01.02.26    Avyakt Bapdada     Kannada Murli    15.12.2008     Om Shanti     Madhuban


“ಒಂದು ರಾಜ್ಯ, ಒಂದು ಧರ್ಮ, ಲಾ ಮತ್ತು ಆರ್ಡರ್ನ ಸ್ಥಾಪನೆಯ ಸಮಯದಲ್ಲಿ ಸ್ವಯಂನ್ನು ಪರಿವರ್ತನೆ ಮಾಡಿಕೊಂಡು ವಿಶ್ವ ಪರಿವರ್ತಕರಾಗಿ’’


ಇಂದು ಬಾಪ್ದಾದಾ ತನ್ನ ನಾಲ್ಕಾರು ಕಡೆಯ ರಾಜಾ ಮಕ್ಕಳನ್ನು ನೋಡುತ್ತಿದ್ದಾರೆ. ಈ ಪರಮಾತ್ಮನ ಪ್ರೀತಿಯು ಕೋಟಿಯಲ್ಲಿ ಕೆಲವರಿಗೇ ಪ್ರಾಪ್ತಿಯಾಗುತ್ತದೆ. ಪರಮಾತ್ಮ ಬಾಪ್ದಾದಾ ಪ್ರತಿಯೊಬ್ಬ ಮಗುವನ್ನು ಮೂರು ಸಿಂಹಾಸನಗಳಿಗೆ ಮಾಲೀಕರನ್ನಾಗಿ ಮಾಡಿದ್ದಾರೆ. ಮೊದಲನೆಯದು ಸ್ವರಾಜ್ಯ ಅಧಿಕಾರದ ಭೃಕುಟಿ ಸಿಂಹಾಸನ, ಎರಡನೆಯದು - ಬಾಪ್ದಾದಾರವರ ಹೃದಯ ಸಿಂಹಾಸನ ಮತ್ತು ಮೂರನೆಯದು - ವಿಶ್ವದ ರಾಜ್ಯಾಧಿಕಾರದ ಸಿಂಹಾಸನ. ಈ ಮೂರು ಸಿಂಹಾಸನಗಳನ್ನು ತಂದೆಯು ತನ್ನ ಸ್ನೇಹಿ ಮುದ್ದಾದ ಮಕ್ಕಳಿಗೆ ಕೊಟ್ಟಿದ್ದೇವೆ. ಈ ಮೂರು ಸಿಂಹಾಸನಗಳು ಸದಾ ಸ್ಮೃತಿಯಲ್ಲಿದ್ದಾಗ ಪ್ರತಿಯೊಬ್ಬ ಮಗುವಿಗೆ ಆತ್ಮಿಕ ನಶೆಯಿರುತ್ತದೆ ಅಂದಾಗ ಎಲ್ಲಾ ಮಕ್ಕಳು ತಂದೆಯ ಮೂಲಕ ಪ್ರಾಪ್ತಿಯಾಗಿರುವ ಆಸ್ತಿಯನ್ನು ನೋಡಿ ಖುಷಿಯಲ್ಲಿರುತ್ತೀರಲ್ಲವೆ. ಈ ಗೀತೆಯು ಹೃದಯದಲ್ಲಿ ಸ್ವತಃ ಮೊಳಗುತ್ತಿರುತ್ತದೆಯೇ - ವಾಹ್! ಬಾಬಾ ವಾಹ್! ಮತ್ತು ವಾಹ್! ನನ್ನ ಭಾಗ್ಯವೇ ವಾಹ್! ಯಾವುದು ಸ್ವಪ್ನದಲ್ಲಿಯೂ ಇರಲಿಲ್ಲವೋ ಅದು ಪ್ರತ್ಯಕ್ಷ ಜೀವನದಲ್ಲಿ ಸಿಕ್ಕಿ ಬಿಟ್ಟಿತು. ಸಿಂಹಾಸನದ ಜೊತೆ ಜೊತೆಗೆ ಬಾಪ್ದಾದಾರವರು ಈ ಸಂಗಮದಲ್ಲಿ ಡಬಲ್ ಕಿರೀಟದ ಮೂಲಕ ಹಾರುವ ಕಲೆಯ ಅನುಭವಿಗಳನ್ನಾಗಿಯೂ ಮಾಡಿದ್ದೇವೆ.

ಬಾಪ್ದಾದಾರವರು ನಾಲ್ಕಾರು ಕಡೆಯ ಮಕ್ಕಳ ಈ ಡಬಲ್ ಕಿರೀಟಧಾರಿ ಪವಿತ್ರತೆಯ ರಾಯಲ್ಟಿ, ಡಬಲ್ ಕಿರೀಟಧಾರಿಗಳನ್ನು ನೋಡುತ್ತಿದ್ದೇವೆ. ಬಾಪ್ದಾದಾರವರು ಇಂದು ಎಲ್ಲಾ ಕಡೆಯ ಮಕ್ಕಳ ಪುರುಷಾರ್ಥದ ಗತಿಯನ್ನು ಪರಿಶೀಲಿಸಿದೆವು ಏಕೆಂದರೆ ಸಮಯದ ತೀವ್ರತೆಯನ್ನಂತೂ ತಾವೆಲ್ಲರೂ ತಿಳಿದುಕೊಂಡಿದ್ದೀರಿ ಹಾಗೂ ನೋಡುತ್ತಲೂ ಇದ್ದೀರಿ. ಅಂದಾಗ ಬಾಪ್ದಾದಾ ಏನನ್ನು ನೋಡುತ್ತಿದ್ದೆವು ಎಂದರೆ ಪ್ರತಿಯೊಬ್ಬರಿಗೆ ತಂದೆಯ ಮುಖಾಂತರ ಯಾವ ತನ್ನ ರಾಜ್ಯದ ಹಾಗೂ ಭವಿಷ್ಯ ಪ್ರಾಪ್ತಿಯ ರಾಜ್ಯಭಾಗ್ಯದ ಆಸ್ತಿಯು ಸಿಕ್ಕಿದೆ, ಭವಿಷ್ಯದಲ್ಲಿ ತಮ್ಮೆಲ್ಲರ ಸಂಸ್ಕಾರವು ನ್ಯಾಚುರಲ್ ಮತ್ತು ನೇಚರ್ ಆಗಿರುವುದು ಅಂದಮೇಲೆ ಅದು ಈಗಿನಿಂದಲೇ ಬಹಳ ಕಾಲದ ಸಂಸ್ಕಾರವಾಗಿ ಅನುಭವವಾಗಬೇಕು ಏಕೆಂದರೆ ಈ ಹೊಸ ಸಂಸಾರವು (ವಿಶ್ವವು) ತಮ್ಮೆಲ್ಲರ ಹೊಸ ಸಂಸ್ಕಾರದ ಮುಖಾಂತರವೇ ಹೊಸ ಸಂಸಾರವಾಗುತ್ತಿದೆ. ಆದ್ದರಿಂದ ಹೊಸ ಸಂಸಾರದ ಯಾವ ವಿಶೇಷತೆಗಳಿದೆಯೋ ಅದನ್ನೂ ಸಹ ಅನುಭವ ಮಾಡುತ್ತೀರಲ್ಲವೆ. ನಮ್ಮ ರಾಜ್ಯದಲ್ಲಿ ಏನಿರುತ್ತದೆ ಎಂಬುದು ನಶೆಯಿದೆಯಲ್ಲವೆ. ನಮ್ಮ ರಾಜ್ಯ, ನಮ್ಮ ಹೊಸ ಜಗತ್ತು ಬಂದಿತೆಂದರೆ ಬಂದಿತು ಎಂದು ಹೃದಯವು ಹೇಳುತ್ತಿದೆಯಲ್ಲವೆ. ಅಂದಾಗ ಹೊಸ ಸಂಸಾರ ವಿಶೇಷತೆಗಳು ಮಕ್ಕಳ ಪುರುಷಾರ್ಥಿ ಜೀವನದಲ್ಲಿ ಎಲ್ಲಿಯವರೆಗೆ ಬಂದಿದೆ ಎಂಬುದನ್ನು ಬಾಪ್ದಾದಾ ನೋಡುತ್ತಿದ್ದೆವು. ಹೊಸ ಸಂಸ್ಕಾರ ಹಾಗೂ ಹೊಸ ಸಂಸಾರದ ವಿಶೇಷತೆಗಳು ಏನಿರುತ್ತದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಎಲ್ಲರ ಬುದ್ಧಿಯಲ್ಲಿ ಹೊಸ ಜಗತ್ತಿನ ವಿಶೇಷತೆಗಳು ಇಮರ್ಜ್ ಆಗಿದೆಯಲ್ಲವೆ. ತಿಳಿದುಕೊಂಡಿದ್ದೀರಲ್ಲವೆ. ಗಾಯನವೂ ಮಾಡುತ್ತೀರಿ, ತಿಳಿದುಕೊಂಡಿದ್ದೀರಿ ಅಂದಮೇಲೆ ಮೊದಲ ವಿಶೇಷತೆ, ಪರಿಶೀಲನೆ - ಮಾಡಿಕೊಳ್ಳಿರಿ - ಒಂದೊಂದು ವಿಶೇಷತೆ ನನ್ನಲ್ಲಿ ಎಲ್ಲಿಯವರೆಗೆ ಬಂದಿದೆ? ಮುಖ್ಯ ವಿಶೇಷತೆಯಾಗಿದೆ – ಒಂದು ರಾಜ್ಯ, ಹೇಗೆ ಅಲ್ಲಿ ಒಂದು ರಾಜ್ಯವು ಸ್ವತಃವಾಗಿ ಇರುತ್ತದೆಯೋ ಮತ್ತ್ಯಾವುದೇ ರಾಜ್ಯವು ಇರುವುದಿಲ್ಲವೋ ಹಾಗೆಯೇ ತನ್ನ ಸಂಗಮದ ಜೀವನದಲ್ಲಿಯೂ ನೋಡಿಕೊಳ್ಳಿರಿ - ತಮ್ಮ ಜೀವನದಲ್ಲಿಯೂ ಸಹ ಒಂದು ರಾಜ್ಯವಿದೆಯೇ ಅಥವಾ ಕೆಲವೊಮ್ಮೆ ಇನ್ನೊಂದು ರಾಜ್ಯವು ಬಂದು ಬಿಡುತ್ತದೆಯೇ? ಒಂದುವೇಳೆ ನಡೆಯುತ್ತಾ-ನಡೆಯುತ್ತಾ ಸ್ವರಾಜ್ಯದ ಜೊತೆ ಜೊತೆಗೆ ಮಾಯೆಯ ರಾಜ್ಯವು ನಡೆಯುತ್ತದೆಯೆಂದರೆ ಒಂದು ರಾಜ್ಯದ ಸಂಸ್ಕಾರವಾಯಿತೇ? ಒಂದು ರಾಜ್ಯದೊಂದಿಗೆ ಮತ್ತೊಂದು ರಾಜ್ಯವೂ ನಡೆಯುವುದಿಲ್ಲ ತಾನೆ? ಪರಮಾತ್ಮನ ಶ್ರೀಮತದ ರಾಜ್ಯವಿದೆಯೇ ಅಥವಾ ಕೆಲವೊಮ್ಮೆ ಮಾಯೆಯ ಪ್ರಭಾವವೂ ಇದೆಯೋ? ಹೃದಯದಲ್ಲಿ ಮಾಯೆಯ ರಾಜ್ಯವಂತು ಇಲ್ಲ ತಾನೆ? ಇದನ್ನು ಪರಿಶೀಲನೆ ಮಾಡಿಕೊಳ್ಳಿ. ಈ ಮಾತುಗಳಿಂದ ತಮ್ಮ ಚಾರ್ಟನ್ನು ನೋಡಿಕೊಳ್ಳಿರಿ. ಈಗ ಸಂಗಮದಲ್ಲಿ ಒಬ್ಬ ಪರಮಾತ್ಮನ ರಾಜ್ಯವಿದೆಯೇ ಅಥವಾ ಮಾಯೆಯದು ಪ್ರಭಾವವಾಗಿ ಬಿಡುತ್ತದೆಯೇ? ಪರಿಶೀಲನೆ ಮಾಡಿಕೊಂಡಿರಾ? ಈಗೀಗ ಪರಿಶೀಲನೆ ಮಾಡಿಕೊಳ್ಳಿರಿ, ತಮ್ಮ ಚಾರ್ಟಂತೂ ನೋಡಿಕೊಳ್ಳುತ್ತಿರುತ್ತೀರಲ್ಲವೆ ಅಂದಮೇಲೆ ಒಂದುವೇಳೆ ಇಲ್ಲಿಯವರೆಗೂ ನಿಮ್ಮಲ್ಲಿ ಎರಡು ರಾಜ್ಯಗಳಿವೆಯೆಂದರೆ ಒಂದು ರಾಜ್ಯದ ಅಧಿಕಾರಿ ಹೇಗಾಗುವಿರಿ? ಶ್ರೀಮತದ ಜೊತೆಗೆ ಮಾಯೆಯ ಮತವೂ ಸೇರಿ ಬಿಡುತ್ತದೆಯೇ? ಹಾಗೆಯೇ ಒಂದು ಧರ್ಮ, ಸತ್ಯಯುಗದಲ್ಲಿ ಒಂದು ರಾಜ್ಯವೂ ಇರುವುದು, ಒಂದೇ ಧರ್ಮವೂ ಇರುವುದು. ಧರ್ಮ ಎಂದರೆ ಧಾರಣೆ. ಅಂದಮೇಲೆ ತಮ್ಮ ವಿಶೇಷ ಧಾರಣೆ ಯಾವುದು? ಪವಿತ್ರತೆಯ ಧಾರಣೆ. ಪರಿಶೀಲನೆ ಮಾಡಿಕೊಳ್ಳಿ - ಸದಾ ಮನ-ವಚನ-ಕರ್ಮ, ಸಂಬಂಧ-ಸಂಪರ್ಕದಲ್ಲಿ ಸಂಪೂರ್ಣ ಹಾಗೂ ಸದಾ ಪವಿತ್ರತೆಯ ಧಾರಣೆಯು ಸ್ವಾಭಾವಿಕವಾಗಿದೆಯೇ? ಹೇಗೆ ತಮ್ಮ ರಾಜ್ಯದಲ್ಲಿ ಪವಿತ್ರತೆಯ ಸ್ವಧರ್ಮವು ಸ್ವತಹ ಇರುವುದು ಹಾಗೆಯೇ ಈ ಸಮಯದಲ್ಲಿ ಪವಿತ್ರತೆಯ ಧಾರಣೆಯು ಸ್ವಾಭಾವಿಕ ಹಾಗೂ ಸಹಜ ಗುಣವಾಗಿ ಬಿಟ್ಟಿದೆಯೇ? ಏಕೆಂದರೆ ತಿಳಿದುಕೊಂಡಿದ್ದೀರಲ್ಲವೆ - ತಮ್ಮ ಅನಾದಿ ಸ್ವರೂಪ ಹಾಗೂ ಆದಿ ಸ್ವರೂಪವು ಪವಿತ್ರತೆಯಾಗಿದೆ ಅಂದಮೇಲೆ ಪರಿಶೀಲಿಸಿ – ಒಂದು ಧರ್ಮ ಅರ್ಥಾತ್ ಪವಿತ್ರತೆಯು ಸ್ವಾಭಾವಿಕ ಆಗಿದೆಯೇ? ಯಾವುದು ಸ್ವಭಾವವಾಗಿರುತ್ತದೆಯೋ ಅದು ಬಯಸದಿದ್ದರೂ ತನ್ನ ಕೆಲಸ ಮಾಡಿಸಿ ಬಿಡುತ್ತದೆ ಏಕೆಂದರೆ ಕೆಲವು ಮಕ್ಕಳು ವಾರ್ತಾಲಾಪ ಮಾಡುವಾಗ ಏನು ಹೇಳುತ್ತಾರೆಂದರೆ, ಬಹಳ ಮಧುರಾತಿ ಮಧುರ ಮಾತುಗಳನ್ನು ಮಾತನಾಡುತ್ತಾರೆ - ಬಾಬಾ, ನನಗೆ ಇಷ್ಟವಿಲ್ಲ ಆದರೆ ಕೆಲವೊಮ್ಮೆ ಮನಸ್ಸಿನಲ್ಲಿ, ಕೆಲವೊಮ್ಮೆ ವಾಚಾದಲ್ಲಿ ಯಾವುದಾದರೊಂದು ಅಪವಿತ್ರತೆಯ ಅಂಶವು ಇಮರ್ಜ್ ಆಗಿ ಬಿಡುತ್ತದೆ. ಬಹಳ ಜನ್ಮಗಳ ಸಂಸ್ಕಾರವಲ್ಲವೆ ಆದ್ದರಿಂದ ಆ ರೀತಿಯಾಗಿ ಬಿಡುತ್ತದೆ. ಅಂದಮೇಲೆ ಒಂದು ಧರ್ಮದ ಅರ್ಥವೇನೆಂದರೆ ಪವಿತ್ರತೆಯ ಧಾರಣೆಯು ನೇಚರ್ ಹಾಗೂ ನ್ಯಾಚುರಲ್ ಆಗಿರಲಿ. ಭಲೆ ವಾಣಿಯಲ್ಲಿಯೂ ಆವೇಶ ಬಂದು ಬಿಡುತ್ತದೆ ಆಗ ಕ್ರೋಧವಿರಲಿಲ್ಲ ಆದರೆ ಸ್ವಲ್ಪ ಆವೇಶ ಬಂದು ಬಿಟ್ಟಿತೆಂದು ಹೇಳುತ್ತಾರೆ ಹಾಗಾದರೆ ಆವೇಶವೆಂದರೇನು - ಕ್ರೋಧದ ಮಗುವೇ ಅಲ್ಲವೆ. ಒಂದು ಧರ್ಮದ ಸಂಸ್ಕಾರವು ಯಾವಾಗ ನ್ಯಾಚುರಲ್ ಆಗುತ್ತದೆ? ಆದ್ದರಿಂದ ಪರಿಶೀಲನೆ ಮಾಡಿಕೊಳ್ಳಿ - ಆದರೆ ಪರಿಶೀಲನೆಯ ಜೊತೆಗೆ ತಂದೆಯ ಮುಖಾಂತರ ಸಿಕ್ಕಿರುವ ಶಕ್ತಿಗಳಿಂದ ಪರಿವರ್ತನೆಯನ್ನೂ ಮಾಡಿಕೊಳ್ಳಿರಿ. ಈಗಾದರೂ ಬಾಪ್ದಾದಾ ಮೊದಲೇ ಗಮನ ತರಿಸುತ್ತಿದ್ದೇವೆ. ಈಗಾದರೂ ಪರಿಶೀಲನೆ (ಚೆಕ್) ಮಾಡಿಕೊಂಡು ಅದನ್ನು ಪರಿವರ್ತನೆ (ಚೇಂಜ್) ಮಾಡಿಕೊಳ್ಳುವ ತೀವ್ರ ಪುರುಷಾರ್ಥ ಮಾಡಿದ್ದೇ ಆದರೆ ಈಗಲೂ ಅವಕಾಶವಿದೆ ಆದರೆ ಸ್ವಲ್ಪ ಸಮಯದ ನಂತರ ಆಕಸ್ಮಿಕವಾಗಿ ಟೂ ಲೇಟ್ನ ಬೋರ್ಡ್ ಹಾಕಲ್ಪಡುವುದು. ನಂತರ ಬಾಬಾ ನಮಗೆ ತಿಳಿಸಲೇ ಇಲ್ಲವೆಂದು ಹೇಳಬಾರದು ಆದ್ದರಿಂದ ಈ ಪುರುಷಾರ್ಥದ ಸಮಯವಂತೂ ಹೋಯಿತು, ಆದರೆ ಈಗಲೂ ತೀವ್ರ ಪುರುಷಾರ್ಥದ ಸಮಯವಿದೆ. ಆದ್ದರಿಂದ ಪರಿಶೀಲನೆ ಮಾಡಿಕೊಳ್ಳಿರಿ, ಆದರೆ ಕೇವಲ ಪರಿಶೀಲನೆಯಲ್ಲ ಜೊತೆಗೆ ಪರಿವರ್ತನೆಯನ್ನೂ ಮಾಡಿಕೊಳ್ಳಿರಿ. ಕೆಲವರು ಪರಿಶೀಲನೆ ಮಾಡಿಕೊಳ್ಳುತ್ತಾರೆ ಆದರೆ ಪರಿವರ್ತನೆ ಮಾಡಿಕೊಳ್ಳುವ ಶಕ್ತಿಯಿಲ್ಲ. ಈಗ ಪರಿಶೀಲನೆ ಮತ್ತು ಪರಿವರ್ತನೆ ಎರಡು ಒಟ್ಟಿಗೆ ಇರಲಿ. ಏಕೆಂದರೆ ತಮ್ಮೆಲ್ಲರ ಸ್ವಮಾನ ಹಾಗೂ ತಮ್ಮೆಲ್ಲರ ಮಹಿಮೆ ಏನಾಗಿದೆ? ಬಿರುದು ಏನಾಗಿದೆ? ಮಾ|| ಸರ್ವಶಕ್ತಿವಂತರು. ಇದಾಗಿದೆ ಮಾ|| ಸರ್ವಶಕ್ತಿವಂತರೋ ಅಥವಾ ಕೇವಲ ಶಕ್ತಿವಂತರೋ, ಮಾ|| ಸರ್ವಶಕ್ತಿವಂತರಾಗಿದ್ದೇವೆ ಎಂದು ಹೇಳುವವರು ಕೈಯೆತ್ತಿರಿ. ಒಳ್ಳೆಯದು - ಮಾ|| ಸರ್ವಶಕ್ತಿವಂತರಿಗೆ ಶುಭಾಷಯಗಳು. ಆದರೆ ಮಾ|| ಸರ್ವಶಕ್ತಿವಂತರಾಗಿಯೂ ಪರಿವರ್ತನೆ ಮಾಡಿಕೊಳ್ಳಲು ಆಗದಿದ್ದರೆ ಏನೆಂದು ಹೇಳುವುದು? ತಮ್ಮದೇ ಸಂಸ್ಕಾರವನ್ನು, ಸ್ವಭಾವವನ್ನು ಪರಿವರ್ತನೆ ಮಾಡಿಕೊಳ್ಳಬಯಸಿದರೂ ಮಾಡಿಕೊಳ್ಳಲು ಆಗದಿದ್ದರೆ ಏನು ಹೇಳುವುದು? ತಮ್ಮೊಂದಿಗೆ ಕೇಳಿಕೊಳ್ಳಿರಿ- ಮಾ| |ಶಕ್ತಿವಂತರೋ ಅಥವಾ ಮಾ|| ಸರ್ವಶಕ್ತಿವಂತರೋ? ಮಾ|| ಸರ್ವಶಕ್ತಿವಂತರು ಮಾಡಲೇಬೇಕೆಂದು ಸಂಕಲ್ಪ ಮಾಡುವರು ಹಾಗೂ ಆಗಿ ಬಿಡುವುದು. ಆಗುತ್ತದೆ, ನೋಡೋಣ, ಮಾಡೋಣ,..... ಈ ರೀತಿ ಇರುವುದಿಲ್ಲ. ಅಂದಾಗ ಈಗ ಸಮಯ ಪ್ರಮಾಣ ಇದೇ ಫಲಿತಾಂಶ ಬರಬೇಕಾಗಿದೆ - ಏನನ್ನು ಸಂಕಲ್ಪ ಮಾಡುವಿರೋ ಅದೇ ಸ್ವರೂಪದಲ್ಲಿ ಬರಲಿ.

ಈಗ ಹೊಸ ವರ್ಷ ಅವ್ಯಕ್ತ ವರ್ಷ ಬರಲಿದೆ. ಅವ್ಯಕ್ತ ಪಾಲನೆಗೆ ಈಗ 40 ವರ್ಷಗಳ ಸಮಯವಾಗುತ್ತಿದೆ. ಅಂದಾಗ ಅವ್ಯಕ್ತ ಪಾಲನೆ ಹಾಗೂ ವ್ಯಕ್ತ ರೂಪದ ಪಾಲನೆಗೆ 72 ವರ್ಷಗಳಾಗಿ ಬಿಟ್ಟಿದೆ. ಅಂದಮೇಲೆ ಇಬ್ಬರೂ ತಂದೆಯರ (ವ್ಯಕ್ತ ಹಾಗೂ ಅವ್ಯಕ್ತ ಬ್ರಹ್ಮಾ ತಂದೆ) ಪಾಲನೆಯ ರಿಟರ್ನ್ ಬಾಪ್ದಾದಾರವರಿಗೆ ಕೊಡುವುದಿಲ್ಲವೇ? ಆಲೋಚಿಸಿ. ಪಾಲನೆಯೇನು ಮತ್ತು ಪ್ರಾಕ್ಟಿಕಲ್ ಏನಿದೆ? ಬಾಪ್ದಾದಾ ನೋಡಿದೆವು - ಈಗಲೂ ಸಹ ಹುಡುಗಾಟಿಕೆ ಹಾಗೂ ರಾಯಲ್ ಆಲಸ್ಯವಿದೆ. ಆಗಿ ಬಿಡುವುದು, ಆಗಿ ಬಿಡುತ್ತೇವೆ, ತಲುಪಿ ಬಿಡುತ್ತೇವೆ.... ಇದು ರಾಯಲ್ ಆಲಸ್ಯವಾಗಿದೆ ಮತ್ತು ಮಾಡುವುದಂತೂ ಮಾಡುತ್ತಿದ್ದೇವೆ, ಇದಂತೂ ಆಗಲೇಬೇಕು, ಇದಂತೂ ಮಾಡಲೇಬೇಕು, ಇದು ಹುಡುಗಾಟಿಕೆಯಾಗಿದೆ. ಹೇಳುವುದು ಮತ್ತು ಮಾಡುವುದರಲ್ಲಿ ಅಂತರವಾಗಿ ಬಿಡುತ್ತದೆ. ಬಾಪ್ದಾದಾರವರು ಒಂದು ದೃಶ್ಯವನ್ನು ನೋಡಿ ಮುಗುಳ್ನಗುತ್ತಾ ಇರುತ್ತೇವೆ. ಏನು ಹೇಳುತ್ತಾರೆಂದರೆ, ಬಾಬಾ ಇದಾಗಿ ಬಿಟ್ಟರೆ ಅಥವಾ ಈ ಕೆಲಸ ಮಾಡಿಬಿಡಿ ಆಗ ನಾನು ಬಹಳ ಚೆನ್ನಾಗಿ - ಮುಂದುವರೆಯುತ್ತೇನೆ. ಹೀಗೆ ಅನ್ಯರನ್ನು ಪರಿವರ್ತನೆ ಮಾಡುವ ವೃತ್ತಿಯಿರುತ್ತದೆ ಆದರೆ ಸ್ವ-ಪರಿವರ್ತನೆಯ ವೃತ್ತಿಯು ಕೆಲವೊಂದು ಕಡೆ ಕಡಿಮೆಯಾಗಿ ಬಿಡುತ್ತದೆ ಆದರೆ ಈಗ ಅನ್ಯರನ್ನು ನೋಡುವ ಈ ವೃತ್ತಿಯನ್ನು ಪರಿವರ್ತನೆ ಮಾಡಿಕೊಳ್ಳಿರಿ. ಒಂದುವೇಳೆ ನೋಡುವುದಾದರೆ ವಿಶೇಷತೆಯನ್ನೇ ನೋಡಿರಿ, ಇದಂತೂ ನಡೆದೇ ನಡೆಯುತ್ತದೆ, ಇವರೂ ಸಹ ಮಾಡುತ್ತಾರೆ, ನಾನು ಮಾಡಿದರೇನು - ಈ ಭಾವನೆಯನ್ನು ಕಡಿಮೆ ಮಾಡಿಕೊಳ್ಳಿರಿ. ತಮ್ಮನ್ನು ನೋಡಿಕೊಳ್ಳಿ, ತಂದೆಯನ್ನೂ ಸನ್ಮುಖದಲ್ಲಿ ಇಟ್ಟುಕೊಳ್ಳಿರಿ. ಉಳಿದಂತೆ ಯಾರಾದರೂ ಇರಲಿ, ಮಹಾರಥಿಗಳಿರಲಿ, ಮಧ್ಯದವರಿರಲಿ, ಪುರುಷಾರ್ಥದಲ್ಲಿ ಒಂದಲ್ಲ ಒಂದು ಕೊರತೆಯನ್ನು ಅವರೂ ಸಹ ಪರಿವರ್ತನೆ ಮಾಡಿಕೊಳ್ಳುತ್ತಿದ್ದಾರೆ ಆದ್ದರಿಂದ ಸೀ ಫಾದರ್ ಅಲ್ಲಿ ತಂದೆಯನ್ನು ನೋಡಿ, ಸೀ ಡಬಲ್ ಫಾದರ್, ಬ್ರಹ್ಮಾ ತಂದೆಯನ್ನು ನೋಡಿ ಶಿವ ತಂದೆಯನ್ನು ನೋಡಿರಿ. ತಂದೆಯು ತಮ್ಮನ್ನು ಹೃದಯದಲ್ಲಿ ಕೂರಿಸಿಕೊಂಡಿದ್ದಾರೆ ಮತ್ತು ತಾವೂ ಸಹ ತಮ್ಮ ಹೃದಯ ಸಿಂಹಾಸನದಲ್ಲಿ ಕೂರಿಸಿಕೊಂಡಿದ್ದೀರಿ. ತಮ್ಮ ಘೋಷಣಾ ವಾಕ್ಯವೂ ಇದೆ- ಸೀ ಫಾದರ್. ಸೀ ಸಿಸ್ಟರ್, ಸೀ ಬ್ರದರ್ - ಈ ಸ್ಲೋಗನ್ ಇಲ್ಲವೇ ಇಲ್ಲ. ಎಲ್ಲರಲ್ಲಿಯೂ ಯಾವುದಾದರೊಂದು ಬಲಹೀನತೆ ಇದ್ದೇ ಇರುತ್ತದೆ, ಒಂದುವೇಳೆ ಅನ್ಯರನ್ನು ನೋಡುವುದಾದರೆ ವಿಶೇಷತೆಯನ್ನೇ ನೋಡಿರಿ. ಅವರು ತಮ್ಮ ಯಾವ ಬಲಹೀನತೆಯನ್ನು ತೆಗೆಯುತ್ತಿದ್ದಾರೆಯೋ ಅದನ್ನು ನೋಡಬೇಡಿ. ಎರಡನೇ ಮಾತೇನೆಂದರೆ ತಮ್ಮ ರಾಜ್ಯಹ್ದಲ್ಲಿ ಅಂದರೆ ತಮ್ಮ ರಾಜ್ಯವು ನೆನಪಿದೆಯಲ್ಲವೆ. ನೆನ್ನೆ ತಾನೇ ಇತ್ತು ಮತ್ತು ನಾಳೆ ಬರಲಿದೆ. ತಮ್ಮ ಬುದ್ಧಿಯಲ್ಲಿ, ನಯನಗಳಲ್ಲಿ, ತಮ್ಮ ರಾಜ್ಯವು ಸ್ಪಷ್ಟವಾಗಿ ಬಂದು ಬಿಟ್ಟಿತಲ್ಲವೆ. ಎಷ್ಟು ಬಾರಿ ರಾಜ್ಯ ಮಾಡಿದ್ದಿರಿ, ಎಣಿಕೆ ಮಾಡಿದ್ದಿರಾ? ಅನೇಕ ಬಾರಿ ರಾಜ್ಯಭಾರ ಮಾಡಿದ್ದೀರಿ, ಹೇಳುತ್ತಿದ್ದಂತೆಯೇ ಮುಂದೆ ಬಂದು ಬಿಡುತ್ತದೆ. ತಮ್ಮ ರಾಜ್ಯಾಧಿಕಾರಿ ರೂಪ ಮತ್ತು ಶ್ರೇಷ್ಠ ರಾಜ್ಯ. ಹೇಗೆ ತಮ್ಮ ರಾಜ್ಯದಲ್ಲಿ ಲಾ ಮತ್ತು ಆರ್ಡರ್ ಸ್ವತಃ ನಡೆಯುತ್ತದೆ. ಎಲ್ಲರೂ ಜ್ಞಾನಪೂರ್ಣ ಸಂಸ್ಕಾರದವರಾಗಿದ್ದಿರಿ, ಲಾ ಎಂದರೇನು, ಆರ್ಡರ್ ಎಂದರೇನು ಎಂಬುದನ್ನು ತಿಳಿದುಕೊಂಡಿದ್ದೀರಿ ಅಂದಮೇಲೆ ಹಾಗೆಯೇ ಈಗ ತಮ್ಮ ಜೀವನದಲ್ಲಿಯೂ ನೋಡಿಕೊಳ್ಳಿ - ತಂದೆಯ ಆರ್ಡರ್ನಂತೆ ನಡೆಯುತ್ತೀರೋ ಅಥವಾ ಕೆಲವೊಮ್ಮೆ ಮಾಯೆಯದೂ ಸಹ ಆರ್ಡರ್ ನಡೆಯುತ್ತದೆಯೋ? ಕೆಲವೊಮ್ಮೆ ಪರಮತ, ಮನಮತ, ಶ್ರೀಮತವನ್ನು ಬಿಟ್ಟು ನಡೆಯುವುದಿಲ್ಲ ತಾನೆ? ಮತ್ತು ಲಾ ಎಂದರೇನು? ಲಾ ಆಗಿದೆ - ನಿಶ್ಚಿಂತ ಚಕ್ರವರ್ತಿಗಳು. ಯಾವುದೇ ಚಿಂತೆಯಿಲ್ಲ ಏಕೆಂದರೆ ಸರ್ವ ಪ್ರಾಪ್ತಿಗಳಿರುತ್ತದೆ. ಹಾಗೆಯೇ ಪರಿಶೀಲನೆ ಮಾಡಿಕೊಳ್ಳಿ - ಈಗ ಸಂಗಮದ ಶ್ರೇಷ್ಠ ಜನ್ಮದಲ್ಲಿಯೂ ಸರ್ವ ಪ್ರಾಪ್ತಿಗಳನ್ನು ತಂದೆಯು ಕೊಟ್ಟಿದ್ದಾರೆ. ಹೇಗೆ ಇದು ಭಗವಂತನ ಪ್ರಸಾದವಾಯಿತಲ್ಲವೆ. ಪ್ರಸಾದಕ್ಕೆ ಎಷ್ಟು ಮಹತ್ವ ಕೊಡುತ್ತಾರೆ, ಅಂದಮೇಲೆ ತಂದೆಯ ಯಾವುದೆಲ್ಲಾ ಪ್ರಾಪ್ತಿಗಳಾಗಿದೆಯೋ ಅದು ಪ್ರಭುಪ್ರಸಾದ ಪ್ರಾಪ್ತಿಯಾಗಿದೆ. ಪ್ರಭು ಪ್ರಸಾದಕ್ಕೆ ಮಹಿತ್ವಿಕೆಯಿದೆ. ಆಸ್ತಿಯೂ ಆಗಿದೆ, ಅಧಿಕಾರವೂ ಆಗಿದೆ ಮತ್ತು ಪ್ರಸಾದವೂ ಆಗಿದೆ. ಅಂದಮೇಲೆ ಪರಿಶೀಲನೆ ಮಾಡಿಕೊಳ್ಳಿ - ಲಾ ಮತ್ತು ಆರ್ಡರ್, ಎರಡರಲ್ಲಿಯೂ ಸಂಪನ್ನರಾಗಿದ್ದೀರಾ?

ಬಾಪ್ದಾದಾ ಒಂದು ಮಾತನ್ನು ನೋಡುತ್ತಿದ್ದೆವು, ಮೆಜಾರಿಟಿ ಮಕ್ಕಳಿಗೆ ಸಮಯದಲ್ಲಿ ಪರಿವರ್ತನೆ ಮಾಡಿಕೊಳ್ಳುವ ಯಾವ ಶಕ್ತಿ ಸಿಕ್ಕಿದೆಯೋ ಆ ಪರಿವರ್ತನಾ ಶಕ್ತಿಯನ್ನು ಸಮಯದಲ್ಲಿ ಕಾರ್ಯದಲ್ಲಿ ತೊಡಗಿಸಿದ್ದೇ ಆದರೆ ಯಾವುದೆ ಪರಿಶ್ರಮವಿಲ್ಲ. ನೋಡಿರಿ, ಎಲ್ಲರಿಗೂ ಅನುಭವವಿದೆ - ಒಂದುವೇಳೆ ಯಾವಾಗ ಯಾವುದೇ ಪ್ರಕಾರದ ಮಾಯೆಯಿಂದ ಸೋಲುಂಟಾಗುತ್ತದೆಯೆಂದರೆ ಎಲ್ಲರೂ ಭಾಷಣದಲ್ಲಿ ಹೇಳುತ್ತೀರಿ, ತರಗತಿಯಲ್ಲಿಯೂ ಹೇಳುತ್ತೀರಿ - ಎರಡು ಶಬ್ದಗಳು ಬೀಳಿಸುವಂತದ್ದೂ ಆಗಿದೆ, ಮೇಲೇರಿಸುವಂತದ್ದೂ ಆಗಿದೆ. ಆ ಎರಡು ಶಬ್ಧಗಳನ್ನು ತಿಳಿದುಕೊಂಡಿದ್ದೀರಿ. ಎಲ್ಲರ ಮನಸ್ಸಿನಲ್ಲಿ ಬಂದು ಬಿಟ್ಟಿದೆ. ಅವರೆಡು ಶಬ್ಧಗಳಾಗಿದೆ - ನಾನು ಮತ್ತು ನನ್ನದು. ಭಾಷಣದಲ್ಲಿ ಹಾಗೂ ಕ್ಲಾಸಿನಲ್ಲಿಯೂ ಹೇಳುತ್ತೀರಲ್ಲವೆ. ಬಾಪ್ದಾದಾ ಏನು ಹೇಳುತ್ತೀರೆಂದು ಕ್ಲಾಸ್ನ್ನು ಕೇಳಿಸಿಕೊಳ್ಳುತ್ತೇವೆ. ಈಗ ಇವರೆಡು ಶಬ್ಧಗಳನ್ನು ಪರಿವರ್ತನಾ ಶಕ್ತಿಯ ಮೂಲಕ ನಾನು ಎಂಬ ಶಬ್ಧವನ್ನು ಹೇಳಿದಾಗಲೆಲ್ಲಾ ನಾನು ಇಂತಹವನು ಅಥವಾ ಬ್ರಾಹ್ಮಣನಾಗಿದ್ದೇನೆ ಎಂದು ಹೇಳುತ್ತೀರಿ. ಆದರೆ ನಾನು ಯಾರು? ಬಾಪ್ದಾದಾ ಯಾವ ಸ್ವಮಾನವನ್ನು ಕೊಟ್ಟಿದ್ದೇವೆಯೋ ಆ ಸ್ವಮಾನದ ಜೊತೆಯಲ್ಲಿ ನಾನು ಎಂಬ ಶಬ್ಧವನ್ನು ಹೇಳಿರಿ ಅಂದರೆ ಬುದ್ಧಿಯಲ್ಲಿ ತಂದುಕೊಳ್ಳಿರಿ. ನಾನು ಎಂಬ ಶಬ್ಧ ಹೇಳುತ್ತಿದ್ದಂತೆಯೇ ಸ್ವಮಾನವು ನೆನಪಿಗೆ ಬಂದು ಬಿಡಲಿ ಮತ್ತು ನನ್ನದು ಎಂಬ ಶಬ್ಧ ಹೇಳುವಾಗ ಬಾಬಾ ಎಂಬ ಶಬ್ಧವು ನೆನಪಿಗೆ ಬರಲಿ - ಇದು ಸ್ವಾಭಾವಿಕ ಸ್ಮೃತಿಯಾಗಿ ಬಿಡಲಿ. ಇದನ್ನು ಪರಿವರ್ತನೆ ಮಾಡಿಕೊಳ್ಳಿರಿ ಸಾಕು ಮತ್ತು ಎರಡನೆಯ ಮಾತೇನೆಂದರೆ ಬಹುತೇಕವಾಗಿ ಸಂಬಂಧ-ಸಂಪರ್ಕದಲ್ಲಿ ಬಂದಾಗ ಎರಡು ಶಬ್ಧಗಳ ಮೂಲಕ ಮಾಯೆಯು ಬರುತ್ತದೆ - ಒಂದು ಭಾವ, ಇನ್ನೊಂದು ಭಾವನೆ. ಯಾವಾಗ ಭಾವ ಶಬ್ಧವನ್ನು ಹೇಳುತ್ತೀರೋ ಆಗ ಆತ್ಮಿಕ ಭಾವ ಬಂದು ಬಿಡಲಿ ಮತ್ತು ಭಾವನೆ ಎಂದಾಗ ಶುಭ ಭಾವನೆಯು ನೆನಪಿಗೆ ಬರಲಿ. ಶಬ್ಧದ ಅರ್ಥವನ್ನು ಪರಿವರ್ತನೆ ಮಾಡಿಕೊಳ್ಳಿರಿ. ನಿಮ್ಮ ಟೈಟಲ್ ಯಾವುದು? ವಿಶ್ವ ಪರಿವರ್ತಕರು. ವಿಶ್ವ ಪರಿವರ್ತಕರು ಈ ಶಬ್ಧವನ್ನು ಪರಿವರ್ತನೆ ಮಾಡಲು ಸಾಧ್ಯವಿಲ್ಲವೆ? ಆದ್ದರಿಂದ ಸಮಯದಲ್ಲಿ ಪರಿವರ್ತನಾ ಶಕ್ತಿಯನ್ನು ಉಪಯೋಗಿಸಿ ನೋಡಿರಿ. ಸಮಯ ಕಳೆದುಹೋದ ಮೇಲೆ ಅದು ನೆನಪಿಗೆ ಬರುತ್ತದೆ, ಮನಸ್ಸಿಗೆ ಅದು ಇಷ್ಟವಾಗುವುದಿಲ್ಲ. ತಮ್ಮ ಮನಸ್ಸು ತಾನಾಗಿಯೇ ಯೋಚಿಸುತ್ತದೆ ಆದರೆ ಸಮಯವಂತೂ ಕಳೆದು ಹೋಯಿತಲ್ಲವೆ ಆದ್ದರಿಂದ ಈಗ ಕೆಲವೊಮ್ಮೆ ಅಲ್ಲ, ತೀವ್ರಗತಿಯ ಅವಶ್ಯಕತೆಯಿದೆ. ಬಹಳ ಸಮಯವಂತೂ ಸರಿಯಾಗಿಯೇ ಇರುತ್ತೇನೆಂದು ಯೋಚಿಸಬೇಡಿ, ಆದರೆ ಬಾಪ್ದಾದಾ ಮೊದಲೇ ತಿಳಿಸಿದ್ದೇವೆ - ಅಂತಿಮ ಘಳಿಗೆಯ ಯಾವುದೇ ಭರವಸೆಯಿಲ್ಲ. ಆಕಸ್ಮಿಕವಾದ ಆಟವು ನಡೆಯಲಿದೆ. ಕೆಲವು ಮಕ್ಕಳು ತಂದೆಗೂ ಸಹ ಮಧುರಾತಿ ಮಧುರ ಮಾತುಗಳನ್ನು ಹೇಳುತ್ತಾರೆ. ಬಾಬಾ ಸಮಯವು ಇನ್ನು ಸ್ವಲ್ಪ ಅತಿಯಲ್ಲಿ ಹೋಗುವುದೋ ಆಗ ವೈರಾಗ್ಯ ಬರುವುದು ಮತ್ತು ವೈರಾಗ್ಯದ ಸಮಯದಲ್ಲಿ ಪುರುಷಾರ್ಥದ ಗತಿಯು ತಾನಾಗಿಯೇ ತೀವ್ರವಾಗಿ ಬಿಡುವುದು. ಆದರೆ ಬಾಪ್ದಾದಾ ಈ ಮಾತನ್ನು ತಿಳಿಸಿ ಬಿಟ್ಟಿದ್ದೆವು - ಬಹುಕಾಲದ ಪುರುಷಾರ್ಥ ಬೇಕಾಗಿದೆ. ಒಂದುವೇಳೆ ಸ್ವಲ್ಪ ಸಮಯದ ಪುರುಷಾರ್ಥವಿದ್ದರೆ ಪ್ರಾಲಬ್ಧವೂ ಸ್ವಲ್ಪ ಸಮಯಕ್ಕೆ ಸಿಗುವುದು. ಪೂರ್ಣ 21 ಜನ್ಮಗಳ ಪೂರ್ಣ ಪ್ರಾಲಬ್ಧ ಸಿಗುವುದಿಲ್ಲ ಆದ್ದರಿಂದ ಬಾಪ್ದಾದಾರವರ ಮೂರು ಶಬ್ಧಗಳನ್ನು ಸದಾ ನೆನಪಿಟ್ಟುಕೊಳ್ಳಿರಿ - ಒಂದು ಅಚಾನಕ್, ಎರಡನೆಯದು - ಎವರೆಡಿ, ಮತ್ತು ಮೂರನೆಯದು – ಬಹಳ ಕಾಲ. ಈ ಮೂರು ಶಬ್ಧಗಳನ್ನು ಸದಾ ಬುದ್ಧಿಯಲ್ಲಿಟ್ಟುಕೊಳ್ಳಿ. ಎಲ್ಲಿ ಯಾವಾಗ ಬೇಕಾದರೂ ಯಾರದೇ ಅಂತಿಮ ಕಾಲವಾಗಬಹುದು. ಈಗೀಗ ನೋಡಿ, ಎಷ್ಟೆಷ್ಟು ಮಂದಿ ಬ್ರಾಹ್ಮಣ ಹೋಗುತ್ತಿದ್ದಾರೆ, ಅವರಿಗೆ ಮೊದಲೇ ತಿಳಿದಿತ್ತೆ ಆದ್ದರಿಂದ ಬಹಳ ಕಾಲದ ಪುರುಷಾರ್ಥದಿಂದ ಪೂರ್ಣ 21 ಜನ್ಮಗಳ ಆಸ್ತಿಯನ್ನು ಪ್ರಾಪ್ತಿ ಮಾಡಿಕೊಳ್ಳಲೇಬೇಕು. ಈ ತೀವ್ರ ಪುರುಷಾರ್ಥವನ್ನು ಸ್ಮೃತಿಯಲ್ಲಿಟ್ಟುಕೊಳ್ಳಿರಿ. ತಮ್ಮ ರಾಜ್ಯದಲ್ಲಿ ಫಸ್ಟ್ ನಂಬರ್, ಫಸ್ಟ್ ಜನ್ಮದಲ್ಲಿ ಬನ್ನಿರಿ. ಏನನ್ನು ಯೋಚಿಸಿದ್ದೀರಿ? ಫಸ್ಟ್ ಜನ್ಮದಲ್ಲಿ ಬರಬೇಕಲ್ಲವೆ. ಯಾವುದರಲ್ಲಿ ಮಜಾ ಇರುವುದು? ಮೊದಲ ಜನ್ಮದಲ್ಲಿಯೋ ಅಥವಾ ಮತ್ತ್ಯಾವುದರಲ್ಲಿ? ನಮ್ಮ ರಾಜ್ಯದ ಮೊದಲನೇ ಜನ್ಮದಲ್ಲಿ ಶ್ರೀಕೃಷ್ಣನ ಜೊತೆ ಜೊತೆಗೆ ನಮ್ಮ ಪಾತ್ರವಿರುವುದು ಎಂದು ತಿಳಿದುಕೊಳ್ಳುವವರು ಕೈಯೆತ್ತಿರಿ. ಮೊದಲ ಜನ್ಮದಲ್ಲಿ ಪಾತ್ರವಿರುವುದೇ? ಕೈಗಳನ್ನು ನೋಡಿ ಖುಷಿಯಾಗಿ ಬಿಟ್ಟಿರಿ. ಚಪ್ಪಾಳೆ ತಟ್ಟಿರಿ ಆದರೆ ಮೊದಲ ಜನ್ಮದಲ್ಲಿ ಬರುವುದಕ್ಕಾಗಿ ಶುಭಾಷಯಗಳು. ಆದರೆ ಹೇಳುವುದೇ? ಏನೆಂದು ಹೇಳುವುದೇ? ಬರುವುದೇ ಮೊದಲ ಜನ್ಮದಲ್ಲಿ ಅಂದಾಗ ಹೇಳುವುದೇನು? ಒಳ್ಳೆಯದು - ಯಾರೆಲ್ಲರೂ ಬಂದಿದ್ದೀರೋ ಮೊದಲ ಜನ್ಮದಲ್ಲಿ ಬರಲೇಬೇಕಾಗಿದೆ. ಚಪ್ಪಾಳೆಯನ್ನಂತೂ ತಟ್ಟಿದಿರಿ, ಮೊದಲ ಜನ್ಮ ಹಾಗೂ ಮೊದಲ ಸ್ಥಿತಿ ಅಂದಮೇಲೆ ಈಗ ಮೊದಲಿನ ಸ್ಥಿತಿಯನ್ನು ಮಾಡಿಕೊಳ್ಳಲೇಬೇಕು. ಯಾರಿಗೆ ಈ ಧೃಡ ಸಂಕಲ್ಪವಿದೆ - ತೀವ್ರವಾಗಿ ಹೋಗಲೇಬೇಕಾಗಿದೆ, ಭಲೆ ಯಾವುದೇ ವಿಘ್ನಗಳು ಬರಲಿ ಆದರೆ ವಿಘ್ನವು ವಿಘ್ನವಾಗದಿರಲಿ, ವಿಘ್ನ ವಿನಾಶಕರ ಮುಂದೆ ವಿಘ್ನವು ವಿಜಯದ ರೂಪ ತಾಳಲಿ. ಏಕೆಂದರೆ ತಾವೆಲ್ಲರೂ ವಿಘ್ನ ವಿನಾಶಕರಾಗಿದ್ದೀರಿ. ನಿಮ್ಮ ಟೈಟಲ್ ಏನು? ವಿಘ್ನ ವಿನಾಶಕರು. ಒಂದುವೇಳೆ ಬಂದರೂ ಸಹ ಆಟವಾಡಲು ಬರುವುದು. ಆದರೆ ತಾವು ದೂರದಿಂದಲೇ ಗುರುತಿಸಿರಿ, ರಾಯಲ್ ರೂಪದಲ್ಲಿ ಬರುವುದು ಆದರೆ ತಾವು ವಿಘ್ನ ವಿನಾಶಕರು ಇದು ಯಾವ ಆಟವು ನಡೆಯುತ್ತಿದೆಯೆಂದು ದೂರದಿಂದಲೇ ಗುರುತಿಸಿ ಬಿಡುವಿರಿ. ಆದ್ದರಿಂದ ಬಾಪ್ದಾದಾ ಇದನ್ನೇ ಬಯಸುತ್ತೇವೆ - ಎಲ್ಲಾ ಮಕ್ಕಳು ಒಟ್ಟಿಗೆ ನಡೆಯಬೇಕು, ಹಿಂದೆ ಅಲ್ಲ. ಮಕ್ಕಳ ವಿನಃ ಬಾಪ್ದಾದಾರವರಿಗೂ ಮಜಾ ಬರುವುದಿಲ್ಲ ಆದ್ದರಿಂದ ಧೃಡತೆಯನ್ನೆಂದೂ ಬಲಹೀನ ಮಾಡಿಕೊಳ್ಳಬೇಡಿ. ಮಾಡಲೇಬೇಕು, ಮಾಡೋಣ, ನೋಡೋಣ, ನೋಡಿರಿ ಆಗಿ ಬಿಡುತ್ತದೆ, ಈ ಣ, ಣ ಎಂದು ಹೇಳಬೇಡಿ. ಧೃಡತೆಯು ಸಫಲತೆಯ ಕೀಲು ಕೈಯಾಗಿದೆ. ಈ ಬೀಗದ ಕೈಯನ್ನು ಎಂದೂ ಕಳೆದುಕೊಳ್ಳಬೇಡಿ, ಮಾಯೆಯೂ ಚತುರನಲ್ಲವೆ, ಅದು ಬೀಗದ ಕೈಯನ್ನೇ ಹುಡುಕುತ್ತದೆ ಆದ್ದರಿಂದ ಈ ಬೀಗದ ಕೈಯನ್ನು ಜೋಪಾನವಾಗಿ ಇಟ್ಟುಕೊಳ್ಳಿರಿ.

ನಾಲ್ಕಾರು ಕಡೆಯ ಪ್ರಿಯ ಮತ್ತು ಅದೃಷ್ಟವಂತ ಧೃಡ ಸಂಕಲ್ಪ ಹೊಂದಿರುವ ಮಕ್ಕಳಿಗೆ, ಆಲೋಚಿಸಿದೆವು ಮತ್ತು ಮಾಡಿದೆವು, ಮಾಡೋಣ-ನೋಡೋಣ ಅಲ್ಲ, ಯೋಚಿಸಿದ ಕೂಡಲೇ ಮಾಡುವವರು ಸದಾ ತನ್ನನ್ನು ನಷ್ಟಮೋಹಿಯಾಗಿ ಕೇವಲ ಸಂಬಂಧದ ಮೋಹವಲ್ಲ, ತನ್ನ ದೇಹ ಭಾನ ಹಾಗೂ ದೇಹಾಭಿಮಾನದ ಮೋಹವೂ ಇಲ್ಲ. ಇಂತಹ ನಷ್ಟಮೋಹ, ಎವರೆಡಿ ಮಕ್ಕಳಿಗೆ ಸದಾ ಶ್ರೀಮತದಲ್ಲಿ ಕೈಯಲ್ಲಿ ಕೈ ನೀಡುತ್ತಾ, ಜೊತೆಯಲ್ಲಿ ಹಾರುವಂತಹ ಹಾಗೂ ಬ್ರಹ್ಮಾ ತಂದೆಯ ಜೊತೆಯಲ್ಲಿ ತಮ್ಮ ರಾಜ್ಯದಲ್ಲಿ ಬರುವಂತಹ ತೀವ್ರ ಪುರುಷಾರ್ಥಿ, ಹಾರುವ ಕಲೆಯ ಮಕ್ಕಳಿಗೆ ಬಾಪ್ದಾದಾರವರ ಬಹಳ-ಬಹಳ ಆಶೀರ್ವಾದಗಳು ಮತ್ತು ನೆನಪು-ಪ್ರೀತಿಯನ್ನು ಸ್ವೀಕಾರ ಮಾಡಿರಿ ಮತ್ತು ಬಾಲಕರಿಂದ ಮಾಲೀಕರಾಗುವ ಮಕ್ಕಳಿಗೆ ನಮಸ್ತೆ.

ವರದಾನ:
ಪರಿವರ್ತನಾ ಶಕ್ತಿಯ ಮೂಲಕ ಸರ್ವರ ಧನ್ಯವಾದಗಳಿಗೆ ಪಾತ್ರರಾಗುವಂತಹ ವಿಘ್ನ ಜೀತ ಭವ.

ಒಂದುವೇಳೆ ತಮಗೆ ಯಾರೇ ಅಪಕಾರ ಮಾಡುತ್ತಾರೆಂದರೆ, ತಾವು ಒಂದು ಸೆಕೆಂಡಿನಲ್ಲಿ ಅಪಕಾರವನ್ನೂ ಉಪಕಾರದಲ್ಲಿ ಪರಿವರ್ತನೆ ಮಾಡಿಬಿಡಿ, ತಮ್ಮ ಮುಂದೆ ಯಾರಾದರೂ ತಮ್ಮ ಸಂಸ್ಕಾರ-ಸ್ವಭಾವದ ರೂಪದಲ್ಲಿ ಪರೀಕ್ಷೆಯಾಗಿ ಬಂದಿತೆಂದರೂ, ತಾವು ಒಬ್ಬ ತಂದೆಯ ಸ್ಮೃತಿಯಿಂದ ಅಂತಹ ಆತ್ಮನ ಪ್ರತಿಯೂ ದಯಾಹೃದಯಿಯ ಶ್ರೇಷ್ಠ ಸಂಸ್ಕಾರ-ಸ್ವಭಾವವನ್ನು ಧಾರಣೆ ಮಾಡಿಕೊಳ್ಳಿರಿ. ಯಾರಾದರೂ ದೇಹಧಾರಿ ದೃಷ್ಟಿಯಿಂದ ತಮ್ಮ ಮುಂದೆ ಬಂದರೆ, ಅವರ ದೃಷ್ಟಿಯನ್ನು ಆತ್ಮಿಕ ದೃಷ್ಟಿಯಲ್ಲಿ ಬದಲಾಯಿಸಿ ಬಿಡಿ. ಈ ರೀತಿಯಲ್ಲಿ ಪರಿವರ್ತನೆ ಮಾಡುವ ಯುಕ್ತಿಯ ಅಭ್ಯಾಸವಾಯಿತೆಂದರೆ ವಿಘ್ನಜೀತರು ಆಗಿ ಬಿಡುವಿರಿ. ನಂತರ ತಮಗೆ ತಮ್ಮ ಸಂಪರ್ಕದಲ್ಲಿ ಬರುವ ಎಲ್ಲಾ ಆತ್ಮರು ಧನ್ಯವಾದಗಳನ್ನು ಸಲ್ಲಿಸುವರು.

ಸ್ಲೋಗನ್:
ಅನುಭವಗಳ ಸ್ವರೂಪರಾಗುತ್ತೀರೆಂದರೆ ಮುಖ ಚರ್ಯೆಯಿಂದ ಭಾಗ್ಯದ ಹೊಳಪು ಕಾಣಿಸುವುದು.

ಅವ್ಯಕ್ತ ಸೂಚನೆ:- ಏಕತೆ ಮತ್ತು ವಿಶ್ವಾಸದ ಗುಣ ಲಕ್ಷಣಗಳ ಮೂಲಕ ಸಫಲತಾ ಸಂಪನ್ನರಾಗಿರಿ.

ಹಲವು ದೇಶಗಳು, ಹಲವು ಭಾಷೆಗಳು, ಹಲವು ರೂಪಗಳು ಮತ್ತು ಬಣ್ಣಗಳನ್ನು ಹೊಂದಿದ್ದರೂ, ಪ್ರತಿಯೊಬ್ಬರ ಹೃದಯದಲ್ಲಿ ಏಕತೆ ಗೋಚರಿಸಬೇಕು ಏಕೆಂದರೆ ನೀವು ಒಬ್ಬ ತಂದೆಯ ಮಕ್ಕಳು. ಎಲ್ಲರೂ ಒಂದೇ ಮರದ ಕೊಂಬೆಗಳು, ಒಬ್ಬರ ಶ್ರೀಮತದಂತೆ ನಡೆಯುವುದು, ಭಿನ್ನತೆಗಳಲ್ಲಿ ಏಕತೆಯನ್ನು ತೋರಿಸುವುದು, ತಪ್ಪನ್ನು (ಹಾಳಾಗಿರುವುದನ್ನು) ಸರಿ ಪಡಿಸುವುದು ಮತ್ತು ವೈವಿಧ್ಯತೆಯಲ್ಲಿ ಏಕತೆಯನ್ನು ತರುವುದು ಶ್ರೇಷ್ಠ ಸೇವೆಯಾಗಿದೆ. ಇದು ಅದ್ಭುತವಾಗಿದೆ ಮತ್ತು ಇದು ಯಶಸ್ಸಿನ ಆಧಾರವಾಗಿದೆ.