01.07.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ- ನಿಮ್ಮ
ಬುದ್ಧಿಯಲ್ಲಿ ಈಗ ಇಡೀ ಜ್ಞಾನದ ಸಾರವಿದೆ ಆದ್ದರಿಂದ ನಿಮಗೆ ಚಿತ್ರಗಳ ಅವಶ್ಯಕತೆಯೂ ಇಲ್ಲ, ನೀವು
ತಂದೆಯನ್ನು ನೆನಪು ಮಾಡಿ ಮತ್ತು ಅನ್ಯರಿಂದಲೂ ಮಾಡಿಸಿ”
ಪ್ರಶ್ನೆ:
ಅಂತಿಮ ಸಮಯದಲ್ಲಿ
ನೀವು ಮಕ್ಕಳ ಬುದ್ಧಿಯಲ್ಲಿ ಯಾವ ಜ್ಞಾನವಿರುವುದು?
ಉತ್ತರ:
ಆ ಸಮಯದಲ್ಲಿ ಇದೇ
ಬುದ್ಧಿಯಲ್ಲಿರುತ್ತದೆ- ನಾವೀಗ ಹಿಂತಿರುಗಿ ಮನೆಗೆ ಹೋಗುತ್ತೇವೆ, ಮತ್ತೆ ಅಲ್ಲಿಂದ ಚಕ್ರದಲ್ಲಿ
ಬರುತ್ತೇವೆ. ನಿಧಾನ-ನಿಧಾನವಾಗಿ ಏಣಿಯನ್ನಿಳಿಯುತ್ತೇವೆ ನಂತರ ಮತ್ತೆ ಏರುವ ಕಲೆಯಲ್ಲಿ ಕರೆದುಕೊಂಡು
ಹೋಗಲು ತಂದೆಯು ಬರುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ- ಮೊದಲು ನಾವು ಸೂರ್ಯವಂಶಿಯರಾಗಿದ್ದೆವು,
ನಂತರ ಚಂದ್ರವಂಶಿಯರಾದೆವು.... ಇದರಲ್ಲಿ ಚಿತ್ರಗಳ ಅವಶ್ಯಕತೆಯಿಲ್ಲ.
ಓಂ ಶಾಂತಿ.
ಮಕ್ಕಳು ಆತ್ಮಾಭಿಮಾನಿಯಾಗಿ ಕುಳಿತಿದ್ದೀರಾ? 84 ಜನ್ಮಗಳ ಚಕ್ರದ ಜ್ಞಾನವು ಬುದ್ಧಿಯಲ್ಲಿದೆ
ಅರ್ಥಾತ್ ತಮ್ಮ ವಿಭಿನ್ನ ಜನ್ಮಗಳ ಜ್ಞಾನವಿದೆ. ವಿರಾಟರೂಪದ ಚಿತ್ರವಿದೆಯಲ್ಲವೆ. ಹೇಗೆ ನಾವು 84
ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ, ಮೂಲವತನದಿಂದ ಮೊಟ್ಟಮೊದಲು ದೇವಿ-ದೇವತಾ ಧರ್ಮದಲ್ಲಿ
ಬರುತ್ತೇವೆ ಎಂಬುದರ ಜ್ಞಾನವೂ ಸಹ ನಿಮ್ಮಲ್ಲಿದೆ. ಇದರಲ್ಲಿ ಚಿತ್ರದ ಯಾವುದೇ ಅವಶ್ಯಕತೆಯಿಲ್ಲ.
ನಾವು ಯಾವುದೇ ಚಿತ್ರವನ್ನು ನೆನಪು ಮಾಡಬೇಕಾಗಿಲ್ಲ. ಅಂತಿಮದಲ್ಲಿ ಕೇವಲ ಇದೇ ನೆನಪಿರುವುದು- ನಾವು
ಆತ್ಮರಾಗಿದ್ದೆವು, ಮೂಲವತನದ ನಿವಾಸಿಗಳಾಗಿದ್ದೇವೆ. ಇಲ್ಲಿ ನಿಮ್ಮ ಪಾತ್ರವಿದೆ. ಇದನ್ನು
ಮರೆಯಬಾರದು. ಇವು ಮನುಷ್ಯ ಸೃಷ್ಟಿಚಕ್ರದ ಮಾತುಗಳೇ ಆಗಿವೆ ಮತ್ತು ಬಹಳ ಸರಳವಾಗಿದೆ. ಇದರಲ್ಲಿ
ಚಿತ್ರಗಳ ಅವಶ್ಯಕತೆಯೇ ಇಲ್ಲ ಏಕೆಂದರೆ ಈ ಚಿತ್ರಗಳೆಲ್ಲವು ಭಕ್ತಿಮಾರ್ಗದ ವಸ್ತುಗಳಾಗಿವೆ.
ಜ್ಞಾನಮಾರ್ಗದಲ್ಲಂತೂ ವಿದ್ಯೆಯಿದೆ, ವಿದ್ಯಾಭ್ಯಾಸದಲ್ಲಿ ಚಿತ್ರಗಳ ಅವಶ್ಯಕತೆಯಿಲ್ಲ. ಈ
ಚಿತ್ರಗಳನ್ನು ಕೇವಲ ತಿದ್ದುಪಡಿ ಮಾಡಲಾಗಿದೆ. ಹೀಗೆ ಗೀತೆಯ ಭಗವಂತನು ಕೃಷ್ಣನೆಂದು ಹೇಳುತ್ತಾರೆ,
ಶಿವನೆಂದು ನಾವು ಹೇಳುತ್ತೇವೆ, ಇದೂ ಸಹ ಬುದ್ಧಿಯಿಂದ ತಿಳಿದುಕೊಳ್ಳುವ ಮಾತುಗಳಾಗಿವೆ.
ಬುದ್ಧಿಯಲ್ಲಿ ಈ ಜ್ಞಾನವಿರುತ್ತದೆ, ನಾವು 84 ಜನ್ಮಗಳ ಚಕ್ರವನ್ನು ಸುತ್ತಿದ್ದೇವೆ. ನಾವೇ
ಪವಿತ್ರರಾಗಬೇಕಾಗಿದೆ, ಪವಿತ್ರರಾಗಿ ನಂತರ ಹೊಸದಾಗಿ ಚಕ್ರವನ್ನು ಸುತ್ತಲಾರಂಭಿಸುತ್ತೇವೆ. ಇದು
ಜ್ಞಾನದ ಸಾರವಾಗಿದೆ. ಇದನ್ನು ಬುದ್ಧಿಯಲ್ಲಿಡಬೇಕಾಗಿದೆ. ಹೇಗೆ ತಂದೆಯ ಬುದ್ಧಿಯಲ್ಲಿ ವಿಶ್ವದ
ಚರಿತ್ರೆ, ಭೂಗೋಳ ಹಾಗೂ 84 ಜನ್ಮಗಳ ಚಕ್ರವು ಹೇಗೆ ಸುತ್ತುತ್ತದೆ ಎಂಬುದೆಲ್ಲವೂ ಇದೆಯೋ ಹಾಗೆಯೇ
ನಿಮ್ಮ ಬುದ್ಧಿಯಲ್ಲಿಯೂ ಇದೆ. ಮೊದಲು ನೀವು ಸೂರ್ಯವಂಶಿಯರು ನಂತರ ಚಂದ್ರವಂಶಿಯರಾಗುತ್ತೀರಿ.
ಚಿತ್ರಗಳ ಅವಶ್ಯಕತೆಯಿಲ್ಲ. ಕೇವಲ ಮನುಷ್ಯರಿಗೆ ತಿಳಿಸುವುದಕ್ಕಾಗಿ ಚಿತ್ರಗಳನ್ನು ರಚಿಸಿದ್ದಾರೆ.
ಜ್ಞಾನಮಾರ್ಗದಲ್ಲಂತೂ ತಂದೆಯು ಇಷ್ಟನ್ನೇ ತಿಳಿಸುತ್ತಾರೆ- ಮನ್ಮನಾಭವ. ಹೇಗೆ ಈ ಚತುರ್ಭುಜನ
ಚಿತ್ರವಿದೆ, ರಾವಣನ ಚಿತ್ರವಿದೆ, ಇವೆಲ್ಲವನ್ನೂ ಅನ್ಯರಿಗೆ ತಿಳಿಸಿಕೊಡುವುದಕ್ಕಾಗಿ
ತೋರಿಸಬೇಕಾಗುತ್ತದೆ. ನಿಮ್ಮ ಬುದ್ಧಿಯಲ್ಲಂತೂ ಯಥಾರ್ಥ ಜ್ಞಾನವಿದೆ. ಚಿತ್ರಗಳಿಲ್ಲದೆಯೂ ನೀವು
ತಿಳಿಸಬಹುದು. ನಿಮ್ಮ ಬುದ್ಧಿಯಲ್ಲಿ 84 ಜನ್ಮಗಳ ಚಕ್ರವಿದೆ. ಚಿತ್ರಗಳ ಮೂಲಕ ಕೇವಲ ಸಹಜ ಮಾಡಿ
ತಿಳಿಸಲಾಗುತ್ತದೆ ಆದ್ದರಿಂದ ಇವುಗಳ ಅವಶ್ಯಕತೆಯಿಲ್ಲ. ಏಕೆಂದರೆ ಮೊದಲು ನಾವು ಸೂರ್ಯವಂಶಿ
ಮನೆತನದವರಾಗಿದ್ದೆವು ನಂತರ ಚಂದ್ರವಂಶಿ ಮನೆತನದವರಾದೆವು. ಅಲ್ಲಿ ಬಹಳ ಸುಖವಿರುತ್ತದೆ ಯಾವುದನ್ನು
ಸ್ವರ್ಗ ಎಂದು ಹೇಳಲಾಗುತ್ತದೆ, ಈ ಚಿತ್ರಗಳ ಬಗ್ಗೆ ತಿಳಿಸಬೇಕಾಗುತ್ತದೆ. ಅಂತ್ಯದಲ್ಲಂತೂ
ಬುದ್ಧಿಯಲ್ಲಿ ಈ ಜ್ಞಾನವಿರುತ್ತದೆ. ಈಗ ನಾವು ಹೋಗುತ್ತೇವೆ ಮತ್ತೆ ಚಕ್ರವನ್ನು ಸುತ್ತುತ್ತೇವೆ.
ಏಣಿಚಿತ್ರದ ಬಗ್ಗೆ ಮನುಷ್ಯರಿಗೆ ತಿಳಿಸಿಕೊಡುತ್ತೀರೆಂದರೆ ಬಹಳ ಸಹಜವಾಗಿಬಿಡುತ್ತದೆ. ನಿಮ್ಮ
ಬುದ್ಧಿಯಲ್ಲಿ ಪೂರ್ಣ ಜ್ಞಾನವೂ ಸಹ ಇದೆ- ಹೇಗೆ ನಾವು ಏಣಿಯನ್ನು ಇಳಿಯುತ್ತೇವೆ ನಂತರ ತಂದೆಯು
ಏರುವಕಲೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ತಂದೆಯು ತಿಳಿಸುತ್ತಾರೆ- ನಾನು ನಿಮಗೆ ಈ ಚಿತ್ರಗಳ
ಸಾರವರನ್ನು ತಿಳಿಸುತ್ತೇನೆ. ಹೇಗೆ ಚಕ್ರವಿದೆಯೆಂದರೆ ಅದರ ಬಗ್ಗೆ ತಿಳಿಸಲು ಸಾಧ್ಯ- ಇದು 5000
ವರ್ಷಗಳ ಚಕ್ರವಾಗಿದೆ. ಒಂದುವೇಳೆ ಲಕ್ಷಾಂತರ ವರ್ಷಗಳಾಗಿದ್ದರೆ ಸಂಖ್ಯೆಯು ಎಷ್ಟೊಂದು
ವೃದ್ದಿಯಾಗಿಬಿಡುತ್ತಿತ್ತು! ಕ್ರಿಶ್ಚಿಯನ್ನರಿಗೆ 2000 ವರ್ಷಗಳನ್ನು ತೋರಿಸುತ್ತಾರೆ, ಇದರಲ್ಲಿ
ಎಷ್ಟು ಮಂದಿ ಮನುಷ್ಯರಿರುತ್ತಾರೆ. 5000 ವರ್ಷಗಳಲ್ಲಿ ಎಷ್ಟು ಮಂದಿ ಇರುತ್ತಾರೆ, ಈ
ಲೆಕ್ಕವೆಲ್ಲವನ್ನೂ ನೀವು ತಿಳಿಸುತ್ತೀರಿ. ಸತ್ಯಯುಗದಲ್ಲಿ ಪವಿತ್ರರಾಗಿರುವ ಕಾರಣ ಕೆಲವರೇ
ಮನುಷ್ಯರಿರುತ್ತಾರೆ. ಈಗಂತೂ ಎಷ್ಟೊಂದು ಜನಸಂಖ್ಯೆಯಿದೆ. ಒಂದುವೇಳೆ ಲಕ್ಷಾಂತರ ವರ್ಷಗಳ
ಕಾಲಾವಧಿಯಾಗಿದ್ದರೆ ಸಂಖ್ಯೆಯು ಎಣಿಕೆಯಿಲ್ಲದಷ್ಟಾಗಿಬಿಡುತ್ತಿತ್ತು. ಕ್ರಿಶ್ಚಿಯನ್ನರ
ಹೋಲಿಕೆಯಲ್ಲಿ ಜನಸಂಖ್ಯೆಯ ಲೆಕ್ಕವನ್ನು ತೆಗೆಯುತ್ತಾರಲ್ಲವೆ. ಹಿಂದೂಗಳ ಜನಸಂಖ್ಯೆಯನ್ನು ಕಡಿಮೆ
ತೋರಿಸುತ್ತಾರೆ, ಕ್ರಿಶ್ಚಿಯನ್ನರು ಬಹಳಷ್ಟು ಮಂದಿ ಆಗಿಬಿಟ್ಟಿದ್ದಾರೆ. ಯಾರು ಒಳ್ಳೆಯ ಬುದ್ಧಿವಂತ
ಮಕ್ಕಳಿದ್ದಾರೆಯೋ ಅವರು ಚಿತ್ರಗಳಿಲ್ಲದೆಯೂ ತಿಳಿಸಿಕೊಡುತ್ತಾರೆ. ವಿಚಾರ ಮಾಡಿ- ಈ ಸಮಯದಲ್ಲಿ
ಎಷ್ಟುಮಂದಿ ಮನುಷ್ಯರಿದ್ದಾರೆ! ಹೊಸಪ್ರಪಂಚದಲ್ಲಿ ಎಷ್ಟು ಕಡಿಮೆ ಜನಸಂಖ್ಯೆಯಿರುತ್ತದೆ. ಈಗಂತೂ
ಹಳೆಯ ಪ್ರಪಂಚವಾಗಿದೆ, ಇದರಲ್ಲಿ ಎಷ್ಟೊಂದು ಜನಸಂಖ್ಯೆಯಿದೆ ನಂತರ ಹೊಸ ಪ್ರಪಂಚವು ಹೇಗೆ
ಸ್ಥಾಪನೆಯಾಗುತ್ತದೆ, ಯಾರು ಸ್ಥಾಪನೆ ಮಾಡುತ್ತಾರೆ ಎಂಬುದೆಲ್ಲವನ್ನೂ ತಂದೆಯೇ ತಿಳಿಸುತ್ತಾರೆ.
ಅವರೇ ಜ್ಞಾನಸಾಗರನಾಗಿದ್ದಾರೆ, ನೀವು ಮಕ್ಕಳು ಕೇವಲ ಈ 84 ಜನ್ಮಗಳ ಚಕ್ರವನ್ನೇ
ಬುದ್ಧಿಯಲ್ಲಿಟ್ಟುಕೊಳ್ಳಬೇಕಾಗಿದೆ. ನಾವೀಗ ನರಕದಿಂದ ಸ್ವರ್ಗದಲ್ಲಿ ಹೋಗುತ್ತೇವೆಂದರೆ ಆಂತರಿಕವಾಗಿ
ಖುಷಿಯಿರಬೇಕಲ್ಲವೆ. ಸತ್ಯಯುಗದಲ್ಲಿ ದುಃಖದ ಮಾತೇ ಇರುವುದಿಲ್ಲ. ಯಾವುದೇ ವಸ್ತುವಿನ ಪ್ರಾಪ್ತಿಗಾಗಿ
ಪುರುಷಾರ್ಥ ಮಾಡಲು ಅಂತಹ ಅಪ್ರಾಪ್ತ ವಸ್ತು ಯಾವುದೂ ಇರುವುದಿಲ್ಲ. ಇಲ್ಲಂತೂ ಈ ಯಂತ್ರವು ಬೇಕು,
ಇದು ಬೇಕು.... ಎಂದು ಪುರುಷಾರ್ಥ ಮಾಡಬೇಕಾಗುತ್ತದೆ ಆದರೆ ಅಲ್ಲಿ ಎಲ್ಲಾ ಪ್ರಕಾರದ ಸುಖವಿರುತ್ತದೆ.
ಹೇಗೆ ಯಾವುದೇ ಮಹಾರಾಜನಿರುತ್ತಾನೆಂದರೆ ಅವನ ಬಳಿ ಎಲ್ಲಾ ಪ್ರಕಾರದಲ್ಲಿಯೂ ಸುಖವಿರುತ್ತದೆ. ಬಡವರ
ಬಳಿ ಎಲ್ಲಾ ಸುಖವಿರುವುದಿಲ್ಲ ಆದರೆ ಇದಂತೂ ಕಲಿಯುಗವಾಗಿದೆ ಆದ್ದರಿಂದ ಈ ರೋಗ ಇತ್ಯಾದಿಗಳೂ ಇವೆ.
ನೀವೀಗ ಹೊಸಪ್ರಪಂಚದಲ್ಲಿ ಹೋಗುವುದಕ್ಕಾಗಿ ಪುರುಷಾರ್ಥ ಮಾಡುತ್ತೀರಿ. ಸ್ವರ್ಗ-ನರಕ ಇಲ್ಲಿಯೇ
ಆಗುತ್ತದೆ.
ಈ ಸೂಕ್ಷ್ಮವತನದ ಯಾವ
ಆಟಪಾಠಗಳಿವೆಯೋ ಇದು ಸಮಯವನ್ನು ಕಳೆಯುವುದಕ್ಕಾಗಿ ಇದೆ. ಕರ್ಮಾತೀತ ಸ್ಥಿತಿಯಾಗುವವರೆಗೆ ಸಮಯವನ್ನು
ವ್ಯತೀತ ಮಾಡಲು ಇವೆಲ್ಲಾ ಆಟಪಾಠಗಳಿವೆ. ಕರ್ಮಾತೀತ ಸ್ಥಿತಿಯು ಬಂದುಬಿಟ್ಟಿತೆಂದರೆ ಕೇವಲ ಇದೇ
ನೆನಪಿರುವುದು. ನಾನಾತ್ಮನು ಈಗ 84 ಜನ್ಮಗಳನ್ನು ಪೂರ್ಣ ಮಾಡಿದೆನು. ನಾವೀಗ ಮನೆಗೆ ಹೋಗುತ್ತೇವೆ
ನಂತರ ಸತೋಪ್ರಧಾನ ಪ್ರಪಂಚದಲ್ಲಿ ಸತೋಪ್ರಧಾನ ಪಾತ್ರವನ್ನಭಿನಯಿಸುತ್ತೇವೆ. ಈ ಜ್ಞಾನವನ್ನು
ಬುದ್ಧಿಯಲ್ಲಿಟ್ಟುಕೊಳ್ಳುತ್ತೀರಿ. ಅಂದಮೇಲೆ ಇದರಲ್ಲಿ ಚಿತ್ರಗಳ ಅವಶ್ಯಕತೆಯಿರುವುದಿಲ್ಲ. ಹೇಗೆ
ವಕೀಲರು ಎಷ್ಟೊಂದು ಓದುತ್ತಾರೆ, ವಕೀಲರಾಗಿಬಿಟ್ಟ ಮೇಲೆ ಯಾವುದನ್ನು ಓದಿದರೋ ಅದು
ಸಮಾಪ್ತಿಯಾಗುವುದು. ಪ್ರಾಲಬ್ಧದ ಫಲಿತಾಂಶವೂ ಬರುವುದು, ನೀವು ಸಹ ಓದಿ ನಂತರ ಹೋಗಿ ರಾಜ್ಯಭಾರ
ಮಾಡುತ್ತೀರಿ. ಅಲ್ಲಿ ಜ್ಞಾನದ ಅವಶ್ಯಕತೆಯಿಲ್ಲ. ಈ ಚಿತ್ರಗಳಲ್ಲಿಯೂ ಸಹ ಯಾವುದು ಸರಿ, ಯಾವುದು
ತಪ್ಪೆಂದು ನಿಮ್ಮ ಬುದ್ಧಿಯಲ್ಲಿದೆ. ತಂದೆಯು ಕುಳಿತು ತಿಳಿಸುತ್ತಾರೆ, ಲಕ್ಷ್ಮೀ-ನಾರಾಯಣರು ಯಾರು?
ಈ ವಿಷ್ಣು ಯಾರು? ವಿಷ್ಣುವಿನ ಚಿತ್ರದಲ್ಲಿ ಮನುಷ್ಯರು ತಬ್ಬಿಬ್ಬಾಗುತ್ತಾರೆ. ಅರ್ಥವನ್ನು
ತಿಳಿದುಕೊಳ್ಳದೆ ಪೂಜೆ ಮಾಡುವುದು ವ್ಯರ್ಥವಾಗಿಬಿಡುತ್ತದೆ. ಏನನ್ನೂ ತಿಳಿದುಕೊಂಡಿಲ್ಲ. ಹೇಗೆ
ವಿಷ್ಣುವನ್ನೂ ತಿಳಿದುಕೊಂಡಿಲ್ಲ, ಲಕ್ಷ್ಮೀ-ನಾರಾಯಣರನ್ನೂ ತಿಳಿದುಕೊಂಡಿಲ್ಲ. ಲಕ್ಷ್ಮೀ-ನಾರಾಯಣ,
ಬ್ರಹ್ಮಾ-ವಿಷ್ಣು-ಶಂಕರನನ್ನೂ ತಿಳಿದುಕೊಂಡಿಲ್ಲ. ಬ್ರಹ್ಮಾನಂತು ಇಲ್ಲಿದ್ದಾರೆ, ಇವರು ಪವಿತ್ರರಾಗಿ
ಶರೀರವನ್ನು ಬಿಟ್ಟುಹೋಗುತ್ತಾರೆ. ಈ ಹಳೆಯ ಪ್ರಪಂಚದಿಂದ ವೈರಾಗ್ಯವಿದೆ. ಇಲ್ಲಿಯ ಕರ್ಮಬಂಧನವು
ದುಃಖ ಕೊಡುವಂತಹದ್ದಾಗಿದೆ. ಈಗ ತಂದೆಯು ತಿಳಿಸುತ್ತಾರೆ- ಮಕ್ಕಳೇ, ತಮ್ಮ ಮನೆಗೆ ನಡೆಯಿರಿ, ಅಲ್ಲಿ
ದುಃಖದ ಹೆಸರು, ಗುರುತೂ ಇರುವುದಿಲ್ಲ. ಮೊದಲು ನೀವು ತಮ್ಮ ಮನೆಯಲ್ಲಿದ್ದಿರಿ ನಂತರ ರಾಜಧಾನಿಯಲ್ಲಿ
ಬಂದಿರಿ. ಈಗ ತಂದೆಯು ಪಾವನರನ್ನಾಗಿ ಮಾಡಲು ಪುನಃ ಬಂದಿದ್ದಾರೆ. ಈ ಸಮಯದಲ್ಲಿ ಮನುಷ್ಯರ
ಆಹಾರ-ಪಾನೀಯಗಳೆಲ್ಲವೂ ಎಷ್ಟೊಂದು ಕೊಳಕಾಗಿದೆ! ಎಂತೆಂತಹ ಪದಾರ್ಥಗಳನ್ನೂ ಸೇವಿಸುತ್ತಿರುತ್ತಾರೆ.
ಅಲ್ಲಿ ದೇವತೆಗಳು ಇಂತಹ ಕೊಳಕು ಪದಾರ್ಥಗಳನ್ನು ತಿನ್ನುವುದಿಲ್ಲ. ಭಕ್ತಿಮಾರ್ಗವು ನೋಡಿ ಹೇಗಿದೆ!
ಮನುಷ್ಯರನ್ನೂ ಬಲಿಕೊಡುತ್ತಾರೆ. ತಂದೆಯು ತಿಳಿಸುತ್ತಾರೆ- ಇದೂ ಸಹ ನಾಟಕದಲ್ಲಿ ಮಾಡಲ್ಪಟ್ಟಿದೆ.
ಹಳೆಯ ಪ್ರಪಂಚದಿಂದ ಹೊಸಪ್ರಪಂಚವು ಅವಶ್ಯವಾಗಿ ಬರಬೇಕಾಗಿದೆ. ನಾವು ಸತೋಪ್ರಧಾನರಾಗುತ್ತಿದ್ದೇವೆ
ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ಇದನ್ನಂತೂ ಬುದ್ಧಿಯು ತಿಳಿದುಕೊಳ್ಳುತ್ತದೆಯಲ್ಲವೆ.
ಇದರಲ್ಲಿ ಚಿತ್ರಗಳಿಲ್ಲದಿದ್ದರೆ ಇನ್ನೂ ಒಳ್ಳೆಯದು. ಇಲ್ಲವಾದರೆ ಮನುಷ್ಯರು ಬಹಳಷ್ಟು
ಪ್ರಶ್ನೆಗಳನ್ನು ಕೇಳುತ್ತಾರೆ. ತಂದೆಯು 84 ಜನ್ಮಗಳ ಚಕ್ರವನ್ನು ತಿಳಿಸಿದ್ದಾರೆ. ನಾವು ಈಗ
ಸೂರ್ಯವಂಶಿ, ಚಂದ್ರವಂಶಿ, ವೈಶ್ಯವಂಶಿಯರಾಗುತ್ತೇವೆ, ಇಷ್ಟು ಜನ್ಮಗಳನ್ನು ಪಡೆಯುತ್ತೇವೆ. ಇದು
ಬುದ್ಧಿಯಲ್ಲಿರಬೇಕಾಗಿದೆ. ನೀವು ಮಕ್ಕಳು ಸೂಕ್ಷ್ಮವತನದ ರಹಸ್ಯವನ್ನೂ ತಿಳಿದುಕೊಂಡಿದ್ದೀರಿ,
ಧ್ಯಾನದಲ್ಲಿ ಸೂಕ್ಷ್ಮವತನಕ್ಕೆ ಹೋಗುತ್ತೀರಿ ಆದರೆ ಇದರಲ್ಲಿ ಯೋಗವೂ ಇಲ್ಲ, ಜ್ಞಾನವೂ ಇಲ್ಲ. ಕೇವಲ
ಇದೊಂದು ಪದ್ಧತಿಯಾಗಿದೆ. ಹೇಗೆ ಆತ್ಮವನ್ನು ಕರೆಸುತ್ತಾರೆ, ನಂತರ ಆ ಆತ್ಮವು ಬಂದಾಗ ಅಳುತ್ತದೆ,
ನಾನು ತಂದೆಯ ಮಾತನ್ನು ಪಾಲಿಸಲಿಲ್ಲ ಎಂದು ಪಶ್ಚಾತ್ತಾಪವಾಗುತ್ತದೆ. ಇದೆಲ್ಲವೂ ಮಕ್ಕಳಿಗೆ
ತಿಳಿಸುವುದಕ್ಕೋಸ್ಕರ ಇದೆ, ಇದರಿಂದ ಮಕ್ಕಳು ಪುರುಷಾರ್ಥದಲ್ಲಿ ತೊಡಗಲಿ, ತಪ್ಪು ಮಾಡದಿರಲಿ ಎಂದು.
ಮಕ್ಕಳು ಸದಾ ಈ ಗಮನವನ್ನಿಡಿ- ನಾವು ನಮ್ಮ ಸಮಯವನ್ನು ಸಫಲ ಮಾಡಿಕೊಳ್ಳಬೇಕಾಗಿದೆ. ವ್ಯರ್ಥ
ಮಾಡಬಾರದು ಆಗ ಮಾಯೆಯು ನಮ್ಮಿಂದ ತಪ್ಪು ಮಾಡಿಸಲು ಸಾಧ್ಯವಿಲ್ಲ. ತಂದೆಯೂ ಸಹ ತಿಳಿಸುತ್ತಿರುತ್ತಾರೆ-
ಮಕ್ಕಳೇ, ಸಮಯವನ್ನು ವ್ಯರ್ಥ ಮಾಡಬೇಡಿ, ಅನೇಕರಿಗೆ ಮಾರ್ಗ ತಿಳಿಸುವ ಪುರುಷಾರ್ಥ ಮಾಡಿ,
ಮಹಾಧಾನಿಗಳಾಗಿ ತಂದೆಯನ್ನು ನೆನಪು ಮಾಡಿದ್ದೇ ಆದರೆ ವಿಕರ್ಮಗಳು ವಿನಾಶವಾಗುತ್ತವೆ. ಯಾರೆಲ್ಲಾ
ಬರುವರೋ ಅವರಿಗೆ ಇದನ್ನು ತಿಳಿಸಿಕೊಡಿ ಮತ್ತು 84 ಜನ್ಮಗಳ ಚಕ್ರವನ್ನು ತಿಳಿಸಿಕೊಡಿ. ವಿಶ್ವದ
ಚರಿತ್ರೆ-ಭೂಗೋಳವು ಹೇಗೆ ಪುನರಾವರ್ತನೆಯಾಗುತ್ತದೆಯೆಂದು ಸಾರರೂಪದಲ್ಲಿ ಇಡೀ ಚಕ್ರವು
ಬುದ್ಧಿಯಲ್ಲಿರಬೇಕು.
ನೀವು ಮಕ್ಕಳಿಗೆ
ಖುಷಿಯಿರಬೇಕು- ನಾವೀಗ ಈ ಕೊಳಕು ಪ್ರಪಂಚದಿಂದ ಬಿಡುಗಡೆಯಾಗುತ್ತೇವೆ, ಸ್ವರ್ಗ-ನರಕ ಇಲ್ಲಿಯೇ
ಇದೆಯೆಂದು ಮನುಷ್ಯರು ತಿಳಿಯುತ್ತಾರೆ. ಒಳ್ಳೆಯ ಕರ್ಮ ಮಾಡಿದ್ದಾರೆ ಆದ್ದರಿಂದ ಸುಖವು ಸಿಕ್ಕಿದೆ.
ನೀವೀಗ ಬಹಳ ಒಳ್ಳೆಯ ಕರ್ಮ ಮಾಡುತ್ತೀರಿ ಅದರಿಂದ 21 ಜನ್ಮಗಳಿಗಾಗಿ ನೀವು ಸುಖಪಡೆಯುತ್ತೀರಿ.
ಅವರಂತೂ ಒಂದು ಜನ್ಮಕ್ಕಾಗಿಯೇ ನಾವು ಸ್ವರ್ಗದಲ್ಲಿದ್ದೇವೆಂದು ತಿಳಿದುಕೊಳ್ಳುತ್ತಾರೆ. ತಂದೆಯು
ತಿಳಿಸುತ್ತಾರೆ- ಅದು ಅಲ್ಪಕಾಲದ ಸುಖವಾಗಿದೆ, ನಿಮ್ಮದು 21 ಜನ್ಮಗಳ ಸುಖವಾಗಿದೆ. ಇದಕ್ಕಾಗಿಯೇ
ತಂದೆಯು ತಿಳಿಸುತ್ತಾರೆ- ಎಲ್ಲರಿಗೆ ಮಾರ್ಗವನ್ನು ತಿಳಿಸುತ್ತಾ ಹೋಗಿ. ತಂದೆಯ ಮಾತಿನಿಂದಲೇ
ನಿರೋಗಿಗಳಾಗುತ್ತೀರಿ ಮತ್ತು ಸ್ವರ್ಗದ ಮಾಲೀಕರಾಗಿಬಿಡುತ್ತೀರಿ. ಸ್ವರ್ಗದಲ್ಲಿ ರಾಜ್ಯಭಾಗ್ಯವಿದೆ,
ಅದನ್ನೂ ನೆನಪು ಮಾಡಿ. ನಿಮಗೆ ರಾಜಧಾನಿಯಿತ್ತು, ಈಗಿಲ್ಲ. ಇದು ಭಾರತದ ಮಾತಾಗಿದೆ, ಉಳಿದೆಲ್ಲವೂ
ಶಾಖೆಗಳಾಗಿವೆ. ಕೊನೆಯಲ್ಲಿ ಎಲ್ಲರೂ ಹೊರಟುಹೋಗುತ್ತಾರೆ ನಂತರ ನಾವು ಹೊಸಪ್ರಪಂಚದಲ್ಲಿ ಹೋಗುತ್ತೇವೆ.
ಇದನ್ನು ತಿಳಿಸಿಕೊಡುವುದರಲ್ಲಿ ಚಿತ್ರಗಳ ಅವಶ್ಯಕತೆಯಿಲ್ಲ. ಈ ಮೂಲವತನ, ಸೂಕ್ಷ್ಮವತನವನ್ನು ಕೇವಲ
ತಿಳಿಸುವುದಕ್ಕಾಗಿ ತೋರಿಸುತ್ತಾರೆ, ಉಳಿದೆಲ್ಲಾ ಚಿತ್ರಗಳನ್ನು ಭಕ್ತಿಮಾರ್ಗದವರು ರಚಿಸಿದ್ದಾರೆ.
ಆದ್ದರಿಂದ ನಾವು ಅದನ್ನು ಪುನಃ ತಿದ್ದುಪಡಿ ಮಾಡಿಸಬೇಕಾಗುತ್ತದೆ. ಇಲ್ಲದಿದ್ದರೆ ನೀವು
ನಾಸ್ತಿಕರೆಂದು ಹೇಳುತ್ತಾರೆ ಆದ್ದರಿಂದಲೇ ಅದೇ ಚಿತ್ರಗಳನ್ನು ಸರಿಪಡಿಸಲಾಗಿದೆ. ಬಹ್ಮಾನ ಮೂಲಕ
ಸ್ಥಾಪನೆ, ಶಂಕರನ ಮೂಲಕ ವಿನಾಶ.... ವಾಸ್ತವದಲ್ಲಿ ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಯಾರೇನೂ
ಮಾಡುವುದಿಲ್ಲ, ವಿಜ್ಞಾನಿಗಳೂ ಸಹ ತಮ್ಮ ಬುದ್ಧಿಶಕ್ತಿಯಿಂದ ಇವೆಲ್ಲವನ್ನೂ ತಯಾರಿಸುತ್ತಾರೆ.
ಬಾಂಬುಗಳನ್ನು ತಯಾರು ಮಾಡಬೇಡಿ ಎಂದು ಯಾರು ಎಷ್ಟಾದರೂ ಹೇಳಲಿ ಆದರೆ ಯಾರ ಬಳಿ ಬಹಳಷ್ಟಿದೆಯೋ
ಅದನ್ನು ಸಮುದ್ರದಲ್ಲಿ ಹಾಕಿದಾಗ ಅನ್ಯರೂ ತಯಾರು ಮಾಡುವುದಿಲ್ಲ. ಅವರು ಇಟ್ಟುಕೊಂಡಿದ್ದರೆ
ಅವಶ್ಯವಾಗಿ ಅನ್ಯರೂ ತಯಾರು ಮಾಡುತ್ತಾರೆ. ಈಗ ನೀವು ಮಕ್ಕಳಿಗೆ ತಿಳಿದಿದೆ- ಸೃಷ್ಟಿಯ ವಿನಾಶವಂತೂ
ಅವಶ್ಯವಾಗಿ ಆಗಲೇಬೇಕಾಗಿದೆ. ಯುದ್ಧವೂ ಆಗುವುದಿದೆ. ವಿನಾಶವಾದ ನಂತರ ನೀವು ತಮ್ಮ ರಾಜ್ಯವನ್ನು
ಪಡೆಯುತ್ತೀರಿ, ಈಗ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಎಲ್ಲರ ಕಲ್ಯಾಣಕಾರಿಗಳಾಗಿ.
ಮಕ್ಕಳು ತಮ್ಮ ಶ್ರೇಷ್ಠ
ಅದೃಷ್ಟವನ್ನು ರೂಪಿಸಿಕೊಳ್ಳಲು ತಂದೆಯು ಶ್ರೀಮತ ಕೊಡುತ್ತಾರೆ- ಮಧುರ ಮಕ್ಕಳೇ, ತಮ್ಮ
ಸರ್ವಸ್ವವನ್ನೂ ಮಾಲೀಕನ ಹೆಸರಿನಲ್ಲಿ ಸಫಲ ಮಾಡಿಕೊಳ್ಳಿ. ಅಂತಿಮದಲ್ಲಿ ಕೆಲವರದು ಮಣ್ಣುಪಾಲಾಗುವುದು,
ಕೆಲವರದು ರಾಜರು ತಿನ್ನುವರು.... ಮಾಲೀಕನು (ತಂದೆ) ಸ್ವಯಂ ತಿಳಿಸುವರು- ಮಕ್ಕಳೇ, ಇದರಲ್ಲಿ ಖರ್ಚು
ಮಾಡಿ ಆತ್ಮಿಕ ಆಸ್ಪತ್ರೆಯನ್ನು ತೆರೆಯಿರಿ, ಇದರಿಂದ ಅನೇಕರ ಕಲ್ಯಾಣವಾಗುವುದು. ನೀವು ತಂದೆಯ
ಹೆಸರಿನಲ್ಲಿ ಖರ್ಚು ಮಾಡುತ್ತೀರೆಂದರೆ ಇದರ ಪ್ರತಿಫಲವು ನಿಮಗೆ 21 ಜನ್ಮಗಳಿಗಾಗಿ ಸಿಗುತ್ತದೆ. ಈ
ಪ್ರಪಂಚವೇ ಸಮಾಪ್ತಿಯಾಗಲಿದೆ ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಮಾಲೀಕನ ಹೆಸರಿನಲ್ಲಿ ಸಫಲ
ಮಾಡಿಕೊಳ್ಳಿ. ಮಾಲೀಕನು ಶಿವತಂದೆಯಾಗಿದ್ದಾರಲ್ಲವೆ. ಭಕ್ತಿಮಾರ್ಗದಲ್ಲಿಯೂ ಅವರ ಹೆಸರಿನ ಮೇಲೆ
ದಾನ-ಪುಣ್ಯ ಮಾಡುತ್ತಿದ್ದರು, ಈಗಂತೂ ಡೈರೆಕ್ಟ್ ಆಗಿದೆ. ಮಾಲೀಕ ತಂದೆಯ ಹೆಸರಿನಲ್ಲಿ
ದೊಡ್ಡ-ದೊಡ್ಡ ವಿಶ್ವವಿದ್ಯಾಲಯಗಳನ್ನು ತೆರೆಯುತ್ತಾ ಹೋಗಿ, ಇದರಿಂದ ಅನೇಕರ ಕಲ್ಯಾಣವಾಗುವುದು, 21
ಜನ್ಮಗಳಿಗಾಗಿ ರಾಜ್ಯಭಾಗ್ಯವನ್ನು ಪಡೆಯುತ್ತೀರಿ. ಇಲ್ಲದಿದ್ದರೆ ಈ ಹಣ-ಅಂತಸ್ತು ಎಲ್ಲವೂ
ಸಮಾಪ್ತಿಯಾಗಿಬಿಡುತ್ತದೆ. ಭಕ್ತಿಮಾರ್ಗದಲ್ಲಿ ಸಮಾಪ್ತಿಯಾಗುವುದಿಲ್ಲ, ಈಗಂತೂ ಸಮಾಪ್ತಿಯಾಗುವುದಿದೆ.
ನೀವೀಗ ಎಷ್ಟಾದರೂ ಖರ್ಚು ಮಾಡಿ ಪ್ರತಿಫಲವು ಸಿಗುವುದು. ತಂದೆಯ ಹೆಸರಿನಲ್ಲಿ ಎಲ್ಲರ ಕಲ್ಯಾಣ ಮಾಡಿ,
ಅದರಿಂದ 21 ಜನ್ಮಗಳ ಆಸ್ತಿಯು ಸಿಗುವುದು. ತಂದೆಯು ಎಷ್ಟು ಚೆನ್ನಾಗಿ ತಿಳಿಸಿಕೊಡುತ್ತಾರೆ! ಯಾರ
ಅದೃಷ್ಟದಲ್ಲಿದೆಯೋ ಅವರು ಈಶ್ವರಾರ್ಥವಾಗಿ ಖರ್ಚು ಮಾಡುತ್ತಿರುತ್ತಾರೆ. ತಮ್ಮ ಗೃಹಸ್ಥವನ್ನೂ
ಸಂಭಾಲನೆ ಮಾಡಬೇಕಾಗಿದೆ. ಇವರ (ಬ್ರಹ್ಮಾ) ಪಾತ್ರವೇ ಹೀಗಿತ್ತು, ಒಮ್ಮೆಲೆ ನಶೆಯೇರಿಬಿಟ್ಟಿತು.
ತಂದೆಯು ರಾಜ್ಯಭಾಗ್ಯವನ್ನೇ ಕೊಡುತ್ತಾರೆಂದರೆ ಇದೆಲ್ಲವೂ ಗುಲಾಮೀತನವಾಗಿದೆ. ಇದನ್ನೇನು ಮಾಡುವುದು
ಎಂದು ಅರ್ಥವಾಯಿತು. ನೀವೆಲ್ಲರೂ ರಾಜ್ಯಭಾಗ್ಯವನ್ನು ಪಡೆಯಲು ಕುಳಿತಿದ್ದೀರಿ ಅಂದಮೇಲೆ ಇವರನ್ನು
ಫಾಲೋ ಮಾಡಿ. ನಿಮಗೆ ತಿಳಿದಿದೆ- ಇವರು ಹೇಗೆ ಎಲ್ಲವನ್ನೂ ತ್ಯಜಿಸಿಬಿಟ್ಟರು, ನಶೆಯೇರಿಬಿಟ್ಟಿತು,
ಓಹೋ ರಾಜ್ಯಭಾಗ್ಯವು ಸಿಗುತ್ತದೆ! ಅಲೀಫನಿಗೆ ಅಲ್ಲಾ ಸಿಕ್ಕಿದರು, ಆಗ ಭಾಗೀಧಾರರಿಗೂ
ರಾಜ್ಯಭಾಗ್ಯವನ್ನು ಕೊಟ್ಟರು. ಹಾಗೆ ನೋಡಿದರೆ ಇವರಿಗೆ ಏನೂ ಕಡಿಮೆಯಿರಲಿಲ್ಲ, ರಾಜನಂತಿದ್ದರು.
ಒಳ್ಳೆಯ ವ್ಯಾಪಾರವಿತ್ತು, ಈಗ ನಿಮಗೆ ಈ ರಾಜ್ಯಭಾಗ್ಯವು ಸಿಗುತ್ತಿದೆ. ಇದರಿಂದ ಅನ್ಯರ
ಕಲ್ಯಾಣವಾಗಲಿದೆ. ಮೊದಲು ಆರಂಭದಲ್ಲಿ ಭಟ್ಟಿ ಮಾಡಿದಾಗ ಅದರಲ್ಲಿ ಕೆಲವರು ಪಕ್ಕಾ ತಯಾರಾದರು,
ಕೆಲವರು ಕಚ್ಚಾ ಆಗಿಯೇ ಉಳಿದುಕೊಂಡರು. ಸರ್ಕಾರವೂ ಸಹ ನೋಟುಗಳನ್ನು ತಯಾರು ಮಾಡುತ್ತದೆ. ಸರಿಯಾಗಿ
ತಯಾರಾಗಲಿಲ್ಲವೆಂದರೂ ಸರ್ಕಾರವು ಅದನ್ನು ಸುಟ್ಟುಹಾಕಬೇಕಾಗುತ್ತದೆ. ಮೊದಲಂತೂ ಬೆಳ್ಳಿಯ ನಾಣ್ಯಗಳು
ಚಲಾವಣೆಯಲ್ಲಿತ್ತು, ಚಿನ್ನ-ಬೆಳ್ಳಿಯು ಬಹಳ ಹೇರಳವಾಗಿತ್ತು, ಈಗಂತೂ ಏನಾಗಿದೆ! ಕೆಲವರದನ್ನು ರಾಜರು
ತಿಂದುಬಿಡುತ್ತಾರೆ, ಕೆಲವರದನ್ನು ಕಳ್ಳರು ಕದಿಯುತ್ತಾರೆ. ಎಷ್ಟೊಂದು ಕಳ್ಳತನಗಳಾಗುತ್ತವೆ,
ಬರಗಾಲವು ಬರುತ್ತದೆ. ಇದು ರಾವಣರಾಜ್ಯವಾಗಿದೆ. ಸತ್ಯಯುಗಕ್ಕೆ ರಾಮರಾಜ್ಯವೆಂದು ಹೇಳಲಾಗುತ್ತದೆ,
ತಂದೆಯು ತಿಳಿಸುತ್ತಾರೆ- ನಿಮ್ಮನ್ನು ಇಷ್ಟು ಶ್ರೇಷ್ಠರನ್ನಾಗಿ ಮಾಡಿದೆನು ಮತ್ತೆ ನೀವು ಹೇಗೆ
ಕಂಗಾಲಾರಾದಿರಿ. ಈಗ ನೀವು ಮಕ್ಕಳಿಗೆ ಎಷ್ಟೊಂದು ಜ್ಞಾನವು ಸಿಗುತ್ತಿದೆ ಅಂದಾಗ ಎಷ್ಟೊಂದು
ಖುಷಿಯಿರಬೇಕು! ದಿನ-ಪ್ರತಿದಿನ ಖುಷಿಯು ಹೆಚ್ಚುತ್ತಾಹೋಗುವುದು. ಯಾತ್ರೆಯಲ್ಲಿ ಎಷ್ಟು ಸಮೀಪ
ಹೋಗುತ್ತೀರೋ ಅಷ್ಟು ಖುಷಿಯಿರುವುದು. ನಿಮಗೆ ತಿಳಿದಿದೆ- ಶಾಂತಿಧಾಮ-ಸುಖಧಾಮವು ಸನ್ಮುಖದಲ್ಲಿ
ನಿಂತಿದೆ. ವೈಕುಂಠದ ವೃಕ್ಷವು ಕಂಡುಬರುತ್ತಿದೆ. ಈಗ ನಾವು ಹೋದೆವೆಂದರೆ ಹೋದೆವು. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಮ್ಮ
ಸಮಯವನ್ನು ಸಫಲ ಮಾಡಿಕೊಳ್ಳಲು ಗಮನವನ್ನಿಡಬೇಕಾಗಿದೆ. ಮಾಯೆಯು ತಪ್ಪು ಮಾಡಿಸದಿರಲಿ, ಇದಕ್ಕಾಗಿ
ಮಹಾದಾನಿಗಳಾಗಿ ಅನೇಕರಿಗೆ ಮಾರ್ಗ ತಿಳಿಸುವುದರಲ್ಲಿ ತತ್ಫರರಾಗಿರಬೇಕಾಗಿದೆ.
2 ತಮ್ಮ ಶ್ರೇಷ್ಠ
ಅದೃಷ್ಠವನ್ನು ರೂಪಿಸಿಕೊಳ್ಳಲು ದಣಿಯ ಹೆಸರಿನಲ್ಲಿ ಎಲ್ಲವನ್ನೂ ಸಫಲ ಮಾಡಿಕೊಳ್ಳಬೇಕಾಗಿದೆ.
ಈಶ್ವರೀಯ ವಿಶ್ವವಿದ್ಯಾಲಯವನ್ನು ತೆರೆಯಬೇಕು.
ವರದಾನ:
ಸರ್ವಶ್ರೇಷ್ಠ
ತಂದೆಯನ್ನು ಪ್ರತ್ಯಕ್ಷಗೊಳಿಸುವ ಶುಭ ಮತ್ತು ಶ್ರೇಷ್ಠ ಕರ್ಮಧಾರಿ ಭವ
ಹೇಗೆ ಬಲಭುಜದಿಂದ ಸದಾ
ಶುಭ ಮತ್ತು ಶ್ರೇಷ್ಠಕರ್ಮವನ್ನು ಮಾಡುತ್ತಾರೆ. ಹಾಗೆಯೇ ತಾವು ಬಲಭುಜಧಾರಿ ಮಕ್ಕಳು ಸದಾ ಶುಭ ಮತ್ತು
ಶ್ರೇಷ್ಠಕರ್ಮಧಾರಿ ಆಗಿರಿ, ತಮ್ಮ ಪ್ರತೀಕರ್ಮವು ಶ್ರೇಷ್ಠಾತಿಶ್ರೇಷ್ಠ ತಂದೆಯನ್ನು ಪ್ರತ್ಯಕ್ಷ
ಮಾಡುವಂತದ್ದಾಗಿರಲಿ ಏಕೆಂದರೆ ಕರ್ಮವೇ ಸಂಕಲ್ಪ ಅಥವ ಮಾತನ್ನು ಪ್ರತ್ಯಕ್ಷಪ್ರಮಾಣದ ರೂಪದಲ್ಲಿ
ಸ್ಪಷ್ಟಪಡಿಸುವಂತದ್ದಾಗಿದೆ. ಕರ್ಮವನ್ನು ಎಲ್ಲರೂ ನೋಡಬಹುದು, ಕರ್ಮದ ಮೂಲಕ ಅನುಭವ ಮಾಡಬಹುದು
ಆದ್ದರಿಂದ ಭಲೆ ಆತ್ಮಿಕದೃಷ್ಟಿಯ ಮೂಲಕ, ಭಲೆ ತಮ್ಮ ಖುಷಿಯ, ಆತ್ಮೀಯತೆಯ ಚಹರೆಯ ಮೂಲಕ ತಂದೆಯನ್ನು
ಪ್ರತ್ಯಕ್ಷಗೊಳಿಸಿರಿ- ಇದೂ ಸಹ ಕರ್ಮವೇ ಆಗಿದೆ.
ಸ್ಲೋಗನ್:
ಆತ್ಮೀಯತೆಯ
ಅರ್ಥವಾಗಿದೆ- ನಯನಗಳಲ್ಲಿ ಪವಿತ್ರತೆಯ ಹೊಳಪು ಮತ್ತು ಮುಖದಲ್ಲಿ ಪವಿತ್ರತೆಯ ಮುಗುಳ್ನಗೆಯಿರಲಿ.
ಅವ್ಯಕ್ತ ಸೂಚನೆ:
ಸಂಕಲ್ಪ ಶಕ್ತಿಯನ್ನು ಜಮಾ ಮಾಡಿ ಶ್ರೇಷ್ಠ ಸೇವೆಗೆ ನಿಮಿತ್ತವಾಗಿ
ಹೇಗೆ ಇತ್ತೀಚಿಗೆ
ಸೂರ್ಯನ ಶಕ್ತಿಯನ್ನು ಜಮಾ ಮಾಡಿ ಹಲವಾರು ಕೆಲಸಗಳನ್ನು ಸಫಲವಾಗಿ ಮಾಡುತ್ತಾರೆ, ಅದೇ ರೀತಿ ತಾವು
ಸಂಕಲ್ಪ ಶಕ್ತಿಯನ್ನು ಜಮಾ ಮಾಡಿ. ಆಗ ಅನ್ಯರಲ್ಲಿ ಸಹ ಬಲ ತುಂಬಬಹುದು, ಅನೇಕ ಕಾರ್ಯವನ್ನು ಸಫಲ
ಮಾಡಬಹುದು. ಯಾರು ಸಾಹಸಹೀನರಾಗಿದ್ದಾರೆ ಅವರಿಗೆ ವಾಣಿಯ ಜೊತೆ ಜೊತೆ ಶ್ರೇಷ್ಠ ಸಂಕಲ್ಪದ ಸೂಕ್ಷ್ಮ
ಶಕ್ತಿಯಿಂದ ಸಾಹಸವಂತರಾಗಿ ಮಾಡಿ, ಇದೇ ವರ್ತಮಾನ ಸಮಯದ ಅವಶ್ಯಕತೆಯಾಗಿದೆ.