23.06.22         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಇಲ್ಲಿಯ ಕೋಟಿ, ನೂರು ಕೋಟಿಗಳು ನಿಮ್ಮ ಕೆಲಸಕ್ಕೆ ಬರುವುದಿಲ್ಲ, ಎಲ್ಲವು ಮಣ್ಣಿನಲ್ಲಿ ಸೇರಿ ಹೋಗುವುದು ಆದ್ದರಿಂದ ನೀವೀಗ ಸತ್ಯಖಂಡಕ್ಕೋಸ್ಕರ ಸತ್ಯಸಂಪಾದನೆ ಮಾಡಿಕೊಳ್ಳಿ

ಪ್ರಶ್ನೆ:
ಯಾವ ಒಂದು ಮಾತಿನ ಕಾರಣ ನೀವು ಬ್ರಾಹ್ಮಣರು ದೇವತೆಗಳಿಗಿಂತಲೂ ಶ್ರೇಷ್ಠರೆಂದು ಗೌರವಿಸಲ್ಪಡುತ್ತೀರಿ?

ಉತ್ತರ:
ನಾವು ಬ್ರಾಹ್ಮಣರು ಈಗ ಸರ್ವರ ಆತ್ಮಿಕ ಸೇವೆಯನ್ನು ಮಾಡುತ್ತೇವೆ. ನಾವೆಲ್ಲರೂ ಆತ್ಮಗಳ ಮಿಲನವನ್ನು ಪರಮಾತ್ಮ ತಂದೆಯೊಂದಿಗೆ ಮಾಡಿಸುತ್ತೇವೆ. ಈ ಸಮಾಜಸೇವೆಯನ್ನು ದೇವತೆಗಳು ಮಾಡುವುದಿಲ್ಲ. ಸತ್ಯಯುಗದಲ್ಲಿ ರಾಜಾ-ರಾಣಿ ಹಾಗೂ ಪ್ರಜೆಗಳಿರುತ್ತಾರೆ, ಯಾರು ಇಲ್ಲಿ ಪುರುಷಾರ್ಥ ಮಾಡುತ್ತಾರೋ ಅವರು ಅಲ್ಲಿ ಅದರ ಪ್ರಾಲಬ್ಧವನ್ನು ಭೋಗಿಸುತ್ತಾರೆ, ಸೇವೆ ಮಾಡುವುದಿಲ್ಲ ಆದ್ದರಿಂದ ನೀವು ಸೇವಾಧಾರಿ ಬ್ರಾಹ್ಮಣರು ದೇವತೆಗಳಿಗಿಂತಲೂ ಶ್ರೇಷ್ಠರಾಗಿದ್ದೀರಿ.

ಓಂ ಶಾಂತಿ.
ಯಾರ ಸಭೆಯು ಸೇರಿದೆ? ಜೀವಾತ್ಮಗಳು ಹಾಗೂ ಪರಮಾತ್ಮನ ಸಭೆಯಾಗಿದೆ. ಯಾರಿಗೆ ಶರೀರವಿದೆ ಅವರನ್ನು ಜೀವಾತ್ಮ ಎಂದು ಹೇಳಲಾಗುತ್ತದೆ. ಜೀವಾತ್ಮರು ಮನುಷ್ಯರಾದರು ಮತ್ತು ತಂದೆಗೆ ಪರಮಾತ್ಮನೆಂದು ಹೇಳಲಾಗುತ್ತದೆ. ಜೀವಾತ್ಮರು ಮತ್ತು ಪರಮಾತ್ಮ ಬಹಳಕಾಲ ಅಗಲಿಹೋಗಿದ್ದರು...... ಇದನ್ನು ಮಂಗಳ ಮಿಲನವೆಂದು ಹೇಳಲಾಗುತ್ತದೆ. ಮಕ್ಕಳು ತಿಳಿದುಕೊಂಡಿದ್ದೀರಿ- ಪರಮಪಿತ ಪರಮಾತ್ಮನನ್ನು ಜೀವಾತ್ಮ ಎಂದು ಹೇಳಲಾಗುವುದಿಲ್ಲ ಏಕೆಂದರೆ ಅವರು ಲೋನ್ನ್ನು ತೆಗೆದುಕೊಳ್ಳುತ್ತಾರೆ ಅರ್ಥಾತ್ ಶರೀರದ ಆಧಾರವನ್ನು ತೆಗೆದುಕೊಳ್ಳುತ್ತಾರೆ. ಅವರು ಸ್ವಯಂ ಬಂದು ಹೇಳುತ್ತಾರೆ- ಮಕ್ಕಳೇ, ನಾನೂ ಸಹ ಈ ಪ್ರಕೃತಿಯ ಆಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ನಾನು ಗರ್ಭದಲ್ಲಂತೂ ಹೋಗುವುದಿಲ್ಲ, ಇವರಲ್ಲಿ (ಬ್ರಹ್ಮಾ) ಪ್ರವೇಶ ಮಾಡಿ ತಿಳಿಸುತ್ತೇನೆ. ನೀವು ಜೀವಾತ್ಮರಿಗಂತು ತಮ್ಮ-ತಮ್ಮ ಶರೀರವಿದೆ ಆದರೆ ನನಗೆ ನನ್ನದೇ ಆದ ಶರೀರವಿಲ್ಲ ಅಂದಾಗ ಇದು ಭಿನ್ನವಾದ ಸಭೆಯಾಯಿತಲ್ಲವೇ! ಆದರೆ ಇಲ್ಲಿ ಯಾವುದೇ ಗುರು ಹಾಗೂ ಶಿಷ್ಯರು ಕುಳಿತಿಲ್ಲ. ಇದು ಶಾಲೆಯಾಗಿದೆ. ಗುರುವಿನ ನಂತರ ಸಿಂಹಾಸನವು ಸಿಗುತ್ತದೆ ಎಂದಲ್ಲ. ಇಲ್ಲಿ ಸಿಂಹಾಸನದ ಮಾತಿಲ್ಲ. ನೀವು ಮಕ್ಕಳಿಗೆ ಯಾರು ಓದಿಸುತ್ತಿದ್ದಾರೆ ಎನ್ನುವ ನಿಶ್ಚಯವಿದೆ. ನಿಶ್ಚಯವಿಲ್ಲದೆ ಯಾರೂ ಬರಲು ಸಾಧ್ಯವಿಲ್ಲ. ಜೀವಾತ್ಮಗಳ ವರ್ಣವು ಬ್ರಾಹ್ಮಣ ವರ್ಣವಾಗಿದೆ ಏಕೆಂದರೆ ಬ್ರಹ್ಮಾರವರ ಮುಖಾಂತರ ಪರಮಪಿತ ಪರಮಾತ್ಮ ರಚನೆಯನ್ನು ರಚಿಸುತ್ತಾರೆ. ನಾವು ಬ್ರಾಹ್ಮಣರು ಎಲ್ಲರಿಗಿಂತ ಸರ್ವೋತ್ತಮ, ದೇವತೆಗಳಿಗಿಂತಲೂ ಉತ್ತಮರಾಗಿದ್ದೇವೆ ಎನ್ನುವುದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ದೇವತೆಗಳು ಯಾವುದೇ ಸಮಾಜ ಸೇವೆಯನ್ನು ಮಾಡುವುದಿಲ್ಲ. ಅಲ್ಲಿ ರಾಜಾ-ರಾಣಿ ಹೇಗೋ ಪ್ರಜೆಗಳೂ ಹಾಗೆಯೇ ಇರುತ್ತಾರೆ, ಅವರು ತಮ್ಮ ಪುರುಷಾರ್ಥವನ್ನು ಎಷ್ಟು ಮಾಡಿರುತ್ತಾರೋ ಅದರ ಅನುಸಾರವಾಗಿ ತಮ್ಮ ಪ್ರಾಲಬ್ಧವನ್ನು ಭೋಗಿಸುತ್ತಾರೆ. ಅವರು ಯಾವುದೇ ಸೇವೆಯನ್ನು ಮಾಡುವುದಿಲ್ಲ. ಬ್ರಾಹ್ಮಣರು ಸೇವೆ ಮಾಡುತ್ತಾರೆ. ನಾವು ಬೇಹದ್ದಿನ ತಂದೆಯಿಂದ ಸರಿಯಾಗಿ 5000 ವರ್ಷಗಳ ಹಿಂದಿನ ತರಹ ರಾಜಯೋಗವನ್ನು ಕಲಿಯುತ್ತಿದ್ದೇವೆ ಎನ್ನುವುದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ನೀವು ಮಕ್ಕಳಾಗಿದ್ದೀರಿ. ಇಲ್ಲಿ ಯಾವುದೇ ಧೂರ್ತ-ಶಿಷ್ಯರ ಮಾತಿಲ್ಲ. ತಂದೆಯು ಗಳಿಗೆ-ಗಳಿಗೆಯು ಮಕ್ಕಳೇ, ಮಕ್ಕಳೇ ಎಂದು ಹೇಳಿ ತಿಳಿಸುತ್ತಾರೆ. ನೀವೀಗ ಆತ್ಮಾಭಿಮಾನಿಗಳಾಗಿದ್ದೀರಿ. ಆತ್ಮವು ಅವಿನಾಶಿಯಾಗಿದೆ, ಶರೀರವು ವಿನಾಶಿಯಾಗಿದೆ. ಶರೀರಕ್ಕೆ ವಸ್ತ್ರವೆಂದು ಹೇಳಲಾಗುತ್ತದೆ. ಇದು ಕೊಳಕಾಗಿರುವ ವಸ್ತ್ರವಾಗಿದೆ ಏಕೆಂದರೆ ಆತ್ಮವು ಆಸುರಿಮತದ ಮೇಲೆ ವಿಕಾರಗಳಲ್ಲಿ ಹೋಗುತ್ತದೆ, ಪತಿತವಾಗುತ್ತದೆ. ಪಾವನ ಮತ್ತು ಪತಿತ ಅಕ್ಷರವು ವಿಕಾರದಿಂದಲೇ ಹರಡುತ್ತದೆ. ಈಗ ಪತಿತರಾಗಬೇಡಿ ಎಂದು ತಂದೆಯು ಹೇಳುತ್ತಾರೆ. ಈಗ ಎಲ್ಲರೂ ರಾವಣನ ಬಂಧನದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಏಕೆಂದರೆ ಇದು ರಾವಣನ ರಾಜ್ಯವಾಗಿದೆ ಆದ್ದರಿಂದ ತಂದೆಯು ನಿಮ್ಮನ್ನು ರಾವಣರಾಜ್ಯದಿಂದ ಬಿಡಿಸಿ ರಾಮರಾಜ್ಯದಲ್ಲಿ ಕರೆದುಕೊಂಡು ಹೋಗುತ್ತಾರೆ. ಪರಮಪಿತ ಪರಮಾತ್ಮನೇ ಮುಕ್ತಿದಾತ, ಅವರೇ ಹೇಳುತ್ತಾರೆ- ನಾನು ಎಲ್ಲರನ್ನು ದುಃಖದಿಂದ ಬಿಡಿಸಿ ಹಿಂತಿರುಗಿ ಶಾಂತಿಧಾಮಕ್ಕೆ ಕರೆದುಕೊಂಡು ಹೋಗುತ್ತೇನೆ. ಅಲ್ಲಿ ಹೋಗಿ ನಂತರ ಹೊಸದಾಗಿ ಬಂದು ಮಕ್ಕಳು ತಮ್ಮ-ತಮ್ಮ ಪಾತ್ರವನ್ನು ಪುನರಾವರ್ತನೆ ಮಾಡಬೇಕಾಗಿದೆ. ಮೊದಲು-ಮೊದಲು ದೇವತೆಗಳೇ ಪಾತ್ರವನ್ನು ಪುನರಾವರ್ತನೆ ಮಾಡಬೇಕಾಗಿದೆ. ಅವರೇ ಮೊದಲು ಇದ್ದರು. ಈಗ ಅಂದರೆ ಬ್ರಹ್ಮಾರವರ ಮುಖಾಂತರ ಆದಿಸನಾತನ ದೇವೀ-ದೇವತಾ ಧರ್ಮದ ಸ್ಥಾಪನೆಯಾಗುತ್ತದೆ. ಕಲಿಯುಗದ ವಿನಾಶವು ಸಮ್ಮುಖದಲ್ಲಿ ನಿಂತಿದೆ. ತುಂಬಾ ಅಂಧಕಾರದಲ್ಲಿ ಬಿದ್ದಿದ್ದಾರೆ. ಭಲೆ ಪದಮಪತಿ, ಕೋಟ್ಯಾಧಿಪತಿಗಳಾಗಿದ್ದಾರೆ, ರಾವಣನದು ತುಂಬಾ ಷೋ ಇದೆ, ಇದರಲ್ಲಿಯೇ ಆಕರ್ಷಿತರಾಗಿಬಿಟ್ಟಿದ್ದಾರೆ. ತಂದೆಯು ತಿಳಿಸುತ್ತಾರೆ- ಇದು ಸುಳ್ಳು ಸಂಪಾದನೆಯಾಗಿದೆ, ಇದೆಲ್ಲವೂ ಮಣ್ಣಿನಲ್ಲಿ ಸೇರಿಹೋಗುತ್ತದೆ. ಅವರಿಗೆ ಏನೂ ಲಾಭವಾಗುವುದಿಲ್ಲ. ನೀವು ಭವಿಷ್ಯ 21 ಜನ್ಮಗಳಿಗೋಸ್ಕರ ತಂದೆಯಿಂದ ಆಸ್ತಿಯನ್ನು ಪಡೆಯಲು ಬಂದಿದ್ದೀರಿ. ಇದು ಸತ್ಯಖಂಡಕ್ಕೋಸ್ಕರ ಸತ್ಯಸಂಪಾದನೆಯಾಗಿದೆ. ಎಲ್ಲರೂ ಹಿಂತಿರುಗಿ ಹೋಗಲೇಬೇಕಾಗಿದೆ. ಎಲ್ಲರದು ವಾನಪ್ರಸ್ಥ ಅವಸ್ಥೆಯಾಗಿದೆ. ತಂದೆಯು ಹೇಳುತ್ತಾರೆ- ನಾನು ಎಲ್ಲರ ಸದ್ಗತಿದಾತ ಸದ್ಗುರುವಾಗಿದ್ದೇನೆ. ಸಾಧುಗಳ, ಪತಿತರ ಎಲ್ಲರ ಉದ್ಧಾರವನ್ನು ನಾನು ಮಾಡುತ್ತೇನೆ. ಶಿವಬಾಬಾರವರನ್ನು ನೆನಪು ಮಾಡಿ ಎಂದು ಚಿಕ್ಕ ಮಕ್ಕಳಿಗೂ ಸಹ ಕಲಿಸಲಾಗುತ್ತದೆ. ಒಬ್ಬ ಶಿವತಂದೆಯ ವಿನಃ ಅನ್ಯರ್ಯಾರೂ ಇಲ್ಲ. ಬಾಕಿ ಮತ್ತೆಲ್ಲಾ ಚಿತ್ರ ಮುಂತಾದವುಗಳನ್ನು ತೆಗೆದುಹಾಕಿ.

ನಾವು ತಂದೆಯಿಂದ ಪುನಃ ಬೇಹದ್ದಿನ ಸುಖದ ಆಸ್ತಿಯನ್ನು ತೆಗೆದುಕೊಳ್ಳಲು ಬಂದಿದ್ದೇವೆ ಎನ್ನುವುದು ನೀವು ಮಕ್ಕಳಿಗೆ ಗೊತ್ತಿದೆ. ಹದ್ದಿನ ತಂದೆಯಿಂದ ಹದ್ದಿನ ಆಸ್ತಿಯನ್ನು ಜನ್ಮ-ಜನ್ಮಾಂತರವು ತೆಗೆದುಕೊಂಡಿದ್ದೀರಿ. ರಾವಣನ ಆಸುರಿಮತದ ಮೇಲೆ ಪತಿತರಾಗುತ್ತಾ ಬಂದಿದ್ದೀರಿ. ಮನುಷ್ಯರು ಈ ಮಾತುಗಳನ್ನು ಅರಿತುಕೊಂಡಿಲ್ಲ. ರಾವಣನನ್ನು ಸುಡುವುದರಿಂದ ರಾವಣನು ಸುಟ್ಟು ಸಮಾಪ್ತಿಯಾಗಬೇಕಲ್ಲವೇ! ಮನುಷ್ಯರನ್ನೂ ಸುಡುತ್ತಾರೆಂದರೆ ಅವರ ನಾಮ-ರೂಪವೆಲ್ಲವೂ ಸಮಾಪ್ತಿಯಾಗಿಬಿಡುತ್ತದೆ. ರಾವಣನ ನಾಮ-ರೂಪವಂತೂ ಮುಚ್ಚಿಹೋಗುವುದೇ ಇಲ್ಲ, ಮತ್ತೆ-ಮತ್ತೆ ಸುಡುತ್ತಾ ಇರುತ್ತಾರೆ. ತಂದೆ ಹೇಳುತ್ತಾರೆ- ಇದು ಪಂಚವಿಕಾರರೂಪಿ ರಾವಣನಾಗಿದ್ದಾನೆ. ಈ ರಾವಣನು ನಿಮ್ಮ 63 ಜನ್ಮಗಳ ಶತ್ರುವಾಗಿದ್ದಾನೆ. ಭಾರತದ ಶತ್ರು ಎಂದರೆ ನಮ್ಮ ಶತ್ರು ಆದರು. ಯಾವಾಗ ವಾಮಮಾರ್ಗದಲ್ಲಿ ಬಂದಿರಿ ಆಗಲೇ ರಾವಣನ ಬಂಧನದಲ್ಲಿ ಬಿದ್ದಿದ್ದೀರಿ. ಅವಶ್ಯವಾಗಿ ಅರ್ಧಕಲ್ಪದಿಂದ ರಾವಣನರಾಜ್ಯವಿದೆ. ರಾವಣ ಸುಡುವುದೂ ಇಲ್ಲ, ಸಾಯುವುದೇ ಇಲ್ಲ. ಈಗ ನೀವು ತಿಳಿದುಕೊಂಡಿದ್ದೀರಿ- ರಾವಣರಾಜ್ಯದಲ್ಲಿ ನಾವು ತುಂಬಾ ದುಃಖಿಗಳಾಗಿದ್ದೇವೆ. ಇದು ಸುಖ ಮತ್ತು ದುಃಖದ ಆಟವಾಗಿದೆ ಆದ್ದರಿಂದಲೇ ಗಾಯನ ಮಾಡಲಾಗುತ್ತದೆ, ಮಾಯೆಯೊಂದಿಗೆ ಸೋಲುವುದೇ ಸೋಲು, ಮಾಯೆಯೊಂದಿಗೆ ಗೆಲ್ಲುವುದೇ ಗೆಲುವು..... ಈಗ ಮಾಯೆಯನ್ನು ಗೆದ್ದು ನಾವು ಪುನಃ ರಾಮರಾಜ್ಯವನ್ನು ತೆಗೆದುಕೊಳ್ಳುತ್ತೇವೆ. ರಾಮ-ಸೀತೆಯರ ರಾಜ್ಯವು ತ್ರೇತಾದಲ್ಲಿರುತ್ತದೆ. ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿರುತ್ತದೆ. ಅಲ್ಲಿ ಇರುವುದೇ ಆದಿಸನಾತನ ದೇವೀ-ದೇವತಾಧರ್ಮ, ಅದನ್ನು ಈಶ್ವರೀಯ ರಾಜ್ಯ ಎಂದು ಹೇಳುತ್ತಾರೆ ಏಕೆಂದರೆ ಅದನ್ನು ತಂದೆಯು ಸ್ಥಾಪನೆ ಮಾಡಿದ್ದಾರೆ. ತಂದೆಯನ್ನು ಎಂದೂ ಸರ್ವವ್ಯಾಪಿ ಎಂದು ಹೇಳಲು ಸಾಧ್ಯವಿಲ್ಲ. ಇಲ್ಲಿ ಭ್ರಾತೃತ್ವವಿದೆ. ತಂದೆಯು ಒಬ್ಬರೇ ಆಗಿದ್ದಾರೆ. ನೀವೆಲ್ಲರೂ ಪರಸ್ಪರ ಸಹೋದರ-ಸಹೋದರರಾಗಿದ್ದೀರಿ. ತಂದೆಯೇ ಕುಳಿತು ಆತ್ಮಗಳಿಗೆ ಓದಿಸುತ್ತಾರೆ. ತಂದೆಯ ಆಜ್ಞೆಯಾಗಿದೆ- ಮಕ್ಕಳೇ, ನನ್ನನ್ನು ನೆನಪು ಮಾಡಿ. ನಾನು ಭಕ್ತಿಯ ಫಲವನ್ನು ಕೊಡಲು ಬಂದಿದ್ದೇನೆ. ಯಾರಿಗೆ? ಯಾರು ಪ್ರಾರಂಭದಿಂದ ಹಿಡಿದು ಅಂತ್ಯದತನಕ ಭಕ್ತಿಯನ್ನು ಮಾಡಿದ್ದಾರೆಯೋ ಅವರಿಗೆ ಮೊಟ್ಟಮೊದಲು ನೀವು ಒಬ್ಬ ಶಿವತಂದೆಯ ಭಕ್ತಿಯನ್ನು ಮಾಡುತ್ತಿದ್ದಿರಿ. ಸೋಮನಾಥನ ಮಂದಿರವು ಎಷ್ಟೊಂದು ಜಬರ್ದಸ್ತ್ ಆಗಿದೆ. ವಿಚಾರ ಮಾಡಬೇಕು, ನಾವು ಎಷ್ಟು ಸಾಹುಕಾರರಾಗಿದ್ದೆವು. ಈಗ ಬಡವರು, ಕವಡೆಯ ಸಮಾನ ಆಗಿಬಿಟ್ಟಿದ್ದೇವೆ. ತಂದೆಯು ಹೇಳುತ್ತಾರೆ ಈಗ ನಿಮಗೆ 84 ಜನ್ಮಗಳ ಸ್ಮೃತಿ ಬಂದಿದೆ. ಈಗ ನೀವು ಹೇಗಿದ್ದವರು ಹೇಗಾಗುತ್ತಿದ್ದೇವೆ ಎನ್ನುವುದನ್ನು ತಿಳಿದುಕೊಂಡಿದ್ದೀರಿ.

ಈಗ ನಿಮಗೆ ಸ್ಮೃತಿಯು ಬಂದಿದೆ. ಸ್ಮೃತಿರ್ಲಬ್ದ ಅಕ್ಷರವು ಈಗಿನದ್ದಾಗಿದೆ. ಇದರ ಅರ್ಥವು ಭಗವಂತನು ಬಂದು ಸಂಸ್ಕೃತದಲ್ಲಿ ಗೀತೆಯನ್ನು ತಿಳಿಸಿದ್ದಾರೆಂದು ತಿಳಿಯಬಾರದಾಗಿದೆ. ಸಂಸ್ಕೃತವಾಗಿದ್ದರೆ ನೀವು ಮಕ್ಕಳು ಏನೂ ತಿಳಿದುಕೊಳ್ಳುವುದಿಲ್ಲ. ಹಿಂದಿಭಾಷೆ ಮುಖ್ಯವಾಗಿದೆ. ಇದು ಈ ಬ್ರಾಹ್ಮಣರ ಭಾಷೆಯಾಗಿದೆ, ಈ ಭಾಷೆಯಲ್ಲಿಯೇ ತಿಳಿಸುತ್ತಿದ್ದಾರೆ. ಕಲ್ಪ-ಕಲ್ಪವೂ ಸಹ ಇದೇ ಭಾಷೆಯಲ್ಲಿ ತಿಳಿಸುತ್ತಾರೆ. ನೀವು ತಿಳಿದುಕೊಂಡಿದ್ದೀರಿ- ನಾವೀಗ ಬಾಪ್ದಾದಾರವರ ಸಮ್ಮುಖದಲ್ಲಿ ಕುಳಿತಿದ್ದೇವೆ. ಇದು ಮನೆಯಾಗಿದೆ - ಮಮ್ಮಾ ಬಾಬಾ, ಸಹೋದರ ಮತ್ತು ಸಹೋದರಿ. ಮತ್ತಾವುದೇ ಸಂಬಂಧವಿಲ್ಲ. ಯಾವಾಗ ಪ್ರಜಾಪಿತ ಬ್ರಹ್ಮನ ಮಕ್ಕಳಾಗುತ್ತೀರಿ ಆಗಲೇ ಸಹೋದರ-ಸಹೋದರಿಯ ಸಂಬಂಧವಾಗುತ್ತದೆ. ಇಲ್ಲವೆಂದರೆ ಆತ್ಮನ ಸಂಬಂಧದಲ್ಲಿ ಸಹೋದರ-ಸಹೋದರರಾಗಿದ್ದೀರಿ. ತಂದೆಯಿಂದ ಆಸ್ತಿಯು ಸಿಗುತ್ತಿದೆ. ನಮ್ಮ ತಂದೆಯು ಬಂದುಬಿಟ್ಟಿದ್ದಾರೆ ಎನ್ನುವುದನ್ನು ಆತ್ಮವು ತಿಳಿದುಕೊಂಡಿದೆ. ನೀವು ಬ್ರಹ್ಮಾಂಡದ ಮಾಲೀಕರಾಗಿದ್ದಿರಿ. ತಂದೆಯೂ ಸಹ ಬ್ರಹ್ಮಾಂಡದ ಮಾಲೀಕನಾಗಿದ್ದಾರಲ್ಲವೇ! ಹೇಗೆ ಆತ್ಮ ನಿರಾಕಾರವಾಗಿದೆ, ಹಾಗೆಯೇ ಪರಮಾತ್ಮನೂ ನಿರಾಕಾರನಾಗಿದ್ದಾರೆ. ಹೆಸರೇ ಆಗಿದೆ- ಪರಮಪಿತ ಪರಮಾತ್ಮ ಅರ್ಥಾತ್ ಅತಿದೂರ ಇರುವಂತಹ ಆತ್ಮ. ಪರಮ ಆತ್ಮನ ಅರ್ಥವಾಗಿದೆ ಪರಮಾತ್ಮ. ತಂದೆಯಿಂದ ಆಸ್ತಿಯು ಸಿಗುತ್ತದೆ. ಇಲ್ಲಿ ಯಾವುದೇ ಸಾಧು-ಸಂತ ಮಹಾತ್ಮರಿಲ್ಲ, ಮಕ್ಕಳಿದ್ದಾರೆ, ತಂದೆಯಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ ಮತ್ತ್ಯಾರೂ ಆಸ್ತಿಯನ್ನು ಕೊಡುವುದಿಲ್ಲ. ತಂದೆಯು ಸತ್ಯಯುಗದ ಸ್ಥಾಪನೆ ಮಾಡುವವರಾಗಿದ್ದಾರೆ. ತಂದೆಯು ಸದಾ ಸುಖವನ್ನೇ ಕೊಡುತ್ತಾರೆ. ತಂದೆಯು ಸುಖ-ದುಃಖ ಎರಡನ್ನು ಕೊಡುತ್ತಾರೆಂದಲ್ಲ. ಇದು ನಿಯಮವೇ ಇಲ್ಲ. ತಂದೆಯು ಸ್ವಯಂ ತಿಳಿಸುತ್ತಾರೆ, ನಾನು ನೀವು ಮಕ್ಕಳಿಗೆ ಪುರುಷಾರ್ಥ ಮಾಡಿಸುತ್ತೇನೆ ಎಂದಾಗ 21 ಜನ್ಮಗಳಿಗೋಸ್ಕರ ದೇವತೆಗಳಾಗಿ. ತಂದೆಯು ಸುಖದಾತಾ ಆದರಲ್ಲವೇ, ದುಃಖಹರ್ತ-ಸುಖಕರ್ತ. ಈಗ ನೀವು ತಿಳಿದುಕೊಂಡಿದ್ದೀರಿ- ದುಃಖವನ್ನು ಯಾರು ಕೊಡುತ್ತಾರೆ? ರಾವಣ. ಇದಕ್ಕೆ ವಿಕಾರೀ ಪ್ರಪಂಚವೆಂದು ಹೇಳಲಾಗುತ್ತದೆ. ಸ್ತ್ರೀ-ಪುರುಷ ಇಬ್ಬರೂ ವಿಕಾರಿಗಳಾಗಿದ್ದಾರೆ. ಸತ್ಯಯುಗದಲ್ಲಿ ಇಬ್ಬರೂ ನಿರ್ವಿಕಾರಿಗಳಾಗಿದ್ದರು. ಲಕ್ಷ್ಮೀ-ನಾರಾಯಣರ ರಾಜ್ಯವಿತ್ತಲ್ಲವೇ. ಅಲ್ಲಿ ಕಾನೂನಿನಿಂದ ರಾಜ್ಯವು ನಡೆಯುತ್ತದೆ. ಪ್ರಕೃತಿಯು ನಿಮ್ಮ ಆಜ್ಞೆಯಂತೆ ನಡೆಯುತ್ತದೆ. ಅಲ್ಲಿ ಯಾವುದೇ ಉಪದ್ರವಗಳಾಗುವುದಿಲ್ಲ. ನೀವು ಮಕ್ಕಳು ಸ್ಥಾಪನೆಯ ಸಾಕ್ಷಾತ್ಕಾರವನ್ನು ನೋಡಿದ್ದೀರಿ. ವಿನಾಶವಂತು ಅವಶ್ಯವಾಗಿ ಆಗುವುದಿದೆ, ಹೋಲಿಕದಲ್ಲಿ ಹಾಡನ್ನು ಮಾಡುತ್ತಾರಲ್ಲವೇ. ಕೇಳುತ್ತಾರೆ- ಇವರ ಹೊಟ್ಟೆಯಿಂದ ಏನು ಹೊರಬರಬಹುದು? ಅದಕ್ಕೆ ಒನಕೆ ಎಂದು ಹೇಳಿದರು. ಸತ್ಯಮಾತನ್ನು ನೀವು ಅರಿತುಕೊಂಡಿದ್ದೀರಿ. ವಿಜ್ಞಾನವು ಎಷ್ಟು ತೀಕ್ಷ್ಣವಾಗಿದೆ. ಬುದ್ಧಿಯ ಕೆಲಸವಾಗಿದೆಯಲ್ಲವೇ? ವಿಜ್ಞಾನದ ಎಷ್ಟೊಂದು ಪ್ರಭಾವವಿದೆ. ವಿಮಾನ ಮುಂತಾದ ವಸ್ತುಗಳನ್ನು ಸುಖಕೋಸ್ಕರ ತಯಾರಿಸುತ್ತಾರೆ ನಂತರ ಇದೇ ವಸ್ತುಗಳಿಂದ ವಿನಾಶವನ್ನು ಮಾಡುತ್ತಾರೆ. ಅಂತ್ಯದಲ್ಲಿ ತಮ್ಮ ಕುಲದ ವಿನಾಶವನ್ನು ತಾವೇ ಮಾಡಿಕೊಳ್ಳುತ್ತಾರೆ. ನೀವು ಗುಪ್ತವಾಗಿದ್ದೀರಿ, ನೀವು ಯಾರೊಂದಿಗೂ ಯುದ್ಧ ಮಾಡುವವರಲ್ಲ, ಯಾರಿಗೂ ದುಃಖವನ್ನು ಕೊಡುವುದಿಲ್ಲ. ತಂದೆಯು ಹೇಳುತ್ತಾರೆ- ಮನಸ್ಸಾ-ವಾಚಾ-ಕರ್ಮಣಾ ಯಾರಿಗೂ ದುಃಖವನ್ನು ಕೊಡಬಾರದಾಗಿದೆ. ತಂದೆಯು ಎಂದಾದರೂ ಯಾರಿಗಾದರೂ ದುಃಖವನ್ನು ಕೊಡುತ್ತಾರೆಯೇ? ಸುಖಧಾಮದ ಮಾಲೀಕರನ್ನಾಗಿ ಮಾಡುತ್ತಾರೆ. ನೀವೂ ಸಹ ಎಲ್ಲರಿಗೂ ಸುಖ ಕೊಡಿ. ತಂದೆಯು ತಿಳಿಸಿದ್ದಾರೆ- ಯಾರು ಏನೇ ಹೇಳಲಿ, ಶಾಂತಿಯಿಂದ ಹರ್ಷಿತವಾಗಿರಬೇಕು. ಯೋಗದಲ್ಲಿದ್ದು ಮುಗುಳ್ನಗುತ್ತಾ ಇರಬೇಕು. ನಿಮ್ಮ ಯೋಗಬಲದಿಂದ ಅವರೂ ಸಹ ಶಾಂತವಾಗಿಬಿಡುತ್ತಾರೆ. ವಿಶೇಷವಾಗಿ ಟೀಚರ್ನ ನಡವಳಿಕೆಯು ತುಂಬಾ ಚೆನ್ನಾಗಿರಬೇಕು. ಯಾರೊಂದಿಗೂ ತಿರಸ್ಕಾರದ ಭಾವನೆಯಿರಬಾರದು. ತಂದೆಯು ಹೇಳುತ್ತಾರೆ, ನನಗೆ ಯಾರೊಂದಿಗಾದರೂ ತಿರಸ್ಕಾರದ ಭಾವನೆಯಿದೆಯೇ! ಎಲ್ಲರೂ ಪತಿತರಾಗಿದ್ದಾರೆ, ಈ ನಾಟಕವು ಮಾಡಲ್ಪಟ್ಟಿದೆ ಎನ್ನುವುದನ್ನು ತಿಳಿದುಕೊಂಡಿದ್ದೇನೆ. ಇವರ ಚಲನೆಯೇ ಈ ರೀತಿಯಿದೆ ಎನ್ನುವುದನ್ನೂ ಸಹ ತಿಳಿಯುತ್ತೇನೆ. ಆಹಾರಪದಾರ್ಥಗಳು ಎಷ್ಟೊಂದು ಪತಿತವಾಗಿದೆ, ಯಾರು ಬಂದರೇ ಅವರು ತಿನ್ನುತ್ತಾ ಇರುತ್ತಾರೆ. ಈ ಜೀವನವು ಎಲ್ಲರಿಗೂ ಪ್ರಿಯವೆನಿಸಿಬಿಟ್ಟಿದೆ. ಜೀವನವು ನಮಗೂ ಸಹ ಪ್ರಿಯವೆನಿಸುತ್ತದೆ ಆದರೆ ನಾವು ತಿಳಿದುಕೊಂಡಿದ್ದೇವೆ, ಈ ಜೀವನದಿಂದಲೇ ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆ. ಯೋಗದಲ್ಲಿ ಇರುವುದರಿಂದ ನಿಮ್ಮ ಆಯಸ್ಸು ವೃದ್ಧಿಯಾಗುವುದು, ವಿಕರ್ಮಗಳು ಕಡಿಮೆಯಾಗುತ್ತವೆ. ಭವಿಷ್ಯ 21 ಜನ್ಮಗಳಿಗೋಸ್ಕರ ಆಯಸ್ಸು ಹೆಚ್ಚಾಗುವುದು. ಪುರುಷಾರ್ಥವು ಈಗಿನದಾಗಿದೆ, ಇದರಿಂದಲೇ ನಂತರ ಪ್ರಾಲಬ್ಧವಾಗುತ್ತದೆ. ಯೋಗಬಲದಿಂದ ನಾವು ಆರೋಗ್ಯವಂತರಾಗುತ್ತೇವೆ, ಜ್ಞಾನದಿಂದ ಭಾಗ್ಯವಂತರಾಗುತ್ತೇವೆ. ಆರೋಗ್ಯಭಾಗ್ಯವಿದ್ದಾಗ ಸುಖವಿರುತ್ತದೆ. ಕೇವಲ ಭಾಗ್ಯವಿದ್ದು ಆರೋಗವಿಲ್ಲವೆಂದರೂ ಸಹ ಸುಖವಾಗಿರಲು ಸಾಧ್ಯವಿಲ್ಲ. ಈ ರೀತಿ ಅನೇಕರು ರಾಜರುಗಳಿರುತ್ತಾರೆ- ದೊಡ್ಡ ಸಾಹುಕಾರರಾಗಿರುತ್ತಾರೆ ಆದರೆ ಕುಂಟರಾಗಿರುತ್ತಾರೆ. ಇವರಿಗೆ ಹೇಳಲಾಗುತ್ತದೆ, ಇವರು ಇಂತಹ ವಿಕರ್ಮವನ್ನು ಮಾಡಿದ್ದಾರೆ ಅದರ ಫಲವು ಸಿಕ್ಕಿದೆ. ತಂದೆಯು ನಿಮಗೆ ಬಹಳ ವಿಚಾರಗಳನ್ನು ತಿಳಿಸುತ್ತಾರೆ ಆದರೆ ಹೊರಗಡೆ ಹೋಗುತ್ತಿದ್ದಂತೆ ಇಲ್ಲಿಯದು ಇಲ್ಲಿಯೇ ಉಳಿದುಬಿಡುತ್ತದೆ. ಈ ರೀತಿ ಆಗಬಾರದು. ಧಾರಣೆ ಮಾಡಬೇಕಾಗಿದೆ, ಮತ್ತ್ಯಾವುದೂ ನೆನಪಿಗೆ ಬರದಿರಲಿ. ಒಳ್ಳೆಯದು- ಶಿವಬಾಬಾರವರನ್ನು ನೆನಪು ಮಾಡಿ. ಆಂತರ್ಯದಲ್ಲಿ ತುಂಬಾ ಗುಪ್ತ ಮಹಿಮೆ ಮಾಡಬೇಕಾಗಿದೆ. ಬಾಬಾ ತಾವು ಬಂದು ಓದಿಸುತ್ತೀರಿ ಎನ್ನುವುದು ನಮ್ಮ ಮನಸ್ಸಿನಲ್ಲಿಯೂ ಇರಲಿಲ್ಲ! ನಿರಾಕಾರ ಪರಮಪಿತ ಪರಮಾತ್ಮನೇ ಬಂದು ಓದಿಸುತ್ತಾರೆ ಎನ್ನುವ ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿಲ್ಲ ಆದರೆ ಬಾಬಾ ನಾವು ಈಗ ತಿಳಿದುಕೊಂಡೆವು. ತಂದೆಯ ಬದಲಾಗಿ ಕೃಷ್ಣನ ಹೆಸರನ್ನು ಹಾಕಿರುವುದರಿಂದ ಗೀತೆಯು ಖಂಡನೆಯಾಗಿಬಿಟ್ಟಿದೆ. ಕೃಷ್ಣನ ಚರಿತ್ರೆಯಿರಲು ಸಾಧ್ಯವಿಲ್ಲ. ಗೀತೆಯು ಈ ಸಂಗಮಯುಗದ ಶಾಸ್ತ್ರವಾಗಿದೆ. ಅದನ್ನು ಅವರು ದ್ವಾಪರದಲ್ಲಿ ತೋರಿಸಿಬಿಟ್ಟಿದ್ದಾರೆ ಆದ್ದರಿಂದ ತಂದೆಯು ಹೇಳುತ್ತಾರೆ- ಮಕ್ಕಳೇ, ಮತ್ತೆಲ್ಲಾ ಮಾತುಗಳನ್ನು ಬಿಟ್ಟು ಗಮನವನ್ನಿಡಬೇಕಾಗಿದೆ. ತಂದೆಯ ನೆನಪಿಲ್ಲದೇ ಇದ್ದರೆ ವಿದ್ಯೆಯಲ್ಲಿ ಮಸ್ತರಾಗದೆ ಇದ್ದರೆ ಸಮಯವು ವ್ಯರ್ಥವಾಗಿ ಹೋಗುವುದು. ನಿಮ್ಮ ಸಮಯವು ತುಂಬಾ ಅಮೂಲ್ಯವಾಗಿದೆ ಆದ್ದರಿಂದ ವ್ಯರ್ಥ ಮಾಡಬಾರದು. ಶರೀರ ನಿರ್ವಹಣಾರ್ಥವಾಗಿ ಭಲೆ ಕರ್ಮ ಮಾಡಿ ಆದರೆ ವ್ಯರ್ಥವಿಚಾರಗಳಲ್ಲಿ ಸಮಯವನ್ನು ಕಳೆಯಬಾರದು. ನಿಮ್ಮ ಒಂದೊಂದು ಸೆಕೆಂಡ್ ಸಹ ವಜ್ರಸಮಾನ ಅಮೂಲ್ಯವಾಗಿದೆ. ತಂದೆಯು ಹೇಳುತ್ತಾರೆ- ಮನ್ಮನಾಭವ. ಸಾಕು ಅದೇ ಸಮಯವು ಲಾಭವುಳ್ಳದ್ದಾಗಿದೆ, ಉಳಿದ ಸಮಯವು ವ್ಯರ್ಥವಾಗಿ ಹೋಗುತ್ತದೆ. ಎಷ್ಟು ಸಮಯ ವ್ಯರ್ಥವಾಗಿ ಕಳೆಯುತ್ತೇವೆಂದು ಚಾರ್ಟ್ ಇಡಿ. ಅಕ್ಷರವು ಒಂದೇ ಆಗಿದೆ ಮನ್ಮನಾಭವ. ಅರ್ಧಕಲ್ಪ ಜೀವನ್ಮುಕ್ತಿಯಿತ್ತು ನಂತರ ಅರ್ಧಕಲ್ಪ ಜೀವನ ಬಂಧನದಲ್ಲಿ ಬಂದೆವು. ಸತೋಪ್ರಧಾನ, ಸತೋ, ರಜೋ, ತಮೋನಲ್ಲಿ ಬಂದು ನಂತರ ನಾವು ಜೀವನ್ಮುಕ್ತರಾಗುತ್ತಿದ್ದೇವೆ. ಜೀವನ್ಮುಕ್ತರನ್ನಾಗಿ ಮಾಡುವವರು ತಂದೆಯೇ ಆಗಿದ್ದಾರೆ. ಎಲ್ಲರಿಗೂ ಜೀವನ್ಮುಕ್ತಿಯು ಸಿಗುತ್ತದೆ. ತಮ್ಮ-ತಮ್ಮ ಧರ್ಮದನುಸಾರ ಮೊಟ್ಟಮೊದಲು ಸುಖವನ್ನು ನೋಡುತ್ತಾರೆ ನಂತರ ದುಃಖವು ಪ್ರಾರಂಭವಾಗುತ್ತದೆ. ಹೊಸಆತ್ಮಗಳು ಯಾರು ಇರುತ್ತಾರೆ, ಅವರು ಮೊದಲು ಬರುತ್ತಾರೆ, ಅವರು ಸುಖವನ್ನು ಅನುಭವಿಸುತ್ತಾರೆ. ಕೆಲವರ ಮಹಿಮೆಯಾಗುತ್ತದೆ ಏಕೆಂದರೆ ಹೊಸ ಆತ್ಮನಾಗಿರುವ ಕಾರಣ ಶಕ್ತಿಯಿರುತ್ತದೆ. ನಿಮ್ಮ ಒಳಗೆ ಖುಷಿಯ ಸಂಗೀತವು ಮೊಳಗಬೇಕು. ನಾವು ಬಾಪ್ದಾದಾರವರ ಸಮ್ಮುಖದಲ್ಲಿ ಕುಳಿತಿದ್ದೇವೆ. ಈಗ ಹೊಸರಚನೆ ಆಗುತ್ತಿದೆ. ನಿಮ್ಮ ಈ ಸಮಯದ ಮಹಿಮೆಯು ಸತ್ಯಯುಗದಿಂದಲೂ ಸಹ ತುಂಬಾ ದೊಡ್ಡದಿದೆ. ಜಗದಂಬಾ, ದೇವಿಯರು ಎಲ್ಲರೂ ಸಂಗಮದಲ್ಲಿದ್ದರು. ಬ್ರಾಹ್ಮಣರಿದ್ದರು. ನೀವು ತಿಳಿದುಕೊಂಡಿದ್ದೀರಿ- ನಾವು ಈಗ ಬ್ರಾಹ್ಮಣರಾಗಿದ್ದೇವೆ ನಂತರ ನಾವೇ ದೇವತಾ ಪೂಜ್ಯನೀಯ ಯೋಗ್ಯರಾಗುತ್ತೇವೆ ನಂತರ ನಿಮ್ಮ ನೆನಪಾರ್ಥವಾಗಿ ಮಂದಿರಗಳಾಗಿಬಿಡುತ್ತವೆ. ನೀವು ಚೈತನ್ಯ ದೇವಿಯರಾಗುತ್ತೀರಿ. ಅವರಂತು ಜಡ ಆಗಿದ್ದಾರೆ. ಅವರೊಂದಿಗೆ ಕೇಳಿ- ಈ ದೇವಿಯರು ಹೇಗಾದರು? ಒಂದುವೇಳೆ ಯಾರೇ ಮಾತನಾಡುತ್ತಾರೆಂದರೆ ತಿಳಿಸಿ ನಾವೇ ಬ್ರಾಹ್ಮಣರಾಗಿದ್ದೆವು ನಂತರ ನಾವೇ ದೇವತೆಗಳಾಗುತ್ತೇವೆ. ನೀವೀಗ ಚೈತನ್ಯದಲ್ಲಿ ಇದ್ದೀರಿ, ನೀವು ತಿಳಿಸಬಲ್ಲಿರಿ ಈ ಜ್ಞಾನವು ಎಷ್ಟೊಂದು ಫಸ್ಟ್ಕ್ಲಾಸ್ ಆಗಿದೆ. ಅವಶ್ಯವಾಗಿ ನೀವು ಸ್ಥಾಪನೆ ಮಾಡುತ್ತಿದ್ದೀರಿ. ಮಕ್ಕಳು ಹೇಳುತ್ತಾರೆ- ಬಾಬಾ ನಾವು ಲಕ್ಷ್ಮೀ-ನಾರಾಯಣರಗಿಂತ ಕಡಿಮೆ ಪದವಿಯನ್ನು ತೆಗೆದುಕೊಳ್ಳುವುದಿಲ್ಲ. ನಾವಂತೂ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಈ ಶಾಲೆಯೇ ಈ ರೀತಿ ಇದೆ. ಎಲ್ಲರೂ ಸಹ ಪ್ರಾಚೀನ ರಾಜಯೋಗವನ್ನು ಕಲಿಯಲು ಬಂದಿದ್ದೇವೆಂದು ಹೇಳುತ್ತಾರೆ. ಯೋಗದಿಂದ ದೇವೀ-ದೇವತೆಗಳಾಗುತ್ತೀರಿ. ಈಗಂತು ಶೂದ್ರರಿಂದ ಬ್ರಾಹ್ಮಣರಾಗಿದ್ದೀರಿ ನಂತರ ಬ್ರಾಹ್ಮಣರಿಂದ ದೇವತೆಗಳಾಗುತ್ತೀರಿ. ಮೂಲಮಾತು ನೆನಪಿನದಾಗಿದೆ. ನೆನಪಿನಲ್ಲಿಯೇ ಮಾಯೆಯು ವಿಘ್ನಗಳನ್ನು ಹಾಕುತ್ತದೆ. ನೀವು ತುಂಬಾ ಪ್ರಯತ್ನ ಮಾಡುತ್ತೀರಿ, ಆದರೂ ಸಹ ಬುದ್ಧಿಯೂ ಒಂದಲ್ಲ ಒಂದುಕಡೆ ಹೊರಟುಹೋಗುತ್ತದೆ. ಇದರಲ್ಲಿಯೇ ಎಲ್ಲಾ ಪರಿಶ್ರಮವಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆಯ ಸಮಾನ ಸುಖದಾತರಾಗಬೇಕಾಗಿದೆ. ಮನಸ್ಸಾ-ವಾಚಾ-ಕರ್ಮಣಾ ಯಾರಿಗೂ ದುಃಖವನ್ನು ಕೊಡಬಾರದಾಗಿದೆ. ಸದಾ ಶಾಂತಚಿತ್ತ ಮತ್ತು ಹರ್ಷಿತಮುಖಿಯಾಗಿರಬೇಕಾಗಿದೆ.

2. ವ್ಯರ್ಥವಿಚಾರಗಳಲ್ಲಿ ಸಮಯವನ್ನು ವ್ಯರ್ಥವಾಗಿ ಕಳೆಯಬಾರದಾಗಿದೆ. ಒಳಗಿನಿಂದ ತಂದೆಯ ಮಹಿಮೆ ಮಾಡಬೇಕಾಗಿದೆ.

ವರದಾನ:
ಶ್ರೇಷ್ಠ ಮತದನುಸಾರ ಪ್ರತಿಯೊಂದು ಕರ್ಮವನ್ನು ಕರ್ಮಯೋಗಿಯಾಗಿ ಮಾಡುವಂತಹ ಕರ್ಮಬಂಧನ ಮುಕ್ತ ಭವ

ಯಾವ ಮಕ್ಕಳು ಪ್ರತಿಯೊಂದು ಕರ್ಮವನ್ನು ಶ್ರೇಷ್ಠ ಮತದನುಸಾರ ಮಾಡುತ್ತಾ, ಬೇಹದ್ದಿನ ಆತ್ಮಿಕ ನಶೆಯಲ್ಲಿರುತ್ತಾರೆಯೋ ಅವರು ಕರ್ಮವನ್ನು ಮಾಡುತ್ತಾ ಕರ್ಮಬಂಧನದಲ್ಲಿ ಬರುವುದಿಲ್ಲ, ಭಿನ್ನ ಹಾಗೂ ಪ್ರಿಯರಾಗಿರುತ್ತಾರೆ. ಕರ್ಮಯೋಗಿಯಾಗಿದ್ದು ಕರ್ಮವನ್ನು ಮಾಡುವುದರಿಂದ ಅವರಬಳಿ ದುಃಖದ ಪ್ರಕಂಪನಗಳು ಬರಲು ಸಾಧ್ಯವಿಲ್ಲ. ಅವರು ಸದಾ ಭಿನ್ನ ಹಾಗೂ ಪ್ರಿಯರಾಗಿರುತ್ತಾರೆ. ಅವರನ್ನು ಯಾವುದೇ ಕರ್ಮದ ಬಂಧನವು ತನ್ನಕಡೆ ಸೆಳೆಯಲು ಸಾಧ್ಯವಿಲ್ಲ. ಸದಾ ಮಾಲೀಕರಾಗಿದ್ದು ಕರ್ಮವನ್ನು ಮಾಡಿಸುತ್ತಾರೆ ಆದ್ದರಿಂದ ಬಂಧನಮುಕ್ತ ಸ್ಥಿತಿಯ ಅನುಭವವಾಗುವುದು. ಇಂತಹ ಆತ್ಮವು ಸದಾ ಸ್ವಯಂ ಸಹ ಖುಷಿಯಾಗಿರುತ್ತಾರೆ ಹಾಗೂ ಅನ್ಯರಿಗೂ ಖುಷಿ ಕೊಡುತ್ತಾರೆ.

ಸ್ಲೋಗನ್:
ಅನುಭವಗಳ ಅಧಿಕಾರಿ ಆಗುತ್ತೀರೆಂದರೆ ಎಂದಿಗೂ ಸಹ ಮೋಸವನ್ನನುಭವಿಸುವುದಿಲ್ಲ.