24.11.19    Avyakt Bapdada     Kannada Murli     12.03.85     Om Shanti     Madhuban


"ಸತ್ಯತೆಯ ಶಕ್ತಿ"


ಇಂದು ಸತ್ಯ ತಂದೆ, ಸತ್ಯ ಶಿಕ್ಷಕ, ಸದ್ಗುರುವು ತನ್ನ ಸತ್ಯತೆಯ ಶಕ್ತಿ ಸ್ವರೂಪ ಮಕ್ಕಳನ್ನು ನೋಡುತ್ತಿದ್ದಾರೆ. ಸತ್ಯ ಜ್ಞಾನ ಅಥವಾ ಸತ್ಯತೆಯ ಶಕ್ತಿಯು ಎಷ್ಟು ಮಹಾನ್ ಆಗಿದೆ, ಅದರ ಅನುಭವಿ ಆತ್ಮರಾಗಿದ್ದೀರಿ. ದೂರ ದೇಶವಾಸಿಯಾದ ಎಲ್ಲಾ ಮಕ್ಕಳ ಭಿನ್ನ ಧರ್ಮ, ಭಿನ್ನ ಮಾನ್ಯತೆಗಳು, ಭಿನ್ನ ರೀತಿ ಪದ್ಧತಿಯಲ್ಲಿರುತ್ತಿದ್ದರೂ, ಈ ಈಶ್ವರೀಯ ವಿಶ್ವ ವಿದ್ಯಾಲಯದ ಕಡೆ ಅಥವಾ ರಾಜಯೋಗದ ಕಡೆಗೆ ಆಕರ್ಷಣೆಯಾದಿರಿ - ಏಕೆ? ಸತ್ಯ ತಂದೆಯ ಸತ್ಯ ಪರಿಚಯ ಸಿಕ್ಕಿತು ಅರ್ಥಾತ್ ಸತ್ಯ ಜ್ಞಾನ ಸಿಕ್ಕಿತು, ಸತ್ಯ ಪರಿವಾರ ಸಿಕ್ಕಿತು, ಸತ್ಯ ಸ್ನೇಹ ಸಿಕ್ಕಿತು, ಸತ್ಯ ಪ್ರಾಪ್ತಿಯ ಅನುಭವವಾಯಿತು. ಆದ್ದರಿಂದ ಸತ್ಯತೆಯ ಶಕ್ತಿಯ ಹಿಂದೆ ಆಕರ್ಷಿತರಾದಿರಿ. ಜೀವನವಿತ್ತು, ಪ್ರಾಪ್ತಿಯೂ ಆಗಿತ್ತು, ಯಥಾಶಕ್ತಿ ಜ್ಞಾನವೂ ಇತ್ತು. ಆದರೆ ಸತ್ಯ ಜ್ಞಾನವಿರಲಿಲ್ಲ, ಆದ್ದರಿಂದ ಸತ್ಯತೆಯ ಶಕ್ತಿಯು ಸತ್ಯ ತಂದೆಯವರನ್ನಾಗಿ ಮಾಡಿ ಬಿಟ್ಟಿತು.

ಸತ್ಯ ಶಬ್ಧದ ಎರಡು ಅರ್ಥಗಳಿವೆ - ಸತ್ಯ ಸತ್ಯತೆಯೂ ಆಗಿದೆ ಮತ್ತು ಸತ್ಯ ಎಂದರೆ ಅವಿನಾಶಿಯೂ ಆಗಿದೆ. ಅಂದಮೇಲೆ ಸತ್ಯತೆಯ ಶಕ್ತಿಯು ಅವಿನಾಶಿಯೂ ಆಗಿದೆ. ಆದ್ದರಿಂದ ಅವಿನಾಶಿ ಪ್ರಾಪ್ತಿ, ಅವಿನಾಶಿ ಸಂಬಂಧ, ಅವಿನಾಶಿ ಸ್ನೇಹ, ಅವಿನಾಶಿ ಪರಿವಾರವಿದೆ. ಇದೇ ಪರಿವಾರವು 21 ಜನ್ಮಗಳು ಭಿನ್ನ-ಭಿನ್ನ ನಾಮ-ರೂಪದಿಂದ ಸಿಗುತ್ತಿರುತ್ತದೆ, ತಿಳಿದಿರುವುದಿಲ್ಲ. ಈಗ ತಿಳಿದಿದ್ದೀರಿ - ನಾವೂ ಸಹ ಭಿನ್ನ ಸಂಬಂಧದಿಂದ ಪರಿವಾರದಲ್ಲಿ ಬರುತ್ತಿರುತ್ತೇವೆ. ಈ ಅವಿನಾಶಿ ಪ್ರಾಪ್ತಿಯು, ಪರಿಚಯವು ದೂರದೇಶದಲ್ಲಿದ್ದರೂ ಸಹ ತನ್ನ ಸತ್ಯ ಪರಿವಾರ, ಸತ್ಯ ತಂದೆ, ಸತ್ಯ ಜ್ಞಾನದ ಕಡೆಗೆ ಸೆಳೆದು ಬಿಟ್ಟಿತು. ಎಲ್ಲಿ ಸತ್ಯತೆಯೂ ಇದೆ ಮತ್ತು ಅವಿನಾಶಿಯೂ ಆಗಿದೆ, ಇದೇ ಪರಮಾತ್ಮನ ಪರಿಚಯವಾಗಿದೆ. ಅಂದಮೇಲೆ ಹೇಗೆ ತಾವೆಲ್ಲರೂ ಇದೇ ವಿಶೇಷತೆಯ ಆಧಾರದ ಮೇಲೆ ಆಕರ್ಷಿತರಾದಿರಿ, ಹಾಗೆಯೇ ಸತ್ಯತೆಯ ಶಕ್ತಿಯನ್ನು ಸತ್ಯ ಜ್ಞಾನವನ್ನು ವಿಶ್ವದಲ್ಲಿ ಪ್ರತ್ಯಕ್ಷಗೊಳಿಸಬೇಕು. 50 ವರ್ಷ ಧರಣಿಯನ್ನು ತಯಾರು ಮಾಡಲಾಯಿತು, ಸ್ನೇಹದಲ್ಲಿ ತಂದಿತು, ಸಂಪರ್ಕದಲ್ಲಿ ತಂದಿತು. ರಾಜಯೋಗದ ಆಕರ್ಷಣೆಯಲ್ಲಿ ತಂದಿತು, ಶಾಂತಿಯ ಅನುಭವದಿಂದ ಆಕರ್ಷಣೆಯಲ್ಲಿ ತಂದಿತು. ಈಗ ಇನ್ನೇನು ಉಳಿದುಕೊಂಡಿದೆ? ಹೇಗೆ ಪರಮಾತ್ಮನು ಒಬ್ಬರಾಗಿದ್ದಾರೆ, ಇದು ಎಲ್ಲಾ ಭಿನ್ನ-ಭಿನ್ನ ಧರ್ಮದವರ ಮಾನ್ಯತೆಯಾಗಿದೆ. ಹಾಗೆಯೇ ಯಥಾರ್ಥ ಸತ್ಯ ಜ್ಞಾನವು ಒಬ್ಬರೇ ತಂದೆಯದಾಗಿದೆ ಅಥವಾ ಒಂದೇ ಮಾರ್ಗವಾಗಿದೆ, ಈ ಧ್ವನಿಯು ಎಲ್ಲಿಯವರೆಗೆ ಮೊಳಗುವುದಿಲ್ಲ ಅಲ್ಲಿಯವರೆಗೆ ಆತ್ಮರ ಅನೇಕ ಚಿಕ್ಕ ಆಶ್ರಯಗಳ ಕಡೆ ಅಲೆದಾಡುವುದು ಬಂದ್ ಆಗುವುದಿಲ್ಲ. ಈಗ ಇದನ್ನೇ ತಿಳಿಯುತ್ತಾರೆ - ಇದೂ ಸಹ ಒಂದು ಮಾರ್ಗವಾಗಿದೆ. ಒಳ್ಳೆಯ ಮಾರ್ಗವಾಗಿದೆ, ಆದರೆ ಕೊನೆಗೂ ಒಬ್ಬ ತಂದೆಯ ಒಂದೇ ಪರಿಚಯ, ಒಂದೇ ಮಾರ್ಗವಾಗಿದೆ. ಅನೇಕತೆಯ ಈ ಭ್ರಾಂತಿಯು ಸಮಾಪ್ತಿಯಾಗುವುದೇ ವಿಶ್ವ ಶಾಂತಿಗೆ ಆಧಾರವಾಗಿದೆ. ಎಲ್ಲಿಯವರೆಗೆ ಈ ಸತ್ಯತೆಯ ಪರಿಚಯದ ಅಥವಾ ಸತ್ಯ ಜ್ಞಾನದ ಶಕ್ತಿಯ ಪ್ರಕಂಪನಗಳು ನಾಲ್ಕೂ ಕಡೆಯಲ್ಲಿ ಹರಡುವುದಿಲ್ಲವೋ, ಅಲ್ಲಿಯವರೆಗೆ ಪ್ರತ್ಯಕ್ಷತೆಯ ಧ್ವಜದ ಕೆಳಗೆ ಸರ್ವ ಆತ್ಮರ ಆಶ್ರಯವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಅಂದಾಗ ಗೋಲ್ಡನ್ ಜುಬಿಲಿಯಲ್ಲಿ, ಯಾವಾಗ ತಂದೆಯ ಮನೆಯಲ್ಲಿ ವಿಶೇಷ ನಿಮಂತ್ರಣವನ್ನುಕೊಟ್ಟು ಕರೆಯುತ್ತೀರಿ, ತಮ್ಮ ಸ್ಟೇಜ್ ಆಗಿದೆ, ಶ್ರೇಷ್ಠವಾದ ವಾತಾವರಣವಿದೆ, ಸ್ವಚ್ಚ ಬುದ್ಧಿಯ ಪ್ರಭಾವವಿದೆ. ಸ್ನೇಹದ ಧರಣಿಯಿದೆ, ಪವಿತ್ರ ಪಾಲನೆಯಿದೆ, ಇಂತಹ ವಾಯುಮಂಡಲದಲ್ಲಿ ತಮ್ಮ ಸತ್ಯ ಜ್ಞಾನವನ್ನು ಪ್ರಸಿದ್ಧ ಮಾಡುವುದೇ ಪ್ರತ್ಯಕ್ಷತೆಯ ಆರಂಭವಾಗುತ್ತದೆ. ನೆನಪಿದೆ - ಯಾವಾಗ ಪ್ರದರ್ಶನಿಯ ಮೂಲಕ ಸೇವೆಯ ವಿಹಂಗ ಸೇವೆಯ ಆರಂಭವಾಯಿತು, ಆಗ ಏನು ಮಾಡುತ್ತಿದ್ದಿರಿ? ಮುಖ್ಯವಾಗಿ ಜ್ಞಾನದ ಪ್ರಶ್ನೆಗಳ ಫಾರ್ಮ್ನ್ನು ತುಂಬಿಸುತ್ತಿದ್ದಿರಿ ಅಲ್ಲವೆ. ಪರಮಾತ್ಮನು ಸರ್ವವ್ಯಾಪಿಯೋ ಅಥವಾ ಅಲ್ಲವೋ? ಗೀತೆಯ ಭಗವಂತನು ಯಾರು? ಈ ಫಾರ್ಮ್ನ್ನು ತುಂಬಿಸುತ್ತಿದ್ದಿರಲ್ಲವೆ. ಅಭಿಪ್ರಾಯವನ್ನು ಬರೆಸುತ್ತಿದ್ದಿರಲ್ಲವೆ. ಒಗಟನ್ನು ಕೇಳುತ್ತಿದ್ದಿರಿ. ಹಾಗಾದರೆ ಮೊದಲು ಇದನ್ನು ಆರಂಭಗೊಳಿಸಿದಿರಿ ಆದರೆ ಸಾಗುತ್ತಾ-ಸಾಗುತ್ತಾ ಈ ಮಾತುಗಳನ್ನು ಗುಪ್ತ ರೂಪದಲ್ಲಿ ಕೊಡುತ್ತಾ, ಸಂಪರ್ಕ ಸ್ನೆಹವನ್ನು ಮುಂದಿಡುತ್ತಾ ಸಮೀಪಕ್ಕೆ ತಂದಿರಿ. ಈ ಬಾರಿ ಯಾವಾಗ ಈ ಧರಣಿಯಲ್ಲಿ ಬರುತ್ತಾರೆಂದರೆ, ಸತ್ಯ ಪರಿಚಯ ಸ್ಪಷ್ಟ ಪರಿಚಯ ಕೊಡಿ. ಇದೂ ಸಹ ಚೆನ್ನಾಗಿದೆ, ಇದಂತು ಖುಷಿ ಪಡಿಸುವ ಮಾತಾಗಿದೆ. ಆದರೆ ಒಬ್ಬರೇ ತಂದೆಯ ಒಂದು ಯಥಾರ್ಥ ಪರಿಚಯವು ಸ್ಪಷ್ಟವಾಗಿ ಬುದ್ಧಿಯಲ್ಲಿ ಬಂದು ಬಿಡಲಿ, ಈ ಸಮಯವನ್ನೂ ಈಗ ತರಬೇಕಾಗಿದೆ. ಕೇವಲ ಸೀದಾ ಹೇಳುತ್ತಿರುತ್ತೀರಿ - ತಂದೆಯು ಈ ಜ್ಞಾನವನ್ನು ಕೊಡುತ್ತಿದ್ದಾರೆ, ತಂದೆಯು ಬಂದಿದ್ದಾರೆ ಆದರೆ ಅವರು ಒಪ್ಪಿಕೊಂಡು ಹೋಗುತ್ತಾರೆ - ಇದೇ ಪರಮಾತ್ಮನ ಜ್ಞಾನವೇ? ಪರಮಾತ್ಮನ ಕರ್ತವ್ಯವು ನಡೆಯುತ್ತಿದೆಯೇ? ಜ್ಞಾನದ ನವೀನತೆಯ ಈ ಅನುಭವ ಮಾಡುತ್ತಾರೆಯೇ? ಇಂತಹ ವರ್ಕ್ಶಾಪ್ ಎಂದಾದರೂ ಇಟ್ಟಿದ್ದೀರಾ? ಅದರಲ್ಲಿ ಪರಮಾತ್ಮ ಸರ್ವವ್ಯಾಪಿಯೇ ಅಥವಾ ಅಲ್ಲವೇ, ಒಂದೇ ಸಮಯದಲ್ಲಿ ಬರುತ್ತಾರೆಯೇ ಅಥವಾ ಮತ್ತೆ-ಮತ್ತೆ ಬರುತ್ತಾರೆಯೇ? ಹೀಗೆ ಅವರಿಗೆ ಸ್ಪಷ್ಟ ಪರಿಚಯವು ಸಿಕ್ಕಿ ಬಿಡಲಿ, ಅದರಿಂದ ತಿಳಿಯಲಿ - ಪ್ರಪಂಚದಲ್ಲಿ ಏನನ್ನು ಕೇಳಿರಲಿಲ್ಲ, ಅದನ್ನು ಇಲ್ಲಿ ಕೇಳಿದೆವು. ಅಂತಹ ವಿಶೇಷ ಸ್ಪೀಕರ್ ಆಗಿ ಯಾರು ಬರುತ್ತಾರೆ, ಅವರೊಂದಿಗೆ ಈ ಜ್ಞಾನದ ರಹಸ್ಯಗಳ ಆತ್ಮಿಕ ವಾರ್ತಾಲಾಪ ಮಾಡುವುದರಿಂದ, ಅವರ ಬುದ್ಧಿಯಲ್ಲಿ ಬರುತ್ತದೆ. ಜೊತೆ ಜೊತೆಗೆ ಭಾಷಣವನ್ನೂ ಮಾಡುತ್ತೀರಿ, ಅದರಲ್ಲಿಯೂ ತನ್ನ ಪರಿವರ್ತನೆಯ ಅನುಭವವನ್ನು ತಿಳಿಸುತ್ತಾ, ಒಬ್ಬೊಬ್ಬ ಸ್ಪೀಕರ್, ಒಂದೊಂದು ಹೊಸ ಜ್ಞಾನದ ಮಾತುಗಳನ್ನು ಸ್ಪಷ್ಟ ಮಾಡಿ ಬಿಡಬಹುದು. ಹಾಗೆಯೇ ಟಾಪಿಕ್ನ್ನು ಸೀದಾ ಇಡಬೇಡಿ- ಹೇಗೆಂದರೆ, ಪರಮಾತ್ಮನು ಸರ್ವವ್ಯಾಪಿಯಲ್ಲ. ಆದರೆ ಒಬ್ಬ ತಂದೆಯನ್ನು ಒಂದು ರೂಪದಿಂದ ತಿಳಿಯುವುದರಿಂದ ಯಾವ-ಯಾವ ವಿಶೇಷ ಪ್ರಾಪ್ತಿಯಾಯಿತು, ಆ ಪ್ರಾಪ್ತಿಗಳನ್ನು ತಿಳಿಸುತ್ತಾ ಸರ್ವ ವ್ಯಾಪಿಯ ಮಾತುಗಳನ್ನು ಸ್ಪಷ್ಟ ಮಾಡಬಲ್ಲಿರಿ. ಒಬ್ಬರು ಪರಮಧಾಮ ನಿವಾಸಿಯೆಂದು ತಿಳಿದು ನೆನಪು ಮಾಡುವುದರಿಂದ ಬುದ್ಧಿಯು ಹೇಗೆ ಏಕಾಗ್ರವಾಗಿ ಬಿಡುತ್ತದೆ ಅಥವಾ ತಂದೆಯ ಸಂಬಂಧದಿಂದ ಯಾವ ಪ್ರಾಪ್ತಿಗಳ ಅನುಭೂತಿಯಾಗುತ್ತದೆ. ಈ ವಿಧಿಯಿಂದ ಸತ್ಯತೆ ಮತ್ತು ನಿರ್ಮಾಣತೆಯೆರಡೂ ರೂಪದಿಂದ ಸಿದ್ಧ ಮಾಡಬಹುದು. ಅದರಿಂದ ಅಭಿಮಾನವೂ ಎನಿಸಬಾರದು - ಇವರುಗಳು ತನ್ನ ಮಹಿಮೆ ಮಾಡಿಕೊಳ್ಳುತ್ತಿದ್ದಾರೆ. ನಮ್ರತೆ ಮತ್ತು ದಯಾ ಭಾವನೆಯು ಅಭಿಮಾನದ ಅನುಭೂತಿ ಮಾಡಿಸುವುದಿಲ್ಲ. ಹೇಗೆ ಮುರುಳಿಗಳನ್ನು ಕೇಳುತ್ತಿರುವಾಗ ಯಾರೂ ಸಹ ಅದನ್ನು ಅಭಿಮಾನವೆಂದು ಹೇಳುವುದಿಲ್ಲ. ಅಥಾರಿಟಿಯಿಂದ ಹೇಳುತ್ತಾರೆ, ಇದನ್ನೇ ಹೇಳುತ್ತಾರೆ. ಭಲೆ ಶಬ್ಧಗಳೆಷ್ಟಾದರೂ ಶಕ್ತಿಯುತವಾಗಿರಲಿ ಆದರೆ ಅಭಿಮಾನವೆಂದು ಹೇಳುವುದಿಲ್ಲ! ಅಥಾರಿಟಿಯ ಅನುಭೂತಿ ಮಾಡುತ್ತಾರೆ. ಹೀಗೇಕೆ ಆಗುತ್ತದೆ? ಎಷ್ಟು ಅಥಾರಿಟಿಯಿದೆಯೋ ಅಷ್ಟೇ ನಮ್ರತೆ ಮತ್ತು ದಯಾ ಭಾವವಿದೆ. ತಂದೆಯಂತು ಹೀಗೆ ಮಕ್ಕಳ ಮುಂದೆ ಹೇಳುತ್ತಾರೆ ಆದರೆ ತಾವೆಲ್ಲರೂ ಈ ವಿಶೇಷತೆಯಿಂದ ಸ್ಟೇಜಿನ ಮೇಲೆ, ಈ ವಿಧಿಯಿಂದ ಸ್ಪಷ್ಟ ಮಾಡಬಹುದು. ಹೇಗೆ ತಿಳಿಸಿದೆವಲ್ಲವೆ, ಹಾಗೆಯೇ ಒಂದು ಸರ್ವವ್ಯಾಪಿಯ ಮಾತನ್ನು ಇಟ್ಟುಕೊಳ್ಳಿರಿ, ಇನ್ನೊಂದು ನಾಮ-ರೂಪದಿಂದ ಭಿನ್ನವಾಗಿರುವುದು ಇಟ್ಟುಕೊಳ್ಳಿರಿ, ಮೂರನೆಯದು - ಡ್ರಾಮಾ ಪಾಯಿಂಟ್ನ್ನು ಬುದ್ದಿಯಲ್ಲಿಟ್ಟುಕೊಳ್ಳಿರಿ. ಆತ್ಮದ ಹೊಸ ವಿಶೇಷತೆಗಳನ್ನು ಬುದ್ಧಿಯಲ್ಲಿ ಇಟ್ಟುಕೊಳ್ಳಿರಿ. ಏನೆಲ್ಲಾ ವಿಶೇಷ ಟಾಪಿಕ್ಸ್ ಇದೆ, ಅದನ್ನು ಲಕ್ಷ್ಯದಲ್ಲಿಟ್ಟುಕೊಂಡು ಅನುಭವ ಮತ್ತು ಪ್ರಾಪ್ತಿಯ ಆಧಾರದಿಂದ ಸ್ಪಷ್ಟಗೊಳಿಸುತ್ತಾ ಸಾಗಿರಿ, ಅದರಿಂದ ತಿಳಿಯಲಿ - ಈ ಸತ್ಯ ಜ್ಞಾನದಿಂದಲೇ ಸತ್ಯಯುಗದ ಸ್ಥಾಪನೆಯಾಗುತ್ತಿದೆ. ಭಗವಾನುವಾಚದಲ್ಲಿ ಏನು ವಿಶೇಷವಾಗಿದೆ, ಅದನ್ನು ಭಗವಂತನಲ್ಲದೆ ಮತ್ತ್ಯಾರೂ ಸಹ ತಿಳಿಸಲು ಸಾಧ್ಯವಿಲ್ಲ. ವಿಶೇಷವಾದ ಸ್ಲೋಗನ್ಗಳನ್ನು, ಯಾವುದನ್ನು ತಾವು ನೇರ ಶಬ್ಧಗಳಲ್ಲಿ ಹೇಳುತ್ತೀರಿ - ಹೇಗೆ ಮನುಷ್ಯ, ಮನುಷ್ಯನೆಂದಿಗೂ ಸಹ ಸದ್ಗುರು, ಸತ್ಯ ತಂದೆಯಾಗಲು ಸಾಧ್ಯವಿಲ್ಲ. ಮನುಷ್ಯನು ಪರಮಾತ್ಮನಾಗಲು ಸಾಧ್ಯವಿಲ್ಲ. ಇಂತಹ ವಿಶೇಷ ಪಾಯಿಂಟ್ಗಳನ್ನು ಸಮಯ-ಪ್ರತಿ ಸಮಯದಲ್ಲಿ ಕೇಳುತ್ತಾ ಬಂದಿದ್ದೀರಿ, ಅವರ ರೂಪ ರೇಖೆಯನ್ನು ತಯಾರು ಮಾಡಿರಿ, ಅದರಿಂದ ಸತ್ಯ ಜ್ಞಾನದ ಸ್ಪಷ್ಟತೆಯಾಗಲಿ. ಹೊಸ ಪ್ರಪಂಚಕ್ಕಾಗಿ ಇದು ಹೊಸ ಜ್ಞಾನವಾಗಿದೆ. ನವೀನತೆ ಮತ್ತು ಸತ್ಯತೆಯೆರಡೂ ಅನುಭವವಾಗಲಿ. ಹೇಗೆ ಸಮ್ಮೇಳನಗಳನ್ನು ಮಾಡುತ್ತೀರಿ, ಸೇವೆಯು ಬಹಳ ಚೆನ್ನಾಗಿ ನಡೆಯುತ್ತದೆ. ಸಮ್ಮೇಳನಕ್ಕಾಗಿ ಏನೆಲ್ಲಾ ಸಾಧನಗಳನ್ನು ತಯಾರು ಮಾಡುತ್ತೀರಿ, ಕೆಲವೊಮ್ಮೆ ಫಾಲೋ-ಅಪ್, ಕೆಲವೊಮ್ಮೆ ಇನ್ನೇನೋ ಮಾಡುತ್ತೀರಿ, ಸಂಪರ್ಕವನ್ನು ಮುಂದುವರೆಸುವ ಸಾಧನವನ್ನು ತಮ್ಮದಾಗಿಸಿಕೊಳ್ಳುತ್ತೀರಿ. ಈ ಸಾಧನವೂ ಚೆನ್ನಾಗಿದೆ, ಏಕೆಂದರೆ ನಂತರವೂ ಭೇಟಿಯಾಗುವುದಕ್ಕೆ ಅವಕಾಶ ಸಿಗುತ್ತದೆ. ಆದರೆ ಹೇಗೆ ಈಗ ಯಾರೆಲ್ಲರೂ ಬರುತ್ತಾರೆ, ಹೇಳುತ್ತಾರೆ - ಹೌದು, ಇದು ಬಹಳ ಒಳ್ಳೆಯ ಮಾತಾಗಿದೆ. ಯೋಜನೆಯು ಚೆನ್ನಾಗಿದೆ, ಫಾಲೋ-ಅಪ್ ಚೆನ್ನಾಗಿದೆ, ಸೇವೆಯ ಸಾಧನವೂ ಚೆನ್ನಾಗಿದೆ. ಹೀಗೆ ಇವರು ಹೇಳಿ ಹೋಗಲಿ - ಹೊಸ ಜ್ಞಾನವು ಇಂದು ಸ್ಪಷ್ಟವಾಯಿತು. ಈ ರೀತಿ ವಿಶೇಷವಾಗಿ 5-6 ಮಂದಿಯಾದರೂ ತಯಾರಾಗಿ ಬಿಟ್ಟರೆ.... ಏಕೆಂದರೆ ಎಲ್ಲರ ಮಧ್ಯದಲ್ಲಂತು ಈ ವಾರ್ತಾಲಾಪ ನಡೆಯಲು ಸಾಧ್ಯವಿಲ್ಲ. ಆದರೆ ವಿಶೇಷವಾಗಿ ಯಾರು ಬರುತ್ತಾರೆ, ಟಿಕೆಟ್ ಕೊಟ್ಟು ಕರೆದುಕೊಂಡು ಬರುತ್ತೀರಿ. ವಿಶೇಷ ಪಾಲನೆಯೂ ಸಿಗುತ್ತದೆ. ಅವರಲ್ಲಿಂದ ಯಾರು ಹೆಸರುವಾಸಿಯಾಗಿದ್ದಾರೆ, ಅವರುಗಳ ಜೊತೆ ಈ ವಾರ್ತಾಲಾಪ ಮಾಡುತ್ತಾ, ಅವಶ್ಯವಾಗಿ ಅವರ ಬುದ್ಧಿಯಲ್ಲಿ ಸ್ಪಷ್ಟವಾಗಿ ಹಾಕಬೇಕು. ಇಂತಹ ಯಾವುದಾದರೂ ಯೋಜನೆ ಮಾಡಿರಿ, ಯಾವುದರಿಂದ ಅವರಿಗೆ ಇದೆನಿಸಬಾರದು - ಇವರಿಗೆ ತಮ್ಮದೇ ಬಹಳ ನಶೆಯಿದೆ, ಆದರೆ ಸತ್ಯವೆನಿಸಲಿ. ಇದಕ್ಕೆ ಹೇಳಲಾಗುತ್ತದೆ - ಬಾಣವನ್ನು ಹೊಡೆಯಬೇಕು. ಆದರೆ ನೋವು ಆಗಬಾರದು, ಚೀರಾಡಬಾರದು. ಆದರೆ ಖುಷಿಯಲ್ಲಿ ನರ್ತಿಸಲಿ. ಭಾಷಣಗಳ ರೂಪರೇಖೆಯನ್ನೂ ಹೊಸದಾಗಿ ಮಾಡಿರಿ. ವಿಶ್ವ ಶಾಂತಿ ಭಾಷಣವಂತು ಬಹಳ ಮಾಡಿ ಬಿಟ್ಟಿರಿ. ಆದರೆ ಆಧ್ಯಾತ್ಮಿಕ ಶಕ್ತಿಯೇನಾಗಿದೆ! ಆಧ್ಯಾತ್ಮಿಕ ಜ್ಞಾನವೇನಾಗಿದೆ! ಇದರ ಮೂಲವೇನು! ಈಗ ಅಲ್ಲಿಯವರೆಗೆ ತಲುಪಿಲ್ಲ! ಅವರು ತಿಳಿಯಲಿ- ಇದು ಭಗವಂತನ ಕಾರ್ಯವು ನಡೆಯುತ್ತಿದೆ. ಈಗ ಹೇಳುತ್ತಾರೆ - ಮಾತೆಯರು ಬಹಳ ಒಳ್ಳೆಯ ಕಾರ್ಯವನ್ನು ಮಾಡುತ್ತಿದ್ದಾರೆ. ಸಮಯದನುಸಾರವಾಗಿ ಈ ಧರಣಿಯನ್ನೂ ಮಾಡಬೇಕಾಗುತ್ತದೆ, ಹೇಗೆ ಸನ್ ಶೋಸ್ ಫಾದರ್ ಇದೆಯೋ, ಹಾಗೆಯೇ ಫಾದರ್ ಶೋಸ್ ಸನ್ ಆಗುತ್ತದೆ. ಈಗ ಫಾದರ್ ಶೋಸ್ ಸನ್ ಆಗುತ್ತಿದೆ. ಅಂದಮೇಲೆ ಈ ಧ್ವನಿಯು ಪ್ರತ್ಯಕ್ಷತೆಯ ಧ್ವಜಾರೋಹಣವಾಗುತ್ತದೆ. ತಿಳಿಯಿತೆ!

ಗೋಲ್ಡನ್ ಜುಬಿಲಿಯಲ್ಲಿ ಏನು ಮಾಡಬೇಕು, ಇದು ತಿಳಿಯಿತಲ್ಲವೆ! ಅನ್ಯ ಸ್ಥಾನಗಳಲ್ಲಾದರೂ ವಾತಾವರಣವನ್ನು ನೋಡಬೇಕಾಗುತ್ತದೆ. ಆದರೆ ತಂದೆಯ ಮನೆಯಲ್ಲಿ, ತಮ್ಮ ಮನೆ ತಮ್ಮ ಸ್ಟೇಜ್ ಆಗಿದೆ ಅಂದಮೇಲೆ ಇಂತಹ ಸ್ಥಾನದಲ್ಲಿ ಈ ಪ್ರತ್ಯಕ್ಷತೆಯ ಧ್ವನಿಯು ಮೊಳಗಿಸಬಹುದು. ಹೀಗೆ ಸ್ವಲ್ಪವಾದರೂ ಈ ಮಾತಿನಲ್ಲಿ ನಿಶ್ಚಯ ಬುದ್ಧಿಯಾಗಿ ಬಿಡಲಿ, ಆಗ ಅವರೇ ಧ್ವನಿಯನ್ನು ಮೊಳಗಿಸುತ್ತಾರೆ. ಈಗ ಫಲಿತಾಂಶವೇನಿದೆ! ಸಂಪರ್ಕ ಮತ್ತು ಸ್ನೇಹದಲ್ಲಿ ಸ್ವಯಂ ತಾನೇ ಬರಲಿ, ಅವರೇ ಸೇವೆಯನ್ನು ಮಾಡುತ್ತಿದ್ದಾರೆ. ಅನ್ಯರನ್ನೂ ಸ್ನೇಹ ಮತ್ತು ಸಂಪರ್ಕದಲ್ಲಿ ತರುತ್ತಿದ್ದಾರೆ. ಸ್ವಯಂ ಎಷ್ಟಾಗುತ್ತಾರೆ, ಅಷ್ಟು ಸೇವೆಯನ್ನು ಮಾಡುತ್ತಿದ್ದಾರೆ, ಇದೂ ಸಹ ಸಫಲತೆಯೆಂದೇ ಹೇಳಲಾಗುತ್ತದೆಯಲ್ಲವೆ. ಆದರೆ ಈಗ ಇನ್ನೂ ಮುಂದುವರೆಯಿರಿ. ಹೆಸರಿಗೆ ಕಳಂಕವಾದುದರಿಂದ ಮೊಳಗಿತು, ಮುಂಚೆ ಭಯ ಪಡುತ್ತಿದ್ದರು, ಈಗ ಬರಲು ಬಯಸುತ್ತಾರೆ. ಇದಂತು ಅಂತರವಾಯಿತಲ್ಲವೆ. ಮುಂಚೆ ಹೆಸರು ಕೇಳುವುದಕ್ಕೂ ಬಯಸುತ್ತಿರಲಿಲ್ಲ, ಈಗ ಹೆಸರು ತೆಗೆದುಕೊಂಡ ಕೂಡಲೇ ಬಯಕೆಯನ್ನಿಡುತ್ತಾರೆ. ಇದೂ ಸಹ 50 ವರ್ಷಗಳಲ್ಲಿ ಸಫಲತೆಯನ್ನು ಪ್ರಾಪ್ತಿ ಮಾಡಿಕೊಂಡಿರಿ. ಧರಣಿ ತಯಾರಾಗುವುದರಲ್ಲಿಯೇ ಸಮಯ ಹಿಡಿಸುತ್ತದೆ. ಹೀಗೆ ತಿಳಿಯಬಾರದು - 50 ವರ್ಷಗಳು ಇದರಲ್ಲಿಯೇ ತೊಡಗಿತೆಂದರೆ ಮತ್ತೇನಾಗುತ್ತದೆ! ಮೊದಲು ಧರಣಿಯನ್ನು ನೇಗಿಲು ಹೂಡಿ ಯೋಗ್ಯ ಮಾಡುವುದರಲ್ಲಿ ಸಮಯ ಹಿಡಿಸುತ್ತದೆ. ಬೀಜ ಹಾಕುವುದರಲ್ಲಿ ಸಮಯ ಹಿಡಿಸುವುದಿಲ್ಲ. ಶಕ್ತಿಶಾಲಿ ಬೀಜದ ಫಲವು ಶಕ್ತಿಶಾಲಿಯಾದುದೇ ಬರುತ್ತದೆ. ಈಗಿನವರೆಗೂ ಏನಾಯಿತು, ಇದೇ ಆಗಬೇಕಾಗಿತ್ತು, ಯಥಾರ್ಥವಾದುದೇ ಆಯಿತು. ತಿಳಿಯಿತೆ!

(ವಿದೇಶಿ ಮಕ್ಕಳನ್ನು ನೋಡಿ) ಈ ಚಾತ್ರಕರು ಒಳ್ಳೆಯವರಿದ್ದಾರೆ. ಬ್ರಹ್ಮಾ ತಂದೆಯ ಬಹಳ ಸಮಯದ ಆಹ್ವಾನದ ನಂತರ ತಮಗೆ ಜನ್ಮ ಕೊಟ್ಟರು. ವಿಶೇಷ ಆಹ್ವಾನದಿಂದ ಜನ್ಮವಾಯಿತು. ಖಂಡಿತವಾಗಿ ನಿಧಾನವಾಯಿತು ಆದರೆ ಆರೋಗ್ಯವಂತ ಹಾಗೂ ಒಳ್ಳೆಯವರ ಜನ್ಮವಾಯಿತು. ತಂದೆಯ ಧ್ವನಿಯು ತಲುಪುತ್ತಿತ್ತು, ಆದರೆ ಸಮಯ ಬಂದಾಗ ಸಮೀಪದಲ್ಲಿ ತಲುಪಿ ಬಿಟ್ಟಿರಿ. ವಿಶೇಷವಾಗಿ ಬ್ರಹ್ಮ ತಂದೆಯು ಖುಷಿಯಾಗುತ್ತಾರೆ. ತಂದೆಯು ಖುಷಿಯಾಗುತ್ತಾರೆಂದರೆ ಮಕ್ಕಳೂ ಸಹ ಖುಷಿಯಾಗಿಯೇ ಆಗುತ್ತಾರೆ ಆದರೆ ವಿಶೇಷವಾಗಿ ಬ್ರಹ್ಮಾ ತಂದೆಯ ಸ್ನೇಹವಿದೆ. ಆದ್ದರಿಂದ ಮೆಜಾರಿಟಿ ಬ್ರಹ್ಮ ತಂದೆಯನ್ನು ನೋಡದೆಯೇ, ಹಾಗೆಯೇ ಅನುಭವ ಮಾಡುತ್ತೀರಿ, ಹೇಗೆಂದರೆ ಖಂಡಿತ ನೋಡಿದ್ದೇವೆ ಎನ್ನುವಂತೆ. ಭಾರತದಲ್ಲಿಯೂ ಚೈತನ್ಯತೆಯ ಅನುಭವ ಮಾಡುತ್ತೀರಿ, ಈ ವಿಶೇಷತೆಯಿದೆ. ಬ್ರಹ್ಮ ತಂದೆಯ ಸ್ನೇಹದ ವಿಶೇಷ ಸಹಯೋಗವು ತಾವಾತ್ಮರಿಗಿದೆ. ಭಾರತದವರು ಪ್ರಶ್ನೆಯನ್ನು ಮಾಡುತ್ತಾರೆ - ಬ್ರಹ್ಮ ಏಕೆ, ಇವರೇಕೆ?.... ಆದರೆ ವಿದೇಶಿ ಮಕ್ಕಳು ಬರುತ್ತಿದ್ದಂತೆಯೇ ಬ್ರಹ್ಮ ತಂದೆಯವರ ಆಕರ್ಷಣೆಯಿಂದ ಸ್ನೇಹದಲ್ಲಿ ಬಂಧಿಸಲ್ಪಟ್ಟರು. ಅಂದಾಗ ಇದು ವಿಶೇಷ ಸಹಯೋಗದ ವರದಾನವಿದೆ, ಆದ್ದರಿಂದ ನೋಡದಿದ್ದರೂ ಹೆಚ್ಚಾಗಿ ಪಾಲನೆಯ ಅನುಭವ ಮಾಡುತ್ತಿರುತ್ತೀರಿ. ಹೃದಯದಿಂದ ಹೇಳುತ್ತೀರಿ - ಬ್ರಹ್ಮಾ ಬಾಬಾ. ಅಂದಮೇಲೆ ಇದು ವಿಶೇಷ ಸೂಕ್ಷ್ಮ ಸ್ನೇಹದ ಸಂಬಂಧವಿದೆ. ಇವರು ನಮ್ಮಿಂದೆ ಹೇಗೆ ಬಂದರು! ತಂದೆಯು ಯೋಚಿಸುತ್ತಾರೆ ಎಂದಲ್ಲ. ತಾವೂ ಯೋಚಿಸುವುದಿಲ್ಲ, ಬ್ರಹ್ಮಾರವರೂ ಯೋಚಿಸುವುದಿಲ್ಲ, ಮುಂದೆಯೇ ಇದ್ದೇವೆ. ಆಕಾರ ರೂಪವೂ ಸಾಕಾರನ ಸಮಾನವಾಗಿಯೇ ಪಾಲನೆಯನ್ನು ಕೊಡುತ್ತಿದ್ದಾರೆ. ಇಂತಹ ಅನುಭವ ಮಾಡುತ್ತೀರಲ್ಲವೆ! ಸ್ವಲ್ಪ ಸಮಯದಲ್ಲಿ ಎಷ್ಟು ಒಳ್ಳೆಯ ಟೀಚರ್ಸ್ ತಯಾರಾಗಿ ಬಿಟ್ಟರು! ವಿದೇಶದ ಸೇವೆಯಲ್ಲಿ ಎಷ್ಟು ಸಮಯವಾಯಿತು? ಎಷ್ಟು ಟೀಚರ್ಸ್ ತಯಾರಾದರು? ಚೆನ್ನಾಗಿದೆ, ಬಾಪ್ದಾದಾರವರು ಮಕ್ಕಳ ಸೇವೆಯ ಲಗನ್ ನೋಡುತ್ತಿರುತ್ತಾರೆ ಏಕೆಂದರೆ ವಿಶೇಷ ಸೂಕ್ಷ್ಮ ಪಾಲನೆಯು ಸಿಗುತ್ತದೆಯಲ್ಲವೆ. ಹೇಗೆ ಬ್ರಹ್ಮಾ ತಂದೆಯ ವಿಶೇಷ ಸಂಸ್ಕಾರವನ್ನೇನು ನೋಡಿದಿರಿ! ಸೇವೆಯಿಲ್ಲದೆ ಇರಲು ಸಾಧ್ಯವಾಗುತ್ತಿತ್ತೆ? ಅಂದಮೇಲೆ ವಿದೇಶದಲ್ಲಿ ದೂರವಿರುವವರಿಗೆ ಈ ವಿಶೇಷ ಪಾಲನೆಯ ಸಹಯೋಗವಿರುವ ಕಾರಣದಿಂದ, ಸೇವೆಯ ಉಮ್ಮಂಗವು ಹೆಚ್ಚಾಗಿರುತ್ತದೆ.

ಗೋಲ್ಡನ್ ಜುಬಿಲಿಯಲ್ಲಿ ಮತ್ತೇನು ಮಾಡಿದಿರಿ? ಸ್ವಯಂ ಸಹ ಗೋಲ್ಡನ್ ಮತು ಜುಬಿಲಿಯೂ ಗೋಲ್ಡನ್. ಚೆನ್ನಾಗಿದೆ, ಬ್ಯಾಲೆನ್ಸ್ ನ ಗಮನವನ್ನು ಅವಶ್ಯವಾಗಿ ಇಡಬೇಕು. ಸ್ವಯಂ ಮತ್ತು ಸೇವೆ. ಸ್ವಯಂನ ಉನ್ನತಿ ಮತ್ತು ಸೇವೆಯ ಉನ್ನತಿ, ಬ್ಯಾಲೆನ್ಸ್ ಇಡುವುದರಿಂದ ಅನೇಕ ಆತ್ಮರಿಗೆ ಸ್ವ ಸಹಿತವಾಗಿ ಆಶೀರ್ವಾದವನ್ನು ಕೊಡಿಸಲು ನಿಮಿತ್ತರಾಗಿ ಬಿಡುತ್ತೀರಿ. ತಿಳಿಯಿತೇ! ಸೇವೆಯ ಯೋಜನೆಗಳನ್ನು ಮಾಡುತ್ತಾ, ಮೊದಲು ಸ್ವ ಸ್ಥಿತಿಯ ಗಮನವಿರಲಿ. ಆಗಲೇ ಯೋಜನೆಯಲ್ಲಿ ಶಕ್ತಿ ತುಂಬುತ್ತದೆ. ಯೋಜನೆಯಾಗಿದೆ ಬೀಜ. ಹಾಗಾದರೆ ಬೀಜದಲ್ಲೇನಾದರೂ ಶಕ್ತಿಯಿರುವುದಿಲ್ಲ, ಶಕ್ತಿಶಾಲಿ ಬೀಜವಲ್ಲವೆಂದರೆ ಎಷ್ಟೇ ಕಷ್ಟ ಪಟ್ಟರೂ ಶ್ರೇಷ್ಠ ಫಲವನ್ನು ಕೊಡುವುದಿಲ್ಲ. ಆದ್ದರಿಂದ ಯೋಜನೆಯ ಜೊತೆಗೆ ಸ್ವ ಸ್ಥಿತಿಯ ಶಕ್ತಿಯನ್ನು ಅವಶ್ಯವಾಗಿ ತುಂಬುತ್ತಿರಿ. ತಿಳಿಯಿತೆ! ಒಳ್ಳೆಯದು.

ಹೀಗೆ ಸತ್ಯತೆಯನ್ನು ಪ್ರತ್ಯಕ್ಷಗೊಳಿಸುವ, ಸದಾ ಸತ್ಯತೆ ಮತ್ತು ನಿರ್ಮಾಣತೆಯ ಬ್ಯಾಲೆನ್ಸ್ ಇಡುವಂತಹ, ಪ್ರತೀ ಮಾತಿನ ಮೂಲಕ ಒಬ್ಬ ತಂದೆಯ ಒಂದು ಪರಿಚಯವನ್ನು ಸಿದ್ಧಮಾಡುವ, ಸದಾ ಸ್ವ-ಉನ್ನತಿಯ ಮೂಲಕ ಸಫಲತೆಯನ್ನು ಪಡೆಯುವ, ಸೇವೆಯಲ್ಲಿ ತಂದೆಯ ಪ್ರತ್ಯಕ್ಷತೆಯ ಧ್ವಜಾರೋಹಣ ಮಾಡುವಂತಹ, ಇಂತಹ ಸದ್ಗುರುವಿನ, ಸತ್ಯ ತಂದೆಯ ಸತ್ಯ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ವಿದಾಯಿಯ ಸಮಯದಲ್ಲಿ ದಾದೀಜಿಯವರು ಭೋಪಾಲ್ಗೆ ಹೋಗುವುದಕ್ಕಾಗಿ ಅನುಮತಿ ತೆಗೆದುಕೊಳ್ಳುತ್ತಿದ್ದಾರೆ:-
ಹೋಗುವುದರಲ್ಲಿಯೂ ಸೇವೆಯಿದೆ, ಇರುವುದರಲ್ಲಿಯೂ ಸೇವೆಯಿದೆ. ಸೇವೆಗೆ ನಿಮಿತ್ತರಾಗಿರುವ ಮಕ್ಕಳ ಪ್ರತೀ ಸಂಕಲ್ಪದಲ್ಲಿ, ಪ್ರತೀ ಸೆಕೆಂಡಿನಲ್ಲಿ ಸೇವೆಯಿದೆ. ತಮ್ಮನ್ನು ನೋಡಿ ಎಷ್ಟು ಉಮ್ಮಂಗ-ಉತ್ಸಾಹ ಹೆಚ್ಚುತ್ತದೆಯೋ, ಅಷ್ಟೇ ತಂದೆಯನ್ನು ನೆನಪು ಮಾಡುವರು. ಸೇವೆಯಲ್ಲಿ ಮುಂದುವರೆಯುತ್ತೀರಿ ಆದ್ದರಿಂದ ಸಫಲತೆಯು ಸದಾ ಜೊತೆಯಿದ್ದೇ ಇದೆ. ತಂದೆಯನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದೀರಿ, ಸಫಲತೆಯನ್ನೂ ಜೊತೆಗೆ ತೆಗೆದುಕೊಂಡು ಹೋಗುತ್ತಿದ್ದೀರಿ. ಯಾವ ಸ್ಥಾನದಲ್ಲಿ ಹೋಗುತ್ತೀರಿ ಅಲ್ಲಿ ಸಫಲತೆಯಾಗುತ್ತದೆ. (ಮೋಹಿನಿ ಬೆಹೆನ್ರವರೊಂದಿಗೆ) ಪರಿಕ್ರಮಣ ಹಾಕುವುದಕ್ಕಾಗಿ ಹೋಗುತ್ತಿದ್ದೀರಿ. ಪರಿಕ್ರಮಣ ಹಾಕುವುದು ಅಂದರೆ ಅನೇಕ ಆತ್ಮರಿಗೆ ಸ್ವ-ಉನ್ನತಿಯ ಸಹಯೋಗವನ್ನು ಕೊಡುವುದು. ಜೊತೆ ಜೊತೆ ಯಾವಾಗ ಸ್ಟೇಜಿನ ಅವಕಾಶವು ಸಿಗುತ್ತದೆ, ಆಗ ಇಂತಹ ಹೊಸ ಭಾಷಣವನ್ನು ಮಾಡಿ ಬನ್ನಿರಿ. ಮೊದಲು ತಾವು ಪ್ರಾರಂಭ ಮಾಡಿ ಬಿಡುತ್ತೀರೆಂದರೆ ನಂಬರ್ವನ್ ಆಗಿ ಬಿಡುತ್ತೀರಿ. ಎಲ್ಲಿಯೇ ಹೋಗುತ್ತೀರೆಂದರೆ ಎಲ್ಲರೂ ಏನು ಹೇಳುವರು? ಬಾಪ್ದಾದಾರವರ ನೆನಪು-ಪ್ರೀತಿಯನ್ನು ತಂದಿದ್ದೀರಾ? ಹೇಗೆ ಬಾಪ್ದಾದಾರವರು ಸ್ನೇಹದ, ಸಹಯೋಗದ ಶಕ್ತಿಯನ್ನು ಕೊಡುತ್ತಾರೆ, ಹಾಗೆಯೇ ತಾವೂ ಸಹ ತಂದೆಯಿಂದ ತೆಗೆದುಕೊಂಡಿರುವ ಸ್ನೇಹ, ಸಹಯೋಗದ ಶಕ್ತಿಯನ್ನು ಕೊಡುತ್ತಿರಬೇಕು. ಎಲ್ಲರನ್ನೂ ಉಮ್ಮಂಗ-ಉತ್ಸಾಹದಲ್ಲಿ ಹಾರಿಸುವುದಕ್ಕಾಗಿ ಏನಾದರೊಂದು ಅಂತಹ ಮಾತುಗಳನ್ನು ಹೇಳುತ್ತಿರಬೇಕು. ಎಲ್ಲರೂ ಖುಷಿಯಲ್ಲಿ ನರ್ತಿಸುತ್ತಿರುತ್ತಾರೆ. ಆತ್ಮೀಯತೆಯ ಖುಷಿಯಲಿ ಎಲ್ಲರನ್ನೂ ನರ್ತಿಸಿರಿ ಮತ್ತು ರಮಣೀಕತೆಯಿಂದ ಎಲ್ಲರನ್ನೂ ಖುಷಿ-ಖುಷಿಯಿಂದ ಪುರುಷಾರ್ಥದಲ್ಲಿ ಮುಂದುವರೆಯುವುದನ್ನು ಕಲಿಸಿರಿ. ಒಳ್ಳೆಯದು!

ವರದಾನ:  
ಸ್ವಯಂನ ಚಕ್ರವನ್ನು ತಿಳಿದು ಜ್ಞಾನಿ ಆತ್ಮರಾಗುವ ಪ್ರಭು ಪ್ರಿಯ ಭವ.

ಈ ಸೃಷ್ಟಿಚಕ್ರದಲ್ಲಿ ಆತ್ಮದ ಏನೇನು ಪಾತ್ರವಿದೆ, ಅದನ್ನು ತಿಳಿಯುವುದು ಅರ್ಥಾತ್ ಸ್ವದರ್ಶನ ಚಕ್ರಧಾರಿ ಆಗುವುದು. ಇಡೀ ಚಕ್ರದ ಜ್ಞಾನವನ್ನು ಬುದ್ಧಿಯಲ್ಲಿಟ್ಟುಕೊಂಡು ಯಥಾರ್ಥ ರೀತಿಯಲ್ಲಿ ಧಾರಣೆ ಮಾಡುವುದೇ ಸ್ವದರ್ಶನ ಚಕ್ರವನ್ನು ತಿರುಗಿಸುವುದಾಗಿದೆ, ಸ್ವಯಂನ ಚಕ್ರವನ್ನು ತಿಳಿಯುವುದು ಅರ್ಥಾತ್ ಜ್ಞಾನಿ ಆತ್ಮರಾಗುವುದು. ಇಂತಹ ಜ್ಞಾನಿ ಆತ್ಮನೇ ಪ್ರಭು ಪ್ರಿಯರಾಗಿದ್ದಾರೆ, ಅವರ ಮುಂದೆ ಮಾಯೆಯು ನಿಲ್ಲಲು ಸಾಧ್ಯವಿಲ್ಲ. ಈ ಸ್ವದರ್ಶನ ಚಕ್ರವೇ ಭವಿಷ್ಯದಲ್ಲಿ ಚಕ್ರವರ್ತಿ ರಾಜರನ್ನಾಗಿ ಮಾಡಿ ಬಿಡುತ್ತದೆ.

ಸ್ಲೋಗನ್:
ಪ್ರತಿಯೊಂದು ಮಗುವು ತಂದೆಯ ಸಮಾನ ಪ್ರತ್ಯಕ್ಷ ಪ್ರಮಾಣವಾದರೆ, ಪ್ರಜೆಗಳು ಬಹಳ ಬೇಗನೆ ತಯಾರಾಗಿ ಬಿಡುತ್ತಾರೆ.