02.11.25    Avyakt Bapdada     Kannada Murli    31.10.2007     Om Shanti     Madhuban


“ತನ್ನ ಶ್ರೇಷ್ಠ ಸ್ವಮಾನದ ನಶೆಯಲ್ಲಿದ್ದು ಅಸಂಭವವನ್ನೂ ಸಂಭವ ಮಾಡುತ್ತಾ ನಿಶ್ಚಿಂತ ಚಕ್ರವರ್ತಿಗಳಾಗಿ”


ಇಂದು ಬಾಪ್ದಾದಾ ತನ್ನ ನಾಲ್ಕಾರು ಕಡೆಯ ಶ್ರೇಷ್ಠ ಸ್ವಮಾನಧಾರಿ ವಿಶೇಷ ಮಕ್ಕಳನ್ನು ನೋಡುತ್ತಿದ್ದಾರೆ. ಪ್ರತಿಯೊಂದು ಮಕ್ಕಳ ಸ್ವಮಾನ ಇಷ್ಟು ಶ್ರೇಷ್ಠವಾಗಿದೆ ಅದು ವಿಶ್ವದ ಯಾವುದೇ ಆತ್ಮರದಿಲ್ಲ. ತಾವೆಲ್ಲರೂ ವಿಶ್ವದ ಆತ್ಮಗಳ ಪೂರ್ವಜರೂ ಆಗಿದ್ದೀರಿ ಮತ್ತು ಪೂಜ್ಯರೂ ಆಗಿದ್ದೀರಿ. ಇಡೀ ಸೃಷ್ಟಿಚಕ್ರದ ಬುಡದಲ್ಲಿ ತಾವು ಆಧಾರಮೂರ್ತಿಯಾಗಿದ್ದೀರಿ. ಇಡೀ ವಿಶ್ವದ ಪೂರ್ವಜ, ಮೊದಲನೇ ರಚನೆಯಾಗಿದ್ದೀರಿ. ಬಾಪ್ದಾದಾರವರ ಪ್ರತಿಯೊಂದು ಮಕ್ಕಳದು ಭಿನ್ನ-ಭಿನ್ನ ವಿಶೇಷತೆಯಾಗಿದೆ. ಈ ಸಮಯದಲ್ಲಿ ಎಷ್ಟೇ ದೊಡ್ಡದಕ್ಕಿಂತ ದೊಡ್ಡ ವಿಜ್ಞಾನಿಯಾಗಿರಬಹುದು, ಪ್ರಪಂಚದ ಲೆಕ್ಕದಲ್ಲಿ ವಿಶೇಷವಾಗಿದ್ದಾರೆ ಆದರೆ ಪ್ರಕೃತಿಜೀತರೂ ಆಗಬೇಕು, ಚಂದ್ರನವರೆಗೂ ತಲುಪಿದ್ದಾರೆ ಆದರೆ ಇಷ್ಟು ಚಿಕ್ಕ ಜ್ಯೋತಿ ಸ್ವರೂಪ ಆತ್ಮವನ್ನು ತಿಳಿದುಕೊಂಡಿಲ್ಲ ಮತ್ತು ಇಲ್ಲಿ ಚಿಕ್ಕ ಮಗುವೂ ಸಹ ನಾನು ಆತ್ಮನಾಗಿದ್ದೇನೆ, ಜ್ಯೋತಿರ್ಬಿಂದುವನ್ನು ತಿಳಿದುಕೊಂಡಿದ್ದಾರೆ. ನಾನು ಆತ್ಮನೆಂದು ನಶೆಯಿಂದ ಹೇಳುತ್ತಾರೆ. ಎಷ್ಟೇ ಮಹಾನ್ ಆತ್ಮರು, ಬ್ರಾಹ್ಮಣ ಮಾತೆಯರು ನಶೆಯಿಂದ ಹೇಳುತ್ತಾರೆ - ನಾವು ಪರಮಾತ್ಮನನ್ನು ಪಡೆದುಕೊಂಡಿದ್ದೇವೆ. ಪಡೆದುಕೊಂಡಿದ್ದೀರಲ್ಲವೆ! ಮತ್ತು ಮಹಾತ್ಮರು ಏನು ಹೇಳುತ್ತಾರೆ? ಪರಮಾತ್ಮನನ್ನು ಪಡೆಯುವುದು ಬಹಳ ಕಷ್ಟವಾಗಿದೆ. ಪ್ರವೃತ್ತಿಯವರು ಚಾಲೆಂಜ್ ಮಾಡುತ್ತಾರೆ - ನಾವೆಲ್ಲಾ ಪ್ರವೃತ್ತಿಯಲ್ಲಿರುತ್ತಾ, ಜೊತೆಯಲ್ಲಿರುತ್ತಾ ಪವಿತ್ರವಾಗಿರುತ್ತೇವೆ ಏಕೆಂದರೆ ನಮ್ಮ ಜೊತೆಯಲ್ಲಿ ತಂದೆಯಿದ್ದಾರೆ ಆದ್ದರಿಂದ ಇಬ್ಬರೂ ಜೊತೆಯಲ್ಲಿರುತ್ತಾ ಸಹಜವಾಗಿ ಪವಿತ್ರವಾಗಿರುತ್ತಾರೆ ಏಕೆಂದರೆ ಪವಿತ್ರತೆಯು ನಮ್ಮ ಸ್ವಧರ್ಮವಾಗಿದೆ, ಪರಧರ್ಮವು ಕಷ್ಟವಾಗುತ್ತದೆ ಆದರೆ ಸ್ವಧರ್ಮ ಸಹಜವಾಗುತ್ತದೆ. ಮತ್ತು ಮನುಷ್ಯರು ಏನು ಹೇಳುತ್ತಾರೆ? ಬೆಂಕಿ ಮತ್ತು ಹತ್ತಿ ಜೊತೆಯಲ್ಲಿರಲು ಸಾಧ್ಯವಿಲ್ಲ, ಬಹಳ ಕಷ್ಟವಿದೆ ಎಂದು. ಮತ್ತು ತಾವೆಲ್ಲರೂ ಏನು ಹೇಳುತ್ತೀರಿ? ಬಹಳ ಸಹಜ. ತಮ್ಮೆಲ್ಲರ ಆರಂಭದಲ್ಲಿ ಒಂದು ಗೀತೆಯಿತ್ತು - ಎಷ್ಟೇ ದೊಡ್ಡ ಸೇಟು, ಸ್ವಾಮಿಯಿರಬಹುದು ಆದರೆ ಒಬ್ಬ ತಂದೆಯನ್ನು ತಿಳಿದುಕೊಂಡಿಲ್ಲ. ಚಿಕ್ಕದಾದ ಬಿಂದು ಆತ್ಮವನ್ನು ತಿಳಿದುಕೊಂಡಿಲ್ಲ ಆದರೆ ತಾವೆಲ್ಲಾ ಮಕ್ಕಳು ತಿಳಿದುಕೊಂಡಿದ್ದೀರಿ, ಪಡೆದುಕೊಂಡಿದ್ದೀರಿ. ಇಷ್ಟು ನಿಶ್ಚಯ ಮತ್ತು ನಶೆಯಿಂದ ಹೇಳುತ್ತೀರಿ - ಅಸಂಭವವು ಸಂಭವವಿದೆ. ಬಾಪ್ದಾದಾರವರು ಪ್ರತಿಯೊಂದು ಮಕ್ಕಳನ್ನು ವಿಜಯೀ ರತ್ನವನ್ನು ನೋಡಿ ಹರ್ಷಿತರಾಗುತ್ತಾರೆ ಏಕೆಂದರೆ ಮಕ್ಕಳದು ಸಾಹಸ ತಂದೆಯದು ಸಹಯೋಗವಿದೆ. ಆದ್ದರಿಂದ ಪ್ರಪಂಚದವರಿಗೆ ಯಾವುದು ಅಸಂಭವದ ಮಾತಾಗಿದೆ ಅದು ತಮಗಾಗಿ ಸಹಜ ಮತ್ತು ಸಂಭವ ಆಗಿದೆ. ನಾವು ಪರಮಾತ್ಮನ ಡೈರೆಕ್ಟ್ ಮಕ್ಕಳಾಗಿದ್ದೇವೆಂಬ ನಶೆಯಿರುತ್ತದೆ. ಈ ನಶೆಯ ಕಾರಣ, ನಿಶ್ಚಯದ ಕಾರಣ, ಪರಮಾತ್ಮನ ಮಕ್ಕಳಾಗಿರುವ ಕಾರಣ ಮಾಯೆಯಿಂದ ಸುರಕ್ಷಿತವಾಗಿದ್ದೀರಿ. ಮಕ್ಕಳಾಗುವುದು ಅರ್ಥಾತ್ ಸಹಜವಾಗಿ ಸುರಕ್ಷಿತವಾಗಿರುವುದು. ಯಾರು ಮಕ್ಕಳಾಗಿದ್ದಾರೆ ಮತ್ತು ಸರ್ವ ವಿಘ್ನಗಳಿಂದ, ಸಮಸ್ಯೆಗಳಿಂದ ಸುರಕ್ಷಿತವಾಗಿದ್ದೀರಿ.

ತಮ್ಮ ಶ್ರೇಷ್ಠ ಸ್ವಮಾನವನ್ನು ತಿಳಿದುಕೊಂಡಿದ್ದೀರಾ? ಏಕೆ ಸಹಜವಾಗಿದೆ? ಏಕೆಂದರೆ ತಾವು ಶಾಂತಿಯ ಶಕ್ತಿಯ ಮೂಲಕ ಪರಿವರ್ತನಾ ಶಕ್ತಿಯನ್ನು ಕಾರ್ಯದಲ್ಲಿ ಉಪಯೋಗಿಸುತ್ತೀರಿ. ಮಾಯೆಯು ಎಷ್ಟೇ ಸಮಸ್ಯೆಯ ರೂಪದಲ್ಲಿ ಬರುತ್ತದೆ ಆದರೆ ತಾವು ಪರಿವರ್ತನಾ ಶಕ್ತಿಯಿಂದ ಶಾಂತಿಯ ಶಕ್ತಿಯಿಂದ ಸಮಸ್ಯೆಯನ್ನು ಸಮಾಧಾನ ಸ್ವರೂಪವನ್ನಾಗಿ ಮಾಡಿ ಬಿಡುತ್ತೀರಿ. ಕಾರಣವನ್ನು ನಿವಾರಣೆಯ ರೂಪದಲ್ಲಿ ಬದಲಾವಣೆ ಮಾಡಿ ಬಿಡುತ್ತೀರಿ. ಇಷ್ಟು ತಾಕತ್ತು ಇದೆಯಲ್ಲವೆ! ಕೋರ್ಸನ್ನೂ ಕೊಡುತ್ತೀರಲ್ಲವೆ! ನೆಗೆಟೀವ್ನ್ನು ಪಾಜಿಟೀವ್ನ್ನಾಗಿ ಮಾಡುವ ವಿಧಿಯನ್ನು ಕಲಿಸುತ್ತೀರಿ, ಈ ಪರಿವರ್ತನಾ ಶಕ್ತಿಯು ತಂದೆಯ ಮೂಲಕ ಆಸ್ತಿಯಲ್ಲಿ ಸಿಕ್ಕಿದೆ. ಒಂದು ಶಕ್ತಿಯಲ್ಲ, ಸರ್ವ ಶಕ್ತಿಗಳೂ ಪರಮಾತ್ಮನ ಆಸ್ತಿಯಲ್ಲಿ ಸಿಕ್ಕಿವೆ ಆದ್ದರಿಂದ ಬಾಪ್ದಾದಾ ಪ್ರತಿದಿನ ತಿಳಿಸುತ್ತಾರೆ, ಪ್ರತಿದಿನ ಮುರುಳಿಯನ್ನು ಕೇಳುತ್ತೀರಲ್ಲವೆ! ಅಂದಾಗ ಪ್ರತಿದಿನ ಬಾಪ್ದಾದಾರವರು ಇದನ್ನೇ ಹೇಳುತ್ತಾರೆ - ತಂದೆಯನ್ನು ನೆನಪು ಮಾಡಿ ಮತ್ತು ಆಸ್ತಿಯನ್ನು ನೆನಪು ಮಾಡಿ. ತಂದೆಯ ನೆನಪು ಸಹಜವಾಗಿ ಬರುತ್ತದೆ- ಏಕೆ? ಯಾವಾಗ ಆಸ್ತಿಯ ಪ್ರಾಪ್ತಿಯನ್ನು ನೆನಪು ಮಾಡುತ್ತೀರಿ ಆಗ ತಂದೆಯ ನೆನಪು ಪ್ರಾಪ್ತಿಯ ಕಾರಣ ಸಹಜವಾಗಿ ಬರುತ್ತದೆ. ಪ್ರತಿಯೊಬ್ಬ ಮಕ್ಕಳಿಗೆ ಈ ಆತ್ಮೀಯ ನಶೆಯಿರುತ್ತದೆ, ಹೃದಯದಲ್ಲಿ ಗೀತೆಯನ್ನು ಹಾಡುತ್ತಾರೆ - ಏನನ್ನು ಪಡೆಯಬೇಕಿತ್ತೋ ಅದನ್ನು ಪಡೆದು ಬಿಟ್ಟೆವು. ಎಲ್ಲರ ಹೃದಯದಲ್ಲಿ ಸ್ವತಹವಾಗಿ ಈ ಗೀತೆ ಮೊಳಗುತ್ತಿರುತ್ತದೆ! ನಶೆಯಿದೆಯಲ್ಲವೆ! ಈ ನಶೆಯಲ್ಲಿ ಎಷ್ಟಿರುತ್ತೀರಿ, ಅಂದಾಗ ನಶೆಯ ಚಿಹ್ನೆಯಾಗಿದೆ - ನಿಶ್ಚಿಂತರಾಗಿರುವುದು. ಒಂದುವೇಳೆ ಯಾವುದೇ ಪ್ರಕಾರದ ಸಂಕಲ್ಪದಲ್ಲಿ, ಮಾತಿನಲ್ಲಿ ಅಥವಾ ಸಂಬಂಧ-ಸಂಪರ್ಕದಲ್ಲಿ ಚಿಂತೆಯಿದ್ದರೆ ನಶೆಯಿರುವುದಿಲ್ಲ. ಬಾಪ್ದಾದಾ ನಿಶ್ಚಿಂತ ಚಕ್ರವರ್ತಿಯನ್ನಾಗಿ ಮಾಡಿದ್ದಾರೆ. ನಿಶ್ಚಿಂತ ಚಕ್ರವರ್ತಿಯಾಗಿದ್ದೀರಾ ಹೇಳಿ. ಆಗಿದ್ದೇವೆ ಎಂದರೆ ಕೈಯೆತ್ತಿರಿ? ನಿಶ್ಚಿಂತತೆಯಲ್ಲಿ ಕೆಲವೊಮ್ಮೆ ಚಿಂತೆ ಬರುತ್ತದೆಯೇ? ಒಳ್ಳೆಯದು - ಯಾವಾಗ ತಂದೆಯು ನಿಶ್ಚಿಂತವಾಗಿದ್ದಾರೆ ಅಂದಾಗ ಮಕ್ಕಳಿಗೆ ಯಾವ ಚಿಂತೆಯಿದೆ!

ಬಾಪ್ದಾದಾರವರಂತೂ ತಿಳಿಸಿದ್ದಾರೆ - ಎಲ್ಲಾ ಚಿಂತೆ ಅಥವಾ ಯಾವುದೇ ಪ್ರಕಾರದ ಹೊರೆಯಿದೆಯೆಂದರೆ ಬಾಪ್ದಾದಾರವರಿಗೆ ಕೊಟ್ಟು ಬಿಡಿ. ತಂದೆಯು ಸಾಗರನಲ್ಲವೆ. ಅಂದಾಗ ಹೊರೆಯನ್ನು ಸಮಾವೇಶ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಬಾಪ್ದಾದಾರವರು ಮಕ್ಕಳ ಒಂದು ಗೀತೆಯನ್ನು ಕೇಳಿ ಮುಗುಳ್ನಗುತ್ತಾರೆ. ಯಾವ ಗೀತೆಯೆಂದು ಗೊತ್ತಿದೆಯೇ? ಏನು ಮಾಡಲಿ, ಹೇಗೆ ಮಾಡಲಿ.... ಇತ್ಯಾದಿ. ಕೆಲವೊಮ್ಮೆ ಹಾಡುತ್ತೀರಲ್ಲವೆ! ಬಾಪ್ದಾದಾರವರಂತೂ ಕೇಳುತ್ತಿರುತ್ತಾರೆ ಆದರೆ ಬಾಪ್ದಾದಾರವರು ಎಲ್ಲರಿಗೂ ಇದನ್ನೇ ತಿಳಿಸುತ್ತಾರೆ - ಹೇ ಮಧುರ ಮಕ್ಕಳೇ, ಮುದ್ದು ಮಕ್ಕಳೇ, ಸಾಕ್ಷಿದೃಷ್ಟ ಸ್ಥಿತಿಯ ಸೀಟಿನಲ್ಲಿ ಸ್ಥಿತರಾಗಿ ಮತ್ತು ಸೀಟ್ನಲ್ಲಿ ಸ್ಥಿತರಾಗಿ ಆಟವನ್ನು ನೋಡಿ. ಬಹಳ ಮಜಾ ಬರುತ್ತದೆ. ವಾಹ್! ತ್ರಿಕಾಲದರ್ಶಿ ಸ್ಥಿತಿಯಲ್ಲಿ ಸ್ಥಿತರಾಗಿ ಬಿಡಿ. ಸೀಟಿನಿಂದ ಕೆಳಗೆ ಬರುತ್ತೀರಿ ಆದ್ದರಿಂದ ಅಪ್ಸೆಟ್ ಆಗುತ್ತೀರಿ. ಸೆಟ್ (ಸ್ಥಿತ) ಆಗಿದ್ದರೆ ಅಪಸೆಟ್ (ಬೇಸರ) ಆಗುವುದಿಲ್ಲ. ಈ ಮೂರು ವಸ್ತುಗಳು ಮಕ್ಕಳನ್ನು ವ್ಯಾಕುಲರನ್ನಾಗಿ ಮಾಡುತ್ತದೆ. ಆ ಮೂರು ವಸ್ತುಗಳು ಯಾವವು? ಚಂಚಲ ಮನಸ್ಸು, ಅಲೆಯುವ ಬುದ್ಧಿ ಮತ್ತೆ ಇನ್ನೇನು ಹೇಳುತ್ತೀರಿ? ಹಳೆಯ ಸಂಸ್ಕಾರ. ಬಾಪ್ದಾದಾರವರು ಮಕ್ಕಳ ಒಂದು ಮಾತನ್ನು ಕೇಳುತ್ತಾ ನಗು ಬರುತ್ತದೆ. ಯಾವ ಮಾತೆಂದು ಗೊತ್ತಿದೆಯೇ? ಮಕ್ಕಳು ಹೇಳುತ್ತಾರೆ - ಬಾಬಾ ಏನು ಮಾಡುವುದು, ಇದು ನನ್ನ ಹಳೆಯ ಸಂಸ್ಕಾರವಲ್ಲವೆ! ಬಾಪ್ದಾದಾರವರು ಮಗುಳ್ನಗುತ್ತಾರೆ. ಯಾವಾಗ ನನ್ನ ಸಂಸ್ಕಾರವೆಂದು ಹೇಳುತ್ತೀರಿ ಅಂದಮೇಲೆ ನನ್ನದನ್ನಾಗಿ ಮಾಡಿಕೊಂಡಿದ್ದೀರಿ. ಅಂದಾಗ ನನ್ನದರ ಮೇಲೆ ಅಧಿಕಾರವಿರುತ್ತದೆಯಲ್ಲವೆ. ಯಾವಾಗ ಹಳೆಯ ಸಂಸ್ಕಾರವನ್ನೇ ತನ್ನದನ್ನಾಗಿ ಮಾಡಿಕೊಂಡಿದ್ದೀರಿ ಆಗ ನನ್ನದು ಎಂಬುದು ಸ್ಥಾನವನ್ನು ತೆಗೆದುಕೊಳ್ಳುತ್ತದೆ. ಬ್ರಾಹ್ಮಣ ಆತ್ಮರು ನನ್ನ ಸಂಸ್ಕಾರವೆಂದು ಹೇಳಲು ಸಾಧ್ಯವೇ? ನನ್ನದು, ನನ್ನದು ಎಂದು ಹೇಳುತ್ತೀರಿ ಅಂದಾಗ ನನ್ನದು ಎಂಬುದು ಸ್ಥಾನವನ್ನು ಮಾಡಿಕೊಂಡು ಬಿಟ್ಟಿದೆ. ತಾವು ಬ್ರಾಹ್ಮಣರು ನನ್ನದು ಎಂದು ಹೇಳಲು ಸಾಧ್ಯವಿಲ್ಲ, ಇದು ಹಳೆಯ ಜನ್ಮದ ಸಂಸ್ಕಾರವಾಗಿದೆ. ಶೂದ್ರ ಜೀವನದ ಸಂಸ್ಕಾರವಾಗಿದೆ, ಬ್ರಾಹ್ಮಣ ಜನ್ಮದ್ದಲ್ಲ, ಅಂದಾಗ ನನ್ನದು ನನ್ನದು ಎಂದು ಹೇಳುತ್ತೀರೆಂದರೆ ಆಗ ತನ್ನ ಅಧಿಕಾರದಿಂದ ಕುಳಿತುಬಿಟ್ಟಿದೆ. ಬ್ರಾಹ್ಮಣ ಜೀವನದ ಶ್ರೇಷ್ಠ ಸಂಸ್ಕಾರವನ್ನು ತಿಳಿದುಕೊಂಡಿದ್ದೀರಲ್ಲವೆ! ಮತ್ತು ಈ ಸಂಸ್ಕಾರ ಯಾವುದನ್ನು ನೀವು ಹಳೆಯ ಸಂಸ್ಕಾರವೆಂದು ಹೇಳುತ್ತೀರಿ ಅದು ಹಳೆಯದಲ್ಲ. ತಾವು ಶ್ರೇಷ್ಠ ಆತ್ಮರ ಹಳೆಯದಕ್ಕಿಂತ ಹಳೆಯ ಸಂಸ್ಕಾರ ಆದಿ ಮತ್ತು ಅನಾದಿ ಸಂಸ್ಕಾರವಾಗಿದೆ, ಇದಂತೂ ದ್ವಾಪರ ಮಧ್ಯದ ಸಂಸ್ಕಾರವಾಗಿದೆ. ಮಧ್ಯದ ಸಂಸ್ಕಾರವನ್ನು ಸಮಾಪ್ತಿ ಮಾಡಿ ಬಿಡಿ. ತಂದೆಯ ಸಹಯೋಗದಿಂದ ಯಾವುದೂ ಕಷ್ಟವಿಲ್ಲ. ಏನಾಗುತ್ತದೆ? ಸಮಯದಲ್ಲಿ ತಂದೆಯು ಕಂಬೈಂಡ್ ಆಗಿದ್ದಾರೆ, ಅವರನ್ನು ಕಂಬೈಂಡ್ ಆಗಿದ್ದಾರೆಂದು ತಿಳಿಯಿರಿ. ಕಂಬೈಂಡ್ನ ಅರ್ಥವೇ ಆಗಿದೆ - ಸಮಯದಲ್ಲಿ ಸಹಯೋಗಿ ಆದರೆ ಸಮಯದಲ್ಲಿ ಸಹಯೋಗವನ್ನು ತೆಗೆದುಕೊಳ್ಳದೇ ಇರುವಕಾರಣ ಮಧ್ಯದ ಸಂಸ್ಕಾರವು ಮಹಾನ್ ಆಗಿಬಿಡುತ್ತದೆ.

ಬಾಪ್ದಾದಾರವರು ತಿಳಿದುಕೊಂಡಿದ್ದಾರೆ - ಎಲ್ಲಾ ಮಕ್ಕಳು ತಂದೆಯ ಪ್ರೀತಿಗೆ ಪಾತ್ರರಾಗಿದ್ದಾರೆ, ಅಧಿಕಾರಿಗಳಾಗಿದ್ದಾರೆ. ಪ್ರೀತಿಯ ಕಾರಣದಿಂದಲೇ ಎಲ್ಲರೂ ತಲುಪಿ ಬಿಟ್ಟಿದ್ದೀರಿ. ಭಲೆ ವಿದೇಶದಿಂದ ಬಂದಿರಬಹುದು, ದೇಶದಿಂದ ಬಂದಿರಬಹುದು ಆದರೆ ಎಲ್ಲರೂ ಪರಮಾತ್ಮನ ಪ್ರೀತಿಯ ಆಕರ್ಷಣೆಯಿಂದ ತನ್ನ ಮನೆಗೆ ತಲುಪಿದ್ದೀರಿ. ಬಾಪ್ದಾದಾರವರೂ ತಿಳಿದುಕೊಂಡಿದ್ದಾರೆ - ಪ್ರೀತಿಯಲ್ಲಿ ಮೆಜಾರಿಟಿ ಪಾಸ್ ಆಗಿದ್ದಾರೆ. ವಿದೇಶದಿಂದ ಪ್ರೀತಿಯ ವಿಮಾನದಲ್ಲಿ ತಲುಪಿ ಬಿಟ್ಟಿದ್ದೀರಿ. ಎಲ್ಲರೂ ಪ್ರೀತಿಯ ಎಳೆಯಲ್ಲಿ ಬಂಧಿತರಾಗಿ ಇಲ್ಲಿಯವರೆಗೂ ತಲುಪಿದ್ದೀರಲ್ಲವೆ! ಈ ಪರಮಾತ್ಮ ಪ್ರೀತಿಯು ಹೃದಯಕ್ಕೆ ವಿಶ್ರಾಂತಿ ಕೊಡುವುದಾಗಿದೆ. ಒಳ್ಳೆಯದು - ಯಾರು ಮೊದಲಬಾರಿ ಬಂದಿದ್ದೀರಿ, ಅವರು ಕೈಯನ್ನಲುಗಾಡಿಸಿ. ಭಲೆ ಬನ್ನಿ.

ಈಗ ಬಾಪ್ದಾದಾರವರು ಹೋಮ್ವರ್ಕು ಕೊಟ್ಟಿದ್ದರು. ಹೋಮ್ವರ್ಕ್ ನೆನಪಿದೆಯೇ? ಬಾಪ್ದಾದಾರವರ ಬಳಿ ಕೆಲವು ಕಡೆಯಿಂದ ಫಲಿತಾಂಶ ಬಂದಿದೆ ಆದರೆ ಈಗ ಏನು ಮಾಡಬೇಕು? ಎಲ್ಲರ ಫಲಿತಾಂಶ ಬಂದಿಲ್ಲ. ಕೆಲವರದು ಕೆಲವು ಪಸೆರ್ಂಟ್ನಲ್ಲಿ ಬಂದಿದೆ, ಬಾಪ್ದಾದಾರವರು ಏನನ್ನು ಬಯಸುತ್ತಾರೆ? ಇದನ್ನೇ ಬಯಸುತ್ತಾರೆ - ಎಲ್ಲರೂ ಪೂಜ್ಯನೀಯ ಆತ್ಮರಾಗಿದ್ದೀರಿ, ಅಂದಾಗ ಪೂಜ್ಯನೀಯ ಆತ್ಮರ ವಿಶೇಷ ಲಕ್ಷಣವಾಗಿದೆ - ಆಶೀರ್ವಾದ ಕೊಡುವುದಾಗಿದೆ. ಅಂದಾಗ ತಾವೆಲ್ಲರೂ ಪೂಜ್ಯನೀಯ ಆತ್ಮರೆಂದು ತಿಳಿದುಕೊಂಡಿದ್ದೀರೆಂದರೆ ಆಶೀರ್ವಾದ ಕೊಡಿ. ಆಶೀರ್ವಾದವನ್ನು ಕೊಡುವುದು ಅರ್ಥಾತ್ ಸ್ವತಹವಾಗಿ ಆಶೀರ್ವಾದವನ್ನು ತೆಗೆದುಕೊಳ್ಳುವುದಾಗಿದೆ. ಯಾರು ಆಶೀರ್ವಾದವನ್ನು ಕೊಡುತ್ತಾರೆ, ಯಾರಿಗೆ ಕೊಡುತ್ತಾರೆಯೋ ಅವರ ಹೃದಯದಿಂದ ಪದೇ ಪದೇ ಕೊಡುವವರ ಪ್ರತಿ ಆಶೀರ್ವಾದಗಳು ಬರುತ್ತದೆ. ಅಂದಾಗ ಪೂಜ್ಯಾತ್ಮರ ನಿಜೀ ಸಂಸ್ಕಾರವಾಗಿದೆ - ಆಶೀರ್ವಾದ ಕೊಡುವುದು, ಅನಾದಿ ಸಂಸ್ಕಾರವೂ ಆಶೀರ್ವಾದ ಕೊಡುವುದೇ ಆಗಿದೆ. ತಮ್ಮ ಜಡ ಚಿತ್ರಗಳು ಇಲ್ಲಿಯವರೆಗೂ ಆಶೀರ್ವಾದವನ್ನು ಕೊಡುತ್ತಿವೆ ಅಂದಾಗ ತಾವು ಚೈತನ್ಯ ಪೂಜ್ಯಾತ್ಮರು ಆಶೀರ್ವಾದವನ್ನು ಕೊಡುವುದು, ಇದು ಸ್ವಾಭಾವಿಕ ಸಂಸ್ಕಾರವಾಗಿದೆ. ಇದಕ್ಕೆ ನನ್ನ ಸಂಸ್ಕಾರವೆಂದು ಹೇಳಿ. ಮಧ್ಯ ದ್ವಾಪರದ ಸಂಸ್ಕಾರವು ಸ್ವಾಭಾವಿಕವಾಗಿ ಬಿಟ್ಟಿದೆ, ಸ್ವಭಾವವಾಗಿದೆ. ವಾಸ್ತವದಲ್ಲಿ ಈ ಸಂಸ್ಕಾರವು ಆಶೀರ್ವಾದ ಕೊಡುವ ಸ್ವಾಭಾವಿಕ ಸ್ವಭಾವವಾಗಿದೆ. ಯಾವಾಗ ಯಾರಿಗೇ ಆದರೂ ಆಶೀರ್ವಾದ ಕೊಡುತ್ತೀರೆಂದರೆ ಆಗ ಆ ಆತ್ಮನಿಗೆ ಎಷ್ಟು ಖುಷಿಯಾಗುತ್ತದೆ! ಆ ಖುಷಿಯ ವಾಯುಮಂಡಲವು ಎಷ್ಟು ಸುಖಧಾಯಿಯಾಗಿರುತ್ತದೆ! ಅಂದಾಗ ಯಾರೆಲ್ಲರೂ ಮಾಡಿದ್ದೀರಿ ಅವರೆಲ್ಲರಿಗೆ ಭಲೆ ಬಂದಿರಬಹುದು, ಬಂದಿಲ್ಲದೇ ಇರಬಹುದು ಆದರೆ ಬಾಪ್ದಾದಾರವರ ಸನ್ಮುಖದಲ್ಲಿದ್ದಾರೆ. ಅವರಿಗೆ ಬಾಪ್ದಾದಾರವರು ಶುಭಾಷಯಗಳನ್ನು ಕೊಡುತ್ತಿದ್ದಾರೆ. ಮಾಡಿದ್ದೀರಿ ಮತ್ತು ತನ್ನ ಸ್ವಾಭಾವಿಕ ಸ್ವಭಾವವನ್ನಾಗಿ ಮಾಡಿಕೊಳ್ಳುತ್ತಾ ಮತ್ತು ಮುಂದೆಯು ಮಾಡುತ್ತಾ, ಮಾಡಿಸುತ್ತಾ ಇರಿ. ಯಾರು ಸ್ವಲ್ಪ ಮಟ್ಟಿಗಾದರೂ ಮಾಡಿದ್ದಾರೆ ಅಥವಾ ಮಾಡಿಲ್ಲದೇ ಇರಬಹುದು, ಅವರೂ ತಮ್ಮನ್ನು ತಾವು ಸದಾ ನಾನು ಪೂಜ್ಯಾತ್ಮನಾಗಿದ್ದೇನೆ, ಶ್ರೀಮತದಂತೆ ನಡೆಯುವ ವಿಶೇಷ ಆತ್ಮನಾಗಿದ್ದೇನೆಂಬ ಸ್ಮೃತಿಯು ಪದೇ ಪದೇ ತಮ್ಮ ಸ್ಮೃತಿ ಮತ್ತು ಸ್ವರೂಪದಲ್ಲಿ ತೆಗೆದುಕೊಂಡು ಬನ್ನಿ ಏಕೆಂದರೆ ಪ್ರತಿಯೊಬ್ಬರನ್ನು ಕೇಳುತ್ತಾರೆ - ನೀವು ಏನು ಆಗಲು ಬಯಸುತ್ತೀರಿ? ನಾವು ಲಕ್ಷ್ಮೀ-ನಾರಾಯಣರಾಗುವವರೆಂದು ಎಲ್ಲರೂ ಹೇಳುತ್ತೀರಿ, ರಾಮ-ಸೀತೆಯಾಗುತ್ತೇವೆಂದು ಯಾರೂ ಕೈಯೆತ್ತುವುದಿಲ್ಲ. 16 ಕಲೆಯುಳ್ಳವರಾಗುವ ಲಕ್ಷ್ಯವಿದೆ. 16 ಕಲೆ ಅರ್ಥಾತ್ ಪರಮಪೂಜ್ಯರಾಗುವುದು. ಪೂಜ್ಯಾತ್ಮರ ಕರ್ತವ್ಯವೇ ಆಗಿದೆ- ಆಶೀರ್ವಾದ ಕೊಡುವುದು. ಈ ಸಂಸ್ಕಾರವು ನಡೆಯುತ್ತಾ - ತಿರುಗಾಡುತ್ತಾ ಸದಾಕಾಲಕ್ಕಾಗಿ ಮಾಡಿಕೊಳ್ಳಬೇಕು. ಪೂಜ್ಯರಾಗಿದ್ದೀರಿ, 16 ಕಲೆಯುಳ್ಳವರಾಗಿಯೇ ಇದ್ದೀರಿ. ಲಕ್ಷ್ಯವಂತೂ ಇದೆ ಆಗಿದೆಯಲ್ಲವೆ.

ಬಾಪ್ದಾದಾರವರು ಖುಷಿಯಾಗಿದ್ದಾರೆ. ಯಾರೆಲ್ಲರೂ ಮಾಡಿದ್ದೀರಿ ಅವರು ತಮ್ಮ ಮಸ್ತಕದಲ್ಲಿ ವಿಜಯದ ತಿಲಕವನ್ನು ತಂದೆಯಿಂದ ಇಡಿಸಿಕೊಳ್ಳಿ. ಜೊತೆಯಲ್ಲಿ ಸೇವಾ ಸಮಾಚಾರವನ್ನು ಬಾಪ್ದಾದಾರವರ ಬಳಿ ಎಲ್ಲಾ ಕಡೆಯಿಂದ, ಎಲ್ಲಾ ವರ್ಗಗಳಿಂದ, ಸೇವಾಕೇಂದ್ರಗಳ ಕಡೆಯಿಂದ ಬಹಳ ಒಳ್ಳೆಯ ಫಲಿತಾಂಶದೊಂದಿಗೆ ಬಂದು ಬಿಟ್ಟಿದೆ. ಒಂದು ಹೋಮ್ವರ್ಕ್ ಮಾಡಿರುವುದಕ್ಕೆ ಶುಭಾಷಯಗಳು ಮತ್ತು ಜೊತೆಯಲ್ಲಿ ಸೇವೆಯ ಪದಮಾಪದಮ ಗುಣದಷ್ಟು ಶುಭಾಷಯಗಳು. ಹಳ್ಳಿ-ಹಳ್ಳಿಯಲ್ಲಿ ತಂದೆಯ ಸಂದೇಶವನ್ನು ಕೊಡುವ ಸೇವೆಯನ್ನು ಬಹಳ ಒಳ್ಳೆಯ ವಿಧಿಯಿಂದ, ಮೆಜಾರಿಟಿ ಸ್ಥಾನಗಳಲ್ಲಿ ಮಾಡಿದ್ದೀರಿ, ತಂದೆಯು ನೋಡಿದ್ದಾರೆ. ಈ ಸೇವೆಯೂ ಸಹ ದಯಾ ಹೃದಯಿಯಾಗಿ ಸೇವೆಯ ಉಮ್ಮಂಗ-ಉತ್ಸಾಹದಲ್ಲಿ ಫಲಿತಾಂಶವು ಚೆನ್ನಾಗಿ ಕಂಡುಬಂದಿದೆ. ಯಾರಿಗೂ ಪರಿಶ್ರಮವಿಲ್ಲ ಆದರೆ ತಂದೆಯ ಪ್ರೀತಿ ಅರ್ಥಾತ್ ಸಂದೇಶವನ್ನು ಕೊಡುವುದರಿಂದ ಪ್ರೀತಿ, ಪ್ರೀತಿಯಿಂದ ಸೇವೆ ಮಾಡಿದ್ದೀರಿ ಅಂದಾಗ ಪದಮಾ ಪದಮಗುಣದಷ್ಟು ಪ್ರೀತಿಗೆ ರಿಟರ್ನ್ ತಂದೆಯಿಂದ ಸ್ವತಹವಾಗಿ ಪ್ರಾಪ್ತಿಯಾಗಿದೆ ಮತ್ತು ಪ್ರಾಪ್ತಿಯಾಗುತ್ತದೆ. ಜೊತೆಯಲ್ಲಿ ಎಲ್ಲರೂ ತಮ್ಮ ಪ್ರಿಯ ದಾದೀಜಿಯವರನ್ನು ಬಹಳ ಸ್ನೇಹದಿಂದ ನೆನಪು ಮಾಡುತ್ತಾ ದಾದೀಜಿಗೆ ಪ್ರೀತಿಯ ರಿಟರ್ನ್ ಕೊಡುತ್ತಿದ್ದೀರಿ. ಈ ಪ್ರೀತಿಯ ಪರಿಮಳವು ಬಾಪ್ದಾದಾರವರ ಬಳಿ ತಲುಪಿದೆ.

ಈಗಲೂ ಮಧುಬನದಲ್ಲಿ ಯಾವ ಕಾರ್ಯವು ನಡೆಯುತ್ತಿದೆ. ಭಲೆ ವಿದೇಶದ್ದಿರಬಹುದು, ಭಾರತದ್ದಿರಬಹುದು, ಎಲ್ಲಾ ಕಾರ್ಯಗಳು ಪರಸ್ಪರ ಸಹಯೋಗದಿಂದ, ಸನ್ಮಾನದ ಆಧಾರದಿಂದ ಬಹಳ ಚೆನ್ನಾಗಿ ಸಫಲವಾಗಿದೆ ಮತ್ತು ಮುಂದೆಯೂ ಆಗಲಿರುವ ಕಾರ್ಯವು ಸಫಲವಾಗಿಬಿಟ್ಟಿದೆ ಏಕೆಂದರೆ ಸಫಲತೆಯಂತೂ ನಿಮ್ಮ ಕೊರಳಿನ ಹಾರವಾಗಿದೆ. ತಂದೆಯ ಕೊರಳಿನ ಹಾರವಾಗಿದ್ದೀರಿ. ತಂದೆಯು ಸ್ಮೃತಿ ತರಿಸಿದ್ದರು - ಎಂದೂ ಸೋಲಬಾರದು ಏಕೆಂದರೆ ತಾವು ತಂದೆಯ ಕೊರಳಿನ ಹಾರವಾಗಿದ್ದೀರಿ, ಕೊರಳಿನ ಹಾರವು ಎಂದೂ ಸೋಲುವುದಕ್ಕೆ ಸಾಧ್ಯವಿಲ್ಲ. ಹಾರವಾಗಬೇಕೇ ಅಥವಾ ಹಾರ್ (ಸೋಲು) ಬೇಕೇ? ಇಲ್ಲ ಅಲ್ಲವೆ. ಹಾರವಾಗುವುದು ಚೆನ್ನಾಗಿದೆ. ಅಂದಾಗ ಎಂದೂ ಸೋಲಬಾರದು. ಸೋಲುವವರಂತೂ ಅನೇಕ ಕೋಟ್ಯಾಂತರ ಆತ್ಮರಿದ್ದಾರೆ, ತಾವು ಕೊರಳಿನಲ್ಲಿ ಹಾರವಾಗಿಬಿಟ್ಟಿದ್ದೀರಿ. ಈ ರೀತಿಯಲ್ಲವೆ. ತಂದೆಯ ಪ್ರೀತಿಯಲ್ಲಿ ಎಷ್ಟಾದರೂ ಮಾಯೆಯ ಬಿರುಗಾಳಿ ಎದುರು ಬರಲಿ ಆದರೆ ಮಾ|| ಸರ್ವಶಕ್ತಿವಂತ ಆತ್ಮರ ಮುಂದೆ ಹೋಗುವ ಸಾಧನವಾಗಿದೆ ಎಂದು ಸಂಕಲ್ಪ ಮಾಡಿ, ಇಂತಹ ವರದಾನವನ್ನು ಸದಾ ನೆನಪಿಟ್ಟುಕೊಳ್ಳಿ. ಎಷ್ಟೇ ದೊಡ್ಡ ಪರ್ವತವಾಗಲಿ, ಪರ್ವತಕ್ಕೆ ಬದಲಾಗಿ ಹತ್ತಿಯಾಗಿ ಬಿಡುತ್ತದೆ. ಈಗ ಸಮಯದ ಸಮೀಪತೆಯ ಪ್ರಮಾಣ ವರದಾನವನ್ನು ಪ್ರತೀ ಸಮಯ ಅನುಭವದಲ್ಲಿ ತನ್ನಿ, ಅನುಭವದ ಅಥಾರಿಟಿಯಾಗಿ.

ಯಾವಾಗ ಬೇಕೋ ಆಗ ತನ್ನ ಅಶರೀರಿಯಾಗುವ, ಫರಿಶ್ತಾ ಸ್ವರೂಪರಾಗುವ ವ್ಯಾಯಾಮ ಮಾಡುತ್ತಾ ಇರಿ. ಈಗೀಗ ಬ್ರಾಹ್ಮಣ, ಈಗೀಗ ಫರಿಶ್ತಾ, ಈಗೀಗ ಅಶರೀರಿ, ನಡೆಯುತ್ತಾ-ತಿರುಗಾಡುತ್ತಾ ಕೆಲಸ-ಕಾರ್ಯ ಮಾಡುತ್ತಲೂ ಒಂದು ನಿಮಿಷ, 2 ನಿಮಿಷ ತೆಗೆದು ಅಭ್ಯಾಸ ಮಾಡಿ. ಪರಿಶೀಲನೆ ಮಾಡಿ - ಯಾವ ಸಂಕಲ್ಪ ಮಾಡಿದೆ, ಅದರ ಸ್ವರೂಪದ ಅನುಭವವಾಯಿತೆ? ಒಳ್ಳೆಯದು-

ನಾಲ್ಕಾರೂ ಕಡೆಯ ಸದಾ ಶ್ರೇಷ್ಠ ಸ್ವಮಾನಧಾರಿ, ಸದಾ ಸ್ವಯಂನ್ನು ಪರಮ ಪೂಜ್ಯ ಮತ್ತು ಪೂರ್ವಜ ಅನುಭವ ಮಾಡುವಂತಹ, ಸದಾ ತನ್ನನ್ನು ಪ್ರತೀ ಸಬ್ಜೆಕ್ಟ್ನಲ್ಲಿ ಅನುಭವೀ ಸ್ವರೂಪರನ್ನಾಗಿ ಮಾಡಿಕೊಳ್ಳುವ, ಸದಾ ತಂದೆಯ ಹೃದಯ ಸಿಂಹಾಸನಾಧಿಕಾರಿ, ಭೃಕುಟಿಯ ಸಿಂಹಾಸನಾಧಿಕಾರಿ, ಸದಾ ಶ್ರೇಷ್ಠ ಸ್ಥಿತಿಯ ಅನುಭವದಲ್ಲಿ ಸ್ಥಿತರಾಗಿರುವಂತಹ ನಾಲ್ಕೂ ಕಡೆಯ ಎಲ್ಲಾ ಮಕ್ಕಳಿಗೆ ನೆನಪು-ಪ್ರೀತಿ ಮತ್ತು ನಮಸ್ತೆ.

ಎಲ್ಲಾ ಕಡೆಯಿಂದ ಎಲ್ಲರ ಪತ್ರಗಳು, ಈ-ಮೇಲ್, ಸಮಾಚಾರಗಳೆಲ್ಲವೂ ಬಾಪ್ದಾದಾರವರ ಬಳಿ ತಲುಪಿದೆ ಅಂದಮೇಲೆ ಸೇವೆಯ ಫಲ ಮತ್ತು ಬಲ ಎಲ್ಲಾ ಸೇವಾಧಾರಿಗಳಿಗೆ ಪ್ರಾಪ್ತಿಯಾಗಿದೆ ಮತ್ತು ಆಗುತ್ತಾ ಇರುತ್ತದೆ. ಪ್ರೀತಿಯ ಪತ್ರಗಳು ಬಹಳ ಬಂದಿವೆ, ಪರಿವರ್ತನೆಯ ಪತ್ರಗಳು ಬಹಳ ಬರುತ್ತವೆ. ಪರಿವರ್ತನಾ ಶಕ್ತಿಯಿರುವವರಿಗೆ ಬಾಪ್ದಾದಾರವರು ಅಮರಭವದ ವರದಾನವನ್ನು ಕೊಡುತ್ತಿದ್ದಾರೆ, ಸೇವಾಧಾರಿಗಳಿಗೆ ಯಾರು ಬಹಳ ಚೆನ್ನಾಗಿ ಶ್ರೀಮತವನ್ನು ಫಾಲೋ ಮಾಡಿದ್ದಾರೆ, ಹೀಗೆ ಫಾಲೋ ಮಾಡುವಂತಹ ಮಕ್ಕಳಿಗೆ ಬಾಪ್ದಾದಾ ಆಜ್ಞಾಕಾರಿ ಮಕ್ಕಳೇ ವಾಹ್! ಎಂಬ ವರದಾನವನ್ನು ಕೊಟ್ಟರು ಮತ್ತು ಪ್ರೀತಿಯುಳ್ಳವರಿಗೆ ಬಹಳ-ಬಹಳ ಪ್ರೀತಿಯಿಂದ ಹೃದಯದಲ್ಲಿ ಸಮಾವೇಶವಾಗುವ ಅತಿಪ್ರಿಯ ಮತ್ತು ಅತಿ ಮಾಯೆಯ ವಿಘ್ನಗಳಿಂದ ಭಿನ್ನರಾಗುವ ವರದಾನವನ್ನು ಕೊಡುತ್ತಿದ್ದಾರೆ. ಒಳ್ಳೆಯದು-

ಈಗ ಎಲ್ಲರ ಮನಸ್ಸಿನಲ್ಲಿ ಯಾವ ಉಮ್ಮಂಗ ಬರುತ್ತಿದೆ? ಒಂದೇ ಇದೆ - ತಂದೆಯ ಸಮಾನರಾಗಲೇಬೇಕು. ಈ ಉಮ್ಮಂಗವಿದೆಯೇ? ಪಾಂಡವರೇ ಕೈಯನ್ನೆತ್ತಿರಿ. ಆಗಲೇಬೇಕು. ಆಗಬೇಕು, ಗೆ ಗೆ ಮಾಡಬಾರದು. ನೋಡುತ್ತೇವೆ, ಆಗುತ್ತೇವೆ, ಗೆ ಗೆ ಮಾಡಬಾರದು.... ಆದರೆ ಆಗಲೇಬೇಕು. ಒಳ್ಳೆಯದು - ಪಕ್ಕಾ. ಪಕ್ಕಾ ಅಲ್ಲವೆ? ಒಳ್ಳೆಯದು - ಪ್ರತಿಯೊಬ್ಬರೂ ತಮ್ಮ ಓ.ಕೆ. ಕಾರ್ಡನ್ನು ನಿಮಿತ್ತ ಶಿಕ್ಷಕಿಯರ ಬಳಿ ಚಾರ್ಟನ್ನು ರೂಪದಲ್ಲಿ ಕೊಡುತ್ತೀರಲ್ಲವೆ. ಹೆಚ್ಚಿನದಾಗಿ ಬೇಡ, ಒಂದು ಕಾರ್ಡ್ ತೆಗೆದುಕೊಳ್ಳಿ, ಅದರಲ್ಲಿ ಓ.ಕೆ. ಬರೆಯಿರಿ ಅಥವಾ ಓ.ಕೆ. ಮಧ್ಯದಲ್ಲಿ ಗೆರೆಯನ್ನೆಳೆಯಿರಿ. ಇದಂತೂ ಮಾಡಬಹುದಲ್ಲವೆ. ಉದ್ದವಾದ ಪತ್ರ ಬೇಡ. ಒಳ್ಳೆಯದು.

ವರದಾನ:
ಸಂಗಮಯುಗದಲ್ಲಿ ಪ್ರತ್ಯಕ್ಷ ಫಲದ ಮೂಲಕ ಶಕ್ತಿಶಾಲಿಯಾಗುವಂತಹ ಸದಾ ಸಮರ್ಥ ಆತ್ಮ ಭವ.

ಸಂಗಮಯುಗದಲ್ಲಿ ಯಾವ ಆತ್ಮರು ಬೇಹದ್ಧಿನ ಸೇವೆಗೆ ನಿಮಿತ್ತರಾಗುತ್ತಾರೆ ಅವರಿಗೆ ನಿಮಿತ್ತರಾಗಿದ್ದರ ಪ್ರತ್ಯಕ್ಷ ಫಲ ಶಕ್ತಿಯ ಪ್ರಾಪ್ತಿಯಾಗುತ್ತದೆ. ಈ ಪ್ರತ್ಯಕ್ಷ ಫಲವೇ ಶ್ರೇಷ್ಠಯುಗದ ಫಲವಾಗಿದೆ. ಇಂತಹ ಫಲ ಸ್ವೀಕರಿಸುವಂತಹವರು ಶಕ್ತಿಶಾಲಿ ಆತ್ಮ ಎಂತಹದೇ ಪರಿಸ್ಥಿತಿಯ ಮೇಲೆ ಸಹಜವಾಗಿ ವಿಜಯವನ್ನು ಪಡೆದು ಬಿಡುತ್ತಾರೆ. ಅವರು ಸಮರ್ಥ ತಂದೆಯ ಜೊತೆಯಿರುವ ಕಾರಣ ವ್ಯರ್ಥದಿಂದ ಸಹಜವಾಗಿ ಮುಕ್ತರಾಗಿ ಬಿಡುತ್ತಾರೆ. ವಿಷಪೂರಿತ ಸರ್ಪದ ಸಮಾನ ಪರಿಸ್ಥಿತಿಯ ಮೇಲೂ ಸಹಾ ಅವರ ವಿಜಯ ಆಗಿ ಬಿಡುವುದು, ಆದ್ದರಿಂದ ನೆನಪಾರ್ಥದಲ್ಲಿ ತೋರಿಸುತ್ತಾರೆ ಶ್ರೀಕ್ರಷ್ಣ ಸರ್ಪದ ತಲೆಯ ಮೇಲೆ ನಾಟ್ಯವಾಡುತ್ತಿರುವುದನ್ನು.

ಸ್ಲೋಗನ್:
ಪಾಸ್ ವಿತ್ ಆನರ್ ಆಗಿ ಕಳೆದು ಹೋಗಿದ್ದನ್ನು ಪಾಸ್ ಮಾಡಿ ಮತ್ತು ಸದಾ ತಂದೆಯ ಜೊತೆಯಲ್ಲೇ ಇರಿ.

ಅವ್ಯಕ್ತ ಸೂಚನೆ:- ಅಶರೀರಿ ಅಥವಾ ವಿದೇಹಿ ಸ್ಥಿತಿಯ ಅಭ್ಯಾಸ ಹೆಚ್ಚಿಸಿ.

ಹೇಗೆ ಬಾಪ್ದಾದಾ ಅಶರೀರಿದಿಂದ ಶರೀರದಲ್ಲಿ ಬರುತ್ತೀರಿ ಹಾಗೆಯೇ ಮಕ್ಕಳು ಸಹ ಅಶರೀರಿಯಾಗಿ ಶರೀರದಲ್ಲಿ ಬರಬೇಕಾಗಿದೆ. ಅವ್ಯಕ್ತ ಸ್ಥಿತಿಯಲ್ಲಿ ಸ್ಥಿತರಾಗಿ ನಂತರ ವ್ಯಕ್ತದಲ್ಲಿ ಬರಬೇಕಾಗಿದೆ. ಹೇಗೆ ಈ ಶರೀರವನ್ನು ಬಿಡುವುದು ಮತ್ತು ಶರೀರವನ್ನು ತೆಗೆದುಕೊಳ್ಳುವುದು, ಈ ಅನುಭವ ಎಲ್ಲರಿಗೆ ಇದೆ. ಹಾಗೆಯೇ ಯಾವಾಗ ಬೇಕೋ ಆಗ ಶರೀರದ ಭಾನವನ್ನು ಬಿಟ್ಟು ಅಶರೀರಿ ಆಗಿ ಬಿಡಿ ಮತ್ತು ಯಾವಾಗ ಬೇಕೋ ಆಗ ಶರೀರವನ್ನು ತೆಗೆದುಕೊಂಡು ಕರ್ಮ ಮಾಡಿ. ಇದೇ ರೀತಿಯ ಅನುಭವ ಮಾಡಿ – ಈ ಸ್ಥೂಲ ಶರೀರ ಬೇರೆಯಾಗಿದೆ ಮತ್ತು ಶರೀರವನ್ನು ಧಾರಣೆ ಮಾಡುವಂತಹ ನಾನು ಆತ್ಮ ಬೇರೆಯಾಗಿದ್ದೇನೆ.