02.08.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಎಂದೂ
ಸುಸ್ತಾಗಿ ನೆನಪಿನ ಯಾತ್ರೆಯನ್ನು ಬಿಡಬೇಡಿ, ಸದಾ ದೇಹೀ-ಅಭಿಮಾನಿಯಾಗಿರುವ ಪ್ರಯತ್ನ ಪಡಿ, ತಂದೆಯ
ಪ್ರೀತಿಯನ್ನು ಸೆಳೆಯಲು ಹಾಗೂ ಮಧುರರಾಗಲು ನೆನಪಿನಲ್ಲಿರಿ.”
ಪ್ರಶ್ನೆ:
16 ಕಲಾ
ಸಂಪೂರ್ಣ ಅಥವಾ ಪರಿಪೂರ್ಣ ಆಗಲು ಯಾವ ಪುರುಷಾರ್ಥವನ್ನು ಅವಶ್ಯವಾಗಿ ಮಾಡಬೇಕಾಗಿದೆ?
ಉತ್ತರ:
ಎಷ್ಟು ಸಾಧ್ಯವೋ
ಸ್ವಯಂನ್ನು ಆತ್ಮನೆಂದು ತಿಳಿಯಿರಿ, ಪ್ರೀತಿಯ ಸಾಗರನಾದ ತಂದೆಯನ್ನು ನೆನಪು ಮಾಡಿ ಆಗ ಸಂಪನ್ನರಾಗಿ
ಬಿಡುತ್ತೀರಿ. ಜ್ಞಾನವು ಬಹಳ ಸಹಜವಾಗಿದೆ ಆದರೆ 16 ಕಲಾ ಸಂಪೂರ್ಣರಾಗಲು ನೆನಪಿನಿಂದ ಆತ್ಮವನ್ನು
ಪರಿಪೂರ್ಣ ಮಾಡಿಕೊಳ್ಳಬೇಕಾಗಿದೆ. ಆತ್ಮವೆಂದು ತಿಳಿಯುವುದರಿಂದ ಮಧುರರಾಗಿ ಬಿಡುತ್ತೀರಿ. ಎಲ್ಲಾ
ಏರುಪೇರುಗಳು ಸಮಾಪ್ತಿಯಾಗಿ ಬಿಡುತ್ತದೆ.
ಗೀತೆ:
ನೀವು ಪ್ರೀತಿಯ
ಸಾಗರನಾಗಿದ್ದೀರಿ...
ಓಂ ಶಾಂತಿ.
ಪ್ರೀತಿಯ ಸಾಗರ ತಂದೆಯು ತಾವು ಮಕ್ಕಳನ್ನೂ ಸಹ ತಮ್ಮಂತೆ ಪ್ರೀತಿಯ ಸಾಗರರನ್ನಾಗಿ ಮಾಡುತ್ತಾರೆ.
ನಾವು ಇಂತಹ ಲಕ್ಷ್ಮೀ-ನಾರಾಯಣರಾಗಬೇಕೆಂದು ಮಕ್ಕಳ ಲಕ್ಷ್ಯವೂ ಆಗಿದೆ. ಇವರನ್ನು (ದೇವತೆಗಳು)
ಎಲ್ಲರೂ ಎಷ್ಟೊಂದು ಪ್ರೀತಿ ಮಾಡುತ್ತಾರೆ. ಮಕ್ಕಳಿಗೂ ಗೊತ್ತಿದೆ - ತಂದೆಯು ನಮ್ಮನ್ನು ಇವರಂತೆ
ಮಧುರರನ್ನಾಗಿ ಮಾಡುತ್ತಾರೆ. ಇಲ್ಲಿಯೇ ಮಧುರರಾಗಬೇಕಾಗಿದೆ ಮತ್ತು ನೆನಪಿನಿಂದಲೇ ಆಗುತ್ತೀರಿ.
ಭಾರತದ ಯೋಗವು ಪ್ರಸಿದ್ಧವಾಗಿದೆ, ವಾಸ್ತವದಲ್ಲಿ ಇದು ನೆನಪಾಗಿದೆ. ಈ ನೆನಪಿನಿಂದಲೇ ನೀವು ಈ
ದೇವಿ-ದೇವತೆಗಳ ತರಹ ವಿಶ್ವದ ಮಾಲೀಕರಾಗುತ್ತೀರಿ ಅಂದಾಗ ಮಕ್ಕಳು ಇದೇ ಶ್ರಮ ಪಡಬೇಕಾಗಿದೆ. ನಮಗಂತೂ
ಬಹಳಷ್ಟು ಜ್ಞಾನವಿದೆಯೆಂಬ ಅಭಿಮಾನದಲ್ಲಿ ಬರಬಾರದು ಮೂಲ ಮಾತಾಗಿದೆ ನೆನಪು. ನೆನಪೇ ಪ್ರೀತಿಯನ್ನು
ಕೊಡುತ್ತದೆ ಬಹಳ ಮಧುರರು, ಬಹಳ ಪ್ರಿಯರಾಗಲು ಬಯಸುತ್ತೀರಿ, ಶ್ರೇಷ್ಠ ಪದವಿಯನ್ನು ಪಡೆಯಲು
ಬಯಸುತ್ತೀರೆಂದರೆ ಪರಿಶ್ರಮ ಪಡಿ ಇಲ್ಲವಾದರೆ ಬಹಳ ಪಶ್ಚಾತ್ತಾಪ ಪಡುತ್ತೀರಿ ಏಕೆಂದರೆ ಇಂತಹ ಮಕ್ಕಳು
ಅನೇಕರಿದ್ದಾರೆ, ಯಾರ ನೆನಪು ತಂದೆಯವರೆಗೆ ತಲುಪುವುದೇ ಇಲ್ಲ, ಸುಸ್ತಾಗಿ ಬಿಡುತ್ತಾರೆ. ಆಗ ನೆನಪು
ಮಾಡುವುದನ್ನೇ ಬಿಟ್ಟು ಬಿಡುತ್ತಾರೆ. ಮೊದಲನೆಯದಾಗಿ ದೇಹೀ-ಅಭಿಮಾನಿಯಾಗಲು ಬಹಳ ಪ್ರಯತ್ನ ಪಡಿ
ಇಲ್ಲವಾದರೆ ಬಹಳ ಕಡಿಮೆ ಪದವಿಯನ್ನು ಪಡೆಯುತ್ತೀರಿ. ಇಷ್ಟು ಮಧುರರು ಎಂದಿಗೂ ಆಗುವುದಿಲ್ಲ. ಬಹಳ
ಕೆಲವರೇ ಮಕ್ಕಳಿದ್ದಾರೆ, ತಂದೆಯ ಪ್ರೀತಿಯನ್ನು ಸೆಳೆಯುತ್ತಾರೆ ಏಕೆಂದರೆ ನೆನಪಿನಲ್ಲಿರುತ್ತಾರೆ.
ಕೇವಲ ತಂದೆಯ ನೆನಪು ಮುಖ್ಯವಾಗಿ ಬೇಕು. ಎಷ್ಟು ನೆನಪು ಮಾಡುತ್ತೀರೋ ಅಷ್ಟು ಮಧುರರಾಗುತ್ತೀರಿ. ಈ
ಲಕ್ಷ್ಮೀ-ನಾರಾಯಣರೂ ಸಹ ಹಿಂದಿನ ಜನ್ಮದಲ್ಲಿ ಬಹಳ ನೆನಪು ಮಾಡಿದ್ದಾರೆ. ನೆನಪಿನಿಂದಲೇ ಇಷ್ಟು
ಮಧುರರಾಗಿದ್ದಾರೆ. ಸತ್ಯಯುಗದ ಸೂರ್ಯವಂಶಿಯರೇ ಮೊದಲ ನಂಬರಿನಲ್ಲಿದ್ದಾರೆ. ನಂತರ ಚಂದ್ರವಂಶಿಯರೂ
ಎರಡನೇ ನಂಬರಿನವರಾದರು. ಈ ಲಕ್ಷ್ಮೀ-ನಾರಾಯಣರು ಬಹಳ ಪ್ರಿಯರೆನಿಸುತ್ತಾರೆ. ಈ ಲಕ್ಷ್ಮೀ-ನಾರಾಯಣರ
ಮುಖ ಲಕ್ಷಣಗಳು, ಹಾಗೂ ರಾಮ-ಸೀತೆಯರ ಮುಖ ಲಕ್ಷಣಗಳಲ್ಲಿ ಬಹಳ ಅಂತರವಿದೆ. ಈ
ಲಕ್ಷ್ಮೀ-ನಾರಾಯಣರಿಗಂತೂ ಯಾರೂ ಕಳಂಕವನ್ನು ಹೊರಿಸಿಲ್ಲ. ಕೃಷ್ಣನ ಮೇಲೆ ತಪ್ಪಾಗಿ ಕಳಂಕ
ಹೊರಿಸಿದ್ದಾರೆ. ರಾಮ-ಸೀತೆಯರ ಮೇಲೂ ಸಹ ಕಳಂಕವನ್ನು ಹಾಕಿದ್ದಾರೆ.
ತಂದೆಯು ತಿಳಿಸುತ್ತಾರೆ
- ಯಾವಾಗ ನಾವು ಆತ್ಮಗಳೆಂದು ತಿಳಿಯುತ್ತೀರೋ ಆಗಲೇ ಬಹಳ ಮಧುರರಾಗುತ್ತೀರಿ. ಆತ್ಮನೆಂದು ತಿಳಿದು
ತಂದೆಯನ್ನು ನೆನಪು ಮಾಡುವುದರಲ್ಲಿ ಬಹಳ ಆನಂದವಿದೆ. ಎಷ್ಟು ನೆನಪು ಮಾಡುವಿರೋ ಅಷ್ಟು ಸತೋಪ್ರಧಾನರು,
16 ಕಲಾ ಸಂಪೂರ್ಣರಾಗುತ್ತೀರಿ. 14 ಕಲೆಗಳಂತು ಸಂಪೂರ್ಣತೆಯಾಗಲಿಲ್ಲ. ಇದರಿಂದ ಇನ್ನೂ ಕಲೆಗಳು
ಕಡಿಮೆಯಾಗುತ್ತಾ ಹೋಗುತ್ತವೆ. 16 ಕಲಾ ಸಂಪೂರ್ಣರಾಗಬೇಕಾಗಿದೆ. ಜ್ಞಾನವು ಬಹಳ ಸಹಜವಾಗಿದೆ, ಇದನ್ನು
ಯಾರು ಬೇಕಾದರೂ ಕಲಿತು ಬಿಡುತ್ತಾರೆ. 84 ಜನ್ಮಗಳನ್ನು ಕಲ್ಪ-ಕಲ್ಪವೂ ತೆಗೆದುಕೊಳ್ಳುತ್ತಾ
ಬಂದಿದ್ದೀರಿ. ಈಗ ಸಂಪೂರ್ಣ ಪವಿತ್ರರಾಗುವವರೆಗೆ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ.
ಪವಿತ್ರವಾಗದಿದ್ದರೆ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು. ತಂದೆಯು ಪುನಃ-ಪುನಃ ತಿಳಿಸುತ್ತಾರೆ -
ಮಕ್ಕಳೇ, ಎಷ್ಟು ಸಾಧ್ಯವೋ ಅಷ್ಟು ಮೊಟ್ಟ ಮೊದಲು ಇದೊಂದೇ ಮಾತನ್ನು ಪರಿಪಕ್ವ ಮಾಡಿಕೊಳ್ಳಿ - ನಾನು
ಆತ್ಮನಾಗಿದ್ದೇನೆ. ನಾನಾತ್ಮನು ಮನೆಯಲ್ಲಿದ್ದಾಗ ಸತೋಪ್ರಧಾನನಾಗಿದ್ದೆನು, ನಂತರ ಇಲ್ಲಿ
ಜನ್ಮಗಳನ್ನು ತೆಗೆದುಕೊಳ್ಳುತ್ತೇನೆ. ಕೆಲವರು ಕೆಲವಷ್ಟು ಜನ್ಮಗಳನ್ನು ಪಡೆಯುತ್ತಾರೆ. ಕೊನೆಯಲ್ಲಿ
ತಮೋಪ್ರಧಾನರಾಗುತ್ತಾರೆ ಆಗ ಪ್ರಪಂಚದ ಮರ್ಯಾದೆ ಕಡಿಮೆಯಾಗುತ್ತಾ ಹೋಗುತ್ತದೆ. ಹೊಸ ಮನೆಯು
ತಯಾರಾದಾಗ ಅದರಲ್ಲಿ ಎಷ್ಟೊಂದು ಸುಖದ ಅನುಭವವಾಗುತ್ತದೆ. ನಂತರ ಹಳೆಯದಾಗುತ್ತಾ ಹೋಗುತ್ತದೆ,
ಕಲೆಗಳು ಕಡಿಮೆಯಾಗುತ್ತಾ ಹೋಗುತ್ತದೆ. ಒಂದುವೇಳೆ ನೀವು ಪರಿಪೂರ್ಣ ಪ್ರಪಂಚದಲ್ಲಿ
ಹೋಗಬಯಸುತ್ತೀರೆಂದರೆ ನೀವೂ ಪರಿಪೂರ್ಣ ಆಗಬೇಕಾಗಿದೆ. ಕೇವಲ ಜ್ಞಾನಕ್ಕೆ ಪರಿಪೂರ್ಣ ಎಂದು
ಹೇಳಲಾಗುವುದಿಲ್ಲ. ಆತ್ಮವೇ ಪರಿಪೂರ್ಣ ಆಗಬೇಕಾಗಿದೆ. ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನಪಡಿ,
ನಾನಾತ್ಮನಾಗಿದ್ದೇನೆ, ತಂದೆಯ ಮಗುವಾಗಿದ್ದೇನೆ, ಆಂತರಿಕವಾಗಿ ಬಹಳ ಖುಷಿಯಿರಲಿ. ಮನುಷ್ಯರು ನಾನು
ಇಂತಹವರ ಮಗನಾಗಿದ್ದೇನೆ..... ಎಂದು ತಮ್ಮನ್ನು ದೇಹಧಾರಿಯೆಂದು ತಿಳಿದು ಖುಷಿ ಪಡುತ್ತಾರೆ. ಅದು
ಅಲ್ಪಕಾಲದ ನಶೆಯಾಗಿದೆ, ಈಗ ನೀವು ಮಕ್ಕಳಿಗೆ ತಂದೆಯ ಜೊತೆ ಸಂಪೂರ್ಣ ಬುದ್ಧಿಯೋಗವನ್ನಿಡಬೇಕಾಗಿದೆ,
ಇದರಲ್ಲಿ ತಬ್ಬಿಬ್ಬಾಗಬಾರದು. ಭಲೆ ವಿದೇಶದಲ್ಲಿ ಅಥವಾ ಎಲ್ಲಿಯಾದರೂ ಹೋಗಿ ಕೇವಲ ಒಂದು ಮಾತನ್ನು
ಪಕ್ಕಾ ಇಟ್ಟುಕೊಳ್ಳಿ - ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಯು ಪ್ರೀತಿಯ ಸಾಗರನಾಗಿದ್ದಾರೆ,
ಈ ಮಹಿಮೆಯು ಯಾವುದೇ ಮನುಷ್ಯರದಲ್ಲ. ಆತ್ಮವು ತನ್ನ ತಂದೆಯ ಮಹಿಮೆಯನ್ನು ಮಾಡುತ್ತದೆ.
ಆತ್ಮಗಳೆಲ್ಲರೂ ಪರಸ್ಪರ ಸಹೋದರ-ಸಹೋದರರಾಗಿದ್ದೀರಿ. ಎಲ್ಲರ ತಂದೆಯು ಒಬ್ಬರೇ ಆಗಿದ್ದಾರೆ. ತಂದೆಯು
ಎಲ್ಲರಿಗೆ ತಿಳಿಸುತ್ತಾರೆ - ಮಕ್ಕಳೇ, ನೀವು ಸತೋಪ್ರಧಾನರಾಗಿದ್ದಿರಿ, ನೀವೇ ಈಗ
ತಮೋಪ್ರಧಾನರಾಗಿದ್ದೀರಿ. ತಮೋಪ್ರಧಾನರಾಗಿರುವುದರಿಂದಲೇ ನೀವು ದುಃಖಿಯಾಗುತ್ತೀರಿ. ನಾನಾತ್ಮನಿಗೆ
ಪರಮಾತ್ಮ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಮೊದಲು ಸತೋಪ್ರಧಾನರಾಗಿದ್ದಿರಿ, ಅಲ್ಲಿ ಎಲ್ಲಾ
ಆತ್ಮಗಳು ಸತೋಪ್ರಧಾನರೇ ಆಗಿರುತ್ತಾರೆ, ಭಲೆ ಪಾತ್ರವು ಬೇರೆ-ಬೇರೆಯಾಗಿದೆ ಆದರೆ ಸತೋಪ್ರಧಾನರೇ
ಅಲ್ಲವೆ. ಪವಿತ್ರತೆಯಿಲ್ಲದೆ ಯಾರೂ ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಸುಖಧಾಮದಲ್ಲಿ ನಿಮಗೆ ಸುಖವೂ
ಇರುತ್ತದೆ, ಶಾಂತಿಯೂ ಇರುತ್ತದೆ ಆದ್ದರಿಂದ ನಿಮ್ಮದು ಸರ್ವಶ್ರೇಷ್ಠ ಧರ್ಮವಾಗಿದೆ, ಅಪಾರ
ಸುಖವಿರುತ್ತದೆ. ವಿಚಾರ ಮಾಡಿ - ನೀವು ಏನಾಗಲಿದ್ದೀರಿ! ಸ್ವರ್ಗದ ಮಾಲೀಕರಾಗುತ್ತೀರಿ. ಅದು ವಜ್ರ
ಸಮಾನ ಜನ್ಮವಾಗಿದೆ. ಈಗಂತೂ ಕವಡೆಯ ಸಮಾನ ಜನ್ಮವಾಗಿದೆ ಆದ್ದರಿಂದ ಈಗ ತಂದೆಯು ನೆನಪಿನಲ್ಲಿರುವ
ಸೂಚನೆ ನೀಡುತ್ತಾರೆ. ಪತಿತ-ಪಾವನನೇ ಬಂದು ಪತಿತರಿಂದ ಪಾವನರನ್ನಾಗಿ ಮಾಡಿ ಎಂದು ನೀವು
ಕರೆದಿದ್ದೀರಿ. ಸತ್ಯಯುಗದಲ್ಲಿ ಸಂಪೂರ್ಣ ನಿರ್ವಿಕಾರಿಗಳಿರುತ್ತಾರೆ, ರಾಮ-ಸೀತೆಯರಿಗೂ ಸಹ
ಸಂಪೂರ್ಣರೆಂದು ಹೇಳುವುದಿಲ್ಲ. ಅವರು ಎರಡನೇ ದರ್ಜೆಯಲ್ಲಿ ಹೋದರು, ನೆನಪಿನ ಯಾತ್ರೆಯಲ್ಲಿ
ಉತ್ತೀರ್ಣರಾಗಲಿಲ್ಲ. ಭಲೆ ಜ್ಞಾನದಲ್ಲಿ ಎಷ್ಟಾದರೂ ತೀಕ್ಷ್ಣವಾಗಿರಲಿ ಆದರೆ ತಂದೆಗೆ ಎಂದೂ
ಮಧುರರೆನಿಸುವುದಿಲ್ಲ. ನೆನಪಿನಲ್ಲಿದ್ದಾಗಲೇ ಮಧುರರಾಗುತ್ತೀರಿ ಹಾಗೂ ತಂದೆಯು ನಿಮಗೆ
ಮಧುರರೆನಿಸುವರು. ವಿದ್ಯೆಯಂತೂ ಬಹಳ ಸರಳವಾಗಿದೆ, ಪವಿತ್ರರಾಗಬೇಕು ಮತ್ತು ನೆನಪಿನಲ್ಲಿರಬೇಕಾಗಿದೆ.
ಈ ಮಾತನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಿ. ನೆನಪಿನ ಯಾತ್ರೆಯಲ್ಲಿರುವುದರಿಂದ ಏರುಪೇರುಗಳಾಗಲಿ,
ಅಹಂಕಾರವಾಗಲಿ ಎಂದಿಗೂ ಬರುವುದಿಲ್ಲ. ಮುಖ್ಯ ಮಾತು ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು
ನೆನಪು ಮಾಡಿ. ಪ್ರಪಂಚದಲ್ಲಿ ಮನುಷ್ಯರು ಎಷ್ಟೊಂದು ಹೊಡೆದಾಡುತ್ತಾರೆ, ಜೀವನವನ್ನೇ ಹೇಗೆ ವಿಷದ
ಸಮಾನ ಮಾಡಿಕೊಳ್ಳುತ್ತಾರೆ. ಸತ್ಯಯುಗದಲ್ಲಿ ಈ ಶಬ್ಧವೇ ಇರುವುದಿಲ್ಲ, ಮುಂದೆ ಹೋದಂತೆ ಇಲ್ಲಂತೂ
ಮನುಷ್ಯರ ಜೀವನವು ಇನ್ನೂ ವಿಷವಾಗುತ್ತಾ ಹೋಗುತ್ತದೆ. ಇದು ವಿಷದ ಸಾಗರವಾಗಿದೆ. ಎಲ್ಲರೂ ರೌರವ
ನರಕದಲ್ಲಿದ್ದಾರೆ, ಬಹಳ ಕೊಳಕಿದೆ. ದಿನ-ಪ್ರತಿದಿನ ಕೊಳಕು ಹೆಚ್ಚುತ್ತಾ ಹೋಗುತ್ತದೆ, ಇದಕ್ಕೆ
ಕೊಳಕು (ಪತಿತ) ಪ್ರಪಂಚವೆಂದು ಹೇಳಲಾಗುತ್ತದೆ. ಪರಸ್ಪರ ದುಃಖವನ್ನೇ ಕೊಡುತ್ತಿರುತ್ತಾರೆ. ಏಕೆಂದರೆ
ದೇಹಾಭಿಮಾನದ ಭೂತವಿದೆ, ಕಾಮದ ಭೂತವಿದೆ. ತಂದೆಯು ತಿಳಿಸುತ್ತಾರೆ - ಮೊದಲು ಈ ಭೂತಗಳನ್ನು ಓಡಿಸಿ.
ಈ ಭೂತವೇ ನಿಮ್ಮ ಮುಖವನ್ನು ಕಪ್ಪು ಮಾಡುತ್ತದೆ. ಕಾಮಚಿತೆಯನ್ನೇರಿದರೆ ಕಪ್ಪಾಗಿ ಬಿಡುತ್ತೀರಿ
ಆದ್ದರಿಂದಲೇ ತಂದೆಯು ತಿಳಿಸುತ್ತಾರೆ - ನಾನು ಪುನಃ ಬಂದು ಜ್ಞಾನಾಮೃತದ ಮಳೆಯನ್ನು ಸುರಿಸುತ್ತೇನೆ.
ನೀವೀಗ ಎಷ್ಟು ಶ್ರೇಷ್ಠರಾಗುತ್ತೀರಿ! ಅಲ್ಲಂತೂ ವಜ್ರ-ವೈಡೂರ್ಯಗಳ ಮಹಲುಗಳಿರುತ್ತವೆ, ಎಲ್ಲಾ
ಪ್ರಕಾರದ ವೈಭವಗಳಿರುತ್ತವೆ. ಇಲ್ಲಂತೂ ಎಲ್ಲವೂ ಕಲಬೆರಕೆ ವಸ್ತುಗಳಾಗಿವೆ. ಹಸುಗಳಿಗೂ ಸಹ
ಆಹಾರವನ್ನು ನೋಡಿ ಎಲ್ಲದರಿಂದ ಸಾರವನ್ನು ತೆಗೆದು ಉಳಿದುದನ್ನು ಕೊಡುತ್ತಾರೆ. ಹಸುವಿಗೆ ಆಹಾರವೂ
ಸಹ ಸರಿಯಾಗಿ ಸಿಗುವುದಿಲ್ಲ ಆದರೆ ಕೃಷ್ಣನ ಹಸುಗಳನ್ನು ನೋಡಿ! ಎಷ್ಟು ಸುಂದರವಾಗಿ ತೋರಿಸುತ್ತಾರೆ.
ಸತ್ಯಯುಗದಲ್ಲಿ ಹಸುಗಳು ಇಷ್ಟು ಸುಂದರವಾಗಿರುತ್ತವೆ ಅದರ ಮಾತೇ ಕೇಳಬೇಡಿ. ನೋಡಿದ ತಕ್ಷಣವೇ
ಆನಂದವಾಗಿ ಬಿಡುತ್ತದೆ. ಇಲ್ಲಂತೂ ಪ್ರತಿಯೊಂದು ವಸ್ತುವಿನಿಂದಲೂ ಸಾರವನ್ನು ತೆಗೆದು ಬಿಡುತ್ತಾರೆ.
ಇದಂತೂ ಬಹಳ ಪತಿತ, ಕೊಳಕು ಪ್ರಪಂಚವಾಗಿದೆ. ನೀವು ಇದರೊಂದಿಗೆ ಮನಸ್ಸನ್ನಿಡಬೇಡಿ. ತಂದೆಯು
ತಿಳಿಸುತ್ತಾರೆ - ನೀವು ಎಷ್ಟೊಂದು ವಿಕಾರಿಗಳಾಗಿ ಬಿಟ್ಟಿದ್ದೀರಿ. ಯುದ್ಧದಲ್ಲಿ ನೋಡಿ, ಹೇಗೆ
ಒಬ್ಬರು ಇನ್ನೊಬ್ಬರನ್ನು ಸಾಯಿಸುತ್ತಿರುತ್ತಾರೆ. ಅಣು ಬಾಂಬುಗಳನ್ನು ತಯಾರಿಸುವವರಿಗೂ ಸಹ
ಎಷ್ಟೊಂದು ಗೌರವವಿದೆ, ಈ ಅಣು ಬಾಂಬುಗಳಿಂದ ಎಲ್ಲರ ವಿನಾಶವಾಗಿ ಬಿಡುತ್ತದೆ. ತಂದೆಯು
ತಿಳಿಸುತ್ತಾರೆ - ಇಂದಿನ ಮನುಷ್ಯರು ಹೇಗಿದ್ದಾರೆ, ನಾಳೆಯ ಮನುಷ್ಯರು ಹೇಗಿರುತ್ತಾರೆ! ಈಗ ನೀವು
ಮಧ್ಯದಲ್ಲಿದ್ದೀರಿ. ಸತ್ಸಂಗವು ಉನ್ನತಿ ಮಾಡುವುದು, ಕೆಟ್ಟ ಸಂಗವು ಕೆಳಗೆ ಬೀಳಿಸುವುದು. ನೀವು
ಪುರುಷೋತ್ತಮರಾಗಲು ತಂದೆಯ ಕೈಯನ್ನು ಹಿಡಿಯುತ್ತೀರಿ. ಯಾರಾದರೂ ಈಜುವುದನ್ನು ಕಲಿಯುತ್ತಾರೆಂದರೆ
ಕಲಿಸುವವರ ಕೈಯನ್ನು ಹಿಡಿದುಕೊಳ್ಳುತ್ತಾರೆ, ಇಲ್ಲವೆಂದರೆ ಹೆದರಿಕೆಯುಂಟಾಗಿ ಬಿಡುತ್ತದೆ. ಹಾಗೆಯೇ
ಇಲ್ಲಿಯೂ ಕೈಯನ್ನು ಹಿಡಿಯಬೇಕಾಗಿದೆ ಇಲ್ಲದಿದ್ದರೆ ಮಾಯೆಯೂ ಸೆಳೆದು ಬಿಡುತ್ತದೆ. ನೀವು ಇಡೀ
ವಿಶ್ವವನ್ನೇ ಸ್ವರ್ಗವನ್ನಾಗಿ ಮಾಡುತ್ತೀರಿ, ಅಂದಾಗ ತಮ್ಮನ್ನು ನಶೆಯಲ್ಲಿ ತಂದುಕೊಳ್ಳಬೇಕು. ನಾವು
ಶ್ರೀಮತದಿಂದ ನಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ. ಎಲ್ಲಾ ಮನುಷ್ಯ ಮಾತ್ರರೂ
ದಾನವನ್ನಂತೂ ಮಾಡಿಯೇ ಮಾಡುತ್ತಾರೆ. ಭಿಕ್ಷುಕರಿಗೆ ನೀಡುತ್ತಾರೆ, ತೀರ್ಥ ಯಾತ್ರೆಗಳಲ್ಲಿಯೂ
ಮಾರ್ಗದರ್ಶಕರಿಗೆ ದಾನ ಮಾಡುತ್ತಾರೆ, ಹಿಡಿ ಅವಲಕ್ಕಿಯನ್ನಾದರೂ ಅವಶ್ಯವಾಗಿ ದಾನ ಮಾಡುತ್ತಾರೆ.
ಅದೆಲ್ಲವೂ ಭಕ್ತಿ ಮಾರ್ಗದಲ್ಲಿ ನಡೆದು ಬರುತ್ತದೆ. ಈಗ ನಮ್ಮನ್ನು ತಂದೆಯು ಡಬಲ್ ದಾನಿಗಳನ್ನಾಗಿ
ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಮೂರು ಹೆಜ್ಜೆಗಳಷ್ಟು ಭೂಮಿಯಲ್ಲಿ ನೀವು ಈ ಈಶ್ವರೀಯ
ವಿಶ್ವ ವಿದ್ಯಾಲಯ ಹಾಗೂ ಆಸ್ಪತ್ರೆಯನ್ನು ತೆರೆಯಿರಿ, ಇದರಲ್ಲಿ ಮನುಷ್ಯರು ಬಂದು 21 ಜನ್ಮಗಳಿಗಾಗಿ
ಚಿಕಿತ್ಸೆಯನ್ನು ಪಡೆಯುತ್ತಾರೆ. ಇಲ್ಲಂತೂ ಎಂತೆಂತಹ ಕಾಯಿಲೆಗಳು ಇರುತ್ತವೆ! ರೋಗಿಗಳಲ್ಲಿ
ಎಷ್ಟೊಂದು ದುರ್ನಾಥವು ಬರುತ್ತದೆ. ಆಸ್ಪತ್ರೆಗಳಲ್ಲಿ ನೋಡಿದರೆ ತಿರಸ್ಕಾರವು ಬಂದು ಬಿಡುತ್ತದೆ.
ಎಷ್ಟೊಂದು ಕರ್ಮ ಭೋಗವಿದೆ, ಇವೆಲ್ಲಾ ದುಃಖಗಳಿಂದ ಮುಕ್ತರಾಗಲು ತಂದೆಯು ತಿಳಿಸುತ್ತಾರೆ - ಕೇವಲ
ನೆನಪು ಮಾಡಿ, ಮತ್ತ್ಯಾವುದೇ ಕಷ್ಟವನ್ನು ನಿಮಗೆ ಕೊಡುವುದಿಲ್ಲ. ತಂದೆಗೆ ಗೊತ್ತಿದೆ, ಮಕ್ಕಳು
ಬಹಳಷ್ಟು ಕಷ್ಟವನ್ನು ಅನುಭವಿಸಿದ್ದಾರೆ. ವಿಕಾರಿ ಮನುಷ್ಯರ ಚಹರೆಯೇ ಬದಲಾಗಿ ಬಿಡುತ್ತದೆ, ಒಮ್ಮೆಲೆ
ಶವದಂತಾಗಿ ಬಿಡುತ್ತಾರೆ. ಹೇಗೆ ಕುಡುಕರು ಮಧ್ಯಪಾನ ಮಾಡದೇ ಇರಲು ಸಾಧ್ಯವಾಗುವುದಿಲ್ಲ.
ಮಧ್ಯಪಾನದಿಂದ ಬಹಳ ನಶೆಯೇರುತ್ತದೆ ಆದರೆ ಅಲ್ಪಕಾಲಕ್ಕಾಗಿ. ಇದರಿಂದ ವಿಕಾರಿ ಮನುಷ್ಯರ ಆಯಸ್ಸೂ ಸಹ
ಕಡಿಮೆಯಾಗಿ ಬಿಡುತ್ತದೆ. ನಿರ್ವಿಕಾರಿ ದೇವತೆಗಳ ಆಯಸ್ಸು ಅಂದಾಜು 125-150 ವರ್ಷಗಳವರೆಗೆ
ಇರುತ್ತದೆ. ಸದಾ ಆರೋಗ್ಯವಂತರಾಗುತ್ತಾರೆ ಅಂದಮೇಲೆ ಆಯಸ್ಸು ಹೆಚ್ಚುತ್ತದೆಯಲ್ಲವೆ. ಕಾಯವು
ನಿರೋಗಿಯಾಗುತ್ತದೆ, ತಂದೆಗೆ ಅವಿನಾಶಿ ತಜ್ಞರೆಂದೂ ಹೇಳಲಾಗುತ್ತದೆ. ಜ್ಞಾನದ ಇಂಜೆಕ್ಷನ್ನನ್ನು
ಸದ್ಗುರು ಕೊಟ್ಟರು, ಅಜ್ಞಾನ ಅಂಧಕಾರವು ವಿನಾಶವಾಯಿತು. ತಂದೆಯನ್ನೇ ಅರಿತುಕೊಂಡಿಲ್ಲ ಆದ್ದರಿಂದ
ಅಜ್ಞಾನ ಅಂಧಕಾರವೆಂದು ಹೇಳಲಾಗುತ್ತದೆ. ಇದು ಭಾರತವಾಸಿಗಳದ್ದೇ ಮಾತಾಗಿದೆ. ಇಂತಹ ಸಂವತ್ಸರದಲ್ಲಿ
ಬಂದರೆಂದು ಕ್ರೈಸ್ಟ್ನ್ನು ಅವರ ಧರ್ಮದವರು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಅವರ ಚರಿತ್ರೆಯ
ಪಟ್ಟಿಯಿದೆ. ಹೇಗೆ ನಂಬರ್ವಾರ್ ಗದ್ದಿಯ ಮೇಲೆ ಕುಳಿತುಕೊಳ್ಳುತ್ತಾರೆಂದು. ಕೇವಲ ಭಾರತದವರು ಮಾತ್ರ
ಯಾರ ಚರಿತ್ರೆಯನ್ನೂ ಅರಿತುಕೊಂಡಿಲ್ಲ. ಹೇ ದುಃಖಹರ್ತ, ಸುಖಕರ್ತ ಪರಮಾತ್ಮ, ಹೇ ಮಾತಾಪಿತಾ.......
ಎಂದು ಕರೆಯುತ್ತಾರೆ. ಅಂದಮೇಲೆ ಮಾತಾಪಿತರ ಚರಿತ್ರೆಯನ್ನು ತಿಳಿಸಿ ಎಂದರೆ ಯಾರಿಗೂ ಗೊತ್ತಿಲ್ಲ.
ನಿಮಗೆ ತಿಳಿದಿದೆ - ಇದು
ಪುರುಷೋತ್ತಮ ಸಂಗಮಯುಗವಾಗಿದೆ, ನಾವೀಗ ಪುರುಷೋತ್ತಮರಾಗುತ್ತಿದ್ದೇವೆ ಅಂದಮೇಲೆ ಸಂಪೂರ್ಣವಾಗಿ
ಓದಬೇಕಾಗಿದೆ. ಲೋಕ ಮರ್ಯಾದೆ-ಕುಲ ಮರ್ಯಾದೆಗಳಲ್ಲಿ ಬಹಳಷ್ಟು ಮಂದಿ ಸಿಕ್ಕಿಹಾಕಿಕೊಂಡಿರುತ್ತಾರೆ.
ಈ ಬ್ರಹ್ಮಾತಂದೆಯಂತೂ ಏನನ್ನೂ ನೋಡಲಿಲ್ಲ, ಎಷ್ಟೊಂದು ನಿಂದನೆಯನ್ನು ಸಹಿಸಿದರು. ಮಾರ್ಗದಲ್ಲಿ
ನಡೆಯುತ್ತಾ-ನಡೆಯುತ್ತಾ ಈ ಬ್ರಾಹ್ಮಣನು ಸಿಕ್ಕಿ ಹಾಕಿಕೊಂಡರು ಅರ್ಥಾತ್ ತಂದೆಯು ಬ್ರಾಹ್ಮಣನನ್ನಾಗಿ
ಮಾಡಿದರು. ಆಗಿನಿಂದ ನಿಂದನೆಯನ್ನು ಸಹಿಸತೊಡಗಿದರು. ಇಡೀ ಪಂಚಾಯಿತಿಯೇ ಒಂದು ಕಡೆ, ದಾದಾರವರೇ
ಇನ್ನೊಂದು ಕಡೆ ಇದ್ದರು. ಇದೇನು ಮಾಡುತ್ತಿದ್ದೀರೆಂದು ಸಿಂಧಿ ಪಂಚಾಯಿತಿಯವರೇ ಕೇಳಿದರು. ಅರೆ!
ಗೀತೆಯಲ್ಲಿ ಭಗವಾನುವಾಚ ಇದೆಯಲ್ಲವೆ – ಕಾಮ ಮಹಾಶತ್ರುವಾಗಿದೆ, ಇದರ ಮೇಲೆ ಜಯ ಗಳಿಸಿದರೆ ನೀವು
ವಿಶ್ವದ ಮಾಲೀಕರಾಗುವಿರಿ ಎಂದು. ಇದಂತೂ ಗೀತೆಯ ಶಬ್ಧವಾಗಿದೆ. ನನ್ನಿಂದಲೂ ಸಹ ಕೆಲವರು
ಹೇಳಿಸುತ್ತಾರೆ – ಕಾಮ ವಿಕಾರವನ್ನು ಜಯಸಿದರೂ ನೀವು ಜಗಜ್ಜೀತರಾಗುತ್ತೀರಿ. ಈ ಲಕ್ಷ್ಮೀ-ನಾರಾಯಣರೂ
ಸಹ ಜಯ ಪಡೆದರಲ್ಲವೆ. ಇದರಲ್ಲಿ ಯುದ್ಧದ ಮಾತೇ ಇಲ್ಲ, ನಿಮಗೆ ಸ್ವರ್ಗದ ರಾಜ್ಯಭಾಗ್ಯವನ್ನು ಕೊಡಲು
ಬಂದಿದ್ದೇನೆ. ಈಗ ಪವಿತ್ರರಾಗಿ ಮತ್ತು ತಂದೆಯನ್ನು ನೆನಪು ಮಾಡಿ. ನಾನು ಪಾವನಳಾಗುತ್ತೇನೆಂದು
ಸ್ತ್ರೀ ಹೇಳಿದರೆ ನಾನಂತೂ ಆಗುವುದಿಲ್ಲವೆಂದು ಪತಿಯು ಹೇಳುತ್ತಾರೆ. ಒಬ್ಬರು ಹಂಸ ಮತ್ತು
ಮತ್ತೊಬ್ಬರು ಕೊಕ್ಕರೆಯಾಗಿ ಬಿಡುತ್ತಾರೆ. ತಂದೆಯು ಬಂದು ಜ್ಞಾನ ರತ್ನಗಳನ್ನು ಆರಿಸುವಂತಹ
ಹಂಸಗಳನ್ನಾಗಿ ಮಾಡುತ್ತಾರೆ ಆದರೆ ಒಬ್ಬರು ಹಂಸವಾಗಿ ಇನ್ನೊಬ್ಬರು ಆಗಲಿಲ್ಲವೆಂದರೆ ಕಲಹವಾಗುತ್ತದೆ.
ಪ್ರಾರಂಭದಲ್ಲಂತೂ ಬಹಳ ಶಕ್ತಿಯಿತ್ತು, ಈಗ ಅಷ್ಟೊಂದು ಸಾಹಸವು ಯಾರಲ್ಲಿಯೂ ಇಲ್ಲ. ಭಲೆ ನಾವು
ವಾರಸುಧಾರರೆಂದು ಹೇಳುತ್ತೇವೆ ಆದರೆ ವಾರಸುಧಾರರಾಗುವ ಮಾತೇ ಬೇರೆಯಾಗಿದೆ. ಯಜ್ಞದ ಆರಂಭದಲ್ಲಂತೂ
ಬಹಳ ಚಮತ್ಕಾರವಿತ್ತು, ಶ್ರೀಮಂತ ಮನೆತನದವರೇ ತಕ್ಷಣ ಆಸ್ತಿಯನ್ನು ಪಡೆಯಲು ಮನೆಯನ್ನೇ ಬಿಟ್ಟು
ಬಂದರು ಆದ್ದರಿಂದ ಅವರು ಯೋಗ್ಯರಾಗಿ ಬಿಟ್ಟರು. ಮೊಟ್ಟ ಮೊದಲಿಗೆ ಬಂದವರಂತೂ ಕಮಾಲ್ ಮಾಡಿದರು. ಈಗ
ಅಂತಹವರು ಕೆಲವರೇ ವಿರಳ ಬರುತ್ತಾರೆ. ಲೋಕ ಮರ್ಯಾದೆಯು ಬಹಳಷ್ಟಿದೆ, ಯಾರು ಆರಂಭದಲ್ಲಿ ಬಂದರೋ ಅವರು
ಬಹಳ ಸಾಹಸವನ್ನು ತೋರಿಸಿದರು. ಈಗ ಯಾರು ಅಷ್ಟು ಸಾಹಸವನ್ನಿಡುವುದು, ಕಷ್ಟದ ಕೆಲಸವಾಗಿದೆ. ಹಾ!
ಬಡವರು ಅಷ್ಟು ಸಾಹಸವನ್ನಿಡುತ್ತಾರೆ. ಮಾಲೆಯ ಮಣಿಯಾಗಬೇಕೆಂದರೆ ಪುರುಷಾರ್ಥ ಮಾಡಬೇಕಾಗಿದೆ,
ಮಾಲೆಯಂತೂ ಬಹಳ ದೊಡ್ಡದಾಗಿದೆ. 8ರ ಮಾಲೆಯೂ ಇದೆ, 108ರ ಮಾಲೆಯೂ ಇದೆ ಮತ್ತು 16,108ರ ಮಾಲೆಯೂ ಇದೆ.
ಸ್ವಯಂ ತಂದೆಯೇ ತಿಳಿಸುತ್ತಾರೆ - ಮಕ್ಕಳೇ, ಬಹಳ-ಬಹಳ ಶ್ರಮ ಪಡಿ, ತಮ್ಮನ್ನು ಆತ್ಮನೆಂದು ತಿಳಿಯಿರಿ.
ಕೆಲವರಂತೂ ಸತ್ಯವನ್ನು ತಿಳಿಸುವುದೇ ಇಲ್ಲ. ಯಾರು ತಮ್ಮನ್ನು ಬಹಳ ಒಳ್ಳೆಯವರೆಂದು ತಿಳಿಯುವರೋ
ಅವರಿಂದಲೂ ವಿಕರ್ಮಗಳಾಗಿಬಿಡುತ್ತದೆ. ಭಲೆ ಜ್ಞಾನಿ ಆತ್ಮಗಳಾಗಿದ್ದಾರೆ, ಒಳ್ಳೆಯ ತಿಳುವಳಿಕೆಯಿದೆ
ಆದರೆ ಯೋಗವಿಲ್ಲವೆಂದರೆ ಅಂತಹವರು ತಂದೆಯ ಹೃದಯವನ್ನೇರುವುದಿಲ್ಲ. ತಂದೆಯ ನೆನಪಿನಲ್ಲೇ
ಇರುವುದಿಲ್ಲವೆಂದರೆ ಹೃದಯವನ್ನೂ ಏರಲು ಸಾಧ್ಯವಿಲ್ಲ. ನೆನಪಿನಿಂದಲೇ ನೆನಪು ಸಿಗುತ್ತದೆಯಲ್ಲವೆ.
ಆರಂಭದಲ್ಲಂತೂ ಬಹಳ ಬೇಗನೆ ಬಲಿಹಾರಿಯಾಗಿ ಬಿಟ್ಟರು. ಈಗ ಬಲಿಹಾರಿಯಾಗುವುದು ಚಿಕ್ಕಮ್ಮನ
ಮನೆಯಂತಲ್ಲ. ಮೂಲ ಮಾತಾಗಿದೆ ನೆನಪು. ನೆನಪಿದ್ದಾಗಲೇ ಖುಷಿಯ ನಶೆಯೇರುವುದು, ಕಲೆಗಳು ಎಷ್ಟು
ಕಡಿಮೆಯಾಗುತ್ತಾ ಹೋಯಿತೋ ಅಷ್ಟು ದುಃಖವು ಹೆಚ್ಚಾಗುತ್ತಾ ಹೋಗಿದೆ. ಈಗ ಪುನಃ ಕಲೆಗಳು ಎಷ್ಟು
ಹೆಚ್ಚುವವೋ ಅಷ್ಟು ಖುಷಿಯ ನಶೆಯೇರುವುದು. ಕೊನೆಯಲ್ಲಿ ನಿಮಗೆ ಎಲ್ಲವೂ ಸಾಕ್ಷಾತ್ಕಾರವಾಗುತ್ತದೆ.
ಹೆಚ್ಚು ನೆನಪು ಮಾಡುವವರಿಗೆ ಏನು ಪದವಿ ಸಿಗುತ್ತದೆ, ಅಂತಿಮದಲ್ಲಿ ಬಹಳ ಸಾಕ್ಷಾತ್ಕಾರಗಳಾಗುವುದು.
ವಿನಾಶವಾಗುವ ಸಮಯದಲ್ಲಿ ನೀವು ಸ್ವರ್ಗದ ಸಾಕ್ಷಾತ್ಕಾರದ ಹಲ್ವ ತಿನ್ನುತ್ತೀರಿ. ತಂದೆಯು
ಮತ್ತೆ-ಮತ್ತೆ ತಿಳಿಸುತ್ತಾರೆ - ಮಕ್ಕಳೇ, ನೆನಪನ್ನು ಹೆಚ್ಚಿಸಿಕೊಳ್ಳಿರಿ. ಯಾರಿಗಾದರೂ ಸ್ವಲ್ಪ
ತಿಳಿಸಿದ ಕೂಡಲೇ ತಂದೆಯು ಖುಷಿ ಪಡುವುದಿಲ್ಲ. ಒಬ್ಬ ಪಂಡಿತನ ಕಥೆಯೂ ಇದೆಯಲ್ಲವೆ. ರಾಮ ನಾಮ ಜಪ
ಮಾಡಿದರೆ ಸಾಗರವನ್ನು ಪಾರು ಮಾಡುವಿರಿ ಎಂದು ಪಂಡಿತನು ಹೇಳಿದನು ಅಂದರೆ ನಿಶ್ಚಯದಲ್ಲಿಯೇ ವಿಜಯವಿದೆ,
ತಂದೆಯಲ್ಲಿ ಸಂಶಯವುಂಟಾದರೆ ವಿನಾಶವಾಗಿ ಬಿಡುತ್ತೀರಿ. ತಂದೆಯ ನೆನಪಿನಿಂದಲೇ ಪಾಪಗಳು ಕಳೆಯುತ್ತವೆ.
ದಿನ-ರಾತ್ರಿ ಇದೇ ಪ್ರಯತ್ನ ಪಡಬೇಕು, ಇದರಿಂದ ಕರ್ಮೇಂದ್ರಿಯಗಳ ಚಂಚಲತೆಯು ಸಮಾಪ್ತಿಯಾಗುವುದು,
ಇದರಲ್ಲಿ ಬಹಳ ಪರಿಶ್ರಮವಿದೆ. ಅನೇಕ ಮಕ್ಕಳಿದ್ದಾರೆ, ನೆನಪಿನ ಚಾರ್ಟ್ ಇರುವುದಿಲ್ಲ ಅಂದರೆ
ತಳಹದಿಯೇ ಇಲ್ಲವೆಂದರ್ಥ. ಎಷ್ಟು ಸಾಧ್ಯವೋ ಅಷ್ಟು ಹೇಗಾದರೂ ಮಾಡಿ ನೆನಪು ಮಾಡಬೇಕಾಗಿದೆ ಆಗಲೆ
ಸತೋಪ್ರಧಾನರು, 16 ಕಲಾ ಸಂಪೂರ್ಣರಾಗುತ್ತೀರಿ. ಪವಿತ್ರತೆಯ ಜೊತೆಗೆ ನೆನಪಿನ ಯಾತ್ರೆಯೂ ಬೇಕು.
ಪವಿತ್ರವಾಗಿದ್ದಾಗಲೇ ನೆನಪಿನಲ್ಲಿರಲು ಸಾಧ್ಯ. ಈ ಮಾತನ್ನು ಚೆನ್ನಾಗಿ ಧಾರಣೆ ಮಾಡಿಕೊಳ್ಳಿ.
ತಂದೆಯು ಎಷ್ಟು ನಿರಹಂಕಾರಿಯಾಗಿದ್ದಾರೆ, ಮುಂದೆ ಹೋದಂತೆ ಎಲ್ಲರೂ ನಿಮ್ಮ ಮುಂದೆ ತಲೆ ಬಾಗುತ್ತಾರೆ.
ಖಂಡಿತವಾಗಿ ಈ ಮಾತೆಯರು ಸ್ವರ್ಗದ ಬಾಗಿಲನ್ನು ತೆರೆಯುತ್ತಾರೆಂದು ಎಲ್ಲರೂ ಹೇಳುತ್ತಾರೆ. ನೆನಪಿನ
ಹರಿತವು ಈಗಿನ್ನೂ ಕಡಿಮೆಯಿದೆ ಆದ್ದರಿಂದ ಯಾವುದೇ ದೇಹಧಾರಿಯನ್ನು ನೆನಪು ಮಾಡಬೇಡಿ.
ತಮೋಪ್ರಧಾನರಿಂದ ಸತೋಪ್ರಧಾನರಾಗುವುದರಲ್ಲಿಯೇ ಪರಿಶ್ರಮವಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಈ ಪತಿತ, ಛೀ
ಛೀ ದುಃಖದ ಪ್ರಪಂಚದೊಂದಿಗೆ ಮನಸ್ಸನ್ನಿಡಬಾರದು. ಒಬ್ಬ ತಂದೆಯ ಕೈಯನ್ನು ಹಿಡಿದು ಎಲ್ಲದರಿಂದ
ಪಾರಾಗಬೇಕಾಗಿದೆ.
2. ಮಾಲೆಯ ಮಣಿಯಾಗಲು
ಬಹಳ ಸಾಹಸವನ್ನಿಟ್ಟು ಪುರುಷಾರ್ಥ ಮಾಡಬೇಕಾಗಿದೆ. ಜ್ಞಾನರತ್ನಗಳನ್ನು ಆರಿಸುವಂತಹ ಹಂಸವಾಗಬೇಕಾಗಿದೆ,
ಯಾವುದೇ ವಿಕರ್ಮ ಮಾಡಬಾರದು.
ವರದಾನ:
ನಿಮಿತ್ತ ಭಾವದ
ಮೂಲಕ ಸೇವೆಯಲ್ಲಿ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಶ್ರೇಷ್ಠ ಸೇವಾಧಾರಿ ಭವ.
ನಿಮಿತ್ತ ಭಾವ-ಸೇವೆಯಲ್ಲಿ
ಸ್ವತಃ ಸಫಲತೆಯನ್ನು ಕೊಡುತ್ತದೆ. ನಿಮಿತ್ತ ಭಾವ ಇಲ್ಲದೇ ಹೋದರೆ ಸಫಲತೆ ಇಲ್ಲ. ಶ್ರೇಷ್ಠ ಸೇವಾಧಾರಿ
ಅರ್ಥಾತ್ ಪ್ರತಿ ಹೆಜ್ಜೆ ತಂದೆಯ ಹೆಜ್ಜೆಯ ಮೇಲೆ ಇಡುವಂತಹವರು. ಪ್ರತಿ ಹೆಜ್ಜೆ ಶ್ರೇಷ್ಠ ಮತದ ಮೇಲೆ
ಶ್ರೇಷ್ಠ ಮಾಡುವಂತಹವರು. ಎಷ್ಟೆಷ್ಟು ಸೇವೆಯಲ್ಲಿ, ಸ್ವಯಂನಲ್ಲಿ ವ್ಯರ್ಥ ಸಮಾಪ್ತಿಯಾಗುತ್ತದೆ
ಅಷ್ಟೇ ಸಮರ್ಥರಾಗುತ್ತಾರೆ ಮತ್ತು ಸಮರ್ಥ ಆತ್ಮ ಪ್ರತಿ ಹೆಜ್ಜೆಯಲ್ಲಿ ಸಫಲತೆಯನ್ನು ಹೊಂದುತ್ತಾರೆ.
ಶ್ರೇಷ್ಠ ಸೇವಾಧಾರಿ ಅವರೇ ಆಗಿದ್ದಾರೆ ಯಾರು ಸ್ವಯಂ ಸಹಾ ಸದಾ ಉಮಂಗ ಉತ್ಸಾಹದಲ್ಲಿರುತ್ತಾ ಮತ್ತು
ಬೇರೆಯವರಲ್ಲೂ ಸಹಾ ಉಮಂಗ ಉತ್ಸಾಹವನ್ನು ತರಿಸುತ್ತಾರೆ.
ಸ್ಲೋಗನ್:
ಈಶ್ವರೀಯ
ಸೇವೆಯಲ್ಲಿ ಸ್ವಯಂನ್ನು ಅರ್ಪಿಸಿಕೊಂಡಾಗ ಕೊಡುಗೆ ಸಿಗುತ್ತಿರುವುದು.
ಅವ್ಯಕ್ತ ಸೂಚನೆ:-
ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.
ಈ ಪರಮಾತ್ಮನ ಪ್ರೀತಿಯ
ಹಗ್ಗ ದೂರ-ದೂರದಿಂದ ಎಳೆದುಕೊಂಡು ಬರುತ್ತದೆ. ಇದು ಇಂತಹ ಸುಖದಾಯಿ ಪ್ರೀತಿಯಾಗಿದೆ, ಯಾರು ಈ
ಪ್ರೀತಿಯಲ್ಲಿ ಒಂದು ಸೆಕೆಂಡ್ ಸಹ ಮುಳುಗಿಹೋದರೆ ಅನೇಕ ದುಃಖ ಮರೆತು ಬಿಡುವರು ಮತ್ತು
ಸದಾಕಾಲಕ್ಕಾಗಿ ಸುಖದ ಉಯ್ಯಾಲೆಯಲ್ಲಿ ತೂಗುವರು. ತಂದೆಗೆ ಮಕ್ಕಳ ಇಷ್ಟೂ ಪ್ರೀತಿಯಿದೆ, ಜೀವನದ ಸುಖ
ಶಾಂತಿ ಎಲ್ಲಾ ಮನೋಕಾಮನೆಗಳನ್ನು ಪೂರ್ಣ ಮಾಡಿ ಬಿಡುತ್ತಾರೆ. ತಂದೆಯು ಕೇವಲ ಸುಖವನ್ನು
ಕೊಡುವುದಿಲ್ಲ ಆದರೆ ಸುಖದ ಭಂಡಾರದ ಮಾಲೀಕರನ್ನಾಗಿ ಮಾಡಿ ಬಿಡುತ್ತಾರೆ.