30.07.20         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನೀವು ಆತ್ಮಿಕ ಮಾರ್ಗದರ್ಶಕರಾಗಿ ಎಲ್ಲಾ ಧರ್ಮದವರಿಗೆ ಶಾಂತಿಧಾಮ ಮತ್ತು ಸುಖಧಾಮದ ಮಾರ್ಗವನ್ನು ತಿಳಿಸಬೇಕಾಗಿದೆ, ನೀವು ಸತ್ಯ ಮಾರ್ಗದರ್ಶಕರಾಗಿದ್ದೀರಿ.

ಪ್ರಶ್ನೆ:
ತಂದೆಯ ನೆನಪಿನಲ್ಲಿ ಯಾವ ಮಕ್ಕಳಿಗೆ ಪೂರ್ಣ ಶಕ್ತಿಯು ಪ್ರಾಪ್ತವಾಗುತ್ತದೆ?

ಉತ್ತರ:
ಯಾರು ನೆನಪಿನ ಜೊತೆ ಜೊತೆಗೆ ತಂದೆಯೊಂದಿಗೆ ಸಂಪೂರ್ಣ ವಿಧೇಯರಾಗಿರುತ್ತಾರೆ, ಏನನ್ನೂ ಮುಚ್ಚಿಡುವುದಿಲ್ಲ, ಸತ್ಯತಂದೆಯ ಜೊತೆ ಸತ್ಯವಾಗಿರುತ್ತಾರೆ, ಯಾವುದೇ ಪಾಪಗಳನ್ನು ಮಾಡುವುದಿಲ್ಲವೋ ಅವರಿಗೇ ನೆನಪಿನಿಂದ ಶಕ್ತಿಯು ಪ್ರಾಪ್ತವಾಗುತ್ತದೆ. ಕೆಲವು ಮಕ್ಕಳು ತಪ್ಪು ಮಾಡುತ್ತಿರುತ್ತಾರೆ, ನಂತರ ಕ್ಷಮಿಸಿ ಎಂದು ಕೇಳುತ್ತಾರೆ. ತಂದೆಯು ಕ್ಷಮಿಸುವುದಿಲ್ಲ ಎಂದು ತಿಳಿಸುತ್ತಾರೆ. ಪ್ರತಿಯೊಂದು ಕರ್ಮದ ಲೆಕ್ಕವಿದೆ.

ಗೀತೆ:
ನಮ್ಮ ತೀರ್ಥ ಸ್ಥಾನವು ಭಿನ್ನವಾಗಿದೆ......

ಓಂ ಶಾಂತಿ.
ಮಕ್ಕಳು ಗೀತೆಯನ್ನು ಕೇಳಿದಿರಿ. ಹೇಗೆ ಅರ್ಥವನ್ನು ಬಿಡಿಸುತ್ತಾರೆ ಎಂದು ಮಕ್ಕಳ ಜ್ಞಾನದ ವಿಚಾರಗಳನ್ನು ನೋಡುವುದಕ್ಕಾಗಿ ಇಂತಿಂತಹ ಗೀತೆಗಳನ್ನು ಆಯ್ಕೆ ಮಾಡಿ ಪ್ರತಿಯೊಬ್ಬರಿಗೆ ಅರ್ಥ ಮಾಡಿಸಬೇಕು ಏಕೆಂದರೆ ಈ ಗೀತೆಗಳನ್ನೂ ಸಹ ಸರಿಪಡಿಸಲಾಗುತ್ತಿದೆ ಅಲ್ಲವೆ. ತಂದೆಯು ತಿಳಿಸಿದ್ದಾರೆ - ಕೆಲವು ಇಂತಹ ಒಳ್ಳೆಯ ಗೀತೆಗಳಿವೆ, ಯಾವಾಗ ಯಾವುದೇ ಚಿಂತೆಯಲ್ಲಿ ಕುಳಿತಿದ್ದಾಗ ಈ ಗೀತೆಗಳು ಖುಷಿಯಲ್ಲಿ ತರಲು ಬಹಳ ಸಹಯೋಗ ನೀಡುತ್ತವೆ. ಇವು ಬಹಳ ಪ್ರಯೋಜಕ ವಸ್ತುಗಳಾಗಿವೆ. ಇವನ್ನು ಕೇಳುವುದರಿಂದ ತಕ್ಷಣ ಸ್ಮೃತಿಯು ಬಂದು ಬಿಡುತ್ತದೆ. ನೀವು ಮಕ್ಕಳಿಗೆ ತಿಳಿದಿದೆ - ಅವಶ್ಯವಾಗಿ ನಾವು ಧರಣಿಯ ಭಾಗ್ಯಶಾಲಿ ನಕ್ಷತ್ರಗಳಾಗಿದ್ದೇವೆ. ನಮ್ಮ ಈ ತೀರ್ಥ ಸ್ಥಾನವು ಭಕ್ತಿಮಾರ್ಗದವರಿಗಿಂತ ಬಹಳ ಭಿನ್ನವಾಗಿದೆ. ನೀವು ಪಾಂಡವ ಸೇನೆಯಾಗಿದ್ದೀರಿ. ಆ ತೀರ್ಥ ಸ್ಥಾನಗಳಲ್ಲಿ ಪಾಂಡವರ (ಮಾರ್ಗದರ್ಶಕರ) ಸೇನೆಯಿರುತ್ತದೆ. ಪ್ರತಿಯೊಂದು ಗುಂಪಿಗೆ ಬೇರೆ-ಬೇರೆ ಮಾರ್ಗದರ್ಶಕರಿರುತ್ತಾರೆ. ಅವರು ಕರೆದುಕೊಂಡು ಹೋಗುತ್ತಾರೆ. ಅವರ ಬಳಿ ಕವಡೆಯಿರುತ್ತದೆ, ನೀವು ಯಾವ ಕುಲದವರೆಂದು ಕೇಳುತ್ತಾರೆ. ಪ್ರತಿಯೊಬ್ಬರೂ ತಮ್ಮ ಕುಲದವರನ್ನೇ ಕರೆದುಕೊಂಡು ಹೋಗುತ್ತಾರೆ. ಎಷ್ಟು ಮಂದಿ ಮಾರ್ಗದರ್ಶಕರು ಕರೆದುಕೊಂಡು ಹೋಗುತ್ತಾರೆ. ನೀವೂ ಸಹ ಆತ್ಮಿಕ ಮಾರ್ಗದರ್ಶಕರಾಗಿದ್ದೀರಿ, ನಿಮ್ಮ ಹೆಸರೇ ಆಗಿದೆ ಪಾಂಡವ ಸೇನೆ. ಪಾಂಡವರಿಗೆ ರಾಜಧಾನಿಯಿಲ್ಲ, ಪಂಡರಿಗೆ ಪಾಂಡವರೆಂದು ಹೇಳಲಾಗುತ್ತದೆ. ತಂದೆಯೂ ಸಹ ಬೇಹದ್ದಿನ ಪಂಡನಾಗಿದ್ದಾರೆ. ಮಾರ್ಗದರ್ಶಕರಿಗೆ ಪಂಡರೆಂದು ಹೇಳುತ್ತಾರೆ. ಮಾರ್ಗದರ್ಶಕರು ತೀರ್ಥ ಸ್ಥಾನಗಳಿಗೆ ಕರೆದುಕೊಂಡು ಹೋಗುತ್ತಾರೆ. ಈ ಮಾರ್ಗದರ್ಶಕರು ಯಾತ್ರಿಕರನ್ನು ಕರೆದುಕೊಂಡು ಬಂದಿದ್ದಾರೆಂದು ಪೂಜಾರಿಗಳಿಗೆ ತಿಳಿದಿರುತ್ತದೆ. ಜ್ಞಾನಮಾರ್ಗದಲ್ಲಿಯೂ ಸಹ ನೀವು ಮಾರ್ಗದರ್ಶಕರಾಗುತ್ತೀರಿ. ಇದರಲ್ಲಿ ಎಲ್ಲಿಯೂ ಕರೆದುಕೊಂಡು ಹೋಗುವ ಮಾತಿಲ್ಲ. ನೀವು ಮನೆಯಲ್ಲಿ ಕುಳಿತಿದ್ದರೂ ಸಹ ಅನ್ಯರಿಗೆ ಮಾರ್ಗವನ್ನು ತಿಳಿಸುತ್ತೀರಿ ಮತ್ತು ಯಾರಿಗೆ ತಿಳಿಸುತ್ತೀರೋ ಅವರೂ ಸಹ ಮಾರ್ಗದರ್ಶಕರಾಗಿ ಬಿಡುತ್ತಾರೆ. ಒಬ್ಬರು ಇನ್ನೊಬ್ಬರಿಗೆ ಮನ್ಮನಾಭವದ ಮಾರ್ಗವನ್ನು ತಿಳಿಸಬೇಕಾಗಿದೆ. ನಿಮ್ಮಲ್ಲಿಯೂ ಸಹ ತೀರ್ಥ ಯಾತ್ರೆಗಳನ್ನು ಮಾಡಿರುವವರು ಬಹಳಷ್ಟು ಮಂದಿ ಇರಬಹುದು. ಬದರೀನಾಥ, ಅಮರನಾಥಕ್ಕೆ ಏಕೆ ಹೋಗುವರೆಂದು ಬುದ್ಧಿಯಲ್ಲಿ ಬರುತ್ತಿರಬಹುದು. ಮಾರ್ಗದರ್ಶಕರು ತಿಳಿದುಕೊಂಡಿರುತ್ತಾರೆ - ನೀವು ಆತ್ಮಿಕ ಮಾರ್ಗದರ್ಶಕರಾಗಿದ್ದೀರಿ, ನಾವು ಪುರುಷೋತ್ತಮ ಸಂಗಮಯುಗಿಗಳೆಂಬ ಮಾತನ್ನು ಮರೆಯಬಾರದು. ನೀವು ಮಕ್ಕಳಿಗೆ ಒಂದೇ ಮಾತು ಬುದ್ಧಿಯಲ್ಲಿದೆ- ನಾವು ಮುಕ್ತಿ-ಜೀವನ್ಮುಕ್ತಿಯ ಮಾರ್ಗದರ್ಶಕರಾಗಿದ್ದೇವೆ, ಸ್ವರ್ಗಕ್ಕೆ ಬೇರೆ ಮಾರ್ಗದರ್ಶಕರು, ಮುಕ್ತಿಗೆ ಬೇರೆ ಮಾರ್ಗದರ್ಶಕರು ಎಂಬ ಮಾತಿಲ್ಲ. ನಿಮಗೆ ಈ ನಿಶ್ಚಯವಿದೆ - ನಾವು ಮುಕ್ತಿಧಾಮದಲ್ಲಿ ಹೋಗಿ ನಂತರ ಹೊಸ ಪ್ರಪಂಚದಲ್ಲಿ ಬರುತ್ತೇವೆ. ನಂಬರ್ವಾರ್ ಪುರುಷಾರ್ಥದನುಸಾರ ನೀವು ಮಾರ್ಗದರ್ಶಕರಾಗಿದ್ದೀರಿ. ಮಾರ್ಗದರ್ಶಕರೂ ಸಹ ಅನೇಕ ಪ್ರಕಾರದವರಿರುತ್ತಾರೆ. ನೀವು ಫಸ್ಟ್ಕ್ಲಾಸ್ ಮಾರ್ಗದರ್ಶಕರಾಗಿದ್ದೀರಿ, ಎಲ್ಲರಿಗೆ ಪವಿತ್ರತೆಯ ಮಾರ್ಗವನ್ನು ತಿಳಿಸುತ್ತಿರುತ್ತೀರಿ. ಎಲ್ಲರೂ ಪವಿತ್ರರಾಗಿರಬೇಕಾಗಿದೆ, ದೃಷ್ಟಿಯು ಬದಲಾಗಿ ಬಿಡುತ್ತದೆ. ನೀವು ಪ್ರತಿಜ್ಞೆ ಮಾಡಿದ್ದೀರಿ - ನಾವು ಒಬ್ಬ ತಂದೆಯ ವಿನಃ ಮತ್ತ್ಯಾರನ್ನೂ ನೆನಪು ಮಾಡುವುದಿಲ್ಲ. ಬಾಬಾ, ನಾವು ತಮ್ಮನ್ನೇ ನೆನಪು ಮಾಡುತ್ತೇವೆ. ತಮ್ಮವರಾಗುವುದರಿಂದ ನಮ್ಮ ದೋಣಿಯು ಪಾರಾಗುತ್ತದೆ. ಭವಿಷ್ಯದಲ್ಲಂತೂ ಸುಖವೇ ಸುಖವಿದೆ. ತಂದೆಯು ನಮ್ಮನ್ನು ಸುಖದ ಸಂಬಂಧದಲ್ಲಿ ಕರೆದುಕೊಂಡು ಹೋಗುತ್ತಾರೆ. ಇಲ್ಲಂತೂ ದುಃಖವೇ ದುಃಖವಿದೆ. ಸುಖವು ಕಾಗವಿಷ್ಟ ಸಮಾನವಾಗಿದೆ. ನೀವು ಹೊಸ ಪ್ರಪಂಚಕ್ಕಾಗಿ ಓದುತ್ತೀರಿ. ನಿಮಗೆ ತಿಳಿದಿದೆ - ಮುಕ್ತಿಧಾಮಕ್ಕೆ ಹೋಗಿ ನಂತರ ಇಲ್ಲಿಗೆ ಬರುತ್ತೀರಿ. ಮನೆಗಂತೂ ಅವಶ್ಯವಾಗಿ ಹೋಗುತ್ತೀರಿ. ಇದು ನೆನಪಿನ ಬಲದ ಯಾತ್ರೆಯಾಗಿದೆ. ಶಾಂತಿಧಾಮವನ್ನೂ ಸಹ ನೆನಪು ಮಾಡಲಾಗುತ್ತದೆ. ತಂದೆಯನ್ನು ನೆನಪು ಮಾಡುತ್ತೀರಿ. ತಂದೆಯ ಜೊತೆ ಬಹಳ ಪ್ರಾಮಾಣಿಕರಾಗಿಯೂ ಇರಬೇಕಾಗಿದೆ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮ ಹೃದಯದಲ್ಲಿ ಕುಳಿತು ಅರಿತುಕೊಳ್ಳುತ್ತೇನೆ ಎಂದಲ್ಲ. ನೀವು ಹೇಗೆ ನಡೆದುಕೊಳ್ಳುತ್ತೀರಿ ಅದರನುಸಾರ ತಂದೆಯು ತಿಳಿಸುತ್ತಾರೆ, ಪುರುಷಾರ್ಥವನ್ನೂ ಮಾಡಿಸುತ್ತಾರೆ. ಬಾಕಿ ನೀವು ಯಾವುದೇ ಉಲ್ಲಂಘನೆ ಅಥವಾ ಪಾಪ ಮಾಡುತ್ತೀರೆಂದರೆ ಯಾವುದೇ ಪಾಪವನ್ನು ಮಾಡಲಿಲ್ಲವೇ? ಇದನ್ನೂ ಸಹ ತಿಳಿಸಬೇಕು- ಬಾಬಾ, ಇಂದು ಕಣ್ಣುಗಳು ನಮಗೆ ಬಹಳ ಮೋಸಗೊಳಿಸಿದವು, ಇಲ್ಲಂತೂ ಭಯವಿರುತ್ತದೆ. ಮನೆಗೆ ಹೋಗುತ್ತೇನೆಂದರೆ ಬುದ್ಧಿಯು ಚಂಚಲವಾಗುತ್ತದೆ. ಬಾಬಾ, ಇದು ನನ್ನ ಅತಿ ದೊಡ್ಡ ತಪ್ಪಾಗಿದೆ, ನನ್ನನ್ನು ಕ್ಷಮಿಸಿ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ಇದರಲ್ಲಿ ಕ್ಷಮೆಯ ಮಾತಿಲ್ಲ, ಇದನ್ನು ಪ್ರಾಪಂಚಿಕ ಮನುಷ್ಯರು ಮಾಡುತ್ತಾರೆ. ಯಾರಿಗಾದರೂ ಚೆನ್ನಾಗಿ ಹೊಡೆದರೂ ನಂತರ ಬಂದು ಕ್ಷಮೆ ಕೇಳಿದರೆಂದರೆ ಅಲ್ಲಿಗೆ ಕೆಲಸವು ಮುಗಿಯಿತು. ಹಾಗೆ ಕ್ಷಮೆ ಮಾಡುವುದರಲ್ಲಿ ತಡವಾಗುವುದಿಲ್ಲ. ಕೆಟ್ಟ ಕರ್ಮ ಮಾಡುತ್ತಾ ಇರಿ ಮತ್ತೆ ನನ್ನನ್ನು ಕ್ಷಮಿಸಿ ಎಂದು ಹೇಳುತ್ತಿರುವುದು - ಹೀಗೆ ನಡೆಯುತ್ತದೆಯೇ? ಇದಂತೂ ಜಮಾ ಆಗಿ ಬಿಡುತ್ತದೆ. ಯಾವುದೇ ಉಲ್ಟಾ-ಸುಲ್ಟಾ ಮಾತನಾಡುತ್ತೀರೆಂದರೆ ಅದು ಜಮಾ ಆಗುತ್ತದೆ. ಇದರ ಪ್ರತಿಫಲವಾಗಿ ಒಳ್ಳೆಯ ಅಥವಾ ಕೆಟ್ಟ ಫಲವು ಇನ್ನೊಂದು ಜನ್ಮದಲ್ಲಿ ಅವಶ್ಯವಾಗಿ ಸಿಗುತ್ತದೆ. ಕ್ಷಮೆಯ ಮಾತಿಲ್ಲ. ಯಾರು ಹೇಗೆ ಮಾಡುತ್ತಾರೆಯೋ ಅಂತಹದ್ದನ್ನೇ ಪಡೆಯುತ್ತಾರೆ.

ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಒಂದನೆಯದಾಗಿ ಕಾಮ ಮಹಾಶತ್ರುವಾಗಿದೆ. ಇದು ನಿಮಗೆ ಆದಿ-ಮಧ್ಯ-ಅಂತ್ಯ ದುಃಖವನ್ನು ಕೊಡುತ್ತದೆ. ತಂದೆಗೆ ಪತಿತ-ಪಾವನನೆಂದು ಹೇಳುತ್ತಾರೆ. ವಿಕಾರದಲ್ಲಿ ಹೋದವರಿಗೆ ಪತಿತರೆಂದು ಕರೆಯಲಾಗುತ್ತದೆ. ಇಲ್ಲಿ ತಂದೆಯು ತಿಳಿಸುತ್ತಾರೆ - ಇಲ್ಲಿಂದ ಮತ್ತೆ ಹೊರಗಡೆ ಹೋಗುತ್ತೀರೆಂದರೆ ಇಷ್ಟೊಂದು ವ್ರತವನ್ನಿಟ್ಟುಕೊಳ್ಳುವುದಿಲ್ಲ. ಆದ್ದರಿಂದ ಶ್ರೇಷ್ಠ ಪದವಿಯನ್ನೇ ಪಡೆಯಲು ಸಾಧ್ಯವಿಲ್ಲ. ತಂದೆಯ ಸಮಾಚಾರವನ್ನಂತೂ ಕೇಳಿಸಿಕೊಳ್ಳುತ್ತಾರಲ್ಲವೆ. ಇಲ್ಲಂತೂ ಬಹಳ ಚೆನ್ನಾಗಿದೆ, ಚೆನ್ನಾಗಿದೆಯೆಂದು ಹೇಳುತ್ತಾರೆ. ಮತ್ತೆ ಹೊರಗಡೆ ಹೋದಾಗ ಧಾರಣೆಯಾಗುವುದಿಲ್ಲ. ಸತ್ಯಯುಗದಲ್ಲಿ ವಿಕಾರದ ಮಾತೇ ಇರುವುದಿಲ್ಲ. ಈಗಂತೂ ಭಾರತದ ಸ್ಥಿತಿಯು ಏನಾಗಿ ಬಿಟ್ಟಿದೆ! ಸತ್ಯಯುಗದಲ್ಲಿ ಬಹಳ ದೊಡ್ಡ-ದೊಡ್ಡ ಮಹಲುಗಳಲ್ಲಿರುತ್ತಾರೆ, ಅಪಾರ ಸುಖವಿರುತ್ತದೆ. ತಂದೆಯು ಮಕ್ಕಳೊಂದಿಗೂ ಸಹ ಎಲ್ಲವನ್ನು ಪರೀಕ್ಷೆ ಮಾಡುತ್ತಾರೆ, ತಂದೆಗೆ ಸಮಾಚಾರವನ್ನಂತೂ ಕೊಡಬೇಕಲ್ಲವೆ. ಕೆಲವರಂತೂ ಸುಳ್ಳು ಹೇಳುತ್ತಾರೆ ಅಂದಾಗ ವಿಚಾರ ಮಾಡಬೇಕು - ನಾವು ಎಷ್ಟು ಸುಳ್ಳು ಹೇಳುತ್ತೇವೆ? ತಂದೆಯೊಂದಿಗೆ ಸುಳ್ಳನ್ನು ಹೇಳಲೇಬಾರದು. ತಂದೆಯು ಸತ್ಯವಂತರನ್ನಾಗಿ ಮಾಡುವವರಾಗಿದ್ದಾರೆ. ಅಲ್ಲಿ ಅಸತ್ಯವಿರುವುದಿಲ್ಲ. ಹೆಸರು-ಗುರುತೂ ಸಹ ಇರುವುದಿಲ್ಲ. ಆದರೆ ಇಲ್ಲಿ ನೋಡಿದಾಗ ಸತ್ಯದ ಹೆಸರು-ಗುರುತು ಇಲ್ಲ. ಅಂತರವಿದೆಯಲ್ಲವೆ. ತಂದೆಯು ತಿಳಿಸುತ್ತಾರೆ - ಇದು ಮುಳ್ಳುಗಳ ಕಾಡಾಗಿದೆ, ಆದರೆ ಸ್ವಯಂನ್ನು ಮುಳ್ಳೆಂದು ತಿಳಿಯುತ್ತಾರೆಯೇ! ತಂದೆಯು ತಿಳಿಸುತ್ತಾರೆ- ಕಾಮ ಕಟಾರಿಯನ್ನು ನಡೆಸುವುದು ಎಲ್ಲದಕ್ಕಿಂತ ದೊಡ್ಡ ಮುಳ್ಳಾಗಿದೆ. ಇದರಿಂದಲೇ ನೀವು ದುಃಖಿಯಾಗಿದ್ದೀರಿ. ತಂದೆಯು ನಿಮಗೆ ಈಗ ಅಪಾರ ಸುಖವನ್ನು ಕೊಡಲು ಬಂದಿದ್ದಾರೆ. ನಿಮಗೂ ತಿಳಿದಿದೆ - ಅವಶ್ಯವಾಗಿ ಅಪಾರ ಸುಖವಿತ್ತು. ಸತ್ಯಯುಗಕ್ಕೆ ಸುಖಧಾಮವೆಂದು ಹೇಳಲಾಗುತ್ತದೆ. ಅಲ್ಲಿ ಖಾಯಿಲೆಗಳು ಇರುವುದಿಲ್ಲ. ಜೈಲು, ಆಸ್ಪತ್ರೆ ಇತ್ಯಾದಿಗಳಿರುವುದಿಲ್ಲ. ಸತ್ಯಯುಗದಲ್ಲಿ ದುಃಖದ ಹೆಸರಿಲ್ಲ. ತ್ರೇತಾಯುಗದಲ್ಲಿ ಎರಡು ಕಲೆಗಳು ಕಡಿಮೆಯಾಗುವುದರಿಂದ ಸ್ವಲ್ಪ ಅಂತರವಾಗುತ್ತದೆ. ಆದರೂ ಸಹ ಸ್ವರ್ಗವೆಂದೇ ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ- ನೀವು ಅಪಾರ ಅತೀಂದ್ರಿಯ ಸುಖದಲ್ಲಿರಬೇಕು. ಓದಿಸುವವರನ್ನು ನೆನಪು ಮಾಡಬೇಕಾಗಿದೆ. ಭಗವಂತನೇ ನಮಗೆ ಶಿಕ್ಷಕನಾಗಿದ್ದಾರೆ ಅಂದಾಗ ಶಿಕ್ಷಕರನ್ನಂತೂ ಎಲ್ಲರೂ ನೆನಪು ಮಾಡುತ್ತಾರಲವೆ. ಇಲ್ಲಿರುವ ಮಕ್ಕಳಿಗಂತೂ ಬಹಳ ಸಹಜವಾಗಿದೆ. ಇಲ್ಲಿ ಯಾವುದೇ ಬಂಧನವಿಲ್ಲ, ಸಂಪೂರ್ಣ ಬಂಧನಮುಕ್ತರಾಗಿದ್ದಾರೆ, ಆರಂಭದಲ್ಲಿ ಭಟ್ಟಿಯಾದಾಗ ಬಂಧನಮುಕ್ತರಾದರು. ಚಿಂತೆ-ಚಿಂತನೆ ಕೇವಲ ಸರ್ವೀಸಿನದಾಗಿದೆ. ಸರ್ವೀಸನ್ನು ಹೇಗೆ ವೃದ್ಧಿ ಮಾಡುವುದು? ಇದಕ್ಕಾಗಿ ತಂದೆಯು ಬಹಳಷ್ಟು ತಿಳಿಸುತ್ತಾರೆ. ತಂದೆಯ ಬಳಿ ಬರುತ್ತಾರೆ, ಒಂದು-ಒಂದೂವರೆ ತಿಂಗಳು ಬಹಳ ಉಮ್ಮಂಗವಿರುತ್ತದೆ. ನಂತರ ನೋಡಿ, ತಣ್ಣಗಾಗಿ ಬಿಡುತ್ತಾರೆ. ಸೇವಾಕೇಂದ್ರಗಳಿಗೆ ಬರುವುದೇ ಇಲ್ಲ, ಇಂತಹ ಸಮಯದಲ್ಲಿ ಏನು ಮಾಡಬೇಕು? ಪತ್ರವನ್ನು ಬರೆಯಿರಿ, ಏಕೆ ಬರುತ್ತಿಲ್ಲ? ಬಹುಷಃ ಮಾಯೆಯು ನಿಮ್ಮ ಮೇಲೆ ಯುದ್ಧ ಮಾಡಿದೆ ಅಥವಾ ಯಾರದೋ ಸಂಗದಲ್ಲಿ ಸಿಕ್ಕಿ ಹಾಕಿಕೊಂಡಿದ್ದೀರಿ, ಇಲ್ಲವೇ ವಿಕರ್ಮ ಮಾಡಿದ್ದೀರಿ, ಕೆಳಗೆ ಬಿದ್ದಿದ್ದೀರೆಂದು ನಾವು ತಿಳಿಯುತ್ತೇವೆ ಆದರೂ ಸಹ ಮೇಲೆತ್ತಬೇಕಲ್ಲವೆ. ಪುರುಷಾರ್ಥ ಮಾಡಬೇಕು, ಅವರ ಹೃದಯವನ್ನು ಗೆಲ್ಲಬೇಕು ಆದ್ದರಿಂದ ನೀವು ಪತ್ರವನ್ನು ಬರೆಯಿರಿ. ಅನೇಕರಿಗೆ ನಾಚಿಕೆಯಾಗುತ್ತದೆ ನಂತರ ತುಂಬಾ ಕೆಳಗಿಳಿಯುತ್ತಾರೆ. ಇಲ್ಲಿಗೆ ಬಂದು ಹೋದ ಮೇಲೂ ಸಹ ಮತ್ತೆ ಮನೆಯಲ್ಲಿ ಕುಳಿತು ಬಿಟ್ಟರೆಂದು ಸಮಾಚಾರವು ಬರುತ್ತದೆ. ನನಗೇಕೋ ಇಷ್ಟವಾಗುತ್ತಿಲ್ಲ ಎಂದು ಹೇಳುತ್ತಾರೆ. ಕೆಲವರು ಪತ್ರದಲ್ಲಿಯೂ ಬರೆಯುತ್ತಾರೆ - ತಮ್ಮ ಜ್ಞಾನವಂತೂ ಬಹಳ ಚೆನ್ನಾಗಿದೆ ಆದರೆ ನಾವು ಪವಿತ್ರವಾಗಿರಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಬಿಟ್ಟು ಬಿಟ್ಟೆವು. ನನ್ನಲ್ಲಿ ಅಷ್ಟು ಶಕ್ತಿಯಿಲ್ಲವೆಂದು ಕೆಲವರು ಬರೆಯುತ್ತಾರೆ. ವಿಕಾರವು ನೋಡಿ, ಹೇಗೆ ಬೀಳಿಸುತ್ತದೆ! ಇಲ್ಲಿಗೆ ಬಂದಾಗ ನಾನು ಸೂರ್ಯವಂಶಿ, ನರನಿಂದ ನಾರಾಯಣನಾಗುತ್ತೇನೆಂದು ಕೈಯನ್ನೆತ್ತುತ್ತಾರೆ, ಈ ಜ್ಞಾನವೇ ನರನಿಂದ ನಾರಾಯಣ, ನಾರಿಯಿಂದ ಲಕ್ಷ್ಮಿಯಾಗುವುದಿದೆ. ತಂದೆಯು ತಿಳಿಸುತ್ತಾರೆ- ಬೆಲ್ಲಕ್ಕೆ ಗೊತ್ತು, ಬೆಲ್ಲದ ಚೀಲಕ್ಕೆ ಗೊತ್ತು. ಈ ಬ್ರಹ್ಮಾ ತಂದೆಯು ಬೆಲ್ಲದ ಚೀಲವಾಗಿದ್ದಾರೆ, ಇವರು ಚೆನ್ನಾಗಿ ಹೇಳುತ್ತಾರೆ, ಇವರ ಬಳಿ ಸಮಾಚಾರವೂ ಬರುತ್ತದೆ. ಆ ಶಿವ ತಂದೆಯಂತೂ ಹೇಳಿ ಬಿಡುತ್ತಾರೆ - ನಾನು ಓದಿಸಲು ಬರುತ್ತೇನೆ, ಯಾರು ಓದಿ ಬರುವರೋ ಅವರು ನವಾಬರಾಗುವರು. ದೃಷ್ಟಿಯನ್ನು ಬಹಳ ಪರಿವರ್ತನೆ ಮಾಡಿಕೊಳ್ಳಬೇಕಾಗಿದೆ. ಹೆಜ್ಜೆ-ಹೆಜ್ಜೆಯಲ್ಲಿಯೂ ಎಚ್ಚರವಹಿಸಬೇಕು. ನೆನಪಿನಿಂದ ಹೆಜ್ಜೆ-ಹೆಜ್ಜೆಯಲ್ಲಿಯೂ ಪದುಮಗಳಿವೆ. ಅನೇಕ ಮಕ್ಕಳು ಅನುತ್ತೀರ್ಣರಾಗಿ ಬಿಡುತ್ತಾರೆ. ಸೇವಾಧಾರಿ ಮಾರ್ಗದರ್ಶಕರೂ ಸಹ ಅನುತ್ತೀರ್ಣರಾಗಿ ಬಿಡುತ್ತಾರೆ. ನೀವು ಎಲ್ಲಿಯವರೆಗೆ ಯಾತ್ರೆಯಲ್ಲಿರುತ್ತೀರೋ ಅಲ್ಲಿಯವರೆಗೆ ಪವಿತ್ರರಾಗಿರುತ್ತೀರಿ. ಕೆಲವರಂತೂ ಯಾತ್ರೆಗೂ ಸಹ ಇಂತಹ ಆಸಕ್ತಿಯಿರುವ ವ್ಯಕ್ತಿಗಳು ಹೋಗುತ್ತಾರೆ. ಅವರು ಸಾರಾಯಿ ಇತ್ಯಾದಿಗಳನ್ನು ಅಲ್ಲಿಗೆ ತೆಗೆದುಕೊಂಡು ಹೋಗುತ್ತಾರೆ, ಮುಚ್ಚಿಟ್ಟುಕೊಂಡಿರುತ್ತಾರೆ. ದೊಡ್ಡ-ದೊಡ್ಡ ವ್ಯಕ್ತಿಗಳು ಅದು ಇಲ್ಲದೆ ಇರಲು ಸಾಧ್ಯವಾಗುವುದಿಲ್ಲ ಅಂದಮೇಲೆ ಅಂತಹವರಿಗೆ ತೀರ್ಥ ಯಾತ್ರೆಗಳಿಂದ ಏನು ಪ್ರಯೋಜನ? ಸೈನಿಕರೂ ಸಹ ಮಧ್ಯಪಾನ ಸೇವನೆಯನ್ನು ಬಹಳ ಮಾಡುತ್ತಾರೆ. ಮಧ್ಯಪಾನವನ್ನು ಸೇವಿಸಿ ಏರೋಪ್ಲೇನ್ ಸಹಿತವಾಗಿ ಹಡಗಿನ ಮೇಲೆ ಬೀಳುತ್ತಾರೆ, ಆಗ ಹಡಗೂ ಸಮಾಪ್ತಿ, ತಾನೂ ಸಮಾಪ್ತಿಯಾಗುತ್ತಾರೆ.

ಈಗ ನಿಮಗೆ ಜ್ಞಾನಾಮೃತವು ಸಿಗುತ್ತದೆ ಬಾಕಿ ಮುಖ್ಯವಾದುದು ನೆನಪಿನದಾಗಿದೆ. ಇದರಿಂದಲೇ ನೀವು 21 ಜನ್ಮಗಳಿಗಾಗಿ ಸದಾ ಆರೋಗ್ಯವಂತರು, ಐಶ್ವರ್ಯವಂತರಾಗುತ್ತೀರಿ. ತಂದೆಯು ತಿಳಿಸಿದ್ದರು - ಇದನ್ನೂ ಸಹ ಬರೆಯಿರಿ, ಈಗ 21 ಜನ್ಮಗಳಿಗಾಗಿ ಆರೋಗ್ಯವಂತರು, ಐಶ್ವರ್ಯವಂತರು ಹೇಗಾಗಬಹುದೆಂದು ಬಂದು ತಿಳಿದುಕೊಳ್ಳಿ. ಭಾರತವಾಸಿಗಳಿಗೆ ತಿಳಿದಿದೆ, ಅವಶ್ಯವಾಗಿ ಭಾರತದಲ್ಲಿ ದೀರ್ಘಾಯಸ್ಸಿತ್ತು, ಸ್ವರ್ಗದಲ್ಲಿ ಯಾರೂ ಎಂದೂ ರೋಗಿಯಾಗುತ್ತಿರಲಿಲ್ಲ. ಸ್ವರ್ಗದಲ್ಲಿ ದೇವಿ-ದೇವತೆಗಳ ಆಯಸ್ಸು 150 ವರ್ಷಗಳಿರುತ್ತಿತ್ತು. 16 ಕಲಾ ಸಂಪನ್ನರಾಗಿದ್ದರು. ಇದು ಹೇಗೆ ಸಾಧ್ಯವೆಂದು ಕೆಲವರು ಕೇಳುತ್ತಾರೆ - ಆಗ ತಿಳಿಸಿ, ಅಲ್ಲಿ ಪಂಚ ವಿಕಾರಗಳೇ ಇರುವುದಿಲ್ಲ. ಅಲ್ಲಿಯೂ ಒಂದುವೇಳೆ ಈ ವಿಕಾರಗಳು ಇರುವುದಾದರೆ ಅದು ರಾಮ ರಾಜ್ಯ ಹೇಗಾಗುತ್ತದೆ? ದೇವತೆಗಳು ಯಾವಾಗ ವಾಮ ಮಾರ್ಗದಲ್ಲಿ ಹೋಗುತ್ತಾರೆಂದು ನೀವು ಚಿತ್ರದಲ್ಲಿ ನೋಡುತ್ತೀರಿ, ಬಹಳ ಕೊಳಕು ಚಿತ್ರಗಳಿವೆ. ಈ ಬ್ರಹ್ಮಾ ತಂದೆಯೂ ತಿಳಿಸುತ್ತಾರೆ - ನಾನು ಏನನ್ನು ನೋಡಿದ್ದೇನೆಯೋ ಅದನ್ನು ತಿಳಿಸುತ್ತೇನೆ. ಶಿವ ತಂದೆಯು ತಿಳಿಸುತ್ತಾರೆ - ನಾನಂತೂ ಕೇವಲ ಜ್ಞಾನವನ್ನು ಕೊಡುತ್ತೇನೆ, ಶಿವ ತಂದೆಯು ಜ್ಞಾನದ ಮಾತುಗಳನ್ನು ತಿಳಿಸುತ್ತಾರೆ ಮತ್ತು ಇವರು ತಮ್ಮ ಅನುಭವದ ಮಾತುಗಳನ್ನು ತಿಳಿಸುತ್ತಿರುತ್ತಾರೆ. ಇಬ್ಬರಿದ್ದಾರಲ್ಲವೆ. ಇವರೂ ಸಹ ತಮ್ಮ ಅನುಭವವನ್ನು ತಿಳಿಸುತ್ತಿರುತ್ತಾರೆ. ಪ್ರತಿಯೊಬ್ಬರಿಗೂ ತಮ್ಮ ಜೀವನದ ಬಗ್ಗೆ ತಿಳಿದಿದೆ. ನೀವೂ ಸಹ ತಿಳಿದುಕೊಂಡಿದ್ದೀರಿ - ಅರ್ಧಕಲ್ಪದಿಂದ ನೀವು ಪಾಪ ಮಾಡುತ್ತಾ ಬಂದಿದ್ದೀರಿ. ಸತ್ಯಯುಗದಲ್ಲಿ ಯಾವುದೇ ಪಾಪ ಮಾಡುವುದಿಲ್ಲ ಆದರೆ ಇಲ್ಲಿ ಯಾರೂ ಪಾವನರಿಲ್ಲ.

ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಈಗ ಸತ್ಯವಾದ ಭಾಗವತವು ನಡೆಯುತ್ತದೆ, ಭಗವಂತನು ಕುಳಿತು ಮಕ್ಕಳಿಗೆ ಜ್ಞಾನವನ್ನು ತಿಳಿಸುತ್ತಾರೆ. ವಾಸ್ತವದಲ್ಲಿ ಒಂದೇ ಗೀತೆಯಿರಬೇಕು, ಬಾಕಿ ಶಿವ ಜಯಂತಿಯ ಚರಿತ್ರೆಯನ್ನು ಬರೆಯುತ್ತೀರಿ. ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ಕೊನೆಗೆ ಯಾವುದೇ ಗ್ರಂಥ ಇತ್ಯಾದಿಗಳೇನೂ ಉಳಿಯುವುದಿಲ್ಲ ಏಕೆಂದರೆ ವಿನಾಶವು ಸನ್ಮುಖದಲ್ಲಿ ನಿಂತಿದೆ ನಂತರ ಈ ಪುರುಷಾರ್ಥದ ಜ್ಞಾನವೂ ಸಮಾಪ್ತಿಯಾಗುವುದು. ಪ್ರಾಲಬ್ಧವು ಪ್ರಾರಂಭವಾಗಿ ಬಿಡುತ್ತದೆ. ನಾಟಕದಲ್ಲಿ ಯಾವ ಪಾತ್ರವು ಅಭಿನಯಿಸಲ್ಪಟ್ಟಿತೋ ಅದು ಪುನಃ ಪುನರಾವರ್ತನೆಯಾಗುತ್ತಾ ಹೋಗುತ್ತದೆ. ನಂತರ ಮತ್ತೆ ಹೊಸದಾಗಿ ಪ್ರಾಲಬ್ಧವು ಪ್ರಾರಂಭವಾಗುತ್ತದೆ. ಇಷ್ಟೊಂದು ಆತ್ಮಗಳದು ತಮ್ಮ-ತಮ್ಮ ಪಾತ್ರವು ಡ್ರಾಮಾದಲ್ಲಿ ನಿಗಧಿಯಾಗಿದೆ. ಈ ಮಾತುಗಳು ಅರ್ಥವಾಗುವವರಿಗೆ ಅರ್ಥವಾಗುತ್ತದೆ. ಇದು ಬೇಹದ್ದಿನ ನಾಟಕವಾಗಿದೆ. ನೀವು ಹೇಳುತ್ತೀರಿ - ನಾವು ನಿಮಗೆ ಬೇಹದ್ದಿನ ನಾಟಕದ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತೇವೆ. ಅದು ನಿರಾಕಾರಿ ಪ್ರಪಂಚ, ಇದು ಸಾಕಾರಿ ಪ್ರಪಂಚವಾಗಿದೆ. ನಾನು ನಿಮಗೆ ಸಂಪೂರ್ಣ ರಹಸ್ಯವನ್ನು ತಿಳಿಸುತ್ತೇವೆ, ಈ ಚಕ್ರವು ಹೇಗೆ ಸುತ್ತುತ್ತದೆಯೆಂದು ಯಾರಿಗೆ ನೀವು ತಿಳಿಸುತ್ತೀರೋ ಅವರಿಗೆ ಬಹಳ ಆನಂದವಾಗುವುದು. ನಮ್ಮ ಮಾತನ್ನು ಯಾರೂ ಕೇಳುವುದಿಲ್ಲವೆಂದು ತಿಳಿಯಬೇಡಿ. ಅನೇಕರು ಪ್ರಜೆಗಳಾಗಿ ತಯಾರಾಗುವರು. ಆದ್ದರಿಂದ ನೀವು ತಿಳಿಸುತ್ತಾ ಇರಿ, ಸರ್ವೀಸಿನಲ್ಲೆಂದೂ ಹೃದಯ ವಿಧೀರ್ಣರಾಗಬೇಡಿ. ವ್ಯಾಪಾರಿಗಳ ಬಳಿ ಗ್ರಾಹಕರು ಬಹಳಷ್ಟುಮಂದಿ ಬರುತ್ತಾರೆ, ಆಗ ತಿಳಿಸಿ- ನಾವು ನಿಮಗೆ ಬೇಹದ್ದಿನ ವ್ಯಾಪಾರವನ್ನು ಕಲಿಸುತ್ತೇವೆ. ಭಾರತದಲ್ಲಿ ಈ ದೇವತೆಗಳ ರಾಜ್ಯವಿತ್ತು, ಅದು ಮತ್ತೆ ಎಲ್ಲಿಗೆ ಹೋಯಿತು? ಹೇಗೆ 84 ಜನ್ಮಗಳನ್ನು ತೆಗೆದುಕೊಂಡೆವು ಎಂಬುದನ್ನು ನಿಮಗೆ ತಿಳಿಸುತ್ತೇವೆ. ಭಗವಾನುವಾಚ - ನೀವು ತಮ್ಮ ಜನ್ಮಗಳನ್ನೇ ಅರಿತುಕೊಂಡಿಲ್ಲ. ಮಕ್ಕಳು ಬಹಳಷ್ಟು ಸರ್ವೀಸ್ ಮಾಡಬಹುದು, ಸಮಯ ಸಿಕ್ಕಿದರೆ ಸಾಕು ತಿಳಿಸಿಬಿಡಿ. ನಾವು ವಿಶ್ವದ ಚರಿತ್ರೆ-ಭೂಗೋಳವನ್ನು ತಿಳಿಸುತ್ತೇವೆ, ಯಾವುದನ್ನು ಬೇಹದ್ದಿನ ತಂದೆಯ ವಿನಃ ಮತ್ತ್ಯಾರೂ ತಿಳಿಸಿಕೊಡಲು ಸಾಧ್ಯವಿಲ್ಲ. ನೀವು ಬಂದರೆ ನಿಮಗೆ ರಚಯಿತ ಮತ್ತು ರಚನೆಯ ರಹಸ್ಯವನ್ನು ತಿಳಿಸುತ್ತೇವೆ. ಈಗ ನಿಮ್ಮದು ಇದು ಅಂತಿಮ ಜನ್ಮವಾಗಿದೆ. ಭವಿಷ್ಯಕ್ಕಾಗಿ ಈಗ ಸಂಪಾದನೆ ಮಾಡಿಕೊಳ್ಳಿ. ಮಕ್ಕಳೇ, ನೀವು ಹೀಗ್ಹೀಗೆ ಸರ್ವೀಸ್ ಮಾಡಿ ತಂದೆಯು ತಿಳಿಸುತ್ತಾರಲ್ಲವೆ. ನಿಮ್ಮ ಬಳಿ ಗ್ರಾಹಕರು ಈ ಮಾತುಗಳನ್ನು ಕೇಳಿ ಬಹಳ ಖುಷಿಯಾಗಿ ಬಿಡುತ್ತಾರೆ, ನಿಮಗೂ ತಲೆಬಾಗುತ್ತಾರೆ ಮತ್ತು ಅಭಿನಂದನೆಗಳನ್ನು ತಿಳಿಸುತ್ತಾರೆ. ವ್ಯಾಪಾರಿಗಳಿಗಂತೂ ಇನ್ನೂ ಹೆಚ್ಚಿನ ಸರ್ವೀಸ್ ಮಾಡಬಹುದಾಗಿದೆ. ವ್ಯಾಪಾರಿಗಳು ಧರ್ಮಕ್ಕಾಗಿ ಹಣವನ್ನು ತೆಗೆಯುತ್ತಾರೆ. ನೀವಂತೂ ದೊಡ್ಡ ಧರ್ಮಾತ್ಮರಾಗುತ್ತೀರಿ. ತಂದೆಯು ಬಂದು ಅವಿನಾಶಿ ಜ್ಞಾನ ರತ್ನಗಳಿಂದ ನಿಮ್ಮ ಜೋಳಿಗೆಯನ್ನು ತುಂಬುತ್ತಾರೆ. ಮಕ್ಕಳೇ, ಸಂದೇಶವನ್ನು ಕೊಡುತ್ತಾ ಇರಿ, ಹೀಗೀಗೆ ಮಾಡಿ, ಸುಸ್ತಾಗಬೇಡಿ. ಅನೇಕರ ಕಲ್ಯಾಣ ಮಾಡುವುದರಲ್ಲಿ ತೊಡಗಿ, ತಣ್ಣಗಾಗಿ ಬಿಡಬೇಡಿ. ತಮ್ಮ ದೃಷ್ಟಿಯನ್ನು ಸರಿಯಾಗಿಟ್ಟುಕೊಳ್ಳಿ, ಕ್ರೋಧ ಮಾಡಬೇಡಿ. ಯುಕ್ತಿಯಿಂದ ನಡೆಯಿರಿ ಎಂದು ಅನೇಕ ಸಲಹೆಗಳನ್ನು ಕೊಡುತ್ತಿರುತ್ತಾರೆ. ವ್ಯಾಪಾರಿಗಳಂತೂ ಇದು ಬಹಳ ಸಹಜವಾಗಿದೆ. ಇದು ವ್ಯಾಪಾರ, ಅದೂ ವ್ಯಾಪಾರವಾಗಿದೆ. ಇದು ಬಹಳ ಒಳ್ಳೆಯ ವ್ಯಾಪಾರವಾಗಿದೆ ಎಂದು ಮನುಷ್ಯರು ಹೇಳುತ್ತಾರೆ, ಅಲ್ಲಿ ಅನೇಕ ಗ್ರಾಹಕರು ಬಂದು ಸೇರುತ್ತಾರೆ. ಇಂತಹ ವ್ಯಾಪಾರವನ್ನು ಕಲಿಸುವ ಮಹಾ ಪುರುಷರಿಗೆ ಬಹಳ ಸಹಯೋಗ ನೀಡಬೇಕೆಂದು ಹೇಳುತ್ತಾರೆ. ನೀವು ತಿಳಿಸಿ - ನಿಮ್ಮದು ಇದು ಅಂತಿಮ ಜನ್ಮವಾಗಿದೆ, ನೀವು ಪುನಃ ಮನುಷ್ಯರಿಂದ ದೇವತೆಗಳಾಗಬಹುದು. ಯಾರೆಷ್ಟು ಮಾಡುವರೋ ಅಷ್ಟು ಪಡೆಯುವರು. ತಮ್ಮ ಪರಿಶೀಲನೆ ಮಾಡಿಕೊಳ್ಳಿ - ನನ್ನ ದೃಷ್ಟಿಯು ಕೆಟ್ಟ ಕೆಲಸಗಳನ್ನಂತೂ ಮಾಡಲಿಲ್ಲವೇ? ಸ್ತ್ರೀಯರ ಕಡೆ ಸೆಳೆತವಾಗಲಿಲ್ಲವೇ? ನಾಚಿಕೆಯುಂಟಾದಾಗ ಬಿಟ್ಟು ಬಿಡುತ್ತಾರೆ. ವಿಶ್ವದ ಮಾಲೀಕರಾಗುವುದು ಕಡಿಮೆ ಮಾತೇನು! ಎಷ್ಟು ಹಳೆಯ ಭಕ್ತರಾಗಿರುವರೋ ಅಷ್ಟೂ ಬಹಳ ಖುಷಿಯಾಗುವುದು. ಕಡಿಮೆ ಭಕ್ತಿ ಮಾಡಿದ್ದರೆ ಕಡಿಮೆ ಖುಷಿಯಾಗುವುದು. ಇದೂ ಸಹ ತಿಳಿದುಕೊಳ್ಳುವ ಲೆಕ್ಕವಾಗಿದೆ. ಬುದ್ಧಿಯು ಹೇಳುತ್ತದೆ - ನಾವೀಗ ಮನೆಗೆ ಹೋಗುತ್ತೇವೆ ನಂತರ ಹೊಸ ಪ್ರಪಂಚದಲ್ಲಿ ಹೊಸ ವಸ್ತ್ರಗಳನ್ನು ಧರಿಸಿ ಪಾತ್ರವನ್ನಭಿನಯಿಸುತ್ತೇವೆ. ಈ ಶರೀರವನ್ನು ಬಿಡುತ್ತೇವೆ ನಂತರ ಸತ್ಯಯುಗದಲ್ಲಿ ಬಾಯಲ್ಲಿ ಚಿನ್ನದ ಚಮಚವಿರುವುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ದೃಷ್ಠಿಯಿಂದ ಯಾವುದೇ ಕೆಟ್ಟ ಕೆಲಸವನ್ನು ಮಾಡಬಾರದು. ಮೊದಲು ತಮ್ಮ ದೃಷ್ಟಿಯನ್ನೇ ಬದಲಾಯಿಸಿಕೊಳ್ಳಬೇಕು. ಹೆಜ್ಜೆ-ಹೆಜ್ಜೆಯಲ್ಲಿಯೂ ಎಚ್ಚರಿಕೆಯನ್ನಿಡುತ್ತಾ ಪದುಮದ ಸಂಪಾದನೆಯನ್ನು ಜಮಾ ಮಾಡಿಕೊಳ್ಳಬೇಕಾಗಿದೆ.

2. ಸಮಯ ಸಿಕ್ಕಿದಾಗಲೆಲ್ಲಾ ಬೇಹದ್ದಿನ ವ್ಯಾಪಾರ ಮಾಡಬೇಕಾಗಿದೆ. ಸರ್ವೀಸಿನಲ್ಲಿ ಹೃದಯ ವಿಧೀರ್ಣರಾಗಬಾರದು. ಎಲ್ಲರಿಗೆ ತಂದೆಯ ಸಂದೇಶವನ್ನು ಕೊಡಬೇಕಾಗಿದೆ. ಸುಸ್ತಾಗಬಾರದು.

ವರದಾನ:
ಸ್ನೇಹದ ಮಡಿಲಿನಲ್ಲಿ ಆಂತರಿಕ ಸುಖ ಹಾಗೂ ಸರ್ವಶಕ್ತಿಗಳ ಅನುಭವ ಮಾಡುವಂತಹ ಯಥಾರ್ಥ ಪುರುಷಾರ್ಥಿ ಭವ.

ಯಾರು ಯಥಾರ್ಥ ಪುರುಷಾರ್ಥಿಯಾಗಿದ್ದಾರೆ, ಅವರು ಎಂದೂ ಪರಿಶ್ರಮ ಅಥವಾ ಆಯಾಸದ ಅನುಭವ ಮಾಡುವುದಿಲ್ಲ, ಸದಾ ಪ್ರೀತಿಯಲ್ಲಿ ಮುಳುಗಿ ಹೋಗಿರುತ್ತಾರೆ. ಅವರು ಸಂಕಲ್ಪದಲ್ಲಿಯೂ ಸಹ ಸರೆಂಡರ್ ಆಗಿರುವ ಕಾರಣ ಅನುಭವ ಮಾಡುತ್ತಾರೆ ನಮ್ಮನ್ನು ಬಾಪ್ದಾದಾ ನಡೆಸುತ್ತಿದ್ದಾರೆ, ಪರಿಶ್ರಮದ ಕಾಲಿನಿಂದಲ್ಲ. ಆದರೆ ಸ್ನೇಹದ ಮಡಿಲಿನಲ್ಲಿ ನಡೆಯುತ್ತಿದ್ದೇವೆ, ಸ್ನೇಹದ ಮಡಿಲಿನಲ್ಲಿ ಸರ್ವ ಪ್ರಾಪ್ತಿಗಳ ಅನುಭೂತಿ ಆಗುವ ಕಾರಣ ಅವರು ನಡೆಯುವುದಿಲ್ಲ. ಆದರೆ ಸದಾ ಖುಷಿಯಲ್ಲಿ, ಆಂತರಿಕ ಸುಖದಲ್ಲಿ, ಸರ್ವಶಕ್ತಿಗಳ ಅನುಭವದಲ್ಲಿ ಹಾರುತ್ತಿರುತ್ತಾರೆ.

ಸ್ಲೋಗನ್:
ನಿಶ್ಚಯರೂಪಿ ಅಡಿಪಾಯ ಭಧ್ರವಾಗಿದ್ದಲ್ಲಿ ಶ್ರೇಷ್ಠ ಜೀವನದ ಅನುಭವ ಸ್ವತಃವಾಗಿ ಆಗುವುದು.