27.11.19 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಂದೆಯ
ದೃಷ್ಟಿಯು ಹದ್ದು (ಮಿತಿ) ಮತ್ತು ಬೇಹದ್ದಿನಿಂದ ದೂರವಿರುತ್ತದೆ, ನೀವೂ ಸಹ ಹದ್ದು (ಸತ್ಯಯುಗ),
ಬೇಹದ್ದ್ (ಕಲಿಯುಗ) ನಿಂದ ದೂರ ಹೋಗಬೇಕಾಗಿದೆ”
ಪ್ರಶ್ನೆ:
ಶ್ರೇಷ್ಠಾತಿ ಶ್ರೇಷ್ಠ ಜ್ಞಾನರತ್ನಗಳ ಧಾರಣೆಯು ಯಾವ ಮಕ್ಕಳಲ್ಲಿ ಚೆನ್ನಾಗಿ ಆಗುತ್ತದೆ?
ಉತ್ತರ:
ಯಾರ ಬುದ್ಧಿಯೋಗವು ಒಬ್ಬ ತಂದೆಯ ಜೊತೆಯಿರುತ್ತದೆ, ಪವಿತ್ರವಾಗಿರುತ್ತಾರೆ, ಅವರಿಗೆ ಜ್ಞಾನರತ್ನಗಳ
ಧಾರಣೆಯು ಬಹಳ ಚೆನ್ನಾಗಿ ಆಗುತ್ತದೆ. ಈ ಜ್ಞಾನಕ್ಕಾಗಿ ಶುದ್ಧವಾದ ಪಾತ್ರೆಯು ಬೇಕಾಗಿದೆ,
ಉಲ್ಟಾ-ಸುಲ್ಟಾ ಸಂಕಲ್ಪವು ಸಮಾಪ್ತಿಯಾಗಬೇಕಾಗಿದೆ. ತಂದೆಯ ಜೊತೆ ಸಂಬಂಧವನ್ನು
ಜೋಡಿಸುತ್ತಾ-ಜೋಡಿಸುತ್ತಾ ಪಾತ್ರೆಯು ಶುದ್ಧವಾದಾಗ ರತ್ನಗಳು ನಿಲ್ಲಲು ಸಾಧ್ಯವಾಗುತ್ತದೆ.
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯು ಕುಳಿತು ಪ್ರತಿನಿತ್ಯವೂ ತಿಳಿಸುತ್ತಾರೆ. ಈ
ಸೃಷ್ಟಿಚಕ್ರವು ಜ್ಞಾನ-ಭಕ್ತಿ ಹಾಗೂ ವೈರಾಗ್ಯದಿಂದ ಮಾಡಲ್ಪಟ್ಟಿದೆ ಎಂದು ಮಕ್ಕಳಿಗೆ ತಿಳಿಸಲಾಗಿದೆ.
ನೀವು ಮಕ್ಕಳು ಹದ್ದು ಹಾಗೂ ಬೇಹದ್ದಿನಿಂದ ದೂರ ಹೋಗಬೇಕಾಗಿದೆಯೆಂದು ಬುದ್ಧಿಯಲ್ಲಿ
ಜ್ಞಾನವಿರಬೇಕಾಗಿದೆ. ತಂದೆಯಂತೂ ಹದ್ದು ಹಾಗೂ ಬೇಹದ್ದಿನಿಂದ ದೂರವಿದ್ದಾರೆ ಎಂಬುದರ ಅರ್ಥವನ್ನೂ
ಸಹ ತಿಳಿಯಬೇಕಾಗಿದೆ. ಆತ್ಮಿಕ ತಂದೆಯು ಕುಳಿತು ತಿಳಿಸುತ್ತಾರೆ, ಜ್ಞಾನ, ಭಕ್ತಿ ನಂತರ
ವೈರಾಗ್ಯವೆಂಬ ವಿಚಾರವನ್ನು ತಿಳಿಸಬೇಕು. ಜ್ಞಾನವನ್ನು ದಿನವೆಂದು ಕರೆಯಲಾಗುವುದು, ಆಗ ಹೊಸ
ಪ್ರಪಂಚವಿರುತ್ತದೆ, ಅಲ್ಲಿ ಈ ಭಕ್ತಿಯೆಂಬ ಅಜ್ಞಾನವಿರುವುದಿಲ್ಲ, ಅದು ಹದ್ದಿನ ಪ್ರಪಂಚವಾಗಿದೆ
ಏಕೆಂದರೆ ಅಲ್ಲಿ ಕಡಿಮೆ ಜನರಿರುತ್ತಾರೆ ನಂತರ ನಿಧಾನ-ನಿಧಾನವಾಗಿ ವೃದ್ಧಿಯಾಗುತ್ತದೆ. ಅರ್ಧ ಸಮಯದ
ನಂತರ ಭಕ್ತಿಯು ಪ್ರಾರಂಭವಾಗುತ್ತದೆ. ಅಲ್ಲಿ (ಸತ್ಯಯುಗ) ಸನ್ಯಾಸ ಧರ್ಮವಿರುವುದಿಲ್ಲ, ಅಲ್ಲಿ
ಸನ್ಯಾಸ ಅಥವಾ ತ್ಯಾಗವಿರುವುದಿಲ್ಲ, ನಂತರ ಸೃಷ್ಟಿಯು ವೃದ್ಧಿಯಾಗುತ್ತದೆ. ಮೇಲಿನಿಂದ ಆತ್ಮಗಳು
ಬರುತ್ತವೆ, ಇಲ್ಲಿ ವೃದ್ಧಿಯಾಗುತ್ತಿರುತ್ತದೆ. ಹದ್ದಿನಲ್ಲಿ ಪ್ರಾರಂಭವಾದದ್ದು ಬೇಹದ್ದಿನಲ್ಲಿ
ಹೊರಟು ಹೋಗುತ್ತದೆ. ತಂದೆಗಂತೂ ಹದ್ದು ಹಾಗೂ ಬೇಹದ್ದಿನಿಂದ ದೃಷ್ಟಿಯು ದೂರ ಹೋಗುತ್ತದೆ.
ಹದ್ದಿನಲ್ಲಿ ಎಷ್ಟೊಂದು ಕಡಿಮೆ ಜನರಿರುತ್ತಾರೆಂದು ನೀವು ತಿಳಿದುಕೊಂಡಿದ್ದೀರಿ, ನಂತರ ರಾವಣ
ರಾಜ್ಯದಲ್ಲಿ ಎಷ್ಟೊಂದು ವೃದ್ಧಿಯಾಗುತ್ತದೆ. ಈಗ ನೀವು ಹದ್ದು ಹಾಗೂ ಬೇಹದ್ದಿನಿಂದ ದೂರ ಹೋಗಬೇಕು.
ಸತ್ಯಯುಗದಲ್ಲಿ ಎಷ್ಟು ಚಿಕ್ಕ ಪ್ರಪಂಚವಿರುತ್ತದೆ! ಅಲ್ಲಿ ಸನ್ಯಾಸ ಅಥವಾ ವೈರಾಗ್ಯ
ಮೊದಲಾದುವುಗಳಿರುವುದಿಲ್ಲ. ದ್ವಾಪರದ ನಂತರದಿಂದ ಅನ್ಯ ಧರ್ಮಗಳು ಪ್ರಾರಂಭವಾಗುತ್ತದೆ. ಸನ್ಯಾಸ
ಧರ್ಮವು ಪ್ರಾರಂಭವಾಗಿ ಮನೆ-ಮಠವನ್ನೇ ಸನ್ಯಾಸ ಮಾಡುತ್ತಾರೆ. ಅದು ಹಠಯೋಗ ಹಾಗೂ ಹದ್ದಿನ
ಸನ್ಯಾಸವಾಗಿದೆ, ಕೇವಲ ಮನೆ-ಮಠವನ್ನು ಬಿಟ್ಟು ಕಾಡಿಗೆ ಹೊರಟು ಹೋಗುತ್ತಾರೆ. ದ್ವಾಪರದಿಂದ ಭಕ್ತಿಯು
ಪ್ರಾರಂಭವಾಗುತ್ತದೆ, ಜ್ಞಾನವಂತೂ ಇರುವುದಿಲ್ಲ. ಜ್ಞಾನವೆಂದರೆ ಸತ್ಯಯುಗ-ತ್ರೇತಾಯುಗದಲ್ಲಿ
ಸುಖವಿರುತ್ತದೆ, ದ್ವಾಪರ-ಕಲಿಯುಗದಲ್ಲಿ ಅಜ್ಞಾನ ಹಾಗೂ ದುಃಖವಿರುತ್ತದೆ. ಇದನ್ನು ನೀವು ಬಹಳ
ಚೆನ್ನಾಗಿ ತಿಳಿದುಕೊಳ್ಳಬೇಕು, ನಂತರ ದುಃಖ ಹಾಗೂ ಸುಖದಿಂದ ದೂರ ಹೋಗಬೇಕಾಗಿದೆ. ಹದ್ದು ಹಾಗೂ
ಬೇಹದ್ದಿನಿಂದ ದೂರ ಹೋಗಬೇಕಾಗಿದೆ. ಮನುಷ್ಯರೂ ಸಹ ಆಕಾಶ ಮತ್ತು ಸಮುದ್ರವು ಎಲ್ಲಿಯವರೆಗೆ ಇದೆಯೆಂದು
ಸಂಶೋಧನೆ ಮಾಡುತ್ತಾರೆ. ಎಷ್ಟೇ ಪ್ರಯತ್ನ ಪಟ್ಟರೂ ಅಂತ್ಯವನ್ನು ತಿಳಿಯಲು ಆಗುವುದಿಲ್ಲ,
ವಿಮಾನದಲ್ಲಿಯೂ ಹೋಗುತ್ತಾರೆ, ಅಂತ್ಯವನ್ನು ತಲುಪಿ ಮತ್ತೆ ಹಿಂತಿರುಗಲು ಅಷ್ಟೊಂದು ಪೆಟ್ರೋಲ್
ಬೇಕಲ್ಲವೆ. ಬಹಳ ದೂರದವರೆಗೆ ಹೋಗುತ್ತಾರೆ. ಆದರೆ ಬೇಹದ್ದಿನಲ್ಲಿ ಹೋಗಲು ಸಾಧ್ಯವಿಲ್ಲ, ಒಂದು
ನಿರ್ಧಿಷ್ಠ ಸ್ಥಾನದವರೆಗೆ ಹೋಗುತ್ತಾರೆ. ನೀವಂತೂ ಹದ್ದು ಹಾಗೂ ಬೇಹದ್ದಿನಿಂದ ದೂರ ಹೋಗುತ್ತೀರಿ.
ಮೊದಲು ಹೊಸ ಪ್ರಪಂಚವು ಹದ್ದಿನಲ್ಲಿತ್ತೆಂದು ನೀವು ತಿಳಿಸಿಕೊಡಬಹುದು, ಅಲ್ಲಿ ಬಹಳ ಕಡಿಮೆ
ಮನುಷ್ಯರಿರುತ್ತಾರೆ, ಅದನ್ನು ಸತ್ಯಯುಗವೆಂದು ಕರೆಯಲಾಗುವುದು. ನೀವು ಮಕ್ಕಳಲ್ಲಿ ರಚನೆಯ
ಆದಿ-ಮಧ್ಯ-ಅಂತ್ಯದ ಜ್ಞಾನವಿರುತ್ತದೆ, ಈ ಜ್ಞಾನವು ಬೇರೆ ಯಾರಲ್ಲಿಯೂ ಇಲ್ಲ. ನಿಮಗೆ ತಿಳಿಸಿ
ಕೊಡುವಂತಹವರು ತಂದೆಯಾಗಿದ್ದಾರೆ, ಅವರು ಹದ್ದು ಹಾಗೂ ಬೇಹದ್ದಿನಿಂದ ದೂರವಿದ್ದಾರೆ. ತಂದೆಯ ವಿನಃ
ಬೇರೆ ಯಾರೂ ಸಹ ತಿಳಿಸಿಕೊಡಲು ಸಾಧ್ಯವಿಲ್ಲ. ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು
ತಿಳಿಸುತ್ತಾರೆ ನಂತರ ಇದರಿಂದಲೂ ದೂರ ಹೋಗಿ ಎಂದು ಹೇಳುತ್ತಾರೆ. ಅಲ್ಲಂತೂ (ಆಕಾಶ) ಏನೂ
ಇರುವುದಿಲ್ಲ ಎಷ್ಟೊಂದು ದೂರ ಹೋಗುತ್ತಾರೆ! ಇದನ್ನು ಹದ್ದು ಹಾಗೂ ಬೇಹದ್ದಿನಿಂದ ದೂರವೆಂದು
ಕರೆಯಲಾಗುವುದು. ಇದರ ಅಂತ್ಯವನ್ನು ಯಾರೂ ಸಹ ತಿಳಿಯಲು ಸಾಧ್ಯವಿಲ್ಲ, ಆದ್ದರಿಂದ ಬೇಹಂತ್ ಎಂದು
ಹೇಳುತ್ತಾರೆ. ಬೇಹಂತ್ ಎಂದು ಹೇಳುವುದು ಸಹಜವಾಗಿದೆ ಆದರೆ ಅಂತ್ಯದ ಅರ್ಥವನ್ನು
ತಿಳಿದುಕೊಳ್ಳಬೇಕಾಗಿದೆ. ಈಗ ನಿಮಗೆ ತಂದೆಯು ತಿಳುವಳಿಕೆಯನ್ನು ಕೊಡುತ್ತಾರೆ. ತಂದೆಯು
ತಿಳಿಸುತ್ತಾರೆ - ನಾನು ಹದ್ದನ್ನೂ ತಿಳಿದುಕೊಂಡಿದ್ದೇನೆ, ಬೇಹದ್ದನ್ನೂ ತಿಳಿದುಕೊಂಡಿದ್ದೇನೆ.
ಯಾವ-ಯಾವ ಧರ್ಮವು ಯಾವ-ಯಾವ ಸಮಯದಲ್ಲಿ ಸ್ಥಾಪನೆಯಾಯಿತು, ದೃಷ್ಟಿಯು ಸತ್ಯಯುಗದ ಹದ್ದಿನ ಕಡೆ
ಹೋಗುತ್ತದೆ ನಂತರ ಬೇಹದ್ದಿನ ಕಲಿಯುಗದ ಕಡೆ ಬರುತ್ತದೆ. ನಂತರ ನಾವು ಅವುಗಳಿಗಿಂತಲೂ ದೂರ
ಹೋಗುತ್ತೇವೆ. ಅಲ್ಲಿ ಏನೂ ಇರುವುದಿಲ್ಲ. ಸೂರ್ಯ-ಚಂದ್ರರ ಮೇಲೆ ಹೋಗುತ್ತೇವೆ, ಅಲ್ಲಿ ನಮ್ಮ
ಶಾಂತಿಧಾಮ, ಮಧುರ ಮನೆಯಿದೆ. ನಿಮ್ಮ ಸತ್ಯಯುಗವು ಮಧುರ ಮನೆಯಾಗಿದೆ, ಅಲ್ಲಿ ಶಾಂತಿಯೂ ಇದೆ,
ರಾಜ್ಯಭಾಗ್ಯದ ಸುಖವೂ ಇದೆ - ಎರಡೂ ಇದ್ದೇ ಇರುತ್ತದೆ. ಮನೆಗೆ ಹೋದಾಗ ಅಲ್ಲಿ ಕೇವಲ
ಶಾಂತಿಯಿರುತ್ತದೆ, ಸುಖದ ಹೆಸರನ್ನು ತೆಗೆದುಕೊಳ್ಳುವುದಿಲ್ಲ. ಈಗ ನೀವು ಶಾಂತಿಯ ಸ್ಥಾಪನೆ
ಮಾಡುತ್ತಿದ್ದೀರಿ. ಸುಖ-ಶಾಂತಿಯ ಸ್ಥಾಪನೆಯಾಗುತ್ತಿದೆ. ಅಲ್ಲಂತೂ ಶಾಂತಿಯೂ ಇದೆ, ಸುಖವೂ ಇದೆ.
ಮೂಲವತನದಲ್ಲಿ ಸುಖದ ಮಾತಿರುವುದಿಲ್ಲ.
ಅರ್ಧ ಕಲ್ಪ ನಿಮ್ಮ ರಾಜ್ಯವು ನಡೆಯುತ್ತದೆ, ಅರ್ಧ ಕಲ್ಪದ ನಂತರ ರಾವಣ ರಾಜ್ಯವು ಬರುತ್ತದೆ. ಪಂಚ
ವಿಕಾರಗಳಿಂದ ಅಶಾಂತಿಯು ಬರುತ್ತದೆ. 2500 ವರ್ಷಗಳು ನೀವು ರಾಜ್ಯಭಾರ ಮಾಡುತ್ತೀರಿ, 2500 ವರ್ಷಗಳ
ನಂತರ ರಾವಣ ರಾಜ್ಯವು ಬರುತ್ತದೆ. ಅವರಂತೂ ಲಕ್ಷಾಂತರ ವರ್ಷಗಳೆಂದು ಬರೆದು ಬಿಟ್ಟಿದ್ದಾರೆ. ಹೇಗೆ
ಒಮ್ಮೆಲೆ ಬುದ್ದುಗಳನ್ನಾಗಿ ಮಾಡಿ ಬಿಟ್ಟಿದ್ದಾರೆ. ಕಲ್ಪದ 5000 ವರ್ಷಗಳನ್ನು ಲಕ್ಷಾಂತರ
ವರ್ಷಗಳೆಂದು ಹೇಳುವುದು ತಿಳುವಳಿಕೆಯಿಲ್ಲದ ಮಾತೆಂದು ಹೇಳುವುದಲ್ಲವೆ. ಸ್ವಲ್ಪವೂ ಸಭ್ಯತೆಯಿಲ್ಲ,
ದೇವತೆಗಳಲ್ಲಿ ಎಷ್ಟೊಂದು ದೈವೀ ಸಭ್ಯತೆಯಿತ್ತು, ಈಗ ಅದು ಅಸಭ್ಯತೆಯಾಗಿ ಬಿಟ್ಟಿದೆ, ಏನೂ
ತಿಳಿದುಕೊಂಡಿಲ್ಲ. ಅಸುರೀ ಗುಣವು ಬಂದು ಬಿಟ್ಟಿದೆ. ಮೊದಲು ನೀವೂ ಸಹ ಏನೂ ತಿಳಿದುಕೊಂಡಿರಲಿಲ್ಲ,
ಕಾಮ ಕಟಾರಿಯನ್ನು ನಡೆಸುವುದು ಆದಿ-ಮಧ್ಯ-ಅಂತ್ಯದಲ್ಲಿ ದುಃಖಿಯನ್ನಾಗಿ ಮಾಡುತ್ತದೆ. ಆದುದರಿಂದ
ಅದನ್ನು ರಾವಣ ಸಂಪ್ರದಾಯವೆಂದು ಕರೆಯಲಾಗುವುದು. ರಾಮನು ಕಪಿ ಸೈನ್ಯವನ್ನು ಕಟ್ಟಿದ್ದನೆಂದು
ತೋರಿಸುತ್ತಾರೆ. ತ್ರೇತಾಯುಗದಲ್ಲಿರುವಂತಹ ಕಪಿ ಸೈನ್ಯವನ್ನು ತೆಗೆದುಕೊಂಡನೆಂದು ತೋರಿಸುತ್ತಾರೆ.
ತ್ರೇತಾಯುಗದಲ್ಲಿರುವಂತಹ ರಾಮನಿಗೆ ಕಪಿ ಸೈನ್ಯವು ಎಲ್ಲಿಂದ ಬಂದಿತು ನಂತರ ರಾಮನ ಸೀತೆಯನ್ನು
ಕದ್ದರೆಂದು ಹೇಳುತ್ತಾರೆ. ಇಂತಹ ಮಾತುಗಳು ಅಲ್ಲಿ ಇರುವುದೇ ಇಲ್ಲ. ಇಲ್ಲಿ ಜೀವ ಜಂತು ಮೊದಲಾದ 84
ಲಕ್ಷ ಯೋನಿಗಳು ಸತ್ಯಯುಗದಲ್ಲಿ ಇರುತ್ತವೆಯೇನು? ಇದೆಲ್ಲವೂ ಬೇಹದ್ದಿನ ನಾಟಕವನ್ನು ತಂದೆಯೇ ಕುಳಿತು
ತಿಳಿಸುತ್ತಾರೆ. ಮಕ್ಕಳು ಎಷ್ಟೊಂದು ದೂರಾಂದೇಶಿಗಳಾಗಬೇಕು! ಮೊದಲು ನಿಮಗೂ ಸಹ ತಿಳಿದಿರಲಿಲ್ಲ,
ಮನುಷ್ಯರಾಗಿ ನಾಟಕವನ್ನು ತಿಳಿದಿಲ್ಲ. ಈಗ ಎಲ್ಲರಿಗಿಂತಲೂ ದೊಡ್ಡವರು ಯಾರೆಂದು ನೀವು
ತಿಳಿದುಕೊಂಡಿದ್ದೀರಿ. ಶ್ರೇಷ್ಠಾತಿ ಶ್ರೇಷ್ಠ ಭಗವಂತನಾಗಿದ್ದಾರೆ. ನಿನ್ನ ಹೆಸರೂ ಶ್ರೇಷ್ಠ....
ಎಂದು ಶ್ಲೋಕದಲ್ಲಿ ಹೇಳುತ್ತಾರೆ. ಈಗ ಇದೆಲ್ಲವೂ ನಿಮ್ಮ ವಿನಃ ಯಾರ ಬುದ್ಧಿಯಲ್ಲಿಯೂ ಇಲ್ಲ.
ನಿಮ್ಮಲ್ಲಿಯೂ ನಂಬರ್ವಾರ್ ಇದ್ದಾರೆ, ತಂದೆಯು ಹದ್ದು ಹಾಗೂ ಬೇಹದ್ದು ಎರಡರ ರಹಸ್ಯವನ್ನೂ
ತಿಳಿಸುತ್ತಾರೆ. ಅದಕ್ಕಿಂತಲೂ ದೂರ ಬೇರೇನೂ ಇಲ್ಲ, ಅದು ನೀವಾತ್ಮಗಳು ಇರುವಂತಹ ಸ್ಥಾನವಾಗಿದೆ,
ಅದನ್ನು ಬ್ರಹ್ಮಾಂಡವೆಂದು ಕರೆಯಲಾಗುವುದು. ಅಲ್ಲಿ ನೀವು ಆಕಾಶ ತತ್ವದಲ್ಲಿ ಕುಳಿತಂತೆ ಇರುತ್ತದೆ.
ಅದೇನು ಕಣ್ಣಿಗೆ ಕಾಣುತ್ತದೆಯೇನು? ರೇಡಿಯೋದಲ್ಲಿಯೂ ಸಹ ಆಕಾಶವಾಣಿಯೆಂದು ಹೇಳುತ್ತಾರೆ. ಈಗ ಈ
ಆಕಾಶವಂತೂ ಬೇಅಂತ್ ಆಗಿದೆ, ಅದರ ಅಂತ್ಯವನ್ನು ತಿಳಿಯಲು ಸಾಧ್ಯವಿಲ್ಲ. ಆಕಾಶವಾಣಿಯೆಂದಾಗ ಮನುಷ್ಯರು
ಏನೆಂದು ತಿಳಿಯುತ್ತಾರೆ. ಇವರ ಮುಖವು ಆಕಾಶವಿದ್ದಂತೆ, ಮುಖದಿಂದ ವಾಣಿ (ಶಬ್ಧ) ಬರುತ್ತದೆ. ಇದಂತೂ
ಸಾಮಾನ್ಯ ಮಾತಾಗಿದೆ. ಮುಖದಿಂದ ಬರುವ ಶಬ್ಧಕ್ಕೆ ಆಕಾಶವಾಣಿಯೆಂದು ಕರೆಯಲಾಗುವುದು. ತಂದೆಯೂ ಸಹ ಈ
ರೀತಿ ನುಡಿಸಬೇಕಾಗುತ್ತದೆ. ನೀವು ಮಕ್ಕಳು ನಿಮ್ಮದೆಲ್ಲಾ ರಹಸ್ಯವನ್ನು ತಿಳಿದಿದ್ದೀರಿ, ನಿಮಗೆ
ನಿಶ್ಚಯವೂ ಇದೆ, ಇದು ಬಹಳ ಸಹಜವಾಗಿದೆ. ಹೇಗೆ ನಾವಾತ್ಮಗಳಾಗಿದ್ದೇವೆಯೋ ಹಾಗೆಯೇ ತಂದೆಯು
ಪರಮಾತ್ಮನಾಗಿದ್ದಾರೆ. ಶ್ರೇಷ್ಠಾತಿ ಶ್ರೇಷ್ಠ ಆತ್ಮನಾಗಿದ್ದಾರಲ್ಲವೆ! ಎಲ್ಲರಿಗೂ ತಮ್ಮ ತಮ್ಮದೇ
ಆದಂತಹ ಪಾತ್ರವು ಸಿಕ್ಕಿದೆ, ಎಲ್ಲರಿಗಿಂತಲೂ ಶ್ರೇಷ್ಠಾತಿ ಶ್ರೇಷ್ಠ ಭಗವಂತನಾಗಿದ್ದು ನಂತರ
ಪ್ರವೃತ್ತಿ ಮಾರ್ಗದ ಈ (ಬ್ರಹ್ಮಾ-ಸರಸ್ವತಿ) ಜೋಡಿ ಮಣಿಗಳಾಗಿವೆ. ನಂತರ ನಂಬರ್ವಾರ್ ಮಾಲೆಯು
ಎಷ್ಟೊಂದು ಚಿಕ್ಕದಾಗಿದೆ ಎಂದು ನೋಡಿ. ಹೀಗೆ ಸೃಷ್ಟಿಯು ವೃದ್ಧಿಯಾಗುತ್ತಾ-ಆಗುತ್ತಾ ಎಷ್ಟೊಂದು
ದೊಡ್ಡದಾಗುತ್ತದೆ. ಎಷ್ಟೊಂದು ಕೋಟ್ಯಾಂತರ ಮಣಿಗಳು ಅರ್ಥಾತ್ ಆತ್ಮಗಳ ಮಾಲೆಯಿದೆ. ಇದೆಲ್ಲವೂ
ವಿದ್ಯೆಯಾಗಿದೆ. ತಂದೆಯು ತಿಳಿಸುವುದನ್ನು ಬುದ್ಧಿಯಲ್ಲಿ ಚೆನ್ನಾಗಿ ಧಾರಣೆ ಮಾಡಿ. ವೃಕ್ಷದ
ವಿಸ್ತಾರವನ್ನಂತೂ ನೀವು ಕೇಳುತ್ತಿರುತ್ತೀರಿ. ಬೀಜವು ಮೇಲಿದೆ, ಇದು ಭಿನ್ನವಾಗಿರುವ ವೃಕ್ಷವಾಗಿದೆ.
ಇದರ ಆಯಸ್ಸು ಎಷ್ಟಿದೆ! ವೃಕ್ಷವು ವೃದ್ಧಿಯಾಗುತ್ತಾ ಇರುತ್ತದೆ ಎಂದು ಇಡೀ ದಿನ ಬುದ್ಧಿಯಲ್ಲಿರಬೇಕು.
ಈ ಸೃಷ್ಟಿರೂಪಿ ಕಲ್ಪವೃಕ್ಷದ ಆಯಸ್ಸು ಸಂಪೂರ್ಣ ಯಥಾರ್ಥವಾಗಿದೆ. 5000 ವರ್ಷಗಳಲ್ಲಿ ಒಂದು
ಸೆಕೆಂಡಿನ ವ್ಯತ್ಯಾಸವೂ ಆಗುವುದಿಲ್ಲ. ನೀವು ಮಕ್ಕಳ ಬುದ್ಧಿಯಲ್ಲಿ ಎಷ್ಟೊಂದು ಜ್ಞಾನವಿದೆ! ಯಾರು
ಪವಿತ್ರರಾಗಿರುವವರು ಅವರು ಶಕ್ತಿಶಾಲಿಯಾಗಿರುತ್ತಾರೆ. ಈ ಜ್ಞಾನವನ್ನು ಧಾರಣೆ ಮಾಡಲು ಚಿನ್ನದ
ಪಾತ್ರೆಯು ಬೇಕಾಗಿದೆ. ಇದು ನಂತರ ಸಹಜವಾಗಿ ಬಿಡುತ್ತದೆ. ಹೇಗೆ ತಂದೆಗೂ ಸಹ ಸಹಜವಾಗಿದೆಯಲ್ಲವೆ.
ನಂತರ ನಿಮ್ಮನ್ನು ಮಾಸ್ಟರ್ ಜ್ಞಾನಪೂರ್ಣರೆಂದು ಕರೆಯಲಾಗುವುದು. ನಂತರ ನಂಬರ್ವಾರ್
ಪುರುಷಾರ್ಥದನುಸಾರ ಮಾಲೆಯ ಮಣಿಯಾಗುತ್ತೀರಿ. ಇಂತಹ ಮಾತುಗಳನ್ನು ತಂದೆಯ ವಿನಃ ಬೇರೆ ಯಾರೂ ಸಹ
ತಿಳಿಸಲು ಸಾಧ್ಯವಿಲ್ಲ, ಈ ಆತ್ಮನೂ ತಿಳಿಸುತ್ತಿದ್ದಾರೆ. ತಂದೆಯೂ ಸಹ ಈ ತನುವಿನ ಮೂಲಕ
ತಿಳಿಸುತ್ತಾರೆ, ಆದರೆ ದೇವತೆಗಳ ಶರೀರದ ಮುಖಾಂತರ ತಿಳಿಸುವುದಿಲ್ಲ. ತಂದೆಯು ಒಮ್ಮೆಯೇ ಬಂದು
ಗುರುವಾಗುತ್ತಾರೆ ಆದರೂ ಸಹ ತಂದೆಯ ಪಾತ್ರವನ್ನು ಅಭಿನಯಿಸಬೇಕಾಗುತ್ತದೆ. ತಂದೆಯು 5000 ವರ್ಷಗಳ
ನಂತರ ಬಂದು ಪಾತ್ರವನ್ನಭಿನಯಿಸುತ್ತಾರೆ.
ತಂದೆಯು ತಿಳಿಸುತ್ತಾರೆ - ನಾನು ಶ್ರೇಷ್ಠಾತಿ ಶ್ರೇಷ್ಠನಾಗಿದ್ದೇನೆ. ನಂತರ ಜೋಡಿಮಣಿಗಳು
ಶ್ರೇಷ್ಠವಾಗಿವೆ. ಯಾರು ಆದಿಯಲ್ಲಿ ಮಹಾರಾಜ-ಮಹಾರಾಣಿಯಾಗಿದ್ದಾರೆಯೋ ಅವರೇ ಆದಿ ದೇವ - ಆದಿ
ದೇವಿಯಾಗುತ್ತಾರೆ. ಇದೆಲ್ಲಾ ಜ್ಞಾನವು ನಿಮ್ಮ ಬುದ್ಧಿಯಲ್ಲಿದೆ. ನೀವು ಎಲ್ಲಿಯೇ
ತಿಳಿಸಿಕೊಟ್ಟರೆಂದಾಗ ಹಾ! ಇವರು ಸರಿಯಾಗಿ ತಿಳಿಸುತ್ತಿದ್ದಾರೆಂದು ಆಶ್ಚರ್ಯ ಪಡುತ್ತಾರೆ. ಇವೆಲ್ಲಾ
ಮಾತುಗಳನ್ನು ಧಾರಣೆ ಮಾಡಬೇಕಾಗಿದೆ ಆದರೆ ಮಕ್ಕಳಲ್ಲಿ ಧಾರಣೆಯಾಗುವುದಿಲ್ಲ, ತಂದೆಯೇ ಮನುಷ್ಯ
ಸೃಷ್ಟಿಯ ಬೀಜರೂಪ, ಜ್ಞಾನ ಪೂರ್ಣನಾಗಿದ್ದಾರೆ, ಅವರ ವಿನಃ ಬೇರೆ ಯಾರೂ ಸಹ ಜ್ಞಾನವನ್ನು ಕೊಡಲು
ಅಸಾಧ್ಯವಾಗಿದೆ, ಯಾವುದೇ ಕಷ್ಟವಿಲ್ಲ. ಒಂದನೆಯದಾಗಿ ನೆನಪಿನ ಯಾತ್ರೆಯಲ್ಲಿರಬೇಕು ನಂತರ
ಜ್ಞಾನರತ್ನಗಳನ್ನಿಡಲು ಪವಿತ್ರ ಪಾತ್ರೆಯು (ಆತ್ಮ) ಬೇಕಾಗುತ್ತದೆ. ಇದು ಶ್ರೇಷ್ಠಾತಿ ಶ್ರೇಷ್ಠ
ರತ್ನವಾಗಿದೆ, ತಂದೆಯು ರತ್ನದ ವ್ಯಾಪಾರಿಯಾಗಿದ್ದರು. ಬಹಳ ಉತ್ತಮ ವಜ್ರ, ರತ್ನ, ಮಾಣಿಕ್ಯ
ಮೊದಲಾದುವುಗಳು ಬರುತ್ತಿದ್ದವು ಅವುಗಳನ್ನು ಬೆಳ್ಳಿಯ ಡಬ್ಬದಲ್ಲಿ ಹತ್ತಿ ಮುಂತಾದುವುಗಳಲ್ಲಿ
ಸುರಕ್ಷಿತವಾಗಿಡುತ್ತಿದ್ದರು. ಅದನ್ನು ಯಾರಾದರೂ ನೋಡಿದರೆ ಇದು ಬಹಳ ಫಸ್ಟ್ಕ್ಲಾಸ್ ವಸ್ತು ಎಂದು
ಹೇಳುತ್ತಿದ್ದರು. ಇದೂ ಸಹ ಹಾಗೆಯೇ ಆಗಿದೆ. ಉತ್ತಮ ವಸ್ತುವು ಉತ್ತಮ ಪಾತ್ರೆಯಲ್ಲಿಯೇ ಶೋಭಿಸುತ್ತದೆ.
ನಿಮ್ಮ ಕಿವಿ ಕೇಳುತ್ತದೆ ನಂತರ ಧಾರಣೆಯಾಗುತ್ತದೆ. ಪವಿತ್ರವಾಗಿದ್ದು ಬುದ್ಧಿಯೋಗವು ತಂದೆಯೊಂದಿಗೆ
ಇದ್ದಾಗ ಧಾರಣೆಯು ಚೆನ್ನಾಗಿಯೇ ಆಗುತ್ತದೆ, ಇಲ್ಲವೆಂದರೆ ಎಲ್ಲವೂ ಹೊರಟು ಹೋಗುತ್ತದೆ. ಆತ್ಮವು
ಎಷ್ಟೊಂದು ಸೂಕ್ಷ್ಮವಾಗಿದೆ, ಅದರಲ್ಲಿ ಎಷ್ಟೊಂದು ಜ್ಞಾನವು ತುಂಬಿದೆ. ಇಷ್ಟೊಂದು ಉತ್ತಮ, ಶುದ್ಧ
ಪಾತ್ರೆಯು ಬೇಕಾಗಿದೆ, ಯಾವುದೇ ಸಂಕಲ್ಪವೂ ಬರಬಾರದು. ಉಲ್ಟಾ-ಸುಲ್ಟಾ ಸಂಕಲ್ಪವು ಸಮಾಪ್ತಿಯಾಗಬೇಕು.
ಎಲ್ಲಾ ಕಡೆಯಿಂದ ಬುದ್ಧಿಯೋಗವನ್ನು ದೂರ ಮಾಡಬೇಕು. ನನ್ನ ಜೊತೆ ಸಂಬಂಧವನ್ನು
ಜೋಡಿಸುತ್ತಾ-ಜೋಡಿಸುತ್ತಾ ಬುದ್ಧಿರೂಪಿ ಪಾತ್ರೆಯನ್ನು ರತ್ನಗಳು ನಿಲ್ಲುವಂತೆ ಚಿನ್ನವನ್ನಾಗಿ
ಮಾಡಿಕೊಳ್ಳಿ ನಂತರ ಅನ್ಯರಿಗೆ ದಾನ ಮಾಡಿ. ಭಾರತವನ್ನು ಮಹಾದಾನಿಯೆಂದು ಕರೆಯಲಾಗುತ್ತದೆ, ಭಾರತೀಯರು
ಬಹಳ ಧನ ದಾನ ಮಾಡುತ್ತಾರೆ. ಅದರೆ ಇದು ಅವಿನಾಶಿ ಜ್ಞಾನರತ್ನಗಳ ದಾನವಾಗಿದೆ. ದೇಹ ಸಹಿತ ಎಲ್ಲವನ್ನೂ
ಬಿಟ್ಟು ಒಬ್ಬರೊಂದಿಗೆ ಬುದ್ಧಿಯ ಸಂಬಂಧವನ್ನು ಜೋಡಿಸಬೇಕು. ನಾವಂತೂ ತಂದೆಯ ಮಕ್ಕಳಾಗಿದ್ದೇವೆ ಎಂದು
ಹೇಳುವುದರಲ್ಲಿಯೇ ಕಷ್ಟವೆನಿಸುತ್ತದೆ. ಗುರಿಯನ್ನಂತೂ ತಂದೆಯು ತಿಳಿಸಿ ಬಿಡುತ್ತಾರೆ. ಪುರುಷಾರ್ಥ
ಮಾಡುವುದು ಮಕ್ಕಳ ಕರ್ತವ್ಯವಾಗಿದೆ. ಈಗಲೇ ಇಷ್ಟೊಂದು ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯ
ಅದಕ್ಕಾಗಿ ಯಾವುದೇ ಉಲ್ಟಾ-ಸುಲ್ಟಾ ಸಂಕಲ್ಪಗಳು ಬಾರದೇ ಇರಲಿ. ತಂದೆಯೇ ಜ್ಞಾನ ಸಾಗರ, ಹದ್ದು ಹಾಗೂ
ಬೇಹದ್ದಿನಿಂದ ದೂರವಿದ್ದಾರೆ, ಎಲ್ಲವನ್ನೂ ಸಹ ಕುಳಿತು ತಿಳಿಸುತ್ತಾರೆ. ನೀವು
ತಿಳಿದುಕೊಳ್ಳುತ್ತೀರಿ, ತಂದೆಯು ನಮ್ಮನ್ನು ನೋಡುತ್ತಿದ್ದಾರೆ ಆದರೆ ತಂದೆಯು ತಿಳಿಸುತ್ತಾರೆ -
ನಾನು ಹದ್ದು ಹಾಗೂ ಬೇಹದ್ದಿನಿಂದ ದೂರ ಹೊರಟು ಹೋಗುತ್ತೇನೆ. ನಾನು ಅಲ್ಲಿರುವವನಾಗಿದ್ದೇನೆ. ನೀವೂ
ಸಹ ಹದ್ದು ಹಾಗೂ ಬೇಹದ್ದಿನಿಂದ ದೂರ ಬನ್ನಿ. ಇದರಲ್ಲಿ ಶ್ರಮ ಪಡಬೇಕಾಗಿದೆ. ಗೃಹಸ್ಥ
ವ್ಯವಹಾರದಲ್ಲಿರುತ್ತಾ ಕಮಲ ಪುಷ್ಫ ಸಮಾನ ಇರಬೇಕು. ಕೈ ಕೆಲಸ ಮಾಡುತ್ತಿದ್ದರೂ ಮನಸ್ಸು ನೆನಪು
ಮಾಡುತ್ತಿರಲಿ. ಬಹಳ ಗೃಹಸ್ಥಿಗಳಿದ್ದಾರೆ, ಗೃಹಸ್ಥಿಗಳು ಜ್ಞಾನ ರತ್ನಗಳನ್ನು ತೆಗೆದುಕೊಳ್ಳುವಷ್ಟು
ಮನೆಯಲ್ಲಿರುವ ಮಕ್ಕಳು ತೆಗೆದುಕೊಳ್ಳುವುದಿಲ್ಲ. ಸೇವಾಕೇಂದ್ರವನ್ನು ಸಂಭಾಲನೆ ಮಾಡುವವರು,
ಮುರುಳಿಯನ್ನು ನುಡಿಸುವವರೂ ಸಹ ಅನುತ್ತೀರ್ಣರಾಗಿ ಬಿಡುತ್ತಾರೆ ಹಾಗೂ ಓದುವವರು ಶ್ರೇಷ್ಠರಾಗಿ
ಬಿಡುತ್ತಾರೆ. ಮುಂದೆ ನಿಮಗೆ ಎಲ್ಲವೂ ತಿಳಿಯುತ್ತಾ ಹೋಗುತ್ತದೆ. ತಂದೆಯಂತೂ ಖಂಡಿತವಾಗಿಯೂ
ಸರಿಯಾಗಿಯೇ ತಿಳಿಸುತ್ತಾರೆ. ನಮಗೆ ಓದಿಸುವಂತಹವರನ್ನೇ ತಿಂದು ಬಿಟ್ಟಿತು, ಮಹಾರಥಿಯನ್ನು ಮಾಯೆಯು
ಒಮ್ಮೆಲೇ ನುಂಗಿ ಬಿಡುತ್ತದೆ ಎಂದು ಹೇಳುವವರು ಇಂದು ಇಲ್ಲದಂತಾಗಿದ್ದಾರೆ. ಮಾಯಾವೀ ದ್ರೋಹಿಗಳಾಗಿ
ಬಿಡುತ್ತಾರೆ. ವಿದೇಶದಲ್ಲಿಯೂ ದ್ರೋಹಿಗಳಾಗಿ ಬಿಡುತ್ತಾರಲ್ಲವೆ. ಬೇರೆ ಕಡೆ ಹೋಗಿ ಆಶ್ರಯವನ್ನು
ಪಡೆಯುತ್ತಾರೆ. ಯಾರು ಶಕ್ತಿಶಾಲಿಯಾಗಿರುತ್ತಾರೆಯೋ ಅವರ ಕಡೆ ಹೊರಟು ಹೋಗುತ್ತಾರೆ. ಈ ಸಮಯದಲ್ಲಿ
ಮೃತ್ಯುವು ಮುಂದೆ ನಿಂತಿದೆ. ಆದ್ದರಿಂದ ಬಹಳ ಶಕ್ತಿಯಿರುವ ಕಡೆ ಹೊರಟು ಹೋಗುತ್ತಾರೆ. ತಂದೆಯು
ಶಕ್ತಿಶಾಲಿಯಾಗಿದ್ದಾರೆಂದು ನೀವು ತಿಳಿದುಕೊಂಡಿದ್ದೀರಿ. ತಂದೆಯು ಸರ್ವಶಕ್ತಿವಂತನಾಗಿದ್ದಾರೆ,
ನಮಗೆ ಕಲಿಸುತ್ತಾ-ಕಲಿಸುತ್ತಾ ವಿಶ್ವದ ಮಾಲೀಕರನ್ನಾಗಿ ಮಾಡಿ ಬಿಡುತ್ತಾರೆ. ಅಲ್ಲಿ ಎಲ್ಲವೂ ಸಹ
ನಿಮಗೆ ಸಿಗುತ್ತದೆ, ಯಾವುದೇ ಅಪ್ರಾಪ್ತಿಯ ವಸ್ತುವೂ ಇರುವುದಿಲ್ಲ. ಅಲ್ಲಿ ಪುರುಷಾರ್ಥ ಮಾಡಿ
ಪ್ರಾಪ್ತಿ ಮಾಡಿಕೊಳ್ಳುವಂತಹ ಯಾವುದೇ ಅಪ್ರಾಪ್ತಿಯ ವಸ್ತುಗಳು ಅಲ್ಲಿರುವುದಿಲ್ಲ. ನಿಮ್ಮ ಬಳಿ
ಇಲ್ಲದಿರುವಂತಹ ಯಾವುದೇ ವಸ್ತುವು ಅಲ್ಲಿರುವುದಿಲ್ಲ. ಅದೂ ಸಹ ನಂಬರ್ವಾರ್ ಪುರುಷಾರ್ಥದನುಸಾರ
ಪದವಿಯನ್ನು ಪಡೆಯುತ್ತೀರಿ. ಇಂತಹ ಮಾತುಗಳನ್ನು ತಂದೆಯ ವಿನಃ ಬೇರೆ ಯಾರೂ ಸಹ ತಿಳಿದುಕೊಂಡಿಲ್ಲ.
ಎಲ್ಲರೂ ಪೂಜಾರಿಗಳಾಗಿದ್ದಾರೆ, ಭಲೆ ದೊಡ್ಡ-ದೊಡ್ಡ ಶಂಕರಾಚಾರ್ಯ, ಮೊದಲಾದವರೂ ಇದ್ದಾರೆ. ತಂದೆಯು
ಅವರ ಮಹಿಮೆಯನ್ನು ಮಾಡುತ್ತಾರೆ. ಯಾವಾಗ ಅವರು ಸತೋಪ್ರಧಾನರಾಗಿರುತ್ತಾರೆಯೋ ಅವರ ಪವಿತ್ರತೆಯ
ಶಕ್ತಿಯಿಂದ ಮೊದಲಿಗೆ ಭಾರತವನ್ನು ಕಾಪಾಡಲು ನಿಮಿತ್ತರಾಗುತ್ತಾರೆ. ಈಗಂತೂ ತಮೋಪ್ರಧಾನರಾಗಿದ್ದಾರೆ.
ಅವರಲ್ಲಿ ಯಾವ ಶಕ್ತಿಯಿದೆ. ಈಗ ನೀವು ಪೂಜಾರಿಗಳಿಂದ ಪೂಜ್ಯರಾಗುವಂತಹ ಪುರುಷಾರ್ಥ ಮಾಡುತ್ತಿದ್ದೀರಿ.
ಈಗ ನಿಮ್ಮ ಬುದ್ಧಿಯಲ್ಲಿ ಎಲ್ಲದರ ಜ್ಞಾನವೂ ಇದೆ. ಬುದ್ಧಿಯಲ್ಲಿ ಧಾರಣೆಯಿದ್ದು ನೀವು ಅನ್ಯರಿಗೆ
ತಿಳಿಸಿಕೊಡುತ್ತಿರಿ. ತಂದೆಯನ್ನು ನೆನಪು ಮಾಡಿ, ತಂದೆಯೇ ಇಡೀ ವೃಕ್ಷದ ರಹಸ್ಯವನ್ನು ತಿಳಿಸುತ್ತಾರೆ.
ಮಕ್ಕಳೂ ಸಹ ತಂದೆಯಂತೆಯೇ ಮಧುರರಾಗಬೇಕು. ಬಹಳ ಯುದ್ಧಗಳು ನಡೆಯುತ್ತದೆಯಲ್ಲವೆ! ಮಾಯೆಯ
ಬಿರುಗಾಳಿಗಳು ಬಹಳ ಬರುತ್ತವೆ, ಎಲ್ಲವನ್ನೂ ಸಹನೆ ಮಾಡಿಕೊಳ್ಳಬೇಕಾಗುತ್ತದೆ. ತಂದೆಯ
ನೆನಪಿನಲ್ಲಿರುವುದರಿಂದ ಎಲ್ಲಾ ಬಿರುಗಾಳಿಗಳು ಹೊರಟು ಹೋಗುತ್ತವೆ. ಹಾತಮ್ ತಾಯಿಯ ಆಟವನ್ನು
ತೋರಿಸುತ್ತಾರಲ್ಲವೆ, ಬಾಯಿಗೆ ಉಂಗುರವನ್ನು ಹಾಕಿಕೊಂಡಾಗ ಮಾಯೆಯು ಹೊರಟು ಹೋಗುತ್ತಿತ್ತು,
ತೆಗೆಯುವುದರಿಂದ ಮಾಯೆಯು ಬಂದು ಬಿಡುತ್ತಿತ್ತು. ಮುಟ್ಟಿದರೆ ಮುನಿ ಇರುತ್ತದೆಯಲ್ಲವೆ! ಕೈ ಸ್ಪರ್ಷ
ಮಾಡಿದರೆ ಬಾಡಿ ಹೋಗುತ್ತದೆ. ಮಾಯೆಯೂ ಸಹ ಅಷ್ಟೇ ತೀವ್ರವಾಗಿದೆ. ಇಂತಹ ಶ್ರೇಷ್ಠ ವಿದ್ಯೆಯನ್ನು
ಓದುತ್ತಾ-ಓದುತ್ತಾ ಕುಳಿತಿದ್ದ ಕಡೆ ಬೀಳುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ತಮ್ಮನ್ನು
ಆತ್ಮನೆಂದು ತಿಳಿದುಕೊಳ್ಳಿರಿ ಹಾಗೂ ಹದ್ದು ಮತ್ತು ಬೇಹದ್ದಿನಿಂದ ದೂರ ಹೋಗುತ್ತೀರಿ. ಶರೀರವೇ
ಇಲ್ಲವೆಂದಾಗ ದೃಷ್ಟಿಯು ಎಲ್ಲಿಗೆ ಹೋಗುತ್ತದೆ? ಇಷ್ಟೊಂದು ಶ್ರಮ ಪಡಬೇಕಾಗುವುದು. ಇದನ್ನು ಕೇಳಿ
ಆಶ್ಚರ್ಯ ಪಡಬಾರದಾಗಿದೆ. ಕಲ್ಪ-ಕಲ್ಪವೂ ನಿಮ್ಮ ಪುರುಷಾರ್ಥ ನಡೆಯುತ್ತದೆ ನೀವು ಭಾಗ್ಯವನ್ನು
ರೂಪಿಸಿಕೊಳ್ಳುತ್ತೀರಿ. ತಂದೆಯು ತಿಳಿಸುತ್ತಾರೆ - ಓದಿರುವುದೆಲ್ಲವನ್ನೂ ಮರೆಯಿರಿ ಬಾಕಿ ಎಂದಿಗೂ
ಓದದೇ ಇರುವುದನ್ನು ಕೇಳಿ ಹಾಗೂ ನೆನಪು ಮಾಡಿ. ಇದನ್ನು ಭಕ್ತಿಮಾರ್ಗವೆಂದು ಕರೆಯಲಾಗುವುದು. ನೀವು
ರಾಜಋಷಿಗಳಲ್ಲವೆ! ಸಾಧು-ಸಂತ ಮೊದಲಾದವರೆಲ್ಲರೂ ಹೇಳುವಂಥಹದ್ದೆಲ್ಲವೂ ಮನುಷ್ಯರದಾಗಿದೆ, ಇದು
ಬೇಹದ್ದಿನ ತಂದೆಯ ಮುರುಳಿಯಾಗಿದೆ. ಸತ್ಯ-ತ್ರೇತಾಯುಗದಲ್ಲಿ ಜ್ಞಾನ ಮುರುಳಿಯ
ಅವಶ್ಯಕತೆಯಿರುವುದಿಲ್ಲ, ಅಲ್ಲಿ ಜ್ಞಾನ ಹಾಗೂ ಭಕ್ತಿಯ ಅವಶ್ಯಕತೆಯಿಲ್ಲ. ಈ ಜ್ಞಾನವು ನಿಮಗೆ ಈಗ
ಸಿಗುತ್ತದೆ. ನಿಮಗೆ ಈ ಜ್ಞಾನವು ಸಂಗಮಯುಗದಲ್ಲಿಯೇ ಸಿಗುತ್ತದೆ ಹಾಗೂ ಕೊಡುವವರು ತಂದೆಯೇ
ಆಗಿದ್ದಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಬುದ್ಧಿಯಲ್ಲಿ
ಜ್ಞಾನ ರತ್ನಗಳ ಧಾರಣೆ ಮಾಡಿ ದಾನ ಮಾಡಬೇಕಾಗಿದೆ. ಹದ್ದು ಹಾಗೂ ಬೇಹದ್ದಿನಿಂದ ದೂರ ಇರುವಂತಹ
ಸ್ಥಿತಿಯಲ್ಲಿರಬೇಕು. ಎಂದಿಗೂ ಸಹ ಉಲ್ಟಾ-ಸುಲ್ಟಾ ವಿಕಲ್ಪದ ಸಂಕಲ್ಪಗಳು ಬರಬಾರದು. ನಾವಾತ್ಮಗಳು
ಸಹೋದರ-ಸಹೋದರರಾಗಿದ್ದೇವೆಂದು ಸ್ಮೃತಿಯಲ್ಲಿ ಬರಬೇಕು.
2. ಮಾಯೆಯ ಬಿರುಗಾಳಿಯಿಂದ ಸುರಕ್ಷಿತರಾಗಿರಲು ಬಾಯಿಗೆ ತಂದೆಯ ನೆನಪೆಂಬ ಉಂಗುರವನ್ನು
ಹಾಕಿಕೊಳ್ಳಬೇಕು, ಎಲ್ಲವನ್ನೂ ಸಹನೆ ಮಾಡಿಕೊಳ್ಳಬೇಕು, ಮುಟ್ಟಿದರೆ ಮುನಿಯಾಗಬಾರದು, ಮಾಯೆಗೆ
ಸೋಲಬಾರದು.
ವರದಾನ:
ಸರ್ವ
ಶಕ್ತಿಗಳನ್ನು ಸಹಯೋಗಿಗಳನ್ನಾಗಿ ಮಾಡಿಕೊಂಡು ಪ್ರತ್ಯಕ್ಷತೆಯ ಪರದೆಯನ್ನು ತೆರೆಯುವಂತಹ ಸತ್ಯ
ಸೇವಾಧಾರಿ ಭವ.
ಪ್ರತ್ಯಕ್ಷತೆಯ ಪರದೆ
ಯಾವಾಗ ತೆರೆಯುವುದೆಂದರೆ ಯಾವಾಗ ಎಲ್ಲಾ ಶಕ್ತಿಗಳೂ ಸೇರಿ ಹೇಳುತ್ತಾರೆ - ಶ್ರೇಷ್ಠ ಶಕ್ತಿ,
ಈಶ್ವರೀಯ ಶಕ್ತಿ, ಆಧ್ಯಾತ್ಮಿಕ ಶಕ್ತಿಯಾಗಿದೆ, ಅಲ್ಲದೆ ಇದು ಒಂದೇ ಪರಮಾತ್ಮ ಶಕ್ತಿಯಾಗಿದೆ.
ಎಲ್ಲರೂ ಒಂದೇ ಸ್ಟೇಜ್ ಮೇಲೆ ಒಟ್ಟಿಗೆ ಸೇರಿ ಇಂತಹ ಸ್ನೇಹ ಮಿಲನ ಮಾಡಬೇಕು. ಅದಕ್ಕಾಗಿ ಎಲ್ಲರನ್ನೂ
ಸ್ನೇಹದ ಸೂತ್ರದಲ್ಲಿ ಕಟ್ಟಿ ಸಮೀಪದಲ್ಲಿ ತನ್ನಿ, ಸಹಯೋಗಿಗಳನ್ನಾಗಿ ಮಾಡಿಕೊಳ್ಳಿ. ಈ ಸ್ನೇಹವೇ
ಅಯಸ್ಕಾಂತವಾಗುವುದು, ಯಾವುದು ಎಲ್ಲವನ್ನೂ ಒಟ್ಟಿಗೆ ಸಂಘಟನೆಯ ರೂಪದಲ್ಲಿ ತಂದೆಯ ಸ್ಟೇಜ್ ಮೇಲೆ
ತಲುಪುವರು. ಆದ್ದರಿಂದ ಈಗ ಅಂತಿಮ ಪ್ರತ್ಯಕ್ಷತೆಯ ಹೀರೋ ಪಾತ್ರದಲ್ಲಿ ನಿಮಿತ್ತರಾಗುವಂತಹ ಸೇವೆ
ಮಾಡಿ ಆಗ ಹೇಳಲಾಗುವುದು ಸತ್ಯ ಸೇವಾಧಾರಿ.
ಸ್ಲೋಗನ್:
ಸೇವೆಯ ಮೂಲಕ ಸರ್ವ
ಆಶೀರ್ವಾದ ಪ್ರಾಪ್ತಿ ಮಾಡಿಕೊಳ್ಳುವುದು - ಇದು ಮುಂದುವರೆಯವ ಲಿಫ್ಟ್ ಆಗಿದೆ.