01.08.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಂದೆಗೆ
ನೀವು ಮಕ್ಕಳೇ ಪ್ರಿಯರಾಗಿದ್ದೀರಿ, ತಂದೆಯು ನಿಮ್ಮನ್ನು ಸುಧಾರಣೆ ಮಾಡುವುದಕ್ಕಾಗಿಯೇ ಶ್ರೀಮತ
ಕೊಡುತ್ತಾರೆ, ಸದಾ ಈಶ್ವರೀಯ ಮತದಂತೆ ನಡೆದು ಸ್ವಯಂನ್ನು ಪವಿತ್ರವನ್ನಾಗಿ ಮಾಡಿಕೊಳ್ಳಿ.”
ಪ್ರಶ್ನೆ:
ವಿಶ್ವದಲ್ಲಿ
ಶಾಂತಿಯ ಸ್ಥಾಪನೆಯು ಯಾವಾಗ ಮತ್ತು ಯಾವ ವಿಧಿಯಿಂದ ಆಗುತ್ತದೆ?
ಉತ್ತರ:
ನಿಮಗೆ ತಿಳಿದಿದೆ
- ಮಹಾಭಾರತ ಯುದ್ಧದ ನಂತರವೇ ವಿಶ್ವದಲ್ಲಿ ಶಾಂತಿ ಸ್ಥಾಪನೆಯಾಗುತ್ತದೆ, ಆದರೆ ಅದಕ್ಕಾಗಿ ನೀವು
ಮೊದಲಿನಿಂದಲೇ ತಯಾರಾಗಬೇಕಾಗಿದೆ. ತಮ್ಮ ಕರ್ಮಾತೀತ ಸ್ಥಿತಿಯನ್ನು ಮಾಡಿಕೊಳ್ಳಲು ಪರಿಶ್ರಮ
ಪಡಬೇಕಾಗಿದೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಸ್ಮರಣೆ ಮಾಡಿ ತಂದೆಯ ನೆನಪಿನಿಂದ ಸಂಪೂರ್ಣ
ಪಾವನರಾಗಬೇಕು ಆಗಲೇ ಸೃಷ್ಟಿ ಪರಿವರ್ತನೆಯಾಗುವುದು.
ಗೀತೆ:
ಇಂದು
ಅಂಧಕಾರದಲ್ಲಿದ್ದಾರೆ ಮಾನವರು................
ಓಂ ಶಾಂತಿ.
ಈ ಗೀತೆಯು ಭಕ್ತಿಮಾರ್ಗದಲ್ಲಿ ಹಾಡಿರುವುದಾಗಿದೆ. ನಾವು ಅಂಧಕಾರದಲ್ಲಿದ್ದೇವೆ, ಈಗ ಜ್ಞಾನದ
ಮೂರನೆಯ ನೇತ್ರವನ್ನು ಕೊಡಿ ಎಂದು ಹೇಳುತ್ತಾರೆ. ಜ್ಞಾನ ಸಾಗರನಿಂದ ಜ್ಞಾನವನ್ನು ಕೇಳುತ್ತಾರೆ.
ಉಳಿದೆಲ್ಲವೂ ಅಜ್ಞಾನವಾಗಿದೆ. ಕಲಿಯುಗದಲ್ಲಿ ಎಲ್ಲರೂ ಅಜ್ಞಾನದ ಆಸುರೀ ನಿದ್ರೆಯಲ್ಲಿ ಮಲಗಿರುವ
ಕುಂಭಕರ್ಣರಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ಜ್ಞಾನವು ಬಹಳ ಸಹಜವಾಗಿದೆ. ಭಕ್ತಿಮಾರ್ಗದಲ್ಲಿ
ಎಷ್ಟೊಂದು ವೇದಶಾಸ್ತ್ರ ಇತ್ಯಾದಿಗಳನ್ನು ಓದುತ್ತಾರೆ, ಹಠಯೋಗ ಮಾಡುತ್ತಾರೆ. ಗುರುಗಳು
ಮೊದಲಾದವರನ್ನು ಮಾಡಿಕೊಳ್ಳುತ್ತಾರೆ ಆದರೆ ಈಗ ಅವೆಲ್ಲವನ್ನೂ ಬಿಡಬೇಕಾಗಿದೆ ಏಕೆಂದರೆ ಆ
ಗುರುಗಳೆಂದೂ ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ತಂದೆಯೇ ರಾಜ್ಯಭಾಗ್ಯವನ್ನು ಕೊಡುತ್ತಾರೆ.
ಮನುಷ್ಯರು ಮನುಷ್ಯರಿಗೆ ಕೊಡಲು ಸಾಧ್ಯವಿಲ್ಲ ಆದರೆ ಈ ಸುಖಕ್ಕಾಗಿಯೇ ಸನ್ಯಾಸಿಗಳು ಕಾಗವಿಷ್ಟ ಸಮಾನ
ಸುಖವೆಂದು ಹೇಳುತ್ತಾರೆ ಏಕೆಂದರೆ ತಾವು ಮನೆ-ಮಠವನ್ನು ಬಿಟ್ಟು ಕಾಡಿಗೆ ಓಡಿ ಹೋಗುತ್ತಾರೆ. ಈ
ಜ್ಞಾನವನ್ನು ಜ್ಞಾನ ಸಾಗರ ತಂದೆಯ ವಿನಃ ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಈ ರಾಜಯೋಗವನ್ನು
ಭಗವಂತನೇ ಕಲಿಸುತ್ತಾರೆ. ಮನುಷ್ಯರು ಮನುಷ್ಯರನ್ನು ಪಾವನರನ್ನಾಗಿ ಮಾಡಲು ಸಾಧ್ಯವಿಲ್ಲ.
ಪತಿತ-ಪಾವನನು ಒಬ್ಬರೇ ತಂದೆಯಾಗಿದ್ದಾರೆ, ಭಕ್ತಿಮಾರ್ಗದಲ್ಲಿ ಮನುಷ್ಯರು ಎಷ್ಟೊಂದು ಸಿಕ್ಕಿ
ಹಾಕಿಕೊಂಡಿದ್ದಾರೆ. ಜನ್ಮ-ಜನ್ಮಾಂತರದಿಂದ ಭಕ್ತಿ ಮಾಡುತ್ತಾ ಬಂದಿದ್ದಾರೆ, ಗಂಗೆಯಲ್ಲಿ ಸ್ನಾನ
ಮಾಡಲು ಹೋಗುತ್ತಾರೆ, ಕೇವಲ ಗಂಗಾ ನದಿಯಲ್ಲಿಯಷ್ಟೇ ಸ್ನಾನ ಮಾಡುವುದಲ್ಲ. ಎಲ್ಲಿ ನೀರಿನ ಕೊಳ,
ಸರೋವರ ಇತ್ಯಾದಿಗಳನ್ನು ನೋಡುವರೋ ಅದನ್ನೂ ಪತಿತ-ಪಾವನಿಯೆಂದು ತಿಳಿಯುತ್ತಾರೆ. ಇಲ್ಲಿಯೂ
ಗೋಮುಖವಿದೆ, ಝರಿಯಿಂದ ನೀರು ಬರುತ್ತದೆ. ಹೇಗೆ ಬಾವಿಯಲ್ಲಿ ನೀರು ಬಂದರೆ ಅದಕ್ಕೆ ಪತಿತ-ಪಾವನಿ
ಗಂಗೆಯೆಂದು ಹೇಳುವರು. ಇದೂ ಸಹ ತೀರ್ಥವಾಗಿದೆಯೆಂದು ಮನುಷ್ಯರು ತಿಳಿಯುತ್ತಾರೆ. ಮನುಷ್ಯರು ಬಹಳ
ಭಾವನೆಯಿಂದ ಹೋಗಿ ಅಲ್ಲಿ ಸ್ನಾನ ಇತ್ಯಾದಿಗಳನ್ನು ಮಾಡುತ್ತಾರೆ. ನೀವು ಮಕ್ಕಳಿಗೆ ಈಗ ಜ್ಞಾನವು
ಸಿಕ್ಕಿದೆ, ನೀವು ತಿಳಿಸುತ್ತೀರಿ ಆದರೂ ಸಹ ಅವರು ಒಪ್ಪುವುದಿಲ್ಲ. ನಾವು ಇಷ್ಟು ಶಾಸ್ತ್ರಗಳನ್ನು
ಓದಿದ್ದೇವೆ....... ಎಂದು ತಮ್ಮ ಅಹಂಕಾರವು ಬಹಳಷ್ಟಿದೆ. ತಂದೆಯು ತಿಳಿಸುತ್ತಾರೆ -
ಓದಿರುವುದೆಲ್ಲವನ್ನೂ ಈಗ ಮರೆತು ಹೋಗಿ. ಈಗ ಇವೆಲ್ಲಾ ಮಾತುಗಳ ಬಗ್ಗೆ ಮನುಷ್ಯರಿಗೆ ಹೇಗೆ
ತಿಳಿಯಬೇಕು? ಆದ್ದರಿಂದ ಇಂತಹ ಒಳ್ಳೊಳ್ಳೆಯ ಜ್ಞಾನ ಬಿಂದುಗಳನ್ನು ಬರೆದು ವಿಮಾನದ ಮೂಲಕ ಹಾಕಿಸಿ
ಎಂದು ತಂದೆಯು ತಿಳಿಸುತ್ತಾರೆ. ಹೇಗೆ ಇತ್ತೀಚೆಗೆ ವಿಶ್ವದಲ್ಲಿ ಶಾಂತಿ ಸ್ಥಾಪನೆ ಹೇಗಾಗುವುದೆಂದು
ಮನುಷ್ಯರು ಕೇಳುತ್ತಾರೆ. ಯಾರಾದರೂ ಸಲಹೆ ಕೊಟ್ಟರೆ ಸಾಕು ಅವರಿಗೆ ಬಹುಮಾನವು ಸಿಗುತ್ತಿರುತ್ತದೆ
ಆದರೆ ಅವರು ಶಾಂತಿಯ ಸ್ಥಾಪನೆಯನ್ನಂತೂ ಮಾಡಲು ಸಾಧ್ಯವಿಲ್ಲ. ಶಾಂತಿಯಾದರೂ ಎಲ್ಲಿದೆ? ಸುಳ್ಳು
ಬಹುಮಾನಗಳನ್ನು ಕೊಡುತ್ತಿರುತ್ತಾರೆ.
ಯುದ್ಧದ ನಂತರ
ವಿಶ್ವದಲ್ಲಿ ಶಾಂತಿ ಸ್ಥಾಪನೆಯಾಗುವುದೆಂದು ನೀವು ಮಕ್ಕಳಿಗೆ ತಿಳಿದಿದೆ. ಈ ಯುದ್ಧವು ಯಾವ
ಸಮಯದಲ್ಲಿ ಬೇಕಾದರೂ ಆಗಬಹುದು. ಇಂತಹ ತಯಾರಿಗಳೂ ಆಗಿವೆ, ಕೇವಲ ನೀವು ಮಕ್ಕಳದು ತಡವಾಗಿದೆ. ಯಾವಾಗ
ನೀವು ಮಕ್ಕಳು ಕರ್ಮಾತೀತ ಸ್ಥಿತಿಯನ್ನು ಪಡೆಯುವಿರೋ ಆಗ ಯುದ್ದವು ಆರಂಭವಾಗಿ ಬಿಡುತ್ತದೆ,
ಇದರಲ್ಲಿಯೇ ಪರಿಶ್ರಮವಿದೆ. ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ, ಮತ್ತು
ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಫ ಸಮಾನ ಪವಿತ್ರರಾಗಿ ಮತ್ತು ಸೃಷ್ಟಿಯ ಆದಿ-ಮಧ್ಯ-ಅಂತ್ಯದ
ಜ್ಞಾನವನ್ನು ಸ್ಮರಣೆ ಮಾಡುತ್ತಾ ಇರಿ. ನೀವು ಇದನ್ನೂ ಸಹ ಬರೆಯಬಹುದು - ಡ್ರಾಮಾನುಸಾರ ಕಲ್ಪದ
ಹಿಂದಿನ ತರಹ ವಿಶ್ವದಲ್ಲಿ ಶಾಂತಿ ಸ್ಥಾಪನೆಯಾಗುವುದು. ವಿಶ್ವ ಶಾಂತಿಯು ಸತ್ಯಯುಗದಲ್ಲಿಯೇ
ಇರುತ್ತದೆಯೆಂಬುದನ್ನೂ ಸಹ ನೀವು ತಿಳಿಸಬಹುದು. ಅಂದಮೇಲೆ ಇಲ್ಲಿ ಅವಶ್ಯವಾಗಿ ಅಶಾಂತಿಯಿದೆ ಆದರೆ
ಕೆಲವರು ಈ ನಿಮ್ಮ ಮಾತುಗಳ ಮೇಲೆ ವಿಶ್ವಾಸವನ್ನಿಡುವುದಿಲ್ಲ ಏಕೆಂದರೆ ಅವರು ಸ್ವರ್ಗದಲ್ಲಿ ಬರುವುದೇ
ಇಲ್ಲ ಆದ್ದರಿಂದ ಶ್ರೀಮತದಂತೆ ನಡೆಯುವುದಿಲ್ಲ. ಇಲ್ಲಿಯೂ ಸಹ ಅನೇಕ ಮಕ್ಕಳು ಶ್ರೀಮತದಂತೆ
ಪವಿತ್ರರಾಗಿರುವುದಿಲ್ಲ. ನಿಮಗೆ ಶ್ರೇಷ್ಠಾತಿ ಶ್ರೇಷ್ಠ ಭಗವಂತನ ಮತವು ಸಿಗುತ್ತದೆ. ಯಾರ
ಚಲನೆಯಾದರೂ ಸರಿಯಿಲ್ಲವೆಂದರೆ ನಿಮಗೆ ಈಶ್ವರನು ಒಳ್ಳೆಯ ಮತ ಕೊಡಲಿ ಎಂದು ಹೇಳುತ್ತಾರೆ. ನೀವೀಗ
ಈಶ್ವರೀಯ ಮತದಂತೆ ನಡೆಯಬೇಕು. 63 ಜನ್ಮಗಳಿಂದ ನೀವು ವಿಷಯ ಸಾಗರದಲ್ಲಿ ಮುಳುಗುತ್ತಾ ಬಂದಿದ್ದೀರಿ.
ತಂದೆಯು ಮಕ್ಕಳೊಂದಿಗೇ ಮಾತನಾಡುತ್ತಾರೆ. ಮಕ್ಕಳನ್ನೇ ತಂದೆಯು ಸುಧಾರಣೆ ಮಾಡುತ್ತಾರಲ್ಲವೆ. ಇಡೀ
ಪ್ರಪಂಚವನ್ನು ಹೇಗೆ ಮಾಡುವರು! ಹೊರಗಿನವರಿಗೂ ಸಹ ಬಂದು ಮಕ್ಕಳಿಂದ ತಿಳಿದುಕೊಳ್ಳಿ ಎಂದು
ಹೇಳುತ್ತಾರೆ. ತಂದೆಯು ಹೊರಗಿನವರೊಂದಿಗೆ ಮಾತನಾಡುವುದೂ ಇಲ್ಲ. ತಂದೆಗೆ ಮಕ್ಕಳೇ
ಪ್ರಿಯರೆನಿಸುತ್ತಾರೆ. ಮಲತಾಯಿ ಮಕ್ಕಳು ಪ್ರಿಯರೆನಿಸುವುದಿಲ್ಲ. ಲೌಕಿಕ ತಂದೆಯೂ ಸಹ ಸುಪುತ್ರರಿಗೆ
ಹಣವನ್ನು ಕೊಡುತ್ತಾರೆ, ಎಲ್ಲಾ ಮಕ್ಕಳೂ ಸಮಾನರಾಗಿರುವುದಿಲ್ಲ. ಹಾಗೆಯೇ ತಂದೆಯೂ ತಿಳಿಸುತ್ತಾರೆ -
ಯಾರು ನನ್ನವರಾಗುವರೋ ಅವರಿಗೇ ನಾನು ಆಸ್ತಿಯನ್ನು ಕೊಡುತ್ತೇನೆ. ಯಾರು ನನ್ನವರಾಗುವುದಿಲ್ಲವೋ ಅವರು
ಈ ಜ್ಞಾನವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಶ್ರೀಮತದಂತೆ ನಡೆಯಲೂ ಸಾಧ್ಯವಿಲ್ಲ. ಅವರು
ಭಕ್ತರಾಗಿದ್ದಾರೆ. ಈ ಬ್ರಹ್ಮಾರವರೂ ಸಹ ಬಹಳಷ್ಟು ನೋಡಿದ್ದಾರೆ. ಯಾರಾದರೂ ದೊಡ್ಡ ಸನ್ಯಾಸಿಯು
ಬರುತ್ತಾರೆಂದರೆ ಅವರಿಗೆ ಬಹಳ ಮಂದಿ ಅನುಯಾಯಿಗಳಿರುತ್ತಾರೆ. ಚಂದಾ ಹಣವನ್ನು ಕೂಡಿಡುತ್ತಾರೆ,
ತಮ್ಮ-ತಮ್ಮ ಖಾತೆಯನ್ನು ತೆಗೆಯುತ್ತಾರೆ. ಇಲ್ಲಂತೂ ತಂದೆಯು ಆ ರೀತಿ ಖಾತೆಯನ್ನು ಜಮಾ ಮಾಡಿ ಎಂದು
ಹೇಳುವುದಿಲ್ಲ. ಇಲ್ಲಂತೂ ಯಾವ ಬೀಜವನ್ನು ಬಿತ್ತುವಿರೋ 21 ಜನ್ಮಗಳ ಕಾಲ ಅದರ ಫಲವನ್ನು ಪಡೆಯುವಿರಿ.
ಮನುಷ್ಯರು ದಾನ ಮಾಡಿದರೆ ಈಶ್ವರಾರ್ಥವಾಗಿ ನಾವು ಮಾಡುತ್ತೇವೆಂದು ಹೇಳುತ್ತಾರೆ. ಈಶ್ವರ ಸಮರ್ಪಣಂ
ಎಂದು ಹೇಳುತ್ತಾರೆ ಅಥವಾ ಕೃಷ್ಣಾರ್ಪಣಂ ಎಂದು ಹೇಳುತ್ತಾರೆ. ಕೃಷ್ಣನ ಹೆಸರನ್ನು ಏಕೆ
ತೆಗೆದುಕೊಳ್ಳುತ್ತಾರೆ? ಏಕೆಂದರೆ ಗೀತೆಯ ಭಗವಂತನೆಂದು ತಿಳಿಯುತ್ತಾರೆ. ಶ್ರೀ ರಾಧಾರ್ಪಣಂ ಎಂದು
ಎಂದಿಗೂ ಹೇಳುವುದಿಲ್ಲ. ಈಶ್ವರ ಅಥವಾ ಕೃಷ್ಣಾರ್ಪಣಂ ಎಂದು ಹೇಳುತ್ತಾರೆ ಏಕೆಂದರೆ ಈಶ್ವರನೇ ಫಲ
ಕೊಡುವವರೆಂದು ಅವರಿಗೆ ತಿಳಿದಿದೆ. ಯಾರಾದರೂ ಸಾಹುಕಾರರ ಮನೆಯಲ್ಲಿ ಜನ್ಮ ಪಡೆಯುತ್ತಾರೆಂದರೆ
ಹೇಳುತ್ತಾರಲ್ಲವೆ, ಹಿಂದಿನ ಜನ್ಮದಲ್ಲಿ ಬಹಳ ದಾನ-ಪುಣ್ಯ ಮಾಡಿದ್ದಾರೆ ಆದ್ದರಿಂದ ಈ ರೀತಿಯಿದ್ದಾರೆ.
ರಾಜರಾಗಲೂ ಸಾಧ್ಯವಿದೆ ಆದರೆ ಅದು ಅಲ್ಪಕಾಲದ ಕಾಗವಿಷ್ಟ ಸಮಾನ ಸುಖವಾಗಿದೆ. ರಾಜರಿಗೂ ಸಹ ಸನ್ಯಾಸಿ
ಜನರು ಸನ್ಯಾಸ ಮಾಡಿಸುತ್ತಾರೆ ಆಗ ಅವರು ಹೇಳುತ್ತಾರೆ - ಸ್ತ್ರೀಯಂತೂ ಸರ್ಪಿಣಿಯಾಗಿದ್ದಾಳೆ ಆದರೆ
ದ್ರೌಪದಿಯೂ ಸಹ ದುಶ್ಯಾನಸನು ನನ್ನನ್ನು ಅವಮಾನಿತಳನ್ನಾಗಿ ಮಾಡುತ್ತಾನೆಂದು ಕೂಗಿದಳಲ್ಲವೆ. ಈಗಲೂ
ಸಹ ಅಬಲೆಯರು ಬಾಬಾ, ಇವರು ನಮ್ಮನ್ನು ಹೊಡೆಯುತ್ತಾರೆ, ನಮ್ಮನ್ನು ರಕ್ಷಣೆ ಮಾಡಿ ಎಂದು ಎಷ್ಟೊಂದು
ಕೂಗುತ್ತಾರೆ. ವಿಕಾರದ ಸಹಯೋಗ ಕೊಡಿ ಇಲ್ಲವೆಂದರೆ ಕೊಲೆ ಮಾಡುತ್ತೇನೆಂದು ಹೇಳುತ್ತಾರೆ. ಬಾಬಾ, ಈ
ಬಂಧನದಿಂದ ಬಿಡಿಸಿ ಎಂದು ಅಬಲೆಯರು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈ ಬಂಧನಗಳು
ಕಳೆಯಲೇಬೇಕಾಗಿದೆ ನಂತರ 21 ಜನ್ಮಗಳವರೆಗೆ ಎಂದೂ ಅಪವಿತ್ರರಾಗುವುದಿಲ್ಲ. ಅಲ್ಲಿ ವಿಕಾರವೇ
ಇರುವುದಿಲ್ಲ. ಈ ಮೃತ್ಯುಲೋಕದಲ್ಲಿ ಇದು ಅಂತಿಮ ಜನ್ಮವಾಗಿದೆ, ವಿಕಾರೀ ಪ್ರಪಂಚವಾಗಿದೆ.
ಎರಡನೆಯ ಮಾತೇನೆಂದರೆ
ತಂದೆಯು ತಿಳಿಸುತ್ತಾರೆ - ಈ ಸಮಯದಲ್ಲಿ ಮನುಷ್ಯರು ಎಷ್ಟೊಂದು ಬುದ್ಧಿಹೀನರಾಗಿ ಬಿಟ್ಟಿದ್ದಾರೆ,
ಯಾರಾದರೂ ಮರಣ ಹೊಂದಿದರೆ ಸ್ವರ್ಗಸ್ಥರಾದರೆಂದು ಹೇಳುತ್ತಾರೆ. ಆದರೆ ಸ್ವರ್ಗವೆಲ್ಲಿದೆ? ಇದಂತೂ
ನರಕವಾಗಿದೆ. ಸ್ವರ್ಗಸ್ಥರಾದರೆಂದರೆ ಅವಶ್ಯವಾಗಿ ನರಕದಲ್ಲಿದ್ದರೆಂದರ್ಥ. ಆದರೆ ಯಾರಿಗಾದರೂ ನೀವು
ನರಕವಾಸಿಗಳಾಗಿದ್ದೀರೆಂದು ನೇರವಾಗಿ ಹೇಳಿದರೆ ಕ್ರೋಧಿಗಳಾಗಿ ಬಿಡುತ್ತಾರೆ. ಆದ್ದರಿಂದ ನೀವು ಇದರ
ಬಗ್ಗೆ ಬರೆಯಬೇಕು - ಇಂತಹವರು ಸ್ವರ್ಗಸ್ಥರಾದರೆಂದರೆ ಅರ್ಥ ನೀವು ನರಕವಾಸಿಗಳಲ್ಲವೆ. ನಾವು ನಿಮಗೆ
ಇಂತಹ ಯುಕ್ತಿಯನ್ನು ತಿಳಿಸುತ್ತೇವೆ ಅದರಿಂದ ನೀವು ಸತ್ಯ-ಸತ್ಯವಾಗಿ ಸ್ವರ್ಗದಲ್ಲಿ ಹೋಗುವಿರಿ. ಈ
ಹಳೆಯ ಪ್ರಪಂಚವಂತೂ ಈಗ ಸಮಾಪ್ತಿಯಾಗುವುದಿದೆ. ಪತ್ರಿಕೆಯಲ್ಲಿಯೂ ಹಾಕಿಸಿ, ಈ ಯುದ್ಧದ ನಂತರ 5000
ವರ್ಷಗಳ ಹಿಂದಿನ ತರಹ ವಿಶ್ವದಲ್ಲಿ ಶಾಂತಿಯು ಸ್ಥಾಪನೆಯಾಗುವುದು. ಅಲ್ಲಿ ಒಂದೇ ಆದಿಸನಾತನ
ದೇವಿ-ದೇವತಾ ಧರ್ಮವಿತ್ತು. ಇದಕ್ಕೆ ಅವರು ಸತ್ಯಯುಗದಲ್ಲಿಯೂ ಕಂಸ, ಜರಾಸಂಧ ಮೊದಲಾದ ಅಸುರರಿದ್ದರು,
ತ್ರೇತಾಯುಗದಲ್ಲಿ ರಾವಣನಿದ್ದನೆಂದು ಹೇಳುತ್ತಾರೆ. ಈಗ ಅವರೊಂದಿಗೆ ತಲೆ ಕೆಡಿಸಿಕೊಳ್ಳುವವರು ಯಾರು?
ಜ್ಞಾನ ಮತ್ತು ಭಕ್ತಿಯಲ್ಲಿ ರಾತ್ರಿ-ಹಗಲಿನ ಅಂತರವಿದೆ. ಇಷ್ಟು ಸಹಜವಾದ ಮಾತೂ ಸಹ ಮನುಷ್ಯರ
ಬುದ್ಧಿಯಲ್ಲಿ ಕುಳಿತುಕೊಳ್ಳುವುದು ಕಷ್ಟವಾಗುತ್ತದೆ. ಇದರಿಂದ ಇಂತಹ ಸ್ಲೋಗನ್ಗಳನ್ನು ಬರೆಯಬೇಕು,
ಈ ಯುದ್ಧದ ನಂತರ ಡ್ರಾಮಾನುಸಾರ ವಿಶ್ವದಲ್ಲಿ ಶಾಂತಿ ಸ್ಥಾಪನೆಯಾಗಲಿದೆ. ಕಲ್ಪ-ಕಲ್ಪವೂ ವಿಶ್ವದಲ್ಲಿ
ಶಾಂತಿ ಸ್ಥಾಪನೆಯಾಗುತ್ತದೆ. ನಂತರ ಕಲಿಯುಗದ ಅಂತ್ಯದಲ್ಲಿ ಅಶಾಂತಿಯಾಗುತ್ತದೆ. ಸತ್ಯಯುಗದಲ್ಲಿಯೇ
ಶಾಂತಿಯಿರುತ್ತದೆ. ಇದನ್ನೂ ಸಹ ನೀವು ಬರೆಯಬಹುದು, ಗೀತೆಯಲ್ಲಿ ತಪ್ಪು ಮಾಡಿರುವುದರಿಂದಲೇ ಭಾರತದ
ಸ್ಥಿತಿಯು ಹೀಗಾಗಿದೆ. ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುವಂತಹ ಶ್ರೀಕೃಷ್ಣನ ಹೆಸರನ್ನು ಹಾಕಿ
ಬಿಟ್ಟಿದ್ದಾರೆ. ಶ್ರೀ ನಾರಾಯಣನ ಹೆಸರನ್ನೂ ಹಾಕಿಲ್ಲ. ನಾರಾಯಣನಿಗಾದರೂ 84 ಜನ್ಮಗಳಲ್ಲಿ ಕೆಲವು
ದಿನಗಳು ಕಡಿಮೆಯೆಂದೇ ಹೇಳಬಹುದಲ್ಲವೆ. ಕೃಷ್ಣನಿಗೆ ಪೂರ್ಣ 84 ಜನ್ಮಗಳಿವೆ. ಶಿವ ತಂದೆಯು
ಮಕ್ಕಳನ್ನು ವಜ್ರ ಸಮಾನರನ್ನಾಗಿ ಮಾಡಲು ಬರುತ್ತಾರೆ. ಅಂದಮೇಲೆ ಅವರು ಪ್ರವೇಶ ಮಾಡಲು ಅಂತಹ
ಚಿನ್ನದ ಸಮಾನ ಡಬ್ಬಿಯು ಬೇಕಲ್ಲವೆ. ಈಗ ಇವರು ಚಿನ್ನದ ಸಮಾನ ಹೇಗಾಗುವರು? ಆದ್ದರಿಂದ ತಂದೆಯು
ಬಂದಕೂಡಲೇ ನೀನು ವಿಶ್ವದ ಮಾಲೀಕನಾಗುತ್ತೀಯಾ, ಈಗ ನನ್ನೊಬ್ಬನನ್ನೇ ನೆನಪು ಮಾಡಿ ಪವಿತ್ರರಾಗಿ ಎಂದು
ಅವರಿಗೆ ಸಾಕ್ಷಾತ್ಕಾರ ಮಾಡಿಸಿದರು. ಆ ಕ್ಷಣದಿಂದಲೇ ತಂದೆಯು ಪವಿತ್ರರಾಗಿರಲು ತೊಡಗಿದರು.
ಪವಿತ್ರರಾಗದ ವಿನಃ ಜ್ಞಾನದ ಧಾರಣೆಯಾಗಲು ಸಾಧ್ಯವಿಲ್ಲ. ಸಿಂಹದ ಹಾಲಿಗೆ ಚಿನ್ನದ ಪಾತ್ರೆಯು ಬೇಕು.
ಇದಂತೂ ಪರಮಪಿತ ಪರಮಾತ್ಮನ ಜ್ಞಾನವಾಗಿದೆ, ಇದನ್ನು ಧಾರಣೆ ಮಾಡಿಕೊಳ್ಳಲು ಬುದ್ಧಿಯು ಚಿನ್ನದ
ಪಾತ್ರೆಯಾಗಬೇಕು. ಪವಿತ್ರರಾಗಿರಬೇಕು ಆಗಲೇ ಧಾರಣೆಯಾಗುವುದು. ಪವಿತ್ರತೆಯ ಪ್ರತಿಜ್ಞೆ ಮಾಡಿದ ಮೇಲೆ
ಮತ್ತೆ ಬೀಳುತ್ತಾರೆಂದರೆ ಯೋಗದ ಯಾತ್ರೆಯೇ ಸಮಾಪ್ತಿಯಾಗುವುದು, ಜ್ಞಾನವೂ ಸಮಾಪ್ತಿಯಾಗುತ್ತದೆ.
ಭಗವಾನುವಾಚ - ಕಾಮ ಮಹಾಶತ್ರುವೆಂದು ಅವರು ಯಾರಿಗೂ ಹೇಳಲು ಸಾಧ್ಯವಾಗುವುದಿಲ್ಲ. ಅವರ ಬಾಣವೇ
ನಾಟುವುದಿಲ್ಲ. ಅಂತಹವರು ಕೇವಲ ಪಂಡಿತರಾಗಿ ಬಿಡುತ್ತಾರೆ ಆದ್ದರಿಂದ ಈಗ ಯಾವುದೇ ವಿಕಾರವಿರಬಾರದು.
ನಿತ್ಯವೂ ಲೆಕ್ಕ ಪತ್ರವನ್ನಿಡಿ. ಹೇಗೆ ತಂದೆಯು ಸರ್ವಶಕ್ತಿವಂತನಾಗಿದ್ದಾರೆಯೋ ಹಾಗೆಯೇ ಮಾಯೆಯೂ ಸಹ
ಸರ್ವಶಕ್ತಿವಂತನಾಗಿದೆ, ಅರ್ಧಕಲ್ಪ ರಾವಣ ರಾಜ್ಯ ನಡೆಯುತ್ತದೆ. ತಂದೆಯ ವಿನಃ ಮತ್ತ್ಯಾರೂ ಇದರ ಮೇಲೆ
ಜಯವನ್ನು ಪ್ರಾಪ್ತಿ ಮಾಡಿಸಲು ಸಾಧ್ಯವಿಲ್ಲ. ಡ್ರಾಮಾನುಸಾರ ರಾವಣ ರಾಜ್ಯವು ಆಗಬೇಕಾಗಿದೆ. ಭಾರತದ
ಸೋಲು ಮತ್ತು ಗೆಲುವಿನ ಮೇಲೆ ಈ ನಾಟಕವು ಮಾಡಲ್ಪಟ್ಟಿದೆ. ತಂದೆಯು ಮಕ್ಕಳಿಗೇ ತಿಳಿಸುತ್ತಾರೆ.
ಮುಖ್ಯವಾದುದು ಪವಿತ್ರರಾಗುವ ಮಾತಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಪತಿತರನ್ನು
ಪಾವನರನ್ನಾಗಿ ಮಾಡಲು ಬರುತ್ತೇನೆ ಬಾಕಿ ಶಾಸ್ತ್ರಗಳಲ್ಲಿ ಕೌರವರು ಮತ್ತು ಪಾಂಡವರ ಯುದ್ಧ, ಜೂಜಾಟ
ಇತ್ಯಾದಿಗಳನ್ನು ತೋರಿಸಿದ್ದಾರೆ. ಇಂತಹ ಯಾವುದೇ ಮಾತಿರಲು ಸಾಧ್ಯವಿಲ್ಲ. ರಾಜಯೋಗದ ವಿದ್ಯೆಯು ಈ
ರೀತಿಯಿರುತ್ತದೆಯೇ? ಯುದ್ಧದ ಮೈದಾನದಲ್ಲಿ ಗೀತಾ ಪಾಠಶಾಲೆಯಿರುತ್ತದೆಯೇ? ಜನನ-ಮರಣರಹಿತನಾದ ಶಿವ
ತಂದೆಯೆಲ್ಲಿ! ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುವ ಶ್ರೀಕೃಷ್ಣನೆಲ್ಲಿ! ಅವರದೇ ಅಂತಿಮ
ಜನ್ಮದಲ್ಲಿ ತಂದೆಯು ಬಂದು ಪ್ರವೇಶ ಮಾಡುತ್ತಾರೆ. ಎಷ್ಟು ಸ್ಪಷ್ಟವಾಗಿದೆ! ಗೃಹಸ್ಥ
ವ್ಯವಹಾರದಲ್ಲಿರುತ್ತಾ ಪವಿತ್ರರೂ ಆಗಬೇಕಾಗಿದೆ. ಇಬ್ಬರೂ ಜೊತೆಯಲ್ಲಿದ್ದು ಪವಿತ್ರರಾಗಿರಲು
ಸಾಧ್ಯವಿಲ್ಲವೆಂದು ಸನ್ಯಾಸಿಗಳು ಹೇಳುತ್ತಾರೆ. ಅವರಿಗೆ ಹೇಳಿ, ನಿಮಗಂತೂ ಯಾವುದೇ
ಪ್ರಾಪ್ತಿಯಿಲ್ಲವೆಂದಮೇಲೆ ಹೇಗೆ ಪವಿತ್ರರಾಗಿರುತ್ತೀರಿ? ಇಲ್ಲಾದರೆ ವಿಶ್ವದ ರಾಜ್ಯಭಾಗ್ಯವು
ಸಿಗುತ್ತದೆ. ತಂದೆಯು ತಿಳಿಸುತ್ತಾರೆ - ಕುಲದ ಮರ್ಯಾದೆಯನ್ನಾದರೂ ಉಳಿಸಿ. ಶಿವ ತಂದೆಯು
ತಿಳಿಸುತ್ತಾರೆ - ಇವರ ದಾಡಿಗಾದರೂ ಬೆಲೆ ಕೊಡಿ. ಇದೊಂದು ಅಂತಿಮ ಜನ್ಮದಲ್ಲಿ ಪವಿತ್ರರಾಗಿರಿ ಆಗ
ಸ್ವರ್ಗದ ಮಾಲೀಕರಾಗುತ್ತೀರಿ. ತಮಗಾಗಿ ಪರಿಶ್ರಮ ಪಡುತ್ತೀರಿ. ಮತ್ತ್ಯಾರೂ ಸ್ವರ್ಗದಲ್ಲಿ ಬರಲು
ಸಾಧ್ಯವಿಲ್ಲ. ಈ ನಿಮ್ಮ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಇದರಲ್ಲಿ ಎಲ್ಲರೂ ಬೇಕಲ್ಲವೆ.
ಸತ್ಯಯುಗದಲ್ಲಿ ಮಂತ್ರಿಗಳಂತೂ ಇರುವುದಿಲ್ಲ. ರಾಜರಿಗೆ ಸಲಹೆಯ ಅವಶ್ಯಕತೆಯೇ ಇರುವುದಿಲ್ಲ. ಪತಿತ
ರಾಜರಿಗಾದರೂ ಒಬ್ಬ ಮಂತ್ರಿಯಿರುತ್ತಾರೆ. ಇಲ್ಲಿ ನೋಡಿ, ಎಷ್ಟೊಂದು ಮಂದಿ ಮಂತ್ರಿಗಳಿದ್ದಾರೆ,
ಪರಸ್ಪರ ಹೊಡೆದಾಡುತ್ತಿರುತ್ತಾರೆ. ತಂದೆಯು ಎಲ್ಲಾ ಜಂಜಾಟಗಳಿಂದ ಬಿಡಿಸುತ್ತಾರೆ. 3000
ವರ್ಷಗಳಕಾಲ ಯಾವುದೇ ಯುದ್ಧವು ನಡೆಯುವುದಿಲ್ಲ. ಜೈಲು ಇರುವುದಿಲ್ಲ. ನ್ಯಾಯಾಲಯವೂ ಇರುವುದಿಲ್ಲ.
ಅಲ್ಲಂತೂ ಸುಖವೇ ಸುಖವಿರುತ್ತದೆ, ಇದಕ್ಕಾಗಿ ಪುರುಷಾರ್ಥ ಮಾಡಬೇಕಾಗಿದೆ. ಮೃತ್ಯುವು ತಲೆಯ ಮೇಲೆ
ನಿಂತಿದೆ ಆದ್ದರಿಂದ ನೆನಪಿನ ಯಾತ್ರೆಯಿಂದ ವಿಕರ್ಮಾಜೀತರಾಗಬೇಕಾಗಿದೆ. ನೀವೇ
ಸಂದೇಶವಾಹಕರಾಗಿದ್ದೀರಿ. ಎಲ್ಲರಿಗೆ ತಂದೆಯ ಮನ್ಮನಾಭವದ ಸಂದೇಶವನ್ನು ಕೊಡುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಜ್ಞಾನದ
ಧಾರಣೆ ಮಾಡಿಕೊಳ್ಳಲು ಪವಿತ್ರರಾಗಿ. ಬುದ್ಧಿರೂಪಿ ಪಾತ್ರೆಯನ್ನು ಸ್ವಚ್ಛ ಮಾಡಿಕೊಳ್ಳಬೇಕಾಗಿದೆ.
ಕೇವಲ ನಾಮಮಾತ್ರ ಜ್ಞಾನಿಗಳಾಗಬಾರದು.
2. ಡೈರೆಕ್ಟ್ ತಂದೆಯ
ಮುಂದೆ ತಮ್ಮದೆಲ್ಲವನ್ನೂ ಅರ್ಪಣೆ ಮಾಡಿ ಶ್ರೀಮತದಂತೆ ನಡೆದು 21 ಜನ್ಮಗಳಿಗಾಗಿ ರಾಜ್ಯ ಪದವಿಯನ್ನು
ಪಡೆಯಬೇಕಾಗಿದೆ.
ವರದಾನ:
ಪ್ರತಿ
ಶಕ್ತಿಯನ್ನು ಕಾರ್ಯದಲ್ಲಿ ತೊಡಗಿಸಿ ವೃದ್ಧಿ ಮಾಡುವಂತಹ ಶ್ರೇಷ್ಠ ಧನವಂತ ಹಾಗೂ ತಿಳುವಳಿಕಸ್ತ ಭವ.
ತಿಳುವಳಿಕಸ್ತ ಮಕ್ಕಳು
ಪ್ರತಿ ಶಕ್ತಿಯನ್ನು ಕಾರ್ಯದಲ್ಲಿ ತೊಡಗಿಸುವಂತಹ ವಿಧಿಯನ್ನು ತಿಳಿದಿರುವರು. ಯಾರು ಎಷ್ಟು
ಶಕ್ತಿಗಳನ್ನು ಕಾರ್ಯದಲ್ಲಿ ತೊಡಗಿಸುವರು ಅಷ್ಟು ಅವರಲ್ಲಿ ಆ ಶಕ್ತಿಯ ವೃದ್ಧಿ ಪ್ರಾಪ್ತಿಯಾಗುವುದು.
ಆದ್ದರಿಂದ ಇಂತಹ ಈಶ್ವರೀಯ ಉಳಿತಾಯ ಯೋಜನೆಯನ್ನು ತಯಾರಿಸಿ ಯಾವುದರಿಂದ ವಿಶ್ವದ ಪ್ರತಿ ಆತ್ಮ
ನಿಮ್ಮ ಮೂಲಕ ಏನಾದರೂ ಒಂದು ಪ್ರಾಪ್ತಿ ಮಾಡಿಕೊಂಡು ನಿಮ್ಮ ಗುಣಗಾನವನ್ನು ಮಾಡಬೇಕು. ಎಲ್ಲರಿಗೂ
ಏನಾದರೂ ಒಂದು ಕೊಡಲೇ ಬೇಕು. ಇಲ್ಲ ಮುಕ್ತಿಯನ್ನಾದರೂ ಕೊಡಿ, ಇಲ್ಲಾ ಜೀವನ್ಮುಕ್ತಿಯನ್ನಾದರೂ ಕೊಡಿ.
ಈಶ್ವರೀಯ ಉಳಿತಾಯ ಯೋಜನೆಯನ್ನು ಮಾಡಿ ಸರ್ವ ಶಕ್ತಿಗಳ ಉಳಿತಾಯ ಮಾಡಿ ಜಮ ಮಾಡಿ ಮತ್ತು ಜಮಾ ಆಗಿರುವ
ಶಕ್ತಿಯ ಮೂಲಕ ಸರ್ವ ಆತ್ಮರುಗಳನ್ನು ಭಿಕಾರಿತನದಿಂದ, ದುಃಖ ಅಶಾಂತಿಗಳಿಂದ ಮುಕ್ತ ಮಾಡಿ.
ಸ್ಲೋಗನ್:
ಶುದ್ಧ
ಸಂಕಲ್ಪಗಳನ್ನು ತಮ್ಮ ಜೀವನದ ಅತೀ ಅಮೂಲ್ಯ ಖಜಾನೆಯನ್ನಾಗಿ ಮಾಡಿಕೊಂಡಾಗ ಮಾಲಾಮಾಲ್ ಆಗಿ ಬಿಡುವಿರಿ.
ಮಾತೇಶ್ವರೀಜಿಯವರ
ಅಮೂಲ್ಯ ಮಹಾವಾಕ್ಯ:-
“ಈಗ ವಿಕರ್ಮ
ಮಾಡುವುದರಲ್ಲಿ ಕಾಂಪಿಟೀಷನ್ ಮಾಡಬಾರದು”
ಮೊದಲು-ಮೊದಲು ನಿಮ್ಮ ಬಳಿ
ಈ ಗುರಿಯನ್ನು ಅವಶ್ಯವಾಗಿ ಇಟ್ಟುಕೊಳ್ಳಬೇಕು ನಮಗೆ ಯಾವುದೇ ರೀತಿಯಿಂದ ನಮ್ಮ ವಿಕಾರಗಳನ್ನು ವಶ
ಮಾಡಿಕೊಳ್ಳಬೇಕು, ಆಗಲೇ ಈಶ್ವರೀಯ ಸುಖ ಶಾಂತಿಯಲ್ಲಿರುತ್ತಾ ಬೇರೆಯವರನ್ನೂ ಸಹಾ ಶಾಂತಿಯಲ್ಲಿ ತನ್ನಿ,
ಇದರಲ್ಲಿ ಸಹನಶಕ್ತಿ ಖಂಡಿತ ಅವಶ್ಯಕವಾಗಿದೆ. ಎಲ್ಲವೂ ನಿಮ್ಮ ಮೇಲೆಯೇ ಅವಲಂಬಿತವಾಗಿದೆ, ಹೀಗಲ್ಲಾ
ಯಾರೋ ಏನೋ ಹೇಳಿದರು ಅದರಿಂದ ಅಶಾಂತಿಯಲ್ಲಿ ಬಂದು ಬಿಟ್ಟೆ, ಇಲ್ಲಾ. ಜ್ಞಾನದ ಮೊದಲ ಗುಣವಾಗಿದೆ
ಸಹನಶಕ್ತಿ ಧಾರಣೆ ಮಾಡುವುದು. ನೋಡಿ ಅಜ್ಞಾನ ಕಾಲದಲ್ಲಯೂ ಹೇಳುತ್ತಿದ್ದರು ಭಲೆ ಯಾರಾದರೂ ಎಷ್ಟೇ
ಬೈಗುಳ ಕೊಡಲಿ, ಹೀಗೆ ತಿಳಿಯಿರಿ ನನಗೆ ಎಲ್ಲಿ ತಟ್ಟಿತು? ಭಲೆ ಯಾರು ಬೈಗುಳ ಕೊಟ್ಟರು ಅವರು ಖುದ್ದು
ಅಶಾಂತಿಯಲ್ಲಿ ಬಂದು ಬಿಟ್ಟರು, ಅವರ ಲೆಕ್ಕಾಚಾರ ತಮ್ಮದೇ ಇರುತ್ತೆ. ಆದರೆ ನಾವೂ ಸಹಾ ಅಶಾಂತಿಯಲ್ಲಿ
ಬರುವುದು, ಅವರಿಗೆ ಏನಾದರೂ ಹೇಳಿದಲ್ಲಿ ಮತ್ತೆ ನಮ್ಮ ವಿಕರ್ಮ ಆಗುವುದು, ಆದ್ದರಿಂದ ವಿಕರ್ಮ
ಮಾಡುವ ಕಾಂಪಿಟೀಷನ್ ಮಾಡಬಾರದು. ನಾವಂತೂ ವಿಕರ್ಮವನ್ನು ಭಸ್ಮ ಮಾಡಬೇಕು ವಿನಹ ವಿಕರ್ಮ
ಮಾಡುವುದಲ್ಲ, ಇಂತಹ ವಿಕರ್ಮವಂತು ಜನ್ಮ ಜನ್ಮಾಂತರ ಮಾಡುತ್ತಾ ಬಂದೆವು ಮತ್ತು ದುಃಖವನ್ನೇ ಪಡುತ್ತಾ
ಬಂದೆವು. ಈಗಂತೂ ಜ್ಞಾನ ಸಿಗುತ್ತಿದೆ ಈ ಐದು ವಿಕಾರಗಳನ್ನು ಗೆಲ್ಲಿರಿ. ವಿಕಾರಗಳದ್ದೂ ಸಹಾ ದೊಡ್ಡ
ವಿಸ್ತಾರವಿದೆ, ಬಹಳ ಸೂಕ್ಷ್ಮ ರೀತಿಯಿಂದ ಬರುತ್ತದೆ. ಯಾವಾಗ ಈಷ್ರ್ಯೆ ಬಂದು ಬಿಡುತ್ತೆ ಆಗ
ಯೋಚಿಸುವಿರಿ ಇವನು ಹೀಗೆ ಮಾಡಿರುವುದರಿಂದ ನಾನು ಏಕೆ ಹೀಗೆ ಮಾಡಬಾರದು? ಇದಾಗಿದೆ ದೊಡ್ಡ ತಪ್ಪು.
ನೀವಂತು ತಪ್ಪು ಮಾಡದವರನ್ನಾಗಿ (ಅಬೂಲ್) ಮಾಡಬೇಕು, ಒಂದುವೇಳೆ ಯಾರಾದರೂ ಏನಾದರೂ ಹೇಳಿದರೆ ಹೀಗೆ
ತಿಳಿಯಿರಿ ಇದೂ ಸಹಾ ನನ್ನ ಪರೀಕ್ಷೆಯಾಗಿದೆ, ನನ್ನಲ್ಲಿ ಎಲ್ಲಿಯವರೆಗೆ ಸಹನಶಕ್ತಿ ಇದೆ? ಒಂದುವೇಳೆ
ಯಾರಾದರೂ ನಾನು ಬಹಳ ಸಹನೆ ಮಾಡಿದೆ, ಒಂದು ಬಾರಿಯಾದರೂ ರೋಷ ಬಂದಿತೆಂದರೆ ಕಡೆಯಲ್ಲ್ಲಿ ಫೇಲ್ ಆಗಿ
ಬಿಡುವೆನು. ಯಾರು ಹೇಳಿದರು ಅವರು ತನ್ನ ಸ್ಥಿತಿಯನ್ನು ಕೆಡಿಸಿಕೊಂಡರು ಆದರೆ ನಿಮಗಂತೂ ಸ್ಥಿತಿ
ಮಾಡಿಕೊಳ್ಳ ಬೇಕು, ವಿನಹ ಕೆಡಿಸುವುದಲ್ಲ ಆದ್ದರಿಂದ ಒಳ್ಳೆಯ ಪುರುಷಾರ್ಥ ಮಾಡಿ ಜನ್ಮ-ಜನ್ಮಾಂತರ
ಒಳ್ಳೆಯ ಪ್ರಾಲಬ್ಧ ಮಾಡಿಕೊಳ್ಳಬೇಕು. ಬಾಕಿ ಯಾರು ವಿಕಾರಗಳಿಗೆ ವಶರಾಗಿದ್ದಾರೆ ತಿಳಿಯಿರಿ ಅವರಲ್ಲಿ
ಭೂತ ಪ್ರವೇಶವಾಗಿದೆ, ಭೂತಗಳ ಭಾಷೆಯೆ ಈ ರೀತಿ ಇರುತ್ತೆ ಆದರೆ ಯಾರು ದೈವೀ ಸೋಲ್ಸ್ (ಆತ್ಮಗಳು)
ಇರುತ್ತಾರೆ, ಅವರ ಭಾಷೆ ದೈವಿಯಾಗೇ ಇರುವುದು. ಆದ್ದರಿಂದ ತಾವೀಗ ದೈವಿಗಳಾಗ ಬೇಕೆ ವಿನಹ ಅಸುರರಲ್ಲ.
ಒಳ್ಳೆಯದು. ಓಂ ಶಾಂತಿ.
ಅವ್ಯಕ್ತ ಸೂಚನೆ:-
ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.
ಪರಮಾತ್ಮನ ಪ್ರೀತಿಯ
ಅನುಭವಿಯಾಗಿರಿ ಆಗ ಈ ಅನುಭವದಿಂದ ಸಹಜಯೋಗಿಯಾಗಿ ಹಾರುತ್ತೀರುವಿರಿ. ಪರಮಾತ್ಮನ ಪ್ರೀತಿ ಹಾರುವ
ಸಾಧನವಾಗಿದೆ. ಹಾರುವವರು ಎಂದೂ ಧರಣಿಯ ಆಕರ್ಷಣೆಯಲ್ಲಿ ಬರಲು ಸಾಧ್ಯವಿಲ್ಲ. ಮಾಯೆಯ ಎಷ್ಟೇ
ಆಕರ್ಷಿತ ರೂಪವಿರಲಿ ಆದರೆ ಆ ಆಕರ್ಷಣೆ ಹಾರುವ ಕಲೆಯಲ್ಲಿರುವವರ ಹತ್ತಿರ ತಲುಪಲು ಸಾಧ್ಯವಿಲ್ಲ.