಮ ಪ್ರಪಂಚದ ಸ್ಯಾಂಪಲ್ ತಾವಾಗಿದ್ದೀರಿ, ಸ್ವರ್ಣೀಮ ಸ್ಥಿತಿಯವರಾಗಿದ್ದೀರಿ. ತಾವು ಸ್ಯಾಂಪಲ್ನ್ನು ನೋಡಿ ಅವರಿಗೂ ನಿಶ್ಚಯವಾಗಲಿ - ಯಾವಾಗ ಸ್ಯಾಂಪಲ್ ತಯಾರಾಗಿದೆಯೋ ಆಗ ಅವಶ್ಯವಾಗಿ ಅಂತಹ ಪ್ರಪಂಚವೂ ಈಗೀಗ ಬಂದು ಬಿಡುತ್ತದೆ. ಸುವರ್ಣ ಮಹೋತ್ಸವದಲ್ಲಿ ಇಂತಹ ಸೇವೆಯನ್ನು ಮಾಡುವಿರಲ್ಲವೆ. ಭರವಸೆಯಿಲ್ಲದವರಿಗೆ ಭರವಸೆಯನ್ನು ಕೊಡುವವರಾಗಿರಿ. ಒಳ್ಳೆಯದು.

ವರದಾನ:  
ಅಲೆದಾಡುತ್ತಿರುವ ಆತ್ಮರಿಗೆ ಯಥಾರ್ಥವಾದ ಗುರಿಯನ್ನು ತೋರಿಸುವಂತಹ ಚೈತನ್ಯ ಲೈಟ್-ಮೈಟ್ ಹೌಸ್ ಭವ.

ಅಲೆದಾಡುತ್ತಿರುವ ಯಾವುದೇ ಆತ್ಮನಿಗೆ ಯಥಾರ್ಥವಾದ ಗುರಿಯನ್ನು ತೋರಿಸುವುದಕ್ಕಾಗಿ ಚೈತನ್ಯ ಲೈಟ್-ಮೈಟ್ ಹೌಸ್ ಆಗಿರಿ. ಇದಕ್ಕಾಗಿ ಎರಡು ಮಾತಿನ ಪ್ರತಿ ಗಮನವಿರಲಿ - 1. ಪ್ರತಿಯೊಂದು ಆತ್ಮನ ಇಚ್ಛೆಯನ್ನು ಪರಿಶೀಲಿಸುವುದು, ಉದಾ: ಯಾರು ನಾಡಿಯ ಬಗ್ಗೆ ತಿಳಿದಿರುತ್ತಾರೆ ಅವರಿಗೇ ಯೋಗ್ಯ ಡಾಕ್ಟರ್ ಎಂದು ಹೇಳಲಾಗುತ್ತದೆ ಹಾಗೆಯೇ ಪರಿಶೀಲನಾ ಶಕ್ತಿಯನ್ನು ಸದ ಉಪಯೋಗಿಸಬೇಕು. 2. ಸದಾ ತಮ್ಮ ಬಳಿ ಸರ್ವ ಖಜಾನೆಗಳ ಅನುಭವವನ್ನು ಕಾಯಂ ಆಗಿಟ್ಟುಕೊಳ್ಳಿರಿ. ಸದಾ ಈ ಲಕ್ಷ್ಯವನ್ನಿಡಿ - ತಿಳಿಸುವುದಲ್ಲ ಆದರೆ ಸರ್ವ ಸಂಬಂಧಗಳ, ಸರ್ವಶಕ್ತಿಗಳ ಅನುಭವ ಮಾಡಿಸಬೇಕು.

ಸ್ಲೋಗನ್:
ಅನ್ಯರ ಸಂಪರ್ಕ ಮಾಡುವುದಕ್ಕೆ ಬದಲಾಗಿ ಒಬ್ಬ ತಂದೆಯೊಂದಿಗೆ ಸರಿಯಾದ ಸಂಪರ್ಕ (ಕನೆಕ್ಷನ್/ಸಂಬಂಧ)ವನ್ನಿಡಿ.