01.12.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ – ಪ್ರತಿ
ದಿನ ವಿಚಾರ ಸಾಗರ ಮಂಥನ ಮಾಡಿದಾಗ ಅಪಾರವಾದ ಖುಷಿ ಏರಿರುತ್ತದೆ, ನಡೆಯುತ್ತಾ-ತಿರುಗಾಡುತ್ತಾ
ನೆನಪಿರಲಿ ನಾನು ಸ್ವದರ್ಶನ ಚಕ್ರದಾರಿಯಾಗಿರುವೆ ಎಂದು”
ಪ್ರಶ್ನೆ:
ತಮ್ಮ ಉನ್ನತಿ
ಮಾಡಿಕೊಳ್ಳಲು ಸಹಜ ಸಾಧನ ಯಾವುದಾಗಿದೆ ?
ಉತ್ತರ:
ತಮ್ಮ
ಉನ್ನತಿಗಾಗಿ ಪ್ರತಿದಿನ ಚಾರ್ಟ್ ಇಡಿ. ಚೆಕ್ ಮಾಡಿ-ಇಂದು ಇಡೀ ದಿನ ಯಾವುದೇ ಆಸುರಿ ಕೆಲಸವಂತೂ
ಮಾಡಲಿಲ್ಲ ತಾನೆ? ಹೇಗೆ ವಿಧ್ಯಾರ್ಥಿ ತನ್ನ ರಿಜಿಸ್ಟರ್ ಇಡುತ್ತಾನೆ, ಅದೇ ರೀತಿ ನೀವು ಮಕ್ಕಳೂ ಸಹ
ದೈವೀ ಗುಣಗಳ ರಿಜಿಸ್ಟರ್ ಇಡಿ ಆಗ ಉನ್ನತಿಯಾಗುತ್ತಿರುವುದು.
ಗೀತೆ:
ದೂರ್ ದೇಶ್ ಕೆ
ರೆಹನೇವಾಲೆ........(ದೂರ ದೇಶದಲ್ಲಿರುವವರು....)
ಓಂ ಶಾಂತಿ.
ಮಕ್ಕಳಿಗೆ ಗೊತ್ತಿದೆ ದೂರ ದೇಶವೆಂದು ಯಾವುದಕ್ಕೆ ಹೇಳಲಾಗುವುದು ಎಂದು. ಪ್ರಪಂಚದ ಒಬ್ಬ
ಮನುಷ್ಯನಿಗೂ ಇದು ಗೊತ್ತಿಲ್ಲ. ಭಲೇ ಎಷ್ಟೇ ದೊಡ್ಡ ವಿಧ್ವಾನ್ ಇರಬಹುದು, ಪಂಡಿತ ಇರಬಹುದು ಇದರ
ಅರ್ಥ ತಿಳಿದಿಲ್ಲ ನೀವು ಮಕ್ಕಳು ತಿಳಿದಿರುವಿರಿ. ತಂದೆ, ಯಾರನ್ನು ಎಲ್ಲಾ ಮನುಷ್ಯ ಮಾತ್ರರೂ ನೆನಪು
ಮಾಡುತ್ತಾರೆ ಹೇ! ಭಗವಂತ.... ಅವರು ಖಂಡಿತ ಮೇಲೆ ಮೂಲವತನದಲ್ಲಿದ್ದಾರೆ, ಮತ್ತು ಯಾರಿಗೂ ಸಹ ಇದರ
ಬಗ್ಗೆ ಗೊತ್ತಿಲ್ಲ. ಈ ಡ್ರಾಮದ ರಹಸ್ಯವನ್ನು ಸಹಾ ಈಗ ನೀವು ಮಕ್ಕಳು ತಿಳಿದಿರುವಿರಿ.
ಪ್ರಾರಂಭದಿಂದ ಇಲ್ಲಿಯವರೆಗೆ ಏನಾಯಿತು, ಏನಾಗಬೇಕು, ಎಲ್ಲವೂ ಬುದ್ಧಿಯಲ್ಲಿದೆ. ಈ ಸೃಷ್ಠಿಚಕ್ರ
ಹೇಗೆ ಸುತ್ತುತ್ತದೆ, ಇದು ಬುದ್ದಿಯಲ್ಲಿರಬೇಕಲ್ಲವೇ. ನೀವು ಮಕ್ಕಳಲ್ಲಿಯೂ ನಂಬರ್ವಾರ್
ತಿಳಿದಿರುವಿರಿ. ವಿಚಾರ ಸಾಗರ ಮಂಥನ ಮಾಡುವುದಿಲ್ಲ ಆದ್ದರಿಂದ ಅಪಾರ ಖುಶಿ ಏರಿರುವುದಿಲ್ಲ.
ಏಳುತ್ತಾ-ಕುಳಿತುಕೊಳ್ಳುತ್ತಾ ಬುದ್ಧಿಯಲ್ಲಿರಬೇಕು ನಾನು ಸ್ವದರ್ಶನ ಚಕ್ರಧಾರಿಯಾಗಿದ್ದೇನೆ.
ಆದಿಯಿಂದ ಅಂತ್ಯದವರೆಗೆ ನಾನು ಆತ್ಮನಿಗೆ ಇಡೀ ಸೃಷ್ಠಿಚಕ್ರದ ಬಗ್ಗೆ ಅರ್ಥವಾಯಿತು. ಭಲೆ ನೀವು
ಇಲ್ಲಿ ಕುಳಿತಿರುವಿರಿ, ಬುದ್ಧಿಯಿಂದ ಮೂಲವತನ ನೆನಪಿಗೆ ಬರುವುದು. ಅದಾಗಿದೆ ಮಧುರ ಶಾಂತಿಯ ಮನೆ,
ನಿರ್ವಾಣಧಾಮ, ಶಾಂತಿಧಾಮ, ಎಲ್ಲಿ ಆತ್ಮರುಗಳು ಇರುತ್ತಾರೆ. ನೀವು ಮಕ್ಕಳ ಬುದ್ಧಿಗೆ ತಕ್ಷಣ ಬಂದು
ಬಿಡುತ್ತದೆ, ಮತ್ತು ಯಾರಿಗೂ ಗೊತ್ತಿಲ್ಲ. ಭಲೇ ಎಷ್ಟೇ ಶಾಸ್ತ್ರ ಇತ್ಯಾದಿ ಓದಿ, ಕೇಳುತ್ತಿರಬಹುದು,
ಲಾಭ ಏನೂ ಇಲ್ಲ. ಅದೆಲ್ಲವೂ ಇಳಿಯುವ ಕಲೆಯಾಗಿದೆ. ನೀವು ಈಗ ಏರುತ್ತಿರುವಿರಿ. ವಾಪಸ್ಸು ಹೋಗಲು
ಖುದ್ದಾಗಿ ತಯಾರಿ ಮಾಡಿಕೊಳ್ಳುತ್ತಿರುವಿರಿ. ಈ ಹಳೆಯ ವಸ್ತ್ರವನ್ನು ಬಿಟ್ಟು ನಾವು ಮನೆಗೆ
ಹೋಗಬೇಕಾಗಿದೆ. ಖುಶಿಯಿರುವುದಲ್ಲವೇ! ಮನೆಗೆ ಹೋಗಲು ಅರ್ಧಕಲ್ಪ ಭಕ್ತಿ ಮಾಡಿರುವಿರಿ. ಏಣಿ
ಇಳಿಯುತ್ತಲೇ ಬಂದಿರಿ. ಈಗ ಬಾಬಾ ನಮಗೆ ಸಹಜವಾಗಿ ತಿಳಿಸುತ್ತಾರೆ. ನೀವು ಮಕ್ಕಳಿಗೆ ಖುಷಿ ಆಗಬೇಕು.
ಬಾಬಾ ಭಗವಂತ ನಮಗೆ ಓದಿಸುತ್ತಿದ್ದಾರೆ-ಈ ಖುಷಿ ಬಹಷ್ಟಿರಬೇಕು. ತಂದೆ ಸಮ್ಮುಖದಲ್ಲಿ
ಓದಿಸುತ್ತಿದ್ದಾರೆ. ಬಾಬಾ ಯಾರು ಎಲ್ಲರ ತಂದೆಯಾಗಿದ್ದಾರೆ, ಅವರು ನಮಗೆ ಪುನಃ ಓದಿಸುತ್ತಿದ್ದಾರೆ.
ಅನೇಕ ಬಾರಿ ಓದಿಸಿದ್ದಾರೆ. ಯಾವಾಗ ನೀವು ಚಕ್ರ ಸುತ್ತಿ ಪೂರ್ತಿ ಮಾಡುವಿರಿ ಆಗ ಪುನಃ ತಂದೆ
ಬರುತ್ತಾರೆ. ಈ ಸಮಯ ನೀವಾಗಿರುವಿರಿ ಸ್ವದರ್ಶನ ಚಕ್ರಧಾರಿ. ನೀವು ವಿಷ್ಣು ಪುರಿಯ ದೇವತೆಗಳಾಗಲು
ಪುರುಷಾರ್ಥ ಮಾಡುತ್ತಿರುವಿರಿ. ಪ್ರಪಂಚದಲ್ಲಿ ಬೇರೆಯಾರೂ ಸಹಾ ಈ ಜ್ಞಾನ ಕೊಡಲು ಸಾಧ್ಯವಿಲ್ಲ.
ಶಿವಬಾಬಾ ನಮಗೆ ಓದಿಸುತ್ತಿದ್ದಾರೆ, ಈ ಖುಷಿ ಎಷ್ಟಿರಬೇಕು. ಮಕ್ಕಳಿಗೆ ತಿಳಿದಿದೆ ಈ ಶಾಸ್ತ್ರ
ಇತ್ಯಾದಿ ಎಲ್ಲಾ ಭಕ್ತಿಮಾರ್ಗದ್ದಾಗಿದೆ, ಇದು ಸದ್ಗತಿಗಾಗಿ ಅಲ್ಲ. ಭಕ್ತಿಮಾರ್ಗದ ಸಾಮಗ್ರಿ ಸಹಾ
ಬೇಕಲ್ಲವೇ. ಅಪಾರವಾದ ಸಾಮಗ್ರಿಯಿದೆ. ತಂದೆ ಹೇಳುತ್ತಾರೆ ಇದರಿಂದ ನೀವು ಬೀಳುತ್ತಾ ಬಂದಿರಿ. ಎಷ್ಟು
ಮನೆ-ಮನೆ ಅಲೆಯುತ್ತಾ ಬಂದಿರಿ. ಈಗ ನೀವು ಶಾಂತವಾಗಿ ಕುಳಿತುಕೊಂಡಿರುವಿರಿ. ನೀವು ಹೊಡೆತ
ತಿನ್ನುವುದೆಲ್ಲಾ ಬಿಟ್ಟು ಹೋಯಿತು. ತಿಳಿದಿರುವಿರೆಲ್ಲಾ ಬಾಕಿ ಸ್ವಲ್ಪ ಸಮಯ ಉಳಿದಿದೆ, ಆತ್ಮಕ್ಕೆ
ಪವಿತ್ರವಾಗಲು ತಂದೆ ಅದೇ ಮಾರ್ಗ ಹೇಳುತ್ತಿದ್ದಾರೆ. ನನ್ನನ್ನು ನೆನಪು ಮಾಡಿ ಆಗ ನೀವು
ತಮೋಪ್ರಧಾನರಿಂದ ಸತೋ ಪ್ರಧಾನರಾಗುವಿರಿ ನಂತರ ಸತೋಪ್ರಧಾನ ಪ್ರಪಂಚದಲ್ಲಿ ಬಂದು ರಾಜ್ಯ ಮಾಡುವಿರಿ.
ಈ ಮಾರ್ಗವನ್ನು ಕಲ್ಪ-ಕಲ್ಪ ಅನೇಕ ಬಾರಿ ತಂದೆ ತಿಳಿಸಿದ್ದಾರೆ. ನಂತರ ನಿಮ್ಮ ಅವಸ್ಥೆಯನ್ನೂ ಸಹಾ
ನೋಡಬೇಕು, ವಿಧ್ಯಾರ್ಥಿ ಪುರುಷಾರ್ಥ ಮಾಡಿ ತನ್ನನ್ನು ಬುದ್ಧಿವಂತನನ್ನಾಗಿ ಮಾಡಿಕೊಳ್ಳುತ್ತಾನಲ್ಲವೆ.
ವಿದ್ಯೆಯದೂ ಸಹಾ ರಿಜಿಸ್ಟರ್ ಇರುವುದು ಮತ್ತು ಚಲನೆಯದೂ (ಕ್ಯಾರೆಕ್ಟರ್) ಸಹ ರೆಜಿಸ್ಟರ್ ಇರುವುದು.
ಇಲ್ಲಿಯೂ ಸಹಾ ದೈವಿ ಗುಣ ಧಾರಣೆ ಮಾಡಬೇಕು. ಪ್ರತಿ ದಿನ ನಿಮ್ಮ ಚಾರ್ಟ್ ಇಡಬೇಕು ಬಹಳ
ಉನ್ನತಿಯಾಗುವುದು-ಇಂದು ಇಡೀದಿನ ಯಾವುದೇ ಆಸುರಿ ಕೆಲಸವಂತೂ ಮಾಡಲಿಲ್ಲ ತಾನೆ? ನಾನಂತೂ
ದೇವತೆಯಾಗಬೇಕು. ಲಕ್ಷ್ಮಿ-ನಾರಾಯಣರ ಚಿತ್ರ ಎದುರಿಗೆ ಇಟ್ಟಿದೆ. ಎಷ್ಟು ಸಾಧಾರಣ ಚಿತ್ರವಾಗಿದೆ.
ಮೇಲೆ ಶಿವಬಾಬಾ ಇದ್ದಾರೆ. ಪ್ರಜಾಪಿತ ಬ್ರಹ್ಮಾನ ಮುಖಾಂತರ ಈ ಆಸ್ತಿಯನ್ನು ಕೊಡುತ್ತಾರೆ ಎಂದಾಗ
ಖಂಡಿತ ಸಂಗಮದಲ್ಲಿ ಬ್ರಾಹ್ಮಣ-ಬ್ರಾಹ್ಮಣಿಯರು ಇರಬೇಕಲ್ಲವೆ. ದೇವತೆಗಳು ಇರುತ್ತಾರೆ ಸತ್ಯಯುಗದಲ್ಲಿ.
ಬ್ರಾಹ್ಮಣರಿರುತ್ತಾರೆ ಸಂಗಮದಲ್ಲಿ. ಕಲಿಯುಗದಲ್ಲಿ ಶೂದ್ರ ವರ್ಣದವರಿದ್ದಾರೆ. ವಿರಾಠ ರೂಪ ಸಹಾ
ಬುದ್ಧಿಯಲ್ಲಿ ಧಾರಣೆ ಮಾಡಿ. ನಾವು ಈಗ ಬ್ರಾಹಣರು ಶಿಖೆ, ನಂತರ ದೇವತೆಗಳಾಗುತ್ತೇವೆ. ತಂದೆ
ಬ್ರಾಹ್ಮಣರಿಗೆ ಓದಿಸುತ್ತಿದ್ದಾರೆ ದೇವತೆಗಳನ್ನಾಗಿ ಮಾಡುವುದಕ್ಕಾಗಿ. ಆದ್ದರಿಂದ ದೈವಿ ಗುಣವನ್ನೂ
ಸಹಾ ಧಾರಣೆ ಮಾಡಬೇಕಿದೆ, ಇಷ್ಟು ಮಧುರರಾಗಬೇಕಾಗಿದೆ. ಯಾರಿಗೂ ದುಃಖ ಕೊಡಬಾರದು. ಹೇಗೆ ಶರೀರ
ನಿರ್ವಾಹಣೆಗಾಗಿ ಏನಾದರೂ ಕಾರ್ಯ ಮಾಡಲಾಗುತ್ತದೆ, ಹಾಗೆಯೇ ಇಲ್ಲೂ ಸಹ ಯಜ್ಞ ಸೇವೆ ಮಾಡಬೇಕು.
ಯಾರಾದರೂ ಖಾಯಿಲೆ ಇದ್ದರೆ, ಸೇವೆ ಮಾಡಲಾಗದಿದ್ದರೆ ಮತ್ತೆ ಅವರ ಸೇವೆ ಮಾಡಬೇಕಾಗುತ್ತದೆ. ತಿಳಿಯಿರಿ
ಈಗ ಯಾರಾದರೂ ಖಾಯಿಲೆ ಇದ್ದಾರೆ, ಶರೀರ ಬಿಟ್ಟು ಬಿಡುತ್ತಾರೆ, ನೀವು ದುಃಖಿಗಳಾಗುವ ಅಥವಾ ಅಳುವ
ಮಾತಿಲ್ಲ. ನಿವಂತೂ ಪೂರ್ತಿ ಶಾಂತಿಯಲ್ಲಿ ಬಾಬಾ ಅವರ ನೆನಪಿನಲ್ಲಿರಬೇಕು. ಏನೂ ಶಬ್ಧ
ಮಾಡುವಹಾಗಿಲ್ಲ. ಅಲ್ಲಂತು ಸ್ಮಶಾನಕ್ಕೆ ತೆಗೆದುಕೊಂಡು ಹೋಗುತ್ತಾರೆಂದರೆ ಶಬ್ಧ ಮಾಡುತ್ತಾ
ಹೋಗುತ್ತಾರೆ ರಾಮ್ ನಾಮ್ ಸತ್ ಹೈ. ನೀವು ಏನೂ ಹೇಳುವಹಾಗಿಲ್ಲ. ನೀವು ಶಾಂತಿಯಿಂದ ವಿಶ್ವದ ಮೇಲೆ
ವಿಜಯವನ್ನು ಪಡಯುವಿರಿ. ಅವರದಾಗಿದೆ ವಿಜ್ಞಾನ (ಸೈನ್ಸ್), ನಿಮ್ಮದಾಗಿದೆ ಶಾಂತಿ (ಸೈಲೆನ್ಸ್).
ನೀವು ಮಕ್ಕಳು ಜ್ಞಾನ
ಮತ್ತು ವಿಜ್ಞಾನದ ಯಥಾರ್ಥ ಅರ್ಥವನ್ನೂ ಸಹಾ ತಿಳಿದುಕೊಂಡಿರುವಿರಿ. ಜ್ಞಾನವಾಗಿದೆ ತಿಳುವಳಿಕೆ
ವಿಜ್ಞಾನವಾಗಿದೆ ಎಲ್ಲವನ್ನೂ ಮರೆಯುವುದು, ಜ್ಞಾನದಿಂದಲೂ ದೂರ. ಹಾಗಾದರೆ ಜ್ಞಾನವೂ ಇದೆ,
ವಿಜ್ಞಾನವೂ ಇದೆ. ಆತ್ಮ ತಿಳಿದಿದೆ ನಾವು ಶಾಂತಿಧಾಮದಲ್ಲಿ ಇರುವಂತಹವರು ಮತ್ತೆ ಜ್ಞಾನವೂ ಇದೆ.
ರೂಪ ಮತ್ತು ಬಸಂತ. ಬಾಬಾ ಸಹಾ ರೂಪ-ಬಸಂತ ಆಗಿರುವರಲ್ಲವೆ. ರೂಪವೂ ಇದೆ ಮತ್ತು ಅದರಲ್ಲಿ ಇಡೀ
ಸೃಷ್ಠಿಚಕ್ರದ ಜ್ಞಾನ ಸಹ ಇದೆ. ಅವರು ವಿಜ್ಞಾನ ಭವನ ಎಂದು ಹೆಸರಿಟ್ಟಿದ್ದಾರೆ. ಅರ್ಥ ಏನೂ
ತಿಳಿದುಕೊಂಡಿಲ್ಲ. ನೀವು ಮಕ್ಕಳು ತಿಳಿದುಕೊಂಡಿರುವಿರಿ ಈ ಸಮಯದಲ್ಲಿ ವಿಜ್ಞಾನದಿಂದ ದುಃಖವೂ ಇದೆ
ಜೊತೆಯಲ್ಲಿ ಸುಖವೂ ಸಹ ಇದೆ. ಅಲ್ಲಂತೂ ಸುಖವೇ ಸುಖವಿದೆ. ಇಲ್ಲಿ ಅಲ್ಪಕಾಲದ ಸುಖವಿದೆ. ಬಾಕಿ ಎಲ್ಲಾ
ದುಃಖವೇ ದುಃಖ. ಮನೆಯಲ್ಲಿ ಮನುಷ್ಯರು ಎಷ್ಟು ದುಃಖಿಗಳಾಗಿರುತ್ತಾರೆ. ತಿಳಿಯುತ್ತಾರೆ ಈ ದುಃಖದಿಂದ
ಬಿಡಿಸಿಕೊಳ್ಳಲು ಸಾಯುವುದೇ ಮೇಲೆಂದು. ನೀವು ಮಕ್ಕಳಂತೂ ತಿಳಿದಿರುವಿರಿ ಬಾಬಾ ಬಂದಿದ್ದಾರೆ
ನಮ್ಮನ್ನು ಸ್ವರ್ಗವಾಸಿಗಳನ್ನಾಗಿ ಮಾಡಲು. ಎಷ್ಟು ಗದ್ಗಧಿತರಾಗಬೇಕು. ಕಲ್ಪ-ಕಲ್ಪ ಬಾಬಾ ನಮ್ಮನ್ನು
ಸ್ವರ್ಗವಾಸಿಗಳನ್ನಾಗಿ ಮಾಡಲು ಬರುತ್ತಾರೆ. ಆದ್ದರಿಂದ ಇಂತಹ ತಂದೆಯ ಮತದ ಮೇಲೆ ನಡೆಯಬೇಕಲ್ಲವೆ.
ತಂದೆ ಹೇಳುತ್ತಾರೆ -
ಮಧುರ ಮಕ್ಕಳೇ, ಎಂದೂ ಯಾರಿಗೂ ದುಃಖವನ್ನು ಕೊಡಬೇಡಿ. ಗೃಹಸ್ಥ ವ್ಯವಹಾರದಲ್ಲಿರುತ್ತ ಪವಿತ್ರರಾಗಿರಿ.
ನಾವು ಸಹೋದರ-ಸಹೋದರಿಯರಾಗಿದ್ದೇವೆ, ಇದಾಗಿದೆ ಪ್ರೀತಿಯ ಸಂಬಂಧ. ಮತ್ತೆ ಬೇರೆ ಯಾವುದೇ ಕಡೆ ದೃಷ್ಠಿ
ಹೋಗಲು ಸಾಧ್ಯವಿಲ್ಲ. ಪ್ರತಿಯೊಬ್ಬರ ಖಾಯಿಲೆ ತನ್ನ-ತನ್ನದೇ ಆಗಿದೆ, ಅದರ ಪ್ರಕಾರ ಸಲಹೆಯನ್ನೂ ಸಹ
ಕೊಡುತ್ತಿರುತ್ತಾರೆ. ಮಕ್ಕಳು, ಬಾಬಾ ಇಂತಿಂತಹ ಪರಿಸ್ಥಿತಿ ಇದೆ, ಇಂತಹ ಸಂಧರ್ಭದಲ್ಲಿ ಏನು
ಮಾಡಬೇಕು? ಎಂದು ಕೇಳುತ್ತಾರೆ, ಬಾಬಾ ತಿಳಿಸುತ್ತಾರೆ ಸಹೋದರ-ಸಹೋದರಿಯರಲ್ಲಿ ಕೆಟ್ಟ ದೃಷ್ಠಿ
ಇರಬಾರದಾಗಿದೆ. ಯಾವುದೇ ಜಗಳ ಆಡಬಾರದಾಗಿದೆ. ನಾನು ನೀವು ಆತ್ಮಗಳ ತಂದೆಯಾಗಿರುವೆನಲ್ಲವೆ. ಶಿವ
ಬಾಬಾ ಬ್ರಹ್ಮಾರವರ ಶರೀರದ ಮೂಲಕ ಹೇಳುತ್ತಿದ್ದಾರೆ. ಪ್ರಜಾಪಿತ ಬ್ರಹ್ಮಾ ಶಿವ ಬಾಬಾರವರ ಮಗನಾದರು,
ಸಾಧಾರಣ ಶರೀರದಲ್ಲಿ ಬರುತ್ತಾರಲ್ಲವೆ. ವಿಷ್ಣುವಂತು ಸತ್ಯಯುಗದವರಾದರು. ತಂದೆ ಹೇಳುತ್ತಾರೆ ನಾನು
ಇವರಲ್ಲಿ ಪ್ರವೇಶವಾಗಿ ಹೊಸ ಪ್ರಪಂಚದ ರಚನೆ ಮಾಡಲು ಬಂದಿರುವೆ. ಬಾಬಾ ಕೇಳುತ್ತಾರೆ ನೀವು ವಿಶ್ವದ
ಮಹಾರಾಜ-ಮಹಾರಾಣಿ ಆಗುವಿರಾ? ಹಾ! ಬಾಬಾ, ಏಕೆ ಆಗುವುದಿಲ್ಲ .ಹಾ!, ಇದರಲ್ಲಿ ಪವಿತ್ರರಾಗಿರಬೇಕು.
ಇದಂತೂ ಕಷ್ಟವಾಗಿದೆ. ಅರೇ, ನಿಮಗೆ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ, ನೀವು ಪವಿತ್ರರಾಗಿರಲು
ಸಾಧ್ಯವಿಲ್ಲವೇ? ನಾಚಿಕೆಯಾಗುವುದಿಲ್ಲವೇ? ಲೌಕಿಕ ತಂದೆಯೂ ಸಹ ತಿಳಿಸುತ್ತಾರೆಲ್ಲವೆ- ಕತ್ತೆಯಂತ
ಕೆಲಸ ಮಾಡಬೇಡ. ಈ ವಿಕಾರದ ಮೇಲೆಯೇ ವಿಘ್ನ ಬರುತ್ತೆ. ಪ್ರಾರಂಭದಿಂದ ಹಿಡಿದು ಇದರ ಬಗ್ಗೆಯೇ
ಹಾಹಾಕಾರ ನಡೆಯುತ್ತಾ ಬಂದಿದೆ. ತಂದೆ ಹೇಳುತ್ತಾರೆ - ಮಧುರ ಮಕ್ಕಳೇ, ಇದರ ಮೇಲೆ ಜಯ ಸಾಧಿಸಬೇಕು.
ನಾನು ಬಂದಿರುವೆ ಪವಿತ್ರರನ್ನಾಗಿ ಮಾಡಲು. ನೀವು ಮಕ್ಕಳು ಸರಿ-ತಪ್ಪು, ಒಳ್ಳ್ಳೆಯದು-ಕೆಟ್ಟದ್ದು
ಯೋಚಿಸುವ ಬುದ್ಧಿ ಸಿಕ್ಕಿದೆ. ಈ ಲಕ್ಷ್ಮಿ-ನಾರಾಯಣರು ನಿಮ್ಮ ಗುರಿ-ಉದ್ದೇಶ ಆಗಿದೆ.
ಸ್ವರ್ಗವಾಸಿಗಳಲ್ಲಿ ದೈವಿ ಗುಣಗಳಿವೆ, ನರಕವಾಸಿಗಳಲ್ಲಿ ಅವಗುಣವಿದೆ. ಈಗ ರಾವಣ ರಾಜ್ಯವಿದೆ,
ಇದನ್ನೂ ಸಹ ಕೆಲವರು ತಿಳಿದುಕೊಂಡಿಲ್ಲ. ರಾವಣನನ್ನು ಪ್ರತಿ ವರ್ಷ ಸುಡುತ್ತಾರೆ. ಶತ್ರು
ಆಗಿದ್ದಾನಲ್ಲವೆ. ಸುಡುತ್ತಲೇ ಬಂದಿದ್ದಾರೆ. ತಿಳಿದುಕೊಂಡೇ ಇಲ್ಲ ಇವನು ಯಾರು? ಎಂದು ನಾವೆಲ್ಲರೂ
ರಾವಣ ರಾಜ್ಯದವರಾಗಿದ್ದೇವೆ, ಅಂದಮೇಲೆ ಖಂಡಿತ ನಾವು ಅಸುರರೆಂದು ತಿಳಿಯುವುದೇ ಇಲ್ಲ. ಬಹಳಷ್ಟು ಜನ
ಹೆಳುತ್ತಾರೆ ಇದು ರಾಕ್ಷಸ ರಾಜ್ಯ ಆಗಿದೆ ಎಂದು. ಯಥಾ ರಾಜ-ರಾಣಿ ತಥಾ ಪ್ರಜಾ. ಆದರೆ ಇಷ್ಟೂ ಸಹ
ತಿಳುವಳಿಕೆ ಇಲ್ಲ. ತಂದೆ ಕುಳಿತು ತಿಳಿಸಿ ಕೊಡುತ್ತಾರೆ ರಾಮ ರಾಜ್ಯ ಬೇರೆ ಇದೆ, ರಾವಣ ರಾಜ್ಯ ಬೇರೆ
ಇದೆ. ಈಗ ನೀವು ಸರ್ವಗುಣ ಸಂಪನ್ನರಾಗುತ್ತಿರುವಿರಿ. ತಂದೆ ಹೇಳುತ್ತಾರೆ ನನ್ನ ಭಕ್ತರಿಗೆ ಜ್ಞಾನ
ಹೇಳಿ, ಯಾರು ಮಂದಿರಗಳಿಗೆ ಹೋಗಿ ದೇವತೆಗಳ ಪೂಜೆ ಮಾಡುತ್ತಾರೆ. ಬಾಕಿ ಅಂತಿಂತಹ ವ್ಯಕ್ತಿಗಳ ಜೊತೆ
ತಲೆ ಚಚ್ಚಿಕೊಳ್ಳಬೇಡಿ. ಮಂದಿರಗಳಲ್ಲಿ ನಿಮಗೆ ಬಹಳ ಭಕ್ತರು ಸಿಗುತ್ತಾರೆ. ನಾಡಿ ನೋಡಬೇಕಾಗುತ್ತದೆ.
ಹೇಗೆ ಡಾಕ್ಟರ್ ನೋಡುತ್ತಲೇ ತಕ್ಷಣ ತಿಳಿಸುತ್ತಾರೆ ಇವರಿಗೆ ಏನು ಖಾಯಿಲೆ ಇದೆ ಎಂದು. ದೆಹಲಿಯಲ್ಲಿ
ಅಜಮಲ್ಖಾನ್ ಎಂಬ ವೈಧ್ಯ ಬಹಳ ಪ್ರಸಿದ್ದರಾಗಿದ್ದರು. ತಂದೆಯಂತು ನಿಮಗೆ 21 ಜನ್ಮಗಳಿಗಾಗಿ ಎವರ್
ಹೆಲ್ತಿ, ವೆಲ್ತಿ ಮಾಡುತ್ತಾರೆ. ಇಲ್ಲಂತೂ ಎಲ್ಲರೂ ರೋಗಿಗಳಾಗಿದ್ದಾರೆ. ಅನ್ ಹೆಲ್ತಿ. ನಿಮ್ಮ ಈ
ಕರ್ಮೇಂದ್ರಿಯಗಳು ನಿಮಗೆ ಎಂದೂ ಮೋಸ ಮಾಡಲು ಸಾಧ್ಯವಿಲ್ಲ. ಬಾಬಾ ತಿಳಿಸಿದ್ದಾರೆ ನೆನಪಿನಲ್ಲಿ
ಒಳ್ಳೆಯ ರೀತಿಯಲ್ಲಿರಿ, ದೇಹೀ ಅಭಿಮಾನಿಯಾಗಿದ್ದಾಗ ಕರ್ಮೇಂದ್ರಿಯಗಳು ಎಂದೂ ಮೋಸ ಮಾಡಲು
ಸಾಧ್ಯವಿಲ್ಲ. ಇಲ್ಲೇ ನೀವು ವಿಕಾರಗಳ ಮೇಲೆ ವಿಜಯ ಸಾಧಿಸುವಿರಿ. ಅಲ್ಲಿ ಕುದೃಷ್ಠಿ ಇರುವುದೇ ಇಲ್ಲ.
ರಾವಣ ರಾಜ್ಯವೇ ಇರುವುದಿಲ್ಲ ಅಲ್ಲಿರುವುದೆ ಅಹಿಂಸಕ ದೇವಿ-ದೇವತೆಗಳ ಧರ್ಮ. ಯುದ್ಧ ಇತ್ಯಾದಿಯ
ಯಾವುದೇ ಮಾತಿಲ್ಲ. ಇಲ್ಲಿ ಯುದ್ಧ ಸಹ ಅಂತ್ಯದಲ್ಲಿ ಆಗುವುದು ಯಾವುದರಿಂದ ಸ್ವರ್ಗದ ಬಾಗಿಲು
ತೆರೆಯಬೇಕಿದೆ. ನಂತರ ಎಂದೂ ಯುದ್ಧ ಆಗುವುದೇ ಇಲ್ಲ. ಈ ಯಜ್ಞವೂ ಸಹ ಕೊನೆಯದಾಗಿದೆ. ನಂತರ
ಅರ್ಧಕಲ್ಪ ಯಾವುದೇ ಯಜ್ಞವೇ ಇರುವುದಿಲ್ಲ. ಇದರಲ್ಲಿ ಎಲ್ಲಾ ಕೊಳಕು ಸ್ವಾಹ ಆಗಿ ಬಿಡುತ್ತದೆ. ಈ
ಯಜ್ಞದಿಂದಲೇ ವಿನಾಶದ ಜ್ವಾಲೆ ಪ್ರಕಟವಾಗುವುದು, ಪೂರ್ತಿ ಸ್ವಚ್ಛತೆಯಾಗಿ ಬಿಡುತ್ತದೆ. ನಂತರ ನೀವು
ಮಕ್ಕಳಿಗೆ ಸಾಕ್ಷಾತ್ಕಾರವನ್ನೂ ಸಹ ಮಾಡಿಸಲಾಗಿದೆ, ಅಲ್ಲಿನ ಶೂಭಿ ರಸವೂ ಸಹ ಬಹಳ ಸ್ವಾಧಿಷ್ಠ
ಫಸ್ಟ್ಕ್ಲಾಸ್ ವಸ್ತುಗಳು ಇರುತ್ತೆ. ಆ ರಾಜ್ಯವನ್ನು ಈಗ ನೀವು ಸ್ಥಾಪನೆ ಮಾಡುತ್ತಿರುವಿರಿ ಅಂದಾಗ
ಎಷ್ಟು ಖುಷಿ ಇರಬೇಕು.
ನಿಮ್ಮ ಹೆಸರೇ ಆಗಿದೆ
ಶಿವ ಶಕ್ತಿ ಭಾರತ ಮಾತೆಯರು. ಶಿವನಿಂದ ನೀವು ಶಕ್ತಿಯನ್ನು ಪಡೆಯುವಿರಿ ಕೇವಲ ನೆನಪಿನಿಂದ. ಹೊಡೆತ
ತಿನ್ನುವ ಯಾವುದೇ ಮಾತಿಲ್ಲ. ಅವರು ತಿಳಿಯುತ್ತಾರೆ ಯಾರು ಭಕ್ತಿ ಮಾಡಲ್ಲಾ ಅವರು ನಾಸ್ತಿಕರು ಎಂದು.
ನೀವು ಹೇಳುವಿರಿ ಯಾರು ತಂದೆ ಮತ್ತು ಅವರ ರಚನೆಯನ್ನು ತಿಳಿದುಕೊಂಡಿಲ್ಲ ಅವರು ನಾಸ್ತಿಕರು, ನೀವು
ಈಗ ಆಸ್ತಿಕರಾಗಿರುವಿರಿ. ತ್ರಿಕಾಲದರ್ಶಿಯೂ ಸಹ ಆಗಿರುವಿರಿ. ಮೂರು ಲೋಕ, ಮೂರು ಕಾಲಗಳ ಜ್ಞಾನವನ್ನು
ತಿಳಿದು ಬಿಟ್ಟಿರಿ. ಈ ಲಕ್ಷ್ಮಿ-ನಾರಾಯಣರಿಗೆ ತಂದೆಯಿಂದ ಈ ಆಸ್ತಿ ಸಿಕ್ಕಿದೆ. ಈಗ ನೀವು ಅವರಂತೆ
ಆಗುತ್ತಿರುವಿರಿ. ಈ ಎಲ್ಲಾ ಮಾತುಗಳು ತಂದೆಯೇ ತಿಳಿಸುತ್ತಾರೆ. ಶಿವಬಾಬಾ ಖುದ್ದಾಗಿ ಹೇಳುತ್ತಾರೆ
ನಾನು ಇವರಲ್ಲಿ ಪ್ರವೇಶವಾಗಿ ತಿಳಿಸುತ್ತೇನೆ. ಇಲ್ಲದಿದ್ದರೆ ನಾನು ನಿರಾಕಾರ ಹೇಗೆ ತಿಳಿಸಲಿ.
ಪ್ರೇರಣೆಯಿಂದ ವಿದ್ಯೆ ಕಲಿಸಲು ಆಗುವುದೇನು? ಓದಿಸುವುದಕ್ಕಾದರೂ ಬಾಯಿಯ ಅವಶ್ಯಕತೆ ಇದೆಯಲ್ಲವೆ.
ಗೋ ಮುಖವಂತೂ ಇಲ್ಲಿ ಇದೆಯಲ್ಲವೆ. ಇವರು ದೊಡ್ಡ ಮಮ್ಮಾ ಆಗಿದ್ದಾರಲ್ಲವೇ, ಮಾನವ ತಾಯಿ ಆಗಿದ್ದಾರೆ.
ತಂದೆ ಹೇಳುತ್ತಾರೆ ನಾನು ಇವರ ಮುಖಾಂತರ ನೀವು ಮಕ್ಕಳಿಗೆ ಸೃಷ್ಠಿಯ ಆದಿ-ಮಧ್ಯ-ಅಂತ್ಯದ ರಹಸ್ಯ
ತಿಳಿಸುತ್ತೇನೆ, ಯುಕ್ತಿ ಹೇಳಿ ಕೊಡುತ್ತೇನೆ. ಇದರಲ್ಲಿ ಆಶೀರ್ವಾದದ ಯಾವುದೇ ಮಾತಿಲ್ಲ. ಡೈರೆಕ್ಷನ್
ಮೇಲೆ ನಡೆಯಬೇಕು. ಶ್ರೀಮತ ಸಿಗುವುದು. ಕೃಪೆಯ ಮಾತಿಲ್ಲ. ಹೇಳುತ್ತಾರೆ-ಬಾಬಾ ಘಳಿಗೆ-ಘಳಿಗೆ ಮರೆತು
ಹೋಗುವುದು, ಕೃಪೆ ಮಾಡಿ. ಅರೇ, ನೆನಪು ಮಾಡುವುದು ಇದಂತೂ ನಿಮ್ಮ ಕೆಲಸವಾಗಿದೆ. ನಾನು ಹೇಗೆ ಕೃಪೆ
ಮಾಡಲಿ. ನನಗೆ ಎಲ್ಲರೂ ಮಕ್ಕಳೇ. ಕೃಪೆ ಮಾಡಿದರೆ ಎಲ್ಲರೂ ಬಂದು ಸಿಂಹಾಸನದಲ್ಲಿ
ಕುಳಿತುಕೊಳ್ಳಬೇಕಾಗುತ್ತದೆ. ಪದವಿಯಂತೂ ವಿಧ್ಯೆಯ ಅನುಸಾರ ಪಡೆಯುತ್ತಾರೆ. ಓದಬೇಕಾಗಿರುವುದು
ನೀವಲ್ಲವೇ. ಪುರುಷಾರ್ಥ ಮಾಡುತ್ತೀರಿ. ಅತೀ ಪ್ರೀತಿಯ ತಂದೆಯನ್ನು ನೆನಪು ಮಾಡಬೇಕು. ಪತಿತ ಆತ್ಮ
ವಾಪಸ್ಸು ಹೋಗಲಾಗುವುದಿಲ್ಲ. ತಂದೆ ಹೇಳುತ್ತಾರೆ ಎಷ್ಟು ನೀವು ನೆನಪು ಮಾಡುವಿರಿ ಆಗ ನೆನಪು
ಮಾಡುತ್ತಾ ಮಾಡುತ್ತಾ ಪಾವನರಾಗಿ ಬಿಡುವಿರಿ. ಪಾವನ ಆತ್ಮ ಇಲ್ಲಿರಲು ಸಾಧ್ಯವಿಲ್ಲ ಪವಿತ್ರರಾದರೆ
ಶರೀರವೂ ಸಹ ಹೊಸದು ಬೇಕಾಗುವುದು. ಪವಿತ್ರ ಆತ್ಮನಿಗೆ ಅಪವಿತ್ರ ಶರೀರ (ಇಂಪ್ಯೂರ್), ಇದು ಕಾನೂನು
ಇಲ್ಲ. ಸನ್ಯಾಸಿಗಳೂ ಸಹ ವಿಕಾರದಿಂದ ಜನ್ಮ ಪಡೆಯುವರಲ್ಲವೆ. ಈ ದೇವತೆಗಳು ವಿಕಾರದಿಂದ ಜನ್ಮ
ತೆಗೆದುಕೊಳ್ಳುವುದಿಲ್ಲ, ಯಾವುದರಿಂದ ಪುನಃ ಸನ್ಯಾಸ ಮಾಡಬೇಕಾಗುತ್ತೆ. ಇವರಂತೂ ಶ್ರೇಷ್ಠರಾದರಲ್ಲವೆ.
ಸತ್ಯ-ಸತ್ಯ ಮಹಾತ್ಮರು ಇವರಾಗಿದ್ದಾರೆ ಸದಾ ಸಂಪೂರ್ಣ ನಿರ್ವಿಕಾರಿಯಾಗಿದ್ದಾರೆ. ಅಲ್ಲಿ ರಾವಣ
ರಾಜ್ಯ ಇಲ್ಲವೇ ಇಲ್ಲ, ಇರುವುದೇ ಸತೋಪ್ರಧಾನ ರಾಮ ರಾಜ್ಯ. ವಾಸ್ತವದಲ್ಲಿ ರಾಮ ಎಂದೂ ಸಹ ಹೇಳಬಾರದು.
ಶಿವಬಾಬಾ ಆಗಿದ್ದಾರಲ್ಲವೆ. ಇದಕ್ಕೆ ಹೇಳಲಾಗುವುದು ರಾಜಸ್ವ ಅಶ್ವಮೇಧ ಅವಿನಾಶಿ ರುದ್ರ ಜ್ಞಾನ
ಯಜ್ಞ. ರುದ್ರ ಅಥವಾ ಶಿವ ಎರಡೂ ಒಂದೇ ಆಗಿದೆ. ಕೃಷ್ಣನ ಹೆಸರಂತು ಇಲ್ಲ. ಶಿವ ಬಾಬಾ ಬಂದು ಜ್ಞಾನ
ತಿಳಿಸುತ್ತಾರೆ ಅವರೇ ನಂತರ ರುದ್ರ ಯಜ್ಞ ರಚಿಸುತ್ತಾರೆ ಎಂದರೆ ಮಣ್ಣಿನ ಲಿಂಗ ಮತ್ತು
ಸಾಲಿಗ್ರಾಮಗಳನ್ನು ಮಾಡುತ್ತಾರೆ. ಪೂಜೆ ಮಾಡಿ ನಂತರ ಒಡೆದು ಹಾಕಿ ಬಿಡುತ್ತಾರೆ. ಹೇಗೆ ಬಾಬಾ
ದೇವಿಯರ ಉದಾಹರಣೆ ಕೊಡುತ್ತಾರೆ. ದೇವಿಯರಿಗೆ ಶೃಂಗಾರ ಮಾಡಿ ತಿನ್ನಿಸಿ ಕುಡಿಸಿ ಪೂಜೆ ಮಾಡಿ ನಂತರ
ನೀರಿನಲ್ಲಿ ಮುಳುಗಿಸಿ ಬಿಡುತ್ತಾರೆ. ಅದೇರೀತಿ ಶಿವಬಾಬಾ ಮತ್ತು ಸಾಲಿಗ್ರಾಮಗಳನ್ನು ಬಹಳ
ಪ್ರೇಮದಿಂದ ಮತ್ತು ಶುದ್ಧವಾಗಿ ಪೂಜೆ ಮಾಡಿ ನಂತರ ಸಮಾಪ್ತಿ ಮಾಡಿ ಬಿಡುತ್ತಾರೆ. ಇದಾಗಿದೆ ಇಡೀ
ಭಕ್ತಿಯ ವಿಸ್ತಾರ. ಈಗ ತಂದೆ ಮಕ್ಕಳಿಗೆ ತಿಳಿಸುತ್ತಾರೆ-ಎಷ್ಟು ತಂದೆಯ ನೆನಪಿನಲ್ಲಿರುವಿರಿ ಅಷ್ಟು
ಖುಶಿಯಲ್ಲಿರುವಿರಿ. ರಾತ್ರಿಯಲ್ಲಿ ಪ್ರತಿದಿನ ನಿಮ್ಮ ಚಾರ್ಟ್ನ್ನು ನೋಡಿಕೊಳ್ಳಬೇಕು. ನಾನು ಯಾವುದೇ
ತಪ್ಪು ಮಾಡಿಲ್ಲ ತಾನೆ? ನಿಮ್ಮ ಕಿವಿ ಹಿಡಿದುಕೊಳ್ಳಬೇಕು -ಬಾಬಾ ಇಂದು ನನ್ನಿಂದ ಈ ತಪ್ಪಾಯಿತು,
ಕ್ಷಮೆ ಮಾಡಿ. ಬಾಬಾ ಹೇಳುತ್ತಾರೆ ಸತ್ಯ ಬರೆದರೆ ಅಗ ಅರ್ಧ ಪಾಪ ಕ್ಷಮಿಸಲಾಗುತ್ತೆ. ತಂದೆಯಂತೂ
ಕುಳಿತಿದ್ದಾರಲ್ಲವೆ. ನಿಮ್ಮ ಕಲ್ಯಾಣ ಮಾಡಿಕೊಳ್ಳಲು ಇಚ್ಚಿಸುವುದಾದರೆ ಶ್ರೀಮತದ ಮೇಲೆ ನಡೆಯಿರಿ.
ಚಾರ್ಟ್ ಇಡುವುದರಿಂದ ಬಹಳ ಉನ್ನತಿಯಾಗುವುದು. ಇದರಿಂದ ಏನೂ ಖರ್ಚಿಲ್ಲ. ಶ್ರೇಷ್ಠ ಪದವಿ ಪಡೆಯ
ಬೇಕಾದರೆ ಮನಸಾ-ವಾಚಾ-ಕರ್ಮಣ ಯಾರಿಗೂ ಸಹಾ ದುಃಖ ಕೊಡಬಾರದು. ಯಾರಾದರೂ ಏನೇ ಹೇಳಿದರೂ ಸಹ ಕೇಳಿಯೂ
ಕೇಳದಂತೆ ಇದ್ದು ಬಿಡಿ. ಈ ಪರಿಶ್ರಮ ಪಡಬೇಕು. ತಂದೆ ಬರುವುದೇ ನೀವು ಮಕ್ಕಳಿಗೆ ದುಃಖ ದೂರ ಮಾಡಿ
ಸದಾಕಾಲಕ್ಕಾಗಿ ಸುಖ ಕೊಡಲು. ಆದ್ದರಿಂದ ಮಕ್ಕಳೂ ಸಹಾ ಹೀಗೆ ಆಗಬೇಕು. ಮಂದಿರದಲ್ಲಿ ಎಲ್ಲದಕ್ಕಿಂತ
ಒಳ್ಳಯ ಸೇವೆಯಾಗುವುದು. ಅಲ್ಲಿ ಧಾರ್ಮಿಕ ವೃತ್ತಿಯುಳ್ಳವರು ಬಹಳ ಜನ ಸಿಗುತ್ತಾರೆ.
ಪ್ರದರ್ಶಿನಿಯಲ್ಲೂ ಬಹಳ ಬರುತ್ತಾರೆ. ಪ್ರೊಜೆಕ್ಟರ್ನಿಂದ ಸಹ ಪ್ರದರ್ಶಿನಿ, ಮೇಳಾದಲ್ಲಿ ಸೇವೆ
ಚೆನ್ನಾಗಿ ನಡೆಯುತ್ತೆ. ಮೇಳಾದಲ್ಲಿ ಖರ್ಚ್ ಆದರೆ ಖಂಡಿತ ಲಾಭಸಹಾ ಆಗುತ್ತಲ್ಲವೆ. ಒಳ್ಳೆಯದು!
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಂದೆಯು
ಸರಿ-ತಪ್ಪು ಯಾವುದು ಎಂದು ತಿಳಿಯುವ ಬುದ್ಧಿ ಕೊಟ್ಟಿದ್ದಾರೆ, ಅದೇ ಬುದ್ಧಿಯ ಆಧಾರದ ಮೇಲೆ ದೈವಿ
ಗುಣ ಧಾರಣೆ ಮಾಡಬೇಕು, ಯಾರಿಗೂ ದುಃಖ ಕೊಡಬಾರದು, ಪರಸ್ಪರರಲ್ಲಿ ಸಹೋದರ-ಸಹೋದರಿಯ ಸತ್ಯ ಪ್ರೀತಿ
ಇರಬೇಕು, ಎಂದೂ ಕುದೃಷ್ಠಿಯಲ್ಲಿ ಹೋಗಬಾರದು.
2. ತಂದೆಯ ಪ್ರತಿ
ಡೈರೆಕ್ಷನ್ ಮೇಲೆ ನಡೆದು ಒಳ್ಳೆಯ ರೀತಿ ಓದಿ ನಮಗೆ ನಮ್ಮ ಮೇಲೆ ನಾವೇ ಕೃಪೆ ಮಾಡಬೇಕು. ತಮ್ಮ
ಉನ್ನತಿಗಾಗಿ ಚಾರ್ಟ್ ಇಡಬೇಕು. ಯಾರಾದರೂ ದುಃಖ ಕೊಡುವಂತಹ ಮಾತು ಆಡಿದರೆ ಕೇಳಿಯೂ ಕೇಳದಂತೆ ಮಾಡಿ
ಬಿಡಿ.
ವರದಾನ:
ಈಶ್ವರೀಯ
ರಾಯಲ್ಟಿಯ ಸಂಸ್ಕಾರದ ಮೂಲಕ ಪ್ರತಿಯೊಬ್ಬರ ವಿಶೇಷತೆಗಳ ವರ್ಣನೆ ಮಾಡುವಂತಹ ಪುಣ್ಯಾತ್ಮ ಭವ.
ಸದಾ ಸ್ವಯಂನ್ನು ವಿಶೇಷ
ಆತ್ಮನೆಂದು ತಿಳಿದುಕೊಂಡು ಪ್ರತೀ ಸಂಕಲ್ಪ ಹಾಗೂ ಕರ್ಮವನ್ನು ಮಾಡುವುದು ಮತ್ತು ಪ್ರತಿಯೊಬ್ಬರಲ್ಲಿ
ವಿಶೇಷತೆಯನ್ನು ನೋಡುವುದು, ವರ್ಣನೆ ಮಾಡುವುದು, ಸರ್ವರ ಪ್ರತಿ ವಿಶೇಷ ಆತ್ಮನನ್ನಾಗಿ ಮಾಡುವ ಶುಭ
ಕಲ್ಯಾಣದ ಕಾಮನೆಯನ್ನಿಡುವುದು - ಇದೇ ಈಶ್ವರೀಯ ರಾಯಲ್ಟಿಯಾಗಿದೆ. ರಾಯಲ್ ಆತ್ಮರು ಅನ್ಯರ ಮೂಲಕ
ಬಿಡುವಂತಹ ವಸ್ತುವನ್ನು ತನ್ನಲ್ಲಿ ಧಾರಣೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಸದಾ ಗಮನವಿರಲಿ
- ಯಾರದೇ ಬಲಹೀನತೆ ಅಥವಾ ಅವಗುಣವನ್ನು ನೋಡುವ ಕಣ್ಣು ಸದಾ ಬಂಧ್ ಆಗಿರಲಿ. ಒಬ್ಬರಿನ್ನೊಬ್ಬರ ಗುಣ
ಗಾನ ಮಾಡಿರಿ, ಸ್ನೇಹ-ಸಹಯೋಗದ ಪುಷ್ಫಗಳ ಲೇವಾದೇವಿ ಮಾಡಿರಿ - ಆಗ ಪುಣ್ಯಾತ್ಮರಾಗಿ ಬಿಡುತ್ತೀರಿ.
ಸ್ಲೋಗನ್:
ವರದಾನದ ಶಕ್ತಿಯು
ಪರಿಸ್ಥಿತಿಯೆಂಬ ಅಗ್ನಿಯನ್ನೂ ನೀರನ್ನಾಗಿ ಮಾಡಿ ಬಿಡುತ್ತದೆ.
ಅವ್ಯಕ್ತ ಸೂಚನೆ:- ಈಗ
ಸಂಪನ್ನ ಅಥವಾ ಕರ್ಮಾತೀತರಾಗುವುದರಲ್ಲಿ ತತ್ಪರರಾಗಿರಿ.
ನಿರಾಕಾರಿ ಸ್ವರೂಪದ
ಮುಖ್ಯ ಶಿಕ್ಷಣದ ವರದಾನವಾಗಿದೆ - “ಕರ್ಮಾತೀತ ಭವ”. ಆಕಾರಿ ಸ್ವರೂಪದ ಅಥವಾ ಫರಿಸ್ತಾತನದ
ವರದಾನವಾಗಿದೆ - “ಡಬಲ್ ಲೈಟ್ ಭವ”. ಡಬಲ್ ಲೈಟ್ ಅರ್ಥಾತ್ ಸರ್ವ ಕರ್ಮ ಬಂಧನಗಳಿಂದ ಹಗುರ ಮತ್ತು
ಲೈಟ್ ಅರ್ಥಾತ್ ಪ್ರಕಾಶ ಸ್ವರೂಪದಲ್ಲಿ ಸ್ಥಿತರಾಗುವಂತಹವರು. ಇಂತಹ ಡಬಲ್ ಲೈಟ್ ಆಗಿರುವಂತಹವರು
ಸಹಜ ಕರ್ಮಾತೀತ ಸ್ಥಿತಿಯನ್ನು ಪ್ರಾಪ್ತಿ ಮಾಡಿಕೊಳ್ಳಬಹುದು. ಸೇವೆಗಳಲ್ಲಿ ಬರುತ್ತಾ ಇದೇ ಇರಲಿ
ನಾನು ಸಂಪನ್ನ ಅಥವಾ ಕರ್ಮಾತೀತರಾಗಲೇ ಬೇಕು.