02.07.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ನೀವು ಡಬಲ್ ಅಹಿಂಸಕ ಆತ್ಮಿಕ ಸೇನೆಯಾಗಿದ್ದೀರಿ, ನೀವು ಶ್ರೀಮತದನುಸಾರ ತಮ್ಮ ದೈವೀ ರಾಜಧಾನಿಯನ್ನು ಸ್ಥಾಪನೆ ಮಾಡಬೇಕಾಗಿದೆ”

ಪ್ರಶ್ನೆ:
ನೀವು ಆತ್ಮೀಯ ಸೇವಾಧಾರಿ ಮಕ್ಕಳು ಎಲ್ಲರಿಗೂ ಯಾವ ಮಾತಿನ ಎಚ್ಚರಿಕೆ ಕೊಡುತ್ತೀರಿ?

ಉತ್ತರ:
ನೀವು ಎಲ್ಲರಿಗೆ ಎಚ್ಚರಿಕೆ ಕೊಡುತ್ತೀರಿ- ಇದು ಅದೇ ಮಹಾಭಾರತ ಯುದ್ಧದ ಸಮಯವಾಗಿದೆ. ಈಗ ಈ ಹಳೆಯ ಪ್ರಪಂಚವು ವಿನಾಶವಾಗಲಿದೆ. ತಂದೆಯು ಹೊಸಪ್ರಪಂಚದ ಸ್ಥಾಪನೆ ಮಾಡಿಸುತ್ತಿದ್ದಾರೆ. ವಿನಾಶದ ನಂತರ ಮತ್ತೆ ಜಯಜಯಕಾರವಾಗುತ್ತದೆ. ನೀವು ಪರಸ್ಪರ ಸೇರಿ ಯುಕ್ತಿಯನ್ನು ರಚಿಸಬೇಕಾಗಿದೆ- ವಿನಾಶಕ್ಕೆ ಮೊದಲೇ ಎಲ್ಲರಿಗೆ ತಂದೆಯ ಪರಿಚಯ ಹೇಗೆ ಸಿಗುವುದು?

ಗೀತೆ:
ನೀನು ರಾತ್ರಿಯನ್ನು ನಿದ್ರೆಯಲ್ಲಿ ಕಳೆದೆ, ಹಗಲನ್ನು ತಿನ್ನುತ್ತಾ ಕಳೆದೆ........

ಓಂ ಶಾಂತಿ.
ತಂದೆಯು ತಿಳಿಸುತ್ತಿದ್ದಾರೆ- ಶ್ರೇಷ್ಠಾತಿಶ್ರೇಷ್ಠನು ಭಗವಂತನಾಗಿದ್ದಾರೆ. ಮತ್ತೆ ಅವರನ್ನು ಸರ್ವಶ್ರೇಷ್ಠ ಕಮ್ಯಾಂಡರ್ ಇನ್ ಚೀಫ್ ಎಂದಾದರೂ ಹೇಳಿ ಏಕೆಂದರೆ ನೀವು ಸೈನಿಕರಾಗಿದ್ದೀರಲ್ಲವೆ. ನಿಮ್ಮ ಸುಪ್ರೀಂ ಕಮ್ಯಾಂಡರ್ ಯಾರು? ಇದನ್ನೂ ಸಹ ತಿಳಿದುಕೊಂಡಿದ್ದೀರಿ- ಎರಡೂ ಸೈನ್ಯಗಳಿವೆ, ಅದು ಶಾರೀರಿಕ ಸೈನ್ಯ, ನೀವು ಆತ್ಮಿಕ ಸೈನಿಕರಾಗಿದ್ದೀರಿ. ಅವರು ಹದ್ದಿನ ಸೈನಿಕರು, ನೀವು ಬೇಹದ್ದಿನ ಸೈನಿಕರಾಗಿದ್ದೀರಿ. ನಿಮ್ಮಲ್ಲಿ ಕಮ್ಯಾಂಡರ್ಗಳೂ ಇದ್ದಾರೆ. ಜನರಲ್, ಲೆಫ್ಟಿನೆಂಟ್ ಸಹ ಇದ್ದಾರೆ. ಮಕ್ಕಳಿಗೆ ತಿಳಿದಿದೆ- ನಾವು ಶ್ರೀಮತದನುಸಾರ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ. ಯುದ್ಧದ ಯಾವುದೇ ಮಾತಿಲ್ಲ, ನಾವು ಇಡೀ ವಿಶ್ವದಲ್ಲಿ ಶ್ರೀಮತದಂತೆ ಪುನಃ ತಮ್ಮ ದೈವೀ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆ. ಕಲ್ಪ-ಕಲ್ಪವೂ ನಾವು ಈ ಪಾತ್ರವನ್ನಭಿನಯಿಸುತ್ತೇವೆ. ಇವೆಲ್ಲವೂ ಬೇಹದ್ದಿನ ಮಾತುಗಳಾಗಿವೆ. ಆ ಯುದ್ಧಗಳಲ್ಲಿ ಈ ಮಾತುಗಳಿಲ್ಲ. ಸರ್ವಶ್ರೇಷ್ಠನು ತಂದೆಯಾಗಿದ್ದಾರೆ, ಅವರಿಗೆ ಜಾದೂಗಾರ, ರತ್ನಾಗಾರ, ಜ್ಞಾನಸಾಗರನೆಂದು ಹೇಳುತ್ತಾರೆ. ತಂದೆಯ ಮಹಿಮೆಯು ಅಪರಮಪಾರವಾಗಿದೆ. ನೀವು ಬುದ್ಧಿಯಿಂದ ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ. ಮಾಯೆಯು ನೆನಪನ್ನು ಮರೆಸಿಬಿಡುತ್ತದೆ. ನೀವು ಡಬಲ್ ಅಹಿಂಸಕ ಆತ್ಮಿಕ ಸೈನಿಕರಾಗಿದ್ದೀರಿ. ನಾವು ನಮ್ಮ ರಾಜ್ಯವನ್ನು ಹೇಗೆ ಸ್ಥಾಪನೆ ಮಾಡುವುದೆಂದು ನಿಮಗೆ ವಿಚಾರವಿದೆ. ಡ್ರಾಮಾ ಅವಶ್ಯವಾಗಿ ಮಾಡಿಸುವುದು, ಆದರೆ ಪುರುಷಾರ್ಥವನ್ನಂತೂ ಮಾಡಲೇಬೇಕಲ್ಲವೆ. ಯಾರು ಒಳ್ಳೊಳ್ಳೆಯ ಮಕ್ಕಳಿದ್ದಾರೆಯೋ ಅವರು ಪರಸ್ಪರ ಯುಕ್ತಿಯನ್ನು ರಚಿಸಬೇಕಾಗಿದೆ. ಅಂತ್ಯದವರೆಗೂ ಮಾಯೆಯೊಂದಿಗೆ ನಿಮ್ಮ ಯುದ್ಧವು ನಡೆಯುತ್ತಾ ಇರುತ್ತದೆ. ಇದೂ ಸಹ ನಿಮಗೆ ತಿಳಿದಿದೆ- ಮಹಾಭಾರತ ಯುದ್ಧವು ಖಂಡಿತವಾಗಿ ಆಗುವುದಿದೆ, ಇಲ್ಲದಿದ್ದರೆ ಹಳೆಯ ಪ್ರಪಂಚದ ವಿನಾಶವು ಹೇಗಾಗುವುದು? ತಂದೆಯು ನಿಮಗೆ ಶ್ರೀಮತವನ್ನು ಕೊಡುತ್ತಿದ್ದಾರೆ. ನಾವು ಮಕ್ಕಳು ಪುನಃ ತಮ್ಮ ರಾಜ್ಯಭಾಗ್ಯವನ್ನು ಸ್ಥಾಪನೆ ಮಾಡಬೆಕಾಗಿದೆ. ಈ ಹಳೆಯ ಪ್ರಪಂಚದ ವಿನಾಶವಾದ ನಂತರ ಭಾರತದಲ್ಲಿ ಜಯಜಯಕಾರವಾಗುತ್ತದೆ. ಇದಕ್ಕಾಗಿಯೇ ನೀವು ನಿಮಿತ್ತರಾಗಿದ್ದೀರಿ ಆದ್ದರಿಂದ ಪರಸ್ಪರ ಸೇರಬೇಕು. ಹೇಗೆ ನಾವು ಸರ್ವೀಸ್ ಮಾಡುವುದು ಎಂದು ವಿಚಾರ ಮಾಡಬೇಕು. ಎಲ್ಲರಿಗೆ ತಂದೆಯ ಸಂದೇಶವನ್ನು ತಿಳಿಸಿ- ಈಗ ಹಳೆಯ ಪ್ರಪಂಚದ ವಿನಾಶವಾಗಲಿದೆ. ತಂದೆಯು ಹೊಸ ಪ್ರಪಂಚದ ಸ್ಥಾಪನೆ ಮಾಡುತ್ತಿದ್ದಾರೆ, ಲೌಕಿಕ ತಂದೆಯೂ ಸಹ ಹೊಸಮನೆಯನ್ನು ಕಟ್ಟಿಸುತ್ತಾರೆಂದರೆ ಮಕ್ಕಳು ಖುಷಿಯಾಗಿಬಿಡುತ್ತಾರೆ. ಅದು ಹದ್ದಿನ ಮಾತು, ಇದು ಇಡೀ ವಿಶ್ವದ ಮಾತಾಗಿದೆ. ಹೊಸಪ್ರಪಂಚಕ್ಕೆ ಸತ್ಯಯುಗ, ಹಳೆಯಪ್ರಪಂಚಕ್ಕೆ ಕಲಿಯುಗವೆಂದು ಹೇಳಲಾಗುತ್ತದೆ. ಈಗ ಹಳೆಯ ಪ್ರಪಂಚವಾಗಿದೆ ಅಂದಮೇಲೆ ತಂದೆಯು ಯಾವಾಗ ಮತ್ತು ಹೇಗೆ ಬಂದು ಹೊಸಪ್ರಪಂಚವನ್ನು ಸ್ಥಾಪನೆ ಮಾಡುತ್ತಾರೆಂದು ತಿಳಿದಿರಬೇಕು. ನಿಮ್ಮಲ್ಲಿಯೂ ಸಹ ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದಾರೆ. ದೊಡ್ಡವರಿಗಿಂತಲೂ ದೊಡ್ಡವರು ತಂದೆಯಾಗಿದ್ದಾರೆ, ನಂತರ ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದಾರೆ. ಕುದುರೆ ಸವಾರರು, ಕಾಲಾಳುಗಳಿದ್ದಾರೆ. ಕಮ್ಯಾಂಡರ್, ಕ್ಯಾಫ್ಟನ್ ಇದೆಲ್ಲವೂ ಕೇವಲ ಉದಾಹರಣೆ ಕೊಟ್ಟು ತಿಳಿಸಲಾಗುತ್ತದೆ. ನೀವು ಮಕ್ಕಳು ಪರಸ್ಪರ ಸೇರಿ ಎಲ್ಲರಿಗೆ ತಂದೆಯ ಪರಿಚಯ ಹೇಗೆ ಕೊಡುವುದು? ಎಂಬ ಯುಕ್ತಿಗಳನ್ನು ತೆಗೆಯಬೇಕು. ಇದು ಆತ್ಮಿಕ ಸೇವೆಯಾಗಿದೆ. ನಾವು ನಮ್ಮ ಸಹೋದರ-ಸಹೋದರಿಯರಿಗೆ ತಂದೆಯು ಹೊಸಪ್ರಪಂಚವನ್ನು ಸ್ಥಾಪನೆ ಮಾಡಲು ಬಂದಿದ್ದಾರೆಂದು ಹೇಗೆ ಎಚ್ಚರಿಕೆ ನೀಡುವುದು. ಹಳೆಯ ಪ್ರಪಂಚದ ವಿನಾಶ ಸನ್ಮುಖದಲ್ಲಿದೆ, ಇದು ಅದೇ ಮಹಾಭಾರತ ಯುದ್ಧವಾಗಿದೆ. ಮಹಾಭಾರತ ಯುದ್ಧದ ನಂತರ ಮತ್ತೇನಾಗುವುದು ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ.

ನೀವೀಗ ಅನುಭವ ಮಾಡುತ್ತೀರಿ- ನಾವು ಈ ಸಂಗಮಯುಗದಲ್ಲಿ ಪುರುಷೋತ್ತಮರಾಗುತ್ತಿದ್ದೇವೆ. ತಂದೆಯು ಪುರುಷೋತ್ತಮರನ್ನಾಗಿ ಮಾಡಲು ಬಂದಿದ್ದಾರೆ. ಇದರಲ್ಲಿ ಯುದ್ಧದ ಯಾವುದೇ ಮಾತಿಲ್ಲ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ಪತಿತಪ್ರಪಂಚದಲ್ಲಿ ಒಬ್ಬರೂ ಪಾವನರಿರಲು ಸಾಧ್ಯವಿಲ್ಲ ಮತ್ತು ಪಾವನಪ್ರಪಂಚದಲ್ಲಿ ಒಬ್ಬರೂ ಪತಿತರಿರಲು ಸಾಧ್ಯವಿಲ್ಲ. ಇಷ್ಟು ಚಿಕ್ಕಮಾತನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ನೀವು ಮಕ್ಕಳಿಗೆ ಎಲ್ಲಾ ಚಿತ್ರಗಳ ಸಾರವನ್ನು ತಿಳಿಸಲಾಗುತ್ತದೆ. ಭಕ್ತಿಮಾರ್ಗದಲ್ಲಿ ಮನುಷ್ಯರು ಏನೆಲ್ಲಾ ಜಪ-ತಪ, ದಾನ-ಪುಣ್ಯ ಇತ್ಯಾದಿಗಳನ್ನು ಮಾಡುತ್ತಾರೆಯೋ ಅದರಿಂದ ಅಲ್ಪಕಾಲಕ್ಕಾಗಿ ಕಾಗವಿಷ್ಟ ಸಮಾನ ಸುಖದ ಪ್ರಾಪ್ತಿಯಾಗುತ್ತದೆ ಆದರೆ ಇಲ್ಲಿಗೆ ಬಂದು ತಿಳಿದುಕೊಂಡಾಗಲೇ ಈ ಮಾತುಗಳು ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆ. ಇದು ಭಕ್ತಿಯ ರಾಜ್ಯವಾಗಿದೆ. ಇಲ್ಲಿ ಜ್ಞಾನವು ಅಂಶಮಾತ್ರವೂ ಇಲ್ಲ. ಹೇಗೆ ಪತಿತಪ್ರಪಂಚದಲ್ಲಿ ಯಾರೊಬ್ಬರೂ ಪಾವನರಿಲ್ಲವೋ ಹಾಗೆಯೇ ಜ್ಞಾನವೂ ಸಹ ಒಬ್ಬ ತಂದೆಯ ವಿನಃ ಮತ್ತ್ಯಾರಲ್ಲಿಯೂ ಇಲ್ಲ. ವೇದಶಾಸ್ತ್ರ ಇತ್ಯಾದಿಗಳೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಏಣಿಯನ್ನು ಕೆಳಗಿಳಿಯಲೇಬೇಕಾಗಿದೆ. ನೀವೀಗ ಬ್ರಾಹ್ಮಣರಾಗಿದ್ದೀರಿ, ಇದರಲ್ಲಿ ನಂಬರ್ವಾರ್ ಸೈನ್ಯವಿದೆ. ಯಾರು ಮುಖ್ಯವಾದ ಕಮ್ಯಾಂಡರ್, ಕ್ಯಾಪ್ಟನ್ ಜನರಲ್ ಮೊದಲಾದವರಿದ್ದಾರೆಯೋ ಅವರೆಲ್ಲರೂ ಪರಸ್ಪರ ಸೇರಿ ನಾವು ತಂದೆಯ ಸಂದೇಶವನ್ನು ಹೇಗೆ ಕೊಡುವುದೆಂಬ ಯುಕ್ತಿಗಳನ್ನು ತೆಗೆಯಬೇಕು. ಮಕ್ಕಳಿಗೆ ತಿಳಿಸಲಾಗಿದೆ- ಮೆಸೆಂಜರ್, ಪೈಗಂಬರ್ ಅಥವಾ ಗುರು ಒಬ್ಬರೇ ಆಗಿರುವರು. ಉಳಿದೆಲ್ಲರೂ ಭಕ್ತಿಮಾರ್ಗದವರಾಗಿದ್ದಾರೆ. ನೀವಷ್ಟೇ ಸಂಗಮಯುಗಿಗಳಾಗಿದ್ದೀರಿ. ಈ ಲಕ್ಷ್ಮೀ-ನಾರಾಯಣರ ಗುರಿಯು ಬಹಳ ನಿಖರವಾಗಿದೆ. ಭಕ್ತಿಮಾರ್ಗದಲ್ಲಿ ಸತ್ಯನಾರಾಯಣನ ಕಥೆ, ಮೂರನೆಯ ನೇತ್ರದ ಕಥೆ, ಅಮರಕಥೆಯನ್ನು ತಿಳಿಸುತ್ತಾರೆ. ಈಗ ನಿಮಗೆ ಸತ್ಯನಾರಾಯಣನ ಕಥೆಯನ್ನು ತಿಳಿಸುತ್ತಿದ್ದಾರೆ. ಭಕ್ತಿಮಾರ್ಗದಲ್ಲಿ ಕಳೆದುಹೋದ ಮಾತುಗಳಿವೆ. ಯಾರು ಇದ್ದುಹೋಗುವರೋ ಅವರದು ನಂತರ ಮಂದಿರಗಳನ್ನು ಕಟ್ಟಿಸುತ್ತಾರೆ. ಹೇಗೆ ಶಿವತಂದೆಯು ನಿಮಗೆ ಓದಿಸುತ್ತಿದ್ದಾರೆ, ನಂತರ ಭಕ್ತಿಮಾರ್ಗದಲ್ಲಿ ನೀವು ನೆನಪಾರ್ಥವಾಗಿ ಮಂದಿರಗಳನ್ನು ಕಟ್ಟಿಸುತ್ತೀರಿ. ಸತ್ಯಯುಗದಲ್ಲಿ ಶಿವ ಅಥವಾ ಲಕ್ಷ್ಮೀ-ನಾರಾಯಣರ ಯಾವುದೇ ಚಿತ್ರಗಳಿರುವುದಿಲ್ಲ. ಜ್ಞಾನವೇ ಬೇರೆ, ಭಕ್ತಿಯೇ ಬೇರೆಯಾಗಿದೆ. ಇದನ್ನೂ ಸಹ ನೀವು ಈಗ ತಿಳಿದುಕೊಂಡಿದ್ದೀರಿ ಆದ್ದರಿಂದ ತಂದೆಯು ಹೇಳುತ್ತಾರೆ- ಕೆಟ್ಟದ್ದನ್ನು ಕೇಳಬೇಡಿ, ಕೆಟ್ಟದ್ದನ್ನು ಮಾತನಾಡಬೇಡಿ....

ನೀವು ಮಕ್ಕಳಿಗೆ ಈಗ ಎಷ್ಟೊಂದು ಖುಷಿಯಿದೆ, ಹೊಸಪ್ರಪಂಚವು ಸ್ಥಾಪನೆಯಾಗುತ್ತಿದೆ, ಸುಖಧಾಮದ ಸ್ಥಾಪನಾರ್ಥವಾಗಿ ತಂದೆಯು ನಿಮಗೆ ಪುನಃ ಆದೇಶ ನೀಡುತ್ತಿದ್ದಾರೆ ಅದರಲ್ಲಿಯೂ ನಂಬರ್ವನ್ ಆದೇಶ ನೀಡುತ್ತಾರೆ- ಪಾವನರಾಗಿ. ಎಲ್ಲರೂ ಪತಿತರಂತೂ ಆಗಿದ್ದಾರಲ್ಲವೆ. ಆದ್ದರಿಂದ ಯಾರು ಒಳ್ಳೊಳ್ಳೆಯ ಮಕ್ಕಳಿದ್ದಾರೆಯೋ ಅವರು ಪರಸ್ಪರ ಸೇರಿ ಯುಕ್ತಿಗಳನ್ನು ರಚಿಸಬೇಕು- ಹೇಗೆ ಸರ್ವೀಸ್ ವೃದ್ಧಿ ಮಾಡುವುದು? ಬಡವರಿಗೆ ಹೇಗೆ ಸಂದೇಶವನ್ನು ಕೊಡುವುದು? ತಂದೆಯಂತೂ ಕಲ್ಪದ ಹಿಂದಿನ ತರಹ ಬಂದಿದ್ದಾರೆ, ತಿಳಿಸುತ್ತಾರೆ- ತಮ್ಮನ್ನು ಆತ್ಮವೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿ. ರಾಜಧಾನಿಯು ಅವಶ್ಯವಾಗಿ ಸ್ಥಾಪನೆಯಾಗಲಿದೆ. ಹೀಗೆ ತಿಳಿಸಿದಾಗ ಅವಶ್ಯವಾಗಿ ತಿಳಿದುಕೊಳ್ಳುತ್ತಾರೆ. ಯಾರು ದೇವಿ-ದೇವತಾಧರ್ಮದವರಲ್ಲವೋ ಅವರು ತಿಳಿದುಕೊಳ್ಳುವುದಿಲ್ಲ. ವಿನಾಶಕಾಲದಲ್ಲಿ ಈಶ್ವರನೊಂದಿಗೆ ವಿಪರೀತ ಬುದ್ಧಿಯವರಲ್ಲವೆ. ನೀವು ಮಕ್ಕಳು ಅವರು ತಮ್ಮ ಮಾಲೀಕರೆಂದು ತಿಳಿದುಕೊಂಡಿದ್ದೀರಿ ಆದ್ದರಿಂದ ನೀವು ವಿಕಾರದಲ್ಲಿ ಹೋಗಬಾರದು, ಜಗಳ-ಕಲಹ ಮಾಡಬಾರದು. ಬ್ರಾಹ್ಮಣಧರ್ಮವು ಬಹಳ ಶ್ರೇಷ್ಠವಾಗಿದೆ. ಅವರು ಶೂದ್ರಧರ್ಮದವರು, ನೀವು ಬ್ರಾಹ್ಮಣ ಧರ್ಮದವರಾಗಿದ್ದೀರಿ. ಅವರು ಪಾದಗಳಿಗೆ ಸಮಾನ. ಶಿಖೆಯ ಮೇಲೆ ಶ್ರೇಷ್ಠಾತಿಶ್ರೇಷ್ಠ ಭಗವಂತ ನಿರಾಕಾರನಿದ್ದಾರೆ. ಈ ಕಣ್ಣುಗಳಿಂದ ನೋಡಲು ಆಗದೇ ಇರುವ ಕಾರಣ ವಿರಾಟರೂಪದಲ್ಲಿ ಶಿಖೆ (ಬ್ರಾಹ್ಮಣರು) ಮತ್ತು ಶಿವತಂದೆಯನ್ನು ತೋರಿಸುವುದಿಲ್ಲ. ಕೇವಲ ದೇವತಾ, ಕ್ಷತ್ರಿಯ, ವೈಶ್ಯ, ಶೂದ್ರರೆಂದು ಹೇಳುತ್ತಾರೆ. ಯಾರು ದೇವತೆಗಳಾಗಿರುವರೋ ಅವರೇ ಮತ್ತೆ ಪುನರ್ಜನ್ಮವನ್ನು ತೆಗೆದುಕೊಂಡು ಕ್ಷತ್ರಿಯ, ವೈಶ್ಯ, ಶೂದ್ರರಾಗುತ್ತಾರೆ. ವಿರಾಟರೂಪದ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ, ನೀವೀಗ ತಿಳಿದುಕೊಂಡಿದ್ದೀರಿ ಆದ್ದರಿಂದ ಸರಿಯಾದ ಚಿತ್ರಗಳನ್ನು ರಚಿಸಬೇಕಾಗಿದೆ. ಶಿವತಂದೆಯನ್ನು ತೋರಿಸಿದ್ದೀರಿ ಮತ್ತು ಬ್ರಾಹ್ಮಣರನ್ನು ತೋರಿಸಿದ್ದೀರಿ. ನೀವೀಗ ಎಲ್ಲರಿಗೆ ಈ ಸಂದೇಶವನ್ನು ಕೊಡಬೇಕಾಗಿದೆ- ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪುಮಾಡಿ. ಸಂದೇಶವನ್ನು ಕೊಡುವುದು ನಿಮ್ಮ ಕರ್ತವ್ಯವಾಗಿದೆ, ಹೇಗೆ ತಂದೆಯ ಮಹಿಮೆಯು ಅಪರಮಪಾರವಾಗಿದೆಯೋ ಹಾಗೆಯೇ ಭಾರತಕ್ಕೂ ಸಹ ಅಪಾರ ಮಹಿಮೆಯಿದೆ. ಇದನ್ನೂ ಏಳು ದಿನಗಳಕಾಲ ತಿಳಿದುಕೊಂಡಾಗಲೇ ಬುದ್ಧಿಯಲ್ಲಿ ಕುಳಿತುಕೊಳ್ಳುವುದು. ಇದಕ್ಕಾಗಿ ನಮಗೆ ಬಿಡುವಿಲ್ಲವೆಂದು ಹೇಳುತ್ತಾರೆ, ಅವರನ್ನೇ ಅರ್ಧಕಲ್ಪ ಕರೆಯುತ್ತಾ ಬಂದಿದ್ದೀರಿ. ಅವರೀಗ ಸನ್ಮುಖದಲ್ಲಿ ಬಂದಿದ್ದಾರೆ. ತಂದೆಯು ಅಂತ್ಯದಲ್ಲಿಯೇ ಬರಬೇಕಾಗಿದೆ. ಇದನ್ನೂ ಸಹ ನೀವು ಬ್ರಾಹ್ಮಣರು ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದೀರಿ, ವಿದ್ಯಾಭ್ಯಾಸವನ್ನು ಆರಂಭಿಸಿದಿರಿ ಮತ್ತು ನಿಶ್ಚಯವಾಯಿತು. ಯಾರನ್ನು ನಾವು ಕರೆಯುತ್ತಿದ್ದೆವೋ ಆ ಪ್ರಿಯತಮನು ಬಂದಿದ್ದಾರೆ. ಅವಶ್ಯವಾಗಿ ಶರೀರದಲ್ಲಿಯೇ ಬಂದಿರಬೇಕಲ್ಲವೆ. ಅವರಿಗೆ ತಮ್ಮದೇ ಆದ ಶರೀರವಂತೂ ಇಲ್ಲ. ನಾನು ಇವರಲ್ಲಿ ಪ್ರವೇಶ ಮಾಡಿ ನೀವು ಮಕ್ಕಳಿಗೆ ಸೃಷ್ಟಿಚಕ್ರದ, ರಚಯಿತ ಮತ್ತು ರಚನೆಯ ಜ್ಞಾನವನ್ನು ತಿಳಿಸುತ್ತೇನೆಂದು ಹೇಳುತ್ತಾರೆ. ಇದು ಮತ್ತ್ಯಾರಿಗೂ ಗೊತ್ತಿಲ್ಲ. ಇದು ವಿದ್ಯೆಯಾಗಿದೆ. ತಂದೆಯೇ ಬಹಳಷ್ಟು ಸರಳ ಮಾಡಿ ತಿಳಿಸಿಕೊಡುತ್ತಾರೆ. ನಾನು ನಿಮ್ಮನ್ನು ಎಷ್ಟೊಂದು ಧನವಂತರನ್ನಾಗಿ ಮಾಡುತ್ತೇನೆ. ಕಲ್ಪ-ಕಲ್ಪವೂ ನಿಮ್ಮಂತಹ ಪವಿತ್ರರೂ ಹಾಗೂ ಸುಖಿಗಳು ಯಾರೂ ಇಲ್ಲ. ನೀವು ಮಕ್ಕಳು ಈ ಸಮಯದಲ್ಲಿ ಎಲ್ಲರಿಗೆ ಜ್ಞಾನದಾನ ಮಾಡುತ್ತೀರಿ. ತಂದೆಯು ನಿಮಗೆ ರತ್ನಗಳ ದಾನ ಮಾಡುತ್ತಾರೆ. ನೀವು ಅನ್ಯರಿಗೆ ನೀಡುತ್ತೀರಿ. ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೀರಿ. ನೀವು ತಮ್ಮದೇ ತನು-ಮನ-ಧನದಿಂದ ಶ್ರೀಮತದಂತೆ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಿದ್ದೀರಿ. ಇದು ಎಷ್ಟು ಶ್ರೇಷ್ಠಕಾರ್ಯವಾಗಿದೆ! ನೀವು ಗುಪ್ತ ಸೈನಿಕರಾಗಿದ್ದೀರಿ. ಇದು ಯಾರಿಗೂ ತಿಳಿದಿಲ್ಲ. ನಿಮಗೆ ತಿಳಿದಿದೆ- ನಾವು ವಿಶ್ವದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತಿದ್ದೇವೆ, ಶ್ರೀಮತದ ಮೂಲಕ ಶ್ರೇಷ್ಠರಾಗುತ್ತೇವೆ. ಈಗ ನನ್ನೊಬ್ಬನನ್ನೇ ನೆನಪು ಮಾಡಿ ಎಂದು ತಂದೆಯು ತಿಳಿಸುತ್ತಾರೆ- ಈ ಮಾತನ್ನು ಕೃಷ್ಣನು ಹೇಳಲು ಸಾಧ್ಯವಿಲ್ಲ. ಕೃಷ್ಣನಂತೂ ರಾಜಕುಮಾರನಾಗಿದ್ದನು, ನೀವೂ ಸಹ ರಾಜಕುಮಾರ-ಕುಮಾರಿಯರಾಗುತ್ತೀರಲ್ಲವೆ. ಸತ್ಯ-ತ್ರೇತಾಯುಗದಲ್ಲಿ ಪವಿತ್ರ ಪ್ರವೃತ್ತಿಮಾರ್ಗವಿರುತ್ತದೆ. ಅಪವಿತ್ರರಾಜರು ಪವಿತ್ರ ರಾಜ-ರಾಣಿಯಾದ ಲಕ್ಷ್ಮೀ-ನಾರಾಯಣರ ಪೂಜೆ ಮಾಡುತ್ತಾರೆ. ಮೊದಲು ಪವಿತ್ರ ಪ್ರವೃತ್ತಿಮಾರ್ಗದವರ ರಾಜ್ಯವು ನಡೆಯುತ್ತದೆ. ನಂತರ ಅಪವಿತ್ರ ಪ್ರವೃತ್ತಿಮಾರ್ಗವಾಗುತ್ತದೆ. ಅರ್ಧ-ಅರ್ಧವಲ್ಲವೆ. ದಿನ ಮತ್ತು ರಾತ್ರಿ ಒಂದುವೇಳೆ ಲಕ್ಷಾಂತರ ವರ್ಷಗಳ ಮಾತಿದ್ದಿದ್ದರೆ ಹೀಗೆ ಅರ್ಧ-ಅರ್ಧ ಇರಲು ಸಾಧ್ಯವಿರಲಿಲ್ಲ. ಒಂದುವೇಳೆ ಲಕ್ಷಾಂತರ ವರ್ಷಗಳಿದ್ದಿದ್ದರೆ ಹಿಂದೂಗಳು ಯಾರು ವಾಸ್ತವದಲ್ಲಿ ದೇವತಾ ಧರ್ಮದವರಾಗಿದ್ದರೋ ಅವರ ಸಂಖ್ಯೆಯು ಬಹಳ ಜಾಸ್ತಿಯಾಗಬೇಕಿತ್ತು, ಲೆಕ್ಕವಿಲ್ಲದಷ್ಟಾಗಿಬಿಡುತ್ತಿತ್ತು. ಈಗಂತೂ ಜನಗಣತಿ ಮಾಡುತ್ತಾರಲ್ಲವೆ. ಇದು ಡ್ರಾಮಾದಲ್ಲಿ ನಿಗಧಿಯಾಗಿದೆ, ಕಲ್ಪದ ನಂತರವೂ ಆಗುವುದು. ಮೃತ್ಯುವು ಸನ್ಮುಖದಲ್ಲಿ ನಿಂತಿದೆ. ಇದು ಅದೇ ಮಹಾಭಾರತ ಯುದ್ಧವಾಗಿದೆ ಅಂದಾಗ ನೀವೆಲ್ಲರೂ ಪರಸ್ಪರ ಸೇರಿ ಸರ್ವೀಸಿನ ಯುಕ್ತಿಗಳನ್ನು ರಚಿಸಬೇಕು. ಸರ್ವೀಸ್ ಮಾಡುತ್ತಲೂ ಇರುತ್ತೀರಿ, ಹೊಸ-ಹೊಸಚಿತ್ರಗಳನ್ನು ರಚಿಸುತ್ತೀರಿ, ಪ್ರದರ್ಶನಿಗಳನ್ನೂ ಮಾಡುತ್ತೀರಿ ಆದರೆ ಈಗ ಮತ್ತೇನು ಮಾಡುವಿರಿ? ಆಧ್ಯಾತ್ಮಿಕ ಮ್ಯೂಸಿಯಂನ್ನು ಮಾಡಿಸಿ. ಇದನ್ನು ನೋಡಿಕೊಂಡು ಹೋದವರು ಹೋಗಿ ಅನ್ಯರನ್ನೂ ಕಳುಹಿಸುತ್ತಾರೆ. ಬಡವರಿರಲಿ ಅಥವಾ ಸಾಹುಕಾರರಿರಲಿ ದಾನ-ಧರ್ಮಕ್ಕಾಗಿ ತೆಗೆಯುತ್ತಾರಲ್ಲವೆ. ಸಾಹುಕಾರರು ಹೆಚ್ಚು ತೆಗೆಯುತ್ತಾರೆ. ಇಲ್ಲಿಯೂ ಹಾಗೆಯೇ ಕೆಲವರು ಸಾವಿರ ರೂ ತೆಗೆಯುತ್ತಾರೆ, ಇನ್ನೂ ಕೆಲವರು ಕಡಿಮೆ. ಕೆಲವರಂತೂ ಎರಡು ರೂಪಾಯಿಗಳನ್ನು ಕಳುಹಿಸಿ ಹೇಳುತ್ತಾರೆ- ಬಾಬಾ, ಈ ಒಂದು ರೂಪಾಯಿಯನ್ನು ಇಟ್ಟಿಗೆಯ ಸೇವೆಯಲ್ಲಿ ತೊಡಗಿಸಿಕೊಳ್ಳಿ. ಒಂದು ರೂಪಾಯಿಯನ್ನು 21 ಜನ್ಮಗಳಿಗಾಗಿ ಜಮಾ ಮಾಡಿಕೊಳ್ಳಿ, ಇದು ಗುಪ್ತವಾಗಿದೆ. ಬಡವರ ಒಂದು ರೂಪಾಯಿಯು ಸಾಹುಕಾರರ ಒಂದು ಸಾವಿರ ರೂಪಾಯಿಗೆ ಸರಾಸರಿಯಾಗುತ್ತದೆ. ಬಡವರ ಬಳಿ ಇರುವುದೇ ಸ್ವಲ್ಪ ಅಂದಾಗ ಏನು ಮಾಡುತ್ತಾರೆ? ಲೆಕ್ಕವಿದೆಯಲ್ಲವೆ. ವ್ಯಾಪಾರಿಗಳೂ ಸಹ ದಾನಧರ್ಮಕ್ಕಾಗಿ ತೆಗೆಯುತ್ತಾರೆ. ಈಗ ಏನು ಮಾಡಬೇಕು? ತಂದೆಗೆ ಸಹಯೋಗ ಕೊಡಬೇಕಾಗಿದೆ. ಅದಕ್ಕೆ ಪ್ರತಿಫಲವನ್ನು ತಂದೆಯು 21 ಜನ್ಮಗಳಿಗಾಗಿ ಕೊಡುತ್ತಾರೆ. ತಂದೆಯು ಬಂದು ಬಡವರಿಗೆ ಸಹಯೋಗ ಕೊಡುತ್ತಾರೆ. ಈಗಂತೂ ಈ ಪ್ರಪಂಚವೇ ಉಳಿಯುವುದಿಲ್ಲ, ಎಲ್ಲವೂ ಮಣ್ಣುಪಾಲಾಗುವುದು. ಇದೂ ಸಹ ನಿಮಗೆ ತಿಳಿದಿದೆ- ಕಲ್ಪದ ಹಿಂದಿನಂತೆ ಸ್ಥಾಪನೆಯು ಅವಶ್ಯವಾಗಿ ಆಗಬೇಕಾಗಿದೆ, ನಿರಾಕಾರ ತಂದೆಯು ತಿಳಿಸುತ್ತಾರೆ- ಮಕ್ಕಳೇ ದೇಹದ ಎಲ್ಲಾ ಧರ್ಮಗಳನ್ನು ತ್ಯಜಿಸಿ ಒಬ್ಬ ತಂದೆಯನ್ನು ನೆನಪು ಮಾಡಿ, ಈ ಬ್ರಹ್ಮಾರವರೂ ಸಹ ರಚನೆಯಲ್ಲವೆ. ಬಹ್ಮಾ ಯಾರ ಮಗನಾಗಿದ್ದಾರೆ? ಯಾರು ರಚಿಸಿದರು? ಬ್ರಹ್ಮಾ-ವಿಷ್ಣು-ಶಂಕರರನ್ನು ಹೇಗೆ ರಚನೆ ಮಾಡುತ್ತಾರೆ? ಇದನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯೇ ಬಂದು ಸತ್ಯಮಾತನ್ನು ತಿಳಿಸುತ್ತಾರೆ. ಬ್ರಹ್ಮಾನೂ ಸಹ ಅವಶ್ಯವಾಗಿ ಮನುಷ್ಯ ಸೃಷ್ಟಿಯಲ್ಲಿಯೇ ಇರುವರು. ಬ್ರಹ್ಮಾಮುಖವಂಶಾವಳಿಯೆಂದು ಗಾಯನವಿದೆ. ಭಗವಂತನು ಮನುಷ್ಯಸೃಷ್ಟಿಯ ರಚನೆಯನ್ನು ಹೇಗೆ ರಚಿಸುತ್ತಾರೆಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಬ್ರಹ್ಮಾನು ಇಲ್ಲಿಯೇ ಇರಬೇಕಲ್ಲವೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ಯಾರಲ್ಲಿ ನಾನು ಪ್ರವೇಶ ಮಾಡಿದ್ದೇನೆಯೋ ಅವರೂ ಸಹ ಬಹಳ ಜನ್ಮಗಳ ಅಂತಿಮ ಜನ್ಮದಲ್ಲಿದ್ದಾರೆ. ಇವರು ಪೂರ್ಣ 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆ. ಬ್ರಹ್ಮಾನೇನೂ ರಚಯಿತನಲ್ಲ, ರಚಯಿತನು ಒಬ್ಬರೇ ನಿರಾಕಾರ ತಂದೆಯಾಗಿದ್ದಾರೆ. ಆತ್ಮಗಳು ನಿರಾಕಾರಿಯಾಗಿದ್ದೀರಿ. ತಿಳಿಸುತ್ತಾರೆ- ನಾನು ಇವರಲ್ಲಿ ಪ್ರವೇಶ ಮಾಡಿ ಹೆಸರನ್ನು ಬದಲಾಯಿಸಿದೆನು. ನೀವು ಬ್ರಾಹ್ಮಣ ಹೆಸರುಗಳನ್ನು ಬದಲಾಯಿಸಿದೆನು. ನೀವು ರಾಜಋಷಿಗಳಾಗಿದ್ದೀರಿ. ಆರಂಭದಲ್ಲಿ ಸನ್ಯಾಸ ಮಾಡಿ ತಂದೆಯ ಜೊತೆ ಇರತೊಡಗಿದಿರಿ ಆಗ ಹೆಸರನ್ನು ಬದಲಾಯಿಸಲಾಯಿತು. ಆದರೂ ಸಹ ಮಾಯೆಯು ನುಂಗಿಬಿಟ್ಟಿತು ಎಂಬುದನ್ನು ನೋಡಿದಾಗ ಮಾಲೆಯನ್ನು ಮಾಡುವುದು, ಹೆಸರು ಬದಲಾಯಿಸುವುದನ್ನು ಬಿಟ್ಟುಬಿಟ್ಟೆವು.

ಈಗಿನ ಪ್ರಪಂಚದಲ್ಲಿ ಪ್ರತಿಯೊಂದು ಮಾತಿನಲ್ಲಿ ಬಹಳಷ್ಟು ಮೋಸವಿದೆ. ಹಾಲಿನಲ್ಲಿಯೂ ಮೋಸವಿದೆ. ಪರಿಶುದ್ಧವಾದ ವಸ್ತು ಸಿಗುವುದೇ ಇಲ್ಲ. ತಂದೆಗೂ ಮೋಸಮಾಡುತ್ತಾರೆ, ಸ್ವಯಂನ್ನು ಭಗವಂತನೆಂದು ಕರೆಸಿಕೊಳ್ಳತೊಡಗುತ್ತಾರೆ. ಆತ್ಮವೆಂದರೇನು, ಪರಮಾತ್ಮನು ಯಾರು? ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ನಿಮ್ಮಲ್ಲಿಯೂ ಸಹ ನಂಬರ್ವಾರ್ ಪುರುಷಾರ್ಥದನುಸಾರ ಇದ್ದೀರಿ. ಯಾರು ಹೇಗೆ ಓದುತ್ತಾರೆ ಮತ್ತು ಓದಿಸುತ್ತಾರೆ, ಯಾವ ಪದವಿಯನ್ನು ಪಡೆಯುತ್ತಾರೆ ಎಂಬುವುದೆಲ್ಲವೂ ತಂದೆಗೆ ತಿಳಿದಿದೆ. ನಾವು ತಂದೆಯು ಮೂಲಕ ವಿಶ್ವದ ಕಿರೀಟಧಾರಿ ರಾಜಕುಮಾರ-ಕುಮಾರಿಯಾಗುತ್ತಿದ್ದೇವೆಂದು ನಿಶ್ಚಯವಿದೆ ಅಂದಮೇಲೆ ಅಂತಹ ಪುರುಷಾರ್ಥ ಮಾಡಿ ತೋರಿಸಬೇಕಾಗಿದೆ. ನಾವು ರಾಜಕುಮಾರರಾಗಿದ್ದೆವು ನಂತರ 84 ಜನ್ಮಗಳ ಚಕ್ರವನ್ನು ಸುತ್ತಿದೆವು, ಈಗ ಪುನಃ ಆಗುತ್ತೇವೆ. ಇದು ನರಕವಾಗಿದೆ, ಇದರಲ್ಲಿ ಏನೂ ಸಾರವಿಲ್ಲ. ತಂದೆಯು ಮತ್ತೆ ಬಂದು ಭಂಡಾರವನ್ನು ಸಂಪನ್ನ ಮಾಡಿ ಕಾಲಕಂಟಕದಿಂದ ದೂರಮಾಡುತ್ತಾರೆ. ನೀವು ಎಲ್ಲರನ್ನು ಕೇಳಿ- ಇಲ್ಲಿ ಭಂಡಾರವನ್ನು ಸಂಪನ್ನ ಮಾಡಲು ಬಂದಿದ್ದೀರಲ್ಲವೆ. ಅಮರಪುರಿಯಲ್ಲಿ ಮೃತ್ಯುವು ಬರಲು ಸಾಧ್ಯವಿಲ್ಲ. ತಂದೆಯು ಬರುವುದೇ ಭಂಡಾರವನ್ನು ಸಂಪನ್ನ ಮಾಡಿ ಕಾಲಕಂಟಕಗಳನ್ನು ದೂರ ಮಾಡಲು. ಅದು ಅಮರಲೋಕ, ಇದು ಮೃತ್ಯುಲೋಕವಾಗಿದೆ. ಇಂತಹ ಮಧುರಾತಿ ಮಧುರ ಮಾತುಗಳನ್ನು ಹೇಳಬೇಕು ಮತ್ತು ಕೇಳಬೇಕಾಗಿದೆ. ವ್ಯರ್ಥವನ್ನಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆಯು ವಿಶ್ವದ ಮಾಲೀಕರನ್ನಾಗಿ ಮಾಡುವ ವಿದ್ಯೆಯನ್ನು ಓದಿಸಲು ಬಂದಿದ್ದಾರೆ ಆದ್ದರಿಂದ ಎಂದೂ ಈ ರೀತಿ ಹೇಳಬಾರದು- ನಮಗೆ ಬಿಡುವಿಲ್ಲ, ಶ್ರೀಮತದಂತೆ ತನು-ಮನ-ಧನದಿಂದ ಭಾರತವನ್ನು ಸ್ವರ್ಗವನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ.

2. ಪರಸ್ಪರದಲ್ಲಿ ಬಹಳ ಮಧುರಾತಿ ಮಧುರ ಜ್ಞಾನದ ಮಾತುಗಳನ್ನು ಕೇಳಬೇಕು ಮತ್ತು ಹೇಳಬೇಕಾಗಿದೆ. ತಂದೆಯ ಈ ಆದೇಶವು ಸದಾ ನೆನಪಿರಲಿ- ಕೆಟ್ಟದ್ದನ್ನು ಹೇಳಬೇಡಿ, ಕೆಟ್ಟದ್ದನ್ನು ಮಾತನಾಡಬೇಡಿ.....

ವರದಾನ:
ಹದ್ದಿನ ಸರ್ವ ಕಾಮನೆಗಳ ಮೇಲೆ ಜಯ ಪ್ರಾಪ್ತಿ ಮಾಡಿಕೊಳ್ಳುವಂತಹ ಕಾಮಜೀತ್ ಜಗತ್ ಜೀತ್ ಭವ

ಕಾಮವಿಕಾರದ ಅಂಶ ಸರ್ವ ಹದ್ದಿನ ಕಾಮನೆಗಳಾಗಿವೆ. ಕಾಮನೆ ಒಂದಾಗಿದೆ ವಸ್ತುಗಳ ಮೇಲೆ, ಇನ್ನೊಂದಾಗಿದೆ ವ್ಯಕ್ತಿಯ ಮೂಲಕ ಹದ್ದಿನ ಪ್ರಾಪ್ತಿಯದು, ಮೂರನೆಯದಾಗಿದೆ ಸಂಬಂಧಗಳನ್ನು ನಿಭಾಯಿಸುವುದರಲ್ಲಿ, ನಾಲ್ಕನೆಯದಾಗಿದೆ ಸೇವಾ ಭಾವನೆಯಲ್ಲಿ ಹದ್ಧಿನ ಕಾಮನೆಯ ಭಾವ. ಯಾವುದೇ ವ್ಯಕ್ತಿ ಅಥವಾ ವಸ್ತುವಿನ ಪ್ರತಿ ವಿಶೇಷ ಆಕರ್ಷಣೆಯಾಗುವುದು-ಇಚ್ಛೆಯಲ್ಲ ಆದರೆ ಇದು ಚೆನ್ನಾಗಿ ಕಾಣುತ್ತೆ, ಇದೂ ಸಹ ಕಾಮವಿಕಾರದ ಅಂಶವಾಗಿದೆ. ಯಾವಾಗ ಈ ಸೂಕ್ಷ್ಮ ಅಂಶ ಸಹ ಸಮಾಪ್ತಿಯಾಗುತ್ತೆ ಆಗ ಹೇಳಲಾಗುವುದು ಕಾಮಜೀತ್ ಜಗತ್ ಜೀತ್.

ಸ್ಲೋಗನ್:
ಹೃದಯದಿಂದ ಅನುಭೂತಿ ಮಾಡುವುದರಿಂದ ದಿಲಾರಾಮ ತಂದೆಯ ಆಶೀರ್ವಾದ ಪಡೆಯಲು ಅಧಿಕಾರಿಗಳಾಗಿ.

ಅವ್ಯಕ್ತ ಸೂಚನೆ: ಸಂಕಲ್ಪ ಶಕ್ತಿಯನ್ನು ಜಮಾ ಮಾಡಿ ಶ್ರೇಷ್ಠ ಸೇವೆಗೆ ನಿಮಿತ್ತವಾಗಿ

ಮನಸ್ಸು ಸ್ವಯಂ ಒಂದು ಶಕ್ತಿ ಆಗಿದೆ, ಅದು ಕಂಟ್ರೋಲ್ ನಲ್ಲಿ ಇದ್ದರೆ ಅರ್ಥಾತ್ ಆರ್ಡರ್ದಿಂದ ಕಾರ್ಯ ಮಾಡಿದರೆ ಪಾಸ್ ವಿತ್ ಆನರ್ ಅಥವಾ ರಾಜ್ಯಾಧಿಕಾರಿ ಆಗಿ ಬಿಡುವಿರಿ. ಸಂಕಲ್ಪ ಶಕ್ತಿಯನ್ನು ಜಮಾ ಮಾಡುವುದಕ್ಕಾಗಿ, ಏನನ್ನು ಯೋಚಿಸುತ್ತೀರಿ ಅದನ್ನೇ ಮಾಡಿ, ಸ್ಟಾಪ್ ಎಂದ ಕೂಡಲೇ ಸಂಕಲ್ಪಗಳು ಸ್ಟಾಪ್ ಆಗಿಬಿಡಬೇಕು. ಸೇವೆಯ ಬಗ್ಗೆ ಯೋಚಿಸಿದರೆ ಸೇವೆಯಲ್ಲಿ ತೊಡಗಿ ಬಿಡಬೇಕು. ಪರಮ ಧಾಮವನ್ನು ಯೋಚಿಸಿದರೆ ಪರಮ ಧಾಮವನ್ನು ತಲುಪಿಬಿಡಬೇಕು. ಇಂತಹ ಕಂಟ್ರೋಲಿಂಗ್ ಪವರ್ ಹೆಚ್ಚಿಸಿಕೊಳ್ಳಿ.