31.07.20         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಇದು ವಿಚಿತ್ರವಾದ ಪಾಠಶಾಲೆಯಾಗಿದೆ, ಇದರಲ್ಲಿ ಓದುವಂತಹ ನೀವು ಆತ್ಮರು ಸ್ಥೂಲ ಕಣ್ಣುಗಳಿಗೆ ಕಾಣುವುದಿಲ್ಲ ಮತ್ತು ಓದಿಸುವವರೂ ಕಾಣುವುದಿಲ್ಲ. ಇದು ಹೊಸ ಮಾತಾಗಿದೆ.

ಪ್ರಶ್ನೆ:
ಈ ಪಾಠಶಾಲೆಯಲ್ಲಿ ನಿಮಗೆ ಮುಖ್ಯವಾದ ಯಾವ ಶಿಕ್ಷಣವು ಸಿಗುತ್ತದೆ, ಆ ಶಿಕ್ಷಣವನ್ನು ಮತ್ತ್ಯಾವುದೇ ಪಾಠಶಾಲೆಯಲ್ಲಿ ಕೊಡಲಾಗುವುದಿಲ್ಲ?

ಉತ್ತರ:
ಇಲ್ಲಿ ತಂದೆಯು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡುತ್ತಾರೆ - ಮಕ್ಕಳೇ, ತಮ್ಮ ಕರ್ಮೇಂದ್ರಿಯಗಳನ್ನು ವಶದಲ್ಲಿಟ್ಟುಕೊಳ್ಳಿ. ಎಂದೂ ಯಾವುದೇ ಸಹೋದರಿಯ ಮೇಲೆ ಕೆಟ್ಟ ದೃಷ್ಟಿಯಿರಬಾರದು, ನೀವು ಆತ್ಮದ ರೂಪದಲ್ಲಿ ಸಹೋದರ-ಸಹೋದರರಾಗಿದ್ದೀರಿ ಮತ್ತು ಪ್ರಜಾಪಿತ ಬ್ರಹ್ಮನ ಮಕ್ಕಳು ಸಹೋದರ-ಸಹೋದರಿಯರಾಗಿದ್ದೀರಿ. ನಿಮಗೆ ಕೆಟ್ಟ ಸಂಕಲ್ಪಗಳೆಂದೂ ಬರಬಾರದು. ಇಂತಹ ಶಿಕ್ಷಣವನ್ನು ಈ ವಿಶ್ವ ವಿದ್ಯಾಲಯದ ಹೊರತು ಮತ್ತೆಲ್ಲಿಯೂ ಕೊಡುವುದಿಲ್ಲ.

ಗೀತೆ:
ದೂರ ದೇಶದಲ್ಲಿರುವವರು...............

ಓಂ ಶಾಂತಿ.
ದೂರ ದೇಶದಲ್ಲಿರುವ ಆತ್ಮವು ಸ್ಥೂಲ ಕಣ್ಣುಗಳಿಗೆ ಕಾಣುವುದಿಲ್ಲ. ದೂರ ದೇಶದಲ್ಲಿರುವ ಪರಮಾತ್ಮನೂ ಸಹ ಕಾಣುವುದಿಲ್ಲ. ಪರಮಾತ್ಮ ಮತ್ತು ಆತ್ಮಗಳಷ್ಟೇ ಈ ಕಣ್ಣುಗಳಿಗೆ ಕಾಣಿಸುವುದಿಲ್ಲ. ಮತ್ತೆಲ್ಲಾ ವಸ್ತುಗಳು ಕಾಣುತ್ತವೆ. ನಾವಾತ್ಮರಾಗಿದ್ದೇವೆ ಎಂಬುದನ್ನು ಬುದ್ಧಿಯಿಂದ ತಿಳಿದುಕೊಳ್ಳಲಾಗುತ್ತದೆ. ಆತ್ಮವೇ ಬೇರೆ, ಶರೀರವೇ ಬೇರೆ ಎಂಬುದನ್ನು ಮನುಷ್ಯರು ತಿಳಿಯುತ್ತಾರೆ. ಆತ್ಮವು ದೂರ ದೇಶದಿಂದ ಬಂದು ಶರೀರದಲ್ಲಿ ಪ್ರವೇಶ ಮಾಡುತ್ತದೆ ನಾವಾತ್ಮಗಳು ಹೇಗೆ ದೂರ ದೇಶದಿಂದ ಬರುತ್ತೇವೆ ಎಂದು ನೀವು ಪ್ರತಿಯೊಂದು ಮಾತನ್ನೂ ಚೆನ್ನಾಗಿ ತಿಳಿದುಕೊಳ್ಳುತ್ತಿದ್ದೀರಿ. ಆತ್ಮವೂ ಸಹ ಕಣ್ಣಿಗೆ ಕಾಣುವುದಿಲ್ಲ. ಓದಿಸುವ ತಂದೆ ಪರಮಾತ್ಮನೂ ಸಹ ಸ್ಥೂಲ ಕಣ್ಣುಗಳಿಗೆ ಕಾಣುವುದಿಲ್ಲ. ಇಂತಹ ಮಾತನ್ನು ಎಂದೂ ಯಾವುದೇ ಸತ್ಸಂಗ ಅಥವಾ ಶಾಸ್ತ್ರಗಳಲ್ಲಿ ಕೇಳಿಲ್ಲ. ಎಂದೂ ನೋಡಿಯೂ ಇಲ್ಲ, ಕೇಳಿಯೂ ಇಲ್ಲ. ನೀವೀಗ ತಿಳಿದುಕೊಂಡಿದ್ದೀರಿ - ನಾನಾತ್ಮನು ಕಣ್ಣಿಗೆ ಕಾಣುವುದಿಲ್ಲ. ಆದರೆ ಆತ್ಮವೇ ಓದಬೇಕಾಗಿದೆ. ಆತ್ಮವೇ ಎಲ್ಲವನ್ನೂ ಮಾಡುತ್ತದೆಯಲ್ಲವೆ. ಇದು ಹೊಸ ಮಾತಾಗಿದೆ, ಇದನ್ನು ಮತ್ತ್ಯಾರೂ ತಿಳಿಸಿಕೊಡಲು ಸಾಧ್ಯವಿಲ್ಲ. ಪರಮಪಿತ ಪರಮಾತ್ಮ ಯಾರು ಜ್ಞಾನ ಸಾಗರನಾಗಿದ್ದಾರೆಯೋ ಅವರೂ ಸಹ ಈ ಚರ್ಮ ಚಕ್ಷುಗಳಿಗೆ ಕಾಣುವುದಿಲ್ಲ. ಆದರೆ ನಿರಾಕಾರನು ಓದಿಸುವುದು ಹೇಗೆ? ಆತ್ಮವೂ ಸಹ ಶರೀರದಲ್ಲಿ ಬರುತ್ತದೆಯಲ್ಲವೆ. ಹೇಗೆ ಪರಮಪಿತ ಪರಮಾತ್ಮ ತಂದೆಯೂ ಸಹ ಭಾಗ್ಯಶಾಲಿ ರಥ ಅಥವಾ ಭಗೀರಥನಲ್ಲಿ ಬರುತ್ತಾರೆ. ಈ ರಥಕ್ಕೂ ತನ್ನ ಆತ್ಮವಿದೆ. ಅವರೂ ಸಹ (ಬ್ರಹ್ಮಾ) ತನ್ನ ಆತ್ಮವನ್ನು ನೋಡಲು ಸಾಧ್ಯವಿಲ್ಲ. ತಂದೆಯು ಈ ರಥದ ಆಧಾರದಿಂದ ಬಂದು ಮಕ್ಕಳಿಗೆ ಓದಿಸುತ್ತಾರೆ. ಆತ್ಮವೂ ಸಹ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಆತ್ಮವನ್ನು ತಿಳಿದುಕೊಳ್ಳಬಹುದು ಆದರೆ ನೋಡಲು ಸಾಧ್ಯವಿಲ್ಲ. ಯಾವ ತಂದೆಯನ್ನು ಸ್ಥೂಲ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲವೋ ಅವರು ನಿಮಗೆ ಓದಿಸುತ್ತಿದ್ದಾರೆ. ಇದು ಸಂಪೂರ್ಣ ಹೊಸ ಮಾತಾಗಿದೆ. ತಂದೆಯು ತಿಳಿಸುತ್ತಾರೆ - ನಾನೂ ಸಹ ಡ್ರಾಮಾನುಸಾರ ನನ್ನ ಸಮಯದಲ್ಲಿ ಬಂದು ಶರೀರ ಧಾರಣೆ ಮಾಡುತ್ತೇನೆ. ಇಲ್ಲವಾದರೆ ನೀವು ಮಧುರಾತಿ ಮಧುರ ಮಕ್ಕಳನ್ನು ದುಃಖದಿಂದ ಹೇಗೆ ಬಿಡಿಸಲಿ! ಈಗ ನೀವು ಮಕ್ಕಳು ಜಾಗೃತರಾಗಿದ್ದೀರಿ, ಪ್ರಪಂಚದ ಎಲ್ಲಾ ಮಕ್ಕಳು ಮಲಗಿದ್ದಾರೆ. ಯಾವಾಗ ನಿಮ್ಮ ಬಳಿ ಬಂದು ತಿಳಿದುಕೊಳ್ಳುವರೋ ಆಗ ಬ್ರಾಹ್ಮಣರಾಗುವರು. ಅನ್ಯ ಸತ್ಸಂಗಗಳಲ್ಲಿ ಯಾರು ಬೇಕಾದರೂ ಹೋಗಿ ಕುಳಿತುಕೊಳ್ಳಬಹುದು ಆದರೆ ಇಲ್ಲಿಗೆ ಆ ರೀತಿ ಬರಲು ಸಾಧ್ಯವಿಲ್ಲ. ಏಕೆಂದರೆ ಇದು ಪಾಠಶಾಲೆಯಾಗಿದೆಯಲ್ಲವೆ. ಹೇಗೆ ಬ್ಯಾರಿಸ್ಟರಿಯ ಪರೀಕ್ಷೆಯಲ್ಲಿ ನೀವು ಹೋಗಿ ಕುಳಿತುಕೊಂಡರೆ ನಿಮಗೇನೂ ಅರ್ಥವಾಗುವುದಿಲ್ಲ ಹಾಗೆಯೇ ಇದು ಸಂಪೂರ್ಣ ಹೊಸ ಮಾತಾಗಿದೆ. ಓದಿಸುವವರು ನಿಮಗೆ ಕಾಣುವುದಿಲ್ಲ. ಓದುವವರೂ ಕಾಣುವುದಿಲ್ಲ. ಆತ್ಮವೇ ಒಳಗೆ ಕೇಳುತ್ತದೆ, ಧಾರಣೆ ಮಾಡುತ್ತದೆ. ಆಂತರ್ಯದಲ್ಲಿ ನಿಶ್ಚಯವಾಗುತ್ತಾ ಹೋಗುತ್ತದೆ. ಈ ಮಾತಂತೂ ಸತ್ಯವಾದ ಮಾತಾಗಿದೆ. ಪರಮಾತ್ಮ ಮತ್ತು ಆತ್ಮವು ಎರಡೂ ಸ್ಥೂಲ ಕಣ್ಣುಗಳಿಗೆ ಕಾಣುವುದಿಲ್ಲ. ನಾನಾತ್ಮನಾಗಿದ್ದೇನೆ ಎಂಬುದನ್ನು ಬುದ್ಧಿಯಿಂದ ತಿಳಿದುಕೊಳ್ಳಲಾಗುತ್ತದೆ. ಕೆಲವರಂತೂ ಇದನ್ನೂ ಸಹ ಒಪ್ಪುವುದಿಲ್ಲ. ಸೃಷ್ಟಿಯೆಂದು ಹೇಳಿ ಬಿಡುತ್ತಾರೆ ಮತ್ತು ಅದರ ವರ್ಣನೆಯನ್ನು ಮಾಡುತ್ತಾರೆ. ಅನೇಕ ಮತಗಳಿವೆಯಲ್ಲವೆ. ನೀವು ಮಕ್ಕಳು ಈ ಜ್ಞಾನದಲ್ಲಿ ತತ್ಪರರಾಗಿರಬೇಕಾಗಿದೆ. ಯಾವ ಕರ್ಮೇಂದ್ರಿಯಗಳು ಮೋಸ ಮಾಡುತ್ತವೆಯೋ ಅವನ್ನು ವಶದಲ್ಲಿಟ್ಟುಕೊಳ್ಳಬೇಕಾಗಿದೆ, ಮುಖ್ಯವಾದುದು ಕಣ್ಣುಗಳಾಗಿವೆ. ಇವು ಎಲ್ಲವನ್ನೂ ನೋಡುತ್ತವೆ. ಮಕ್ಕಳನ್ನು ನೋಡಿದಾಗ ಇದು ನನ್ನ ಮಗುವೆಂದು ಹೇಳುತ್ತಾರೆ. ಇಲ್ಲವೆಂದರೆ ಹೇಗೆ ಅರ್ಥವಾಗುವುದು! ಯಾರಾದರೂ ಜನ್ಮತಃ ಕುರುಡರಾಗಿದ್ದರೆ, ಇವರು ನಿಮ್ಮ ಸಹೋದರನೆಂದು ಅವರಿಗೆ ತಿಳಿಸಿಕೊಡುತ್ತಾರೆ, ಬುದ್ಧಿಯಿಂದ ತಿಳಿದುಕೊಳ್ಳುತ್ತಾರೆ. ನೋಡಲು ಸಾಧ್ಯವಿಲ್ಲ. ವಾಸ್ತವದಲ್ಲಿ ಯಾರಾದರೂ ಕುರುಡ ಸೂರದಾಸನಾಗಿದ್ದರೆ ಅವರು ಜ್ಞಾನವನ್ನು ಚೆನ್ನಾಗಿ ತೆಗೆದುಕೊಳ್ಳುತ್ತಾರೆ ಏಕೆಂದರೆ ಮೋಸ ಮಾಡುವಂತಹದ್ದು ಕಣ್ಣುಗಳಿಲ್ಲ, ಭಲೆ ಮತ್ತ್ಯಾವುದೇ ಕೆಲಸವು ಅವರಿಗೆ ಸಾಧ್ಯವಾಗದೇ ಇರಬಹುದು ಆದರೆ ಜ್ಞಾನವನ್ನು ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ಸ್ತ್ರೀಯನ್ನೂ ನೋಡುವುದಿಲ್ಲ. ಅನ್ಯರನ್ನು ನೋಡಿದಾಗ ಬುದ್ಧಿಯು ಹೋಗುವುದು. ನೋಡುವುದೇ ಇಲ್ಲವೆಂದರೆ ಹೇಗೆ ಹಿಡಿದುಕೊಳ್ಳುವುದು? ಆದ್ದರಿಂದ ತಿಳಿಸುತ್ತಾರೆ - ಕರ್ಮೇಂದ್ರಿಯಗಳನ್ನು ಪರಿಪಕ್ವ ಮಾಡಿಕೊಳ್ಳಬೇಕಾಗಿದೆ. ಯಾವುದೇ ಸಹೋದರಿಯನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು. ನೀವೂ ಸಹ ಸಹೋದರ-ಸಹೋದರಿಯರಾಗಿದ್ದೀರಲ್ಲವೆ. ಕೆಟ್ಟ ದೃಷ್ಟಿಯ ಸಂಕಲ್ಪವೆಂದೂ ಬರಬಾರದು. ಭಲೆ ಇದು ಕಲಿಯುಗವಾಗಿದೆ, ಸಹೋದರ-ಸಹೋದರಿಯರು, ಸಹೋದರಿ-ಸಹೋದರಿಯರೂ ಹಾಳಾಗಿ ಬಿಡುತ್ತಾರೆ. ಆದರೆ ನಿಯಮವೇನೆಂದರೆ ಸಹೋದರ-ಸಹೋದರಿಗೆ ಕೆಟ್ಟ ಸಂಕಲ್ಪಗಳಿರುವುದಿಲ್ಲ.

ನಾವು ಒಬ್ಬ ತಂದೆಯ ಮಕ್ಕಳಾಗಿದ್ದೇವೆ. ತಂದೆಯು ಆದೇಶ ನೀಡುತ್ತಾರೆ, ನೀವು ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿಯರಾಗಿದ್ದೀರೆಂದರೆ ಈ ಜ್ಞಾನವು ಪಕ್ಕಾ ಆಗಿ ಬಿಡಬೇಕು - ನಾವು ಸಹೋದರ-ಸಹೋದರಿಯರಾಗಿದ್ದೇವೆ. ನಾವಾತ್ಮಗಳು ಭಗವಂತನ ಮಕ್ಕಳು ಪರಸ್ಪರ ಸಹೋದರರಾಗಿದ್ದೇವೆ, ಮತ್ತೆ ಶರೀರದಲ್ಲಿ ಪ್ರಜಾಪಿತ ಬ್ರಹ್ಮಾರವರ ಮೂಲಕ ಸಹೋದರ-ಸಹೋದರಿಯರಾಗುತ್ತೇವೆ ಅಂದಮೇಲೆ ಕುದೃಷ್ಟಿಯಿರಲು ಸಾಧ್ಯವಿಲ್ಲ. ಇದನ್ನು ಪಕ್ಕಾ ತಿಳಿದುಕೊಳ್ಳಿ - ನಾವಾತ್ಮರಾಗಿದ್ದೇವೆ, ತಂದೆಯು ನಮಗೆ ಓದಿಸುತ್ತಾರೆ. ನಾನಾತ್ಮನು ಈ ಶರೀರದ ಮೂಲಕ ನೋಡುತ್ತೇನೆ, ಇವು ಕರ್ಮೇಂದ್ರಿಯಳಾಗಿವೆ. ನಾನಾತ್ಮನು ಇದರಿಂದ ಭಿನ್ನವಾಗಿದ್ದೇನೆ. ಈ ಕರ್ಮೇಂದ್ರಿಯಗಳಿಂದ ನಾನು ಕರ್ಮ ಮಾಡುತ್ತೇನೆ, ನಾನೇ ಕರ್ಮೆಂದ್ರಿಯಗಳಲ್ಲ. ನಾನು ಇವುಗಳಿಂದ ಭಿನ್ನವಾದ ಆತ್ಮನಾಗಿದ್ದೇನೆ. ನಾನು ಈ ಶರೀರವನ್ನು ತೆಗೆದುಕೊಂಡು ಪಾತ್ರವನ್ನಭಿನಯಿಸುತ್ತೇನೆ, ಅದೂ ಅಲೌಕಿಕ ಪಾತ್ರ! ಮತ್ತ್ಯಾವ ಮನುಷ್ಯರೂ ಈ ಪಾತ್ರವನ್ನಭಿನಯಿಸಲು ಸಾಧ್ಯವಿಲ್ಲ. ನೀವೇ ಅಭಿನಯಿಸುತ್ತೀರಿ. ಮತ್ತೆ-ಮತ್ತೆ ನಿಮ್ಮನ್ನು ಆತ್ಮನೆಂದು ತಿಳಿಯುತ್ತಾ ತಂದೆಯನ್ನು ನೆನಪು ಮಾಡಬೇಕಾಗಿದೆ. ಅವರೇ ನಮ್ಮ ಶಿಕ್ಷಕನಾಗಿದ್ದಾರೆ, ಗುರುವೂ ಆಗಿದ್ದಾರೆ. ಸಾಕಾರದಲ್ಲಿ ತಂದೆ, ಶಿಕ್ಷಕ, ಗುರುಗಳು ಬೇರೆ-ಬೇರೆಯಾಗಿರುತ್ತಾರೆ. ಈ ನಿರಾಕಾರಿ ಒಬ್ಬ ತಂದೆಯೇ ತಂದೆ, ಶಿಕ್ಷಕ, ಗುರುವಾಗಿದ್ದಾರೆ. ಇಲ್ಲಿ ನೀವು ಮಕ್ಕಳಿಗೆ ಹೊಸ ಶಿಕ್ಷಣ ಸಿಗುತ್ತಿದೆ. ತಂದೆ, ಶಿಕ್ಷಕ, ಗುರು- ಮೂವರೂ ನಿರಾಕಾರಿಯಾಗಿದ್ದಾರೆ. ನಾವೂ ಸಹ ನಿರಾಕಾರಿ ಆತ್ಮರು ಓದುತ್ತೇವೆ ಆದ್ದರಿಂದಲೇ ನಾವಾತ್ಮಗಳು ಮತ್ತು ಪರಮಾತ್ಮನು ಬಹಳಕಾಲ ಅಗಲಿದ್ದೆವು ಎಂಬುದು ಅರ್ಥವಾಗುತ್ತದೆ. ಇಲ್ಲಿಯೇ ಮಿಲನವಾಗುತ್ತದೆ. ಯಾವಾಗ ತಂದೆಯು ಬಂದು ಪಾವನರನ್ನಾಗಿ ಮಾಡುತ್ತಾರೆ, ಮೂಲವತನದಲ್ಲಿ ಆತ್ಮಗಳು ಹೋಗಿ ಮಿಲನ ಮಾಡುತ್ತೀರಿ ಆದರೆ ಅದು ತಮ್ಮ ಮನೆಯಾಗಿದೆ, ಅಲ್ಲಿ ಯಾವುದೇ ಆಟವಿಲ್ಲ. ಎಲ್ಲಾ ಆತ್ಮಗಳು ಅಲ್ಲಿರುತ್ತಾರೆ, ಅಂತಿಮದಲ್ಲಿ ಎಲ್ಲಾ ಆತ್ಮಗಳು ಅಲ್ಲಿಗೆ ಹೊರಟು ಹೋಗುತ್ತಾರೆ. ಯಾವ ಆತ್ಮಗಳು ಪಾತ್ರವನ್ನಭಿನಯಿಸಲು ಬರುವರೋ ಅವರು ಮಧ್ಯದಲ್ಲಿಯೇ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಅಂತ್ಯದವರೆಗೆ ಪಾತ್ರವನ್ನಭಿನಯಿಸಬೇಕಾಗಿದೆ. ಎಲ್ಲರೂ ಬರುವವರೆಗೆ, ಸತೋಪ್ರಧಾನರಿಂದ ಸತೋ-ರಜೋ-ತಮೋದಲ್ಲಿ ಬರುವವರೆಗೆ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ ಇರಬೇಕಾಗಿದೆ. ನಂತರ ಅಂತಿಮದಲ್ಲಿ ನಾಟಕವು ಪೂರ್ಣವಾಗುತ್ತದೆ ಆಗ ಪುನಃ ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕಾಗಿದೆ. ತಂದೆಯು ಎಲ್ಲಾ ಮಾತುಗಳನ್ನು ಸರಿಯಾಗಿ ತಿಳಿಸುತ್ತಾರಲ್ಲವೆ. ಜ್ಞಾನ ಮಾರ್ಗವೇ ಸತ್ಯವಾದ ಮಾರ್ಗವಾಗಿದೆ. ಸತ್ಯಂ-ಶಿವಂ-ಸುಂದರಂ ಎಂದು ಹೇಳಲಾಗುತ್ತದೆಯಲ್ಲವೆ. ಸತ್ಯವನ್ನು ಹೇಳುವವರು ಒಬ್ಬ ತಂದೆಯಾಗಿದ್ದಾರೆ. ಈ ಸಂಗಮಯುಗದಲ್ಲಿ ಪುರುಷಾರ್ಥಿಗಳಾಗಲು ಇದೊಂದೇ ಸತ್ಸಂಗವಿದೆ. ಯಾವಾಗ ತಂದೆಯು ಬರುವರೋ, ಮಕ್ಕಳೊಂದಿಗೆ ಮಿಲನ ಮಾಡುವರು ಆಗಲೇ ಸತ್ಸಂಗವೆಂದು ಕರೆಯಲಾಗುವುದು. ಉಳಿದೆಲ್ಲವೂ ಕುಸ್ಸಂಗಗಳಾಗಿವೆ. ಸತ್ಸಂಗವು ಮೇಲೆತ್ತುವುದು, ಕೆಟ್ಟ ಸಂಗವು ಕೆಳಗೆ ಬೀಳಿಸುವುದೆಂದು ಗಾಯನವಿದೆ. ರಾವಣನದು ಕೆಟ್ಟ ಸಂಗವಾಗಿದೆ, ತಂದೆಯು ತಿಳಿಸುತ್ತಾರೆ - ನಾನಂತೂ ನಿಮ್ಮನ್ನು ದಡ ಸೇರಿಸುತ್ತೇನೆ. ಮತ್ತೆ ನಿಮ್ಮನ್ನು ಮುಳುಗಿಸುವವರು ಯಾರು? ಹೇಗೆ ತಮೋಪ್ರಧಾನರಾಗಿ ಬಿಡುತ್ತೀರಿ ಎಂಬುದನ್ನೂ ಸಹ ತಿಳಿಸಬೇಕಾಗುತ್ತದೆ. ಮಾಯೆಯು ನಿಮ್ಮ ಮುಂದಿರುವ ಶತ್ರುವಾಗಿದೆ. ಶಿವ ತಂದೆಯು ಮಿತ್ರನಾಗಿದ್ದಾರೆ, ಅವರಿಗೆ ಪತಿಯರ ಪತಿಯೆಂದು ಹೇಳಲಾಗುತ್ತದೆ. ಈ ಮಹಿಮೆಯು ರಾವಣನಿಗಿಲ್ಲ. ಕೇವಲ ರಾವಣನೆಂದು ಹೇಳುತ್ತಾರೆ, ಮತ್ತೇನೂ ಮಹಿಮೆಯಿಲ್ಲ. ರಾವಣನನ್ನು ಏಕೆ ಸುಡುತ್ತಾರೆ? ರಾವಣನನ್ನು ಸುಡುವಲ್ಲಿಯೂ ಬಹಳ ಸರ್ವೀಸ್ ಮಾಡಬಹುದು. ಏಕೆಂದರೆ ರಾವಣನು ಯಾರು? ಯಾವಾಗ ಬರುತ್ತಾನೆ, ಏಕೆ ಸುಡುತ್ತೇವೆ? ಎಂಬುದನ್ನು ಮನುಷ್ಯ ಮಾತ್ರರೂ ತಿಳಿದುಕೊಂಡಿಲ್ಲ. ಅಂಧಶ್ರದ್ಧೆಯಲ್ಲವೆ. ನೀವು ಮಕ್ಕಳಿಗೆ ತಿಳಿಸಿಕೊಡುವ ಅಥಾರಿಟಿಯಿದೆ. ಹೇಗೆ ಅವರು ಶಾಸ್ತ್ರಗಳನ್ನು ಅಥಾರಿಟಿಯಿಂದ ತಿಳಿಸುತ್ತಾರೆ. ಕೇಳುವವರೂ ಸಹ ಬಹಳ ಮಸ್ತರಾಗಿ ಬಿಡುತ್ತಾರೆ. ಹಣವನ್ನು ಕೊಡುತ್ತಿರುತ್ತಾರೆ, ಸಂಸ್ಕೃತವನ್ನು ಕಲಿಸಿ, ಗೀತೆಯನ್ನು ಕಲಿಸಿ ಎಂದು ಹೇಳಿ ಬಹಳಷ್ಟು ಹಣವನ್ನು ಕೊಡುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಎಷ್ಟೊಂದು ಹಣವನ್ನು, ಸಮಯವನ್ನು ವ್ಯರ್ಥವಾಗಿ ಕಳೆಯುತ್ತಾ ಬಂದಿದ್ದೀರಿ.

ನಿಮ್ಮ ಬಳಿ ಯಾರು ಬ್ರಾಹ್ಮಣ ಕುಲದವರಾಗಿರುವರೋ ಅವರೇ ಬರುತ್ತಿರುತ್ತಾರೆ ಆದ್ದರಿಂದ ನೀವು ಪ್ರದರ್ಶನಿ ಇತ್ಯಾದಿಗಳನ್ನು ಮಾಡುತ್ತಿರುತ್ತೀರಿ. ಇಲ್ಲಿಯ ಹೂವಾಗಿದ್ದರೆ ಅವಶ್ಯವಾಗಿ ಬರುವರು. ಈ ವೃಕ್ಷವು ವೃದ್ಧಿಯಾಗುತ್ತಾ ಹೋಗುತ್ತದೆ, ತಂದೆಯು ಬೀಜವನ್ನು ಹಾಕಿದ್ದಾರೆ. ಈ ಒಬ್ಬ ಬ್ರಹ್ಮಾರವರಿಂದ ಮತ್ತೆ ಬ್ರಾಹ್ಮಣ ಕುಲವಾಗುತ್ತದೆ, ಇವರೊಬ್ಬರಿಂದಲೇ ಹೆಚ್ಚುತ್ತಾ ಹೋಯಿತು. ಮೊದಲು ಮನೆಯವರು, ನಂತರ ಮಿತ್ರ ಸಂಬಂಧಿಗಳು, ನೆರೆ ಹೊರೆಯವರು ಎಲ್ಲರೂ ಬರತೊಡಗಿದರು. ನಂತರ ಕೇಳುತ್ತಾ-ಕೇಳುತ್ತಾ ಎಷ್ಟೊಂದು ಮಂದಿ ಬಂದು ಬಿಡುತ್ತಾರೆ, ಇದೂ ಸಹ ಸತ್ಸಂಗವಾಗಿದೆ ಎಂದು ತಿಳಿಯುತ್ತಾರೆ. ಇದರಲ್ಲಿ ಪವಿತ್ರತೆಯ ಪರಿಶ್ರಮವಿದೆ. ಇದರಿಂದಲೇ ಗಲಾಟೆಗಳಾಯಿತು, ಈಗಲೂ ಸಹ ಆಗುತ್ತಿರುತ್ತವೆ. ಆದ್ದರಿಂದ ನಿಂದನೆ ಮಾಡುತ್ತಾರೆ - ಇವರು ಓಡಿಸುತ್ತಾರೆ, ಪಟ್ಟದ ರಾಣಿಯರನ್ನಾಗಿ ಮಾಡಿಕೊಳ್ಳುತ್ತಾರೆಂದು ಹೇಳುತ್ತಾರೆ. ಪಟ್ಟದ ರಾಣಿಯಂತೂ ಸ್ವರ್ಗದಲ್ಲಿ ಆಗುತ್ತೀರಲ್ಲವೆ ಅಂದಮೇಲೆ ಅವಶ್ಯವಾಗಿ ಇಲ್ಲಿಯೇ ಪವಿತ್ರರನ್ನಾಗಿ ಮಾಡಬೇಕಲ್ಲವೆ. ನೀವು ಎಲ್ಲರಿಗೆ ತಿಳಿಸುತ್ತೀರಿ - ಮಹಾರಾಣಿ, ಮಹಾರಾಜರಾಗಲು ಈ ಜ್ಞಾನವಿದೆ. ನರನಿಂದ ನಾರಾಯಣನಾಗುವ ಸತ್ಯ-ಸತ್ಯವಾದ ಕಥೆಯನ್ನು ನೀವು ಸತ್ಯ ಭಗವಂತನಿಂದ ಕೇಳುತ್ತೀರಿ. ಈ ಲಕ್ಷ್ಮೀ-ನಾರಾಯಣರಿಗೆ ಭಗವಾನ್-ಭಗವತಿಯೆಂದು ಹೇಳಲು ಸಾಧ್ಯವಿಲ್ಲ. ಆದರೆ ಪೂಜಾರಿಗಳು ಕೃಷ್ಣನ ಚಿತ್ರವನ್ನು ಗೌರವಿಸುವಷ್ಟು ನಾರಾಯಣನ ಚಿತ್ರವನ್ನು ಗೌರವಿಸುವುದಿಲ್ಲ. ಕೃಷ್ಣನ ಚಿತ್ರಗಳನ್ನು ಬಹಳಷ್ಟು ಖರೀದಿಸುತ್ತಾರೆ, ಕೃಷ್ಣನಿಗೆ ಇಷ್ಟೊಂದು ಗೌರವ ಏಕೆ ಇದೆ? ಏಕೆಂದರೆ ಚಿಕ್ಕ ಮಗುವಲ್ಲವೆ? ಮಕ್ಕಳನ್ನು ಮಹಾತ್ಮರಿಗಿಂತಲೂ ಮೇಲಿನ ಸ್ಥಾನದಲ್ಲಿಡುತ್ತಾರೆ. ಏಕೆಂದರೆ ಮಹಾತ್ಮಾರಾದರೂ ಮನೆ-ಮಠ ಎಲ್ಲವನ್ನೂ ಮಾಡಿ ನಂತರ ಬಿಟ್ಟು ಬಿಡುತ್ತಾರೆ. ಕೆಲವರು ಬಾಲಬ್ರಹ್ಮಚಾರಿಗಳೂ ಇರುತ್ತಾರೆ ಆದರೆ ಕಾಮ, ಕ್ರೋಧವೆಂದರೇನು ಎಂಬುದು ಅವರಿಗೆ ತಿಳಿದಿರುತ್ತದೆಯಲ್ಲವೆ? ಚಿಕ್ಕ ಮಕ್ಕಳಿಗೆ ಇದು ತಿಳಿದಿರುವುದಿಲ್ಲ. ಆದ್ದರಿಂದ ಮಹಾತ್ಮರಿಗಿಂತಲೂ ಶ್ರೇಷ್ಠರೆಂದು ಹೇಳಲಾಗುತ್ತದೆ. ಆದ ಕಾರಣವೇ ಕೃಷ್ಣನಿಗೆ ಹೆಚ್ಚಿನ ಮಾನ್ಯತೆ ನೀಡುತ್ತಾರೆ. ಕೃಷ್ಣನನ್ನು ನೋಡಿ ಬಹಳ ಖುಷಿ ಪಡುತ್ತಾರೆ. ಭಾರತದ ಮೊಟ್ಟ ಮೊದಲನೇ ದೇವ ಪುರುಷನು ಕೃಷ್ಣನಾಗಿದ್ದಾನೆ, ಕನ್ಯೆಯರೂ ಸಹ ಕೃಷ್ಣನನ್ನು ಬಹಳ ಪ್ರೀತಿ ಮಾಡುತ್ತಾರೆ. ಕೃಷ್ಣನಂತಹ ಪತಿ ಸಿಗಲಿ, ಕೃಷ್ಣನಂತಹ ಮಗುವಾಗಲಿ ಎಂದು ಬಯಸುತ್ತಾರೆ. ಕೃಷ್ಣನಲ್ಲಿ ಬಹಳ ಆಕರ್ಷಣೆಯಿದೆ, ಸತೋಪ್ರಧಾನನಲ್ಲವೆ. ತಂದೆಯು ಹೇಳುತ್ತಾರೆ- ಎಷ್ಟು ನೆನಪಿನಲ್ಲಿರುತ್ತೀರೋ ಅಷ್ಟು ತಮೋಪ್ರಧಾನರಿಂದ ತಮೋ, ರಜೋದಲ್ಲಿ ಬರುತ್ತಾ ಇರುತ್ತೀರಿ ಮತ್ತು ಖುಷಿಯೂ ಇರುತ್ತದೆ. ಮೊದಲು ನೀವು ಸತೋಪ್ರಧಾನರಾಗಿದ್ದಾಗ ಬಹಳ ಖುಷಿಯಲ್ಲಿದ್ದಿರಿ, ನಂತರ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತದೆ. ನೀವು ಎಷ್ಟು ನೆನಪು ಮಾಡುತ್ತಾ ಇರುತ್ತೀರೋ ನಂತರ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ನೀವು ಎಷ್ಟು ನೆನಪು ಮಾಡುತ್ತಾ ಹೋಗುತ್ತೀರೋ ಅಷ್ಟು ಸುಖದ ಅನುಭವವಾಗುತ್ತಾ ಇರುವುದು. ನೀವು ವರ್ಗಾಯಿತರಾಗುತ್ತಾ ಹೋಗುತ್ತೀರಿ. ತಮೋದಿಂದ, ರಜೋ, ಸತೋದಲ್ಲಿ ಬರುತ್ತಾ ಹೋಗುತ್ತೀರಿ. ಅದೇರೀತಿ ಖುಷಿ, ಶಕ್ತಿ, ಧಾರಣೆಯೂ ಹೆಚ್ಚುತ್ತಾ ಹೋಗುವುದು. ಈ ಸಮಯದಲ್ಲಿ ನಿಮ್ಮದು ಏರುವ ಕಲೆಯಾಗಿದೆ. ನಿಮ್ಮ ಕೃಪೆಯಿಂದ ಸರ್ವರ ಉನ್ನತಿಯೆಂದು ಸಿಖ್ಖರೂ ಸಹ ಹಾಡುತ್ತಾರೆ. ನಿಮಗೆ ತಿಳಿದಿದೆ - ಈಗ ನೆನಪಿನಿಂದಲೇ ಏರುವ ಕಲೆಯಾಗುತ್ತದೆ. ಎಷ್ಟು ನೆನಪಿನಲ್ಲಿರುತ್ತೀರೋ ಅಷ್ಟೂ ಏರುವ ಕಲೆಯಾಗುವುದು. ಸಂಪೂರ್ಣರಾಗಬೇಕಲ್ಲವೆ. ಚಂದ್ರಮನಿಗೂ ಸಹ ಕೊನೆಗೆ ಒಂದು ಚಿಕ್ಕಗೆರೆಯು ಉಳಿಯುತ್ತದೆ. ನಂತರ ಕಲೆಯು ವೃದ್ಧಿಯಾಗುತ್ತಾ-ಆಗುತ್ತಾ ಪೂರ್ಣ ಚಂದ್ರಮನಾಗಿ ಬಿಡುತ್ತದೆ. ನಿಮ್ಮದೂ ಹಾಗೆಯೇ. ಚಂದ್ರನ ಮೇಲೂ ಗ್ರಹಣ ಹಿಡಿದಾಗ ದಾನ ಕೊಟ್ಟರೆ ಗ್ರಹಣವು ಬಿಟ್ಟು ಹೋಗುವುದೆಂದು ಹೇಳುತ್ತಾರೆ. ನೀವಂತೂ ಒಮ್ಮೆಲೆ ಪಂಚ ವಿಕಾರಗಳ ದಾನ ಕೊಡಲು ಸಾಧ್ಯವಿಲ್ಲ. ಕಣ್ಣುಗಳು ಎಷ್ಟೊಂದು ಮೋಸ ಮಾಡುತ್ತವೆ. ನನ್ನ ದೃಷ್ಟಿಯು ಕೆಡುತ್ತಿದೆ ಎಂಬುದನ್ನು ತಿಳಿದುಕೊಳ್ಳುವುದೇ ಇಲ್ಲ. ನಾವು ಬ್ರಹ್ಮಾಕುಮಾರ-ಕುಮಾರಿಯರಾದೆವೆಂದರೆ ಸಹೋದರ-ಸಹೋದರಿಯರಾದೆವು. ಮತ್ತೆ ಒಂದುವೇಳೆ ಇವರನ್ನು ಮುಟ್ಟೋಣವೆಂದು ಮನಸ್ಸಾಗುತ್ತಿದೆಯೆಂದರೆ ಆಗ ಆ ಸಹೋದರತ್ವದ ಪ್ರೀತಿಯು ಹೋಗಿ ಸ್ತ್ರೀ ಎನ್ನುವ ಕೆಟ್ಟ ಪ್ರೀತಿ ಉಂಟಾಗುತ್ತದೆ. ಕೆಲವರಿಗೆ ಇದು ಮನಸ್ಸು ತಿನ್ನುತ್ತಿರುತ್ತದೆ - ನಾವು ತಂದೆಯ ಮಕ್ಕಳಾಗಿದ್ದೇವೆ, ಅಂದಮೇಲೆ ನಮ್ಮ ಮೇಲೆ ಯಾರೂ ಸಹ ಕೆಟ್ಟ ದೃಷ್ಟಿಯಿಂದ ಕೈ ಹಾಕಲು ಸಾಧ್ಯವಿಲ್ಲ. ಮತ್ತೆ ಹೇಳುತ್ತಾರೆ - ಬಾಬಾ, ಇವರು ನಮ್ಮ ಮೇಲೆ ಕೈ ಹಾಕುತ್ತಾರೆ, ಇದು ನಮಗೆ ಇಷ್ಟವಾಗುವುದಿಲ್ಲ. ಆಗ ತಂದೆಯು ಮುರುಳಿಯಲ್ಲಿ ತಿಳಿಸುತ್ತಾರೆ - ಈ ಕೆಟ್ಟ ದೃಷ್ಟಿಯಿಂದ ನಿಮ್ಮ ಸ್ಥಿತಿಯು ಸರಿಯಿರುವುದಿಲ್ಲ. ಭಲೆ ಮುರುಳಿಯನ್ನು ಬಹಳ ಚೆನ್ನಾಗಿ ಓದುತ್ತಾರೆ, ಅನೇಕರಿಗೆ ತಿಳಿಸುತ್ತಾರೆ ಆದರೆ ಸ್ಥಿತಿಯಿಲ್ಲ, ಕುದೃಷ್ಟಿಯಾಗಿ ಬಿಡುತ್ತದೆ. ಇಷ್ಟು ಕೊಳಕು ಪ್ರಪಂಚವಾಗಿದೆ. ಗುರಿಯು ಬಹಳ ಉನ್ನತವಾಗಿದೆ. ಮಕ್ಕಳು ತಿಳಿಯುತ್ತಾರೆ - ಗುರಿಯು ಬಹಳ ಉನ್ನತವಾಗಿದೆ, ತಂದೆಯ ನೆನಪಿನಲ್ಲಿ ಬಹಳ ಸೂಕ್ಷ್ಮ ಬುದ್ಧಿಯವರಾಗಿರಬೇಕು. ನಾವು ಬ್ರಹ್ಮಾಕುಮಾರ-ಕುಮಾರಿಯರಾಗಬೇಕು, ನಮ್ಮದು ಆತ್ಮಿಕ ಸಂಬಂಧವಾಗಿದೆ, ರಕ್ತ ಸಂಬಂಧವಲ್ಲ. ಹಾಗೆ ನೋಡಿದರೆ ಎಲ್ಲರೂ ರಕ್ತದಿಂದ ಜನಿಸುತ್ತಾರೆ, ಸತ್ಯಯುಗದಲ್ಲಿಯೂ ರಕ್ತ ಸಂಬಂಧವಾಗಿರುತ್ತದೆ. ಆದರೆ ಅಲ್ಲಿ ಶರೀರವು ಯೋಗಬಲದಿಂದ ಸಿಗುತ್ತದೆ. ವಿಕಾರವಿಲ್ಲದೆ ಮಕ್ಕಳು ಹೇಗೆ ಜನಿಸುತ್ತಾರೆಂದು ಕೇಳುತ್ತಾರೆ, ಇದಕ್ಕೆ ತಂದೆಯು ತಿಳಿಸುತ್ತಾರೆ - ಅದು ನಿರ್ವಿಕಾರಿ ಪ್ರಪಂಚವಾಗಿದೆ, ಅಲ್ಲಿ ವಿಕಾರವಿರುವುದೇ ಇಲ್ಲ. ಒಂದುವೇಳೆ ಸತ್ಯಯುಗದಲ್ಲಿ ಅಲ್ಲಿಯೂ ಅಪವಿತ್ರರಾಗುವಂತಿದ್ದರೆ ಅದು ರಾವಣ ರಾಜ್ಯವಾಗಿ ಬಿಡುವುದು. ಆಗ ಕಲಿಯುಗ ಮತ್ತು ಸತ್ಯಯುಗದಲ್ಲಿ ಅಂತರವಿರುವುದೇ ಇಲ್ಲ. ಇವು ತಿಳಿದುಕೊಳ್ಳುವ ಮಾತುಗಳಾಗಿವೆ. ಕುದೃಷ್ಟಿಯನ್ನು ಕಳೆಯುವುದರಲ್ಲಿ ಬಹಳ ಶ್ರಮ ಪಡಬೇಕಾಗುತ್ತದೆ. ಕಾಲೇಜುಗಳಲ್ಲಿ ಕುಮಾರ-ಕುಮಾರಿಯರು ಒಟ್ಟಿಗೆ ಓದುತ್ತಾರೆಂದರೆ ಅನೇಕರ ದೃಷ್ಟಿಯು ಕೆಡುತ್ತದೆ. ಮಕ್ಕಳು ತಿಳಿಸಬೇಕು - ನಾವು ಪರಮಪಿತ ಪರಮಾತ್ಮನ ಮಕ್ಕಳಾಗಿದ್ದೇವೆ ಅಂದಮೇಲೆ ಪರಸ್ಪರ ಸಹೋದರ-ಸಹೋದರಿಯರಾದೆವು, ಅಂದಮೇಲೆ ಕೆಟ್ಟ ದೃಷ್ಟಿಯನ್ನೇಕೆ ಇಟ್ಟುಕೊಳ್ಳುತ್ತೀರಿ? ನಾವು ಈಶ್ವರನ ಸಂತಾನರೆಂದು ಎಲ್ಲರೂ ಹೇಳುತ್ತಾರೆ. ಆತ್ಮಗಳು ನಿರಾಕಾರಿ ಸಂತಾನರಾದಿರಿ ಮತ್ತೆ ತಂದೆಯು ರಚಿಸುತ್ತಾರೆಂದರೆ ಅವಶ್ಯವಾಗಿ ಸಾಕಾರಿ ಬ್ರಾಹ್ಮಣರನ್ನು ರಚಿಸುತ್ತಾರೆ. ಪ್ರಜಾಪಿತ ಬ್ರಹ್ಮನೆಂದರೆ ಸಾಕಾರಿಯಲ್ಲವೆ. ನೀವೆಲ್ಲರೂ ದತ್ತು ಮಕ್ಕಳಾಗಿದ್ದೀರಿ. ಮನುಷ್ಯರ ಬುದ್ಧಿಯಲ್ಲಿ ಪ್ರಜಾಪಿತ ಬ್ರಹ್ಮನ ಮೂಲಕ ಸೃಷ್ಟಿಯು ಹೇಗೆ ರಚಿಸಲ್ಪಟ್ಟಿತು? ಎಂಬುದು ಬರುವುದೇ ಇಲ್ಲ.

ನೀವು ಪ್ರಜಾಪಿತ ಬ್ರಹ್ಮನ ಮಕ್ಕಳು ಬ್ರಹ್ಮಾಕುಮಾರ-ಕುಮಾರಿಯರು, ಸಹೋದರ-ಸಹೋದರಿಯರಾಗಿದೀರಿ. ಕುದೃಷ್ಟಿಯಾಗದಂತೆ ಬಹಳ ಎಚ್ಚರವಹಿಸಬೇಕು. ಇದರಲ್ಲಿ ಅನೇಕರಿಗೆ ಕಷ್ಟವೆನಿಸುತ್ತದೆ. ಶ್ರೇಷ್ಠ ಪದವಿಯನ್ನು ಪಡೆಯಬೇಕೆಂದರೆ ಶ್ರಮ ಪಡಬೇಕಾಗಿದೆ. ಪವಿತ್ರರಾಗಿ ಎಂದು ತಂದೆಯು ತಿಳಿಸುತ್ತಾರೆ. ಇದನ್ನೂ ಸಹ ಕೆಲವರು ಪಾಲಿಸುತ್ತಾರೆ, ಕೆಲವರು ಪಾಲಿಸುವುದಿಲ್ಲ. ಬಹಳ ಪರಿಶ್ರಮವಿದೆ. ಪರಿಶ್ರಮವಿಲ್ಲದೆ ಹೇಗೆ ಶ್ರೇಷ್ಠರಾಗುವಿರಿ? ಮಕ್ಕಳು ಎಚ್ಚರದಿಂದಿರಬೇಕಾಗಿದೆ. ಸಹೋದರ-ಸಹೋದರಿಯ ಅರ್ಥವೇ ಒಬ್ಬ ತಂದೆಯ ಮಕ್ಕಳಾಗಿದ್ದೇವೆ ಎಂದಾಗಿದೆ ಅಂದಮೇಲೆ ಮತ್ತೆ ಕೆಟ್ಟ ದೃಷ್ಟಿಯು ಏಕೆ ಆಗುತ್ತದೆ? ಸ್ತ್ರೀಯ ದೃಷ್ಟಿಯು ವಿಕಾರಿ ದೃಷ್ಟಿಯಾಗುತ್ತದೆ, ಪುರುಷರದೂ ಆಗುತ್ತದೆ. ಗುರಿಯು ಉನ್ನತವಾಗಿದೆಯಲ್ಲವೆ. ಜ್ಞಾನವನ್ನಂತೂ ಬಹಳ ತಿಳಿಸುತ್ತಾರೆ, ಅದರ ಜೊತೆಗೆ ಚಲನೆಯೂ ಪವಿತ್ರತೆಯಿಂದ ಕೂಡಿರಲಿ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಎಲ್ಲದಕ್ಕಿಂತ ಹೆಚ್ಚಿನದಾಗಿ ಮೋಸ ಮಾಡುವುದೇ ಕಣ್ಣುಗಳಾಗಿವೆ. ಯಾವಾಗ ಕಣ್ಣುಗಳಿಂದ ಯಾವುದೇ ಪದಾರ್ಥವನ್ನು ನೋಡುವರೋ ಆಗ ತಿನ್ನುವುದೇ ಎಂದು ಮನಸ್ಸಾಗುತ್ತದೆ. ಆಗ ಬಾಯಿ ಮ್ಯಾವ್ ಮ್ಯಾವ್ ಎನ್ನುತ್ತದೆ. ಆದ್ದರಿಂದ ಕರ್ಮೇಂದ್ರಿಯಗಳ ಮೇಲೆ ಜಯ ಗಳಿಸಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಪವಿತ್ರತೆಯ ಚಲನೆಯನ್ನು ತಮ್ಮದನ್ನಾಗಿ ಮಾಡಿಕೊಳ್ಳಬೇಕಾಗಿದೆ. ಕೆಟ್ಟ ದೃಷ್ಟಿ, ಕೆಟ್ಟ ಸಂಕಲ್ಪಗಳನ್ನು ಸಮಾಪ್ತಿ ಮಾಡಲು ತಮ್ಮನ್ನು ಈ ಕರ್ಮೇಂದ್ರಿಯಗಳಿಂದ ಭಿನ್ನವಾದ ಆತ್ಮನೆಂದು ತಿಳಿಯಬೇಕಾಗಿದೆ.

2. ಪರಸ್ಪರ ಆತ್ಮಿಕ ಸಂಬಂಧವನ್ನಿಟ್ಟುಕೊಳ್ಳಬೇಕಾಗಿದೆ. ರಕ್ತ ಸಂಬಂಧವಲ್ಲ. ತಮ್ಮ ಅಮೂಲ್ಯ ಸಮಯ ಮತ್ತು ಹಣವನ್ನು ವ್ಯರ್ಥ ಮಾಡಬಾರದು. ಸಂಗದೋಷದಿಂದ ತಮ್ಮನ್ನು ಬಹಳ-ಬಹಳ ಸಂಭಾಲನೆ ಮಾಡಬೇಕಾಗಿದೆ.

ವರದಾನ:
ಬ್ರಹ್ಮಮುಹೂರ್ತದ ಸಮಯ ಪಡೆಯುವಂತಹ ಮತ್ತು ದಾನ ಕೊಡುವಂತಹ ತಂದೆಯ ಸಮಾನ ಿ, ಮಹಾದಾನಿ ಭವ.

ಬ್ರಹ್ಮಮುಹೂರ್ತದ ಸಮಯದಲ್ಲಿ ವಿಶೇಷ ಬ್ರಹ್ಮಲೋಕ ನಿವಾಸಿ ತಂದೆ ಜ್ಞಾನ ಸೂರ್ಯನ ಲೈಟ್ (ಪ್ರಕಾಶ) ಮತ್ತು ಮೈಟ್ನ (ಶಕ್ತಿಯ) ಕಿರಣಗಳು ಮಕ್ಕಳಿಗೆ ವರದಾನದ ರೂಪದಲ್ಲಿ ಕೊಡುತ್ತಾರೆ. ಜೊತೆ-ಜೊತೆಗೆ ಬ್ರಹ್ಮ ತಂದೆ ಭಾಗ್ಯವಿಧಾತನ ರೂಪದಲ್ಲಿ ಭಾಗ್ಯರೂಪಿ ಅಮೃತ ಹಂಚುತ್ತಾರೆ. ಕೇವಲ ಬುದ್ಧಿರೂಪಿ ಕಲಶ ಅಮೃತ ಧಾರಣೆ ಮಾಡಲು ಯೋಗ್ಯವಾಗಿರಬೇಕು. ಯಾವುದೇ ಪ್ರಕಾರದ ವಿಘ್ನ ಅಥವಾ ಅಡೆ-ತಡೆ ಇರಬಾರದು, ಅದಕ್ಕಾಗಿ ಇಡೀ ದಿನಕ್ಕಾಗಿ ಶ್ರೇಷ್ಠ ಸ್ಥಿತಿ ಹಾಗೂ ಕರ್ಮದ ಮುಹೂರ್ತ ತೆಗೆಯಬಹುದಾಗಿದೆ. ಏಕೆಂದರೆ ಅಮೃತವೇಳೆಯ ವಾತಾವರಣವೇ ವೃತ್ತಿಯನ್ನು ಬದಲಾಯಿಸುವಂತಹದಾಗಿರುತ್ತದೆ. ಆದ್ದರಿಂದ ಆ ಸಮಯ ವರದಾನವನ್ನು ಪಡೆಯುತ್ತಾ ದಾನ ನೀಡಿ ಅರ್ಥಾತ್ ವರದಾನಿ ಮತ್ತು ಮಹಾದಾನಿಗಳಾಗಿ.

ಸ್ಲೋಗನ್:
ಕ್ರೋಧಿಯ ಕೆಲಸವಾಗಿದೆ ಕ್ರೋಧ ಮಾಡುವುದು ಮತ್ತು ತಮ್ಮ ಕೆಲಸವಾಗಿದೆ ಸ್ನೇಹ ಕೊಡುವುದು.