24.03.20         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಆತ್ಮೀಯ ಸೇವೆ ಮಾಡಿ ತನ್ನ ಹಾಗೂ ಅನ್ಯರ ಕಲ್ಯಾಣ ಮಾಡಿ, ತಂದೆಯ ಜೊತೆ ಸತ್ಯ ಹೃದಯವನ್ನು ಇಟ್ಟಿದ್ದೇ ಆದರೆ ತಂದೆಯ ಹೃದಯವನ್ನೇರುತ್ತೀರಿ

ಪ್ರಶ್ನೆ:
ದೇಹೀಅಭಿಮಾನಿಗಳಾಗುವ ಪರಿಶ್ರಮವನ್ನು ಯಾರು ಮಾಡಲು ಸಾಧ್ಯ? ದೇಹೀ-ಅಭಿಮಾನಿಗಳ ಲಕ್ಷಣಗಳನ್ನು ತಿಳಿಸಿ.

ಉತ್ತರ:
ಯಾರಿಗೆ ವಿದ್ಯೆಯೊಂದಿಗೆ ಮತ್ತು ತಂದೆಯೊಂದಿಗೆ ಅಪಾರವಾದ ಪ್ರೀತಿಯಿದೆಯೋ ಅವರು ದೇಹೀ ಅಭಿಮಾನಿಗಳಾಗುವ ಪರಿಶ್ರಮ ಪಡಲು ಸಾಧ್ಯ. ಅವರು ಶೀತಲರಾಗಿರುತ್ತಾರೆ, ಯಾರೊಂದಿಗೂ ಸಹ ಹೆಚ್ಚು ಮಾತನಾಡುವುದಿಲ್ಲ, ಅವರಿಗೆ ತಂದೆಯ ಜೊತೆ ಪ್ರೀತಿಯಿರುತ್ತದೆ, ನಡತೆಯು ಬಹಳ ಘನತೆಯಿಂದ ಕೂಡಿರುತ್ತದೆ, ನಮಗೆ ಭಗವಂತ ಓದಿಸುತ್ತಿದ್ದಾರೆಂಬ ನಶೆಯಿರುತ್ತದೆ. ನಾವು ಅವರ ಮಕ್ಕಳಾಗಿದ್ದೇವೆ, ಅವರು ಸದಾ ಸುಖದಾಯಿಯಾಗಿರುತ್ತಾರೆ. ಪ್ರತಿಯೊಂದು ಹೆಜ್ಜೆಯನ್ನೂ ಶ್ರೀಮತದಂತೆಯೇ ಇಡುತ್ತಾರೆ.

ಓಂ ಶಾಂತಿ.
ಮಕ್ಕಳು ಸೇವೆಯ ಸಮಾಚಾರವನ್ನೂ ಸಹ ಕೇಳಬೇಕು ನಂತರ ಮುಖ್ಯ-ಮುಖ್ಯವಾದ ಯಾವ ಮಹಾರಥಿ ಸೇವಾಧಾರಿಗಳಿದ್ದಾರೆ ಅವರಿಂದ ಸಲಹೆಯನ್ನು ಪಡೆಯಬೇಕಾಗಿದೆ. ತಂದೆಗೆ ತಿಳಿದಿದೆ. ಸೇವಾಧಾರಿ ಮಕ್ಕಳಿಗೇ ವಿಚಾರ ಸಾಗರ ಮಂಥನ ನಡೆಯುತ್ತದೆ, ಮೇಳ ಅಥವಾ ಪ್ರದರ್ಶನಿಗಳ ಉದ್ಘಾಟನೆಯನ್ನು ಯಾರಿಂದ ಮಾಡಿಸುವುದು! ಯಾವ-ಯಾವ ಜ್ಞಾನಯುಕ್ತ ಮಾತಿನಿಂದ ತಿಳಿಸಬೇಕು ಎಂಬುದು ವಿಚಾರ ಸಾಗರ ಮಂಥನ ನಡೆಯುತ್ತದೆ. ಶಂಕರಾಚಾರ್ಯ ಮುಂತಾದವರು ಒಂದುವೇಳೆ ನಿಮ್ಮ ಮಾತುಗಳನ್ನು ತಿಳಿದಿದ್ದೇ ಆದರೆ ನಿಮ್ಮ ಜ್ಞಾನವು ಬಹಳ ಶ್ರೇಷ್ಠವಾದುದು ಎಂದು ಹೇಳುತ್ತಾರೆ. ಇವರಿಗೆ ಓದಿಸುವಂತಹವರು ಯಾರೋ ಬುದ್ಧಿವಂತರಿರಬಹುದು ಎಂದು ತಿಳಿದುಕೊಳ್ಳುತ್ತಾರೆ. ಭಗವಂತನೇ ಓದಿಸುತ್ತಾರೆ ಎಂಬುದನ್ನು ಅವರು ಒಪ್ಪುವುದಿಲ್ಲ ಅಂದಾಗ ಪ್ರದರ್ಶನಿ ಮುಂತಾದುದರ ಉದ್ಘಾಟನೆ ಮಾಡಲು ಯಾರು ಬರುತ್ತಾರೆಯೋ ಅವರಿಗೆ ಏನೇನು ತಿಳಿಸಿಕೊಡಬೇಕು ಎಂಬ ಸಮಾಚಾರವನ್ನು ಎಲ್ಲರಿಗೂ ತಿಳಿಸಬೇಕು ಅಥವಾ ಟೇಪ್ ರೆಕಾರ್ಡ್ನಲ್ಲಿ ಚಿಕ್ಕದಾಗಿ ರೆಕಾರ್ಡ್ ಮಾಡಬೇಕಾಗಿದೆ. ಹೇಗೆ ಗಂಗೆ(ದಾದಿ)ಯವರು ಶಂಕರಾಚಾರ್ಯರಿಗೆ ತಿಳಿಸಿಕೊಟ್ಟರು, ಇಂತಹ ಸೇವಾಧಾರಿ ಮಕ್ಕಳು ತಂದೆಯ ಹೃದಯವನ್ನೇರುತ್ತಾರೆ. ಇದು ಸ್ಥೂಲ ಸೇವೆಯಾಗಿದೆ, ಆದರೆ ಯಾರು ಅನೇಕರ ಕಲ್ಯಾಣ ಮಾಡುತ್ತಾರೆ, ತಂದೆಯ ಗಮನ ಅವರ ಆತ್ಮೀಯ ಸೇವೆಯ ಕಡೆ ಹೋಗುತ್ತದೆ. ಭಲೆ ಪ್ರತಿಯೊಂದು ಮಾತಿನ ಕಲ್ಯಾಣವಿದೆ, ಒಂದುವೇಳೆ ಯೋಗಯುಕ್ತರಾಗಿ ಮಾಡಿದ್ದೇ ಆದರೆ ಬ್ರಹ್ಮಾಭೋಜನ ಮಾಡುವುದರಲ್ಲಿಯೂ ಕಲ್ಯಾಣವಿದೆ. ಇಂತಹ ಯೋಗಯುಕ್ತ ಭೋಜನ ಮಾಡುವವರಿರಬೇಕು ಭಂಡಾರದಲ್ಲಿ ಬಹಳ ಶಾಂತಿಯಿರಬೇಕು. ನೆನಪಿನ ಯಾತ್ರೆಯಲ್ಲಿರಬೇಕು. ಯಾರೇ ಬರುತ್ತಾರೆಂದರೆ ಅವರಿಗೆ ತಿಳಿಸಿಕೊಡಿ. ಸೇವಾಧಾರಿ ಮಕ್ಕಳು ಯಾರು ಬೇರೆಯವರಿಗೆ ತಿಳಿಸಿಕೊಡಲು ಸಾಧ್ಯವಿದೆ ಅಂತಹವರನ್ನೇ ಸೇವೆಯಲ್ಲಿ ಕರೆಯುತ್ತಿರುತ್ತಾರೆ. ಸೇವೆಯನ್ನು ಮಾಡುವಂತಹವರೇ ತಂದೆಯ ಹೃದಯವನ್ನೇರಲು ಸಾಧ್ಯವಿದೆ. ತಂದೆಯ ಗಮನವೆಲ್ಲಾ ಸೇವಾಧಾರಿ ಮಕ್ಕಳ ಕಡೆಯೇ ಇರುತ್ತದೆ. ಕೆಲವರಾದರೂ ಸಮ್ಮುಖದಲ್ಲಿ ಮುರುಳಿಯನ್ನು ಕೇಳುತ್ತಿದ್ದರೂ ಸಹ ಏನನ್ನೂ ತಿಳಿದುಕೊಳ್ಳುವುದಿಲ್ಲ, ಧಾರಣೆಯಾಗುವುದಿಲ್ಲ ಏಕೆಂದರೆ ಅರ್ಧಕಲ್ಪದ ದೇಹಾಭಿಮಾನದ ಖಾಯಿಲೆಯು ಬಹಳ ಕಠಿಣವಾಗಿದೆ. ಅದನ್ನು ಸಮಾಪ್ತಿ ಮಾಡಲು ಬಹಳ ಕೆಲವರೇ ಚೆನ್ನಾಗಿ ಪುರುಷಾರ್ಥ ಮಾಡುತ್ತಾರೆ. ಅನೇಕರು ಆತ್ಮಾಭಿಮಾನಿಗಳಾಗುವ ಪರಿಶ್ರಮವನ್ನೇ ಪಡುವುದಿಲ್ಲ. ಮಕ್ಕಳೇ, ಆತ್ಮಾಭಿಮಾನಿಯಾಗುವುದು ಬಹಳ ಪರಿಶ್ರಮವಿದೆ ಎಂದು ತಂದೆಯು ತಿಳಿಸುತ್ತಾರೆ. ಭಲೆ ಕೆಲವರು ದಿನಚರಿಯನ್ನೂ ಸಹ ಕಳುಹಿಸಿಕೊಡುತ್ತಾರೆ ಆದರೆ ಪೂರ್ಣವಾಗಿರುವುದಿಲ್ಲ ಆದರೂ ಸಹ ಸ್ವಲ್ಪ ಗಮನವಿರುತ್ತದೆ. ಆತ್ಮಾಭಿಮಾನಿಗಳಾಗುವ ಗಮನ ಅನೇಕರಲ್ಲಿ ಕಡಿಮೆಯಿರುತ್ತದೆ. ಆತ್ಮಾಭಿಮಾನಿಗಳು ಬಹಳ ಶೀತಲರಾಗಿರುತ್ತಾರೆ, ಅವರು ಹೆಚ್ಚು ಮಾತನಾಡುವುದಿಲ್ಲ. ಅವರಿಗೆ ತಂದೆಯ ಮೇಲೆ ಎಷ್ಟು ಪ್ರೀತಿಯಿರುತ್ತದೆಯೆಂದರೆ ಕೇಳಲೇಬೇಡಿ. ಆತ್ಮನಿಗೆ ಎಷ್ಟು ಖುಷಿಯಾಗಬೇಕೆಂದರೆ ಯಾವುದೇ ಮನುಷ್ಯನಿಗೆ ಎಂದೂ ಅಷ್ಟು ಖುಷಿ ಆಗಿರಬಾರದು. ಈ ಲಕ್ಷ್ಮೀ-ನಾರಾಯಣರಿಗೆ ಜ್ಞಾನವೇ ಇಲ್ಲ, ಯಾರಿಗೆ ಭಗವಂತ ಓದಿಸುತ್ತಾರೆಯೋ ಆ ಜ್ಞಾನವು ನೀವು ಮಕ್ಕಳಲ್ಲಿಯೇ ಇದೆ. ಭಗವಂತನು ನಮಗೆ ಓದಿಸುತ್ತಿದ್ದಾರೆಂಬ ನಶೆಯೂ ಸಹ ನಿಮ್ಮಲ್ಲಿ ಒಬ್ಬರು, ಇಬ್ಬರಿಗೆ ಇರುತ್ತದೆ. ಈ ನಶೆಯಿರುತ್ತದೆಯೆಂದರೆ ತಂದೆಯ ನೆನಪಿರುವುದು. ಅಂತಹರನ್ನು ಆತ್ಮಾಭಿಮಾನಿಗಳೆಂದು ಕರೆಯಲಾಗುತ್ತದೆ ಆದರೆ ಈ ನಶೆಯು ಇರುವುದೇ ಇಲ್ಲ. ನೆನಪಿನಲ್ಲಿರುವವರ ನಡತೆಯು ಬಹಳ ಚೆನ್ನಾಗಿ ಘನತೆಯಿಂದಿರುತ್ತದೆ. ನಾವು ಭಗವಂತನ ಮಕ್ಕಳಾಗಿದ್ದೇವೆಂಬ ನಶೆಯಿರುತ್ತದೆ ಆದ್ದರಿಂದ ಅತೀಂದ್ರಿಯ ಸುಖವನ್ನು ಗೋಪ-ಗೋಪಿಯರಲ್ಲಿ ಕೇಳಿ ಎಂಬ ಗಾಯನವಿದೆ. ಯಾರು ಆತ್ಮಾಭಿಮಾನಿಗಳಾಗಿ ತಂದೆಯನ್ನು ನೆನಪು ಮಾಡುತ್ತಾರೆ. ನೆನಪು ಮಾಡಲಿಲ್ಲವೆಂದರೆ ತಂದೆಯ ಹೃದಯವನ್ನೇರಲು ಸಾಧ್ಯವಿಲ್ಲ. ಶಿವ ತಂದೆಯ ಹೃದಯವನ್ನೇರಲಿಲ್ಲವೆಂದರೆ ದಾದಾರವರ ಹೃದಯವನ್ನೂ ಸಹ ಏರಲು ಸಾಧ್ಯವಿಲ್ಲ. ಅವರ ಹೃದಯದಲ್ಲಿದ್ದಿದ್ದೇ ಆದರೆ ಅವಶ್ಯವಾಗಿ ಇವರ (ಬ್ರಹ್ಮಾ) ಹೃದಯದಲ್ಲಿಯೂ ಸಹ ಇರುತ್ತೀರಿ. ತಂದೆಯು ಪ್ರತಿಯೊಬ್ಬರನ್ನೂ ತಿಳಿದುಕೊಂಡಿದ್ದಾರೆ. ನಾವು ಏನು ಸೇವೆಯನ್ನು ಮಾಡುತ್ತೇವೆ ಎಂದು ಮಕ್ಕಳು ಸ್ವಯಂ ತಿಳಿದುಕೊಂಡಿದ್ದಾರೆ. ಸೇವೆ ಮಾಡುವಂತಹ ಉತ್ಸಾಹವು ಮಕ್ಕಳಲ್ಲಿ ಬಹಳ ಇರಬೇಕು. ಕೆಲವರಿಗೆ ಸೇವಾಕೇಂದ್ರಗಳನ್ನು ತೆರೆಯಬೇಕೆಂಬ ಉತ್ಸಾಹವಿರುತ್ತದೆ. ಕೆಲವರಿಗೆ ಚಿತ್ರವನ್ನು ಮಾಡಿಸಬೇಕು ಎಂಬ ಉತ್ಸಾಹವಿರುತ್ತದೆ. ನನಗೆ ಜ್ಞಾನಿ ಆತ್ಮಗಳಾದ ಮಕ್ಕಳೇ ಪ್ರಿಯರಾಗುತ್ತಾರೆಂದು ತಂದೆಯು ಹೇಳುತ್ತಾರೆ. ಯಾರು ತಂದೆಯ ನೆನಪಿನಲ್ಲಿರುತ್ತಾರೆ ಅವರು ಸೇವೆಯನ್ನೂ ಮಾಡಲು ತವಕ ಪಡುತ್ತಿರುತ್ತಾರೆ. ಕೆಲವರಾದರೂ ಪೂರ್ಣವಾಗಿ ಏನೂ ಸೇವೆಯನ್ನೇ ಮಾಡುವುದಿಲ್ಲ. ತಂದೆಯು ಹೇಳುವುದನ್ನೂ ಸಹ ಒಪ್ಪುವುದಿಲ್ಲ. ಎಲ್ಲಿ ಯಾರ ಸೇವೆಯನ್ನು ಮಾಡಬೇಕು ಎಂಬುದನ್ನು ತಂದೆಯು ತಿಳಿಸಿದ್ದಾರೆ. ಆದರೆ ದೇಹಾಭಿಮಾನದ ಕಾರಣ ತನ್ನ ಮತದಂತೆ ನಡೆದಿದ್ದೇ ಆದರೆ ಅವರು ಹೃದಯವನ್ನೇರಲು ಸಾಧ್ಯವಿಲ್ಲ. ಅಜ್ಞಾನ ಕಾಲದಲ್ಲಿಯೂ ಸಹ ಯಾರ ಮಗನಾದರೂ ಕೆಟ್ಟ ನಡತೆಯಿರುವವನಾದರೆ ತಂದೆಯ ಹೃದಯವನ್ನೇರುವುದಿಲ್ಲ. ಅವನನ್ನು ಕುಪುತ್ರನೆಂದು ತಿಳಿಯುತ್ತಾರೆ. ಸಂಗದೋಷದಲ್ಲಿ ಕೆಟ್ಟು ಹೋಗಿ ಬಿಡುತ್ತಾರೆ. ಇಲ್ಲಿಯೂ ಸಹ ಯಾರು ಸೇವೆ ಮಾಡುತ್ತಾರೆ ಅವರೇ ತಂದೆಗೆ ಪ್ರಿಯರಾಗುತ್ತಾರೆ. ಯಾರು ಸೇವೆಯನ್ನು ಮಾಡುವುದಿಲ್ಲವೋ ಅವರನ್ನು ತಂದೆಯು ಪ್ರೀತಿ ಮಾಡುತ್ತಾರೇನು! ಅದೃಷ್ಟದನುಸಾರವೇ ಓದುತ್ತಾರೆ, ಮತ್ತೆ ಪ್ರೀತಿಯು ಯಾರ ಮೇಲಿರುತ್ತದೆ? ಒಳ್ಳೆಯ ಮಕ್ಕಳನ್ನು ಬಹಳ ಪ್ರೀತಿಯಿಂದ ಕರೆಯುತ್ತಾರೆ. ನೀವು ಬಹಳ ಸುಖದಾಯಿಯಾಗಿದ್ದೀರಿ, ನೀವು ಪಿತಾಸ್ನೇಹಿಗಳಾಗಿದ್ದೀರಿ ಎಂದು ಹೇಳುತ್ತಾರೆ. ಯಾರು ತಂದೆಯನ್ನು ನೆನಪೇ ಮಾಡುವುದಿಲ್ಲವೋ ಅವರಿಗೆ ಪಿತಾಸ್ನೇಹಿಗಳೆಂದು ಹೇಳುತ್ತಾರೇನು! ದಾದಾರವರ ಸ್ನೇಹಿಗಳಾಗಬಾರದು, ತಂದೆಗೆ ಸ್ನೇಹಿಗಳಾಗಬೇಕು. ಯಾರು ತಂದೆಯ ಸ್ನೇಹಿಗಳಾಗಿರುತ್ತಾರೆ ಅವರ ಮಾತು, ನಡತೆ ಬಹಳ ಸುಂದರವಾಗಿರುತ್ತದೆ. ಭಲೆ ಸಮಯವಿರಬಹುದು ಆದರೆ ಶರೀರದ ಮೇಲೆ ಯಾವುದೇ ಭರವಸೆಯಿದೆಯೇನು ಎಂದು ವಿವೇಕ ಹೇಳುತ್ತದೆ. ಕುಳಿತು-ಕುಳಿತಿದ್ದಂತೆಯೇ ಅಪಘಾತವಾಗುತ್ತದೆ. ಕೆಲವರಿಗೆ ಹೃದಯಾಘಾತವಾಗುತ್ತದೆ. ಕೆಲವರಿಗೆ ರೋಗ ಬರುತ್ತದೆ, ಮೃತ್ಯುವಂತೂ ಇದ್ದಕ್ಕಿದ್ದಂತೆಯೇ ಬರುತ್ತದೆಯಲ್ಲವೆ. ಆದ್ದರಿಂದ ಶ್ವಾಸದ ಮೇಲೆ ಭರವಸೆಯಿಲ್ಲ. ಪ್ರಾಕೃತಿಕ ವಿಕೋಪಗಳದ್ದೂ ಸಹ ಈಗ ಅಭ್ಯಾಸ ನಡೆಯುತ್ತಿದೆ. ಅಕಾಲದಲ್ಲಿ ಮಳೆಯಾಗುವುದರಿಂದಲೂ ಸಹ ಹಾನಿಯಾಗುತ್ತದೆ, ಈ ಪ್ರಪಂಚವೇ ದುಃಖವನ್ನು ಕೊಡುವಂತಹದಾಗಿದೆ. ತಂದೆಯೂ ಸಹ ಈ ಪ್ರಪಂಚದಲ್ಲಿ ಯಾವಾಗ ಮಹಾನ್ ದುಃಖವಿರುತ್ತದೆ, ರಕ್ತದ ನದಿಯು ಹರಿಯುತ್ತದೆ ಆ ಸಮಯದಲ್ಲಿಯೇ ಬರುತ್ತಾರೆ. ಅಂದಾಗ ತಾವು ಪುರುಷಾರ್ಥವನ್ನು ಮಾಡಿ 21 ಜನ್ಮದ ಕಲ್ಯಾಣವನ್ನು ಮಾಡಿಕೊಳ್ಳಬೇಕು ಎಂಬ ಪ್ರಯತ್ನ ಪಡಬೇಕು. ಅನೇಕರಿಗೆ ತಮ್ಮ ಕಲ್ಯಾಣವನ್ನು ಮಾಡಿಕೊಳ್ಳುವಂತಹ ಚಿಂತೆಯೇ ಕಂಡುಬರುವುದಿಲ್ಲ.

ತಂದೆಯು ಇಲ್ಲಿ ಕುಳಿತು ಮುರುಳಿಯನ್ನು ನುಡಿಸುತ್ತಿದ್ದರೂ ಸಹ ಬುದ್ಧಿಯು ಸೇವಾಧಾರಿ ಮಕ್ಕಳ ಕಡೆ ಇರುತ್ತದೆ. ಈಗ ಶಂಕರಾಚಾರ್ಯರನ್ನು ಪ್ರದರ್ಶನಿಯಲ್ಲಿ ಕರೆಯಲಾಗಿದೆ. ಇಲ್ಲವೆಂದರೆ ಆ ಜನರು ಎಲ್ಲಿಯೂ ಹೋಗುವುದಿಲ್ಲ, ಬಹಳ ಅಭಿಮಾನವಿರುತ್ತದೆ ಅಂದಾಗ ಅವರಿಗೆ ಮಾನ್ಯತೆಯನ್ನೂ ಸಹ ಕೊಡಬೇಕಾಗಿದೆ. ಸಿಂಹಾಸನದ ಮೇಲೆ ಕುಳ್ಳರಿಸಬೇಕಾಗುತ್ತದೆ. ಜೊತೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಅವರಿಗೆ ಬಹಳ ಗೌರವವನ್ನು ಕೊಡಬೇಕು. ನಿರ್ಮಾಣರಾಗಿದ್ದೇ ಆದರೆ ಅವರು ಬೆಳ್ಳಿಯ ಸಿಂಹಾಸನವನ್ನು ಬಿಟ್ಟು ಬಿಡಬೇಕು. ತಂದೆಯನ್ನು ನೋಡಿ, ಹೇಗೆ ಸಾಧಾರಣವಾಗಿರುತ್ತಾರೆ! ಇವರನ್ನು ಯಾರೂ ತಿಳಿದುಕೊಂಡಿಲ್ಲ. ನೀವು ಮಕ್ಕಳಲ್ಲಿಯೂ ಸಹ ಕೆಲವರೇ ತಿಳಿದುಕೊಂಡಿದ್ದೀರಿ. ತಂದೆಯು ಎಷ್ಟೊಂದು ನಿರಹಂಕಾರಿಯಾಗಿದ್ದಾರೆ. ಇದು ತಂದೆ ಮತ್ತು ಮಕ್ಕಳ ಸಂಬಂಧವಲ್ಲವೆ. ಹೇಗೆ ಲೌಕಿಕ ತಂದೆಯು ಮಕ್ಕಳೊಂದಿಗೆ ಇರುತ್ತಾರೆ, ತಿನ್ನುತ್ತಾ-ಕುಡಿಯುತ್ತಾರೆ. ಇವರು ಬೇಹದ್ದಿನ ತಂದೆಯಾಗಿದ್ದಾರೆ. ಸನ್ಯಾಸಿ ಮುಂತಾದವರಿಗೆ ತಂದೆಯ ಪ್ರೀತಿಯು ಸಿಗುವುದಿಲ್ಲ. ನೀವು ಮಕ್ಕಳು ಕಲ್ಪ-ಕಲ್ಪವೂ ನಮಗೆ ಬೇಹದ್ದಿನ ತಂದೆಯಿಂದ ಪ್ರೀತಿ ಸಿಗುತ್ತದೆ ಎಂಬುದನ್ನು ತಿಳಿದಿದ್ದೀರಿ. ತಂದೆಯು ಸುಂದರ ಹೂವನ್ನಾಗಿ ಮಾಡಲು ಬಹಳ ಪರಿಶ್ರಮ ಪಡುತ್ತಾರೆ, ಆದರೆ ಡ್ರಾಮಾನುಸಾರ ಎಲ್ಲರೂ ಸುಂದರರಾಗುವುದಿಲ್ಲ. ಈ ದಿನ ಬಹಳ ಒಳ್ಳೊಳ್ಳೆಯವರೂ ನಾಳೆಯ ದಿನ ವಿಕಾರಿಗಳಾಗಿ ಬಿಡುತ್ತಾರೆ. ಅದೃಷ್ಟದಲ್ಲಿಲ್ಲವೆಂದರೆ ಏನು ತಾನೇ ಮಾಡಲು ಸಾಧ್ಯ! ಎಂದು ತಂದೆಯು ಹೇಳುತ್ತಾರೆ. ಅನೇಕರದು ಕೊಳಕು ನಡವಳಿಕೆಯಾಗಿರುತ್ತದೆ, ಆಜ್ಞೆಯನ್ನು ಉಲ್ಲಂಘಿಸುತ್ತಾರೆ. ಈಶ್ವರನ ಮತದಂತೆ ನಡೆಯಲಿಲ್ಲವೆಂದರೆ ಅವರ ಗತಿಯೇನಾಗುವುದು! ಶ್ರೇಷ್ಠಾತಿ ಶ್ರೇಷ್ಠ ತಂದೆಯಾಗಿದ್ದಾರೆ ಮತ್ತ್ಯಾರೂ ಇಲ್ಲ. ದೇವತಾ ಚಿತ್ರಗಳಲ್ಲಿ ನೋಡಿದ್ದೇ ಆದರೆ ಲಕ್ಷ್ಮೀ-ನಾರಾಯಣರು ಶ್ರೇಷ್ಠರಾಗಿದ್ದಾರೆ. ಇದನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ಆದರೆ ಮನುಷ್ಯರು ಇವರನ್ನು ಇಂತಹ ಶ್ರೇಷ್ಠರನ್ನಾಗಿ ಯಾರು ಮಾಡಿದರು ಎಂಬುದನ್ನು ತಿಳಿದುಕೊಂಡಿಲ್ಲ. ತಂದೆಯು ನೀವು ಮಕ್ಕಳಿಗೆ ರಚಯಿತ ಮತ್ತು ರಚನೆಯ ಜ್ಞಾನವನ್ನು ಚೆನ್ನಾಗಿ ತಿಳಿಸುತ್ತಾರೆ. ನಿಮಗೆ ತಮ್ಮ ಶಾಂತಿಧಾಮ, ಸುಖಧಾಮದ ನೆನಪು ಬರುತ್ತದೆ. ಸರ್ವೀಸ್ ಮಾಡುವಂತಹವರ ಹೆಸರು ಸ್ಮೃತಿಯಲ್ಲಿ ಬರುತ್ತದೆ, ಯಾರು ಆಜ್ಞಾಕಾರಿ ಮಕ್ಕಳಿರುತ್ತಾರೆಯೋ ಅವರ ಕಡೆಯೇ ತಂದೆಯ ಮನಸ್ಸು ಹೋಗುತ್ತಿರುತ್ತದೆ. ಬೇಹದ್ದಿನ ತಂದೆಯು ಒಂದೇ ಸಾರಿ ಬರುತ್ತಾರೆ. ಆ ಲೌಕಿಕ ತಂದೆಯಾದರೂ ಜನ್ಮ-ಜನ್ಮಾಂತರ ಸಿಗುತ್ತಾರೆ, ಸತ್ಯಯುಗದಲ್ಲಿಯೂ ಸಹ ಸಿಗುತ್ತಾರೆ. ಆದರೆ ಈ ತಂದೆಯು ಅಲ್ಲಿ ಸಿಗುವುದಿಲ್ಲ. ಈಗಿನ ವಿದ್ಯೆಯಿಂದ ನೀವು ಪದವಿಯನ್ನು ಪಡೆಯುತ್ತೀರಿ. ತಂದೆಯಿಂದ ನಾವು ಹೊಸ ಪ್ರಪಂಚಕ್ಕಾಗಿ ಓದುತ್ತಿದ್ದೇವೆಂಬುದನ್ನು ಮಕ್ಕಳು ತಿಳಿದುಕೊಂಡಿದ್ದೀರಿ. ಇದು ಬುದ್ಧಿಯಲ್ಲಿ ನೆನಪಿರಬೇಕು, ಇದು ಬಹಳ ಸಹಜವಾದದ್ದಾಗಿದೆ. ತಿಳಿಯಿರಿ ಬಾಬಾ ಆಟವಾಡುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ಯಾರಾದರೂ ಬಂದರೆ ತಂದೆಯು ತಕ್ಷಣ ಅಲ್ಲಿಯೇ ಅವರಿಗೆ ಜ್ಞಾನವನ್ನು ಕೊಡಲು ಪ್ರಾರಂಭ ಮಾಡುತ್ತಾರೆ. ಬೇಹದ್ದಿನ ತಂದೆಯನ್ನು ತಿಳಿದಿದ್ದೀರಾ? ತಂದೆಯು ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡಲು ಬಂದಿದ್ದಾರೆ. ರಾಜಯೋಗವನ್ನೂ ಕಲಿಸುತ್ತಾರೆ. ಭಾರತವಾಸಿಗಳಿಗೆ ಕಲಿಸಬೇಕಾಗಿದೆ. ಭಾರತವೇ ಸ್ವರ್ಗವಾಗಿತ್ತು, ಎಲ್ಲಿ ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಈಗಾದರೂ ನರಕವಿದೆ, ನರಕದಿಂದ ಮತ್ತೆ ಸ್ವರ್ಗವನ್ನಾಗಿ ತಂದೆಯೇ ಮಾಡುತ್ತಾರೆ. ಇಂತಹ ಮುಖ್ಯವಾದ ಮಾತುಗಳನ್ನು ನೆನಪು ಮಾಡಿಕೊಂಡು ಯಾರಾದರೂ ಬಂದರೆ ಕುಳಿತು ಅವರಿಗೆ ತಿಳಿಸಿಕೊಡಿ. ಆಗ ಎಷ್ಟೊಂದು ಸಂತೋಷ ಪಡುತ್ತಾರೆ. ತಂದೆಯು ಬಂದಿದ್ದಾರೆ ಎಂದು ಹೇಳಿ. ಇದು ಅದೇ ಮಹಾಭಾರತ ಯುದ್ಧವಾಗಿದೆ, ಯಾವುದು ಗೀತೆಯಲ್ಲಿ ಬರೆಯಲ್ಪಟ್ಟಿದೆ. ಗೀತೆಯ ಭಗವಂತನು ಬಂದಿದ್ದರು, ಗೀತೆಯನ್ನು ನುಡಿಸಿದ್ದರು, ಏತಕ್ಕಾಗಿ? ಮನುಷ್ಯರನ್ನು ದೇವತೆಯನ್ನಾಗಿ ಮಾಡಲು. ನನ್ನನ್ನು ನೆನಪು ಮಾಡಿ ಮತ್ತು ಆಸ್ತಿಯನ್ನು ನೆನಪು ಮಾಡಿ ಎಂದು ತಂದೆಯು ಹೇಳುತ್ತಾರೆ. ಇದು ದುಃಖಧಾಮವಾಗಿದೆ, ಇಷ್ಟು ಬುದ್ಧಯಲ್ಲಿದ್ದರೂ ಸಾಕು ಖುಷಿಯಾಗಿರುತ್ತೀರಿ. ನಾನಾತ್ಮ ತಂದೆಯ ಜೊತೆ ಶಾಂತಿಧಾಮಕ್ಕೆ ಹೋಗುವವನಿದ್ದೇನೆ ನಂತರ ಅಲ್ಲಿಂದ ಪಾತ್ರವನ್ನಭಿನಯಿಸಲು ಬರುತ್ತೇನೆ. ಮೊದಲು ಸುಖಧಾಮದಲ್ಲಿ ಬರುತ್ತೇನೆ. ಹೇಗೆ ಕಾಲೇಜಿನಲ್ಲಿ ಓದುತ್ತಾರೆಂದರೆ ನಾವು ಇದನ್ನು ಓದುತ್ತಿದ್ದೇವೆ, ಇದರಿಂದ ಇಂತಹವರಾಗುತ್ತೇವೆ ಎಂಬುದು ತಿಳಿದಿರುತ್ತದೆ. ಬ್ಯಾರಿಸ್ಟರ್ ಆಗುತ್ತೇವೆ ಅಥವಾ ಪೋಲಿಸ್ ಸೂಪರಿಂಟೆಂಡೆಂಟ್ ಆಗುತ್ತೇವೆ, ಇಷ್ಟೊಂದು ಹಣವನ್ನು ಸಂಪಾದನೆ ಮಾಡುತ್ತೇವೆಂದು ಅಪಾರ ಖುಷಿ ಇರುತ್ತದೆ. ನೀವು ಮಕ್ಕಳಿಗೂ ಸಹ ಈ ಖುಷಿಯಿರಬೇಕು. ನಾವು ಬೇಹದ್ದಿನ ತಂದೆಯಿಂದ ಈ ಆಸ್ತಿಯನ್ನು ಪಡೆಯುತ್ತೇವೆ ನಂತರ ಸ್ವರ್ಗದಲ್ಲಿ ನಮ್ಮ ಮಹಲನ್ನು ಮಾಡುತ್ತೇವೆ. ಇಡೀ ದಿನ ಬುದ್ಧಿಯಲ್ಲಿ ಇದೇ ಚಿಂತನೆ ಇದ್ದಿದ್ದೇ ಆದರೆ ಖುಷಿಯಾಗುತ್ತದೆ. ತನ್ನ ಮತ್ತು ಅನ್ಯರದೂ ಸಹ ಕಲ್ಯಾಣವನ್ನು ಮಾಡಬೇಕು. ಯಾವ ಮಕ್ಕಳ ಬಳಿ ಜ್ಞಾನ ಧನವಿದೆ ಅದನ್ನು ದಾನ ಮಾಡುವುದು ಅವರ ಕರ್ತವ್ಯವಾಗಿದೆ. ಒಂದುವೇಳೆ ಧನವಿದೆ, ದಾನ ಮಾಡಲಿಲ್ಲವೆಂದರೆ ಅವರನ್ನು ಜಿಪುಣರೆಂದು ಹೇಳಲಾಗುತ್ತದೆ. ಅವರ ಬಳಿ ಹಣವಿದ್ದರೂ ಸಹ ಇಲ್ಲದವರಂತೆ. ಧನವಿದೆಯೆಂದರೆ ಅವಶ್ಯವಾಗಿ ದಾನ ಮಾಡಿ. ಒಳ್ಳೊಳ್ಳೆಯ ಮಹಾರಥಿ ಮಕ್ಕಳು ಯಾರಿದ್ದಾರೆ ಅವರು ಸದಾಕಾಲ ತಂದೆಯ ಹೃದಯವನ್ನೇರಿರುತ್ತಾರೆ. ಇವರು ಹಾಳಾಗಿ ಬಿಡುತ್ತಾರೆ ಎಂಬುದು ಕೆಲವರಿಗೆ ವಿಚಾರವಿರುತ್ತದೆ. ಸಂದರ್ಭಗಳೂ ಅದೇ ರೀತಿಯಿರುತ್ತದೆ, ದೇಹದ ಅಹಂಕಾರ ಬಹಳ ಏರಿರುತ್ತದೆ. ಯಾವುದೇ ಸಮಯದಲ್ಲಿಯೂ ತಂದೆಯ ಕೈಯನ್ನು ಬಿಟ್ಟು ಹೋಗಿ ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಭಲೆ ಮುರುಳಿಯನ್ನು ಬಹಳ ಚೆನ್ನಾಗಿ ನುಡಿಸುತ್ತಾರೆ ಆದರೆ ದೇಹಾಭಿಮಾನವು ಬಹಳ ಇರುತ್ತದೆ. ಸ್ವಲ್ಪವೇನಾದರೂ ತಂದೆಯು ಎಚ್ಚರಿಕೆ ಕೊಡುತ್ತಾರೆಂದರೆ ತಕ್ಷಣವೇ ಬಿಟ್ಟು ಹೋಗುತ್ತಾರೆ. ಪ್ರೀತಿಯನ್ನು ಮಾಡು ಅಥವಾ ತಿರಸ್ಕರಿಸು....... ಎಂಬ ಗಾಯನವಿದೆಯಲ್ಲವೆ. ಇಲ್ಲಿ ತಂದೆಯು ಸರಿಯಾದ ಮಾತನ್ನು ಹೇಳಿದರೂ ಸಹ ಕೋಪ ಬರುತ್ತದೆ. ಇಂತಿಂತಹ ಮಕ್ಕಳೂ ಸಹ ಇದ್ದಾರೆ. ಕೆಲವರು ಆಂತರ್ಯದಿಂದ ಬಹಳ ಧನ್ಯವಾದಗಳನ್ನು ತಿಳಿಸುತ್ತಾರೆ, ಕೆಲವರು ಆಂತರಿಕವಾಗಿ ಕಿಚ್ಚಿನಿಂದ ಸಾಯುತ್ತಾರೆ. ಮಾಯೆಯ ದೇಹಾಭಿಮಾನವು ಬಹಳ ಇದೆ. ಕೆಲವರು ಇಂತಹ ಮಕ್ಕಳಿದ್ದಾರೆ ಮುರುಳಿಯನ್ನು ಕೇಳುವುದೇ ಇಲ್ಲ, ಇನ್ನೂ ಕೆಲವರಿಗೆ ಮುರುಳಿಯಿಲ್ಲದೇ ಇರಲು ಸಾಧ್ಯವಿಲ್ಲ. ಮುರುಳಿಯನ್ನು ಓದಲಿಲ್ಲವೆಂದರೆ ತಮ್ಮದೇ ಆದ ಹಠವಿರುತ್ತದೆ, ನಮ್ಮಲ್ಲಿಯೇ ಬಹಳಷ್ಟು ಜ್ಞಾನವಿದೆ ಎಂದು ಹೇಳುತ್ತಾರೆ ಆದರೆ ಏನೇನೂ ಇಲ್ಲ.

ಅಂದಾಗ ಎಲ್ಲಿ ಶಂಕರಾಚಾರ್ಯರು ಮುಂತಾದವರು ಪ್ರದರ್ಶನಿಯಲ್ಲಿ ಬರುತ್ತಾರೆಂದರೆ ಸೇವೆಯು ಚೆನ್ನಾಗಿ ಆಗುತ್ತಾ ಹೋಗುತ್ತದೆ, ಅದರ ಸಮಾಚಾರವು ಎಲ್ಲರಿಗೂ ಕಳುಹಿಸಿ ಕೊಡಬೇಕು. ಹೇಗೆ ಸರ್ವೀಸ್ ಆಯಿತೆಂದು ಎಲ್ಲರಿಗೂ ತಿಳಿದು ಬರಲಿ ಆಗ ಅವರೂ ಸಹ ಕಲಿತುಕೊಳ್ಳುತ್ತಾರೆ. ಈ ರೀತಿಯ ಸೇವೆಯನ್ನು ಮಾಡುವ ವಿಚಾರಗಳು ಯಾರಲ್ಲಿ ಬರುತ್ತದೆಯೋ ಅವರಿಗೆ ಬಾಬಾ ಸರ್ವೀಸೇಬಲ್ ಮಕ್ಕಳೆಂದು ತಿಳಿಯುತ್ತಾರೆ. ಸೇವೆಯಲ್ಲಿ ಎಂದೂ ಸಹ ಸುಸ್ತಾಗಬಾರದು. ಇದರಿಂದ ಅನೇಕರ ಕಲ್ಯಾಣ ಮಾಡಬೇಕಾಗಿದೆ. ಎಲ್ಲರಿಗೂ ಈ ಜ್ಞಾನ ಸಿಗಲಿ ಎಂಬುದು ತಂದೆಗೆ ಚಿಂತೆಯಿರುತ್ತದೆ. ಮಕ್ಕಳದೂ ಸಹ ಉನ್ನತಿಯಾಗಲಿ, ಈ ಆತ್ಮಿಕ ಸೇವೆಯು ಮುಖ್ಯವಾದುದೆಂದು ನಿತ್ಯವೂ ಮುರುಳಿಯಲ್ಲಿ ತಿಳಿಸಿಕೊಡುತ್ತಿರುತ್ತಾರೆ. ಕೇಳುವುದು ಮತ್ತು ಹೇಳುವುದು - ಈ ಉತ್ಸುಕತೆಯಿರಬೇಕು. ಬ್ಯಾಡ್ಜ್ನ್ನು ತೆಗೆದುಕೊಂಡು ನಿತ್ಯವೂ ಮಂದಿರದಲ್ಲಿ ಹೋಗಿ ತಿಳಿಸಿಕೊಡಿ. ಲಕ್ಷ್ಮೀ-ನಾರಾಯಣರು ಹೇಗೆ ಆದರು? ನಂತರ ಎಲ್ಲಿಗೆ ಹೋದರು, ಹೇಗೆ ರಾಜ್ಯಭಾಗ್ಯವನ್ನು ಪಡೆದರು? ಮಂದಿರದ ಬಾಗಿಲಲ್ಲಿ ಹೋಗಿ ಕುಳಿತುಕೊಳ್ಳಿ, ಯಾರೇ ಬರುತ್ತಾರೆಂದರೆ ತಿಳಿಸಿ, ಈ ಲಕ್ಷ್ಮೀ -ನಾರಾಯಣರು ಯಾರಾಗಿದ್ದಾರೆ, ಯಾವಾಗ ಭಾರತದಲ್ಲಿ ಇವರ ರಾಜ್ಯವಿತ್ತು? ಹನುಮಂತನೂ ಸಹ ಪಾದರಕ್ಷೆಗಳ ಬಳಿ ಕುಳಿತುಕೊಳ್ಳುತ್ತಿದ್ದನಲ್ಲವೆ. ಇದರದೂ ಸಹ ರಹಸ್ಯವಿದೆಯಲ್ಲವೆ. ಕನಿಕರ ಬರುತ್ತದೆ, ತಂದೆಯಂತೂ ಸೇವೆಯನ್ನು ಮಾಡುವ ಯುಕ್ತಿಗಳನ್ನು ಬಹಳಷ್ಟು ತಿಳಿಸಿಕೊಡುತ್ತಾರೆ ಆದರೆ ಜಾರಿಯಲ್ಲಿ ಎಲ್ಲೋ ಕೆಲವರು ತರುತ್ತಾರೆ. ಸೇವೆಯು ಬಹಳಷ್ಟಿದೆ, ಅಂಧರಿಗೆ ಊರುಗೋಲಾಗಬೇಕು. ಯಾರು ಸರ್ವೀಸನ್ನು ಮಾಡುವುದಿಲ್ಲ, ಬುದ್ಧಿಯು ಸ್ವಚ್ಛವಾಗಿರುವುದಿಲ್ಲವೆಂದರೆ ನಂತರ ಧಾರಣೆಯೂ ಆಗುವುದಿಲ್ಲ. ಇಲ್ಲವೆಂದರೆ ಸೇವೆಯು ಬಹಳ ಸಹಜವಾಗಿದೆ. ನೀವು ಜ್ಞಾನರತ್ನಗಳ ದಾನವನ್ನು ಮಾಡುತ್ತೀರಿ, ಕೆಲವರು ಸಾಹುಕಾರರು ಬರುತ್ತಾರೆಂದರೆ ಅವರಿಗೆ ನಾವು ಉಡುಗೊರೆಯನ್ನು ಕೊಡುತ್ತೇವೆಂದು ಹೇಳಿ, ಇದರ ಅರ್ಥವನ್ನೂ ಸಹ ತಂದೆಯು ತಿಳಿಸಿಕೊಡುತ್ತಾರೆ. ಈ ಬ್ಯಾಡ್ಜ್ನ ಬಗ್ಗೆ ತಂದೆಗೆ ಬಹಳ ಗೌರವವಿದೆ, ಮತ್ತ್ಯಾರಿಗೂ ಸಹ ಇಷ್ಟೊಂದು ಗೌರವವಿಲ್ಲ. ಇದರಲ್ಲಿ ಬಹಳ ಒಳ್ಳೆಯ ಜ್ಞಾನವು ತುಂಬಲ್ಪಟ್ಟಿದೆ ಆದರೆ ಯಾರದಾದರೂ ಅದೃಷ್ಟದಲ್ಲಿಲ್ಲವೆಂದರೆ ತಂದೆಯೂ ಸಹ ಏನು ಮಾಡಲು ಸಾಧ್ಯ! ತಂದೆಯನ್ನು ಮತ್ತು ವಿದ್ಯೆಯನ್ನು ಬಿಡುವುದು, ಇದು ಅತಿ ದೊಡ್ಡದಾದ ಸ್ವಯಂಘಾತವಾಗಿದೆ. ತಂದೆಯವರಾಗಿ ನಂತರ ವಿಚ್ಛೇದನವನ್ನು ಕೊಡುವುದು ಇಂತಹ ಮಹಾನ್ ಪಾಪವು ಮತ್ತ್ಯಾವುದೂ ಇಲ್ಲ. ಅವರಂತಹ ಮೂರ್ಖರು ಬೇರೆ ಯಾರೂ ಇಲ್ಲ. ಮಕ್ಕಳು ಶ್ರೀಮತದಂತೆ ನಡೆಯಬೇಕಲ್ಲವೆ. ನಾವು ವಿಶ್ವದ ಮಾಲೀಕರಾಗುವಂತಹವರು ಎಂಬುದು ನಿಮ್ಮ ಬುದ್ಧಿಯಲ್ಲಿರಲಿ. ಇದು ಕಡಿಮೆ ಮಾತೇನು! ನೆನಪು ಮಾಡುತ್ತೀರೆಂದರೆ ಆನಂದವೂ ಸಹ ಆಗುತ್ತದೆ. ನೆನಪು ಇಲ್ಲದೇ ಇರುವುದರಿಂದ ಪಾಪವು ಭಸ್ಮವಾಗುವುದಿಲ್ಲ. ದತ್ತುವಾಗಿದ್ದೀರೆಂದರೆ ಅಪಾರವಾದ ಖುಷಿಯಿರಬೇಕು ಆದರೆ ಮಾಯೆಯು ಬಹಳ ವಿಘ್ನವನ್ನು ಹಾಕುತ್ತದೆ, ಮಕ್ಕಳನ್ನು ಬೀಳಿಸಿ ಬಿಡುತ್ತದೆ. ತಂದೆಯ ಶ್ರೀಮತವನ್ನು ತೆಗೆದುಕೊಳ್ಳುವುದಿಲ್ಲವೆಂದರೆ ಅವರು ಏನು ಪದವಿಯನ್ನು ಪಡೆಯುತ್ತಾರೆ! ಈ ಬೇಹದ್ದಿನ ರಾಜಧಾನಿಯು ಸ್ಥಾಪನೆಯಾಗುತ್ತಾ ಇದೆ, ಇದರಲ್ಲಿ ಖರ್ಚಿನ ಯಾವುದೇ ಮಾತಿಲ್ಲ. ಕುಮಾರಿಯರು ಬರುತ್ತಾರೆ, ಕಲಿತುಕೊಂಡು ಅನೇಕರನ್ನು ತನ್ನ ಸಮಾನ ಮಾಡಿಕೊಳ್ಳುತ್ತಾರೆ. ಇದರಲ್ಲಿ ಯಾವುದೇ ಪ್ರಕಾರದ ಶುಲ್ಕದ ಮಾತಿಲ್ಲ. ನಿಮಗೆ ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುತ್ತೇನೆಂದು ತಂದೆಯು ಹೇಳುತ್ತಾರೆ. ನಾನು ಸ್ವರ್ಗದಲ್ಲಿ ಬರುವುದಿಲ್ಲ, ಶಿವ ತಂದೆಯಂತೂ ದಾತನಾಗಿದ್ದಾರಲ್ಲವೆ. ಅವರಿಗೆ ಯಾವ ಶುಲ್ಕವನ್ನು ಕೊಡುತ್ತೀರಿ! ಬ್ರಹ್ಮಾರವರು ಎಲ್ಲವನ್ನೂ ತಂದೆಗೆ ಕೊಟ್ಟು ಬಿಟ್ಟು ವಾರಸುಧಾರನನ್ನಾಗಿ ಮಾಡಿಕೊಂಡರು. ಅದಕ್ಕೆ ಪ್ರತಿಯಾಗಿ ರಾಜ್ಯಭಾಗ್ಯವು ಸಿಗುತ್ತದೆ ನೋಡಿ. ಇದು ಮೊಟ್ಟ ಮೊದಲನೆಯ ಉದಾಹರಣೆಯಾಗಿದೆ. ಇಡೀ ವಿಶ್ವದಲ್ಲಿ ಸ್ವರ್ಗದ ಸ್ಥಾಪನೆಯಾಗುತ್ತದೆ, ಬಿಡುಗಾಸಿನ ಖರ್ಚೇ ಇಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಪಿತಾಸ್ನೇಹಿಗಳಾಗಲು ಬಹಳ-ಬಹಳ ಸುಖವನ್ನು ನೀಡುವವರಾಗಬೇಕು. ತಮ್ಮ ಮಾತು, ನಡತೆ ಬಹಳ ಮಧುರ, ಘನತೆಯಿಂದ ಕೂಡಿರಬೇಕು. ಸೇವಾಧಾರಿಗಳಾಗಬೇಕು. ನಿರಹಂಕಾರಿಯಾಗಿ ಸೇವೆಯನ್ನು ಮಾಡಬೇಕು.

2. ಓದು ಮತ್ತು ತಂದೆಯನ್ನು ಬಿಟ್ಟು ಎಂದೂ ಆತ್ಮಘಾತಿ ಮಹಾಪಾಪಿಗಳಾಗಬಾರದು. ಆತ್ಮೀಯ ಸೇವೆಯು ಮುಖ್ಯವಾದುದಾಗಿದೆ. ಈ ಸೇವೆಯಲ್ಲಿ ಎಂದೂ ಸುಸ್ತಾಗಬಾರದು. ಜ್ಞಾನರತ್ನಗಳ ದಾನವನ್ನು ಮಾಡಬೇಕು. ಜಿಪುಣರಾಗಬಾರದು.

ವರದಾನ:
ನಾನು ಮತ್ತು ನನ್ನದು ಎನ್ನುವುದನ್ನು ಬಲಿ ಕೊಡುವಂತಹ ಸಂಪೂರ್ಣ ಮಹಾಬಲಿ ಭವ.

ಹದ್ದಿನ ಯಾವುದೇ ವ್ಯಕ್ತಿ ಅಥವಾ ವೈಭವದ ಜೊತೆ ಸೆಳೆತ - ಇದೇ ನನ್ನದು ಎನ್ನುವುದಾಗಿದೆ. ಈ ನನ್ನತನಕ್ಕೆ ಮತ್ತು ನಾನು ಮಾಡುತ್ತೇನೆ, ನಾನು ಮಾಡಿದೆ..... ಈ ನಾನು ಎನ್ನುವುದನ್ನು ಸಂಪೂರ್ಣ ಸಮರ್ಪಣೆ ಮಾಡುವಂತಹವರು ಅರ್ಥಾತ್ ಬಲಿಯಾಗುವವರೇ ಮಹಾಬಲಿಯಾಗಿದ್ದಾರೆ. ಯಾವಾಗ ಹದ್ಧಿನ ನಾನು, ನನ್ನದು ಎನ್ನುವುದು ಸಮರ್ಪಣೆ ಆಗುತ್ತದೆ ಆಗ ಸಂಪೂರ್ಣ ಹಾಗೂ ತಂದೆ ಸಮಾನ ಆಗುವಿರಿ. ನಾನು ಮಾಡುತ್ತಿದ್ದೇನೆ, ಇಲ್ಲಾ, ಬಾಬಾ ಮಾಡಿಸುತ್ತಿದ್ದಾರೆ, ಬಾಬಾ ನಡೆಸುತ್ತಿದ್ದಾರೆ. ಯಾವುದೇ ಮಾತಿನಲ್ಲಿ ನಾನು ಎನ್ನುವ ಬದಲು ಸದಾ ಸ್ವಾಭಾವಿಕ ಭಾಷೆಯಲ್ಲಿಯೂ ಸಹ ಬಾಬಾ ಎನ್ನುವ ಶಬ್ಧವೇ ಬರಲಿ, ನಾನು ಎನ್ನುವ ಶಬ್ಧ ಅಲ್ಲ.

ಸ್ಲೋಗನ್:
ಸಂಕಲ್ಪಗಳಲ್ಲಿ ಇಂತಹ ಧೃಡತೆ ಧಾರಣೆ ಮಾಡಿ ಯಾವುದರಿಂದ ಯೋಚಿಸುವುದು ಮತ್ತು ಮಾಡುವುದು ಸಮಾನವಾಗಿ ಬಿಡಬೇಕು.