02.05.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ-
ಏಕಾಂತದಲ್ಲಿ ಕುಳಿತು ತಮ್ಮೊಂದಿಗೆ ಮಾತನಾಡಿಕೊಳ್ಳಿ- ನಾವು ಅವಿನಾಶಿ ಆತ್ಮರಾಗಿದ್ದೇವೆ,
ತಂದೆಯಿಂದ ಕೇಳುತ್ತೇವೆ- ಈ ಅಭ್ಯಾಸ ಮಾಡಿ”
ಪ್ರಶ್ನೆ:
ಯಾವ ಮಕ್ಕಳು
ನೆನಪಿನಲ್ಲಿ ಆಲಸಿಗಳಾಗಿರುತ್ತಾರೆ, ಅವರ ಬಾಯಿಂದ ಯಾವ ಮಾತುಗಳು ಬರುತ್ತವೆ?
ಉತ್ತರ:
ಅವರು
ಹೇಳುತ್ತಾರೆ- ನಾವು ಶಿವತಂದೆಯ ಮಕ್ಕಳಂತೂ ಆಗಿಯೇ ಇದ್ದೇವೆ, ನೆನಪಿನಲ್ಲಿಯೇ ಇದ್ದೇವೆ ಆದರೆ
ತಂದೆಯು ಹೇಳುತ್ತಾರೆ- ಅದೆಲ್ಲವೂ ಸುಳ್ಳಾಗಿದೆ, ಆಲಸ್ಯವಿದೆ. ಇದರಲ್ಲಿ ಪೂರ್ಣ ಪುರುಷಾರ್ಥ ಮಡಬೇಕು.
ಮುಂಜಾನೆಯೆದ್ದು ತನ್ನನ್ನು ಆತ್ಮನೆಂದು ತಿಳಿದು ನೆನಪಿನಲ್ಲಿ ಕುಳಿತುಕೊಳ್ಳಬೇಕಾಗಿದೆ.
ವಾರ್ತಾಲಾಪ ಮಾಡಬೇಕಾಗಿದೆ. ಆತ್ಮವೇ ವಾರ್ತಾಲಾಪ ಮಾಡುತ್ತದೆ. ನೀವೀಗ ಆತ್ಮಾಭಿಮಾನಿಯಾಗುತ್ತೀರಿ.
ಕೇವಲ ದೇಹೀ ಅಭಿಮಾನಿ ಮಕ್ಕಳೇ ಜ್ಞಾನದ ಅಭಿಮಾನವನ್ನಿಟ್ಟುಕೊಳ್ಳದೆ ನೆನಪಿನ ಚಾರ್ಟನ್ನೂ ಇಡುತ್ತಾರೆ.
ಗೀತೆ:
ಮುಖವನ್ನು
ನೋಡಿಕೊ ಪ್ರಾಣಿ..................
ಓಂ ಶಾಂತಿ.
ಆತ್ಮೀಯ ಮಕ್ಕಳಿಗೆ ತಿಳಿಸಲಾಗಿದೆ- ಆತ್ಮಕ್ಕೆ ಪ್ರಾಣವೆಂದು ಹೇಳಲಾಗುತ್ತದೆ. ಈಗ ತಂದೆಯು
ಆತ್ಮಗಳಿಗೆ ತಿಳಿಸುತ್ತಾರೆ, ಈ ಗೀತೆಗಳು ಭಕ್ತಿಮಾರ್ಗದ್ದಾಗಿದೆ, ಕೇವಲ ಈ ಗೀತೆಗಳ ಸಾರವನ್ನು
ತಿಳಿಸಿಕೊಡುತ್ತೇನೆ. ನೀವಿಲ್ಲಿ ಕುಳಿತುಕೊಳ್ಳುತ್ತೀರೆಂದರೆ ತಮ್ಮನ್ನು ಆತ್ಮವೆಂದು ತಿಳೀಯಿರಿ,
ದೇಹದ ಪರಿವೆಯನ್ನು ಬಿಡಬೇಕಾಗಿದೆ. ನಾನಾತ್ಮ ಬಹಳ ಸೂಕ್ಷ್ಮಬಿಂದುವಾಗಿದ್ದೇನೆ, ನಾನೇ ಈ ಶರೀರದ
ಮೂಲಕ ಪಾತ್ರವನ್ನಭಿನಯಿಸುತ್ತೇನೆ, ಈ ಆತ್ಮದ ಜ್ಞಾನವು ಯಾರಿಗೂ ಇಲ್ಲ. ಇದನ್ನು ತಂದೆಯು
ತಿಳಿಸುತ್ತಾರೆ- ತನ್ನನ್ನು ಆತ್ಮವೆಂದು ತಿಳಿಯಿರಿ, ನಾನು ಅತೀ ಚಿಕ್ಕ ಬಿಂದುವಾಗಿದ್ದೇನೆ, ಆತ್ಮವೇ
ಈ ಶರೀರದಿಂದ ಎಲ್ಲಾ ಪಾತ್ರವನ್ನಭಿನಯಿಸುತ್ತದೆ. ಈ ಸ್ಮೃತಿಯಿಂದ ದೇಹಾಭಿಮಾನವು ಹೊರಟುಹೋಗುವುದು,
ಇದೇ ಪರಿಶ್ರಮವಾಗಿದೆ. ನಾವಾತ್ಮಗಳು ಈ ನಾಟಕದ ಪಾತ್ರಧಾರಿಗಳಾಗಿದ್ದೇವೆ, ಇದರಲ್ಲಿ ಪ್ರಮುಖ
ಪಾತ್ರಧಾರಿಯು ಪರಮಪಿತ ಪರಮಾತ್ಮನಾಗಿದ್ದಾರೆ. ಬುದ್ಧಿಯಲ್ಲಿದೆ- ಅವರೂ ಸಹ ಎಷ್ಟು
ಸೂಕ್ಷ್ಮಬಿಂದುವಾಗಿದ್ದಾರೆ, ಅವರ ಮಹಿಮೆಯು ಬಹಳ ಭಾರಿಯಾಗಿದೆ! ಜ್ಞಾನಸಾಗರ, ಸುಖದ
ಸಾಗರನಾಗಿದ್ದಾರೆ ಆದರೆ ಅತಿಚಿಕ್ಕ ಬಿಂದುವಾಗಿದ್ದಾರೆ, ನಾವಾತ್ಮರೂ ಸಹ ಚಿಕ್ಕಬಿಂದುಗಳಾಗಿದ್ದೇವೆ,
ಆತ್ಮವನ್ನು ದಿವ್ಯದೃಷ್ಟಿಯಿಲ್ಲದೆ ನೋಡಲು ಸಾಧ್ಯವಿಲ್ಲ. ನೀವೀಗ ಹೊಸ-ಹೊಸ ಮಾತುಗಳನ್ನು
ಕೇಳುತ್ತಿದ್ದೀರಿ, ಇವು ಪ್ರಪಂಚದವರಿಗೇನು ಗೊತ್ತು! ನಾನು ಆತ್ಮ, ಚಿಕ್ಕಬಿಂದುವಾಗಿದ್ದೇನೆ, ನನ್ನ
ತಂದೆಯು ಈ ನಾಟಕದಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದಾರೆ, ಶ್ರೇಷ್ಠಾತಿಶ್ರೇಷ್ಠ ಪಾತ್ರಧಾರಿಯು
ತಂದೆಯಾಗಿದ್ದಾರೆ ನಂತರ ಬೇರೆ-ಬೇರೆಯವರು ಬರುತ್ತಾರೆ. ನಿಮಗೆ ಶರೀರದ ಮೂಲಕವೇ ಮಾತನಾಡಲು ಸಾಧ್ಯ.
ಅಶರೀರಿಯಾದಾಗ ಕರ್ಮೇಂದ್ರಿಯಗಳು ಭಿನ್ನವಾಗುತ್ತವೆ, ರೂಪ, ದೇಶ, ಕಾಲವನ್ನೇ ಅರಿತುಕೊಂಡಿಲ್ಲ.
ಪರಮಾತ್ಮನು ನಾಮ-ರೂಪದಿಂದ ಭಿನ್ನರೆಂದು ಹೇಳಿಬಿಡುತ್ತಾರೆ. ತಂದೆಯು ತಿಳಿಸುತ್ತಾರೆ- ನಾಟಕದನುಸಾರ
ಯಾರು ನಂಬರ್ವನ್ ಸತೋಪ್ರಧಾನರಾಗಿದ್ದಿರೋ ನೀವೇ ಪುನಃ ಸತೋಪ್ರಧಾನರಾಗಬೇಕಾಗಿದೆ. ತಮೋಪ್ರಧಾನರಿಂದ
ಸತೋಪ್ರಧಾನರಾಗಲು ನೀವು ಈ ಸ್ಮೃತಿಯನ್ನು ಇಟ್ಟುಕೊಳ್ಳಬೇಕಾಗಿದೆ- ನಾನಾತ್ಮನಾಗಿದ್ದೇನೆ, ಆತ್ಮವು
ಈ ಶರೀರದ ಮೂಲಕ ಮಾತನಾಡುತ್ತದೆ, ಇದರಲ್ಲಿ ಜ್ಞಾನವಿದೆ, ನಾನಾತ್ಮದಲ್ಲಿ 84 ಜನ್ಮಗಳ ಅವಿನಾಶಿ
ಪಾತ್ರವು ನಿಗಧಿಯಾಗಿದೆ ಎನ್ನುವ ಜ್ಞಾನವು ಮತ್ತ್ಯಾರ ಬುದ್ಧಿಯಲ್ಲಿಯೂ ಇರುವುದಿಲ್ಲ. ಇವು
ಹೊಸ-ಹೊಸ ವಿಚಾರಗಳಾಗಿವೆ. ಏಕಾಂತದಲ್ಲಿ ಕುಳಿತು ತಮ್ಮ ಜೊತೆ ಮಾತನಾಡಿಕೊಳ್ಳಬೇಕು-
ನಾನಾತ್ಮನಾಗಿದ್ದೇನೆ, ತಂದೆಯಿಂದ ಕೇಳುತ್ತಿದ್ದೇನೆ, ಧಾರಣೆಯೂ ನಾನಾತ್ಮದಲ್ಲಿಯೇ ಆಗುತ್ತದೆ,
ನಾನಾತ್ಮದಲ್ಲಿಯೇ ಪಾತ್ರವು ತುಂಬಲ್ಪಟ್ಟಿದೆ, ನಾನಾತ್ಮನು ಅವಿನಾಶಿಯಾಗಿದ್ದೇನೆ, ಇದನ್ನು
ತನ್ನೊಂದಿಗೆ ತಾನು ಗುಪ್ತ ಅಭ್ಯಾಸ ಮಾಡಬೇಕು. ನಾವು ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕಾಗಿದೆ.
ದೇಹಾಭಿಮಾನಿ ಮನುಷ್ಯರಿಗೆ ಆತ್ಮದ ಜ್ಞಾನವೇ ಇಲ್ಲ. ತಮ್ಮ ಬಳಿ ಇಷ್ಟು ದೊಡ್ಡ-ದೊಡ್ಡ
ಗ್ರಂಥಗಳನ್ನಿಟ್ಟುಕೊಳ್ಳುತ್ತಾರೆ, ಎಷ್ಟೊಂದು ಅಹಂಕಾರವಿದೆ. ಇದು ತಮೋಪ್ರಧಾನ ಪ್ರಪಂಚವಾಗಿದೆ,
ಯಾರೂ ಶ್ರೇಷ್ಠ ಆತ್ಮರಿಲ್ಲ. ನೀವು ತಿಳಿದುಕೊಂಡಿದ್ದೀರಿ- ನಾವೀಗ ತಮೋಪ್ರಧಾನರಿಂದ
ಸತೋಪ್ರಧಾನರಾಗುವ ಪುರುಷಾರ್ಥ ಮಾಡಬೇಕಾಗಿದೆ. ಈ ಮಾತನ್ನು ಆಂತರ್ಯದಿಂದ ಗುಪ್ತ ಅಭ್ಯಾಸ
ಮಾಡಬೇಕಾಗಿದೆ. ಜ್ಞಾನವನ್ನು ಹೇಳುವವರು ಅನೇಕರಿದ್ದಾರೆ ಆದರೆ ನೆನಪು ಇಲ್ಲ. ಒಳಗೆ ಆ
ಅಂತರ್ಮುಖತೆಯಿರಬೇಕು- ನಾವು ತಂದೆಯ ನೆನಪಿನಿಂದ ಪತಿತರಿಂದ ಪಾವನರಾಗಬೇಕಾಗಿದೆ. ಕೇವಲ
ಪಂಡಿತರಾಗಬಾರದು. ಇದರ ಮೇಲೆ ಒಬ್ಬ ಪಂಡಿತ ಉದಾಹರಣೆಯೂ ಇದೆ- ರಾಮ-ರಾಮ ಎಂದು ಹೇಳಿದರೆ
ಪಾರಾಗಿಬಿಡುತ್ತೀರೆಂದರೆ ಮಾತೆಯರಿಗೆ ಹೇಳುತ್ತಾ ತಾನೇ ಮರೆತುಹೋದರು.... ಇಂತಹ ಸುಳ್ಳು
ಹೇಳುವವರಾಗಬಾರದು, ಇಂತಹವರೂ ಅನೇಕರಿದ್ದಾರೆ.
ಅನ್ಯರಿಗೆ ಬಹಳ ಚೆನ್ನಾಗಿ
ತಿಳಿಸಿಕೊಡುತ್ತಾರೆ ಆದರೆ ಯೋಗವಿಲ್ಲ. ಇಡೀ ದಿನ ದೇಹಾಭಿಮಾನದಲ್ಲಿರುತ್ತಾರೆ, ಇಲ್ಲದಿದ್ದರೆ
ಚಾರ್ಟ್ ಕಳುಹಿಸುತ್ತಿದ್ದರು- ನಾನು ಇಷ್ಟು ಸಮಯಕ್ಕೆ ಏಳುತ್ತೇನೆ, ಇಷ್ಟು ಮಾಡುತ್ತೇನೆ. ಏನೂ
ಸಮಾಚಾರ ತಿಳಿಸುವುದಿಲ್ಲ. ಜ್ಞಾನವನ್ನು ಬಹಳಷ್ಟು ಹೇಳುತ್ತಾರೆ ಆದರೆ ಯೋಗವಿಲ್ಲ. ಭಲೆ
ದೊಡ್ಡ-ದೊಡ್ಡವರಿಗೆ ಜ್ಞಾನವನ್ನು ಹೇಳುತ್ತಾರೆ ಆದರೆ ಯೋಗದಲ್ಲಿ ಕಚ್ಚಾ ಆಗಿದ್ದಾರೆ. ಮುಂಜಾನೆ
ಎದ್ದು ತಂದೆಯನ್ನು ನೆನಪು ಮಾಡಬೇಕಾಗಿದೆ. ಬಾಬಾ, ತಾವು ಎಷ್ಟು ಪ್ರಿಯಾತಿಪ್ರಿಯನಾಗಿದ್ದೀರಿ, ಈ
ನಾಟಕವು ಎಷ್ಟು ವಿಚಿತ್ರವಾಗಿ ಮಾಡಲ್ಪಟ್ಟಿದೆ. ಯಾರೂ ಸಹ ಈ ರಹಸ್ಯವನ್ನು ತಿಳಿದುಕೊಂಡಿಲ್ಲ.
ಆತ್ಮನನ್ನಾಗಲಿ, ಪರಮಾತ್ಮನನ್ನಾಗಲಿ ತಿಳಿದುಕೊಂಡಿಲ್ಲ. ಈ ಕಾಲದ ಮನುಷ್ಯರು ಪ್ರಾಣಿಗಳಿಗಿಂತ
ಕೀಳಾಗಿದ್ದಾರೆ, ನಾವೂ ಹಾಗೆಯೇ ಇದ್ದೆವು, ಮಾಯೆಯ ರಾಜ್ಯದಲ್ಲಿ ಎಷ್ಟೊಂದು
ದುರ್ದೆಶೆಯಾಗಿಬಿಡುತ್ತದೆ. ಈ ಜ್ಞಾನವನ್ನು ನೀವು ಯಾರಿಗಾದರೂ ತಿಳಿಸಬಲ್ಲಿರಿ. ಹೇಳಿ, ನೀವಾತ್ಮಗಳು
ಈಗ ತಮೋಪ್ರಧಾನರಾಗಿದ್ದೀರಿ, ನೀವು ಸತೋಪ್ರಧಾನರಾಗಬೇಕಾಗಿದೆ. ಆದ್ದರಿಂದ ಮೊಟ್ಟಮೊದಲಿಗೆ ತಮ್ಮನ್ನು
ಆತ್ಮವೆಂದು ತಿಳಿಯಿರಿ. ಬಡವರಿಗೆ ಇದು ಬಹಳಷ್ಟು ಸಹಜವಾಗಿದೆ. ಸಾಹುಕಾರರಂತೂ ತಮ್ಮದೇ ಆದ
ಅಭಿಮಾನದಲ್ಲಿರುತ್ತಾರೆ.
ತಂದೆಯು ತಿಳಿಸುತ್ತಾರೆ-
ನಾನು ಸಾಧಾರಣ ತನುವಿನಲ್ಲಿಯೇ ಬರುತ್ತೇನೆ, ಬಹಳ ಬಡವರೂ ಅಲ್ಲ, ಬಹಳ ಸಾಹುಕಾರರೂ ಅಲ್ಲ. ನೀವೀಗ
ತಿಳಿದುಕೊಂಡಿದ್ದೀರಿ- ಕಲ್ಪ-ಕಲ್ಪವೂ ತಂದೆಯು ಬಂದು ಹೇಗೆ ಪಾವನರಾಗುವುದೆಂಬ ಶಿಕ್ಷಣವನ್ನೇ
ಕೊಡುತ್ತಾರೆ. ಆದರೆ ನಿಮ್ಮ ಉದ್ಯೋಗ-ವ್ಯವಹಾರಗಳಲ್ಲಿರುವ ಕಿರಿಕಿರಿಯನ್ನು ನಿವಾರಿಸಲು ತಂದೆಯು
ಬಂದಿಲ್ಲ. ಪತಿತ-ಪಾವನ ಬನ್ನಿ ಎಂದೇ ನೀವು ಅವರನ್ನು ಕರೆಯುತ್ತೀರಿ ಆದ್ದರಿಂದ ತಂದೆಯು ನೀವು
ಪಾವನರಾಗುವ ಯುಕ್ತಿಯನ್ನು ತಿಳಿಸುತ್ತಾರೆ. ಈ ಬ್ರಹ್ಮಾರವರೂ ಸಹ ಏನನ್ನೂ ತಿಳಿದುಕೊಂಡಿರಲಿಲ್ಲ.
ಪಾತ್ರಧಾರಿಯಾಗಿಯೂ ನಾಟಕದ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಂಡಿಲ್ಲವೆಂದರೆ ಅವರಿಗೇನು ಹೇಳುವುದು!
ನಾವಾತ್ಮಗಳು ಈ ಸೃಷ್ಟಿಚಕ್ರದಲ್ಲಿ ಪಾತ್ರಧಾರಿಗಳಾಗಿದ್ದೇವೆ ಎಂಬುದನ್ನೂ ಸಹ ಯಾರೂ
ಅರಿತುಕೊಂಡಿಲ್ಲ. ಭಲೆ ಆತ್ಮವು ಮೂಲವತನದಲ್ಲಿ ನಿವಾಸ ಮಾಡುತ್ತದೆಯೆಂದು ಹೇಳುತ್ತಾರೆ ಆದರೆ
ಅನುಭವದಿಂದ ಹೇಳುವುದಿಲ್ಲ. ನೀವಂತೂ ಈಗ ಅನುಭವದಿಂದ ತಿಳಿದುಕೊಂಡಿದ್ದೀರಿ- ಅನೇಕರಿಗೆ ಸ್ವಲ್ಪವೂ
ಯೋಗವಿಲ್ಲ, ದೇಹಾಭಿಮಾನದ ಕಾರಣ ಬಹಳಷ್ಟು ತಪ್ಪುಗಳೂ ಆಗುತ್ತವೆ. ಮೂಲಮಾತೇ ಆಗಿದೆ-
ಆತ್ಮಾಭಿಮಾನಿಯಾಗಿ. ನಾವು ಸತೋಪ್ರಧಾನರಾಗಬೇಕೆಂಬ ಚಿಂತೆಯಿರಬೇಕು. ಯಾವ ಮಕ್ಕಳಿಗೆ
ಸತೋಪ್ರಧಾರಾಗುವ ಚಿಂತೆಯಿದೆಯೋ ಅವರ ಬಾಯಿಂದ ಎಂದೂ ಕಲ್ಲಿನ ಸಮಾನರಾಗುವ ಮಾತು ಬರುವುದಿಲ್ಲ.
ಯಾವುದೇ ತಪ್ಪಾಯಿತೆಂದರೆ ಒಡನೆಯೇ ತಂದೆಗೆ ದೂರುಕೊಡುತ್ತಾರೆ- ಬಾಬಾ, ನನ್ನಿಂದ ಈ ತಪ್ಪಾಯಿತು
ನನ್ನನ್ನು ಕ್ಷಮಿಸಿ. ಮುಚ್ಚಿಟ್ಟರೆ ಇನ್ನೂ ವೃದ್ಧಿಯಾಗುತ್ತದೆ, ಆದ್ದರಿಂದ ತಂದೆಗೆ ಸಮಾಚಾರವನ್ನು
ತಿಳಿಸುತ್ತಾ ಇರಿ. ತಂದೆಯು ಬರೆಯುತ್ತಾರೆ- ನಿಮ್ಮ ಯೋಗವು ಸರಿಯಿಲ್ಲ, ಪಾವನರಾಗುವುದೇ
ಮುಖ್ಯವಾಗಿದೆ. ನೀವು ಮಕ್ಕಳ ಬುದ್ಧಿಯಲ್ಲಿ 84 ಜನ್ಮಗಳ ಕಥೆಯಿದೆ. ಸಾಧ್ಯವಾದಷ್ಟು ಇದೇ
ಚಿಂತೆಯಿರಲಿ- ನಾವು ಸತೋಪ್ರಧಾನರಾಗಬೇಕಾಗಿದೆ, ದೇಹಾಭಿಮಾನವನ್ನು ಬಿಡಬೇಕಾಗಿದೆ. ನೀವು
ರಾಜಋಷಿಗಳಾಗಿದ್ದೀರಿ. ಹಠಯೋಗಿಗಳೆಂದೂ ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ರಾಜಯೋಗವನ್ನು ತಂದೆಯೇ
ಕಲಿಸುತ್ತಾರೆ. ಜ್ಞಾನವನ್ನೂ ತಂದೆಯೇ ಕೊಡುತ್ತಾರೆ. ಈ ಸಮಯದಲ್ಲಿ ಎಲ್ಲವೂ ತಮೋಪ್ರಧಾನ
ಭಕ್ತಿಯಾಗಿದೆ. ಕೇವಲ ಸಂಗಮದಲ್ಲಿಯೇ ತಂದೆಯು ಬಂದು ಜ್ಞಾನವನ್ನು ತಿಳಿಸುತ್ತಾರೆ. ತಂದೆಯು
ಬಂದಿದ್ದಾರೆ ಅಂದಮೇಲೆ ಭಕ್ತಿಯು ಸಮಾಪ್ತಿಯಾಗಬೇಕಾಗಿದೆ ಮತ್ತು ಈ ಪ್ರಪಂಚವೂ ಸಮಾಪ್ತಿಯಾಗಬೇಕಾಗಿದೆ.
ಜ್ಞಾನ ಮತ್ತು ಯೋಗದಿಂದ ಸತ್ಯಯುಗದ ಸ್ಥಾಪನೆಯಾಗುತ್ತದೆ. ಭಕ್ತಿಯೇ ಬೇರೆಯಾಗಿದೆ, ಸುಖ-ದುಃಖವು
ಇಲ್ಲಿಯೇ ಇದೆಯೆಂದು ಮನುಷ್ಯರು ಹೇಳುತ್ತಾರೆ. ಈಗ ನೀವು ಮಕ್ಕಳ ಮೇಲೆ ಅತಿದೊಡ್ಡ ಜವಾಬ್ದಾರಿಯಿದೆ,
ತಮ್ಮ ಕಲ್ಯಾಣ ಮಾಡಿಕೊಳ್ಳುವ ಯುಕ್ತಿಯನ್ನು ರಚಿಸುತ್ತಾ ಇರಿ. ಇದನ್ನೂ ತಿಳಿಸಿದ್ದೇವೆ-
ಸುಖಧಾಮ-ಶಾಂತಿಧಾಮವು ಪಾವನಪ್ರಪಂಚವಾಗಿದೆ, ಇದು ಅಶಾಂತಿಧಾಮ, ದುಃಖಧಾಮವಾಗಿದೆ. ಮುಖ್ಯಮಾತು
ಯೋಗವಾಗಿದೆ. ಯೋಗವಿಲ್ಲವೆಂದರೆ ಅತಿಯಾಗಿ ಜ್ಞಾನ ಹೇಳುವುದು ಹೇಗೆ ಪಂಡಿತರಂತೆ ಆಗುತ್ತದೆ.
ಇತ್ತೀಚೆಗೆ ರಿದ್ಧಿಸಿದ್ಧಿಯು ಬಹಳಷ್ಟಿದೆ, ಇದರೊಂದಿಗೆ ಜ್ಞಾನದ ಸಂಬಂಧವಿಲ್ಲ. ಮನುಷ್ಯರು
ಸುಳ್ಳುಮಾತುಗಳಲ್ಲಿ ಎಷ್ಟೊಂದು ಸಿಕ್ಕಿಹಾಕಿಕೊಂಡಿದ್ದಾರೆ, ಪತಿತರಾಗಿದ್ದಾರೆ. ಸ್ವಯಂ ತಂದೆಯೇ
ತಿಳಿಸುತ್ತಾರೆ- ನಾನು ಪತಿತಪ್ರಪಂಚ, ಪತಿತಶರೀರದಲ್ಲಿ ಬರುತ್ತೇನೆ. ಇಲ್ಲಿ ಯಾರೂ ಪಾವನರಿಲ್ಲ,
ಇವರಂತೂ ತನ್ನನ್ನು ಭಗವಂತನೆಂದು ಹೇಳಿಕೊಳ್ಳುವುದಿಲ್ಲ. ಇವರೂ(ಬ್ರಹ್ಮಾ) ಸಹ ಇದನ್ನೇ ಹೇಳುತ್ತಾರೆ-
ನಾನೂ ಪತಿತನಾಗಿದ್ದೇನೆ, ಪಾವನರಾದರೆ ಫರಿಶ್ತೆಗಳಾಗಿಬಿಡುತ್ತೇವೆ. ನೀವೂ ಪವಿತ್ರ
ಫರಿಶ್ತೆಗಳಾಗುತ್ತೀರಿ ಅಂದಾಗ ಮೂಲಮಾತು ಇದೇ ಆಗಿದೆ- ನಾವು ಹೇಗೆ ಪಾವನರಾಗುವುದು? ನೆನಪು ಬಹಳ
ಅವಶ್ಯವಾಗಿದೆ. ಯಾವ ಮಕ್ಕಳು ನೆನಪಿನಲ್ಲಿ ಕಡಿಮೆಯಿದ್ದಾರೆಯೋ ಅವರು ಹೇಳುತ್ತಾರೆ- ನಾವು
ಶಿವತಂದೆಯ ಮಕ್ಕಳಂತೂ ಆಗಿಯೇ ಇದ್ದೇವೆ, ನೆನಪಿನಲ್ಲಿಯೇ ಇರುತ್ತೇವೆ. ಆದರೆ ತಂದೆಯು ಹೇಳುತ್ತಾರೆ-
ಇದೆಲ್ಲವೂ ಸುಳ್ಳು ಮಾತುಗಳಾಗಿವೆ, ಆಲಸ್ಯವಿದೆ. ಇಲ್ಲಂತೂ ಮುಂಜಾನೆ ಎದ್ದು ತನ್ನನ್ನು ಆತ್ಮನೆಂದು
ತಿಳಿದು ನೆನಪಿನಲ್ಲಿ ಕುಳಿತುಕೊಳ್ಳಬೇಕು, ಪುರುಷಾರ್ಥ ಮಾಡಬೇಕು. ವಾರ್ತಾಲಾಪ ಮಾಡಬೇಕಾಗಿದೆ.
ಆತ್ಮವೇ ವಾರ್ತಾಲಾಪ ಮಾಡುತ್ತದೆಯಲ್ಲವೆ. ನೀವೀಗ ಆತ್ಮಾಭಿಮಾನಿಗಳಾಗುತ್ತೀರಿ. ಯಾರಾದರೂ ಅನ್ಯರ
ಕಲ್ಯಾಣ ಮಾಡುತ್ತಾರೆಂದರೆ ಅವರ ಮಹಿಮೆಯನ್ನು ಮಾಡಲಾಗುತ್ತದೆ ಆದರೆ ಅದು ಮಿತವಾದ ಮಹಿಮೆಯಾಗಿದೆ.
ಇದು ನಿರಾಕಾರ ಪರಮಪಿತ ಪರಮಾತ್ಮನ ಮಹಿಮೆಯಾಗಿದೆ. ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ಈ
ಏಣಿಯ ಜ್ಞಾನವು ಮತ್ತ್ಯಾರ ಬುದ್ಧಿಯಲ್ಲಿಯೂ ಇರುವುದಿಲ್ಲ. ನಾವು ಹೇಗೆ 84 ಜನ್ಮಗಳನ್ನು
ತೆಗೆದುಕೊಳ್ಳುತ್ತೇವೆ, ಕೆಳಗಿಳಿಯುತ್ತಾ ಬರುತ್ತೇವೆ? ಈಗಂತೂ ಪಾಪದ ಗಡಿಗೆಯು ತುಂಬಿದೆ, ಅದು
ಸ್ವಚ್ಛವಾಗುವುದು- ಹೇಗೆ? ಆದ್ದರಿಂದ ತಂದೆಯನ್ನು ಕರೆಯುತ್ತಾರೆ, ನೀವು ಪಾಂಡವ
ಸಂಪ್ರದಾಯದವರಾಗಿದ್ದೀರಿ. ಧರ್ಮಾತ್ಮರೂ ಆಗಿದ್ದೀರಿ, ರಾಜಕಾರಣಿಗಳೂ ಆಗಿದ್ದೀರಿ. ತಂದೆಯು ಎಲ್ಲಾ
ಧರ್ಮದ ಮಾತುಗಳನ್ನು ತಿಳಿಸುತ್ತಾರೆ ಅನ್ಯ ಯಾರೂ ತಿಳಿಸಲು ಸಾಧ್ಯವಿಲ್ಲ. ಬಾಕಿ ಆ ಧರ್ಮಸ್ಥಾಪನೆ
ಮಾಡುವವರು ಏನು ಮಾಡುತ್ತಾರೆ, ಅವರ ಹಿಂದೆ ಅನ್ಯರೂ ಸಹ ಕೆಳಗೆ ಬರಬೇಕಾಗುತ್ತದೆ. ಅವರು ಯಾರಿಗೂ
ಮೋಕ್ಷವನ್ನು ಕೊಡುವುದಿಲ್ಲ. ತಂದೆಯು ಅಂತಿಮದಲ್ಲಿ ಬಂದು ಎಲ್ಲರನ್ನೂ ಪವಿತ್ರರನ್ನಾಗಿ ಮಾಡಿ
ಹಿಂತಿರುಗಿ ಕರೆದುಕೊಂಡು ಹೋಗುತ್ತಾರೆ ಆದ್ದರಿಂದ ಅವರೊಬ್ಬರ ವಿನಃ ಮತ್ತ್ಯಾರಿಗೂ ಮಹಿಮೆಯಿಲ್ಲ.
ಬ್ರಹ್ಮನಿಗೆ ಮತ್ತು ನಿಮಗೆ ಯಾವುದೇ ಮಹಿಮೆಯಿಲ್ಲ. ತಂದೆಯು ಬರದೇ ಹೋಗಿದ್ದರೆ ನೀವು ತಾನೆ ಏನು
ಮಾಡುತ್ತಿದ್ದಿರಿ! ಈಗ ತಂದೆಯು ನಿಮ್ಮನ್ನು ಏರುವಕಲೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ನಿನ್ನ
ಕೃಪೆಯಿಂದ ಸರ್ವರ ಉದ್ಧಾರವಾಗುವುದು ಎಂದು ಹಾಡುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ.
ಮಹಿಮೆಯಂತೂ ಬಹಳಷ್ಟು ಮಾಡುತ್ತಾರೆ.
ತಂದೆಯು ತಿಳಿಸುತ್ತಾರೆ-
ಆತ್ಮವು ಅಕಾಲನಾಗಿದೆ, ಈ ಭೃಕುಟಿಯು ಅದರ ಸಿಂಹಾಸನವಾಗಿದೆ. ಆತ್ಮವು ಅವಿನಾಶಿಯಾಗಿದೆ, ಅದನ್ನು
ಕಾಲವು ಎಂದೂ ಕಬಳಿಸುವುದಿಲ್ಲ. ಆತ್ಮವು ಒಂದು ಶರೀರವನ್ನು ಬಿಟ್ಟು ಇನ್ನೊಂದು ಶರೀರದಲ್ಲಿ ಹೋಗಿ
ಪಾತ್ರವನ್ನಭಿನಯಿಸಬೇಕಾಗಿದೆ ಆದರೆ ಅದನ್ನು ತೆಗೆದುಕೊಂಡು ಹೋಗಲು ಯಾವುದೇ ಕಾಲವು ಬರುವುದಿಲ್ಲ.
ಯಾರಾದರೂ ಶರೀರವನ್ನು ಬಿಡಲಿ ನಿಮಗೆ ದುಃಖವಾಗುವುದಿಲ್ಲ ಏಕೆಂದರೆ ಅವರು ಶರೀರವನ್ನು ಬಿಟ್ಟು
ಇನ್ನೊಂದು ಪಾತ್ರವನ್ನು ಅಭಿನಯಿಸಲು ಹೋದರು. ಇದರಲ್ಲಿ ಅವಶ್ಯಕತೆಯೇನಿದೆ? ನಾವಾತ್ಮಗಳೂ
ಸಹೋದರರಾಗಿದ್ದೇವೆ ಎಂಬುದನ್ನು ಸಹ ನೀವು ತಿಳಿದುಕೊಂಡಿದ್ದೀರಿ. ಆತ್ಮಗಳು ಪರಮಾತ್ಮನಿಂದ ಬಹಳಕಾಲ
ಅಗಲಿದ್ದರು... ಎಂದು ಹಾಡುತ್ತಾರೆ. ತಂದೆಯು ಎಲ್ಲಿ ಬಂದು ಮಿಲನ ಮಾಡುತ್ತಾರೆ! ಎಂಬುದನ್ನೂ ಸಹ
ತಿಳಿದುಕೊಂಡಿಲ್ಲ. ಈಗ ನಿಮಗೆ ಪ್ರತಿಯೊಂದು ಮಾತಿನ ತಿಳುವಳಿಕೆಯು ಸಿಗುತ್ತದೆ. ನೀವು ಕೇಳುತ್ತಲೇ
ಬರುತ್ತೀರಿ. ಯಾವುದೇ ಗ್ರಂಥಗಳನ್ನು ತೆಗೆದುಕೊಳ್ಳುವುದಿಲ್ಲ. ಸತ್ಯತಂದೆಯಾಗಿದ್ದರಿಂದ
ಸತ್ಯರಚನೆಯನ್ನು ರಚಿಸುತ್ತಾರೆ. ಸತ್ಯವನ್ನೇ ತಿಳಿಸುತ್ತಾರೆ, ಸತ್ಯದಿಂದ ಗೆಲುವು, ಅಸತ್ಯದಿಂದ
ಸೋಲು. ಸತ್ಯತಂದೆಯು ಸತ್ಯಖಂಡದ ಸ್ಥಾಪನೆ ಮಾಡುತ್ತಾರೆ. ರಾವಣನಿಂದ ನೀವು ಬಹಳಷ್ಟು
ಸೋಲನ್ನನುಭವಿಸಿದ್ದೀರಿ. ಇದೆಲ್ಲಾ ಆಟವು ಮಾಡಲ್ಪಟ್ತಿದೆ. ನೀವೀಗ ತಿಳಿದುಕೊಂಡಿದ್ದೀರಿ- ನಮ್ಮ
ರಾಜ್ಯವು ಸ್ಥಾಪನೆಯಾಗುತ್ತಿದೆ, ಮತ್ತೆ ಇದೆಲ್ಲವೂ ಉಳಿಯುವುದಿಲ್ಲ. ಇವೆಲ್ಲವೂ ಕೊನೆಯಲ್ಲಿ ಬಂದಿದೆ,
ಈ ಸೃಷ್ಟಿಚಕ್ರವನ್ನು ಬುದ್ಧಿಯಲ್ಲಿಟ್ಟುಕೊಳ್ಳುವುದು ಎಷ್ಟು ಸಹಜವಾಗಿದೆ. ಯಾರು ಪುರುಷಾರ್ಥಿ
ಮಕ್ಕಳಿದ್ದಾರೆಯೋ ಅವರು ನಾವು ಬಹಳ ಚೆನ್ನಾಗಿ ಜ್ಞಾನವನ್ನು ತಿಳಿಸುತ್ತೇವೆಂದು
ಖುಷಿಯಾಗಿಬಿಡುವುದಲ್ಲ. ಜ್ಞಾನದ ಜೊತೆಯಲ್ಲಿ ಯೋಗ ಮತ್ತು ದೈವೀಗುಣಗಳನ್ನೂ ಧಾರಣೆ ಮಾಡುತ್ತಾರೆ.
ನೀವೀಗ ಬಹಳ-ಬಹಳ ಮಧುರರಾಗಬೇಕಾಗಿದೆ. ಯಾರಿಗೂ ದುಃಖವನ್ನು ಕೊಡಬಾರದು, ಪ್ರೀತಿಯಿಂದ
ತಿಳಿಸಿಕೊಡಬೇಕು. ಪವಿತ್ರರಾಗಿ, ಇದರಲ್ಲಿ ಎಷ್ಟೊಂದು ಜಗಳಗಳಾಗುತ್ತವೆ. ಅದೂ ಸಹ ನಾಟಕದನುಸಾರವೇ
ಆಗುತ್ತದೆ. ಇದು ಮಾಡಿ-ಮಾಡಲ್ಪಟ್ಟ ನಾಟಕವಲ್ಲವೆ. ನಾಟಕದಲ್ಲಿದ್ದರೆ ಸಿಗುವುದು ಎಂದಲ್ಲ,
ಪರಿಶ್ರಮಪಡಬೇಕಾಗಿದೆ. ದೇವತೆಗಳಂತೂ ದೈವೀಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ.
ಉಪ್ಪುನೀರಾಗಬಾರದು. ನೋಡಿಕೊಳ್ಳಬೇಕು- ನಾವು ವಿರುದ್ಧವಾದ ಚಲನೆಯಲ್ಲಿ ನಡೆದು ತಂದೆಯ ಗೌರವವನ್ನು
ಕಳೆಯುತ್ತಿಲ್ಲವೆ. ಸದ್ಗುರುವಿನ ನಿಂಧಕರು ಎಂದೂ ಪದವಿಯನ್ನು ಪಡೆಯುವುದಿಲ್ಲ. ಇವರಂತೂ ಸತ್ಯತಂದೆ,
ಸತ್ಯಶಿಕ್ಷಕನಾಗಿದ್ದಾರೆ. ಆತ್ಮಕ್ಕೆ ಈಗ ಸ್ಮೃತಿಯಿರುತ್ತದೆ. ತಂದೆಯು ಜ್ಞಾನಸಾಗರ, ಸುಖದ
ಸಾಗರನಾಗಿದ್ದಾರೆ. ಅವಶ್ಯವಾಗಿ ಜ್ಞಾನವನ್ನು ಕೊಟ್ಟು ಹೋಗಿದ್ದೆನು ಆದ್ದರಿಂದಲೇ ಮಹಿಮೆಯಾಗುತ್ತದೆ.
ಇವರ (ಬ್ರಹ್ಮಾ) ಆತ್ಮದಲ್ಲಿ ಯಾವುದಾದರೂ ಜ್ಞಾನವಿತ್ತೇ? ಆತ್ಮವೆಂದರೇನು, ನಾಟಕವೆಂದರೇನು ಏನನ್ನೂ
ತಿಳಿದುಕೊಂಡಿರಲಿಲ್ಲ. ಇದೆಲ್ಲವನ್ನೂ ಮನುಷ್ಯರೇ ತಿಳಿದುಕೊಳ್ಳಬೇಕಲ್ಲವೆ. ರುದ್ರಯಜ್ಞವನ್ನು
ರಚಿಸಿದಾಗ ಆತ್ಮಗಳ ಪೂಜೆ ಮಾಡುತ್ತಾರೆ. ಆತ್ಮಗಳ ಪೂಜೆಯು ಒಳ್ಳೆಯದೋ ಅಥವಾ ದೈವೀಶರೀರಗಳ ಪೂಜೆಯು
ಒಳ್ಳೆಯದೊ? ಈ ಶರೀರವಂತೂ ಪಂಚತತ್ವಗಳಿಂದ ಮಾಡಲ್ಪಟ್ಟಿದೆ ಆದ್ದರಿಂದ ಒಬ್ಬ ಶಿವತಂದೆಯ ಪೂಜೆಯೇ
ಅವ್ಯಭಿಚಾರಿ ಪೂಜೆಯಾಗಿದೆ, ಈಗ ಅವರೊಬ್ಬರಿಂದಲೇ ಕೇಳಬೇಕಾಗಿದೆ ಆದ್ದರಿಂದ ಕೆಟ್ಟದ್ದನ್ನು ಕೇಳಬೇಡಿ....
ಎಂದು ಹೇಳುತ್ತಾರೆ. ನಿಂದನೆಯ ಯಾವುದೇ ಮಾತುಗಳನ್ನು ಕೇಳಬೇಡಿ, ನನ್ನೊಬ್ಬನಿಂದಲೇ ಕೇಳಿ. ಇದು
ಅವ್ಯಭಿಚಾರಿ ಜ್ಞಾನವಾಗಿದೆ. ಮುಖ್ಯಮಾತೇನೆಂದರೆ ದೇಹಾಭಿಮಾನವನ್ನು ಬಿಟ್ಟರೆ ನೀವು ಶೀತಲರಾಗುವಿರಿ.
ತಂದೆಯ ನೆನಪಿನಲ್ಲಿದ್ದಾಗ ಬಾಯಿಂದಲೂ ಯಾವುದೇ ಉಲ್ಟಾ-ಸುಲ್ಟಾ ಮಾತುಗಳನ್ನು ಮಾತನಾಡುವುದಿಲ್ಲ.
ಕುದೃಷ್ಟಿಯಿರುವುದಿಲ್ಲ. ನೋಡಿಯೂ ನೋಡದಂತಿರುತ್ತೀರಿ, ನಿಮಗೆ ಜ್ಞಾನದ ಮೂರನೆಯ ನೇತ್ರವು ತೆರೆದಿದೆ.
ತಂದೆಯು ಬಂದು ತ್ರಿನೇತ್ರಿ, ತ್ರಿಕಾಲದರ್ಶಿಗಳನ್ನಾಗಿ ಮಾಡಿದ್ದಾರೆ. ಈಗ ನಿಮ್ಮಲ್ಲಿ ಮೂರುಲೋಕಗಳು,
ಮೂರುಕಾಲದ ಜ್ಞಾನವಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಜ್ಞಾನವನ್ನು
ಹೇಳುವ ಜೊತೆಜೊತೆಗೆ ಯೋಗದಲ್ಲಿಯೂ ಇರಬೇಕಾಗಿದೆ, ಒಳ್ಳೆಯ ದೈವೀಗುಣಗಳನ್ನು ಧಾರಣೆ ಮಾಡಬೇಕಾಗಿದೆ.
ಬಹಳ ಮಧುರರಾಗಬೇಕು, ಎಂದೂ ಬಾಯಿಂದ ಕಲ್ಲುಗಳು ಬರಬಾರದು.
2. ಅಂತರ್ಮುಖಿಯಾಗಿ
ಏಕಾಂತದಲ್ಲಿ ಕುಳಿತು ತಮ್ಮೊಂದಿಗೆ ತಾವು ವಾರ್ತಾಲಾಪ ಮಾಡಿಕೊಳ್ಳಬೇಕು. ಪಾವನರಾಗುವ ಯುಕ್ತಿಗಳನ್ನು
ರಚಿಸಬೇಕಾಗಿದೆ. ಬೆಳಗ್ಗೆ-ಬೆಳಗ್ಗೆ ಎದ್ದು ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕಾಗಿದೆ.
ವರದಾನ:
ವೈರ್ಲೆಸ್ ಸೆಟ್
ಮೂಲಕ ವಿನಾಶ ಕಾಲದಲ್ಲಿ ಅಂತಿಮ ಡೈರೆಕ್ಷನ್ ಅನ್ನು ಕ್ಯಾಚ್ ಮಾಡುವಂತಹ ವೈಸ್ ಲೆಸ್ ಭವ
ವಿನಾಶದ ಸಮಯದಲ್ಲಿ
ಅಂತಿಮ ಡೈರೆಕ್ಷನ್ಗಳನ್ನು ಕ್ಯಾಚ್ ಮಾಡಲು ವೈಸ್ ಲೆಸ್ ಬುದ್ಧಿ ಬೇಕಾಗಿದೆ. ಯಾವ ರೀತಿ ವೈರ್ ಲೆಸ್
ಸೆಟ್ ಮೂಲಕ ಒಬ್ಬರಿಗೆ ಇನ್ನೊಬ್ಬರ ಶಬ್ದ ಕೇಳಿಸುತ್ತದೆ. ಇಲ್ಲದೆ ವೈರ್ ಲೆಸ್ನ ವೈರೆಸ್. ಈ
ವೈರ್ಲೆಸ್ನ ಮೂಲಕ ನಿಮಗೆ ಶಬ್ಧ ಕೇಳಿಬರುತ್ತದೆ ಇಂತಹ ಸುರಕ್ಷಿತ ಸ್ಥಳವನ್ನು ತಲುಪಿರಿ ಎಂದು. ಯಾವ
ಮಕ್ಕಳು ತಂದೆಯ ನನಪಿನಲ್ಲಿರುತ್ತಾರೆ ಅವರು ವೈಸ್ ಲೆಸ್ ಆಗಿರುತ್ತಾರೆ. ಯಾರಿಗೆ ಅಶರೀರಿ ಆಗುವ
ಅಭ್ಯಾಸವಿರುತ್ತದೆ ಅವರು ವಿನಾಶದಲ್ಲಿ ವಿನಾಶವಾಗುವುದಿಲ್ಲ ಆದರೆ ಸ್ವ ಇಚ್ಛೆಯಿಂದ ಶರೀರ
ಬಿಡುತ್ತಾರೆ.
ಸ್ಲೋಗನ್:
ಯೋಗವನ್ನು
ದೂರಮಾಡಿ ಕರ್ಮದಲ್ಲಿ ಬ್ಯುಸಿಯಾಗಿಬಿಡುವುದು- ಹುಡುಗಾಟಿಕೆಯಾಗಿದೆ.
ಅವ್ಯಕ್ತ ಸೂಚನೆ:
ಆತ್ಮಿಕ ಘನತೆ ಮತ್ತು ಪವಿತ್ರತೆಯ ವ್ಯಕ್ತಿತ್ವವನ್ನು ಧಾರಣೆ ಮಾಡಿ.
ಪವಿತ್ರತೆಯ ಘನತೆ
ಅರ್ಥಾತ್ ಏಕವ್ರತ ಆಗುವುದು, (ಒಬ್ಬ ಬಾಬಾ ಬಿಟ್ಟರೆ ಯಾರಿಲ್ಲ) ಈ ಬ್ರಾಹ್ಮಣ ಜೀವನದಲ್ಲಿ ಸಂಪೂರ್ಣ
ಪಾವನರಾಗುವುದಕ್ಕಾಗಿ ಏಕವ್ರತದ ಪಾಠವನ್ನು ಪಕ್ಕಾ ಮಾಡಿಕೊಳ್ಳಿ. ವೃತ್ತಿಯಲ್ಲಿ ಶುಭ ಭಾವನೆ, ಶುಭ
ಕಾಮನೆಯಿರಲಿ, ದೃಷ್ಟಿಯ ಮೂಲಕ ಪ್ರತಿಯೊಬರನ್ನೂ ಆತ್ಮಿಕ ರೂಪದಲ್ಲಿ ಅಥವಾ ಫರಿಶ್ತಾ ರೂಪದಲ್ಲಿ ನೋಡಿ.
ಕರ್ಮದ ಮೂಲಕ ಪ್ರತೀ ಆತ್ಮಕ್ಕೆ ಸುಖ ಕೊಡಿ ಮತ್ತು ಸುಖವನ್ನು ತೆಗೆದುಕೊಳ್ಳಿ. ಯಾರೇ ದುಃಖ ಕೊಡಲಿ,
ನಿಂದನೆ ಮಾಡಲಿ, ಅಪಮಾನ ಮಾಡಲಿ ಆದರೆ ನೀವು ಸಹನಶೀಲ ದೇವಿ, ಸಹನಶೀಲ ದೇವತೆಯಾಗಿಬಿಡಿ.