23.07.20         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಈ ನಿಮ್ಮ ಜೀವನವು ಬಹಳ-ಬಹಳ ಅಮೂಲ್ಯವಾಗಿದೆ, ಏಕೆಂದರೆ ನೀವು ಶ್ರೀಮತದನುಸಾರ ವಿಶ್ವದ ಸೇವೆ ಮಾಡುತ್ತೀರಿ, ಈ ನರಕವನ್ನು ಸ್ವರ್ಗವನ್ನಾಗಿ ಮಾಡಿ ಬಿಡುತ್ತೀರಿ.

ಪ್ರಶ್ನೆ:
ಖುಷಿಯು ಮಾಯವಾಗಲು ಕಾರಣ ಹಾಗೂ ಅದರ ನಿವಾರಣೆಯೇನು?

ಉತ್ತರ:
1. ದೇಹಾಭಿಮಾನದಲ್ಲಿ ಬರುವ ಕಾರಣ. 2. ಮನಸ್ಸಿನಲ್ಲಿ ಯಾರ ಪ್ರತಿಯಾದರೂ ಸಂಶಯವು ಉತ್ಪನ್ನವಾಗುತ್ತದೆಯೆಂದರೂ ಸಹ ಖುಷಿಯು ಮಾಯವಾಗಿ ಬಿಡುತ್ತದೆ. ಆದ್ದರಿಂದ ತಂದೆಯು ಸಲಹೆ ನೀಡುತ್ತಾರೆ, ಯಾವಾಗಲಾದರೂ ಯಾರದೇ ಪ್ರತಿ ಸಂಶಯ ಉತ್ಪನ್ನವಾದರೆ ತಕ್ಷಣ ತಂದೆಯೊಂದಿಗೆ ಕೇಳಿ - ದೇಹೀ-ಅಭಿಮಾನಿಯಾಗಿರುವ ಅಭ್ಯಾಸ ಮಾಡಿ ಆಗ ಸದಾ ಖುಷಿಯಾಗಿರುತ್ತೀರಿ.

ಓಂ ಶಾಂತಿ.
ಶ್ರೇಷ್ಠಾತಿ ಶ್ರೇಷ್ಠ ಭಗವಂತ ಮತ್ತು ಭಗವಾನುವಾಚ, ಮಕ್ಕಳ ಸನ್ಮುಖದಲ್ಲಿ - ನಾನು ನಿಮ್ಮನ್ನು ಶ್ರೇಷ್ಠಾತಿ ಶ್ರೇಷ್ಠರನ್ನಾಗಿ ಮಾಡುತ್ತೇನೆ ಅಂದಮೇಲೆ ನೀವು ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕು! ತಂದೆಯು ನಮ್ಮನ್ನು ಇಡೀ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ ಎಂಬುದನ್ನೂ ತಿಳಿದುಕೊಂಡಿದ್ದೀರಿ. ಪರಮಪಿತ ಪರಮಾತ್ಮನು ಸರ್ವಶ್ರೇಷ್ಠನಾಗಿದ್ದಾರೆ ಎಂಬ ಮಾತನ್ನು ಮನುಷ್ಯರೂ ಸಹ ಹೇಳುತ್ತಾರೆ. ಸ್ವಯಂ ತಂದೆಯೇ ತಿಳಿಸುತ್ತಾರೆ - ನಾನು ವಿಶ್ವದ ಮಾಲೀಕನಾಗುವುದಿಲ್ಲ. ಭಗವಾನುವಾಚ - ಮನುಷ್ಯರು ನನ್ನನ್ನು ಶ್ರೇಷ್ಠಾತಿ ಶ್ರೇಷ್ಠ ಭಗವಂತನೆಂದು ಹೇಳುತ್ತಾರೆ ಮತ್ತು ನಾನು ಹೇಳುತ್ತೇನೆ - ನನ್ನ ಮಕ್ಕಳೇ ಶ್ರೇಷ್ಠಾತಿ ಶ್ರೇಷ್ಠರಾಗಿದ್ದಾರೆ. ತಂದೆಯು ಇದನ್ನು ಸಿದ್ಧ ಮಾಡಿ ತಿಳಿಸುತ್ತಾರೆ. ಕಲ್ಪದ ಹಿಂದಿನ ತರಹ ಡ್ರಾಮಾನುಸಾರ ಪುರುಷಾರ್ಥವನ್ನೂ ಮಾಡಿಸುತ್ತಾರೆ. ಮಕ್ಕಳೇ ಯಾವುದೇ ಮಾತು ಅರ್ಥವಾಗದಿದ್ದರೆ ಕೇಳಿ ಎಂದು ತಂದೆಯು ತಿಳಿಸುತ್ತಾರೆ. ಮನುಷ್ಯರಿಗೆ ಏನೂ ಗೊತ್ತಿಲ್ಲ. ಪ್ರಪಂಚವೇನು, ವೈಕುಂಠವೆಂದರೇನು? ಎಂದು ತಿಳಿದಿಲ್ಲ. ಎಷ್ಟುಮಂದಿ ರಾಜರು ಮೊದಲಾದವರು ಇದ್ದುಹೋಗಿದ್ದಾರೆ. ಅಮೇರಿಕಾದಲ್ಲಿ ಎಷ್ಟೊಂದು ಧನವಂತರಿದ್ದಾರೆ. ಆದರೆ ಈ ಲಕ್ಷ್ಮೀ-ನಾರಾಯಣರ ತರಹ ಇರಲು ಸಾಧ್ಯವಿಲ್ಲ. ಅವರಂತೂ ಶ್ವೇತ ಭವನ ಇತ್ಯಾದಿಗಳನ್ನು ಕಟ್ಟಿಸುತ್ತಾರೆ. ಆದರೆ ಸತ್ಯಯುಗದಲ್ಲಂತೂ ರತ್ನ ಜಡಿತವಾದ ಮಹಲುಗಳಿರುತ್ತವೆ. ಅದಕ್ಕೆ ಸುಖಧಾಮವೆಂದು ಹೇಳುತ್ತಾರೆ. ನಿಮ್ಮದು ಹೀರೋ-ಹೀರೊಯಿನ್ ಪಾತ್ರವಾಗಿದೆ. ನೀವು ವಜ್ರವಾಗುತ್ತೀರಿ, ಸ್ವರ್ಣೀಮ ಯುಗವಿತ್ತು, ಈಗ ಕಬ್ಬಿಣದ ಸಮಾನ ಯುಗವಾಗಿದೆ. ಮಕ್ಕಳೇ, ನೀವು ಎಷ್ಟೊಂದು ಭಾಗ್ಯಶಾಲಿಗಳಾಗಿದ್ದೀರಿ. ಸ್ವಯಂ ಭಗವಂತನೇ ನಿಮಗೆ ತಿಳಿಸಿಕೊಡುತ್ತಾರೆ ಅಂದಮೇಲೆ ನಿಮಗೆ ಎಷ್ಟು ಖುಷಿಯಿರಬೇಕು! ನಿಮ್ಮ ಈ ವಿದ್ಯೆಯು ಹೊಸ ಪ್ರಪಂಚಕ್ಕಾಗಿ ಇದೆ. ಈ ನಿಮ್ಮ ಜೀವನವು ಬಹಳ ಅಮೂಲ್ಯವಾಗಿದೆ ಏಕೆಂದರೆ ನೀವು ವಿಶ್ವ ಸೇವೆ ಮಾಡುತ್ತೀರಿ. ತಂದೆಯು ಬಂದು ನರಕವನ್ನು ಸ್ವರ್ಗವನ್ನಾಗಿ ಮಾಡಿ ಎಂದು ತಂದೆಯನ್ನು ಕರೆಯುತ್ತಾರೆ. ಸ್ವರ್ಗದ ರಚಯಿತನನ್ನು ತಂದೆಯೆಂದು ಹೇಳುತ್ತಾರಲ್ಲವೆ. ತಂದೆಯು ತಿಳಿಸುತ್ತಾರೆ - ನೀವು ಸ್ವರ್ಗದಲ್ಲಿದ್ದಿರಿ, ಈಗ ನರಕದಲ್ಲಿದ್ದೀರಿ. ಈಗ ಪುನಃ ಸತ್ಯಯುಗದಿಂದ ಕಲಿಯುಗದಲ್ಲಿ ಅವಶ್ಯವಾಗಿ ಬರಬೇಕು. ತಂದೆಯು ಮಕ್ಕಳಿಗೆ ಮತ್ತೆ-ಮತ್ತೆ ತಿಳಿಸುತ್ತಾರೆ - ಮಕ್ಕಳೇ, ಯಾರ ಪ್ರತಿಯಾದರೂ ಮನಸ್ಸಿನಲ್ಲಿ ಸಂಶಯವಿದ್ದರೆ ಅದರಿಂದ ಖುಷಿಯಿಲ್ಲದಿದ್ದರೆ ತಿಳಿಸಿ. ತಂದೆಯೇ ಕುಳಿತು ಓದಿಸುತ್ತಾರಲ್ಲವೆ., ಓದಬೇಕಲ್ಲವೆ. ನೀವು ದೇಹಾಭಿಮಾನದಲ್ಲಿ ಬರುವ ಕಾರಣವೇ ಖುಷಿಯಿರುವುದಿಲ್ಲ. ತಂದೆಯಂತೂ ಕೇವಲ ಬ್ರಹ್ಮಾಂಡದ ಮಾಲೀಕನಾಗಿದ್ದಾರೆ, ನೀವು ವಿಶ್ವಕ್ಕೇ ಮಾಲೀಕರಾಗುತ್ತೀರಿ. ಭಲೆ ತಂದೆಗೆ ರಚಯಿತನೆಂದು ಹೇಳಲಾಗುತ್ತದೆ ಆದರೆ ಮಹಾಪ್ರಳಯವಾಗಿ ಬಿಡುತ್ತದೆ, ಅವರು ಬಂದು ಹೊಸ ಪ್ರಪಂಚವನ್ನು ರಚಿಸುತ್ತಾರೆಂದಲ್ಲ. ತಂದೆಯು ತಿಳಿಸುತ್ತಾರೆ - ನಾನು ಬಂದು ಹಳೆಯದನ್ನು ಹೊಸದನ್ನಾಗಿ ಮಾಡುತ್ತೇನೆ, ಹಳೆಯ ಪ್ರಪಂಚವನ್ನು ವಿನಾಶ ಮಾಡಿಸುತ್ತೇನೆ ಮತ್ತು ನಿಮ್ಮನ್ನು ಹೊಸ ಪ್ರಪಂಚದ ಮಾಲೀಕರನ್ನಾಗಿ ಮಾಡುತ್ತೇನೆ. ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ, ನಾನೇನೂ ಮಾಡುವುದಿಲ್ಲ. ಪತಿತ ಪ್ರಪಂಚದಲ್ಲಿಯೇ ಕರೆಯುತ್ತೀರಿ, ಆದ್ದರಿಂದ ನಾನು ಬಂದು ಪಾರಸನಾಥರನ್ನಾಗಿ ಮಾಡುತ್ತೇನೆ. ಯಾವ ಮಕ್ಕಳು ಪಾರಸಪುರಿಯಲ್ಲಿ ಬಂದನಂತರ ಅಲ್ಲಂತೂ ನನ್ನನ್ನು ಎಂದೂ ಕರೆಯುವುದಿಲ್ಲ. ಬಾಬಾ, ಪಾರಸಪುರಿಯಲ್ಲಿ ಬಂದು ಒಮ್ಮೆ ಭೇಟಿ ಕೊಡಿ ಎಂದು ಎಂದಾದರೂ ಕರೆಯುತ್ತೀರಾ! ನನ್ನನ್ನು ಕರೆಯುವುದೇ ಇಲ್ಲ ಅಲ್ಲವೆ. ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುವರು, ಸುಖದಲ್ಲಿ ಯಾರೂ ಸ್ಮರಣೆ ಮಾಡುವುದಿಲ್ಲವೆಂಬ ಗಾಯನವಿದೆ. ಅಲ್ಲಿ ನೆನಪು ಮಾಡುವುದಿಲ್ಲ, ಕರೆಯುವುದೂ ಇಲ್ಲ. ಕೇವಲ ದ್ವಾಪರದಲ್ಲಿ ಮಂದಿರಗಳನ್ನು ಕಟ್ಟಿಸಿ ಅದರಲ್ಲಿ ನನ್ನ ಮೂರ್ತಿಯನ್ನಿಟ್ಟು ಬಿಡುತ್ತೀರಿ. ಪೂಜೆ ಮಾಡಲು ಕಲ್ಲಿನ ಮೂರ್ತಿ ಅಥವಾ ವಜ್ರದಿಂದ ಲಿಂಗವನ್ನು ಮಾಡಿಸಿ ಇಡುತ್ತೀರಿ. ಇವು ಎಷ್ಟು ವಿಚಿತ್ರವಾದ ಮಾತುಗಳಾಗಿವೆ! ಇವನ್ನು ಚೆನ್ನಾಗಿ ಕಿವಿ ತೆರೆದು ಕೇಳಬೇಕು. ಕಿವಿಗಳು ಪವಿತ್ರವಾಗಬೇಕು, ಇದಕ್ಕಾಗಿ ಮೊಟ್ಟ ಮೊದಲನೆಯದು ಪವಿತ್ರತೆಯಾಗಿದೆ. ಸಿಂಹದ ಹಾಲು ಚಿನ್ನದ ಪಾತ್ರೆಯಲ್ಲಿಯೇ ನಿಲ್ಲುತ್ತದೆಯೆಂದು ಹೇಳುತ್ತಾರೆ. ಹಾಗೆಯೇ ಇದರಲ್ಲಿಯೂ ಪವಿತ್ರತೆಯಿದ್ದಾಗ ಮಾತ ಧಾರಣೆಯಾಗುವುದು. ಕಾಮ ಮಹಾಶತ್ರುವಾಗಿದೆ, ಇದರ ಮೇಲೆ ಜಯ ಗಳಿಸಿ. ನಿಮ್ಮದು ಇದು ಅಂತಿಮ ಜನ್ಮವೆಂದು ತಂದೆಯು ತಿಳಿಸುತ್ತಾರೆ. ನಿಮಗೂ ಸಹ ಇದು ಅರ್ಥವಾಗಿದೆ. ಅದೇ ಮಹಾಭಾರತ ಯುದ್ಧವಾಗಿದೆ. ಕಲ್ಪ-ಕಲ್ಪವೂ ಹೇಗೆ ವಿನಾಶವಾಗಿದೆಯೋ ಚಾಚೂ ತಪ್ಪದೆ ಅದೇ ರೀತಿ ಡ್ರಾಮಾನುಸಾರ ಈಗಲೂ ಆಗಲಿದೆ.

ನೀವು ಮಕ್ಕಳು ಸ್ವರ್ಗದಲ್ಲಿ ಪುನಃ ತಮ್ಮ ಮಹಲುಗಳನ್ನು ಕಟ್ಟಿಸುತ್ತೀರಿ ಹೇಗೆ ಕಲ್ಪದ ಹಿಂದೆ ಕಟ್ಟಿಸಿದ್ದಿರಿ. ಸ್ವರ್ಗಕ್ಕೆ ಪ್ಯಾರಡೈಸ್ ಎಂದು ಹೇಳುತ್ತಾರೆ. ಈ ಪ್ಯಾರಡೈಸ್ ಶಬ್ಧವು ಪುರಾಣಗಳಿಂದ ಹೊರ ಬಂದಿದೆ. ಮಾನಸ ಸರೋವರದಲ್ಲಿ ದೇವತೆಗಳಿರುತ್ತಿದ್ದರು ಎಂದು ಹೇಳುತ್ತಾರೆ ಅದರಲ್ಲಿ ಯಾರು ಮುಳುಗಿದರೂ ಸಹ ಫರಿಶ್ತೆಗಳಾಗಿ ಬಿಡುವರು. ವಾಸ್ತವದಲ್ಲಿ ಇದು ಜ್ಞಾನ ಮಾನಸ ಸರೋವರವಾಗಿದೆ, ಇದರಲ್ಲಿ ನೀವು ಹೇಗಿದ್ದವರು ಏನಾಗಿ ಬಿಡುತ್ತೀರಿ! ಶೋಭಾಯಮಾನವಾಗಿರುವವರಿಗೆ ಫರಿಶ್ತೆಯೆಂದು ಹೇಳುತ್ತಾರೆ. ರೆಕ್ಕೆಗಳಿಂದ ಕೂಡಿದ ಫರಿಶ್ತೆಗಳಿರುತ್ತಾರೆಂದಲ್ಲ. ಹೇಗೆ ನೀವು ಪಾಂಡವರಿಗೆ ಮಹಾವೀರರೆಂದು ಹೇಳಲಾಗುತ್ತದೆ. ಇದಕ್ಕೆ ಅವರು ಪಾಂಡವರ ದೊಡ್ಡ-ದೊಡ್ಡ ಚಿತ್ರಗಳು, ಗುಹೆಗಳು ಇತ್ಯಾದಿಯನ್ನು ತೋರಿಸಿದ್ದಾರೆ. ಭಕ್ತಿಮಾರ್ಗದಲ್ಲಿ ಎಷ್ಟು ಹಣವನ್ನು ನಷ್ಟ ಮಾಡುತ್ತಿರುತ್ತಾರೆ. ತಂದೆಯು ತಿಳಿಸುತ್ತಾರೆ - ನಾನಂತೂ ಮಕ್ಕಳನ್ನು ಎಷ್ಟು ಸಾಹುಕಾರರನ್ನಾಗಿ ಮಾಡಿದೆನು, ನೀವು ಇಷ್ಟೆಲ್ಲಾ ಹಣವನ್ನು ಏನು ಮಾಡಿದಿರಿ? ಭಾರತವು ಎಷ್ಟು ಧನವಂತನಾಗಿತ್ತು, ಈಗ ಭಾರತದ ಸ್ಥಿತಿ ಏನಾಗಿದೆ! ಯಾವುದು 100% ಸಾಹುಕಾರನಾಗಿತ್ತೋ ಅದು ಈಗ 100% ಬಡದೇಶವಾಗಿ ಬಿಟ್ಟಿದೆ. ಈಗ ನೀವು ಮಕ್ಕಳು ಎಷ್ಟೊಂದು ತಯಾರಿ ಮಾಡಿಕೊಳ್ಳಬೇಕು! ನಿಮ್ಮ ಮಕ್ಕಳು ಮೊದಲಾದವರಿಗೂ ಇದನ್ನು ತಿಳಿಸಿ ಶಿವ ತಂದೆಯನ್ನು ನೆನಪು ಮಾಡಿ ಆಗ ನೀವು ಕೃಷ್ಣನಂತೆ ಆಗುವಿರಿ. ಕೃಷ್ಟನು ಹೇಗಾದನೆಂದು ಯಾರಿಗೂ ತಿಳಿದಿಲ್ಲ. ಹಿಂದಿನ ಜನ್ಮದಲ್ಲಿ ಶಿವ ತಂದೆಯನ್ನು ನೆನಪು ಮಾಡುವುದರಿಂದಲೇ ಕೃಷ್ಣನಾದನು ಅಂದಾಗ ನೀವು ಮಕ್ಕಳಿಗೆ ಎಷ್ಟು ಖುಷಿಯಿರಬೇಕು! ಆದರೆ ಖುಷಿಯು ಯಾರಿಗೆ ಇರುತ್ತದೆಯೆಂದರೆ ಯಾರು ಸದ ಅನ್ಯರ ಸೇವೆಯಲ್ಲಿರುತ್ತಾರೆ. ಮುಖ್ಯವಾಗಿ ಧಾರಣೆ ಮತು ಚಲನೆಯು ಬಹಳ-ಬಹಳ ರಾಯಲ್ ಆಗಿರಲಿ. ಆಹಾರ-ಪಾನೀಯಗಳು ಬಹಳ ಸುಂದರವಾಗಿರಲಿ. ನೀವು ಮಕ್ಕಳ ಬಳಿ ಯಾರೇ ಬರಲಿ ಅವರಿಗೆ ಪ್ರತಿಯೊಂದು ಪ್ರಕಾರದಿಂದ ಸೇವೆ ಮಾಡಬೇಕು. ಅದು ಸ್ಥೂಲವಾಗಿಯೂ, ಸೂಕ್ಷ್ಮವಾಗಿಯೂ, ಶಾರೀರಿಕ, ಆತ್ಮಿಕ ಎರಡೂ ಪ್ರಕಾರವಾಗಿ ಸೇವೆ ಮಾಡುವುದರಿಂದ ಬಹಳ ಖುಷಿಯಿರುವುದು. ಯಾರೇ ಬಂದರೂ ಸಹ ಅವರಿಗೆ ನೀವು ಸತ್ಯ ನಾರಾಯಣನ ಕಥೆಯನ್ನು ಹೇಳಿ. ಶಾಸ್ತ್ರಗಳಲ್ಲಂತೂ ಏನೇನೋ ಕಥೆಗಳನ್ನು ಬರೆದು ಬಿಟ್ಟಿದ್ದಾರೆ. ವಿಷ್ಣುವಿನ ನಾಭಿಯಿಂದ ಬ್ರಹ್ಮನು ಬಂದನು ಮತ್ತು ಬ್ರಹ್ಮನ ಕೈಯಲ್ಲಿ ಶಾಸ್ತ್ರಗಳನ್ನು ತೋರಿಸಿದ್ದಾರೆ. ವಿಷ್ಣುವಿನ ನಾಭಿಯಿಂದ ಬ್ರಹ್ಮನು ಹೇಗೆ ಬರುತ್ತಾನೆ ಎಂಬುದರಲ್ಲಿ ಎಷ್ಟು ರಹಸ್ಯವಿದೆ! ಮತ್ತ್ಯಾರೂ ಈ ಮಾತುಗಳನ್ನು ಅರಿತುಕೊಳ್ಳುವುದಿಲ್ಲ. ನಾಭಿಯಿಂದ ಬರುವ ಮಾತೇ ಇಲ್ಲ. ಬ್ರಹ್ಮನಿಂದ ವಿಷ್ಣು, ವಿಷ್ಣುವಿನಿಂದ ಬ್ರಹ್ಮನಾಗುತ್ತಾರೆ. ಬ್ರಹ್ಮನು ವಿಷ್ಣುವಾಗುವುದರಲ್ಲಿ ಒಂದು ಸೆಕೆಂಡ್ ಹಿಡಿಸುತ್ತದೆ. ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಹೇಳಲಾಗುತ್ತದೆ. ತಂದೆಯು ನೀವೇ ವಿಷ್ಣುವಿನ ರೂಪವಾಗುತ್ತೀರಿ ಎಂದು ಸಾಕ್ಷಾತ್ಕಾರ ಮಾಡಿಸಿದರು, ಸೆಕೆಂಡಿನಲ್ಲಿ ನಿಶ್ಚಯವಾಯಿತು. ವಿನಾಶದ ಸಾಕ್ಷಾತ್ಕಾರವೂ ಆಯಿತು. ಇಲ್ಲವಾದರೆ ಮೊದಲು ಕಲ್ಕತ್ತಾದಲ್ಲಿದ್ದಾಗ ಎಷ್ಟೊಂದು ರಾಜನಂತಿದ್ದರು, ಯಾವುದೇ ಕಷ್ಟವಿರಲಿಲ್ಲ. ಬಹಳ ಘನತೆಯಿಂದ ಇರುತ್ತಿದ್ದರು. ಈಗ ತಂದೆಯು ನಿಮಗೆ ಈ ಜ್ಞಾನ ರತ್ನಗಳ ವ್ಯಾಪಾರವನ್ನು ಕಲಿಸುತ್ತಾರೆ. ಆ ವ್ಯಾಪಾರವಂತೂ ಇದರ ಮುಂದೆ ಏನೇನೂ ಇಲ್ಲ. ಆದರೆ ಇವರ ಪಾತ್ರ ಮತ್ತು ನಿಮ್ಮ ಪಾತ್ರದಲ್ಲಿ ಅಂತರವಿದೆ. ತಂದೆಯು ಇವರಲ್ಲಿ ಪ್ರವೇಶ ಮಾಡಿದರು. ಅನಂತರ ಇವರು ಎಲ್ಲವನ್ನೂ ಬಿಟ್ಟು ಬಿಟ್ಟರು. ಭಟ್ಟಿ ಮಾಡಲಾಯಿತು. ನಿಮ್ಮಲ್ಲಿಯೂ ಸಹ ಎಲ್ಲವನ್ನೂ ಬಿಟ್ಟಿರಿ. ನದಿಯನ್ನು ದಾಟಿಯೂ ಭಟ್ಟಿಯಲ್ಲಿ ಕುಳಿತುಕೊಂಡರು. ಏನೇನೆಲ್ಲವೂ ನಡೆಯಿತು! ಯಾರದೇ ಭಯವಿರಲಿಲ್ಲ. ಕೃಷ್ಣನು ಓಡಿಸಿಕೊಂಡು ಬಂದನೆಂದು ಹೇಳುತ್ತಾರೆ, ಏಕೆ ಓಡಿಸಿದನು? ಅವರನ್ನು ಪಟ್ಟದ ರಾಣಿಯರನ್ನಾಗಿ ಮಾಡಿಕೊಳ್ಳಲು. ಇಲ್ಲಿ ಭಟ್ಟಿಯೂ ಆಯಿತು, ನೀವು ಮಕ್ಕಳನ್ನು ಸ್ವರ್ಗದ ಮಹಾರಾಣಿಯರನ್ನಾಗಿ ಮಾಡಿದರೆಂದು ಶಾಸ್ತ್ರಗಳಲ್ಲಿ ಏನೇನೋ ಬರೆದು ಬಿಟ್ಟಿದ್ದಾರೆ ಆದರೆ ಪ್ರತ್ಯಕ್ಷ ರೂಪದಲ್ಲಿ ನೋಡಿದಾಗ ಹೇಗಿದೆ! ಅದನ್ನು ನೀವೀಗ ತಿಳಿದುಕೊಂಡಿದ್ದೀರಿ. ಇಲ್ಲಿ ಓಡಿಸಿಕೊಂಡು ಹೋಗುವ ಮಾತೇ ಇಲ್ಲ. ಕಲ್ಪದ ಮೊದಲೂ ಸಹ ಈ ನಿಂದನೆಯಾಗಿತ್ತು, ಗಾಳಿ ಸುದ್ದಿ ಬಂದಿತ್ತು. ಇದಂತೂ ನಾಟಕವಾಗಿದೆ. ಏನೆಲ್ಲವೂ ಆಗುತ್ತದೆಯೋ ಅದು ಕಲ್ಪದ ಹಿಂದಿನ ತರಹ.

ನೀವೀಗ ಇದನ್ನು ಬಹಳ ಚೆನ್ನಾಗಿ ತಿಳಿದುಕೊಂಡಿದ್ದೀರಿ - ಕಲ್ಪದ ಮೊದಲು ಯಾರು ರಾಜ್ಯವನ್ನು ತೆಗೆದುಕೊಂಡಿದ್ದರೋ ಅವರು ಅವಶ್ಯವಾಗಿ ಬರುತ್ತಾರೆ. ತಂದೆಯು ತಿಳಿಸುತ್ತಾರೆ - ನಾನೂ ಸಹ ಕಲ್ಪ-ಕಲ್ಪವೂ ಬಂದು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೇನೆ. ಪೂರ್ಣ 84 ಜನ್ಮಗಳ ಲೆಕ್ಕವನ್ನು ತಂದೆಯು ತಿಳಿಸುತ್ತಾರೆ. ಸತ್ಯಯುಗದಲ್ಲಿ ನೀವು ಅಮರರಾಗಿರುತ್ತೀರಿ. ಅಲ್ಲಿ ಅಕಾಲ ಮೃತ್ಯುವಾಗುವುದಿಲ್ಲ. ಶಿವ ತಂದೆಯೇ ಕಾಲದ ಮೇಲೆ ಜಯವನ್ನು ಪ್ರಾಪ್ತಿ ಮಾಡಿಸುತ್ತಾರೆ. ನಾನು ಕಾಲರ ಕಾಲ ಮಹಾಕಾಲನಾಗಿದ್ದೇನೆಂದು ಹೇಳುತ್ತಾರೆ. ಕಥೆಗಳೂ ಇದೆಯಲ್ಲವೆ. ನೀವು ಕಾಲದ ಮೇಲೆ ಜಯ ಗಳಿಸುತ್ತೀರಿ, ಅಮರಲೋಕದಲ್ಲಿ ಹೋಗುತ್ತೀರಿ. ಅಮರಲೋಕದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯಲು ಮೊದಲನೆಯದಾಗಿ ಪವಿತ್ರರಾಗಿ, ಎರಡನೆಯದಾಗಿ ದೈವೀ ಗುಣಗಳನ್ನು ಧಾರಣೆ ಮಾಡಿ. ಪ್ರತಿನಿತ್ಯವೂ ತಮ್ಮ ಚಾರ್ಟ್ ಇಟ್ಟುಕೊಳ್ಳಿ. ರಾವಣನ ಮೂಲಕವೇ ನಿಮಗೆ ನಷ್ಟವಾಗಿದೆ. ನನ್ನ ಮೂಲಕ ನಿಮಗೆ ಲಾಭವಾಗುತ್ತದೆ. ವ್ಯಾಪಾರಿಗಳು ಈ ಮಾತುಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಇವು ಜ್ಞಾನ ರತ್ನಗಳಾಗಿವೆ. ಕೆಲವರೇ ವಿರಳ ವ್ಯಾಪಾರಿಗಳು ಇವರೊಂದಿಗೆ ವ್ಯಾಪಾರ ಮಾಡುತ್ತಾರೆ. ನೀವು ವ್ಯಾಪಾರ ಮಾಡಲು ಬಂದಿದ್ದೀರಿ. ಕೆಲವರಂತೂ ಬಹಳ ಚೆನ್ನಾಗಿ ವ್ಯಾಪಾರ ಮಾಡಿ 21 ಜನ್ಮಗಳಿಗಾಗಿ ಸಂಪಾದನೆ ಮಾಡಿಕೊಳ್ಳುತ್ತಾರೆ. 21 ಜನ್ಮಗಳಷ್ಟೇ ಅಲ್ಲ, 50-60 ಜನ್ಮಗಳಕಾಲ ನೀವು ಬಹಳ ಸುಖಿಯಾಗಿರುತ್ತೀರಿ, ಪದಮಾಪತಿಗಳಾಗುತ್ತೀರಿ. ದೇವತೆಗಳ ಪಾದಗಳಲ್ಲಿ ಪದ್ಮ (ಕಮಲ)ವನ್ನು ತೋರಿಸುತ್ತಾರಲ್ಲವೆ. ಅರ್ಥವನ್ನು ತಿಳಿದುಕೊಂಡಿಲ್ಲ. ನೀವೀಗ ಪದಮಾಪತಿಗಳಾಗುತ್ತಿದ್ದೀರಿ ಅಂದಮೇಲೆ ನಿಮಗೆ ಎಷ್ಟು ಖುಷಿಯಿರಬೇಕು! ತಂದೆಯು ತಿಳಿಸುತ್ತಾರೆ - ನಾವು ಇಷ್ಟು ಸಾಧಾರಣವಾಗಿದ್ದೇವೆ, ನೀವು ಮಕ್ಕಳನ್ನು ಸ್ವರ್ಗದಲ್ಲಿ ಕರೆದುಕೊಂಡು ಹೋಗಲು ಬಂದಿದ್ದೇನೆ. ಹೇ ಪತಿತ-ಪಾವನ ಬನ್ನಿ, ಬಂದು ಪಾವನ ಮಾಡಿ ಎಂದು ನೀವು ಕರೆಯುತ್ತೀರಿ. ಪಾವನರಿರುವುದೇ ಸುಖಧಾಮದಲ್ಲಿ. ಶಾಂತಿಧಾಮದ ಯಾವುದೇ ಚರಿತ್ರೆ-ಭೂಗೋಳವಿಲ್ಲ. ಅದು ಕೇವಲ ಆತ್ಮಗಳ ವೃಕ್ಷವಾಗಿದೆ, ಸೂಕ್ಷ್ಮವತನದ ಯಾವುದೇ ಮಾತಿಲ್ಲ. ಬಾಕಿ ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತಿದೆಯೆಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಒಬ್ಬ ಲಕ್ಷ್ಮೀ-ನಾರಾಯಣರೇ ರಾಜ್ಯ ಮಾಡುತ್ತಾರೆಂದಲ್ಲ, ವೃದ್ಧಿಯೂ ಸಹ ಆಗುತ್ತದೆಯಲ್ಲವೆ. ಮತ್ತೆ ದ್ವಾಪರದಲ್ಲಿ ಆ ಪೂಜ್ಯರು ಪೂಜಾರಿಗಳಾಗುತ್ತಾರೆ. ಮನುಷ್ಯರು ಪರಮಾತ್ಮನಿಗೆ ತಾವೇ ಪೂಜ್ಯ, ತಾವೇ ಪೂಜಾರಿಯೆಂದು ಹೇಳುತ್ತಾರೆ. ಹೇಗೆ ಪರಮಾತ್ಮನನ್ನು ಸರ್ವವ್ಯಾಪಿ ಎಂದು ಹೇಳಿ ಬಿಡುತ್ತಾರೆ. ಈ ಮಾತುಗಳನ್ನು ನೀವೇ ತಿಳಿದುಕೊಂಡಿದ್ದೀರಿ. ಶ್ರೇಷ್ಠಾತಿ ಶ್ರೇಷ್ಠ ಭಗವಂತನೆಂದು ನೀವು ಅರ್ಧಕಲ್ಪದಿಂದ ಹಾಡುತ್ತಾ ಬಂದಿದ್ದೀರಿ ಮತ್ತು ಈಗ ಭಗವಾನುವಾಚ - ನೀವು ಶ್ರೇಷ್ಠಾತಿ ಶ್ರೇಷ್ಠ ಮಕ್ಕಳಾಗಿದ್ದೀರಿ ಅಂದಮೇಲೆ ಇಂತಹ ತಂದೆಯ ಮತದನುಸಾರವೂ ನಡೆಯಬೇಕಲ್ಲವೆ. ಗೃಹಸ್ಥ ವ್ಯವಹಾರವನ್ನೂ ಸಂಭಾಲನೆ ಮಾಡಬೇಕು. ಎಲ್ಲರೂ ಬಂದು ಇಲ್ಲಿರಲು ಸಾಧ್ಯವಿಲ್ಲ. ಎಲ್ಲರೂ ಇರುವುದಾದರೆ ಎಷ್ಟು ದೊಡ್ಡ ಮನೆಯನ್ನು ಕಟ್ಟಬೇಕಾಗುತ್ತದೆ! ಇದನ್ನೂ ನೀವು ಕೊನೆಗೊಂದು ದಿನ ನೋಡುತ್ತೀರಿ - ಅಬುವಿನಿಂದ ಮೇಲಿನವರೆಗೆ ದರ್ಶನಕ್ಕಾಗಿ ಎಷ್ಟು ದೊಡ್ಡ ಸಾಲು ನಿಲ್ಲುತ್ತದೆ! ಎಂದು. ಯಾರಿಗೆ ದರ್ಶನವಾಗುವುದಿಲ್ಲವೋ ಅವರು ನಿಂದನೆ ಮಾಡತೊಡಗುತ್ತಾರೆ. ಮಹಾತ್ಮರ ದರ್ಶನ ಮಾಡಬೇಕೆಂದು ತಿಳಿಯುತ್ತಾರೆ. ಈಗ ತಂದೆಯಂತೂ ಮಕ್ಕಳವರಾಗಿದ್ದಾರೆ, ಮಕ್ಕಳಿಗೇ ಓದಿಸುತ್ತಾರೆ. ನೀವು ಯಾರಿಗಾದರೂ ಮಾರ್ಗವನ್ನು ತಿಳಿಸುತ್ತೀರೆಂದರೆ ಕೆಲವರು ಚೆನ್ನಾಗಿ ಅದರಂತೆಯೇ ನಡೆಯತೊಡಗುತ್ತಾರೆ, ಕೆಲವರು ಧಾರಣೆ ಮಾಡುವುದಿಲ್ಲ. ಅನೇಕರು ಕೇಳುತ್ತಿದ್ದರೂ ಸಹ ಹೊರಗಡೆ ಹೋಗುತ್ತಿದ್ದಂತೆಯೇ ಇಲ್ಲಿಯದು ಇಲ್ಲಿಗೆ, ಅಲ್ಲಿಯದು ಅಲ್ಲಿಗೆ ಎಂಬಂತೆ ಆಗಿಬಿಡುತ್ತದೆ. ಆ ಖುಷಿಯಿರುವುದಿಲ್ಲ. ವಿದ್ಯೆಯೂ ಇಲ್ಲ, ಯೋಗವೂ ಇಲ್ಲ. ತಂದೆಯು ಎಷ್ಟೊಂದು ತಿಳಿಸುತ್ತಾರೆ - ಮಕ್ಕಳೇ, ಚಾರ್ಟ್ ಇಡಿ, ಇಲ್ಲದಿದ್ದರೆ ಬಹಳ ಪಶ್ಚಾತ್ತಾಪ ಪಡಬೇಕಾಗುವುದು. ನಾವು ತಂದೆಯನ್ನು ಎಷ್ಟು ನೆನಪು ಮಾಡುತ್ತೇವೆಂದು ಚಾರ್ಟನ್ನು ನೋಡಿಕೊಳ್ಳಬೇಕು. ಭಾರತದ ಪ್ರಾಚೀನ ಯೋಗದ ಬಹಳ ಮಹಿಮೆಯಿದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಯಾವುದೇ ಮಾತು ನಿಮಗೆ ಅರ್ಥವಾಗದಿದ್ದರೆ ತಂದೆಯೊಂದಿಗೆ ಕೇಳಿ. ಮೊದಲು ನೀವು ಏನೂ ತಿಳಿದುಕೊಂಡಿರಲಿಲ್ಲ. ತಂದೆಯು ತಿಳಿಸುತ್ತಾರೆ - ಇದು ಮುಳ್ಳುಗಳ ಕಾಡಾಗಿದೆ, ಕಾಮ ಮಹಾಶತ್ರುವಾಗಿದೆ. ಈ ಶಬ್ಧವು ಗೀತೆಯದಾಗಿದೆ. ಗೀತೆಯನ್ನು ಓದುತ್ತಿದ್ದರು (ಬ್ರಹ್ಮಾ) ಆದರೆ ಏನೂ ತಿಳಿದುಕೊಂಡಿರಲಿಲ್ಲ. ಇವರು ಪೂರ್ಣ ಆಯಸ್ಸು ಗೀತೆಯನ್ನು ಓದುತ್ತಿದ್ದರು. ಗೀತೆಯ ಮಹಾತ್ಮರು ಬಹಳ ಒಳ್ಳೆಯವರೆಂದು ತಿಳಿಯುತ್ತಿದ್ದರು. ಭಕ್ತಿಮಾರ್ಗದಲ್ಲಿ ಭಗವದ್ಗೀತೆಗೆ ಎಷ್ಟೊಂದು ಮಾನ್ಯತೆಯಿದೆ! ಇದರಲ್ಲಿ ಚಿಕ್ಕದೂ ಇರುತ್ತದೆ, ದೊಡ್ಡದೂ ಇರುತ್ತದೆ. ಕೃಷ್ಣ ಮುಂತಾದ ದೇವತೆಗಳ ಅದೇ ಚಿತ್ರಗಳು ಒಂದೊಂದು ಪೈಸೆಗೂ ಸಿಗುತ್ತಿರುತ್ತದೆ ಮತು ಅದೇ ಚಿತ್ರಗಳಿಗೆ ಎಷ್ಟು ದೊಡ್ಡ-ದೊಡ್ಡ ಮಂದಿರಗಳನ್ನು ಕಟ್ಟಿಸುತ್ತಾರೆ. ತಂದೆಯು ತಿಳಿಸುತ್ತಾರೆ - ನೀವಂತೂ ವಿಜಯ ಮಾಲೆಯ ಮಣಿಗಳಾಗಬೇಕಾಗಿದೆ. ಇಂತಹ ಮಧುರಾತಿ ಮಧುರ ತಂದೆಗೆ ಬಾಬಾ, ಬಾಬಾ ಎಂತಲೂ ಹೇಳುತ್ತಾರೆ. ಸ್ವರ್ಗದ ರಾಜ್ಯಭಾಗ್ಯವನ್ನೂ ಕೊಡುತ್ತಾರೆ ಎಂಬುದನ್ನೂ ತಿಳಿದುಕೊಂಡಿದ್ದಾರೆ. ಆದರೂ ಮತ್ತೆ ಅಹೋ ಮಾಯೆ! ವಿಚ್ಛೇದನವನ್ನು ಕೊಟ್ಟು ಬಿಡುತ್ತಾರೆ. ಭಕ್ತಿಮಾರ್ಗದಲ್ಲಿಯೂ ಭಗವಂತನಿಗೆ ಪತಿಯರ ಪತಿಯೆಂದು ಹೇಳಲಾಗುತ್ತದೆ. ಗುರುಗಳಿಗೆ ಗುರು ಒಬ್ಬರೇ ಆಗಿದ್ದಾರೆ, ಅವರೀಗ ನಮ್ಮ ತಂದೆಯಾಗಿದ್ದಾರೆ. ಜ್ಞಾನ ಸಾಗರ, ಪತಿತ-ಪಾವನನಾಗಿದ್ದಾರೆ. ನೀವು ಮಕ್ಕಳು ಹೇಳುತ್ತೀರಿ - ಬಾಬಾ, ನಾವು ಕಲ್ಪ-ಕಲ್ಪವೂ ತಮ್ಮಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಾ ಬಂದಿದ್ದೇನೆ, ಕಲ್ಪ-ಕಲ್ಪವೂ ಮಿಲನ ಮಾಡುತ್ತೇವೆ. ತಾವು ಬೇಹದ್ದಿನ ತಂದೆಯಿಂದ ಅವಶ್ಯವಾಗಿ ಬೇಹದ್ದಿನ ತಂದೆಯ ಆಸ್ತಿಯು ಸಿಗುತ್ತದೆ. ಮುಖ್ಯವಾಗಿದೆ - ಅಲ್ಫ್ (ತಂದೆ). ಅದರಲ್ಲಿ ಬೇ ಅರ್ಥಾತ್ ಆಸ್ತಿಯೂ ಸೇರಿದೆ. ತಂದೆಯೆಂದರೆ ಆಸ್ತಿ. ಅವರು ಹದ್ದಿನ ತಂದೆ, ಇವರು ಬೇಹದ್ದಿನ ತಂದೆಯಾಗಿದ್ದಾರೆ. ಹದ್ದಿನ ತಂದೆಯರಂತೂ ಅನೇಕರಿದ್ದಾರೆ, ಬೇಹದ್ದಿನ ತಂದೆಯು ಒಬ್ಬರೇ ಆಗಿದ್ದಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸ್ಥೂಲ, ಸೂಕ್ಷ್ಮ ಸೇವೆ ಮಾಡಿ ಅಪಾರ ಖುಷಿಯ ಅನುಭವ ಮಾಡಬೇಕು ಮತ್ತು ಮಾಡಿಸಬೇಕಾಗಿದೆ. ಚಲನೆ ಮತ್ತು ಚಹರೆ, ಆಹಾರ-ಪಾನೀಯಗಳಲ್ಲಿ ಬಹಳ ಘನತೆಯನ್ನಿಟ್ಟುಕೊಳ್ಳಬೇಕಾಗಿದೆ.

2. ಅಮರ ಲೋಕದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯಲು ಪವಿತ್ರರಾಗುವ ಜೊತೆ ಜೊತೆಗೆ ದೈವೀ ಗುಣಗಳನ್ನು ಧಾರಣೆ ಮಾಡಬೇಕಾಗಿದೆ. ತಮ್ಮ ಲೆಕ್ಕ ಪತ್ರವನ್ನು ನೋಡಿಕೊಳ್ಳಬೇಕು - ನಾನು ತಂದೆಯನ್ನು ಎಷ್ಟು ನೆನಪು ಮಾಡುತ್ತೇನೆ? ಅವಿನಾಶಿ ಜ್ಞಾನ ರತ್ನಗಳ ಸಂಪಾದನೆಯನ್ನು ಜಮಾ ಮಾಡಿಕೊಳ್ಳುತ್ತಿದ್ದೇನೆಯೇ? ಧಾರಣೆಯಾಗಲು ಕಿವಿಗಳು ಪವಿತ್ರವಾಗಿದೆಯೇ?

ವರದಾನ:
ಮಾಯೆಯ ಆಟವನ್ನು ಸಾಕ್ಷಿಯಾಗಿ ನೋಡುವಂತಹವರು ಸದಾ ನಿರ್ಭಯ, ಮಯಾಜೀತ್ ಭವ.

ಸಮಯ ಪ್ರತಿ ಸಮಯ ಹೇಗೆ ತಾವು ಮಕ್ಕಳ ಸ್ಟೇಜ್ ಮುಂದುವರೆಯುತ್ತಿದೆ, ಅಂದರೆ ಈಗ ಮಾಯೆಯ ಮೇಲೆ ಘರ್ಷಣೆ ಮಾಡಬೇಕಾಗಿಲ್ಲ, ಮಾಯೆ ನಮಸ್ಕಾರ ಮಾಡಲು ಬಂದಿದೆ ಯುದ್ಧ ಮಾಡಲು ಅಲ್ಲ. ಒಂದುವೇಳೆ ಮಾಯೆ ಬಂದರೂ ಸಹ ಅದನ್ನು ಆಟ ಎಂದು ತಿಳಿದು ನೋಡಿ. ಈ ರೀತಿ ಅನುಭವ ಆಗಲಿ ಹೇಗೆ ಸಾಕ್ಷಿಯಾಗಿ ಹದ್ದಿನ ಡ್ರಾಮವನ್ನು ನೋಡುವಿರಿ ಹಾಗೆ. ಮಾಯೆಯ ಎಂತಹದೇ ವಿಕರಾಳ ರೂಪವಿರಲಿ ತಾವು ಅದನ್ನು ಆಟದ ಗೊಂಬೆ ಮತ್ತು ಆಟ ಎಂದು ತಿಳಿದು ನೋಡುವಿರಿ ಆಗ ಬಹಳ ಸಂತೋಷವಾಗುತ್ತದೆ, ನಂತರ ಅದರಿಂದ ಭಯ ಅಥವಾ ಗಾಬರಿಯಾಗುವುದಿಲ್ಲ. ಯಾವ ಮಕ್ಕಳು ಸದಾ ಆಟಗಾರನಾಗಿ ಸಾಕ್ಷಿಯಾಗಿದ್ದು ಮಾಯೆಯ ಆಟವನ್ನು ನೋಡುವರು ಅವರು ಸದಾ ನಿರ್ಭಯ ಅಥವಾ ಮಾಯಾಜೀತ್ ಆಗಿ ಬಿಡುವರು.

ಸ್ಲೋಗನ್:
ಇಂತಹ ಸ್ನೇಹದ ಸಾಗರ ಆಗಿ ಆಗ ಕ್ರೋಧ ಸಮೀಪ ಸಹ ಬರಲು ಸಾಧ್ಯವಾಗಬಾರದು.