26.07.20    Avyakt Bapdada     Kannada Murli     27.02.86     Om Shanti     Madhuban


ಆತ್ಮಿಕ ಸೇನೆ ಕಲ್ಪಕಲ್ಪದ ವಿಜಯಿ


ಸರ್ವ ಆತ್ಮಿಕ ಶಕ್ತಿಸೇನೆ, ಪಾಂಡವ ಸೇನೆ. ಆತ್ಮಿಕ ಸೇನೆಯು ಸದಾ ವಿಜಯದ ನಿಶ್ಚಯ ಮತ್ತು ನಶೆಯಲ್ಲಿರುತ್ತೀರಲ್ಲವೆ, ಮತ್ತ್ಯಾವುದೇ ಸೇವೆಯು ಯಾವಾಗ ಯುದ್ಧಮಾಡುತ್ತದೆ, ಆಗ ವಿಜಯದ ಗ್ಯಾರಂಟಿಯಿರುವುದಿಲ್ಲ. ನಮ್ಮ ವಿಜಯವು ನಿಶ್ಚಿತವಾಗಿದೆಯೆಂದು ನಿಶ್ಚಯವಿರುವುದಿಲ್ಲ. ಆದರೆ ತಾವು ಆತ್ಮಿಕ ಸೇನೆ, ಶಕ್ತಿಸೇನೆಯು ಸದಾ ಈ ನಿಶ್ಚಯದ ನಶೆಯಲ್ಲಿರುತ್ತೀರಿ - ಕೇವಲ ಈಗಿನ ವಿಜಯವಲ್ಲ. ಆದರೆ ಕಲ್ಪ ಕಲ್ಪದ ವಿಜಯಿಯಾಗಿದ್ದೇವೆ. ತಮ್ಮ ಕಲ್ಪದ ಮೊದಲಿನ ವಿಜಯದ ಕಥೆಗಳೂ ಸಹ ಭಕ್ತಿಮಾರ್ಗದಲ್ಲಿ ಕೇಳುತ್ತಿರುತ್ತೀರಿ. ಪಾಂಡವರ ವಿಜಯದ ನೆನಪಾರ್ಥದ ಕಥೆಯನ್ನು ಈಗಲೂ ಕೇಳುತ್ತಿರುತ್ತೀರಿ. ತಮ್ಮ ವಿಜಯದ ಚಿತ್ರವನ್ನು ಈಗಲೂ ನೋಡುತ್ತಿದ್ದೀರಿ. ಭಕ್ತಿಮಾರ್ಗದಲ್ಲಿ ಕೇವಲ ಅಹಿಂಸಕನ ಬದಲು ಹಿಂಸಕನನ್ನಾಗಿ ತೋರಿಸಿದ್ದಾರೆ. ಆತ್ಮಿಕ ಸೇನೆಯನ್ನು ಶಾರೀರಿಕ, ಸಾಧಾರಣ ಸೇನೆಯನ್ನಾಗಿ ತೋರಿಸಿಬಿಟ್ಟಿದ್ದಾರೆ. ತಮ್ಮ ವಿಜಯದ ಗಾಯನದಲ್ಲಿ ಈಗಲೂ ಭಕ್ತರ ಮೂಲಕ ಕೇಳುತ್ತಾ ಹರ್ಷಿತವಾಗುತ್ತೀರಿ. ಗಾಯನವೂ ಇದೆ- ಪ್ರಭು-ಪ್ರೀತಬುದ್ಧಿ ವಿಜಯಂತಿ. ವಿಪರೀತ ಬುದ್ಧಿ ವಿನಶ್ಯಂತಿ. ಅಂದಾಗ ಕಲ್ಪದ ಮೊದಲಿನ ತಮ್ಮ ಗಾಯನವು ಎಷ್ಟೊಂದು ಪ್ರಸಿದ್ಧವಾಗಿದೆ! ವಿಜಯವು ನಿಶ್ಚಿತವಾಗಿರುವ ಕಾರಣದಿಂದ ನಿಶ್ಚಯಬುದ್ಧಿ ವಿಜಯಿಯಾಗಿದ್ದೀರಿ. ಆದ್ದರಿಂದ ಮಾಲೆಯನ್ನೂ ವಿಜಯಮಾಲೆಯೆಂದು ಹೇಳುತ್ತಾರೆ. ಅಂದಾಗ ನಿಶ್ಚಯ ಮತ್ತು ನಶೆಯೆರಡೂ ಇದೆಯಲ್ಲವೆ. ಒಂದುವೇಳೆ ಯಾರಾದರೂ ಕೇಳುತ್ತಾರೆಂದರೆ ನಿಶ್ಚಯದಿಂದ ಹೇಳುತ್ತೀರಿ- ವಿಜಯವಾಗಿ ಬಿಟ್ಟಿದೆ. ಸ್ವಪ್ನದಲ್ಲಿಯೂ ಈ ಸಂಕಲ್ಪವು ಉತ್ಪನ್ನವಾಗಲು ಸಾಧ್ಯವಿಲ್ಲ- ವಿಜಯವಾಗುತ್ತದೆಯೋ ಅಥವಾ ಇಲ್ಲವೋ ಗೊತ್ತಿಲ್ಲ, ಅಲ್ಲ, ವಿಜಯವಾಗಿಯೇ ಇದೆ. ಹಿಂದಿನ ಕಲ್ಪ ಮತ್ತು ಭವಿಷ್ಯವನ್ನೂ ತಿಳಿದುಕೊಂಡಿದ್ದೀರಿ. ತ್ರಿಕಾಲದರ್ಶಿಯಾಗಿ ಅದೇ ನಶೆಯಲ್ಲಿದ್ದು ಹೇಳುತ್ತೀರಿ. ಎಲ್ಲರಿಗೂ ಪರಿಪಕ್ವವಾಗಿದ್ದೀರಲ್ಲವೆ! ಒಂದುವೇಳೆ ಯಾರೇ ಯೋಚಿಸಿ, ನೋಡಿರಿ ಎಂದು ಹೇಳಿದರೆ, ಏನು ಹೇಳುತ್ತೀರಿ? ಅನೇಕ ಬಾರಿ ನೋಡಿಬಿಟ್ಟಿದ್ದೇವೆ. ಏನಾದರೂ ಹೊಸ ಮಾತಾಗಿದ್ದರೆ ಯೋಚಿಸುತ್ತಿದ್ದೆವು, ನೋಡುತ್ತಿದ್ದೆವು. ಇದಂತು ಅನೇಕ ಬಾರಿಯ ಮಾತನ್ನೀಗ ಪುನರಾವರ್ತನೆ ಮಾಡುತ್ತಿದ್ದೇವೆ. ಅಂದಾಗ ಇಂತಹ ನಿಶ್ಚಯಬುದ್ಧಿ ಜ್ಞಾನಿ ಆತ್ಮರು ಯೋಗಿ ಆತ್ಮರು ಆಗಿದ್ದೀರಲ್ಲವೆ!

ಇಂದು ಆಫ್ರಿಕಾದ ಗ್ರೂಪ್ನ ಸರದಿಯಾಗಿದೆ. ಹಾಗೆ ನೋಡಿದರೆ ಎಲ್ಲರೂ ಈಗ ಮಧುಬನ ನಿವಾಸಿಯಾಗಿದ್ದೀರಿ. ಶಾಸ್ವತ ವಿಳಾಸವಂತು ಮಧುಬನವಲ್ಲವೆ. ಅದಂತು ಸೇವಾಸ್ಥಾನವಾಗಿದೆ. ಸೇವಾ-ಸ್ಥಾನವಾಯಿತು ಕಛೇರಿ, ಆದರೆ ಮನೆಯಂತು ಮಧುಬನವಲ್ಲವೆ. ಸೇವಾರ್ಥವಾಗಿ ಆಫ್ರಿಕಾ, ಯು.ಕೆ., ಮುಂತಾದವು ನಾಲ್ಕೂ ಕಡೆಗಳಲ್ಲಿ ಹೋಗಿದ್ದೀರಿ. ಭಲೆ ಧರ್ಮ ಬದಲಾಯಿಸಿರಬಹುದು, ಭಲೆ ದೇಶವನ್ನು ಬದಲಾಯಿಸಿರಬಹುದು. ಆದರೆ ಸೇವೆಗಾಗಿ ಹೋಗಿದ್ದೀರಿ. ಯಾವ ಮನೆಯ ನೆನಪು ಬರುತ್ತದೆ? ಮಧುಬನವೇ ಅಥವಾ ಪರಮಧಾಮವೇ. ಸೇವಾಸ್ಥಾನದಲ್ಲಿ ಸೇವೆಯನ್ನು ಮಾಡುತ್ತಾ ಸದಾ ಮಧುಬನ ಮತ್ತು ಮುರುಳಿ- ಇದೇ ನೆನಪಿರುತ್ತದೆಯಲ್ಲವೆ! ಆಫ್ರಿಕಾದಲ್ಲಿಯೂ ಸೇವಾರ್ಥವಾಗಿ ಹೋಗಿದ್ದೀರಲ್ಲವೆ. ಸೇವೆಯು ಜ್ಞಾನ ಗಂಗೆಯನ್ನಾಗಿ ಮಾಡಿ ಬಿಟ್ಟಿತು. ಜ್ಞಾನ ಗಂಗೆಗಳಲ್ಲಿ ಜ್ಞಾನ ಸ್ನಾನ ಮಾಡಿ, ಇಂದು ಎಷ್ಟೊಂದು ಪಾವನರಾಗಿ ಬಿಟ್ಟಿದ್ದೀರಿ! ಮಕ್ಕಳು ಭಿನ್ನ-ಭಿನ್ನ ಸ್ಥಾನಗಳಲ್ಲಿ ಸೇವೆಯನ್ನು ಮಾಡುತ್ತಿರುವುದನ್ನು ನೋಡುತ್ತಾ ಬಾಪ್ದಾದಾರವರು ಯೋಚಿಸುತ್ತಾರೆ - ಎಂತೆಂತಹ ಸ್ಥಾನಗಳಲ್ಲಿ ಸೇವೆಗಾಗಿ, ನಿರ್ಭಯರಾಗಿ ಬಹಳ ಲಗನ್ನಿನಿಂದ ಇದ್ದಾರೆ. ಆಫ್ರಿಕನ್ನರ ವಾಯುಮಂಡಲ, ಅವರ ಆಹಾರ-ವ್ಯವಹಾರಗಳು ಹೇಗಿದೆ, ಆದರೂ ಸಹ ಸೇವೆಯ ಕಾರಣದಿಂದ ಉಳಿದುಕೊಂಡಿದ್ದೀರಿ. ಸೇವೆಯ ಬಲ ಸಿಗುತ್ತಿರುತ್ತದೆ. ಸೇವೆಯ ಪ್ರತ್ಯಕ್ಷ ಫಲವು ಸಿಗುತ್ತದೆ, ಈ ಬಲವು ನಿರ್ಭಯರನ್ನಾಗಿ ಮಾಡಿ ಬಿಡುತ್ತದೆ. ಕೆಲವೊಮ್ಮೆಗೂ ಗಾಬರಿಯಗುವುದಿಲ್ಲವೇ! ಮತ್ತು ಅಫಿಷಿಯಲ್ ನಿಮಂತ್ರಣವು ಮೊದಲು ಇಲ್ಲಿಂದಲೇ ಪ್ರಾರಂಭವಾಯಿತು. ಸೇವೆಯ ಉಮ್ಮಂಗ-ಉತ್ಸಾಹದ ಪ್ರತ್ಯಕ್ಷ ಫಲವನ್ನು ಇಲ್ಲಿನ ಮಕ್ಕಳು ತೋರಿಸಿದರು. ಒಬ್ಬ ಒಬ್ಬ ನಿಮಿತ್ತರಾಗುವವರ ಬಲಿಹಾರಿಯಾಗಿದೆ, ಅವರು ಎಷ್ಟೊಂದು ಒಳ್ಳೊಳ್ಳೆಯ ಗುಪ್ತವಾಗಿರುವ ರತ್ನಗಳನ್ನು ಹೊರತೆಗೆದರು. ಈಗಂತು ಬಹಳಷ್ಟು ವೃದ್ಧಿಯಾಗಿ ಬಿಟ್ಟಿದೆ. ಅವರು(ನಿಮಿತ್ತ) ಗುಪ್ತವಾಗಿ ಬಿಟ್ಟರು ಮತ್ತು ತಾವು ಪ್ರತ್ಯಕ್ಷವಾಗಿ ಬಿಟ್ಟಿರಿ. ನಿಮಂತ್ರಣದ ಕಾರಣದಿಂದ ಮೊದಲ ನಂಬರ ಆಗಿ ಬಿಟ್ಟಿತು. ಅಂದಾಗ ಆಫ್ರಿಕಾದವರಿಗೆ ಬಾಪ್ದಾದಾರವರು ಆಫ್ರೀನ್ ತೆಗೆದುಕೊಳ್ಳುವವರೆಂದು ಹೇಳುತ್ತಾರೆ. ಆಫ್ರೀನ್ ತೆಗೆದುಕೊಳ್ಳುವ ಸ್ಥಾನವಾಗಿದೆ ಏಕೆಂದರೆ ವಾತಾವರಣವು ಅಶುದ್ಧವಾಗಿದೆ. ಅಶುದ್ಧ ವಾತಾವರಣದ ಮಧ್ಯೆ ವೃದ್ಧಿಯಾಗುತ್ತಿದೆ. ಇದಕ್ಕಾಗಿ ಆಫ್ರೀನ್ ಎಂದು ಹೇಳುತ್ತಾರೆ.

ಶಕ್ತಿ ಸೇನೆ ಮತ್ತು ಪಾಂಡವ ಸೇನೆ- ಎರಡೂ ಶಕ್ತಿಶಾಲಿಯಾಗಿದೆ, ಮೆಜಾರಿಟಿ ಭಾರತದವರಿದ್ದಾರೆ. ಆದರೆ ಆದರೆ ಭಾರತದಿಂದ ದೂರವಾಯಿತು, ದೂರವಿದ್ದರೂ ತನ್ನ ಹಕ್ಕನ್ನಂತು ಬಿಡಲು ಸಾಧ್ಯವಿಲ್ಲ. ಅಲ್ಲಿಯೂ ತಂದೆಯ ಪರಿಚಯ ಸಿಕ್ಕಿ ಬಿಟ್ಟಿತು. ತಂದೆಯವರಾಗಿ ಬಿಟ್ಟರು. ನೈರೋಬಿಯಲ್ಲಿ ಪರಿಶ್ರಮವೆನಿಸುವುದಿಲ್ಲ, ಅಗಲಿರುವವರು ಸಹಜವಾಗಿಯೇ ತಲುಪಿ ಬಿಟ್ಟರು ಮತ್ತು ಗುಜರಾತಿಗಳಲ್ಲಿ ಈ ಸಂಸ್ಕಾರವು ವಿಶೇಷವಾಗಿ ಇದೆ. ಹೇಗೆ ಅವರ ಈ ಪದ್ಧತಿಯಿದೆ- ಎಲ್ಲರೂ ಸೇರಿ ಗರ್ಬರಾಸ್ ನೃತ್ಯವನ್ನು ಮಾಡುತ್ತಾರೆ. ಒಬ್ಬರು ಮಾಡುವುದಿಲ್ಲ. ಸಣ್ಣಗಿರಲಿ ಅಥವಾ ದಪ್ಪಗಿರಲಿ, ಎಲ್ಲರೂ ಸೇರಿ ಗರ್ಬಾಡ್ಯಾನ್ಸ್ನ್ನು ಅವಶ್ಯವಾಗಿ ಮಾಡುತ್ತಾರೆ. ಇದು ಸಂಘಟನೆಯ ಚಿಹ್ನೆಯಾಗಿದೆ. ಸೇವೆಯಲ್ಲಿ ನೋಡಲಾಯಿತು- ಗುಜರಾತಿಗಳ ಸಂಘಟನೆಯವರಿರುತ್ತಾರೆ. ಒಬ್ಬರು ಬರುತ್ತಾರೆಂದರೆ 10 ಮಂದಿ ಅವಶ್ಯವಾಗಿ ಬರುತ್ತಾರೆ. ಈ ಸಂಘಟನೆಯ ರೀತಿಯು ಅವರಲ್ಲಿ ಚೆನ್ನಾಗಿದೆ, ಆದ್ದರಿಂದ ಬಹಳ ಬೇಗ ವೃದ್ಧಿಯಾಗಿ ಬಿಡುತ್ತದೆ. ಸೇವೆಯ ವೃದ್ಧಿ ಮತ್ತು ವಿಸ್ತಾರವೂ ಆಗುತ್ತಿದೆ. ಅಂತಂತಹ ಸ್ಥಾನಗಳಲ್ಲಿ ಶಾಂತಿಯ ಶಕ್ತಿಯನ್ನು ಕೊಡುವುದು, ಭಯದ ಬದಲು ಖುಷಿಯನ್ನು ತರಿಸುವುದು, ಇದೇ ಶ್ರೇಷ್ಠ ಸೇವೆಯಾಗಿದೆ. ಅಂತಹ ಸ್ಥಾನಗಳಲ್ಲಿ ಅವಶ್ಯಕತೆಯಿದೆ. ವಿಶ್ವ ಕಲ್ಯಾಣಕಾರಿಗಳಾಗಿದ್ದೀರಿ, ಅಂದಾಗ ವಿಶ್ವದ ನಾಲ್ಕೂ ಕಡೆಗಳಲ್ಲಿ ಸೇವೆಯನ್ನು ಹೆಚ್ಚಿಸಬೇಕು, ಮತ್ತು ನಿಮಿತ್ತರಾಗಲೇಬೇಕು. ಯಾವುದೇ ಮೂಲೆಯಲ್ಲೇನಾದರೂ ಉಳಿದುಕೊಂಡಿತೆಂದರೆ ದೂರು ಕೊಡುತ್ತಾರೆ. ಒಳ್ಳೆಯದು - ಸಾಹಸ ಮಕ್ಕಳದು ಸಹಯೋಗ ತಂದೆಯದು. ಹ್ಯಾಂಡ್ಸ್ ಸಹ ಅಲ್ಲಿಂದಲೇ ಬಂದು ಮತ್ತು ಸೇವೆಯನ್ನೂ ಮಾಡುತ್ತಿದ್ದಾರೆ. ಇದೂ ಸಹ ಸಹಯೋಗವಾಯಿತಲ್ಲವೆ. ಸ್ವಯಂ ತಾವು ಜಾಗೃತವಾಗಿದ್ದೀರೆಂದರೆ ಬಹಳ ಒಳ್ಳೆಯದು. ಆದರೆ ಜಾಗೃತವಾಗಿದ್ದು ಅನ್ಯರನ್ನೂ ಜಾಗೃತ ಮಾಡಲು ನಿಮಿತ್ತರಾದಿರಿ, ಇದು ಡಬಲ್ ಲಾಭವಾಯಿತು. ಬಹಳಷ್ಟು ಹ್ಯಾಂಡ್ಸ್ ಸಹ ಅಲ್ಲಿಯವರೇ ಆಗಿದ್ದಾರೆ. ಈ ವಿಶೇಷತೆಯು ಚೆನ್ನಾಗಿದೆ. ವಿದೇಶದ ಸೇವೆಯಲ್ಲಿ ಮೆಜಾರಿಟಿಯಲ್ಲಿ ಎಲ್ಲರೂ ಅಲ್ಲಿಂದಲೇ ಬಂದು, ಅಲ್ಲಿಯೇ ಸೇವೆಗೆ ನಿಮಿತ್ತರಾಗಿ ಬಿಡುತ್ತಾರೆ. ವಿದೇಶವು ಭಾರತಕ್ಕೆ ಹ್ಯಾಂಡ್ಸ್ನ್ನು ಕೊಡಲಿಲ್ಲ. ಭಾರತವು ವಿದೇಶಕ್ಕೆ ಕೊಟ್ಟಿದೆ. ಭಾರತವೂ ಸಹ ಬಹಳ ದೊಡ್ಡದಿದೆ. ಬೇರೆ-ಬೇರೆ ಜೋನ್ಗಳಿವೆ. ಸ್ವರ್ಗವನ್ನಾಗಿ ಭಾರತವನ್ನೇ ಮಾಡಬೇಕಾಗಿದೆ. ವಿದೇಶವಂತು ಪಿಕ್ನಿಕ್ ಸ್ಥಾನವಾಗಿ ಬಿಡುತ್ತದೆ. ಅಂದಾಗ ಎಲ್ಲರೂ ಎವರೆಡಿಯಾಗಿದ್ದೀರಲ್ಲವೆ. ಇಂದು ಯಾರನ್ನು ಎಲ್ಲಿಯೇ ಕಳುಹಿಸಿದರೂ ಎವರೆಡಿ ಆಗಿದ್ದೀರಲ್ಲವೇ! ಯಾವಾಗ ಸಾಹಸವನ್ನಿಡುತ್ತೀರಿ ಆಗ ಸಹಯೋಗವೂ ಸಿಕ್ಕಿ ಬಿಡುತ್ತದೆ. ಎವರೆಡಿಯಂತು ಅವಶ್ಯವಾಗಿ ಇರಬೇಕು. ಮತ್ತು ಯಾವಾಗ ಅಂತಹ ಸಮಯ ಬರುತ್ತದೆಯೋ ಆಗ ಆದೇಶವನ್ನು ಹೊರಡಿಸಲೇಬೇಕಾಗುತ್ತದೆ. ತಂದೆಯ ಮೂಲಕ ಆದೇಶವು ಹೊರಡುತ್ತದೆ. ಯಾವಾಗ ಮಾಡುತ್ತೇವೆ ಎನ್ನುವ ದಿನಾಂಕವನ್ನು ಹೇಳುವುದಿಲ್ಲ. ದಿನಾಂಕವನ್ನು ತಿಳಿಸಿದರೆ ಎಲ್ಲರೂ ನಂಬರ್ವನ್ನಲ್ಲಿ ಪಾಸ್ ಆಗಿ ಬಿಡುತ್ತಾರೆ. ಇಲ್ಲಿ ದಿನಾಂಕದ ಬಗ್ಗೆಯೇ ಇದ್ದಕ್ಕಿದ್ದಂತೆಯೇ ಪ್ರಶ್ನೆಯು ಬರುತ್ತದೆ! ಎವರೆಡಿಯಾಗಿದ್ದೀರಲ್ಲವೆ. ಉದಾ: ಇಲ್ಲಿಯೇ ಕುಳಿತು ಬಿಡಿ ಎಂದು ಹೇಳಿದರೆ, ಮರಿ ಮಕ್ಕಳು ಮನೆ ಮುಂತಾದವು ನೆನಪಿಗೆ ಬರುತ್ತದೆಯೇ? ಸುಖದ ಸಾಧನಗಳಂತು ಅಲ್ಲಿದೆ ಆದರೆ ಸ್ವರ್ಗವನ್ನಂತು ಇಲ್ಲಿ ಮಾಡಬೇಕು. ಅಂದಾಗ ಸದಾ ಎವರೆಡಿಯಾಗಿರಿ - ಇದು ಬ್ರಾಹ್ಮಣ ಜೀವನದ ವಿಶೇಷತೆಯಾಗಿದೆ. ತಮ್ಮ ಬುದ್ಧಿಯ ಲೈನ್ ಕ್ಲಿಯರ್ ಆಗಿರಲಿ. ತಂದೆಯವರು ಸೇವಾ ನಿಮಿತ್ತವಾಗಿ ಸ್ಥಾನವನ್ನು ಕೊಟ್ಟಿದ್ದಾರೆ. ಅಂದಾಗ ನಿಮಿತ್ತವಾಗಿದ್ದು ಸೇವೆಯಲ್ಲಿ ಉಪಸ್ಥಿತರಾಗಿದ್ದೀರಾ. ನಂತರದಲ್ಲಿ ತಂದೆಯವರ ಸೂಚನೆ ಸಿಕ್ಕಿತೆಂದರೆ, ಯಾವುದೇ ಯೋಚಿಸುವ ಅವಶ್ಯಕತೆಯೇ ಇಲ್ಲ. ಡೈರೆಕ್ಷನನುಸಾರವಾಗಿ ಸೇವೆಯನ್ನು ಬಹಳ ಚೆನ್ನಾಗಿ ಮಾಡುತ್ತಿದ್ದೀರಿ, ಆದ್ದರಿಂದ ಭಿನ್ನ ಮತ್ತು ತಂದೆಯ ಪ್ರಿಯರಾಗಿದ್ದೀರಿ. ಆಫ್ರಿಕಾದವರೂ ಸಹ ವೃದ್ಧಿಯನ್ನು ಚೆನ್ನಾಗಿ ಮಾಡಿದ್ದಾರೆ. ವಿ.ಐ.ಪಿ.,ಗಳ ಸೇವೆಯು ಚೆನ್ನಾಗಿ ಆಗುತ್ತಿದೆ. ಸರ್ಕಾರದ ಸಂಪರ್ಕವೂ ಚೆನ್ನಾಗಿದೆ. ಸರ್ವ ಪ್ರಕಾರದ ವರ್ಗಗಳ ಆತ್ಮರ ಸಂಪರ್ಕವು ಯಾವುದಾದರೊಂದು ಇದೆ, ಇದು ವಿಶೇಷತೆಯಾಗಿದೆ. ಇಂದು ಸಂಪರ್ಕದವರು ನಾಳೆ ಸಂಬಂಧದವರಾಗಿ ಬಿಡುತ್ತಾರೆ. ಅವರನ್ನು ಜಾಗೃತಗೊಳಿಸುತ್ತಾ ಇರಬೇಕು. ಇಲ್ಲವೆಂದರೆ ಸ್ವಲ್ಪ ಕಣ್ಣನ್ನು ತೆರೆದು ನಂತರ ಮಲಗಿ ಬಿಡುತ್ತಾರೆ. ಕುಂಭಕರ್ಣರಂತು ಹೌದು. ನಿದ್ರೆಯ ನಶೆಯಿರುತ್ತದೆಯೆಂದರೆ ಸ್ವಲ್ಪವೇನಾದರೂ ತಿಂದರು-ಕುಡಿದರೂ ಸಹ ಮರೆತು ಬಿಡುತ್ತಾರೆ. ಕುಂಭಕರ್ಣನಿರುವುದೂ ಹಾಗೆಯೇ. ಹೇಳುತ್ತಾರೆ - ಆಯಿತು, ಮತ್ತೆ ಬರುತ್ತೇವೆ, ಇದನ್ನು ಮಾಡುತ್ತೇವೆ ಆದರೆ ಮತ್ತೆಕೇಳಿದರೆ ಹೇಳುತ್ತಾರೆ - ನೆನಪಿರಲಿಲ್ಲ. ಆದ್ದರಿಂದರೆ ಮತ್ತೆ-ಮತ್ತೆ ಜಾಗೃತಗೊಳಿಸಬೇಕಾಗುತ್ತದೆ. ಗುಜರಾತಿಗಳು ತಂದೆಯವರಾಗುವುದರಲ್ಲಿ, ತನು-ಮನ-ಧನದಿಂದ ಸ್ವಯಂನ್ನು ಸೇವೆಯಲ್ಲಿ ತೊಡಗಿಸುವುದರಲ್ಲಿ ಒಳ್ಳೆಯ ರೀತಿಯಲ್ಲಿ ಅಂಕಗಳನ್ನು ತೆಗೆದುಕೊಂಡಿದ್ದಾರೆ. ಸಹಜವಾಗಿಯೇ ಸಹಜಯೋಗಿಯಾಗಿ ಬಿಡುತ್ತಾರೆ. ಇದೂ ಸಹ ಭಾಗ್ಯವಾಗಿದೆ. ಗುಜರಾತಿಗಳ ಸಂಖ್ಯೆಯು ಚೆನ್ನಾಗಿದೆ. ತಂದೆಯವರಾಗುವ ಲಾಟರಿಯೇನೂ ಕಡಿಮೆಯಲ್ಲ. ಪ್ರತಿಯೊಂದು ಸ್ಥಾನದಲ್ಲಿ ಯಾರಾದರೂ ತಂದೆಯಿಂದ ಅಗಲಿರುವ ರತ್ನಗಳಿದ್ದೇ ಇರುತ್ತಾರೆ. ಎಲ್ಲಿಯೇ ಕಾಲಿಡುತ್ತಾರೆಂದರೆ ಯಾರಾದರೊಬ್ಬರು ಬಂದೇ ಬರುತ್ತಾರೆ. ನಿಶ್ಚಿಂತ, ನಿರ್ಭಯರಾಗಿದ್ದು ಸೇವೆಯಲ್ಲಿ ಲಗನ್ನಿನಿಂದ ಮುಂದುವರೆಯುತ್ತಾರೆ, ಅದರಿಂದ ಪದಮದಷ್ಟು ಸಹಯೋಗವೂ ಸಿಗುತ್ತದೆ. ಅಫಿಷಿಯಲ್ ನಿಮಂತ್ರಣವಂತು ಇಲ್ಲಿಂದಲೇ ಆರಂಭವಾಯಿತು. ಆದರೂ ಸೇವೆಯ ಜಮಾ ಆಯಿತಲ್ಲವೆ. ಆ ಜಮಾ ಖಾತೆಯು ಸಮಯದಲ್ಲಿ ಅವಶ್ಯವಾಗಿ ಆಕರ್ಷಿಸುತ್ತದೆ. ಅಂದಾಗ ಎಲ್ಲರೂ ನಂಬರ್ವನ್ ಆಗಲೇಬೇಕು, ಆಗಲೇ ಆಫ್ರೀನ್ ತೆಗೆದುಕೊಳ್ಳುವಿರಲ್ಲವೆ. ಆಫ್ರೀನ್ ಮೇಲೆ ಆಫ್ರೀನ್(ಅವಕಾಶ) ತೆಗೆದುಕೊಳ್ಳುತ್ತಿರಬೇಕು. ಎಲ್ಲರ ಸಾಹಸವನ್ನು ನೋಡುತ್ತಾ ಬಾಪ್ದಾದಾರವರು ಖುಷಿಯಾಗುತ್ತಾರೆ. ಅನೇಕ ಆತ್ಮರಿಗೆ ತಂದೆಯ ಆಶ್ರಯವನ್ನು ಕೊಡಿಸುವುದಕ್ಕಾಗಿ ನಿಮಿತ್ತರಾಗಿದ್ದೀರಿ. ಒಳ್ಳೆಯ ಪರಿವಾರದ ಪರಿವಾರವಾಗಿದೆ. ಪರಿವಾರವನ್ನು ಬಾಬಾರವರ ಹೂ ಗುಚ್ಛ ಎಂದು ಹೇಳುತ್ತೇವೆ. ಈ ವಿಶೇಷತೆಯೂ ಚೆನ್ನಾಗಿದೆ. ಹಾಗೆ ನೋಡಿದರೆ ಎಲ್ಲವೂ ಬ್ರಾಹ್ಮಣರ ಸ್ಥಾನವಾಗಿದೆ. ಒಂದುವೇಳೆ ನೈರೋಬಿಯವರೇನಾದರೂ ಹೋಗುತ್ತಾರೆ ಅಥವಾ ಎಲ್ಲಿಯೇ ಹೋಗುತ್ತಾರೆಂದರೆ ಹೇಳುತ್ತಾರೆ - ನಮ್ಮ ಸೇವಾಕೇಂದ್ರ, ಬಾಬಾರವರ ಸೇವಾಕೇಂದ್ರವಾಗಿದೆ. ನಮ್ಮ ಪರಿವಾರವಾಗಿದೆ. ಅಂದಾಗ ಎಷ್ಟೊಂದು ಲಕ್ಕಿ ಆಗಿ ಬಿಟ್ಟಿರಿ! ಬಾಪ್ದಾದಾರವರು ಪ್ರತಿಯೊಂದು ರತ್ನಗಳನ್ನು ನೋಡುತ್ತಾ ಖುಷಿಯಾಗುತ್ತಾರೆ. ಭಲೆ ಯಾವುದೇ ಸ್ಥಾನವಿರಲಿ ಆದರೆ ತಂದೆಯದು ಮತ್ತು ತಂದೆಯ ಮಕ್ಕಳದಾಗಿದೆ, ಆದ್ದರಿಂದ ಬ್ರಾಹ್ಮಣ ಆತ್ಮರು ಅತಿಪ್ರಿಯರಾಗಿದ್ದಾರೆ. ವಿಶೇಷವಾಗಿದ್ದಾರೆ. ಒಬ್ಬರಿಗಿಂತ ಇನ್ನೊಬ್ಬರು ಹೆಚ್ಚು ಪ್ರಿಯರೆನಿಸುತ್ತಾರೆ. ಒಳ್ಳೆಯದು.

ಈಗ ಆತ್ಮಿಕ ವ್ಯಕ್ತತ್ವದ ಮೂಲಕ ಸೇವೆಯನ್ನು ಮಾಡಿರಿ (ಆಯ್ಕೆಮಾಡಿರುವ ಅವ್ಯಕ್ತ ಮಹಾವಾಕ್ಯಗಳು)
1. ತಾವು ಬ್ರಾಹ್ಮಣರಂತಹ ಆತ್ಮಿಕ ವ್ಯಕ್ತಿತ್ವ, ಇಡೀ ಕಲ್ಪದಲ್ಲಿ ಮತ್ತ್ಯಾರದೂ ಇಲ್ಲ. ಏಕೆಂದರೆ ತಮ್ಮೆಲ್ಲರ ವ್ಯಕ್ತಿತ್ವವನ್ನು ತಯಾರು ಮಾಡುವವರು ಸರ್ವ ಶ್ರೇಷ್ಠ, ಸ್ವಯಂ ಪರಮ ಆತ್ಮನಾಗಿದ್ದಾರೆ. ತಮ್ಮ ಅತಿ ಶ್ರೇಷ್ಠ ವ್ಯಕ್ತಿತ್ವವಾಗಿದೆ - ಸ್ವಪ್ನ ಅಥವಾ ಸಂಕಲ್ಪದಲ್ಲಿಯೂ ಸಂಪೂರ್ಣ ಪವಿತ್ರತೆ. ಈ ಪವಿತ್ರತೆಯ ಜೊತೆ ಜೊತೆಗೆ ಚಹರೆ ಮತ್ತು ಚಲನೆಯಲ್ಲಿ ಆತ್ಮೀಯತೆಯದೂ ವ್ಯಕ್ತಿತ್ವವಿದೆ - ತಮ್ಮ ಈ ವ್ಯಕ್ತಿತ್ವದಲ್ಲಿ ಸದಾ ಸ್ಥಿತರಾಗಿರುತ್ತೀರೆಂದರೆ ಸ್ವತಹವಾಗಿ ಸೇವೆಯಾಗುತ್ತದೆ. ಯಾರೆಂತಹ ರೀತಿಯಾದರೂ ಬೇಸರ, ಅಶಾಂತವಾಗಿರುವ ಆತ್ಮರಿರಲಿ, ತಮ್ಮ ಆತ್ಮಿಕ ವ್ಯಕ್ತಿತ್ವದ ಹೊಳಪು, ಪ್ರಸನ್ನತೆಯ ಚಹರೆಯು ಅವರನ್ನು ಪ್ರಸನ್ನಗೊಳಿಸಿ ಬಿಡುತ್ತದೆ. ದೃಷ್ಟಿಯಿಂದ ಪರಿವರ್ತನೆಯಾಗಿ ಬಿಡುತ್ತಾರೆ. ಈಗ ಸಮಯದ ಸಮೀಪತೆಯನುಸಾರ ದೃಷ್ಟಿಯಿಂದ ಪರಿವರ್ತನೆ ಮಾಡುವ ಸೇವೆಯನ್ನು ಮಾಡುವ ಸಮಯವಾಗಿದೆ. ತಮ್ಮ ಒಂದು ದೃಷ್ಟಿಯಿಂದ ಅವರು ಪ್ರಸನ್ನಚಿತ್ತರಾಗಿ ಬಿಡುತ್ತಾರೆ, ಹೃದಯದ ಆಶೆಯು ಪೂರ್ಣವಾಗಿ ಬಿಡುತ್ತದೆ.

ಹೇಗೆ ಬ್ರಹ್ಮಾ ತಂದೆಯವರ ಚಹರೆ ಅಥವಾ ಲಕ್ಷಣದ ವ್ಯಕ್ತಿತ್ವ ಹಾಗಿತ್ತು, ಆಗಲೇ ತಾವೆಲ್ಲರೂ ಆಕರ್ಷಿತರಾದಿರಿ, ಹಾಗೆಯೇ ಫಾಲೋಫಾದರ್ ಮಾಡಿರಿ. ಸರ್ವ ಪ್ರಾಪ್ತಿಗಳ ಲಿಸ್ಟ್ ಬುದ್ಧಿಯಲ್ಲಿ ಇಮರ್ಜ್ ಆಗಿಟ್ಟುಕೊಳ್ಳುತ್ತೀರೆಂದರೆ, ಚಹರೆ ಮತ್ತು ಚಲನೆಯಲ್ಲಿ ಪ್ರಸನ್ನತೆಯ ವ್ಯಕ್ತಿತ್ವವು ಕಾಣಿಸುತ್ತದೆ ಮತ್ತು ಈ ವ್ಯಕ್ತಿತ್ವವು ಪ್ರತಿಯೊಬ್ಬರನ್ನೂ ಆಕರ್ಷಿಸುತ್ತದೆ. ಆತ್ಮಿಕವ್ಯಕ್ತಿತ್ವದ ಮೂಲಕ ಸೇವೆಯನ್ನು ಮಾಡುವುದಕ್ಕಾಗಿ ತಮ್ಮ ಮೂಡ್ ಸದಾ ಹರ್ಷಿತಮುಖಿ ಮತ್ತು ಕೇರ್ಫುಲ್ ಆಗಿಟ್ಟುಕೊಳ್ಳಿ. ಮೂಡ್ ಬದಲಾಗಬಾರದು. ಕಾರಣವೇನೇ ಇರಲಿ, ಆ ಕಾರಣವನ್ನು ನಿವಾರಣೆ ಮಾಡಿರಿ. ಸದಾ ಪ್ರಸನ್ನತೆಯ ವ್ಯಕ್ತಿತ್ವದಲ್ಲಿರಿ. ಪ್ರಸನ್ನಚಿತ್ತ ಆಗಿರುವುದರಿಂದ ಬಹಳ ಒಳ್ಳೆಯ ಅನುಭವ ಮಾಡುವಿರಿ. ಪ್ರಸನ್ನಚಿತ್ತ ಆತ್ಮನ ಸಂಗದಲ್ಲಿರುವುದು, ಅವರೊಂದಿಗೆ ಮಾತನಾಡುವುದು, ಕುಳಿತುಕೊಳ್ಳುವುದು ಎಲ್ಲರಿಗೂ ಪ್ರಿಯವೆನಿಸುತ್ತದೆ. ಅಂದಾಗ ಲಕ್ಷ್ಯವನ್ನಿಡಿ - ಪ್ರಶ್ನಚಿತ್ತವಲ್ಲ, ಪ್ರಸನ್ನಚಿತ್ತವಾಗಿ ಇರಬೇಕು.

ತಾವು ಮಕ್ಕಳು ಬಾಹ್ಯ ರೂಪದಲ್ಲಿ ಭಲೆ ಸಾಧಾರಣ ವ್ಯಕ್ತಿತ್ವದವರಾಗಿ ಇರಿ. ಆದರೆ ಆತ್ಮಿಕ ವ್ಯಕ್ತಿತ್ವದಲ್ಲಿ ಎಲ್ಲರಿಗಿಂತಲೂ ನಂಬರ್ವನ್ ಆಗಿ ಇರಿ. ತಮ್ಮ ಚಹರೆಯಲ್ಲಿ, ಚಲನೆಯಲ್ಲಿ, ಪವಿತ್ರತೆಯ ವ್ಯಕ್ತಿತ್ವವಿದೆ. ಯಾರು ಎಷ್ಟೆಷ್ಟು ಪವಿತ್ರವಾಗಿರುತ್ತಾರೆ, ಅಷ್ಟು ಅವರ ವ್ಯಕ್ತಿತ್ವವಷ್ಟೇ ಕಾಣಿಸುವುದಿಲ್ಲ. ಆದರೆ ಅನುಭವವೂ ಆಗುತ್ತದೆ ಮತ್ತು ಅವರ ವ್ಯಕ್ತಿತ್ವವೇ ಸೇವೆಯನ್ನೂ ಮಾಡುತ್ತದೆ. ಯಾರು ಶ್ರೇಷ್ಠ ವ್ಯಕ್ತಿತ್ವದವರಾಗುತ್ತಾರೆ ಅವರ ಎಲ್ಲಿಯೂ, ಯಾರಲ್ಲಿಯೂ ಕಣ್ಣು ಹೋಗುವುದಿಲ್ಲ. ಏಕೆಂದರೆ ಅವರು ಸರ್ವ ಪ್ರಾಪ್ತಿಗಳಿಂದ ಸಂಪನ್ನವಿದ್ದಾರೆ. ಅವರೆಂದಿಗೂ ತನ್ನ ಪ್ರಾಪ್ತಿಗಳ ಭಂಡಾರದಿಂದ ಯಾವುದೇ ಅಪ್ರಾಪ್ತಿಯ ಅನುಭವವನ್ನು ಮಾಡುವುದಿಲ್ಲ. ಅವರು ಸದಾ ಮನಸ್ಸಿನಿಂದ ಸಂಪನ್ನವಾಗಿರುವ ಕಾರಣದ ಸಂತುಷ್ಟವಾಗಿರುತ್ತಾರೆ, ಅಂತಹ ಸಂತುಷ್ಟ ಆತ್ಮವೇ ಅನ್ಯರನ್ನೂ ಸಂತುಷ್ಟ ಪಡಿಸಲು ಸಾಧ್ಯವಾಗುತ್ತದೆ.

ಎಷ್ಟು ಪವಿತ್ರತೆಯಿದೆ, ಅಷ್ಟು ಬ್ರಾಹ್ಮಣ ಜೀವನದ ವ್ಯಕ್ತಿತ್ವವಿದೆ. ಒಂದುವೇಳೆ ಪವಿತ್ರತೆಯು ಕಡಿಮೆಯಿದೆಯೆಂದರೆ ವ್ಯಕ್ತಿತ್ವವೂ ಕಡಿಮೆ. ಈ ಪವಿತ್ರತೆಯ ವ್ಯಕ್ತಿತ್ವವು ಸೇವೆಯಲ್ಲಿಯೂ ಸಹಜ ಸಫಲತೆಯನ್ನು ಕೊಡಿಸುತ್ತದೆ. ಆದರೆ ಒಂದು ವಿಕಾರವೇನಾದರೂ ಅಂಶದಷ್ಟಿದೆಯೆಂದರೆ, ಅನ್ಯ ಜೊತೆಗಾರರೂ ಸಹ ಅದಕ್ಕೆ ಅವಶ್ಯವಾಗಿ ಜೊತೆಯಾಗುತ್ತದೆ. ಹೇಗೆ ಪವಿತ್ರತೆ ಸುಖ-ಶಾಂತಿಯೊಂದಿಗೆ ಆಳವಾದ ಸಂಬಂಧವಿದೆ, ಹಾಗೆಯೇ ಅಪವಿತ್ರತೆಯ ಸಂಬಂಧವೂ ಈ ಐದು ವಿಕಾರಗಳ ಜೊತೆಯಿದೆ. ಆದ್ದರಿಂದ ಯಾವುದೇ ವಿಕಾರವೂ ಅಂಶದಷ್ಟೂ ಇರಬಾರದು ಆಗಲೇ ಹೇಳಲಾಗುತ್ತದೆ - ಪವಿತ್ರತೆಯ ವ್ಯಕ್ತಿತ್ವದ ಮೂಲಕ ಸೇವೆ ಮಾಡುವವರು.

ಇತ್ತೀಚೆಗೆ ಎರಡು ಪ್ರಕಾರದ ವ್ಯಕ್ತಿತ್ವದ ಗಾಯನವಾಗುತ್ತದೆ - ಒಂದು ಶಾರೀರಿಕ ವ್ಯಕ್ತಿತ್ವ, ಇನ್ನೊಂದು ಪೊಸಿಷನ್ನ ವ್ಯಕ್ತಿತ್ವ. ಬ್ರಾಹ್ಮಣ ಜೀವನದಲ್ಲಿ ಯಾವ ಬ್ರಾಹ್ಮಣ ಆತ್ಮನಲ್ಲಿ ಸಂತುಷ್ಟತೆಯ ಮಹಾನತೆಯಿದೆ - ಅವರ ಚಹರೆಯಲ್ಲಿ, ಅವರ ಲಕ್ಷಣದಲ್ಲಿ ಮಹಾನತೆ ಮತ್ತು ಶ್ರೇಷ್ಠ ಸ್ಥಿತಿಯ ಪೊಸಿಷನ್ನಿನ ವ್ಯಕ್ತಿತ್ವವು ಕಂಡು ಬರುತ್ತದೆ. ಯಾರ ಚಲನೆ-ಚಹರೆಯಲ್ಲಿ, ದೃಷ್ಟಿ-ವೃತ್ತಿಯಲ್ಲಿ, ಸಂತುಷ್ಟತೆಯ ವ್ಯಕ್ತಿತ್ವವು ಕಾಣಿಸುತ್ತದೆ, ಅವರೇ ತಪಸ್ವಿಯಾಗಿದ್ದಾರೆ. ಅವರ ಚಿತ್ತವು ಸದಾ ಸದಾ ಪ್ರಸನ್ನವಾಗಿರುತ್ತದೆ, ಮನಸ್ಸು-ಬುದ್ಧಿಯು ಸದಾ ಆರಾಮದಲ್ಲಿ, ಸುಖ-ಶಾಂತಿಯ ಸ್ಥಿತಿಯಲ್ಲಿರುತ್ತದೆ, ಎಂದಿಗೂ ಬೇಸರವಾಗುವುದಿಲ್ಲ. ಪ್ರತೀ ಮಾತು ಮತ್ತು ಕರ್ಮದಿಂದ, ದೃಷ್ಟಿ ಮತ್ತು ವೃತ್ತಿಯಿಂದ ಆತ್ಮಿಕ ವ್ಯಕ್ತಿತ್ವ ಮತ್ತು ರಾಯಲ್ಟಿಯ ಅನುಭವವನ್ನು ಮಾಡಿಸುತ್ತದೆ.

ವಿಶೇಷ ಆತ್ಮರನ್ನು ಅಥವಾ ಮಹಾನ್ ಆತ್ಮರನ್ನು ದೇಶದ ಅಥವಾ ವಿಶ್ವದ ವ್ಯಕ್ತಿತ್ವದವರು ಎಂದು ಹೇಳಲಾಗುತ್ತದೆ. ಪವಿತ್ರತೆಯ ವ್ಯಕ್ತಿತ್ವ ಅರ್ಥಾತ್ ಪ್ರತೀ ಕರ್ಮದಲ್ಲಿ ಮಹಾನತೆ ಮತ್ತು ವಿಶೇಷತೆ. ಆತ್ಮಿಕ ವ್ಯಕ್ತಿತ್ವವಿರುವ ಆತ್ಮರು ತನ್ನ ಶಕ್ತಿ, ಸಮಯ, ಸಂಕಲ್ಪವನ್ನು ವ್ಯರ್ಥವಾಗಿ ಕಳೆಯುವುದಿಲ್ಲ, ಸಫಲ ಮಾಡುತ್ತಾರೆ. ಇಂತಹ ವ್ಯಕ್ತಿತ್ವವಿರುವವರೆಂದಿಗೂ ಸಹ ಚಿಕ್ಕ-ಚಿಕ್ಕ ಮಾತುಗಳಲ್ಲಿ ತನ್ನ ಮನಸ್ಸು-ಬುದ್ಧಿಯನ್ನು ಬ್ಯುಸಿಯಾಗಿಟ್ಟುಕೊಳ್ಳುವುದಿಲ್ಲ. ಆತ್ಮಿಕ ವ್ಯಕ್ತಿತ್ವವಿರುವ ವಿಶೇಷ ಆತ್ಮರ ದೃಷ್ಟಿ, ವೃತ್ತಿ, ಮಾತು..... ಎಲ್ಲದರಲ್ಲಿಯೂ ಅಲೌಕಿಕವಾಗಿರುತ್ತದೆ, ಸಾಧಾರಣತೆಯಿರುವುದಿಲ್ಲ. ಸಾಧಾರಣ ಕರ್ಮವನ್ನು ಮಾಡುತ್ತಿದ್ದರೂ ಸಹ ಶಕ್ತಿಶಾಲಿ, ಕರ್ಮಯೋಗಿ ಸ್ಥಿತಿಯ ಅನುಭವ ಮಾಡಿಸುತ್ತಾರೆ. ಹೇಗೆ ಬ್ರಹ್ಮಾ ತಂದೆಯನ್ನು ನೋಡಿದಿರಿ - ಭಲೆ ಮಕ್ಕಳೊಂದಿಗೂ ಸಬ್ಜಿ ಕಟ್ ಮಾಡುತ್ತಿದ್ದರು, ಆಟವಾಡುತ್ತಿದ್ದರು ಆದರೆ ವ್ಯಕ್ತಿತ್ವವು ಸದಾ ಆಕರ್ಷಿಸುತ್ತಿತ್ತು. ಅಂದಾಗ ಫಾಲೋ ಫಾದರ್.

ಬ್ರಾಹ್ಮಣ ಜೀವನದ ವ್ಯಕ್ತಿತ್ವವು ಪ್ರಸನ್ನತೆ ಆಗಿದೆ. ಈ ವ್ಯಕ್ತಿತ್ವವನ್ನು ಅನುಭವದಲ್ಲಿ ತಂದುಕೊಳ್ಳಿ ಮತ್ತು ಅನ್ಯರನ್ನೂ ಸಹ ಅನುಭವಿಯನ್ನಾಗಿ ಮಾಡಿರಿ. ಸದಾ ಶುಭ ಚಿಂತನೆಯಿಂದ ಸಂಪನ್ನವಾಗಿರಿ, ಶುಭ ಚಿಂತಕರಾಗಿದ್ದು ಸ್ನೇಹಿ, ಸಹಯೋಗಿಯನ್ನಾಗಿ ಮಾಡಿರಿ. ಶುಭ ಚಿಂತಕ ಆತ್ಮವೇ ಸದಾ ಪ್ರಸನ್ನತೆಯ ವ್ಯಕ್ತಿತ್ವದಲ್ಲಿದ್ದು ವಿಶ್ವದ ಮುಂದೆ ವಿಶೇಷ ವ್ಯಕ್ತಿತ್ವವಿರುವವರಾಗಬಹುದು. ವರ್ತಮಾನದ ವ್ಯಕ್ತಿತ್ವವಿರುವ ಆತ್ಮರು ಕೇವಲ ಪ್ರಸಿದ್ಧರಾಗುತ್ತಾರೆ ಅರ್ಥಾತ್ ಹೆಸರುವಾಸಿಯಾಗುತ್ತಾರೆ. ಆದರೆ ತಾವು ಆತ್ಮಿಕ ವ್ಯಕ್ತಿತ್ವವಿರುವವರು ಕೇವಲ ಹೆಸರುವಾಸಿ ಅರ್ಥಾತ್ ಗಾಯನ ಯೋಗ್ಯರಲ್ಲ. ಆದರೆ ಗಾಯನ ಯೋಗ್ಯದ ಜೊತೆಗೆ ಪೂಜ್ಯನೀಯ ಯೋಗ್ಯರೂ ಆಗುತ್ತೀರಿ. ಎಷ್ಟೇ ದೊಡ್ಡ ಧರ್ಮ ಕ್ಷೇತ್ರದಲ್ಲಿ, ರಾಜ್ಯ ಕ್ಷೇತ್ರದಲ್ಲಿ, ವಿಜ್ಞಾನ ಕ್ಷೇತ್ರದಲ್ಲಿ ಘನತೆಯಿರುವವರು ಪ್ರಸಿದ್ಧವಾಗಿದ್ದಾರೆ, ಆದರೆ ತಾವು ಆತ್ಮಿಕ ವ್ಯಕ್ತಿತ್ವದ ಸಮಾನ 63 ಜನ್ಮ ಪೂಜ್ಯನೀಯರಾಗುವುದಿಲ್ಲ.

ವರದಾನ:  
ವರದಾನ: ಕಂಬೈಂಡ್ ಸ್ವರೂಪದ ಸ್ಮೃತಿಯ ಮೂಲಕ ಶ್ರೇಷ್ಠ ಸ್ಥಿತಿಯ ಸ್ಥಾನದಲ್ಲಿ ಸ್ಥಿತರಾಗಿರುವ ಸದಾ ಸಂಪನ್ನ ಭವ.

ಸಂಗಮಯುಗದಲ್ಲಿ ಶಿವ ಶಕ್ತಿಯ ಕಂಬೈಂಡ್ ಸ್ವರೂಪದ ಸ್ಮೃತಿಯಲ್ಲಿರುವುದರಿಂದ ಪ್ರತಿಯೊಂದು ಅಸಂಭವದ ಕಾರ್ಯವು ಸಂಭವವಾಗಿ ಬಿಡುತ್ತದೆ. ಇದೇ ಸರ್ವ ಶ್ರೇಷ್ಠ ಸ್ವರೂಪವಾಗಿದೆ. ಈ ಸ್ವರೂಪದಲ್ಲಿ ಸ್ಥಿತರಾಗಿರುವುದರಿಂದ ಸಂಪನ್ನ ಭವದ ವರದಾನವು ಸಿಕ್ಕಿ ಬಿಡುತ್ತದೆ. ಬಾಪ್ದಾದಾರವರು ಎಲ್ಲಾ ಮಕ್ಕಳಿಗೂ ಸದಾ ಸುಖದಾಯಿ ಸ್ಥಿತಿಯ ಸೀಟ್ ಕೊಡುತ್ತಾರೆ. ಸದಾ ಇದೇ ಸ್ಥಾನದಲ್ಲಿ ಸ್ಥಿತರಾಗಿರುತ್ತೀರೆಂದರೆ ಅತೀಂದ್ರಿಯ ಸುಖದ ಉಯ್ಯಾಲೆಯಲ್ಲಿ ಸ್ವಯಂನ್ನು ತೂಗುತ್ತಿರುತ್ತೀರಿ. ಅದಕ್ಕಾಗಿ ಕೇವಲ ವಿಸ್ಮೃತಿಯ ಸಂಸ್ಕಾರವನ್ನು ಸಮಾಪ್ತಿಗೊಳಿಸಿರಿ.

ಸ್ಲೋಗನ್:
ಶಕ್ತಿಶಾಲಿ ವೃತ್ತಿಯ ಮೂಲಕ ಆತ್ಮರನ್ನು ಯೋಗ್ಯ ಮತ್ತು ಯೋಗಿಯನ್ನಾಗಿ ಮಾಡಿರಿ.


ಮುರಳಿ ಪ್ರಶ್ನೆಗಳು:

1. ನಮಗೆ ಯಾವ ನಿಶ್ಚಯದ ನಶೆಯಿರಬೇಕು?

2. ಆತ್ಮಿಕ ಸೇನೆಯನ್ನು ಭಕ್ತಿಯಲ್ಲಿ ಯಾವ ರೀತಿ ತೋರಿಸಿದ್ದಾರೆ?

3. ಮಾಲೆಯನ್ನು ವಿಜಯ ಮಾಲೆಯೆಂದು ಏಕೆ ಹೇಳುತ್ತಾರೆ?

4. ನಮ್ಮ ಶಾಸ್ವತ ವಿಳಾಸ ಯಾವುದಾಗಿದೆ?

5. ಯಾವ ಬಲವು ನಿರ್ಭಯರನ್ನಾಗಿ ಮಾಡಿ ಬಿಡುತ್ತದೆ?

6. ನಮಗೆ ಸಹಯೋಗವೂ ಯಾವಾಗ ಸಿಗುವುದು?

7. ಬ್ರಾಹ್ಮಣ ಜೀವನದ ವಿಶೇಷತೆ ಏನಾಗಿದೆ?

8. ಆತ್ಮರಿಗೆ ನಿದ್ರೆಯ ನಶೆಯಿರುತ್ತದೆಯೆಂದರೆ ಏನು ಮಾಡುತ್ತಾರೆ?

9. ಪ್ರತಿಯೊಂದು ಅಸಂಭವದ ಕಾರ್ಯವು ಸಂಭವವಾಗಿ ಬಿಡಲು ಯಾವ ಸ್ಮೃತಿಯಿರಬೇಕು?