02.02.26 Morning Kannada Murli Om Shanti
BapDada Madhuban
ಶಿವ ಭಗವಾನುವಾಚ –
“ಮಧುರ ಮಕ್ಕಳೇ, ನೀವು ನನ್ನನ್ನು ನೆನಪು ಮಾಡಿ ಮತ್ತು ಪ್ರೀತಿ ಮಾಡಿ ಏಕೆಂದರೆ ನಾನೇ ನಿಮ್ಮನ್ನು
ಸದಾ ಸುಖಿಯನ್ನಾಗಿ ಮಾಡಲು ಬಂದಿದ್ದೇನೆ.”
ಪ್ರಶ್ನೆ:
ಯಾವ ಮಕ್ಕಳಿಂದ
ತಪ್ಪು (ಹುಡುಗಾಟಿಕೆ) ಗಳಾಗುತ್ತಿರುವುದೋ ಅವರ ಬಾಯಿಂದ ಯಾವ ಮಾತುಗಳು ಸ್ವತಹ ಹೊರ ಬರುತ್ತವೆ?
ಉತ್ತರ:
ಹುಡುಗಾಟಿಕೆಯಿರುವವರು ಈ ರೀತಿ ಹೇಳುತ್ತಾರೆ - ಅದೃಷ್ಟದಲ್ಲಿ ಏನಿದೆಯೋ ಅದು ಸಿಗುವುದು.
ಸ್ವರ್ಗದಲ್ಲಂತೂ ಹೋಗಿಯೇ ಹೋಗುತ್ತೇವೆ. ತಂದೆಯು ತಿಳಿಸುತ್ತಾರೆ - ಈ ಮಾತು ಪುರುಷಾರ್ಥಿ
ಮಕ್ಕಳದಲ್ಲ, ಶ್ರೇಷ್ಠ ಪದವಿಯನ್ನೇ ಪಡೆಯುವ ಪುರುಷಾರ್ಥ ಮಾಡಬೇಕು. ಯಾವಾಗ ಶ್ರೇಷ್ಠ ಪದವಿಯನ್ನೇ
ಕೊಡುವುದಕ್ಕಾಗಿ ತಂದೆಯು ಬಂದಿದ್ದಾರೆ ಅಂದಮೇಲೆ ಆಲಸ್ಯ ಮಾಡಬೇಡಿ.
ಗೀತೆ:
ಬಾಲ್ಯದ
ದಿನಗಳನ್ನು ಮರೆಯಬಾರದು...............
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯ ಸಾಲಿನ ಅರ್ಥವನ್ನು ತಿಳಿದುಕೊಂಡಿರಿ. ನೀವೀಗ
ಜೀವಿಸಿದ್ದಂತೆಯೇ ಬೇಹದ್ದಿನ ತಂದೆಯ ಮಕ್ಕಳಾಗಿದ್ದೀರಿ. ಇಡೀ ಕಲ್ಪವಂತೂ ಲೌಕಿಕ ತಂದೆಯ
ಮಕ್ಕಳಾಗುತ್ತೀರಿ. ಈಗ ಕೇವಲ ನೀವು ಬ್ರಾಹ್ಮಣ ಮಕ್ಕಳು ಬೇಹದ್ದಿನ ತಂದೆಯವರಾಗಿದ್ದೀರಿ. ನಿಮಗೆ
ತಿಳಿದಿದೆ - ನಾವು ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ.
ಒಂದುವೇಳೆ ತಂದೆಯನ್ನು ಬಿಟ್ಟರೆ ಬೇಹದ್ದಿನ ಆಸ್ತಿಯು ಸಿಗುವುದಿಲ್ಲ. ಭಲೆ ನೀವು ತಿಳಿಸುತ್ತೀರಿ
ಆದರೆ ಸ್ವಲ್ಪದರಲ್ಲಿಯೇ ಯಾರೂ ಖುಷಿಯಾಗುವುದಿಲ್ಲ. ಮನುಷ್ಯರು ಹಣವನ್ನು ಇಚ್ಛಿಸುತ್ತಾರೆ,
ಹಣವಿಲ್ಲದಿದ್ದರೆ ಸುಖವಿರಲು ಸಾಧ್ಯವಿಲ್ಲ. ಹಣವೂ ಬೇಕು, ಶಾಂತಿಯೂ ಬೇಕು, ನಿರೋಗಿ ಕಾಯವೂ ಬೇಕು.
ಇಂದು ಪ್ರಪಂಚದಲ್ಲಿ ಏನಿದೆ, ನಾಳೆ ಏನಾಗುವುದು ಎಂಬುದನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ.
ವಿನಾಶವಂತೂ ಸಮ್ಮುಖದಲ್ಲಿ ನಿಂತಿದೆ, ಮತ್ತ್ಯಾರ ಬುದ್ಧಿಯಲ್ಲಿಯೂ ಈ ಮಾತುಗಳಿಲ್ಲ. ಒಂದುವೇಳೆ
ವಿನಾಶವು ಸಮ್ಮುಖದಲ್ಲಿದೆ ಎಂಬುದನ್ನು ತಿಳಿದುಕೊಂಡರೂ ಸಹ ಈಗ ಏನು ಮಾಡಬೇಕೆಂಬುದು
ಅರ್ಥವಾಗುವುದಿಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಯಾವಾಗ ಬೇಕಾದರೂ ಯುದ್ಧವಾಗಬಹುದು.
ಒಂದು ಸಣ್ಣ ಕಿಡಿಯಿಂದಲೇ ಎಲ್ಲವೂ ಸಮಾಪ್ತಿಯಾಗುವುದರಲ್ಲಿ ತಡವಾಗುವುದಿಲ್ಲ. ಈ ಹಳೆಯ ಪ್ರಪಂಚವು
ಸಮಾಪ್ತಿಯಾಯಿತೆಂದರೆ ಆಯಿತು ಆದ್ದರಿಂದ ಈಗ ಬಹು ಬೇಗನೆ ತಂದೆಯಿಂದ ಆಸ್ತಿಯನ್ನು
ತೆಗೆದುಕೊಳ್ಳಬೇಕಾಗಿದೆ. ತಂದೆಯನ್ನು ಸದಾ ನೆನಪು ಮಾಡುತ್ತಿದ್ದರೆ ಬಹಳ ಖುಷಿಯಾಗಿರುತ್ತೀರಿ.
ದೇಹಾಭಿಮಾನದಲ್ಲಿ ಬರುವುದರಿಂದ ತಂದೆಯನ್ನು ಮರೆತು ದುಃಖಿಯಾಗುತ್ತೀರಿ. ತಂದೆಯನ್ನು ಎಷ್ಟು ನೆನಪು
ಮಾಡುತ್ತೀರೋ ಅಷ್ಟು ಬೇಹದ್ದಿನ ತಂದೆಯಿಂದ ಸುಖಪಡೆಯುತ್ತೀರಿ. ನೀವು ಇಂತಹ
ಲಕ್ಷ್ಮೀ-ನಾರಾಯಣರಾಗುವುದಕ್ಕಾಗಿ ಬಂದಿದ್ದೀರಿ, ರಾಜ-ರಾಣಿಯಾಗುವುದರಲ್ಲಿ ಮತ್ತು ಪ್ರಜೆಗಳಿಗೆ
ನೌಕರ-ಚಾಕರರಾಗುವುದರಲ್ಲಿ ಬಹಳ ಅಂತರವಿದೆಯಲ್ಲವೆ! ಈಗಿನ ಪುರುಷಾರ್ಥವೇ ಕಲ್ಪ-ಕಲ್ಪಕ್ಕಾಗಿ
ನಿಶ್ಚಿತವಾಗಿಬಿಡುತ್ತದೆ. ನಾವು ಎಷ್ಟು ಪುರುಷಾರ್ಥ ಮಾಡಿದ್ದೇವೆ ಎಂದು ಅಂತಿಮದಲ್ಲಿ ಎಲ್ಲರಿಗೆ
ಸಾಕ್ಷಾತ್ಕಾರವಾಗುವುದು. ಈಗಲೂ ತಂದೆಯು ತಿಳಿಸುತ್ತಾರೆ - ತಮ್ಮ ಸ್ಥಿತಿಯನ್ನು ನೋಡಿಕೊಳ್ಳುತ್ತಾ
ಇರಿ. ಯಾವ ಮಧುರಾತಿ ಮಧುರ ತಂದೆಯಿಂದ ಸ್ವರ್ಗದ ಆಸ್ತಿಯು ಸಿಗುತ್ತದೆಯೋ ಅವರನ್ನು ನಾವು ಎಷ್ಟು
ನೆನಪು ಮಾಡುತ್ತೇವೆ! ನಿಮ್ಮದೆಲ್ಲವೂ ನೆನಪಿನ ಮೇಲೆ ಆಧಾರಿತವಾಗಿದೆ. ಎಷ್ಟು ನೆನಪು ಮಾಡುತ್ತೀರೋ
ಅಷ್ಟು ಖುಷಿಯೂ ಇರುವುದು. ನಾವೀಗ ಸಮೀಪಕ್ಕೆ ಬಂದು ತಲುಪಿದ್ದೇವೆಂದು ತಿಳಿಯುತ್ತಾರೆ, ಇನ್ನೂ
ಕೆಲವರು ಗುರಿಯು ಇನ್ನೆಷ್ಟು ದೂರವಿದೆಯೋ ಎಂದು ಸುಸ್ತಾಗುತ್ತಾರೆ. ಗುರಿಯನ್ನು ತಲುಪಿದರೆ
ಪರಿಶ್ರಮವು ಸಫಲವಾಗುವುದು. ಈಗ ಯಾವ ಗುರಿಯೆಡೆಗೆ ನೀವು ಹೋಗುತ್ತಿದ್ದೀರೋ ಅದನ್ನು ಪ್ರಪಂಚದವರು
ತಿಳಿದುಕೊಂಡಿಲ್ಲ. ಭಗವಂತನೆಂದು ಯಾರಿಗೆ ಹೇಳಲಾಗುತ್ತದೆ ಎಂಬುದನ್ನೂ ಸಹ ಅವರು ತಿಳಿದುಕೊಂಡಿಲ್ಲ.
ಭಗವಂತನೆಂದು ಹೇಳುತ್ತಾರೆ ಮತ್ತೆ ಅವರು ಕಲ್ಲು-ಮುಳ್ಳಿನಲ್ಲಿದ್ದಾರೆಂದು ಹೇಳಿ ಬಿಡುತ್ತಾರೆ.
ಈಗ ನೀವು ಮಕ್ಕಳು
ತಿಳಿದುಕೊಂಡಿದ್ದೀರಿ - ನಾವು ತಂದೆಯ ಮಕ್ಕಳಾಗಿ ಬಿಟ್ಟಿದ್ದೇವೆ. ಈಗ ತಂದೆಯ ಮತದನುಸಾರವೇ
ನಡೆಯಬೇಕಾಗಿದೆ. ಭಲೆ ವಿದೇಶದಲ್ಲಿದ್ದೀರಿ, ಅಲ್ಲಿದ್ದರೂ ಸಹ ಕೇವಲ ತಂದೆಯನ್ನು ನೆನಪು
ಮಾಡಬೇಕಾಗಿದೆ, ನಿಮಗೆ ಶ್ರೀಮತ ಸಿಗುತ್ತದೆ. ನೆನಪಿನ ವಿನಃ ಆತ್ಮವು ತಮೋಪ್ರಧಾನದಿಂದ
ಸತೋಪ್ರಧಾನವಾಗಲು ಸಾಧ್ಯವಿಲ್ಲ. ನೀವು ಹೇಳುತ್ತೀರಿ - ಬಾಬಾ, ನಾವು ತಮ್ಮಿಂದ ಪೂರ್ಣ ಆಸ್ತಿಯನ್ನು
ತೆಗೆದುಕೊಳ್ಳುತ್ತೇವೆ. ಹೇಗೆ ನಮ್ಮ ಬಾಬಾರವರು ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ ಹಾಗೆಯೇ
ನಾವೂ ಸಹ ಪುರುಷಾರ್ಥ ಮಾಡಿ ಅವರ ಸಿಂಹಾಸನದ ಮೇಲೆ ಅವಶ್ಯವಾಗಿ ಕುಳಿತುಕೊಳ್ಳುತ್ತೇವೆ.
ಮಮ್ಮಾ-ಬಾಬಾರವರು ರಾಜ ರಾಜೇಶ್ವರಿಯಾಗುತ್ತಾರೆ ಅಂದಾಗ ನಾವೂ ಆಗುತ್ತೇವೆ. ಎಲ್ಲರಿಗಾಗಿ ಪರೀಕ್ಷೆಯು
ಒಂದೇ ಆಗಿದೆ. ನಿಮಗೆ ಬಹಳ ಚಿಕ್ಕ ಮಾತನ್ನು ಕಲಿಸಲಾಗುತ್ತದೆ - ಕೇವಲ ತಂದೆಯನ್ನು ನೆನಪು ಮಾಡಿ.
ಇದಕ್ಕೆ ಸಹಜ ರಾಜಯೋಗ ಬಲವೆಂದು ಕರೆಯಲಾಗುವುದು. ನಿಮಗೆ ತಿಳಿದಿದೆ - ಯೋಗದಿಂದ ಬಹಳ ಬಲ ಸಿಗುತ್ತದೆ.
ತಿಳಿದುಕೊಳ್ಳುತ್ತಾರೆ - ನಾವು ಯಾವುದೇ ವಿಕರ್ಮ ಮಾಡಿದರೂ ಶಿಕ್ಷೆಯನ್ನು ಅನುಭವಿಸುತ್ತೇವೆ, ಪದವಿ
ಭ್ರಷ್ಟವಾಗುತ್ತದೆ. ನೆನಪಿನಲ್ಲಿಯೂ ಮಾಯೆಯು ವಿಘ್ನಗಳನ್ನು ಹಾಕುತ್ತದೆ. ಸದ್ಗುರುವಿನ ನಿಂದಕರಿಗೆ
ನೆಲೆಯಿಲ್ಲವೆಂದು ಗಾಯನವಿದೆ. ಅವರಂತೂ ಗುರುವಿನ ನಿಂದಕರಿಗೆ...... ಎಂದು ಹೇಳುತ್ತಾರೆ. ನಿರಾಕಾರ
ತಂದೆಯ ಬಗ್ಗೆ ಅವರಿಗೆ ತಿಳಿದಿಲ್ಲ. ಭಕ್ತರಿಗೆ ಫಲವನ್ನು ಕೊಡುವವರು ಭಗವಂತನೆಂದು ಗಾಯನವಿದೆ
ಅಂದಾಗ ಸಾಧು-ಸಂತ ಮೊದಲಾದವರೆಲ್ಲರೂ ಭಕ್ತರಾಗಿದ್ದಾರೆ. ಭಕ್ತರೇ ಗಂಗಾ ಸ್ನಾನ ಮಾಡಲು ಹೋಗುತ್ತಾರೆ.
ಭಕ್ತರು ಭಕ್ತರಿಗೆ ಫಲ ಕೊಡುವುದಿಲ್ಲ. ಒಂದುವೇಳೆ ಭಕ್ತರೇ ಭಕ್ತರಿಗೆ ಫಲ ಕೊಡುವುದಾದರೆ ಮತ್ತೆ
ಭಗವಂತನನ್ನು ಏಕೆ ನೆನಪು ಮಾಡುವುದು? ಇದು ಭಕ್ತಿಮಾರ್ಗವಾಗಿದೆ. ಎಲ್ಲರೂ ಭಕ್ತರಾಗಿದ್ದಾರೆ.
ಭಕ್ತರಿಗೆ ಫಲವನ್ನು ಕೊಡುವವರು ಭಗವಂತನಾಗಿದ್ದಾರೆ. ಹೆಚ್ಚು ಭಕ್ತಿ ಮಾಡುವವರು ಕಡಿಮೆ ಭಕ್ತಿ
ಮಾಡುವವರಿಗೆ ಫಲ ಕೊಡುತ್ತಾರೆಂದಲ್ಲ. ಭಕ್ತಿಯೆಂದರೆ ಭಕ್ತಿ. ರಚನೆಗೆ ಹೇಗೆ ಆಸ್ತಿಯನ್ನು ಕೊಡುವರು!
ಆಸ್ತಿಯು ರಚಯಿತನಿಂದಲೇ ಸಿಗುತ್ತದೆ. ಈ ಸಮಯದಲ್ಲಿ ಎಲ್ಲರೂ ಭಕ್ತರಾಗಿದ್ದಾರೆ. ಯಾವಾಗ ಜ್ಞಾನವು
ಸಿಗುತ್ತದೆಯೋ ಆಗ ಭಕ್ತಿಯು ತಾನಾಗಿಯೇ ಬಿಟ್ಟು ಹೋಗುತ್ತದೆ, ಜ್ಞಾನದ ಜಿಂದಾಬಾದ್ ಆಗುತ್ತದೆ.
ಜ್ಞಾನವಿಲ್ಲದೆ ಸದ್ಗತಿ ಹೇಗಾಗುವುದು? ಎಲ್ಲರೂ ತಮ್ಮ ಲೆಕ್ಕಾಚಾರಗಳನ್ನು ಮುಗಿಸಿಕೊಂಡು ಹೊರಟು
ಹೋಗುತ್ತಾರೆ ಅಂದಾಗ ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ವಿನಾಶವು ಸಮ್ಮುಖದಲ್ಲಿಯೇ ನಿಂತಿದೆ.
ವಿನಾಶಕ್ಕೆ ಮೊದಲೇ ಪುರುಷಾರ್ಥ ಮಾಡಿ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ.
ನೀವು
ತಿಳಿದುಕೊಂಡಿದ್ದೀರಿ - ನಾವೀಗ ಪಾವನ ಪ್ರಪಂಚದಲ್ಲಿ ಹೋಗುತ್ತಿದ್ದೇವೆ, ಯಾರು ಬ್ರಾಹ್ಮಣರಾಗುವರೋ
ಅವರೇ ನಿಮಿತ್ತರಾಗುತ್ತಾರೆ. ಬ್ರಹ್ಮಾ ಮುಖ ವಂಶಾವಳಿ ಬ್ರಾಹ್ಮಣರಾಗದೇ ನೀವು ತಂದೆಯಿಂದ
ಆಸ್ತಿಯನ್ನು ಪಡೆಯಲು ಸಾಧ್ಯವಿಲ್ಲ. ತಂದೆಯು ಮಕ್ಕಳನ್ನು ರಚಿಸುವುದೇ ಆಸ್ತಿಯನ್ನು ಕೊಡುವುದಕ್ಕಾಗಿ.
ಶಿವ ತಂದೆಯ ಮಕ್ಕಳಂತು ನಾವು ಆಗಿಯೇ ಇದ್ದೇವೆ, ಸೃಷ್ಟಿಯನ್ನು ರಚಿಸುವುದೇ ಮಕ್ಕಳಿಗೆ ಆಸ್ತಿಯನ್ನು
ಕೊಡುವುದಕ್ಕಾಗಿ. ಶರೀರಧಾರಿಗಳಿಗೆ ಆಸ್ತಿಯನ್ನು ಕೊಡುವರಲ್ಲವೆ. ಆತ್ಮಗಳಂತು ಮೇಲಿರುತ್ತಾರೆ.
ಅಲ್ಲಿ ಆಸ್ತಿ ಅಥವಾ ಪ್ರಾಲಬ್ಧದ ಮಾತೇ ಇಲ್ಲ. ನೀವೀಗ ಪುರುಷಾರ್ಥ ಮಾಡಿ ಪ್ರಾಲಬ್ಧವನ್ನು
ಪಡೆಯುತ್ತಿದ್ದೀರಿ. ಇದು ಪ್ರಪಂಚದವರಿಗೆ ತಿಳಿದೇ ಇಲ್ಲ. ಈಗ ಸಮಯ ಸಮೀಪಕ್ಕೆ ಬರುತ್ತಿದೆ, ಕೇವಲ
ಬಾಂಬುಗಳನ್ನು ಇಟ್ಟುಕೊಳ್ಳುವುದಕ್ಕಾಗಿ ತಯಾರಿಸಿಲ್ಲ. ಬಹಳಷ್ಟು ತಯಾರಿ ನಡೆಯುತ್ತಿದೆ. ಈಗ ತಂದೆಯು
ನಮಗೆ ಆದೇಶ ನೀಡುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ ಇಲ್ಲದಿದ್ದರೆ ಅಂತಿಮದಲ್ಲಿ ಬಹಳ
ಅಳಬೇಕಾಗುವುದು. ರಾಜ ವಿದ್ಯೆಯ ಪರೀಕ್ಷೆಯಲ್ಲಿ ಯಾರಾದರೂ ಅನುತ್ತೀರ್ಣರಾದರೆ ಹೋಗಿ ಕೋಪದಲ್ಲಿ
ಮುಳುಗಿ ಬಿಡುತ್ತಾರೆ. ಇಲ್ಲಿ ಕೋಪದ ಮಾತಂತೂ ಇಲ್ಲ. ಅಂತಿಮದಲ್ಲಿ ನಿಮಗೆ ಬಹಳ
ಸಾಕ್ಷಾತ್ಕಾರಗಳಾಗುತ್ತವೆ. ನಾವು ಏನೇನಾಗುತ್ತೇವೆ ಎಂಬುದೂ ಸಹ ತಿಳಿಯುತ್ತದೆ. ಪುರುಷಾರ್ಥ
ಮಾಡಿಸುವುದು ತಂದೆಯ ಕೆಲಸವಾಗಿದೆ. ಮಕ್ಕಳು ಹೇಳುತ್ತಾರೆ- ಬಾಬಾ, ನಾವು ಕರ್ಮ ಮಾಡುತ್ತಾ ನೆನಪು
ಮಾಡುವುದನ್ನು ಮರೆತು ಹೋಗುತ್ತೇವೆ, ಇನ್ನೂ ಕೆಲವರು ಬಾಬಾ, ನೆನಪು ಮಾಡಲು ಬಿಡುವು
ಸಿಗುವುದಿಲ್ಲವೆಂದು ಹೇಳುತ್ತಾರೆ. ಇದಕ್ಕೆ ತಂದೆಯು ತಿಳಿಸುತ್ತಾರೆ - ಒಳ್ಳೆಯದು, ಸಮಯವನ್ನು
ತೆಗೆದು ನೆನಪಿನಲ್ಲಿ ಕುಳಿತುಕೊಳ್ಳಿ, ತಂದೆಯನ್ನು ನೆನಪು ಮಾಡಿ. ಪರಸ್ಪರ ಮಿಲನ ಮಾಡುತ್ತೀರೆಂದರೂ
ಸಹ ಇದೇ ಪ್ರಯತ್ನ ಮಾಡಿ, ನಾವು ತಂದೆಯನ್ನು ನೆನಪು ಮಾಡಬೇಕು. ಪರಸ್ಪರ ಸೇರಿ
ಕುಳಿತುಕೊಳ್ಳುವುದರಿಂದ ನೀವು ಚೆನ್ನಾಗಿ ನೆನಪು ಮಾಡುತ್ತೀರಿ, ಸಂಘಟನೆಯ ಸಹಯೋಗ ಸಿಗುವುದು. ಮೂಲ
ಮಾತು ತಂದೆಯನ್ನು ನೆನಪು ಮಾಡಬೇಕಾಗಿದೆ. ಯಾರಾದರೂ ವಿದೇಶಕ್ಕೆ ಹೋಗುತ್ತೀರೆಂದರೆ ಅಲ್ಲಿ ಕೇವಲ
ಒಂದು ಮಾತನ್ನು ನೆನಪಿಟ್ಟುಕೊಳ್ಳಿ, ತಂದೆಯ ನೆನಪಿನಿಂದಲೇ ನೀವು ತಮೋಪ್ರಧಾನರಿಂದ
ಸತೋಪ್ರಧಾನರಾಗುತ್ತೀರಿ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಕೇವಲ ಒಂದು ಮಾತನ್ನು
ನೆನಪಿಟ್ಟುಕೊಳ್ಳಿ- ತಂದೆಯನ್ನು ನೆನಪು ಮಾಡಿ. ಯೋಗಬಲದಿಂದ ಎಲ್ಲಾ ಪಾಪಗಳು ಭಸ್ಮವಾಗುತ್ತವೆ.
ತಂದೆಯು ತಿಳಿಸುತ್ತಾರೆ- ಮನ್ಮನಾಭವ, ನನ್ನನ್ನು ನೆನಪು ಮಾಡಿದರೆ ವಿಶ್ವದ ಮಾಲೀಕರಾಗುವಿರಿ. ಮೂಲ
ಮಾತು ನೆನಪಿನದಾಗಿದೆ. ನೀವು ಎಲ್ಲಿಯೂ ಹೋಗುವ ಮಾತಿಲ್ಲ, ಮನೆಯಲ್ಲಿಯೇ ಇರಿ, ಕೇವಲ ತಂದೆಯನ್ನು
ನೆನಪು ಮಾಡಿ. ಪವಿತ್ರರಾಗದಿದ್ದರೆ ನೆನಪು ಮಾಡಲು ಸಾಧ್ಯವಿಲ್ಲ. ಎಲ್ಲರೂ ಬಂದು ತರಗತಿಯಲ್ಲಿ
ಓದುತ್ತಾರೆಂದಲ್ಲ, ಮಂತ್ರವನ್ನು ತೆಗೆದುಕೊಂಡ ಮೇಲೆ ಭಲೆ ಎಲ್ಲಿಯಾದರೂ ಹೋಗಿರಿ, ಸತೋಪ್ರಧಾನರಾಗುವ
ಮಾರ್ಗವನ್ನಂತೂ ತಂದೆಯು ತಿಳಿಸಿದ್ದಾರೆ. ವಾಸ್ತವದಲ್ಲಿ ಸೇವಾಕೇಂದ್ರಕ್ಕೆ ಬರುವುದರಿಂದ ನೀವು
ಹೊಸ-ಹೊಸ ಮಾತುಗಳನ್ನು ಕೇಳುತ್ತಿರುತ್ತೀರಿ. ಒಂದುವೇಳೆ ಯಾವುದೇ ಕಾರಣದಿಂದ ಬರಲು
ಸಾಧ್ಯವಾಗುವುದಿಲ್ಲ, ಮಳೆ ಬರುತ್ತದೆ, ಕರ್ಫ್ಯೂ ಉಂಟಾಗುತ್ತದೆ, ಯಾರೂ ಹೊರ ಬರಲು
ಸಾಧ್ಯವಾಗದಿದ್ದರೆ ಏನು ಮಾಡುತ್ತೀರಿ? ತಂದೆಯು ತಿಳಿಸುತ್ತಾರೆ - ಪರವಾಗಿಲ್ಲ, ನೀವು ಶಿವನ
ಮಂದಿರದಲ್ಲಿ ಹಾಲನ್ನೆರೆಯಲೇಬೇಕಾಗುವುದು ಎಂದಲ್ಲ, ಎಲ್ಲಿಯೇ ಇದ್ದರೂ ಸಹ ನೆನಪಿನಲ್ಲಿರಿ.
ನಡೆಯುತ್ತಾ-ತಿರುಗಾಡುತ್ತಾ ಅನ್ಯರಿಗೂ ಇದನ್ನೇ ಹೇಳಿರಿ - ತಂದೆಯನ್ನು ನೆನಪು ಮಾಡಿದರೆ ವಿಕರ್ಮಗಳು
ವಿನಾಶವಾಗುತ್ತದೆ ಮತ್ತು ದೇವತೆಗಳಾಗಿ ಬಿಡುತ್ತೀರಿ. ಎರಡೇ ಅಕ್ಷರಗಳಿವೆ - ತಂದೆ ರಚಯಿತನಿಂದಲೇ
ಆಸ್ತಿಯನ್ನು ಪಡೆಯಬೇಕಾಗಿದೆ. ರಚಯಿತನು ಒಬ್ಬರೇ ಆಗಿದ್ದಾರೆ, ಅವರು ಎಷ್ಟು ಸಹಜ ಮಾರ್ಗವನ್ನು
ತಿಳಿಸುತ್ತಾರೆ! ತಂದೆಯನ್ನು ನೆನಪು ಮಾಡುವ ಮಂತ್ರವು ಸಿಕ್ಕಿ ಬಿಟ್ಟಿತು. ತಂದೆಯು ತಿಳಿಸುತ್ತಾರೆ
- ಈ ಬಾಲ್ಯವನ್ನು ಮರೆಯಬೇಡಿ. ಇಂದು ನಗುತ್ತಿದ್ದೀರಿ ಒಂದುವೇಳೆ ತಂದೆಯನ್ನು ಮರೆತರೆ ನಾಳೆ
ಅಳಬೇಕಾಗುವುದು. ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕು. ಇಂತಹವರೂ ಅನೇಕರಿದ್ದಾರೆ,
ಸ್ವರ್ಗದಲ್ಲಂತೂ ಹೋಗುತ್ತೇವೆ, ಅದೃಷ್ಟದಲ್ಲಿ ಏನಿರುವುದೋ ಅದೇ ಸಿಗುವುದು.... ಎಂದು ಹೇಳುತ್ತಾರೆ.
ಅವರಿಗೆ ಪುರುಷಾರ್ಥಿಗಳೆಂದು ಹೇಳುವುದಿಲ್ಲ. ಮನುಷ್ಯರು ಪುರುಷಾರ್ಥ ಮಾಡುವುದು ಶ್ರೇಷ್ಠ
ಪದವಿಯನ್ನು ಪಡೆಯುವುದಕ್ಕಾಗಿ ಅಂದಮೇಲೆ ಈಗ ತಂದೆಯಿಂದ ಶ್ರೇಷ್ಠ ಪದವಿ ಸಿಗುತ್ತದೆ ಅಂದಾಗ ಏಕೆ
ಆಲಸ್ಯ ಮಾಡಬೇಕು? ಯಾರು ಶಾಲೆಯಲ್ಲಿ ಓದುವುದಿಲ್ಲವೋ ಅವರು ವಿದ್ಯಾವಂತರ ಮುಂದೆ ತಲೆ
ಬಾಗಬೇಕಾಗುತ್ತದೆ. ತಂದೆಯನ್ನು ಪೂರ್ಣ ನೆನಪು ಮಾಡದಿದ್ದರೆ ಪ್ರಜೆಗಳಲ್ಲಿ ಹೋಗಿ
ನೌಕರ-ಚಾಕರರಾಗುತ್ತಾರೆ. ಇದರಲ್ಲಿಯೇ ಖುಷಿಯಾಗಿ ಬಿಡಬಾರದು. ಮಕ್ಕಳು ಸನ್ಮುಖದಲ್ಲಿ ರಿಫ್ರೆಷ್ ಆಗಿ
ಹೋಗುತ್ತೀರಿ, ಕೆಲವರು ಬಂಧನದಲ್ಲಿರುವವರಾಗಿದ್ದಾರೆ, ಆದರೂ ಪರವಾಗಿಲ್ಲ. ಮನೆಯಲ್ಲಿ ಕುಳಿತೇ
ತಂದೆಯನ್ನು ನೆನಪು ಮಾಡಿ. ಎಷ್ಟೊಂದು ತಿಳಿಸುತ್ತೇನೆ - ಮೃತ್ಯು ಸಮ್ಮುಖದಲ್ಲಿ ನಿಂತಿದೆ.
ಆಕಸ್ಮಿಕವಾಗಿ ಯುದ್ಧವು ಆರಂಭವಾಗಿ ಬಿಡುವುದು. ಕಾಣುತ್ತದೆ, ಯುದ್ಧವು ಆಯಿತೆಂದರೆ ಆಯಿತು.
ರೇಡಿಯೋಗಳಿಂದಲೂ ಎಲ್ಲವೂ ತಿಳಿಯುತ್ತಾ ಹೋಗುತ್ತದೆ. ಸ್ವಲ್ಪ ಗಡಿ ಬಿಡಿ ಮಾಡಿದರೆ ನಾವು ಈ ರೀತಿ
ಮಾಡಿ ಬಿಡುತ್ತೇವೆ ಎಂದು ಹೇಳಿ ಬಿಡುತ್ತಾರೆ. ಮೊದಲೇ ಹೇಳಿ ಬಿಡುತ್ತಾರೆ. ಬಾಂಬುಗಳ ಗರ್ವವು
ಬಹಳಷ್ಟಿದೆ. ತಂದೆಯೂ ಹೇಳುತ್ತಾರೆ - ಮಕ್ಕಳೇ, ನೀವಿನ್ನೂ ಯೋಗ ಬಲದಲ್ಲಿ ಬುದ್ಧಿವಂತರಾಗಿಲ್ಲ.
ಯುದ್ಧವಾಗಿ ಬಿಡಲಿ - ಇದು ಡ್ರಾಮಾನುಸಾರ ಆಗುವುದಿಲ್ಲ ಏಕೆಂದರೆ ಮಕ್ಕಳು ಇನ್ನೂ ಪೂರ್ಣ
ಆಸ್ತಿಯನ್ನು ತೆಗೆದುಕೊಂಡಿಲ್ಲ. ಈಗಿನ್ನೂ ಪೂರ್ಣ ರಾಜಧಾನಿಯು ಸ್ಥಾಪನೆಯಾಗಿಲ್ಲ. ಸ್ವಲ್ಪ ಸಮಯ
ಬೇಕು, ಪುರುಷಾರ್ಥ ಮಾಡಿಸುತ್ತಾ ಇರುತ್ತೇವೆ. ಯಾವ ಸಮಯದಲ್ಲಿ ಏನು ಬೇಕಾದರೂ ಆಗಿ ಬಿಡಬಹುದು,
ವಿಮಾನ-ರೈಲು ಬೀಳಬಹುದು. ಮೃತ್ಯುವು ಎಷ್ಟು ಸಹಜವಾಗಿ ನಿಂತಿದೆ, ಧರಣಿಯು ಅಲುಗಾಡುತ್ತಿರುತ್ತದೆ.
ಭೂಕಂಪವು ಎಲ್ಲದಕ್ಕಿಂತ ಹೆಚ್ಚು ಕೆಲಸ ಮಾಡುವುದು. ಇದು ಅಲುಗಾಡಿದಾಗಲೇ ಮನೆಗಳೆಲ್ಲವೂ ಬೀಳುವವು
ಅಂದಾಗ ಮೃತ್ಯುವಿಗೆ ಮೊದಲೇ ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ ಆದ್ದರಿಂದ
ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕಾಗಿದೆ. ಬಾಬಾ, ತಮ್ಮ ವಿನಃ ನಮಗೆ ಮತ್ತ್ಯಾರೂ ಇಲ್ಲ
ಎಂದು ಕೇವಲ ತಂದೆಯನ್ನು ನೆನಪು ಮಾಡುತ್ತಾ ಇರಿ. ಎಷ್ಟು ಸಹಜ ರೀತಿಯಿಂದ ಹೇಗೆ ಚಿಕ್ಕ-ಚಿಕ್ಕ
ಮಕ್ಕಳಿಗೆ ಕುಳಿತು ತಿಳಿಸಿ ಕೊಡುತ್ತಾರೆ, ಮಕ್ಕಳೇ ಮತ್ತ್ಯಾವುದೇ ಕಷ್ಟವನ್ನು ಕೊಡುವುದಿಲ್ಲ,
ಕೇವಲ ನೆನಪು ಮಾಡಿ. ಕಾಮ ಚಿತೆಯನ್ನೇರಿ ನೀವೀಗ ಕಪ್ಪಾಗಿದ್ದೀರಿ ಆದ್ದರಿಂದ ಜ್ಞಾನ ಚಿತೆಯನ್ನೇರಿ
ಪವಿತ್ರರಾಗಿ. ತಮ್ಮ ಉದ್ದೇಶವೇನೆಂದು ಯಾರಾದರೂ ನಿಮ್ಮನ್ನು ಕೇಳಿದರೆ ತಿಳಿಸಿ, ಶಿವ ತಂದೆಯು
ಎಲ್ಲರ ತಂದೆಯಾಗಿದ್ದಾರೆ. ಅವರು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿದರೆ ನಿಮ್ಮ
ವಿಕರ್ಮಗಳು ವಿನಾಶವಾಗುತ್ತದೆ ಮತ್ತು ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುತ್ತೀರಿ.
ಕಲಿಯುಗದಲ್ಲಿ ಎಲ್ಲರೂ ತಮೋಪ್ರಧಾನರಿದ್ದಾರೆ. ಸರ್ವರ ಸದ್ಗತಿದಾತನು ಒಬ್ಬರೇ ತಂದೆಯಾಗಿದ್ದಾರೆ.
ಈಗ ತಂದೆಯು
ತಿಳಿಸುತ್ತಾರೆ - ಕೇವಲ ನನ್ನನ್ನು ನೆನಪು ಮಾಡಿದರೆ ತುಕ್ಕು ಇಳಿಯುವುದು. ಕೇವಲ ಇಷ್ಟಾದರೂ
ಸಂದೇಶವನ್ನು ಕೊಡಬಹುದಲ್ಲವೆ. ಸ್ವಯಂ ನೆನಪು ಮಾಡುತ್ತೀರೆಂದರೆ ಅನ್ಯರಿಗೂ ನೆನಪು ಮಾಡಿಸುತ್ತೀರಿ.
ತಾನೇ ನೆನಪು ಮಾಡದಿದ್ದರೆ ಅನ್ಯರಿಗೂ ರುಚಿಯಿಂದ ಹೇಳುವುದಿಲ್ಲ ಅಂದರೆ ಅದು ಅಂತರಾಳದಿಂದ
ಬರುವುದಿಲ್ಲ. ತಂದೆಯು ತಿಳಿಸುತ್ತಾರೆ - ಎಲ್ಲಿಯಾದರೂ ಇರಿ, ಎಷ್ಟು ಸಾಧ್ಯವೋ ಕೇವಲ ತಂದೆಯನ್ನು
ನೆನಪು ಮಾಡಿ. ಯಾರೇ ಸಿಕ್ಕಿದರೂ ಇದೇ ಶಿಕ್ಷಣ ಕೊಡಿ - ಮೃತ್ಯು ಸಮ್ಮುಖದಲ್ಲಿ ನಿಂತಿದೆ, ತಂದೆಯು
ತಿಳಿಸುತ್ತಾರೆ, ನೀವೆಲ್ಲರೂ ತಮೋಪ್ರಧಾನ ಪತಿತರಾಗಿ ಬಿಟ್ಟಿದ್ದೀರಿ. ಈಗ ನನ್ನನ್ನು ನೆನಪು ಮಾಡಿ,
ಪವಿತ್ರರಾಗಿ. ಆತ್ಮವೇ ಪತಿತನಾಗಿದೆ, ಸತ್ಯಯುಗದಲ್ಲಿ ಪಾವನವಾಗಿರುತ್ತದೆ. ತಂದೆಯು ತಿಳಿಸುತ್ತಾರೆ
- ನೆನಪಿನಿಂದಲೇ ಆತ್ಮವು ಪಾವನವಾಗುವುದು, ಮತ್ತ್ಯಾವುದೇ ಉಪಾಯವಿಲ್ಲ. ಈ ಸಂದೇಶವನ್ನು ಎಲ್ಲರಿಗೆ
ಕೊಡುತ್ತಾ ಹೋಗಿ ಆಗ ಅನೇಕರ ಕಲ್ಯಾಣ ಮಾಡುತ್ತೀರಿ. ಮತ್ತ್ಯಾವುದೇ ಕಷ್ಟವನ್ನು ನಿಮಗೆ
ಕೊಡುವುದಿಲ್ಲ. ಎಲ್ಲಾ ಆತ್ಮರನ್ನು ಪಾವನ ಮಾಡುವವರು ಪತಿತ-ಪಾವನ ತಂದೆಯೇ ಆಗಿದ್ದಾರೆ.
ಎಲ್ಲರಿಗಿಂತ ಸರ್ವೋತ್ತಮ ಪುರುಷೋತ್ತಮರನ್ನಾಗಿ ಮಾಡುವವರು ತಂದೆಯಾಗಿದ್ದಾರೆ. ಯಾರು
ಪೂಜ್ಯರಾಗಿದ್ದರೋ ಅವರೇ ನಂತರ ಪೂಜಾರಿಯಾಗಿದ್ದಾರೆ. ರಾವಣ ರಾಜ್ಯದಲ್ಲಿ ನಾವು ಪೂಜಾರಿಗಳಾಗಿದ್ದೇವೆ,
ರಾಮ ರಾಜ್ಯದಲ್ಲಿ ಪೂಜ್ಯರಾಗಿದ್ದೆವು ಈಗ ರಾವಣ ರಾಜ್ಯದ ಅಂತ್ಯವಾಗಿದೆ. ತಂದೆಯನ್ನು ನೆನಪು
ಮಾಡುವುದರಿಂದ ನಾವು ಪೂಜಾರಿಗಳಿಂದ ಪೂಜ್ಯರಾಗುತ್ತೇವೆ. ಅನ್ಯರಿಗೆ ಮಾರ್ಗವನ್ನು ತೋರಿಸಬೇಕಾಗಿದೆ.
ವೃದ್ಧರದೂ ಸರ್ವೀಸ್ ಮಾಡಬೇಕು. ಮಿತ್ರ ಸಂಬಂಧಿ ಮೊದಲಾದವರಿಗೂ ಸಂದೇಶ ಕೊಡಿ. ಸತ್ಸಂಗ, ಮಂದಿರ
ಇತ್ಯಾದಿಗಳು ಅನೇಕ ಪ್ರಕಾರವಾಗಿವೆ. ನಿಮ್ಮದು ಒಂದೇ ಪ್ರಕಾರವಾಗಿದೆ. ಕೇವಲ ತಂದೆಯ ಪರಿಚಯ
ಕೊಡಬೇಕಾಗಿದೆ. ಶಿವ ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿದರೆ ನೀವು ಸ್ವರ್ಗದ
ಮಾಲೀಕರಾಗುವಿರಿ. ನಿರಾಕಾರ ಶಿವತಂದೆ, ಸರ್ವರ ಸದ್ಗತಿದಾತ ತಂದೆಯು ಆತ್ಮರಿಗೆ ಹೇಳುತ್ತಾರೆ -
ನನ್ನನ್ನು ನೆನಪು ಮಾಡಿದರೆ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗುವಿರಿ. ಇದನ್ನು ತಿಳಿಸುವುದು
ಬಹಳ ಸಹಜವಲ್ಲವೆ. ವೃದ್ಧರು ಸರ್ವೀಸ್ ಮಾಡಬಹುದು, ಮೂಲ ಮಾತೇ ಇದಾಗಿದೆ. ಮದುವೆ ಮುಂಜಿ ಎಲ್ಲಿಗೇ
ಹೋಗುತ್ತೀರೆಂದರೆ ಕಿವಿಯಲ್ಲಿ ಈ ಮಾತನ್ನು ತಿಳಿಸಿ - ಗೀತೆಯ ಭಗವಂತನು ತಿಳಿಸುತ್ತಾರೆ - ನನ್ನನ್ನು
ನೆನಪು ಮಾಡಿ, ಈ ಮಾತನ್ನು ಎಲ್ಲರೂ ಇಷ್ಟ ಪಡುತ್ತಾರೆ, ಹೆಚ್ಚು ಹೇಳುವ ಅವಶ್ಯಕತೆಯಿಲ್ಲ. ಕೇವಲ
ತಂದೆಯ ಸಂದೇಶವನ್ನು ಕೊಡಬೇಕಾಗಿದೆ - ತಂದೆಯು ತಿಳಿಸುತ್ತಾರೆ, ನನ್ನನ್ನು ನೆನಪು ಮಾಡಿ. ಒಳ್ಳೆಯದು
- ಈ ರೀತಿ ತಿಳಿದುಕೊಳ್ಳಿ - ಭಗವಂತನೇ ಪ್ರೇರಣೆ ಕೊಡುತ್ತಾರೆ. ಸ್ವಪ್ನದಲ್ಲಿ
ಸಾಕ್ಷಾತ್ಕಾರವಾಗುತ್ತದೆ, ಶಬ್ಧವು ಕೇಳಿ ಬರುತ್ತದೆ - ತಂದೆಯು ತಿಳಿಸುತ್ತಾರೆ, ನನ್ನನ್ನು ನೆನಪು
ಮಾಡಿದರೆ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗುವಿರಿ. ನೀವು ಸ್ವಯಂ ಈ ಚಿಂತನೆ ಮಾಡುತ್ತಾ ಇದ್ದರೂ
ಸಹ ನಮ್ಮ ದೋಣಿಯು ಪಾರಾಗುವುದು. ನಾವು ಪ್ರತ್ಯಕ್ಷದಲ್ಲಿ ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆ
ಮತ್ತು ತಂದೆಯಿಂದ 21 ಜನ್ಮಗಳ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಅಂದಮೇಲೆ ಖುಷಿಯಿರಬೇಕು.
ತಂದೆಯನ್ನು ಮರೆತಾಗಲೇ ಕಷ್ಟವಾಗುತ್ತದೆ. ತಂದೆಯು ಎಷ್ಟು ಸಹಜವಾಗಿ ತಿಳಿಸುತ್ತಾರೆ, ತನ್ನನ್ನು
ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿರಿ ಆಗ ಆತ್ಮವು ಸತೋಪ್ರಧಾನವಾಗಿ ಬಿಡುವುದು. ಇವರಿಗೆ
ಸರಿಯಾದ ಮಾರ್ಗವು ಸಿಕ್ಕಿದೆ, ಈ ಮಾರ್ಗವನ್ನು ಎಂದೂ ಯಾರೂ ತಿಳಿಸಲು ಸಾಧ್ಯವಿಲ್ಲವೆಂದು
ತಿಳಿದುಕೊಳ್ಳುವರು. ಒಂದುವೇಳೆ ಶಿವ ತಂದೆಯನ್ನು ನೆನಪು ಮಾಡಿ ಎಂದು ಹೇಳುವುದಾದರೆ ಮತ್ತೆ ಸಾಧುಗಳ
ಬಳಿ ಯಾರು ಹೋಗುತ್ತಾರೆ! ಇಂತಹ ಸಮಯ ಬರುವುದು, ಯಾವಾಗ ನೀವು ಮನೆಯಿಂದ ಹೊರಗೆ ಬರಲೂ ಸಾಧ್ಯವಿಲ್ಲ.
ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಶರೀರವನ್ನು ಬಿಟ್ಟು ಬಿಡುತ್ತೀರಿ. ಅಂತ್ಯಕಾಲದಲ್ಲಿ ಯಾರು
ಶಿವ ತಂದೆಯ ಸ್ಮರಣೆ ಮಾಡುವರೋ...... ಅವರು ಲಕ್ಷ್ಮೀ-ನಾರಾಯಣರ ರಾಜ್ಯದಲ್ಲಿ ಬರುತ್ತಾರಲ್ಲವೆ.
ಮತ್ತೆ-ಮತ್ತೆ ರಾಜ್ಯ ಪದವಿಯನ್ನು ಪಡೆಯುವಿರಿ. ಕೇವಲ ತಂದೆಯನ್ನು ನೆನಪು ಮಾಡಿ ಮತ್ತು ಪ್ರೀತಿ
ಮಾಡಿ. ನೆನಪಿಲ್ಲದೆ ಹೇಗೆ ಪ್ರೀತಿ ಮಾಡುವಿರಿ? ಸುಖ ಸಿಗುತ್ತದೆ ಆಗಲೇ ಪ್ರೀತಿ ಮಾಡಲಾಗುತ್ತದೆ.
ದುಃಖ ಕೊಡುವವರನ್ನು ಪ್ರೀತಿ ಮಾಡಲಾಗುವುದಿಲ್ಲ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು
ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ ಆದ್ದರಿಂದ ನನ್ನನ್ನು ಪ್ರೀತಿ ಮಾಡಿ. ತಂದೆಯ ಮತದಂತೆ
ನಡೆಯಬೇಕಲ್ಲವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ಖುಷಿಯಲ್ಲಿರಲು ನೆನಪಿನ ಪರಿಶ್ರಮ ಪಡಬೇಕಾಗಿದೆ. ನೆನಪಿನ ಬಲವು ಆತ್ಮವನ್ನು ಸತೋಪ್ರಧಾನ
ಮಾಡುವಂತದ್ದಾಗಿದೆ. ಪ್ರೀತಿಯಿಂದ ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ.
2. ಶ್ರೇಷ್ಠ ಪದವಿಯನ್ನು
ಪಡೆಯಲು ವಿದ್ಯೆಯ ಮೇಲೆ ಸಂಪೂರ್ಣ ಗಮನ ಕೊಡಬೇಕಾಗಿದೆ. ಅದೃಷ್ಟದಲ್ಲಿ ಏನಿರುವುದೋ ಅದಾಗುವುದು
ಎಂದಲ್ಲ - ಈ ಆಲಸ್ಯವನ್ನು ಬಿಟ್ಟು ಪೂರ್ಣ ಆಸ್ತಿಗೆ ಅಧಿಕಾರಿಗಳಾಗಬೇಕಾಗಿದೆ.
ವರದಾನ:
ಅಲ್ಪಕಾಲದ (ಲೌಕಿದ)
ಜವಾಬ್ದಾರಿಗಳನ್ನು ಬೇಹದ್ದಿನಲ್ಲಿ ಪರಿವರ್ತನೆ ಮಾಡುವಂತಹ ಸ್ಮೃತಿ ಸ್ವರೂಪ ನಷ್ಟಮೋಹ ಭವ.
ನಷ್ಟಮೋಹರು
ಆಗುವುದಕ್ಕಾಗಿ ಕೇವಲ ತಮ್ಮ ಸ್ಮೃತಿ ಸ್ವರೂಪವನ್ನು ಪರಿವರ್ತನೆ ಮಾಡಿಕೊಳ್ಳಿರಿ. ಯಾವಾಗ ನಾವು
ಗೃಹಸ್ಥಿ ಆಗಿದ್ದೇವೆ, ನಮ್ಮ ಮನೆ, ನಮ್ಮ ಸಂಬಂಧ ಎನ್ನುವ ಸ್ಮೃತಿಯಿರುತ್ತದೆಯೋ ಆಗಲೇ
ಮೋಹವುಂಟಾಗುವುದು. ಈಗ ಈ ಅಲ್ಪಕಾಲದ ಜವಾಬ್ದಾರಿಗಳನ್ನು ಬೇಹದ್ದಿನ ಜವಾಬ್ದಾರಿಗಳಲ್ಲಿ ಪರಿವರ್ತನೆ
ಮಾಡಿ ಬಿಡಿ. ಬೇಹದ್ದಿನ ಜವಾಬ್ದಾರಿಗಳನ್ನು ನಿಭಾಯಿಸುತ್ತೀರೆಂದರೆ, ಅಲ್ಪಕಾಲದ ಜವಾಬ್ದಾರಿಯು
ಸ್ವತಹವಾಗಿಯೇ ಪೂರ್ಣವಾಗಿ ಬಿಡುತ್ತದೆ. ಆದರೆ ಒಂದುವೇಳೆ ಬೇಹದ್ದಿನ ಜವಾಬ್ದಾರಿಯನ್ನು ಮರೆತು,
ಕೇವಲ ಅಲ್ಪಕಾಲದ ಜವಾಬ್ದಾರಿಯನ್ನೇ ನಿಭಾಯಿಸುತ್ತೀರೆಂದರೆ, ಅದು ಮತ್ತಷ್ಟು ಹಾಳು ಮಾಡುತ್ತೀರಿ
ಏಕೆಂದರೆ ಆ ಜವಾಬ್ದಾರಿಯಲ್ಲಿ ಮೋಹವು ಮರ್ಜ್ ಆಗಿ ಬಿಡುತ್ತದೆ. ಆದ್ದರಿಂದ ತಮ್ಮ ಸ್ಮೃತಿ
ಸ್ವರೂಪವನ್ನು ಪರಿವರ್ತನೆ ಮಾಡಿ ನಷ್ಟಮೋಹವುಳ್ಳವರು ಆಗಿರಿ.
ಸ್ಲೋಗನ್:
ಇಂತಹ ತೀವ್ರ
ಹಾರುವ ಪಕ್ಷಿಯಾಗಿರಿ, ಅದರಿಂದ ಮಾತುಗಳೆಂಬ ಮೋಡಗಳು ಸೆಕೆಂಡಿನಲ್ಲಿಯೇ ಪಾರಾಗಿ ಬಿಡಲಿ.
ಅವ್ಯಕ್ತ ಸೂಚನೆ:- ಏಕತೆ
ಮತ್ತು ವಿಶ್ವಾಸದ ಗುಣ ಲಕ್ಷಣಗಳ ಮೂಲಕ ಸಫಲತಾ ಸಂಪನ್ನರಾಗಿರಿ.
ಯಾವುದೇ ಕಾರ್ಯದ ಸಫಲತೆಗೆ
ಎರಡು ಶ್ರೇಷ್ಠ ಭುಜಗಳಿವೆ: 1. ಪರಸ್ಪರದಲ್ಲಿ ವಿಶ್ವಾಸ ಮತ್ತು 2. ಏಕತೆ, ಎಲ್ಲಿ ಸಂಘಟಿತ
ರೂಪದಲ್ಲಿ ಎಲ್ಲರದ್ದು ಏಕಮತವಿದೆ, ಪರಸ್ಪರದಲ್ಲಿ ಒಬ್ಬರಿನ್ನೊಬ್ಬರ ಪ್ರತಿ ವಿಶ್ವಾಸವಿದೆ, ಅಲ್ಲಿ
ಸಫಲತೆ ಕೊರಳಿನ ಹಾರವಾಗಿದೆ. ಸಂಸ್ಕಾರ ಭಿನ್ನ-ಭಿನ್ನವಾಗಿವೆ ಮತ್ತು ಇರುತ್ತವೆ, ಆದರೆ ಒಂದುವೇಳೆ
ಯಾವುದೇ ಸಂಸ್ಕಾರ ಘರ್ಷಣೆಯುಳ್ಳವರಾಗಿದ್ದರೆ ಇನ್ನೊಬ್ಬರು ಚಪ್ಪಾಳೆ ತಟ್ಟಬೇಡಿ. ಪ್ರತಿಯೊಬ್ಬರು
ತಮ್ಮನ್ನು ಚೇಂಜ್ ಮಾಡಿಕೊಳ್ಳಿ ಆಗ ಏಕತೆ ಕಾಯಮಾಗಿರಲು ಸಾಧ್ಯ.