22.11.23         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ-ನೀವು ಬ್ರಾಹ್ಮಣರ ಹೊಸ ವೃಕ್ಷ ಇದಾಗಿದೆ, ಇದರ ವೃದ್ಧಿ ಸಹ ಆಗಬೇಕು ಹಾಗೂ ಸಂಭಾಲನೆ ಸಹಾ ಮಾಡಬೇಕು ಏಕೆಂದರೆ ಹೊಸ ಗಿಡವನ್ನು ಪಕ್ಷಿಗಳು ತಿಂದುಬಿಡುವುದು”

ಪ್ರಶ್ನೆ:
ಬ್ರಾಹ್ಮಣ ವೃಕ್ಷದಲ್ಲಿ ಬರುವ ಎಲೆಗಳು ಬಾಡಿಹೋಗುತ್ತವೆ ಏಕೆ? ಕಾರಣ ಮತ್ತು ನಿವಾರಣೆ ಏನು?

ಉತ್ತರ:
ತಂದೆ ಏನು ಜ್ಞಾನದ ವಿಚಿತ್ರ ರಹಸ್ಯ ತಿಳಿಸುತ್ತಾರೆ ಅದು ತಿಳಿದುಕೊಳ್ಳದ ಕಾರಣ ಸಂಶಯ ಉತ್ಪನ್ನವಾಗುವುದು ಅದರಿಂದ ಹೊಸ-ಹೊಸ ಎಲೆಗಳು ಬಾಡಿಹೋಗುವುದು ಆಮೇಲೆ ವಿದ್ಯೆಯನ್ನು ಬಿಟ್ಟುಬಿಡುತ್ತಾರೆ. ಇದರಲ್ಲಿ ತಿಳಿಸಿಕೊಡುವಂತಹ ಮಕ್ಕಳು ಬಹಳ ಬುದ್ಧಿವಂತರಾಗಿರಬೇಕು. ಒಂದುವೇಳೆ ಸಂಶಯ ವಿದ್ದರೆ ದೊಡ್ಡವರ ಬಳಿ ಕೇಳ ಬೇಕಾಗಿದೆ. ಸಿಗದೇ ಹೋದರೆ ತಂದೆಯ ಬಳಿಯೂ ಸಹಾ ಕೇಳ ಬಹುದು.

ಗೀತೆ:
ಪ್ರೀತಮ ಬಂದು ಮಿಲನ ಮಾಡಿ....

ಓಂ ಶಾಂತಿ.
ಗೀತೆಯಂತೂ ಮಕ್ಕಳು ಬಹಳ ಸಾರಿ ಕೇಳಿರುವಿರಿ, ದುಃಖದಲ್ಲಿ ಭಗವಂತನನ್ನು ಎಲ್ಲರೂ ಕರೆಯುತ್ತಾರೆ. ನಿಮ್ಮ ಬಳಿ ಅವರು ಕುಳಿತಿದ್ದಾರೆ. ನಿಮ್ಮನ್ನು ಎಲ್ಲಾ ದುಃಖಗಳಿಂದ ಮುಕ್ತ ಮಾಡುತ್ತಿದ್ದಾರೆ. ನೀವು ತಿಳಿದಿರುವಿರಿ ಪೂರ್ತಿ ದುಃಖಧಾಮದಿಂದ ಸುಖಧಾಮಕ್ಕೆ ಸರಿಯಾಗಿ ಕರೆದುಕೊಂಡು ಹೋಗುವವರು ಸುಖಧಾಮದ ಮಾಲೀಕರು ತಿಳಿಸುತ್ತಿದ್ದಾರೆ. ಅವರು ಬಂದಿದ್ದಾರೆ, ನಿಮ್ಮ ಸಮ್ಮುಖದಲ್ಲಿ ಕುಳಿತಿದ್ದಾರೆ ಮತ್ತು ರಾಜಯೋಗ ಕಲಿಸುತ್ತಿದ್ದಾರೆ. ಇದು ಯಾವುದೇ ಮನುಷ್ಯರ ಕಾರ್ಯ ಅಲ್ಲಾ. ನೀವು ಹೇಳುವಿರಿ ಪರಮಪಿತ ಪರಮಾತ್ಮ ನಮಗೆ ಮನುಷ್ಯರಿಂದ ದೇವತೆಗಳನ್ನಾಗಿ ಮಾಡಲು ರಾಜಯೋಗ ಕಲಿಸಿದ್ದಾರೆ. ಮನುಷ್ಯ, ಮನುಷ್ಯನನ್ನು ದೇವತೆಯನ್ನಾಗಿ ಮಾಡಲು ಸಾಧ್ಯವಿಲ್ಲ. ‘ಮನುಷ್ಯ ಸೆ ದೇವತಾ ಕಿಯೆ ಕರತ ನಾ ಲಾಗೀ ವಾರ್’..... ಇದು ಯಾರ ಮಹಿಮೆಯಾಗಿದೆ? ಬಾಬಾ ಅವರದು. ಸರಿಯಾದ ದೇವತೆಗಳು ಸತ್ಯಯುಗದಲ್ಲಿ ಇರುತ್ತಾರೆ. ಈ ಸಮಯದಲ್ಲಿ ದೇವತೆಗಳು ಇರುವುದೇ ಇಲ್ಲ. ಆದ್ದರಿಂದ ಖಂಡಿತವಾಗಿ ಸ್ವರ್ಗದ ಸ್ಥಾಪನೆ ಮಾಡುವವರೇ ಮನುಷ್ಯರನ್ನು ದೇವತೆಗಳನ್ನಾಗಿ ಮಾಡುತ್ತಾರೆ. ಪರಮಪಿತ ಪರಮಾತ್ಮ ಯಾರನ್ನು ಶಿವ ಎಂದೂ ಸಹ ಹೇಳುತ್ತಾರೆ, ಅವರು ಇಲ್ಲಿ ಪತಿತರನ್ನು ಪಾವನ ಮಾಡಲು ಬರಬೇಕಾಗುವುದು. ಈಗ ಅವರು ಬರುವುದು ಹೇಗೆ? ಪತಿತ ಪ್ರಪಂಚದಲ್ಲಿ ಕೃಷ್ಣನ ಶರೀರ ಸಹ ಸಿಗಲು ಸಾಧ್ಯವಿಲ್ಲ. ಮನುಷ್ಯರಂತೂ ತಬ್ಬಿಬ್ಬಾಗಿದ್ದಾರೆ. ಈಗ ನೀವು ಮಕ್ಕಳು ಸಮ್ಮುಖದಲ್ಲಿ ಕೇಳುತ್ತಿರುವಿರಿ. ನೀವು ಈ ಪ್ರಪಂಚದ ಚರಿತ್ರೆ-ಭೂಗೋಳವನ್ನು ತಿಳಿದಿರುವಿರಿ. ಚರಿತ್ರೆಯ ಜೊತೆ ಭೂಗೋಳ ಖಂಡಿತ ಇರುವುದು ಮತ್ತು ಚರಿತ್ರೆ-ಭೂಗೋಳ ಇರುವುದು ಮನುಷ್ಯ ಸೃಷ್ಟಿ ಯಲ್ಲಿ. ಬ್ರಹ್ಮಾ-ವಿಷ್ಣು-ಶಂಕರದು, ಸೂಕ್ಷ್ಮವತನಕ್ಕೆ ಎಂದೂ ಚರಿತ್ರೆ-ಭೂಗೋಳ ಎಂದು ಹೇಳಲಾಗುವುದಿಲ್ಲ. ಅದಾಗಿದೆ ಸೂಕ್ಷ್ಮವತನ. ಅಲ್ಲಿ ಕೇವಲ ಮೂವಿ ಇರುತ್ತದೆ. ಟಾಕಿಯಂತು ಇಲ್ಲಿದೆ. ಈಗ ಬಾಬಾ ನೀವು ಮಕ್ಕಳಿಗೆ ಇಡೀ ಪ್ರಪಂಚದ ಚರಿತ್ರೆ-ಭೂಗೋಳ ಮತ್ತು ಮೂಲವತನದ ಸಮಾಚಾರ, ಯಾವುದಕ್ಕೆ ಮೂರು ಲೋಕವೆಂದು ಹೇಳುತ್ತಾರೆ ಎಲ್ಲವನ್ನೂ ಕೇಳುತ್ತಾರೆ. ಈಗ ನೀವು ಬ್ರಾಹ್ಮಣರ ಹೊಸ ವೃಕ್ಷ ನೆಡಲಾಗಿದೆ. ಇದಕ್ಕೆ ವೃಕ್ಷ ಎಂದು ಹೇಳಲಾಗುವುದು, ಬೇರೆ ಏನೆಲ್ಲಾ ಮಠ-ಪಂಥವಿದೆ ಅದಕ್ಕೆ ವೃಕ್ಷವೆಂದು ಹೇಳಲಾಗುವುದಿಲ್ಲ. ಭಲೇ ಕ್ರಿಶ್ಚಿಯನ್ ಜನರಿದ್ದಾರೆ ಅವರು ತಿಳಿಯುತ್ತಾರೆ ಕ್ರಿಶ್ಚಿಯನ್ ಟ್ರೀ ಬೇರೆಯಿದೆ ಆದರೆ ಅವರಿಗೆ ಇದು ಗೊತ್ತಿಲ್ಲ ಎಲ್ಲಾ ರೆಂಬೆ-ಕೊಂಬೆಗಳು ಈ ದೊಡ್ಡ ವೃಕ್ಷದಿಂದ ಹೊರಬಂದಿವೆ ಎಂದು. ತಿಳಿಸಿಕೊಡಬೇಕು ಮನಷ್ಯ ಸೃಷ್ಟಿ ಹೇಗೆ ಹುಟ್ಟಿಕೊಳ್ಳುವುದೆಂದು. ಮಾತ-ಪಿತಾ ನಂತರ ಬಾಲಕ...... ಅವರೂ ಸಹ ಒಟ್ಟಿಗೆ ಅಂತೂ ಹುಟ್ಟಿಕೊಳ್ಳುವುದಿಲ್ಲ. ಎರಡರಿಂದ ನಾಲ್ಕು, ಐದು ಎಲೆಗಳು ಇರುತ್ತವೆ ನಂತರ ಕೆಲವನ್ನು ಪಕ್ಷಿಗಳು ಸಹಾ ತಿಂದುಬಿಡುತ್ತವೆ. ಇಲ್ಲೂ ಸಹ ಪಕ್ಷಿ ತಿಂದು ಬಿಡುತ್ತದೆ. ಇದು ಬಹಳ ಚಿಕ್ಕ ವೃಕ್ಷವಾಗಿದೆ. ನಿಧಾನವಾಗಿ ವೃದ್ಧಿಯನ್ನು ಹೊಂದುತ್ತೆ, ಹೇಗೆ ಮೊದಲು ಹೊಂದಿತ್ತು ಹಾಗೆ ನೀವು ಮಕ್ಕಳಿಗೆ ಈಗ ಎಷ್ಟು ತಿಳುವಳಿಕೆ ಇದೆ. ನೀವು ತ್ರಿಕಾಲದರ್ಶಿಗಳಾಗಿರುವಿರಿ ಮೂರೂ ಕಾಲವನ್ನು ತಿಳಿದಿರುವವರು, ತ್ರಿಲೋಕಿನಾಥ ಆಗಿರುವಿರಿ ಅರ್ಥಾತ್ ಮೂರೂ ಲೋಕವನ್ನು ತಿಳಿದಿರುವವರು. ಲಕ್ಷ್ಮಿ-ನಾರಾಯಣರನ್ನು ತ್ರಿಲೋಕಿನಾಥ, ತ್ರಿಕಾಲದರ್ಶಿ ಎಂದು ಹೇಳಲಾಗುವುದಿಲ್ಲ. ಮನುಷ್ಯ ನಂತರ ಕೃಷ್ಣನನ್ನು ತ್ರಿಲೋಕಿನಾಥ ನೆಂದು ಹೇಳುವರು. ಯಾರು ಸೇವೆ ಮಾಡುತ್ತಾರೆ ಅವರ ಪ್ರಜೆಗಳಾಗುವರು. ತಮ್ಮ ವಾರಿಸ್ಸ್ ಅನ್ನೂ ಸಹ ಮಾಡಬೇಕು, ಪ್ರಜೆಗಳನ್ನೂ ಸಹ ಮಾಡಬೇಕು. ಆದ್ದರಿಂದ ಇದು ಬುದ್ಧಿಯಲ್ಲಿ ಇರಬೇಕು-ನಾನು ತ್ರಿಲೋಕಿನಾಥನಾಗಿದ್ದೇನೆ. ಈ ಮಾತು ಬಹಳ ವಿಚಿತ್ರವಾಗಿದೆ. ಮಕ್ಕಳು ಪೂರ್ತಿರೀತಿ ತಿಳಿಸಲು ಸಾಧ್ಯವಿಲ್ಲ ಏಕೆಂದರೆ ಕಟ್ಟುವುದರ ಬದಲು ಕೆಡವುದನ್ನು ಮಾಡಿಬಿಡುತ್ತಾರೆ. ಚಿಗುರಿರುವ ಎಲೆಯನ್ನು ಬಾಡಿಸಿಬಿಡುತ್ತಾರೆ ನಂತರ ವಿಧ್ಯೆಯನ್ನು ಬಿಟ್ಟುಬಿಡುತ್ತಾರೆ. ನಾವು ಹೇಳುತ್ತೇವೆ ಕಲ್ಪದ ಹಿಂದೆಯೂ ಸಹಾ ಹೀಗೆ ಆಗಿತ್ತು, ಕಳೆದದ್ದು ಕಳೆದು ಹೋದಂತೆ ನೋಡಿ. ಈಗ ನೀವು ಮಕ್ಕಳು ಇಡೀ ಸೃಷ್ಟಿ ಯ ಆದಿ-ಮಧ್ಯ-ಅಂತ್ಯವನ್ನು ತಿಳಿದಿರುವಿರಿ, ಚರಿತ್ರೆ ಮತ್ತು ಭೂಗೋಳ ತಿಳಿದಿರುವಿರಿ. ಬಾಕಿ ಮನುಷ್ಯರು ಬಹಳ ಮಾತುಗಳಂತೂ ಆಡುತ್ತಾರಲ್ಲವೆ, ಏನೇನು ಬರೆಯುತ್ತಾರೆ, ಹೇಗೆ ನಾಟಕ ಮಾಡುತ್ತಾರೆ!

ಭಾರತ ಬಹಳ ಜನರನ್ನು ಅವತಾರ ಎಂದು ಒಪ್ಪುತ್ತಾರೆ. ಭಾರತವೇ ತನ್ನ ನೌಕೆಯನ್ನು ನರಕ ಮಾಡಿದೆ. ಈಗ ನೀವು ಮಕ್ಕಳು ಮುಖ್ಯವಾಗಿ ಭಾರತಕ್ಕೆ ಸಾಮಾನ್ಯವಾಗಿ ಪ್ರಪಂಚಕ್ಕೆ ಪರಿಹಾರವನ್ನು ಮಾಡುವಿರಿ. ಈ ಜಗತ್ತಿನ ಚಕ್ರ ಸುತ್ತುತ್ತಿರುತ್ತದೆ, ನಾವು ಮೇಲಿದ್ದಾಗ ನರಕ ಕೆಳಗಿರುತ್ತದೆ. ಹೇಗೆ ಸೂರ್ಯ ಮುಳುಗಿದಾಗ ಹೇಳುತ್ತಾರೆ ಸಮುದ್ರ ಕೆಳಗೆ ಹೋಗುತ್ತದೆ ಎಂದು. ಆದರೆ ಅದು ಹೋಗುವುದಿಲ್ಲ. ದ್ವಾರಕೆ ಎಲ್ಲಾ ಮುಳುಗಿ ಹೋಗಿದೆ ಎಂದು ತಿಳಿಯುತ್ತಾರೆ. ಮನುಷ್ಯರ ಬುದ್ಧಿ ಅಧ್ಭುತವಾಗಿದೆಯಲ್ಲವೆ. ಈಗ ನೀವು ಎಷ್ಟು ಶ್ರೇಷ್ಟರಾಗುತ್ತಿರುವಿರಿ. ಎಷ್ಟು ಖುಷಿ ಇರಬೇಕಾಗಿದೆ. ದುಃಖದ ಸಮಯದಲ್ಲಿ ನಿಮಗೆ ಲಾಟರಿ ಸಿಗುತ್ತಿದೆ. ದೇವತೆಗಳಿಗಂತೂ ಸಿಕ್ಕಿದೆ. ಇದು ನಿಮಗೆ ದುಃಖದಿಂದ ನಂತರ ಅಪಾರವಾದ ಸುಖ ಸಿಗುವುದು. ಎಷ್ಟು ಖುಷಿಯಾಗುವುದು, ಭವಿಷ್ಯ 21 ಜನ್ಮಕ್ಕಾಗಿ ಸ್ವರ್ಗದ ಮಾಲಿಕರಾಗುವಿರಿ.

ಮನುಷ್ಯರು ಹೇಳುತ್ತಾರೆ ಗೀತೆಯ ಜ್ಞಾನವು ಸತ್ಸಂಗವಾಗಿದೆ ಎಂದು. ಎಷ್ಟು ಸತ್ಸಂಗ ಸಾಯಿ ಬಾಬಾ ಮುಂತಾದವರದು ಇದೆ. ಬಹಳ ಅಂಗಡಿಗಳಿವೆ. ಇದೊಂದೇ ಹಟ್ಟಿಯಾಗಿದೆ ಬ್ರಹ್ಮಾಕುಮಾರಿಯರದು. ಜಗದಂಬ ಆಗಿದ್ದಾರೆ ಬ್ರಹ್ಮಾನ ಮುಖವಂಶಾವಳಿ. ಸರಸ್ವತಿ ಬ್ರಹ್ಮಾರವರ ಮಗಳು ಪ್ರಸಿದ್ದರಾಗಿದ್ದಾರೆ. ನೀವು ತಿಳಿದಿರುವಿರಿ ಮಾತಾ-ಪಿತರಿಂದ ನಮಗೆ ಅಪಾರವಾದ ಸುಖ ಸಿಕ್ಕಿತ್ತು. ಈಗ ಆ ತಾಯಿ-ತಂದೆ ಸಿಕ್ಕಿದ್ದಾರೆ. ಅಪಾರವಾದ ಸುಖ ಕೊಡುತ್ತಿದ್ದಾರೆ. ಒಳ್ಳೆಯದು, ಮಾತಾ-ಪಿತರಿಗೆ ಜನ್ಮ ಕೊಟ್ಟವರು ಯಾರು? ಶಿವಬಾಬಾ. ನಮಗೆ ರತ್ನ ಶಿವಬಾಬಾರವರಿಂದ ಸಿಗುತ್ತದೆ. ನೀವಾದಿರಿ ಮೊಮ್ಮಕ್ಕಳು. ನಾವು ಈಗ ಅಪಾರವಾದ ಸುಖವನ್ನು ಬೇಹದ್ದಿನ ತಂದೆಯಿಂದ ಬ್ರಹ್ಮಾ ಸರಸ್ವತಿ, ಮಾತಾ-ಪಿತರ ಮುಖಾಂತರ ಪಡೆಯುತ್ತಿದ್ದೇವೆ. ಕೊಡುವಂತಹವರು ಅವರಾಗಿದ್ದಾರೆ. ಎಷ್ಟು ಸಹಜವಾದ ಮಾತಾಗಿದೆ. ನಂತರ ತಿಳಿಸಿಕೊಡಬೇಕು ನಾವು ಈ ಭಾರತವನ್ನು ಸ್ವರ್ಗ ಮಾಡುತ್ತೇವೆ. ನಂತರ ಹೋಗಿ ಅಪಾರವಾದ ಸುಖವನ್ನು ಪಡೆಯುವಿರಿ. ನಾವು ಭಾರತದ ಸೇವಕರಾಗಿದ್ದೇವೆ. ತನು,ಮನ ಧನ ದಿಂದ ನಾವು ಸೇವೆ ಮಾಡುತ್ತೇವೆ. ಗಾಂದೀಗೂ ಸಹ ಸಹಾಯ ಮಾಡುತ್ತಿದ್ದರಲ್ಲವೆ. ನೀವು ತಿಳಿಸಿಕೊಡಬಹುದು ಯಾದವರು, ಕೌರವರು, ಪಾಂಡವರು ಏನು ಮಾಡುತ್ತಿದ್ದರು? ಪಾಂಡವರ ಕಡೆಯಂತು ಪರಮಪಿತ ಪರಮಾತ್ಮ ಇದ್ದಾರೆ. ಪಾಂಡವರು ವಿನಾಶಕಾಲದಲ್ಲಿ ಪ್ರೀತಿಬುದ್ಧಿಯುಳ್ಳವರು, ಕೌರವರು ಮತ್ತು ಯಾದವರು ವಿನಾಶಕಾಲದಲ್ಲಿ ವಿಪರೀತ ಬುದ್ಧಿಯುಳ್ಳವರು. ಯಾರು ಪರಮಪಿತ ಪರಮಾತ್ಮನನ್ನು ಒಪ್ಪಿಕೊಳ್ಳುವುದೇ ಇಲ್ಲ. ಕಲ್ಲು-ಮುಳ್ಳುಗಳಲ್ಲಿ ಎಸೆದು ಬಿಟ್ಟಿದ್ದಾರೆ. ನಿಮಗೆ ಅವರ ವಿನಹ ಬೇರೆಯಾರ ಜೊತೆಯೂ ಪ್ರೀತಿಯಿಲ್ಲ. ಆದ್ದರಿಂದ ಬಹಳ ಹರ್ಷಿತರಾಗಿರಬೇಕು. ಅಡಿಯಿಂದ ಮುಡಿಯವರೆಗೂ ಖುಶಿಯಿರಬೇಕಾಗಿದೆ. ಮಕ್ಕಳು ಬಹಳ ಇದ್ದಾರಲ್ಲವೆ. ನೀವು ಮಾತಾ-ಪಿತರ ಮೂಲಕ ಕೇಳುವಿರಿ ಎಂದಮೇಲೆ ಖುಶಿಯಾಗುವುದು. ಇಡೀ ಸೃಷ್ಟಿ ಯಲ್ಲಿ ನಮ್ಮಂತ ಸೌಭಾಗ್ಯಶಾಲಿ ಬೇರೆ ಯಾರೂ ಇರಲು ಸಾಧ್ಯವಿಲ್ಲ! ನಮ್ಮಲ್ಲಿಯೂ ಸಹ ಕೆಲವರು ಪದಮಾಪದಮ್ ಭಾಗ್ಯಶಾಲಿ, ಕೆಲವರು ಸೌಭಾಗ್ಯಶಾಲಿ, ಕೆಲವರು ಭಾಗ್ಯಶಾಲಿ ಮತ್ತು ಕೆಲವರು ದುರ್ಭಾಗ್ಯಶಾಲಿ ಸಹಾ ಇದ್ದಾರೆ. ಯಾರು ಆಶ್ಚರ್ಯವಾಗಿ ಓಡಿಹೋಗುತ್ತಾರೆ ಅವರಿಗೆ ಹೇಳಲಾಗುತ್ತೆ ಮಹಾನ್ ದುರ್ಭಾಗ್ಯಶಾಲಿ. ಯಾವುದಾದರೂ ಕಾರಣದಿಂದ ತಂದೆಗೆ ವಿಚ್ಛೇದನ ಕೊಟ್ಟುಬಿಡುತ್ತಾರೆ. ತಂದೆಯಂತೂ ಬಹಳ ಮಧುರರಾಗಿದ್ದಾರೆ. ತಿಳಿಯುತ್ತಾರೆ ಶಿಕ್ಷೆ ಕೊಟ್ಟರೆ ಎಲ್ಲಿ ವಿಚ್ಛೇದನ ಕೊಟ್ಟುಬಿಡುವರೋ ಎಂದು ತಿಳಿಸುತ್ತಾರೆ ನೀವು ವಿಕಾರದಲ್ಲಿ ಹೋಗಿ ಕುಲದ ಹೆಸರಿಗೆ ಕಳಂಕ ತರುವಿರಿ. ಒಂದುವೇಳೆ ಹೆಸರು ಕೆಡಿಸಿದರೆ ಬಹಳ ಸಜೆಯನ್ನು ತಿನ್ನಬೇಕಾಗುವುದು. ಅದಕ್ಕೆ ಹೇಳಲಾಗುವುದು ಸದ್ಗುರುವಿನ ನಿಂದಕರು..... ಅದನ್ನು ಅವರು ತಮ್ಮ ಲೌಕಿಕಗುರುಗಳಿಗೆ ಎಂದು ತಿಳಿದಿದ್ದಾರೆ. ಅಬಲೆಯರನ್ನು ಪುರುಷರೂ ಸಹ ಭಯಬೀಳಿಸುತ್ತಾರೆ, ಅಮರನಾಥ ಬಾಬಾ ಈಗ ನಮಗೆ ಅಮರಕಥೆಯನ್ನು ಹೇಳುತ್ತಿದ್ದಾರೆ, ಬಾಬಾ ಹೇಳುತ್ತಾರೆ ನಾನು ಶಿಕ್ಷಕ, ಸೇವಕನಾಗಿದ್ದೇನಲ್ಲವೆ. ಶಿಕ್ಷಕರ ಕಾಲು ತೊಳೆದು ಕುಡಿಯುವಿರೇನು? ಮಕ್ಕಳು ಏನು ಮಾಲಿಕರಾಗುವವರಿದ್ದೀರಿ ಅವರಿಂದ ನಾನು ಎನು ಕಾಲು ತೊಳೆಸಿಕೊಳ್ಳಲೆ? ಇಲ್ಲಾ. ಗಾಯನ ಸಹ ಮಾಡಲಾಗುತ್ತೆ ನಿರಾಕಾರ, ನಿರಹಂಕಾರಿ. ಇವರೂ ಸಹ ಅವರ ಸಂಗದಿಂದ ನಿರಹಂಕಾರಿಗಳಾಗಿಬಿಟ್ಟಿದ್ದಾರೆ.

ಅಬಲೆಯರ ಮೇಲೆ ಅತ್ಯಾಚಾರ ಸಹಾ ಗಾಯನವಿದೆ. ಕಲ್ಪದ ಹಿಂದೆ ಸಹಾ ಅತ್ಯಾಚಾರ ಆಗಿತ್ತು ರಕ್ತದ ನದಿಗಳು ಹರಿಯುತ್ತವೆ, ಪಾಪದ ಕೊಡ ತುಂಬುವುದು. ಈಗ ನೀವು ಯೋಗಬಲದಿಂದ ಬೆಹದ್ದಿನ ಬಾದಶಾಹಿ ಪಡೆದುಕೊಳ್ಳುವಿರಿ. ನೀವು ತಿಳಿದುಕೊಂಡಿರುವಿರಿ ನಾವು ತಂದೆಯಿಂದ ಅಟಲ-ಅಖಂಡ ಬಾದಶಾಹಿ ಪಡೆಯುವೆವು. ನಾವಂತೂ ಸೂರ್ಯವಂಶಿ ಆಗುವೆವು. ಹಾಂ!, ಇದರಲ್ಲಿ ಸಾಹಸವೂ ಸಹಾ ಬೇಕಾಗಿದೆ. ನಿಮ್ಮ ಮುಖವನ್ನು ನೋಡಿಕೊಳ್ಳುತ್ತಿರಿ- ನನ್ನಲ್ಲಿ ಯಾವುದೇ ವಿಕಾರ ಇಲ್ಲಾ ತಾನೆ. ಯಾವುದೇ ಮಾತು ಅರ್ಥವಾಗದೇ ಹೋದರೆ ದೊಡ್ಡವರನ್ನು ಕೇಳಿರಿ, ನಿಮ್ಮ ಸಂಶಯವನ್ನು ದೂರಮಾಡಿಕೊಳ್ಳಿ. ಒಂದುವೇಳೆ ಬ್ರಾಹ್ಮಿಣಿ ಸಂಶಯ ದೂರ ಮಾಡಲು ಸಾಧ್ಯವಾಗದೇ ಹೋದರೆ ಮತ್ತೆ ಬಾಬಾನನ್ನು ಕೇಳಿ. ಈಗ ನೀವು ಮಕ್ಕಳು ಬಹಳಷ್ಟು ವಿಷಯ ತಿಳಿದುಕೊಳ್ಳುವುದು ಬಹಳ ಇದೆ. ಎಲ್ಲಿಯವರೆಗೆ ಬದುಕಿರುವಿರಿ ಅಲ್ಲಿಯವರೆಗೆ ಬಾಬಾ ತಿಳಿಸುತ್ತಿರುತ್ತಾರೆ. ಹೇಳಿ, ಈಗಂತೂ ನಾವು ಓದುತ್ತಿದ್ದೇವೆ, ಬಾಬಾನನ್ನು ನಾವು ಕೇಳೋಣ ಇಲ್ಲದಿದ್ದರೆ ಹೇಳಿ ಬಾಬಾ ಇಲ್ಲಿಯವರೆಗೆ ಈ ಮಾತಿನ ಬಗ್ಗೆ ಇದುವರೆಗೆ ತಿಳಿಸಿಕೊಟ್ಟಿಲ್ಲಾ ಎಂದು. ಮುಂದೆ ಹೋದಂತೆ ತಿಳಿಸಿಕೊಡುತ್ತಾರೆ, ನಂತರ ಕೇಳಿ. ಬಹಳಷ್ಟು ಪಾಯಿಂಟ್ಸ್ ಬರುತ್ತಿರುತ್ತದೆ. ಕೆಲವರು ಕೇಳುತ್ತಾರೆ ಯುದ್ಧ ಏನಾಗುತ್ತದೆ? ಬಾಬಾ ತ್ರಿಕಾಲದರ್ಶಿಯಾಗಿದ್ದಾರೆ ಎಲ್ಲಾ ತಿಳಿಸಲು ಸಾಧ್ಯ, ಆದರೆ ಇದುವರೆಗೆ ಬಾಬಾ ಏನೂ ತಿಳಿಸಿಲ್ಲ. ಅರ್ಜಿ ನಮ್ಮದು, ಮರ್ಜಿ ಅವರದು. ತಮ್ಮನ್ನು ಬಿಡಿಸಿಕೊಳ್ಳಬೇಕು.

ತೋಟದಲ್ಲಿ ಬಾಬಾ ಮಕ್ಕಳನ್ನು ಪ್ರಶ್ನೆ ಕೇಳಿದರು ಬಾಬಾ ಆಗಿದ್ದಾರೆ ಜ್ಞಾನಸಾಗರ ಅಂದರೆ ಅವರು ಖಂಡಿತ ಜ್ಞಾನಡಾನ್ಸ್ ಮಾಡುತ್ತಿರಬಹುದು. ಒಳ್ಳೆಯದು, ಯಾವಾಗ ಭಕ್ತಿ ಮಾರ್ಗದಲ್ಲಿ ಶಿವಬಾಬಾ ಎಲ್ಲರ ಮನೋಕಾಮನೆಯನ್ನು ಪೂರ್ಣ ಮಾಡುವ ಪಾತ್ರ ಅಭಿನಯಿಸುತ್ತಾರೆ ಅಂದರೆ ಆ ಸಮಯದಲ್ಲಿ ಅವರಿಗೆ ಈ ಸಂಕಲ್ಪವಿರ ಬಹುದು ನಾನು ಭಾರತದಲ್ಲಿ ಸಂಗಮದಲ್ಲಿ ಹೋಗಿ ಮಕ್ಕಳಿಗೆ ಈ ರಾಜಯೋಗ ಕಲಿಸಬೇಕು? ಸ್ವರ್ಗದ ಮಾಲಿಕರನ್ನಾಗಿ ಮಾಡಬೇಕು? ಈ ಸಂಕಲ್ಪ ಬರುವುದಾ ಅಥವಾ ಬರುವ ಸಮಯ ಆದಾಗ ಆ ಸಂಕಲ್ಪ ಬರುವುದಾ? ವಿಚಾರ ಹೇಳುತ್ತೆ ಈ ಸಂಕಲ್ಪ ಇರುವುದಿಲ್ಲ. ಭಲೆ ಅವರಲ್ಲಿ ಜ್ಞಾನ ಮರ್ಜ್ ಆಗಿದೆ ಆದರೂ ಇಮರ್ಜ್ ಯಾವಾಗ ಆಗುವುದೆಂದರೆ ಯಾವಾಗ ಬರುವ ಸಮಯ ಬರುತ್ತೆ ಆಗ.ಹಾಗೆ ನೋಡಿದರೆ ನಮ್ಮಲ್ಲೂ ಸಹ 84 ಜನ್ಮಗಳ ಪಾತ್ರ ಮರ್ಜ್ ಆಗಿದೆಯಲ್ಲವೇ. ಗಾಯನ ಸಹ ಮಾಡಲಾಗುತ್ತೆ ಭಗವಂತನಿಗೆ ಹೊಸ ಸೃಷ್ಟಿಯ ರಚನೆಯ ಸಂಕಲ್ಪ ಬಂದಿತು, ಹೇಗೆ ನೋಡಿದರೆ ಯಾವಾಗ ಸಮಯವಾಗುವುದೊ ಆಗ ಸಂಕಲ್ಪ ನಡೆಯುವುದು. ಇದೂ ಸಹಾ ಡ್ರಾಮದಲ್ಲಿ ನಿಗಧಿಯಾಗಿದೆ. ಇದು ಬಹಳ ಗುಹ್ಯ ಮಾತಾಗಿದೆ. ಒಳ್ಳೆಯದು!

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ರಾತ್ರಿ-ಕ್ಲಾಸ್ 13.1.1969

ಮಕ್ಕಳು ಯಾವಾಗ ಇಲ್ಲಿ ಬಂದು ಕುಳಿತುಕೊಳ್ಳುತ್ತಾರೆ ಆಗ ತಂದೆ ಕೇಳುತ್ತಾರೆ ಮಕ್ಕಳೇ, ಶಿವಬಾಬಾನ ನೆನಪಿದೆಯೇ? ನಂತರ ವಿಶ್ವದ ಬಾದಶಾಹಿಯನ್ನು ನೆನಪು ಮಾಡುವಿರಾ? ಬೇಹದ್ದಿನ ತಂದೆಯ ಹೆಸರಾಗಿದೆ ಶಿವ. ಆದರೆ ಭಾಷೆಯ ಕಾರಣ ಬೇರೆ-ಬೇರೆ ಹೆಸರನ್ನು ಇಟ್ಟಿದ್ದಾರೆ. ಹೇಗೆ ಬೊಂಬೆಯಿಯಲ್ಲಿ ಬಬುಲನಾಥ ಎಂದು ಹೇಳುತ್ತಾರೆ ಏಕೆಂದರೆ ಅವರು ಮುಳ್ಳುಗಳನ್ನು ಹೂಗಳನ್ನಾಗಿ ಮಾಡುತ್ತಾರೆ. ಸತ್ಯಯುಗದಲ್ಲಿ ಇದೆ ಹೂ, ಇಲ್ಲಿ ಎಲ್ಲಾ ಮುಳ್ಳುಗಳು. ಆದ್ದರಿಂದ ತಂದೆ ಆತ್ಮೀಯ ಮಕ್ಕಳನ್ನು ಕೇಳುತ್ತಾರೆ ಬೇಹದ್ದಿನ ತಂದೆಯ ನೆನಪಿನಲ್ಲಿ ಎಷ್ಟು ಸಮಯ ಇರುವಿರಿ? ಅವರ ಹೆಸರಾಗಿದೆ ಶಿವ, ಕಲ್ಯಾಣಕಾರಿ. ನೀವು ಎಷ್ಟು ನೆನಪು ಮಾಡುವಿರಿ ಅಷ್ಟು ಜನ್ಮ-ಜನ್ಮಾಂತರದ ಪಾಪ ಕಟ್ ಆಗುವುದು. ಸತ್ಯಯುಗದಲ್ಲಿ ಪಾಪವು ಆಗುವುದೇ ಇಲ್ಲ. ಅದಾಗಿದೆ ಪುಣ್ಯಾತ್ಮರ ಪ್ರಪಂಚ, ಇದಾಗಿದೆ ಪಾಪಾತ್ಮರ ಪ್ರಪಂಚ. ಪಾಪ ಮಾಡಿಸುವಂತಹವರು 5 ವಿಕಾರ. ಸತ್ಯಯುಗದಲ್ಲಿ ರಾವಣ ಇರುವುದೇ ಇಲ್ಲ. ಅವನಾಗಿದ್ದಾನೆ ಇಡೀ ಪ್ರಪಂಚದ ಶತ್ರು. ಈ ಸಮಯ ಇಡೀ ಪ್ರಪಂಚದಲ್ಲಿ ರಾವಣನ ರಾಜ್ಯ ಇದೆ. ಎಲ್ಲರೂ ದುಃಖಿ, ತಮೋಪ್ರಧಾನವಾಗಿದ್ದಾರೆ ಆಗ ಹೇಳಲಾಗುವುದು ಮಕ್ಕಳೇ ಮಾಮೇಕಮ್ ಯಾದ್ ಕರೋ (ನನ್ನೊಬ್ಬನನ್ನೇ ನೆನಪು ಮಾಡಿ). ಇದು ಗೀತೆಯ ಅಕ್ಷರವಾಗಿದೆ. ತಂದೆ ಖುದ್ದು ಹೇಳುತ್ತಾರೆ ದೇಹ ಸಹಿತ ಎಲ್ಲಾ ಸಂಬಂಧವನ್ನು ಬಿಟ್ಟು ನನ್ನೊಬ್ಬನನ್ನೇ ನೆನಪು ಮಾಡಿ. ಮೊದಲು-ಮೊದಲು ನೀವು ಸುಖದ ಸಂಬಂಧದಲ್ಲಿದ್ದಿರಿ. ನಂತರ ರಾವಣನ ಬಂದನ ದಲ್ಲಿ ಬಂದಿರಿ. ಮತ್ತೆ ಈಗ ಸುಖದ ಸಂಬಂಧದಲ್ಲಿ ಬರಬೇಕಿದೆ. ನಿಮ್ಮನ್ನು ಆತ್ಮ ಎಂದು ತಿಳಿದುಕೊಳ್ಳಿ ಮತ್ತು ತಂದೆಯನ್ನು ನೆನಪು ಮಾಡಿ-ಈ ಶಿಕ್ಷಣ ತಂದೆ ಸಂಗಮಯುಗದಲ್ಲಿ ಮಾತ್ರ ಕೊಡುತ್ತಾರೆ. ತಂದೆ ಖುದ್ದು ಹೇಳುತ್ತಾರೆ ನಾನು ಪರಮಧಾಮದಲ್ಲಿ ಇರುವವನು, ನಿಮಗೆ ತಿಳಿಸಿಕೊಡಲು ಈ ಶರೀರದಲ್ಲಿ ಪ್ರವೇಶ ಮಾಡಿರುವೆನು. ತಂದೆ ಹೇಳುತ್ತಾರೆ ಪವಿತ್ರರಾಗದ ಹೊರತು ನೀವು ನನ್ನ ಬಳಿ ಬರಲು ಸಾಧ್ಯವಿಲ್ಲ. ಈಗ ಹೇಗೆ ಪಾವನರಾಗುವಿರಿ? ಕೇವಲ ನನ್ನನ್ನು ನೆನಪು ಮಾಡಿ. ಭಕ್ತಿ ಮಾರ್ಗದಲ್ಲಿಯೂ ಸಹಾ ಕೇವಲ ನನ್ನ ಪೂಜೆ ಮಾಡುತ್ತಿದ್ದಿರಿ, ಅದಕ್ಕೆ ಅವ್ಯಭಿಚಾರಿ ಪೂಜೆ ಎಂದು ಹೇಳಲಾಗುವುದು. ಈಗ ನಾನು ಪತಿತ-ಪಾವನನಾಗಿದ್ದೇನೆ. ಆದ್ದರಿಂದ ನೀವು ನನ್ನನ್ನು ನೆನಪು ಮಾಡಿದಾಗ ನಿಮ್ಮ ಜನ್ಮ-ಜನ್ಮಾಂತರದ ಪಾಪಾ ಕಟ್ ಆಗುವುದು. 63 ಜನ್ಮಗಳ ಪಾಪ ಇದೆ. ಸನ್ಯಾಸಿಗಳು ಯಾರೂ ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ, ತಂದೆಯೇ ಕಲಿಸುತ್ತಾರೆ. ವಾಸ್ತವದಲ್ಲಿ ಈ ಶಾಸ್ತ್ರ, ಭಕ್ತಿ ಮುಂತಾದವುಗಳು ಪ್ರವೃತ್ತಿ ಮಾರ್ಗದವರಿಗಾಗಿ. ಸನ್ಯಾಸಿಗಳಂತೂ ಕಾಡಿಗೆ ಹೋಗಿ ಕುಳಿತುಕೊಳ್ಳುತ್ತಾರೆ ಮತ್ತು ಬ್ರಹ್ಮ ನನ್ನು ನೆನಪು ಮಾಡುತ್ತಾರೆ. ಈಗ ತಂದೆ ಹೇಳುತ್ತಾರೆ-ಸರ್ವರ ಸದ್ಗತಿಧಾತ ನಾನಾಗಿದ್ದೇನೆ ಆದ್ದರಿಂದ ನನ್ನನ್ನು ನೆನಪು ಮಾಡುವುದರಿಂದ ನೀವು ಇದು (ಲಕ್ಷ್ಮಿ-ನಾರಾಯಣ) ಆಗುವಿರಿ. ಗುರಿ-ಉದ್ದೇಷ್ಯ ಎದುರಿಗಿದೆ. ಎಷ್ಟು ಓದುವಿರಿ ಓದಿಸುವಿರಿ ಅಷ್ಟೂ ಶ್ರೇಷ್ಠ ಪದವಿಯನ್ನು ದೈವಿ ರಾಜಧಾನಿಯಲ್ಲಿ ಪಡೆಯುವಿರಿ. ಅಲ್ಫ್ ಆಗಿದ್ದಾರೆ ಒಬ್ಬ ತಂದೆ. ರಚನೆಯಿಂದ ರಚನೆಗೆ ಆಸ್ತಿ ಸಿಗುವುದಿಲ್ಲ. ಇವರಾಗಿದ್ದಾರೆ ಬೇಹದ್ದಿನ ತಂದೆ ಅವರೆ ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ. ನೀವು ಸ್ವರ್ಗದಲ್ಲಿ ಸದ್ಗತಿಯಲ್ಲಿರುವಿರಿ. ಬಾಕಿ ಎಲ್ಲಾ ಆತ್ಮರು ಮನೆಗೆ ವಾಪಸ್ಸು ಹೋಗಿಬಿಡುವರು. ಮುಕ್ತಿ-ಜೀವನ್ ಮುಕ್ತಿ, ಗತಿ-ಸದ್ಗತಿ ಅಕ್ಷರವೇ ಶಾಂತಿಧಾಮ, ಸುಖಧಾಮ ಆಗಿದೆ. ತಂದೆಯ ನೆನಪಿಲ್ಲದೆ ಮನೆಗೆ ಹೋಗಲು ಸಾಧ್ಯವಿಲ್ಲ. ಆತ್ಮ ಅಗತ್ಯವಾಗಿ ಪವಿತ್ರ ಆಗಲೇ ಬೇಕು. ಇವರೆಲ್ಲರೂ ನಾಸ್ತಿಕರು. ತಂದೆಯನ್ನು ತಿಳಿದುಕೊಂಡಿಲ್ಲ. ಈಗ ನೀವು ಆಸ್ತಿಕರಾಗುತ್ತಿರುವಿರಿ. ಗಾಯನ ಸಹ ಇದೆ ವಿನಾಶಕಾಲೆ ವಿಪರೀತ ಬುದ್ಧಿ ವಿನಶ್ಯಂತಿ. ಈಗ ವಿನಾಶ ಕಾಲವಲ್ಲವೆ. ಚಕ್ರ ಅಗತ್ಯವಾಗಿ ತಿರುಗಲೇ ಬೇಕು. ವಿನಾಶಕಾಲದಲ್ಲಿ ಯಾರದು ಪ್ರೀತಿ ಬುದ್ಧಿ ಇದೆ ಅವರದು ವಿಜಯಂತಿ. ತಂದೆ ಎಷ್ಟು ಸಹಜಮಾಡಿ ತಿಳಿಸುತ್ತಾರೆ, ಆದರೆ ಮಾಯಾ-ರಾವಣ ಮರೆಸಿಬಿಡುತ್ತಾನೆ. ಈಗ ಈ ಹಳೆಯ ಪ್ರಪಂಚದ ಅಂತ್ಯವಾಗಿದೆ.ಅದಾಗಿದೆ ಅಮರಲೋಕ ಅಲ್ಲಿ ಮೃತ್ಯು ಇರುವುದಿಲ್ಲ. ತಂದೆಗೆ ಹೇಳುತ್ತಾರೆ ಬನ್ನಿ ನಮ್ಮನ್ನೆಲ್ಲಾ ನಿಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗಿ ಎಂದು. ಅಂದರೆ ಅವರು ಮೃತ್ಯು ಆದರಲ್ಲವೆ. ಸತ್ಯಯುಗದಲ್ಲಿ ಎಷ್ಟು ಚಿಕ್ಕ ವೃಕ್ಷವಾಗಿದೆ! ಈಗ ಬಹಳ ದೊಡ್ಡ ವೃಕ್ಷವಾಗಿದೆ.

ಬ್ರಹ್ಮಾ ಮತ್ತು ವಿಷ್ಣುವಿನ ಕಾರ್ಯ ಏನು? ವಿಷ್ಣುವಿಗೆ ದೇವತೆ ಎಂದು ಕರೆಯುತ್ತಾರೆ. ಬ್ರಹ್ಮಾನಿಗಂತೂ ಯಾವುದೇ ಆಭರಣ ಇತ್ಯಾದಿ ತೋರಿಸಿಲ್ಲ. ಅಲ್ಲಿ ಬ್ರಹ್ಮಾ ಆಗಲಿ, ವಿಷ್ಣು ಆಗಲಿ, ಶಂಕರ ಆಗಲಿ ಇರುವುದಿಲ್ಲ. ಪ್ರಜಾಪಿತ ಬ್ರಹ್ಮಾ ಅಂತೂ ಇಲ್ಲಿದ್ದಾರೆ. ಸೂಕ್ಷ್ಮವತನ ಕೇವಲ ಸಾಕ್ಷಾತ್ಕಾರ ಆಗುವುದು. ಸ್ಥೂಲ, ಸೂಕ್ಷ್ಮ, ಮೂಲ ಇದೆಯಲ್ಲವೆ! ಸೂಕ್ಷ್ಮ ವತನವಾಗಿದೆ ಮೂವಿ. ಇದನ್ನು ತಿಳಿಯುವಂತ ಮಾತಾಗಿದೆ. ಇದು ಗೀತಾ ಪಾಠಶಾಲೆಯಾಗಿದೆ, ಇಲ್ಲಿ ನೀವು ರಾಜಯೋಗವನ್ನು ಕಲಿಯುವಿರಿ. ಶಿವಬಾಬಾ ಓದಿಸುತ್ತಾರೆ ಎಂದಮೇಲೆ ಖಂಡಿತ ಶಿವಬಾಬಾರವರೇ ನೆನಪಿಗೆ ಬರುತ್ತಾರಲ್ಲವೆ. ಒಳ್ಳೆಯದು!

ಆತ್ಮೀಯ ಮಕ್ಕಳಿಗೆ ಆತ್ಮೀಯ ಬಾಪ್ದಾದಾ ರವರ ನೆನಪು ಪ್ರೀತಿ ಗುಡ್ನೈಟ್. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1) ದುಃಖದ ಸಮಯದಲ್ಲಿ ಅಪಾರ ಸುಖದ ಲಾಟರಿ ಸಿಕ್ಕಿದೆ, ಒಂದು ತಂದೆಯ ಜೊತೆ ಸತ್ಯ ಪ್ರೀತಿಯಿದೆ, ಅದರ ಸ್ಮರಣೆ ಮಾಡುತ್ತಾ ಸದಾ ಖುಶಿಯಲ್ಲಿರಿ.

2) ಬಾಪ್-ದಾದಾ ಸಮಾನ ನಿರಾಕಾರಿ ಮತ್ತು ನಿರಹಂಕಾರಿಯಾಗಬೇಕು. ಸಾಹಸ ಇಟ್ಟು ವಿಕಾರಗಳ ಮೇಲೆ ಜಯ ಪಡೆಯ ಬೇಕು. ಯೋಗಬಲದಿಂದ ಬಾದ್ಶಾಹಿ ಪಡೆಯಬೇಕು.

ವರದಾನ:
ಕರ್ಮ ಮಾಡುತ್ತಾ ಶಕ್ತಿಶಾಲಿ ಸ್ಟೇಜ್ನಲ್ಲಿ ಸ್ಥಿತರಾಗಿ ಆತ್ಮೀಯ ವ್ಯಕ್ತಿತ್ವದ ಅನುಭವ ಮಾಡಿಸುವಂತಹ ಕರ್ಮಯೋಗಿ ಭವ

ನೀವು ಮಕ್ಕಳು ಕೇವಲ ಕರ್ಮ ಮಾಡುವವರಲ್ಲ ಆದರೆ ಯೋಗಯುಕ್ತರಾಗಿ ಕರ್ಮ ಮಾಡುವಂತಹ ಕರ್ಮಯೋಗಿಗಳಾಗಿರುವಿರಿ. ಆದ್ದರಿಂದ ನಿಮ್ಮ ಮೂಲಕ ಪ್ರತಿ ಯೊಬ್ಬರಿಗೆ ಈ ರೀತಿ ಅನುಭವವಾಗಲಿ ಇವರು ಕೆಲಸವಂತು ಕೈಯಿಂದ ಮಾಡುತ್ತಿದ್ದಾರೆ ಆದರೆ ಕೆಲಸ ಮಾಡುತ್ತಿದ್ದರೂ ಸಹ ತಮ್ಮ ಶಕ್ತಿಶಾಲಿ ಸ್ಟೇಜ್ ನಲ್ಲಿ ಸ್ಥಿತರಾಗಿದ್ದಾರೆ. ಇಲ್ಲ ಸಾಧಾರಣ ರೀತಿಯಿಂದ ನಡೆಯುತ್ತಿರಲಿ, ಇಲ್ಲ ನಿಂತಿರಲಿ ಆದರೆ ಆತ್ಮೀಯ ವ್ಯಕ್ತಿತ್ವ ದೂರದಿಂದಲೇ ಅನುಭವವಾಗಬೇಕು. ಯಾವ ರೀತಿ ಈ ಪ್ರಾಪಂಚಿಕ ವ್ಯಕ್ತಿತ್ವ ಆಕರ್ಷಣೆ ಮಾಡುವುದು, ಅದೇ ರೀತಿ ನಿಮ್ಮ ಆತ್ಮೀಯ ವ್ಯಕ್ತಿತ್ವ, ಪವಿತ್ರತೆಯ ವ್ಯಕ್ತಿತ್ವ, ಜ್ಞಾನಿತ್ವ ಹಾಗೂ ಯೋಗಿತ್ವ ಆತ್ಮನ ವ್ಯಕ್ತಿತ್ವ ಸ್ವತಃ ಆಕರ್ಷಣೆ ಮಾಡುವುದು.

ಸ್ಲೋಗನ್:
ಸರಿಯಾದ ಮಾರ್ಗದಲ್ಲಿ ನಡೆಯವವರು ಹಾಗೂ ಎಲ್ಲರಿಗೂ ಸರಿಯಾದ ಮಾರ್ಗ ತೋರಿಸುವಂತಹವರೇ ಸತ್ಯ-ಸತ್ಯ ಲೈಟ್ಹೌಸ್.